ಎಲ್ ಐ ಸಿ ಆಧಾರ್ ಶಿಲಾ ಯೋಜನೆ
 • ಅತ್ಯುತ್ತಮ ಯೋಜನೆಗಳು
 • ಸುಲಭ ಹೋಲಿಕೆ
 • ತಕ್ಷಣದ ಖರೀದಿ
PX step

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಹುಟ್ಟಿದ ದಿನಾಂಕ (ದೊಡ್ಡ ಸದಸ್ಯ)
ಆದಾಯ
| ಲಿಂಗ

1

2

ಫೋನ್ ಸಂಖ್ಯೆ
ಹೆಸರು
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಎಲ್ ಐ ಸಿ ಆಧಾರ್ ಶಿಲಾ ಯೋಜನೆಯು ಒಂದು ನಾನ್ ಲಿಂಕ್ಡ ಮತ್ತು ಲಾಭ ಹಾಗೂ ನಿಯಮಿತವಾಗಿ ಕಂತಿನ ಹಣವನ್ನು ನೀಡಬೇಕಾಗಿರುವ endowment ಯೋಜನೆಯಾಗಿರುತ್ತದೆ. ಇದು ಒಂದು ಕಾಂಬಿನೇಷನ್ ಯೋಜನೆಯಾಗಿದ್ದು, ಉಳಿತಾಯ ಮತ್ತು ರಕ್ಷಣೆಯನ್ನು ಕೊಡುತ್ತದೆ. ಎಲ್ ಐ ಸಿ ಆಧಾರ್ ಶಿಲಾ ಯೋಜನೆಯು ಕೇವಲ UIDAI ಆಧಾರ್ ಕಾರ್ಡ್ ಹೊಂದಿರುವ ಮಹಿಳೆಯರು ಮಾತ್ರ ಬಾಗವಹಿಸುವ ಯೋಜನೆಯಾಗಿರುತ್ತದೆ. ಇದು ಒಂದು ಲೋಯಲ್ಟಿ (Loyalty) ಆಧಾರಿತ ಯೋಜನೆ, ಈ ಯೋಜನೆಯನ್ನು ಪಡೆಯಲು ವೈದ್ಯಕೀಯ ಪರೀಕ್ಷೆ ಬೇಕಾಗಿರುವುದಿಲ್ಲ. ಯಾವುದೇ ಒಬ್ಬ ಆರೋಗ್ಯವಂತ ವ್ಯಕ್ತಿಯು ಈ ಯೋಜನೆಯನ್ನು ಕೊಳ್ಳಬಹುದು.

ಎಲ್ ಐ ಸಿ ಆಧಾರ್ ಶಿಲಾ ಯೋಜನೆಯು ಪಾಲಿಸಿಯ ಆವದಿಗೆ ಮುಂಚೆ ಪಾಲಿಸಿದಾರಳ ಆಕಸ್ಮಿಕ ಮರಣವಾದಲ್ಲಿ, ಅವಳ ಕುಟುಂಬಕ್ಕೆ ಹಣಕಾಸು ದೊರಕುವಂತೆ ಮಾಡುತ್ತದೆ. ಮತ್ತು, ಮೆಚೂರಿಟೀ ಆದ ಮೇಲೆ ಪಾಲಿಸಿದಾರಳಿಗೆ ಒಂದು ಒಟ್ಟಾರೆ ಮೊತ್ತವನ್ನು ನೀಡುತ್ತದೆ.

ವೈಶಿಷ್ಟ್ಯಗಳು - ಎಲ್ ಐ ಸಿ ಆಧಾರ್ ಶಿಲಾ ಯೋಜನೆ

 1. ಈ ಯೋಜನೆಯು ಆಟೋ ಕವರ್ ಸೌಲಭ್ಯ ನೀಡುತ್ತದೆ. ಅಂದರೆ ಇದು ಅಗತ್ಯತೆಗೆ ಬೇಕಾದ ಆಟೋ ಕವರ್ ಹಾಗೂ ಸಾಲ ನೀಡುವ ಸೌಲಭ್ಯವನ್ನು ಹೊಂದಿರುತ್ತದೆ.
 2. ಇದು ಕೇವಲ ಮಹಿಳೆಯರಿಗೆ  ಮಾತ್ರ ಮೀಸಲು.
 3. ಇದು ಒಂದು ಕಡಿಮೆ ಕಂತಿನ ಯೋಜನೆ.
 4. ಇದು ಒಂದು endowment ಯೋಜನೆಯಾಗಿದ್ದು, ಮೆಚೂರಿಟೀ ಅಂದರೆ ಆವದಿ ಮುಗಿದ ನಂತರ ಒಂದು ಒಟ್ಟಾರೆ ಮೊತ್ತವನ್ನು ಪಾಲಿಸಿದಾರನಿಗೆ ನೀಡುವ ಯೋಜನೆಯಾಗಿರುತ್ತದೆ.
 5. ಈ ಯೋಜನೆಯಲ್ಲಿ, ಪಾಲಿಸಿ ತೆಗೆದುಕೊಂಡು 5 ವರ್ಸವಾದ ನಂತರ ಪಾಲಿಸಿದಾರಳು ಮರಣ ಹೊಂದಿದಲ್ಲಿ, loyalty ಹೆಚ್ಚುವರಿ ಹಣವನ್ನು ನಿಗದಿತ ಹಣಕ್ಕೆ ಸೇರಿಸಿ ನೀಡಲಾಗುವುದು. ಆದರೆ ಇತರೆ ಸಾದಾರಣ ಜೀವ ವಿಮಾ ಯೋಜನೆಗಳಲ್ಲಿ ವಿಮಾ ಮೊತ್ತವು ನಿಗದಿತ ಮೊತ್ತಕ್ಕೆ ಮಾತ್ರ ಸೀಮಿತವಾಗಿರುತ್ತದೆ.
 6. ಈ ಯೋಜನೆಯ ಮೆಚೂರಿಟೀ ಆದಾಗ ಪಾಲಿಸಿದಾರಳಿಗೆ  ನಿಗದಿತ ಹಣದ ಮೊತ್ತ ಹಾಗೂ ಅದರ ಜೊತೆಗೆ loyalty ಹೆಚ್ಚುವರಿ ಮೊತ್ತವನ್ನು ಸೇರಿಸಿ ನೀಡುವ ಯೋಜನೆ ಆಗಿರುತ್ತದೆ
 7. ಈ ಯೋಜನೆಯಲ್ಲಿ ಕ್ರಿಟಿಕಲ್ ಅನಾರೋಗ್ಯಕ್ಕೆ ನೀಡಲಾಗುವ ಪ್ರಯೋಜನಗಳು ಸೇರಿರುವುದಿಲ್ಲ.
 8. ಈ ಯೋಜನೆಯಡಿ ಸಾಲದ ಸೌಲಭ್ಯವಿದ್ದು ಅದು ಪಾಲಿಸಿಯು 3 ವರ್ಷವನ್ನು ಮುಗಿಸಿದ್ದಲ್ಲಿ  ಮಾತ್ರ ಸಿಗುವುದು.
 9. ಎಲ್ ಐ ಸಿಯ ಅಪಘಾತ ರೈಡರ್ ಮತ್ತು ಶಾಶ್ವತ(permanent)  ಅಂಗವೈಕಲ್ಯ (disability) ರೈಡರ್ ಗಳು ಕೂಡ ಈ ಯೋಜನೆ ಅಡಿ ಲಭ್ಯವಿದೆ.
 10. ಪಾಲಿಸಿಯನ್ನು ಪುನರುಜ್ಜೀವನಗೊಳಿಸುವ (revival) ಸಾದ್ಯತೆಯು ಪಾಲಿಸಿದಾರನು ಕಂತಿನ ಹಣವನ್ನುನೀಡದ ದಿನದಿಂದ ಎರಡು ವರ್ಷಗಳವರೆಗೆ ಇರುತ್ತದೆ.
 11. ಕಟ್ಟಿರುವ ಕಂತಿನ ಹಣಕ್ಕೆ 10 (10ಡಿ) ಅಡಿಯಲ್ಲಿ  ತೆರಿಗೆ ವಿನಾಯಿತಿ ಇರುತ್ತದೆ.
 12. ಮೆಚೂರಿಟೀ ಮೊತ್ತವು ಕೂಡ 10 (10ಡಿ) ಅಡಿಯಲ್ಲಿ  ತೆರಿಗೆ ವಿನಾಯಿತಿ ಹೊಂದಿರುತ್ತದೆ

ಅರ್ಹತೆ ಮಾನದಂಡ (criteria) ಮತ್ತು ಉಳಿಕೆ ನಿರ್ಭಂದಗಳು

ಎಲ್ ಐ ಸಿ ಆಧಾರ್ ಶಿಲಾ ಯೋಜನೆಯನ್ನು ಕೊಳ್ಳಲು ಇಚ್ಚಿಸುವವರಿಗೆ  ಕೆಳಕಂಡ ಅರ್ಹತೆ ಮಾನದಂಡ ಹಾಗೂ ನಿರ್ಭಂದನೆಗಳು ಅನ್ವಯವಾಗುತ್ತದೆ.

 1. ಈ ಯೋಜನೆಯು ಕೇವಲ ಮಹಿಳೆಯರಿಗೆ  ಮಾತ್ರ ಸೀಮಿತವಾಗಿರುತ್ತದೆ
 2. ಈ ಯೋಜನೆಯನ್ನು ಕೊಳ್ಳಲು ಕನಿಷ್ಠ 8 ವರ್ಷ ಮುಗಿದಿರಬೇಕು.
 3. ಈ ಯೋಜನೆಯನ್ನು ಕೊಳ್ಳಲು ಗರಿಷ್ಠ ಮಿತಿ 55 ವರ್ಷಗಳು (ಹತ್ತಿರದ ಹುಟ್ಟು ಹಬ್ಬದ ಪ್ರಕಾರ)
 4. ಈ ಯೋಜನೆಯ ಅವದಿಯು ಕನಿಷ್ಠ 10 ವರ್ಷಗಳು.
 5. ಈ ಯೋಜನೆಯ ಅವದಿಯು ಗರಿಷ್ಠ 20 ವರ್ಷಗಳು
 6. ಅವದಿ ಮುಗಿದು ಮೆಚೂರಿಟೀ ಆಗುವ ಹೊತ್ತಿಗೆ ಪಾಲಿಸಿದಾರಳು ಗರಿಷ್ಠ 70 ವರ್ಷದ (ಹತ್ತಿರದ ಹುಟ್ಟು ಹಬ್ಬದ ಪ್ರಕಾರ) ಒಳಗೆ ಇರಬೇಕು.
 7. ಈ ಯೋಜನೆಯಡಿ ವಿಮೆಯ ಕನಿಷ್ಠ ಮೊತ್ತವು ರೂ 75000 ಆಗಿದ್ದು, ಗರಿಷ್ಠ ಮೊತ್ತವು ರೂ 3,00,000 ಆಗಿರುತ್ತದೆ.
 8. ಈ ಯೋಜನೆಯಡಿ, ಕಂತಿನ ಹಣವನ್ನು ವರ್ಷಕ್ಕೊಮ್ಮೆ, ಆರ್ದ ವರ್ಷಕ್ಕೊಮ್ಮೆ,  ತ್ರೈ ಮಾಸಿಕ ಹಾಗೂ ತಿಂಗಳಿಗೊಮ್ಮೆ ಕಟ್ಟಬಹುದು. ಆದರೆ ತಿಂಗಳಿಗೊಮ್ಮೆ ಕಟ್ಟುವವರು ಸ್ಯಾಲರಿ ಕಡಿತ ಅಥವಾ  NACH ಮೂಲಕ ಮಾತ್ರ ಕಂತಿನ ಹಣವನ್ನು ಕಟ್ಟಲು ಅವಕಾಶವಿರುತ್ತದೆ
 9. ಈ ಕಂತುಗಳ ಮೇಲೆ ಕೆಳಕಂಡ ರಿಯಾಯಿತಿ ಲಭ್ಯವಿರುತ್ತದೆ.
 • ವಾರ್ಷಿಕ ಕಂತಿಗೆ – 2 %
 • ಆರ್ದ ವರ್ಷಕ್ಕೊಮ್ಮೆ ಕಟ್ಟುವ ಕಂತಿಗೆ – 1 %
 • ತ್ರೈ ಮಾಸಿಕ ಹಾಗೂ ತಿಂಗಳಿಗೊಮ್ಮೆ ಕಟ್ಟುವ ಕಂತಿಗೆ – ಯಾವುದೇ ರಿಯಾಯಿತಿ ಇಲ್ಲ.

ಪ್ರಯೋಜನಗಳು - ಎಲ್ ಐ ಸಿ ಆಧಾರ್ ಶಿಲಾ ಯೋಜನೆ

ಮೆಚೂರಿಟೀ ಪ್ರಯೋಜನಗಳು

ಅವದಿ ಪಾಲಿಸಿಯ ಪೂರ್ಣ ಅವದಿ ಮುಗಿದ ನಂತರ, ಪಾಲಿಸಿದಾರಳು ಜೀವಂತವಾಗಿದ್ದಲ್ಲಿ, ಹಾಗೂ ಕೊಡಬೇಕಾಗಿರುವ ಎಲ್ಲ ಕಂತುಗಳನ್ನು ಪಾವತಿಸಿದ್ದಲ್ಲಿ, ನಿಗದಿತ ಮೊತ್ತದ ಜೊತೆಗೆ loyalty addition ಸೇರಿಸಿ ಕೊಡಲಾಗುತ್ತದೆ.

ಪಾಲಿಸಿದಾರನು ಮರಣಿಸಿದಲ್ಲಿ ಸಿಗುವ ಪ್ರಯೋಜನಗಳು

ಪಾಲಿಸಿಯನ್ನು ಮಾಡಿದ 5 ವರ್ಷಗಳಲ್ಲಿ, ಪಾಲಿಸಿದಾರಳು ಮರಣ ಹೊಂದಿದಲ್ಲಿ ನಿಗದಿತ ವಿಮಾ ಮೊತ್ತವನ್ನು ನೀಡಲಾಗುವುದು. ಅದೇ 5 ವರ್ಷದ ನಂತರ ಅಥವಾ ಪಾಲಿಸಿಯ ಅವದಿಗೆ ಮುಂಚೆ ಮರಣಿಸಿದಲ್ಲಿ ನಿಗದಿತ ವಿಮಾ ಮೊತ್ತದ ಜೊತೆಗೆ loyalty addition ಮೊತ್ತವನ್ನು (ಇದ್ದಲ್ಲಿ) ಕೂಡ ಸೇರಿಸಿ ಕೊಡಲಾಗುವುದು. ಇಲ್ಲಿ ತಿಳಿಸಿರುವ ನಿಗದಿತ ಮೊತ್ತವೆಂದರೆ, ಪಾಲಿಸಿಯಲ್ಲಿ ನಿಗದಿ ಪಡಿಸಿರುವ ವಾರ್ಷಿಕ ಕಂತಿನ 10 ಪಟ್ಟು ಅಥವಾ ನಿಗದಿತ ಮೊತ್ತ (ಎರಡರಲ್ಲಿ ಯಾವ ಮೊತ್ತವು ಹೆಚ್ಚೋ ಅದನ್ನು) ನೀಡಲಾಗುವುದು. ಈ ಮರಣಾಂತರದ ಪ್ರಯೋಜನವು ಮರಣದವರೆವಿಗೂ ನೀಡಿರುವ ಒಟ್ಟಾರೆ ಹಣದ (ಕಂತುಗಳ ಮೂಲಕ) 105% ಗಿಂತ ಕಮ್ಮಿ ಇರುವುದಿಲ್ಲ. ಮೇಲೆ ತಿಳಿಸಿರುವ ಕಂತುಗಳ ಹಣದಲ್ಲಿ ಯಾವುದೇ ತರದ ತೆರಿಗೆ, ಅಂಡರ್ ರೈಟಿಂಗ್ ನಿರ್ದಾರದ ಪ್ರಕಾರ ನೀಡಬೇಕಾಗಿರುವ ಹೆಚ್ಚುವರಿ ಹಣ ಹಾಗೂ ರೈಡರ್ ಕಂತುಗಳು ಸೇರುವುದಿಲ್ಲ.(ಇದ್ದ ಪಕ್ಷದಲ್ಲಿ).

Loyalty addition

ಪಾಲಿಸಿಯು 5 ವರ್ಷ ಆಗಿದ್ದು, ಈ ಸಮಯದಲ್ಲಿ ಪಾಲಿಸಿದಾರಳು ಎಲ್ಲಾ ಕಂತುಗಳನ್ನು ಕಟ್ಟಿದ್ದು, ಪಾಲಿಸಿ ಆವದಿ ಮುಗಿದ ಪಕ್ಷದಲ್ಲಿ ಅಥವಾ ಪಾಲಿಸಿದಾರಳು ಆವದಿಯ ಒಳಗೆ ಮರಣಹೊಂದಿದಲ್ಲಿ ಈ ಪಾಲಿಸಿಯು loyalty addition ಮೊತ್ತಕ್ಕೆ ಅರ್ಹತೆ ಹೊಂದುತ್ತದೆ. ಅದೇ ರೀತಿ paid-up ಪಾಲಿಸಿ ಆಗಿದ್ದರೂ, ಪಾಲಿಸಿ 5 ವರ್ಷ ಆಗಿದ್ದಲ್ಲಿ ಮತ್ತು ಪಾಲಿಸಿದಾರಳು ಎಲ್ಲಾ ಕಂತುಗಳನ್ನು ಕಟ್ಟಿದ್ದಲ್ಲಿ, loyalty addition ಮೊತ್ತವನ್ನು ಪಾಲಿಸಿಯು ಎಷ್ಟು ವರ್ಷ ಮಾನ್ಯತೆ ಹೊಂದಿರುತ್ತದೆಯೋ, ಅಲ್ಲಿಯವರೆಗೂ ಕೂಡ ನೀಡಲಾಗುತ್ತದೆ.

ಪಾಲಿಸಿಯು 5 ವರ್ಷ ಮುಗಿಸಿದ್ದು ಪಾಲಿಸಿದಾರಳು 5 ವರ್ಷದ ಎಲ್ಲಾ ಕಂತುಗಳನ್ನು ನೀಡಿ ಆವದಿಗೆ ಮುಂಚೆ ಪಾಲಿಸಿಯನ್ನು surrender ಮಾಡಿದ್ದಲ್ಲಿ, loyalty addition ಮೊತ್ತವು ಸ್ಪೆಷಲ್ ಸರಂಡರ್ ವ್ಯಾಲ್ಯು ಲೆಕ್ಕಾಚಾರಕ್ಕೆ ಸೇರ್ಪಡೆಯಾಗುತ್ತದೆ.

ಕಡ್ಡಾಯವಲ್ಲದ ಅಪಘಾತ ಬೆನಿಫಿಟ್ ರೈಡರ್

18 ವರ್ಷಕ್ಕಿಂತ ಮೇಲ್ಪಟ್ಟ ಪಾಲಿಸಿದಾರರು ಎಲ್ ಐ ಸಿ ಅಪಘಾತ ಬೆನಿಫಿಟ್ ರೈಡರ್ ಉಪಯೋಗಿಸಿಕೊಳ್ಳಲು ಅರ್ಹರಾಗಿರುತ್ತಾರೆ. ಈ ರೈಡರ್ ಪ್ರಕಾರ, ಪಾಲಿಸಿದಾರಳು ಅಪಘಾತದಲ್ಲಿ ಮರಣ ಹೊಂದಿದಲ್ಲಿ ನಿಗದಿತ ಮೊತ್ತಕ್ಕೆ ಸರಿ ಸಮನಾದ ಮೊತ್ತವನ್ನು ಸೇರಿಸಿ ನೀಡಲಾಗುವುದು. ಅಂದರೆ ನಿಗದಿತ ಅಥವಾ ವಿಮಾ ಮೊತ್ತವು ರೂ 3,00,000 ಆಗಿದ್ದಲ್ಲಿ, ಒಟ್ಟು ನೀಡುವ ಮೊತ್ತವು 3,00,000 + 3,00,000 = 6,00,000 ಆಗುತ್ತದೆ.

ರಿಸ್ಕ್ ಪ್ರಾರಂಬದ ದಿನಾಂಕ

ಈ ಯೋಜನೆ ಅಡಿಯಲ್ಲಿ, ಪಾಲಿಸಿದಾರಳು ಪಾಲಿಸಿಯನ್ನು ಪ್ರಾರಂಬ ಮಾಡಿದ ದಿನದಿಂದಲೇ ರಿಸ್ಕ್ ಕವರ್ ಶುರುವಾಗುತ್ತದೆ. ಇದರಲ್ಲಿ. ವಯಸ್ಕರಲ್ಲದವರು ಕೂಡ ಸೇರ್ಪಡುತ್ತಾರೆ.

ಕಂತಿನ ಹಣವನ್ನು ಪಾವತಿ ಮಾಡುವಿಕೆ

ಮೇಲೆ ತಿಳಿಸಿದಂತೆ ಪಾಲಿಸಿಯ ಕಂತಿನ ಹಣವನ್ನು ವರ್ಷಕ್ಕೊಮ್ಮೆ, ಆರ್ದ ವರ್ಷಕ್ಕೊಮ್ಮೆ, ತ್ರೈ ಮಾಸಿಕ ಹಾಗೂ ತಿಂಗಳಿಗೊಮ್ಮೆ ಕಟ್ಟಬಹುದು. ಆದರೆ ತಿಂಗಳಿಗೊಮ್ಮೆ ಕಟ್ಟುವ ಕಂತಿನ ಹಣವನ್ನು NACH ಅಥವಾ ವೇತನ ಕಡಿತದ ಮೂಲಕ ಪಾಲಿಸಿ ಅವದಿಯವರೆಗೂ ಕಟ್ಟಬೇಕಾಗುತ್ತದೆ. ವರ್ಷಕ್ಕೊಮ್ಮೆ, ಆರ್ದ ವರ್ಷಕ್ಕೊಮ್ಮೆ ಹಾಗೂ ತ್ರೈ ಮಾಸಿಕಕ್ಕೆ ಕಂತನ್ನು ಕಟ್ಟುವ ಪಾಲಿಸಿದಾರರಿಗೆ 30 ದಿವಸ ಗ್ರೇಸ್ ಪೀರಿಯಡ್ ಲಭ್ಯವಿದ್ದು, ತಿಂಗಳಿಗೊಮ್ಮೆ ಕಟ್ಟುವವರಿಗೆ 15 ದಿವಸ ಗ್ರೇಸ್ ಪೀರಿಯಡ್ ಲಭ್ಯವಿರುತ್ತದೆ.

ರಿವೈವಲ್ ಅಂದರೆ ಮಾನ್ಯತೆ ಕಳೆದುಕೊಂಡಿರುವ ಪಾಲಿಸಿಯನ್ನು ಪುನರುಜ್ಜೀವನಗೊಳಿಸುವಿಕೆ

ಯಾವ ಕಂತಿನ ಹಣವನ್ನು ಪಾಲಿಸಿದಾರಳು ಕಟ್ಟಲಾಗಿರುವುದಿಲ್ಲವೋ ಹಾಗೂ ಪಾಲಿಸಿಯು ಮಾನ್ಯತೆಯನ್ನು ಕಳೆದುಕೊಂಡಿರುತ್ತದೆಯೋ  ಆಗಿನಿಂದ ಎರಡು ವರ್ಷದವರೆಗೂ ಪಾಲಿಸಿದಾರಳಿಗೆ ಪಾಲಿಸಿಯನ್ನು ರಿವೈವಲ್ ಅಂದರೆ ಪುನರುಜ್ಜೀವನಗೊಳಿಸಲು ಅವಕಾಶವಿರುತ್ತದೆ. ಇದು ಕಂತಿನ ಹಣವನ್ನು ಗ್ರೇಸ್ ಪೀರಿಯಡ್ ನಲ್ಲೂ ಕೂಡ ಕಟ್ಟದೆ ಪಾಲಿಸಿಯು ಮಾನ್ಯತೆ ಕಳೆದುಕೊಂಡಿದ್ದ ಪಕ್ಷದಲ್ಲಿ ಅನ್ವಯವಾಗುತ್ತದೆ. ಅದುವರೆವಿಗೂ ನೀಡಬೇಕಾಗಿರುವ ಎಲ್ಲಾ ಕಂತುಗಳ ಹಣವನ್ನು ಮತ್ತು ಅದರ ಜೊತೆಗೆ ಕಾರ್ಪೊರೇಷನ್ ನವರು ಸೇರಿಸಬಹುದಾದ ಬಡ್ಡಿ ದರವನ್ನು ಸೇರಿಸಿ ಕಟ್ಟಿ ಪಾಲಿಸಿಯನ್ನು ರಿವೈವಲ್ ಅಂದರೆ ಪುನರುಜ್ಜೀವನಗೊಳಿಸಬಹುದು. ಆದರೆ ಕಂತುಗಳನ್ನು ಕಟ್ಟಲು ಆಗದೆ ಇರುವ ಬಗ್ಗೆ ಸೂಕ್ತ ಕಾರಣಗಳನ್ನು ನೀಡಬೇಕಾಗುತ್ತದೆ ಮತ್ತು ಮುಂದೆ ವಿಮೆಯನ್ನು ಯಾವುದೇ ಅದೇ ತಡೆಯಿಲ್ಲದೆ ಮುಂದುವರೆಸಿಕೊಂಡು ಹೋಗುವ ಬಗ್ಗೆಯೂ ತೃಪ್ತಿದಾಯಕವಾದ ಪುರಾವೆಯನ್ನು (evidence) ನೀಡಬೇಕಾಗುತ್ತದೆ.

ಪೈಡ್- ಅಪ್ ಮೌಲ್ಯ

ಪಾಲಿಸಿಯು ಕೇವಲ 3 ವರ್ಷದ ಒಳಗಿನದಾಗಿದ್ದು, ಪಾಲಿಸಿದಾರಳು ಕಂತನ್ನು ಗ್ರೇಸ್ ಪೀರಿಯಡ್ ಒಳಗೂ ಕೂಡ ನೀಡದಿದ್ದಲ್ಲಿ, ಆ  ಯೋಜನೆಗೆ ಸೇರಿರುವ ಎಲ್ಲಾ ಬೇನೆಫಿಟ್ ಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಆದರೆ 3 ವರ್ಷದ ವರೆಗೂ ಪಾಲಿಸಿದಾರಳು ಕಂತುಗಳನ್ನು ಕಟ್ಟಿದ್ದು, 3 ವರ್ಷದ ನಂತರ ಯಾವುದೇ ಕಂತು ಕಟ್ಟದಿದ್ದಲ್ಲಿ, ಈ ಪಾಲಿಸಿಯು ಪೈಡ್-ಅಪ್ ಪಾಲಿಸಿ ಎಂದು ಪರಿಗಣಿಸಿ ಮುಂದುವರೆಸಲಾಗುತ್ತದೆ.