ಎಲ್ ಐ ಸಿ ಜೀವನ್ ಲಕ್ಷ್ಯ ಪ್ಲಾನ್
 • ಅತ್ಯುತ್ತಮ ಯೋಜನೆಗಳು
 • ಸುಲಭ ಹೋಲಿಕೆ
 • ತಕ್ಷಣದ ಖರೀದಿ
PX step

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಹುಟ್ಟಿದ ದಿನಾಂಕ (ದೊಡ್ಡ ಸದಸ್ಯ)
ಆದಾಯ
| ಲಿಂಗ

1

2

ಫೋನ್ ಸಂಖ್ಯೆ
ಹೆಸರು
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ನಿಮ್ಮ ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುವವರು ನಿಮ್ಮ ಪತ್ನಿ ಮತ್ತು ಮಕ್ಕಳು. ನೀವು ಮದುವೆ ಆದ ದಿನದಿಂದ ಹಾಗೂ ಮುಂದೆ ನಿಮ್ಮ ಜೀವನದಲ್ಲಿ ನಿಮ್ಮ ಏಳು ಬೀಳುಗಳಿಗೆ ಹೆಗಲು ಕೊಟ್ಟು ನಿಲ್ಲುವವರು ನಿಮ್ಮ ಪತ್ನಿ. ಹಾಗೆಯೇ ಮಕ್ಕಳಾದ ಮೇಲೆ, ಅವರ ಯೋಗಕ್ಷೇಮ, ಅವರ ಬೆಳವಣಿಗೆ ಮತ್ತು ಓದು ಮುಂತಾದ ಕ್ರಿಯೆಗಳಿಗೆ ನೀವು ಗಮನ ನೀಡಬೇಕಾಗುತ್ತದೆ. ಹೀಗಿರುವಾಗ, ನಿಮ್ಮ ಮೊದಲ ಆದ್ಯತೆ, ನಿಮ್ಮ ಪತ್ನಿ ಮತ್ತು ಮಕ್ಕಳ ಮುಂದಿನ ಜೀವನವನ್ನು ಆದಷ್ಟು ಮಟ್ಟಿಗೆ ಆರ್ಥಿಕ ಸಂಕಷ್ಟದಿಂದ ಪಾರು ಮಾಡುವುದಾಗಿರುತ್ತದೆ. ಇವೆಲ್ಲವುಗಳನ್ನು ನೀವು ಮನದಟ್ಟು ಮಾಡಿಕೊಂಡಿದ್ದಲ್ಲಿ, ನಿಮಗೆ ಎಲ್ ಐ ಸಿ ಯು ನೀಡುತ್ತಿರುವ ಜೀವನ್ ಲಕ್ಷ್ಯ ಯೋಜನೆಯು ಒಂದು ಅತ್ಯಂತ ಸೂಕ್ತವಾದ ಪ್ಲಾನ್. ಈ ಪ್ಲಾನ್ ಅಡಿಯಲ್ಲಿ, ಪಾಲಿಸಿದಾರನಿಗೆ ವರ್ಷಕ್ಕೊಮ್ಮೆ ನಿಗದಿತ ಮೊತ್ತವು ಬರುತ್ತಲಿದ್ದು ಅದರಿಂದ, ಕುಟುಂಬದ ಬೇಕುಗಳನ್ನು ಪೂರೈಸುವಲ್ಲಿ ಹಾಗೂ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಸಹಾಯ ಮಾಡುತ್ತದೆ.

ಎಲ್ ಐ ಸಿ ಜೀವನ್ ಲಕ್ಷ್ಯ ಯೋಜನೆಯು ನಿಮ್ಮ ಜೀವನದಲ್ಲಿ ಕೇವಲ ರಕ್ಷಣೆ ಮಾತ್ರವಲ್ಲದೇ ಉಳಿತಾಯವನ್ನು ಕೂಡ ನೀಡುವ ಒಂದು ಪ್ಲಾನ್ ಆಗಿರುತ್ತದೆ. ಈ ಪ್ಲಾನ್ ಆವದಿಯಲ್ಲಿ, ರಿಸ್ಕ್ ಕವರೆಜ್ ಕೂಡ ಇದ್ದು, ಅದರ ಜೊತೆಗೆ ನೀವು ನೀಡುವ ಹಣವು ನಿಮಗೆ ಸಾಕಷ್ಟು ಬೆನಿಫಿಟ್ ಅನ್ನು ಕೂಡ ನೀಡುತ್ತದೆ. ಈ ಆವದಿಯಲ್ಲಿ, ಅಕಸ್ಮಾತ್ ಪಾಲಿಸಿದಾರನು ಮರಣ ಹೊಂದಿದಲ್ಲಿ ಕೂಡ, ಮೇಲೆ ಕಾಣಿಸಿದ ವರ್ಷಕ್ಕೊಮ್ಮೆ ನೀಡುವ ನಿಗದಿತ ಮೊತ್ತವು ಅವನ ಕುಟುಂಬಕ್ಕೆ ಆವದಿ ಮುಗಿಯುವವರೆಗೂ ಸಲ್ಲುತ್ತಲಿದ್ದು, ಆವದಿ ಮುಗಿದ ನಂತರ ಒಂದು ಖಚಿತ ಮೊತ್ತವನ್ನು ಎಲ್ ಐ ಸಿ ಯು ನೀಡುತ್ತದೆ.

ಎಲ್ ಐ ಸಿ ಜೀವನ್ ಲಕ್ಷ್ಯ ಪ್ಲಾನ್  - ಅರ್ಹತೆ ಮತ್ತು ಇತರೆ ನಿಬಂದನೆಗಳು

ಈ ಪ್ಲಾನ್ ಪಡೆಯಲು ಕೆಲವು ಕನಿಷ್ಠ ಅರ್ಹತೆಗಳು ಹಾಗೂ ನಿಬಂದನೆಗಳು ಇರುತ್ತವೆ. ಅದರ ವಿವರವನ್ನು ಈ ಕೆಳಗೆ ನೀಡಲಾಗಿದೆ.

ಕನಿಷ್ಠ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ

ರೂ 100000

ಗರಿಷ್ಠ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ (ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತವು ರೂ 10000 ದ ಮಲ್ಟಿಪಲ್ಸ್ ನಲ್ಲಿ ಇರಬೇಕು)


ಯಾವುದೇ ಮಿತಿ ಇಲ್ಲ

ಪಾಲಿಸಿಯ ಅವದಿ (ಟರ್ಮ್)

13 ವರ್ಷಗಳಿಂದ 25 ವರ್ಷಗಳವರೆಗೆ

ಪಾಲಿಸಿಯ ಪ್ರೀಮಿಯಂ ನೀಡಬೇಕಾದ ಅವದಿ

(ಪಾಲಿಸಿಯ ಅವದಿ – 3) ವರ್ಷಗಳು.  ಅಂದರೆ ಪಾಲಿಸಿಯ ಅವದಿಯು 15 ವರ್ಷಗಳಾಗಿದ್ದಲ್ಲಿ, ಪಾಲಿಸಿಯ ಪ್ರೀಮಿಯಂ ನೀಡಬೇಕಾದ ಅವದಿಯು (15-3) = 12 ವರ್ಷಗಳು ಆಗುತ್ತದೆ

ಪಾಲಿಸಿಯನ್ನು ಪಡೆಯಲು ಕನಿಷ್ಠ ವಯಸ್ಸು

18 ವರ್ಷಗಳು (ಹಿಂದಿನ ಹುಟ್ಟು ಹಬ್ಬಕ್ಕೆ)

ಪಾಲಿಸಿಯನ್ನು ಪಡೆಯಲು ಗರಿಷ್ಠ ವಯಸ್ಸು

50 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ)

ಪಾಲಿಸಿಯ ಮೆಚೂರಿಟೀ ಆಗುವಾಗ ಪಾಲಿಸಿದಾರನ ವಯಸ್ಸು


65 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ)

ಎಲ್ ಐ ಸಿ ಜೀವನ್ ಲಕ್ಷ್ಯ ಪ್ಲಾನ್  - ಪ್ರೀಮಿಯಂ ನೀಡುವಿಕೆ

ಪ್ರೀಮಿಯಂ ನೀಡುವ ರೀತಿ

ಈ ಪಾಲಿಸಿಯ ಸಲುವಾಗಿ ನೀಡುವ ಪ್ರೀಮಿಯಂ ಗಳನ್ನು ವರ್ಷಕ್ಕೊಮ್ಮೆ ಅಥವಾ ಆರ್ದ ವರ್ಷಕ್ಕೊಮ್ಮೆ ಅಥವಾ 3 ತಿಂಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆ (ಇದನ್ನು ECS ಅಥವಾ ಸಂಬಳದ ಕಡಿತದ ಮೂಲಕ ಸಲ್ಲಿಸಬಹುದು) ನೀಡುವ ಅವಕಾಶ ಇರುತ್ತದೆ.

ಗ್ರೇಸ್ ಪೀರಿಯಡ್

ವರ್ಷಕ್ಕೊಮ್ಮೆ ನೀಡುವ, ಆರ್ದ ವರ್ಷಕ್ಕೊಮ್ಮೆ ನೀಡುವ ಹಾಗೂ 3 ತಿಂಗಳಿಗೊಮ್ಮೆ ನೀಡುವ ಪ್ರೀಮಿಯಂ ಗಳಿಗೆ 1 ತಿಂಗಳು ಅಥವಾ ಕನಿಷ್ಠ 30 ದಿವಸಗಳ ಗ್ರೇಸ್ ಪೀರಿಯಡ್ ಲಭ್ಯವಿರುತ್ತದೆ. ಹಾಗೆಯೇ ತಿಂಗಳಿಗೊಮ್ಮೆ ಕಟ್ಟುವ ಪ್ರೀಮಿಯಂ  ಗೆ 15 ದಿವಸಗಳ ಗ್ರೇಸ್ ಪೀರಿಯಡ್ ಲಭ್ಯ ಇರುತ್ತದೆ.

ಪ್ರೀಮಿಯಂ ರೇಟ್ಸ್ ಗಳ ಮಾದರಿ

ಕೆಳ ಕಂಡ ಟೇಬಲ್ ನಲ್ಲಿ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ ಪ್ರತಿ ರೂ 1000 ಕ್ಕೆ ಅನುಗುಣವಾಗಿ ವಿವಿದ ಆವದಿಗಳಿಗೆ (ಟರ್ಮ್)  ಪ್ರೀಮಿಯಂ ಗಳನ್ನು (ಸರ್ವಿಸ್ ಟಾಕ್ಸ್ ಹೊರತು ಪಡಿಸಿ) ನೀಡಲಾಗಿದೆ.                       

ಪ್ರೀಮಿಯಂ ನೀಡುವ ಅವದಿ (PPT)

ಪಾಲಿಸಿದಾರನ ವಯಸ್ಸು

13 ವರ್ಷದ ಆವದಿ

15 ವರ್ಷದ ಅವದಿ

20 ವರ್ಷದ ಅವದಿ

25 ವರ್ಷದ ಅವದಿ

 

PPT = 10 ವರ್ಷಗಳು

PPT = 12 ವರ್ಷಗಳು

PPT = 17 ವರ್ಷಗಳು

PPT = 22 ವರ್ಷಗಳು

20 ವರ್ಷಗಳು

100.75

82.80

57.60

43.40

30 ವರ್ಷಗಳು

101.20

83.30

58.35

44.55

40 ವರ್ಷಗಳು

103.25

85.70

61.70

48.95

45 ವರ್ಷಗಳು

109.95

93.95

-

-

ಪ್ರೀಮಿಯಂ ಗಳ ಮೇಲೆ  ನೀಡುವ ರಿಯಾಯತಿ

ಪಾಲಿಸಿಯ ಮೇಲೆ ನೀಡುವ ಪ್ರೀಮಿಯಂ ಗೆ ಅನ್ವಯ ಆಗುವ ರಿಯಾಯತಿ ಈ ಕೆಳ ಕಂಡಂತಿದೆ.

ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ – ಮೇಲೆ ಕಾಣಿಸಿರುವ ಮೊತ್ತದ ಮೇಲೆ 2 % ರಿಯಾಯತಿ

ಆರ್ದ ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ - ಮೇಲೆ ಕಾಣಿಸಿರುವ ಮೊತ್ತದ ಮೇಲೆ 1 % ರಿಯಾಯತಿ

3 ತಿಂಗಳಿಗೊಮ್ಮೆ ಹಾಗೂ ತಿಂಗಳಿಗೊಮ್ಮೆ ನೀಡುವ ಪ್ರೀಮಿಯಂ – ಯಾವುದೇ ರಿಯಾಯತಿ ಇರುವುದಿಲ್ಲ

ಹೆಚ್ಚಿನ ಸಮ್ ಅಶ್ಶುರ್ಡ್ ಮೊತ್ತಕ್ಕೆ ನೀಡುವ ರಿಯಾಯತಿ

ಹೆಚ್ಚಿನ ಸಮ್ ಅಶ್ಶುರ್ಡ್ ಮೊತ್ತಕ್ಕೆ ದೊರೆಯುವ ರಿಯಾಯತಿ ಈ ಕೆಳ ಕಂಡಂತಿದೆ

ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ

ಅದರ ಮೇಲಿನ ರಿಯಾಯತಿ

ರೂ 100000 ದಿಂದ ರೂ 190000

ಯಾವುದೇ ರಿಯಾಯತಿ ಇಲ್ಲ

ರೂ 200000 ದಿಂದ ರೂ 490000

ಬೇಸಿಕ್ ಸಮ್ ಅಶ್ಶುರ್ಡ್ ಮೇಲೆ 2 % ರಿಯಾಯಯತಿ ಇರುತ್ತದೆ

ರೂ 500000 ದ ಮೇಲ್ಪಟ್ಟು

ಬೇಸಿಕ್ ಸಮ್ ಅಶ್ಶುರ್ಡ್ ಮೇಲೆ 3 % ರಿಯಾಯಯತಿ ಇರುತ್ತದೆ

ಎಲ್ ಐ ಸಿ ಜೀವನ್ ಲಕ್ಷ್ಯ ಪ್ಲಾನ್  - ಬೆನಿಫಿಟ್ಸ್ ಗಳು

ಡೆತ್ ಬೆನಿಫಿಟ್

ಪಾಲಿಸಿದಾರನು ಪಾಲಿಸಿಯ ಅವದಿ ಮುಗಿಯುವ ಮೊದಲೇ ಮರಣ ಹೊಂದಿದಲ್ಲಿ, ಆತನು ನಮೂದಿಸಿರುವ ನಾಮಿನಿಗೆ ಡೆತ್ ಬೆನಿಫಿಟ್ ನೀಡಲಾಗುವುದು. ಆದರೆ, ಪಾಲಿಸಿಯು ಅಸ್ತಿತ್ವದಲ್ಲಿರಬೇಕು. ಡೆತ್ ಬೆನಿಫಿಟ್ ಅನ್ನು “ಸಮ್ ಅಶ್ಶುರ್ಡ್ ಆನ್ ಡೆತ್” ಎಂದು ಕರೆಯಲಾಗುತ್ತದೆ. ಇಂತಹ ಸಂಧರ್ಭದಲ್ಲಿ, ನಾಮಿನಿಗೆ ಸಮ್ ಅಶ್ಶುರ್ಡ್ ಆನ್ ಡೆತ್ ಮೊತ್ತದ ಜೊತೆಗೆ ವೆಸ್ಟೆಡ್ ಸಿಂಪಲ್ ರಿವರ್ಷನರಿ ಬೋನಸ್ ಮತ್ತು ಅಂತಿಮ ಅಡಿಷನ್ ಬೋನಸ್ (ಇದ್ದ ಪಕ್ಷದಲ್ಲಿ) ಅನ್ನು ಸೇರಿಸಿ ನೀಡಲಾಗುವುದು.

“ಸಮ್ ಅಶ್ಶುರ್ಡ್ ಆನ್ ಡೆತ್” ಮೊತ್ತವೆಂದರೆ ಅದು ಕೆಳ ಕಂಡ ಎರಡರ ಮೊತ್ತವನ್ನು ಒಟ್ಟು ಮಾಡಿದಾಗ ಬರುವ ಮೊತ್ತ.

 • ವಾರ್ಷಿಕ ಆದಾಯ ಬೆನಿಫಿಟ್ ಮೊತ್ತವಾಗಿ ಬೇಸಿಕ್ ಸಮ್ ಅಶ್ಶುರ್ಡ್ ನ 10 % ಮೊತ್ತ. ಇದನ್ನು, ಪಾಲಿಸಿಯ ಅನಿವರ್ಸರಿ ಅಥವಾ ಪಾಲಿಸಿದಾರನ ಮರಣವಾದ ಬಳಿಕ ಪಾಲಿಸಿಯ ಮೆಚೂರಿಟೀ ಆಗುವ ಮುಂಚಿನವರೆಗೂ ನೀಡಲಾಗುವುದು.
 • ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತದ 110 % ಮೊತ್ತವನ್ನು ಖಚಿತ ಒಟ್ಟಾರೆ ಮೊತ್ತವಾಗಿ ನೀಡಲಾಗುವುದು.

ಇದರ ಜೊತೆಗೆ, ವೆಸ್ಟೆಡ್ ಸಿಂಪಲ್ ರಿವರ್ಷನರಿ ಬೋನಸ್ (ಇದ್ದಲ್ಲಿ), ಅದನ್ನು ಕೂಡ ಸೇರಿಸಿ ನೀಡಲಾಗುವುದು.

ಮೇಲೆ ಲೆಕ್ಕ ಹಾಕಿರುವ ಡೆತ್ ಬೆನಿಫಿಟ್ ಮೊತ್ತವು ಪಾಲಿಸಿದಾರನು ಅಲ್ಲಿಯವರೆಗೂ ನೀಡಿರುವ ಪ್ರೀಮಿಯಂ ಗಳ ಒಟ್ಟು ಮೊತ್ತಕ್ಕಿಂತ 105 % ಗಿಂತ ಕಮ್ಮಿ ಇರುವುದಿಲ್ಲ.

ಮೇಲೆ ಕಾಣಿಸಿರುವ ಪ್ರೀಮಿಯಂ ಗಳಲ್ಲಿ ಯಾವುದೇ ತೆರಿಗೆ ಅಥವಾ ಎಕ್ಸ್ಟ್ರಾ ಪ್ರೀಮಿಯಂ ಹಾಗೂ ರೈಡರ್ಸ್ ಪ್ರೀಮಿಯಂ ಗಳು ಸೇರಿರುವುದಿಲ್ಲ.

ಮೆಚೂರಿಟೀ ಬೆನಿಫಿಟ್

ಪಾಲಿಸಿದಾರನು ಪಾಲಿಸಿಯ ಅವದಿಯನ್ನು ಮುಗಿಸಿದಲ್ಲಿ, ಆತನಿಗೆ “ಸಮ್ ಅಶ್ಶುರ್ಡ್ ಆನ್ ಮೆಚೂರಿಟೀ” ಎಂದು ಒಂದು ಖಚಿತ ಮೊತ್ತವನ್ನು ನೀಡಲಾಗುವುದು. ಈ ಸಮ್ ಅಶ್ಶುರ್ಡ್ ಆನ್ ಮೆಚೂರಿಟೀ ಮೊತ್ತವು ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ ಹಾಗೂ ವೆಸ್ಟೆಡ್ ಸಿಂಪಲ್ ರಿವರ್ಷನರಿ ಬೋನಸ್ (ಕಾರ್ಪೊರೇಷನ್ನಿನ ಹಿಂದಿನ ವರ್ಷಗಳ ಪರ್ಫಾರ್ಮನ್ಸ್ ಮೇಲೆ ಆಧಾರ ಹೊಂದಿದ್ದು ಅದರ ಮೊತ್ತವನ್ನು ಕಾರ್ಪೊರೇಷನ್ ನಿಗದಿ ಪಡಿಸುತ್ತದೆ) ಮತ್ತು ಅಂತಿಮ ಅಡಿಷನಲ್ ಬೋನಸ್ ಇವೆಲ್ಲವನ್ನೂ ಸೇರಿಸಿ ನೀಡಲಾಗುವುದು. ಆದರೆ, ಪಾಲಿಸಿಯ ಬಾಬ್ತು  ನೀಡಬೇಕಾದ ಎಲ್ಲ ಪ್ರೀಮಿಯಂ ಗಳನ್ನು ಪಾವತಿಸಿರಬೇಕಾಗುತ್ತದೆ.

ಲಾಭದಲ್ಲಿ ಬಾಗಿ ಆಗುವಿಕೆ

ಈ ಪಾಲಿಸಿಯ ನಿಯಮದ ಪ್ರಕಾರ ಪಾಲಿಸಿಯು ಕಾರ್ಪೊರೇಷನ್ ನ ಬಂಡವಾಳ ಹೂಡಿಕೆ ಹಾಗೂ ಅದರಿಂದ ಉತ್ಪನ್ನ ಆಗುವ ಲಾಭದಲ್ಲಿ ಬಾಗಿ ಆಗಲು ಅರ್ಹತೆ ಹೊಂದಿರುತ್ತದೆ.

ಆದ್ದರಿಂದ, ಈ ಪಾಲಿಸಿಯು ಕಾರ್ಪೊರೇಷನ್ ನೀಡುವ ಸಿಂಪಲ್ ರಿವರ್ಶನರಿ ಬೋನಸ್ ಗಳಿಗೂ ಅರ್ಹತೆ ಪಡೆಯುತ್ತದೆ. ಸಿಂಪಲ್ ರಿವರ್ಶನರಿ ಬೋನಸ್  ಮೊತ್ತವನ್ನು ಕಾರ್ಪೊರೇಷನ್ ತನ್ನ ಹಿಂದಿನ ವರ್ಷಗಳ ಪರ್ಫಾರ್ಮನ್ಸ್ ಆದಾರದ ಮೇಲೆ ನಿಗದಿ ಪಡಿಸುತ್ತದೆ. ಆದರೆ, ಪಾಲಿಸಿಯು ಮೆಚೂರಿಟೀ ಆಗುವಾಗ ಅಸ್ಥಿತ್ವದಲ್ಲಿ ಇರಬೇಕು.

ಈ ಪಾಲಿಸಿಯ ಒಂದು ವೈಶಿಷ್ಟ್ಯವೆಂದರೆ, ಪಾಲಿಸಿದಾರನ ಮರಣವು ಪಾಲಿಸಿಯ ಆವದಿಯ ಮದ್ಯದಲ್ಲಿ ಆದರೂ ಕೂಡ, ಪಾಲಿಸಿಯು ಅಸ್ಥಿತ್ವದಲ್ಲಿ ಇದ್ದರೆ ಅದು ಲಾಭದಲ್ಲಿ ಬಾಗಿ ಆಗುತ್ತಿರುತ್ತದೆ. ಅಂದರೆ, ಪಾಲಿಸಿಯ ಮೆಚೂರಿಟೀ ಆದ ನಂತರ, ಈ ಪಾಲಿಸಿಗೆ ಅದುವರೆಗೂ ಸೇರಿರಬಹುದಾದ ಸಿಂಪಲ್ ರಿವರ್ಶನರಿ ಬೋನಸ್ ಗಳು ಹಾಗೂ ಅಂತಿಮ ಅಡಿಷನಲ್ ಬೋನಸ್ ಸೇರಿಸಿ ಒಟ್ಟು ಮೊತ್ತವನ್ನು ನೀಡಲಾಗುತ್ತದೆ.

ಪಾಲಿಸಿಯ ಮೇಲಿನ ಪ್ರೀಮಿಯಂ ಗಳನ್ನು ಸರಿಯಾಗಿ ಪಾವತಿಸದಿದ್ದಲ್ಲಿ, (ಅಸ್ಥಿತ್ವದಲ್ಲಿ ಇರುವ ಪಾಲಿಸಿಯ ವಿಮಾದಾರನು ಮರಣ ಹೊಂದಿದಲ್ಲಿ ಆ ಸಂಧರ್ಭವನ್ನು ಬಿಟ್ಟು), ಅಂತಹ ಪಾಲಿಸಿಯು ಕಾರ್ಪೊರೇಷನ್ ನ ಮುಂದಿನ ಬಂಡವಾಳ ಹೂಡಿಕೆಯಲ್ಲಿ ಬಾಗಿ ಆಗುವುದಿಲ್ಲ. ಇದು ಪಾಲಿಸಿಯು ಪೈಡ್-ಅಪ್ ಮೌಲ್ಯವನ್ನು ಹೊಂದಿರಲಿ ಅಥವಾ ಹೊಂದದೆ ಇದ್ದರೂ ಸಹ ಅನ್ವಯವಾಗುತ್ತದೆ. ಆದರೆ ಪಾಲಿಸಿದಾರನ ಮರಣವು ಗ್ರೇಸ್ ಪೀರಿಯಡ್ ನಲ್ಲಿ ಆದಲ್ಲಿ, ಪಾಲಿಸಿಯು ಅಸ್ಥಿತ್ವದಲ್ಲಿ ಇದೆ ಎಂದು ಬಾವಿಸಲಾಗುತ್ತದೆ.

ಕಡಿತಗೊಳಿಸಿದ ಪೈಡ್-ಅಪ್ ಪಾಲಿಸಿಗೆ ಅಂತಿಮ ಅಡಿಷನಲ್ ಬೋನಸ್ ಅನ್ನು ನೀಡಲಾಗುವುದಿಲ್ಲ.

ಅಪ್ಶನಲ್ ಬೇನೆಫಿಟ್ ಗಳು

ಆಪ್ಶನಲ್  ಬೆನಿಫಿಟ್ ಗಳು ಅಂದರೆ ಸ್ವ ಇಚ್ಚೆಯಿಂದ ತೆಗೆದುಕೊಳ್ಳುವ ಬೇನೆಫಿಟ್ ಗಳು  ಈ ಕೆಳ ಕಂಡಂತಿವೆ.

 • ಎಲ್ ಐ ಸಿ ಯವರ ಆಕಸ್ಮಿಕ ಡೆತ್ ಹಾಗೂ ಡಿಸ್ಎಬಿಲಿಟಿ (ಅಂಗ ವೈಕಲ್ಯ) ರೈಡರ್
 • ಎಲ್ ಐ ಸಿ ಯವರ ನ್ಯೂ ಟರ್ಮ್ ಅಶ್ಶ್ಯುರೇನ್ಸ ರೈಡರ್.

ರೈಡರ್ ಸಮ್ ಅಶ್ಶುರ್ಡ್ ಮೊತ್ತವು ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತಕ್ಕಿಂತ ಹೆಚ್ಚು ಇರಕೂಡದು. ಈ ರೈಡರ್ಸ್ ಪಡೆದಿರುವ ಪಾಲಿಸಿದಾರರಿಗೆ ಮೇಲೆ ತಿಳಿಸಿರುವ ಸಮ್ ಅಶ್ಶುರ್ಡ್ ಆನ್ ಡೆತ್ ಮೊತ್ತವನ್ನು ಲೆಕ್ಕ ಹಾಕುವ ರೀತಿಯಲ್ಲಿಯೇ, ಇದರಲ್ಲೂ ಕೂಡ ಲೆಕ್ಕ ಹಾಕಿ ನೀಡಲಾಗುವುದು. ಅದು ಈ ಕೆಳ ಕಂಡಂತಿದೆ.

ರೈಡರ್ಸ್ ಗಳ ಸಮ್ ಅಶ್ಶುರ್ಡ್ ಮೊತ್ತವು ಕೆಳಗೆ ನಮೂದಿಸಿರುವ ಎರಡರ ಮೊತ್ತವನ್ನು ಒಟ್ಟು ಮಾಡಿದಾಗ ಬರುವ ಮೊತ್ತ.

 • ವಾರ್ಷಿಕ ಆದಾಯ ಬೆನಿಫಿಟ್ ಮೊತ್ತವಾಗಿ ಬೇಸಿಕ್ ಸಮ್ ಅಶ್ಶುರ್ಡ್ ನ 10 % ಮೊತ್ತ. ಇದನ್ನು, ಪಾಲಿಸಿಯ ಅನಿವರ್ಸರಿ ಅಥವಾ ಪಾಲಿಸಿದಾರನ ಮರಣವಾದ ಬಳಿಕ ಪಾಲಿಸಿಯ ಮೆಚೂರಿಟೀ ಆಗುವ ಮುಂಚಿನವರೆಗೂ ನೀಡಲಾಗುವುದು.
 • ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತದ 110 % ಮೊತ್ತವನ್ನು ಖಚಿತ ಒಟ್ಟಾರೆ ಮೊತ್ತವಾಗಿ ನೀಡಲಾಗುವುದು.

ಇದರ ಜೊತೆಗೆ, ವೆಸ್ಟೆಡ್ ಸಿಂಪಲ್ ರಿವರ್ಷನರಿ ಬೋನಸ್ (ಇದ್ದಲ್ಲಿ), ಆದನ್ನು ಕೂಡ ಸೇರಿಸಿ ನೀಡಲಾಗುವುದು

ಎಲ್ ಐ ಸಿ ಜೀವನ್ ಲಕ್ಷ್ಯ ಪ್ಲಾನ್  - ಬೆನಿಫಿಟ್ ಉದಾಹರಣೆ

ಈ ಪ್ಲಾನ್ ಅಡಿಯಲ್ಲಿ, ಬೆನಿಫಿಟ್ ಬಗ್ಗೆ ಒಂದು ಉದಾಹರಣೆಯನ್ನು ಕೆಳಗೆ ನೀಡಲಾಗಿದೆ.

ಪಾಲಿಸಿ ಪಡೆಯುವ ಸಮಯದಲ್ಲಿ ಪಾಲಿಸಿದಾರನ ವಯಸ್ಸು

30 ವರ್ಷಗಳು

ಪಾಲಿಸಿ  ಅವದಿ (ಟರ್ಮ್)

25 ವರ್ಷಗಳು

ಪ್ರೀಮಿಯಂ ನೀಡುವ ಅವದಿ

ವರ್ಷಕ್ಕೊಮ್ಮೆ

ಬೇಸಿಕ್ ಸಮ್ ಅಶ್ಶುರ್ಡ್

100000

ವಾರ್ಷಿಕ ಪ್ರೇಮಿಯಮ್ ಮೊತ್ತ

4366.00

ಡೆತ್ ಬೆನಿಫಿಟ್ ಬಗ್ಗೆ ಉದಾಹರಣೆ

ಪಾಲಿಸಿಯ ಅವದಿಯ ವರ್ಷ

ವರ್ಷದ ಕೊನೆಯವರೆಗೂ ನೀಡಿರುವ ಪ್ರೀಮಿಯಂ ಗಳ ಒಟ್ಟು ಮೊತ್ತ  (ರೂ ಗಳಲ್ಲಿ)

ಡೆತ್ ಬೆನಿಫಿಟ್ ಅನ್ನು ಇನ್ಕಮ್ ಬೆನಿಫಿಟ್ ಎಂದು ಪರಿಗಣಿಸಿ ಸಮನಾದ ವಾರ್ಷಿಕ ಕಂತಿನಲ್ಲಿ ನೀಡುವ  ಒಟ್ಟು ಮೊತ್ತ (ರೂ ಗಳಲ್ಲಿ)

ಪಾಲಿಸಿಯ ಅವದಿ (ಟರ್ಮ್) ಮುಗಿಯುವುದರ ಒಳಗೆ (ಆ  ವರ್ಷದಲ್ಲಿ) ಮರಣ ಹೊಂದಿದಲ್ಲಿ ನೀಡುವ ಮೊತ್ತ

ಗ್ಯಾರಂಟಿಡ್ ಮೊತ್ತ

(ರೂ ಗಳಲ್ಲಿ)

ಬದಲಾಗಬಹುದಾದ ಮೊತ್ತ  

ಒಟ್ಟು ಮೊತ್ತ

ಸಿನ್ಯರಿಯೋ 1 @ 4 %

(ರೂ ಗಳಲ್ಲಿ)

ಸಿನ್ಯರಿಯೋ 2 @

8 %

(ರೂ ಗಳಲ್ಲಿ)

ಸಿನ್ಯರಿಯೋ 1 @ 4 %

(ರೂ ಗಳಲ್ಲಿ)

ಸಿನ್ಯರಿಯೋ 2 @ 8 %

(ರೂ ಗಳಲ್ಲಿ)

1

4366

250000

100000

17500

90000

117500

190000

2

8732

240000

100000

17500

90000

117500

190000

3

13098

230000

100000

17500

90000

117500

190000

4

17464

220000

100000

17500

90000

117500

190000

5

21830

210000

100000

17500

90000

117500

190000

6

26196

200000

100000

17500

90000

117500

190000

7

30562

190000

100000

17500

90000

117500

190000

8

34928

180000

100000

17500

90000

117500

190000

9

39294

170000

100000

17500

90000

117500

190000

10

43660

160000

100000

17500

90000

117500

190000

11

48026

150000

100000

17500

90000

117500

190000

12

52392

140000

100000

17500

90000

117500

190000

13

56758

130000

100000

17500

90000

117500

190000

14

61124

120000

100000

17500

90000

117500

190000

15

65490

110000

100000

17500

90000

117500

190000

16

69856

100000

100000

17500

90000

117500

190000

17

74222

90000

100000

17500

90000

117500

190000

18

78588

80000

100000

17500

90000

117500

190000

19

82954

70000

100000

17500

90000

117500

190000

20

87320

60000

100000

17500

90000

117500

190000

21

91686

50000

100000

17500

90000

117500

190000

22

96052

40000

100000

17500

90000

117500

190000

23

96052

30000

100000

17500

90000

117500

190000

24

96052

20000

100000

17500

90000

117500

190000

25

96052

10000

100000

17500

90000

117500

190000

ಪಾಲಿಸಿಯನ್ನು ಸರಂಡರ್ ಮಾಡಿದಲ್ಲಿ ಸಿಗಬಹುದಾದ  ಬೆನಿಫಿಟ್

ಪಾಲಿಸಿಯ ಅವದಿಯ ವರ್ಷ

ವರ್ಷದ ಕೊನೆಯವರೆಗೂ ನೀಡಿರುವ ಪ್ರೀಮಿಯಂ ಗಳ ಒಟ್ಟು ಮೊತ್ತ  (ರೂ ಗಳಲ್ಲಿ)

ಡೆತ್ ಬೆನಿಫಿಟ್ ಅನ್ನು ಇನ್ಕಮ್ ಬೆನಿಫಿಟ್ ಎಂದು ಪರಿಗಣಿಸಿ ಸಮನಾದ ವಾರ್ಷಿಕ ಕಂತಿನಲ್ಲಿ ನೀಡುವ  ಒಟ್ಟು ಮೊತ್ತ (ರೂ ಗಳಲ್ಲಿ)

ಪಾಲಿಸಿಯ ಅವದಿ (ಟರ್ಮ್) ಮುಗಿಯುವುದರ ಒಳಗೆ ಪಾಲಿಸಿಯನ್ನು ಸರಂಡರ್ ಮಾಡಿದಲ್ಲಿ (ಆ ವರ್ಷದಲ್ಲಿ)  ನೀಡುವ ಮೊತ್ತ

ಗ್ಯಾರಂಟಿಡ್ ಸರಂಡರ್ ಮೊತ್ತ (ರೂ ಗಳಲ್ಲಿ)

ಸರಂಡರ್ ಮೊತ್ತ

ಒಟ್ಟು ಗ್ಯಾರಂಟಿಡ್ ಮೊತ್ತ

ಸಿನ್ಯರಿಯೋ 1 @ 4 % (ರೂ ಗಳಲ್ಲಿ)

ಸಿನ್ಯರಿಯೋ 2 @

8 % (ರೂ ಗಳಲ್ಲಿ)

ಸಿನ್ಯರಿಯೋ 1 @ 4 % (ರೂ ಗಳಲ್ಲಿ)

ಸಿನ್ಯರಿಯೋ 2 @ 8 % (ರೂ ಗಳಲ್ಲಿ)

1

4366

250000

0

0

0

0

0

2

8732

240000

0

0

0

0

0

3

13098

230000

3921

321

1467

4250

5396

4

17464

220000

8732

432

1974

9164

10706

5

21830

210000

10915

544

2488

11459

13403

6

26196

200000

13098

660

3018

13758

16116

7

30562

190000

15281

781

3568

16062

18849

8

34928

180000

18079

908

4152

18987

22231

9

39294

170000

21034

1045

4775

22079

25809

10

43660

160000

24140

1192

5450

25332

29589

11

48026

150000

27404

1354

8188

28757

33592

12

52392

140000

30817

1477

6751

32294

37568

13

56758

130000

34390

1607

7347

35997

41736

14

61124

120000

38111

1749

7997

39960

46108

15

65490

110000

41992

1907

8717

43899

50709

16

69856

100000

46021

2083

9523

48104

55544

17

74222

90000

50211

2282

10434

52494

60645

18

78588

80000

54548

2511

11480

57059

66028

19

82954

70000

59047

2773

12677

61820

71723

20

87320

60000

63691

3079

14074

66770

77765

21

91686

50000

68499

3437

15711

71935

84210

22

96052

40000

73451

3858

17635

77309

91086

23

96052

30000

75151

4357

19916

79508

95067

24

96052

20000

76842

5040

23040

81882

99882

25

96052

10000

76842

6125

28000

82967

104842

ಪಾಲಿಸಿಯ ಅವದಿಯ ವರ್ಷ

ವರ್ಷದ ಕೊನೆಯವರೆಗೂ ನೀಡಿರುವ ಪ್ರೀಮಿಯಂ ಗಳ ಒಟ್ಟು ಮೊತ್ತ  (ರೂ ಗಳಲ್ಲಿ)

ಪಾಲಿಸಿಯ ಅವದಿ (ಟರ್ಮ್) ಮುಗಿದ ನಂತರ ನೀಡುವ ಮೆಚೂರಿಟೀ ಮೊತ್ತ

ಗ್ಯಾರಂಟಿಡ್ ಮೊತ್ತ (ರೂ ಗಳಲ್ಲಿ)

ಬದಲಾಗಬಹುದಾದ  ಮೊತ್ತ

ಒಟ್ಟು ಮೊತ್ತ

ಸಿನ್ಯರಿಯೋ 1 @ 4 %  (ರೂ ಗಳಲ್ಲಿ)

ಸಿನ್ಯರಿಯೋ 2 @ 8 % (ರೂ ಗಳಲ್ಲಿ)

ಸಿನ್ಯರಿಯೋ 1 @ 4 %  (ರೂ ಗಳಲ್ಲಿ)

ಸಿನ್ಯರಿಯೋ 2 @ 8 %  (ರೂ ಗಳಲ್ಲಿ)

25 ವರ್ಷಗಳು

96052

100000

17500

90000

117500

190000

ಸೂಚನೆ:

 • ಮೇಲೆ ಕಾಣಿಸಿರುವ ಪ್ರೀಮಿಯಂ ಮೊತ್ತದಲ್ಲಿ, ಸರ್ವಿಸ್ ಟಾಕ್ಸ್, ಎಕ್ಸ್ಟ್ರಾ ಪ್ರೀಮಿಯಂ ಇದ್ದಲ್ಲಿ ಹಾಗೂ ರೈಡರ್ಸ್ ಪ್ರೀಮಿಯಂ ಇದ್ದಲ್ಲಿ ಅವು ಸೇರಿರುವುದಿಲ್ಲ.
 • ಪಾಲಿಸಿದಾರನಿಗೆ ಅನುಕೂಲವಾಗುವುದಿದ್ದಲ್ಲಿ, ಸ್ಪೆಷಲ್ ಸರಂಡರ್ ಮೌಲ್ಯವನ್ನು ಎಲ್‌ಐ‌ಸಿ ಯು ನೀಡುವುದು.
 • ಏನೇ ಆದರೂ, ಒಟ್ಟು ಡೆತ್ ಬೆನಿಫಿಟ್ (ಒಟ್ಟು ಇನ್ಕಮ್ ಬೆನಿಫಿಟ್ ಹಾಗೂ ಪಾಲಿಸಿ ಮೆಚೂರಿಟೀ ಆದಾಗೆ ನೀಡುವ ಒಂದು ಖಚಿತ ಮೊತ್ತ) ಮೊತ್ತವು ಎಲ್ಲ ಪ್ರೀಮಿಯಂ ಗಳ ಒಟ್ಟಾರೆ ಮೊತ್ತಕ್ಕೆ (ಸರ್ವಿಸ್ ಟಾಕ್ಸ್, ಎಕ್ಸ್ಟ್ರಾ ಪ್ರೀಮಿಯಂ ಇದ್ದಲ್ಲಿ ಹಾಗೂ ರೈಡರ್ಸ್ ಪ್ರೀಮಿಯಂ ಗಳು ಇದ್ದಲ್ಲಿ ಇವುಗಳನ್ನು ಹೊರತು ಪಡಿಸಿ) 105 % ಗಿಂತ ಕಮ್ಮಿ ಇರುವುದಿಲ್ಲ
 • ಈ ಉದಾಹರಣೆಯಲ್ಲಿ, ಮುಂದೆ  ಎಲ್ ಐ ಸಿ ಯು ಬಂಡವಾಳ ಹೂಡಿಕೆ ಮಾಡಿ ಪಾಲಿಸಿಯ ಪೂರ್ಣ ಆವದಿಯವರೆಗೂ ಬರಬಹುದಾದ ಲಾಭವನ್ನು ಪರ್ಸೆಂಟೆಜ್ ಲೆಕ್ಕದಲ್ಲಿ 4 % ಅಥವಾ 8 % ಎಂದು ಪರಿಗಣಿಸಿ ಲೆಕ್ಕಾಚಾರ ಮಾಡಲಾಗಿದೆ.

ಎಲ್ ಐ ಸಿ ಜೀವನ್ ಲಕ್ಷ್ಯ ಪ್ಲಾನ್  - ಉಳಿದ ಬೆನಿಫಿಟ್ ಗಳು

ಮೇಲೆ ಕಾಣಿಸಿರುವ ಬೆನಿಫಿಟ್ ಗಳ ಜೊತೆ ಈ ಕೆಳ ಕಂಡ ಉಳಿದ ಬೆನಿಫಿಟ್ ಗಳು ಪಾಲಿಸಿಗೆ ದೊರಕುತ್ತವೆ.

ಪಾಲಿಸಿ ರಿವೈವಲ್

ಪಾಲಿಸಿಯ ಬಾಬ್ತು ನೀಡಬೇಕಾಗಿರುವ ಪ್ರೀಮಿಯಂ ಗಳನ್ನು ಪಾವತಿಸದಿದ್ದಲ್ಲಿ, ಪಾಲಿಸಿಯು ಲ್ಯಾಪ್ಸ್ ಆಗುತ್ತದೆ. ಅಂದರೆ ಅದು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಪಾಲಿಸಿಯ ನಿಯಮದ ಪ್ರಕಾರ, ಲ್ಯಾಪ್ಸ್ಡ್ ಪಾಲಿಸಿಯನ್ನು ರಿವೈವ್ ಅಂದರೆ ಪುನರುಜ್ಜೀವನಫಗೊಳಿಸುವ ಅವಕಾಶ ಇರುತ್ತದೆ. ಆದರೆ, ಪಾಲಿಸಿದಾರನು ಅವನು ಕಟ್ಟದೆ ಇದ್ದ ಪ್ರೀಮಿಯಂ ದಿನದಿಂದ ಎರಡು ವರ್ಷಗಳ ಒಳಗೆ ಪಾಲಿಸಿಯನ್ನು ರಿವೈವ್ ಮಾಡಿಸಿಕೊಳ್ಳಬೇಕು. ಹಾಗೂ ಆ ರೀತಿ ರಿವೈವ್ ಮಾಡಿಸಿಕೊಳ್ಳಲು, ಆ ಹಿಂದೆ ಕಟ್ಟಬೇಕಾಗಿದ್ದ ಎಲ್ಲ ಪ್ರೀಮಿಯಂ ಗಳನ್ನು ಎಲ್ ಐ ಸಿ ವಿಧಿಸಬಹುದಾದ ಬಡ್ಡಿಯನ್ನು ಸೇರಿಸಿ ಒಟ್ಟು ಮೊತ್ತವನ್ನು ನೀಡಬೇಕಾಗುತ್ತದೆ. ಹಾಗೂ ಪ್ರೀಮಿಯಂ ಕಟ್ಟಲು ಆಗದೆ ಇದ್ದುದಕ್ಕೆ ಸೂಕ್ತವಾದ ಕಾರಣವನ್ನು ನೀಡಬೇಕಾಗುತ್ತದೆ. ಹಾಗೆಯೇ, ರೈಡರ್ಸ್ ಗಳನ್ನು ರಿವೈವಲ್ ಮಾಡಬೇಕಾದಲ್ಲಿ, ಅದನ್ನು ಕೂಡ ಪಾಲಿಸಿಯ ರಿವೈವಲ್ ಜೊತೆಯಲ್ಲಿಯೇ ಮಾಡಿಸಬೇಕು. ಅದನ್ನು, ಪ್ತತ್ಯೇಕವಾಗಿ ಮಾಡುವ ಹಾಗಿಲ್ಲ.

ಪೈಡ್-ಅಪ್ ಮೌಲ್ಯ  

ಪಾಲಿಸಿಯ ಮೇಲಿನ ಪ್ರೀಮಿಯಂ ಗಳನ್ನು 3 ವರ್ಷಗಳು ಪಾವತಿಸಿದ್ದಲ್ಲಿ, ಹಾಗೂ ಮುಂದೆ ಕಾರಣಾಂತರದಿಂದ ಕಟ್ಟಲು ಆಗದೆ ಇದ್ದ ಪಕ್ಷದಲ್ಲಿ, ಅಂತಹ ಪಾಲಿಸಿಯು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವುದಿಲ್ಲ. ಬದಲಿಗೆ ಅಂತಹ ಪಾಲಿಸಿಯನ್ನು, ಪೈಡ್-ಅಪ್ ಪಾಲಿಸಿ ಎಂದು ಪರಿಗಣಿಸಲಾಗುತ್ತದೆ. ಹಾಗೂ ಪೈಡ್-ಅಪ್ ಪಾಲಿಸಿಯ ರೂಪದಲ್ಲಿ ಅವದಿಯ ಕೊನೆಯವರೆಗೂ ಮುಂದುವರೆಯುತ್ತದೆ.

ಈ ಪೈಡ್-ಅಪ್ ಪಾಲಿಸಿಯಲ್ಲಿ, ಪಾಲಿಸಿದಾರನ ಮರಣವು ಪಾಲಿಸಿಯ ಅವದಿಗೆ ಮುಂಚೆ ಆದಲ್ಲಿ, ಸಮ್ ಅಶ್ಶುರ್ಡ್ ಮೊತ್ತವನ್ನು ಕಡಿತಗೊಳಿಸಿ “ಡೆತ್ ಪೈಡ್-ಅಪ್ ಸಮ್ ಅಶ್ಶುರ್ಡ್” ಎಂದು ಕರೆಯಲಾಗುತ್ತದೆ.

ಇದು, ಈ ಕೆಳಗಿನ ಎರಡು ಮೊತ್ತಗಳನ್ನು ಸೇರಿಸಿದಾಗ ಬರುವ ಒಟ್ಟು ಮೊತ್ತವಾಗುತ್ತದೆ.

 • ಅಂದರೆ, ಪಾಲಿಸಿಯು ಮೆಚೂರಿಟೀ ಹೊಂದಿದ ದಿವಸ ನೀಡಬೇಕಾದ ಮೊತ್ತವು [(ಪಾಲಿಸಿದಾರನು ನೀಡಿರುವ ಪ್ರೀಮಿಯಂಗಳು / ಪಾಲಿಸಿದಾರನು ನೀಡಬೇಕಾದ ಒಟ್ಟು ಪ್ರೀಮಿಯಂ ಗಳು)] x ಸಮ್ ಅಶ್ಶುರ್ಡ್ ಆನ್ ಡೆತ್  ಎಂದು ಪರಿಗಣಿಸಿ ಮತ್ತು
 • ಕಡಿತಗೊಳಿಸಿದ ಇನ್ಕಮ್ ಬೆನಿಫಿಟ್ ಅಂದರೆ ಬೇಸಿಕ್ ಸಮ್ ಅಶ್ಶುರ್ಡ್ ನ ಮೊತ್ತದ 10 % ನಷ್ಟು x [(ಪಾಲಿಸಿದಾರನು ನೀಡಿರುವ ಪ್ರೀಮಿಯಂಗಳು / ಪಾಲಿಸಿದಾರನು ನೀಡಬೇಕಾದ ಒಟ್ಟು ಪ್ರೀಮಿಯಂ ಗಳು) ಮೊತ್ತ – ಇದನ್ನು ಪಾಲಿಸಿದಾರನು ಮರಣ ಹೊಂದಿದ ವರ್ಷದಲ್ಲಿ ಪಾಲಿಸಿಯ ಅನಿವರ್ಸರಿಯು ಮರಣದ ದಿವಸದ ಜೊತೆ ಹೊಂದಿಕೊಂಡಲ್ಲಿ ಅಥವಾ ಹತ್ತಿರ ಇರುವ ಅನಿವರ್ಸರಿ ದಿವಸಕ್ಕೆ ನೀಡಲಾಗುತ್ತದೆ

ಈ ಪೈಡ್-ಅಪ್ ಪಾಲಿಸಿಯಲ್ಲಿ, ಮೆಚೂರಿಟೀ ಆದಾಗ ನೀಡುವ ಸಮ್ ಅಶ್ಶುರ್ಡ್ ಮೊತ್ತವನ್ನು ಕಡಿತಗೊಳಿಸಿ “ಮೆಚೂರಿಟೀ ಪೈಡ್-ಅಪ್ ಸಮ್ ಅಶ್ಶುರ್ಡ್” ಎಂದು ಕರೆಯಲಾಗುತ್ತದೆ. ಅಂದರೆ, [(ಪಾಲಿಸಿದಾರನು ನೀಡಿರುವ ಪ್ರೀಮಿಯಂಗಳು / ಪಾಲಿಸಿದಾರನು ನೀಡಬೇಕಾದ ಒಟ್ಟು ಪ್ರೀಮಿಯಂಗಳು)] x ಸಮ್ ಅಶ್ಶುರ್ಡ್ ಆನ್ ಮೆಚೂರಿಟೀ   = ಮೆಚೂರಿಟೀ ಪೈಡ್-ಅಪ್ ಸಮ್ ಅಶ್ಶುರ್ಡ್ ಆಗಿರುತ್ತದೆ.

ಯಾವುದೇ ಪಾಲಿಸಿಯು, ಪೈಡ್-ಅಪ್ ಪಾಲಿಸಿಯಾಗಿ ಮುಂದುವರೆದಲ್ಲಿ, ಅಂತಹ ಪಾಲಿಸಿಯು ಮುಂದಿನ ಬಂಡವಾಳ ಹೂಡಿಕೆ ಹಾಗೂ ಅದರಿಂದ ಉತ್ಪನ್ನವಾಗಬಹುದಾದ ಲಾಭಗಳಿಗೆ ಅರ್ಹ ಆಗುವುದಿಲ್ಲ. ಆದರೆ, ಪಾಲಿಸಿಯ ನಿಯಮದ ಪ್ರಕಾರ, ವೆಸ್ಟೆಡ್ ಸಿಂಪಲ್ ರಿವರ್ಶನರಿ ಬೋನಸ್ ಗೆ ಅರ್ಹತೆ ಹೊಂದಿರುತ್ತದೆ. ಈ ಪಾಲಿಸಿಯ ಜೊತೆ ಸೇರಿಸಿರುವ ರೈಡರ್ ಗಳಿಗೆ ಯಾವುದೇ ಪೈಡ್-ಅಪ್ ಮೌಲ್ಯವು ಸೇರುವುದಿಲ್ಲ ಹಾಗೂ ರೈಡರ್ ಸಲುವಾಗಿ ಬರಬಹುದಾದ ಎಲ್ಲ ಬೆನಿಫಿಟ್ ಗಳು ರದ್ದಾಗುತ್ತವೆ.

ಸರಂಡರ್ ಮೌಲ್ಯ

ಸರಂಡರ್ ಬೆನಿಫಿಟ್ ಪಾಲಿಸಿಗೆ ಅದರ 3 ವರ್ಷಗಳು ಕಳೆದ ನಂತರ ಸಿಗುತ್ತದೆ. ಗ್ಯಾರಂಟಿಡ್ ಸರಂಡರ್ ಮೌಲ್ಯವು ಒಂದು ಪರ್ಸೆಂಟೆಜ್ ಆಗಿದ್ದು ಅದು ಪಾಲಿಸಿದಾರನು ನೀಡಿರುವ ಒಟ್ಟು ಪ್ರೀಮಿಯಂ ಮೊತ್ತದಿಂದ ಈ ಕೆಳ ಕಂಡ ಮೊತ್ತಗಳನ್ನು ಕಳೆದು ಉಳಿಕೆ ಹಣವನ್ನು ನೀಡಲಾಗುವ ಮೊತ್ತ ಆಗಿರುತ್ತದೆ.

 • ಸರ್ವಿಸ್ ತೆರಿಗೆ
 • ಎಕ್ಷ್ತ್ರಾ  ಪ್ರೀಮಿಯಂಗಳು ಇದ್ದಲ್ಲಿ
 • ರೈಡರ್ಸ್ ಪ್ರೀಮಿಯಂ ಗಳು ಇದ್ದಲ್ಲಿ

ಪ್ರೀಮಿಯಂ ಗಳಿಗೆ ಅನ್ವಯ ಆಗುವ ಗ್ಯಾರಂಟಿಡ್ ಸರಂಡರ್ ಫ್ಯಾಕ್ಟರ್ ವಿವರ

ಪಾಲಿಸಿಯ ವರ್ಷ

ಪಾಲಿಸಿಯ ಟರ್ಮ್

 

13

14

15

16

17

18

19

20

21

22

23

24

25

1

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

2

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

3

18.16 %

17.85 %

17.66 %

17.58 %

17.58 %

17.03 %

16.58 %

16.22 %

15.93 %

15.72 %

15.55 %

15.42 %

15.28 %

4

18.60 %

18.16 %

17.85 %

17.66 %

17.58 %

17.58 %

17.03 %

16.58 %

16.22 %

15.93 %

15.72 %

15.55 %

15.42 %

5

19.18 %

18.60 %

18.16 %

17.85 %

17.66 %

17.58 %

17.58 %

17.03 %

16.58 %

16.22 %

15.93 %

15.72 %

15.55 %

6

19.93 %

19.18 %

18.60 %

18.16 %

17.85 %

17.66 %

17.58 %

17.58 %

17.03 %

16.58 %

16.22 %

15.93 %

15.72 %

7

20.85 %

19.93 %

19.18 %

18.60 %

18.16 %

17.85 %

17.66 %

17.58 %

17.58 %

17.03 %

16.58 %

16.22 %

15.93 %

8

21.99 %

20.85 %

19.93 %

19.18 %

18.60 %

18.16 %

17.85 %

17.66 %

17.58 %

17.58 %

17.03 %

16.58 %

16.22 %

9

23.38 %

21.99 %

20.85 %

19.93 %

19.18 %

18.60 %

18.16 %

17.85 %

17.66 %

17.58 %

17.58 %

17.03 %

16.58 %

10

25.05 %

23.38 %

21.99 %

20.85 %

19.93 %

19.18 %

18.60 %

18.16 %

17.85 %

17.66 %

17.58 %

17.58 %

17.03 %

11

27.06 %

25.05 %

23.38 %

21.99 %

20.85 %

19.93 %

19.18 %

18.60 %

18.16 %

17.85 %

17.66 %

17.58 %

17.58 %

12

30.00 %

27.06 %

25.05 %

23.38 %

21.99 %

20.85 %

19.93 %

19.18 %

18.60 %

18.16 %

17.85 %

17.66 %

17.58 %

13

35.00 %

30.00 %

27.06 %

25.05 %

23.38 %

21.99 %

20.85 %

19.93 %

19.18 %

18.60 %

18.16 %

17.85 %

17.66 %

14

 

35.00 %

30.00 %

27.06 %

25.05 %

23.38 %

21.99 %

20.85 %

19.93 %

19.18 %

18.60 %

18.16 %

17.85 %

15

   

35.00 %

30.00 %

27.06 %

25.05 %

23.38 %

21.99 %

20.85 %

19.93 %

19.18 %

18.60 %

18.16 %

16

     

35.00 %

30.00 %

27.06 %

25.05 %

23.38 %

21.99 %

20.85 %

19.93 %

19.18 %

18.60 %

17

       

35.00 %

30.00 %

27.06 %

25.05 %

23.38 %

21.99 %

20.85 %

19.93 %

19.18 %

18

         

35.00 %

30.00 %

27.06 %

25.05 %

23.38 %

21.99 %

20.85 %

19.93 %

19

           

35.00 %

30.00 %

27.06 %

25.05 %

23.38 %

21.99 %

20.85 %

20

             

35.00 %

30.00 %

27.06 %

25.05 %

23.38 %

21.99 %

21

               

35.00 %

30.00 %

27.06 %

25.05 %

23.38 %

22

                 

35.00 %

30.00 %

27.06 %

25.05 %

23

                   

35.00 %

30.00 %

27.06 %

24

                     

35.00 %

30.00 %

25

                       

35.00 %

ಮೇಲೆ ಕಾಣಿಸಿರುವ ಪ್ರೀಮಿಯಂ ಗಳಲ್ಲಿ ಯಾವುದೇ ತೆರಿಗೆಗಳನ್ನು ಸೇರಿಸಿರುವುದಿಲ್ಲ. ಅನ್ವಯವಾಗುವ ತೆರಿಗೆಗಳನ್ನು ಪ್ರೀಮಿಯಂ ಮೊತ್ತದ ಜೊತೆ ಸೇರಿಸಿ  ನೀಡಬೇಕಾಗುತ್ತದೆ. ಇದರ ಜೊತೆಗೆ, ಇನ್ಯಾವುದೇ ಅಂಡರ್ ರೈಟಿಂಗ್ ಪ್ರಕಾರ ಪಾಲಿಸಿಯ ಮೇಲೆ ಹೆಚ್ಚುವರಿ ಮೊತ್ತವನ್ನು ಸೇರಿಸಿದಲ್ಲಿ , ಅದನ್ನು ಕೂಡ ಪ್ರೀಮಿಯಂ ಮೊತ್ತದ ಜೊತೆಗೆ ಸೇರಿಸಿ ನೀಡಬೇಕಾಗುತ್ತದೆ.

ಪಾಲಿಸಿಯ ಮೇಲೆ ಸಾಲ ಸೌಲಭ್ಯ

ಈ ಪ್ಲಾನ್ ಅಡಿಯಲ್ಲಿ, ಪಾಲಿಸಿಯ ಮೇಲೆ ಸಾಲ ಸೌಲಭ್ಯವು ಇರುತ್ತದೆ. ಆದರೆ, ಪಾಲಿಸಿಯು ಸರಂಡರ್ ಮೌಲ್ಯವನ್ನು ಹೊಂದಿರಬೇಕಾಗುತ್ತದೆ. ಮತ್ತು, ಸಾಲವನ್ನು ನೀಡುವುದು, ಕಾರ್ಪೊರೇಷನ್ ನ ನಿಯಮಕ್ಕೆ  ಹಾಗೂ ನಿಬಂದನೆಗಳಿಗೆ ಒಳ ಪಟ್ಟಿರುತ್ತದೆ. ಈ ನಿಯಮಗಳು ಹಾಗೂ ನಿಬಂದನೆಗಳು ಕಾಲ ಕಾಲಕ್ಕೆ, ಬದಲಾವಣೆಗೆ ಒಳ ಪಡುತ್ತದೆ. ಆದ್ದರಿಂದ, ಪಾಲಿಸಿದಾರನು ತನ್ನ ಪಾಲಿಸಿಯ ಮೇಲೆ ಸಾಲ ತೆಗೆದುಕೊಳ್ಳುವಾಗಿನ ನಿಯಮ ಮತ್ತು ನಿಬಂದನೆಗಳ ಅನುಸಾರವಾಗಿ, ಸಾಲವು ದೊರೆಯುತ್ತದೆ.

ಅಕಸ್ಮಾತ್ ಪಾಲಿಸಿದಾರನು, ಪಾಲಿಸಿಯನ್ನು ಸರಂಡರ್ ಮಾಡಿದಲ್ಲಿ ಅವನಿಗೆ ನೀಡಬೇಕಾಗುವ ಬೆನಿಫಿಟ್ ಮೊತ್ತದಿಂದ ಉಳಿದಿರುವ ಸಾಲ ಹಾಗೂ ಅದರ ಮೇಲೆ ಬೀಳಬಹುದಾದ ಬಡ್ಡಿ ಎಲ್ಲವನ್ನೂ ಆ ಮೊತ್ತದಿಂದ ಕಡಿತ ಮಾಡಲಾಗುತ್ತದೆ. ಪಾಲಿಸಿದಾರನು ಮರಣ ಹೊಂದಿದಲ್ಲಿ, ಆ ಪಾಲಿಸಿಗೆ ನೀಡಬೇಕಾಗಿರುವ ಬೆನಿಫಿಟ್ ಗಳಿಂದ, ಸಾಲದ ಮೇಲಿನ ಬಡ್ಡಿಯನ್ನು ಮಾತ್ರ ಕಡಿತ ಮಾಡಲಾಗುತ್ತದೆ. ಉಳಿದಂತೆ, ಪ್ರಿನ್ಸಿಪಲ್ ಮೊತ್ತವನ್ನು ಆ ಪಾಲಿಸಿಯ ಕೊನೆಯಲ್ಲಿ ನೀಡುವ ಖಚಿತ ಮೊತ್ತ ದಿಂದ ಅಥವಾ ರೈಡರ್ ಬೆನಿಫಿಟ್ ಇದ್ದಲ್ಲಿ ಅದರಿಂದ ಕಡಿತ ಮಾಡಿ ಉಳಿದ ಮೊತ್ತವನ್ನು ನೀಡಲಾಗುವುದು.  

ಪಾಲಿಸಿಯ ಮೇಲಿನ ತೆರಿಗೆಗಳು

ಭಾರತ ಸರ್ಕಾರ ಅಥವಾ ಇನ್ನೂ ಯಾವುದೇ ಸರ್ಕಾರದ ಸ್ವಾಮ್ಯತೆಗೆ ಒಳಪಟ್ಟ ಪ್ರಾದಿಕಾರಗಳು ಶಾಸನಬದ್ದವಾದ ತೆರಿಗೆಗಳನ್ನು ಜೀವ ವಿಮಾ ಪಾಲಿಸಿಗಳಿಗೆ ಅನ್ವಯವಾಗುವಂತೆ ಮಾಡಿದಲ್ಲಿ, ಅಂತಹ ತೆರಿಗೆಗಳು ಈ ಪಾಲಿಸಿಗೂ ಅನ್ವಯಿಸುತ್ತದೆ. ಹಾಗಾಗಿ ಪ್ರೀಮಿಯಂ ನೀಡುವಾಗ ಅವತ್ತಿನ ದಿನ ಯಾವ ತೆರಿಗೆಯು ಆ ಪಾಲಿಸಿಗೆ ಅನ್ವಯವಾಗುವುದೊ, ಅದನ್ನು ಸೇರಿಸಿ ನೀಡಬೇಕಾಗುತ್ತದ.

ಪ್ರೀಮಿಯಂ ಮೊತ್ತದ ಜೊತೆಗೆ, ಸರ್ವಿಸ್ ಟಾಕ್ಸ್ ಅನ್ನು ಕೂಡ ಕಟ್ಟಬೇಕಾಗುತ್ತದೆ. ಇದು, ಪ್ರೀಮಿಯಂ ಮೊತ್ತದ ಜೊತೆಗೆ ಸೇರದೆ ಸೆಪರೇಟ್ ಆಗಿ ನಮೂದಿಸಲಾಗುತ್ತದೆ. ಪ್ರೀಮಿಯಂ ಜೊತೆಯಲ್ಲಿ ನೀಡುವ ಯಾವ ತೆರಿಗೆಗಳನ್ನೂ, ಬೆನಿಫಿಟ್ ಲೆಕ್ಕಕ್ಕೆ ಸೇರಿಸುವುದಿಲ್ಲ.

ಪಾಲಿಸಿಗೆ ಫ್ರೀ ಲುಕ್ ಪೀರಿಯಡ್ (ಕೂಲಿಂಗ್ ಪೀರಿಯಡ್)

ಇತರೆ ಜೀವ ವಿಮಾ ಪಾಲಿಸಿ ಗಳಲ್ಲಿ ನೀಡುತ್ತಿರುವ ಒಂದು ಸವಲತ್ತು ಈ ಪಾಲಿಸಿಯಲ್ಲೂ ಪಾಲಿಸಿದಾರನಿಗೆ ಲಭ್ಯವಿದೆ. ಅದೆಂದರೆ, ಫ್ರೀ ಲುಕ್ ಪೀರಿಯಡ್. ಈ ಫ್ರೀ ಲುಕ್ ಪೀರಿಯಡ್ ನಲ್ಲಿ, ಪಾಲಿಸಿದಾರನು, ಪಾಲಿಸಿಯ ದಾಖಲೆಗಳು ಅವನ ಕೈ ಸೇರಿದ 15 ದಿವಸಗಳಲ್ಲಿ ಅದರಲ್ಲಿ ನಮೂದಿಸಿರುವ ಎಲ್ಲ ನಿಯಮಗಳು ಹಾಗೂ ನಿಬಂದನೆಗಳನ್ನು ಓದಿ ಅದನ್ನು ಅರ್ಥ ಮಾಡಿಕೊಳ್ಳಲು ನೀಡುವ ಕಾಲಾವಕಾಶ ಆಗಿರುತ್ತದೆ. ಅಕಸ್ಮಾತ್ ಪಾಲಿಸಿದಾರನಿಗೆ ಇದರಲ್ಲಿರುವ ಯಾವುದೇ ನಿಯಮಗಳ  ಅಥವಾ ನಿಬಂದನೆಗಳ ಬಗ್ಗೆ ಒಪ್ಪಿಗೆ ಆಗದಿದ್ದಲ್ಲಿ, ಆ ಪಾಲಿಸಿಯನ್ನು ಆತನು 15 ದಿನಗಳ ಒಳಗೆ ಎಲ್ ಐ ಸಿ ಗೆ ಹಿಂದಿರುಗಿಸಬಹುದು. ಆದರೆ, ಆ ರೀತಿ ಹಿಂದಿರುಗಿಸಲು ಕಾರಣ ನೀಡಬೇಕಾಗುತ್ತದೆ. ಪಾಲಿಸಿಯು ಕಾರ್ಪೊರೇಷನ್ ಗೆ ತಲುಪಿದ ಕೂಡಲೇ ಆ ಪಾಲಿಸಿಯನ್ನು ರದ್ದು ಮಾಡಲಾಗುವುದು. ಆದರೆ, ಹಿಂದಿರುಗಿಸುವ ಮೊತ್ತದಲ್ಲಿ, ಪ್ರೊಪೋರ್ಷನೆಟ್ ರಿಸ್ಕ್ ಪ್ರೀಮಿಯಂ (ಬೇಸ್ ಪ್ಲಾನ್ ಮತ್ತು ರೈಡರ್ ಗೆ), ವೈದ್ಯಕೀಯ ಪರೀಕ್ಷೆಗೆ ಹಾಗೂ ಅದರ ರಿಪೋರ್ಟ್ ಗಳಿಗೆ ತಗುಲಿರಬಹುದಾದ  ವೆಚ್ಚ ವನ್ನು ಅದರಿಂದ ಕಳೆದು, ಉಳಿದ ಹಣವನ್ನು ಹಿಂದಿರುಗಿಸಲಾಗುವುದು

ಪಾಲಿಸಿಯಲ್ಲಿ ಸೇರಿಲ್ಲದೆ ಇರುವುದು

ಈ ಪಾಲಿಸಿಯಲ್ಲಿ ಪಾಲಿಸಿದಾರನ ಆತ್ಮಹತ್ಯೆ ಸೇರಿರುವುದಿಲ್ಲ. ಪಾಲಿಸಿದಾರನು ಆತ್ಮಹತ್ಯೆ ಮಾಡಿಕೊಂಡಲ್ಲಿ, ಪಾಲಿಸಿಯು ತನ್ನ  ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. .

 • ಪಾಲಿಸಿದಾರನು ಪಾಲಿಸಿ ತೆಗೆದು ಕೊಂಡ ದಿವಸದಿಂದ  12 ತಿಂಗಳುಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ, ಅಂತಹ ಪಾಲಿಸಿಯು ಕಾರ್ಪೊರೇಷನ್ ಆ ಪಾಲಿಸಿಗೆ ನೀಡಬೇಕಾಗಿರುವ ಬೆನಿಫಿಟ್ ಗಳಿಗೆ ಅರ್ಹತೆ ಪಡುವುದಿಲ್ಲ. ಆದರೆ, ಅದುವರೆವಿಗೂ ನೀಡಿರುವ ಪ್ರೀಮಿಯಂ ಗಳ 80 % ಮೊತ್ತವನ್ನು ಕಾರ್ಪೊರೇಷನ್ ನಾಮಿನಿಗೆ ನೀಡುತ್ತದೆ. ಇದರಲ್ಲಿ, ಅನ್ವಯವಾಗುವ ತೆರಿಗೆ, ಎಕ್ಸ್ಟ್ರಾ ಅದೇ ಪ್ರೀಮಿಯಂ ಗಳು ಹಾಗೂ ರೈಡರ್ ಪ್ರೀಮಿಯಂ ಗಳು ಇದ್ದಲ್ಲಿ, ಅದನ್ನು ಕಡಿತಗೊಳಿಸಿ ಉಳಿಕೆ ಹಣವನ್ನು ನೀಡಲಾಗುವುದು.
 • ಅದೇ ರೀತಿ, ಪಾಲಿಸಿದಾರನು ಪಾಲಿಸಿಯನ್ನು ರಿವೈವಲ್ ಮಾಡಿದ 12 ತಿಂಗಳುಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ, ಅಲ್ಲಿಯವರೆಗೂ ನೀಡಿರುವ ಪ್ರೀಮಿಯಂ ಮೊತ್ತದ 80 % ಮೊತ್ತ  ಅಥವಾ ಸರಂಡರ್ ಮೊತ್ತ ಇವುಗಳಲ್ಲಿ ಯಾವುದು ಹೆಚ್ಚೋ ಅದನ್ನು ನೀಡಲಾಗುವುದು. ಆದರೆ ಪಾಲಿಸಿಯು ಅಸ್ಥಿತ್ವದಲ್ಲಿ ಇರಬೇಕು.

ಈ ಮೇಲಿನ ಮೊತ್ತವನ್ನು ಬಿಟ್ಟು ಬೇರೆ ಯಾವುದೇ ಕ್ಲೈಮ್ ಗಳನ್ನು ಕಾರ್ಪೊರೇಷನ್ ನೀಡುವುದಿಲ್ಲ.