ಎಲ್ ಐ ಸಿ ಜೀವನ್ ರಕ್ಷಕ್ ಯೋಜನೆ
 • ಅತ್ಯುತ್ತಮ ಯೋಜನೆಗಳು
 • ಸುಲಭ ಹೋಲಿಕೆ
 • ತಕ್ಷಣದ ಖರೀದಿ
PX step

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಹುಟ್ಟಿದ ದಿನಾಂಕ
Tobaccoತಂಬಾಕು?
ಆದಾಯ
| ಲಿಂಗ

1

2

ದಯವಿಟ್ಟು ಇತರ ಮಾಹಿತಿಯನ್ನು ನಮೂದಿಸಿ
ಫೋನ್ ಸಂಖ್ಯೆ
ಹೆಸರು
ಇಮೇಲ್
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಎಲ್ ಐ ಸಿ ಯು ಅದರ ಗ್ರಾಹಕರಿಗೆ ಅವರಿಗೆ ಸರಿಯಾದ ರೀತಿಯಲ್ಲಿ ಅನುಕೂಲ ಆಗುವಂತಹ ವಿವಿದ ವಿಮಾ ಯೋಜನೆಗಳನ್ನು ನೀಡುತ್ತ ಬಂದಿದೆ.. ಹಾಗೂ ವಿಮಾ  ಕ್ಲೆಯಿಮ್ ಅನ್ನು ವಿಳಂಬ ಮಾಡದೆ ನೀಡುವಲ್ಲಿ ಮುಂಚೂಣಿಯಲ್ಲಿರುತ್ತದೆ. ಕಂಪನಿಯ ವಿವಿದ ಯೋಜನೆಗಳಲ್ಲಿ ಯಾವುದೇ ತರಹದ ಮರೆ ಮಾಚಿದ ವೆಚ್ಚಗಳು ಸೇರಿಲ್ಲದೆ ಇರುವ ರೀತಿ ಹಾಗೂ ಆದರ ವ್ಯವಹಾರದಲ್ಲಿ ಒಂದು ಪಾರದರ್ಶಕತೆಯನ್ನು ಎಲ್ ಐ ಸಿ ಯು ಮೊದಲಿಂದಲೂ ರೂಡಿಸಿಕೊಂಡು ಬಂದಿರುವುದು ಎಲ್ಲರಿಗೂ ತಿಳಿದ ವಿಷಯವೇ . ಅದೇ ಸಂಪ್ರದಾಯವನ್ನು ಮುಂದುವರಿಸಿಕೊಂಡು, ಎಲ್ ಐ ಸಿ ಯು ಈಗ ಎಲ್ ಐ ಸಿ ಜೀವನ್ ರಕ್ಷಕ್ ಯೋಜನೆಯನ್ನು ಬಿಡುಗಡೆ ಮಾಡಿರುತ್ತದೆ. ಇದರ ಹೆಸರೇ ತಿಳಿಸುವಂತೆ ಇದು ಒಂದು ವಿಮಾ ಯೋಜನೆ ಆಗಿದ್ದು ಮೆಚೂರಿಟೀ ಬೆನಿಫಿಟ್ ಕೂಡ ನೀಡುತ್ತದೆ.

ನೀವು, ನಿಮ್ಮ ಮುಂದಿನ ಭವಿಷ್ಯಕ್ಕಾಗಿ ಕಡಿಮೆ ಹಣದಲ್ಲಿ, ಒಂದು ಉತ್ತಮವಾದ ವಿಮಾ ಯೋಜನೆಯನ್ನು ಹುಡುಕುತ್ತಿದ್ದಲ್ಲಿ, ಎಲ್ ಐ ಸಿ ಜೀವನ್ ರಕ್ಷಕ್ ಯೋಜನೆಯನ್ನು ಆರಿಸಿಕೊಳ್ಳುವುದು ಸೂಕ್ತ. ಈ ಪಾಲಿಸಿಯು ಇನ್ನೂ ಅನೇಕ ಅನ್ವಯಿಸುವ ಲಾಭದಾಯಕ ಬೆನಿಫಿಟ್ ಗಳನ್ನು ಪಾಲಿಸಿದಾರನಿಗೆ ಅಥವಾ ಅವನ ನಾಮಿನಿಗೆ ನೀಡುತ್ತದೆ. ವಿಮಾ ಯೋಜನೆಯ ತಜ್ಞರ ಪ್ರಕಾರ ಈ ಯೋಜನೆಯು ಅನೇಕ ಬೆನಿಫಿಟ್ ಗಳನ್ನು ಪಾಲಿಸಿದಾರನಿಗೆ ನೀಡುವುದರಿಂದ, ಈ ಯೋಜನೆಯು ಒಂದು ಅತ್ಯಂತ ಜನಪ್ರಿಯ ಯೋಜನೆ ಆಗಿರುತ್ತದೆ.  ಹೆಚ್ಚು ಹೆಚ್ಚು ಪಾಲಿಸಿದಾರರು ಈ ಯೋಜನೆಯ ಬಗ್ಗೆ ಒಲವು ತೋರಿಸುತ್ತಾರೆ.

ಎಲ್ ಐ ಸಿ ಜೀವನ್ ರಕ್ಷಕ್ ಯೋಜನೆಯು ಒಂದು ನಿಯಮಿತವಾಗಿ ಕಂತನ್ನು ನೀಡಬೇಕಾದ ಹಾಗೂ ನಾನ್-ಲಿಂಕ್ಡ್ ಎಂಡೋಮೆಂಟ್ ಪಾಲಿಸಿ ಆಗಿರುತ್ತದೆ. ಈ ಯೋಜನೆಯ ಪ್ರಕಾರ, ಒಟ್ಟಾರೆ ಸಮ್ ಅಶ್ಶುರ್ಡ್ಮ ಮೊತ್ತವು ರೂ 2 ಲಕ್ಷವನ್ನು ಮೀರುವುದಿಲ್ಲ.

ಎಲ್ ಐ ಸಿ ಜೀವನ್ ರಕ್ಷಕ್ ಯೋಜನೆಯು ಒಂದೇ ರೂ 1 ಲಕ್ಷಕ್ಕಿಂತ ಕಡಿಮೆ ಇರುವ ಸಮ್ ಅಶ್ಶುರ್ಡ್ ಮೊತ್ತವನ್ನು ನೀಡುವ ಯೋಜನೆ ಆಗಿರುತ್ತದೆ. ಇದು ಒಂದು ಲೋಯರ್ ಇನ್ಕಮ್ ಗ್ರೂಪ್ ಅಂದರೆ ಕಡಿಮೆ ಆದಾಯ ಬರುವಂತಹ ಜನರನ್ನು ಗಮನದಲ್ಲಿ ಇಟ್ಟು ಕೊಂಡು ನಿಯೋಜಿಸಿರುವ ಯೋಜನೆ ಆಗಿರುತ್ತದೆ.

ಈ ಪಾಲಿಸಿಯು ಪಾಲಿಸಿದಾರರಿಗೆ ಸಾಕಷ್ಟು ಫ್ಲೇಕ್ಸಿಬಿಲಿಟಿ ನೀಡುವ ಯೋಜನೆ. ಈ ಯೋಜನೆಯನ್ನು ನಿಮ್ಮ 8 ವರ್ಷದ ಮಗುವಿನ ಹೆಸರಿನಲ್ಲೂ ಕೂಡ ಮಾಡಬಹುದು. ಪಾಲಿಸಿದಾರರು ಕಂತುಗಳನ್ನು ನಿಯಮ ಮತ್ತು ಶರತ್ತುಗಳಿಗೆ ಅನ್ವಯವಾಗುವಂತೆ ನಿಯಮಿತವಾಗಿ ಕಟ್ಟಬೇಕಾಗುತ್ತದೆ. ಮೆಚೂರಿಟೀ ವಯಸ್ಸು ಆದ ತಕ್ಷಣ ಪಾಲಿಸಿಯು ನಿಮಗೆ ನೀವು ಸೂಚಿಸಿರುವ ಸಮ್ ಅಶ್ಶುರ್ಡ್ ಮೊತ್ತವನ್ನು ಹಾಗೂ ಅದರ ಜೊತೆಗೆ ಲಾಯಲ್ಟಿ ಹೆಚ್ಚುವರಿ (ಇದ್ದಲ್ಲಿ) ಮೊತ್ತ ಸೇರಿಸಿ ನೀಡುತ್ತದೆ. ಹಾಗೆಯೇ ಪಾಲಿಸಿಯ ಅವದಿಯ ಒಳಗೆ ಪಾಲಿಸಿದಾರನು ಮರಣ ಹೊಂದಿದಲ್ಲಿ, ನಾಮಿನಿಯು  ಸಮ್ ಅಶ್ಶುರ್ಡ್ ಮೊತ್ತ ಹಾಗೂ ಲಾಯಲ್ಟಿ ಹೆಚ್ಚುವರಿ (ಇದ್ದಲ್ಲಿ) ಮೊತ್ತ ವನ್ನು ಸೇರಿಸಿ ಪಡೆಯಲು ಅರ್ಹನಾಗುತ್ತಾನೆ.

ನೀವು ಒಂದು ಲೋಯರ್ ಇನ್ಕಮ್ ಗ್ರೂಪ್ ಅಥವಾ ಕಡಿಮೆ ಆದಾಯ ಬರುವಂತಹ ಗುಂಪಿಗೆ ಸೇರಿದ್ದಲ್ಲಿ ಈ ಪಾಲಿಸಿಯು ಅತ್ಯಂತ ಸೂಕ್ತವಾದದ್ದು. ಇದರಿಂದ ನೀವು ನಿಮ್ಮ ಮುಂದಿನ ದಿನಗಳ ಆರ್ಥಿಕ ಅಗತ್ಯತೆಗಳನ್ನು ಸಾದ್ಯವಾದಷ್ಟು ಪೂರೈಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ.

ಎಲ್ ಐ ಸಿ ಜೀವನ್ ರಕ್ಷಕ್ ಯೋಜನೆ – ವೈಶಿಷ್ಟ್ಯತೆಗಳು (ಫೀಚರ್ಸ್)

 • ಇದು ಒಂದು ಲಾಭದಲ್ಲಿ ಭಾಗಿಯಾಗುವ ಯೋಜನೆ ಆದ್ದರಿಂದ, ಈ ಸಾಂಪ್ರದಾಯಿಕ (ಕನ್ವೆನ್ಶನಲ್) ಎಂಡೋಮೆಂಟ್ ಯೋಜನೆಯ ಅಡಿಯಲ್ಲಿ  ಪಾಲಿಸಿದಾರನು ಕಂಪನಿಯ  ಲಾಭ ಗಳಿಸುವಿಕೆಯಲ್ಲಿ ಹಣವನ್ನು ವಿನಿಮಯ ಮಾಡಿದ ಹಾಗೆ ಆಗುತ್ತದೆ.
 • ಆದರೆ ಈ ಯೋಜನೆಯು ಒಂದು ಕಡಿಮೆ ಕವರೆಜ್ (ವಿಮಾ ಮೊತ್ತ) ನೀಡುವ ಯೋಜನೆ ಆಗಿದ್ದು, ಪಾಲಿಸಿದಾರನು ಗರಿಷ್ಠ ರೂ 2 ಲಕ್ಷ (ಒಬ್ಬರಿಗೆ) ಮಾತ್ರ ಕವರೆಜ್ (ವಿಮಾ ಮೊತ್ತ) ತೆಗೆದು ಕೊಳ್ಳಬಹುದು.
 • ಈ ಯೋಜನೆಯ ಅಡಿಯಲ್ಲಿ ಪಾಲಿಸಿದಾರರು ಪಾಲಿಸಿಯ  ಅವದಿ ಮುಗಿಯುವವರೆಗೂ ಕಂತಿನ ಹಣವನ್ನು ನೀಡಬೇಕಾಗುತ್ತದೆ.
 • ನೀವು ಪಾಲಿಸಿಯ ಅವದಿ ಮುಗಿದ ನಂತರವೂ ಕಂತುಗಳನ್ನು ಮುಂದುವರೆಸಬೇಕಾದಲ್ಲಿ, ಹೆಚ್ಚುವರಿ ಕವರೆಜ್ (ವಿಮಾ ಮೊತ್ತ) ಅನ್ನು ತೆಗೆದುಕೊಳ್ಳಬಹುದು. ಈ ಹೆಚ್ಚುವರಿ ಕವರೆಜ್ ಅನ್ನು  ನೀವು ಎಲ್ ಐ ಸಿ ಯ ಯಾವುದೇ ರೆಪ್ರೆಸೆಂಟೇಟಿವ್ ಮೂಲಕ ಮಾಡಿಸಿಕೊಳ್ಳಬಹುದು.
 • ಪಾಲಿಸಿಯ ಅವದಿಯು ಮುಗಿದು, ಪಾಲಿಸಿದಾರನು ಜೀವಂತವಾಗಿದ್ದಲ್ಲಿ, ಅಂತಹ ಪಾಲಿಸಿದಾರನಿಗೆ, ಮೆಚೂರಿಟೀ ಬೆನಿಫಿಟ್ ನೀಡಲಾಗುವುದು.
 • ಆದರೆ ಪಾಲಿಸಿದಾರನು ಪಾಲಿಸಿ ಅವದಿ ಮುಗಿಯುವುದರ ಒಳಗೆ ಮರಣ ಹೊಂದಿದಲ್ಲಿ ಅವನು ಸೂಚಿಸಿರುವ ನಾಮಿನಿಗೆ ಎಲ್ಲ ತರಹದ ಅನ್ವಯ ಆಗುವ ಡೆತ್ ಬೆನಿಫಿಟ್ ಸಿಗುತ್ತದೆ.
 • ಈ ಯೋಜನೆಯ ಅಡಿಯಲ್ಲಿ ಪಾಲಿಸಿದಾರನಿಗೆ  ಆಪಘಾತ ಆದಲ್ಲಿ ವಿಮೆಯ ಎರಡರಷ್ಟು ಮೊತ್ತಕ್ಕೆ ಅರ್ಹತೆ ಇರುತ್ತದೆ . ಆದರೆ ಅದಕ್ಕಾಗಿ ಹೆಚ್ಚುವರಿ ಮೊತ್ತವನ್ನು ಕಂತುಗಳಲ್ಲಿ ನೀಡಬೇಕಾಗುತ್ತದೆ.

ಎಲ್ ಐ ಸಿ ಜೀವನ್ ರಕ್ಷಕ್ ಯೋಜನೆ – ಬೆನಿಫಿಟ್ ಗಳು

ಬೋನಸ್ - ಈ ಯೋಜನೆಗೆ ಅನ್ವಯವಾಗುವ ನಿಯಮ ಮತ್ತು ಶರತ್ತುಗಳಿಗೆ ಬದ್ದವಾಗಿ, ಯೋಜನೆಯು ಕಂಪನಿಯ ಹಣ ಹೂಡಿಕೆ ಯಲ್ಲಿ ಭಾಗವಹಿಸುವುದರಿಂದ, ಕಂಪನಿಯು ನೀಡುವ ಬೋನಸ್ ಗಳಿಗೆ ಪಾಲಿಸಿದಾರನು ಅರ್ಹವಾಗಿರುತ್ತಾನೆ . ಹಾಗಾಗಿ  ಈ ಯೋಜನೆಯ ಅಡಿಯಲ್ಲಿ ಲಾಯಲ್ಟಿ ಹೆಚ್ಚುವರಿ ಮೊತ್ತವನ್ನು ಅಪೇಕ್ಷಿಸಬಹುದು. ಈ ಯೋಜನೆಯನ್ನು ಯಾವುದೇ ವೈದ್ಯಕೀಯ ಪರೀಕ್ಷೆಗೆ ಒಳಪಡದೇ ಪಡೆದುಕೊಳ್ಳಬಹುದು.  ಆದರೆ ಪಾಲಿಸಿದಾರರು, ತಮ್ಮ ಆರೋಗ್ಯದ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಿದರೆ ಒಳ್ಳೆಯದು. ಇದರಿಂದಾಗಿ, ಈ ಪಾಲಿಸಿಯು ಯಾವುದೇ ತೊಂದರೆ ಇಲ್ಲದೆ ದೊರಕುವ ಒಂದು ಯೋಜನೆ.

ಮೆಚೂರಿಟೀ ಬೆನಿಫಿಟ್ - ನಿಯಮ ಮತ್ತು ಷರತ್ತುಗಳಿಗೆ ಬದ್ದವಾಗಿ, ಪಾಲಿಸಿದಾರನು ಯೋಜನೆಯ ಅವದಿಯನ್ನು ಮುಗಿಸಿದಲ್ಲಿ ಅವನಿಗೆ / ಅವಳಿಗೆ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ ಹಾಗೂ ಅದರ ಜೊತೆಗೆ ಲಾಯಲ್ಟಿ ಹೆಚ್ಚುವರಿ ಮೊತ್ತವನ್ನು ಸೇರಿಸಿ ಹಣವನ್ನು ನೀಡಲಾಗುವುದು.

ಡೆತ್ ಬೆನಿಫಿಟ್ (ಮರಣದ ನಂತರದ ಬೆನಿಫಿಟ್) - ಈ ಯೋಜನೆಯ ಅಡಿಯಲ್ಲಿ ತೆಗೆದು ಕೊಂಡಿರುವ ಪಾಲಿಸಿಯು 5 ವರ್ಷಗಳನ್ನು ಮುಗಿಸಿ ಪಾಲಿಸಿಯ ಅವದಿಯ ಮಧ್ಯದಲ್ಲಿ ಪಾಲಿಸಿದಾರನು ಮರಣ ಹೊಂದಿದಲ್ಲಿ, ಅವನು ನಮೂದಿಸಿರುವ ನಾಮಿನಿಗೆ ಕಂಪನಿಯು ಸಮ್ ಅಶ್ಶುರ್ಡ್ ಹಾಗೂ ಅದರ ಜೊತೆ ಲಾಯಲ್ಟಿ ಹೆಚ್ಚುವರಿ ಹಣವನ್ನು ಕೂಡ ನೀಡುತ್ತದೆ.

ಪಾಲಿಸಿದಾರನು ಅಪಘಾತದಲ್ಲಿ ಮರಣ ಹೊಂದಿದಲ್ಲಿ, ಸಮ್ ಅಶ್ಶುರ್ಡ್ ಹಣವು ಸಾಮಾನ್ಯವಾಗಿ ಮರಣ ಹೊಂದಿದಾಗ ನೀಡುವ ಹಣಕ್ಕಿಂತ ಹೆಚ್ಚಿರುತ್ತದೆ. ಆದರೆ ಇದು ಕಂಪನಿಯು ವಿವೇಚನೆಗೆ ಬಿಟ್ಟಿರುವ ವಿಚಾರ.

ಕಂಪನಿಯು ಈ ಯೋಜನೆಯ ಅಡಿಯಲ್ಲಿ ನೀಡುವ ಬೇಸಿಕ್ ಸಮ್ ಅಶ್ಶುರೆನ್ಸ್

 1. ಕಂಪನಿಯು ಪಾಲಿಸಿದಾರನು ನೀಡುವ ಒಟ್ಟಾರೆ  ವಾರ್ಷಿಕ ಕಂತಿನ ಹಣದ 10 ಪಟ್ಟು ಸಮ್ ಅಶ್ಸುರ್ ಮಾಡುತ್ತದೆ
 2. ಪಾಲಿಸಿದಾರನು ಪಾಲಿಸಿಯ ಅವದಿಯ ಮಧ್ಯದಲ್ಲಿ ಮರಣ ಹೊಂದಿದಲ್ಲಿ, ಅವನು ಅಲ್ಲಿಯವರೆಗೆ ನೀಡಿರುವ ಕಂತುಗಳ ಒಟ್ಟಾರೆ ಹಣದ 105 % ಹಣವನ್ನು ನೀಡಲಾಗುತ್ತದೆ.
 3. ಅದೇ ಪಾಲಿಸಿಯು 5 ವರ್ಷವನ್ನು ಮುಗಿಸಿದ್ದು, ಪಾಲಿಸಿದಾರನು ತದ ನಂತರ ಮರಣ ಹೊಂದಿದಲ್ಲಿ, ಅವನು ನಮೂದಿಸಿರುವ ನಾಮಿನಿಗೆ ಕಂಪನಿಯು ಅಶ್ಶುರ್ಡ್ ಮೊತ್ತವನ್ನು ಪಾಲಿಸಿಯು ಮುಗಿಯುವುದರ ಒಳಗೆ ನೀಡುತ್ತದೆ.

ಎಲ್ ಐ ಸಿ ಜೀವನ್ ರಕ್ಷಕ್ ಯೋಜನೆ – ಯೋಜನೆಯ ವಿವರಗಳು

 

ಕನಿಷ್ಠ (ಮಿನಿಮಮ್)

ಗರಿಷ್ಠ (ಮ್ಯಾಕ್ಷಿಮಮ್)

ಪಾಲಿಸಿಯನ್ನು ತೆಗೆದುಕೊಳ್ಳಲು ಅರ್ಹ ವಯಸ್ಸು

8 ವರ್ಷಗಳು

55 ವರ್ಷಗಳು

ಮೆಚೂರಿಟೀ ಆಗುವಾಗ ಪಾಲಿಸಿದಾರನ ವಯಸ್ಸು

 

70 ವರ್ಷಗಳು

ಪಾಲಿಸಿ ಅವದಿ (ಟರ್ಮ್) ವರ್ಷಗಳಲ್ಲಿ

10 ವರ್ಷಗಳು

20 ವರ್ಷಗಳು

ಕಂತುಗಳನ್ನು ನೀಡುವ ಅವದಿ (ಟರ್ಮ್)  (ವರ್ಷಗಳಲ್ಲಿ)

ಪಾಲಿಸಿಯ ಆವದಿಗೆ ಸೀಮಿತ ಆಗಿರುತ್ತದೆ

ವಿಮೆಯ ಕಂತು – ಹೇಗೆ ಮತ್ತು ಯಾವಾಗ

ವರ್ಷಕ್ಕೊಮ್ಮೆ ಅಥವಾ ಆರ್ದ ವರ್ಷಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ

ಸಮ್ ಅಶ್ಶುರ್ಡ್ (ಒಬ್ಬರಿಗೆ)

ರೂ 75,000

ರೂ 2,00,000

ಎಲ್ ಐ ಸಿ ಜೀವನ್ ರಕ್ಷಕ್ ಯೋಜನೆಯ ಸವಿಸ್ತಾರವಾದ ವಿವರಗಳು

ವಯಸ್ಸಿನ ಮಿತಿ

ಈ ಯೋಜನೆಯನ್ನು ಕೊಳ್ಳಲು ಬಯಸುವ ಪಾಲಿಸಿದಾರನಿಗೆ ಕನಿಷ್ಠ 8 ವರ್ಷಗಳು ಆಗಿರಬೇಕು. ಹಾಗೆಯೇ ಪಾಲಿಸಿದಾರನು ತನ್ನ ವಯಸ್ಸು ಗರಿಷ್ಠ 55 ವರ್ಷದವರೆಗೂ ಈ ಪಾಲಿಸಿಯನ್ನು ಕೊಳ್ಳಲು ಅರ್ಹತೆ ಇರುತ್ತದೆ. ಆದರೆ ಪಾಲಿಸಿ ಮೆಚೂರಿಟೀ ಆಗುವಾಗ  ಪಾಲಿಸಿದಾರನ ವಯಸ್ಸು 70 ವರ್ಷವನ್ನು ಮೀರಿರಬಾರದು.

ಪಾಲಿಸಿಯ ಅವದಿ (ಟರ್ಮ್)

ಈ ಅತಿ ಹೆಚ್ಚು ಜನಪ್ರಿಯ ಯೋಜನೆಯಾದ  ಎಲ್ ಐ ಸಿ ಜೀವನ್ ರಕ್ಷಕ್ ಯೋಜನೆಯು ಅಡಿಯಲ್ಲಿ ಪಾಲಿಸಿ ಅವದಿಯು ಕನಿಷ್ಠ 10 ವರ್ಷದ್ದು ಆಗಿರಬೇಕು. ಹಾಗೆಯೇ ಇದನ್ನು 20 ವರ್ಷದವರೆಗೂ ಮುಂದುವರೆಸಿಕೊಂಡು ಹೋಗಬಹುದು. ಕಂತುಗಳನ್ನು ನೀಡುವ ಅವದಿ (ವರ್ಷಗಳಲ್ಲಿ) ಅಂದರೆ ಪ್ರೀಮಿಯಂ ಪೆಯಿಂಗ್ ಟರ್ಮ್ ಪಾಲಿಸಿಯ ಆವದಿಗೆ ಸಮನಾಗಿ ಇರುತ್ತದೆ. ಕಂತುಗಳನ್ನು ವರ್ಷಕ್ಕೊಮ್ಮೆ ಅಥವಾ ಅರ್ದ ವರ್ಷಕ್ಕೊಮ್ಮೆ ಅಥವಾ ತಿಂಗಳಿಗೆ ಒಮ್ಮೆ ಕಟ್ಟಬಹುದು.

ಸಮ್ ಅಶ್ಶುರ್ಡ್

ಈ ಪಾಲಿಸಿಯಲ್ಲಿ ಸಮ್ ಅಶ್ಶುರ್ಡ್ ಮೊತ್ತವು ಕನಿಷ್ಠ ರೂ 75,000 ಇದ್ದು, ಗರಿಷ್ಠ ರೂ 2,00,000 ಇರುತ್ತದೆ.

ಪ್ರೀಮಿಯಂ ಲೆಕ್ಕಾಚಾರದ ವಿವರಣೆ

ಈ ಕೆಳಕಂಡ ವಿವರಣೆಯಲ್ಲಿ, ವರ್ಷಕ್ಕೊಮ್ಮೆ ನೀಡುವ ಕಂತಿನ ಲೆಕ್ಕವನ್ನು ಪಾಲಿಸಿಯ ಆವದಿಯು 20 ವರ್ಷ ಎಂದು ಪರಿಗಣಿಸಿ ಲೆಕ್ಕಿಸಲಾಗಿದೆ. ಈ ಕೆಳಗೆ ನಮೂದಿಸಿರುವ ಪ್ರೀಮಿಯಂ ಮೊತ್ತದಲ್ಲಿ ತೆರಿಗೆ ಸೇರಿರುವುದಿಲ್ಲ.

 

ಸಮ್ ಅಶ್ಶುರ್ಡ್

ವಯಸ್ಸು (ಪಾಲಿಸಿ ತೆಗೆದುಕೊಳ್ಳುವ ಸಮಯದಲ್ಲಿ

ರೂ 2 ಲಕ್ಷ ಗಳಿಗೆ

ರೂ 1 ಲಕ್ಷಕ್ಕೆ

ರೂ 75,000 ಕ್ಕೆ

30 ವರ್ಷಗಳು

6746.00

3523.00

2642.00

40 ವರ್ಷಗಳು

7109.00

3704.00

2778.00

50 ವರ್ಷಗಳು

8069.00

4185.00

3138.00

ಎಲ್ ಐ ಸಿ ಜೀವನ್ ರಕ್ಷಕ್ ಯೋಜನೆಯ ಬಗ್ಗೆ ಬೇರೆ ವಿಷಯಗಳು

ಗ್ರೇಸ್ ಪೀರಿಯಡ್

ಈ ಯೋಜನೆಯ ನಿಯಮ ಮತ್ತು ಶರತ್ತುಗಳಿಗೆ ಬದ್ದವಾಗಿ, ಪಾಲಿಸಿದಾರನಿಗೆ ಕಂತಿನ ಹಣವನ್ನು ಕಟ್ಟಲು 30 ದಿವಸಗಳ ಗ್ರೇಸ್ ಪೀರಿಯಡ್ ದೊರೆಯುತ್ತದೆ. ಗ್ರೇಸ್ ಪೀರಿಯಡ್ ಒಳಗೂ ಕೂಡ ಕಂತಿನ ಹಣವನ್ನು ಕಟ್ಟದಿದ್ದಲ್ಲಿ ಪಾಲಿಸಿಯು ಮಾನ್ಯತೆಯನ್ನು ಕಳೆದುಕೊಳ್ಳುತ್ತದೆ.

ಸರಂಡರ್ ಬೆನಿಫಿಟ್

ಬೇರೆ ಎಲ್ ಐ ಸಿ ಯೋಜನೆಗಳಲ್ಲಿ ಇರುವಂತೆ, ಈ ಯೋಜನೆಯಲ್ಲಿಯೂ ಪಾಲಿಸಿದಾರನಿಗೆ ಸರಂಡರ್ ಬೆನಿಫಿಟ್ ದೊರೆಯುತ್ತದೆ. ಆದರೆ ಈ ಬೆನಿಫಿಟ್ ಕೆಲವು ನಿಯಮ ಮತ್ತು ಶರತ್ತುಗಳಿಗೆ ಒಳ ಪಟ್ಟಿರುತ್ತದೆ. ಪಾಲಿಸಿಯನ್ನು ಸರಂಡರ್ ಮಾಡಲು, ಇದರ ಆವದಿಯು 3 ವರ್ಸ ಮುಗಿದಿರಬೇಕು. ಹಾಗೆಯೇ ಪಾಲಿಸಿಯು ಸರಂಡರ್ ಮೌಲ್ಯ ಹೊಂದಿರಬೇಕು.

ಕೂಲಿಂಗ್ ಪೀರಿಯಡ್  

ಇತರೆ ಯೋಜನೆಗಳಿಗೆ ದೊರಕುವಂತೆ ಈ ಯೋಜನೆಗೂ ಕೂಡ ಕೂಲಿಂಗ್ ಪೀರಿಯಡ್ ಸೌಲಭ್ಯ ದೊರೆಯುತ್ತದೆ. ಅಂದರೆ ಪಾಲಿಸಿದಾರನಿಗೆ ಪಾಲಿಸಿ ಮುಟ್ಟಿದ 15 ದಿವಸಗಳನ್ನು ಕೂಲಿಂಗ್ ಪೀರಿಯಡ್ ಆಗಿ ನೀಡಲಾಗುತ್ತದೆ. ಈ 15 ದಿವಸಗಳಲ್ಲಿ, ಪಾಲಿಸಿದಾರನು ಪಾಲಿಸಿಯ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಸ್ವೀಕರಿಸಬಹುದು. ಅವನಿಗೆ ಸರಿ ಹೊಂದದಿದ್ದ ಪಕ್ಷದಲ್ಲಿ, ಪಾಲಿಸಿಯನ್ನು ಹಿಂತಿರುಗಿಸಬಹುದು.

ಪಾಲಿಸಿಯಲ್ಲಿ ಸೇರ್ಪಡೆಯಾಗದ ಕೆಲವು ವಿಷಯಗಳು

ಇತರೆ ಯೋಜನೆಗಳ ಅಡಿಯಲ್ಲಿ ಇರುವಂತೆ, ಪಾಲಿಸಿದಾರನು ಪಾಲಿಸಿಯನ್ನು ತೆಗೆದುಕೊಂಡ 12 ತಿಂಗಳ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಲ್ಲಿ, ಅವನು ನಮೂದಿಸಿರುವ  ನಾಮಿನಿಗೆ, ಕಂಪನಿಯು ಅದುವರೆಗೂ ನೀಡಿರುವಂತ ಕಂತುಗಳ ಒಟ್ಟಾರೆ ಮೊತ್ತದಲ್ಲಿ 80% ಹಣವನ್ನು ನೀಡುತ್ತದೆ. ಅದೇ ಪಾಲಿಸಿಯನ್ನು ನವೀಕರಿಸಿದ 12 ತಿಂಗಳ ಒಳಗೆ ಪಾಲಿಸಿದಾರನು ಆತ್ಮಹತ್ಯೆ ಮಾಡಿಕೊಂಡಲ್ಲಿ ಅವನ ನಾಮಿನಿಗೆ ಅದುವರೆಗೂ ಪಾಲಿಸಿಯು ಹೊಂದಿರುವ ಸರಂಡರ್ ಮೊತ್ತ ಅಥವಾ ಕಂತುಗಳ 80% ಮೊತ್ತವನ್ನು ನೀಡಲಾಗುತ್ತದೆ.

ಈ ಯೋಜನೆಯನ್ನು ಪಡೆಯಲು ಬೇಕಾದ ದಾಖಲೆಗಳು

ಈ ಯೋಜನೆಯನ್ನು ಪಡೆಯಲು ಇಚ್ಚಿಸುವವರು ಈ ಕೆಳಕಂಡ ದಾಖಲೆಗಳನ್ನು ನೀಡಬೇಕಾಗುತ್ತದೆ,

 • ಪಾಲಿಸಿಯನ್ನು ನೀಡುವುದಕ್ಕೋಸ್ಕರ ಎಲ್ ಐ ಸಿ ಗೆ ಅಪ್ಲಿಕೇಷನ್ ನೀಡಬೇಕು.
 • ಜೊತೆಗೆ ಪಾಲಿಸಿದಾರನ  ಆರೋಗ್ಯದ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಬೇಕು.
 • ಅದರ ಜೊತೆಯಲ್ಲಿ ಕೇ ವೈ ಸಿ (ಕೆ ವೈ ಸಿ) ದಾಖಲೆಯನ್ನು ಕೂಡ ನೀಡಬೇಕು.
 • ವೈದ್ಯಕೀಯ ತಪಾಸಣೆ ಸಾಮಾನ್ಯವಾಗಿ ಬೇಕಾಗುವುದಿಲ್ಲ. ಆದರೆ ಕೆಲವು ಸಂಧರ್ಭದಲ್ಲಿ ಎಲ್ ಐ ಸಿ ಯು ಪಾಲಿಸಿದಾರನಿಗೆ ವೈದ್ಯಕೀಯ ತಪಾಸಣೆಗೆ ಒಳ ಪಡಲು ನಿರ್ದೇಶಿಸಬಹುದು.

- / 5 ( Total Rating)