ಎಲ್ ಐ ಸಿ  ನ್ಯೂ ಬೀಮ ಬಚತ್ ಪ್ಲಾನ್
 • ಅತ್ಯುತ್ತಮ ಯೋಜನೆಗಳು
 • ಸುಲಭ ಹೋಲಿಕೆ
 • ತಕ್ಷಣದ ಖರೀದಿ
PX step

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಹುಟ್ಟಿದ ದಿನಾಂಕ (ದೊಡ್ಡ ಸದಸ್ಯ)
ಆದಾಯ
| ಲಿಂಗ

1

2

ಫೋನ್ ಸಂಖ್ಯೆ
ಹೆಸರು
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಎಲ್ಲರ ಜೀವನದಲ್ಲೂ, ಪ್ರತಿಯೊಬ್ಬನೂ ತಾನು ಶ್ರೀಮಂತನಾಗಬೇಕೆಂದು ಬಯಸುತ್ತಾನೆ. ಹಾಗೆ ಬಯಸುವುದರಲ್ಲಿ ತಪ್ಪೇನಿಲ್ಲ. ಹಾಗೆ ಅಕಸ್ಮಾತ್  ಲಾಟರಿ ಮೂಲಕವಾಗಲಿ ಅಥವಾ ಬೇರೆ ಯಾವುದೋ ಜಾಕ್ಪಾಟ್ ಮೂಲಕವಾಗಲಿ ಪಡೆದು ತಕ್ಷಣವೇ ಶ್ರೀಮಂತನಾದಲ್ಲಿ, ಒಂದು ಪೊರ್ಷೆ ಕಾರನ್ನು ಹೊಂದುವ ಇಚ್ಚೆ ಬರುವುದು ಸಹಜ. ಆದರೆ ಪೊರ್ಷೆ ಕಾರು ಇಲ್ಲಿನ ರಸ್ತೆ ಮತ್ತು ಟ್ರಾಫಿಕ್ ನಲ್ಲಿ ತನ್ನ ನಿಜವಾದ ಸಾಮರ್ಥ್ಯವನ್ನು ತೋರುವಿಕೆಯಲ್ಲಿ ವಿಫಲ ಆಗುತ್ತದೆ ಎಂದು ತಿಳಿದೂ ಆಸೆ ಪಡುತ್ತಾನೆ. ಹಾಗೆಯೇ ಒಂದು ಸ್ವಂತ ಭವ್ಯವಾದ ಬಂಗಲೆಯನ್ನು  (ಅದು MTV cribs ನಲ್ಲಿ ವಿಜೇತ ವಾಗುವಂತಹ) ಹೊಂದಲು ಸಹಜವಾಗಿ ಆಸೆ ಇರಬಹುದು.

ಆದರೆ, ಈ ತರಹದ ಒಂದು ಹಗಲುಗನಸು ಇಟ್ಟುಕೊಳ್ಳುವುದು ಬಿಟ್ಟು, ಈಗಿನ ಮತ್ತು ನೀವು ಬದುಕು ಸಾಗಿಸುತ್ತಿರುವ ಈ ಪ್ರಪಂಚದಲ್ಲಿನ ಸುತ್ತು ಮುತ್ತಲಿನ ಆಗು ಹೋಗುಗಳ ಬಗ್ಗೆ ಚಿಂತಿಸುವುದು ಒಳ್ಳೆಯದಲ್ಲವೇ? ಉದಾಹರಣೆಗೆ, ನಿಮ್ಮನ್ನು ಪ್ರೀತಿ ಮಾಡುವ ತಾಯಿಯ ಜೊತೆಯಲ್ಲಿ ಕುಳಿತು ಕಾಲ ಕಳೆಯುವುದು ಅಥವಾ ನಿಮ್ಮ ಸಹೋದರನ ಮುಂದಿನ ಭವಿಷ್ಯದ ಬಗ್ಗೆ ಗಮನ ಹರಿಸುವುದು ಅಥವಾ ನಿಮ್ಮ ಕುಟುಂಬದ ಹಾಗೂ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸುವುದು ಮುಂತಾದವುಗಳನ್ನು ಮಾಡಬಹುದಲ್ಲವೇ.

ಈ ರೀತಿ ಯೋಚನೆ ಮಾಡಿ, ತಮ್ಮ ರಕ್ಷಣೆಗೆ ಹಾಗೂ ಉಳಿತಾಯಕ್ಕೆ ಆದ್ಯತೆ ಕೊಟ್ಟು ಬೇಡದ ದುಂದು ವೆಚ್ಚ ಮಾಡದೆ ಇರುವವರಿಗಾಗಿ ಇರುವಂತಹ ಒಂದು ಪ್ಲಾನ್,  ಎಲ್ ಐ ಸಿ ನ್ಯೂ ಬೀಮ ಬಚತ್ ಪ್ಲಾನ್ ಒಂದು ಸಿಂಗಲ್ ಪ್ರೀಮಿಯಂ ಕಂಪನಿಯ ಲಾಭ ಹೂಡಿಕೆಯಲ್ಲಿ ಪಾಲುಗೊಳ್ಳುವಂತಹ ಎಂಡೋಮೆಂಟ್ ಪಾಲಿಸಿ. ಅಂದರೆ, ಇದು ಒಂದು ಸಾಂಪ್ರದಾಯಿಕವಾದ ಸಮಯೋಚಿತವಾಗಿ ಹಣ ಹಿಂದಕ್ಕೆ ನೀಡುವ  ಯೋಜನೆ. ಹಾಗೂ, ಪಾಲಿಸಿಯ ಅವದಿ ಮುಗಿದ ನಂತರ ಪಾಲಿಸಿದಾರನಿಗೆ ಉಳಿದಿರುವ ಪ್ರೀಮಿಯಂ ಮೊತ್ತ ಮತ್ತು ಅದರ ಜೊತೆಗೆ ಲಾಯಲ್ಟಿ ಬೇನೆಫಿಟ್ ಮೊತ್ತವನ್ನು ಸೇರಿಸಿ ನೀಡಲಾಗುವ ಪ್ಲಾನ್ ಆಗಿರುತ್ತದೆ. ಅದರಂತೆ, ಪಾಲಿಸಿದಾರನ ಮರಣವು ಪಾಲಿಸಿಯ ಅವದಿ ಒಳಗೆ ಆದಲ್ಲಿ, ಅವನ ಕುಟುಂಬಾಕ್ಕೆ ಆರ್ಥಿಕ ಸಂಕಷ್ಟ ಪರಿಸ್ಥಿತಿ ಎದುರಾಗದೇ ಇರುವ ರೀತಿಯಲ್ಲಿ ಆದಷ್ಟು ಸಹಾಯ ಮಾಡುವಂತಹ ಪ್ಲಾನ್.  

ಎಲ್ ಐ ಸಿ ನ್ಯೂ ಬೀಮ ಬಚತ್ ಪ್ಲಾನ್ – ಎಲಿಜಿಬಿಲಿಟಿ ಕ್ರೈಟೆರಿಯ(ಶರತ್ತುಗಳು)

ಕೆಳ ಕಂಡ ಶರತ್ತುಗಳ ಅನ್ವಯ ಎಲ್ ಐ ಸಿ ನ್ಯೂ ಬೀಮ ಬಚತ್ ಪಾಲಿಸಿಯನ್ನು ಪಡೆಯಬಹುದು.        

ಎಲ್ ಈ ಸಿ ನ್ಯೂ ಬೀಮ ಬಚತ್ ಯೋಜನೆ – ಅರ್ಹತೆ ಹೊಂದಲು ಬೇಕಾಗುವ ವಿಷಯಗಳು

 

ಕನಿಷ್ಠ (ಮಿನಿಮಮ್)

ಗರಿಷ್ಠ (ಮ್ಯಾಕ್ಸಿಮಮ್)

ಟರ್ಮ್(ಅವದಿ)

9 ವರ್ಷಗಳು ಅಥವಾ 12 ವರ್ಷಗಳು ಅಥವಾ 15 ವರ್ಷಗಳು

ವಯಸ್ಸು

15 ವರ್ಷಗಳು

9 ವರ್ಷಗಳ ಆವದಿ

12 ವರ್ಷಗಳ ಅವದಿ

15 ವರ್ಷಗಳ ಅವದಿ

   

66 ವರ್ಷಗಳು(ಹತ್ತಿರದ ಹುಟ್ಟು ಹಬ್ಬಕ್ಕೆ)

63

ವರ್ಷಗಳು(ಹತ್ತಿರದ ಹುಟ್ಟು ಹಬ್ಬಕ್ಕೆ)

60 ವರ್ಷಗಳು(ಹತ್ತಿರದ ಹುಟ್ಟು ಹಬ್ಬಕ್ಕೆ)


 ಸಮ್ ಅಶ್ಶುರ್ಡ್ (ಖಚಿತ ಮೊತ್ತ)

9 ವರ್ಷಗಳ ಅವದಿ

12 ವರ್ಷಗಳ ಅವದಿ

15 ವರ್ಷಗಳ ಅವದಿ  ಯಾವುದೇ ಮಿತಿ ಇಲ್ಲ

ರೂ 35,000

ರೂ 50,000

ರೂ 70,000

 ಎಲ್ ಐ ಸಿ ನ್ಯೂ ಬೀಮ ಬಚತ್ ಪ್ಲಾನ್ – ಕೆಲವು ನಿಯಮಗಳು

ಎಲ್ ಐ ಸಿ ನ್ಯೂ ಬೀಮ ಬಚತ್ ಪಾಲಿಸಿಯಲ್ಲಿ ಈ ಕೆಳ ಕಂಡ ನಿಯಮಗಳು ಇರುತ್ತವೆ.

 1. ಎಲ್ ಐ ಸಿ ನ್ಯೂ ಬೀಮ ಬಚತ್ ಪಾಲಿಸಿಯು ಪಾಲಿಸಿದಾರನ ಗರಿಷ್ಠ ವಯಸ್ಸು 75 ರ ವರೆಗೂ ಮೆಚೂರಿಟೀ ಬೆನಿಫಿಟ್ ಬರುವ ರೀತಿಯಲ್ಲಿ ಪಡೆದು ಕೊಳ್ಳಬಹುದು. ಅಂದರೆ, ಯಾವುದೇ ಪಾಲಿಸಿದಾರನು ಅವನ ವಯಸ್ಸು 66 ವರ್ಷಗಳು ಆಗುವವರೆಗೂ ಈ ಪಾಲಿಸಿಯನ್ನು ಕೊಳ್ಳಲು ಅರ್ಹನಾಗಿರುತ್ತಾನೆ, ಅಂದರೆ ಅಂತಹ ಪಾಲಿಸಿಗೆ 9 ವರ್ಷ ಅವದಿಯ ಪಾಲಿಸಿಯು ಲಭ್ಯವಿದ್ದು, ಪಾಲಿಸಿದಾರನ 75 ನೇ ವಯಸ್ಸಿಗೆ  ಮೆಚೂರಿಟೀ ಆಗುತ್ತದೆ.
 2. ಪಾಲಿಸಿದಾರನ  ವಯಸ್ಸು ಮತ್ತು ಅನುಕೂಲಕ್ಕೆ ತಕ್ಕಂತೆ, ಈ ಪಾಲಿಸಿಯ ಅಡಿ 3 ರೀತಿಯ ಪಾಲಿಸಿ ಟರ್ಮ್ ಲಭ್ಯವಿದ್ದು, ಅದರಲ್ಲಿ, ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಅವೆಂದರೆ, 9 ವರ್ಷಗಳು, 12 ವರ್ಷಗಳು ಮತ್ತು 15 ವರ್ಷಗಳು. ಇದರಲ್ಲಿ ಒಂದನ್ನು, ಪಾಲಿಸಿದಾರನು, ಪಾಲಿಸಿ ಪಡೆದುಕೊಳ್ಳುವ ಸಮಯದಲ್ಲಿ ಆಯ್ಕೆ ಮಾಡಿಕೊಳ್ಳಬೇಕು.
 3. ಕನಿಷ್ಠ ಸಮ್ ಅಶ್ಶುರ್ಡ್ ಮೊತ್ತವು ಪಾಲಿಸಿಯ ಟರ್ಮ್ ನ ಪ್ರಕಾರ ಬದಲಾವಣೆ ಅಗುತ್ತದೆ. 9 ವರ್ಷದ ಟರ್ಮ್ ನ ಪಾಲಿಸಿಗೆ ಕನಿಷ್ಠ ಸಮ್ ಅಶ್ಶುರ್ಡ್ ಮೊತ್ತವು ರೂ 35,000 ಇರುತ್ತದೆ. 12 ವರ್ಷದ ಟರ್ಮ್ ನ ಪಾಲಿಸಿಗೆ ಕನಿಷ್ಠ ಸಮ್ ಅಶ್ಶುರ್ಡ್ ಮೊತ್ತವು ರೂ 50,000 ಇರುತ್ತದೆ. ಅದೇ ರೀತಿ 15 ವರ್ಷದ ಟರ್ಮ್ ನ ಪಾಲಿಸಿಗೆ ಕನಿಷ್ಠ ಸಮ್ ಅಶ್ಶುರ್ಡ್ ಮೊತ್ತವು ರೂ 70,000 ಇರುತ್ತದೆ.
 4. ಪಾಲಿಸಿದಾರನು ಸಮ್ ಅಶ್ಶುರ್ಡ್ ಮೊತ್ತವನ್ನು ಆಯ್ಕೆ ಮಾಡುವಾಗ, ಅದು ರೂ 5000 ದ ಮಲ್ಯಿಪಲ್ಸ್ ನಲ್ಲಿ ಇರುವ ಹಾಗೆ ಆಯ್ಕೆ ಮಾಡಬೇಕು. ಅಂದರೆ ಉದಾಹರಣೆಗೆ, 9 ವರ್ಷದ ಪಾಲಿಸಿಯನ್ನು ಕೊಂಡಲ್ಲಿ, ರೂ 35,000 ದ ಮೇಲ್ಪಟ್ಟು ಸಮ್ ಅಶ್ಶುರ್ಡ್ ಮೊತ್ತವು ರೂ 40,000 ಅಥವಾ ರೂ 45,000 ಈ ರೀತಿ ಇರಬೇಕಾಗುತ್ತದೆ.
 5. ಒಂದು ಅತ್ಯಂತ ವಿಶೇಷವೆಂದರೆ, ಎಲ್ ಐ ಸಿ ನ್ಯೂ ಬೀಮ ಬಚತ್ ಅಡಿಯಲ್ಲಿ, ನೀವು ನಿಮ್ಮ ಸಮ್ ಅಶ್ಶುರ್ಡ್ ಮೊತ್ತಕ್ಕೆ ಪ್ರೀಮಿಯಂ ಅನ್ನು ಕೇವಲ ಒಂದು ಬಾರಿ ಮಾತ್ರ ನೀಡುವುದು.

ಎಲ್ ಐ ಸಿ ನ್ಯೂ ಬೀಮ ಬಚತ್ ಪ್ಲಾನ್ – ಮಾದರಿ ಪ್ರೀಮಿಯಂ ಮೊತ್ತ

ಈ ಯೋಜನೆಯ ಅಡಿಯಲ್ಲಿ, ಸಮ್ ಅಶ್ಶುರ್ಡ್ ನ ಪ್ರತಿ ರೂ 1000 ಕ್ಕೆ ಬೀಳಬಹುದಾದ ಪ್ರೀಮಿಯಂ ಮೊತ್ತವು ಕೆಳ ಕಂಡಂತಿರುತ್ತದೆ.

ಸಿಂಗಲ್ ಪ್ರೀಮಿಯಂ (ಪ್ರತಿ ರೂ 1000 ಕ್ಕೆ )

ವಯಸ್ಸು (ಹತ್ತಿರದ ಹುಟ್ಟು ಹಬ್ಬಕ್ಕೆ)

ಪಾಲಿಸಿಯ ಅವದಿ (ಟರ್ಮ್)

 

9 ವರ್ಷದ ಪಾಲಿಸಿಗೆ

12 ವರ್ಷದ ಪಾಲಿಸಿಗೆ

15 ವರ್ಷದ ಪಾಲಿಸಿಗೆ

15

767.95

771.00

771.55

25

768.95

772.00

772.70

35

771.70

775.35

776.80

45

782.65

787.15

789.25

55

803.80

808.10

810.70

65

836.85

-

-

ಎಲ್ ಐ ಸಿ ನ್ಯೂ ಬೀಮ ಬಚತ್ ಪ್ಲಾನ್ – ಮುಖ್ಯ ವಿಷಯಗಳು

ಎಲ್ಲ ವಿಮ ಯೋಜನೆಗಳು ಒಂದೇ ರೀತಿ ಇರುವುದಿಲ್ಲ. ಒಂದೊಂದು ಯೋಜನೆಗಳು ಒಂದೊಂದು  ರೀತಿಯಲ್ಲಿ ಪಾಲಿಸಿದಾರನಿಗೆ ಒಳಿತನ್ನು ಮಾಡುವ ನಿಟ್ಟಿನಲ್ಲಿ ಯೋಜಿಸಲಾಗಿರುತ್ತದೆ. ನಿಮಗೆ ಈ ಪಾಲಿಸಿಯು ಏನನ್ನು ನೀಡುವುದು ಎಂಬ ಬಗ್ಗೆ ಕುತೂಹಲ ಇದ್ದಲ್ಲಿ, ಈ ಕೆಳ ಕಂಡ ವಿಷಯಗಳನ್ನು ಗಮನಿಸುವುದುಈ ಪಾಲಿಸಿಯ ವೈಷಿಷ್ಟ್ಯಗಳನ್ನು ಕೆಳಗೆ ನೀಡಲಾಗಿದೆ.

 1. ಇದು ಒಂದು ಸಿಂಗಲ್ ಪ್ರೀಮಿಯಂ ನೀಡುವ ಯೋಜನೆ ಆಗಿದ್ದು, ಇದರಲ್ಲಿ ಸಮಯೋಚಿತವಾಗಿ ಅಂದರೆ ಪಾಲಿಸಿ ನಿಯಮಾನುಸಾರ, ಇಷ್ಟು ವರ್ಷಕ್ಕೊಮ್ಮೆ ಎಂದು ನಿಗದಿಗೊಳಿಸಿರುವ ಕಾಲದಲ್ಲಿ, ಪಾಲಿಸಿದಾರನಿಗೆ ಒಂದು ಖಚಿತ ಮೊತ್ತವು ದೊರಕುತ್ತದೆ. ಇದು ಕ್ಯಾಶ್ ಬ್ಯಾಕ್ ಪ್ಲಾನ್ ಆಗಿರುತ್ತದೆ. ಪಾಲಿಸಿದಾರನು ನೀಡಿರುವ ಪ್ರೀಮಿಯಂ ಮೊತ್ತವನ್ನು, ಎಲ್ ಐ ಸೀ ಯು ಲಾಭದಾಯಕ ರೀತಿಯಲ್ಲಿ ಹೂಡಿಕೆ ಮಾಡಿ, ಅಕಸ್ಮಾತ್ ಪಾಲಿಸಿದಾರನ ಮರಣವಾದಲ್ಲಿ, ಆತನ ನಾಮಿನಿಗೆ ಡೆತ್ ಬೆನಿಫಿಟ್ ರೂಪದಲ್ಲಿ ಮೊತ್ತವನ್ನು ನೀಡುತ್ತದೆ. ಹಾಗೂ, ಆದರ ಜೊತೆಗೆ ಲಾಯಲ್ಟಿ ಮೊತ್ತವನ್ನು ಕೂಡ ನೀಡಲಾಗುವುದು.
 2. ಅದೇ ರೀತಿ, ಪಾಲಿಸಿದಾರನು, ಪಾಲಿಸಿಯ ಅವದಿ ಮುಗಿಯುವವರೆಗೂ ಜೀವಿತವಿದ್ದಲ್ಲಿ, ಲಾಯಲ್ಟಿ ಅಡಿಷನ್ ಮೊತ್ತವನ್ನು ಪಾಲಿಸಿ ಮೆಚೂರಿಟೀ ಆದಾಗ ಮೆಚೂರಿಟೀ ಮೊತ್ತದ ಜೊತೆಗೆ ಸೇರಿಸಿ ನೀಡಲಾಗುವುದು.
 3. ಸಮ್ ಅಶ್ಶುರ್ಡ್ ಮೊತ್ತದ 15 % ಮೊತ್ತವನ್ನು, ಪಾಲಿಸಿಯು 3 ವರ್ಷ ಕಳೆದ ನಂತರ ಸರ್ವೈವಲ್ ಬೆನಿಫಿಟ್ ಎಂದು ನೀಡಲಾಗುವುದು, (ಮುಂದೆ ಸವಿಸ್ತಾರವಾಗಿ ವಿವರಿಸಲಾಗಿದೆ )
 4. ಸಮ್ ಅಶ್ಶುರ್ಡ್ ಮೊತ್ತವು ಹೆಚ್ಚಿಗೆ ಇದ್ದಲ್ಲಿ ಅದಕ್ಕೆ ಕೆಲವು  ರಿಯಾಯತಿ ದೊರೆಯುತ್ತದೆ.
 5. ಸರಂಡರ್ ಬೆನಿಫಿಟ್:

ಪಾಲಿಸಿದಾರನು, ಪಾಲಿಸಿಯನ್ನು ಕೊಂಡ 1 ವರ್ಷದಲ್ಲಿ ಅದನ್ನು ಸರಂಡರ್ ಮಾಡಿದಲ್ಲ್ಕಿ, ಅವನು ನೀಡಿರುವ ಪ್ರೀಮಿಯಂ ಮೊತ್ತದಲ್ಲಿ 70 % ಮೊತ್ತವನ್ನು ನೀಡಲಾಗುವುದು.

ಅದೇ ಪಾಲಿಸಿದಾರನು 2 ನೇ ವರ್ಷದ ನಂತರ, ಪಾಲಿಸಿಯನ್ನು ಸರಂಡರ್ ಮಾಡಿದಲ್ಲಿ, ಪ್ರೀಮಿಯಂ ಮೊತ್ತದ 90 % ಮೊತ್ತವನ್ನು ನೀಡಲಾಗುವುದು.  

 1. ಈ ಯೋಜನೆಯಲ್ಲಿ, ಫ್ರೀ ಲುಕ್ ಪೀರಿಯಡ್ ಇದ್ದು, ಅದರ ಪ್ರಕಾರ, ಪಾಲಿಸಿದಾರನು, ಪಾಲಿಸಿ ದಾಖಲೆ ಅವನ ಕೈ ಸೇರಿದ 15 ದಿವಸದ ಒಳಗೆ, ನಿಯಮ ಮತ್ತು ಷರತ್ತುಗಳು ಒಪ್ಪಿಗೆ ಆಗದಿದ್ದಲ್ಲಿ,  ಎಲ್ ಐ ಸಿ ನ್ಯೂ ಬೀಮ ಬಚತ್ ಪಾಲಿಸಿಯನ್ನು ಹಿಂದಿರುಗಿಸುವ ಅವಕಾಶ ಇರುತ್ತದೆ.

ಎಲ್ ಐ ಸಿ ನ್ಯೂ ಬೀಮ ಬಚತ್ ಪ್ಲಾನ್ – ಕೆಲವು ವೈಶಿಷ್ಟ್ಯಗಳು

ಎಲ್ ಐ ಸಿ ಯ ನ್ಯೂ ಬೀಮ ಬಚತ್ ಯೋಜನೆಯ ವೈಶಿಷ್ಟ್ಯಗಳು ಈ ಕೆಳ ಕಂಡಂತಿವೆ.

ಸಮ್ ಅಶ್ಶುರ್ಡ್ ಮೊತ್ತದ ಮೇಲೆ ಸಿಗುವ ರಿಯಾಯತಿ

ಮೇಲೆ ತಿಳಿಸಿರುವಂತೆ, ಸಮ್ ಅಶ್ಶುರ್ಡ್ ಮೊತ್ತವು ಹೆಚ್ಚಿದ್ದಷ್ಟೂ, ಪಾಲಿಸಿದಾರನಿಗೆ ಪ್ರೀಮಿಯಂನಲ್ಲಿ ರಿಯಾಯತಿ ಕೆಳ ಕಂಡ ರೀತಿಯಲ್ಲಿ ದೊರೆಯುತ್ತದೆ.

ಹೆಚ್ಚು ಸಮ್ ಅಶ್ಶುರ್ಡ್ ಮೊತ್ತದ ಮೇಲಿನ ರಿಯಾಯತಿ (ಪರ್ಸೆಂಟೆಜ್ ಲೆಕ್ಕದಲ್ಲಿ )

ಪಾಲಿಸಿಯ ಅವದಿ (ಟರ್ಮ್)

ಸಮ್ ಅಶ್ಶುರ್ಡ್ ಮೊತ್ತ

ಪರ್ಸೆಂಟೆಜ್ ರಿಯಾಯತಿ9 ವರ್ಷಗಳು

ರೂ 75,000 ಕ್ಕಿಂತ ಕಡಿಮೆ ಇದ್ದಲ್ಲಿ

ರಿಯಾಯತಿ ಇರುವುದಿಲ್ಲ

ರೂ 75,000 ದಿಂದ ರೂ 1,50,000 ದವರೆಗೆ


6%

ರೂ 1,50,000 ಮೇಲ್ಪಟ್ಟು

8%


12 ವರ್ಷಗಳು

ರೂ 1,00,000 ಕ್ಕಿಂತ ಕಡಿಮೆ ಇದ್ದಲ್ಲಿ

ರಿಯಾಯತಿ ಇರುವುದಿಲ್ಲ

ರೂ 1,00,000 ದಿಂದ ರೂ 2,00,000 ದವರೆಗೆ


4%

ರೂ 2,00,000 ಮೇಲ್ಪಟ್ಟು

6%


15 ವರ್ಷಗಳು

ರೂ 1,50,000 ಕ್ಕಿಂತ ಕಡಿಮೆ ಇದ್ದಲ್ಲಿ

ರಿಯಾಯತಿ ಇರುವುದಿಲ್ಲ

ರೂ 1,50,000 ದಿಂದ ರೂ 3,00,000 ದವರೆಗೆ


3%

ರೂ 3,00,000 ಮೇಲ್ಪಟ್ಟು

5%

ಸಾಲ ಸೌಲಭ್ಯ

ನಿಯಮಾನುಸಾರ, ಈ ಪ್ಲಾನ್ ಅಡಿಯಲ್ಲಿ, ಪಾಲಿಸಿಗೆ ಸಾಲ ಸೌಲಭ್ಯ ಇರುತ್ತದೆ. ಅದರ ಪ್ರಕಾರ, ಪಾಲಿಸಿಯು 1 ವರ್ಷವನ್ನು ಮುಗಿಸಿದಲ್ಲಿ, ಸಾಲ ಪಡೆಯಬಹುದಾದ ಅರ್ಹತೆ ಹೊಂದುತ್ತದೆ. ಸಾಲದ ಮೊತ್ತವು, ಸಾಲವನ್ನು ತೆಗೆದುಕೊಳ್ಳುವ ದಿವಸದಂದು ಇದ್ದ ಪಾಲಿಸಿಯ ಸರಂಡರ್ ಮೌಲ್ಯಕ್ಕೆ 60 % ಆಗಿರುತ್ತದೆ.

ಸರಂಡರ್ ಮೌಲ್ಯ

ಪಾಲಿಸಿದಾರನು ತನಗೆ  ಸಿಗಬಹುದಾದ ದೀರ್ಘ ಕಾಲದ ಉಪಯೋಗವನ್ನು ಗಮನದಲ್ಲಿ ಇಟ್ಟುಕೊಂಡು ಯಾವಾಗಲೂ ಒಂದು ವಿಮಾ ಯೋಜನೆಯನ್ನುಕೊಳ್ಳಲು ಬಯಸುತ್ತಾನೆ. ಆದರೂ ಕೂಡ, ಪಾಲಿಸಿದಾರನಿಗೆ ಅವನಿಗೆ ಸರಿಯಾದ ಸಮಯಕ್ಕೆ ಬೇಕಾಗಬಹುದಾದ ಹಣದ ಸಹಾಯವನ್ನು ನೀಡಲು, ಈ ಯೋಜನೆಯ ಅಡಿ ಪಾಲಿಸಿಯನ್ನು ಆವದಿಗೆ ಮೊದಲು ಸರಂಡರ್ ಮಾಡುವ ಅವಕಾಶ ಇರುತ್ತದೆ. ಅದರ ಪ್ರಕಾರ, ಪಾಲಿಸಿದಾರನು ಪಾಲಿಸಿಯನ್ನು ಸರಂಡರ್ ಮಾಡಿದಲ್ಲಿ ಖಚಿತವಾದ ಸರಂಡರ್ ಮೊತ್ತವನ್ನು ನೀಡಲಾಗುವುದು.

ಗ್ಯಾರಂಟಿಡ್ ಸರಂಡರ್ ಮೌಲ್ಯವು ಈ ಕೆಳಗಿನದಾಗಿರುತ್ತದೆ.

 • ಮೊದಲ ವರ್ಷ ಮುಗಿದಿದ್ದಲ್ಲಿ, ಪಾಲಿಸಿದಾರನಿಗೆ ಅವನು ನೀಡಿರುವ ಸಿಂಗಲ್ ಪ್ರೀಮಿಯಂ ಮೊತ್ತದ 70 % ಮೊತ್ತವನ್ನು ನೀಡಲಾಗುವುದು, ಇದರಲ್ಲಿ ಅನ್ವಯವಾಗುವ ಎಲ್ಲ ರೀತಿಯ ತೆರಿಗೆಗಳು ಹಾಗೂ ಹೆಚ್ಚುವರಿ ಪ್ರೀಮಿಯಂ ಇದ್ದಲ್ಲಿ ಇವುಗಳನ್ನು ಕಡಿತಗೊಳಿಸಿ ನೀಡಲಾಗುವುದು.
 • ಎರಡನೆಯ ವರ್ಷದ ನಂತರ ಪಾಲಿಸಿಯನ್ನು ಸರಂಡರ್ ಮಾಡಿದಲ್ಲಿ, ಪಾಲಿಸಿದಾರನು ನೀಡಿರುವ  ಸಿಂಗಲ್ ಪ್ರೀಮಿಯಂ ಮೊತ್ತದ 90 % ಮೊತ್ತವನ್ನು ನೀಡಲಾಗುವುದು. ಇದರಲ್ಲಿ ಅನ್ವಯವಾಗುವ ಎಲ್ಲ ರೀತಿಯ ತೆರಿಗೆಗಳು ಹಾಗೂ ಹೆಚ್ಚುವರಿ ಪ್ರೀಮಿಯಂ ಇದ್ದಲ್ಲಿ ಇವುಗಳನ್ನು ಕಡಿತಗೊಳಿಸಿ ನೀಡಲಾಗುವುದು

ಎಲ್ ಐ ಸಿ ಯು ಪಾಲಿಸಿಯ ಸರಂಡರ್  ಆದಾಗ ಅದಕ್ಕೆ ಅನ್ವಯವಾಗುವ ವಿಶೇಷ ಸರಂಡರ್ ಮೌಲ್ಯವನ್ನು, ಸರಂಡರ್ ಮೌಲ್ಯಕ್ಕಿಂತ ಹೆಚ್ಚಿದ್ದಲ್ಲಿ ಪಾಲಿಸಿದಾರನಿಗೆ ನೀಡುತ್ತದೆ.

ತೆರಿಗೆಗಳು

ಈ ಪಾಲಿಸಿಗೆ ತೆರಿಗೆಗಳು (ಸರ್ವಿಸ್ ಟಾಕ್ಸ್ ಸೇರಿ) ನಿಯಮಾನುಸಾರ  ಅನ್ವಯವಾಗುವ ತೆರಿಗೆಗಳಿಗೆ ಒಳ ಪಟ್ಟಿರುತ್ತದೆ. (ಟಾಕ್ಸ್ ಲಾ ಪ್ರಕಾರ). ಇವು ಸಮಯೋಚಿತವಾಗಿ ಬದಲಾವಣೆ ಹೊಂದುತ್ತಲಿದ್ದು, ಆದರ ರೀತ್ಯ ಅನ್ವಯವಾಗುತ್ತದೆ. ಪಾಲಿಸಿದಾರನು, ತಾನು ನೀಡುವ ಸಿಂಗಲ್ ಪ್ರೀಮಿಯಂ ಮೊತ್ತಕ್ಕೆ, ಆ ದಿವಸ ತಗಲುವ ತೆರಿಗೆಯನ್ನು ಪಾವತಿಸಬೇಕಾಗುತ್ತದೆ (ಹೆಚ್ಚುವರಿ ಪ್ರೀಮಿಯಂ ಗೂ ಸೇರಿಸಿ -ಅದು ಇದ್ದಲ್ಲಿ). ಪಾಲಿಸಿದಾರನು ನೀಡಿರುವ ತೆರಿಗೆ ಅಂಶವನ್ನು, ಪಾಲಿಸಿಗೆ ನೀಡಲಾಗುವ ಯಾವುದೇ ತರಹದ ಬೆನಿಫಿಟ್ ಗಳಿಗೆ ಸೇರಿಸಲಾಗುವುದಿಲ್ಲ.  

ಕೂಲಿಂಗ್ ಪೀರಿಯಡ್

ಈ ಯೋಜನೆಯಲ್ಲಿ ಪಾಲಿಸಿದಾರನಿಗೆ ಕೂಲಿಂಗ್ ಪೀರಿಯಡ್ ಲಭ್ಯವಿರುತ್ತದೆ. ಅದರ ಪ್ರಕಾರ, ಅವನಿಗೆ ಯಾವುದೇ ನಿಯಮ ಅಥವಾ ನಿಬಂದನೆಗಳು ಇಷ್ಟ ಆಗದಿದ್ದಲ್ಲಿ, ಪಾಲಿಸಿಯನ್ನು 15 ದಿನದ ಒಳಗೆ ಎಲ್ ಐ ಸಿ ಗೆ ಹಿಂದಿರುಗಿಸಬಹುದು. ಆದರೆ ಅದಕ್ಕೆ ಸೂಕ್ತ ಕಾರಣವನ್ನು ನೀಡಬೇಕಾಗುತ್ತದೆ.

ಎಲ್ ಐ ಸಿ ನ್ಯೂ ಬೀಮ ಬಚತ್ ಪ್ಲಾನ್- ಬೆನೆಫಿಟ್ಸ್

ಎಲ್ ಐ ಸಿ ಯ ನ್ಯೂ ಬೀಮ ಬಚತ್ ಯೋಜನೆಯು ಒಂದು ಲಾಭದಲ್ಲಿ ಬಾಗಿ ಆಗುವ ನಾನ್-ಲಿಂಕ್ಡ್ plan ಆಗಿದ್ದು, ಇದು ಪಾಲಿಸಿದಾರನಿಗೆ ರಕ್ಷಣೆಯ ಜೊತೆಗೆ ಉಳಿತಾಯವನ್ನು ಕೂಡ ನೀಡುತ್ತದೆ. ಇದು ಒಂದು ಮನೀ ಬ್ಯಾಕ್ ಪಾಲಿಸಿ ಆಗಿದ್ದು, ಪಾಲಿಸಿಯ ಆವದಿಯಲ್ಲಿ ಪಾಲಿಸಿದಾರನ ಆಕಸ್ಮಿಕ ಮರಣವಾದಲ್ಲಿ, ಹಣದ ರಕ್ಷಣೆ ಹಾಗೂ ಅದರ ಜೊತೆಗೆ ನಿಗದಿತ ಅವದಿಯಲ್ಲಿ ಸರ್ವೈವಲ್ ಬೇನೆಫಿಟ್ಸ್ ಗಳನ್ನು ಕೂಡ ನೀಡುತ್ತದೆ. ಪಾಲಿಸಿಯು ಮೆಚೂರಿಟೀ ಹೊಂದಿದ ಪಕ್ಷದಲ್ಲಿ ಪಾಲಿಸಿದಾರನು ನೀಡಿರುವ ಸಿಂಗಲ್ ಪ್ರೀಮಿಯಂ ಮೊತ್ತಕ್ಕೆ ಲಾಯಲ್ಟಿ ಅಡಿಷನ್ ಮೊತ್ತವನ್ನು ಸೇರಿಸಿ ನೀಡಲಾಗುವುದು.ಹಾಗೂ ಪಾಲಿಸಿಯ ಆವಡಿಯ ಮದ್ಯದಲ್ಲಿ ಕಾಲ ಕಾಲಕ್ಕೆ (ನಿಗದಿಪಡಿಸಿರುವಂತೆ) ಒಂದು ಖಚಿತವಾದ ಮೊತ್ತವನ್ನು ನೀಡುವುದು.  

ಡೆತ್ ಬೆನಿಫಿಟ್

ಪಾಲಿಸಿಯ ಮೊದಲ 5 ವರ್ಷಗಳಲ್ಲಿ ಪಾಲಿಸಿದಾರನು ಮರಣ ಹೊಂದಿದಲ್ಲಿ – ಸಮ್ ಅಶ್ಶುರ್ಡ್ ಮೊತ್ತವನ್ನು ನೀಡಲಾಗುವುದು

ಪಾಲಿಸಿ ಪಡೆದು 5 ವರ್ಷದ ನಂತರ ಪಾಲಿಸಿದಾರನು ಮರಣ ಹೊಂದಿದಲ್ಲಿ – ಸಮ್ ಅಶ್ಶುರ್ಡ್ ಮೊತ್ತದ ಜೊತೆಗೆ ಲಾಯಲ್ಟಿ ಅಡಿಷನ್ ಮೊತ್ತವು ಇದ್ದಲ್ಲಿ ಅದನ್ನು ಸೇರಿಸಿ ನೀಡಲಾಗುವುದು.

ಸರ್ವೈವಲ್ ಬೆನಿಫಿಟ್

ಸರ್ವೈವಲ್ ಬೆನಿಫಿಟ್ ಮೊತ್ತವು ಈ ಪಾಲಿಸಿಗೂ ಕೂಡ ಅನ್ವಯಿಸುತ್ತದೆ. ಅದರ ಪ್ರಕಾರ, ಪಾಲಿಸಿದಾರನು ಪೂರಾ ಅವದಿಯನ್ನು ಮುಗಿಸಿದಲ್ಲಿ, ಈ ಕೆಳಗೆ ನಮೂದಿಸಿರುವಂತೆ ಸರ್ವೈವಲ್ ಬೆನಿಫಿಟ್ ಮೊತ್ತವು ಪಾಲಿಸಿದಾರನಿಗೆ ಲಭ್ಯವಾಗುತ್ತದೆ.

ಪಾಲಿಸಿಯ ಅವದಿ (ಟರ್ಮ್)


3 ನೆಯ ವರ್ಷಕ್ಕೆ


6 ನೆಯ ವರ್ಷಕ್ಕೆ


9 ನೆಯ ವರ್ಷಕ್ಕೆ


12 ನೆಯ ವರ್ಷಕ್ಕೆ


15 ನೆಯ ವರ್ಷಕ್ಕೆ

9 ವರ್ಷದ ಪಾಲಿಸಿ

ಸಮ್ ಅಶ್ಶುರ್ಡ್ ಮೊತ್ತದ 15 %

ಸಮ್ ಅಶ್ಶುರ್ಡ್ ಮೊತ್ತದ 15 %

ಉಳಿದ 70 % ಹಾಗೂ ಲಾಯಲ್ಟಿ ಅಡಿಷನ್--

12 ವರ್ಷದ  ಪಾಲಿಸಿ

ಸಮ್ ಅಶ್ಶುರ್ಡ್ ಮೊತ್ತದ 15 %

ಸಮ್ ಅಶ್ಶುರ್ಡ್ ಮೊತ್ತದ 15 %

ಸಮ್ ಅಶ್ಶುರ್ಡ್ ಮೊತ್ತದ 15 %

ಉಳಿದ 55 % ಹಾಗೂ ಲಾಯಲ್ಟಿ ಅಡಿಷನ್-

15 ವರ್ಷದ ಪಾಲಿಸಿ

ಸಮ್ ಅಶ್ಶುರ್ಡ್ ಮೊತ್ತದ 15 %

ಸಮ್ ಅಶ್ಶುರ್ಡ್ ಮೊತ್ತದ 15 %

ಸಮ್ ಅಶ್ಶುರ್ಡ್ ಮೊತ್ತದ 15 %

ಸಮ್ ಅಶ್ಶುರ್ಡ್ ಮೊತ್ತದ 15 %

ಉಳಿದ 40 % ಹಾಗೂ ಲಾಯಲ್ಟಿ ಅಡಿಷನ್

ಮೆಚೂರಿಟೀ ಬೆನಿಫಿಟ್

ಪಾಲಿಸಿದಾರನು ಪಾಲಿಸಿಯ ಪೂರ್ಣ ಅವದಿಯನ್ನು ಮುಗಿಸಿದಲ್ಲಿ, ಅವನು ನೀಡಿರುವ ಸಿಂಗಲ್ ಪ್ರೀಮಿಯಂ ಜೊತೆಗೆ ಲಾಯಲ್ಟಿ ಅಡಿಷನ್ ಮೊತ್ತ (ಅನ್ವಯವಾಗುವುದಿದ್ದಲ್ಲಿ) ಸೇರಿಸಿ ನೀಡಲಾಗುವುದು.  

ಲಾಯಲ್ಟಿ ಅಡಿಷನ್

ಕಾರ್ಪೊರೇಷನ್ ನಿಯಮಕ್ಕೆ ಬದ್ದವಾಗಿ, ಪಾಲಿಸಿಯು ಅದರ ಬಂಡವಾಳ ಹೂಡಿಕೆಯಲ್ಲಿ ಪಾಲುಗೊಳ್ಳುತ್ತದೆ. ಹಾಗಾಗಿ ಅದರಿಂದ ಬರಬಹುದಾದ ಯಾವುದೇ ಲಾಭದಲ್ಲೂ ಅರ್ಹತೆ ಹೊಂದುತ್ತದೆ. ಹೀಗಾಗಿ, ಲಾಯಲ್ಟಿ ಅಡಿಷನ್ ಮೊತ್ತಕ್ಕೆ (ಅನ್ವಯವಾದಲ್ಲಿ) ಅರ್ಹವಾಗುತ್ತದೆ. ಲಾಯಲ್ಟಿ ಅಡಿಷನ್ ಮೊತ್ತವನ್ನು, ಕಾರ್ಪೊರೇಷನ್ ಆಗಿಂದಾಗ್ಗೆ ನಿಗದಿ ಪಡಿಸುವ (ನಿಯಮ ಹಾಗೂ ನಿಬಂದನೆಗೆ ಒಳಪಟ್ಟು) ದರಕ್ಕೆ ಸೀಮಿತವಾಗಿ ಪಾಲಿಸಿದಾರನು 5 ವರ್ಷದ ನಂತರ ಮರಣ ಹೊಂದಿದಲ್ಲಿ ಅಥವಾ ಪಾಲಿಸಿಯ ಅವದಿಯನ್ನು ಮುಗಿಸಿದಲ್ಲಿ  ನೀಡಲಾಗುತ್ತದೆ.

ಬೆನಿಫಿಟ್ ಗಳ ಒಂದು ನಿರೂಪಣೆ

ಕೆಲವು ಬೇನೆಫಿಟ್ಸ್ ಗಳು ಗ್ಯಾರಂಟಿಡ್ ಆಗಿದ್ದು ಇನ್ನೂ ಕೆಲವು ಬದಲಾವಣೆಗೆ ಒಳಪಡುತ್ತವೆ. ಈ ಬದಲಾವಣೆಗೆ ಒಳಪಡುವ ಬೆನಿಫಿಟ್ ಗಳು ಕಾರ್ಪೊರೇಷನ್ ನ ಮುಂದಿನ ದಿನಗಳ ಪರ್ಫಾರ್ಮೆನ್ಸ್ ಮೇಲೆ ಅವಲಂಬಿತವಾಗಿರುತ್ತದೆ.  ಗ್ಯಾರಂಟಿಡ್ ಆಗಿರುವ ಬೆನಿಫಿಟ್ ಗಳನ್ನು ಗ್ಯಾರಂಟಿಡ್ ಎಂದು ನಮೂದಿಸಿದ್ದು. ಉಳಿದಂತೆ ಬದಲಾವಣೆಗೆ ಒಳ ಪಡುವುದನ್ನು ಎರಡು ಬೇರೆ ರೀತಿಯಲ್ಲಿ ನಿರೂಪಿಸಲಾಗಿದೆ.

ನಿರೂಪಣೆ 1:

ಪಾಲಿಸಿ ಪಡೆಯುವಾಗಿನ ವಯಸ್ಸು – 35

ಪಾಲಿಸಿಯ ಅವದಿ (ಟರ್ಮ್) – 9 ವರ್ಷಗಳು

ಪ್ರೀಮಿಯಂ ನೀಡುವ ರೀತಿ – ಸಿಂಗಲ್ ಪ್ರೀಮಿಯಂ

ಸಿಂಗಲ್ ಪ್ರೀಮಿಯಂ ಮೊತ್ತ – ರೂ 72540

ಸಮ್ ಅಶ್ಶುರ್ಡ್ – ರೂ 1,00,000

ವರ್ಷದ ಕೊನೆಯಲ್ಲಿ

ವರ್ಷದ ಕೊನೆಯಲ್ಲಿ ನೀಡಿರುವ ಪ್ರೀಮಿಯಂ ಮೊತ್ತ(ರೂ ಗಳಲ್ಲಿ)

ಪಾಲಿಸಿಯ ಬಾಬ್ತು ಪಾಲಿಸಿದಾರನ ಮರಣ ಆದ ಪಕ್ಷದಲ್ಲಿ ನೀಡುವ ಬೆನಿಫಿಟ್ ಮೊತ್ತ (ಆ ವರ್ಷದ  ಕೊನೆಗೆ)

   

ಗ್ಯಾರಂಟಿಡ್

ಬದಲಾಗಬಹುದಾದ ಮೊತ್ತ

ಒಟ್ಟು ಮೊತ್ತ

     

ಸಿನಾರಿಯೊ 1

4 %

ಸಿನಾರಿಯೊ 2

8%

ಸಿನಾರಿಯೊ 1

4 %

ಸಿನಾರಿಯೊ 2

8%

1

72,540

1,00,000

0

0

1,00,000

1,00,000

2

72,540

1,00,000

0

0

1,00,000

1,00,000

3

72,540

1,00,000

0

0

1,00,000

1,00,000

4

72,540

1,00,000

0

0

1,00,000

1,00,000

5

72,540

1,00,000

0

0

1,00,000

1,00,000

6

72,540

1,00,000

0

5000

1,00,000

1,05,000

7

72,540

1,00,000

0

6000

1,00,000

1,06,000

8

72,540

1,00,000

0

7000

1,00,000

1,07,000

9

72,540

1,00,000

0

10000

1,00,000

1,10,000

ವರ್ಷದ ಕೊನೆಯಲ್ಲಿ

ವರ್ಷದ ಕೊನೆಯಲ್ಲಿ ನೀಡಿರುವ ಪ್ರೀಮಿಯಂ ಮೊತ್ತ(ರೂ ಗಳಲ್ಲಿ)

ಪಾಲಿಸಿಯ ಬಾಬ್ತು ಪಾಲಿಸಿದಾರನು ಸರ್ವೈವಲ್ (ಜೀವದಿಂದ ಇದ್ದ) ಆದ ಪಕ್ಷದಲ್ಲಿ ನೀಡುವ ಬೆನಿಫಿಟ್ ಮೊತ್ತ (ಆ ವರ್ಷದ ಕೊನೆಗೆ)

   

ಗ್ಯಾರಂಟಿಡ್

ಬದಲಾಗಬಹುದಾದ ಮೊತ್ತ

ಒಟ್ಟು ಮೊತ್ತ

     

ಸಿನಾರಿಯೊ 1

4 %

ಸಿನಾರಿಯೊ 2

8%

ಸಿನಾರಿಯೊ 1

4 %

ಸಿನಾರಿಯೊ 2

8%

1

72,540

0

0

0

0

0

2

72,540

0

0

0

0

0

3

72,540

15,000

0

0

15,000

15,000

4

72,540

0

0

0

0

0

5

72,540

0

0

0

0

0

6

72,540

15,000

0

0

15,೦೦೦

15,000

7

72,540

0

0

0

0

0

8

72,540

0

0

0

0

0

9

72,540

72,540

0

10000

72,540

82,540

ಮೇಲೆ ಕಾಣಿಸಿದ ಸಿನಾರಿಯೊ 1 ರ 4 % ಹಾಗೂ ಸಿನಾರಿಯೊ 2 ರ 8 % ಕೇವಲ ಲೆಕ್ಕ ಮಾಡಲು ತೆಗೆದುಕೊಂಡಿರುವ ಸಂಖ್ಯೆಗಳು. ಕಾರ್ಪೊರೇಷನ್ ನ ಬೇರೆ ಬೇರೆ ರೀತಿಯಲ್ಲಿ ಹಣ ಹೂಡಿಕೆ ಮಾಡಿ ಅದರಿಂದ ಬಂದಿರುವೆ ಲಾಭದ ಮೇಲೆ ಅವಲಂಬಿತವಾಗಿರುತ್ತದೆ. ಈ ಪರ್ಸೆಂಟೆಜ್ ಬದಲಾವಣೆ ಆಗುತ್ತಿದ್ದು, ಆ ದಿವಸ ಎಲ್ ಐ ಸಿ ಯು ನಿಯಮಾನುಸಾರ ನೀಡುವ ಮೊತ್ತವಾಗಿರುತ್ತದೆ.

ಎಲ್ ಐ ಸಿ ನ್ಯೂ ಬೀಮ ಬಚತ್ ಪ್ಲಾನ್ ನಲ್ಲಿ ಸೇರಿಲ್ಲದೆ ಇರುವ ವಿಷಯ  

ಪಾಲಿಸಿದಾರನ ಆತ್ಮಹತ್ಯೆಯು ಈ ಪಾಲಿಸಿಯ ವ್ಯಾಪ್ತಿಗೆ ಒಳ ಪಡುವುದಿಲ್ಲ. ಅಂದರೆ ಅಂತಹ ಸಂಧರ್ಭಗಳಲ್ಲಿ ಪಾಲಿಸಿಯು ಕಾರ್ಪೊರೇಷನ್ ನೀಡುವ ಯಾವುದೇ ಬೆನಿಫಿಟ್ ಗಳಿಗೆ ಅರ್ಹ ಆಗುವುದಿಲ್ಲ.

ಆದರೆ, ಪಾಲಿಸಿದಾರನು ಪಾಲಿಸಿಯನ್ನು ಪಡೆದ 1 ವರ್ಷದ ಒಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ, ಆತನ ನಾಮಿನೀಗೆ ಸಿಂಗಲ್ ಪ್ರೀಮಿಯಂ ಮೊತ್ತದ 90% ಮೊತ್ತವನ್ನು ನೀಡಲಾಗುವುದು.

ಎಲ್ ಐ ಸಿ ನ್ಯೂ ಬೀಮ ಬಚತ್ ಪ್ಲಾನ್ – ನೀಡಬೇಕಾದ ದಾಖಲೆಗಳು

ನೀವು ಈ ಪಾಲಿಸಿಯನ್ನು ಪಡೆಯಬೇಕಿದ್ದಲ್ಲಿ, ಈ ಕೆಳ ಕಂಡ ದಾಖಲೆಗಳನ್ನು ನೀಡಬೇಕಾಗುತ್ತದೆ. ಈ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಹಾಗೂ ಕಾರ್ಪೊರೇಷನ್ ನಿಯಮಾನುಸಾರ ನೀಡಿದಲ್ಲಿ, ಪಾಲಿಸಿ ದೊರಕಿಸಿ ಕೊಳ್ಳುವುದರಲ್ಲಿ ಯಾವುದೇ ತೊಂದರೆ ಆಗುವುದಿಲ್ಲ.

 • ಸಿಂಗಲ್ ಪ್ರೇಮಿಯಮ್ ಮೊತ್ತಕ್ಕೆ ಒಂದು ಚೆಕ್
 • ಮನೆಯ  ವಿಳಾಸದ ಬಗ್ಗೆ ಪುರಾವೆ
 • ಕೆ ವೈ ಸಿ ದಾಖಲೆಗಳು
 • ಪಾಸ್ಪೋರ್ಟ್ ಸೈಜಿನ ಫೋಟೋ
 • ಜನ್ಮ ದಿನಾಂಕದ ಬಗ್ಗೆ ಪುರಾವೆ
 • ಗುರುತಿನ ಬಗ್ಗೆ ಪುರಾವೆ
 • ಆದಾಯದ ಬಗ್ಗೆ ಪುರಾವೆ
 • ನಿಮ್ಮ ಆರೋಗ್ಯದ ಬಗ್ಗೆ ನೀಡಿರುವ ಸರಿಯಾದ ಮಾಹಿತಿಯನ್ನು ಹೊಂದಿರುವ ದೃಡೀಕರಿಸಿದ ಅಪ್ಲಿಕೇಷನ್
 • ಆರೋಗ್ಯ ತಪಾಸಣೆಯ ದಾಖಲೆಗಳು (ನಿಮ್ಮ ವಯಸ್ಸು ಹಾಗೂ ಸಮ್ ಅಶ್ಶುರ್ಡ್ ಮೊತ್ತದ ಮೇಲೆ ಅವಲಂಬಿತವಾಗಿರುತ್ತದೆ) ಬೇಕಾದಲ್ಲಿ ಆ ದಾಖಲೆಗಳನ್ನು ನೀಡಬೇಕು)