ಎಲ್ ಐ ಸಿ ಜೀವನ್ ಆರೋಗ್ಯ ಪ್ಲಾನ್
 • ಅತ್ಯುತ್ತಮ ಯೋಜನೆಗಳು
 • ಸುಲಭ ಹೋಲಿಕೆ
 • ತಕ್ಷಣದ ಖರೀದಿ
PX step

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಹೆಸರು
ಇದಕ್ಕಾಗಿ ಕವರ್ ಮಾಡಿ
ಹುಟ್ಟಿದ ದಿನಾಂಕ (ದೊಡ್ಡ ಸದಸ್ಯ)

1

2

ಫೋನ್ ಸಂಖ್ಯೆ
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯ ವು ಕಳೆದ ಅನೇಕ ವರ್ಷಗಳಿಂದ ಅಸ್ತಿತ್ವದಲ್ಲಿದ್ದು, ಜನರ ಅನುಕೂಲಕ್ಕೆ ತಕ್ಕಂತೆ  ಹಾಗೂ ಅವರ ಅಗತ್ಯಗಳಿಗೆ ಅನುಕೂಲವಾಗುವಂತೆ ಸುಮಾರು ವಿಮಾ ಯೋಜನೆಗಳನ್ನು ರೂಪಿಸುತ್ತಲೇ ಬಂದಿದೆ. ಜೀವ ವಿಮೆಯ ಕ್ಷೇತ್ರದಲ್ಲಿ, ಅತ್ಯಂತ ವಿಶ್ವಾಸಾರ್ಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಂಪನಿಯು ಎಲ್ ಐ ಸಿ ಜೀವನ್ ಆರೋಗ್ಯ ಪ್ಲಾನ್ ಅನ್ನು ಜನರ ಅನುಕೂಲಕ್ಕೋಸ್ಕರ ಬಿಡುಗಡೆ ಮಾಡಿದ್ದು, ಇದು ಒಂದು ಪಾಲಿಸಿದಾರನಿಗೆ ಅವನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ  ಯೋಜನೆ.

ಎಲ್ ಐ ಸಿ ಯು ಮೊದಲಿನಿಂದಲೂ ವಿಮಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಅನೇಕ ಹೆಗ್ಗುರುತುಗಳನ್ನು ಸಾದಿಸಿದ್ದು, ಜೀವ ಹಾಗೂ ಆರೋಗ್ಯ ವಿಮೆಗೆ ಸಂಭಂದ ಪಟ್ಟ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪುವಂತೆ ಕಡಿಮೆ ಮೊತ್ತದಲ್ಲಿ ನೀಡುತ್ತಿದೆ. ಎಲ್ ಐ ಸಿ ಯು ತಾನು ಬಂಡವಾಳ ಹೂಡಿಕೆ ಮಾಡುವಾಗಲು ಕೂಡ, ಪಾಲಿಸಿದಾರರ ಇಂಟರೆಸ್ಟ್ ಅನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡಿ, ಅದರಿಂದ ಸಾಕಷ್ಟು ಲಾಭ ಗಳಿಸಿ ಅದರ ಪಾಲು ಪಾಲಿಸಿದಾರರಿಗೆ ತಲುಪುವಂತೆ ಮಾಡುತ್ತಿದೆ.

ನಿಮಗೆ ತಿಳಿದಿರುವಂತೆ, ಯಾವುದೇ ಮನುಷ್ಯನ ಜೀವನದಲ್ಲಿ, ಅವನ ಹಾಗೂ ಅವನ ಕುಟುಂಬದ ಆರೋಗ್ಯ ಮತ್ತು ಅದರ ಜೊತೆಗಿನ ಇನ್ನಿತರೆ ವೆಚ್ಚಗಳಿಗೆ ಬೇಕಾಗುವ ಹಣವು ಅವನ ದುಡಿಮೆಯ ಕೇಂದ್ರ ಬಿಂದುವಾಗಿರುತ್ತದೆ. ಆರೋಗ್ಯ ರಕ್ಷಣೆಗೋಸ್ಕರ, ಈಗಿನ ಪರಿಸ್ತಿತಿಯಲ್ಲಿ ಸುಮಾರು ಹಣವು ವೆಚ್ಚವಾಗುತ್ತದೆ. ಅದೂ ಅಲ್ಲದೆ, ದಿನ ದಿನಕ್ಕೂ ಏರುತ್ತಿರುವ ಬೆಲೆಗಳಲ್ಲಿ, ಮುಂದಿನ ದಿನಗಳಲ್ಲಿ, ಈಗಿನಿಂದಲೇ ಅದನ್ನು ಎದುರಿಸುವ ನಿಟ್ಟಿನಲ್ಲಿ, ಜನರು ಯೋಚನೆ ಮಾಡಬೇಕಾಗುತ್ತದೆ. ಹಾಗೂ ಅದಕ್ಕೆ ಸೂಕ್ತವಾದ ಮಾರ್ಗಗಳನ್ನು ಕಂಡುಕೊಂಡು ಅದರಲ್ಲಿ ಹಣವನ್ನು ವಿನಿಯೋಗ ಮಾಡಬೇಕಾಗುತ್ತದೆ. ಈ ದಿಸೆಯಲ್ಲಿ, ಎಲ್ ಐ ಸಿ ಜೀವನ್ ಆರೋಗ್ಯ ಪ್ಲಾನ್ ಒಂದು ಅತ್ಯುತ್ತಮ ಸಾದನವಾಗಿರುತ್ತದೆ.

ಎಲ್ ಐ ಸಿ ಜೀವನ್ ಆರೋಗ್ಯ ಪ್ಲಾನ್ ಒಂದು ಲಾಭದಲ್ಲಿ ಬಾಗಿ ಆಗದ (ನಾನ್ ಪಾರ್ಟಿಸೀಪೆಟಿಂಗ್) ಹಾಗೂ ನಾನ್ ಲಿಂಕ್ಡ್ ಪ್ಲಾನ್ ಆಗಿದ್ದು ಕೆಲವು ಆರೋಗ್ಯದ ಬಗೆಗಿನ ಅಪಾಯಗಳನ್ನು ಕವರ್ ಮಾಡಿ, ಅಂತಹ ಸಮಯದಲ್ಲಿ ನಿಮಗೆ ಸಹಾಯ ಮಾಡುವಂತಹ ಹಾಗೂ ವೈದ್ಯಕೀಯ ತುರ್ತು ಪರಿಸ್ತಿತಿಯಲ್ಲಿ ನಿಮಗೆ ಆದಷ್ಟು ಬೆಂಬಲ ನೀಡುವ ಒಂದು ಯೋಜನೆ. ಇಂತಹ ಸಮಯದಲ್ಲಿ ಪಾಲಿಸಿದಾರನಿಗೆ ಹಣದ ಅತ್ಯಂತ ಅವಶ್ಯಕತೆ ಇದ್ದು, ಅದಕ್ಕಾಗಿ ಯಾರನ್ನು ಕೇಳಬೇಕಾಗಿರುವುದಿಲ್ಲ.

ಈಗಿನ ಪರಿಸ್ತಿತಿಯಲ್ಲಿ, ನೀವಾಗಲಿ  ಅಥವಾ ನಿಮ್ಮ ಕುಟುಂಬದ ಯಾವುದೇ ಸದಸ್ಯನಾಗಲಿ, ಅನಾರೋಗ್ಯಕ್ಕೆ ಒಳಗಾದಲ್ಲಿ, ಅಂತಹ ಸಮಯದಲ್ಲಿ ಕುಟುಂಬವು ಅತ್ಯಂತ ಕಷ್ಟವನ್ನು ಎದುರಿಸಬೇಕಾಗುತ್ತದೆ. ನೀವು ಒಬ್ಬ ಜವಾಬ್ದಾರಿ ಉಳ್ಳ ಮನುಷ್ಯನಾಗಿ, ಇಂತಹ ಸಮಯಕ್ಕೆ ಬೇಕಾಗುವ ಸಿದ್ದತೆಗಳನ್ನು ಮಾಡಿಕೊಂಡಿರಬೇಕಾಗುತ್ತದೆ. ಈ ತರಹದ ಮೆಡಿಕಲ್ ತುರ್ತು ಪರಿಸ್ತಿತಿ ನಿಮ್ಮ ಹಾಗೂ ನಿಮ್ಮ ಕುಟುಂಬದವರ ನೆಮ್ಮದಿಯನ್ನು ಕೆಡಿಸುತ್ತದೆ. ಅದನ್ನು ತಡೆಹಿಡಿಯುವ ಹಾಗೂ ಎದುರಿಸುವ ಶಕ್ತಿಯೂ ನಿಮ್ಮ ಕೈಯಲ್ಲಿರುತ್ತದೆ.

ಎಲ್ ಐ ಸಿ ಜೀವನ್ ಆರೋಗ್ಯ ಪ್ಲಾನ್ ಅಂತಹ ಒಂದು ಮೆಡಿಕಲ್ ತುರ್ತು ಪರಿಸ್ತಿತಿ ಯನ್ನು ಎದುರಿಸುವ ಶಕ್ತಿಯನ್ನು ನಿಮಗೆ ನೀಡುತ್ತದೆ.

ಎಲ್ ಐ ಸಿ ಜೀವನ್ ಆರೋಗ್ಯ ಪ್ಲಾನ್ – ಬೆನೆಫಿಟ್ಸ್

ಎಲ್ ಐ ಸಿ ಜೀವನ್ ಆರೋಗ್ಯ ಪ್ಲಾನ್ ನಿಮಗೆ ಈ ಕೆಳ ಕಂಡ ರೀತಿಯಲ್ಲಿ ಸಹಾಯ ಮಾಡುತ್ತದೆ.

 • ಮೆಡಿಕಲ್ ತುರ್ತು ಪರಿಸ್ತಿತಿಯಲ್ಲಿ, ಯಾರಾದರೂ ಆಸ್ಪತ್ರೆಗೆ ಸೇರಿದ್ದಲ್ಲಿ, ಅಲ್ಲಿ ತಗುಲಬಹುದಾದ ಆಸ್ಪತ್ರೆಯ ವೆಚ್ಚಗಳು ಹಾಗೂ ಶಸ್ತ್ರ ಚಿಕಿತ್ಸೆ ಮುಂತಾದುವುಗಳ ಖರ್ಚು ಮತ್ತು ಇತರೆ ಖರ್ಚುಗಳನ್ನು ಸಂಬಾಳಿಸುವಲ್ಲಿ ಸಹಾಯ ಮಾಡುತ್ತದೆ.
 • ಪಾಲಿಸಿದಾರನ ವಯಸ್ಸು ಹೆಚ್ಚಿದಂತೆ ಆರೋಗ್ಯದ ವಿಮಾ ಕವರೆಜ್ ಹೆಚ್ಚುತ್ತಾ ಹೋಗುತ್ತದೆ.
 • ಮೆಡಿಕಲ್ ವೆಚ್ಚಗಳು ಎಷ್ಟೇ ಆಗಿದ್ದರು  ಕೂಡ ಒಂದು ನಿಗದಿತ ಅಥವಾ ಖಚಿತ ಮೊತ್ತವನ್ನು ನೀಡಲಾಗುವುದು.
 • ಯಾವುದೇ ತರಹದ ಕ್ಲೈಮ್ ಬೆನಿಫಿಟ್ ಇರುವುದಿಲ್ಲ.
 • ಬೆನಿಫಿಟ್ ಮಿತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ನಿಮದಾಗಿರುತ್ತದೆ
 • ನಿಮಗೆ ಸೂಕ್ತ ಆಗುವಂತಹ ಪ್ರೀಮಿಯಂ ನೀಡುವ ಅಪ್ಶನ್ ಅನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.

ಈ ಪಾಲಿಸಿಯನ್ನು ಕೆಳ ಕಂಡ ರೀತಿಯಲ್ಲಿ ಸುಲಭವಾಗಿ ಪಡೆಯಬಹುದು.

 • ನಿಮಗೆ ಬೇಕಾಗುವ ಆರೋಗ್ಯ ಕವರ್ ಅನ್ನು ಆಯ್ಕೆ ಮಾಡಿಕೊಳ್ಳುವುದು.

ಇದರ ವಿವರಗಳನ್ನು ಕೆಳಗೆ ನೀಡಲಾಗಿದೆ.

ಮೊದಲನೆಯದಾಗಿ, ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ಆರಂಬಿಕ ಪ್ರತಿ ದಿನದ ಬೆನಿಫಿಟ್ (ಪಾಲಿಸಿಗೆ ಮೊದಲ ವರ್ಷದಲ್ಲಿ ನೀಡುವ ಪ್ರತಿ ಒಂದು ದಿನದ ಕ್ಯಾಷ್ ಬೆನಿಫಿಟ್) ಅನ್ನು ಆಯ್ಕೆ ಮಾಡಬಹುದು. ಅದು ಈ ಕೆಳ ಕಂಡಂತಿದೆ.

ರೂ 1000 ಪ್ರತಿ ದಿನಕ್ಕೆ

ರೂ 2000 ಪ್ರತಿ ದಿನಕ್ಕೆ

ರೂ 3000 ಪ್ರತಿ ದಿನಕ್ಕೆ

ರೂ 4000 ಪ್ರತಿ ದಿನಕ್ಕೆ

ಮೇಲ್ಕಂಡ ಮೊತ್ತವು ನಿಮಗೆ ಮೊದಲ ವರ್ಷದಲ್ಲಿ ಆಸ್ಪತ್ರೆಯ ಖರ್ಚಿನ ಬಾಬ್ತು ಒಂದು ದಿನಕ್ಕೆ ನೀಡುವ ಮೊತ್ತ ಆಗಿರುತ್ತದೆ. ಇದರ ಪ್ರಕಾರ ನಿಮಗೆ ಪ್ರಮುಖ ಶಸ್ತ್ರ ಚಿಕಿತ್ಸೆಗೋಸ್ಕರ ನೀಡುವ ಮೊತ್ತವು ಮೇಲ್ಕಂಡ ಆರಂಬಿಕ ಮೊತ್ತದ 100 ರಷ್ಟು ಮೊತ್ತವೆಂದು ಪರಿಗಣಿಸಲಾಗುತ್ತದೆ. ಅಂದರೆ ನೀವು ರೂ 1000 ಆರಂಬಿಕ ಮೊತ್ತವನ್ನು ಆಯ್ಕೆ ಮಾಡಿದ್ದಲ್ಲಿ, ನಿಮಗೆ ಶಸ್ತ್ರ ಚಿಕಿತ್ಸೆಗೋಸ್ಕರ ನೀಡುವ ಮೊತ್ತವು ರೂ 1,00,000 ಆಗುತ್ತದೆ. ಅಂದರೆ ಮೇಲ್ಕಂಡ ಟೇಬಲ್ ಪ್ರಕಾರ, ಶಸ್ಟ್ರ ಚಿಕಿತ್ಸೆ ಮೊತ್ತವು ರೂ 1,00,000, ರೂ 2,00,000, ರೂ 3,00,000 ಹಾಗೂ ರೂ 4,00,000 ಆಗುತ್ತದೆ. ಮುಂದುವರೆದು, ದಿನದ ಆರೈಕೆ (ಡೇ ಕೇರ್), ಇತರೆ ಸರ್ಜಿಕಲ್ ಬೆನಿಫಿಟ್ ಮತ್ತು ಪ್ರೀಮಿಯಂ ವೈವರ್ ಬೆನಿಫಿಟ್ ಇವುಗಳು ಮೆಲ್ಕಾಣಿಸಿದ ಪ್ರತಿ ದಿನದ ಕ್ಯಾಷ್ ಬೆನಿಫಿಟ್ ಮೇಲೆ ಅವಲಂಬಿತವಾಗಿದ್ದು ಅದರ ಪ್ರಕಾರ ಆಯಾ ಬೆನೆಫಿಟ್ ಗಳಿಗೆ ಅನ್ವಯವಾಗುವ ಮೊತ್ತವನ್ನು ನೀಡಲಾಗುತ್ತದೆ.

 • ಎಲ್ ಐ ಸಿ ಯ ರೆಪ್ರೆಸೆಂಟೇಟಿವ್ ಜೊತೆ ನಿಮಗೆ ಬೇಕಾಗುವ ಪ್ರೀಮಿಯಂ ಅನ್ನು ನಿರ್ದರಿಸುವುದು - ನಿಮ್ಮ ಪ್ರೀಮಿಯಂ ಮೊತ್ತವು ನಿಮ್ಮ ವಯಸ್ಸು, ನಿಮ್ಮ ಜಂಡರ್ (ಪುರುಷನೊ ಅಥವಾ ಮಹಿಳೆಯೊ) , ನೀವು ಆಯ್ಕೆ ಮಾಡಿಕೊಂಡಿರುವ ಆರೋಗ್ಯ ಕವರ್ ಅಪ್ಶನ್, ನೀವು ಪ್ರದಾನ ವಿಮಾದಾರನೋ ಅಥವಾ ವಿಮಾದಾರರು ಬೇರೆಯವರೋ ಮತ್ತು ಪ್ರೀಮಿಯಂ ನೀಡುವ ರೀತಿ ಇವೆಲ್ಲದರ ಮೇಲೆ ಅವಲಂಬಿತವಾಗಿರುತ್ತದೆ. ಕೆಳ ಕಂಡ ಟೇಬಲ್ಸ್ ಗಳು ನೀವು ಆಯ್ಕೆ ಮಾಡಿಕೊಂಡಿರುವ ಆರಂಬಿಕ ದಿನಂಪ್ರತಿ ಮೊತ್ತದ ಪ್ರಕಾರ ನೀಡಬೇಕಾಗಿರುವ ವಾರ್ಷಿಕ ಪ್ರೀಮಿಯಂ ಮೊತ್ತವನ್ನು ಸೂಚಿಸುತ್ತದೆ. ಅದು ಬೇರೆ ಬೇರೆ ವಿಮಾದಾರರಿಗೆ ಅನ್ವಯವಾಗುವ ಮೊತ್ತದ (ಸಿಂಗಲ್ ಪಾಲಿಸಿ) ವಿವರವಾಗಿರುತ್ತದೆ. ಹಾಗೂ ಈ ಟೇಬಲ್ ಗಳಲ್ಲಿ ಆರಂಬಿಕ ದಿನಂಪ್ರತಿ ಮೊತ್ತವು ರೂ 1000 ಎಂದು ಪರಿಗಣಿಸಿ ವಿವರಗಳನ್ನು ನೀಡಲಾಗಿದೆ.

ನೀವು ಪ್ರದಾನ ವಿಮಾದಾರರಾಗಿದ್ದಲ್ಲಿ (ಪುರುಷರು) (PI)

ಪಾಲಿಸಿದಾರನ ವಯಸ್ಸು

ಪ್ರೀಮಿಯಂ

20 ವರ್ಷಗಳು

1922.65

30 ವರ್ಷಗಳು

2242.90

40 ವರ್ಷಗಳು

2799.70

50 ವರ್ಷಗಳು

3768.00

ನಿಮ್ಮ ಪತ್ನಿ (ಮಹಿಳೆ) / ಪೇರೆಂಟ್ ( ಆಫ್ PI / ಪತ್ನಿಯ ) (ಮಹಿಳೆ)

ಪಾಲಿಸಿದಾರನ ವಯಸ್ಸು

ಪ್ರೀಮಿಯಂ

20 ವರ್ಷಗಳು

1393.15

30 ವರ್ಷಗಳು

1730.65

40 ವರ್ಷಗಳು

2240.60

50 ವರ್ಷಗಳು

2849.10

ಮಕ್ಕಳು

ಪಾಲಿಸಿದಾರನ ವಯಸ್ಸು

ಪ್ರೀಮಿಯಂ

0 ವರ್ಷಗಳು

792.00

5 ವರ್ಷಗಳು

794.75

10 ವರ್ಷಗಳು

812.35

15 ವರ್ಷಗಳು

870.75

ಮೇಲೆ ಕಾಣಿಸಿರುವ ಪ್ರೀಮಿಯಂ ಗಳಲ್ಲಿ ಸರ್ವಿಸ್ ಟಾಕ್ಸ್ ಸೇರಿರುವುದಿಲ್ಲ.

ಯಾರಿಗೆ ನೀವು ವಿಮೆ ಮಾಡಿಸಬಹುದು?

ನೀವು (ಪ್ರದಾನ ವಿಮಾದಾರರು) (PI), ನಿಮ್ಮ ಪತ್ನಿ, ನಿಮ್ಮ ಮಕ್ಕಳು, ನಿಮ್ಮ ತಂದೆ ತಾಯಿಯರು, ನಿಮ್ಮ ಪತ್ನಿಯ ತಂದೆ ತಾಯಿಯರು ಇವರುಗಳಲ್ಲಿ ಎಲ್ಲರನ್ನೂ ಒಂದೇ ಪಾಲಿಸಿಯಲ್ಲಿ ಸೇರಿಸಬಹುದು. ಇದು ನಿಮಗೆ ಸಾಕಷ್ಟು ಉಪಯೋಗವಾಗುತ್ತದೆ.

ಪಾಲಿಸಿಯನ್ನು ಪಡೆಯುವುದಕ್ಕೆ, ಕನಿಷ್ಠ ಹಾಗೂ ಗರಿಷ್ಠ ವಯಸ್ಸು ಈ ಕೆಳ ಕಂಡಂತಿರುತ್ತದೆ.

 

ಪಾಲಿಸಿ ಪಡೆಯುವ ಸಮಯದಲ್ಲಿ ಕನಿಷ್ಠ ವಯಸ್ಸು

ಪಾಲಿಸಿ ಪಡೆಯುವ ಸಮಯದಲ್ಲಿ ಗರಿಷ್ಠ  ವಯಸ್ಸು

ನಿಮ್ಮದು / ಪತ್ನಿಯದು

18 ವರ್ಷಗಳು

65 ವರ್ಷಗಳು (ಹಿಂದಿನ ಹುಟ್ಟು ಹಬ್ಬಕ್ಕೆ)

ನಿಮ್ಮ ತಂದೆ ತಾಯಿಯರು / ನಿಮ್ಮ ಪತ್ನಿಯ ತಂದೆ ತಾಯಿಯರು

18 ವರ್ಷಗಳು

75 ವರ್ಷಗಳು (ಹಿಂದಿನ ಹುಟ್ಟು ಹಬ್ಬಕ್ಕೆ)

ಮಕ್ಕಳು

91 ದಿವಸಗಳು

17 ವರ್ಷಗಳು (ಹಿಂದಿನ ಹುಟ್ಟು ಹಬ್ಬಕ್ಕೆ)

ಮೇಲೆ ತಿಳಿಸುವವರು ಎಲ್ಲಿಯವರೆಗೂ ವಿಮೆಗೆ ಒಳ ಪಟ್ಟಿರುತ್ತಾರೆ

ಮೇಲೆ ತಿಳಿಸುವ ಪ್ರತಿ ಒಬ್ಬರೂ ಹೆಲ್ತ್ ರಿಸ್ಕ್ ಕವರೆಜ್ ಗೆ 80 ವರ್ಷದ ವರೆಗೂ ಅರ್ಹರಾಗಿರುತ್ತಾರೆ. ಹಾಗೆಯೇ ನಿಮ್ಮ ಮಕ್ಕಳು 25 ವರ್ಷದವರೆಗೂ ಅರ್ಹರಾಗಿರುತ್ತಾರೆ.

ಆಸ್ಪತ್ರೆಯ ಕ್ಯಾಷ್ ಬೆನಿಫಿಟ್

ಈ ಬೆನಿಫಿಟ್ ಅನ್ನು ಉಪಯೋಗಿಸಿಕೊಳ್ಳಬೇಕಿದ್ದಲ್ಲಿ, ನೀವು ಅಥವಾ ಇತರರು (ಆರೋಗ್ಯ ವಿಮೆಪಾಲಿಸಿಯಲ್ಲಿ ಸೇರಿರುವವರು) ಆಸ್ಪತ್ರೆಗೆ ಸೇರಿದ್ದು, ಅಲ್ಲಿ ಕನಿಷ್ಠ 24 ಗಂಟೆಗಳು ಇದ್ದಿರಬೇಕಾಗುತ್ತದೆ. ಹಾಗೆಯೇ, ಅಲ್ಲಿಂದ ಅಂದರೆ 24 ಗಂಟೆಗಳ ಬಳಿಕ, ಉಳಿದಂತೆ 4 ಗಂಟೆಗಳ ವಾಸ್ತವ್ಯ ಇರಬೇಕಾಗುತ್ತದೆ. ಈ ಇರುವಿಕೆ ಆಸ್ಪತ್ರೆಯ ಒಂದು ನಾನ್ – ICU ವಾರ್ಡ್ ಅಥವಾ ರೂಂ ಆಗಿದ್ದಲ್ಲಿ, ನೀವು ಆಯ್ಕೆ ಮಾಡಿರುವ ದಿನಂಪ್ರತಿ ಬೆನಿಫಿಟ್ ಮೊತ್ತವನ್ನು ನೀಡಲಾಗುವುದು.

ಪಾಲಿಸಿಯ ಮೊದಲನೇ ವರ್ಷದಲ್ಲಿ, ಪ್ರತಿ ವಿಮಾದಾರನೂ, ನೀವು ಆಯ್ಕೆ ಮಾಡಿರುವ ಆರಂಬಿಕ ದಿನಂಪ್ರತಿ ಬೆನಿಫಿಟ್  ಮೊತ್ತವನ್ನು ಪಡೆಯಲು ಅರ್ಹರಾಗಿರುತ್ತಾರೆ. ಎರಡನೇ ವರ್ಷದಿಂದ, ಕಾರ್ಪೊರೇಷನ್ನಿನ ನಿಯಮಗಳಿಗೆ ಅನುಸಾರವಾಗಿ, ದಿನಂಪ್ರತಿ ಮೊತ್ತವನ್ನು ನಿಮಗೂ ಹಾಗೂ ಉಳಿದವರಿಗೂ ನೀಡಲಾಗುತ್ತದೆ.

ಪ್ರಮುಖ ಶಸ್ತ್ರ ಚಿಕಿತ್ಸೆಯ ಬೆನಿಫಿಟ್

ಪಾಲಿಸಿದಾರನಾಗಲಿ ಅಥವಾ ಅವನು ಸೇರಿಸಿರುವ ಉಳಿದ ವಿಮೆದಾರರಾಗಲಿ, ಅಪಘಾತದಿಂದ ಉಂಟಾಗಿರುವ ದೈಹಿಕ ಗಾಯಗಳಿಗಾಗಲಿ ಅಥವಾ ಇನ್ನಿತರೆ ಕಾಯಿಲೆಯಿಂದ ಆಗಲಿ, ಪ್ರಮುಖ ಶಸ್ತ್ರ ಚಿಕಿತ್ಸೆ ಬೆನಿಫಿಟ್ ಆನೆಕ್ಷರ್ ನಲ್ಲಿ ನಮೂದಿಸಿರುವ ಯಾವುದೇ ಪ್ರಮುಖ ಶಸ್ತ್ರ ಚಿಕಿತ್ಸೆಗೆ ಒಳ ಪಟ್ಟಲ್ಲಿ, ಅಲ್ಲಿ ಸೂಚಿಸಿರುವ ಆಯಾ ಶಸ್ತ್ರ ಚಿಕಿತ್ಸೆಗೆ ಸಂಬಂದಪಟ್ಟ ಸಮ್ ಅಶ್ಶುರ್ಡ್ ಮೊತ್ತದ ಪರ್ಸೆಂಟೆಜ್ ಮೊತ್ತಕ್ಕೆ ಅರ್ಹರಾಗುತ್ತಾರೆ.

ದಿನದ ಆರೈಕೆ ಬೆನಿಫಿಟ್ (ಡೇ ಕೇರ್ ಬೆನಿಫಿಟ್)

ಇದರ ಪ್ರಕಾರ, ಯಾವುದೇ ವಿಮಾದಾರನು, ಆಸ್ಪತೆರ್ಗೆ ಸೇರಿ ಡೇ ಕೇರ್ ಪ್ರೋಸೀಜರ್ ಆನೆಕ್ಷರ್ ನಲ್ಲಿ ನಮೂದಿಸಿರುವ ಡೇ ಕೇರ್ ಗೆ ಒಳಗಾದಲ್ಲಿ, ಆ ದಿವಸಕ್ಕೆ ಒಂದು ಖಚಿತ ಮೊತ್ತವನ್ನು ನೀಡಲಾಗುವುದು. ಈ ಮೊತ್ತವು, ನೀವು ಆಯ್ಕೆ ಮಾಡಿರುವ ಅನ್ವಯಿಸುವ ದಿನಂಪ್ರತಿ ಬೆನಿಫಿಟ್ ಮೊತ್ತಕ್ಕೆ 5 ಪಟ್ಟು ಇರುತ್ತದೆ. ಆ ದಿವಸದ ಡೇ ಕೇರ್ ಮೊತ್ತವು ಆಸ್ಪತ್ರೆಯವರ ಪ್ರಕಾರ ಎಷ್ಟಿದ್ದರು, ನಿಮಗೆ ಸಿಗುವ ಮೊತ್ತವು ದಿನಂಪ್ರತಿ ಬೆನಿಫಿಟ್ ಮೊತ್ತಕ್ಕೆ ಕೇವಲ 5 ಪಟ್ಟು ಇರುತ್ತದೆ.

ಇತರೆ ಶಸ್ತ್ರ ಚಿಕಿತ್ಸೆ ಬೆನಿಫಿಟ್

ಮೆಡಿಕಲ್ ಎಮರ್ಜೆನ್ಸೀ ಆಗಿ,  ಈ ಪಾಲಿಸಿಯ ಪ್ರಮುಖ ಶಸ್ತ್ರ ಚಿಕಿತ್ಸೆ ಆನೆಕ್ಷರ್ ನಲ್ಲಿ ಅನುಮೋದಿಸದೇ ಇರುವ, ಇತರೆ ಶಸ್ತ್ರ ಚಿಕಿತ್ಸೆ ಅಥವಾ ಡೇ ಕೇರ್ ಬೆನಿಫಿಟ್ ಅನ್ನು ವಿಮಾದಾರರು ತೆಗೆದುಕೊಳ್ಳಬೇಕಿದ್ದಲ್ಲಿ ಹಾಗೂ  ಆಸ್ಪತ್ರೆಗೆ 24 ಗಂಟೆಗಳಿಗೆ ಮೇಲ್ಪಟ್ಟು ಸೇರಬೇಕಿದ್ದಲ್ಲಿ, ಅಂತಹ ಸಂಧರ್ಭದಲ್ಲಿ ಪಾಲಿಸಿಗೆ ಅನ್ವಯವಾಗುವ ದಿನಂಪ್ರತಿ ಮೊತ್ತದ 2 ಪಟ್ಟು ಮೊತ್ತವನ್ನು ನೀಡಲಾಗುವುದು.

ಪ್ರೀಮಿಯಂ ವೈವರ್ ಬೆನಿಫಿಟ್  (ಪ್ರೀಮಿಯಂ ನೀಡದಿರುವಿಕೆ)

ಪಾಲಿಸಿದಾರನಾಗಲಿ ಅಥವಾ ಉಳಿದ ವಿಮಾದಾರರಾಗಲಿ, ಶಸ್ತ್ರ ಚಿಕಿತ್ಸೆಗೆ ಒಳ ಪಟ್ಟಲ್ಲಿ, ಅದು ಪ್ರಮುಖ ಶಸ್ತ್ರ ಚಿಕಿತ್ಸೆ ಆನೆಕ್ಷರ್ ನಲ್ಲಿ ನಮೂದಿಸಿರುವ Category 1 ಅಥವಾ Category 2 ರ ಪ್ರಕಾರ  ಇದ್ದಲ್ಲಿ, ಶಸ್ತ್ರ ಚಿಕಿತ್ಸೆ ಆದ ದಿನದ ನಂತರ ಬೀಳುವ ಒಂದು ವರ್ಷದ ಪ್ರೀಮಿಯಂ ಮೊತ್ತಕ್ಕೆ ವೈವರ್ ನೀಡಲಾಗುತ್ತದೆ. ಅಂದರೆ ಆ ಒಂದು ವರ್ಷದ ಪ್ರೀಮಿಯಂ ಮೊತ್ತವನ್ನು ಪಾಲಿಸಿದಾರನು ನೀಡಬೇಕಾಗಿಲ್ಲ.

ಪ್ರೀಮಿಯಂ ಗಳನ್ನು ನೀಡುವಿಕೆ

ಈ ಪ್ಲಾನ್ ಪ್ರಕಾರ ನೀಡಬೇಕಾಗಿರುವ ಪ್ರೀಮಿಯಂ ಗಳನ್ನು, ವರ್ಷಕ್ಕೊಮ್ಮೆ ಅಥವಾ ಅರ್ದ ವರ್ಷಕ್ಕೊಮ್ಮೆ ನೀಡುವ ಅವಕಾಶ ಇರುತ್ತದೆ. ಪ್ರೀಮಿಯಂ ಗಳನ್ನು ಪಾಲಿಸಿದಾರನ ಹಾಗೂ ಉಳಿದ ಪ್ರತಿ ಒಬ್ಬರ ವಯಸ್ಸು, ಆಯ್ಕೆ ಮಾಡಿರುವ ಆಸ್ಪತ್ರೆ ಬೆನಿಫಿಟ್ ಗಳನ್ನು ಗಣನೆಗೆ ತೆಗೆದುಕೊಂಡು ನಿಗದಿ ಪಡಿಸಲಾಗಿರುತ್ತದೆ. ಪಾಲಿಸಿದಾರನ ಹಾಗೂ ಉಳಿದ ವಿಮಾದಾರರ ಪ್ರತಿ ಒಬ್ಬರ ಪ್ರೀಮಿಯಂ ಮೊತ್ತವು ಅವರ ವಯಸ್ಸಿನ ಮೇಲೆ ಹಾಗೂ ಅವರಿಗೆ ನೀಡುತ್ತಿರುವ ವಿಮಾ ಕವರೆಜ್ ಮೇಲೆ ಅವಲಂಬಿತವಾಗಿರುತ್ತದೆ.

ಈ ಪಾಲಿಸಿಯ ಅಡಿಯಲ್ಲಿ, ಪ್ರೀಮಿಯಂ ಮೊತ್ತವು 3 ವರ್ಷಕ್ಕೆ ಮಾತ್ರ ಸೀಮಿತವಾಗಿರುತ್ತದೆ. 3 ವರ್ಷ ಕಳೆದ ಮೇಲೆ, ಕಾರ್ಪೊರೇಷನ್ ನವರು, ಪ್ರೀಮಿಯಂ ಮೊತ್ತದಲ್ಲಿ ಬದಲಾವಣೆ ಮಾಡುವ ಹಕ್ಕು ಹೊಂದಿರುತ್ತಾರೆ. ಇದು ಕಾರ್ಪೊರೇಷನ್ ರವರ ಬಂಡವಾಳ ಹೂಡಿಕೆಯಲ್ಲಿನ ಅನುಭವ ಮತ್ತು ಬದಲಾಯಿಸಿರುವ ಮೊತ್ತಕ್ಕೆ IRDA ಒಪ್ಪಿಗೆ ಇವೆರಡರ ಮೇಲೂ ಅವಲಂಬಿತವಾಗಿರುತ್ತದೆ. ಪ್ರೀಮಿಯಂ  ಮೇಲಿನ ಈ ಬದಲಾವಣೆಯು ಸ್ವಯಂಚಾಲಿತವಾಗಿ ನವೀಕರಣೆಗೆ ಒಳ ಪಡುವ ಪಾಲಿಸಿಗಳ ಪ್ರೀಮಿಯಂ ಗಳಿಗೂ ಅನ್ವಯವಾಗುತ್ತದೆ. ಹಾಗೆಯೇ, ಈ ಬದಲಾದ ಪ್ರೀಮಿಯಂ ಮೊತ್ತವು ಮುಂದಿನ 3 ವರ್ಷಗಳವರೆಗೂ ಚಾಲ್ತಿಯಲ್ಲಿ ಇರುತ್ತದೆ. ತಡ ನಂತರ ಪುನಹ ಬದಲಾವಣೆಗೆ ಒಳ ಪಡುತ್ತದೆ.

ಪ್ರತಿ ಒಬ್ಬ ವಿಮಾದಾರನ ಪಾಲಿಸಿ ಪಡೆಯುವಾಗಿನ ವಯಸ್ಸನ್ನು ಗಮನದಲ್ಲಿ ಇಟ್ಟುಕೊಂಡು, ಈ ಬದಲಾವಣೆಯಾದ ಪ್ರೀಮಿಯಂ ಮೊತ್ತವನ್ನು ನಿಗದಿ ಪಡಿಸಲಾಗುತ್ತದೆ.

ಪಾಲಿಸಿದಾರನು ನೀಡಬೇಕಾದ ಪ್ರೀಮಿಯಂ ನಲ್ಲಿ ಪ್ರತಿ ಒಬ್ಬ ವಿಮಾದಾರನ ವೈಯಕ್ತಿಕ ಪ್ರೀಮಿಯಂ ಗಳು ಸೇರಿರುತ್ತದೆ.

ಪ್ರೀಮಿಯಂ ಹಾಗೂ ಹೆಚ್ಚುವರಿ ಆಸ್ಪತ್ರೆ ಕ್ಯಾಷ್ ಬೆನಿಫಿಟ್ ಮೇಲೆ ನೀಡುವ ರಿಯಾಯತಿ

ಪ್ರೀಮಿಯಂ ಮೇಲಿನ ರಿಯಾಯತಿ

ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ -   Tabular ಮೊತ್ತದ 2 % ರಷ್ಟು

ಅರ್ದ ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ – Tabular ಮೊತ್ತದ 1 % ರಷ್ಟು.

ಹೆಚ್ಚುವರಿ ಆಸ್ಪತ್ರೆ ಬೆನಿಫಿಟ್ ಮೊತ್ತದ ಮೇಲಿನ ರಿಯಾಯತಿ

ಈ ಪಾಲಿಸಿ ಅಡಿಯಲ್ಲಿ, ಆಸ್ಪತ್ರೆ ಬೆನಿಫಿಟ್ ಮೊತ್ತವು ರೂ 1000 ಕ್ಕಿಂತ ಹೆಚ್ಚಿದ್ದಲ್ಲಿ, ಈ ಕೆಳ ಕಂಡ ರಿಯಾಯತಿ ಲಭ್ಯವಿರುತ್ತದೆ. ಅಂದರೆ ಪಾಲಿಸಿಯಲ್ಲಿ ಸೇರುವ ಎಲ್ಲ ವಿಮಾದಾರರ ಪ್ರೀಮಿಯಂ ಮೊತ್ತಕ್ಕೆ ಇದು ಅನ್ವಯವಾಗುತ್ತದೆ. ಈ ಕೆಳಗೆ ನಮೂದಿಸಿರುವ ಮೊತ್ತವನ್ನು ರಿಯಾಯತಿ ಆಗಿ ನೀಡಿದ್ದು, ಪ್ರೀಮಿಯಂ ಮೊತ್ತದಿಂದ ಕಳೆದು ಉಳಿದ ಮೊತ್ತವನ್ನು  ಪ್ರೀಮಿಯಂ ರೂಪದಲ್ಲಿ ಕಟ್ಟಬಹುದು.

ಆಸ್ಪತ್ರೆ ಕ್ಯಾಷ್ ಬೆನಿಫಿಟ್ ಮೊತ್ತ

ಪ್ರದಾನ ವಿಮಾದಾರನಿಗೆ

ಉಳಿದ ಪ್ರತಿ ಒಬ್ಬ ವಿಮಾದಾರನಿಗೆ

ರೂ 2000

ರೂ 500

ರೂ 250

ರೂ 3000

ರೂ 1000

ರೂ 500

ರೂ 4000

ರೂ 1500

ರೂ ೭೫೦

ಎಲ್ ಐ ಸಿ ನ್ಯೂ ಟರ್ಮ್ ಅಶ್ಶ್ಯುರೆನ್ಸ್  ರೈಡರ್

ಈ ರೈಡರ್ ಅಡಿಯಲ್ಲಿ, ಪ್ರದಾನ ವಿಮಾದಾರನಾಗಲಿ ಅಥವಾ ಅವನ ಪತ್ನಿ ಆಗಲಿ ಈ ರೈಡರ್ ಅನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ. ಅದರ ಪ್ರಕಾರ ರೈಡರ್ ಮೊತ್ತವು ಪಾಲಿಸಿಯ ಪ್ರಮುಖ ಶಸ್ತ್ರ ಚಿಕಿತ್ಸೆ ಬೆನಿಫಿಟ್ ಮೊತ್ತದ ಸಮ್ ಅಶ್ಶುರ್ಡ್ ಮೊತ್ತಕ್ಕೆ ಸರಿ ಸಮಾನವಾಗಿರುತ್ತದೆ. ಆಕಸ್ಮಿಕವಾಗಿ, ಪಾಲಿಸಿದಾರನ ಅಥವಾ ವಿಮಾದಾರನ ಮರಣವಾದಲ್ಲಿ, ಮೇಲೆ ಕಾಣಿಸಿರುವ ಮೊತ್ತಕ್ಕೆ ಸರಿ ಸಮನಾಗಿ ಮೊತ್ತವನ್ನು ನೀಡಲಾಗುವುದು.

ಎಲ್ ಐ ಸಿ ಆಕ್ಸಿಡೆಂಟ್ ಬೆನಿಫಿಟ್ ರೈಡರ್

ಈ ರೈಡರ್ ಅಡಿಯಲ್ಲಿ, ಪ್ರದಾನ ವಿಮಾದಾರನಾಗಲಿ ಅಥವಾ ಅವನ ಪತ್ನಿ ಆಗಲಿ ಈ ರೈಡರ್ ಅನ್ನು ಮೇಲೆ ಕಾಣಿಸಿರುವ ಟರ್ಮ್ ಅಶ್ಶ್ಯುರೆನ್ಸ ರೈಡರ್ ಜೊತೆಗೆ  ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ. ಅದರ ಪ್ರಕಾರ ಈ ರೈಡರ್ ಮೊತ್ತವು ಟರ್ಮ್ ಅಶ್ಶ್ಯುರೆನ್ಸ್ ರೈಡರ್ ಸಮ್ ಅಶ್ಶುರ್ಡ್ ಮೊತ್ತಕ್ಕೆ ಸರಿ ಸಮನಾಗಿರಬೇಕು. ಆಕಸ್ಮಿಕವಾಗಿ, ಪಾಲಿಸಿದಾರ ಅಥವಾ ವಿಮಾದಾರನ ಮರಣವಾದಲ್ಲಿ, ಮೇಲೆ ಕಾಣಿಸಿರುವ ಮೊತ್ತಕ್ಕೆ ಸರಿ ಸಮನಾಗಿ ಮೊತ್ತವನ್ನು ನೀಡಲಾಗುವುದು

ಮೇಲೆ ಕಾಣಿಸಿದ ಎರಡೂ ರೈಡರ್ಗಳಿಗೂ, ಅನ್ವಯವಾಗುವ ಹೆಚ್ಚುವರಿ ಮೊತ್ತವನ್ನು ಪ್ರೀಮಿಯಂ ಜೊತೆಗೆ ಸೇರಿಸಬೇಕಾಗುತ್ತದೆ.

ಎಲ್ ಐ ಸಿ ಜೀವನ್ ಆರೋಗ್ಯ ಪ್ಲಾನ್ – ಉಳಿದ ಬೆನಿಫಿಟ್ ಗಳು

ಡೆತ್ ಬೆನಿಫಿಟ್

ಸಾಮಾನ್ಯವಾದ ಜೀವೆ ವಿಮೆ ಯೋಜನೆಗಳಲ್ಲಿ ನೀಡುವ ಡೆತ್ ಬೆನಿಫಿಟ್ ಈ ಯೋಜನೆಯಲ್ಲಿ ಸಿಕ್ಕುವುದಿಲ್ಲ. ಆದರೆ, ಮೇಲೆ ಕಾಣಿಸಿದ ರೈಡರ್ ಗಳನ್ನು ಸೇರಿಸಿಕೊಂಡಿದ್ದಲ್ಲಿ, ಅದರ ಬಾಬ್ತು ನಿಯಮದ ಪ್ರಕಾರ ಅನ್ವಯವಾಗುವ ಬೆನಿಫಿಟ್ ಮೊತ್ತವನ್ನು ಎಲ್ ಐ ಸಿ ಯು ನೀಡುತ್ತದೆ.

ಮೆಚೂರಿಟೀ ಬೆನಿಫಿಟ್

ವಿಮಾ ಕವರೆಜ್ ಅವದಿಯು ಮುಗಿದಲ್ಲಿ, ಪಾಲಿಸಿದಾರನಿಗೆ ಯಾವುದೇ ಮೆಚೂರಿಟೀ ಬೆನಿಫಿಟ್ ಮೊತ್ತವನ್ನು ನೀಡುವುದಿಲ್ಲ.

ಗ್ರೇಸ್ ಪೀರಿಯಡ್

ವಾರ್ಷಿಕ ಹಾಗೂ ಆರ್ದ ವರ್ಷದ ಪ್ರೀಮಿಯಂ ಅನ್ನು ನೀಡಲು ಪಾಲಿಸಿದಾರನಿಗೆ 1 ತಿಂಗಳು ಅಥವಾ ಕನಿಷ್ಠ 30 ದಿನಗಳ ಕಾಲಾವಕಾಶ ಇರುತ್ತದೆ. ಗ್ರೇಸ್ ಪೀರಿಯಡ್ ಒಳಗೆ ಪ್ರೀಮಿಯಂ ನೀಡದಿದ್ದಲ್ಲಿ, ಪಾಲಿಸಿಯು ಲ್ಯಾಪ್ಸ್ ಆಗುತ್ತದೆ ಹಾಗೂ ಅದರಿಂದ ಬರುವ ಎಲ್ಲ ಬೆನಿಫಿಟ್ ಗಳು     ಸ್ತಗಿತಗೊಳ್ಳುತ್ತದೆ.

ರಿವೈವಲ್

ಪಾಲಿಸಿದಾರನು, ಲ್ಯಾಪ್ಸ್ ಆಗಿರುವ ಪಾಲಿಸಿಯನ್ನು ರಿವೈವ್ ಅಂದರೆ ಪುನರುಜ್ಜೀವನ ಗೊಳಿಸುವ ಅವಕಾಶ ಇರುತ್ತದೆ. ಅದನ್ನು ಪ್ರೀಮಿಯಂ ಕಟ್ಟದೆ ಇದ್ದ ದಿವಸದಿಂದ 2 ವರ್ಷದ ಒಳಗೆ ಮಾಡಬೇಕಾಗುತ್ತದೆ. ಹಾಗೂ, ಪಾಲಿಸಿಯ ಟರ್ಮ್ ಇನ್ನೂ ಚಾಲ್ತಿಯಲ್ಲಿರಬೇಕು. ಅದು ಮುಂದುವರೆದ insurability ಬಗ್ಗೆ ಪುರಾವೆಯನ್ನು ನೀಡಿದ ನಂತರ ರಿವೈವ್ ಆಗುತ್ತದೆ. ಹೀಗೆ ನೀಡಿರುವ ಪುರಾವೆಯು ಕಾರ್ಪೊರೇಷನ್ ಗೆ ಒಪ್ಪಿಗೆ ಆಗಬೇಕು ಹಾಗೂ ಅಲ್ಲಿಯವರೆಗೂ ಏನಾದರೂ ಪ್ರೀಮಿಯಂ ಗಳನ್ನು ಕಟ್ಟದಿದ್ದಲ್ಲಿ, ಅವುಗಳನ್ನು ಅನ್ವಯವಾಗುವ ಬಡ್ಡಿ ಸಮೇತ ಪಾವತಿಸಬೇಕು. ಕಾರ್ಪೊರೇಷನ್, ಪಾಲಿಸಿಯನ್ನು ಮೊದಲಿನ ನಿಯಮ ಹಾಗೂ ನಿಬಂದನೆಗಳಿಗೆ ಒಳ ಪಟ್ಟಂತೆ ರಿವೈವ್ ಮಾಡಬಹುದು ಅಥವಾ ಬದಲಾಯಿಸಿದ ನಿಯಮ ಮತ್ತು ನಿಬಂದನೆಗಳ ಪ್ರಕಾರ ರಿವೈವ್ ಮಾಡಬಹುದು. ಈ ಸಂಬಂದ ಕಾರ್ಪೊರೇಷನ್ ತೀರ್ಮಾನ ತೆಗೆದುಕೊಳ್ಳುವುದು. ಹಾಗೂ ಪಾಲಿಸಿಯನ್ನು ರಿವೈವಲ್ ಪಾಲಿಸಿ ಎಂದು ಪರಿಗಣಿಸುವುದು, ಕಾರ್ಪೊರೇಷನ್ ಅದನ್ನು ಒಪ್ಪಿದ ಮೇಲೆ ಹಾಗೂ ಆದರ ನಿಮಿತ್ತ ಪಾಲಿಸಿದಾರನಿಗೆ ಲಿಖಿತ ಮುಖೇನ ತಿಳಿಸಿದ ದಿವಸದಿಂದ ಇದು ಅನ್ವಯವಾಗುತ್ತದೆ.  

ಸರಂಡರ್ ಮೌಲ್ಯ

ಈ ಪಾಲಿಸಿಯು ಯಾವುದೇ ಸರಂಡರ್ ಮೌಲ್ಯಕ್ಕೆ ಅರ್ಹತೆ ಹೊಂದಿರುವುದಿಲ್ಲ.

ಕೂಲಿಂಗ್ ಪೀರಿಯಡ್

ಪಾಲಿಸಿಯ ದಾಖಲೆಗಳು ಪಾಲಿಸಿದಾರನಿಗೆ  ಸಿಕ್ಕಿದ ದಿನದಿಂದ 15 ದಿನಗಳವರೆಗೆ ಫ್ರೀ ಲುಕ್ ಪೀರಿಯಡ್ ಉಪಯೋಗಿಸಿಕೊಳ್ಳಬಹುದು. ಆ 15 ದಿನಗಳ ಒಳಗೆ, ಅವನು ಅದರಲ್ಲಿರುವ ನಿಯಮಗಳು ಹಾಗೂ ಶರತ್ತುಗಳನ್ನು ಕೂಲಕುಶವಾಗಿ ಓದಿ ಅವುಗಳಲ್ಲಿ ಯಾವುದಾದರೂ ಅಂಶಗಳ ಬಗ್ಗೆ ಒಪ್ಪಿಗೆ ಇಲ್ಲದಿದ್ದಲ್ಲಿ, ಪಾಲಿಸಿಯನ್ನು 15 ದಿವಸದ ಒಳಗೆ ಹಿಂದಿರುಗಿಸುವ ಅವಕಾಶ ಇರುತ್ತದೆ. ಹಾಗೂ ಹಿಂದಿರುಗಿಸಲು ಸೂಕ್ತ ಕಾರಣವನ್ನು ನೀಡಬೇಕಾಗುತ್ತದೆ. ಪಾಲಿಸಿಯನ್ನು ಹಿಂದಿರುಗಿಸಿದಲ್ಲಿ, ಪ್ರೀಮಿಯಂ ನಿಂದ ಸ್ಟಾಂಡರ್ಡ್ ಡ್ಯೂಟಿ ಮೊತ್ತ, ಪ್ರೋಪೋರ್ಶನೆಟ್ ರಿಸ್ಕ್ ಪ್ರೀಮಿಯಂ ಹಾಗೂ ವೈದ್ಯಕೀಯ ಪರೀಕ್ಷೆಗೆ ವೆಚ್ಚವಾಗಿರುವ ಮೊತ್ತ ಇವೆಲ್ಲವನ್ನೂ ಕಳೆದು ಉಳಿದ ಮೊತ್ತವನ್ನು ನೀಡಲಾಗುವುದು.

ಸಾಲ ಸೌಲಭ್ಯ

ಈ ಯೋಜನೆಯ ಮೇಲೆ ಸಾಲ ಸೌಲಭ್ಯ ಇರುವುದಿಲ್ಲ.

ಅಸೈನ್ಮೆಂಟ್

ಈ ಪಾಲಿಸಿಯ ಮೇಲೆ ಅಸೈನ್ಮೆಂಟ್ ಮಾಡುವ ಆದಿಕಾರ ಇರುವುದಿಲ್ಲ.

ತೆರಿಗೆಗಳು

ಸಮಯಕ್ಕೆ ಸರಿಯಾಗಿ ಅನ್ವಯವಾಗುವ ತೆರಿಗೆಗಳು ಇದಕ್ಕೂ ಅನ್ವಯಿಸುತ್ತದೆ. ಪ್ರೀಮಿಯಂ ಗಳನ್ನು ನೀಡುವಾಗ ಅವತ್ತಿನ ತೆರಿಗೆಯ ಪ್ರಕಾರ ತೆರಿಗೆಯನ್ನು ಸೇರಿಸಿ ನೀಡಬೇಕಾಗುತ್ತದೆ.

ಎಲ್ ಐ ಸಿ ಜೀವನ್ ಆರೋಗ್ಯ ಪ್ಲಾನ್ – ಅನುಕೂಲಗಳು

ಎಲ್ ಐ ಸಿ ಜೀವನ್ ಆರೋಗ್ಯ ಪ್ಲಾನ್ ಪಾಲಿಸಿದಾರನಿಗೆ ಈ ಕೆಳ ಕಂಡ ಅನುಕೂಲತೆಗಳನ್ನು ನೀಡುತ್ತದೆ. ಅದರಿಂದ, ಪಾಲಿಸಿದಾರನು ತನ್ನ ಕುಟುಂಬದ ಆರೋಗ್ಯದ ಬಗ್ಗೆ ಹಾಗೂ ಅದಕ್ಕೆ ತಗಲುವ ವೆಚ್ಚದ ಬಗ್ಗೆ ಮುಂದಾಲೋಚನೆಯನ್ನು ಮಾಡಿ ಈ ಪ್ಲಾನ್ ಅನ್ನು ಪಡೆಯುವುದು ಅತ್ಯಾವಶ್ಯಕವಾಗಿರುತ್ತದೆ.

 • ಪಾಲಿಸಿದಾರನು ತನ್ನ ಪೂರ್ತಿ ಕುಟುಂಬವನ್ನು ಒಂದೇ ಪಾಲಿಸಿಯನ್ನು ಕೊಳ್ಳುವುದರ ಮೂಲಕ ಸುರಕ್ಷಿಸಬಹುದು.
 • ಎಲ್ಲ ತರಹದ ಶಸ್ತ್ರ ಚಿಕಿತ್ಸೆ ಹಾಗೂ ಡೇ ಕೇರ್ ಟ್ರೀಟ್ಮೆಂಟ್ ಗಳು ಈ ಪಾಲಿಸಿಯ ಮೂಲಕ ಲಭ್ಯ.
 • ನೋ ಕ್ಲೈಮ್ ಬೋನಸ್ ಈ ಪಾಲಿಸಿಯಲ್ಲಿ ಲಭ್ಯವಿರುತ್ತದೆ
 • ಮೇಲೆ ತಿಳಿಸಿದಂತೆ, ಕ್ರಿಟಿಕಲ್ ಇಲ್ಲ್ನೆಸ್ಸ್ ರೈಡರ್ ಲಭ್ಯವಿದೆ.
 • ಆನ್ಲೈನ್ ನಲ್ಲಿ, ನಿಮ್ಮ ಅಪ್ಲಿಕೇಷನ್ ಬಗ್ಗೆ, ಮತ್ತು ಪಾಲಿಸಿಯನ್ನು ಕೊಳ್ಳುವ ಹಾಗೂ ರಿವೈವಲ್ ಮಾಡುವ ಪ್ರಕ್ರಿಯೆಯನ್ನು ಮಾಡಬಹುದು.  
 • ಆದಾಯ ತೆರಿಗೆ ಸೆಕ್ಷನ್ 80 D ಅಡಿಯಲ್ಲಿ, ನೀವು ನೀಡುವ ವಾರ್ಷಿಕ ಪ್ರೀಮಿಯಂ  ಮೊತ್ತವು ವಿನಾಯತಿ ಯನ್ನು ಪಡೆಯುತ್ತದೆ. ಅಂದರೆ ವರ್ಷಕ್ಕೆ ರೂ 15,000 ವಿನಾಯತಿ ಎಲ್ಲರಿಗೂ ದೊರಕುತ್ತದೆ. ಹಾಗೆಯೇ ಸೀನಿಯರ್ ಸಿಟಿಜನ್ ಗಳಿಗೆ ರೂ 20000 ವಿನಾಯತಿ ದೊರಕುತ್ತದೆ. ಈ ವಿನಾಯತಿಯು ವರ್ಷಕ್ಕೊಮ್ಮೆ ಬದಲಾವಣೆ ಹೊಂದುತ್ತಲಿದ್ದು, ನೀವು ಪ್ರೀಮಿಯಂ ನೀಡುವ ವರ್ಷದಲ್ಲಿ, ಯಾವುದು ಅನ್ವಯವಾಗುವುದೊ  ಅದು ದೊರಕುತ್ತದೆ.

ಎಲ್ ಐ ಸಿ ಜೀವನ್ ಆರೋಗ್ಯ ಪ್ಲಾನ್ – ಕ್ಲೈಮ್ ಮಾಡಲು ಸಲ್ಲಿಸಬೇಕಾದ ದಾಖಲೆಗಳು

ಈ ಕೆಳ ಕಂಡ ದಾಖಲೆಗಳನ್ನು ಪಾಲಿಸಿದಾರನು ಸುರಕ್ಷತೆಯಿಂದ ಇಟ್ಟುಕೊಂಡು, ಕ್ಲೈಮ್ ಮಾಡುವ ಸಮಯದಲ್ಲಿ ಅರ್ಜಿಯ ಜೊತೆಗೆ ಸರಿಯಾದ ಮತ್ತು ಸೂಕ್ತವಾದ  ದಾಖಲೆಗಳನ್ನು ನೀಡಿದಲ್ಲಿ, ಕ್ಲೈಮ್ ಸೆಟಲ್ಮೆಂಟ್ ಬೇಗ ಆಗುತ್ತದೆ.

 • ಹಾಸ್ಪಿಟಲ್ ನವರು ನೀಡಿರುವ ಡಿಸ್ಚಾರ್ಜ್ ಸಮ್ಮರಿ
 • ಎಲ್ಲ ಮೆಡಿಸಿನ್ ಗಳ ಸೂಚನೆಗಳು ಹಾಗೂ ಅದಕ್ಕೆ ಸಂಭಂದಪಟ್ಟ ಬಿಲ್ಲುಗಳು ಹಾಗೂ ಆದರ ಬ್ರೇಕ್-ಅಪ್
 • ಅಡ್ವಾನ್ಸ್ ಹಾಗೂ ಅಂತಿಮ ಪೇಮೆಂಟ್ ಪಾವತಿ ದಾಖಲೆ
 • ಕ್ಷ ಕಿರಣ, ಸ್ಕ್ಯಾನ್ ಗಳು, ECG, ಡಯಾಗ್ನೊಸಿಸ್ ಮತ್ತು ಇತರೆ  ರಿಪೋರ್ಟ್ ಗಳು.
 • ಎಲ್ಲ ಇನ್ವೆಸ್ಟಿಗೇಷನ್ ಗಳ ಪ್ರತಿಗಳು

ಮೇಲೆ ಕಾಣಿಸಿದ ಎಲ್ಲ ದಾಖಲೆಗಳನ್ನು ಸೂಕ್ತವಾದ ಅರ್ಜಿಯೊಂದಿಗೆ ಹಾಗೂ ನಿಮ್ಮ ಫೋಟೋ ID ಪ್ರೂಫ್ ನೊಂದಿಗೆ ಕಾರ್ಪೊರೇಷನ್ ಗೆ ಸಲ್ಲಿಸಬೇಕು. ಎಲ್ಲ ದಾಖಲೆಗಳು ಸರಿಯಾಗಿದ್ದಲ್ಲಿ, ನಿಯಮದ ಪ್ರಕಾರ ನೀಡವೇಕಾಗಿರುವ ಹಣವನ್ನು ಕಾರ್ಪೊರೇಷನ್ ನೀಡುತ್ತದೆ.

ಎಲ್ ಐ ಸಿ ಜೀವನ್ ಆರೋಗ್ಯ ಪ್ಲಾನ್ – ಸೇರಿಲ್ಲದೆ ಇರುವ ವಿಷಯಗಳು

ಈ ಪಾಲಿಸಿಯ ಅಡಿಯಲ್ಲಿ, ಕೆಳಗೆ ಸೂಚಿಸಿರುವ ವಿಷಯಗಳು ಸೇರಿರುವುದಿಲ್ಲ

 • ಪಾಲಿಸಿ ತೆಗೆದುಕೊಳ್ಳುವ ಮುಂಚೆ ಇದ್ದ ಕಾಯಿಲೆ ಹಾಗೂ ಅದರಿಂದ ಉಂಟಾಗಬಹುದಾದ ದುಷ್ಪರಿಣಾಮಗಳು
 • AIDS / HIV ಗೆ ಸಂಬಂದಿಸಿದ ಕಾಯಿಲೆಗಳು
 • ಯಾವುದೇ ತರಹದ ಇತರೆ ಕಾರಣಗಳಾದ ಯುದ್ಧ, ದೊಂಬಿ ಹಾಗೂ ಬೇರೆ ರೀತಿಯಲ್ಲಿ ಏಟು ಬಿದ್ದು hospitalization ಆಗಿದ್ದಲ್ಲಿ
 • ಇತರೆ ಪ್ರಾಯೋಗಿಕ ಚಿಕಿತ್ಸೆ ಅಥವಾ ಶಸ್ತ್ರ ಚಿಕಿತ್ಸೆ
 • ಡೆಂಟಲ್ ಟ್ರೀಟ್ಮೆಂಟ್
 • ಅಂಗಗಳ ದಾನಕ್ಕೊಸ್ಕ್ರರ ಮಾಡಿರಬಹುದಾದ ಖರ್ಚು
 • ಸ್ವ ಇಚ್ಚೆಯಿಂದ ಆರೋಗ್ಯಕ್ಕೆ ಮತ್ತು ದೇಹಕ್ಕೆ ಮಾಡಿಕೊಂಡಂತಹ ಹಾನಿ
 • ಡಾಕ್ಟರ್ ಗಳ ಸಲಹೆ ಇಲ್ಲದೆ ತೆಗೆದುಕೊಂಡ ಔಷದಿ ಅಥವಾ ಮದ್ಯಪಾನದಿಂದ ಉಂಟಾಗಿರುವ ಹಾನಿ
 • ಅಪಾಯಕಾರಿ ಆಟಗಳಲ್ಲಿ ಬಾಗವಹಿಸುವಿಕೆಯಿಂದ ಉಂಟಾದ ಹಾನಿ
 • ನರ್ವಸ್ ಅಥವಾ ಮೆಂಟಲ್ ಟ್ರೀಟ್ ಮೆಂಟ್ಸ್
 • ಜೆನಿಟಿಕ್ ಹಾಗೂ ಕೊಂಜೆನಿಟಲ್ ವ್ಯತ್ಯಾಸಗಳು – ಅವುಗಳು ಪ್ಲಾನ್ ಅಡಿಯಲ್ಲಿ ಕವರ್ ಆಗಿಲ್ಲದಿದ್ದ ಪಕ್ಷದಲ್ಲಿ
 • ಸರಿಯಾದ ಮೆಡಿಕಲ್ ಸಲಹೆ ನೀಡಿದಲ್ಲೂ ಅದನ್ನು ಪಾಲಿಸದೆ ಇದ್ದ ಪಕ್ಷದಲ್ಲಿ ಉಂಟಾಗುವೆ ಹಾನಿ