ಎಲ್ ಐ ಸಿ ಜೀವನ್ ಅಕ್ಷಯ್ ಪ್ಲಾನ್
 • ಅತ್ಯುತ್ತಮ ಯೋಜನೆಗಳು
 • ಸುಲಭ ಹೋಲಿಕೆ
 • ತಕ್ಷಣದ ಖರೀದಿ
PX step

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಫೋನ್ ಸಂಖ್ಯೆ
ಹೆಸರು
ಹುಟ್ಟಿದ ದಿನಾಂಕ

1

2

ಆದಾಯ
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಎಲ್ ಐ ಸಿ ಯು ಭಾರತ ಸರ್ಕಾರದ ಒಂದು ಅಂಗ ಸಂಸ್ಥೆ ಆಗಿದ್ದು, ಜೀವ ವಿಮಾ ಯೋಜನೆಗಳನ್ನು ನೀಡುವಲ್ಲಿ ಇತರ ಎಲ್ಲಾ ಇನ್ಸೂರೆನ್ಸ್ ಕಂಪನಿಗಳಿಗಿಂತ ಮೊದಲನೆಯ ಸ್ತಾನದಲ್ಲಿರುತ್ತದೆ. ಈ ಸಂಸ್ತೆಯನ್ನು ಅಂದಿನ ಭಾರತ ಸರ್ಕಾರವು 1956 ನೇ ಇಸವಿಯಲ್ಲಿ ಆಗ ಇದ್ದ 245 ಖಾಸಗಿ ಕಂಪನಿಗಳನ್ನು ವಿಲೀನ ಗೊಳಿಸಿ, ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯ ಎಂದು ನಾಮಕರಣ ಮಾಡಿ, ಸ್ಥಾಪನೆ ಮಾಡಿತು. ಆ ದಿನದಿಂದ ಈ ವರೆವಿಗೂ, ಎಲ್ ಐ ಸಿ ಯು ತನ್ನ ದೂರ ದೃಷ್ಟಿಯಿಂದ, ಸಮಾಜದ  ಎಲ್ಲಾ ಬಾಗದ ಹಾಗೂ ವಿವಿದ ಪ್ರಾಂತ್ಯಗಳ ಜನರಿಗೆ ಅವರ ಅನುಕೂಲಕ್ಕೆ ತಕ್ಕಂತೆ ಮತ್ತು ಅವರ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಜೀವ ವಿಮಾ ಯೋಜನೆಗಳನ್ನು ನೀಡುತ್ತಾ ಬಂದಿದೆ. ಆ ಯೋಜನೆಗಳನ್ನು ರೂಪಿಸುವಾಗ, ಪ್ರತಿಯೊಬ್ಬರ ಅಗತ್ಯತೆಗಳನ್ನು ಗಮನಕ್ಕೆ ತೆಗೆದುಕೊಂಡು, ಪಾಲಿಸಿಗಳನ್ನು ಸಮಯಕ್ಕೆ ತಕ್ಕಂತೆ ಬೇರೆ ಬೇರೆ ಯೋಜನೆಗಳ ಮೂಲಕ ನೀಡುತ್ತಾ ಬಂದಿರುತ್ತದೆ.

ಎಲ್ ಐ ಸಿ ಜೀವನ್ ಅಕ್ಷಯ್ ಪ್ಲಾನ್ ಅಂತಹ ಒಂದು ಅಗತ್ಯತೆಯನ್ನು ಮನದಲ್ಲಿ ಇಟ್ಟುಕೊಂಡು ರೂಪಿಸಿರುವ ಯೋಜನೆ ಆಗಿರುತ್ತದೆ. ಇದು ಪಾಲಿಸಿದಾರನ ಭವಿಷ್ಯವನ್ನು ಗಣನೆಗೆ ತೆಗೆದುಕೊಂಡು, ಒಂದು ಶುದ್ಧ ಪೆನ್ಷನ್ ನೀಡುವ ಪ್ಲಾನ್ ಆಗಿರುತ್ತದೆ. ಇದನ್ನು ಪಾಲಿಸಿದಾರನು ಹಿರಿಯ ನಾಗರಿಕನಾಗಿದ್ದಲ್ಲಿ, ಅವನಿಗೆ ನಿಯಮಿತವಾಗಿ ಪ್ರತಿ ತಿಂಗಳೂ ಒಂದು ಖಚಿತ ಮೊತ್ತ ಬರುವ ಹಾಗೆ ಸಹಾಯ ಮಾಡುವ ಯೋಜನೆ ಆಗಿರುತ್ತದೆ. ಇದು ಒಂದು ವಾರ್ಷಿಕ ಆದಾಯ ಮಾದರಿ ಪ್ಲಾನ್. ವಾರ್ಷಿಕ ಆದಾಯದ ಅಡಿಯಲ್ಲಿ, ಪಾಲಿಸಿದಾರರು ಪೆನ್ಷನ್ ಮೊತ್ತವನ್ನು ನಿಗದಿತ ಸಮಯದಲ್ಲಿ ಪಡೆಯುತ್ತಾನೆ. ನಿಮಗೆ ಅನುಕೂಲವಾಗುವ ರೀತಿಯಲ್ಲಿ ನೀವು ಪೇಮೆಂಟ್ ರೀತಿಯನ್ನು ಆಯ್ಕೆ ಮಾಡಿಕೊಳ್ಳಬಹುದು.  ಈ ಯೋಜನೆಯು, ಪಾಲಿಸಿದಾರನಿಗೆ ಅವನ ನಿವೃತ್ತಿ ಸಮಯದಲ್ಲಿ ಆರ್ಥಿಕವಾಗಿ ಯಾವುದೇ ತೊಂದರೆಯನ್ನು ಅನುಭವಿಸದೆ ಇರುವ ರೀತಿಯಲ್ಲಿ ಸಹಾಯ ಮಾಡುತ್ತದೆ.

ಎಲ್ ಐ ಸಿ ಜೀವನ್ ಅಕ್ಷಯ್ ಪ್ಲಾನ್ – ವಿವರಗಳು

ಎಲ್ ಐ ಸಿ ಜೀವನ್ ಅಕ್ಷಯ್ ಪ್ಲಾನ್ ನ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

 • ಇದು ಪಾಲಿಸಿದಾರನಿಗೆ ಅವನ ನಿವೃತ್ತಿ ಸಮಯದಲ್ಲಿ / ವಯಸ್ಸಿನಲ್ಲಿ  ಒಂದು ಶುದ್ಧ ಪೆನ್ಷನ್ ನೀಡುವ ಯೋಜನೆ ಆಗಿರುತ್ತದೆ
 • ಈ ಪ್ಲಾನ್ ಅಡಿಯಲ್ಲಿ, ಪಾಲಿಸಿದಾರನು ಕೇವಲ ಸಿಂಗಲ್ ಪ್ರೀಮಿಯಂ ಮಾತ್ರ ನೀಡಬೇಕಾಗುತ್ತದೆ
 • ಈ ಸಿಂಗಲ್ ಪ್ರೀಮಿಯಂ ಅನ್ನು ಪಾಲಿಸಿದಾರನು ಪಾಲಿಸಿಯನ್ನು ಪಡೆಯುವ ಸಮಯದಲ್ಲಿಯೇ ನೀಡಬೇಕಾಗುತ್ತದೆ
 • ಈ ಸಿಂಗಲ್ ಪ್ರೀಮಿಯಂ ಮೊತ್ತವು ಪಾಲಿಸಿದಾರನು ಪಡೆಯಲು ಬಯಸುವ ಪೆನ್ಷನ್ ಮೊತ್ತದ ಮೇಲೆ ಅವಲಂಬಿತವಾಗಿರುತ್ತದೆ.
 • ನಿಮಗೆ ಹೆಚ್ಚು ಪೆನ್ಷನ್ ಬೇಕಾದಲ್ಲಿ, ಕಟ್ಟಬೇಕಾಗುವ ಸಿಂಗಲ್ ಪ್ರೀಮಿಯಂ ಮೊತ್ತವು ಕೂಡ ಹೆಚ್ಚಿರುತ್ತದೆ
 • ಈ ಪ್ಲಾನ್ ಅಡಿಯಲ್ಲಿ, ಪಾಲಿಸಿದಾರನಿಗೆ ಜೀವ ವಿಮೆ ಇರುವುದಿಲ್ಲ, ಏಕೆಂದರೆ, ಈ ಪ್ಲಾನ್ ಕೇವಲ ಪೆನ್ಷನ್ ನೀಡುವ ಯೋಜನೆ ಆಗಿರುತ್ತದೆ. ಹಾಗೂ ಯಾವುದೇ ಲಾಭ ಬರುವ ಯೋಜನೆಗಳಲ್ಲಿ ನೀವು ನೀಡಿರುವ ಹಣವು ಹೂಡಿಕೆ ಆಗಿರುವುದಿಲ್ಲ. ಆದ್ದರಿಂದ, ಯಾವುದೇ ಲಾಭವೂ ಸೇರಿರುವುದಿಲ್ಲ.
 • ನೀವು ನೀಡಿರುವ ಪ್ರೀಮಿಯಂ ಮೊತ್ತವು ಕೇವಲ ನಿಮಗೆ ಮುಂದಿನ ಪೆನ್ಷನ್ ಹಣವನ್ನು ನೀಡುವ ದಿಕ್ಕಿನಲ್ಲಿ ತೆಗೆದುಕೊಂಡಿರುವ ಮೊತ್ತವಾಗಿರುತ್ತದೆ.
 • 2017 ರಲ್ಲಿ, ಈ ಯೋಜನೆಯನ್ನು ಭಾರತ ಸರ್ಕಾರವು ಜನರ ಉಪಯೋಗಕ್ಕೋಸ್ಕರ ನೀಡಿತು
 • ಇದರಿಂದಾಗಿ, ಅನೇಕ ಹಿರಿಯ ನಾಗರೀಕರಿಗೆ ಉಪಯೋಗ ಆಗುತ್ತಲಿದೆ
 • ಇದರ ವೈಶಿಷ್ಟ್ಯವೆಂದರೆ ಇದು ಪ್ರೀಮಿಯಂ  ಮೊತ್ತವನ್ನು ಪಾಲಿಸಿ ಮಾಡಿದ ತಕ್ಷಣದಿಂದಲೇ ಪೆನ್ಷನ್ ಮೊತ್ತವನ್ನು ನೀಡಲು ಆರಂಭ ಮಾಡುತ್ತದೆ. ಅಂದರೆ, ಪಾಲಿಸಿದಾರನು ಆಯ್ಕೆ ಮಾಡಿರುವ ಆಪ್ಶನ್ ಗೆ ಅನುಗುಣವಾಗಿ ಮಾಡಿದ್ದಲ್ಲಿ ಹಾಗೂ ಪೆನ್ಷನ್ ಹಣವು ತಿಂಗಳಿಗೊಮ್ಮೆ  ನೀಡಬೇಕೆಂದು ನಮೂದಿಸಿದ್ದಲ್ಲಿ, ಆತನಿಗೆ ಪೆನ್ಷನ್ ಪಾಲಿಸಿ ಮಾಡಿದ ಮುಂದಿನ ತಿಂಗಳಿಗೆ ಪೆನ್ಷನ್ ಬರಲು ಶುರು ಆಗುತ್ತದೆ.
 • ಈ ಪಾಲಿಸಿಯನ್ನು ಪಡೆಯಲು ಪಾಲಿಸಿದಾರನು ಯಾವುದೇ ರೀತಿಯ ವೈದ್ಯಕೀಯ ತಪಾಸಣೆಗೆ ಒಳಗಾಗುವ ಪ್ರಮೇಯ ಇರುವುದಿಲ್ಲ. ಏಕೆಂದರೆ ಈ ಪಾಲಿಸಿಯು ಪಾಲಿಸಿದಾರನ ಲೈಫ್ ರಿಸ್ಕ್ ಕವರೆಜ್ ಮಾಡುವುದಿಲ್ಲ

ಎಲ್ ಐ ಸಿ ಜೀವನ್ ಅಕ್ಷಯ್ ಪ್ಲಾನ್ – ಆಪ್ಶನ್ ಗಳು

ಎಲ್ ಐ ಸಿ ಜೀವನ್ ಅಕ್ಷಯ್ ಪ್ಲಾನ್ ನ ನಿಯಮದ ಪ್ರಕಾರ, ಪಾಲಿಸಿದಾರನು ಪ್ರೀಮಿಯಂ ಅನ್ನು ಸಿಂಗಲ್ ಪ್ರೀಮಿಯಂ ರೂಪದಲ್ಲಿ ನೀಡಬೇಕಾಗುತ್ತದೆ. ಈ ಪಾಲಿಸಿಯನ್ನು ಪಡೆಯುವಾಗ, ಆತನು ತನಗೆ ಪೆನ್ಷನ್ ರೂಪದಲ್ಲಿ ಎಷ್ಟು ಮೊತ್ತ ಬರಬೇಕೆಂದು ನಿರ್ದರಿಸಿಕೊಂಡು ಅದರ ಪ್ರಕಾರ ಸಿಂಗಲ್ ಪ್ರೀಮಿಯಂ ಮೊತ್ತವನ್ನು ಪಾಲಿಸಿಯನ್ನು ಪಡೆಯುವಾಗ ಪಾವತಿಸಬೇಕಾಗುತ್ತದೆ. ಎಲ್ ಐ ಸಿ ಜೀವನ್ ಅಕ್ಷಯ್ ಪ್ಲಾನ್ ಪಾಲಿಸಿದಾರನಿಗೆ ಈ ಕೆಳ ಕಂಡ ಆಪ್ಶನ್ ಗಳನ್ನು ನಮೂದಿಸಿ, ಅದರಲ್ಲಿ ಆತನಿಗೆ ಅನುಕೂಲ ಆಗುವಂತಹ ಆಪ್ಶನ್ ಅನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡುತ್ತದೆ.

ಈ ಪಾಲಿಸಿಯ ಅಡಿಯಲ್ಲಿ, 7 ಆಪ್ಶನ್ ಗಳನ್ನು ಪಾಲಿಸಿದಾರನಿಗೆ ನೀಡಿದ್ದು ಅದರಲ್ಲಿ, ಆತನು ಯಾವುದಾದರೂ ಒಂದನ್ನು ಪಾಲಿಸಿಯನ್ನು ಪಡೆಯುವಾಗಲೇ ಆರಿಸಿಕೊಳ್ಳಬೇಕು. ಅವುಗಳೆಂದರೆ:

 • ಏಕ ಪ್ರಕಾರದ ವಾರ್ಷಿಕ ಆದಾಯವನ್ನು ಪೆನ್ಷನ್ ರೂಪದಲ್ಲಿ ಪಾಲಿಸಿದಾರನ ಪೂರ್ಣ ಆಯಸ್ಸು ಇರುವವರೆಗೂ ನೀಡುವುದು {ಅಂದರೆ ಅವನ ಜೀವನ ಪರ್ಯಂತ)
 • ಏಕ ಪ್ರಕಾರದ ವಾರ್ಷಿಕ ಆದಾಯವನ್ನು ಪೆನ್ಷನ್ ರೂಪದಲ್ಲಿ ಪಾಲಿಸಿದಾರನ ಪೂರ್ಣ ಆಯಸ್ಸು ಇರುವವರೆಗೂ ನೀಡುವುದು {ಅಂದರೆ ಅವನ ಜೀವನ ಪರ್ಯಂತ) ಹಾಗೂ ಅವನು ನೀಡಿರುವ ಸಿಂಗಲ್ ಪ್ರೀಮಿಯಂ ಮೊತ್ತವನ್ನು ಪಾಲಿಸಿಯ ಆವದಿ ಮುಗಿದ ನಂತರ ನಾಮಿನಿಗೆ ವಾಪಸ್ಸು ಕೊಡುವುದು.
 • ಏಕ ಪ್ರಕಾರದ ವಾರ್ಷಿಕ ಆದಾಯವನ್ನು ಪೆನ್ಷನ್ ರೂಪದಲ್ಲಿ, 5 ವರ್ಷಗಳು / 10 ವರ್ಷಗಳು / 15 ವರ್ಷಗಳು ಹಾಗೂ 20 ವರ್ಷಗಳು ನೀಡುವುದು. ಹಾಗೂ ಆವದಿ ಮುಗಿದ ಮೇಲೂ ಪಾಲಿಸಿದಾರನು ಜೀವಂತವಾಗಿದ್ದಲ್ಲಿ, ಪೆನ್ಷನ್ ಮೊತ್ತವನ್ನು ಜೀವನ ಪರ್ಯಂತ ನೀಡುವುದು
 • ಏಕ ಪ್ರಕಾರದ ವಾರ್ಷಿಕ ಆದಾಯವನ್ನು ವಾರ್ಷಿಕವಾಗಿ 3 % ಹೆಚ್ಚಿಗೆ ಮಾಡಿ ಪೆನ್ಷನ್ ಮೊತ್ತವನ್ನು ನೀಡುವುದು.
 • ಏಕ ಪ್ರಕಾರದ ವಾರ್ಷಿಕ ಆದಾಯವನ್ನು ಪೆನ್ಷನ್ ರೂಪದಲ್ಲಿ ಪಾಲಿಸಿದಾರನ ಪೂರ್ಣ ಆಯಸ್ಸು ಇರುವವರೆಗೂ ನೀಡುವುದು. ಹಾಗೂ ತದ ನಂತರ ಆತನ / ಅವಳ ಹೆಂಡತಿ / ಗಂಡನಿಗೆ ವಾರ್ಷಿಕ ಆದಾಯ ದ 50 % ಮೊತ್ತವನ್ನು ಪೆನ್ಷನ್ ರೂಪದಲ್ಲಿ ನೀಡುವುದು.
 • ಏಕ ಪ್ರಕಾರದ ವಾರ್ಷಿಕ ಆದಾಯವನ್ನು ಪೆನ್ಷನ್ ರೂಪದಲ್ಲಿ ಪಾಲಿಸಿದಾರನ ಪೂರ್ಣ ಆಯಸ್ಸು ಇರುವವರೆಗೂ ನೀಡುವುದು. ಹಾಗೂ ತದ ನಂತರ ಆತನ / ಅವಳ ಹೆಂಡತಿ / ಗಂಡನಿಗೆ ವಾರ್ಷಿಕ ಆದಾಯ ದ 100 % ಮೊತ್ತವನ್ನು ಪೆನ್ಷನ್ ರೂಪದಲ್ಲಿ ನೀಡುವುದು
 • ಏಕ ಪ್ರಕಾರದ ವಾರ್ಷಿಕ ಆದಾಯವನ್ನು ಪೆನ್ಷನ್ ರೂಪದಲ್ಲಿ ಪಾಲಿಸಿದಾರನ ಪೂರ್ಣ ಆಯಸ್ಸು ಇರುವವರೆಗೂ ನೀಡುವುದು. ಹಾಗೂ ತದ ನಂತರ ಆತನ / ಅವಳ ಹೆಂಡತಿ / ಗಂಡನಿಗೆ ವಾರ್ಷಿಕ ಆದಾಯ ದ 100 % ಮೊತ್ತವನ್ನು ಪೆನ್ಷನ್ ರೂಪದಲ್ಲಿ ನೀಡುವುದು, ಹಾಗೂ ಕೊನೆಯ ಬೇನೆಫಿಶಿಯರಿಯ ಮರಣ ಆದ ನಂತರ ಸಿಂಗಲ್ ಪ್ರೀಮಿಯಂ ಮೊತ್ತವನ್ನು ಆಗ ಯಾರು ನಾಮಿನಿ ಇರುತ್ತಾರೋ ಅವರಿಗೆ ನೀಡುವುದು.

ಎಲ್ ಐ ಸಿ ಜೀವನ್ ಅಕ್ಷಯ್ ಪ್ಲಾನ್ – ಆಪ್ಶನ್ ಗಳ ಉದಾಹರಣೆಗಳು

ಎಲ್ ಐ ಸಿ ಜೀವನ್ ಅಕ್ಷಯ್ ಪ್ಲಾನ್ ನಲ್ಲಿ ಪಾಲಿಸಿದಾರನಿಗೆ ನೀಡಿರುವ ಆಪ್ಶನ್ ಗಳ ಉದಾಹರಣೆಯನ್ನು ಈ ಕೆಳಗೆ ನೀಡಲಾಗಿದೆ.

ಪಾಲಿಸಿ ಪಡೆಯುವಾಗ ಪಾಲಿಸಿದಾರನ ವಯಸ್ಸು  - 60 ವರ್ಷಗಳು

ಪೆನ್ಷನ್ ಪಡೆಯಲು ಸೂಚಿಸಿರುವ ರೀತಿ – ವರ್ಷಕ್ಕೊಮ್ಮೆ

ಪಾಲಿಸಿದಾರನು ನೀಡಿರುವ ಸಿಂಗಲ್ ಪ್ರೀಮಿಯಂ ಮೊತ್ತ  - ರೂ 5,00,000

ಈ ಮೇಲಿನ ವಿವರಗಳನ್ನು ಅಳವಡಿಸಿಕೊಂಡು ಕೆಳಗಿನ ಆಪ್ಶನ್ ಗಳ ಲೆಕ್ಕಾಚಾರವನ್ನು ಮಾಡಲಾಗಿದೆ 

 • ಏಕ ಪ್ರಕಾರದ ವಾರ್ಷಿಕ ಆದಾಯವನ್ನು ಪೆನ್ಷನ್ ರೂಪದಲ್ಲಿ ಪಾಲಿಸಿದಾರನ ಪೂರ್ಣ ಆಯಸ್ಸು ಇರುವವರೆಗೂ ನೀಡುವುದು - ಈ ಆಪ್ಶನ್ ಅಡಿಯಲ್ಲಿ, ಪಾಲಿಸಿದಾರನು ಅವನ ಪೂರ್ಣ ಆಯಸ್ಸು ಇರುವವರೆಗೂ ಪೆನ್ಷನ್ ಮೊತ್ತವನ್ನು ಅವನು ಸೂಚಿಸಿರುವ ರೀತಿಯಲ್ಲಿ ಪಡೆಯುತ್ತಾನೆ  ಅದರ ನಂತರ, ಈ ಪ್ಲಾನ್ ಮುಂದುವರೆಯುವುದಿಲ್ಲ. ಮೇಲಿನ ವಿವರಗಳ ಪ್ರಕಾರ, ಪಾಲಿಸಿದಾರನು ವಾರ್ಷಿಕವಾಗಿ ರೂ 48,750 ಗಳನ್ನು ಈ ಪ್ಲಾನ್ ನಿಯಮದ ಪ್ರಕಾರ ಪಡೆಯುತ್ತಾನೆ. 
 • ಏಕ ಪ್ರಕಾರದ ವಾರ್ಷಿಕ ಆದಾಯವನ್ನು ಪೆನ್ಷನ್ ರೂಪದಲ್ಲಿ ಪಾಲಿಸಿದಾರನ ಪೂರ್ಣ ಆಯಸ್ಸು ಇರುವವರೆಗೂ ನೀಡುವುದು {ಅಂದರೆ ಅವನ ಜೀವನ ಪರ್ಯಂತ) ಹಾಗೂ ಅವನು ನೀಡಿರುವ ಸಿಂಗಲ್ ಪ್ರೀಮಿಯಂ ಮೊತ್ತವನ್ನು ಪಾಲಿಸಿಯ ಆವದಿ ಮುಗಿದ ನಂತರ ನಾಮಿನಿಗೆ ವಾಪಸ್ಸು ಕೊಡುವುದು - ಈ ಆಪ್ಶನ್ ಅಡಿಯಲ್ಲಿ, ಪಾಲಿಸಿದಾರನು ಅವನ ಪೂರ್ಣ ಆಯಸ್ಸು ಇರುವವರೆಗೂ ವಾರ್ಷಿಕ ರೂ 37,550 ಪೆನ್ಷನ್ ಮೊತ್ತವನ್ನು ಅವನು ಸೂಚಿಸಿರುವ ರೀತಿಯಲ್ಲಿ ಪಡೆಯುತ್ತಾನೆ  ಅದರ ನಂತರ, ಆತನು ಮರಣ ಹೊಂದಿದಲ್ಲಿ, ಅವನು ನೀಡಿರುವ ರೂ 5,00,000 ವನ್ನು ಅವನು ನಮೂದಿಸಿರುವ ನಾಮಿನಿಗೆ ವಾಪಸ್ಸು ನೀಡಲಾಗುವುದು. ಇದು ಪಾಲಿಸಿದಾರನು ರೂ 5,00,000 ವನ್ನು ಫಿಕ್ಸೆಡ್ ಡೆಪಾಸಿಟ್ ನಲ್ಲಿ ಇಟ್ಟ ಹಾಗೆ ಆಗುತ್ತದೆ. ಅಂದರೆ, ಫಿಕ್ಸೆಡ್ ಡೆಪಾಸಿಟ್ ಮೇಲೆ ಸಿಗುವ ಬಡ್ಡಿಯ ಮೊತ್ತದಂತೆ ಇಲ್ಲೂ ಕೂಡ ಒಂದು ಖಚಿತ ಮೊತ್ತವು ಪೆನ್ಷನ್ ರೂಪದಲ್ಲಿ ಪಾಲಿಸಿದಾರನಿಗೆ ಬರುತ್ತಿರುತ್ತದೆ 
 • ಏಕ ಪ್ರಕಾರದ ವಾರ್ಷಿಕ ಆದಾಯವನ್ನು ಪೆನ್ಷನ್ ರೂಪದಲ್ಲಿ, 5 ವರ್ಷಗಳು / 10 ವರ್ಷಗಳು / 15 ವರ್ಷಗಳು ಹಾಗೂ 20 ವರ್ಷಗಳು ನೀಡುವುದು. ಹಾಗೂ ಆವದಿ ಮುಗಿದ ಮೇಲೂ ಪಾಲಿಸಿದಾರನು ಜೀವಂತವಾಗಿದ್ದಲ್ಲಿ, ಪೆನ್ಷನ್ ಮೊತ್ತವನ್ನು ಜೀವನ ಪರ್ಯಂತ ನೀಡುವುದು - ಈ ಆಪ್ಶನ್ ನಲ್ಲಿ, ಪಾಲಿಸಿದಾರನಿಗೆ 4 ಆಯ್ಕೆಗಳು ಇರುತ್ತವೆ. 

ವಾರ್ಷಿಕ ಆದಾಯವನ್ನು ಪೆನ್ಷನ್ ರೂಪದಲ್ಲಿ 5 ವರ್ಷಗಳ ಅವದಿಯಲ್ಲಿ ಪಡೆಯುವುದು - ಈ ಆಪ್ಶನ್ ಅನ್ನು ಆಯ್ಕೆ ಮಾಡಿದ್ದಲ್ಲಿ, ಪಾಲಿಸಿದಾರನಿಗೆ ಅಥವಾ  ಅವನ ನಾಮಿನಿಗೆ (ಪಾಲಿಸಿದಾರನು ಈ ಅವದಿಯಲ್ಲಿ ಮರಣ ಹೊಂದಿದಲ್ಲಿ) ಪ್ರತಿ ವರ್ಷವೂ ರೂ 48,300 ಅನ್ನು ಪೆನ್ಷನ್ ರೂಪದಲ್ಲಿ ನೀಡಲಾಗುವುದು. ಪಾಲಿಸಿದಾರನು 5 ವರ್ಷಗಳಾದ ಮೇಲೂ ಜೀವಂತವಿದ್ದಲ್ಲಿ, ಇದೇ ಮೊತ್ತವನ್ನು ಜೀವನ ಪರ್ಯಂತ ನೀಡಲಾಗುವುದು.

ವಾರ್ಷಿಕ ಆದಾಯವನ್ನು ಪೆನ್ಷನ್ ರೂಪದಲ್ಲಿ 10 ವರ್ಷಗಳ ಅವದಿಯಲ್ಲಿ ಪಡೆಯುವುದು - ಈ ಆಪ್ಶನ್ ಅನ್ನು ಆಯ್ಕೆ ಮಾಡಿದ್ದಲ್ಲಿ, ಪಾಲಿಸಿದಾರನಿಗೆ ಅಥವಾ  ಅವನ ನಾಮಿನಿಗೆ (ಪಾಲಿಸಿದಾರನು ಈ ಅವದಿಯಲ್ಲಿ ಮರಣ ಹೊಂದಿದಲ್ಲಿ) ಪ್ರತಿ ವರ್ಷವೂ ರೂ 47,300 ಅನ್ನು ಪೆನ್ಷನ್ ರೂಪದಲ್ಲಿ ನೀಡಲಾಗುವುದು. ಪಾಲಿಸಿದಾರನು 10 ವರ್ಷಗಳಾದ ಮೇಲೂ ಜೀವಂತವಿದ್ದಲ್ಲಿ, ಇದೇ ಮೊತ್ತವನ್ನು ಜೀವನ ಪರ್ಯಂತ ನೀಡಲಾಗುವುದು

ವಾರ್ಷಿಕ ಆದಾಯವನ್ನು ಪೆನ್ಷನ್ ರೂಪದಲ್ಲಿ 15 ವರ್ಷಗಳ ಅವದಿಯಲ್ಲಿ ಪಡೆಯುವುದು - ಈ ಆಪ್ಶನ್ ಅನ್ನು ಆಯ್ಕೆ ಮಾಡಿದ್ದಲ್ಲಿ, ಪಾಲಿಸಿದಾರನಿಗೆ ಅಥವಾ  ಅವನ ನಾಮಿನಿಗೆ (ಪಾಲಿಸಿದಾರನು ಈ ಅವದಿಯಲ್ಲಿ ಮರಣ ಹೊಂದಿದಲ್ಲಿ) ಪ್ರತಿ ವರ್ಷವೂ ರೂ 45,950 ಅನ್ನು ಪೆನ್ಷನ್ ರೂಪದಲ್ಲಿ ನೀಡಲಾಗುವುದು. ಪಾಲಿಸಿದಾರನು 15 ವರ್ಷಗಳಾದ ಮೇಲೂ ಜೀವಂತವಿದ್ದಲ್ಲಿ, ಇದೇ ಮೊತ್ತವನ್ನು ಜೀವನ ಪರ್ಯಂತ ನೀಡಲಾಗುವುದು

ವಾರ್ಷಿಕ ಆದಾಯವನ್ನು ಪೆನ್ಷನ್ ರೂಪದಲ್ಲಿ 20 ವರ್ಷಗಳ ಅವದಿಯಲ್ಲಿ ಪಡೆಯುವುದು - ಈ ಆಪ್ಶನ್ ಅನ್ನು ಆಯ್ಕೆ ಮಾಡಿದ್ದಲ್ಲಿ, ಪಾಲಿಸಿದಾರನಿಗೆ ಅಥವಾ  ಅವನ ನಾಮಿನಿಗೆ (ಪಾಲಿಸಿದಾರನು ಈ ಅವದಿಯಲ್ಲಿ ಮರಣ ಹೊಂದಿದಲ್ಲಿ) ಪ್ರತಿ ವರ್ಷವೂ ರೂ 45,950 ಅನ್ನು ಪೆನ್ಷನ್ ರೂಪದಲ್ಲಿ ನೀಡಲಾಗುವುದು. ಪಾಲಿಸಿದಾರನು 20 ವರ್ಷಗಳಾದ ಮೇಲೂ ಜೀವಂತವಿದ್ದಲ್ಲಿ, ಇದೇ ಮೊತ್ತವನ್ನು ಜೀವನ ಪರ್ಯಂತ ನೀಡಲಾಗುವುದು 

 • ಏಕ ಪ್ರಕಾರದ ವಾರ್ಷಿಕ ಆದಾಯವನ್ನು ವಾರ್ಷಿಕವಾಗಿ 3 % ಹೆಚ್ಚಿಗೆ ಮಾಡಿ ಪೆನ್ಷನ್ ಮೊತ್ತವನ್ನು ನೀಡುವುದು - ಪಾಲಿಸಿದಾರನು ಪಾಲಿಸಿಯನ್ನು ಕೊಳ್ಳುವಾಗ, ಈ ಆಪ್ಶನ್ ಅನ್ನು ಆಯ್ಕೆ ಮಾಡಿದ್ದಲ್ಲಿ, ಅವನಿಗೆ ಪೆನ್ಷನ್ ಮೊತ್ತವು ಪೂರ್ಣ ಜೀವಿತದ ಅವದಿಯವರೆಗೂ ಗೊರೆಯುತ್ತದೆ. ಸದರಿ ಏಕ ಪ್ರಕಾರದ ವಾರ್ಷಿಕ ಆದಾಯವನ್ನು ಪ್ರತಿ ವರ್ಷ 3 % ಹೆಚ್ಚಿಗೆ ಮಾಡುತ್ತಾ ಹೋಗಲಾಗುತ್ತದೆ. ಅಂದರೆ, ಪಾಲಿಸಿದಾರನು  ಮೇಲ್ಕಂದ ಮೊತ್ತವನ್ನು ಹೂಡಿಕೆ ಮಾಡಿರುವುದರಿಂದ, ಆತನಿಗೆ ವಾರ್ಷಿಕ ರೂ 39650 ಅನ್ನು ಮೊದಲ ವರ್ಷ ನೀಡಲಾಗುತ್ತದೆ. ಎರಡನೇ ವರ್ಷದಿಂದ ಪ್ರತಿ ವರ್ಷವೂ ಈ ಮೊತ್ತಕ್ಕೆ 3 % ಅಂದರೆ ರೂ 1190 ಅನ್ನು ಸೇರಿಸುತ್ತಾ ಹೋಗಲಾಗುವುದು. ಹಾಗೂ, ಆ ಮೊತ್ತವನ್ನು ಪೆನ್ಷನ್ ರೂಪದಲ್ಲಿ ಪಾಲಿಸಿದಾರನಿಗೆ ನೀಡಲಾಗುವುದು. 
 • ಏಕ ಪ್ರಕಾರದ ವಾರ್ಷಿಕ ಆದಾಯವನ್ನು ಪೆನ್ಷನ್ ರೂಪದಲ್ಲಿ ಪಾಲಿಸಿದಾರನ ಪೂರ್ಣ ಆಯಸ್ಸು ಇರುವವರೆಗೂ ನೀಡುವುದು. ಹಾಗೂ ತದ ನಂತರ ಆತನ / ಅವಳ ಹೆಂಡತಿ / ಗಂಡನಿಗೆ ವಾರ್ಷಿಕ ಆದಾಯ ದ 50 % ಮೊತ್ತವನ್ನು ಪೆನ್ಷನ್ ರೂಪದಲ್ಲಿ ನೀಡುವುದು - ಪಾಲಿಸಿಯನ್ನು ಪಡೆಯುವಾಗ, ಪಾಲಿಸಿದಾರನು ಈ ಆಪ್ಶನ್ ಅನ್ನು ಸೂಚಿಸಿದ್ದಲ್ಲಿ, ಆತನಿಗೆ ಪೆನ್ಷನ್ ರೂಪದಲ್ಲಿ ವಾರ್ಷಿಕ ರೂ 45,200 ಅನ್ನು ನೀಡಲಾಗುವುದು. ಇದು ಅವನ ಪೂರ್ಣ ಜೀವಿತದ ಅವದಿಯಲ್ಲಿ ನೀಡಲಾಗುವುದು. ಅವನ ಮರಣದ ನಂತರ ಅವನ / ಅವಳ ಹೆಂಡತಿ / ಗಂಡನಿಗೆ ಈ ವಾರ್ಷಿಕ ಮೊತ್ತದ 50 % ಅಂದರೆ ರೂ 22,600 ಅನ್ನು ಪ್ರತಿವರ್ಷ ನೀಡಲಾಗುವುದು 
 • ಏಕ ಪ್ರಕಾರದ ವಾರ್ಷಿಕ ಆದಾಯವನ್ನು ಪೆನ್ಷನ್ ರೂಪದಲ್ಲಿ ಪಾಲಿಸಿದಾರನ ಪೂರ್ಣ ಆಯಸ್ಸು ಇರುವವರೆಗೂ ನೀಡುವುದು. ಹಾಗೂ ತದ ನಂತರ ಆತನ / ಅವಳ ಹೆಂಡತಿ / ಗಂಡನಿಗೆ ವಾರ್ಷಿಕ ಆದಾಯ ದ 100 % ಮೊತ್ತವನ್ನು ಪೆನ್ಷನ್ ರೂಪದಲ್ಲಿ ನೀಡುವುದು - ಪಾಲಿಸಿಯನ್ನು ಪಡೆಯುವಾಗ, ಪಾಲಿಸಿದಾರನು ಈ ಆಪ್ಶನ್ ಅನ್ನು ಸೂಚಿಸಿದ್ದಲ್ಲಿ, ಆತನಿಗೆ ಪೆನ್ಷನ್ ರೂಪದಲ್ಲಿ ವಾರ್ಷಿಕ ರೂ 42,150 ಅನ್ನು ನೀಡಲಾಗುವುದು. ಇದು ಅವನ ಪೂರ್ಣ ಜೀವಿತದ ಅವದಿಯಲ್ಲಿ ನೀಡಲಾಗುವುದು. ಅವನ ಮರಣದ ನಂತರ ಅವನ / ಅವಳ ಹೆಂಡತಿ / ಗಂಡನಿಗೆ ಈ ವಾರ್ಷಿಕ ಮೊತ್ತದ 100 % ಅಂದರೆ ರೂ 42,150 ಅನ್ನು ಪ್ರತಿವರ್ಷ ನೀಡಲಾಗುವುದು 
 • ಏಕ ಪ್ರಕಾರದ ವಾರ್ಷಿಕ ಆದಾಯವನ್ನು ಪೆನ್ಷನ್ ರೂಪದಲ್ಲಿ ಪಾಲಿಸಿದಾರನ ಪೂರ್ಣ ಆಯಸ್ಸು ಇರುವವರೆಗೂ ನೀಡುವುದು. ಹಾಗೂ ತದ ನಂತರ ಆತನ / ಅವಳ ಹೆಂಡತಿ / ಗಂಡನಿಗೆ ವಾರ್ಷಿಕ ಆದಾಯ ದ 100 % ಮೊತ್ತವನ್ನು ಪೆನ್ಷನ್ ರೂಪದಲ್ಲಿ ನೀಡುವುದು, ಹಾಗೂ ಕೊನೆಯ ಬೇನೆಫಿಶಿಯರಿಯ ಮರಣ ಆದ ನಂತರ ಸಿಂಗಲ್ ಪ್ರೀಮಿಯಂ ಮೊತ್ತವನ್ನು ಆಗ ಯಾರು ನಾಮಿನಿ ಇರುತ್ತಾರೋ ಅವರಿಗೆ ನೀಡುವುದು - ಈ ಆಪ್ಶನ್ ಅನ್ನು ಪಾಲಿಸಿದಾರನು ಆಯ್ಕೆ ಮಾಡಿದ್ದಲ್ಲಿ, ಅವನ ಜೀವಿತದ ಅವದಿಯಲ್ಲಿ ಆತನಿಗೆ ವಾರ್ಷಿಕ ಆದಾಯವಾಗಿ, ರೂ 37,059 ಅನ್ನು ನೀಡಲಾಗುತ್ತದೆ. ಅವನ/ಅವಳ  ಮರಣದ ನಂತರ, ಆತನ/ಅವಳ ಹೆಂಡತಿ / ಗಂಡನಿಗೆ ಇದೇ ಮೊತ್ತ ಅಂದರೆ ರೂ 37.050 ಅನ್ನು ಅವರು ಜೀವಂತವಾಗಿರುವವರೆಗೂ ನೀಡಲಾಗುವುದು. ಅವರ ಮರಣದ ನಂತರ ಪಾಲಿಸಿದಾರನು ಪಾಲಿಸಿಯನ್ನು ಕೊಳ್ಳುವಾಗ ನೀಡಿದ್ದ ರು 5,00,000 ಗಳನ್ನು ನಮೂದಿಸಿರುವ ನಾಮಿನಿಗೆ ನೀಡಲಾಗುವುದು.

ಎಲ್ ಐ ಸಿ ಜೀವನ್ ಅಕ್ಷಯ್ ಪ್ಲಾನ್ – ಬೇನೆಫಿಟ್ಸ್

ಡೆತ್ ಬೆನಿಫಿಟ್

ಎಲ್ ಐ ಸಿ ಯ ಇತರೆ ವಿಮಾ ಯೋಜನೆಗಳಲ್ಲಿ ಸಿಕ್ಕುವ ಡೆತ್ ಬೆನಿಫಿಟ್ ಈ ಪಾಲಿಸಿಯಲ್ಲಿ  ಸಿಗುವುದಿಲ್ಲ. ಏಕೆಂದರೆ ಇದು ಒಂದು ಶುದ್ಧ ಪೆನ್ಷನ್ ನೀಡುವ ಯೋಜನೆ ಆಗಿದ್ದು, ಪಾಲಿಸಿದಾರನಿಗೆ, ಆತನು ಸಿಂಗಲ್ ಪ್ರೀಮಿಯಂ ನೀಡಿದ ತಕ್ಷಣವೇ ಪಾಲಿಸಿಯ ಪ್ರಕಾರ ಆಯ್ಕೆ ಮಾಡಿರುವ ರೀತಿಯಲ್ಲಿ ಪೆನ್ಷನ್ ಮೊತ್ತವನ್ನು ನೀಡಲಾಗುತ್ತದೆ. ನೀವು ಆಯ್ಕೆ ಮಾಡಿರುವ ವಿದಾನದ ಮೇಲೆ ನಿಮ್ಮ ನಂತರ ನಿಮ್ಮ ಸಂಗಾತಿ ಗೂ ಸದರಿ ಪೆನ್ಷನ್ ಸೌಲಭ್ಯವನ್ನು ಮುಂದುವರೆಸಲಾಗುತ್ತದೆ.

ಮೆಚೂರಿಟೀ ಬೆನಿಫಿಟ್

ಎಲ್ ಐ ಸಿ ಯ ಇತರೆ ವಿಮಾ ಯೋಜನೆಗಳಲ್ಲಿ ಸಿಕ್ಕುವ ಮೆಚೂರಿಟೀ  ಬೆನಿಫಿಟ್ ಈ ಪಾಲಿಸಿಯಲ್ಲಿ ಸಿಗುವುದಿಲ್ಲ. ಏಕೆಂದರೆ ಇದು ಒಂದು ಶುದ್ಧ ಪೆನ್ಷನ್ ನೀಡುವ ಯೋಜನೆ ಆಗಿದ್ದು, ಪಾಲಿಸಿದಾರನಿಗೆ, ಆತನು ಸಿಂಗಲ್ ಪ್ರೀಮಿಯಂ ನೀಡಿದ ತಕ್ಷಣವೇ ಪಾಲಿಸಿಯ ಪ್ರಕಾರ ಆಯ್ಕೆ ಮಾಡಿರುವ ರೀತಿಯಲ್ಲಿ ಪೆನ್ಷನ್ ಮೊತ್ತವನ್ನು ನೀಡಲಾಗುತ್ತದೆ. ನೀವು ಆಯ್ಕೆ ಮಾಡಿರುವ ವಿದಾನದ ಮೇಲೆ ನಿಮ್ಮ ನಂತರ ನಿಮ್ಮ ಸಂಗಾತಿಗೂ ಸದರಿ ಪೆನ್ಷನ್ ಸೌಲಭ್ಯವನ್ನು ಮುಂದುವರೆಸಲಾಗುತ್ತದೆ.

ಪೆನ್ಷನ್ ನ ಮೊತ್ತ

ಪೆನ್ಷನ್ ನ ಮೊತ್ತವು ಪಾಲಿಸಿದಾರನು ಆಯ್ಕೆ ಮಾಡಿಕೊಂಡಿರುವ ಆಪ್ಶನ್ ನ ಮೇಲೆ ಅವಲಂಬಿತವಾಗಿರುತ್ತದೆ. ಈ ಪ್ಲಾನ್ ಅಡಿಯಲ್ಲಿ, ಪಾಲಿಸಿದಾರನಿಗೆ 7 ಆಪ್ಶನ್ ಗಳಿದ್ದು, ಅದರಲ್ಲಿ ಆತನು ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ, ಒಂದು ಬಾರಿ ಆಪ್ಶನ್ ಅನ್ನು ಆಯ್ಕೆ ಮಾಡಿಕೊಂಡಲ್ಲಿ, ಅದನ್ನು ಬದಲಾವಣೆ ಮಾಡಲು ಅವಕಾಶ ಇರುವುದಿಲ್ಲ. ಏಕೆಂದರೆ, ಈ ಪಾಲಿಸಿಗೆ ಸಿಂಗಲ್ ಪ್ರೀಮಿಯಂ ಮೊತ್ತವನ್ನು ಪಾಲಿಸಿ ಪಡೆಯುವಾಗಲೇ ನೀಡಿರಬೇಕಾಗುತ್ತದೆ.

ಪಾಲಿಸಿಯ ಲಾಭ ಗಳಿಕೆ

ಈ ಪಾಲಿಸಿಯು ಕಾರ್ಪೊರೇಷನ್ ನ ಯಾವುದೇ ಬಂಡವಾಳ ಹೂಡಿಕೆ ಹಾಗೂ ಅದರಿಂದ ಬರಬಹುದಾದ ಲಾಭಕ್ಕೆ ಅರ್ಹತೆ ಪಡೆದಿರುವುದಿಲ್ಲ. ಇದು ಒಂದು ಕೇವಲ ಪೆನ್ಷನ್ ನೀಡುವ ಯೋಜನೆ ಆಗಿರುತ್ತದೆ.

ರೈಡರ್ ಬೆನಿಫಿಟ್

ಈ ಪಾಲಿಸಿಗೆ ಯಾವುದೇ ತರಹದ ರೈಡರ್ ಬ್ಬೆನೆಫಿಟ್ ಗಳು ಲಭ್ಯವಿರುವುದಿಲ್ಲ. ಇದು ಒಂದು ಕೇವಲ ಪೆನ್ಷನ್ ನೀಡುವ ಯೋಜನೆ ಆಗಿರುತ್ತದೆ.

ತೆರಿಗೆ ಬೆನಿಫಿಟ್

ಎಲ್ ಐ ಸಿ ಯ ಬೇರೆ ಪಾಲಿಸಿಗಳಿಗೆ ಸಿಗುವಂತೆ, ಈ ಪಾಲಿಸಿಗೂ ತೆರಿಗೆ ಬೆನಿಫಿಟ್ ದೊರೆಯುತ್ತದೆ. ಆದರ ಪ್ರಕಾರ ಪಾಲಿಸಿಯ ಬಾಬ್ತು ಕಟ್ಟಿರುವ ಸಿಂಗಲ್ ಪ್ರೀಮಿಯಂ ಮೊತ್ತಕ್ಕೆ ಆ ವರ್ಷ ದಲ್ಲಿ, ಆದಾಯ ತೆರಿಗೆ ಸೆಕ್ಷನ್ 80 ಸಿ ಅಡಿಯಲ್ಲಿ ಅನ್ವಯವಾಗುವ ವಿನಾಯತಿ ದೊರೆಯುತ್ತದೆ.

ಸಾಲ ಸೌಲಭ್ಯ

ಈ ಪಾಲಿಸಿಯ ಮೇಲೆ ಸಾಲ ಸೌಲಭ್ಯ ಇರುವುದಿಲ್ಲ

ಸರಂಡರ್ ವ್ಯಾಲ್ಯು

ಈ ಪಾಲಿಸಿಯು ಯಾವುದೇ ಸರಂಡರ್ ವ್ಯಾಲ್ಯು ಹೊಂದಿರುವುದಿಲ್ಲ.

ಸ್ಪೆಷಲ್ ಬೆನಿಫಿಟ್

ಈ ಪಾಲಿಸಿಯನ್ನು ಹಿರಿಯ ನಾಗರೀಕರ ಉಪಯೋಗಕ್ಕೆ ಎಂದು ರೂಪಿಸಿರುವುದರಿಂದ, ಇದಕ್ಕೆ ಒಂದು ಸ್ಪೆಷಲ್ ಬೆನಿಫಿಟ್ ಅನ್ನು ನೀಡಲಾಗಿದೆ. ಅದೆಂದರೆ, ಪಾಲಿಸಿಯನ್ನು ಸರಂಡರ್ ಮಾಡುವ ಅವಕಾಶ. ಅಂದರೆ ಪಾಲಿಸಿದಾರನು, ಪಾಲಿಸಿಯು ಒಂದು ವರ್ಷವನ್ನು ಮುಗಿಸಿದ್ದಲ್ಲಿ, ಅದನ್ನು ಸರಂಡರ್ ಮಾಡುವ ಅವಕಾಶ ಇರುತ್ತದೆ. ಆದರೆ, ಅದಕ್ಕೆ ಕೆಲವು ನಿಬಂದನೆಗಳಿದ್ದು, ಅಂತಹ ಸಂಧರ್ಭದಲ್ಲಿ ಮಾತ್ರ ಅವಕಾಶ ಇರುತ್ತದೆ. ಆ ಸಂಧರ್ಭಗಳನ್ನು ಕೆಳಗೆ ವಿವರಿಸಲಾಗಿದೆ. ಈ ಬೆನಿಫಿಟ್ ಕೇವಲ ಮೇಲೆ ಕಾಣಿಸಿದ 2 ನೇ ಆಪ್ಶನ್ ಗೆ ಸೀಮಿತವಾಗಿರುತ್ತದೆ

2 ನೇ ಆಪ್ಶನ್ - ಏಕ ಪ್ರಕಾರದ ವಾರ್ಷಿಕ ಆದಾಯವನ್ನು ಪೆನ್ಷನ್ ರೂಪದಲ್ಲಿ ಪಾಲಿಸಿದಾರನ ಪೂರ್ಣ ಆಯಸ್ಸು ಇರುವವರೆಗೂ ನೀಡುವುದು {ಅಂದರೆ ಅವನ ಜೀವನ ಪರ್ಯಂತ) ಹಾಗೂ ಅವನು ನೀಡಿರುವ ಸಿಂಗಲ್ ಪ್ರೀಮಿಯಂ ಮೊತ್ತವನ್ನು ಪಾಲಿಸಿಯ ಆವದಿ ಮುಗಿದ ನಂತರ ನಾಮಿನಿಗೆ ವಾಪಸ್ಸು ಕೊಡುವುದು
ಸಂಧರ್ಭಗಳು

ನಿರ್ದಿಷ್ಟ ಪಡಿಸಲಾದ ಕಾನ್ಸರ್

ಮಯೋ ಕೊರ್ಡಿಯಲ್ ಇನ್ಫ್ರಾಕ್ಷನ್

ಓಪೆನ್ ಚೆಸ್ಟ್ CABG

ಓಪೆನ್ ಹಾರ್ಟ್ ರೀಪ್ಲೇಸ್ಮೆಂಟ್ ಅಥವಾ ಹಾರ್ಟ್ ವಾಲ್ವ್ಸ್ ರಿಪೇರಿಗಳು

ಕಿಡ್ನೀ ಫೈಲ್ಯುರ್ – ನಿಯಮಿತ ಡಯಾಲಿಸಿಸ್

ಸ್ತ್ರೋಕ್ – ಶಾಶ್ವತವಾಗಿ ಉಳಿಯುವ ಲಕ್ಷಣಗಳು

ಮಲ್ಟಿಪಲ್ ಸ್ಕ್ಳೆರೋಸಿಸ್ – ನಿರಂತರವಾಗಿ ಉಳಿಯುವ ಲಕ್ಷಣಗಳು

ಅಂಜಿಯೋಪ್ಲಾಸ್ಟಿ

ಬಿನೈನ್ ಬ್ರೈನ್ ಟ್ಯೂಮರ್

ಕುರುಡು ಆಗುವಿಕೆ

ಕಿವಿ ಕೇಳಿಸದಿರುವಿಕೆ

ಕೊನೆಯ ಹಂತದ ಶ್ವಾಸಕೋಶದ ವೈಫಲ್ಯತೆ

ಕೊನೆಯ ಹಂತದ ಪಿತ್ತ ಕೋಶದ  ವೈಫಲ್ಯತೆ

ಮಾತು ನಿಂತು ಹೋಗುವಿಕೆ

ಅಂಗಗಳ ವೈಫಲ್ಯ

ಪ್ರದಾನ  ಅಂಗಗಳ / ಬೋನ್ ಮ್ಯಾರೋ ಟ್ರಾನ್ಸಪ್ಲಾಂಟೇಷನ್

ಅಂಗಗಳ ಶಾಶ್ವತ ಪೆರಾಲಿಸಿಸ್

ಮೋಟರ್ ನ್ಯೂರೋನ್ ಡಿಸೀಸ್ – ಶಾಶ್ವತ ಲಕ್ಷಣಗಳು

ಮೇಜರ್ ಹೆಡ್ ಟ್ರೌಮ

ಪ್ರೈಮರಿ (ಈಡಿಯೋಪತಿಕ್) ಪಲ್ಮಾನರಿ ಹೈಪರ್ ಟೆನ್ಷನ್

3 ನೇ ಡಿಗ್ರಿ ಸುಟ್ಟ ಗಾಯಗಳು

ಗ್ರೇಸ್ ಪೀರಿಯಡ್

ಈ ಪಾಲಿಸಿಗೆ ಗ್ರೇಸ್ ಪೀರಿಯಡ್ ಲಭ್ಯವಿರುವುದಿಲ್ಲ

ಫ್ರೀ ಲುಕ್ ಪೀರಿಯಡ್

ಫ್ರೀ  ಲುಕ್ ಪೀರಿಯಡ್ ಬೆನಿಫಿಟ್ ಅನ್ನು ಈ ಪಾಲಿಸಿಗೂ ಕೂಡ ನೀಡಲಾಗಿದೆ. ಆದರ ಪ್ರಕಾರ, ಈ ಫ್ರೀ ಲುಕ್ ಪೀರಿಯಡ್ ನಲ್ಲಿ, ಪಾಲಿಸಿದಾರನು, ಪಾಲಿಸಿಯ ದಾಖಲೆಗಳು ಅವನ ಕೈ ಸೇರಿದ 15 ದಿವಸಗಳಲ್ಲಿ ಅದರಲ್ಲಿ ನಮೂದಿಸಿರುವ ಎಲ್ಲ ನಿಯಮಗಳು ಹಾಗೂ ನಿಬಂದನೆಗಳನ್ನು ಓದಿ ಅದನ್ನು ಅರ್ಥ ಮಾಡಿಕೊಳ್ಳಲು ನೀಡುವ ಕಾಲಾವಕಾಶ ಆಗಿರುತ್ತದೆ. ಅಕಸ್ಮಾತ್ ಪಾಲಿಸಿದಾರನಿಗೆ ಇದರಲ್ಲಿರುವ ಯಾವುದೇ ನಿಯಮಗಳ  ಅಥವಾ ನಿಬಂದನೆಗಳ ಬಗ್ಗೆ ಒಪ್ಪಿಗೆ ಆಗದಿದ್ದಲ್ಲಿ, ಆ ಪಾಲಿಸಿಯನ್ನು ಆತನು 15 ದಿನಗಳ ಒಳಗೆ ಎಲ್ ಐ ಸಿ ಗೆ ಹಿಂದಿರುಗಿಸಬಹುದು.

ಎಲ್ ಐ ಸಿ ಜೀವನ್ ಅಕ್ಷಯ್ ಪ್ಲಾನ್ – ಅರ್ಹತೆಗಳು

ಎಲ್ ಐ ಸಿ ಜೀವನ್ ಅಕ್ಷಯ್ ಪ್ಲಾನ್ ಪಡೆಯಲು ಈ ಕೆಳ ಕಂಡ ಅರ್ಹತೆಗಳು ಅನವ್ಯವಾಗುತ್ತವೆ.

ಪಾಲಿಸಿ ಕೊಳ್ಳುವಾಗ ಪಾಲಿಸಿದಾರನ ಕನಿಷ್ಠ  ವಯಸ್ಸು

30 ವರ್ಷಗಳು

ಪಾಲಿಸಿ ಕೊಳ್ಳುವಾಗ ಪಾಲಿಸಿದಾರನ ಗರಿಷ್ಠ  ವಯಸ್ಸು

65 ವರ್ಷಗಳು

ಪಾಲಿಸಿಯ ವಾರ್ಷಿಕ ವೇತನದ  ಖರೀದಿಯ ಮೊತ್ತ (ಕನಿಷ್ಠ)

ರೂ 100000

ಪಾಲಿಸಿಯ ವಾರ್ಷಿಕ ವೇತನದ  ಖರೀದಿಯ ಮೊತ್ತ (ಗರಿಷ್ಠ)

ಯಾವುದೇ ಮಿತಿ ಇಲ್ಲ

ಪೆನ್ಷನ್ ಪಡೆಯುವ ಅವದಿ

ವರ್ಷಕ್ಕೊಮ್ಮೆ, ಅರ್ದ ವರ್ಷಕ್ಕೊಮ್ಮೆ, 3 ತಿಂಗಳಿಗೊಮ್ಮೆ, 1 ತಿಂಗಳಿಗೊಮ್ಮೆ

ಎಲ್ ಐ ಸಿ ಜೀವನ್ ಅಕ್ಷಯ್ ಪ್ಲಾನ್ – ಪೆನ್ಷನ್ ಸಿಗುವಿಕೆ

ಎಲ್ ಐ ಸಿ ಜೀವನ್ ಅಕ್ಸಯ್ ಪ್ಲಾನ್ ಅಡಿಯಲ್ಲಿ ಪಾಲಿಸಿದಾರನಿಗೆ ಕೆಳ ಕಂಡ ರೀತಿಗಳಲ್ಲಿ ಪೆನ್ಷನ್ ದೊರೆಯುತ್ತದೆ.

ಪಾಲಿಸಿದಾರನು ಆಯ್ಕೆ ಮಾಡಿರುವ ಪೆನ್ಷನ್ ರೀತಿ

ಮೊದಲನೇ ಪೆನ್ಷನ್

ತಿಂಗಳಿಗೊಮ್ಮೆ ದೊರೆಯುವ ಪೆನ್ಷನ್

ಪಾಲಿಸಿಯನ್ನು ಪಡೆದ 1 ತಿಂಗಳಿನ ನಂತರ ಶುರು ಆಗುತ್ತದೆ

3 ತಿಂಗಳಿಗೊಮ್ಮೆ ದೊರೆಯುವ ಪೆನ್ಷನ್

ಪಾಲಿಸಿಯನ್ನು ಪಡೆದ 3 ತಿಂಗಳಿನ ನಂತರ ಶುರು ಆಗುತ್ತದೆ

ಅರ್ದ ವರ್ಷಕ್ಕೊಮ್ಮೆ  ದೊರೆಯುವ ಪೆನ್ಷನ್

ಪಾಲಿಸಿಯನ್ನು ಪಡೆದ 6 ತಿಂಗಳಿನ ನಂತರ ಶುರು ಆಗುತ್ತದೆ

ವರ್ಷಕ್ಕೊಮ್ಮೆ  ದೊರೆಯುವ ಪೆನ್ಷನ್

ಪಾಲಿಸಿಯನ್ನು ಪಡೆದ 1 ವರ್ಷದ ನಂತರ ಶುರು ಆಗುತ್ತದೆ

ಎಲ್ ಐ ಸಿ ಜೀವನ್ ಅಕ್ಷಯ್ ಪ್ಲಾನ್ – ವಾರ್ಷಿಕ ಪ್ರೀಮಿಯಂ ರೇಟ್ (ರೂ 100000 ಕ್ಕೆ)

ಪಾಲಿಸಿದಾರನ  ವಯಸ್ಸು

ಪಾಲಿಸಿದಾರನು ಆಯ್ಕೆ ಮಾಡಬಹುದಾದ ಆಪ್ಶನ್ ಗಳು

1

2

3

4

5

8

7

30

7190

7160

6890

5250

7080

6970

6860

40

7510

7440

6930

5610

7310

7120

6890

50

8140

7950

7000

6280

7760

7420

6930

60

9350

8790

7110

7530

8640

8030

7010

70

12080

9830

7260

10220

10560

9730

7130

80

17880

10440

7480

15890

14600

12340

7290

ಎಲ್ ಐ ಸಿ ಜೀವನ್ ಅಕ್ಷಯ್ ಪ್ಲಾನ್ – ನೀಡಬೇಕಾದ ಧಾಖಲೆಗಳು

ಪಾಲಿಸಿದಾರನು ಈ ಪಾಲಿಸಿಯನ್ನು ಪಡೆಯಬೇಕಿದ್ದಲ್ಲಿ ಕೆಳಗೆ ನಮೂದಿಸಿರುವ ಧಾಖಲೆಗಳನ್ನು ಅಪ್ಲಿಕೇಷನ್ ಫಾರ್ಮ್ ಜೊತೆಯಲ್ಲಿ ನೀಡಬೇಕು.

 • ಭರ್ತಿ ಮಾಡಿದ ಅಪ್ಲಿಕೇಷನ್ ಫಾರ್ಮ್
 • ಪಾಲಿಸಿದಾರನ ಮೆಡಿಕಲ್ ಹಿಸ್ಟರಿ
 • ಅಡ್ರೆಸ್ ಪ್ರೂಫ್
 • KYC ಧಾಖಲೆಗಳು