ಎಲ್ ಐ ಸಿ ಜೀವನ್ ಸಾತಿ ಪ್ಲಾನ್
 • ಅತ್ಯುತ್ತಮ ಯೋಜನೆಗಳು
 • ಸುಲಭ ಹೋಲಿಕೆ
 • ತಕ್ಷಣದ ಖರೀದಿ
PX step

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಹುಟ್ಟಿದ ದಿನಾಂಕ
ಆದಾಯ
| ಲಿಂಗ

1

2

ಫೋನ್ ಸಂಖ್ಯೆ
ಹೆಸರು
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಇದು ಒಂದು ಯೂನಿಟ್ ಲಿಂಕ್ಡ್ ಇನ್ಸೂರೆನ್ಸ್ ಪ್ಲಾನ್ ಆಗಿದ್ದು, ದಂಪತಿಗಳು ಒಂದೇ ಪಾಲಿಸಿಯ ಅಡಿಯಲ್ಲಿ ಇಬ್ಬರಿಗೂ ಇನ್ಸೂರೆನ್ಸ್ ಕವರೇಜ್ ಪಡೆಯಬಹುದು. ಪ್ರೋಪೊಸರ್ ಅನ್ನು ಪ್ರಿನ್ಸಿಪಲ್ ಲೈಫ್ ಅಶ್ಶುರ್ಡ್ (P.L.A) ಎಂದು ಪರಿಗಣಿಸಿ ಮತ್ತೊಬ್ಬ ಅಂದರೆ ಗಂಡ / ಹೆಂಡತಿ ಯನ್ನು ಸ್ಪೌಸ್ ಲೈಫ್ ಅಶ್ಶುರ್ಡ್ (S.L.A) ಎಂದು ಪರಿಗಣಿಸಲಾಗುವುದು. ಈ ಪ್ಲಾನ್ ತನ್ನ ವಿಶೇಷತೆಯಿಂದ ಅತ್ಯಂತ ಜನಪ್ರಿಯ ಪ್ಲಾನ್ ಗಳಲ್ಲಿ ಒಂದಾಗಿದೆ. ಈ ಯೋಜನೆಯು P.L.A ಅಂದರೆ ಪ್ರಪೋಸರ್ ಗೆ ಸಮ್ ಅಶ್ಶುರ್ಡ್ ಮೊತ್ತವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡುತ್ತದೆ. ಈ ಸಮ್ ಅಶ್ಶುರ್ಡ್ ಮೊತ್ತದಲ್ಲಿ ಇಬ್ಬರ ಜೀವ ವಿಮೆಯೂ ಸೇರುತ್ತದೆ. ಈ ಸಮ್ ಅಶ್ಶುರ್ಡ್ ಮೊತ್ತವು ಪಾಲಿಸಿದಾರನು ನೀಡಲು ಒಪ್ಪಿರುವ ಸಿಂಗಲ್ ಪ್ರೀಮಿಯಂ ಅಥವಾ ರೆಗ್ಯುಲರ್ ಪ್ರೀಮಿಯಂ, ವಯಸ್ಸು ಹಾಗೂ ಪ್ರೀಮಿಯಂ ಮೊತ್ತದ ಮೇಲೆ ಅವಲಂಬಿತವಾಗಿರುತ್ತದೆ.ಎಲ್ ಐ ಸಿ ಜೀವನ್ ಸಾತಿ ಪ್ಲಾನ್ ಒಂದು ಎಂಡೋಮೆಂಟ್  ಅಶ್ಸ್ಯುರೆನ್ಸ್ ನೀಡುವ ಪ್ಲಾನ್ ಆಗಿದ್ದು, ಅದು ಕುಟುಂಬದಲ್ಲಿನ ಗಂಡ ಹಾಗೂ ಹೆಂಡತಿ ಇಬ್ಬರಿಗೂ ಜೀವ ವಿಮೆ ನೀಡುತ್ತದೆ. ಈ ಯೋಜನೆಯು ಪಾಲಿಸಿದಾರರಿಗೆ ಆರ್ಥಿಕ ರಕ್ಷಣೆ ನೀಡುತ್ತದೆ. ಹಾಗೆಯೇ, ಅವರಿಗೆ ಪಾಲಿಸಿಯು ಅವದಿಯು ಮುಗಿದು  ಮೆಚೂರಿಟೀ ಆದಾಗ, ಮೆಚೂರಿಟೀ ಬೆನಿಫಿಟ್ ಅನ್ನು ಕೂಡ ನೀಡುತ್ತದೆ.

ರೆಗ್ಯುಲರ್ ಪ್ರೀಮಿಯಂ ಪಾಲಿಸಿಗಳಲ್ಲಿ, P.L.A ಅವದಿಯ ಮಧ್ಯದಲ್ಲಿ ಮರಣ ಹೊಂದಿದಲ್ಲಿ, ಈ ಪ್ಲಾನಿನ ನಿಯಮದ ಪ್ರಕಾರ, ಆತನ / ಅವಳ ಸಂಗಾತಿಗೆ (ಅಂದರೆ ಹೆಂಡತಿ / ಗಂಡನಿಗೆ) ಮುಂದೆ ನೀಡಬೇಕಾಗಿರುವ ಎಲ್ಲಾ ಪ್ರೀಮಿಯಂ ಗಳು ಹಾಗೂ ಹಿಂದಿನ ಯಾವುದಾದರೂ ಪ್ರೀಮಿಯಂ ಅನ್ನು ಪಾವತಿಸಬೇಕಾಗಿದ್ದಲ್ಲಿ ಅದನ್ನು ಕೂಡ ವೈವ್ ಆಫ್ ಮಾಡಲಾಗುವುದು.

ಈ ಪ್ಲಾನ್ ಅಡಿಯಲ್ಲಿ P.L.A ಹೆಚ್ಚುವರಿ ಬಂಡವಾಳ ಹೂಡಿಕೆಯನ್ನು ಮಾಡಲು ಅವಕಾಶ ಇರುತ್ತದೆ. ಅದಕ್ಕೋಸ್ಕರ ಆತನು / ಅವಳು ಹೆಚ್ಚುವರಿ ಪ್ರೀಮಿಯಂ  ಮೊತ್ತವನ್ನು ನೀಡಬೇಕಾಗುತ್ತದೆ.

ಎಲ್ ಐ ಸಿ ಜೀವನ್ ಸಾತಿ ಪ್ಲಾನ್ – ಅರ್ಹತೆಗಳು

ಎಲ್ ಐ ಸಿ ಜೀವನ್ ಸಾತಿ ಪ್ಲಾನ್ ನಲ್ಲಿ ಈ ಕೆಳ ಕಂಡ ಅರ್ಹತೆಗಳಿದ್ದು ಪಾಲಿಸಿದಾರನು ಪಾಲಿಸಿಯನ್ನು ಪಡೆಯಲು ಆ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ.

a

ಪಾಲಿಸಿ ಪಡೆಯಲು ಕನಿಷ್ಠ ವಯಸ್ಸು

18 ವರ್ಷಗಳು ಮುಗಿದಿರಬೇಕು

b

ಪಾಲಿಸಿ ಪಡೆಯಲು ಗರಿಷ್ಠ ವಯಸ್ಸು

55 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ)

c

ಪಾಲಿಸಿ ಮೆಚೂರಿಟೀ ಆಗುವಾಗ ಪಾಲಿಸಿದಾರನ ವಯಸ್ಸು

70 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ)

d

ಪಾಲಿಸಿಯ ಅವದಿ (ಟರ್ಮ್)

ರೆಗ್ಯುಲರ್ ಪ್ರೀಮಿಯಂ ಪಾಲಿಸಿಗಳಿಗೆ – 10, 15 ರಿಂದ 20 ವರ್ಷಗಳವರೆಗೆ

ಸಿಂಗಲ್ ಪ್ರೀಮಿಯಂ ಪಾಲಿಸಿಗಳು – 10 ರಿಂದ 20 ವರ್ಷಗಳವರೆಗೆ

e

ಕನಿಷ್ಠ ಪ್ರೀಮಿಯಂ

ರೆಗ್ಯುಲರ್ ಪ್ರೀಮಿಯಂ:

15 ರಿಂದ 20 ವರ್ಷಗಳ ಪಾಲಿಸಿಗಳಿಗೆ – ರೂ 10000 ಪ್ರತಿ ವರ್ಷಕ್ಕೆ

10 ವರ್ಷದ  ಪಾಲಿಸಿಗೆ – ರೂ 15000 ಪ್ರತಿ ವರ್ಷಕ್ಕೆ

ತಿಂಗಳಿನ ಪ್ರೀಮಿಯಂ (ECS) ಮೋಡ್

15 ರಿಂದ 20 ವರ್ಷಗಳ ಪಾಲಿಸಿಗಳಿಗೆ – ರೂ 1000 ಪ್ರತಿ ತಿಂಗಳಿಗೆ

10 ವರ್ಷದ ಪಾಲಿಸಿಗೆ – ರೂ 1500 ಪ್ರತಿ ತಿಂಗಳಿಗೆ

ಸಿಂಗಲ್ ಪ್ರೀಮಿಯಂ :

10 ವರ್ಷದ ಪಾಲಿಸಿಗೆ – ರೂ 40000

ಎಲ್ ಐ ಸಿ ಜೀವನ್ ಸಾತಿ ಪ್ಲಾನ್ – ಆಲೋಕೇಶನ್ ಚಾರ್ಜಸ್

ಸಿಂಗಲ್ ಪ್ರೀಮಿಯಂ ಪಾಲಿಸಿಗೆ ಅನ್ವಯವಾಗುವ ಆಲೋಕೇಶನ್ ಚಾರ್ಜಸ್ ಈ ಕೆಳ ಕಂಡಂತಿದೆ.

ಪ್ರೀಮಿಯಂ ಬ್ಯಾಂಡ್

ಆಲೋಕೇಶನ್ ಚಾರ್ಜಸ್

ರೂ 15,00,000 ದವರೆಗೆ

4.25 %

ರೂ 15,00,001 ರ ಮೇಲ್ಪಟ್ಟು

4.00 %

ಎಲ್ ಐ ಸಿ ಜೀವನ್ ಸಾತಿ ಪ್ಲಾನ್ – ಪೇಮೆಂಟ್ ಆಪ್ಶನ್ ಗಳು

ವರ್ಷಕ್ಕೊಮ್ಮೆಪ್ರಪೊಸರ್ (PLA) ಆದವನು / ಆದವಳು ಪ್ರೀಮಿಯಂ ಅನ್ನು ಪಾವತಿಸಲು ಈ ಕೆಳ ಕಂಡ ಆಪ್ಶನ್ ಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.

 • ಅರ್ದ ವರ್ಷಕ್ಕೊಮ್ಮೆ
 • 3 ತಿಂಗಳಿಗೊಮ್ಮೆ
 • ತಿಂಗಳಿಗೊಮ್ಮೆ ಪೂರ್ಣ ಅವದಿಯವರೆಗೆ (ECS ಮೂಲಕ ಮಾತ್ರವೇ)
 • PLA ಯು ಸಿಂಗಲ್ ಪ್ರೀಮಿಯಂ ಕೊಡುವ ಮೂಲಕವೂ ಪಡೆಯಬಹುದು.

ಎಲ್ ಐ ಸಿ ಜೀವನ್ ಸಾತಿ ಪ್ಲಾನ್ – ಬೆನಿಫಿಟ್ ಗಳು

ಎಲ್ ಐ ಸಿ ಜೀವನ್ ಸಾತಿ ಪಾಲಿಸಿಯಲ್ಲಿ ಅನೇಕ ಬೆನಿಫಿಟ್ ಗಳು ಇದ್ದು ಅದನ್ನು ಪಾಲಿಸಿದಾರರಿಗೆ ನೀಡಲಾಗುವುದು. ಈ ಬೆನಿಫಿಟ್ ಗಳು ಸದರಿ ಪಾಲಿಸಿಯು ಒಂದು ಸಾರ್ವಜನಿಕರು ಬಯಸುವ ಇನ್ಸೂರೆನ್ಸ್ ಯೋಜನೆ ಆಗಿರುತ್ತದೆ.

ಬಾಗಶಃ ಹಣವನ್ನು ಹಿಂಪಡೆಯುವಿಕೆ

ಸದರಿ ಪಾಲಿಸಿಯ ಬಾಬ್ತು ಎಲ್ ಐ ಸಿ ಯವರು ನೀಡಿರುವ ಯೂನಿಟ್ ಗಳಲ್ಲಿ ಬಾಗಶಃ ಯೂನಿಟ್ ಗಳನ್ನು ನಗದಾಗಿ ಪರಿವರ್ತಿಸಲು ಅವಕಾಶ ಇರುತ್ತದೆ. ಆದರೆ, ಪಾಲಿಸಿಯು ಕನಿಷ್ಠ 3 ವರ್ಷಗಳು ಮುಗಿಸಿರಬೇಕು. ಈ ಬಾಗಶಃ ತೆಗೆದುಕೊಳ್ಳುವ ಹಣವು ಒಂದು ಖಚಿತ ಮೊತ್ತವಾಗಿರಬಹುದು.

ಪಾಲಿಸಿಯ ಬಾಬ್ತು 3 ವರ್ಷಗಳು ಪ್ರೀಮಿಯಂ ಅನ್ನು ನೀಡಿರದಿದ್ದಲ್ಲಿ, ಅಂತಹ ಪಾಲಿಸಿದಾರನಿಗೆ / ಪಾಲಿಸಿದಾರಳಿಗೆ ಈ ಬೆನಿಫಿಟ್ ಲಭ್ಯ ಆಗುವುದಿಲ್ಲ.

ರೆಗ್ಯುಲರ್ ಪ್ರೀಮಿಯಂ ಪಾಲಿಸಿಗಳಲ್ಲಿ, 3 ವರ್ಷಗಳಿಗಿಂತ ಕಡಿಮೆ ಪ್ರೀಮಿಯಂ ಅನ್ನು ಪಾವತಿಸಿದ್ದಲ್ಲಿ, ಈ ಬೆನಿಫಿಟ್ ಲಭ್ಯವಾಗುವುದಿಲ್ಲ.

ಸಿಂಗಲ್ ಪ್ರೀಮಿಯಂ ಪಾಲಿಸಿಗಳಲ್ಲಿ, ವಿಮಾದಾರನು ಬಾಗಶಃ ಹಣವನ್ನು ಹಿಂಪಡೆಯಲು, ಪಾಲಿಸಿದಾರನ ಫಂಡ್ ನಲ್ಲಿ, ಕನಿಷ್ಠ ರೂ 5000 ಇದ್ದಲ್ಲಿ ಅಥವಾ ಸಿಂಗಲ್ ಪ್ರೀಮಿಯಂ ನ 10 % ಮೊತ್ತ ಇವೆರಡರಲ್ಲಿ ಯಾವುದು ಹೆಚ್ಚೋ ಅಷ್ಟು ಮೊತ್ತವನ್ನು ಹಿಂಪಡೆಯಬಹುದು.

ಟಾಪ್-ಅಪ್ ಪ್ರೀಮಿಯಂ ಗಳ ಹಣವನ್ನು ಬಾಗಶಃ ಹಿಂಪಡೆಯುವಿಕೆ

ಪಾಲಿಸಿದಾರನ ಫಂಡ್ ನಿಂದ ಟಾಪ್ -ಅಪ್ ಪ್ರೀಮಿಯಂ ಗಳ ಹಣವನ್ನು ಬಾಗಶಃ ಹಿಂಪಡೆಯಲು ಆ ಟಾಪ್ -ಅಪ್ ಪ್ರೀಮಿಯಂ ಆಲೋಕೇಶನ್ ಆದ 3 ವರ್ಷಗಳು ಕಳೆದಿರಬೇಕು. ಈ ನಿಬಂದನೆಯು ಟಾಪ್ – ಅಪ್ ಅನ್ನು ಪಾಲಿಸಿಯ ಅವದಿಯ ಕೊನೆಯ 3 ವರ್ಷದಲ್ಲಿ ಮಾಡಿದ್ದಲ್ಲಿ ಅನ್ವಯಿಸುವುದಿಲ್ಲ.

P.L.A ಯ ಮರಣವು ಅವದಿಯ ಮಧ್ಯದಲ್ಲಿ ಆದಲ್ಲಿ, ಇನ್ನೊಬ್ಬ ವಿಮಾದಾರನು ಮೇಲಿನ 3 ವರ್ಷದ ನಿರ್ಭಂದವಿಲ್ಲದೆ ಹಣವನ್ನು ಹಿಂಪಡೆಯಬಹುದು.

ಸ್ವಿಚಿಂಗ್

ಸ್ವಿಚಿಂಗ್ ಅನ್ನು ಈ ಪಾಲಿಸಿಯಲ್ಲಿ ನೀಡಲಾಗುತ್ತದೆ. ಈ ಪಾಲಿಸಿಯ ಪ್ರಕಾರ, ಸ್ವಿಚಿಂಗ್ P.L.A ಗೆ ಪಾಲಿಸಿಯ ಅವದಿ ಯಲ್ಲಿ ನೀಡಲಾಗುತ್ತದೆ. ಅಕಸ್ಮಾತ್ ಪಾಲಿಸಿದಾರನ ಮರಣವು ಆವದಿಯ ಮಧ್ಯದಲ್ಲಿ ಆದಲ್ಲಿ, S.L.A ಗೆ ಸ್ವಿಚಿಂಗ್ ಆಪ್ಶನ್ ನೀಡಲಾಗುತ್ತದೆ. ಆಯ್ಕೆ ಮಾಡಿದ  ಪಾಲಿಸಿಯ ವರ್ಷದಲ್ಲಿ, 4 ಸ್ವಿಚ್ ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಅಲ್ಲಿಂದ ಮುಂದಿನ ಸ್ವಿಚ್ ಗಳಿಗೆ ಪ್ರತಿ ಸ್ವಿಚ್ ಗೆ ರೂ 100 ಅನ್ನು ಚಾರ್ಜ್ ಮಾಡಲಾಗುತ್ತದೆ.

ರಿಸ್ಕ್ ಕವರ್ ಅನ್ನು ಹೆಚ್ಚು / ಕಮ್ಮಿ ಮಾಡುವ ಅವಕಾಶ

ಈ ಪ್ಲಾನ್ ಅಡಿಯಲ್ಲಿ, ರಿಸ್ಕ್ ಕವರ್ ಅನ್ನು ಹೆಚ್ಚು ಮಾಡುವ ಅವಕಾಶ ಇರುವುದಿಲ್ಲ. P.L.A ಗೆ ತನಗೆ ಅಥವಾ ಆತನ / ಅವಳ ಹೆಂಡತಿ / ಗಂಡ ನ ರಿಸ್ಕ್ ಕವರ್ ಅನ್ನು ಕಮ್ಮಿ ಮಾಡುವ ಅವಕಾಶ ಇರುತ್ತದೆ. ಆ ಅವಕಾಶವನ್ನು ವರ್ಷಕ್ಕೆ ಒಂದು ಬಾರಿ ಪಾಲಿಸಿಯ ಅವದಿ ಮುಗಿಯುವವರೆಗೂ ನೀಡಲಾಗುತ್ತದೆ. ಆದರೆ ಪಾಲಿಸಿಯ ಬಾಬ್ತು ನೀಡಬೇಕಾದ ಎಲ್ಲಾ ಪ್ರೀಮಿಯಂ ಗಳನ್ನು ಪಾವತಿಸಿರಬೇಕಾಗುತ್ತದೆ.

ಒಂದು ಬಾರಿ ಪಾಲಿಸಿಯ ರಿಸ್ಕ್ ಕವರ್ ಅನ್ನು ಕಮ್ಮಿ ಮಾಡಿದ ಮೇಲೆ ಮತ್ತೆ ಮುಂದಿನ ದಿನಗಳಲ್ಲಿ ಹೆಚ್ಚು ಅಥವಾ ಕಮ್ಮಿ ಮಾಡಲು ಅವಕಾಶ ಇರುವುದಿಲ್ಲ.

ಡೆತ್ ಬೆನಿಫಿಟ್ ಸಮ್ ಅಶ್ಶುರ್ಡ್ ಅನ್ನು ಪಾಲಿಸಿದಾರನ ಫಂಡ್ ಗೆ ವರ್ಗ ಮಾಡುವಿಕೆ

P.L.A ಅಥವಾ S.L.A ಯ ಮರಣವು ಪಾಲಿಸಿಯ ಮಧ್ಯದಲ್ಲಿ ಆದಲ್ಲಿ, ಜೀವಿತವಿರುವ ಇನ್ನೊಬ್ಬರಿಗೆ ಡೆತ್ ಬೆನಿಫಿಟ್ (ಸಮ್ ಅಶ್ಶುರ್ಡ್) ಅನ್ನು ತಕ್ಷಣ ತೆಗೆದುಕೊಳ್ಳದೆ ಆ ಮೊತ್ತವನ್ನು ಪಾಲಿಸಿದಾರನ ಫಂಡ್ ಗೆ ವರ್ಗಾಯಿಸಲು ಆಪ್ಶನ್ ನೀಡಲಾಗುತ್ತದೆ. ಈ ಆಪ್ಶನ್ ಅನ್ನು ಡೆತ್ ಇಂಟಿಮೇಷನ್ ಜೊತೆಗೆ ನೀಡಬೇಕು. ಈ ರೀತಿ ವರ್ಗಾಯಿಸಿರುವ ಮೊತ್ತವನ್ನು ಬಾಗಶಃ ಅಥವಾ ಪೂರ್ಣವಾಗಿ ಮುಂದೆ ಯಾವಾಗ ಬೇಕಾದರೂ ಯಾವುದೇ ನಿರ್ಭಂದಗಳಿಲ್ಲದೇ (ಪಾಲಿಸಿಯು 3 ವರ್ಷಗಳು ಮುಗಿಸಿರಬೇಕಾದ ನಿರ್ಭಂದತೆ) ಪಡೆಯಬಹುದು.

ರಿವೈವಲ್ ಪೀರಿಯಡ್ ಆದ ಮೇಲೆ ಪಾಲಿಸಿಯನ್ನು ಮುಂದುವರೆಸುವ ಬಗ್ಗೆ

ಪಾಲಿಸಿಯು 3 ವರ್ಷಗಳನ್ನು ಮುಗಿಸಿದ ಮೇಲೆ P.L.A ಯು ಪಾಲಿಸಿಯ ರಿಸ್ಕ್ ಕವರ್ ಅನ್ನು ರಿವೈವಲ್ ಪೀರಿಯಡ್ ನಂತರ ಪ್ರೀಮಿಯಂ ಗಳನ್ನು ನೀಡಿ ಮುಂದುವರೆಸುವ ಅವಕಾಶ ಇರುತ್ತದೆ.

ಪ್ರೀಮಿಯಂ ಗಳನ್ನು ನೀಡದೆ ಇರುವ ಪಾಲಿಸಿಯ ರಿವೈವಲ್

ಪಾಲಿಸಿದಾರನು ಆಯ್ಕೆ ಮಾಡಿಕೊಂಡಿರುವ ಪ್ರೀಮಿಯಂ ನೀಡುವ ರೀತಿಯ ಪ್ರಕಾರ ಅಂದರೆ ವರ್ಷಕ್ಕೊಮ್ಮೆ, ಆರ್ಡ ವರ್ಷಕ್ಕೊಮ್ಮೆ, 3 ತಿಂಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆ (ECS)  ಪ್ರೀಮಿಯಂ ಅನ್ನು ಸರಿಯಾದ ಸಮಯದಲ್ಲಿ ಅಥವಾ ಗ್ರೇಸ್ ಪೀರಿಯಡ್ ನಲ್ಲಿಯೂ ನೀಡದಿದ್ದ ಪಕ್ಷದಲ್ಲಿ ಅಂತಹ ಪಾಲಿಸಿಯು ಲ್ಯಾಪ್ಸ್ ಆಗುತ್ತದೆ. ಆದರೆ, ಪಾಲಿಸಿಯನ್ನು ಪ್ರೀಮಿಯಂ ನೀಡದೆ ಇರುವ ದಿವಸದಿಂದ ಎರಡು ವರ್ಷಗಳ ಒಳಗೆ ರಿವೈವ್ ಮಾಡುವ ಅವಕಾಶ ಇರುತ್ತದೆ.

ಪಾಲಿಸಿಯ ಬಾಬ್ತು ನೀಡಬೇಕಾಗಿರುವ ಪ್ರೀಮಿಯಂ  ಅನ್ನು 3 ವರ್ಷಗಳು ಕಟ್ಟಿದ್ದಲ್ಲಿ, ಪಾಲಿಸಿಯು ಲ್ಯಾಪ್ಸ್ ಆಗುವುದಿಲ್ಲ. ರಿವೈವಲ್ ಪೀರಿಯಡ್ ನಲ್ಲಿ ಲೈಫ್ ಕವರ್ ಮತ್ತು ಪ್ರೀಮಿಯಂ ವೈವರ್ ಬೆನಿಫಿಟ್ ಮುಂದುವರೆಯುತ್ತದೆ.

ಎಲ್ ಐ ಸಿ ಜೀವನ್ ಸಾತಿ ಪ್ಲಾನ್ – ಬೆನಿಫಿಟ್ ಗಳನ್ನು ನೀಡುವ ಬೇರೆ ಬೇರೆ ಸಂಧರ್ಭಗಳು

 • P.L.A ಯ ಮರಣವು ಪಾಲಿಸಿಯ ಅವದಿಯ ಮಧ್ಯದಲ್ಲಿ ಆಗಿ S.L.A ಜೀವಿತವಾಗಿದ್ದಲ್ಲಿ:

ಸಮ್ ಅಶ್ಶುರ್ಡ್ ಮೊತ್ತವನ್ನು S.L.A ಗೆ ನೀಡಲಾಗುವುದು. ಹಾಗೂ ಕಟ್ಟಬೇಕಾಗಿರುವ ಉಳಿದ ಪ್ರೀಮಿಯಂ ಗಳನ್ನು ವೈವ್ ಆಫ್ ಮಾಡಲಾಗುವುದು. 

 • P.L.A ಯ ಮರಣವು S.L.A ಯ ಮರಣದ ನಂತರ ಆದಲ್ಲಿ: 

ಸೂಚಿಸಿರುವ ನಾಮಿನಿಗೆ ಈ ಕೆಳ ಕಂಡ ಮೊತ್ತವನ್ನು ನೀಡಲಾಗುತ್ತದೆ

ಸಮ್ ಅಶ್ಶುರ್ಡ್ ಮೊತ್ತ + ಇನ್ಶ್ಯುರ್ಡ್ ಫಂಡ್ ಮೌಲ್ಯ + ಮುಂದೆ ನೀಡಬೇಕಾಗಿರುವ ಪ್ರೀಮಿಯಂ ಗಳ ಒಟ್ಟು ಮೊತ್ತ + ನೀಡಬೇಕಾಗಿದ್ದ ಪ್ರೀಮಿಯಂ ಗಳ ಮೊತ್ತ.

ತದ ನಂತರ ಪಾಲಿಸಿಯು ಸ್ತಗಿತಗೊಳ್ಳುತ್ತದೆ. 

 • P.L.A ಜೀವಿತವಿದ್ದು, S.L.A ಯ ಮರಣವು ಪಾಲಿಸಿಯ ಅವದಿಯ ಮಧ್ಯದಲ್ಲಿ ಆದಲ್ಲಿ: 

S.L.A ಗೆ ಅನ್ವಯವಾಗುವ ಸಮ್ ಅಶ್ಶುರ್ಡ್ ಮೊತ್ತವನ್ನು P.L.A ಗೆ ನೀಡಲಾಗುವುದು. 

 • S.L.A ಯ ನಿಧನವು P.L.A ಯ ಮರಣದ ನಂತರ ಆದಲ್ಲಿ: 

ಸೂಚಿಸಿರುವ ನಾಮಿನಿಗೆ S.L.A ಗೆ ಅನ್ವಯವಾಗುವ ಸಮ್ ಅಶ್ಶುರ್ಡ್ ಮೊತ್ತ + ಇನ್ಸ್ಯುರ್ಡ್ ಮೌಲ್ಯ ವನ್ನು ನೀಡಲಾಗುವುದು. ಹಾಗೂ ಪಾಲಿಸಿಯು ಸ್ತಗಿತಗೊಳ್ಳುವುದು. 

 • P.L.A ಹಾಗೂ S.L.A ಯ ಮರಣವೂ ಒಂದೇ ಬಾರಿ ಆದಲ್ಲಿ: 

ಸೂಚಿಸಿರುವ ನಾಮಿನಿಗೆ ಈ ಕೆಳ ಕಂಡ ಮೊತ್ತವನ್ನು ನೀಡಲಾಗುತ್ತದೆ

P.L.A ಮತ್ತು S.L.A ಗಳ ಸಮ್ ಅಶ್ಶುರ್ಡ್ ಮೊತ್ತ + ಇನ್ಶ್ಯುರ್ಡ್ ಫಂಡ್ ಮೌಲ್ಯ + ಮುಂದೆ ನೀಡಬೇಕಾಗಿರುವ ಪ್ರೀಮಿಯಂ ಗಳ ಒಟ್ಟು ಮೊತ್ತ + ನೀಡಬೇಕಾಗಿದ್ದ ಪ್ರೀಮಿಯಂ ಗಳ ಮೊತ್ತ.

ತದ ನಂತರ ಪಾಲಿಸಿಯು ಸ್ತಗಿತಗೊಳ್ಳುತ್ತದೆ. 

 • ಪಾಲಿಸಿಯು ಮೆಚೂರಿಟೀ ಆದಲ್ಲಿ: 

ಪಾಲಿಸಿದಾರರ ಫಂಡ್ ಮೌಲ್ಯವನ್ನು ನೀಡಲಾಗುವುದು. 

 • ಪಾಲಿಸಿಯನ್ನು ಸರಂಡರ್ ಮಾಡಿದಲ್ಲಿ (ಕಂಪಲ್ಸರಿ ಸರಂಡರ್ ಅನ್ನೂ ಸೇರಿಸಿ): 

ಇನ್ಶ್ಯುರ್ಡ್ ಫಂಡ್ ಮೌಲ್ಯವನ್ನು ನೀಡಲಾಗುವುದು. ಈ ಸರಂಡರ್ ಮೊತ್ತವನ್ನು ಪಾಲಿಸಿಯು 3 ವರ್ಷ ಮುಗಿಸಿದ್ದಲ್ಲಿ ಮಾತ್ರವೇ  ನೀಡಲಾಗುವುದು. 

 • ಬಾಗಶಃ ಹಣವನ್ನು ಹಿಂಪಡೆಯಲು : 

ಪಾಲಿಸಿದಾರರ  ಫಂಡ್ ಮೌಲ್ಯದಲ್ಲಿ ಕನಿಷ್ಠ ಎರಡು ವಾರ್ಷಿಕ ಪ್ರೀಮಿಯಂ ಮೊತ್ತದಷ್ಟು ಹಣವು ಇದ್ದಲ್ಲಿ ಬಾಗಶಃ ಹಣವನ್ನು ಹಿಂಪಡೆಯಲು ಅವಕಾಶ ಮಾಡಿ ಕೊಡಲಾಗುತ್ತದೆ. 

 • S.L.A ಯ ಮರಣವು P.L.A ಜೀವಿತವಾಗಿದ್ದಾಗಲೇ ಆದಲ್ಲಿ: 

ಯಾವುದೇ ಬೆನಿಫಿಟ್ ಸಿಗುವುದಿಲ್ಲ.

ಎಲ್ ಐ ಸಿ ಜೀವನ್ ಸಾತಿ ಪ್ಲಾನ್ – ನಿಮಗೆ ತಿಳಿದಿರಬೇಕಾದ ವಿಚಾರಗಳು

P.L.A ಯು P.L.A ಮತ್ತು S.L.A ಇಬ್ಬರಿಗೂ ಅನ್ವಯವಾಗುವ ಸಮ್ ಅಶ್ಶುರ್ಡ್ ಮೊತ್ತವನ್ನು ಆಯ್ಕೆ ಮಾಡಿರುತ್ತಾನೆ / ತ್ತಾಳೆ. ಈ ಮೊತ್ತವು ಕೆಳ ಕಂಡ ಸಂಧರ್ಭದ ಮೇಲೆ ವ್ಯತ್ಯಾಸವಾಗುತ್ತದೆ.

 • ಸಿಂಗಲ್ ಪ್ರೀಮಿಯಂ ಅಥವಾ ರೆಗ್ಯುಲರ್ ಪ್ರೀಮಿಯಂ ಆಯ್ಕೆ ಮಾಡಿದ್ದಲ್ಲಿ
 • ವಯಸ್ಸು ಮತ್ತು ಪ್ರೀಮಿಯಂ ಮೊತ್ತ

P.L.A ಯ ಮರಣವು ಪಾಲಿಸಿಯ ಅವದಿಯ ಮಧ್ಯದಲ್ಲಿ ಆದಲ್ಲಿ ಹಾಗೂ ರೆಗ್ಯುಲರ್ ಪ್ರೀಮಿಯಂ ಗಳನ್ನು ನೀಡುವ ಆಪ್ಶನ್ ಅನ್ನು ಆಯ್ಕೆ ಮಾಡಿದ್ದಲ್ಲಿ, ಮುಂದಿನ ಪ್ರೀಮಿಯಂಗಳು ಮತ್ತು ಬಾಕಿ ನೀಡಬೇಕಾದ ಪ್ರೀಮಿಯಂ ಗಳನ್ನೂ ಸೇರಿಸಿ ವೈವ್ ಆಫ್ ಮಾಡಲಾಗುತ್ತದೆ.

ರೈಡರ್ಸ್ ಗಳು

ಈ ಪ್ಲಾನ್ ನಲ್ಲಿ ಪಾಲಿಸಿಯಲ್ಲಿಯೇ ಸೇರಿರುವ ಪ್ರೀಮಿಯಂ ವೈವರ್ ರೈಡರ್ ಹಾಗೂ ಮತ್ತೊಂದು ಆಡಿಶನಲ್ ರೈಡರ್ (ಆಕ್ಸಿಡೆಂಟಲ್ ಡೆತ್ ಬೆನಿಫಿಟ್ ರೈಡರ್ -ಪ್ರತಿ ರೂ 1000 ಕ್ಕೆ ರೂ 2 ರಂತೆ) ಸೇರಿರುತ್ತದೆ.

ಪ್ಲಾನ್ ನಲ್ಲಿ ಸೇರಿಲ್ಲದೆ ಇರುವುದು

ಪಾಲಿಸಿಯ ಆವದಿಯಲ್ಲಿ ಪಾಲಿಸಿದಾರನು / ದಾರಳು ಪಾಲಿಸಿಯನ್ನು ಪಡೆದ 1 ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡಲ್ಲಿ ಪಾಲಿಸಿಯ ಬಾಬ್ತು ಯಾವುದೇ ಕ್ಲೆಯಿಮ್ ಅನ್ನು ಪುರಸ್ಕರಿಸುವುದಿಲ್ಲ. ಪಾಲಿಸಿಯ  ಫಂಡ್ ಮೌಲ್ಯವನ್ನು (ಮರಣದ ನಂತರದ) S.L.A ಗೆ ನೀಡಲಾಗುವುದು.

- / 5 ( Total Rating)