ಎಲ್ ಐ ಸಿ ಕ್ರಿಟಿಕಲ್ ಇಲ್ಲ್ನೆಸ್ಸ್ ಬೆನಿಫಿಟ್ ರೈಡರ್
ಯಾವುದೇ ವ್ಯಕ್ತಿಗಾಗಲೀ, ಆತನ ಕಷ್ಟದ ಸಮಯದಲ್ಲಿ ಸಹಾಯವು ಬೇಕಾಗುತ್ತದೆ. ಎಲ್ ಐ ಸಿ ಯ ಕ್ರಿಟಿಕಲ್ ಇಲ್ಲ್ನೆಸ್ಸ್ ಬೆನಿಫಿಟ್ ರೈಡರ್ ಆ ರೀತಿಯ ಸಹಾಯವನ್ನು ಪಾಲಿಸಿದಾರನ ಕಷ್ಟದ ಸಮಯದಲ್ಲಿ ನೀಡುವುದಕ್ಕೆ ನಿಯೋಜಿಸಿರುವ ಒಂದು ಪ್ಲಾನ್ ಆಗಿರುತ್ತದೆ. ಈ ಪ್ಲಾನ್ ನ ಪ್ರಕಾರ, ಯಾವುದೇ ವ್ಯಕ್ತಿಯು ಇನ್ಶ್ಯುರೆನ್ಸ್ ಪಾಲಿಸಿಯನ್ನು ಪಡೆಯುವ ಸಮಯದಲ್ಲಿ ಈ ಕ್ರಿಟಿಕಲ್ ಇಲ್ಲ್ನೆಸ್ಸ್ ರೈಡರ್ ಅನ್ನು ಪಾಲಿಸಿಯ ಜೊತೆಗೆ ಸೇರಿಸಿದ್ದಲ್ಲಿ, ಆತನಿಗೆ ಮುಂದೆ ರೈಡರ್ ನಲ್ಲಿ ನಮೂದಿಸಿರುವ ಯಾವುದಾದರೂ ಕಾಯಿಲೆ ಇದೆ ಎಂದು ತಿಳಿದುಪಟ್ಟಲ್ಲಿ, ಅದಕ್ಕೆ ತಗುಲಬಹುದಾದ ವೆಚ್ಚ ವನ್ನು ಭರಿಸಲು ಸಹಾಯ ಮಾಡುತ್ತದೆ. ಇದು ಒಂದು ನಾನ್-ಲಿಂಕ್ಡ್ ರೈಡರ್ ಆಗಿದ್ದು, ಈ ರೈಡರ್ ಅನ್ನು ನಾನ್-ಲಿಂಕ್ಡ್ ಪ್ಲಾನ್ ಜೊತೆಯಲ್ಲಿ ಮಾತ್ರ ಸೇರಿಸಿಕೊಳ್ಳಬಹುದು. ಅಂದರೆ ಈ ರೈಡರ್ ಮೂಲ ಪಾಲಿಸಿಗೆ ಒಂದು ಹೆಚ್ಚುವರಿಯಾಗಿ ಸೇರಿಸಿಕೊಳ್ಳಬಹುದಾದ ಬೆನಿಫಿಟ್ ಆಗಿರುತ್ತದೆ.
ಎಲ್ ಐ ಸಿ ಕ್ರಿಟಿಕಲ್ ಇಲ್ಲ್ನೆಸ್ಸ್ ಬೆನಿಫಿಟ್ ರೈಡರ್ ಅನ್ನು ಸೇರಿಸಬಹುದಾದ ಇತರೆ ಯೋಜನೆಗಳು
ಎಲ್ ಐ ಸಿ ಕ್ರಿಟಿಕಲ್ ಇಲ್ಲ್ನೆಸ್ಸ್ ರೈಡರ್ ಅನ್ನು ಈ ಕೆಳ ಕಂಡ ಯೋಜನೆಗಳ ಜೊತೆಗೆ ಸೇರಿಸಿಕೊಳ್ಳಬಹುದು.
- ಎಲ್ ಐ ಸಿ ಯ ನ್ಯೂ ಎಂಡೋಮೆಂಟ್ ಪ್ಲಾನ್ (ಟೇಬಲ್ ನಂ 814)
- ಎಲ್ ಐ ಸಿ ಯ ನ್ಯೂ ಜೀವನ್ ಆನಂದ್ ಪ್ಲಾನ್ (ಟೇಬಲ್ ನಂ 815)
- ಎಲ್ ಐ ಸಿ ಯ ನ್ಯೂ ಮನೀ ಬ್ಯಾಕ್ ಪ್ಲಾನ್ ಗಳು (ಟೇಬಲ್ 820 ಹಾಗೂ 821)
- ಎಲ್ ಐ ಸಿ ಯ ಜೀವನ್ ಪ್ರಗತಿ ಪ್ಲಾನ್
- ಎಲ್ ಐ ಸಿ ಯ ಲಿಮಿಟೆಡ್ ಪೇಮೆಂಟ್ ಎಂಡೋಮೆಂಟ್ ಪ್ಲಾನ್
- ಎಲ್ ಐ ಸಿ ಯ ಜೀವನ್ ಲಾಭ್ ಪ್ಲಾನ್ (ಟೇಬಲ್ 836)
ಎಲ್ ಐ ಸಿ ಕ್ರಿಟಿಕಲ್ ಇಲ್ಲ್ನೆಸ್ಸ್ ಬೆನಿಫಿಟ್ ರೈಡರ್ – ಬೆನೆಫಿಟ್ಸ್ ಗಳು
ಈ ಕೆಳಗೆ ನಮೂದಿಸಿರುವ ಯಾವುದಾದರೂ ಒಂದು ಕಾಯಿಲೆಯು ಇದೆ ಎಂದು ದೃಡ ಪಟ್ಟಲ್ಲಿ, ಈ ರೈಡರ್ ಬಾಬ್ತು ನೀಡಬೇಕಾಗಿರುವ ಸಮ್ ಅಶ್ಶುರ್ಡ್ ಮೊತ್ತವನ್ನು ನೀಡಲಾಗುವುದು. ಹಾಗೆ ಈ ರೈಡರ್ ಅನ್ನು ಪಾಲಿಸಿದಾರನಿಗೆ ಒಂದು ಬಾರಿ ನೀಡಿದಲ್ಲಿ ಮತ್ತೆ ಪಾಲಿಸಿಯ ಅವದಿಯಲ್ಲಿ ಸಮ್ ಅಶ್ಶುರ್ಡ್ ಮೊತ್ತವನ್ನು ನೀಡಲಾಗುವುದಿಲ್ಲ.
ಎಲ್ ಐ ಸಿ ಕ್ರಿಟಿಕಲ್ ಇಲ್ಲ್ನೆಸ್ಸ್ ಬೆನಿಫಿಟ್ ರೈಡರ್ – ಈ ಪ್ಲಾನ್ ಅಡಿಯಲ್ಲಿ ಸೇರುವ ಕ್ರಿಟಿಕಲ್ ಇಲ್ಲ್ನೆಸ್ಸ್ ಗಳು
- ನಿರ್ದಿಷ್ಟ ಪಡಿಸಲಾದ ಕ್ಯಾನ್ಸರ್ ಕಾಯಿಲೆಗಳು
ಈ ಪಾಲಿಸಿಯ ಅಡಿಯಲ್ಲಿ ಅನಿಯಂತ್ರಿತ ಬೆಳವಣಿಗೆ ಉಳ್ಳ ಮಾರಣಾಂತಿಕ (ಮ್ಯಾಲಿಗ್ನೆಂಟ್) ಸೆಲ್ ಗಳಿಂದ ಉಂಟಾದ ಮಾರಣಾಂತಿಕ ಟ್ಯೂಮರ್ ಇದ್ದು ಅದು ಸಾಮಾನ್ಯ ಟಿಷ್ಯು ಗಳನ್ನು ಆಕ್ರಮಿಸಿ ಅವುಗಳಿಗೆ ಹಾನಿ ಮಾಡುತ್ತಿದ್ದು ಅದು ವೈದ್ಯಕೀಯ ಪರೀಕ್ಷೆಯಿಂದ ದೃಡ ಪಟ್ಟಲ್ಲಿ. ಹಾಗೂ ಈ ಕಾಯಿಲೆ ಇದೆ ಮತ್ತು ಅದು ಮಾರಣಾಂತಿಕ ಎನ್ನುವುದು histologocal ಆಗಿ ಪುರಾವೆ ಆದಲ್ಲಿ. ಇಲ್ಲಿ ಹೇಳಿರುವ ಕ್ಯಾನ್ಸರ್ ಅಂದರೆ ಲುಕೆಮಿಯ, ಲಿಂಫೋಮ ಮತ್ತು ಸಾರ್ಕೋಮ.
ಈ ಕೆಳಗೆ ತಿಳಿಸಿರುವ ಕಾಯಿಲೆಗಳು ಇದರಲ್ಲಿ ಸೇರಿರುವುದಿಲ್ಲ.
- Histological ವಿವರಣೆಗೆ ಸೇರಿರುವ ಈ ಕೆಳಗಿನ ಕಾಯಿಲೆಗಳು
- ಕಾರ್ಸಿನೋಮ-ಇನ್-ಸಿಟು, ಬಿನೈನ್, ಪೂರ್ವ ಮಾರಣಾಂತಿಕ, ಮಾರಣಾಂತಿಕದ ಹತ್ತಿರ, ಲೋ ಮ್ಯಾಲಿಗ್ನೆಂಟ್ ಪೊಟೆನ್ಷಿಯಲ್, ಗುರುತಿಸಲಾಗದ ವರ್ತನೆ ಉಳ್ಳ ನಿಯೋಪ್ಳಾಸ್ಮ್, ಅಥವಾ ನಾನ್ ಇನ್ವೆಸಿವ್ ಸ್ತನಗಳ ಕಾರ್ಸಿನೋಮ-ಇನ್-ಸಿಟು, ಸರ್ವಿಕಲ್ ಡಿಸ್ಪ್ಲೆಸಿಯ CIN-1,CIN-2 ಮತ್ತು CIN-3
- ಯಾವುದೇ ತರಹದ ನಾನ್-ಮೆಲನೋಮ ಸ್ಕಿನ್ ಕಾರ್ಸಿನೋಮ. ಆದರೆ ಈ ಸಂಧರ್ಭದಲ್ಲಿ ಆ ಕಾಯಿಲೆಯು ಯಾವುದೇ ರೀತಿಯ ಮೆಟಸ್ಟೆಸಸ್ ಹಾಗೂ lymph nodes ಗಳ ಗೋಚರತೆ ಇರದಿದ್ದಲ್ಲಿ.
- ಮ್ಯಾಲಿಗ್ನೆಂಟ್ ಮೆಲನೋಮ ಇದ್ದು ಅದು ಎಪಿಡರ್ಮಿಸ್ ಅನ್ನು ಆಕ್ರಮಿಸಿರಬಾರದು
- ಎಲ್ಲಾ ರೀತಿಯ ಪ್ರೋಸ್ಟೇಟ್ ನ ಟ್ಯೂಮರ್ ಗಳು. ಆದರೆ, ಹೀಗೆ ಗುರುತಿಸಿರುವ ಟ್ಯೂಮರ್ ಗಳು gleason ಲೆಕ್ಕದಲ್ಲಿ 6 ರಿಂದ ಮೇಲ್ಪಟ್ಟು ಅಥವಾ TNM ಕ್ಲಾಸಿಫಿಕೇಶನ್ ಪ್ರಕಾರ T2N0M0 ಗೆ ಪ್ರೋಗ್ರೆಸ್ ಆಗಿರಕೂಡದು
- ಎಲ್ಲಾ ರೀತಿಯ thyroid ಕ್ಯಾನ್ಸರ್ ಗಳು. ಇವುಗಳಲ್ಲಿ ಯಾವುದೇ ಕ್ಯಾನ್ಸರ್ ಗಳು histologically T1N0M0 ( TNM ಕ್ಲಾಸಿಫಿಕೇಶನ್ ಪ್ರಕಾರ) ಅಥವಾ ಅದಕ್ಕಿಂತ ಕೆಳಗಡೆ ಇದ್ದಲ್ಲಿ
- RAI ಸ್ಟೇಜ್ 3 ಕ್ಕಿಂತ ಕೆಳಗಡೆ ಇರುವ ಕ್ರೋನಿಕ್ lymphosytic ಲುಕೆಮಿಯ
- ನಾನ್- ಇನ್ವೆಸಿವ್ papillary ಬ್ಲ್ಯಾಡರ್ ಕ್ಯಾನ್ಸರ್. ಆದರೆ ಇದು histologically TaN0M0 ಅಥವಾ ಅದಕ್ಕಿಂತ ಕೆಳಗಿನ ಕ್ಲಾಸಿಫಿಕೇಶನ್ ಆಗಿದ್ದಲ್ಲಿ
- ಎಲ್ಲಾ ರೀತಿಯ ಗ್ಯಾಸ್ಟ್ರೊ ಇಂಟೆಸ್ಟೈನಲ್ ಸ್ಟ್ರೋಮಲ್ (Gastro-Intestinal stromal) ಟ್ಯೂಮರ್ ಗಳು. ಆದರೆ ಇದು histologically T1N0M0 ( TNM ಕ್ಲಾಸಿಫಿಕೇಶನ್ ಪ್ರಕಾರ) ಕೆಳಗಿನ ಕೌಂಟ್ ಹೊಂದಿದ್ದಲ್ಲಿ ಹಾಗೂ ಮಯೊಟಿಕ್ ಕೌಂಟ್ ಪ್ರಕಾರ 5/50 HPF ಗಿಂತ ಕಮ್ಮಿ ಅಥವಾ ಸರಿ ಸಮನಾಗಿ ಇದ್ದಲ್ಲಿ
- HIV ಇನ್ಫೆಕ್ಷನ್ ಇರುವ ಎಲ್ಲಾ ರೀತಿಯ ಟ್ಯೂಮರ್ಗಳು
- ಓಪನ್ ಚೆಸ್ಟ್ CABG
- ಇದರಲ್ಲಿ ಹೃದಯದಲ್ಲಿ ಯಾವುದೇ ರೀತಿಯ ಬ್ಲೋಕೇಜ್ ಇದ್ದು ಅದನ್ನು ಸರಿಪಡಿಸಲು ಮಾಡುವ ಹಾರ್ಟ್ ಸರ್ಜರಿ ಸೇರಿರುತ್ತದೆ.
- ಇದರಲ್ಲಿ ಸೇರಿಲ್ಲದೆ ಇರುವುದು, angioplasty ಮತ್ತು / ಅಥವಾ ಇನ್ನು ಯಾವುದೇ intra-arterial ಪ್ರೋಸೀಜರ್ ಗಳು
- Myocardial infarction
ಮೊದಲ ಹೃದಯಾಘಾತ ಅಥವಾ ಮಯೋಕಾರ್ಡಿಯಲ್ ಇಂಫಾರ್ಕ್ಷನ್ (Myocardial infarction). ಅಂದರೆ, ಹೃದಯದ ಒಂದು ಮಾಂಸಖಂಡವು ಅಥವಾ ಅದರ ಒಂದು ಬಾಗವು ಸರಿಯಾಗಿ ರಕ್ತವು ಪೂರೈಕೆ ಆಗದೆ ಅವಸಾನ ಹೊಂದುವುದು ಹಾಗೂ ಅದರಿಂದ ಆಗುವ ಪರಿಣಾಮ. ಈ ರೀತಿಯ ಮಯೋಕಾರ್ಡಿಯಲ್ ಇಂಫಾರ್ಕ್ಷನ್ ಆಗಿರುವುದರ ಬಗ್ಗೆ ಈ ಕೆಳ ಕಂಡ ಎಲ್ಲಾ criteria ಗಳನ್ನು ದಾಖಲೆಗಳ ಮೂಲಕ ದೃಡೀಕರಿಸಬೇಕಾಗುತ್ತದೆ.
- ಹಿಂದೆ ಅಕ್ಯೂಟ್ ಮಯೋಕಾರ್ಡಿಯಲ್ ಇಂಫಾರ್ಕ್ಷನ್ ಕಾಯಿಲೆಗೆ ಸಂಭಂದಪಟ್ಟಂತೆ ವಿಶಿಷ್ಟವಾದ ಲಕ್ಷಣಗಳು ಇದ್ದು ಅದು ವೈದ್ಯಕೀಯ ತಪಾಸಣೆಗೆ ಒಳಪಟ್ಟ ನಂತರ ಸಾಬೀತಾದಲ್ಲಿ (ಅಂದರೆ ಹೃದಯದ ಬೇನೆ)
- Electrocardiogram ನಲ್ಲಿ ಕಾಣಬರುವ ವ್ಯತ್ಯಾಸಗಳು
- ಇಂಫಾರ್ಕ್ಷನ್ ಗೆ ಸಂಭಂದಪಟ್ಟ ನಿರ್ದಿಷ್ಟ ಎಂಜೈಮ್ ಗಳು ಕಾಣಬರುವುದು, ಟ್ರೋಪೋನೀನ್ ಅಥವಾ ಇತರೆ ನಿರ್ದಿಷ್ಟ ಬಯೋಕೆಮಿಕಲ್ ಮಾರ್ಕರ್ ಗಳು.
ಈ ಕೆಳ ಕಂಡವು ಇದರಲ್ಲಿ ಸೇರಿರುವುದಿಲ್ಲ.
- ಇತರೆ ಅಕ್ಯೂಟ್ ಕರೋನರಿ ಸಿನ್ದ್ರೋಮ್ಗಳು
- ಯಾವುದೇ ರೀತಿಯ ಅಂಜಿನ ಪ್ರೆಕ್ಟೋರಿಸ್
- ಓವರ್ಟ್ ಇಶ್ಮಿಕ್ ಹೃದಯದ ಕಾಯಿಲೆಯಿಂದ ಅಥವಾ ಇಂಟ್ರ-ಅರ್ಟಿರಿಯಲ್ ಕಾರ್ಡಿಯಕ್ ಪ್ರೋಸೀಜರ್ ನಿಂದ ಉಲ್ಬಣಿಸುವ ಕಾರ್ಡಿಯಾಕ್ ಬಯೋಮಾರ್ಕರ್ಸ್ ಅಥವಾ ಟ್ರೊಪೋನಿನ್ T ಅಥವಾ I ಆದಲ್ಲಿ
- ಕಿಡ್ನೀ ಫೈಲ್ಯೂರ್ ನಿಂದ ಬೇಕಾಗಬಹುದಾದ ನಿಯಮಿತ ಡಯಾಲಿಸಿಸ್
ಎರಡೂ ಕಿಡ್ನೀ ಗಳು ಮಾರ್ಪಡಿಸಲಾಗದ ರೀತಿಯಲ್ಲಿ ಹಾನಿ ಆಗಿದ್ದಲ್ಲಿ. ಇದನ್ನು ನುರಿತ ವೈದ್ಯರು ದೃಡ ಪಡಿಸಬೇಕಾಗುತ್ತದೆ.
- ಮೇಜರ್ ಆರ್ಗನ್ ಅಥವಾ ಬೋನ್ ಮ್ಯಾರೋ ಟ್ರಾನ್ಸ್ಪ್ಲಾಂಟ್
ಇದರಲ್ಲಿ, ದೇಹದ ವಿವಿದ ಅಂಗಗಳಾದ ಹೃದಯ, ಶ್ವಾಸಕೋಶ, ಪಿತ್ತಕೋಶ, ಕಿಡ್ನೀ, ಪ್ಯಾಂಕ್ರಿಯಾಸ್ ಗಳ ಮಾರ್ಪಡಿಸಲು ಆಗದೆ ಇರುವ ಎಂಡ್ ಸ್ಟೇಜ್ ಫೈಲ್ಯೂರ್. ಇತರೆ ಸ್ಟೆಮ್ ಸೆಲ್ ಟ್ರಾನ್ಸ್ಪ್ಲಾಂಟ್ ಸೇರಿರುವುದಿಲ್ಲ.
- ಪಾರಾಲಿಸಿಸ್ ಸ್ಟ್ರೋಕ್ ನಿಂದ ಉಂಟಾಗಿರಬಹುದಾದ ಶಾಶ್ವತವಾದ ಲಕ್ಷಣಗಳು
ಇದರಲ್ಲಿ, ಬ್ರೈನ್ ಟಿಷ್ಯೂ ವಿನ ಇಂಫಾರ್ಕ್ಷನ್, ಇಂಟ್ರಾಕ್ರೇನಿಯಲ್ ವೆಸಲ್ ನಲ್ಲಿನ ಥ್ರೋಂಬೋಸಿಸ್, ಎಕ್ಸ್ಟ್ರಾಕಾರ್ಸಿನಾಲ್ ಮೂಲದಿಂದ ಉಂಟಾಗಿರಬಹುದಾದ ಹೇಮೊರೆಜ್ ಮತ್ತು ಎಂಬೊಲೈಜೇಶನ್
ಇದರಲ್ಲಿ ಕೆಳ ಕಂಡವುಗಳು ಸೇರಿರುವುದಿಲ್ಲ.
- ಟ್ರಾನ್ಸಿಯೆಂಟ್ ಇಶ್ಮಿಕ್ ಅಟಾಕ್ ಗಳು (TIA)
- ಬ್ರೈನ್ ನ ಟ್ರೌಮ್ಯಾಟಿಕ್ ಇಂಜೂರಿ ಗಳು
- ವ್ಯಸ್ಸ್ಕುಲಾರ್ ಕಾಯಿಲೆಯಿಂದ ಸೋಂಕು ಹೊಂದಿರಬಹುದಾದ ಕಣ್ಣು ಅಥವಾ ಆಪ್ಟಿಕಲ್ ನರ್ವ್ ಅಥವಾ ವೇಸ್ಟಿಬ್ಯೂಲಾರ್ ಫಂಕ್ಷನ್ ಗಳು
- ಶಾಶ್ವತವಾಗಿ ಪರಲೈಸ್ ಆಗಿರುವ ಅಂಗಗಳು
ಇಂಜೂರಿ ಇಂದ ಅಥವಾ ಬ್ರೈನ್ ನ ಕಾಯಿಲೆ ಅಥವಾ ಸ್ಪೈನಲ್ ಕಾರ್ಡ್ ಕಾಯಿಲೆ ಇಂದ ಆಗಲಿ ಸಂಪೂರ್ಣವಾಗಿ ಮತ್ತು ಗುಣಪಡಿಸಲು ಆಗದೆ ಇರುವ ರೀತಿಯಲ್ಲಿ ಅಂಗಗಳು ಸಾಮರ್ಥ್ಯತೆಯನ್ನು ಕಳೆದುಕೊಂಡಿದ್ದಲ್ಲಿ
- ನೀಡಬಹುದಾದ ಔಷದಿಗೆ ವಿರೋದವನ್ನು ನೀಡುವ ಲಕ್ಷಣ ಉಳ್ಳ ಮಲ್ಟಿಪಲ್ ಸ್ಕ್ಳೆರೋಸಿಸ್
ಇದರಲ್ಲಿ, ಯಾವುದೇ ರೀತಿಯ ನಿಸ್ಸಂದಿಗ್ದವಾದ ಡೆಫೀನಿಟ್ ಮಲ್ಟಿಪಲ್ ಸ್ಕ್ಳೆರೋಸಿಸ್ ಇದೆ ಎಂದು ಸಾಬೀತಾದಲ್ಲಿ. ಬೇರೆ ರೀತಿಯಲ್ಲಿ SLE ಹಾಗೂ HIV ಇಂದ ಉಂಟಾಗಿರಬಹುದಾದ ನ್ಯೂರೋಲಾಜಿಕಲ್ ಡ್ಯಾಮೇಜ್ ಇದರಲ್ಲಿ ಸೇರಿರುವುದಿಲ್ಲ.
- ಅಯೋರ್ಟಿಕ್ ಸರ್ಜರಿ
ಅನ್ಯುರಿಸ್ಮ್ ಅನ್ನು ದುರಸ್ತಿ (repair) ಅಥವಾ ಸರಿಪಡಿಸಲು (correct) ಮಾಡಬಹುದಾದ ಮೇಜರ್ ಸರ್ಜರಿಯು ಆಗಿದ್ದಲ್ಲಿ
- ಪ್ರೈಮರಿ (ಇಡಿಯೋಪತಿಕ್) ಪಲ್ಮನರಿ ಹೈಪರ್ಟೆನ್ಷನ್
ನಿಸ್ಸಂದೇಹವಾಗಿ ಪ್ರೈಮರಿ (ಇಡಿಯೋಪತಿಕ್) ಪಲ್ಮನರಿ ಹೈಪರ್ಟೆನ್ಷನ್ ಇರುವುದೆಂದು ಕಾರ್ಡಿಯಾಲಜಿಸ್ಟ್ ಅಥವಾ ರೇಸ್ಪಿರೇಟರಿ ಮೆಡಿಸಿನ್ ನಲ್ಲಿ ತಘ್ನತೆಯನ್ನು ಹೊಂದಿರುವವರು ರೋಗ ನಿರ್ಣಯ ಮಾಡಿದಲ್ಲಿ. ಇದರಲ್ಲಿ ಈ ಕೆಳ ಕಂಡವುಗಳು ಸೇರಿರುವುದಿಲ್ಲ.
- ಪಲ್ಮನರಿ ಹೈಪರ್ಟೆನ್ಷನ್ ಇದ್ದು ಅದರ ಜೊತೆಗೆ ಶ್ವಾಸಕೋಶದ ಕಾಯಿಲೆ ಇದ್ದಲ್ಲಿ
- ಕ್ರೋನಿಕ್ ಹೈಪೋವೆಂಟಿಲೇಷನ್
- ಪಲ್ಮನರಿ ಥ್ರೊಂಬೊಎಂಬೋಲಿಕ್ ಕಾಯಿಲೆ
- ಡೃಗ್ ಗಳು ಹಾಗೂ ಟಾಕ್ಸಿನ್ ಗಳು
- ಹೃದಯದ ಎಡ ಬಾಗದಲ್ಲಿನ ಕಾಯಿಲೆ
- ಕಂಜೆನಿಟಲ್ ಹೃದಯದ ಕಾಯಿಲೆ
- ಬೇರೆ ಯಾವುದೇ ಸೆಕಂಡರಿ ಕಾರಣಗಳಿಂದ ಉಂಟಾದ ಕಾಯಿಲೆ
- ಆಲ್ಜೀಮರ್ಸ್ ಕಾಯಿಲೆ /ಡಿಮೆಂಶಿಯ
ಈ ಕಾಯಿಲೆಯಿಂದ ಬೌದ್ದಿಕ ಸಾಮರ್ಥ್ಯವು (intellectual capacity) ನಶಿಸಿಹೋದಲ್ಲಿ ಅಥವಾ ಕಳೆದುಕೊಂಡಲ್ಲಿ
ಇದರಲ್ಲಿ ಕೆಳ ಕಂಡ ಕಾಯಿಲೆಗಳು ಸೇರಿರುವುದಿಲ್ಲ.
- ನಾನ್-ಆರ್ಗ್ಯಾನಿಕ್ ಕಾಯಿಲೆಗಳು ಅಂದರೆ ನ್ಯೂರೋಸಿಸ್ ಮತ್ತು ಸೈಕಿಯಾಟ್ರಿಕ್ ಇಲ್ಲ್ನೆಸ್ಸ್ ಗಳು
- ಅಲ್ಕೋಹಾಲ್ ಸೇವನೆಯ ಪರಿಣಾಮವಾಗಿ ಉಂಟಾಗಿರಬಹುದಾದ ಬ್ರೈನ್ ಡ್ಯಾಮೇಜ್
- ಬ್ಲೈಂಡ್ನೆಸ್ಸ್ (ಕಣ್ಣು ಕಾಣದಿರುವಿಕೆ)
ಆಕ್ಸಿಡೆಂಟ್ ಕಾರಣವಾಗಿ ಉಂಟಾಗಿರಬಹುದಾದ ಸಂಪೂರ್ಣ ಅಥವಾ ಶಾಶ್ವತ ಹಾಗೂ ಸರಿಪಡಿಸಲು ಆಗದ ಕಣ್ಣು ಕಾಣದಿರುವಿಕೆ
- ಥರ್ಡ್ ಡಿಗ್ರೀ ಸುಟ್ಟ ಗಾಯಗಳು
ಮನುಷ್ಯನ ದೇಹದ ಸುಮಾರು 20 % ಬಾಗವು ಥರ್ಡ್ ಡಿಗ್ರೀ ಸುಟ್ಟ ಗಾಯದಿಂದ ಕೂಡಿದ್ದಲ್ಲಿ
- ಓಪನ್ ಹಾರ್ಟ್ ಬದಲಿಕೆ (ರಿಪ್ಳೇಸ್ಮೆಂಟ್) ಅಥವಾ ಹಾರ್ಟ್ ವಾಲ್ವ್ ನ ರಿಪೇರಿ
ಯಾವುದೇ ರೀತಿಯ ದೋಷ ಹೊಂದಿರುವ, ಅಸಹಜತೆ ಉಳ್ಳ ಅಥವಾ ಕಾಯಿಲೆಯಿಂದ ಕೂಡಿರುವ ಕಾರ್ಡಿಯಾಕ್ ವಾಲ್ವ್/ವಾಲ್ವ್ ಗಳ ಗಳ ರಿಪೇರಿ ಅಥವಾ ಬದಲಿಕೆ (ರಿಪ್ಳೇಸ್ಮೆಂಟ್) ಗಾಗಿ ಕೈಗೊಳ್ಳುವ ಓಪನ್ ಹಾರ್ಟ್ ವಾಲ್ವ್ ಸರ್ಜರಿ
- ಬಿನೈನ್ ಬ್ರೈನ್ ಟ್ಯೂಮರ್
ಇದು ಒಂದು ಪ್ರಾಣ ತೆಗೆಯಬಹುದಾದ, ಬ್ರೈನ್ ನಲ್ಲಿ ಇರುವಂತಹ ಒಂದು ನಾನ್-ಕ್ಯಾನ್ಸರಸ್ ಟ್ಯೂಮರ್, ಕ್ರೇನಿಯಲ್ ನರ್ವ್ಸ್ ಅಥವಾ ಸ್ಕಲ್ ಒಳಗೆ ಇರುವ ಮೆನಿಂಜಸ್ ನಲ್ಲಿ ಇರಬಹುದಾದ ಟ್ಯೂಮರ್.
ಈ ಕೆಳ ಕಂಡ ಕಂಡಿಶನ್ ಗಳು ಇದರಲ್ಲಿ ಸೇರಿರುವುದಿಲ್ಲ.
- ಸಿಸ್ಟ್ ಗಳು
- ಗ್ರಾನುಲೋಮೋಸ್
- ಬ್ರೈನ್ ನಲ್ಲಿ ಇರುವ ಆರ್ಟರಿ ಅಥವಾ ವೆಯಿನ್ಸ್ ಗಳಲ್ ಮಾಲ್ ಫಾರ್ಮೇಷನ್ಸ್
- ಹೆಮಟೋಮಾಸ್
- ಅಬ್ಸೆಸ್ಸಸ್
- ಪಿಟ್ಯೂಟರಿ ಟ್ಯೂಮರ್
- ಸ್ಕಲ್ ಬೋನ್ ಗಳ ಟ್ಯೂಮರ್
- ಸ್ಪೈನಲ್ ಕಾರ್ಡ್ ನ ಟ್ಯೂಮರ್
ಎಲ್ ಐ ಸಿ ಕ್ರಿಟಿಕಲ್ ಇಲ್ಲ್ನೆಸ್ಸ್ ಬೆನಿಫಿಟ್ ರೈಡರ್ – ಅರ್ಹತೆಗಳು ಹಾಗೂ ನಿಬಂದನೆಗಳು
ಎಲ್ ಐ ಸಿ ಕ್ರಿಟಿಕಲ್ ಇಲ್ಲ್ನೆಸ್ಸ್ ಬೆಂಫಿಟ್ ರೈಡರ್ ಪಡೆಯಲು ಈ ಕೆಳ ಕಂಡ ಅರ್ಹತೆಗಳು ಹಾಗೂ ನಿಬಂದನೆಗಳು ಅನ್ವಯ ಆಗುತ್ತವೆ.
ಪಾಲಿಸಿದಾರನು ರೈಡರ್ ಪಡೆಯುವಾಗ ಕನಿಷ್ಠ ವಯಸ್ಸು |
18 ವರ್ಷಗಳು (ಮುಗಿದಿರಬೇಕು) |
ಪಾಲಿಸಿದಾರನು ರೈಡರ್ ಪಡೆಯುವಾಗ ಗರಿಷ್ಠ ವಯಸ್ಸು |
65 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ) |
ರೈಡರ್ ನ ಕನಿಷ್ಠ ಸಮ್ ಅಶ್ಶುರ್ಡ್ ಮೊತ್ತ |
ರೂ 1,00,000 |
ರೈಡರ್ ನ ಗರಿಷ್ಠ ಸಮ್ ಅಶ್ಶುರ್ಡ್ ಮೊತ್ತ |
ಇದು ಬೇಸ್ ಪ್ಲಾನ್ ನಲ್ಲಿನ ಸಮ್ ಅಶ್ಶುರ್ಡ್ ಆನ್ ಡೆತ್ ಮೊತ್ತಕ್ಕೆ ಸಮನಾಗಿದ್ದು, ಒಟ್ಟು ರೂ 25,00,000 ಕ್ರಿಟಿಕಲ್ ಇಲ್ಲ್ನೆಸ್ಸ್ ಸಮ್ ಅಶ್ಶುರ್ಡ್ ಮೊತ್ತವನ್ನು ಮೀರಬಾರದು |
ಪ್ರೀಮಿಯಂ ಪೆಯಿಂಗ್ ಟರ್ಮ್ |
ಬೇಸ್ ಪ್ಲಾನ್ ನಲ್ಲಿ ಇರುವ ಪ್ರೀಮಿಯಂ ಪೆಯಿಂಗ್ ಟರ್ಮ್ಸ್ ಗಳು ಇದಕ್ಕೂ ಅನ್ವಯ ಆಗುತ್ತದೆ. (ನಿಯಮಿತವಾಗಿ ಪ್ರೀಮಿಯಂ ನೀಡುವ ಪಾಲಿಸಿಗಳು (5 ವರ್ಷದಿಂದ 35 ವರ್ಷದವರೆಗೆ) |
ಲಿಮಿಟೆಡ್ ಪ್ರೀಮಿಯಂ ಪಾಲಿಸಿಗಳು (10 ವರ್ಷದಿಂದ 35 ವರ್ಷಗಳು) |
5 ವರ್ಷದಿಂದ (ಪಾಲಿಸಿಯ ಟರ್ಮ್ – 1) ವರ್ಷಗಳು |
ರೈಡರ್ ನ ಕವರೆಜ್ ಮುಗಿಯುವ ಗರಿಷ್ಠ ವಯಸ್ಸು |
75 ವರ್ಷಗಳು |
ಪಾಲಿಸಿಯ ಪ್ರೀಮಿಯಂ ನೀಡುವ ರೀತಿ |
ವರ್ಷಕ್ಕೊಮ್ಮೆ, ಅರ್ದ ವರ್ಷಕ್ಕೊಮ್ಮೆ, 3 ತಿಂಗಳಿಗೊಮ್ಮೆ ತಿಂಗಳಿಗೊಮ್ಮೆ |
ಪ್ರೀಮಿಯಂ ರೇಟ್ಸ್
ಕ್ರಿಟಿಕಲ್ ಇಲ್ಲ್ನೆಸ್ಸ್ ರೈಡರ್ ಪ್ರೀಮಿಯಂ ಗಳು ಗ್ಯಾರಂಟಿಡ್ ಆಗಿದ್ದು ಅದು ಪಾಲಿಸಿಯು ಪಡೆದ ದಿವಸದಿಂದ ಮೊದಲ 5 ವರ್ಷಗಳಿಗೆ ಅನ್ವಯ ಆಗುತ್ತದೆ. ಕಾರ್ಪೊರೇಷನ್ ನ ನಿಯಮದ ಪ್ರಕಾರ, ಮುಂದಿನ ಅವದಿಯ ಪ್ರೀಮಿಯಂ ರೇಟ್ಸ್ ಗಳಲ್ಲಿ ಬದಲಾವಣೆ ಆಗುತ್ತದೆ.
ಕ್ರಿಟಿಕಲ್ ಇಲ್ನೆಸ್ಸ್ ಸಮ್ ಅಶ್ಶುರ್ಡ್ ಮೊತ್ತದ ಪ್ರತಿ ರೂ 1000 ಕ್ಕೆ ತಗಲುವ ಪ್ರೀಮಿಯಂ ರೇಟ್ಸ್ (ಸರ್ವಿಸ್ ಟಾಕ್ಸ್ ಅನ್ನು ಹೊರತು ಪಡಿಸಿ) ಅನ್ನು ಕೆಳಗಿನ ಟೇಬಲ್ ನಲ್ಲಿ ವಿವರಿಸಲಾಗಿದೆ.
ರೆಗ್ಯುಲರ್ ಪ್ರೀಮಿಯಂ ಪಾಲಿಸಿಗಳು
ಪಾಲಿಸಿದಾರನ ವಯಸ್ಸು (ವರ್ಷಗಳಲ್ಲಿ) |
ಪಾಲಿಸಿಯ ಟರ್ಮ್ (ವರ್ಷಗಳಲ್ಲಿ) |
||||
10 ವರ್ಷಗಳು |
20 ವರ್ಷಗಳು |
||||
ಗಂಡಸು |
ಹೆಂಗಸು |
ಗಂಡಸು |
ಹೆಂಗಸು |
||
20 |
1.07 |
1.08 |
1.20 |
1.36 |
|
30 |
1.82 |
2.16 |
2.74 |
2.91 |
|
40 |
4.65 |
4.52 |
6.75 |
5.80 |
|
50 |
10.96 |
8.47 |
14.24 |
10.12 |
ಲಿಮಿಟೆಡ್ ಪ್ರೀಮಿಯಂ ಪಾಲಿಸಿಗಳು
ಪಾಲಿಸಿದಾರನ ವಯಸ್ಸು (ವರ್ಷಗಳಲ್ಲಿ) |
ಪಾಲಿಸಿಯ ಟರ್ಮ್ – 25 ವರ್ಷಗಳು |
||||
PPT-16 ವರ್ಷಗಳು |
PPT- 20 ವರ್ಷಗಳು |
||||
ಗಂಡಸು |
ಹೆಂಗಸು |
ಗಂಡಸು |
ಹೆಂಗಸು |
||
20 |
1.87 |
2.07 |
1.63 |
1.80 |
|
30 |
4.32 |
4.29 |
3.77 |
3.75 |
|
40 |
9.93 |
8.18 |
8.72 |
7.17 |
|
50 |
19.38 |
13.72 |
17.20 |
12.09 |
PPT – ಪ್ರೀಮಿಯಂ ಪೆಯಿಂಗ್ ಟರ್ಮ್
ಎಲ್ ಐ ಸಿ ಕ್ರಿಟಿಕಲ್ ಇಲ್ಲ್ನೆಸ್ಸ್ ಬೆನಿಫಿಟ್ ರೈಡರ್ – ಬೆನಿಫಿಟ್ ಗಳು
ಪ್ರೀಮಿಯಂ ಮೇಲೆ ಹಾಗೂ ಹೆಚ್ಚುವರಿ ಸಮ್ ಅಶ್ಶುರ್ಡ್ ಮೊತ್ತದ ಮೇಲೆ ರಿಯಾಯತಿ
ಬೇಸ್ ಪ್ಲಾನ್ ಅಡಿಯಲ್ಲಿ ದೊರಕುವ ಪ್ರೀಮಿಯಂ ಮೇಲಿನ ರಿಯಾಯತಿ ರೈಡರ್ ಪ್ರೀಮಿಯಂ ಗೂ ಅನ್ವಯ ಆಗುತ್ತದೆ. ಆದರೆ ಹೆಚ್ಚುವರಿ ಸಮ್ ಅಶ್ಶುರ್ಡ್ ಮೊತ್ತಕ್ಕೆ ಯಾವುದೇ ರಿಯಾಯತಿ ಇರುವುದಿಲ್ಲ.
ರಿವೈವಲ್
ಬೇಸ್ ಪಾಲಿಸಿಗೆ ಅನ್ವಯ ಆಗುವ ರಿವೈವಲ್ ಟರ್ಮ್ ಗಳು ಈ ರೈಡರ್ ಗೂ ಅನ್ವಯ ಆಗುತ್ತದೆ. ಹಾಗೆಯೇ, ಬೇಸ್ ಪಾಲಿಸಿಯನ್ನು ರಿವೈವ್ ಮಾಡುವ ಸಮಯದಲ್ಲಿಯೇ ರೈಡರ್ ಅನ್ನು ಕೂಡ ರಿವೈವ್ ಮಾಡಬೇಕಾಗುತ್ತದೆ.
ಪೈಡ್-ಅಪ್ ಮೌಲ್ಯ
ಈ ರೈಡರ್ ಗೆ ಪೈಡ್-ಅಪ್ ಮೌಲ್ಯ ಇರುವುದಿಲ್ಲ.
ಸರಂಡರ್ ಮೌಲ್ಯ
ಈ ರೈಡರ್ ಅಡಿಯಲ್ಲಿ ಸರಂಡರ್ ಮೌಲ್ಯವು ಇರುವುದಿಲ್ಲ.
ಅನ್ವಯವಾಗುವ ತೆರಿಗೆಗಳು
ಕ್ರಿಟಿಕಲ್ ಇಲ್ನೆಸ್ಸ್ ರೈಡರ್ ಗೆ ವಿದಿಸಬಹುದಾದ ಸರ್ಕಾರದ ತೆರಿಗೆಗಳು ಅನ್ವಯ ಆಗುತ್ತವೆ. ಹಾಗೂ ಆ ತೆರಿಗೆಗಳು ಸಮಯದಿಂದ ಸಮಯಕ್ಕೆ ಸರ್ಕಾರದ ಆದೇಶದಂತೆ ಬದಲಾವಣೆ ಆಗುತ್ತದೆ.
ಫ್ರೀ ಲುಕ್ ಪೀರಿಯಡ್
ಫ್ರೀ ಲುಕ್ ಪೀರಿಯಡ್ ಅನ್ನು ಈ ರೈಡರ್ ಗೂ ನೀಡಲಾಗುತ್ತದೆ. ಈ ಫ್ರೀ ಲುಕ್ ಪೀರಿಯಡ್ ನಲ್ಲಿ, ಪಾಲಿಸಿದಾರನು, ಪಾಲಿಸಿಯ ದಾಖಲೆಗಳು ಅವನ ಕೈ ಸೇರಿದ 15 ದಿವಸಗಳಲ್ಲಿ ಅದರಲ್ಲಿ ನಮೂದಿಸಿರುವ ಎಲ್ಲ ನಿಯಮಗಳು ಹಾಗೂ ನಿಬಂದನೆಗಳನ್ನು ಓದಿ ಅದನ್ನು ಅರ್ಥ ಮಾಡಿಕೊಳ್ಳಲು ನೀಡುವ ಕಾಲಾವಕಾಶ ಆಗಿರುತ್ತದೆ. ಅಕಸ್ಮಾತ್ ಪಾಲಿಸಿದಾರನಿಗೆ ಇದರಲ್ಲಿರುವ ಯಾವುದೇ ನಿಯಮಗಳ ಅಥವಾ ನಿಬಂದನೆಗಳ ಬಗ್ಗೆ ಒಪ್ಪಿಗೆ ಆಗದಿದ್ದಲ್ಲಿ, ಆ ಪಾಲಿಸಿಯನ್ನು ಆತನು 15 ದಿನಗಳ ಒಳಗೆ ಎಲ್ ಐ ಸಿ ಗೆ ಹಿಂದಿರುಗಿಸಬಹುದು. ಆದರೆ, ಆ ರೀತಿ ಹಿಂದಿರುಗಿಸಲು ಕಾರಣ ನೀಡಬೇಕಾಗುತ್ತದೆ. ಪಾಲಿಸಿಯು ಕಾರ್ಪೊರೇಷನ್ ಗೆ ತಲುಪಿದ ಕೂಡಲೇ ಆ ಪಾಲಿಸಿಯನ್ನು ರದ್ದು ಮಾಡಲಾಗುವುದು.