ಎಲ್ ಐ ಸಿ ಅನ್ಮೋಲ್ ಜೀವನ್ II ಯೋಜನೆ
 • ಅತ್ಯುತ್ತಮ ಯೋಜನೆಗಳು
 • ಸುಲಭ ಹೋಲಿಕೆ
 • ತಕ್ಷಣದ ಖರೀದಿ
PX step

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಹುಟ್ಟಿದ ದಿನಾಂಕ
Tobaccoತಂಬಾಕು?
ಆದಾಯ
| ಲಿಂಗ

1

2

ದಯವಿಟ್ಟು ಇತರ ಮಾಹಿತಿಯನ್ನು ನಮೂದಿಸಿ
ಫೋನ್ ಸಂಖ್ಯೆ
ಹೆಸರು
ಇಮೇಲ್
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಇದು ಒಂದು ಮೂಲಭೂತ (basically) ರಕ್ಷಣೆ ನೀಡುವ ಯೋಜನೆ ಆಗಿದ್ದು ಪಾಲಿಸಿದಾರರ ಕುಟುಂಬಕ್ಕೆ ಆರ್ಥಿಕ ರಕ್ಷಣೆ ನೀಡುವಲ್ಲಿ ಸಹಕಾರವನ್ನು ನೀಡುತ್ತದೆ. ಬೇರೆ ಅರ್ಥದಲ್ಲಿ ಹೇಳುವುದಾದರೆ, ಇದು ಒಂದು ಅವದಿ(ಟರ್ಮ್) ವಿಮಾ ಯೋಜನೆ ಆಗಿರುತ್ತದೆ. ಈ ಯೋಜನೆಯ ಪ್ರಕಾರ, ಪಾಲಿಸಿದಾರರು ಆವದಿಯು ಮುಗಿಯುವ ಮುಂಚೆಯೇ  ಮರಣ ಹೊಂದಿದಲ್ಲಿ, ನಾಮಿನಿಗೆ ಪಾಲಿಸಿಯಲ್ಲಿ ನಮೂದಿಸಿರುವ ಮರಣದ ಬೆನಿಫಿಟ್ ಅನ್ನು ನೀಡಲಾಗುತ್ತದೆ. ಆದ್ದರಿಂದ, ಟರ್ಮ್ ವಿಮಾ ಯೋಜನೆಯು ಕವರೇಜ್ ಒದಗಿಸುವ ಒಂದು ಉತ್ತಮ ಯೋಜನೆ ಎನ್ನುವುದರಲ್ಲಿ ಸಂಶಯವಿಲ್ಲ.

ಅನ್ಮೋಲ್ ಜೀವನ್ II ಯೋಜನೆಯು ಆರ್ಥಿಕ ರಕ್ಷಣೆಯನ್ನು ಕೂಡ ನೀಡುವ ಯೋಜನೆ ಕೂಡ  ಆಗಿರುತ್ತದೆ. ಅಂದರೆ, ಯಾವುದೇ ಕುಟುಂಬವು ಅಥವಾ ವ್ಯಕ್ತಿಯು ಪಾಲಿಸಿದಾರನ ಆಕಸ್ಮಿಕ ಮರಣದಿಂದ ಮುಂದೆ ಅನುಭವಿಸಬಹುದಾದ ಆರ್ಥಿಕ ಸಮಸ್ಯೆಯನ್ನು ಸಾದ್ಯವಾದಷ್ಟು  ಮಟ್ಟಿಗೆ ನಿವಾರಿಸುವ ಯೋಜನೇ ಆಗಿರುತ್ತದೆ. ಜೀವನವು ಒಂದು ಅನಿಶ್ಚಿತತೆಯಿಂದ ಕೂಡಿದ್ದು, ಟರ್ಮ್ ವಿಮಾ ಯೋಜನೆಯ ಮೂಲಕ ಪಾಲಿಸಿದಾರನ ಅಗಲುವಿಕೆಯಿಂದ ಆಗುವ ಪರಿಣಾಮವನ್ನು  ಸಾದ್ಯವಾದಷ್ಟು ಮಟ್ಟಿಗೆ ತಡೆ ಹಿಡಿಯಬಹುದು. ಪಾಲಿಸಿದಾರನ ನಂತರವೂ ಕೂಡ ಅವನ ಕುಟುಂಬವು ತಕ್ಕ ಮಟ್ಟಿಗೆ ಆ ಸಮಯದಲ್ಲಿ ಇದ್ದಂತಹ ಜೀವನ ಶೈಲಿಯನ್ನು ಮುಂದುವರೆಸಿ ಕೊಂಡು ಹೋಗುವಲ್ಲಿ ಸಹಾಯಕ ಆಗುತ್ತದೆ.  

ಎಲ್ ಐ ಸಿ ಅನ್ಮೋಲ್ ಜೀವನ್ II – ಮುಖ್ಯವಾದ  ವೈಶಿಷ್ಟ್ಯಗಳು

 • ಈ ಯೋಜನೆಯನ್ನು ಕೇವಲ ಆನ್ಲೈನ್ ಮುಖಾಂತರವೇ ಪಡೆಯಲು ಸಾಧ್ಯ.
 • ಯೋಜನೆಯನ್ನು ಯಾವ ಮಧ್ಯವರ್ತಿಯ ಸಹಾಯವಿಲ್ಲದೆ ನೇರವಾಗಿ ಪಡೆಯಬಹುದು.
 • ಇದು ಒಂದು ಎಲ್ಲ ಅನುಕೂಲತೆಗಳನ್ನು ಒಳಗೊಂಡಂತ ಜೀವ ವಿಮಾ ಯೋಜನೆ ಆಗಿರುತ್ತದೆ
 • ಕಂತುಗಳನ್ನು ಎರಡು ರೀತಿಯಲ್ಲಿ ಅಂದರೆ ಆರ್ದ ವರ್ಷ ಅಥವಾ ವರ್ಷಕ್ಕೊಮ್ಮೆ ಕಟ್ಟಬಹುದು
 • ಕೇವಲ ಮರಣದ ನಂತರ ಸಿಗುವ ಲಾಭ ಅಥವಾ ಪ್ರಯೋಜನ. ಈ ಯೋಜನೆಯಡಿ ಮೇಚ್ಯುರಿಟಿ ಬೆನಿಫಿಟ್ ಇರುವುದಿಲ್ಲ
 • ಈ ಯೋಜನೆಯಲ್ಲಿ ಯಾವುದೇ paid up ಮೊತ್ತವು ಸೇರಿರುವುದಿಲ್ಲ
 • ಈ ಯೋಜನೆಯಲ್ಲಿ ಯಾವುದೇ ಸರಂಡರ್ ಮೊತ್ತವು ಸೇರಿರುವುದಿಲ್ಲ
 • ಈ ಯೋಜನೆಯಲ್ಲಿ ಎಲ್ಲಾ ತರಹದ ಸಾವುಗಳು ಮತ್ತು ಅಪಘಾತದಿಂದಾಗುವ ಸಾವು ಕೂಡ ಸೇರಿರುತ್ತದೆ
 • ಈ ಯೋಜನೆಯ ಮೇಲೆ ಯಾವುದೇ ಸಾಲವನ್ನು ಮಾಡುವ ಅವಕಾಶ ಇರುವುದಿಲ್ಲ.

ಎಲ್ ಐ ಸಿ ಅನ್ಮೋಲ್ ಜೀವನ್ II – ಪ್ರಯೋಜನಗಳು (ಬೇನೆಫಿಟ್ಸ್)

 1. ಪಾಲಿಸಿದಾರನು ಪಾಲಿಸಿ ಅವದಿಯ ಮದ್ಯದಲ್ಲಿ ತೀರಿಕೊಂಡಲ್ಲಿ ನಾಮಿನಿಗೆ ಡೆತ್ ಬೆನಿಫಿಟ್ ಮೂಲಕ sum assured ಮೊತ್ತಕ್ಕೆ ಸರಿ ಸಮನಾಗಿ ಹಣವನ್ನು ನೀಡಲಾಗುವುದು.
 2. ಪಾಲಿಸಿದಾರನು ಎಲ್ ಐ ಸಿ ಪಾಲಿಸಿಗಳಿಗೆ ಅನ್ವಯಿಸುವ ತೆರಿಗೆ ವಿನಾಯತಿಯನ್ನು ಆಯಾ ಆದಾಯ ತೆರಿಗೆ ಸೆಕ್ಷನ್ ಗಳ ಅಡಿಯಲ್ಲಿ ಪಡೆಯಬಹುದು.

ಎಲ್ ಐ ಸಿ ಅನ್ಮೋಲ್ ಜೀವನ್ II – ಅರ್ಹತೆಗಳು

ಎಲ್ ಐ ಸಿ ಅನ್ಮೋಲ್ ಜೀವನ್ II ಯೋಜನೆಯನ್ನು ಪಡೆಯಲು ಬೇಕಾದ ಅರ್ಹತೆಗಳು

ವಯಸ್ಸು

ಕನಿಷ್ಠ 18 ವರ್ಷ ಮುಗಿದಿರಬೇಕು

 

ಗರಿಷ್ಠ 55 ವರ್ಷಗಳು (ಹತ್ತಿರದ ಹುಟ್ಟಿದ ದಿನಾಂಕಕ್ಕೆ)

ಪಾಲಿಸಿಯ ಅವದಿ

ಕನಿಷ್ಠ 5 ವರ್ಷಗಳು

 

ಗರಿಷ್ಠ ಮಿತಿ – 25 ವರ್ಷಗಳು

 

ಪಾಲಿಸಿಯನ್ನು ಹೊಂದಿರುವ  ಪಾಲಿಸಿದಾರನಿಗೆ 70 ವರ್ಷ (ಹತ್ತಿರದ ಹುಟ್ಟಿದ ದಿನಾಂಕಕ್ಕೆ) ವಯಸ್ಸಾಗುವವರೆಗೂ ಅಸ್ತಿತ್ವದಲ್ಲಿರುತ್ತದೆ

ವಿಮಾ ಮೊತ್ತ (sum assured)

ಕನಿಷ್ಟ ಮೊತ್ತ – ರೂ 6,00,000

ಗರಿಷ್ಠ ಮೊತ್ತ – ರೂ 24,00,000

ಕಂತನ್ನು ಕಟ್ಟುವ ರೀತಿ

ವರ್ಷಕ್ಕೊಮ್ಮೆ ಅಥವಾ  ಅರ್ದ ವರ್ಷಕ್ಕೊಮ್ಮೆ

ಎಲ್ ಐ ಸಿ ಅನ್ಮೋಲ್ ಜೀವನ್ II ನ್ನು ಯಾರು ಕೊಳ್ಳಬಹುದು

ಎಲ್ ಐ ಸಿ ಅನ್ಮೋಲ್ ಜೀವನ್ II ಪಾಲಸೀ ಮಾಡಲು ಇಚ್ಚಿಸುವವನು ಆದಾಯಗಳಿಸುವವನಾಗಿದ್ದು, ಅವನಿಗೆ ಬರುತ್ತಿರುವ ಆದಾಯವು ಈಗ ಹಾಲಿ ಇರುವಂತಹ ಹಾಗೂ ಮುಂದೆ ತೆಗೆದುಕೊಳ್ಳಬಹುದಾದ ಯೋಜನೆಗಳಿಗೆ ಹಣ ಒದಗಿಸುವಲ್ಲಿ ಯಾವುದೇ ರೀತಿಯ ತೊಂದರೆ ಆಗದಂತಿರಬೇಕು. ಯಾವುದೇ ಮನುಷ್ಯನಾಗಲಿ, ತನ್ನನ್ನು ನಂಬಿರುವ ಮತ್ತು ತನ್ನ ಮೇಲೆ ಅವಲಂಬಿಸಿರುವ ವ್ಯಕ್ತಿಗಳಿಗೆ ಮುಂದೆ  ತೊಂದರೆ ಆಗುವುದನ್ನು ಇಚ್ಚಿಸುವುದಿಲ್ಲ. ಆ ನಿಟ್ಟಿನಲ್ಲಿ, ತನಗೆ ಅಕಸ್ಮಾತ್ ಏನಾದರೂ ಆದ ಪಕ್ಷದಲ್ಲಿ ಅಥವಾ ತಾನು ಮರಣ ಹೊಂದಿದ ಪಕ್ಷದಲ್ಲಿ ಅವನನ್ನು ಅವಲಂಬಿಸಿದವರಿಗೆ ಒಂದು ನಿಗದಿತ ಮೊತ್ತವು ಸಲ್ಲಿಕೆ ಆಗಲಿ ಎನ್ನುವ ದೃಷ್ಟಿಯನ್ನು ಇಟ್ಟುಕೊಂಡು ಶುದ್ಧ ಜೀವ ವಿಮೆಯಲ್ಲಿ ಹಣ ತೊಡಗಿಸಲು ಮುಂದಾಗುತ್ತಾನೆ. ಈ ಪಾಲಿಸಿಯನ್ನು ಕೊಳ್ಳಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕಾಗುತ್ತದೆ. ಅದೇ ಗರಿಷ್ಠ ವಯಸ್ಸು 55 ವರ್ಷ ಆಗಿರುತ್ತದೆ. ಈ ಯೋಜನೆಯ ಅಡಿಯಲ್ಲಿ ಪಾಲಿಸಿದಾರನ ವಯಸ್ಸು ಪಾಲಿಸಿಯು ಮುಗಿಯುವ ವೇಳೆಗೆ 65 ವರ್ಷವನ್ನು ಮೀರಿರಬಾರದು.

ಪಾಲಿಸಿದಾರರು ಒಂದಕ್ಕಿಂತ ಹೆಚ್ಚು ಯೋಜನೆಗಳನ್ನು ಹೊಂದಿರಬಹುದೇ

ಯಾವುದೇ ವ್ಯಕ್ತಿಯು ಅವನ ಹತ್ತಿರ ಬೇರೆ ಪಾಲಸೀ ಇದ್ದರೂ ಅಥವಾ ಇಲ್ಲದಿದ್ದರೂ ಒಂದಕ್ಕಿಂತ ಹೆಚ್ಚು ಪಾಲಿಸಿಗಳನ್ನು ಹೊಂದುವಲ್ಲಿ ಅಭ್ಯಂತರವಿಲ್ಲ. ಆದರೆ, ಆ ವ್ಯಕ್ತಿಗೆ ಬರುತ್ತಿರುವ ಆದಾಯವು, ಎಲ್ಲ ಪಾಲಸೀಗಳಿಗೆ ಬೇಕಾಗುವ ಕಂತಿನ ಮೊತ್ತವನ್ನು ಕಟ್ಟಲು ಸಾಕಾಗುವಷ್ಟು ಇರಬೇಕು. ಸಾಕಷ್ಟು ಮಂದಿ ತಮ್ಮಲ್ಲಿ ಇರುವ ಪಾಲಸೀಯ ನಿಗದಿತ ಮೊತ್ತವು ಸಾಲದೆನಿಸಿ ಹೆಚ್ಚುವರಿ ಪಾಲಸೀಗಳನ್ನು ತೆಗೆದುಕೊಳ್ಳುತ್ತಾರೆ.

ಎಲ್ ಐ ಸಿ ಅನ್ಮೋಲ್ ಜೀವನ್ II ಪಾಲಿಸಿಯನ್ನು ಆನ್ಲೈನ್ ಮೂಲಕವೇ ಏಕೆ ಕೊಳ್ಳಬೇಕು?

ಮೇಲೆ ತಿಳಿಸಿದಂತೆ ಈ ಯೋಜನೆಯನ್ನು ಕೇವಲ್ ಆನ್ಲೈನ್ ಮುಖಾಂತರವೇ ಪಡೆಯುವ ಅವಕಾಶ ಇರುತ್ತದೆ. ಈಗಿನ ಅತ್ಯಂತ ತಾಂತ್ರಿಕವಾಗಿ ಮುಂದುವರೆದ ಸಮಯದಲ್ಲಿ, ಜನರು ಎಲ್ಲ ಕೆಲಸಗಳನ್ನು ಆನ್ಲೈನ್ ಮುಖಾಂತರವೇ ಮಾಡುತ್ತಿರುವುದರಿಂದ, ಆನ್ಲೈನ್ ನಲ್ಲಿ ಈ ಯೋಜನೆಯನ್ನು ಪಡೆಯಲು ಯಾವುದೇ ರೀತಿಯ ತೊಂದರೆಯೂ ಆಗುವುದಿಲ್ಲ. ಅದರಲ್ಲೂ, ಆನ್ಲೈನ್ ಮೂಲಕವೇ ಕೊಳ್ಳುವಿಕೆ ಹಾಗೂ ಅದರ ಬಾಬ್ತು ನೀಡಬೇಕಾದ ಕಂತುಗಳು ಹಾಗೂ ಅದರ ಮೊತ್ತ ಮತ್ತು ಅದಕ್ಕೆ ಬೇಕಾದ ಹಣದ ಪಾವತಿ ಎಲ್ಲವನ್ನೂ ಮಾಡುವುದರಿಂದ, ಸಾಕಷ್ಟು ಸಮಯ ಉಳಿತಾಯವಾಗುತ್ತದೆ. ಅದರಲ್ಲಿಯೂ ಯಾವುದೇ ತರಹದ ಲೆಕ್ಕಾಚಾರದಲ್ಲಿನ ತೊಂದರೆ ಅನುಭವಿಸ ಬೇಕಾಗಿಲ್ಲ.

ಎಲ್ ಐ ಸಿ ಅನ್ಮೋಲ್ ಜೀವನ್ II – ಹಣ ಪಾವತಿಸಲು ಲಭ್ಯವಿರುವ ಮಾರ್ಗಗಳು

ಎಲ್ ಐ ಸಿ ಅನ್ಮೋಲ್ ಜೀವನ್ II ಪಾಲಸೀಯ ಕಂತಿನ ಹಣವನ್ನು ಪಾವತಿಸಲು ಎರಡು ಮಾರ್ಗಗಳಿವೆ. ಅರ್ದ ವರ್ಷಕ್ಕೊಮ್ಮೆ ಅಥವಾ ವರ್ಷಕ್ಕೊಮ್ಮೆ. ಪಾಲಿಸಿಯ ವಿಮಾ ಮೊತ್ತವು ರೂ 25,00,000 ಗಳಿಗೆ ಮೇಲ್ಪಟ್ಟು ಇರಬೇಕು. ಪಾಲಿಸಿಯ ಟರ್ಮ್ ಅಂದರೆ ಅವದಿಯು 35 ವರ್ಷದವರೆಗೂ ಲಭ್ಯವಿರುತ್ತದೆ.

ಎಲ್ ಐ ಸಿ ಅನ್ಮೋಲ್ ಜೀವನ್ II – ರಿವೈವಲ್ ಪೀರಿಯಡ್ ಲಭ್ಯವಿದೆಯೇ ?

ಎಲ್ ಐ ಸಿ ಅನ್ಮೋಲ್ ಜೀವನ್ II ಪಾಲಸೀಯಲ್ಲಿ ರಿವೈವಲ್ ಸಮಯವು ಲಭ್ಯವಿರುತ್ತದೆ. ಅಂದರೆ, ಪಾಲಿಸಿದಾರರು ತಾವು ಕಟ್ಟದೆ ಇದ್ದ ಕಂತಿನ ದಿನದಿಂದ ಎರಡು ವರ್ಷದ ಒಳಗೆ ಮಾನ್ಯತೆ ಕಳೆದು ಕೊಂಡಿರುವ ಪಾಲಿಸಿಯನ್ನು ರಿವೈವ್ ಮಾಡಬಹುದು. ಆದರೆ, ಅದುವರೆಗೂ ಬಾಕಿ ಇರುವಂತಹ ಕಂತುಗಳ ಒಟ್ಟು ಮೊತ್ತಕ್ಕೆ ತಗುಲಬಹುದಾದ ಬಡ್ಡಿಯನ್ನು ಸೇರಿಸಿ ಎಲ್ ಐ ಸಿ ಗೆ ನೀಡಿ ಪಾಲಿಸಿಯನ್ನು ಪುನರುಜ್ಜೀವನ ಗೊಳಿಸಬಹುದು (ರಿವೈವಡ್).

ಎಲ್ ಐ ಸಿ ಅನ್ಮೋಲ್ ಜೀವನ್ II – ಸರಂಡರ್ ಮೊತ್ತ ಅಥವಾ ಮೆಚೂರಿಟೀ ಬೇನೆಫ್ತ್ಸ್ ಲಭ್ಯವಿದೆಯೇ?

ಎಲ್ ಐ ಸಿ ಅನ್ಮೋಲ್ ಜೀವನ್ II ಪಾಲಸೀಯಲ್ಲಿ ಸರಂಡರ್ ಮೊತ್ತವಾಗಲಿ ಅಥವಾ ಮೆಚೂರಿಟೀ ಮೊತ್ತವಾಗಲಿ ಲಭ್ಯ ಇರುವುದಿಲ್ಲ. ಈ ಯೋಜನೆಯ ಅಡಿಯಲ್ಲಿ, ಪಾಲಿಸೀದಾರನು ಮರಣ ಹೊಂದಿದಲ್ಲಿ ಅವನ ನಾಮಿನಿಗೆ ಕೇವಲ ಡೆತ್ ಬೆನಿಫಿಟ್ ಮಾತ್ರ ಕೊಡಲಾಗುತ್ತದೆ. ಇದು ಒಂದು ಶುದ್ದ ಜೀವ ವಿಮಾ ಯೋಜನೆ ಆಗಿದ್ದು, ಯಾವುದೇ ರೀತಿಯ ಲಾಭಾಂಶ ಪಡೆಯುವ ಅಥವಾ ನೀಡುವ ಯೋಜನೆ ಆಗಿರುವುದಿಲ್ಲ.

ಎಲ್ ಐ ಸಿ ಅನ್ಮೋಲ್ ಜೀವನ್ II – ಪಡೆಯಲು ಬೇಕಾಗುವ ದಾಖಲೆಗಳು

ಎಲ್ ಐ ಸಿ ಅನ್ಮೋಲ್ ಜೀವನ್ II ಪಾಲಸೀಯನ್ನು ಪಡೆಯಲು ಇಚ್ಚಿಸುವವರು ಈ ಕೆಲ ಕಂಡ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.

 • ವಯಸ್ಸಿನ ದಾಖಲೆ – ಮೆಟ್ರಿಕ್ಯುಲೇಷನ್ ಸರ್ಟಿಫಿಕೇಟ್, ಬರ್ತ್ ಸರ್ಟಿಫಿಕೇಟ್.
 • ಗುರುತಿನ ದಾಖಲೆ – ಆಧಾರ್, ಪಾನ್, ಲೈಸೆನ್ಸ್, ಪಾಸ್ಪೋರ್ಟ್
 • ವಿಳಾಸದ ದಾಖಲೆ – ಪಾಸ್ಪೋರ್ಟ್, ಆಧಾರ್, ವಿದ್ಯುಚ್ಚಕ್ತಿಯ ಬಿಲ್, ಗ್ಯಾಸ್ ಬಿಲ್, ಮನೆಯ ದಾಖಲೆ, ಬಾಡಿಗೆ ದಾಖಲೆ
 • ಆದಾಯದ ದಾಖಲೆ – ಆದಾಯದ ಮೂಲ ದಾಖಲೆ, ಉದ್ಯೋಗದಲ್ಲಿದ್ದಲ್ಲಿ, ಆದಾಯದ ಬಗ್ಗೆ ಉದ್ಯೋಗ ನೀಡಿರುವವರಿಂದ ಸರ್ಟಿಫಿಕೇಟ್
 • ವೈದ್ಯಕೀಯ ತಪಾಸನೆಯ ಬಗ್ಗೆ – ಎಲ್ಲ ವೈದ್ಯಕೀಯ ದಾಖಲೆಗಳು (ಬೇಕಾಗಿರುವುದು) ಮತ್ತು ನಾವು ಸೂಚಿಸಿರುವುದು

ಎಲ್ ಐ ಸಿ ಅನ್ಮೋಲ್ ಜೀವನ್ II ಪಡೆಯಲು ವೈದ್ಯಕೀಯ ತಪಾಸನೆಗೆ ಒಳಪಡಬೇಕೆ?

ವೈದ್ಯಕೀಯ ತಪಾಸನೆ ಬೇಕಾಗಲೂ ಬಹುದು ಅಥವಾ ಬೇಡವಾಗಲೂ ಬಹುದು. ಇದು ನೀವುಗಳು ಒಬ್ಬ ಪಾಲಸೀ ಮಾಡಲು ಇಚ್ಚಿಸುವ ವ್ಯಕ್ತಿಯಾಗಿ ನಿಮ್ಮ ಆರೋಗ್ಯದ ಕುರಿತು ಸಲ್ಲಿಸಿರುವ ಮಾಹಿತಿಯ ಮೇಲೆ ಮತ್ತು ಪಾಲಸೀಗೆ ಬೇಕಾದ ಅಂಡರ್ರೈಟಿಂಗ್ ಅವಶ್ಯಕತೆಗಳ ಮೇಲೆ ಅವಲಂಬಿತವಾಗಿರುತ್ತದೆ

ಪಾಲಸೀಯನ್ನು ಕೊಳ್ಳಲು ಇಚ್ಚಿಸುವವರು ನಾನ್ ಸ್ಮೋಕರ್ಸ್ ವರ್ಗವನ್ನು ಅಥವಾ ವೈದ್ಯಕೀಯ ವರ್ಗವನ್ನು ಆಯ್ಕೆ ಮಾಡಿದಲ್ಲಿ, ವೈದ್ಯಕೀಯ ತಪಾಸನೆಗೆ ಒಳಪಡಬೇಕಾಗುತ್ತದೆ.  ಕಂಪನಿಗಳು ಸಾಮಾನ್ಯವಾಗಿ ರಕ್ತ ಹಾಗೂ ಯುರಿನ್ ಪರೀಕ್ಷೆಗಳನ್ನು ಮಾತ್ರ ಮಾಡಿಸುತ್ತದೆ. ಆದ್ದರಿಂದ, ಒಬ್ಬ ಪಾಲಸೀ ಮಾಡಲು ಇಚ್ಚಿಸುವ ವ್ಯಕ್ತಿಯಾಗಿ ಯಾವುದೇ ವಿಷಯವನ್ನು ಮುಚ್ಚಿಡದೆ ತಮ್ಮಲ್ಲಿರುವ ಎಲ್ಲಾ ಸತ್ಯವಾದ ಮಾಹಿತಿಯನ್ನು, ಅದರಲ್ಲೂ ಆರೋಗ್ಯ ಸ್ಥಿತಿಯ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡುವುದು ಅತ್ಯಾವಶ್ಯಕ, ಮುಂದೆ ತಾವು ಸುಳ್ಳು ಮಾಹಿತಿ ನೀಡಿದ್ದೀರಿ ಎಂದು ತಿಳಿದುಬಂದಲ್ಲಿ ಪಾಲಸೀಯ ಮೂಲಕ ಬರಬೇಕಾಗಿರುವ ಎಲ್ಲಾ ಪ್ರಯೋಜನಗಳನ್ನು ಕಳೆದು ಕೊಳ್ಳುತ್ತೀರಿ. ಮತ್ತು ಪಾಲಸೀಯನ್ನು ರದ್ದು ಮಾಡುವ ಅವಕಾಶ ಕೂಡ ಇರುತ್ತದೆ.

ಎಲ್ ಐ ಸಿ ಅನ್ಮೋಲ್ ಜೀವನ್ II ಯೋಜನೆಯಲ್ಲಿ ಸೇರ್ಪಡೆಯಾಗದ ಕೆಲವು ವಿಷಯಗಳು

ಕೆಲವು ಸಾಮಾನ್ಯವಲ್ಲದ ಸಂಧರ್ಭಗಳಲ್ಲಿ, ಕಂಪನಿಯವರು ಪಾಲಿಸಿದಾರನ ಫಲಾನುಭವಿಗಳಿಗೆ  ನಿಗದಿತ ಮೊತ್ತವನ್ನು ನೀಡುವುದಿಲ್ಲ. ಅದೆಂದರೆ, ಪಾಲಿಸಿದಾರನು ಎಲ್ ಐ ಸಿ ಅನ್ಮೋಲ್ ಜೀವನ್ II ಯೋಜನೆಯನ್ನು ಕೊಂಡುಕೊಂಡ ಅಥವಾ ನವೀಕರಿಸಿದ 12 ತಿಂಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ ನಿಗದಿತ ಮೊತ್ತವನ್ನು ಫಲಾನುಭವಿಗಳಿಗೆ ನೀಡಲು ಕಂಪನಿ ನಿರಾಕರಿಸಬಹುದು. ಆದರೆ ಕೆಲವು ಸಂದರ್ಭದಲ್ಲಿ, ನಾಮಿನಿಯು ಪಾಲಿಸಿದಾರನು ಆತ್ಮಹತ್ಯೆಗೆ ಮುಂಚೆ  ಕಟ್ಟಿರುವ ಕಂತುಗಳ ಒಟ್ಟು ಮೊತ್ತದ 80 % ಮೊತ್ತವನ್ನು ಕೇಳಬಹುದಾಗಿರುತ್ತದೆ. ಇದು ಪಾಲಿಸಿಯು ಅವದಿ ಮೀರದಿದ್ದ ಪಕ್ಷದಲ್ಲಿ ಅನ್ವಯವಾಗುತ್ತದೆ. ಸದರಿ ಮೊತ್ತದಿಂದ, ಯಾವುದೇ ತರಹದ ತೆರಿಗೆ ಮತ್ತು ಬಾಕಿ ಕಂತುಗಳನ್ನು ಮುರಿದುಕೊಂಡು ಉಳಿದ ಮೊತ್ತವನ್ನು ನೀಡಲಾಗುತ್ತದೆ.

ಎಲ್ ಐ ಸಿ ಅನ್ಮೋಲ್ ಜೀವನ್ II – ಇತರೆ ವೈಶಿಷ್ಟ್ಯಗಳು

ಈ ಯೋಜನೆಯ ಅಡಿಯಲ್ಲಿ ಕೂಲಿಂಗ್ ಪೀರಿಯಡ್ ಹಾಗೂ ಗ್ರೇಸ್ ಪೀರಿಯಡ್ ಗಳನ್ನು ನೀಡಲಾಗುವುದು.

ಕೂಲಿಂಗ್ ಪೀರಿಯಡ್

ಎಲ್ಲಾ ಜೀವ ವಿಮಾ ಯೋಜನೆಗಳು ಕೂಲಿಂಗ್ ಪೀರಿಯಡ್ ಹೊಂದಿರುತ್ತವೆ. ಎಲ್ ಐ ಸಿ ಅನ್ಮೋಲ್ ಜೀವನ್ II ಯೋಜನೆಯು ಕೂಡ ಕೂಲಿಂಗ್ ಪೀರಿಯಡ್ ಹೊಂದಿದ್ದು ಅದು 30 ದಿವಸಗಳಾಗಿರುತ್ತದೆ. ಈ 30 ದಿನಗಳಲ್ಲಿ ಪಾಲಿಸಿದಾರರು ಅವರಿಗೆ ಒದಗಿಸಿರುವ ಜೀವ ವಿಮಾ ದಾಖಲೆಯನ್ನು ಕೂಲಂಕುಶವಾಗಿ ಓದಿ ಮತ್ತು ಪರಿಶೀಲಿಸಿ, ಅದರಲ್ಲಿ ಉಂಟಾಗಬಹುದಾದ ಅನುಮಾನಗಳನ್ನು ಪರಿಹರಿಸಿಕೊಳ್ಳಲು ನೀಡುವ ಅವದಿಯಾಗಿರುತ್ತದೆ.

ಪಾಲಿಸಿದಾರರು ಅವರಿಗೆ ಒದಗಿಸಿರುವ ಪಾಲಿಸಿ ಕರಾರಿನಲ್ಲಿ ನಮೂದಿಸಿರುವ ಯಾವುದೇ ಕಂಡಿಷನ್ ಬಗ್ಗೆ ಒಮ್ಮತ ಇಲ್ಲದಿದ್ದ ಪಕ್ಷದಲ್ಲಿ ಸದರಿ ಪಾಲಿಸಿಯನ್ನು ಈ ಕೂಲಿಂಗ್ ಪೀರಿಯಡ್ ಒಳಗೆ ಹಿಂದಿರುಗಿಸಬಹುದು. ಅಂತಹ ಸಮಯದಲ್ಲಿ, ಕಂಪನಿಯು ಅವರು ಕಟ್ಟಿರುವ ಮೊದಲ ಕಂತಿನ ಹಣವನ್ನು ವಾಪಸ್ಸು ಮಾಡುವುದು. ಈ ಹಿಂದಿರುಗಿಸುವ ಹಣದಲ್ಲಿ ಯಾವುದೇ ತರಹದ ಅನ್ವಯಿಸುವ ಕಡಿತಗಳಿದ್ದಲ್ಲಿ ಅದನ್ನು ಮುರಿದುಕೊಂಡು ಉಳಿದ ಹಣವನ್ನು ಪಾಲಿಸಿದಾರರಿಗೆ ನೀಡಲಾಗುವುದು.

ಒಂದು ಬಾರಿ ಪಾಲಿಸಿಯನ್ನು ಹಿಂದಿರುಗಿಸಿದಲ್ಲಿ, ಅದೇ ಪಾಲಿಸಿದಾರರು ಮತ್ತೆ ಪಾಲಿಸಿ ತೆಗೆದುಕೊಳ್ಳುವ ಅರ್ಹತೆ ಕಳೆದುಕೊಳ್ಳುತ್ತಾರೆ

ಗ್ರೇಸ್ ಪೀರಿಯಡ್

ಎಲ್ಲಾ ಪಾಲಿಸಿಗಳು ಗ್ರೇಸ್ ಅವದಿ ಹೊಂದಿರುತ್ತವೆ. ಅದೇ ರೀತಿ ಎಲ್ ಐ ಸಿ ಅನ್ಮೋಲ್ ಜೀವನ್ II ಪಾಲಸೀ ಯೋಜನೆಯು ಕೂಡ ಗ್ರೇಸ್ ಆವದಿಯನ್ನು ಹೊಂದಿದೆ. ಈ ಯೋಜನೆಯಡಿ 30 ದಿವಸಗಳ ಗ್ರೇಸ್ ಅವದಿ ನೀಡಲಾಗುತ್ತದೆ. ಗ್ರೇಸ್ ಆವದಿಯೆಂದರೆ, ಪಾಲಿಸಿದಾರರು ತಮ್ಮ ಕಂತನ್ನು ಪಾವತಿ ಮಾಡಲು ಕಂತು ಪಾವತಿಸಬೇಕಾಗಿದ್ದ ಕೊನೆಯ ತಾರೀಕಿನಿಂದ 30 ದಿವಸಗಳ ಅವದಿಯವರೆಗೂ ನೀಡಲು ಅವಕಾಶವಿರುತ್ತದೆ. ಯಾವುದೇ ಕಾರಣದಿಂದ ಪಾಲಿಸಿದಾರರು ಕೊನೆಯ ದಿನದವರೆಗೂ ಕಂತನ್ನು ಕಟ್ಟಲಾಗದಿದ್ದರೂ ಸಹಾ ಪಾಲಿಸಿಯು 30 ದಿವಸಗಳವರೆಗೂ ಮುಂದುವರೆಯುತ್ತದೆ.

ಈ ಗ್ರೇಸ್ ಅವದಿಯಲ್ಲಿ , ಅಂದರೆ ಪಾವತಿಸಬೇಕಾಗಿದ್ದ ಕೊನೆಯ ತಾರೀಕಿನಿಂದ 30 ದಿನದ ಒಳಗೆ ಪಾಲಿಸಿದಾರರು ಯಾವಾಗ ಬೇಕಾದರೂ ತಮ್ಮ ಕಂತಿನ ಹಣವನ್ನು ಪಾವತಿಸಬಹುದು, ಪಾಲಿಸಿದಾರರು ಈ ಗ್ರೇಸ್ ಅವದಿಯಲ್ಲೂ ಕೂಡ ಕಂತಿನ ಹಣವನ್ನು ಪಾವತಿಸದಿದ್ದಲ್ಲಿ, ಪಾಲಿಸಿಯು ತನ್ನ ಮಾನ್ಯತೆಯನ್ನು ಕಳೆದುಕೊಳ್ಳುತ್ತದೆ. ತದ ನಂತರ, ಅದನ್ನು ಮತ್ತೆ ಪುನರುಜ್ಜೀವನಗೊಳಿಸಬೇಕೆಂದರೆ ಎರಡು ವರ್ಷದವರೆಗೂ ಕಾಲಾವಕಾಶವಿರುತ್ತದೆ. ಆದರೆ, ಕಂಪನಿಯ ನಿಯಮಾನುಸಾರ, ಪಾಲಿಸಿದಾರನು ನೀಡಿರುವ ಅಥವಾ ನೀಡುವ ಸಮಂಜಸವಾದ ಕಾರಣಗಳನ್ನು ಗಣನೆಗೆ ತೆಗೆದುಕೊಂಡು ಪಾಲಿಸಿಯನ್ನು ಪುನರುಜ್ಜೀವನಗೊಳಿಸಬಹುದು.

ಎಲ್ ಐ ಸಿ ಅನ್ಮೋಲ್ ಜೀವನ್ II  - ಸಾಲ ಪಡೆಯಲು ಅರ್ಹತೆ ಇದೆಯೇ?

ಎಲ್ ಐ ಸಿ ಅನ್ಮೋಲ್ ಜೀವನ್ II ಪಾಲಸೀ ಯೋಜನೆಯ ಅಡಿಯಲ್ಲಿ ಸಾಲ ಪಡೆಯಲು ಆಗುವುದಿಲ್ಲ.

ಎಲ್ ಐ ಸಿ ಅನ್ಮೋಲ್ ಜೀವನ್ II  - ಯಾವುದೇ ತರಹದ ರೈಡೆರ್ಸ್ಗಳು ಇದೆಯೇ?

ಎಲ್ ಐ ಸಿ ಅನ್ಮೋಲ್ ಜೀವನ್ II ಪಾಲಸೀ ಯೋಜನೆಯ ಅಡಿಯಲ್ಲಿ ಯಾವುದೇ ರೈಡೆರ್ಸ್ಗಳು ಇರುವುದಿಲ್ಲ.

ಎಲ್ ಐ ಸಿ ಅನ್ಮೋಲ್ ಜೀವನ್ II  ಯೋಜನೆಯು ಪ್ರಪಂಚದಾದ್ಯಂತ ಮನ್ನಣೆ ಹೊಂದಿದೆಯೇ?

ಒಂದು ಬಾರಿ ಪಾಲಿಸಿಯನ್ನು ಒಬ್ಬ ವ್ಯಕ್ತಿಗೆ ನೀಡಿದ ಮೇಲೆ, ಅವನು ಪ್ರಪಂಚದಲ್ಲಿ ಎಲ್ಲಿ ಇದ್ದರೂ ಅವನಿಗೆ ಪಾಲಿಸಿಯಡಿ ನೀಡಬೇಕಾದ ಎಲ್ಲ ಸವಲತ್ತುಗಳಿಗೂ ಅರ್ಹನಾಗಿರುತ್ತಾನೆ. ಅಂದರೆ ಅವನು ಅಥವಾ ಅವಳು, ಕಾರ್ಯನಿಮಿತ್ತವಾಗಲಿ ಅಥವಾ ಬೇರೆ ಕಾರಣಿಗಳಿಗಾಗಲಿ ಯಾವುದೇ ದೇಶದಲ್ಲಿದ್ದರೂ ಪಾಲಿಸಿ ಮಾನ್ಯತೆ ಹೊಂದಿರುತ್ತದೆ.

ಎಲ್ ಐ ಸಿ ಅನ್ಮೋಲ್ ಜೀವನ್ II  ಯೋಜನೆ ಅಡಿ ಕಟ್ಟುವ ಕಂತಿನ ಹಣಕ್ಕೆ ತೆರಿಗೆ ವಿನಾಯತಿ ಇದೆಯೇ?

ಎಲ್ ಐ ಸಿ ಅನ್ಮೋಲ್ ಜೀವನ್ II ಪಾಲಸೀ ಯೋಜನೆಯ ಅಡಿಯಲ್ಲಿ ಕಟ್ಟುವ ಎಲ್ಲ ಕಂತಿನ ಹಣಕ್ಕೂ ಈಗ ಅನ್ವಯ ಆಗುವಂತಹ ತೆರಿಗೆ ವಿನಾಯತಿ ಇರುತ್ತದೆ.

ಎಲ್ ಐ ಸಿ ಅನ್ಮೋಲ್ ಜೀವನ್ II ಯೋಜನೆ – ಒಂದು ಉದಾಹರಣೆ

ಮಿ. ಸಿಂಘಾನಿಯ ರವರು ಎಲ್ ಐ ಸಿ ಅನ್ಮೋಲ್ ಜೀವನ್ II ಪಾಲಸೀಯನ್ನು ಪಡೆದಿರುತ್ತಾರೆ.  ಅದರ ಪ್ರಕಾರ,

ಅವರು ಪಾಲಿಸಿಯನ್ನು ಪಡೆದಾಗ ಅವರ ವಯಸ್ಸು – 35 ವರ್ಷಗಳು

Sum assured – ರೂ 24 ಲಕ್ಷಗಳು

ಪಾಲಿಸಿಯ ಅವದಿ (ಟರ್ಮ್) – 25 ವರ್ಷಗಳು

ಮೇಲೆ ನಮೂದಿಸಿರುವ ವಿವರಗಳ ಪ್ರಕಾರ ಒಂದು ವರ್ಷದ ಕಂತಿನ ಹಣವು ಸುಮಾರು ರೂ 11,784 ಆಗುತ್ತದೆ.  ಅದರ ಜೊತೆಗೆ ಈಗಿನ ಪ್ರಕಾರ ಅನ್ವಯಿಸುವ ತೆರಿಗೆಯನ್ನು ಸೇರಿಸಿದಲ್ಲಿ, ಒಂದು ವರ್ಷದ ಕಂತಿನ ಹಣವು ರೂ 13,905 ಆಗುತ್ತದೆ.

ಮಿ. ಸಿಂಘಾನಿಯ ರವರು ಪಾಲಿಸಿಯನ್ನು ತೆಗೆದುಕೊಂಡ ದಿನದಂದು ಅಥವಾ ಅದಕ್ಕೂ ಮುಂಚೆ ಪ್ರತಿ ವರ್ಷವೂ ಮೇಲೆ ನಮೂದಿಸಿರುವ ಒಂದು ವರ್ಷದ ಕಂತಿನ ಹಣವನ್ನು ಕಟ್ಟಬೇಕಾಗುತ್ತದೆ. ಹಾಗೆಯೇ ಈ ಕಂತಿನ ಹಣವನ್ನು  ಪಾಲಿಸಿಯ ಅವದಿಯಾದ 25 ವರ್ಷಗಳವರೆಗೂ ಕಟ್ಟಿಕೊಂಡು ಹೋಗ ಬೇಕಾಗುತ್ತದೆ.

ಈ ಆವದಿಯಲ್ಲಿ ಅಂದರೆ 25 ವರ್ಷದ ಒಳಗೆ ಮಿ. ಸಿಂಘಾನಿಯ ರವರು ಮರಣ ಹೊಂದಿದಲ್ಲಿ, ಅವರ ನಾಮಿನಿಗೆ ರೂ 24 ಲಕ್ಷಗಳನ್ನು ಎಲ್ ಐ ಸಿಯು ಡೆತ್ ಬೆನಿಫಿಟ್ ಆಗಿ ನೀಡುತ್ತದೆ. ಮೇಲೆ ತಿಳಿಸಿದಂತೆ ಈ ಯೋಜನೆಯಲ್ಲಿ ಮೆಚೂರಿಟೀ ಬೆನಿಫಿಟ್  ಇರುವುದಿಲ್ಲ.

- / 5 ( Total Rating)