ಎಲ್ ಐ ಸಿ ಜೀವನ್ ಪ್ರಗತಿ ಪ್ಲಾನ್
  • ಅತ್ಯುತ್ತಮ ಯೋಜನೆಗಳು
  • ಸುಲಭ ಹೋಲಿಕೆ
  • ತಕ್ಷಣದ ಖರೀದಿ
PX step

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಹುಟ್ಟಿದ ದಿನಾಂಕ
ಆದಾಯ
| ಲಿಂಗ

1

2

ಫೋನ್ ಸಂಖ್ಯೆ
ಹೆಸರು
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಎಲ್ ಐ ಸಿ ಯು ಜೀವ ವಿಮೆ ನೀಡುವ ಕಂಪನಿಗಳಲ್ಲಿ ಅತ್ಯಂತ ಹಿರಿದಾಗಿದ್ದು, ಭಾರತ ದೇಶದ ಪ್ರಜೆಗಳಿಗೆ ಅವರ ಅನುಕೂಲಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಿ ಆವರಿಗೆ ಅದರ ಲಾಭವನ್ನು ಪಡೆಯುವಲ್ಲಿ ಸಹಾಯ ಮಾಡುತ್ತಾ ಬಂದಿದೆ. ಎಲ್ ಐ ಸಿ ಯು ಸುಮಾರು 63 ವರ್ಷಗಳಿಂದ ಅಸ್ತಿತ್ವದಲ್ಲಿ ಇದ್ದು, ಅದು ತನ್ನ ಪಾರದರ್ಶಕತೆಯಿಂದ ಮತ್ತು ಕ್ಲೈಮ್ ಮೊತ್ತವನ್ನು ನೀಡುವುದರಲ್ಲಿ ಅತ್ಯಂತ ದೊಡ್ಡ ಸಾದನೆಯನ್ನು ಮಾಡಿರುತ್ತದೆ. ಅದು ಕೇವಲ ಜನರ ಅಗತ್ಯತೆಗಳನ್ನು ಪೂರೈಸುವುದು ಮಾತ್ರವಲ್ಲದೆ ಅವರ ಮುಂದಿರುವ ಜೀವನದಲ್ಲಿ ಅವರ ಜೊತೆ ನಿಂತು, ಅನೇಕ ರೀತಿಯಲ್ಲಿ ಸಹಾಯ ಮಾಡುತ್ತದೆ. ಎಲ್ ಐ ಸಿ ಯು ದೇಶದ ಬೇರೆ  ಬಾಗಗಳ ವಿವಿದ ರೀತಿಯ ಬಾಳನ್ನು ನಡೆಸುತ್ತಿರುವ ಜನರ ಅನುಕೂಲಕ್ಕೆ ತಕ್ಕಂತೆ ತನ್ನ ಯೋಜನೆಗಳನ್ನು ರೂಪಿಸುತ್ತಾ ಬಂದಿದೆ. ಅದು ಕೇವಲ ವಿಮೆ ಆಗಿರಬಹುದು ಅಥವಾ ಕೇವಲ ಲಾಭವನ್ನು ನೀಡುವ ಯೋಜನೆ ಆಗಿರಬಹುದು ಅಥವಾ ಆರೋಗ್ಯ ವಿಮೆ ಆಗಿರಬಹುದು. ಹೀಗೆ ಅನೇಕ ತರಹದ ಯೋಜನೆಗಳನ್ನು ನೀಡುತ್ತಲೇ ಬಂದಿದೆ.

ಎಲ್ ಐ ಸಿ ಜೀವನ್ ಪ್ರಗತಿ ಪ್ಲಾನ್ ಒಂದು ಎಂಡೋಮೆಂಟ್ ಪ್ಲಾನ್ ಆಗಿದ್ದು, ಅದರಲ್ಲಿ ಪಾಲಿಸಿದಾರನಿಗೆ ರಕ್ಷಣೆ ಮತ್ತು ಉಳಿತಾಯ ಎರಡನ್ನೂ ನೀಡುವ ಯೋಜನೆ ಆಗಿರುತ್ತದೆ.

ಎಲ್ ಐ ಸಿ ಜೀವನ್ ಪ್ರಗತಿ ಪ್ಲಾನ್ – ವಿವರಗಳು

ಈ ಪಾಲಿಸಿಯಲ್ಲಿ ಪ್ರೀಮಿಯಂ ನೀಡುವ ಅವದಿಯನ್ನು ನೀವೇ ಆಯ್ಕ ಮಾಡಿಕೊಳ್ಳಬಹುದು. ಅದು ನಿಮ್ಮ ಅನುಕೂಲಕ್ಕೆ ತಕ್ಕಂತೆ ಇರುವ ಟರ್ಮ್ ಹಾಗೂ ಸಮ್ ಅಶ್ಶುರ್ಡ್ ಮೊತ್ತದ ಮೇಲೆ ಅವಲಂಬಿತವಾಗಿರುತ್ತದೆ. ಇತರೆ ಯೋಜನೆಗಳಲ್ಲಿ ಇರುವಂತೆ, ಈ ಪಾಲಿಸಿಯಲ್ಲಿಯೂ, ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ ಇರುತ್ತದೆ. ಈ ಪಾಲಿಸಿಯ ಅಡಿಯಲ್ಲಿ, ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತದ ಮೇಲೆ ನಿಮ್ಮ ರಿಸ್ಕ್ ಕವರೆಜ್ ಇರುತ್ತದೆ. ನೀವು ಆಯ್ಕೆ ಮಾಡುವ ಪಾಲಿಸಿಯಲ್ಲಿ, ಮೊದಲ 5 ವರ್ಷಗಳಲ್ಲಿ, ರಿಸ್ಕ್ ಕವರೆಜ್ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತಕ್ಕೆ ಸರಿ ಸಮಾನ ಆಗಿರುತ್ತದೆ. 6 ನೆಯ ವರ್ಷದಿಂದ 10 ವರ್ಷದ ವರೆಗೂ ಬೇಸಿಕ್ ಸಮ್ ಅಶ್ಶುರ್ಡ್ ನ 125 % ಇರುತ್ತದೆ, 11 ರಿಂದ 15 ರವರೆಗೆ ಬೇಸಿಕ್ ಸಮ್ ಅಶ್ಶುರ್ಡ್ ನ 150 % ರಿಸ್ಕ್ ಕವರೆಜ್ ಇರುತ್ತದೆ. ಹಾಗೆಯೇ 16 ನೇ ವರ್ಷದಿಂದ 29 ವರ್ಷದವರೆಗೂ, ಬೇಸಿಕ್ ಸಮ್ ಅಶ್ಶುರ್ಡ್ ನ 200 % ರಿಸ್ಕ್ ಕವರೆಜ್ ಇರುತ್ತದೆ. ಅಂದರೆ, ಪ್ರತಿ 5 ವರ್ಷಕ್ಕೊಮ್ಮೆ, ಈ ಪಾಲಿಸಿಯ ಅಡಿಯಲ್ಲಿ, ರಿಸ್ಕ್ ಕವರೆಜ್ ಮೊತ್ತವು ಜಾಸ್ತಿ ಆಗುತ್ತಾ ಹೋಗುತ್ತದೆ. ಈ ಪ್ಲಾನ್ ಮೂಲಕ ನೀವು ಅನ್ವಯವಾಗುವ ಬೋನಸ್ ಗಳನ್ನು ಕೂಡ ಪಡೆಯಬಹುದು.

ಈ ಪಾಲಿಸಿಯ ಜೊತೆಗೆ, ಆಕಸ್ಮಿಕ ಮರಣ(Accidental death) ಹಾಗೂ ಅಂಗ ವೈಕಲ್ಯ (ಡಿಸ್ಎಬಿಲಿಟಿ)ರೈಡರ್ ಅನ್ನು ಕೂಡ ಸೇಸಿಕೊಳ್ಳಬಹುದು. ಅದಕ್ಕೆ ಹೆಚ್ಚುವರಿ ಹಣವನ್ನು ನೀಡಬೇಕಾಗುತ್ತದೆ.

ಎಲ್ ಐ ಸಿ ಜೀವನ್ ಪ್ರಗತಿ ಪ್ಲಾನ್ – ಅರ್ಹತೆ ಹಾಗೂ ಇತರೆ ನಿಬಂದನೆಗಳು

ಎಲ್ ಐ ಸಿ ಜೀವನ್ ಪ್ರಗತಿ ಪ್ಲಾನ್ ಅನ್ನು ಪಡೆಯಬೇಕಾದಲ್ಲಿ, ಈ ಕೆಳ ಕಂಡ ಅರ್ಹತೆಗೆ ಒಳ ಪಟ್ಟಿರಬೇಕಾಗುತ್ತದೆ.

ಕನಿಷ್ಠ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ

ರೂ 1,50,000

ಗರಿಷ್ಠ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ

(ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತವು ರೂ 10000 ದ ಮಲ್ಟಿಪಲ್ಸ್ ಗಳಲ್ಲಿ ಇರಬೇಕು)

ಯಾವುದೇ ಮಿತಿ ಇಲ್ಲ

ಪಾಲಿಸಿಯ ಅವದಿ (ಟರ್ಮ್)

12 ವರ್ಷಗಳಿಂದ 20 ವರ್ಷಗಳು

ಪಾಲಿಸಿ ಪಡೆಯುವಾಗ ಪಾಲಿಸಿದಾರನ ಕನಿಷ್ಠ ವಯಸ್ಸು

12 ವರ್ಷಗಳು ಮುಗಿದಿರಬೇಕು

ಪಾಲಿಸಿಯನ್ನು ಪಡೆಯಲು ಗರಿಷ್ಠ  ವಯಸ್ಸು

45 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ)

ಪಾಲಿಸಿ ಮೆಚೂರಿಟೀ ಆಗುವಾಗ ಪಾಲಿಸಿದಾರನ ಗರಿಷ್ಠ ವಯಸ್ಸು

65 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ)

ಪಾಲಿಸಿ ರಿಸ್ಕ್ ಶುರು ಆಗುವ ದಿವಸ

ಈ ಪ್ಲಾನ್ ನಲ್ಲಿ ರಿಸ್ಕ್ ಕವರೆಜ್ ಪಾಲಿಸಿಯನ್ನು ಸ್ವೀಕರಿಸಿದ ದಿನದಿಂದಲೇ ಶುರು ಆಗುತ್ತದೆ.

ಪಾಲಿಸಿ ಪ್ರೀಮಿಯಂ ನೀಡುವ ರೀತಿ

ಈ ಯೋಜನೆಯ ನಿಯಮಕ್ಕೆ ಅನುಸಾರವಾಗಿ, ಪಾಲಿಸಿದಾರನು ವರ್ಷಕ್ಕೊಮ್ಮೆ, ಅರ್ದ ವರ್ಷಕ್ಕೊಮ್ಮೆ, 3 ತಿಂಗಳಿಗೊಮ್ಮೆ, ತಿಂಗಳಿಗೊಮ್ಮೆ (ECS ಮುಖಾಂತರ ಅಥವಾ ಸಂಬಳದ ಕಡಿತದ ಮೂಲಕ) ಅವದಿ ಮುಗಿಯುವವರೆಗೂ ನೀಡಬೇಕಾಗುತ್ತದೆ.

ಪಾಲಿಸಿ ಪ್ರೀಮಿಯಂ ಮೊತ್ತದ ಉದಾಹರಣೆ

ಕೆಳಗೆ ನೀಡಿರುವ ಟೇಬಲ್ ನಲ್ಲಿ ಕೆಲವು ಪ್ರೀಮಿಯಂ ರೇಟ್ ಗಳನ್ನು (ರೂ ಗಳಲ್ಲಿ) (ಸರ್ವಿಸ್ ಟಾಕ್ಸ್ ಮೊತ್ತವನ್ನು ಹೊರತು ಪಡಿಸಿ) ನೀಡಲಾಗಿದೆ.

ಟೇಬಲ್ ನಲ್ಲಿ ನಮೂದಿಸಿರುವ ರೇಟ್ ಪ್ರತಿ ರೂ 1000 ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತಕ್ಕೆ ಅನ್ವಯವಾಗುತ್ತದೆ.

ವಯಸ್ಸು (ವರ್ಷಗಳಲ್ಲಿ)

12 ವರ್ಷದ ಟರ್ಮ್

15 ವರ್ಷದ ಟರ್ಮ್

20 ವರ್ಷದ ಟರ್ಮ್

20

88.10

69.50

49.70

30

88.45

70.00

50.75

40

90.05

72.20

54.40

೪೫

92.00

74.65

57.80

ಪಾಲಿಸಿ ಪ್ರೀಮಿಯಂ ನೀಡಿಕೆ ಮೇಲೆ ದೊರೆಯುವ ರಿಯಾಯತಿ

ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ – ಮೇಲೆ ನಮೂದಿಸಿರುವ ಮೊತ್ತದ ಮೇಲೆ 2 % ರಿಯಾಯತಿ

ಅರ್ದ ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ – ಮೇಲೆ ನಮೂದಿಸಿರುವ ಮೊತ್ತದ ಮೇಲೆ 1 % ರಿಯಾಯತಿ

3 ತಿಂಗಳಿಗೊಮ್ಮೆ ಹಾಗೂ ತಿಂಗಳಿಗೊಮ್ಮೆ ನೀಡುವ ಪ್ರೀಮಿಯಂ ಮೊತ್ತದ ಮೇಲೆ ಯಾವುದೇ ರಿಯಾಯತಿ ಇರುವುದಿಲ್ಲ.

ಪಾಲಿಸಿ ಸಮ್ ಅಶ್ಶುರ್ಡ್ ಮೊತ್ತದ ಮೇಲೆ ಸಿಗುವ ರಿಯಾಯತಿ  

ಬೇಸಿಕ್ ಸಮ್ ಅಶ್ಶುರ್ಡ್ (BSA)

ರಿಯಾಯತಿ

ರೂ 1,50,000 ದಿಂದ 2,90,000 ದವರೆಗೆ

ಯಾವುದೇ ರಿಯಾಯತಿ ಇಲ್ಲ

ರೂ3,00,000 ದಿಂದ 4,90,000 ದವರೆಗೆ

BSA ಮೇಲೆ 1.50 %

ರೂ5,00,000 ದಿಂದ 9,90,000 ದವರೆಗೆ

BSA ಮೇಲೆ 2.00 %

ರೂ 10,00,000 ಕ್ಕೆ ಮೇಲ್ಪಟ್ಟು

BSA ಮೇಲೆ 2.25 %

ಪಾಲಿಸಿ ರಿವೈವಲ್

ಪಾಲಿಸಿಯ ಮೇಲಿನ ಕಂತನ್ನು (ಪ್ರೀಮಿಯಂ ಅನ್ನು) ಗ್ರೇಸ್ ಪೀರಿಯಡ್ ಅವದಿಯಲ್ಲಿಯೂ ಕೂಡ ಕಟ್ಟದಿದ್ದಲ್ಲಿ, ಪಾಲಿಸಿಯು  ಲ್ಯಾಪ್ಸ್ ಆಗುತ್ತದೆ ಅಂದರೆ ಅದು ಸ್ತಗಿತಗೊಳ್ಳುತ್ತದೆ ಅಥವಾ ಮಾನ್ಯತೆ ಕಳೆದುಕೊಳ್ಳುತ್ತದೆ. ಈ ಪಾಲಿಸಿಯ ಅಡಿಯಲ್ಲಿ, ಆ ರೀತಿ ಲ್ಯಾಪ್ಸ್ ಆಗಿರುವ ಪಾಲಿಸಿಯನ್ನು ರಿವೈವಲ್ ಮಾಡುವ ಅವಕಾಶ ಇರುತ್ತದೆ. ಆದರೆ ಪಾಲಿಸಿದಾರನು ನೀಡದಿರುವ ಪ್ರೀಮಿಯಂ ದಿವಸದಿಂದ ಎರಡು ವರ್ಷಗಳ ಒಳಗೆ ಹಾಗೂ ಪಾಲಿಸಿಯು ಚಾಲ್ತಿಯಲ್ಲಿ ಇದ್ದಲ್ಲಿ, ರಿವೈವಲ್ ಮಾಡಿಕೊಳ್ಳಬಹುದು. ಅದುವರೆವಿಗೂ ಕಟ್ಟದೆ ಇರುವ ಪ್ರೀಮಿಯಂಗಳನ್ನು ಅದಕ್ಕೆ ಅನ್ವಯವಾಗುವ ಲೇಟ್ ಫೀ ಹಾಗೂ ಕಾರ್ಪೊರೇಷನ್ ನವರು ವಿಧಿಸುವ ಯಾವುದೇ ಬಡ್ಡಿ ಇದ್ದಲ್ಲಿ ಅದನ್ನೂ ಸಹಾ ಸೇರಿಸಿ ಒಟ್ಟು ಮೊತ್ತವನ್ನು ಕಾರ್ಪೊರೇಷನ್ ಗೆ ನೀಡಬೇಕಾಗುತ್ತದೆ. ಹಾಗೂ ಪಾಲಿಸಿ ಲ್ಯಾಪ್ಸ್ ಏಕೆ ಆಯಿತು ಎನ್ನುವುದರ ಬಗ್ಗೆ ಸೂಕ್ತ ಕಾರಣಗಳನ್ನು ನೀಡಬೇಕಾಗುತ್ತದೆ. ಮತ್ತು ಪಾಲಿಸಿಯ ಮುಂದುವರಿಕೆಯ ಬಗ್ಗೆ ಪುರಾವೆಯನ್ನು ಸಹಾ ನೀಡಬೇಕು.

ಸದರಿ ಪಾಲಿಸಿಯನ್ನು ರಿವೈವ್ ಮಾಡುವುದು ಅಥವಾ ಬಿಟ್ಟಿದ್ದು ಕಾರ್ಪೊರೇಷನ್ ಗೆ ಸೇರಿದ್ದು. ಹಾಗೂ ಪಾಲಿಸಿಯನ್ನು ಮೊದಲು ಪಾಲಿಸಿಗೆ ಅನ್ವಯವಾಗುತ್ತಿದ್ದ ನಿಯಮಗಳು ಮತ್ತು ನಿಬಂದನೆಗಳಿಗೆ ಅನುಸಾರವಾಗಿಯೇ ರಿವೈವ್ ಮಾಡುವುದೋ ಅಥವಾ ಹೊಸ ನಿಯಮಗಳು ಹಾಗೂ ನಿಬಂದನೆಗಳನ್ನು ವಿಧಿಸಿ ರಿವೈವ್ ಮಾಡುವುದೋ ಎನ್ನುವ ನಿರ್ದಾರವನ್ನು ಕಾರ್ಪೊರೇಷನ್ ತೆಗೆದುಕೊಳ್ಳುತ್ತದೆ. ಪಾಲಿಸಿಯು ಕಾರ್ಪೊರೇಷನ್ ನವರು ಒಪ್ಪಿಕೊಂಡು ಅದರ ಬಗ್ಗೆ ಪಾಲಿಸಿದಾರನಿಗೆ ಲಿಖಿತ ಮುಖೇನ ತಿಳಿಸಿದ ದಿವಸದಿಂದ ರಿವೈವಲ್ ಆಗಿದೆ ಎಂದು ಪರಿಗಣಿಸಬೇಕಾಗುತ್ತದೆ. ರೈಡರ್ ಗಳ ರಿವೈವಲ್ ಕೂಡ ಈ ರಿವೈವಲ್ ಜೊತೆಗೆ ಆಗುತ್ತದೆಯೇ ಹೊರತು, ಅದು ಸೆಪರೇಟ್ ಆಗಿ ಆಗುವುದಿಲ್ಲ.

ಪಾಲಿಸಿಯ ಪೈಡ್-ಅಪ್ ಮೌಲ್ಯ

ಪಾಲಿಸಿಯ ಮೇಲಿನ ಪ್ರೀಮಿಯಂ ಗಳನ್ನು 3 ವರ್ಷಗಳು ಸತತವಾಗಿ ಕಟ್ಟಿದ್ದಲ್ಲಿ, ಹಾಗೂ ಮುಂದಿನ ಪ್ರೀಮಿಯಂ ಗಳನ್ನೂ ಕಾರಣಾಂತರದಿಂದ ಕಟ್ಟದೆ ಇದ್ದ ಪಕ್ಷದಲ್ಲಿ, ಅಂತಹ ಪಾಲಿಸಿಯು ತನ್ನ ಮಾನ್ಯತೆಯನ್ನು ಕಳೆದುಕೊಳ್ಳುವುದಿಲ್ಲ. ಬದಲಿಗೆ ಆ ಪಾಲಿಸಿಯು ಪೈಡ್- ಅಪ್ ಪಾಲಿಸಿಯ ರೂಪದಲ್ಲಿ ಅವದಿಯ  ಕೊನೆಯವರೆಗೂ ಮುಂದುವರೆಯುತ್ತದೆ.

ಈ ಪೈಡ್-ಅಪ್ ಪಾಲಿಸಿಯಲ್ಲಿ, ಪಲ್ಲಿಸಿದಾರನ ಮರಣವೂ ಪಾಲಿಸಿಯ ಅವದಿಗೆ ಮುಂಚೆ ಆದಲ್ಲಿ, ಸಮ್ ಅಶ್ಶುರ್ಡ್ ಮೊತ್ತವನ್ನು ಕಡಿತಗೊಳಿಸಿ “ಡೆತ್ ಪೈಡ್-ಅಪ್ ಸಮ್ ಅಶ್ಶುರ್ಡ್” ಎಂದು ಕರೆಯಲಾಗುತ್ತದೆ. ಅಂದರೆ, [(ಪಾಲಿಸಿದಾರನು ನೀಡಿರುವ ಪ್ರೀಮಿಯಂಗಳು / ಪಾಲಿಸಿದಾರನು ನೀಡಿಲ್ಲದೆ ಇರುವ ಪ್ರೀಮಿಯಂಗಳು)] x ಸಮ್ ಅಶ್ಶುರ್ಡ್ ಆನ್ ಡೆತ್  = ಡೆತ್ ಪೈಡ್-ಅಪ್ ಸಮ್ ಅಶ್ಶುರ್ಡ್ ಆಗಿರುತ್ತದೆ.

ಈ ಪೈಡ್-ಅಪ್ ಪಾಲಿಸಿಯಲ್ಲಿ, ಮೆಚೂರಿಟೀ ಆದಾಗ ನೀಡುವ ಸಮ್ ಅಶ್ಶುರ್ಡ್ ಮೊತ್ತವನ್ನು ಕಡಿತಗೊಳಿಸಿ “ಮೆಚೂರಿಟೀ ಪೈಡ್-ಅಪ್ ಸಮ್ ಅಶ್ಶುರ್ಡ್” ಎಂದು ಕರೆಯಲಾಗುತ್ತದೆ. ಅಂದರೆ, [(ಪಾಲಿಸಿದಾರನು ನೀಡಿರುವ ಪ್ರೀಮಿಯಂಗಳು / ಪಾಲಿಸಿದಾರನು ನೀಡಿಲ್ಲದೆ ಇರುವ ಪ್ರೀಮಿಯಂಗಳು)] x ಸಮ್ ಅಶ್ಶುರ್ಡ್ ಆನ್ ಮೆಚೂರಿಟೀ   = ಮೆಚೂರಿಟೀ ಪೈಡ್-ಅಪ್ ಸಮ್ ಅಶ್ಶುರ್ಡ್ ಆಗಿರುತ್ತದೆ.

ಯಾವುದೇ ಪಾಲಿಸಿಯು, ಪೈಡ್-ಅಪ್ ಪಾಲಿಸಿಯಾಗಿ ಮುಂದುವರೆದಲ್ಲಿ, ಅಂತಹ ಪಾಲಿಸಿಯು ಮುಂದಿನ ಬಂಡವಾಳ ಹೂಡಿಕೆ ಹಾಗೂ ಅದರಿಂದ ಉತ್ಪನ್ನವಾಗಬಹುದಾದ ಲಾಭಗಳಿಗೆ ಅರ್ಹ ಆಗುವುದಿಲ್ಲ. ಆದರೆ, ಪಾಲಿಸಿಯ ನಿಯಮದ ಪ್ರಕಾರ, ವೆಸ್ಟೆಡ್ ಸಿಂಪಲ್ ರಿವರ್ಶನರಿ ಬೋನಸ್ ಗೆ ಅರ್ಹತೆ ಹೊಂದಿರುತ್ತದೆ. ಈ ಪಾಲಿಸಿಯ ಜೊತೆ ಸೇರಿಸಿರುವ ರೈಡರ್ ಗಳಿಗೆ ಯಾವುದೇ ಪೈಡ್-ಅಪ್ ಮೌಲ್ಯವು ಸೇರುವುದಿಲ್ಲ ಹಾಗೂ ರೈಡರ್ ಸಲುವಾಗಿ ಬರಬಹುದಾದ ಎಲ್ಲ ಬೆನಿಫಿಟ್ ಗಳು ರದ್ದಾಗುತ್ತವೆ.

ಪಾಲಿಸಿಯ ಸರಂಡರ್ ಮೌಲ್ಯ

ಪಾಲಿಸಿದಾರನು, ಪಾಲಿಸಿಯ ಮೇಲೆ ನೀಡಬೇಕಾಗಿರುವ ಪ್ರೀಮಿಯಂ ಗಳನ್ನು 3 ವರ್ಷಗಳು ಸತತವಾಗಿ ಕಟ್ಟಿದ್ದಲ್ಲಿ. ಸರಂಡರ್ ಕ್ಲಾಸ್ ಅನ್ವಯ ಆಗುತ್ತದೆ. ಅದರ ಪ್ರಕಾರ, ಪಾಲಿಸಿಯನ್ನು ಅವನು ಸರಂಡರ್ ಮಾಡಲು ಅರ್ಹತೆ ಇರುತ್ತದೆ. ಪಾಲಿಸಿಯನ್ನು ಸರಂಡರ್ ಮಾಡಿದಾಗ ನೀಡುವ ಗ್ಯಾರಂಟಿಡ್ ಸರಂಡರ್ ಮೌಲ್ಯವು ಪಾಲಿಸಿದಾರನು ಅದುವರೆವಿಗೂ ನೀಡಿರುವ ಪ್ರೀಮಿಯಂ ಮೊತ್ತದ ಪರ್ಸೆಂಟೆಜ್ ಆಗಿರುತ್ತದೆ. ಈ ಪರ್ಸೆಂಟೆಜ್ ಪಾಲಿಸಿಯ ಟರ್ಮ್ ಹಾಗೂ ಪಾಲಿಸಿಯನ್ನು ಎಷ್ಟು ವರ್ಷದ ಮೇಲೆ ಸರಂಡರ್ ಮಾಡಿದ್ದು ಎನ್ನುವುದರ ಮೇಲೆ  ನಿಗದಿಗೊಳಿಸಲಾಗುತ್ತದೆ. ಕೆಳೆಗೆ ಕಾಣಿಸಿರುವ ಟೇಬಲ್ ನಲ್ಲಿ ಅನ್ವಯವಾಗುವ ಗ್ಯಾರಂಟಿಡ್ ಸರಂಡರ್ ಫ್ಯಾಕ್ಟರ್ ವಿವರಗಳನ್ನು ನೀಡಲಾಗಿದೆ.

ಪ್ರೀಮಿಯಂ ಗಳಿಗೆ ಅನ್ವಯ ಆಗುವ ಗ್ಯಾರಂಟಿಡ್ ಸರಂಡರ್ ಫ್ಯಾಕ್ಟರ್ ವಿವರ

ಪಾಲಿಸಿಯ ವರ್ಷ

ಪಾಲಿಸಿಯ ಟರ್ಮ್

 

12

13

14

15

16

17

18

19

20

1

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

2

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

3

30.00 %

30.00 %

30.00 %

30.00 %

30.00 %

30.00 %

30.00 %

30.00 %

30.00 %

4

50.00 %

50.00 %

50.00 %

50.00 %

50.00 %

50.00 %

50.00 %

50.00 %

50.00 %

5

50.00 %

50.00 %

50.00 %

50.00 %

50.00 %

50.00 %

50.00 %

50.00 %

50.00 %

6

50.00 %

50.00 %

50.00 %

50.00 %

50.00 %

50.00 %

50.00 %

50.00 %

50.00 %

7

50.00 %

50.00 %

50.00 %

50.00 %

50.00 %

50.00 %

50.00 %

50.00 %

50.00 %

8

57.50 %

56.00 %

55.00 %

54.29 %

53.75 %

53.33 %

53.00 %

52.73 %

52.50 %

9

65.00 %

62.00 %

60.00 %

58.57 %

57.50 %

56.67 %

56.00 %

55.45 %

55.00 %

10

72.50 %

68.00 %

65.00 %

62.86 %

61.25 %

60.00 %

59.00 %

58.18 %

57.50 %

11

80.00 %

74.00 %

70.00 %

67.14 %

65.00 %

63.33 %

62.00 %

60.91 %

60.00 %

12

80.00 %

80.00 %

75.00 %

71.43 %

68.75 %

66.67 %

65.00 %

63.64 %

62.50 %

13

 

80.00 %

80.00 %

75.71 %

72.50 %

70.00 %

68.00 %

66.36 %

65.00 %

14

   

80.00 %

80.00 %

76.25 %

73.33 %

71.00 %

69.09 %

67.50 %

15

     

80.00 %

80.00 %

76.67 %

74.00 %

71.82 %

70.00 %

16

       

80.00 %

80.00 %

77.00 %

74.55 %

72.50 %

17

         

80.00 %

80.00 %

77.27 %

75.00 %

18

           

80.00 %

80.00 %

77.50 %

19

             

80.00 %

80.00 %

20

               

80.00 %

ಮೇಲೆ ಕಾಣಿಸಿರುವ ಪ್ರೀಮಿಯಂ ಗಳಲ್ಲಿ ಯಾವುದೇ ತೆರಿಗೆಗಳನ್ನು ಸೇರಿಸಿರುವುದಿಲ್ಲ. ಅನ್ವಯವಾಗುವ ತೆರಿಗೆಗಳನ್ನು ಪ್ರೀಮಿಯಂ ಮೊತ್ತದ ಜೊತೆ ಸೇರಿಸಿ  ನೀಡಬೇಕಾಗುತ್ತದೆ. ಇದರ ಜೊತೆಗೆ, ಇನ್ಯಾವುದೇ ಅಂಡರ್ ರೈಟಿಂಗ್ ಪ್ರಕಾರ ಪಾಲಿಸಿಯ ಮೇಲೆ ಹೆಚ್ಚುವರಿ ಮೊತ್ತವನ್ನು ಸೇರಿಸಿದಲ್ಲಿ , ಅದನ್ನು ಕೂಡ ಪ್ರೀಮಿಯಂ ಮೊತ್ತದ ಜೊತೆಗೆ ಸೇರಿಸಿ ನೀಡಬೇಕಾಗುತ್ತದೆ.

ಸರಂಡರ್ ಮೌಲ್ಯದ ಒಟ್ಟಿಗೆ ವೆಸ್ಟೆಡ್ ಸಿಂಪಲ್ ರಿವರ್ಶನರಿ ಬೋನಸ್ ಮೌಲ್ಯವನ್ನು ಸೇರಿಸಿ ನೀಡಲಾಗುತ್ತದೆ. ವೆಸ್ಟೆಡ್ ಸಿಂಪಲ್ ರಿವರ್ಶನರಿ ಬೋನಸ್ ಅಂದರೆ, ವೆಸ್ಟೆಡ್ ಬೋನಸ್ ಅನ್ನು ಗ್ಯಾರಂಟಿಡ್ ಸರಂಡರ್ ವ್ಯಾಲ್ಯು ಫ್ಯಾಕ್ಟರ್ ನಿಂದ ಗುಣಿಸಿದಾಗ ಬರುವ ಮೊತ್ತ. ಈ ಗ್ಯಾರಂಟಿಡ್ ಸರಂಡರ್ ವ್ಯಾಲ್ಯು ಫ್ಯಾಕ್ಟರ್ ಪರ್ಸೆಂಟೆಜ್ ರೂಪದಲ್ಲಿದ್ದು, ಅದು ಪಾಲಿಸಿಯ ಟರ್ಮ್ ಹಾಗೂ ಪಾಲಿಸಿಯನ್ನು ಎಷ್ಟು ವರ್ಷದ ಮೇಲೆ ಸರಂಡರ್ ಮಾಡಿದ್ದು ಎನ್ನುವುದರ ಮೇಲೆ  ನಿಗದಿಗೊಳಿಸಲಾಗುತ್ತದೆ. ಕೆಳೆಗೆ ಕಾಣಿಸಿರುವ ಟೇಬಲ್ ನಲ್ಲಿ ವೆಸ್ಟೆಡ್ ಬೋನಸ್ ಗೆ ಅನ್ವಯವಾಗುವ ಗ್ಯಾರಂಟಿಡ್ ಸರಂಡರ್ ಫ್ಯಾಕ್ಟರ್ ವಿವರಗಳನ್ನು ನೀಡಲಾಗಿದೆ.

ವೆಸ್ಟೆಡ್ ಬೋನಸ್ ಗೆ ಅನ್ವಯವಾಗುವ ಗ್ಯಾರಂಟಿಡ್ ಸರಂಡರ್ ಫ್ಯಾಕ್ಟರ್ ಗಳ ವಿವರ

ಪಾಲಿಸಿಯ ವರ್ಷ

ಪಾಲಿಸಿಯ ಟರ್ಮ್

 

12

13

14

15

16

17

18

19

20

1

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

2

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

3

18.60 %

18.16  %

17.85 %

17.66 %

17.58 %

17.58 %

17.03  %

16.58 %

16.22 %

4

19.18 %

18.60 %

18.16  %

17.85 %

17.66 %

17.58 %

17.58 %

17.03  %

16.58 %

5

19.93 %

19.18 %

18.60 %

18.16  %

17.85 %

17.66 %

17.58 %

17.58 %

17.03  %

6

20.85 %

19.93 %

19.18 %

18.60 %

18.16  %

17.85 %

17.66 %

17.58 %

17.58 %

7

21.99 %

20.85 %

19.93 %

19.18 %

18.60 %

18.16  %

17.85 %

17.66 %

17.58 %

8

23.38 %

21.99 %

20.85 %

19.93 %

19.18 %

18.60 %

18.16  %

17.85 %

17.66 %

9

25.05 %

23.38 %

21.99 %

20.85 %

19.93 %

19.18 %

18.60 %

18.16  %

17.85 %

10

27.06 %

25.05 %

23.38 %

21.99 %

20.85 %

19.93 %

19.18 %

18.60 %

18.16  %

11

30.00 %

27.06 %

25.05 %

23.38 %

21.99 %

20.85 %

19.93 %

19.18 %

18.60 %

12

35.00 %

30.00 %

27.06 %

25.05 %

23.38 %

21.99 %

20.85 %

19.93 %

19.18 %

13

 

35.00 %

30.00 %

27.06 %

25.05 %

23.38 %

21.99 %

20.85 %

19.93 %

14

   

35.00 %

30.00 %

27.06 %

25.05 %

23.38 %

21.99 %

20.85 %

15

     

35.00 %

30.00 %

27.06 %

25.05 %

23.38 %

21.99 %

16

       

35.00 %

30.00 %

27.06 %

25.05 %

23.38 %

17

         

35.00 %

30.00 %

27.06 %

25.05 %

18

           

35.00 %

30.00 %

27.06 %

19

             

35.00 %

30.00 %

20

               

35.00 %

ಈ ಪಾಲಿಸಿಗಳಿಗೆ ಕಾರ್ಪೊರೇಷನ್ ನವರು ಪಾಲಿಸಿದಾರನಿಗೆ ಸಹಾಯವಾಗಲಿ ಎನ್ನುವ ದೃಷ್ಟಿಯಿಂದ, ಸ್ಪೆಷಲ್ ಸರಂಡರ್ ಮೊತ್ತವನ್ನು ಅದು ಹೆಚ್ಚಾಗಿದ್ದಲ್ಲಿ ಅದನ್ನು ನೀಡಬಹುದು.

ಪಾಲಿಸಿಯ ಮೇಲೆ ಸಾಲ ಸೌಲಭ್ಯ

ಈ ಪಾಲಿಸಿಯ ಮೇಲೆ ಸಾಲ ಸೌಲಭ್ಯ ಇರುತ್ತದೆ. ಆದರೆ, ಪಾಲಿಸಿಯು ಸರಂಡರ್ ಮೌಲ್ಯವನ್ನು ಹೊಂದಿರಬೇಕು. ಈ ಸಾಲವು ಕೂಡ ಕಾರ್ಪೊರೇಷನ್ ನವರು ಕಾಲ ಕಾಲಕ್ಕೆ ನಮೂದಿಸುವ ನಿಯಮ ಹಾಗೂ ನಿಬಂದನೆಗೆ ಒಳ ಪಟ್ಟಿರುತ್ತದೆ.

ಪಾಲಿಸಿಯ ಮೇಲೆ ತೆರಿಗೆಗಳು

ಭಾರತ ಸರ್ಕಾರ ಅಥವಾ ಇನ್ನೂ ಯಾವುದೇ ಸರ್ಕಾರದ ಸ್ವಾಮ್ಯತೆಗೆ ಒಳಪಟ್ಟ ಪ್ರಾದಿಕಾರಗಳು ಶಾಸನಬದ್ದವಾದ ತೆರಿಗೆಗಳನ್ನು ಜೀವ ವಿಮಾ ಪಾಲಿಸಿಗಳಿಗೆ ಅನ್ವಯವಾಗುವಂತೆ ಮಾಡಿದಲ್ಲಿ, ಅಂತಹ ತೆರಿಗೆಗಳು ಈ ಪಾಲಿಸಿಗೂ ಅನ್ವಯಿಸುತ್ತದೆ. ಹಾಗಾಗಿ ಪ್ರೀಮಿಯಂ ನೀಡುವಾಗ ಅವತ್ತಿನ ದಿನ ಯಾವ ತೆರಿಗೆಯು ಆ ಪಾಲಿಸಿಗೆ ಅನ್ವಯವಾಗುವುದೊ, ಅದನ್ನು ಸೇರಿಸಿ ನೀಡಬೇಕಾಗುತ್ತದ.

ಪ್ರೀಮಿಯಂ ಮೊತ್ತದ ಜೊತೆಗೆ, ಸರ್ವಿಸ್ ಟಾಕ್ಸ್ ಅನ್ನು ಕೂಡ ಕಟ್ಟಬೇಕಾಗುತ್ತದೆ. ಇದು, ಪ್ರೀಮಿಯಂ ಮೊತ್ತದ ಜೊತೆಗೆ ಸೇರದೆ ಸೆಪರೇಟ್ ಆಗಿ ನಮೂದಿಸಲಾಗುತ್ತದೆ. ಪ್ರೀಮಿಯಂ ಜೊತೆಯಲ್ಲಿ ನೀಡುವ ಯಾವ ತೆರಿಗೆಗಳನ್ನೂ, ಬೆನಿಫಿಟ್ ಲೆಕ್ಕಕ್ಕೆ ಸೇರಿಸುವುದಿಲ್ಲ.

ಪಾಲಿಸಿಗೆ ಫ್ರೀ ಲುಕ್ ಪೀರಿಯಡ್

ಇತರೆ ಜೀವ ವಿಮಾ ಪಾಲಿಸಿ ಗಳಲ್ಲಿ ನೀಡುತ್ತಿರುವ ಒಂದು ಸವಲತ್ತು ಈ ಪಾಲಿಸಿಯಲ್ಲೂ ಪಾಲಿಸಿದಾರನಿಗೆ ಲಭ್ಯವಿದೆ. ಅದೆಂದರೆ, ಫ್ರೀ ಲುಕ್ ಪೀರಿಯಡ್. ಈ ಫ್ರೀ ಲುಕ್ ಪೀರಿಯಡ್ ನಲ್ಲಿ, ಪಾಲಿಸಿದಾರನು, ಪಾಲಿಸಿಯ ದಾಖಲೆಗಳು ಅವನ ಕೈ ಸೇರಿದ 15 ದಿವಸಗಳಲ್ಲಿ ಅದರಲ್ಲಿ ನಮೂದಿಸಿರುವ ಎಲ್ಲ ನಿಯಮಗಳು ಹಾಗೂ ನಿಬಂದನೆಗಳನ್ನು ಓದಿ ಅದನ್ನು ಅರ್ಥ ಮಾಡಿಕೊಳ್ಳಲು ನೀಡುವ ಕಾಲಾವಕಾಶ ಆಗಿರುತ್ತದೆ. ಅಕಸ್ಮಾತ್ ಪಾಲಿಸಿದಾರನಿಗೆ ಇದರಲ್ಲಿರುವ ಯಾವುದೇ ನಿಯಮಗಳ  ಅಥವಾ ನಿಬಂದನೆಗಳ ಬಗ್ಗೆ ಒಪ್ಪಿಗೆ ಆಗದಿದ್ದಲ್ಲಿ, ಆ ಪಾಲಿಸಿಯನ್ನು ಆತನು 15 ದಿನಗಳ ಒಳಗೆ ಎಲ್ ಐ ಸಿ ಗೆ ಹಿಂದಿರುಗಿಸಬಹುದು. ಆದರೆ, ಆ ರೀತಿ ಹಿಂದಿರುಗಿಸಲು ಕಾರಣ ನೀಡಬೇಕಾಗುತ್ತದೆ. ಪಾಲಿಸಿಯು ಕಾರ್ಪೊರೇಷನ್ ಗೆ ತಲುಪಿದ ಕೂಡಲೇ ಆ ಪಾಲಿಸಿಯನ್ನು ರದ್ದು ಮಾಡಲಾಗುವುದು. ಆದರೆ, ಹಿಂದಿರುಗಿಸುವ ಮೊತ್ತದಲ್ಲಿ, ಪ್ರೊಪೋರ್ಷನೆಟ್ ರಿಸ್ಕ್ ಪ್ರೀಮಿಯಂ (ಬೇಸ್ ಪ್ಲಾನ್ ಮತ್ತು ರೈಡರ್ ಗೆ), ವೈದ್ಯಕೀಯ ಪರೀಕ್ಷೆಗೆ ಹಾಗೂ ಅದರ ರಿಪೋರ್ಟ್ ಗಳಿಗೆ ತಗುಲಿರಬಹುದಾದ  ವೆಚ್ಚ ವನ್ನು ಅದರಿಂದ ಕಳೆದು, ಉಳಿದ ಹಣವನ್ನು ಹಿಂದಿರುಗಿಸಲಾಗುವುದು.

ಪಾಲಿಸಿಯಲ್ಲಿ ಸೇರಿಲ್ಲದೆ ಇರುವುದು

ಈ ಪಾಲಿಸಿಯಲ್ಲಿ ಪಾಲಿಸಿದಾರನ ಆತ್ಮಹತ್ಯೆ ಸೇರಿರುವುದಿಲ್ಲ. ಪಾಲಿಸಿದಾರನು ಆತ್ಮಹತ್ಯೆ ಮಾಡಿಕೊಂಡಲ್ಲಿ, ಪಾಲಿಸಿಯು ತನ್ನ  ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. .

  • ಪಾಲಿಸಿದಾರನು ಪಾಲಿಸಿ ತೆಗೆದು ಕೊಂಡ ದಿವಸದಿಂದ  12 ತಿಂಗಳುಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ, ಅಂತಹ ಪಾಲಿಸಿಯು ಕಾರ್ಪೊರೇಷನ್ ಆ ಪಾಲಿಸಿಗೆ ನೀಡಬೇಕಾಗಿರುವ ಬೆನಿಫಿಟ್ ಗಳಿಗೆ ಅರ್ಹತೆ ಪಡುವುದಿಲ್ಲ. ಆದರೆ, ಅದುವರೆವಿಗೂ ನೀಡಿರುವ ಪ್ರೀಮಿಯಂ ಗಳ 80 % ಮೊತ್ತವನ್ನು ಕಾರ್ಪೊರೇಷನ್ ನಾಮಿನಿಗೆ ನೀಡುತ್ತದೆ. ಇದರಲ್ಲಿ, ಅನ್ವಯವಾಗುವ ತೆರಿಗೆ, ಎಕ್ಸ್ಟ್ರಾ ಪ್ರೀಮಿಯಂ ಗಳು ಹಾಗೂ ರೈಡರ್ ಪ್ರೀಮಿಯಂ ಗಳು ಇದ್ದಲ್ಲಿ, ಅದನ್ನು ಕಡಿತಗೊಳಿಸಿ ಉಳಿಕೆ ಹಣವನ್ನು ನೀಡಲಾಗುವುದು.
  • ಅದೇ ರೀತಿ, ಪಾಲಿಸಿಯನ್ನು ರಿವೈವಲ್ ಮಾಡಿದ 12 ತಿಂಗಳುಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ, ಅಲ್ಲಿಯವರೆಗೂ ನೀಡಿರುವ ಪ್ರೀಮಿಯಂ ಮೊತ್ತದ 80 % ಮೊತ್ತ  ಅಥವಾ ಸರಂಡರ್ ಮೊತ್ತ ಇವುಗಳಲ್ಲಿ ಯಾವುದು ಹೆಚ್ಚೋ ಅದನ್ನು ನೀಡಲಾಗುವುದು. ಆದರೆ ಪಾಲಿಸಿಯು ಅಸ್ಥಿತ್ವದಲ್ಲಿ ಇರಬೇಕು.

ಈ ಮೇಲಿನ ಮೊತ್ತವನ್ನು ಬಿಟ್ಟು ಬೇರೆ ಯಾವುದೇ ಕ್ಲೈಮ್ ಗಳನ್ನು ಕಾರ್ಪೊರೇಷನ್ ನೀಡುವುದಿಲ್ಲ.

ಪಾಲಿಸಿಗೆ ನೀಡಬಹುದಾದ ಬೆನಿಫಿಟ್ ಬಗ್ಗೆ ಒಂದು ಉದಾಹರಣೆ

ಪಾಲಿಸಿಯನ್ನು ಪಡೆಯುವಾಗ ಪಾಲಿಸಿದಾರನ ವಯಸ್ಸು

30 ವರ್ಷಗಳು

ಪಾಲಿಸಿ ಅವದಿ (ಟರ್ಮ್)

16 ವರ್ಷಗಳು

ಪ್ರೀಮಿಯಂ ನೀಡುವ ಅವದಿ (ಟರ್ಮ್)

16 ವರ್ಷಗಳು

ಪ್ರೀಮಿಯಂ ನೀಡುವ ರೀತಿ

ವರ್ಷಕ್ಕೊಮ್ಮೆ

ಬೇಸಿಕ್ ಸಮ್ ಅಶ್ಶುರ್ಡ್

ರೂ 1,50,000

ವಾರ್ಷಿಕ ಲೆಕ್ಕದಲ್ಲಿ ಪ್ರೀಮಿಯಂ ಮೊತ್ತ

ರೂ 9570.00

ಆ) ಪಾಲಿಸಿದಾರನ ಮರಣ ಆದಲ್ಲಿ ಸಿಗಬಹುದಾದ ಮೊತ್ತ

ವರ್ಷದ ಕೊನೆಯಲ್ಲಿ

ವರ್ಷದ ಕೊನೆಯಲ್ಲಿ ನೀಡಿರುವ ಪ್ರೀಮಿಯಂ ಮೊತ್ತ(ರೂ ಗಳಲ್ಲಿ)

ಪಾಲಿಸಿಯ ಬಾಬ್ತು ಪಾಲಿಸಿದಾರನ ಮರಣ ಆದ ಪಕ್ಷದಲ್ಲಿ ನೀಡುವ ಬೆನಿಫಿಟ್ ಮೊತ್ತ (ಆ ವರ್ಷದ ಕೊನೆಗೆ)

   

ಗ್ಯಾರಂಟಿಡ್

ಬದಲಾಗಬಹುದಾದ ಮೊತ್ತ

ಒಟ್ಟು ಮೊತ್ತ

     

ಸಿನಾರಿಯೊ 1

4 %

ಸಿನಾರಿಯೊ 2

8%

ಸಿನಾರಿಯೊ 1

4 %

ಸಿನಾರಿಯೊ 2

8%

1

9570

1,50,000

1050

4200

151050

154200

2

19140

1,50,000

2100

8400

152100

158400

3

28710

1,50,000

3150

12600

153150

162600

4

38280

1,50,000

4200

16800

154200

166800

5

47850

1,50,000

5250

21000

155250

171000

6

57420

187500

6300

25200

193800

212700

7

66990

187500

7350

29400

194850

216900

8

76560

187500

8400

33600

195900

221100

9

86130

187500

9450

37800

196950

225300

10

95700

187500

10500

42000

198000

229500

11

105270

225000

11550

46200

236550

271200

12

114840

225000

12600

50400

237600

275400

13

124410

225000

13650

54600

238650

279600

14

133980

225000

14700

58800

239700

283800

15

143550

225000

15750

63750

240750

288750

16

153120

300000

16800

67950

316800

367950

ಆ) ಪಾಲಿಸಿಯು  ಅವದಿ ಮುಗಿಸಿದಲ್ಲಿ  ಸಿಗಬಹುದಾದ ಮೊತ್ತ

ವರ್ಷದ ಕೊನೆಯಲ್ಲಿ

ವರ್ಷದ ಕೊನೆಯಲ್ಲಿ ನೀಡಿರುವ ಪ್ರೀಮಿಯಂ ಮೊತ್ತ(ರೂ ಗಳಲ್ಲಿ)ಪಾಲಿಸಿಯು ಅವದಿ ಮುಗಿಸಿದ ನಂತರ ನೀಡುವ ಬೆನಿಫಿಟ್ ಮೊತ್ತ

   

ಗ್ಯಾರಂಟಿಡ್

ಬದಲಾಗಬಹುದಾದ ಮೊತ್ತ

ಒಟ್ಟು ಮೊತ್ತ

     

ಸಿನಾರಿಯೊ 1

4 %

ಸಿನಾರಿಯೊ 2

8%

ಸಿನಾರಿಯೊ 1

4 %

ಸಿನಾರಿಯೊ 2

8%

1

9570

0

0

0

0

0

2

19140

0

0

0

0

0

3

28710

0

0

0

0

0

4

38280

0

0

0

0

0

5

47850

0

0

0

0

0

6

57420

0

0

0

0

0

7

66990

0

0

0

0

0

8

76560

0

0

0

0

0

9

86130

0

0

0

0

0

10

95700

0

0

0

0

0

11

105270

0

0

0

0

0

12

114840

0

0

0

0

0

13

124410

0

0

0

0

0

14

133980

0

0

0

0

0

15

143550

0

0

0

0

0

16

153120

150000

16800

67950

166800

217950

  • ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ ನಲ್ಲಿ ಸರ್ವಿಸ್ ಟಾಕ್ಸ್, ಎಕ್ಸ್ಟ್ರಾ ಪ್ರೀಮಿಯಂ ಗಳು ಹಾಗೂ ರೈಡರ್ಸ್ ಗಳ ಬಾಬ್ತು ನೀಡಬೇಕಾದ ಹೆಚ್ಚುವರಿ ಮೊತ್ತ ಸೇರಿರುವುದಿಲ್ಲ
  • ಈ ಪ್ಲಾನ್ ಅಡಿಯಲ್ಲಿ, ಒಟ್ಟಾರೆ ಡೆತ್ ಬೆನಿಫಿಟ್ ಮೊತ್ತವು ಒಟ್ಟು ಪ್ರೀಮಿಯಂ ಗಳ ಮೊತ್ತದ 105 % ಗಿಂತ ಕಮ್ಮಿ ಇರುವುದಿಲ್ಲ.
  • ಕಾರ್ಪೊರೇಷನ್ ನವರು ಪಾಲಿಸಿದಾರನಿಗೆ ಅನುಕೂಲವಾದಲ್ಲಿ, ಸ್ಪೆಷಲ್ ಸರಂಡರ್ ವ್ಯಾಲ್ಯು ಮೊತ್ತವನ್ನು ನೀಡಬಹುದು

- / 5 ( Total Rating)