ಎಲ್ ಐ ಸಿ ಆಫ್ ಇಂಡಿಯ
 • ಅತ್ಯುತ್ತಮ ಯೋಜನೆಗಳು
 • ಸುಲಭ ಹೋಲಿಕೆ
 • ತಕ್ಷಣದ ಖರೀದಿ
PX step

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಫೋನ್ ಸಂಖ್ಯೆ
ಹೆಸರು
ಹುಟ್ಟಿದ ದಿನಾಂಕ

1

2

ಆದಾಯ
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಭಾರತದಲ್ಲಿ, ಎಲ್ ಐ ಸಿ ಯು 1956 ರಲ್ಲಿ ಒಂದು ಕಾನೂನು ಬದ್ಧ ಸಂಸ್ಥೆಯಾಗಿ ಸ್ತಾಪಿತವಾಯಿತು. ಅಲ್ಲಿಂದ ಇಲ್ಲಿಯವರೆಗೂ ಸದರಿ ಎಲ್ ಐ ಸಿ ಯು 62 ವರ್ಷಗಳನ್ನು ಮುಗಿಸಿ, ಅದನ್ನು ಸ್ಥಾಪನೆ ಮಾಡುವಾಗ ಕಲ್ಪಿಸಿಕೊಳ್ಳಲಾಗಿದ್ದ ದ್ಯೇಯವನ್ನು (ಇವತ್ತಿನ ಪರಿಸ್ಟಿತಿಗೆ ಹೋಲಿಕೆ ಮಾಡಿದಾಗ) ಸಾಕಷ್ಟು ಸಾದಿಸಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ.

ಈ ಮಾತನ್ನು ಹೇಳುವಾಗ, ಎಲ್ ಐ ಸಿ ಯ ಸಾದನೆಗಳನ್ನು ಬರೀ ಪ್ರೀಮಿಯಂ ಸಂಗ್ರಹಣೆ ಅಥವಾ ಬೆಳವಣಿಗೆಗೆ ಮಾತ್ರ ಸೀಮಿತ ಮಾಡುವುದು ಸರಿ ಅಲ್ಲ. ಅಂದರೆ, ಎಲ್ ಐ ಸಿ ಯು ಭಗವದ್ಗೀತೆ ಯಲ್ಲಿ ತಿಳಿಸಿರುವ “ಯೋಗಕ್ಷೇಮಂ ವಹಾಮ್ಯಹಂ” ಎಂಬ ಒಂದು ಸೂಕ್ತವನ್ನು ಅತ್ಯಂತ ದೃಡತೆಯಿಂದ ಸಾದಿಸಿಕೊಂಡು ಬಂದಿರುವ ರೀತಿ ಹಾಗೂ ಅದನ್ನು ಅಕ್ಷರಶಃ ಪಾಲಿಸುವ ನಿಟ್ಟಿನಲ್ಲಿ ಇದುವರೆವಿಗೂ ಶ್ರಮಿಸಿರುವುದು ಅತ್ಯಂತ ಶ್ಲಾಘನೀಯ ಎನ್ನುವುದರಲ್ಲಿ ಸಂದೇಹವಿಲ್ಲ. ಅದೇ ರೀತಿ. ಕಂಪನಿಯು ಇಲ್ಲಿಯವರೆಗಿನ ಆದರ ಪ್ರಯಾಣದಲ್ಲಿ, ಅದೆಷ್ಟೋ ಕೋಟಿ ಭಾರತೀಯ ನಾಗರೀಕರಿಗೆ ವಿಮೆಗಳನ್ನು ನೀಡಿ ಅವರಿಗೆ ಅದರಿಂದ ದೊರಕಿರುವ ಸುರಕ್ಷತೆ ಮತ್ತು ಉಪಯೋಗಗಳನ್ನು ಕಂಡು ಆದರ ದ್ಯೇಯವು ಈಡೇರಿರುವುದನ್ನು ಸ್ವಾಗತಿಸುತ್ತಿದೆ ಹಾಗೂ ಇನ್ನೂ ಮುಂದೆಯೂ ಸ್ವಾಗತಿಸುತ್ತದೆ. 

1956 ರಲ್ಲಿ ಸ್ತಾಪಿತವಾದಾಗ, ಎಲ್ ಐ ಸಿ ಯು 5 ಜೋನಲ್ ಕಛೇರಿಗಳು, 33 ಡಿವಿಷನಲ್ ಕಚೇರಿಗಳು ಹಾಗೂ 212 ಶಾಖೆಗಳನ್ನು ಹೊಂದಿತ್ತು. ಇದರ ಜೊತೆಗೆ ಅದರ ಮುಖ್ಯ ಕಚೇರಿಯು ಕೂಡಾ ಸೇರಿತ್ತು.. ಅಲ್ಲಿಂದ ಮುಂದೆ, ವಿಮಾ ಯೋಜನೆಯ ಕಾಂಟ್ರ್ಯಾಕ್ಟ್ ಒಂದು ಧೀರ್ಘ ಅವದಿಯ ಪರಸ್ಪರ ಸಂಭಂದವಾದ್ದರಿಂದ ಹಾಗೂ ಪಾಲಿಸಿಯ ಅವದಿಯಲ್ಲಿ ಸಾಕಷ್ಟು ರೀತಿಯ ಬೇರೆ ರೀತಿಯ ಸರ್ವಿಸ್ ಗಳನ್ನು ನೀಡಬೇಕಾಗುವುದರ ಅವಶ್ಯಕತೆಗಳು ಇರುವುದನ್ನು ಮನಗಂಡು ಎಲ್ ಐ ಸಿ ಯು ತನ್ನ ಪ್ರಯಾಣದಲ್ಲಿ (ಅಲ್ಲಿಂದ ಮುಂದಿನ ವರ್ಷಗಳಲ್ಲಿ) ಅದರ ಕಾರ್ಯಾಚರಣೆಯನ್ನು ವಿಸ್ತರಿಸಿ ದೇಶದ ಪ್ರತಿ ಒಂದು ಜಿಲ್ಲೆಯಲ್ಲಿಯೂ ಶಾಖೆಗಳನ್ನು ಪ್ರಾರಂಬಿಸಿದೆ.

ಜೀವ ವಿಮೆ ಎಂದರೇನು ?

ನಾವುಗಳು ನಮ್ಮ ಜೀವನದಲ್ಲಿ ಮುಂದುವರೆದ ಹಾಗೆ ಜೀವ ವಿಮೆಯ ಅಗತ್ಯವೂ ಕೂಡ ನಿದಾನವಾಗಿ ಅಭಿವ್ಯಕ್ತವಾಗುತ್ತಾ ಹೋಗುತ್ತದೆ. ಈ ಜೀವನದಲ್ಲಿ, ನಾವುಗಳು ಸಾಕಷ್ಟು ಅಪಾಯಗಳನ್ನು ಎದುರಿಸಬೇಕಾಗುತ್ತದೆ ಹಾಗೂ ಮುಂದೆ ಆಗಬಹುದಾದ ಅನಾಹುತಗಳಿಂದ ನಮಗೆ ಮತ್ತು ನಮ್ಮ ಕುಟುಂಬಕ್ಕೆ ದಕ್ಕೆ ಆಗುವುದರ ಬಗ್ಗೆ ಯೋಚನೆ ಮಾಡುವ ಹಾಗೆ ಮಾಡುತ್ತದೆ.

ಈ ಆದುನಿಕ ಯುಗದಲ್ಲಿ ಯಾರೆ ಆಗಲೀ, ಅವರುಗಳ ರಕ್ಷಣೆಗೆ ಜೀವ ವಿಮೆಯನ್ನು ಅಲ್ಪ ಮೊತ್ತವನ್ನು ಪ್ರೀಮಿಯಂ ಮಾದರಿಯಲ್ಲಿ ನೀಡಿ ಪಡೆಯಬಹುದಾಗಿದೆ, ಪಾಲಿಸಿಯಲ್ಲಿ ಸೇರಿರುವ ಯಾವುದಾದರೂ ಘಟನೆಯು ಪಾಲಿಸಿಯ ಅವದಿಯಲ್ಲಿ ನಡೆದಲ್ಲಿ, ಪಾಲಿಸಿದಾರನಿಗೆ ಅಥವಾ ಆತನ ಬೇನೆಫಿಶಿಯರಿಗೆ ಅನ್ವಯವಾಗುವ ಬೆನಿಫಿಟ್ ಗಳನ್ನು ನೀಡಲಾಗುವುದು.

ಜೀವ ವಿಮೆಯಲ್ಲಿ ಅತ್ಯಂತ ಮೂಲಭೂತವಾದ ಯೋಜನೆ ಅಂದರೆ ಅದು ಪಾಲಿಸಿದಾರನ ಲೈಫ್ ಕವರೆಜ್ ಮಾಡುವುದು. ಈ ಯೋಜನೆಯ ಅಡಿಯಲ್ಲಿ, ಪಾಲಿಸಿದಾರನು ತನ್ನ ಲೈಫ್ ಗೆ ವಿಮೆಯನ್ನು ಪಡೆದು, ಆಕಸ್ಮಿಕ ಮರಣ ಹೊಂದಿದಲ್ಲಿ ಅವನ ಬೇನೆಫಿಶಿಯರಿಗಳಿಗೆ ಬೆನಿಫಿಟ್ ತಲುಪುವ ಹಾಗೆ ಮಾಡಬಹುದು. ಪಾಲಿಸಿಯ ಅವದಿಯಲ್ಲಿ ಪಾಲಿಸಿದಾರನ ಮರಣವಾದಲ್ಲಿ, ಆತನ ಬೇನೆಫಿಶಿಯರಿಗೆ ಸಮ್ ಅಶ್ಶುರ್ಡ್ ಮೊತ್ತ ಹಾಗೂ ಇನ್ನಿತರೆ ಅನ್ವಯವಾಗುವ ಬೆನಿಫಿಟ್ ಗಳನ್ನು ನೀಡಲಾಗುವುದು. ಬೇರೆ ರೀತಿಯ ವಿಮಾ ಯೋಜನೆಗಳೆಂದರೆ ಹೆಲ್ತ್ ಬೇಸ್ಡ್ ಇನ್ಸೂರೆನ್ಸ್, ಯೂನಿಟ್ ಬೇಸ್ಡ್ ಇನ್ಸೂರೆನ್ಸ್ ಮುಂತಾದುವುಗಳು. ವಿಮಾ ಯೋಜನೆಗಳಲ್ಲಿ ಹಲವು ರೈಡರ್ಸ್ ಗಳು ಹಾಗೂ ಆಪ್ಶನಲ್ ಬೇನೆಫಿಟ್ಸ್ ಗಳು ಕೂಡ ಲಭ್ಯವಿರುತ್ತವೆ. ಲೈಫ್ ಇನ್ಸೂರೆನ್ಸ್ ಯೋಜನೆಗಳು ಸಾಮಾನ್ಯವಾಗಿ ಧೀರ್ಘಾವದಿ ಆಗಿದ್ದು, ಅದನ್ನು ನವೀಕರಿಸುವ ಅವಕಾಶ ಇರುತ್ತದೆ.

ಯಾರು ವಿಮಾ ಯೋಜನೆಗಳನ್ನು ಪಡೆಯಬಹುದು
ಎಲ್ಲಾ ಭಾರತೀಯ ನಾಗರೀಕರು ಹಾಗೂ ಅನಿವಾಸಿ ಭಾರತೀಯರು ಲೈಫ್ ಇನ್ಸೂರೆನ್ಸ್ ಪ್ಲಾನ್ ಗಳನ್ನು ಪಡೆಯಲು ಅರ್ಹತೆ ಹೊಂದಿರುತ್ತಾರೆ. ಕೆಲವು ಪ್ಲಾನ್ ಗಳನ್ನು ಪಡೆಯಲು ನಿರ್ದಿಷ್ಟ ವಯಸ್ಸಿನವರಾಗಿರಬೇಕು. ಇನ್ನೂ ಕೆಲವು ಅಂದರೆ ಚೈಲ್ಡ್ ಪ್ಲಾನ್ ಗಳು ಹಾಗೂ ಎಂಡೋಮೆಂಟ್ ಪ್ಲಾನ್ ಗಳನ್ನು ಮೈನರ್ ಗಳ ಹೆಸರಿನಲ್ಲಿ ಅವರ ಪೋಷಕರು ಅಂದರೆ ತಂದೆ / ತಾಯಿಯಾಗಲಿ ಅಥವಾ ತಾತ / ಅಜ್ಜಿಯಾಗಲಿ ಅಥವಾ ರಕ್ಷಕರಾಗಲಿ ಪಡೆಯಬಹುದು.
ಇನ್ಸೂರೆನ್ಸ್ ಪಾಲಿಸಿಯನ್ನು ಪಡೆಯಲು ಅಪ್ಲಿಕೇಷನ್ ಫಾರ್ಮ್ ಜೊತೆಗೆ ಈ ಕೆಳ ಕಂಡ ಧಾಖಲೆಗಳನ್ನು ನೀಡಬೇಕಾಗುತ್ತದೆ.

 • ವಯಸ್ಸಿನ ಬಗೆಗಿನ ಪ್ರಮಾಣ ಪತ್ರ
 • ಗುರುತಿನ ಬಗ್ಗೆ ಪ್ರಮಾಣ ಪತ್ರ
 • ಆದಾಯದ ಬಗ್ಗೆ ಪ್ರಮಾಣ ಪತ್ರ
 • ವಿಳಾಸದ ಬಗ್ಗೆ ಪ್ರಮಾಣ ಪತ್ರ

ಈ ಮೇಲ್ಕಂಡ ಬಗ್ಗೆ ಪೂರಕವಾಗಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ರೇಷನ್ ಕಾರ್ಡ್, ಮೆಟ್ರಿಕ್ಯುಲೇಷನ್ ಸರ್ಟಿಫಿಕೇಟ್, ಆದಾಯದ ದಾಖಲೆ, ಪಾಸ್ ಪೋರ್ಟ್, ವಿದ್ಯುಚ್ಚಕ್ತಿ ಅಥವಾ ಗ್ಯಾಸ್ ಬಿಲ್.
ಎಲ್ ಐ ಸಿ ಇಂಡಿಯ ಮಿಷನ್ ಮತ್ತು ಉದ್ದೇಶಗಳು
ಭಾರತ ದೇಶವು ವ್ಯಾಪಕ ಹಾಗೂ ಹಲವು ರೀತಿಯ ವೈವಿದ್ಯಮಯತೆಯಿಂದ ಕೂಡಿದ್ದು ಅದರ ನಾಗರೀಕರ ರಕ್ಷಣೆ ಹಾಗೂ ಅವರಿಗೆ ಬೇಕಾಗುವ ಕನಿಷ್ಠ ಆವಶ್ಯಕತೆಗಳನ್ನು ಹಾಗೂ ಲೈಫ್ ಕವರ್ ಅನ್ನು ಮನಗಂಡು, ಎಲ್ ಐ ಸಿ ಆಫ್ ಇಂಡಿಯವನ್ನು ಒಂದು ರಾಷ್ಟ್ರೀಯ ಆಂದೋಳನದ ಮಾದರಿಯಲ್ಲಿ ಆಸ್ತಿತ್ವಕ್ಕೆ ತರಲಾಯಿತು. ಇದರಿಂದ, ನಾಗರೀಕರಿಗೆ, ಅವರಿಗೆ ಬೇಕಾಗುವ ಆರ್ಥಿಕ ಭದ್ರತೆ ಹಾಗೂ ಅವರುಗಳ ಮೇಲೆ ಅವಲಂಬಿತವಾಗಿರುವ ಕುಟುಂಬದ ಸದಸ್ಯರುಗಳಿಗೆ ಏನಾದರೂ ಆಕಸ್ಮಿಕ ಘಟನೆಯು ಆದಲ್ಲಿ ಅದನ್ನು ಎದುರಿಸುವ ಶಕ್ತಿಯನ್ನು ನೀಡುವಲ್ಲಿ ಸಹಾಯ ಮಾಡುತ್ತದೆ.

ಕೇವಲ ಸ್ವಲ್ಪ ಹಣವನ್ನು ಪ್ರೀಮಿಯಂ ರೀತಿಯಲ್ಲಿ ನೀಡಿ, ನಾಗರೀಕರು ತಮ್ಮ ಜೀವಕ್ಕೆ ವಿಮೆಯನ್ನು ಪಡೆದು ಮುಂದೆ ಯಾವುದೇ ಆಕಸ್ಮಿಕಕ್ಕೆ ಒಳಗಾಗಿ ಜೀವವನ್ನು ತೊರೆದಲ್ಲಿ, ಅಂತಹವರ ಮೇಲೆ ಅವಲಂಬಿತವಾಗಿರುವ ಕುಟುಂಬಕ್ಕೆ ಸಾಕಷ್ಟು ಆರ್ಥಿಕ ಸಹಾಯ ದೊರಕಿಸಿಕೊಡುವಲ್ಲಿ ಅವರಿಗೆ ಜೀವ ವಿಮೆಯು ಒಂದು ವರದಾನವಾಗಿ ಪರಿಣಮಿಸಿದೆ.

ಎಲ್ ಐ ಸಿ ಯ ಉದ್ದೇಶಗಳು ಅತ್ಯಂತ ಮಹತ್ವ ಉಳ್ಳವು ಆಗಿದ್ದು ಅವು ನಾಗರೀಕರಿಗೆ ಒಂದು ಖಚಿತ ನರವಸೆಯನ್ನು ನೀಡುತ್ತವೆ, ಅವುಗಳ ವಿವರ ಈ ಕೆಳಗಿದೆ.

 • ಲೈಫ್ ಇನ್ಸೂರೆನ್ಸ್ ಪಾಲಿಸಿಗಳು ದೇಶದ ಎಲ್ಲಾ ಬಾಗಗಳಲ್ಲಿಯೂ ದೊರಕುವಂತೆ ಮಾಡುವುದು. ಅದರಲ್ಲಿಯೂ ಗ್ರಾಮಾಂತರ ಮತ್ತು ಅತ್ಯಂತ ಹಿಂದುಳಿದ ಪ್ರದೇಶಗಳು ಹಾಗೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ವಂಚಿತ ಹೊಂದಿದ ಜನರಿಗೆ ಅನುಕೂಲವಾಗುವಂತೆ ನೋಡಿಕೊಳ್ಳುವುದು.
 • ಲೈಫ್ ಇನ್ಸೂರೆನ್ಸ್ ಪಾಲಿಸಿಗಳು ಬೇಸಿಕ್ ಹಾಗೂ ಹೆಚ್ಚಿನ ಲೈಫ್ ಕವರ್ ಆಪ್ಶನ್ ಮತ್ತು ಆಪ್ಷನಲ್ ಲೈಫ್ ಕವರ್ ಆಪ್ಶನ್ ಹೊಂದಿದ್ದು, ದೇಶದ ವ್ಯಾಪಕ ಮತ್ತು ಬಿನ್ನವಾದ ರೀತಿ ನೀತಿಗಳನ್ನು ಹೊಂದಿರುವ ಜನಗಳ ಆವಶ್ಯಕತೆಗಳನ್ನು ಮನದಲ್ಲಿ ಇಟ್ಟುಕೊಂಡು ಹಾಗೂ ಅವರಿಗೆ ಇದರಿಂದ ಹೆಚ್ಚುವರಿ ಆದಾಯವು ಬರುವ ಹಾಗೆ ಮಾಡುವ ಒಂದು ಮಾರ್ಗ ಆಗಿರುತ್ತದೆ.
 • ಎಲ್ ಐ ಸಿ ಯು ಪಾಲಿಸಿದಾರರ ಹಿತಾಸಕ್ತಿಯನ್ನು ಹಾಗೂ ಅವರ ರಕ್ಷಣೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸುತ್ತದೆ
 • ಎಲ್ ಐ ಸಿ ಯು ಅದರ ಬಂಡವಾಳ ಹೂಡಿಕೆಯು ದೇಶದ, ಸಮಾಜದ ಹಾಗೂ ಸಮುದಾಯದ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಕ್ರೋಡೀಕರಿಸಿ, ಅದರಿಂದ ಹೆಚ್ಚುವರಿ ಲಾಭವನ್ನು ಗಳಿಸಿ ಅದನ್ನು ಪಾಲಿಸಿದಾರರಿಗೆ ನೀಡುವ ಪ್ರಯತ್ನವನ್ನು ಮಾಡುತ್ತಲೇ ಬಂದಿದೆ.
 • ಪಾಲಿಸಿದಾರರ ಹಣವನ್ನು ಹೂಡಿಕೆ ಮಾಡುವಾಗ, ಎಲ್ ಐ ಸಿ ಯು ಆ ಹಣವು ಪಾಲಿಸಿದಾರರದಾಗಿದ್ದು, ತಾವು ಕೇವಲ ಆ ಹಣದ ಟ್ರಸ್ಟೀ ಗಳು ಮಾತ್ರ ಎನ್ನುವುದನ್ನು ಮರೆಯದೇ ಹಣವನ್ನು ಅತ್ಯಂತ ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡುತ್ತದೆ.
 • ಹಾಗೆಯೇ ಕಾರ್ಪೊರೇಷನ್ ನ ಉದ್ಯಮಿಗಳು ಹಾಗೂ ಏಜೆಂಟ್ ಗಳು ಸಂಪೂರ್ಣವಾಗಿ ತಮ್ಮನ್ನು ತಾವೇ ಈ ಕೆಲಸದಲ್ಲಿ ತೊಡಗಿಸಿಕೊಂಡು, ಜನ ಸಾಮಾನ್ಯರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದ ಹಾಗೆ ನೋಡಿಕೊಳ್ಳುತ್ತಾರೆ.

ಎಲ್ ಐ ಸಿ ಇಂಡಿಯ ಬಗ್ಗೆ ಕೆಲವು ವಿಷಯಗಳು

ಎಲ್ ಐ ಸಿ ಯು 2015-16 ರಲ್ಲಿ ಸುಮಾರು 208.85 ಲಕ್ಷ ಕ್ಲೆಯಿಮ್ ಗಳನ್ನು ಸೆಟಲ್ ಮಾಡಿದ್ದು ಅದರ ಬಾಬ್ತು ರೂ 85,519.96 ಕೋಟಿ ಮೊತ್ತವನ್ನು ನೀಡಿದೆ.

ದ ಬ್ರಾಂಡ್ ಟ್ರಸ್ಟ್ ರಿಪೋರ್ಟ್ 2012 ರ ಪ್ರಕಾರ, ಎಲ್ ಐ ಸಿ ಯು ಇಂಡಿಯದಲ್ಲಿ ಅತ್ಯಂತ ಭರವಸೆ ಇಡುವಂತಹ ಬ್ರಾಂಡ್ ಗಳಲ್ಲಿ 6 ನೆಯ ಸ್ತಾನದಲ್ಲಿರುತ್ತದೆ.

ಇನ್ಸೂರೆನ್ಸ್ ಸೇಕ್ಟರ್ ನಲ್ಲಿ ಅತಿ ಹೆಚ್ಚು ಬೋನಸ್ ರೇಟ್ಸ್ – 3.5 % ನಿಂದ 5.2 % ವರೆಗೆ

ಎಲ್ ಐ ಸಿ ಇಂಡಿಯ ಯೋಜನೆಗಳು ಹಾಗೂ ಸೇವೆಗಳು

ಎಲ್ ಐ ಸಿ ಯು ಅನೇಕ ಯೋಜನೆಗಳನ್ನು ಹೊಂದಿದ್ದು, ಅವುಗಳು ಜನರ ಅವಶ್ಯಕತೆಗಳಿಗೆ ಸ್ಪಂದಿಸುವ ಎಲ್ಲಾ ತರಹದ ಹಾಗೂ ಎಲ್ಲಾ ರೀತಿಯ ಇನ್ಸೂರೆನ್ಸ್ ನೀಡುವ (ಮೈಕ್ರೋ ಇನ್ಸೂರೆನ್ಸ್ ಸಹಿತ) ಕಂಪನಿ ಆಗಿರುತ್ತದೆ. ಎಲ್ ಐ ಸಿ ಯು ಅನೇಕ ಹಾಗೂ ವಿವಿದ ರೀತಿಯ ಇನ್ಸೂರೆನ್ಸ್ ಮತ್ತು ಹೆಲ್ತ್ ಪ್ಲಾನ್ ಗಳನ್ನು ಹೊಂದಿದೆ. ಸಾಮಾನ್ಯ ಮನುಷ್ಯನಿಗೆ ಸರಿ ಹೋಗುವ ಪ್ಲಾನ್ ನಿಂದ ಹಿಡಿದು, ಸ್ಪೆಷಲ್ ಪ್ಲಾನ್ ಗಳು, ಯೂನಿಟ್ ಪ್ಲಾನ್ ಗಳು, ಪೆನ್ಷನ್ ಪ್ಲಾನ್ ಗಳು ಮತ್ತು ಮೈಕ್ರೋ ಪ್ಲಾನ್ ಗಳು ಎಲ್ಲವೂ ಎಲ್ ಐ ಸಿ ಯಲ್ಲಿ ದೊರೆಯುತ್ತವೆ.

ಎಲ್ ಐ ಸಿ ಯ ಯೋಜನೆಗಳು ಅತ್ಯಂತ ವಿಶಾಲವಾದ ಹಾಗೂ ಜನರ ಅಗತ್ಯತೆಗೆ ಸ್ಪಂದಿಸುವ ಯೋಜನೆಗಳಾಗಿದ್ದು ಆದರಿಂದ ನಾಗರೀಕರಿಗೆ ಸಾಕಷ್ಟು ಅನುಕೂಲತೆಗಳು ಒಡಗುತ್ತಲಿವೆ. ಈ ಯೋಜನೆಗಳು ವಿಭಿನ್ನವಾದ ಹಾಗೂ ವಿಶಿಷ್ಟತೆ ಉಳ್ಳವಾಗಿದ್ದು, ಅವಶ್ಯಕತೆಗಳು ಹಾಗೂ ಆದ್ಯತೆಗಳಿಗೆ ಹೊಂದುವಂತೆ ರೂಪಿಸಲಾಗಿರುತ್ತದೆ

ಸಧ್ಯದ ಪರಿಸ್ಟಿತಿಯಲ್ಲಿ, ಎಲ್ ಐ ಸಿ ಯ ಯೋಜನೆಗಳಲ್ಲಿ ಅನ್ಮೋಲ್ ಜೀವನ್ II, ಅಮೂಲ್ಯ ಜೀವನ್ II ಹಾಗೂ E- ಟರ್ಮ್ ಪ್ಲಾನ್ ಗಳು ಅತ್ಯಂತ ಜನಪ್ರಿಯವಾಗಿದೆ. ಕಂಪನಿಯು ತನ್ನ ಇನ್ಸೂರೆನ್ಸ್ ಯೋಜನೆಗಳನ್ನು ಸಮಯಕ್ಕೆ ಹಾಗೂ ಜನರ ಅವಶ್ಯಕತೆಗೆ ತಕ್ಕಂತೆ ಬದಲಾಯಿಸುತ್ತಾ ಬಂದಿದೆ. ಅದರ ಪ್ರಕಾರ, ಹಳೆಯ ಯೋಜನೆಗಳನ್ನು ಹಿಂಪಡೆದು ಹೊಸ ಯೋಜನೆಗಳನ್ನು ನೀಡುತ್ತಾ ಬಂದಿದೆ.

ಎಲ್ ಐ ಸಿ ಯು ವೈಯಕ್ತಿಕ ಹಾಗೂ ಗ್ರೂಪ್ ಇನ್ಸೂರೆನ್ಸ್ ಯೋಜನೆಗಳನ್ನು ನೀಡುತ್ತದೆ. ಗ್ರೂಪ್ ಇನ್ಷೂರೆನ್ಸ್ ಯೋಜನೆಗಳು ಒಂದು ಗ್ರೂಪ್ ಅಂದರೆ ಹಲವು ಜನಗಳನ್ನು ಸೇರಿಸಿ ನೀಡುವ ಯೋಜನೆ ಆಗಿದ್ದು ಅದು ಕಂಪನಿ ಅಥವಾ ಅಸೋಸಿಯೇಷನ್ ಆಗಿರಬಹುದು. ಉದ್ಯೋಗ ನೀಡಿರುವವನು ಅಥವಾ ಗ್ರೂಪ್ ನ ಮುಖ್ಯಸ್ಥ, ಗ್ರೂಪ್ ಇನ್ಷೂರೆನ್ಸ್ ಅನ್ನು ತನ್ನ ಮೆಂಬರ್ಸ್ ಗಳಿಗೆ ಪಡೆದು ಅದರಿಂದ ಆ ಮೆಂಬರ್ಸ್ ಗಳು ಲೈಫ್ ಕವರ್ ಅನ್ನು ಕಡಿಮೆ ದರದಲ್ಲಿ ಪಡೆಯುವಂತೆ ಮಾಡಬಹುದು.

ಎಲ್ ಐ ಸಿ ಆಫ್ ಇಂಡಿಯ ಹೊಸ ಪ್ಲಾನ್ ಗಳು

ಆಮ್ ಆದ್ಮಿ ಬೀಮ ಯೋಜನೆ

ಈ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ಮೆಂಬರ್ ಪ್ರತಿ ವರ್ಷಕ್ಕೆ ಪ್ರೀಮಿಯಂ ಗೋಸ್ಕರ ನೀಡುವುದು ಕೇವಲ ರೂ 200 (ರೂ 30000 ಲೈಫ್ ಕವರ್ ಗೆ) ಮಾತ್ರ. ಅದರಲ್ಲಿ ಸೋಷಿಯಲ್ ಸೆಕ್ಯೂರಿಟೀ ಫಂಡ್ ನಿಂದ 50 % ರಿಯಾಯತಿ ದೊರೆಯುತ್ತದೆ. ರೂರಲ್ ಲ್ಯಾಂಡ್ ಲೆಸ್ ಹೌಸ್ ಹೋಲ್ಡ್ (RLH) ರವರಾದಲ್ಲಿ, ಅವರ ಪ್ರೀಮಿಯಂ ಮೊತ್ತದಲ್ಲಿ, 50 % ಮೊತ್ತವನ್ನು ರಾಜ್ಯ ಸರಕಾರವಾಗಲಿ / ಯೂನಿಯನ್ ಟೆರಿಟರಿ ಆಗಲಿ ನೀಡುತ್ತದೆ. ಹಾಗೆಯೇ ಇತರೆ ಕೆಲಸಗಳನ್ನು ಮಾಡುವ ಗ್ರೂಪ್ ಗೆ ಸೇರಿರುವಂತವರಿಗೆ ಪ್ರೀಮಿಯಂ ನ 50 % ಮೊತ್ತವನ್ನು ನೋಡಲ್ ಏಜೆನ್ಸೀ ಮತ್ತು/ಅಥವಾ ಮೆಂಬರ್ ಮತ್ತು/ಅಥವಾ ರಾಜ್ಯ ಸರ್ಕಾರ / ಯೂನಿಯನ್ ಟೆರಿಟರಿ ನೀಡುತ್ತವೆ.

ಎಂಡೋಮೆಂಟ್ ಪ್ಲಾನ್ಸ್

ಎಂಡೋಮೆಂಟ್ ಪಾಲಿಸಿಯು ಒಂದು ಲೈಫ್ ಇನ್ಸೂರೆನ್ಸ್ ನೀಡುವ ಕಾಂಟ್ರ್ಯಾಕ್ಟ್ ಯೋಜನೆ ಆಗಿದ್ದು ಪಾಲಿಸಿದಾರನಿಗೆ ಒಂದು ಖಚಿತ ಮೊತ್ತವನ್ನು ನಿಗದಿತ ಅವದಿ ಮುಗಿದ ಕೂಡಲೇ (ಮೆಚೂರಿಟೀ ಆದ ತಕ್ಷಣ) ಅಥವಾ ಅವನ ಡೆತ್ ಆದಲ್ಲಿ ನೀಡುತ್ತದೆ. ಮೆಚೂರಿಟೀ ಅವದಿಯು 10 ವರ್ಷಗಳು, 15 ವರ್ಷಗಳು ಅಥವಾ 20 ವರ್ಷಗಳು ಇದ್ದು ಪಾಲಿಸಿದಾರನ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತವೆ. ಕೆಲವು ಪಾಲಿಸಿಗಳಲ್ಲಿ ಕ್ರಿಟಿಕಲ್ ಇಲ್ಲ್ನೆಸ್ಸ್ ಸಮಯದಲ್ಲಿ ಸಮ್ ಅಶ್ಶುರ್ಡ್ ಮೊತ್ತದ ಒಂದು ಅಂಶವನ್ನು ನೀಡಲಾಗುತ್ತದೆ.

ಎಲ್ ಐ ಸಿ ಜೀವನ್ ಉತ್ಕರ್ಷ ಪ್ಲಾನ್

ಎಲ್ ಐ ಸಿ ಜೀವನ್ ಉತ್ಕರ್ಶ್ ಯೋಜನೆಯು ರಕ್ಷಣೆ ಹಾಗೂ ಉಳಿತಾಯವನ್ನು ಸಂಯೋಜಿಸಿ ರಿಸ್ಕ್ ಕವರ್ ಟ್ಯಾಬುಲರ್ ಸಿಂಗಲ್ ಪ್ರೀಮಿಯಂ ನ 10 ಪಟ್ಟು ಇರುತ್ತದೆ. ಪಾಲಿಸಿದಾರನಿಗೆ ಆಪ್ಶನ್ ಗಳು ಇದ್ದು ಆತನು ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತವನ್ನು ಆಯ್ಕೆ ಮಾಡುವ ಅವಕಾಶ ಇರುತ್ತದೆ. ಸಿಂಗಲ್ ಪ್ರೀಮಿಯಂ ಮೊತ್ತವು ಪಾಲಿಸಿದಾರನು ಆಯ್ಕೆ ಮಾಡಿರುವ ಬೇಸಿಕ್ ಸಮ್ ಅಶ್ಶುರ್ಡ್ ಮತ್ತು ಪಾಲಿಸಿ ಪಡೆಯುವಾಗಿನ ಆತನ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ.

ಎಲ್ ಐ ಸಿ ಜೀವನ್ ಲಾಭ್ ಪ್ಲಾನ್

ಎಲ್ ಐ ಸಿ ಜೀವನ್ ಲಾಭ್ ಪ್ಲಾನ್ ಒಂದು ಲಿಮಿಟೆಡ್ ಪ್ರೀಮಿಯಂ ನೀಡುವ ನಾನ್-ಲಿಂಕ್ಡ್ ಉಳಿತಾಯ ಹಾಗೂ ರಕ್ಷಣೆ ನೀಡುವ ಪ್ಲಾನ್ ಆಗಿರುತ್ತದೆ. ಇದರಲ್ಲಿ, ಪ್ರೀಮಿಯಂ ಮೊತ್ತವು ಲಂಪ್ ಸಮ್ ಮೊತ್ತ ಆಗಿದ್ದು, ಅದನ್ನು ಪಾಲಿಸಿ ಪಡೆಯುವಾಗಲೇ ನೀಡಬೇಕಾಗುತ್ತದೆ. ಈ ಎರಡೂ ಉಪಯೋಗಗಳನ್ನು ನೀಡುವ ಪ್ಲಾನ್ ಪಾಲಿಸಿದಾರನ ಮರಣವು ಅವದಿಯ ಮದ್ಯದಲ್ಲಿ ಆದಲ್ಲಿ, ಆತನು ಸೂಚಿಸಿರುವ ನಾಮಿನಿಗೆ ಡೆತ್ ಬೆನಿಫಿಟ್ ಅನ್ನು ನೀಡುತ್ತದೆ. ಹಾಗೆಯೇ, ಪಾಲಿಸಿದಾರನು ಆವದಿಯನ್ನು ಮುಗಿಸಿದಲ್ಲಿ, ಒಂದು ಖಚಿತ ಮೊತ್ತವನ್ನು ಮೆಚೂರಿಟೀ ಬೆನಿಫಿಟ್ ರೂಪದಲ್ಲಿ ನೀಡಲಾಗುವುದು.

ಎಲ್ ಐ ಸಿ ಜೀವನ್ ಪ್ರಗತಿ ಪ್ಲಾನ್ 

ಎಲ್ ಐ ಸಿ ಜೀವನ್ ಪ್ರಗತಿ ಪ್ಲಾನ್ ಒಂದು ನಾನ್-ಲಿಂಕ್ಡ್ ಲಾಭ ನೀಡುವ ಪ್ಲಾನ್ ಆಗಿದ್ದು ಪಾಲಿಸಿದಾರನಿಗೆ ರಕ್ಷಣೆ ಹಾಗೂ ಉಳಿತಾಯ (ಆದಾಯ) ಎರಡನ್ನೂ ನೀಡುತ್ತದೆ. ಈ ಪ್ಲಾನ್ ಅಡಿಯಲ್ಲಿ, ರಿಸ್ಕ್ ಕವರೆಜ್ ನಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ನಿಗದಿ ಪಡಿಸಿದ ಅಂಶವು ಹೆಚ್ಚು ಆಗುತ್ತಾ ಹೋಗುತ್ತದೆ. ಪಾಲಿಸಿದಾರನಿಗೆ ಹಣದ ಅವಶ್ಯಕತೆ ಇದ್ದಲ್ಲಿ, ಪಾಲಿಸಿಯ ಅವದಿಯ ಮಧ್ಯದಲ್ಲಿ ಪಾಲಿಸಿಯ ಮೇಲೆ ಸಾಲ ತೆಗೆದುಕೊಳ್ಳಬಹುದಾದ ಸೌಲಭ್ಯ ನೀಡುತ್ತದೆ.

ಎಲ್ ಐ ಸಿ ಸಿಂಗಲ್ ಪ್ರೀಮಿಯಂ ಎಂಡೋಮೆಂಟ್ ಪ್ಲಾನ್

ಎಲ್ ಐ ಸಿ ಸಿಂಗಲ್ ಪ್ರೀಮಿಯಂ ಎಂಡೋಮೆಂಟ್ ಪ್ಲಾನ್ ಒಂದು ಲಾಭದಲ್ಲಿ ಬಾಗಿ ಆಗುವ ನಾನ್-ಲಿಂಕ್ಡ್ ಉಳಿತಾಯ ಮತ್ತು ರಕ್ಷಣೆ ನೀಡುವ ಯೋಜನೆ ಆಗಿರುತ್ತದೆ. ಪಾಲಿಸಿದಾರನು ಈ ಪಾಲಿಸಿಯನ್ನು ಪಡೆಯಲು ಸಿಂಗಲ್ ಪ್ರೀಮಿಯಂ ಮೊತ್ತವನ್ನು ಲಂಪ್ ಸಮ್ ಮೊತ್ತವಾಗಿ ಮೊದಲೇ ನೀಡಬೇಕಾಗುತ್ತದೆ. . ಈ ಎರಡೂ ಉಪಯೋಗಗಳನ್ನು ನೀಡುವ ಪ್ಲಾನ್ ಪಾಲಿಸಿದಾರನ ಮರಣವು ಅವದಿಯ ಮದ್ಯದಲ್ಲಿ ಆದಲ್ಲಿ, ಆತನು ಸೂಚಿಸಿರುವ ನಾಮಿನಿಗೆ ಡೆತ್ ಬೆನಿಫಿಟ್ ಅನ್ನು ನೀಡುತ್ತದೆ. ಹಾಗೆಯೇ, ಪಾಲಿಸಿದಾರನು ಆವದಿಯನ್ನು ಮುಗಿಸಿದಲ್ಲಿ, ಒಂದು ಖಚಿತ ಮೊತ್ತವನ್ನು ಮೆಚೂರಿಟೀ ಬೆನಿಫಿಟ್ ರೂಪದಲ್ಲಿ ನೀಡಲಾಗುವುದು. ಈ ಪ್ಲಾನ್ ಪಾಲಿಸಿದಾರನಿಗೆ ಹಣದ ಅವಶ್ಯಕತೆ ಇದ್ದಲ್ಲಿ, ಪಾಲಿಸಿಯ ಮೇಲೆ ಸಾಲ ಸೌಲಭ್ಯವು ಕೂಡ ನೀಡುತ್ತದೆ.

ಎಲ್ ಐ ಸಿ ನ್ಯೂ ಎಂಡೋಮೆಂಟ್ ಪ್ಲಾನ್

ಎಲ್ ಐ ಸಿ ನ್ಯೂ ಎಂಡೋಮೆಂಟ್ ಪ್ಲಾನ್ ಒಂದು ಲಾಭದಲ್ಲಿ ಬಾಗಿ ಆಗುವ ನಾನ್-ಲಿಂಕ್ಡ್ ಉಳಿತಾಯ ಮತ್ತು ರಕ್ಷಣೆ ನೀಡುವ ಯೋಜನೆ ಆಗಿರುತ್ತದೆ. ಈ ಎರಡೂ ಉಪಯೋಗಗಳನ್ನು ನೀಡುವ ಪ್ಲಾನ್ ಪಾಲಿಸಿದಾರನ ಮರಣವು ಅವದಿಯ ಮದ್ಯದಲ್ಲಿ ಆದಲ್ಲಿ, ಆತನು ಸೂಚಿಸಿರುವ ನಾಮಿನಿಗೆ ಡೆತ್ ಬೆನಿಫಿಟ್ ಅನ್ನು ನೀಡುತ್ತದೆ. ಹಾಗೆಯೇ, ಪಾಲಿಸಿದಾರನು ಆವದಿಯನ್ನು ಮುಗಿಸಿದಲ್ಲಿ, ಒಂದು ಕಚಿತ ಮೊತ್ತವನ್ನು ಮೆಚೂರಿಟೀ ಬೆನಿಫಿಟ್ ರೂಪದಲ್ಲಿ ನೀಡಲಾಗುವುದು. ಈ ಪ್ಲಾನ್ ಪಾಲಿಸಿದಾರನಿಗೆ ಹಣದ ಅವಶ್ಯಕತೆ ಇದ್ದಲ್ಲಿ, ಪಾಲಿಸಿಯ ಮೇಲೆ ಸಾಲ ಸೌಲಭ್ಯವು ಕೂಡ ನೀಡುತ್ತದೆ.

ಎಲ್ ಐ ಸಿ ನ್ಯೂ ಜೀವನ್ ಆನಂದ್ ಪ್ಲಾನ್

ಎಲ್ ಐ ಸಿ ನ್ಯೂ ಜೀವನ್ ಆನಂದ್ ಪ್ಲಾನ್ ಒಂದು ಲಾಭದಲ್ಲಿ ಬಾಗಿ ಆಗುವ ನಾನ್-ಲಿಂಕ್ಡ್ ಉಳಿತಾಯ ಮತ್ತು ರಕ್ಷಣೆ ನೀಡುವ ಯೋಜನೆ ಆಗಿರುತ್ತದೆ. ಈ ಎರಡೂ ಉಪಯೋಗಗಳನ್ನು ನೀಡುವ ಪ್ಲಾನ್ ಪಾಲಿಸಿದಾರನಿಗೆ ಆರ್ಥಿಕ ರಕ್ಷಣೆಯನ್ನು ಪಾಲಿಸಿಯ ಸಂಪೂರ್ಣ ಅವದಿಯು ಇರುವವರೆಗೂ ನೀಡುತ್ತದೆ. ಹಾಗೆಯೇ, ಪಾಲಿಸಿದಾರನು ಆವದಿಯನ್ನು ಮುಗಿಸಿದಲ್ಲಿ, ಒಂದು ಖಚಿತ ಮೊತ್ತವನ್ನು ಮೆಚೂರಿಟೀ ಬೆನಿಫಿಟ್ ರೂಪದಲ್ಲಿ ನೀಡಲಾಗುವುದು. ಈ ಪ್ಲಾನ್ ಪಾಲಿಸಿದಾರನಿಗೆ ಹಣದ ಅವಶ್ಯಕತೆ ಇದ್ದಲ್ಲಿ, ಪಾಲಿಸಿಯ ಮೇಲೆ ಸಾಲ ಸೌಲಭ್ಯವು ಕೂಡ ನೀಡುತ್ತದೆ.

ಎಲ್ ಐ ಸಿ ಜೀವನ್ ರಕ್ಷಕ್ ಪ್ಲಾನ್

ಎಲ್ ಐ ಸಿ ಜೀವನ್ ರಕ್ಷಕ್ ಪ್ಲಾನ್ ಒಂದು ಲಾಭದಲ್ಲಿ ಬಾಗಿ ಆಗುವ ನಾನ್-ಲಿಂಕ್ಡ್ ಉಳಿತಾಯ ಮತ್ತು ರಕ್ಷಣೆ ನೀಡುವ ಯೋಜನೆ ಆಗಿರುತ್ತದೆ. ಈ ಎರಡೂ ಉಪಯೋಗಗಳನ್ನು ನೀಡುವ ಪ್ಲಾನ್ ಪಾಲಿಸಿದಾರನಿಗೆ ಆರ್ಥಿಕ ರಕ್ಷಣೆಯನ್ನು ಪಾಲಿಸಿಯ ಸಂಪೂರ್ಣ ಅವದಿಯು ಇರುವವರೆಗೂ ನೀಡುತ್ತದೆ. ಹಾಗೆಯೇ, ಪಾಲಿಸಿದಾರನು ಆವದಿಯನ್ನು ಮುಗಿಸಿದಲ್ಲಿ, ಒಂದು ಖಚಿತ ಮೊತ್ತವನ್ನು ಮೆಚೂರಿಟೀ ಬೆನಿಫಿಟ್ ರೂಪದಲ್ಲಿ ನೀಡಲಾಗುವುದು. ಈ ಪ್ಲಾನ್ ಪಾಲಿಸಿದಾರನಿಗೆ ಹಣದ ಅವಶ್ಯಕತೆ ಇದ್ದಲ್ಲಿ, ಪಾಲಿಸಿಯ ಮೇಲೆ ಸಾಲ ಸೌಲಭ್ಯವು ಕೂಡ ನೀಡುತ್ತದೆ.

ಎಲ್ ಐ ಸಿ ಲಿಮಿಟೆಡ್ ಪ್ರೀಮಿಯಂ ಎಂಡೋಮೆಂಟ್ ಪ್ಲಾನ್

ಎಲ್ ಐ ಸಿ ಲಿಮಿಟೆಡ್ ಪ್ರೀಮಿಯಂ ಎಂಡೋಮೆಂಟ್ ಪ್ಲಾನ್ ಒಂದು ಲಾಭದಲ್ಲಿ ಬಾಗಿ ಆಗುವ ನಾನ್-ಲಿಂಕ್ಡ್ ಉಳಿತಾಯ ಮತ್ತು ರಕ್ಷಣೆ ನೀಡುವ ಯೋಜನೆ ಆಗಿರುತ್ತದೆ. ಈ ಎರಡೂ ಉಪಯೋಗಗಳನ್ನು ನೀಡುವ ಪ್ಲಾನ್ ಪಾಲಿಸಿದಾರನ ಮರಣವು ಅವದಿಯ ಮದ್ಯದಲ್ಲಿ ಆದಲ್ಲಿ, ಆತನು ಸೂಚಿಸಿರುವ ನಾಮಿನಿಗೆ ಡೆತ್ ಬೆನಿಫಿಟ್ ಅನ್ನು ನೀಡುತ್ತದೆ. ಹಾಗೆಯೇ, ಪಾಲಿಸಿದಾರನು ಆವದಿಯನ್ನು ಮುಗಿಸಿದಲ್ಲಿ, ಒಂದು ಖಚಿತ ಮೊತ್ತವನ್ನು ಮೆಚೂರಿಟೀ ಬೆನಿಫಿಟ್ ರೂಪದಲ್ಲಿ ನೀಡಲಾಗುವುದು. ಈ ಪ್ಲಾನ್ ಪಾಲಿಸಿದಾರನಿಗೆ ಹಣದ ಅವಶ್ಯಕತೆ ಇದ್ದಲ್ಲಿ, ಪಾಲಿಸಿಯ ಮೇಲೆ ಸಾಲ ಸೌಲಭ್ಯವು ಕೂಡ ನೀಡುತ್ತದೆ.

ಎಲ್ ಐ ಸಿ ಜೀವನ್ ಲಕ್ಷ್ಯ ಪ್ಲಾನ್

ಎಲ್ ಐ ಸಿ ಲಿಮಿಟೆಡ್ ಪ್ರೀಮಿಯಂ ಎಂಡೋಮೆಂಟ್ ಪ್ಲಾನ್ ಒಂದು ಲಾಭದಲ್ಲಿ ಬಾಗಿ ಆಗುವ ನಾನ್-ಲಿಂಕ್ಡ್ ಉಳಿತಾಯ ಮತ್ತು ರಕ್ಷಣೆ ನೀಡುವ ಯೋಜನೆ ಆಗಿರುತ್ತದೆ. ಈ ಪ್ಲಾನ್ ನಲ್ಲಿ ಪಾಲಿಸಿದಾರನಿಗೆ ವಾರ್ಷಿಕವಾಗಿ ಒಂದು ಖಚಿತ ಮೊತ್ತವನ್ನು ನೀಡಿ ಅವನ ಮತ್ತು ಅವನ ಕುಟುಂಬದ ದಿನ ನಿತ್ಯದ ಅಗತ್ಯತೆಗಳನ್ನು ಪೂರೈಸುವಲ್ಲಿ ಹಾಗೂ ಆತನ ಮಕ್ಕಳ ಮುಂದಿನ ಭವಿಷ್ಯವನ್ನು ರೂಪಿಸುವಲ್ಲಿ ನೆರವಾಗುತ್ತದೆ. ಪಾಲಿಸಿದಾರನ ಮರಣವು ಅವದಿಯ ಮಧ್ಯದಲ್ಲಿ ಆದರೂ ಸಹಾ ಅಥವಾ ಆತನು ಆವದಿಯನ್ನು ಪೂರೈಸಿದರೂ ಸಹಾ ಅದನ್ನು ಪರಿಗಣನೆಗೆ ತೆಗೆದುಕೊಳ್ಳದೆ, ಆತನಿಗೆ / ಆತನ ಕುಟುಂಬಕ್ಕೆ ಈ ವಾರ್ಷಿಕ ಖಚಿತ ಮೊತ್ತವನ್ನು ನೀಡಲಾಗುತ್ತದೆ. ಹಾಗೂ ಅವದಿ ಮುಗಿದ ಕೂಡಲೇ ಪಾಲಿಸಿಯ ಬಾಬ್ತು ನೀಡಬೇಕಾಗುವ ಮೆಚೂರಿಟೀ ಮೊತ್ತವನ್ನು ಕೂಡ ನೀಡಲಾಗುವುದು. ಈ ಪ್ಲಾನ್ ಪಾಲಿಸಿದಾರನಿಗೆ ಹಣದ ಅವಶ್ಯಕತೆ ಇದ್ದಲ್ಲಿ, ಪಾಲಿಸಿಯ ಮೇಲೆ ಸಾಲ ಸೌಲಭ್ಯವು ಕೂಡ ನೀಡುತ್ತದೆ.

ಎಲ್ ಐ ಸಿ ಆಧಾರ್ ಶಿಲಾ ಪ್ಲಾನ್

ಎಲ್ ಐ ಸಿ ಆಧಾರ್ ಶಿಲಾ ಪ್ಲಾನ್ ರಕ್ಷಣೆ ಹಾಗೂ ಉಳಿತಾಯ ಎರಡನ್ನೂ ಒಟ್ಟಿಗೆ ನೀಡುವ ಪ್ಲಾನ್ ಆಗಿರುತ್ತದೆ. ಈ ಪ್ಲಾನ್ ಕೇವಲ UIDAI ರವರು ನೀಡಿರುವ ಆಧಾರ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಮಾತ್ರವೇ ಲಭ್ಯವಾಗುತ್ತದೆ. ಈ ಪ್ಲಾನ್ ಪಾಲಿಸಿದಾರಳ ಮರಣವು ಪಾಲಿಸಿಯ ಅವದಿಯ. ಒಳಗಡೆ ಆದಲ್ಲಿ, ಅಂತಹ ಪಾಲಿಸಿದಾರಳ ಕುಟುಂಬಕ್ಕೆ ಆರ್ಥಿಕ ಸಹಾಯದ ರೂಪದಲ್ಲಿ ಡೆತ್ ಬೆನಿಫಿಟ್ ಅನ್ನು ಹಾಗೂ ಅವದಿಯು ಮುಗಿದ ನಂತರ ಲಂಪ್ ಸಮ್ ರೂಪದಲ್ಲಿ ಮೆಚೂರಿಟೀ ಮೊತ್ತವನ್ನು ನೀಡುತ್ತದೆ.

ಎಲ್ ಐ ಸಿ ಆಧಾರ್ ಸ್ತಂಭ್ ಪ್ಲಾನ್

ಎಲ್ ಐ ಸಿ ಆಧಾರ್ ಸ್ತಂಭ್ ಪ್ಲಾನ್ ರಕ್ಷಣೆ ಹಾಗೂ ಉಳಿತಾಯ ಎರಡನ್ನೂ ಒಟ್ಟಿಗೆ ನೀಡುವ ಪ್ಲಾನ್ ಆಗಿರುತ್ತದೆ. ಈ ಪ್ಲಾನ್ ಕೇವಲ UIDAI ರವರು ನೀಡಿರುವ ಆಧಾರ್ ಕಾರ್ಡ್ ಹೊಂದಿರುವ ಪುರುಷರಿಗೆ ಮಾತ್ರವೇ ಲಭ್ಯವಾಗುತ್ತದೆ. ಈ ಪ್ಲಾನ್ ಪಾಲಿಸಿದಾರನ ಮರಣವು ಪಾಲಿಸಿಯ ಅವದಿಯ. ಒಳಗಡೆ ಆದಲ್ಲಿ, ಅಂತಹ ಪಾಲಿಸಿದಾರನ ಕುಟುಂಬಕ್ಕೆ ಆರ್ಥಿಕ ಸಹಾಯದ ರೂಪದಲ್ಲಿ ಡೆತ್ ಬೆನಿಫಿಟ್ ಅನ್ನು ಹಾಗೂ ಅವದಿಯು ಮುಗಿದ ನಂತರ ಲಂಪ್ ಸಮ್ ರೂಪದಲ್ಲಿ ಮೆಚೂರಿಟೀ ಮೊತ್ತವನ್ನು ನೀಡುತ್ತದೆ

ಹೋಲ್ ಲೈಫ್ ಪ್ಲಾನ್ಸ್

ಹೋಲ್ ಲೈಫ್ ಇನ್ಸೂರೆನ್ಸ್ ಅಥವಾ ಹೋಲ್ ಆಫ್ ದ ಲೈಫ್ ಇನ್ಸೂರೆನ್ಸ್ ಹಾಗೂ ಕೆಲವು ಬಾರಿ “ಸ್ಟ್ರೆಯಿಟ್ ಲೈಫ್” ಅಥವಾ “ಆರ್ಡಿನರಿ ಲೈಫ್” ಎಂದು ಕೂಡ ಕರೆಯುವ ಪಾಲಿಸಿಯು ಪಾಲಿಸಿದಾರನ ಸಂಪೂರ್ಣ ಜೀವಿತದ ಆವದಿಯಲ್ಲಿ ಗ್ಯಾರಂಟಿಡ್ ಆಗಿದ್ದು ಅದರ ಬಾಬ್ತು ನೀಡಬೇಕಾದ ಬೇನೆಫಿಟ್ ಗಳಿಗೆ ಅರ್ಹತೆ ಹೊಂದಿರುತ್ತದೆ. ಆದರೆ, ಪಾಲಿಸಿಯ ಎಲ್ಲಾ ಪ್ರೀಮಿಯಂ ಗಳನ್ನು ಪಾವತಿಸಿರಬೇಕಾಗುತ್ತದೆ.

ಎಲ್ ಐ ಸಿ ಜೀವನ್ ಉಮಂಗ್ ಪ್ಲಾನ್

ಎಲ್ ಐ ಸಿ ಜೀವನ್ ಉಮಂಗ್ ಪ್ಲಾನ್ ನಿಮ್ಮ ಕುಟುಂಬಕ್ಕೆ ಆರ್ಥಿಕ ರಕ್ಷಣೆ ಹಾಗೂ ಆದಾಯವನ್ನು ಒಟ್ಟಿಗೆ ನೀಡುವ ಪ್ಲಾನ್ ಆಗಿರುತ್ತದೆ. ಈ ಪ್ಲಾನ್ ಪಾಲಿಸಿದಾರನಿಗೆ ಪ್ರೀಮಿಯಂ ನೀಡುವ ಅವದಿಯ ಕೊನೆಯಿಂದ ಸರ್ವೈವಲ್ ಬೆನಿಫಿಟ್ ರೂಪದಲ್ಲಿ ವಾರ್ಷಿಕ ಮೊತ್ತವನ್ನು ನೀಡಿ, ಒಂದು ಖಚಿತ ಲಂಪ್ ಸಮ್ ಮೊತ್ತವನ್ನು ಮೆಚೂರಿಟೀ ಮೊತ್ತವಾಗಿ ಅಥವಾ ಆತನ ಮರಣದ ನಂತರ ನಾಮಿನಿಗೆ ನೀಡುತ್ತದೆ.

ಮನೀ ಬ್ಯಾಕ್ ಪ್ಲಾನ್ಸ್ 

ಮನೀ ಬ್ಯಾಕ್ ಪಾಲಿಸಿಗಳು ಟರ್ಮ್ ಇನ್ಸೂರೆನ್ಸ್ ಪ್ಲಾನ್ ಹಾಗೂ ಸ್ಟಾಂಡರ್ಡ್ ಲೈಫ್ ಇನ್ಸೂರೆನ್ಸ್ ಪ್ಲಾನ್ ಗಳಿಗಿಂತ ಕಾಂಪ್ಲೆಕ್ಸ್ ಆಗಿದ್ದು, ನಿಗದಿತ ಸಮಯದಲ್ಲಿ ಪಾಲಿಸಿದಾರನಿಗೆ ಸಮ್ ಅಶ್ಶುರ್ಡ್ ನ ಒಂದು ಅಂಶದ ಮೊತ್ತವನ್ನು ನೀಡಿ ಮೆಚೂರಿಟೀ ಸಮಯದಲ್ಲಿ ಉಳಿದ ಸಮ್ ಅಶ್ಶುರ್ಡ್ ಮೊತ್ತವನ್ನು ನೀಡುತ್ತದೆ. ಹಾಗೆಯೇ, ಸರ್ವೈವಲ್ ಬೆನಿಫಿಟ್ ರೂಪದಲ್ಲಿ ಸ್ವಲ್ಪ ಮೊತ್ತವನ್ನು ಸಮ್ ಅಶ್ಶುರ್ಡ್ ಮೊತ್ತದ ಜೊತೆಗೆ ನೀಡಿ, ಕೊನೆಯಲ್ಲಿ ಬೋನಸ್ ರೂಪದಲ್ಲಿ ಮೊತ್ತವನ್ನು ಕಂಪನಿಯ ಪರ್ಫಾರ್ಮೆನ್ಸ್ ಮೇಲೆ ನೀಡುತ್ತದೆ.

ಎಲ್ ಐ ಸಿ ಜೀವನ್ ಶಿರೋಮಣಿ ಪ್ಲಾನ್ 

ಎಲ್ ಐ ಸಿ ಜೀವನ್ ಶಿರೋಮಣಿ ಪ್ಲಾನ್ ರಕ್ಷಣೆ ಹಾಗೂ ಉಳಿತಾಯ ಎರಡನ್ನೂ ಒಟ್ಟಿಗೆ ನೀಡುವ ಒಂದು ಪ್ಲಾನ್ ಆಗಿರುತ್ತದೆ. ಈ ಪ್ಲಾನ್ ಅನ್ನು ಹೈ ನೆಟ್-ವರ್ಥ್ ಜನರನ್ನು ಗಮನದಲ್ಲಿ ಇಟ್ಟುಕೊಂಡು ರೂಪಿಸಲಾಗಿದೆ. ಪಾಲಿಸಿದಾರನ ಮರಣವು ಪಾಲಿಸಿಯ ಅವದಿಯ ಮಧ್ಯದಲ್ಲಿ ಆದಲ್ಲಿ, ಆತನ ಕುಟುಂಬಕ್ಕೆ ಆರ್ಥಿಕ ಸಹಾಯ ಆಗುವಂತೆ ನೋಡಿಕೊಳ್ಳುತ್ತದೆ.

ಎಲ್ ಐ ಸಿ ನ್ಯೂ ಮನೀ ಬ್ಯಾಕ್ ಪ್ಲಾನ್ – 20 ಇಯರ್ಸ್

ಎಲ್ ಐ ಸಿ ನ್ಯೂ ಮನೀ ಬ್ಯಾಕ್ ಪ್ಲಾನ್ – 20 ಇಯರ್ಸ್ ಒಂದು ಲಾಭದಲ್ಲಿ ಬಾಗಿ ಆಗುವ ನಾನ್-ಲಿಂಕ್ಡ್ ಉಳಿತಾಯ ಮತ್ತು ರಕ್ಷಣೆ ನೀಡುವ ಯೋಜನೆ ಆಗಿರುತ್ತದೆ. ಈ ಪ್ಲಾನ್ ಡೆತ್ ಬೆನಿಫಿಟ್ ಅನ್ನು ಪಾಲಿಸಿಯ ಅವದಿಯವರೆಗೂ ನೀಡುವುದಲ್ಲದೇ ಸರ್ವೈವಲ್ ಬೆನಿಫಿಟ್ ಅನ್ನು ನಿಗದಿತ ಆವದಿಗಳಲ್ಲಿ ನೀಡಲಾಗುವುದು.

ಎಲ್ ಐ ಸಿ ನ್ಯೂ ಮನೀ ಬ್ಯಾಕ್ ಪ್ಲಾನ್ – 25 ಇಯರ್ಸ್

ಎಲ್ ಐ ಸಿ ನ್ಯೂ ಮನೀ ಬ್ಯಾಕ್ ಪ್ಲಾನ್ – 25 ಇಯರ್ಸ್ ಒಂದು ಲಾಭದಲ್ಲಿ ಬಾಗಿ ಆಗುವ ನಾನ್-ಲಿಂಕ್ಡ್ ಉಳಿತಾಯ ಮತ್ತು ರಕ್ಷಣೆ ನೀಡುವ ಯೋಜನೆ ಆಗಿರುತ್ತದೆ. ಈ ಪ್ಲಾನ್ ಡೆತ್ ಬೆನಿಫಿಟ್ ಅನ್ನು ಪಾಲಿಸಿಯ ಅವದಿಯವರೆಗೂ ನೀಡುವುದಲ್ಲದೇ ಸರ್ವೈವಲ್ ಬೆನಿಫಿಟ್ ಅನ್ನು ನಿಗದಿತ ಆವದಿಗಳಲ್ಲಿ ನೀಡುವುದು. ಈ ಪ್ಲಾನ್ ಪಾಲಿಸಿದಾರನ ಕುಟುಂಬಕ್ಕೆ, ಆರ್ಥಿಕ ಸಹಾಯವನ್ನು ಆತನ ಮರಣಾನಂತರ ಮೆಚೂರಿಟೀ ಆಗುವವರೆಗೂ ಮತ್ತು ಮೆಚೂರಿಟೀ ಆದ ನಂತರ ಒಂದು ಖಚಿತ ಲಂಪ್ ಸಮ್ ಮೊತ್ತವನ್ನು ನೀಡುತ್ತದೆ.

ಎಲ್ ಐ ಸಿ ನ್ಯೂ ಬೀಮ ಬಚತ್ ಪ್ಲಾನ್ 

ಎಲ್ ಐ ಸಿ ನ್ಯೂ ಬೀಮ ಬಚತ್ ಪ್ಲಾನ್ ಒಂದು ಲಾಭದಲ್ಲಿ ಬಾಗಿ ಆಗುವ ನಾನ್-ಲಿಂಕ್ಡ್ ಉಳಿತಾಯ ಮತ್ತು ರಕ್ಷಣೆ ನೀಡುವ ಯೋಜನೆ ಆಗಿರುತ್ತದೆ. ಈ ಪ್ಲಾನ್ ನಲ್ಲಿ ಪ್ರೀಮಿಯಂ ಮೊತ್ತವನ್ನು ಲಂಪ್ ಸಮ್ ಮೊತ್ತವಾಗಿ ಪಾಲಿಸಿಯನ್ನು ಪಡೆಯುವಾಗಲೇ ನೀಡಬೇಕು. ಈ ಪ್ಲಾನ್ ಡೆತ್ ಬೆನಿಫಿಟ್ ಅನ್ನು ಪಾಲಿಸಿಯ ಅವದಿಯವರೆಗೂ ನೀಡುವುದಲ್ಲದೇ ಸರ್ವೈವಲ್ ಬೆನಿಫಿಟ್ ಅನ್ನು ನಿಗದಿತ ಆವದಿಗಳಲ್ಲಿ ನೀಡುವುದು.

ಎಲ್ ಐ ಸಿ ನ್ಯೂ ಚಿಲ್ದ್ರನ್ ಮನೀ ಬ್ಯಾಕ್ ಪ್ಲಾನ್ 

ಎಲ್ ಐ ಸಿ ನ್ಯೂ ಚಿಲ್ದ್ರನ್ ಮನೀ ಬ್ಯಾಕ್ ಪಾಲಿಸಿಯು ಒಂದು ಲಾಭದಲ್ಲಿ ಬಾಗಿ ಆಗುವ ನಾನ್-ಲಿಂಕ್ಡ್ ಉಳಿತಾಯ ಮತ್ತು ರಕ್ಷಣೆ ನೀಡುವ ಯೋಜನೆ ಆಗಿರುತ್ತದೆ. ಈ ಪ್ಲಾನ್ ಅನ್ನು ಮಕ್ಕಳ ವಿದ್ಯಾಭ್ಯಾಸ, ಮದುವೆ ಹಾಗೂ ಅವರು ಬೆಳೆಯುವಾಗ ಇರುವ ಆವಶ್ಯಕತೆಗಳನ್ನು ಮನಗಂಡು ರೂಪಿಸಲಾಗಿದೆ. ಈ ಆವಶ್ಯಕತೆಗಳನ್ನು ಪಾಲಿಸಿದಾರನಿಗೆ ನಿಗದಿತ ಆವದಿಯಲ್ಲಿ ಸರ್ವೈವಲ್ ಬೆನಿಫಿಟ್ ಮೊತ್ತವನ್ನು ನೀಡುವ ಮೂಲಕ ಪೂರೈಸಲಾಗುತ್ತದೆ.

ಎಲ್ ಐ ಸಿ ಜೀವನ್ ತರುಣ್ ಪ್ಲಾನ್ 

ಎಲ್ ಐ ಸಿ ಜೀವನ್ ತರುಣ್ ಪಾಲಿಸಿಯು ಒಂದು ಲಾಭದಲ್ಲಿ ಬಾಗಿ ಆಗುವ ನಾನ್-ಲಿಂಕ್ಡ್ ಉಳಿತಾಯ ಮತ್ತು ರಕ್ಷಣೆ ನೀಡುವ ಯೋಜನೆ ಆಗಿರುತ್ತದೆ. ಈ ಪ್ಲಾನ್ ಅನ್ನು ಮಕ್ಕಳ ವಿದ್ಯಾಭ್ಯಾಸ, ಮದುವೆ ಹಾಗೂ ಅವರು ಬೆಳೆಯುವಾಗ ಇರುವ ಆವಶ್ಯಕತೆಗಳನ್ನು ಮನಗಂಡು ರೂಪಿಸಲಾಗಿದೆ. ಈ ಆವಶ್ಯಕತೆಗಳನ್ನು ಪಾಲಿಸಿದಾರನಿಗೆ ನಿಗದಿತ ಆವದಿಯಲ್ಲಿ ಅಂದರೆ ಮಕ್ಕಳ 20 ನೇ ವಯಸ್ಸಿನಿಂದ 24 ನೇ ವಯಸ್ಸಿನವರೆಗೂ ಸರ್ವೈವಲ್ ಬೆನಿಫಿಟ್ ಮೊತ್ತವನ್ನು ನೀಡುವ ಮೂಲಕ ಪೂರೈಸಲಾಗುತ್ತದೆ. ಹಾಗೂ ಅವರ 25 ನೇ ವಯಸ್ಸಿನಲ್ಲಿ, ಮೆಚೂರಿಟೀ ಬೆನಿಫಿಟ್ ಮೂಲಕ ಉಳಿದಿರುವ ಹಣವನ್ನು ನೀಡಲಾಗುತ್ತದೆ.

ಟರ್ಮ್ ಅಶ್ಸುರೆನ್ಸ್ ಪ್ಲಾನ್ಸ್ 

ಟರ್ಮ್ ಇನ್ಸೂರೆನ್ಸ್ ಪ್ಲಾನ್ ಗಳು ಪಾಲಿಸಿದಾರನಿಗೆ ಆರ್ಥಿಕ ಭದ್ರತೆಯನ್ನು ಒಂದು ನಿಗದಿತ ಅವದಿಯವರೆಗೂ ನೀಡುವ ಯೋಜನೆ ಆಗಿರುತ್ತದೆ. ಅಕಸ್ಮಾತ್ ಈ ಅವದಿಯಲ್ಲಿ ಪಾಲಿಸಿದಾರನ ಮರಣವು ಆದಲ್ಲಿ, ಬೇನೆಫಿಶಿಯರಿಗಳು ಕಂಪನಿಯಿಂದ ಡೆತ್ ಬೆನಿಫಿಟ್ ಮೊತ್ತವನ್ನು ಕ್ಲೆಯಿಮ್ ಮಾಡಬಹುದು.

ಎಲ್ ಐ ಸಿ ಅನ್ಮೋಲ್ ಜೀವನ್ II ಪ್ಲಾನ್ 

ಇದು ಒಂದು ರಕ್ಷಣೆಯನ್ನು ನೀಡುವ ಪ್ಲಾನ್ ಆಗಿದ್ದು, ಪಾಲಿಸಿದಾರನಿಗೆ, ಆರ್ಥಿಕ ಭದ್ರತೆಯನ್ನು ನೀಡುವ ಯೋಜನೆ ಆಗಿರುತ್ತದೆ. ಅಕಸ್ಮಾತ್ ಈ ಅವದಿಯಲ್ಲಿ ಪಾಲಿಸಿದಾರನ ಮರಣವು ಆದಲ್ಲಿ,ಆತನ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ನೀಡುತ್ತದೆ.

ಎಲ್ ಐ ಸಿ ಅಮೂಲ್ಯ ಜೀವನ್ II ಪ್ಲಾನ್ 

ಇದು ಒಂದು ರಕ್ಷಣೆಯನ್ನು ನೀಡುವ ಪ್ಲಾನ್ ಆಗಿದ್ದು, ಪಾಲಿಸಿದಾರನಿಗೆ, ಆರ್ಥಿಕ ಭದ್ರತೆಯನ್ನು ನೀಡುವ ಯೋಜನೆ ಆಗಿರುತ್ತದೆ. ಅಕಸ್ಮಾತ್ ಈ ಅವದಿಯಲ್ಲಿ ಪಾಲಿಸಿದಾರನ ಮರಣವು ಆದಲ್ಲಿ,ಆತನ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ನೀಡುತ್ತದೆ.

ಎಲ್ ಐ ಸಿ e - ಟರ್ಮ್ ಪ್ಲಾನ್ 

ಎಲ್ ಐ ಸಿ e-ಟರ್ಮ್ ಪ್ಲಾನ್ ಅಡಿಯಲ್ಲಿ, ಹಿರಿಯ ನಾಗರೀಕರಿಗೆ (60 ವರ್ಷಗಳು ಮೇಲ್ಪಟ್ಟು) ಪೆನ್ಷನ್ ಮೊತ್ತವನ್ನು ತಕ್ಷಣದಿಂದಲೇ ಪಡೆಯುವ ಅವಕಾಶ ಇರುತ್ತದೆ. ಈ ಪಾಲಿಸಿಯನ್ನು ಒಂದು ಲಂಪ್ ಸಮ್ ಮೊತ್ತವನ್ನು ಕೊಟ್ಟು ಪಡೆಯಬಹುದು. ನಿಗದಿತ ಮೊತ್ತದ ಪ್ರಕಾರ, ಪಾಲಿಸಿದಾರನು ಪಾಲಿಸಿಯ ಟರ್ಮ್ ಆದ 10 ವರ್ಷಗಳ ಕಾಲ ಪೆನ್ಷನ್ ಮೊತ್ತವನ್ನು (ಸೂಚಿಸಿರುವ) ಪಡೆಯಬಹುದು. 10 ವರ್ಷದ ನಂತರ ಆತನು ನೀಡಿರುವ ಪರ್ಚೆಸ್ ಮೊತ್ತವನ್ನು ವಾಪಸ್ಸು ನೀಡಲಾಗುವುದು.

ಪೆನ್ಷನ್ ಪ್ಲಾನ್ಸ್

ಪೆನ್ಷನ್ ಒಂದು ಫಂಡ್ ಆಗಿದ್ದು, ಆ ಫಂಡ್ ಗೆ ಕಾರ್ಮಿಕರ ಆದಾಯದಿಂದ ಸ್ವಲ್ಪ ಮೊತ್ತವನ್ನು ಆತನು ದುಡಿಯುತ್ತಿರುವ ಸಮಯದಲ್ಲಿ ಸೇರಿಸಿ, ನಂತರ ಆತನಿಗೆ ಹಾಗೆ ಸೇರಿರುವ ಒಟ್ಟು ಮೊತ್ತದಿಂದ, ಪ್ರತಿ ವರ್ಷವೂ ನಿವೃತ್ತಿ ವೇತನವನ್ನು ಕಾಲ ಕಾಲಕ್ಕೆ ನೀಡುವ ಯೋಜನೆ ಆಗಿರುತ್ತದೆ.

ಎಲ್ ಐ ಸಿ ಪ್ರದಾನ ಮಂತ್ರಿ ವಯ ವಂದನ ಯೋಜನ

ಈ ಪ್ಲಾನ್ ಅನ್ನು ಒಂದು ಲಂಪ್ ಸಮ್ ಮೊತ್ತವನ್ನು ನೀಡಿ ಖರೀದಿಸಬಹುದು. ಈ ಪ್ಲಾನ್ ಅಡಿಯಲ್ಲಿ, ಪಾಲಿಸಿದಾರನು ಪೆನ್ಷನ್ ಮೊತ್ತ ಅಥವಾ ಪರ್ಚೆಸ್ ಮೊತ್ತ ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.

ಎಲ್ ಐ ಸಿ ನ್ಯೂ ಜೀವನ್ ನಿಧಿ ಪ್ಲಾನ್ 

ಎಲ್ ಐ ಸಿ ಜೀವನ್ ನಿಧಿ ಪ್ಲಾನ್ ಒಂದು ಸಾಂಪ್ರದಾಯಿಕ ಲಾಭದಲ್ಲಿ ಬಾಗಿ ಆಗುವ ಪ್ಲಾನ್ ಆಗಿದ್ದು, ರಕ್ಷಣೆ ಹಾಗೂ ಉಳಿತಾಯ ಎರಡನ್ನೂ ಒಟ್ಟಿಗೆ ನೀಡುತ್ತದೆ. ಡೆಫೆರ್ಮೆಂಟ್ ಪೀರಿಯಡ್ ನಲ್ಲಿ, ಈ ಯೋಜನೆಯು ಪಾಲಿಸಿದಾರನಿಗೆ ಡೆತ್ ಕವರ್ ಅನ್ನು ನೀಡಿ ನಂತರ ಆತನು ಜೀವಿತವಿದ್ದಲ್ಲಿ, ವೆಸ್ಟಿಂಗ್ ದಿವಸದವರೆಗೂ ಅನುಯಿಟಿ ಮೊತ್ತವನ್ನು ನೀಡುತ್ತದೆ.

ಎಲ್ ಐ ಸಿ ಜೀವನ್ ಅಕ್ಷಯ್ ಪ್ಲಾನ್ 

ಈ ಯೋಜನೆಯು ತಕ್ಷಣವೇ ಅನುಯಿಟಿ ನೀಡುವ ಪ್ಲಾನ್ ಆಗಿದ್ದು, ಇದನ್ನು ಲಂಪ್ ಸಮ್ ಮೊತ್ತವನ್ನು ನೀಡಿ ಪಡೆಯಬೇಕಾಗುತ್ತದೆ. ಪಾಲಿಸಿದಾರನಿಗೆ ಒಂದು ಖಚಿತ ಅನುಯಿಟಿ ಮೊತ್ತವನ್ನು ಆತನ ಸಂಪೂರ್ಣ ಜೀವಿತದ ಆವದಿಯಲ್ಲಿ ನೀಡಲಾಗುತ್ತದೆ. ಈ ಯೋಜನೆಯ ಅಡಿಯಲ್ಲಿ ಅನೇಕ ಆಪ್ಶನ್ ಗಳು ಇದ್ದು ಅವು ಅನುಯಿಟಿ ಟೈಪ್ ಮತ್ತು ಮೋಡ್ ಮೇಲೆ ಅವಲಂಬಿತವಾಗಿರುತ್ತದೆ.

ಯೂನಿಟ್ ಪ್ಲಾನ್ಸ್ 

ಇದು ಪಾಲಿಸಿದಾರನಿಗೆ ಬಂಡವಾಳ ಹೂಡಿಕೆ ಮಾಡಿ ಅದರಿಂದ ಲಾಭ ಉತ್ಪತ್ತಿ ಮಾಡುವ ನಿಟ್ಟಿನಲ್ಲಿ ಸಹಾಯ ನೀಡುವ ಯೋಜನೆಗಳಾಗಿರುತ್ತದೆ. ಈ ಯೋಜನೆಗಳು, ನಿಮ್ಮ ಉಳಿತಾಯದ ಹಣವು ಹೆಚ್ಚುವರಿ ಬೆನಿಫಿಟ್ ಗಳನ್ನು ಹೊಂದುವ ಹಾಗೆ ಮಾಡುತ್ತವೆ ಮತ್ತು ನಿಮಗೆ ಖಚಿತವಾದ ಆದಾಯ ಇಲ್ಲದೆ ಇದ್ದರೂ ಕೂಡ, ತೆರಿಗೆ ಯಲ್ಲಿ ವಿನಾಯತಿ ದೊರಕುವಲ್ಲಿ ಸಹಾಯ ಮಾಡುತ್ತವೆ.

ಎಲ್ ಐ ಸಿ ನ್ಯೂ ಎಂಡೋಮೆಂಟ್ ಪ್ಲಸ್ ಪ್ಲಾನ್ 

ಎಲ್ ಐ ಸಿ ನ್ಯೂ ಎಂಡೋಮೆಂಟ್ ಪ್ಲಾನ್ ಒಂದು ಯೂನಿಟ್ ಲಿಂಕ್ಡ್ ಪ್ಲಾನ್ ಆಗಿದ್ದು, ಪಾಲಿಸಿದಾರನಿಗೆ ಬಂಡವಾಳ ಹೂಡಿಕೆ ಹಾಗೂ ಪಾಲಿಸಿಯ ಆವದಿಯಲ್ಲಿ ಜೀವ ವಿಮೆಯನ್ನು ಕೂಡ ಒಟ್ಟಿಗೆ ನೀಡುತ್ತದೆ. ಈ ಯೋಜನೆಯು ನಿಮಗೆ ರಕ್ಷಣೆ, ಉಳಿತಾಯ ಹಾಗೂ ಲಾಭ ಎಲ್ಲವನ್ನೂ ನೀಡಿ ನೀವು ನಿಮ್ಮ ಮುಂದಿನ ಜೀವನವನ್ನು ಸಂತೋಷದಿಂದ ಕಳೆಯುವಲ್ಲಿ ಸಹಾಯ ಮಾಡುತ್ತದೆ.

ಹೆಲ್ತ್ ಪ್ಲಾನ್ಸ್ 

ಹೆಲ್ತ್ (ಆರೋಗ್ಯ) ಇನ್ಸೂರೆನ್ಸ್ ಹಾಗೂ ಮೆಡಿ ಕ್ಲೈಮ್ ಪಾಲಿಸಿಗಳು ಪಾಲಿಸಿದಾರನಿಗೆ ಮುಂದಿನ ದಿನಗಳಲ್ಲಿ ಏರಿಕೆ ಕಾಣಬಹುದಾದ ಮೆಡಿಕಲ್ ಕೇರ್ ವೆಚ್ಚಗಳನ್ನು ಭರಿಸುವ ನಿಟ್ಟಿನಲ್ಲಿ ಸಹಾಯ ಮಾಡುತ್ತವೆ.

ಎಲ್ ಐ ಸಿ ಜೀವನ್ ಆರೋಗ್ಯ ಪ್ಲಾನ್ 

ಇದು ಒಂದು ಉತ್ತಮವಾದ ನಾನ್- ಪಾರ್ಟಿಸೀಪೆಟಿಂಗ್ ನಾನ್- ಲಿಂಕ್ಡ್ ಪ್ಲಾನ್ ಆಗಿದ್ದು, ಪಾಲಿಸಿದಾರನಿಗೆ ಕೆಲವು ನಿರ್ಧಿಷ್ಟ ಪಡಿಸಲಾದ ಖಾಯಿಲೆಗಳಿಗೆ ಹೆಲ್ತ್ ಇನ್ಸೂರೆನ್ಸ್ ಕವರ್ ಅನ್ನು ನೀಡುತ್ತದೆ. ಹಾಗೂ ಅಂತಹ ಮೆಡಿಕಲ್ ತುರ್ತು ಪರಿಸ್ತಿತಿಯ ಸಮಯದಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಆರ್ಥಿಕ ಸಹಾಯ ಮಾಡುತ್ತದೆ.

ಎಲ್ ಐ ಸಿ ಕಾನ್ಸರ್ ಕವರ್ ಪ್ಲಾನ್ 

ಇದು ಒಂದು ರೆಗ್ಯುಲರ್ ಪ್ರೀಮಿಯಂ ಪಾವತಿ ಮಾಡುವ ಹೆಲ್ತ್ ಇನ್ಸೂರೆನ್ಸ್ ಯೋಜನೆ ಆಗಿದ್ದು, ಪಾಲಿಸಿದಾರನು ಕಾನ್ಸರ್ ಖಾಯಿಲೆಗೆ ತುತ್ತಾದಲ್ಲಿ ಅದಕ್ಕೆ ನೀಡಬೇಕಾದ ಶೀಘ್ರ ಮತ್ತು / ಅಥವಾ ಮೇಜರ್ ಸ್ಟೇಜ್ ಗಳಲ್ಲಿ ನೀಡಬೇಕಾದ ಆರ್ಥಿಕ ಭದ್ರತೆಯನ್ನು ಪಾಲಿಸಿಯ ಅವದಿಯಲ್ಲಿ ನೀಡುತ್ತದೆ.

ಎಲ್ ಐ ಸಿ ಇಂಡಿಯ ಡಿಜಿಟಲೈಸ್ಡ್ ಸರ್ವಿಸ್ ಗಳು 

ಎಲ್ ಐ ಸಿ ಯು ಸಂಪೂರ್ಣವಾಗಿ ಡಿಜಿಟಲೈಸ್ ಆಗಿದ್ದು, ಅದರ ಒಟ್ಟು ಸಂಖ್ಯೆಯ ಮಾಹಿತಿ ಪ್ರಕಾರ ಸುಮಾರು 10 ಕೋಟಿಗಿಂತ ಹೆಚ್ಚು ಪಾಲಿಸಿಗಳನ್ನು ಹೊಂದಿದೆ. ಈ ಡಿಜಿಟಲೈಸ್ಡ ಸೆಟ್ ಅಪ್ ಸಂಪೂರ್ಣವಾಗಿ ಆದುನಿಕ ತಂತ್ರ ಜ್ಞಾನವನ್ನು ಅಳವಡಿಸಿಕೊಂಡಿರುತ್ತದೆ.

ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನವು ಕಂಪನಿಗೆ ಹೊಸದೇನಲ್ಲ. ಕಂಪನಿಯು 1964 ರಲ್ಲಿಯೇ ಕಂಪ್ಯೂಟರ್ ಬಳಕೆಯನ್ನು ತನ್ನ ಸೆಟ್ ಅಪ್ ನಲ್ಲಿ ಅಳವಡಿಸಿಕೊಂಡಿದ್ದು, ಹಳೆಯ ಕಂಪ್ಯೂಟರ್ ಗಳನ್ನು ಕಾಲ ಕಾಲಕ್ಕೆ ತೆಗೆದು ಹಾಕಿ ಅವುಗಳ ಜಾಗದಲ್ಲಿ ಹೊಸ ಕಂಪ್ಯೂಟರ್ ಗಳನ್ನು ಅಳವಡಿಸಿಕೊಳ್ಳುತ್ತ ಬಂದಿದೆ.

ಪಾಲಿಸಿಗಳನ್ನು ಆನ್ಲೈನ್ ಮುಖಾಂತರ ನೀಡುವುದು ಕೂಡ ಎಲ್ ಐ ಸಿ ಗೆ ಹೊಸದೇನಲ್ಲ. ಅದು ಈ ಸರ್ವೀಸ್ ಗಳನ್ನು 1995 ರಲ್ಲಿಯೇ ಸಾರ್ವಜನಿಕರಿಗೆ ಪರಿಚಯಿಸಿ ಅವರುಗಳು ತಮ್ಮ ಪಾಲಿಸಿಯ ಬಗ್ಗೆ ವಿವರಣೆಗಳನ್ನು ತಮ್ಮ ಕಂಪ್ಯೂಟರ್ ಮೂಲಕ ತಿಳಿದುಕೊಳ್ಳಲು ಆಸ್ಪದ ಮಾಡಿಕೊಟ್ಟಿತ್ತು.

ಈಗಿನ ಸಂಧರ್ಭದಲ್ಲಿ, ಸಾರ್ವಜನಿಕರು, e- ಪಾಲಿಸಿಗಳನ್ನು ಆನ್ಲೈನ್ ಮುಖಾಂತರವೇ ಕೊಳ್ಳಬಹುದು. ಅವರುಗಳು ಪಾಲಿಸಿಗೋಸ್ಕರ ಎಲ್ ಐ ಸಿ ಶಾಖೆಗಳಿಗೆ ಬರುವ ಅಗತ್ಯವಿರುವುದಿಲ್ಲ. ಅವರುಗಳು, ಪಾಲಿಸಿಗೆ ಬೇಕಾದ ದಾಖಲೆಗಳನ್ನು ಅಪ್ಲೋಡ್ ಮಾಡಿ ಪ್ರೀಮಿಯಂ ಗಳನ್ನು ಕೂಡ ಆನ್ಲೈನ್ ನಲ್ಲಿಯೇ ಪಾವತಿಸಬಹುದು.

ಎಲ್ ಐ ಸಿ ಲಾಗ್ ಇನ್ ಪ್ರೋಸೆಸ್

ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯ ಸಾರ್ವಜನಿಕರಿಗೆ ಸಹಾಯ ಆಗುವಂತಹ ಒಂದು ಅತ್ಯಂತ ಪ್ರಮುಖ ಹೆಜ್ಜೆ ಇಟ್ಟಿದ್ದು ಅದೆಂದರೆ ಎಲ್ ಐ ಸಿ ಆನ್ಲೈನ್ ಪೋರ್ಟಲ್. ಇದು ಸಾರ್ವಜನಿಕರಿಗೆ ಆನ್ ಡಿಮಾಂಡ್ ಸರ್ವೀಸ್ ಅನ್ನು ಒಂದು ಸಿಂಗಲ್ ಕ್ಲಿಕ್ ನ ಮೂಲಕ ನೀಡುತ್ತದೆ. ಈ ಒಂದು ಆನ್ಲೈನ್ ಸರ್ವೀಸ್ ಬಳಕೆಯಲ್ಲಿ ಇರುವುದರಿಂದ, ನೀವು ಎಲ್ ಐ ಸಿ ಯ ಯಾವುದೇ ಆಫೀಸ್ ಗಳಿಗೆ ಹೋಗದೆ ಪಾಲಿಸಿಯನ್ನು ಪಡೆಯಬಹುದು. ಹಾಗೂ ಮೊದಲಿನ ರೀತಿಯಲ್ಲಿ ಎಲ್ ಐ ಸಿ ಆಫೀಸ್ ಗಳಿಗೆ ಹೋಗಿ ಉದ್ದದ ಕ್ಯೂ ಗಳಲ್ಲಿ ನಿಲ್ಲುವುದು ಕೂಡ ತಪ್ಪಿದೆ.

ಬೇಸಿಕ್ ಸರ್ವೀಸ್ ಗಳು ಅಲ್ಲದೆ, ಎಲ್ ಐ ಸಿ ಯು ಇನ್ನೂ ಅನೇಕ ಅಡಿಶನಲ್ ಬೆನಿಫಿಟ್ ಗಳನ್ನು ಹಾಗೂ ರಿಯಾಯತಿಯನ್ನು ಕೂಡ ನೀಡುತ್ತದೆ. ಆದರೆ ಅದನ್ನು ಪಡೆದುಕೊಳ್ಳಲು ಸಾರ್ವಜನಿಕರು ಮೊದಲಿಗೆ ಎಲ್ ಐ ಸಿ ಆನ್ಲೈನ್ ಪೋರ್ಟಲ್ ನಲ್ಲಿ ನೋಂದಣಿ (ರಿಜಿಸ್ಟರ್) ಮಾಡಿಸಬೇಕಾಗುತ್ತದೆ. ಎಲ್ ಐ ಸಿ ಯ ಆನ್ಲೈನ್ ಸರ್ವೀಸ್ ಗಳನ್ನು ಉಪಯೋಗಿಸಿಕೊಳ್ಳಲು ಆದರ ಆನ್ಲೈನ್ ಪೋರ್ಟಲ್ ಅತ್ಯಂತ ಸುಲಭದ ಸಾದನ.

ಅದರ ಜೊತೆಯಲ್ಲಿಯೇ ನಿಮಗೆ ಅನೇಕ ಅಡಿಶನಲ್ ಬೆನಿಫಿಟ್ ಗಳು ಮತ್ತು ಕಂಪನಿಯ ಬಗೆಗಿನ ಅಪ್ಡೇಟ್ ಗಳು ಹಾಗೂ ಪಾಲಿಸಿಗಳ ಬಗ್ಗೆಯೂ ತಿಳಿದುಕೊಳ್ಳಲು ಸಹಾಯ ಆಗುತ್ತದೆ. ಈ ಕೆಳ ಕಂಡ ಸರ್ವಿಸ್ ಗಳ ಬಗ್ಗೆ ವಿವರಗಳನ್ನು ಆನ್ಲೈನ್ ನಲ್ಲಿ ಪಡೆಯಬೇಕಾದರೆ ಆನ್ಲೈನ್ ನೋಂದಣಿ ಒಂದು ಅವಶ್ಯಕತೆ ಆಗಿರುತ್ತದೆ.

• ಕ್ಲೆಯಿಮ್ ಗಳ ಬಗ್ಗೆ ವರದಿ
• ಆನ್ಲೈನ್ ಪೇಮೆಂಟ್
• ಅಸೈನ್ಮೆಂಟ್ ಹಾಗೂ ನಾಮಿನಿಯ ಸ್ಥಿತಿಯ ಬಗ್ಗೆ ವರದಿ
• ಪಾಲಿಸಿಯ ಸ್ಥಿತಿಯ ಬಗ್ಗೆ ವರದಿ
• ರಿವೈವಲ್ ಬಗ್ಗೆ ಕೋಟೇಶನ್ ಗಳು
• ಪ್ರೋಪೊಸಲ್ ಮತ್ತು ಪಾಲಿಸಿಯ ಚಿತ್ರಗಳು
• ಬೆನಿಫಿಟ್ ಗಳ ಉದಾಹರಣೆ
• ಕಂಪ್ಲಯಿಂಟ್ ಅನ್ನು ನೋಂದಾಯಿಸುವುದು
• ಲೋನ್ ಸ್ಥಿತಿಯ ಬಗ್ಗೆ ವರದಿ
• ಪಾಲಿಸಿಯ ನಿಬಂದನೆಗಳು ಹಾಗೂ ವೈಶಿಷ್ಟ್ಯತೆಗಳು

ನ್ಯೂ ಯೂಸರ್ ಎಲ್ ಐ ಸಿ ಲಾಗ್ ಇನ್ ನೋಂದಣಿ

ಕೆಳಗೆ ಹೊಸ ಯೂಸರ್ ಲಾಗ್ ಇನ್ ಹಾಗೂ ನೋಂದಣಿ ಮಾಡಿಕೊಳ್ಳುವ ರೀತಿಯನ್ನು ವಿವರಿಸಲಾಗಿದೆ.

1. ಎಲ್ ಐ ಸಿ ಯ ಅಧಿಕೃತ ವೆಬ್ ಸೈಟ್ www.licindia.in ಗೆ ಲಾಗ್ ಇನ್ ಮಾಡಿ “ಆನ್ಲೈನ್ ಸರ್ವಿಸಸ್” ಒಳಗಡೆ ಇರುವ “ಕಸ್ಟಮರ್ ಪೋರ್ಟಲ್” ಟಾಬ್ ಅನ್ನು ಆಯ್ಕೆ ಮಾಡಬೇಕು.
2. ಎಲ್ ಐ ಸಿ e ಸರ್ವಿಸ್ ಅಧಿಕೃತ ಪುಟದಲ್ಲಿ “ನ್ಯೂ ಯೂಸರ್ ಬಟನ್ ಅನ್ನು ಒತ್ತಬೇಕು.
3. ಈ ಪುಟವು ಓಪನ್ ಆದಲ್ಲಿ ಅಲ್ಲಿ ನಿಮ್ಮ ಪಾಲಿಸಿ ಡೀಟೈಲ್ಸ್ ಗಳ ಬಗ್ಗೆ ವಿವರಗಳನ್ನು ಕೇಳಲಾಗುತ್ತದೆ. ಅದರಲ್ಲಿ, ಪಾಲಿಸಿಯ ಸಂಖ್ಯೆ, ಪ್ರೀಮಿಯಂ ಮೊತ್ತ, ಹುಟ್ಟಿದ ದಿನಾಂಕ ಮುಂತಾದುವುಗಳನ್ನು ಭರ್ತಿ ಮಾಡಬೇಕು. ಎಲ್ಲ ವಿವರಗಳನ್ನು ನೀಡಿದ ನಂತರ ಪ್ರೋಸೀಡ್ ಬಟನ್ ಅನ್ನು ಒತ್ತಬೇಕು.
4. ಈ ಹಂತದಲ್ಲಿ, ಹೊಸ ಯೂಸರ್ ಹೆಸರು ಹಾಗೂ ಪಾಸ್ ವರ್ಡ್ ಗಳನ್ನು ಸೂಚಿಸಿದಲ್ಲಿ ಆನ್ಲೈನ್ ನೊಂದಣಿಯು ಮುಗಿಯುತ್ತದೆ.
5. ಈ ಹೊಸ ಯೂಸರ್ ಹೆಸರು ಹಾಗೂ ಪಾಸ್ ವರ್ಡ್ ಗಳನ್ನು ಇಟ್ಟುಕೊಂಡು ನೀವು ಸದರಿ ವೆಬ್ ಸೈಟ್ ಗೆ ಹೋಗಿ “ಸಬ್ಮಿಟ್” ಬಟನ್ ಒತ್ತಿದಲ್ಲಿ ಲಾಗ್ ಇನ್ ಆಗುತ್ತದೆ.
6. ನಿಮ್ಮ ಪಾಲಿಸಿಯನ್ನು ನೋಂದಣಿ ಮಾಡಿ, ನಂತರ “ಎನ್ರೋಲ್ ಪಾಲಿಸೀಸ್” ಟಾಬ್ ಗೆ ಹೋಗಿ ಪಾಲಿಸಿಯ ಡೀಟೈಲ್ಸ್ ಗಳನ್ನು ಪಡೆಯಬಹುದು. “ವ್ಯೂ ಎನ್ರೋಲ್ಲ್ದ್ ಪಾಲಿಸೀಸ್” ಆಪ್ಶನ್ ಗೆ ಹೋಗಿ, “ಕ್ಯಾಪ್ಚ” ವನ್ನು ವೆರಿಫೈ ಮಾಡಿ ನಿಮ್ಮ ಪಾಲಿಸಿಗಳ ಡೀಟೈಲ್ಸ್ ಗಳನ್ನು ನೋಡಬಹುದು.

ಎಲ್ ಐ ಸಿ ಲಾಗ್ ಇನ್ ಪ್ರೋಸೆಸ್ – ಪಾಸ್ ವರ್ಡ್ ಅನ್ನು ಮರೆತಿದ್ದಲ್ಲಿ

1. ಎಲ್ ಐ ಸಿ ಯ ಅಧಿಕೃತ ವೆಬ್ ಸೈಟ್ www.licindia.in ಗೆ ಲಾಗ್ ಇನ್ ಮಾಡಿ “ಆನ್ಲೈನ್ ಸರ್ವಿಸಸ್” ಒಳಗಡೆ ಇರುವ “ಕಸ್ಟಮರ್ ಪೋರ್ಟಲ್” ಟಾಬ್ ಅನ್ನು ಆಯ್ಕೆ ಮಾಡಬೇಕು
2. ಎಲ್ ಐ ಸಿ ಯ e ಸರ್ವಿಸ್ ಪುಟದಲ್ಲಿ “ರಿಜಿಸ್ಟರ್ಡ್ ಯೂಸರ್” ಬಟನ್ ಅನ್ನು ಆಯ್ಕೆ ಮಾಡಿಕೊಳ್ಳಿ
3. ಲಾಗ್ ಇನ್ ಫಾರ್ಮ್ ನಲ್ಲಿ “ಫರ್ಗಾಟ್ ಯೂಸರ್ ID/ ಪಾಸ್ ವರ್ಡ್ ? ಲಿಂಕ್
4. ಹೊಸ “ಪಾಸ್ ವರ್ಡ್” ಆಪ್ಶನ್ ಅನ್ನು ಆಯ್ಕೆ ಮಾಡಿದ ಮೇಲೆ ನಿಮ್ಮ “ಯೂಸರ್ ID” ಮತ್ತು “ಹುಟ್ಟಿದ ದಿನಾಂಕ” ವನ್ನು ಎಂಟರ್ ಮಾಡಿ
5. ಸರಿಯಾದ “ಕ್ಯಾಪ್ಚ” ವನ್ನು ಎಂಟರ್ ಮಾಡಿ “ಸಬ್ಮಿಟ್” ಬಟನ್ ಅನ್ನು ಒತ್ತಿದಲ್ಲಿ ಮುಂದಿನ ವಿವರಗಳನ್ನು ಪಡೆಯಬಹುದು.

ಎಲ್ ಐ ಸಿ ಲಾಗ್ ಇನ್ ಪ್ರೋಸೆಸ್ – ಯೂಸರ್ ಐ‌ಡಿ ಅನ್ನು ಮರೆತಿದ್ದಲ್ಲಿ 

1. ಎಲ್ ಐ ಸಿ ಯ ಅಧಿಕೃತ ವೆಬ್ ಸೈಟ್ www.licindia.in ಗೆ ಲಾಗ್ ಇನ್ ಮಾಡಿ “ಆನ್ಲೈನ್ ಸರ್ವಿಸಸ್” ಒಳಗಡೆ ಇರುವ “ಕಸ್ಟಮರ್ ಪೋರ್ಟಲ್” ಟಾಬ್ ಅನ್ನು ಆಯ್ಕೆ ಮಾಡಬೇಕು
2. ಎಲ್ ಐ ಸಿ ಯ e ಸರ್ವಿಸ್ ಪುಟದಲ್ಲಿ “ರಿಜಿಸ್ಟರ್ಡ್ ಯೂಸರ್” ಬಟನ್ ಅನ್ನು ಆಯ್ಕೆ ಮಾಡಿಕೊಳ್ಳಿ
3. ಲಾಗ್ ಇನ್ ಫಾರ್ಮ್ ನಲ್ಲಿ “ಫರ್ಗಾಟ್ ಯೂಸರ್ ID/ ಪಾಸ್ ವರ್ಡ್ ? ಲಿಂಕ್
4. ಹೊಸ “ಯೂಸರ್ ID” ಆಪ್ಶನ್ ಅನ್ನು ಆಯ್ಕೆ ಮಾಡಿದ ಮೇಲೆ ನಿಮ್ಮ ಪಾಲಿಸಿ ಸಂಖ್ಯೆ, ಪ್ರೀಮಿಯಂ ಹಾಗೂ “ಹುಟ್ಟಿದ ದಿನಾಂಕ” ವನ್ನು ಎಂಟರ್ ಮಾಡಿ
5. ಸರಿಯಾದ “ಕ್ಯಾಪ್ಚ” ವನ್ನು ಎಂಟರ್ ಮಾಡಿ “ಸಬ್ಮಿಟ್” ಬಟನ್ ಅನ್ನು ಒತ್ತಿದಲ್ಲಿ ಮುಂದಿನ ವಿವರಗಳನ್ನು ಪಡೆಯಬಹುದು.

ಎಲ್ ಐ ಸಿ E- ಸರ್ವಿಸಸ್ ಗಳಿಗೆ ರಿಜಿಸ್ಟರ್ ಮಾಡಿಕೊಳ್ಳುವುದು ಹೇಗೆ

E ಸರ್ವಿಸಸ್ ಗಳಿಗೆ ಆನ್ಲೈನ್ ರಿಜಿಸ್ಟ್ರೇಶನ್ ಮಾಡುವುದು ಅತ್ಯಂತ ಸುಲಭದ ಕೆಲಸ. ಮೊದಲ ಬಾರಿಗೆ ರಿಜಿಸ್ಟ್ರೇಶನ್ ಮಾಡುವವರಿಗೆ ಸ್ವಲ್ಪ ಕಷ್ಟ ಎನಿಸಬಹುದು. ಈ ಕೆಳ ಕಂಡ ರೀತಿಯಲ್ಲಿ ಒಂದೊಂದಾಗಿ ಸ್ಟೆಪ್ ಗಳ ಪ್ರಕಾರ ಆನ್ಲೈನ್ ರಿಜಿಸ್ಟ್ರೇಶನ್ ಮಾಡಿಕೊಳ್ಳುವುದು ಸುಲಭ.

 1. ಎಲ್ ಐ ಸಿ ಯ ಅಧಿಕೃತ ವೆಬ್ ಸೈಟ್ www.licindia.in ಗೆ ಲಾಗ್ ಇನ್ ಆಗಿ.
 2. ಎಲ್ ಐ ಸಿ e-ಸರ್ವಿಸಸ್ ಆಪ್ಶನ್ ಅನ್ನು ಆಯ್ಕೆ ಮಾಡಿ.
 3. ಇದು ನಿಮ್ಮನ್ನು ಎರಡು ಆಪ್ಶನ್ ಗಳು ಅಂದರೆ 1) ರಿಜಿಸ್ಟರ್ಡ್ ಯೂಸರ್ ಮತ್ತು 2) ನ್ಯೂ ಯೂಸರ್ ಇರುವ ಪುಟಕ್ಕೆ ಕೊಂಡೊಯ್ಯುತ್ತದೆ. ರಿಜಿಸ್ಟ್ರೇಶನ್ ಮಾಡುವ ಸಲುವಾಗಿ ನೀವು ಎರಡನೆಯ ಆಪ್ಶನ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಅಂದರೆ, “ನ್ಯೂ ಯೂಸರ್” ಟಾಬ್ ಅನ್ನು ಒತ್ತಬೇಕು.
 4. ಈಗ ಮತ್ತೊಂದು ಪುಟವು ತೆರೆಯುತ್ತದೆ. ಅದು ನಿಮ್ಮ ವೈಯಕ್ತಿಕ (ಪರ್ಸನಲ್) ಡೀಟೈಲ್ಸ್ ಗಳನ್ನು ತುಂಬಲು ಕೇಳುತ್ತದೆ. ಆಯಾ ಕೇಳುವಿಕೆಗೆ ಅನುಗುಣವಾಗಿ ನೀವು ನಿಮ್ಮ ಪಾಲಿಸಿ ಸಂಖ್ಯೆ, ಪ್ರೀಮಿಯಂ ನ ಡೀಟೈಲ್, ಹುಟ್ಟಿದ ದಿನಾಂಕ, e-ಮೈಲ್ id ಇವೆಲ್ಲವುಗಳನ್ನೂ ನೀಡಿ “ಪ್ರೋಸೀಡ್” ಬಟನ್ ಅನ್ನು ಒತ್ತಬೇಕು.
 5. ಇದರ ಮುಂದಿನ ಪುಟದಲ್ಲಿ ನಿಮಗೆ ಬೇಕೆನಿಸಿದ “ಯೂಸರ್ ನೇಮ್” ಹಾಗೂ “ಪಾಸ್ ವರ್ಡ್” ಅನ್ನು ಸೂಚಿಸಬೇಕು. ಇಲ್ಲಿಗೆ, ನಿಮ್ಮ ರಿಜಿಸ್ಟ್ರೇಶನ್ ಪ್ರೋಸೆಸ್ ಮುಗಿಯುತ್ತದೆ.
 6. ಮತ್ತೆ ನೀವು ವೆಬ್ ಸೈಟ್ ಗೆ ಹೋಗಿ, ನಿಮ್ಮ “ಯೂಸರ್ ನೇಮ್” ಮತ್ತು “ಪಾಸ್ ವರ್ಡ್” ಹಾಕಿ ಲಾಗ್ ಇನ್ ಮಾಡಬಹುದು. ಲಾಗ್ ಇನ್ ಆದ ತಕ್ಷಣ ಮೊದಲನೆಯ ಪುಟ ತೆರೆಯುತ್ತದೆ. ಅದರಲ್ಲಿ ನಿಮ್ಮ ಅಕೌಂಟ್ ಬಗೆಗಿನ ಎಲ್ಲಾ ಆಪ್ಶನ್ ಗಳು ತೆರೆಯುತ್ತವೆ. ನೀವು ಈಗ ನಿಮ್ಮ ಪಾಲಿಸಿಯ ಆಗು ಹಣ ಹೂಡಿಕೆಯ ಬಗ್ಗೆ ರಿಜಿಸ್ಟರ್ ಮಾಡಿಕೊಳ್ಳಬಹುದು. ಇದೇ ಪುಟ ಆಹಾಗು ಆಪ್ಶನ್ ಗಳನ್ನು ಉಪಯೋಗಿಸಿಕೊಂಡು ನೀವು ನಿಮ್ಮ ಪಾಲಿಸಿಗಳ ಸ್ಥಿತಿ ಮತ್ತು ಪೆಮೆಂಟ್ ಗಳನ್ನು ಕೂಡ ಆನ್ಲೈನ್ ನಲ್ಲಿ ಮಾಡಬಹುದು.
 7. ರಿಜಿಸ್ಟ್ರೇಶನ್ ಮಾಡಿಕೊಂಡ ನಂತರ ಪ್ರೀಮಿಯಂ ಪೆಮೆಂಟ್ ಗಳನ್ನು ಮಾಡಬಹುದು. ನಿಮ್ಮ ಪಾಲಿಸಿಗಳು ವೆಬ್ ಸೈಟ್ ನಲ್ಲಿ ಸೇರಿರದೆ ಇದ್ದ ಪಕ್ಷದಲ್ಲಿ, ಪ್ರೀಮಿಯಂ ಗಳನ್ನಿ “ನಾನ್-ರಿಜಿಸ್ಟರ್ಡ್ ಯೂಸರ್” ಎಂದು ಪಾವತಿಸಬೇಕಾಗುತ್ತದೆ.

ಎಲ್ ಐ ಸಿ ಕ್ಲೆಯಿಮ್ ಸೆಟಲ್ಮೆಂಟ್

ಯಾವುದೇ ತರಹದ ತೊಂದರೆ ಅಥವಾ ಘಟನೆಯು ಆದಲ್ಲಿ, ಎಲ್ ಐ ಸಿ ಯು ಪಾಲಿಸಿದಾರನಿಗೆ ಮತ್ತು ಬೇನೆಫಿಶಿಯರಿ ಗಳಿಗೆ ತನ್ನ ಸಂಪೂರ್ಣ ಬೆಂಬಲವನ್ನು ಕೊಡುತ್ತದೆ. ಎಲ್ ಐ ಸಿ ಯಲ್ಲಿ ಒಂದು ಅತ್ಯಂತ ಪರಿಪೂರ್ಣವಾದ ಕ್ಲೆಯಿಮ್ ಸೆಟಲ್ಮೆಂಟ್ ಪ್ರೋಸೆಸ್ ಇದ್ದು ಅದರಿಂದ ಕ್ಲೆಯಿಮ್ ಗಳನ್ನು ಸೆಟಲ್ ಮಾಡಲು ಯಾವುದೇ ತರಹದ ಅಡ್ಡಿ ಗಳು ಬರುವುದಿಲ್ಲ.

ಎಲ್ ಐ ಸಿ ಯು ಯಾವುದೇ ತರಹದ ಕ್ಲೆಯಿಮ್ ಗಳನ್ನು ಸೆಟಲ್ ಮಾಡಲು ಒಂದು ನಿಗದಿತ ಆವದಿಯನ್ನು ಹೊಂದಿದ್ದು IRDA ವಾರ್ಷಿಕ ವರದಿಯ ಪ್ರಕಾರ, ಅದರ ಕ್ಲೆಯಿಮ್ ಸೆಟಲ್ಮೆಂಟ್ ರೇಶಿಯೋ 2016-17 ರಲ್ಲಿ 98.14 % ಇತ್ತು. ಇದು ಇನ್ಸೂರೆನ್ಸ್ ಸೇಕ್ಟರ್ ನಲ್ಲಿ ಅತ್ಯದಿಕ ವಾಗಿರುತ್ತದೆ. ಎಲ್ ಐ ಸಿ ಯ ಕ್ಲೆಯಿಮ್ ಸೆಟಲ್ಮೆಂಟ್ ರೇಶಿಯೋ ಹಿಂದಿನ ವರ್ಷಗಳಲ್ಲಿ ಕೂಡ ಮೇಲೆ ತಿಳಿಸಿರುವ ಸಂಖ್ಯೆಯ ಆಸು ಪಾಸು ಇದ್ದು ಕಂಪನಿಯನ್ನು ಆರ್ಥಿಕ ತಜ್ಞರು ಇನ್ಸೂರೆನ್ಸ್ ನೀಡುವ ಕಂಪನಿಗಳಲ್ಲಿ ಆಗ್ರ ಸ್ಥಾನ ನೀಡಿರುತ್ತಾರೆ.

ಕಂಪನಿಯು ಸಾದಾರಣವಾಗಿ, ಎಲ್ಲಾ ತರಹದ ನಿಜವಾದ ಕ್ಲೆಯಿಮ್ ಗಳನ್ನು ಸೆಟಲ್ ಮಾಡುತ್ತದೆ. ಆದರೆ ಅದರಲ್ಲಿ ಕೆಲವು ಕ್ಲೆಯಿಮ್ ಗಳು ಅಂದರೆ, ಕಂಪನಿಯ ಎಕ್ಷ್ಕ್ಲುಷನ್ ಲಿಸ್ಟ್ ನಲ್ಲಿ ಇರುವ ಕಾರಣಗಳು ಇದ್ದಲ್ಲಿ ಕ್ಲೆಯಿಮ್ ಅನ್ನು ಪುರಸ್ಕರಿಸುವುದಿಲ್ಲ. ಅವುಗಳೆಂದರೆ,

 • ಪಾಲಿಸಿದಾರನು ಪಾಲಿಸಿಯನ್ನು ಪಡೆದ 1 ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡಲ್ಲಿ,
 • ಸ್ವಂತವಾಗಿ ಇಂಜುರಿ ಮಾಡಿಕೊಂಡಲ್ಲಿ,
 • ಕ್ರಿಮಿನಲ್ ಹಾಗೂ ಕಾನೂನು ಬಾಹಿರ ಆಗಿದ್ದಲ್ಲಿ,
 • ಅಸಹಜವಾದ ರಿಸ್ಕ್ ಅನ್ನು ತೆಗೆದುಕೊಂಡಿದ್ದಲ್ಲಿ. ಮತ್ತು
 • ಅಸಹಜವಾದ ಇತರೆ ಚಟುವಟಿಕೆಗಳಲ್ಲಿ ಬಾಗಿ ಆಗಿದ್ದಲ್ಲಿ