ಎಲ್ ಐ ಸಿ ಜೀವನ್ ಲಾಭ್ ಯೋಜನೆ
 • ಅತ್ಯುತ್ತಮ ಯೋಜನೆಗಳು
 • ಸುಲಭ ಹೋಲಿಕೆ
 • ತಕ್ಷಣದ ಖರೀದಿ
PX step

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಹುಟ್ಟಿದ ದಿನಾಂಕ (ದೊಡ್ಡ ಸದಸ್ಯ)
ಆದಾಯ
| ಲಿಂಗ

1

2

ಫೋನ್ ಸಂಖ್ಯೆ
ಹೆಸರು
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಎಲ್ ಐ ಸಿ ಜೀವನ್ ಲಾಭ್ ಯೋಜನೆಯು ಒಂದು ನಾನ್ ಲಿಂಕ್ಡ ಮತ್ತು ಲಾಭ ಹಾಗೂ ನಿಯಮಿತವಾಗಿ ಕಂತಿನ ಹಣವನ್ನು ನೀಡಬೇಕಾಗಿರುವ ಎಂಡೋಮೆಂಟ್ ಯೋಜನೆಯಾಗಿರುತ್ತದೆ. ಇದು ಒಂದು ಕಾಂಬಿನೇಷನ್ ಯೋಜನೆಯಾಗಿದ್ದು, ಉಳಿತಾಯ ಮತ್ತು ರಕ್ಷಣೆಯನ್ನು ಕೊಡುತ್ತದೆ. ಎಲ್ ಐ ಸಿ ಜೀವನ್ ಲಾಭ್ ಯೋಜನೆಯ ಮೂಲಕ ಕೇವಲ ರಕ್ಷಣೆ ಮಾತ್ರವಲ್ಲದೆ, ನೀವು ಕಷ್ಟ ಪಟ್ಟು ದುಡಿದ ಹಣವನ್ನು ಸರಿಯಾದ ರೀತಿಯಲ್ಲಿ ವಿನಿಯೋಗ ಮಾಡಿದ ಹಾಗೆ ಆಗುತ್ತದೆ. ಈ ಯೋಜನೆಯು, ಪಾಲಿಸಿದಾರನ ಆಕಸ್ಮಿಕ ಮರಣವಾದಲ್ಲಿ, ಅವನ ಕುಟುಂಬವು ಆದಷ್ಟು  ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕದೇ ಇರುವ ಹಾಗೆ ಸಹಾಯ ಮಾಡುತ್ತದೆ. ಈ ಯೋಜನೆಯ ಅಡಿಯಲ್ಲಿ ಪಾಲಿಸಿಯನ್ನು ಹೊಂದಲು ಇಚ್ಚಿಸುವವರ ವಯಸ್ಸು 8 ರಿಂದ 59 ವರ್ಷಗಳ ಒಳಗೆ ಇರಬೇಕು. ಈ ವಯಸ್ಸಿನ ಒಳಗಿದ್ದವರು, ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಎಲ್ ಐ ಸಿ ಜೀವನ್ ಲಾಭ್ ಯೋಜನೆಯು ಒಂದು ಬೇಸಿಕ್ ಎಂಡೋಮೆಂಟ್ ಯೋಜನೆಯಾಗಿರುತ್ತದೆ. ಈ ಯೋಜನೆಯ ಮೂಲಕ ಪಾಲಿಸಿದಾರನು ಒಂದು ಸೀಮಿತವಾದ ಆವದಿಗೆ ಕಂತುಗಳನ್ನು ಕಟ್ಟಬೇಕಾಗಿದ್ದು, ಯೋಜನೆಯ ಅವದಿ ಮುಗಿದ ನಂತರ ಮೆಚೂರಿಟೀ ಬೇನೆಫಿಟ್ಸ್ ಪಡೆಯಬಹುದು. ಪಾಲಿಸಿಯ ಆವದಿಗೆ ಮುಂಚೆ ಪಾಲಿಸಿದಾರನ ಆಕಸ್ಮಿಕ ಮರಣವಾದಲ್ಲಿ, ಅವನ ನಾಮಿನಿಗೆ ಡೆತ್ ಬೆನಿಫಿಟ್ ಸಿಗುವುದು.

ಎಲ್ ಐ ಸಿ ಜೀವನ್ ಲಾಭ್ – ಕೆಲವು ಮುಖ್ಯ ವೈಶಿಷ್ಟ್ಯಗಳು

 • ಈ ಯೋಜನೆಯಲ್ಲಿ  ನೀವು ಲಭ್ಯವಿರುವ ವಿವಿದ ಅವದಿಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿರುತ್ತದೆ. ಅದರ ಪ್ರಕಾರ, ಯೋಜನೆಯ ಅವದಿಯು 16 ವರ್ಷಗಳು, 21 ವರ್ಷಗಳು ಹಾಗೂ 25 ವರ್ಷಗಳಿರುತ್ತದೆ. ಈ ಮೂರರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.
 • ಇದು ಒಂದು ನಾನ್ ಲಿಂಕ್ಡ ಮತ್ತು ಸೀಮಿತವಾದ ಆವದಿಗೆ ಕಂತುಗಳನ್ನು ಕಟ್ಟಬೇಕಾದ ಯೋಜನೆ ಆಗಿರುತ್ತದೆ.
 • ವೈಯಕ್ತಿಕವಾಗಿ ಹಣ ಹೂಡಿಕೆ ಮಾಡಲು ಇಚ್ಚಿಸುವ ಪಾಲಿಸಿದಾರರಿಗೆ ಇದು ಒಂದು ಉತ್ತಮವಾದ ಯೋಜನೆ.
 • ಪಾಲಿಸಿಯ ಕಂತುಗಳನ್ನು 10 ವರ್ಷ, 15 ವರ್ಷ ಅಥವಾ 16 ವರ್ಷಗಳಲ್ಲಿ ನೀಡುವ ಸೌಲಭ್ಯ  ಇರುತ್ತದೆ
 • ಈ ಯೋಜನೆಗಾಗಿ ನೀಡುವ ಕಂತುಗಳನ್ನು ವರ್ಷಕ್ಕೊಮ್ಮೆ, ಅರ್ದ ವರ್ಷಕ್ಕೊಮ್ಮೆ, ಮೂರು ತಿಂಗಳಿಗೊಮ್ಮೆ, ತಿಂಗಳಿಗೊಮ್ಮೆ ಅಥವಾ ವೇತನ ಕಡಿತದ (ಎಸ್ ಎಸ್ ಎಸ್) ಮೂಲಕ ನೀಡಬಹುದು
 • ಈ ಪಾಲಿಸಿಯ ಮೇಲೆ ಸಾಲದ ಸೌಲಭ್ಯ ಇರುತ್ತದೆ. ಪಾಲಿಸಿದಾರನು ಕಂತುಗಳನ್ನು 3 ವರ್ಷ ಸಂಪೂರ್ಣವಾಗಿ ಕಟ್ಟಿದ್ದಲ್ಲಿ, ಹಾಗೂ ಪಾಲಿಸಿಯು ಸರಂಡರ್ ಮೌಲ್ಯವನ್ನು ತಲುಪಿದ್ದಲ್ಲಿ, ಈ ಪಾಲಿಸಿಯ ಮೇಲೆ ಸಾಲವನ್ನು ತೆಗೆದುಕೊಳ್ಳಲು ಅರ್ಹನಾಗುತ್ತಾನೆ. ಆ ಮೂಲಕ ಪಾಲಿಸಿಯನ್ನು  ಹೊಂದಿರುವ ಪ್ರಯೋಜನವನ್ನು ಕೂಡ ಪಡೆದು ಕೊಳ್ಳಬಹುದು
 • ಈ ಯೋಜನೆಯ ಅಡಿ ಪಾಲಿಸಿದಾರನಿಗೆ  ಪಾಲಿಸಿಯನ್ನು ಖರೀದಿಸಿದ ದಿವಸದಿಂದ  15 ದಿವಸಗಳವರೆಗೆ ಫ್ರೀ ಲುಕ್ ಪೀರಿಯಡ್ ಅಂದರೆ ಕೂಲಿಂಗ್ ಪೀರಿಯಡ್ ನೀಡಲಾಗುತ್ತದೆ  
 • ಪಾಲಿಸಿ ಹೊಂದಿರುವವರು ಕಂತಿನ ಹಣವನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡದೆ ಪಾಲಿಸಿಯು ಮಾನ್ಯತೆಯನ್ನು ಕಳೆದುಕೊಂಡಿದ್ದಲ್ಲಿ, ಅಂತವರು, ಪಾಲಿಸಿ ಮಾನ್ಯತೆ ಕಳೆದುಕೊಂಡ ಎರಡು ವರ್ಷದ ಒಳಗೆ ರಿವೈವಲ್ ಮಾಡಿಕೊಳ್ಳುವ ಅವಕಾಶ ಇರುತ್ತದೆ. ಆದರೆ, ಆವರೆಗೂ ಇರುವ ಬಾಕಿ ಕಂತಿನ ಹಣವನ್ನು ಅನ್ವಯವಾಗುವ ಬಡ್ಡಿ ದರವನ್ನು ಸೇರಿಸಿ ನೀಡಬೇಕಾಗುತ್ತದೆ. ಅದರ ಜೊತೆಗೆ ಇನ್ನೂ ಏನಾದರೂ ಹಣವನ್ನು ಕೊಡಬೇಕಾದಲ್ಲಿ, ಅದನ್ನು ಕೂಡ ಸೇರಿಸಿ ನೀಡಬೇಕಾಗುತ್ತದೆ.

ಯೋಜನೆಯ ಮಾದರಿ (ಪ್ಲಾನ್ ಟೈಪ್)

ನಾನ್ ಲಿಂಕ್ಡ ಎಂಡೋಮೆಂಟ್  ಜೊತೆಗೆ ಸೀಮಿತ ಅವದಿಯ ಕಂತುಗಳನ್ನು ನೀಡುವ ಒಂದು  ಯೋಜನೆ

ಯೋಜನೆಯ ಆಧಾರ

ವೈಯಕ್ತಿಕ

ಪಾಲಿಸಿ ಕವರೆಜ್

ಮೆಚೂರಿಟೀ ಬೆನಿಫಿಟ್, ಡೆತ್ ಬೆನಿಫಿಟ್, ಸರಳ ರಿವೆರ್ಶನರಿ ಬೋನಸ್ ಮತ್ತು ಅಂತಿಮ (ಹೆಚ್ಚುವರಿ) ಬೋನಸ್ (ಇದ್ದಲ್ಲಿ)

ಪಾಲಿಸಿ ಅವದಿ

16 ವರ್ಷಗಳು (10 ವರ್ಷಗಳಲ್ಲಿ  ಕಂತುಗಳನ್ನು ಕಟ್ಟಬೇಕಾದ ಟರ್ಮ್)

21 ವರ್ಷಗಳು (15 ವರ್ಷಗಳಲ್ಲಿ  ಕಂತುಗಳನ್ನು ಕಟ್ಟಬೇಕಾದ ಟರ್ಮ್)

25 ವರ್ಷಗಳು (16 ವರ್ಷಗಳಲ್ಲಿ  ಕಂತುಗಳನ್ನು ಕಟ್ಟಬೇಕಾದ ಟರ್ಮ್)

ಕಂತುಗಳನ್ನು ಕಟ್ಟಬೇಕಾದ  ಟರ್ಮ್

10 ವರ್ಷಗಳು

15 ವರ್ಷಗಕು

16 ವರ್ಷಗಳು

ಸಾಲ ದೊರೆಯುವಿಕೆ

ಈ ಯೋಜನೆಯ ಮೇಲೆ ಸಾಲ ದೊರಕುತ್ತದೆ. ಆದರೆ, ಪಾಲಿಸಿದಾರನು ಕನಿಷ್ಠ 3 ವರ್ಷ ಕಂತುಗಳನ್ನು ಕಟ್ಟಿರಬೇಕು ಹಾಗೂ ಪಾಲಿಸಿಯು ಸರಂಡರ್ ಮೌಲ್ಯ ಹೊಂದಿರಬೇಕು

ಫ್ರೀ ಲುಕ್ ಪೀರಿಯಡ್

ಪಾಲಿಸಿಯ ದಾಖಲೆಗಳು ಸೇರಿದ 15 ದಿವಸಗಳು. ಪಾಲಿಸಿದಾರನು ಇಷ್ಟು ದಿವಸದ ಒಳಗೆ ಪಾಲಿಸಿಯನ್ನು ಹಿಂತಿರುಗಿಸಿದಲ್ಲಿ ಆಗಲೇ ಕಟ್ಟಿರುವ ಕಂತಿನ ಹಣದಲ್ಲಿ ಅದುವರೆಗಿನ ರಿಸ್ಕ್ ಪೀರಿಯಡ್ ಗೆ ಅನ್ವಯಿಸುವ ಹಣವನ್ನು, ವೈದ್ಯಕೀಯ ಪರೀಕ್ಷೆಗೆ ತಗುಲಿರುವ ವೆಚ್ಚ, ಮತ್ತು  ಸ್ಟಾಂಪ್ ಡ್ಯೂಟಿ ಇವುಗಳನ್ನು ಕಡಿತಗೊಳಿಸಿ ಉಳಿದ ಹಣವನ್ನು ಪಾಲಿಸಿದಾರನಿಗೆ ನೀಡಲಾಗುತ್ತದೆ.

ನಾಮಿನೇಶನ್

ವಿಮಾ ಆಕ್ಟ್ ಪ್ರಕಾರ ನಾಮಿನೇಶನ್ ಸೌಲಭ್ಯ ಇರುತ್ತದೆ

ಬೇಸಿಕ್ ವಿಮಾ ಮೊತ್ತ

ಕನಿಷ್ಠ – ರೂ 2 ಲಕ್ಷ

ಗರಿಷ್ಠ – ಯಾವುದೇ ಮಿತಿ ಇಲ್ಲ

ಬೇಸಿಕ್ ವಿಮಾ ಮೊತ್ತವು ರೂ 10,000 ದ  ಮಲ್ಯಿಪಲ್ಸ್ ನಲ್ಲಿ ಇರಬೇಕು

ಕಂತುಗಳನ್ನು ನೀಡ ಬೇಕಾದ ಅವದಿ

ವರ್ಷಕ್ಕೊಮ್ಮೆ, ಅರ್ದ ವರ್ಷಕ್ಕೊಮ್ಮೆ, ಮೂರು ತಿಂಗಳಿಗೊಮ್ಮೆ, ತಿಂಗಳಿಗೊಮ್ಮೆ (ಕೇವಲ ಈ ಸಿ ಎಸ್ ಮುಖಾಂತರ)

ಎಸ್ ಎಸ್ ಎಸ್ (ವೇತನ ಉಳಿತಾಯದ ಯೋಜನೆ )

ರಿವೈವಲ್ (ಪಾಲಿಸಿಯನ್ನು ಪುನರುಜ್ಜೀವನಗೊಳಿಸುವಿಕೆ)

 

ಎಲ್ ಐ ಸಿ ಜೀವನ್ ಲಾಭ್- ಬೇನೆಫಿಟ್ಸ್

ಎಲ್ ಐ ಸಿ ಜೀವನ್ ಲಾಭ್ ಯೋಜನೆಯನ್ನು ಕೊಳ್ಳುವುದರಿಂದ, ಈ ಕೆಳಕಂಡ ಬೇನೆಫಿಟ್ಸ್ ಗಳನ್ನು ಪಡೆಯಬಹುದು.

ಡೆತ್ (ಮರಣದ ನಂತರದ) ಬೆನಿಫಿಟ್

ಪಾಲಿಸಿದಾರನು ಯೋಜನೆಯ ಆವದಿಯು ಮುಗಿಯುವುದರ ಒಳಗೆ ಮರಣ ಹೊಂದಿದಲ್ಲಿ, ಆತನ ನಾಮಿನಿಗೆ ಡೆತ್ ಬೆನಿಫಿಟ್ ನೀಡಲಾಗುವುದು. ಈ ಮೊತ್ತದ ಜೊತೆಗೆ ಅನ್ವಯವಾಗುವ ಸರಳ ರಿವೆರ್ಶನರಿ ಬೋನಸ್ ಮತ್ತು ಅಂತಿಮ (ಹೆಚ್ಚುವರಿ) ಬೋನಸ್ (ಇದ್ದಲ್ಲಿ) ಸೇರಿಸಿ ನೀಡಲಾಗುವುದು.

ಮೆಚೂರಿಟೀ ಬೆನಿಫಿಟ್

ಪಾಲಿಸಿದಾರನು ಯೋಜನೆಯ ಆವದಿಯನ್ನು ಪೂರೈಸಿದಲ್ಲಿ ಆತನಿಗೆ ಮೆಚೂರಿಟೀ ಬೆನಿಫಿಟ್ ನೀಡಲಾಗುವುದು. ಅಂತಹ ಸಮಯದಲ್ಲಿ, ಪಾಲಿಸಿ ಅವದಿ ಮುಗಿದ ನಂತರ ಪಾಲಿಸಿದಾರನಿಗೆ, ಮೆಚೂರಿಟೀ ಬೆನಿಫಿಟ್ ಮೊತ್ತ ಹಾಗೂ ಅದರ ಜೊತೆಗೆ ಅನ್ವಯವಾಗುವ ಸರಳ ರಿವೆರ್ಶನರಿ ಬೋನಸ್ ಮತ್ತು ಅಂತಿಮ (ಹೆಚ್ಚುವರಿ) ಬೋನಸ್ (ಇದ್ದಲ್ಲಿ) ಸೇರಿಸಿ ನೀಡಲಾಗುವುದು.

ರಿಯಾಯತಿ

ಈ ಯೋಜನೆಯ ಅಡಿಯಲ್ಲಿ ವರ್ಷಕ್ಕೊಮ್ಮೆ ನೀಡುವ ಕಂತಿನ ಹಣದಲ್ಲಿ 2 % ರಿಯಾಯತಿ ಲಭ್ಯವಿದೆ. ಹಾಗೆಯೇ ಅರ್ದ ವರ್ಷದ ಕಂತಿನ ಹಣಕ್ಕೆ 1 % ರಿಯಾಯತಿ ನೀಡಲಾಗುವುದು. ವಿಮಾ ಮೊತ್ತದ (sum assured) ಮೇಲೂ ಕೂಡ ರಿಯಾಯತಿ ಇರುತ್ತದೆ. ವಿಮಾ ಮೊತ್ತವು (sum assured) ರೂ 5 ಲಕ್ಷದಿಂದ 9,99 ಲಕ್ಷದ ಒಳಗಿದ್ದಲ್ಲಿ, ಈ ಮೊತ್ತದ ಮೇಲೆ 1.25 % ರಿಯಾಯತಿ ನೀಡಲಾಗುವುದು. ವಿಮಾ ಮೊತ್ತವು (sum assured) ರೂ 10 ಲಕ್ಷದಿಂದ 14,99 ಲಕ್ಷದ ಒಳಗಿದ್ದಲ್ಲಿ, ಈ ಮೊತ್ತದ ಮೇಲೆ 1.50 % ರಿಯಾಯತಿ ನೀಡಲಾಗುವುದು. ವಿಮಾ ಮೊತ್ತವು (sum assured) ರೂ 15 ಲಕ್ಷದ ಮೇಲ್ಪಟ್ಟಲ್ಲಿ ಈ ಮೊತ್ತದ ಮೇಲೆ 1.75 % ರಿಯಾಯತಿ ನೀಡಲಾಗುವುದು.

ಸಾಲ ಸೌಲಭ್ಯ

ಈ ಯೋಜನೆಯು ಸಾಲ ಸೌಲಭ್ಯವನ್ನು ಹೊಂದಿರುತ್ತದೆ. ಅದರ ಪ್ರಕಾರ, ಪಾಲಿಸಿಯು 3 ವರ್ಷದಿಂದ ಅಸ್ತಿತ್ವದಲ್ಲಿದ್ದು, ಪಾಲಿಸಿದಾರನು ಕಂತುಗಳನ್ನು ಸರಿಯಾದ ಸಮಯದಲ್ಲಿ ಪಾವತಿಸಿರಬೇಕು. ಹಾಗೂ ಪಾಲಿಸಿಯು ಸರಂಡರ್ ಮೌಲ್ಯವನ್ನು ಹೊಂದಿರಬೇಕು. ಅಂತಹ ಪಾಲಿಸಿಯ ಮೇಲೆ ಸಾಲವನ್ನು ಪಡೆಯಬಹುದು. ಮತ್ತು ಆ ಪಾಲಿಸಿಯು, ಸಾಲವನ್ನು ತೆಗೆದುಕೊಳ್ಳಲು ಅರ್ಹವಾಗುತ್ತದೆ.

ಲಾಭದಲ್ಲಿ ಬಾಗವಹಿಸುವಿಕೆ

ಯಾವುದೇ ಪಾಲಿಸಿಯು ಇನ್ನೂ ಆಸ್ತಿತ್ವದಲ್ಲಿದ್ದಲ್ಲಿ, ಅಂತಹ ಪಾಲಿಸಿಗೆ ಸರಳ ರಿವೆರ್ಶನರಿ ಬೋನಸ್ ನೀಡಲಾಗುತ್ತದೆ. ಏಕೆಂದರೆ, ಈ ಯೋಜನೆಯು ಕಾರ್ಪೊರೇಷನ್ನಿನ ಬಂಡವಾಳ ಹೂಡಿಕೆ ಹಾಗೂ ಅದರಿಂದ ಉತ್ಪತ್ತಿಯಾಗುವ ಲಾಭಗಳಲ್ಲಿ ಬಾಗಿ ಆಗಿರುತ್ತದೆ.

ಆದರ್ಶ ಯೋಜನೆ

ಎಲ್ ಐ ಸಿ ಜೀವನ್ ಲಾಭ್ ಯೋಜನೆಯು ಒಂದು ಆದರ್ಶ ಯೋಜನೆ ಆಗಿದ್ದು ನೀವು ನಿಮ್ಮ ಕುಟುಂಬಕ್ಕೆ ಬೇಕಾದ ಆರ್ಥಿಕ ಭದ್ರತೆ ಹಾಗೂ ನಿಮ್ಮ ಮಗುವಿನ ಓದುವಿಕೆ ಹಾಗೂ ಮದುವೆಯ ಸಂಧರ್ಭಕ್ಕೆ ಹಣವನ್ನು ಒದಗಿಸಲು ಸಹಾಯ ಮಾಡುತ್ತದೆ.

ತೆರಿಗೆ ವಿನಾಯತಿ

ಎಲ್ ಐ ಸಿ ಜೀವನ್ ಲಾಭ್ ಯೋಜನೆಯ ಬಾಬ್ತು ಕಟ್ಟುವ ಕಂತುಗಳ ಹಣಕ್ಕೆ  ತೆರಿಗೆ ವಿನಾಯತಿ ಇರುತ್ತದೆ. ಆದಾಯ ತೆರಿಗೆ ಆಕ್ಟ್ 1961 ರ  ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯತಿ ದೊರೆಯುತ್ತದೆ. ಮುಂದುವರೆದು, ಈ ಯೋಜನೆಯ ಅವದಿ ಮುಗಿದ ನಂತರ ದೊರೆಯುವ ಮೆಚೂರಿಟೀ ಬೆನಿಫಿಟ್ ಮೊತ್ತವು ಸೆಕ್ಷನ್ 10 (10ಡಿ) ಅಡಿಯಲ್ಲಿ ವಿನಾಯತಿ ಹೊಂದಿರುತ್ತದೆ.

ಎಲ್ ಐ ಸಿ ಜೀವನ್ ಲಾಭ್ – ಕವರೇಜ್ (ವಿಮಾ ಮೊತ್ತ)

ಡೆತ್ ಬೆನಿಫಿಟ್ (ಮರಣದ ನಂತರ ದೊರೆಯುವ ಮೊತ್ತ)

ಡೆತ್ ಬೆನಿಫಿಟ್ ಒಂದು ಅತ್ಯಂತ ಮಹತ್ವದ ಮತ್ತು ವಿಶಿಷ್ಟವಾದ ಕೊಡುಗೆ. ಇದರಿಂದ, ಪಾಲಿಸಿದಾರನು, ಯೋಜನೆಯ ಆವದಿಯ ಒಳಗೆ ಆಕಸ್ಮಿಕ  ಮರಣ ಹೊಂದಿದಲ್ಲಿ, ಅವನ ಕುಟುಂಬವು ಅರ್ಥಿಕವಾಗಿ ಬವಣೆಯನ್ನು ಎದುರಿಸದಂತೆ ನೋಡಿಕೊಳ್ಳುವ ಒಂದು ವಿದಾನ. ಅವರುಗಳು, ಈವರೆಗೂ ರೂಡಿಸಿಕೊಂಡಿದ್ದ ಜೀವನ ಶೈಲಿಯನ್ನು ಆದಷ್ಟು ಮುಂದುವರೆಸಿಕೊಂಡು ಹೋಗಲು ಸಹಾಯ ಮಾಡುತ್ತದೆ. ಆದರೆ, ಈ ಯೋಜನೆಯ ಪ್ರಕಾರ ನೀಡಬೇಕಾಗಿರುವ ಕಂತುಗಳ ಸಂಪೂರ್ಣ ಮೊತ್ತವು ಅಲ್ಲಿಯವರೆಗೂ ಸಂದಾಯವಾಗಿರಬೇಕಾಗುತ್ತದೆ. ಡೆತ್ ಬೆನಿಫಿಟ್ ಮೊತ್ತದಲ್ಲಿ ಸಮ್ ಅಶ್ಶ್ಯುರ್ಡ್ (ಪಾಲಿಸಿಯ ಖಚಿತವಾದ ಮೊತ್ತ), ಅದುವರೆಗಿನ ಸರಳ ರಿವೆರ್ಶನರಿ ಬೋನಸ್ ಮತ್ತು ಅಂತಿಮ ಹೆಚ್ಚುವರಿ ಬೋನಸ್ ಗಳು ಸೇರ್ಪಡೆ ಆಗುತ್ತದೆ. “ಸಮ್ ಅಶ್ಶ್ಯುರ್ಡ್” ಮೊತ್ತವೆಂದರೆ ವಾರ್ಷಿಕ ಕಂತುಗಳ ಮೊತ್ತಕ್ಕೆ 10 ಪಟ್ಟು ಅಥವಾ ಮರಣದ ನಂತರ ನೀಡಬೇಕಾದ ಖಚಿತ ಮೊತ್ತ ಅಂದರೆ ಬೇಸಿಕ್ ಸಮ್ ಅಶ್ಶ್ಯುರ್ಡ್ ಆಗಿರುತ್ತದೆ. ಹೀಗೆ ನೀಡುವ ಬೆನಿಫಿಟ್ ಮೊತ್ತವು, ಅದುವರೆವಿಗೂ ಅಂದರೆ ಮರಣದ ಸಮಯದವರೆಗೂ ನೀಡಿರುವ ಎಲ್ಲ ಕಂತುಗಳ ಒಟ್ಟಾರೆ ಮೊತ್ತಕ್ಕಿಂತ 105 % ಗಿಂತ ಕಮ್ಮಿ ಇರುವುದಿಲ್ಲ.

ಮೇಲೆ ಸೂಚಿಸಿರುವ ಕಂತಿನ ಮೊತ್ತದಲ್ಲಿ, ಯಾವುದೇ ತೆರಿಗೆ ಆಗಲಿ, ಅಂಡರ್ ರೈಟಿಂಗ್ ಪ್ರಕಾರ ಹೆಚ್ಚುವರಿ ಹಣ ನೀಡಬೇಕಾದಲ್ಲಿ ಅಥವಾ  ರೈಡರ್ ಕಂತುಗಳು ಬಾಕಿ ಇದ್ದಲ್ಲಿ, ಅವುಗಳನ್ನು ಕಡಿತ ಮಾಡಿ ಉಳಿದ ಮೊತ್ತವನ್ನು ನೀಡಲಾಗುವುದು.

ಮೆಚೂರಿಟೀ ಬೆನಿಫಿಟ್

“ಮೆಚೂರಿಟೀ ಸಮಯದಲ್ಲಿ ನೀಡಬೇಕಾದ ಸಮ್ ಅಶ್ಶ್ಯುರ್ಡ್” ಮೊತ್ತವೆಂದರೆ ಬೇಸಿಕ್ ಸಮ್ ಅಶ್ಶ್ಯುರ್ಡ್ ಹಾಗೂ ಅದರ ಜೊತೆಗೆ ಸರಳ ರಿವರ್ಷನರಿ ಬೋನಸ್ ಮತ್ತು ಅಂತಿಮ ಹೆಚ್ಚುವರಿ ಬೋನಸ್ (ಇದ್ದ ಪಕ್ಷದಲ್ಲಿ) ಇವೆಲ್ಲವನ್ನೂ ಸೇರಿಸಿ ಒಟ್ಟಾರೆ ಮೊತ್ತ. ಈ ಒಟ್ಟಾರೆ ಮೊತ್ತವನ್ನು ಮೆಚೂರಿಟೀ ಬೆನಿಫಿಟ್ ಏಂಕು ನೀಡಲಾಗುವುದು.  ಆದರೆ, ಅದುವರೆಗಿನ ಎಲ್ಲ ಕಂತುಗಳ ಹಣವನ್ನು ಪಾಲಿಸಿದಾರನು ಸಂಪೂರ್ಣವಾಗಿ ನೀಡಿರಬೇಕಾಗುತ್ತದೆ.

ಲಾಭದಲ್ಲಿ ಬಾಗವಹಿಸುವಿಕೆ

ಈ ಯೋಜನೆಯ ಅಡಿಯಲ್ಲಿ ಪಾಲಿಸಿಯು ಕಾರ್ಪೊರೇಷನ್ನಿನ  ಬಂಡವಾಳ ಹೂಡಿಕೆ ಹಾಗೂ ಅದರಿಂದ ಉತ್ಪತ್ತಿಯಾಗುವ ಲಾಭಗಳಲ್ಲಿ ಬಾಗಿ ಆಗಿರುತ್ತದೆ. ಆದುದರಿಂದ ಕಾರ್ಪೊರೇಷನ್ ತಮ್ಮ ಅಲ್ಲಿಯವರೆಗಿನ ಅನುಭವದ ಪ್ರಕಾರ ಘೋಷಿಸಲಾದ ಸರಳ ರಿವರ್ಷನರಿ ಬೋನಸ್ ಸೇರಿಸಲು ಅರ್ಹತೆ ಹೊಂದಿರುತ್ತದೆ. ಆದರೆ ಪಾಲಿಸಿಯು ಇನ್ನೂ ಚಾಲ್ತಿಯಲ್ಲಿರಬೇಕು.

ಪಾಲಿಸಿದಾರನು ಮರಣ ಹೊಂದಿದ ಅಥವಾ ಪಾಲಿಸಿಯು ಮೆಚೂರಿಟೀ ಹೊಂದಿದ ವರ್ಷದಲ್ಲಿ ಕಾರ್ಪೊರೇಷನ್ ರವರು ಅಂತಿಮ ಹೆಚ್ಚುವರಿ ಬೋನಸ್ ಕೂಡ ನೀಡಬಹುದು.

ಎಲ್ ಐ ಸಿ ಜೀವನ್ ಲಾಭ್ – ಅರ್ಹತೆಗಳು

 

ಕನಿಷ್ಠ

ಗರಿಷ್ಠ

ಸಮ್ ಅಶ್ಶ್ಯುರ್ಡ್

ರೂ 2,00,000 ಗಳು

ಯಾವುದೇ ಮಿತಿ ಇರುವುದಿಲ್ಲ

ಪಾಲಿಸಿಯ ಅವದಿ

16 ವರ್ಷಗಳು, 21 ವರ್ಷಗಳು, 25 ವರ್ಷಗಳು

ಕಂತನ್ನು ನೀಡುವ ಟರ್ಮ್(ವರ್ಷಗಳಲ್ಲಿ)

16 ವರ್ಷದ ಪಾಲಿಸಿ ಟರ್ಮ್ ಗೆ 10 ಕಂತುಗಳು

 

21 ವರ್ಷದ ಪಾಲಿಸಿ ಟರ್ಮ್ ಗೆ 15 ಕಂತುಗಳು

 

25 ವರ್ಷದ ಪಾಲಿಸಿ ಟರ್ಮ್ ಗೆ 16 ಕಂತುಗಳು

ಯೋಜನೆ ಕೊಳ್ಳಲು ಅರ್ಹ ವಯಸ್ಸು

8 ವರ್ಷಗಳು ಪೂರ್ಣ ಆಗಿರಬೇಕು

16 ವರ್ಷದ ಪಾಲಿಸಿ ಟರ್ಮ್ ಗೆ 59 ವರ್ಷಗಳು

21 ವರ್ಷದ ಪಾಲಿಸಿ ಟರ್ಮ್ ಗೆ 54 ವರ್ಷಗಳು

25 ವರ್ಷದ ಪಾಲಿಸಿ ಟರ್ಮ್ ಗೆ 50ವರ್ಷಗಳು

ಗರಿಷ್ಠ ಮೆಚೂರಿಟೀ ವಯಸ್ಸು

75 ವರ್ಷಗಳು

ಕಂತನ್ನು ನೀಡಬೇಕಾದ ಫ್ರೀಕ್ವೆನ್ಸೀ

ವರ್ಷಕ್ಕೊಮ್ಮೆ, ಅರ್ದ ವರ್ಷಕ್ಕೊಮ್ಮೆ, 3 ತಿಂಗಳಿಗೆ ಒಮ್ಮೆ, ಒಂದು ತಿಂಗಳಿಗೆ ಒಮ್ಮೆ

ಎಲ್ ಐ ಸಿ ಜೀವನ್ ಲಾಭ್ ಯೋಜನೆಯು ಹೇಗೆ ಕೆಲಸ ಮಾಡುವುದು ?

ಪಾಲಿಸಿದಾರರು ಅಂದರೆ ನೀವು ಈ ಎಲ್ ಐ ಸಿ ಜೀವನ್ ಲಾಭ್ ಯೋಜನೆಯನ್ನು ಕೊಳ್ಳಲು ಯೋಚಿಸಿದಲ್ಲಿ, ಈ ಕೆಳ ಕಂಡ ಅಂಶಗಳನ್ನು ಗಮನಿಸಬೇಕು.

 1. ಸಮ್ ಅಶ್ಶ್ಯುರ್ಡ್ (ಇದು ನೀವು ಕೊಳ್ಳಲು ಇಚ್ಚಿಸಿರುವ ವಿಮಾ ಮೊತ್ತ )
 2. ಪಾಲಿಸಿ ಅವದಿ (ಟರ್ಮ್) – (ಪಾಲಿಸಿದಾರರು ತಮ್ಮ ಮೇಲಿನ ವಿಮೆಯು ಎಲ್ಲಿಯವರಗೆ ಇರಬೇಕು ಎಂದು ಬಯಸಿರುವ ಅವದಿ). ಮೇಲೆ ತಿಳಿಸಿದ ಅವದಿಯನ್ನು ಗಮನದಲ್ಲಿ  ಇಟ್ಟುಕೊಂಡು, ಕಂತನ್ನು ನೀಡುವ ಟರ್ಮ್(ವರ್ಷಗಳಲ್ಲಿ) ಈ ಕೆಳಕಂಡ ರೀತಿಯಲ್ಲಿ ನಿರ್ದಾರಕ್ಕೆ ಒಳಪಡುತ್ತದೆ.
 • ಪಾಲಿಸಿಯ ಟರ್ಮ್ 16 ವರ್ಷ ಆದಲ್ಲಿ, ನೀವು 10 ವರ್ಷಗಳು ಕಂತುಗಳನ್ನು (ಅದರ ಪ್ರಕಾರ ನೀಡಬೇಕಾದ ಹಣವನ್ನು) ನೀಡಬೇಕಾಗುತ್ತದೆ,
 • ಪಾಲಿಸಿಯ ಟರ್ಮ್ 21 ವರ್ಷ ಆದಲ್ಲಿ, ನೀವು 15 ವರ್ಷಗಳು ಕಂತುಗಳನ್ನು (ಅದರ ಪ್ರಕಾರ ನೀಡಬೇಕಾದ ಹಣವನ್ನು) ನೀಡಬೇಕಾಗುತ್ತದೆ,
 • ಪಾಲಿಸಿಯ ಟರ್ಮ್ 25 ವರ್ಷ ಆದಲ್ಲಿ, ನೀವು 16 ವರ್ಷಗಳು ಕಂತುಗಳನ್ನು (ಅದರ ಪ್ರಕಾರ ನೀಡಬೇಕಾದ ಹಣವನ್ನು) ನೀಡಬೇಕಾಗುತ್ತದೆ,

ನೀವು ನೀಡಬೇಕಾದ ವರ್ಷದ ಕಂತು ಎರಡು ಅಂಶಗಳ ಮೇಲೆ ಆದಾರ ಹೊಂದಿದ್ದು ಆದರಲ್ಲಿ ಯಾವ ವಯಸ್ಸಿಗೆ ಪಾಲಿಸಿ ಪಡೆಯುತ್ತಿದ್ದೀರಿ ಎನ್ನುವುದು ಕೂಡ ಒಂದಾಗಿರುತ್ತದೆ.

ಈ ಯೋಜನೆಯು ಕಾರ್ಪೊರೇಷನ್ ನ ಬಂಡವಾಳ ಹೂಡಿಕೆಯಲ್ಲಿ ಬಾಗಿ ಆಗುವುದರಿಂದ, ಪಾಲಿಸಿದಾರರು ಈ ಕೆಳ ಕಂಡವುಗಳಿಗೆ ಅರ್ಹರಾಗುತ್ತಾರೆ. ಇವುಗಳ ಬಗ್ಗೆ ಕಾರ್ಪೊರೇಷನ್ ಯಾವುದೇ ಬರವಸೆಯನ್ನು ಈಗಲೇ ನೀಡುವುದಿಲ್ಲ. ಆದರೆ, ಆದರ ಒಟ್ಟಾರೆ ಮೊತ್ತದ ಬಗ್ಗೆ ತಿಳುವಳಿಕೆ ಬರುವುದು ಎಲ್ ಐ ಸಿ ತನ್ನ ಲೆಕ್ಕಾಚಾರವನ್ನು ಪೂರ್ಣಗೊಳಿಸಿ ಇವುಗಳ ಬಗ್ಗೆ ಘೋಷಣೆ ಮಾಡಿದಾಗ  ಮಾತ್ರ.

 • ಸರಳ ರಿವರ್ಷನರಿ ಬೋನಸ್
 • ಅಂತಿಮ ಹೆಚ್ಚುವರಿ ಬೋನಸ್

ಎಲ್ ಐ ಸಿ ಜೀವನ್ ಲಾಭ್ – ರೈಡೆರ್ಸ್

ಎಲ್ ಐ ಸಿ ಜೀವನ್ ಲಾಭ್ ಯೋಜನೆಯ ಅಡಿಯಲ್ಲಿ, ಈ ಕೆಳ ಕಂಡ ಎರಡು ರೈಡರ್ಸ್ ಗಳು ಲಭ್ಯ ಇರುತ್ತದೆ   

 • ಎಲ್ ಐ ಸಿ ಯ ಆಕಸ್ಮಿಕ ಮರಣ ಹಾಗೂ ಅಂಗವೈಕಲ್ಯ ರೈಡರ್ - ಒಂದು ಪಕ್ಷದಲ್ಲಿ ಪಾಲಿಸಿದಾರನು ಪಾಲಿಸಿಯ ಅವದಿ ಮುಗಿಯುವುದರ ಒಳಗೆ ಆಕಸ್ಮಿಕ ಮರಣ ಹೊಂದಿದಲ್ಲಿ, ಈ ರೈಡರ್ ಪ್ರಕಾರ ಅದಕ್ಕೆ ನೀಡಬೇಕಾದ ಹೆಚ್ಚುವರಿ ಮೊತ್ತವನ್ನು ನಾಮಿನಿಗೆ ನೀಡಲಾಗುವುದು. ಅದೇ ರೀತಿ ಪಾಲಿಸಿದಾರನು, ಯಾವುದೇ ರೀತಿಯ ಅಂಗವೈಕಲ್ಯವನ್ನು ಹೊಂದಿದಲ್ಲಿ, ರೈಡರ್ ಪ್ರಕಾರ ನೀಡಬೇಕಾದ ಮೊತ್ತವನ್ನು ನಾಮಿನಿಗೆ ನೀಡಲಾಗುವುದು. ಆ ಮೊತ್ತವನ್ನು ನಾಮಿನಿಗೆ 10 ವರ್ಷದಲ್ಲಿ 10 ಸಮಾನ ಕಂತಿನಲ್ಲಿ ನೀಡಲಾಗುವುದು. ಈ ರೈಡರ್ ನ್ನು ತೆಗೆದುಕೊಳ್ಳಲು ಬಯಸಿದಲ್ಲಿ, ನೀವು ನೀಡಬೇಕಾದ ಕಂತಿನ ಮೊತ್ತದ ಜೊತೆಗೆ, ಹೆಚ್ಚುವರಿ ಮೊತ್ತವನ್ನು ಸೇರಿಸಿ ನೀಡಬೇಕಾಗುತ್ತದೆ.
 • ಎಲ್ ಐ ಸಿ ಯ ಹೊಸ ಟರ್ಮ್ ಅಷ್ಯೂರೆನ್ಸ್ ರೈಡರ್ - ಇದರ ಪ್ರಕಾರ, ಪಾಲಿಸಿದಾರನು ಮರಣ ಹೊಂದಿದಲ್ಲಿ, ರೈಡರ್ ಬೆನಿಫಿಟ್ ಜಾಸ್ತಿ ಆಗುತ್ತದೆ. ಈ ರೈಡರ್ ಅನ್ನು ನೀವು ಪಾಲಿಸಿ ಮಾಡುವಾಗಲೇ ಆರಿಸಿಕೊಳ್ಳಬಹುದು. ಆದರೆ ಇದರ ಬಾಬ್ತು ಕಂತಿನ ಹಣದ  ಜೊತೆಗೆ ನಮೂದಿಸಿರುವ ಹೆಚ್ಚುವರಿ ಹಣವನ್ನು ನೀಡಬೇಕಾಗುತ್ತದೆ.

ಎಲ್ ಐ ಸಿ ಜೀವನ್ ಲಾಭ್ – ಕಂತುಗಳ ಬಗ್ಗೆ ವಿವರಣೆ

ಒಬ್ಬ ನಾನ್ ಟೊಬ್ಯಾಕೋ(ಹೊಗೆಸೊಪ್ಪು ಸೇವನೆ ಮಾಡದ)  ಹಾಗೂ ಆರೋಗ್ಯವಂತ ಪುರುಷನು ನೀಡಬೇಕಾದ ಕಂತುಗಳ (ತೆರಿಗೆ ಸೇರಿಸಿ) ವಿವರಗಳು, ಪಾಲಿಸಿದಾರಣ ವಯಸ್ಸು,  ಸಮ್ ಅಶ್ಶುರ್ಡ್ ಹಾಗೂ ಪಾಲಿಸಿಯ ಅವದಿ ಇವುಗಳ ಆದಾರದ ಬೇರೆ ಬೇರೆ ಕಾಂಬಿನೇಷನ್ ಪ್ರಕಾರ ಈ ಕೆಳಕಂಡ ಟೇಬಲ್ ತಯಾರಿಸಲಾಗಿದೆ. ಈ ಟೇಬಲ್ ತಯಾರಿಸುವಾಗ  ಈಗ ಚಾಲ್ತಿಯಲ್ಲಿರುವ ಪ್ರಕಾರ ತೆರಿಗೆ ದರವನ್ನು 4.50 % ಎಂದು ಪರಿಗಣಿಸಲಾಗಿರುತ್ತದೆ.

ಸಮ್ ಅಶ್ಶುರ್ಡ್ -  ರೂ 2,00,000

ಪಾಲಿಸಿಯ ಅವದಿ (ಟರ್ಮ್) – 16 ವರ್ಷಗಳು, 21 ವರ್ಷಗಳು, 25 ವರ್ಷಗಳು

ಕಂತುಗಳನ್ನು ನೀಡುವ ಅವದಿ (ಟರ್ಮ್) – 10 ವರ್ಷಗಳು, 15 ವರ್ಷಗಳು, 16 ವರ್ಷಗಳು

ಪಾಲಿಸಿದಾರನ ವಯಸ್ಸು – 20, 30 40

ವಯಸ್ಸು

20 ವರ್ಷ

30 ವರ್ಷ

40 ವರ್ಷ

ವರ್ಷದ ಕಂತು (ಮೊತ್ತ) – 16 ವರ್ಷದ ಪಾಲಿಸಿಗೆ

ರೂ 17450       

ರೂ 17512

ರೂ 17770

ವರ್ಷದ ಕಂತು (ಮೊತ್ತ) – 21 ವರ್ಷದ ಪಾಲಿಸಿಗೆ

ರೂ 11163      

ರೂ 111255

ರೂ 11634

ವರ್ಷದ ಕಂತು (ಮೊತ್ತ) – 25 ವರ್ಷದ ಪಾಲಿಸಿಗೆ

ರೂ 9411     

ರೂ 9545

ರೂ 10015

ಎಲ್ ಐ ಸಿ ಜೀವನ್ ಲಾಭ್ – ಸರಂಡರ್ ಮೊತ್ತ

ಎಲ್ ಐ ಸಿ ಜೀವನ್ ಲಾಭ್ ಯೋಜನೆಯ ಅಡಿಯಲ್ಲಿ ನೀವು ಅವದಿ ಮುಗಿಯುವುದರ ಒಳಗೆ, ಪಾಲಿಸಿಯನ್ನು ಸರಂಡರ್ ಮಾಡುವ ಅವಕಾಶ ಇರುತ್ತದೆ. ಆದರೆ 3 ವರ್ಷಗಳು ನೀಡಬೇಕಾಗಿರುವ ಕಂತಿನ ಹಣವನ್ನು ಸತತವಾಗಿ ಕಟ್ಟಿರಬೇಕಾಗುತ್ತದೆ. ಸರಂಡರ್ ಮೊತ್ತವು ಒಟ್ಟಾರೆ ನೀಡಿರುವ ಕಂತುಗಳ ಮೊತ್ತಕ್ಕೆ ಸರಿಸಮನಾಗಿದ್ದು (ಯಾವುದೇ ತೆರಿಗೆ ಆಗಲಿ, ಅಂಡರ್ ರೈಟಿಂಗ್ ಪ್ರಕಾರ ಹೆಚ್ಚುವರಿ ಹಣ ನೀಡಬೇಕಾದಲ್ಲಿ ಅಥವಾ  ರೈಡರ್ ಕಂತುಗಳು ಬಾಕಿ ಇದ್ದಲ್ಲಿ, ಅವುಗಳನ್ನು ಹೊರತುಪಡಿಸಿ) ಅದಕ್ಕೆ ಗ್ಯಾರಂಟಿಡ್ ಸರಂಡರ್ ಫ್ಯಾಕ್ಟರನಿಂದ ಗುಣಿಸಿ ಅದರ ರೀತ್ಯ ಬಂದಿರುವ ಒಟ್ಟು ಮೊತ್ತವನ್ನು ನೀಡಲಾಗುತ್ತದೆ.

ವಿವಿದ ಪಾಲಿಸಿ ಅವದಿ (ಟರ್ಮ್) ಗಳಿಗೆ ಅನ್ವಯಿಸುವ ಗ್ಯಾರಂಟಿಡ್ ಸರಂಡರ್ ಫ್ಯಾಕ್ಟರ್ ಈ ಕೆಳ ಕಂಡಂತಿದೆ

ಗ್ಯಾರಂಟಿಡ್ ಸರಂಡರ್ ವ್ಯಾಲ್ಯು ಫ್ಯಾಕ್ಟರ್

ಪಾಲಿಸಿ

ಕಂತುಗಳನ್ನು ನೀಡುವ ಅವದಿ

 

16 ವರ್ಷಗಳು

21 ವರ್ಷಗಳು

25 ವರ್ಷಗಳು

3 ನೆಯ ವರ್ಷದಲ್ಲಿ

30%

30%

30%

4 ನೆಯ ವರ್ಷದಲ್ಲಿ

50%

50%

50%

5 ನೆಯ ವರ್ಷದಲ್ಲಿ

50%

50%

50%

6 ನೆಯ ವರ್ಷದಲ್ಲಿ

50%

50%

50%

7 ನೆಯ ವರ್ಷದಲ್ಲಿ

50%

50%

50%

8 ನೆಯ ವರ್ಷದಲ್ಲಿ

53.75%

52.30%

51.80%

9 ನೆಯ ವರ್ಷದಲ್ಲಿ

57,50%

54.60%

53.50%

10 ನೆಯ ವರ್ಷದಲ್ಲಿ

61.25%

56.90%

55.30%

11 ನೆಯ ವರ್ಷದಲ್ಲಿ

66.00%

59.20%

57.10%

12 ನೆಯ ವರ್ಷದಲ್ಲಿ

68.75%

61.50%

58.80%

13 ನೆಯ ವರ್ಷದಲ್ಲಿ

72.50%

63.80%

60.60%

14 ನೆಯ ವರ್ಷದಲ್ಲಿ

76.25%

66.20%

62.40%

15 ನೆಯ ವರ್ಷದಲ್ಲಿ

80%

68.50%

64.10%

16 ನೆಯ ವರ್ಷದಲ್ಲಿ

80%

70.80%

65.90%

17 ನೆಯ ವರ್ಷದಲ್ಲಿ

 

73.10%

67.60%

18 ನೆಯ ವರ್ಷದಲ್ಲಿ

 

75.40%

69.40%

19 ನೆಯ ವರ್ಷದಲ್ಲಿ

 

77.70%

71.20%

20 ನೆಯ ವರ್ಷದಲ್ಲಿ

 

80%

72.90%

21 ನೆಯ ವರ್ಷದಲ್ಲಿ

 

80%

74.70%

22 ನೆಯ ವರ್ಷದಲ್ಲಿ

   

76.50%

23 ನೆಯ ವರ್ಷದಲ್ಲಿ

   

78.20%

24 ನೆಯ ವರ್ಷದಲ್ಲಿ

   

80%

25 ನೆಯ ವರ್ಷದಲ್ಲಿ

   

80%

ಎಲ್ ಐ ಸಿ ಜೀವನ್ ಲಾಭ್ – ರಿಯಾಯತಿ

ಎಲ್ ಐ ಸಿ ಯು ಪಾಲಿಸಿದಾರರಿಗೆ ಬಹು ತರಹದ ಪ್ರತಿಫಲವನ್ನು ನೀಡುವಲ್ಲಿ ಜನಪ್ರಿಯತೆ ಹೊಂದಿದೆ. ಈ ಯೋಜನೆಯಲ್ಲಿ ಕೂಡ ಈ ಕೆಳಕಂಡ ರಿಯಾಯತಿಗಳನ್ನು ನೀಡುತ್ತದೆ.

ಕಂತುಗಳ ಹಣದ ಪಾವತಿ ಮೇಲೆ ಸಿಗುವ ರಿಯಾಯತಿ  

ಪಾಲಿಸಿದಾರರು ತಾವು ನೀಡುವ ಕಂತಿನ ಹಣದ ಮೇಲೆ ಈ ಕೆಳಕಂಡ ಎರಡು ರೀತಿಯಲ್ಲಿ ರಿಯಾಯತಿ ಪಡೆಯಲು ಅರ್ಹರಾಗಿರುತ್ತಾರೆ.

 • ಒಂದು ವರ್ಷದ ಕಂತಿನ ಮೇಲೆ ಪಾಲಿಸಿದಾರರಿಗೆ 2 % ರಿಯಾಯತಿ ದೊರೆಯುತ್ತದೆ
 • ಅರ್ದ ವರ್ಷದ ಕಂತಿನ ಮೇಲೆ ಪಾಲಿಸಿದಾರರಿಗೆ 1 % ರಿಯಾಯತಿ ದೊರೆಯುತ್ತದೆ.

ಸಮ್ ಅಶ್ಶುರ್ಡ್ ಮೇಲೆ ಸಿಗುವ ರಿಯಾಯತಿ

ಈ ಪಾಲಿಸಿಯ ಸಮ್ ಅಶ್ಶುರ್ಡ್ ಮೇಲೆ ಈ ಕೆಳಕಂಡ ರೀತಿಯ ರಿಯಾಯತಿ ನೀಡಲಾಗುತ್ತದೆ.

 • ಪಾಲಿಸಿಯ ಸಮ್ ಅಶ್ಶುರ್ಡ್ ಮೊತ್ತವು ರೂ 50000 ದಿಂದ 999000 ವರೆಗೆ ಇದ್ದಲ್ಲಿ ಪ್ರತಿ ರೂ 10000ಕ್ಕೆ 1.25% ರಿಯಾಯತಿ ದೊರೆಯುತ್ತದೆ
 • ಪಾಲಿಸಿಯ ಸಮ್ ಅಶ್ಶುರ್ಡ್ ಮೊತ್ತವು ರೂ 999000 ದಿಂದ 1499000 ವರೆಗೆ ಇದ್ದಲ್ಲಿ ಪ್ರತಿ ರೂ 10000ಕ್ಕೆ 1.50% ರಿಯಾಯತಿ ದೊರೆಯುತ್ತದೆ
 • ಪಾಲಿಸಿಯ ಸಮ್ ಅಶ್ಶುರ್ಡ್ ಮೊತ್ತವು ರೂ 1500000 ಮೇಲ್ಪಟ್ಟಲ್ಲಿ ಪ್ರತಿ ರೂ 10000ಕ್ಕೆ 1.75% ರಿಯಾಯತಿ ದೊರೆಯುತ್ತದೆ

ಆದಾಯ ತೆರಿಗೆ ಬೇನೆಫಿಟ್ಸ್

ಎಲ್ ಐ ಸಿ ಯ ಇತರೆ ಜೀವ ವಿಮಾ ಯೋಜನೆಗಳಿಗೆ ದೊರಕುವ ಆದಾಯ ತೆರಿಗೆ ವಿನಾಯತಿಯು ಈ ಯೋಜನೆಗೆ ಕೂಡ ದೊರಕುತ್ತದೆ. ಹೀಗೆ ದೊರಕುವ ವಿನಾಯತಿಯು ನೀವು ನಿಮ್ಮ ಉಳಿತಾಯವನ್ನು ಹೆಚ್ಚಿಸಿಕೊಳ್ಳಲು ಹಾಗೂ ತೆರಿಗೆ ಮೊತ್ತವನ್ನು ಕಡಿಮೆಗೊಳಿಸುವಲ್ಲಿ ಸಹಾಯ ಮಾಡುತ್ತದೆ.

ಫ್ರೀ-ಲುಕ್ ಪೀರಿಯಡ್

ಎಲ್ಲಾ ಜೀವ ವಿಮಾ ಯೋಜನೆಗಳು ಫ್ರೀ-ಲುಕ್  ಪೀರಿಯಡ್ ಹೊಂದಿರುತ್ತವೆ. ಎಲ್ ಐ ಸಿ ಜೀವನ್ ಲಾಭ್ ಯೋಜನೆಯು  ಕೂಡ ಫ್ರೀ-ಲುಕ್  ಪೀರಿಯಡ್ ಹೊಂದಿದ್ದು ಅದು 15 ದಿವಸಗಳಾಗಿರುತ್ತದೆ. ಈ 15 ದಿನಗಳಲ್ಲಿ ಪಾಲಿಸಿದಾರರು ಅವರಿಗೆ ಒದಗಿಸಿರುವ ಜೀವ ವಿಮಾ ದಾಖಲೆಯನ್ನು ಕೂಲಂಕುಶವಾಗಿ ಓದಿ ಮತ್ತು ಪರಿಶೀಲಿಸಿ, ಅದರಲ್ಲಿ ಉಂಟಾಗಬಹುದಾದ ಅನುಮಾನಗಳನ್ನು ಪರಿಹರಿಸಿಕೊಳ್ಳಲು ನೀಡುವ ಅವದಿಯಾಗಿರುತ್ತದೆ.

ಪಾಲಿಸಿದಾರರು ಅವರಿಗೆ ಒದಗಿಸಿರುವ ಪಾಲಿಸಿ ಕರಾರಿನಲ್ಲಿ ನಮೂದಿಸಿರುವ ಯಾವುದೇ ಕಂಡಿಷನ್ ಬಗ್ಗೆ ಒಮ್ಮತ ಇಲ್ಲದಿದ್ದ ಪಕ್ಷದಲ್ಲಿ ಸದರಿ ಪಾಲಿಸಿಯನ್ನು ಈ ಫ್ರೀ-ಲುಕ್  ಪೀರಿಯಡ್ ಒಳಗೆ ಹಿಂದಿರುಗಿಸಬಹುದು

ಗ್ರೇಸ್ ಪೀರಿಯಡ್

ಇತರೆ  ಎಲ್ ಐ ಸಿ ಯೋಜನೆಗಳಲ್ಲಿ ಇರುವಂತೆ ಎಲ್ ಐ ಸಿ ಜೀವನ್ ಲಾಭ್ ಯೋಜನೆಯಲ್ಲಿಯೂ ಕೂಡ ಪಾಲಿಸಿದಾರನಿಗೆ ಗ್ರೇಸ್ ಪೀರಿಯಡ್ ಲಭ್ಯವಿರುತ್ತದೆ. ವರ್ಷಕ್ಕೊಮ್ಮೆ ಕಟ್ಟುವ ಕಂತಿಗೆ, ಅರ್ದ ವರ್ಷಕ್ಕೊಮ್ಮೆ ಕಟ್ಟುವ ಕಂತಿಗೆ ಹಾಗೂ ಮೂರು ತಿಂಗಳಿಗೊಮ್ಮೆ ಕಟ್ಟುವ ಕಂತಿಗೆ 30 ದಿವಸಗಳ ಗ್ರೇಸ್ ಪೀರಿಯಡ್ ದೊರೆಯುತ್ತದೆ. ತಿಂಗಳಿಗೊಮ್ಮೆ ನೀಡುವ ಕಂತಿಗೆ, 15 ದಿವಸ ಗ್ರೇಸ್ ಪೀರಿಯಡ್ ದೊರೆಯುತ್ತದೆ.

ಎಲ್ ಐ ಸಿ ಜೀವನ್ ಲಾಭ್ ಯೋಜನೆಯಲ್ಲಿ ಸೇರ್ಪಡೆ ಆಗದಿರುವ ವಿಷಯ

ಪಾಲಿಸಿದಾರನು ಪಾಲಿಸಿ ಮಾಡಿದ ಒಂದು ವರ್ಷದ ಒಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ, ನಾಮಿನಿಗೆ ಯಾವುದೇ ರೀತಿಯ ಸಮ್ ಅಶ್ಶುರ್ಡ್ ಮೊತ್ತವನ್ನು ನೀಡುವುದಿಲ್ಲ. ಆದರೆ, ಪಾಲಿಸಿದಾರನು ಒಂದು ವರ್ಷದ ನಂತರ ಆತ್ಮಹತ್ಯೆ ಮಾಡಿಕೊಂಡಲ್ಲಿ, ಅದುವರೆವಿಗೂ ಕಟ್ಟಿರುವ ಕಂತುಗಳ ಒಟ್ಟಾರೆ ಮೊತ್ತದ 80% ಮೊತ್ತವನ್ನು(ಬಡ್ಡಿ ರಹಿತ) ನಾಮಿನಿಗೆ ನೀಡಲಾಗುವುದು.