ಎಲ್ ಐ ಸಿ ಬೀಮಾ ಡೈಮಂಡ್ ಪ್ಲಾನ್
 • ಅತ್ಯುತ್ತಮ ಯೋಜನೆಗಳು
 • ಸುಲಭ ಹೋಲಿಕೆ
 • ತಕ್ಷಣದ ಖರೀದಿ
PX step

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಹುಟ್ಟಿದ ದಿನಾಂಕ (ದೊಡ್ಡ ಸದಸ್ಯ)
ಆದಾಯ
| ಲಿಂಗ

1

2

ಫೋನ್ ಸಂಖ್ಯೆ
ಹೆಸರು
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಯಾವುದೇ ವ್ಯಕ್ತಿಯ  ವಯಸ್ಸು ದಿನ ಕಳೆದಂತೆ ಹೆಚ್ಚುತ್ತದೆಯೇ ಹೊರತು ಕಡಿಮೆ ಆಗುವುದಿಲ್ಲ. ಅದನ್ನು ಎಲ್ಲರೂ ಸ್ವೀಕರಿಸಲೇಬೇಕು ನಮಗೆ ಸಾಕಷ್ಟು ಕುಟುಂಬದ ಜವಾಬ್ದಾರಿಗಳಿದ್ದು ಅದನ್ನು ನಿಭಾಯಿಸಲು ಸೂಕ್ತವಾದ ಖಚಿತವಾದ ಆದಾಯದ ಮೂಲವಿರಬೇಕಾಗುತ್ತದೆ.ಆದರೆ ಅನೇಕರು ಈ ಸೌಲಭ್ಯದಿಂದ ವಂಚಿತರಾಗಿರುತ್ತಾರೆ. ಅಂದರೆ ಅವರಿಗೆ ಒಂದು ಖಚಿತವಾದ ಆದಾಯ ಇರುವುದಿಲ್ಲ. ಹಾಗಾಗಿ ನಿವೃತ್ತಿ ಹೊಂದುವ ವಯಸ್ಸಿಗೆ ಬರುವ ಹೊತ್ತಿಗೆ ಎಲ್ಲರೂ ಕೂಡ ಆ ಹೊತ್ತಿಗೆ ಒಂದು ಶಾಶ್ವತ ಆದಾಯ ಬರುವ ರೀತಿ ಪ್ಲಾನ್ ಮಾಡಲು ಬಯಸುತ್ತಾರೆ. ಆದರೆ, ಮಧ್ಯದಲ್ಲಿಯೇ, ಆ ವ್ಯಕ್ತಿಯು ಮರಣ ಹೊಂದಿದಲ್ಲಿ, ಅವನ ಕುಟುಂಬವು ಅತ್ಯಂತ ಆರ್ಥಿಕ ಸಂಕಷ್ಟಕ್ಕೆ ಗುರಿ ಆಗುತ್ತದೆ.

ಈ ದಿಸೆಯಲ್ಲಿ, ನಮ್ಮ ಮುಂದೆ ನಮಗೆ ಸರಿ ಹೊಂದುವಂತಹ ಆಯ್ಕೆಗಳು ಇರುತ್ತವೆ, ಅದರಿಂದ, ನಾವುಗಳು ನಮ್ಮನ್ನು ಮತ್ತು ನಮ್ಮ ಕುಟುಂಬವನ್ನು ಆರ್ಥಿಕ ಸಂಕಷ್ಟಕ್ಕೆ ಒಳಗಾಗದ ರೀತಿಯಲ್ಲಿ ನೋಡಿಕೊಳ್ಳಲು ಸಾದ್ಯ. ಹಾಗೂ ನಮಗೆ ಹೆಚ್ಚಿನ ವಯಸ್ಸು ಆದಾಗಲು ಕೂಡ ಸಾಕಷ್ಟು ನಿರಾಳತೆಯಿಂದ ಜೀವನವನ್ನು ನಡೆಸಿಕೊಂಡು ಹೋಗುವ ಹಾಗೆ ಪ್ಲಾನ್ ಮಾಡಬಹುದು. ಕೇವಲ ನಾವು ಇದ್ದಾಗ ಮಾತ್ರವಲ್ಲದೆ ನಮ್ಮ ನಂತರವೂ ನಮ್ಮ ಕುಟುಂಬವು ಅವರ ಜೀವನ ಶೈಲಿಯನ್ನು ನಡೆಸಿಕೊಂಡು ಹೋಗಲು ಸಾದ್ಯವಿರುವಂತೆ ಮಾಡಲು ಸಾದ್ಯ ಆಗುತ್ತದೆ

ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯ ತನ್ನ ಅರವತ್ತನೆಯ ವರ್ಷವನ್ನು ಹೋದ ವರ್ಷ ಮುಗಿಸಿತು. ಅಂದರೆ ಕಳೆದ 60 ವರ್ಷಗಳಿಂದ ಎಲ್ ಐ ಸಿ ಯು ಭಾರತ ದೇಶದ ಜನರ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಅದರ ಪ್ರಮುಖ ಪಾಲಿಸಿಗಳ ಪ್ರಾರಂಭವನ್ನು ಗಮನದಲ್ಲಿಟ್ಟುಕೊಂಡು, ಮತ್ತು ಅದು ಗಳಿಸಿರುವ ಅತ್ಯಂತ ವಿಶ್ವಾಸಾರ್ಹ ವಿಮಾ ಕಂಪನಿ ಎಂಬ ಹೆಗ್ಗಳಿಕೆಗೆ ತಕ್ಕಂತೆ, ಈಗ ಎಲ್ ಐ ಸಿ ಬೀಮ ಡೈಮಂಡ್ ಪಾಲಿಸಿಯನ್ನು  ಪ್ರಾರಂಭ  ಮಾಡಿರುತ್ತದೆ

ಇದು ಒಂದು ನಾನ್-ಲಿಂಕ್ದ್ ಯೋಜನೆ ಆಗಿರುತ್ತದೆ. ಆದ್ದರಿಂದ, ಇದು ಷೇರು ಮರುಕಟ್ಟೆಯ ಮೇಲೆ ಅವಲಂಬಿತ ಆಗಿರುವುದಿಲ್ಲ. ಮತ್ತೊಂದು ವಿಶೇಷವಿದ್ದು ಅದು ಪಾಲಿಸಿದಾರರಿಗೆ ಅತ್ಯಂತ ಅನುಕೂಲಕರವಾದ ಅಂಶ. ಈ ಯೋಜನೆಯ ಅಡಿಯಲ್ಲಿ  ಸೀಮಿತವಾದ ಪ್ರೀಮಿಯಂ ನೀಡಿ ಕಾಲ ಕಾಲಕ್ಕೆ ಹಣ ಹಿಂದೆ ಪಡೆಯುವ ಅವಕಾಶ ಇರುತ್ತದೆ. ನೀವು ನೀಡುವ ಪ್ರೀಮಿಯಂಗಳು ಪಾಲಿಸಿಯ ಕವರೆಜ್ ಪೀರಿಯಡ್ ಗಿಂತ ತುಂಬಾ ಕಮ್ಮಿ ಇರುತ್ತದೆ. ಇದು ಒಂದು ಕ್ಲೋಜ್-ಎಂಡೆಡ್ ಯೋಜನೆ ಆಗಿರುತ್ತದೆ.

ಎಲ್ ಐ ಸಿ ಬೀಮಾ ಡೈಮಂಡ್ ಪ್ಲಾನ್- ಉತ್ತಮ ವಿಶೇಷಗಳು

 • ಪಾಲಿಸಿಯ ಅವದಿಯಲ್ಲಿ ಪ್ರತಿ 4 ವರ್ಷಕ್ಕೊಮ್ಮೆ ನಿಮಗೆ  ಒಂದು ನಿಗದಿತ ಮೊತ್ತವು ವಾಪಸ್ಸು ಬರುತ್ತದೆ.
 • ಪಾಲಿಸಿ ಆವಡಿ ಮುಗಿದ ಮೇಲೆ ಅದನ್ನು ಮುಂದುವರೆಸುವ ಅವಕಾಶ ಇರುತ್ತದೆ. ಅಂದರೆ ಮುಂದುವರೆದ ಸಮಯದಲ್ಲಿಯೂ ನಿಮಗೆ ಕವರೆಜ್ ಸಿಗುತ್ತದೆ.
 • ಕಂತುಗಳನ್ನು ಕಟ್ಟುವ ಆವದಿಯ (ಟರ್ಮ್) ಪಾಲಿಸಿ ಕವರೇಜ್ ಸಮಯಕ್ಕಿಂತ ಬಹಳಶ್ಟ್ಟು ಕಮ್ಮಿ ಇರುತ್ತದೆ.
 • ಅಪಘಾತ ವಿಮೆ ಹಾಗೂ ರೈಡರ್ಸ್ ಗಳನ್ನು ಸೇರಿಸುವ ಅವಕಾಶ ಇರುತ್ತದೆ.
 • ನೀವು ಪಾವತಿಸುತ್ತಿರುವ  -ಪ್ರೀಮಿಯಂ ಗಳಿಗೆ ಅಂದರೆ ಕಂತುಗಳಿಗೆ ಆದಾಯ ತೆರಿಗೆ ವಿನಾಯತಿಯು ಸೆಕ್ಷನ್ 80 ಸಿ ಅಡಿಯಲ್ಲಿ ದೊರೆಯುತ್ತದೆ.
 • ಮೆಚೂರಿಟೀ ಮೊತ್ತಕ್ಕೂ ಕೂಡ ಆದಾಯ ತೆರಿಗೆ ವಿನಾಯತಿ ಸೆಕ್ಷನ್ 10 (10ಡಿ) ಯ ಮೂಲಕ ದೊರೆಯುತ್ತದೆ.

ಎಲ್ ಐ ಸಿ ಬೀಮಾ ಡೈಮಂಡ್ ಪ್ಲಾನ್  - ಪಾಲಿಸಿ ಅವದಿ (ಟರ್ಮ್) ಹಾಗೂ ಅರ್ಹತೆಗಳು

ಈ ಪಾಲಿಸಿಯಲ್ಲಿ ಸಮ್ ಅಶ್ಸುರ್ಡ್ ಮೊತ್ತವು ಕನಿಷ್ಠ ರೂ 1,00,000 ಇದ್ದು ಗರಿಷ್ಠ ರೂ 5,00,000 ಇರುತ್ತದೆ

ಪಾಲಿಸಿ ಟರ್ಮ್

ಪಾಲಿಸಿ ಪಡೆಯಲು ಕನಿಷ್ಠ ವಯಸ್ಸು

ಪಾಲಿಸಿ ಪಡೆಯಲು ಗರಿಷ್ಠ ವಯಸ್ಸು

ಮೆಚೂರಿಟೀ ಸಮಯಕ್ಕೆ ವಯಸ್ಸು

ಪಾಲಿಸಿ ಮುಂದುವರೆಸಬಹುದಾದ ಅವದಿ

16 ವರ್ಷಗಳು

14 ವರ್ಷ

50 ವರ್ಷ

66 ವರ್ಷ

8 ವರ್ಷ

20 ವರ್ಷಗಳು

14 ವರ್ಷ

45 ವರ್ಷ

65 ವರ್ಷ

10 ವರ್ಷ

24 ವರ್ಷಗಳು

14 ವರ್ಷ

41 ವರ್ಷ

65 ವರ್ಷ

12 ವರ್ಷ

ಎಲ್ ಐ ಸಿ ಬೀಮಾ ಡೈಮಂಡ್ ಪ್ಲಾನ್ – ವಿವರಗಳು ಮತ್ತು ಬೇನೆಫಿಟ್ಸ್

ಈ ಪ್ಲಾನ್ (ಯೋಜನೆಯ) ಅಡಿಯಲ್ಲಿ, ಕೆಳಕಂಡ 4 ಮುಖ್ಯ ಬೇನೆಫಿಟ್ಸ್ ಇರುತ್ತದೆ.

 1. ಪಾಲಿಸಿದಾರನು ಪಾಲಿಸಿಯನ್ನು ಪಡೆದ 5 ವರ್ಷದ ಒಳಗೆ ಆಕಸ್ಮಿಕ ಮರಣ ಹೊಂದಿದಲ್ಲಿ, ಅವನು ನಮೂದಿಸಿರುವ ನಾಮಿನಿಗೆ ಮರಣದ ಬಾಬ್ತು ನೀಡುವ ಸಮ್ ಅಶ್ಶುರ್ಡ್ ಮೊತ್ತವನ್ನು ನೀಡಲಾಗುವುದು. ಲಿಸಿದಾರನು ಪಾಲಿಸಿಯನ್ನು ಪಡೆದ 5 ವರ್ಷದ ನಂತರ ಪಾಲಿಸಿಯ ಅವದಿ ಮುಗಿಯುವುದರ ಒಳಗೆ ಮರಣ ಹೊಂದಿದಲ್ಲಿ, ನಾಮಿನಿಗೆ, ಸಮ್ ಅಶ್ಶುರ್ಡ್ ಹಣದ ಜೊತೆಗೆ, ಲಾಯಲ್ಟಿ ಹಣವನ್ನು ಹೆಚ್ಚುವರಿಯಾಗಿ ಸೇರಿಸಿ ಒಟ್ಟು ಮೊತ್ತವನ್ನು ನೀಡಲಾಗುವುದು. ಯೋಜನೆಯನ್ನು ಪಾಲಿಸಿದಾರನು ಮೂಲ ಅವದಿ ಮುಗಿದ ನಂತರ ಮುಂದುವರೆಸಿದ್ದು, ಆ ಆವದಿಯಲ್ಲಿ ಮರಣ ಹೊಂದಿದಲ್ಲಿ, ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತದ 50 % ಹಣವನ್ನು ನಾಮಿನಿಗೆ ನೀಡಲಾಗುವುದು.
 2. ಸರ್ವೈವಲ್ ಬೆನಿಫಿಟ್ - ಪಾಲಿಸಿದಾರನು, ಆವಡದಿಯನ್ನು ಪೂರೈಸಿದಲ್ಲಿ ಹಾಗೂ ಎಲ್ಲ ಪ್ರೀಮಿಯಂ (ಕಂತುಗಳನ್ನು) ಗಳನ್ನು ಪ್ರತಿ 4 ವರ್ಷದ ಸಮಯಕ್ಕೆ ನೀಡಿದ್ದಲ್ಲಿ, ಆ ಪಾಲಿಸಿದಾರನಿಗೆ, ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತದ ಒಂದು ಫಿಕ್ಷ್ದ್ ಪರ್ಸೆಂಟೆಜ್ ಪ್ರಕಾರ ಮೊತ್ತವನ್ನು ನೀಡಲಾಗುವುದು. 
 3. ಮೆಚೂರಿಟೀ ಬೆನಿಫಿಟ್ - ಪಾಲಿಸಿಯ ಆವದಿಯು ಮುಗಿದಲ್ಲಿ ಹಾಗೂ ಅಲ್ಲಿಯವರೆಗೂ ನೀಡಬೇಕಾದ ಎಲ್ಲ ಕಂತುಗಳನ್ನು ಪಾಲಿಸಿದಾರನು ಕಟ್ಟಿದ್ದಲ್ಲಿ, ಆ ಪಾಲಿಸಿದಾರನಿಗೆ, ಮೆಚೂರಿಟೀ ಮೊತ್ತ ಮತ್ತು ಅದರ ಜೊತೆಗೆ ಲಾಯಲ್ಟಿ ಮೊತ್ತವನ್ನು(ಇದ್ದಲ್ಲಿ)  ಹೆಚ್ಚುವರಿಯಾಗಿ ಸೇರಿಸಿ ನೀಡಲಾಗುವುದು.
 4. ಲಾಯಲ್ಟಿ ಅಡಿಷನ್ - ಎಲ್ ಐ ಸಿ ಯು ಮೊದಲಿನಿಂದಲೂ ಅದರ ಗ್ರಾಹಕರ ಜೊತೆಗೆ ಒಂದು ಸೌಹಾರ್ದಯುತವಾದ ಭಾಂದವ್ಯವನ್ನು ಬೆಳೆಸಿಕೊಳ್ಳುವಲ್ಲಿ ಹೆಸರು ಪಡೆದಿರುತ್ತದೆ. ಈ ನಿಟ್ಟಿನಲ್ಲಿ, ಎಲ್ ಐ ಸಿ ಯು ಯಾವ ಪಾಲಿಸಿದಾರನು ಪಾಲಿಸಿಯ ಆವದಿಯಲ್ಲಿ ತಾನು ಪಾವತಿಸಬೇಕಾದ ಎಲ್ಲ ಕಂತುಗಳನ್ನು ಸಮಯಕ್ಕೆ ಸರಿಯಾಗಿ ನೀಡಿರುತ್ತನೋ, ಅಂತವರಿಗೆ ಪುರಸ್ಕಾರ ಮಾಡುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು, ಎಲ್ ಐ ಸಿ ಯು ಪುರಸ್ಕಾರದ ರೂಪದಲ್ಲಿ, ಲಾಯಲ್ಟಿ ಹೆಚ್ಚುವರಿ ಮೊತ್ತವನ್ನು ಪಾಲಿಸಿದಾರರಿಗೆ ನೀಡುತ್ತದೆ. ಈ ಮೊತ್ತವನ್ನು, ಪಾಲಿಸಿಯು 5 ವರ್ಷ ಮುಗಿಸಿದ್ದಲ್ಲಿ,  ಮೆಚೂರಿಟೀ ಆವದಿಯ ಮೊದಲು / ನಂತರ ಅಥವಾ ಪಾಲಿಸಿದಾರನು ಅವದಿಯ ಮುಂಚೆ ಆಕಸ್ಮಿಕ ಮರಣ ಹೊಂದಿದಲ್ಲಿ ನೀಡುವುದು.

ಸರ್ವೈವಲ್ ಬೆನಿಫಿಟ್ ಮೊತ್ತವನ್ನು ಈ ಕೆಳಕಂಡ ರೀತಿಯಲ್ಲಿ ಎಲ್ ಐ ಸಿ ಯು ಲೆಕ್ಕ ಹಾಕಿ ನೀಡುತ್ತದೆ.

ಪಾಲಿಸಿ ಆವದಿ  (ಟರ್ಮ್)

ಡೆತ್ ಬೆನಿಫಿಟ್

ಸರ್ವೈವಲ್ ಬೆನಿಫಿಟ್

ಮೆಚೂರಿಟೀ ಬೆನಿಫಿಟ್

ಲಾಯಲ್ಟಿ ಅಡಿಷನ್ (ಹೆಚ್ಚುವರಿ ಮೊತ್ತ)

16 ವರ್ಷಗಳು

ಸಮ್ ಅಶ್ಶುರ್ಡ್

ಪಾಲಿಸಿಯ 4 ನೇ, 8 ನೇ ಹಾಗೂ 12 ನೇ ವರ್ಷದಲ್ಲಿ ಸಮ್ ಅಶ್ಶುರ್ಡ್ ಮೊತ್ತದ ಶೇಕಡಾ 15 ರಷ್ಟು

ಸಮ್ ಅಶ್ಶುರ್ಡ್ ನ ಶೇಕಡಾ 55 ರಷ್ಟು

ಪಾಲಿಸಿದಾರನ ಮರಣವಾದಲ್ಲಿ ಅಥವಾ 5 ವರ್ಷ ಮುಗಿದಿದ್ದಲ್ಲಿ

20 ವರ್ಷಗಳು

ಸಮ್ ಅಶ್ಶುರ್ಡ್

ಪಾಲಿಸಿಯ 4 ನೇ, 8 ನೇ, 12 ನೇ ಹಾಗೂ 16 ನೇ ವರ್ಷದಲ್ಲಿ ಸಮ್ ಅಶ್ಶುರ್ಡ್ ಮೊತ್ತದ ಶೇಕಡಾ 15 ರಷ್ಟು

ಸಮ್ ಅಶ್ಶುರ್ಡ್ ನ ಶೇಕಡಾ ೪೦ ರಷ್ಟು

ಪಾಲಿಸಿದಾರನ ಮರಣವಾದಲ್ಲಿ ಅಥವಾ 5 ವರ್ಷ ಮುಗಿದಿದ್ದಲ್ಲಿ

24 ವರ್ಷಗಳು

ಸಮ್ ಅಶ್ಶುರ್ಡ್

ಪಾಲಿಸಿಯ 4 ನೇ, 8 ನೇ, 12 ನೇ, 16ನೇ  ಹಾಗೂ 20ನೇ ವರ್ಷದಲ್ಲಿ ಸಮ್ ಅಶ್ಶುರ್ಡ್ ಮೊತ್ತದ ಶೇಕಡಾ 12 ರಷ್ಟು

ಸಮ್ ಅಶ್ಶುರ್ಡ್ ನ ಶೇಕಡಾ 40 ರಷ್ಟು

ಪಾಲಿಸಿದಾರನ ಮರಣವಾದಲ್ಲಿ ಅಥವಾ 5 ವರ್ಷ ಮುಗಿದಿದ್ದಲ್ಲಿ

 ಸೂಚನೆ - ಪಾಲಿಸಿದಾರನ ಮರಣವಾದಲ್ಲಿ, ವರ್ಷಾವದಿ ಪ್ರೀಮಿಯಂಗಳ ಒಟ್ಟು ಮೊತ್ತದ 10 ರಷ್ಟು ಅಥವಾ ಪಾಲಿಸಿ ಮೆಚೂರಿಟೀ ಹೊಂದಿದಾಗ ನೀಡುವ ಸಮ್ ಅಶ್ಶುರ್ಡ್ ಮೊತ್ತ ಇವೆರಡರಲ್ಲಿ ಯಾವುದು ಹೆಚ್ಚಾಗಿರುತ್ತದೋ ಆ ಮೊತ್ತವನ್ನು ಮರಣದ ನಂತರದ ಸಮ್ ಅಶ್ಶುರ್ಡ್ ಮೊತ್ತವಾಗಿ ನೀಡಲಾಗುವುದು.

ಎಲ್ ಐ ಸಿ ಬೀಮಾ ಡೈಮಂಡ್ ಪ್ಲಾನ್ – ವಿಶೇಷ ವೈಶಿಷ್ಟ್ಯಗಳು

ಆಟೋ ಕವರೆಜ್ ಫೆಸಿಲಿಟೀ - ಈ ಯೋಜನೆಯಲ್ಲಿ, ಆಟೋ ಕವರೆಜ್ ಫೆಸಿಲಿಟೀ ದೊರೆಯುತ್ತದೆ. ಅಂದರೆ, ನೀವು ಪ್ರೀಮಿಯಂ ಪಾವಟಿಸದಿದ್ದರು ಕೂಡ ವಿಮಾ ಕವರೆಜ್ ಮುಂದುವರೆಯುತ್ತದೆ. ನೀವು ನಿಮ್ಮ ಕಂತುಗಳನ್ನು 3 ವರ್ಷಗಳು ಅಥವಾ 5 ವರ್ಷದ ಒಳಗೆ ಪಾವತಿಸಿದ್ದಲ್ಲಿ, ಮುಂದೆ ಕಾರಣಾಂತರಗಳಿಂದ ಕಂತುಗಳನ್ನು ಕಟ್ಟಲು ಆಗದಿದ್ದರೂ, ನಿಮ್ಮ ವಿಮಾ ಕವರೆಜ್ 6 ತಿಂಗಳುಗಳ ಕಾಲ ಮುಂದುವರೆಯುತ್ತದೆ.

ಹಾಗೆಯೇ, ನೀವು ಸತತವಾಗಿ 5 ವರ್ಷಗಳ ಕಾಲ ಕಂತುಗಳನ್ನು ಪಾವತಿಸಿದ್ದಲ್ಲಿ, ಮುಂದಿನ ಕಂತುಗಳನ್ನು ಕಟ್ಟುವಲ್ಲಿ ಅಡಚಣೆಯಾದರೂ ಸಹ, ವಿಮಾ ಕವರೆಜ್ 2 ವರ್ಷದವರೆಗೂ ಮುಂದುವರೆಯುತ್ತದೆ.

 1. ನೀವು ಅಪಘಾತ(accident)  ಹಾಗೂ ಅಂಗ ವೈಕಲ್ಯ(disability) ಬೆನಿಫಿಟ್ ಮತ್ತು ಹೊಸ ಟರ್ಮ್ ಅಶ್ಶ್ಯುರೆನ್ಸ್ ರೈಡರ್ ಗಳನ್ನು ಸೇರಿಸಿಕೊಳ್ಳಬಹುದು. ಆದರೆ ರೈಡರ್ ಮೊತ್ತವು, ಸಮ್ ಅಶ್ಶುರ್ಡ್ ಮೊತ್ತಕ್ಕಿಂತ  ಜಾಸ್ತಿ ಇರಕೂಡದು.
 2. ನಿಮ್ಮ ಪಾಲಿಸಿಯ ಅವದಿ ಮುಗಿದ ನಂತರವೂ ಆ ಆವದಿಯ ಆರ್ದದಷ್ಟು ಸಮಯಕ್ಕೆ ಕವರೆಜ್ ಮೊತ್ತವು  ಆರ್ದಕ್ಕೆ ಮೀರದ ರೀತಿಯಲ್ಲಿ ಮುಂದಿವರೆಸಿಯುತ್ತದೆ . ಈ ಮುಂದುವರೆದ ಅವದಿಯಲ್ಲಿ, ಪ್ರೀಮಿಯಂ (ಕಂತುಗಳು) ಗಳನ್ನು ನೀಡಬೇಕಾಗಿರುವುದಿಲ್ಲ.

ಅಂದರೆ , ನಿಮ್ಮ ವಿಮಾ ಕವರೆಜ್ ಮೊತ್ತವು ರೂ 5 ಲಕ್ಷಗಳಿದ್ದು, ಪಾಲಿಸಿಯ ಆವದಿಯು 24 ವರ್ಷವಿದ್ದಲ್ಲಿ, ಪಾಲಿಸಿಯ ಅವದಿ ಮುಗಿದ ನಂತರ, ನಿಮಗೆ ಯಾವುದೇ ಪ್ರೀಮಿಯಂ (ಕಂತು) ಗಳನ್ನು ಕಟ್ಟದೆ, ಮುಂದಿನ 12 ವರ್ಷಗಳು ರೂ 2,50,000 ಕವರೇಜ್ ಇರುತ್ತದೆ.

 1. ನೀವು ಈ ಯೋಜನೆಯ ಅಡಿಯಲ್ಲಿ, ಪಾಲಿಸಿಯ ಆವಡದಿಗಿಂತ ಸಾಕಷ್ಟು ಕಡಿಮೆ ಸಮಯದವರೆಗೂ ಕಂತುಗಳನ್ನು ಕಟ್ಟಿರುತ್ತೀರಿ

ಎಲ್ ಐ ಸಿ ಬೀಮಾ ಡೈಮಂಡ್ ಪ್ಲಾನ್ – ಪಾಲಿಸಿ ಟರ್ಮ್ ಗಳು

ಎಲ್ ಐ ಸಿ ಬೀಮಾ ಡೈಮಂಡ್ ಪ್ಲಾನ್ ಅಡಿಯಲ್ಲಿ ನಿಮಗೆ ಈ ಕೆಳಕಂಡ ಪಾಲಿಸಿ ಟರ್ಮ್ ಆಪ್ಶನ್ ಗಳು ದೊರೆಯುತ್ತವೆ

 1. 16 ವರ್ಷಗಳ ಪಾಲಿಸಿಯ ಅವದಿ  - ಕೇವಲ 10 ವರ್ಷ ಮಾತ್ರ ಪ್ರೀಮಿಯಂ (ಕಂತು) ಕಟ್ಟುವಿಕೆ
 2. 20 ವರ್ಷಗಳ ಪಾಲಿಸಿಯ ಅವದಿ  - ಕೇವಲ 12 ವರ್ಷ ಮಾತ್ರ ಪ್ರೀಮಿಯಂ (ಕಂತು) ಕಟ್ಟುವಿಕೆ
 3. 24 ವರ್ಷಗಳ ಪಾಲಿಸಿಯ ಅವದಿ  - ಕೇವಲ 15 ವರ್ಷ ಮಾತ್ರ ಪ್ರೀಮಿಯಂ (ಕಂತು) ಕಟ್ಟುವಿಕೆ

ನೀವು ಕಂತಿನ ಹಣವನ್ನು ವರ್ಷಕ್ಕೊಮ್ಮೆ ಅಥವಾ ಅರ್ದ ವರ್ಷಕ್ಕೊಮ್ಮೆ ಅಥವಾ 3 ತಿಂಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆ ಪಾವತಿಸಬಹುದು.

ಎಲ್ ಐ ಸಿ ಬೀಮಾ ಡೈಮಂಡ್ ಪ್ಲಾನ್ – ಬೇರೆ ಬೇರೆ ಪಾಲಿಸಿ ಟರ್ಮ್ ಗಳಿಗೆ ನೀಡಬೇಕಾದ ಪ್ರೀಮಿಯಂ (ಕಂತಿನ ಮೊತ್ತ)

ಕೆಳಗೆ ಕಾಣಿಸಿರುವ ಟೇಬಲ್ ನಲ್ಲಿ ನೀವು ನಿಮ್ಮ ವಯಸ್ಸಿಗೆ ಅನುಗುಣವಾಗಿ ಸಮ್ ಅಶ್ಶುರ್ಡ್ ನ ಪ್ರತಿ ರೂ 1000 ಕ್ಕೆ ನೀಡಬೇಕಾದ ಕಂತಿನ ವಿವರ ನೀಡಲಾಗಿದೆ.  

ಪಾಲಿಸಿ ಟರ್ಮ್ (ಅವದಿ)

ವಯಸ್ಸು 20 ವರ್ಷವಿದ್ದಲ್ಲಿ

ವಯಸ್ಸು 30 ವರ್ಷವಿದ್ದಲ್ಲಿ

ವಯಸ್ಸು 40 ವರ್ಷವಿದ್ದಲ್ಲಿ

ವಯಸ್ಸು 50 ವರ್ಷವಿದ್ದಲ್ಲಿ

16 ವರ್ಷಗಳು

ರೂ 87.80

ರೂ 88.90

ರೂ 92.25

ರೂ 99.95

20 ವರ್ಷಗಳು

ರೂ 74.15

ರೂ 75.70

ರೂ 79.70

-

24 ವರ್ಷಗಳು

ರೂ 60.05

ರೂ 61.75

ರೂ 66.05

-

ಎಲ್ ಐ ಸಿ ಬೀಮಾ ಡೈಮಂಡ್ ಪ್ಲಾನ್ – ಮೆಚೂರಿಟೀ ಮೊತ್ತದ ಲೆಕ್ಕಾಚಾರ

ಈ ಹಣ ಹಿಂದೆ ಪಡೆಯುವ ವಿಮಾ ಯೋಜನೆಯಲ್ಲಿ ಎರಡು ಸನ್ನಿವೇಶವನ್ನು ಪರಿಗಣಿಸಿ ವಿಶ್ಲೇಷಣೆ ಮಾಡಬಹುದು.

ಮೊದಲನೆಯ ಸನ್ನಿವೇಶದಲ್ಲಿ , ಪಾಲಿಸಿದಾರನ ಮನಸ್ಸಿನಲ್ಲಿ ಇರುವಂತೆ, ಅವನು ಪಾಲಿಸಿಯ ಅವದಿಯನ್ನು ಮುಗಿಸಿದಲ್ಲಿ,

ಎರಡನೆಯ ಸನ್ನಿವೇಶದಲ್ಲಿ , ಪಾಲಿಸಿಯ ಅವದಿಯಲ್ಲಿ ಅವನ ಆಕಸ್ಮಿಕ ಮರಣವಾದ ಸಂಧರ್ಭದಲ್ಲಿ.

ಮೊದಲನೆಯ ಸನ್ನಿವೇಶದಲ್ಲಿ

ಈಗ ಮೊದಲನೆಯ ಸನ್ನಿವೇಶದ ಪ್ರಕಾರ ಪಾಲಿಸಿದಾರನು ಪಾಲಿಸಿಯನ್ನು 24 ವರ್ಷಕ್ಕೆ ರೂ 5,00,000 ಗಳ ಸಮ್ ಅಶ್ಶುರ್ಡ್ ಮೊತ್ತವನ್ನು 2016 ರಲ್ಲಿ ಕೊಂಡಿದ್ದಲ್ಲಿ, ಅವನಿಗೆ ಕಾಲ ಕಾಲಕ್ಕೆ ಹಿಂದೆ ಬರಬಹುದಾದ ಹಣವನ್ನು ಮತ್ತು ಅವದಿ ಮುಗಿದಾಗ ಬರಬಹುದಾದ ಹಣದ ಲೆಕ್ಕವನ್ನು  ಕೆಳಗಡೆ ನೀಡಲಾಗಿದೆ

ಮುಗಿದಿರುವ ಅವದಿ

ವರ್ಷ

ನಿಮ್ಮ ವಯಸ್ಸು

ನಿಮಗೆ ಹಿಂದಿರುಗಿಸುವ ಹಣದ ಮೊತ್ತ

ಕ್ಯಾಲ್ಕುಲೇಷನ್

4 ವರ್ಷ ಆದಲ್ಲಿ

2020

29

ರೂ 60,000

ಸಮ್ ಅಶ್ಶುರ್ಡ್ ಮೊತ್ತದ ಶೇಕಡಾ 12 ರಷ್ಟು

8 ವರ್ಷ ಆದಲ್ಲಿ

2024

33

ರೂ 60,000

ಸಮ್ ಅಶ್ಶುರ್ಡ್ ಮೊತ್ತದ ಶೇಕಡಾ 12 ರಷ್ಟು

12 ವರ್ಷ ಆದಲ್ಲಿ

2028

37

ರೂ 60,000

ಸಮ್ ಅಶ್ಶುರ್ಡ್ ಮೊತ್ತದ ಶೇಕಡಾ 12 ರಷ್ಟು

16 ವರ್ಷ ಆದಲ್ಲಿ

2032

41

ರೂ 60,000

ಸಮ್ ಅಶ್ಶುರ್ಡ್ ಮೊತ್ತದ ಶೇಕಡಾ 12 ರಷ್ಟು

20 ವರ್ಷ ಆದಲ್ಲಿ

2036

45

ರೂ 60,000

ಸಮ್ ಅಶ್ಶುರ್ಡ್ ಮೊತ್ತದ ಶೇಕಡಾ 12 ರಷ್ಟು

24 ವರ್ಷ ಆದಲ್ಲಿ ಅಂದರೆ ಪಾಲಿಸಿಯ  ಅವದಿ ಮುಗಿಯುವ ವರ್ಷ

2040

49

ರೂ 2,೦೦,೦೦೦ + ಲಾಯಲ್ಟಿ ಅಡಿಷನ್

ಸಮ್ ಅಶ್ಶುರ್ಡ್ ಮೊತ್ತದ ಶೇಕಡಾ 40 ರಷ್ಟು + ಲಾಯಲ್ಟಿ ಅಡಿಷನ್ ಅಥವಾ ಪಾಲಿಸಿ  ಮೆಚೂರಿಟೀ ಮೊತ್ತ

ಇದರ ಜೊತೆಗ, ಇನ್ನೂ ಆರರ್ದದಷ್ಟೂ ಸಮಯ ಕವರೆಜ್ ಮುಂದುವರಿಕೆ ಇದ್ದು, ಅದರ ಪ್ರಕಾರ, ನಿಮ್ಮ ಈಗಿನ ವಯಸ್ಸಿಗೆ 12  ವರ್ಷ ಅಂದರೆ ನಿಮ್ಮ ವಯಸ್ಸು 61 ಆಗುವವರೆಗೂ ವಿಮಾ ಕವರೆಜ್ ಮೊತ್ತವಾದ ರೂ 2,50,000 ಮುಂದುವರೆಯುತ್ತದೆ.

ಎರಡನೆಯ ಸನ್ನಿವೇಶದಲ್ಲಿ

ಈ ಸನ್ನಿವೇಶದ ಪ್ರಕಾರ ಪಾಲಿಸಿದಾರನು ಪಾಲಿಸಿಯ ಅವದಿಯಾದ 24 ವರ್ಷಗಳು ಮುಗಿಯುವ ಮುಂಚೆಯೇ ಮರಣ ಹೊಂದಿದಲ್ಲಿ, ಈ ಕೆಳಕಂಡ ಲೆಕ್ಕಾಕಾರ ಮಾಡಲಾಗುತ್ತದೆ.

ಮರಣ ಹೊಂದಿದ ವರ್ಷ

ಮರಣ ಹೊಂದಿದಾಗ ವಯಸ್ಸು

ಪಾವತಿಸಿರುವ ಕಂತಿನ ಮೊತ್ತ

ಕ್ಲೈಮ್

ಆಕಸ್ಮಿಕ ಮರಣದ ಕ್ಲೈಮ್

2016

25

30002

ರೂ 5,00,000

ರೂ 1,00,000

2017

26

59462

ರೂ 5,00,000

ರೂ 1,00,000

2018

27

88922

ರೂ 5,00,000

ರೂ 1,00,000

2019

28

118382

ರೂ 5,00,000

ರೂ 1,00,000

2020

29

147842

ರೂ 5,00,000

ರೂ 1,00,000

2021

30

177302

ರೂ 5,00,000 + ಲಾಯಲ್ಟಿ ಅಡಿಷನ್

ರೂ 1,00,000 + ಲಾಯಲ್ಟಿ ಅಡಿಷನ್

2022

31

206762

ರೂ 5,00,000 + ಲಾಯಲ್ಟಿ ಅಡಿಷನ್

ರೂ 1,00,000 + ಲಾಯಲ್ಟಿ ಅಡಿಷನ್

2023

32

236222

ರೂ 5,00,000 + ಲಾಯಲ್ಟಿ ಅಡಿಷನ್

ರೂ 1,00,000 + ಲಾಯಲ್ಟಿ ಅಡಿಷನ್

2024

33

265682

ರೂ 5,00,000 + ಲಾಯಲ್ಟಿ ಅಡಿಷನ್

ರೂ 1,00,000 + ಲಾಯಲ್ಟಿ ಅಡಿಷನ್

2025

34

295142

ರೂ 5,00,000 + ಲಾಯಲ್ಟಿ ಅಡಿಷನ್

ರೂ 1,00,000 + ಲಾಯಲ್ಟಿ ಅಡಿಷನ್

ನೀವು ಏತಕ್ಕೋಸ್ಕರ ಈ ಯೋಜನೆಯನ್ನು ಕೊಳ್ಳಬೇಕು ?

 • ಈ ಯೋಜನೆಯಿಂದ ನಿಮಗೆ ಕಾಲ ಕಾಲಕ್ಕೆ ಅಂದರೆ ನಿರ್ದಿಷ್ಟ ಅವದಿಯಲ್ಲಿ ನಿಗದಿತ ಮೊತ್ತವು ಬರುತ್ತಿರುತ್ತದೆ. ಈ ಹಣವು, ಒಬ್ಬ ವ್ಯಕ್ತಿಯು ವಯಸ್ಸಾದಂತೆಲ್ಲ ಯಾವುದೇ ರೀತಿಯ ಆರ್ಥಿಕವಾಗಿ ತೊಂದರೆಗೆ ಸಿಲುಕದೆ ಇರಲು  ಸಾಕಷ್ಟು ಮಟ್ಟಿಗೆ ಸಹಾಯ ಮಾಡುತ್ತದೆ. ಹಾಗೂ ನಿಮ್ಮ ಮಗುವಿನ ಓದಿನ ಬಗ್ಗೆ ಸರಿಯಾದ ರೀತಿಯಲ್ಲಿ ಪ್ಲಾನ್ ಮಾಡಬಹುದು.
 • ನೀವು ಕಟ್ಟುವ ಪ್ರೀಮಿಯಂ (ಕಂತು) ಗಳು ಪಾಲಿಸಿಯ ಆವದಿಗಿಂತ ಸಾಕಷ್ಟು ಕಮ್ಮಿ ಇರುತ್ತದೆ. ಉದಾಹರಣೆಯಾಗಿ, 20 ವರ್ಷದ ಪಾಲಿಸಿಗೆ ನೀವು ಕೇವಲ 12 ವರ್ಷ ಮಾತ್ರ ಕಂತುಗಳನ್ನು ನೀಡಿರುತ್ತೀರಿ.
 • ಆಟೋ ಕವರೆಜ್ ಮೂಲಕ, ನೀವು ಕೆಲವು ಪ್ರೀಮಿಯಂ ಗಳನ್ನು ಕಟ್ಟದಿದ್ದರೂ ಕೂಡ, ನಿಮ್ಮ ವಿಮಾ ಕವರೆಜ್ ಮುಂದುವರೆಯುತ್ತದೆ. ಅದು ಕಂಪನಿಯ ನಿಯಮಾನುಸಾರವಾಗಿ ಇರುತ್ತದೆ.
 • ಪಾಲಿಸಿಯನ್ನು 3 ವರ್ಷವಾದ ಬಳಿಕ ಯಾವಾಗ ಬೇಕಾದರೂ ಸರಂಡರ್ ಮಾಡಬಹುದು.
 • 3 ವರ್ಷದ ಬಳಿಕ, ಈ ಪಾಲಿಸಿಯ ಮೇಲೆ ಸಾಲ ಸೌಲಭ್ಯ ಇರುತ್ತದೆ.
 • ನೀವು ತೆಗೆದುಕೊಂಡಿರುವ ಸಮ್ ಅಶ್ಶುರ್ಡ್ ಮೇಲೂ ಕೂಡ ಕೆಲವು ರಿಯಾಯತಿ ದೊರಕುತ್ತದೆ. ಅಂದರೆ ನೀವು ತೆಗೆದುಕೊಂಡಿರುವ  ಸಮ್ ಅಶ್ಶುರ್ಡ್ ಮೊತ್ತವು ರೂ 2 ಲಕ್ಷದ ಮೇಲ್ಪಟ್ಟು ರೂ 4,80,000 ದ ಒಳಗಿದ್ದಲ್ಲಿ, ಪ್ರತಿ ರೂ 1000 ದ ಮೇಲೆ 2.5 % ರಿಯಾಯತಿ ದೊರೆಯುತ್ತದೆ. ಅದೇ ರೀತಿ, ರೂ 5,00,000 ಕ್ಕೆ 3 % ರಿಯಾಯತಿ ದೊರೆಯುತ್ತದೆ.