ಎಲ್ ಐ ಸಿ ಜೀವನ್ ಸಂಗಮ್ ಪ್ಲಾನ್
 • ಅತ್ಯುತ್ತಮ ಯೋಜನೆಗಳು
 • ಸುಲಭ ಹೋಲಿಕೆ
 • ತಕ್ಷಣದ ಖರೀದಿ
PX step

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಹುಟ್ಟಿದ ದಿನಾಂಕ
Tobaccoತಂಬಾಕು?
ಆದಾಯ
| ಲಿಂಗ

1

2

ದಯವಿಟ್ಟು ಇತರ ಮಾಹಿತಿಯನ್ನು ನಮೂದಿಸಿ
ಫೋನ್ ಸಂಖ್ಯೆ
ಹೆಸರು
ಇಮೇಲ್
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಈ ದೇಶದ ಬಹುತೇಕ ಜನರಿಗೆ ತಿಳಿದಿರುವಂತೆ, ಎಲ್ ಐ ಸಿ ಯು ಸುಮಾರು 63 ವರ್ಷಗಳಿಂದ ಜನರಿಗೆ ಅವರಿಗೆ ಅನುಕೂಲವಾಗುವ ಹಾಗೂ ಅವರ ಅಗತ್ಯತೆಗೆ ತಕ್ಕಂತೆ ಜೀವ ವಿಮೆ ಯನ್ನು ನೀಡುವಲ್ಲಿ ಸಹಾಯ ಮಾಡುತ್ತಲಿದೆ. ಹಾಗೂ ವಿಮೆಯನ್ನು ನೀಡುವ ಕಂಪನಿಗಳಲ್ಲಿ ಮೊದಲನೇ ಸ್ತಾನದಲ್ಲಿರುತ್ತದೆ.

ಎಲ್ ಐ ಸಿ ಜೀವನ್ ಸಂಗಮ್ ಪ್ಲಾನ್ ಕಾರ್ಪೊರೇಷನ್ ನ ಲಾಭದಲ್ಲಿ ಬಾಗಿ ಆಗುವ ಹಾಗೂ ರಕ್ಷಣೆ ಮತ್ತು ಉಳಿತಾಯ ಏಕ ಕಾಲಕ್ಕೆ ನೀಡುವ ನೀಡುವ ಪಾಲಿಸಿ ಆಗಿರುತ್ತದೆ. ಇದು ಒಂದು ಸಿಂಗಲ್ ಪ್ರೀಮಿಯಂ ಯೋಜನೆ ಆಗಿದ್ದು, ಪಾಲಿಸಿದಾರನ ರಿಸ್ಕ್ ಕವರೆಜ್ ಸಿಂಗಲ್ ಪ್ರೀಮಿಯಂ ಮೊತ್ತದ ಮಲ್ಟಿಪಲ್ ಗಳಲ್ಲಿ ಇರುತ್ತದೆ. ಪಾಲಿಸಿದಾರನಿಗೆ ಅವನ ಮೆಚೂರಿಟೀ ಸಮ್ ಅಶ್ಶುರ್ಡ್ ಅನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಇರುತ್ತದೆ. ಅವನು ಆಯ್ಕೆ ಮಾಡುವ ಮೆಚೂರಿಟೀ ಸಮ್ ಅಶ್ಶುರ್ಡ್ ಹಾಗೂ ವಯಸ್ಸಿನ ಮೇಲೆ ಅವನು ನೀಡಬೇಕಾಗಿರುವ ಸಿಂಗಲ್ ಪ್ರೀಮಿಯಂ (ತೆರಿಗೆ ಬಿಟ್ಟು) ನಿರ್ದಾರ ಆಗುತ್ತದೆ.

ಈ ಪಾಲಿಸಿಯ ಅಡಿಯಲ್ಲಿ ಪಾಲಿಸಿಯ ಆವದಿಯು (ಟರ್ಮ್) 12 ವರ್ಷಗಳು ಆಗಿರುತ್ತದೆ. ಈ ಪ್ಲಾನ್ ನಿಮಗೆ ಗ್ಯಾರಂಟಿಡ್ ರಿಟರ್ನ್ ನೀಡುತ್ತದೆ. ಈ ಪಾಲಿಸಿಯು ಕಾರ್ಪೊರೇಷನ್ ನ ಬಂಡವಾಳ ಹೂಡಿಕೆ ಹಾಗೂ ಅದರಿಂದ ಬರುವ ಲಾಭದಲ್ಲಿ ಬಾಗಿ ಆಗುವುದರಿಂದ, ಪಾಲಿಸಿಯ ಮೇಲೆ ಅಡಿಷನಲ್ ಬೋನಸ್ ಗಳಿಗೂ ಅರ್ಹತೆ ಪಡುತ್ತದೆ.

ಎಲ್ ಐ ಸಿ ಜೀವನ್ ಸಂಗಮ್ ಪ್ಲಾನ್ – ಬೆನೆಫಿಟ್ಸ್

ಎಲ್ ಐ ಸಿ ಜೀವನ್ ಸಂಗಮ್ ಪ್ಲಾನ್ ಅನೇಕ ಬೇನೆಫಿಟ್ಸ್ ಗಳನ್ನು ಪಾಲಿಸಿದಾರನಿಗೆ ನೀಡುತ್ತದೆ. ಅದರ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

ಡೆತ್ ಬೆನಿಫಿಟ್

ಪಾಲಿಸಿದಾರನು ಪಾಲಿಸಿಯನ್ನು ಪಡೆದ 5 ವರ್ಷದ ಒಳಗೆ ಮರಣ ಹೊಂದಿದಲ್ಲಿ

ಮೇಲೆ ತಿಳಿಸಿರುವಂತೆ, ಪಾಲಿಸಿದಾರನು ಪಾಲಿಸಿಯನ್ನು ಪಡೆದ 5 ವರ್ಷಗಳ ಒಳಗೆ ಮರಣ ಹೊಂದಿದಲ್ಲಿ, ಕಾರ್ಪೊರೇಷನ್ ಎರಡು ಸಂಧರ್ಭಗಳನ್ನು ಪರಿಗಣಿಸಿ ಅದರ ಪ್ರಕಾರ ಡೆತ್ ಬೆನಿಫಿಟ್ ಅನ್ನು ನೀಡುತ್ತದೆ.

 1. ಮರಣವು ಪಾಲಿಸಿಯ ಮೇಲಿನ ರಿಸ್ಕ್ ಕವರೆಜ್ ಶುರು ಆಗುವ ಮುಂಚೆ ಆದಲ್ಲಿ – ಪಾಲಿಸಿದಾರನು ನೀಡಿರುವ ಸಿಂಗಲ್ ಪ್ರೀಮಿಯಂ ಮೊತ್ತದಲ್ಲಿ ಸರ್ವಿಸ್ ಟಾಕ್ಸ್ ಹಾಗೂ ಎಕ್ಷ್ತ್ರಾ ಪ್ರೀಮಿಯಂ ಇದ್ದಲ್ಲಿ ಅದನ್ನು ಕಡಿತ ಮಾಡಿ (ಪ್ರೀಮಿಯಂ ಗೆ ಬಡ್ಡಿ ಸೇರಿಸದೆ) ಉಳಿದ ಮೊತ್ತವನ್ನು ನೀಡಲಾಗುವುದು.
 2. ಮರಣವು ಪಾಲಿಸಿಯ ಮೇಲಿನ ರಿಸ್ಕ್ ಕವರೆಜ್ ಶುರು ಆದ ಮೇಲೆ ಆದಲ್ಲಿ – ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ ಅಂದರೆ ಪಾಲಿಸಿದಾರನು ನೀಡಿರುವ ಸಿಂಗಲ್ ಪ್ರೀಮಿಯಂ ಮೊತ್ತದ 10 ಪಟ್ಟು ಮೊತ್ತವನ್ನು ನೀಡಲಾಗುವುದು.

ಪಾಲಿಸಿದಾರನು ಪಾಲಿಸಿಯನ್ನು ಪಡೆದ 5 ವರ್ಷಗಳ ನಂತರ ಹಾಗೂ ಪಾಲಿಸಿಯ ಮೆಚೂರಿಟೀ ಆಗುವ ಮೊದಲು ಮರಣ ಹೊಂದಿದಲ್ಲಿ  

ಇಂತಹ ಸಂಧರ್ಭದಲ್ಲಿ, ಎಲ್ ಐ ಸಿ ಯು ಬೇಸಿಕ್ ಸಮ್ ಅಶ್ಶುರ್ಡ್ ಅಂದರೆ ಸಿಂಗಲ್ ಪ್ರೀಮಿಯಂ ನ 10 ಪಟ್ಟು ಮೊತ್ತದ ಜೊತೆಗೆ ಲಾಯಲ್ಟಿ ಅಡಿಷನ್ ಇದ್ದಲ್ಲಿ, ಅದನ್ನು ಸಹ ಸೇರಿಸಿ ನೀಡುತ್ತದೆ.

ಮೆಚೂರಿಟೀ ಬೆನಿಫಿಟ್

ಪಾಲಿಸಿಯು ಆವದಿಯನ್ನು ಮುಗಿಸಿ, ಮೆಚೂರಿಟೀ ಬೆನಿಫಿಟ್ ಗೆ ಅರ್ಹವಾದಲ್ಲಿ, ಅಂತಹ ಪಾಲಿಸಿಗೆ, ಮೆಚೂರಿಟೀ ಸಮ್ ಅಶ್ಶುರ್ಡ್ ಮೊತ್ತವನ್ನು ನೀಡಲಾಗುವುದು. ಕಾರ್ಪೊರೇಷನ್ ನ ಅನುಭವದ ಪ್ರಕಾರ, ಪಾಲಿಸಿಯು ಆದರ ಆದಾಯದಲ್ಲಿ ಬಾಗಿ ಆಗುವುದರಿಂದ, ಲಾಯಲ್ಟಿ ಅಡಿಷನ್ ಮೊತ್ತವನ್ನು ಪಡೆಯುವುದಕ್ಕೆ ಅರ್ಹವಾಗುತ್ತದೆ. ಲಾಯಲ್ಟಿ ಅಡಿಷನ್ ಮೊತ್ತವು ಪಾಲಿಸಿಗೆ ದೊರಕುವುದು ಕೆಳ ಕಂಡ ಎರಡು ಸಂಧರ್ಭದಲ್ಲಿ:

 1. ಪಾಲಿಸಿಯು 5 ವರ್ಷಗಳನ್ನು ಪೂರೈಸಿದ ನಂತರ ಪಾಲಿಸಿದಾರನು ಮರಣ ಹೊಂದಿದಲ್ಲಿ
 2. ಪಾಲಿಸಿದಾರನು ಪಾಲಿಸಿಯು ಮೆಚೂರಿಟೀ ಆಗುವವರೆಗೂ ಬದುಕಿದ್ದಲ್ಲಿ

ಲಾಯಲ್ಟಿ ಅಡಿಷನ್ ಮೊತ್ತವು, ಕಾರ್ಪೊರೇಷನ್ ನ ನಿಯಮಕ್ಕೆ ಅನುಸಾರವಾಗಿ ಹಾಗೂ ಅದು ಕಾಲ ಕಾಲಕ್ಕೆ ಘೋಷಿಸುವ ರೇಟ್ಸ್ ಗಳ ಮೇಲೆ ಅವಲಂಬಿತವಾಗಿರುತ್ತದೆ.

ಎಲ್ ಐ ಸಿ ಜೀವನ್ ಸಂಗಮ್ ಪ್ಲಾನ್ – ಬೆನೆಫಿಟ್ಸ್ ಗಳ ಉದಾಹರಣೆ

ಶಾಸನಬದ್ದ ಎಚ್ಚರಿಕೆ

ಎಲ್ ಐ ಸಿ ಯು ನೀಡುವ ಬೆನೆಫಿಟ್ಸ್ ಗಳಲ್ಲಿ ಕೆಲವು ಗ್ಯಾರಂಟಿಡ್ ಆಗಿದ್ದು ಇನ್ನೂ ಕೆಲವು ಬದಲಾವಣೆಗೆ ಒಳ ಪಡುವ ಬೆನಿಫಿಟ್ ಗಳು ಆಗಿರುತ್ತವೆ, ಏಕೆಂದರೆ, ಅಂತಹ ಬೆನಿಫಿಟ್ ಗಳು ಕಾರ್ಪೊರೇಷನ್ ನ ಮುಂದಿನ ಕಾರ್ಯ ನಿರ್ವಹಣೆ ಹಾಗೂ ಅದರಿಂದ ಬರುವ ಆದಾಯದ ಮೇಲೆ ಅವಲಂಬಿತವಾಗಿರುತ್ತದೆ ನಿಮ್ಮ ಪಾಲಿಸಿಯಲ್ಲಿ ಗ್ಯಾರಂಟಿಡ್ ಆದಾಯ ಎಂದು ನಮೂದಿಸಿರುವ ಬೆನಿಫಿಟ್ ಗಳಿಗೆ ಕೆಳ ಕಂಡ ಟೇಬಲ್ ನಲ್ಲಿ “ಗ್ಯಾರಂಟಿಡ್”  ಎಂದು ತೋರಿಸಲಾಗಿದೆ. ಹಾಗೆಯೇ, ಪಾಲಿಸಿಯಲ್ಲಿ ನಮೂದಿಸಿರುವ ಗ್ಯಾರಂಟಿಡ್ ಅಲ್ಲದ ಬೆನಿಫಿಟ್ ಗಳನ್ನು ಕೆಳ ಕಂಡ ಟೇಬಲ್ ನಲ್ಲಿ ಎರಡು ರೀತಿಯ ರಿಟರ್ನ್ಸ್ ಗಳನ್ನು ಗಣನೆಗೆ ತೆಗೆದುಕೊಂಡು ಅದರ ರೀತ್ಯಾ ತೋರಿಸಲಾಗಿದೆ. ಇದು ಭವಿಷ್ಯದಲ್ಲಿ ಕಾರ್ಪೊರೇಷನ್ ನ ಬಂಡವಾಳ ಹೂಡಿಕೆಯಿಂದ ಬರಬಹುದಾದ ಎರಡು ಊಹಿಸಲಾದ ಆದಾಯ ಗಳನ್ನು ಅಳವಡಿಸಿ ತಯಾರಿಸಲಾಗಿದೆ. ಈ ಎರಡು ಊಹಿಸಲಾದ ಆದಾಯಗಳು ಪಾಲಿಸಿಯ ಬಾಬ್ತು ನೀಡುವ ಗ್ಯಾರಂಟಿಡ್ ಮೊತ್ತವಲ್ಲ. ಹಾಗೂ ಅವುಗಳು ಗರಿಷ್ಠ ಅಥವಾ ಕನಿಷ್ಠ ಮಿತಿಗಳು ಕೂಡ ಅಲ್ಲ. ಏಕೆಂದರೆ, ನಿಮ್ಮ ಪಾಲಿಸಿಯು ಬೇರೆ ಬೇರೆ ಅಂಶಗಳ ಮೇಲೆ ಹಾಗೂ ಮುಂದಿನ ಕಾರ್ಪೊರೇಷನ್ ನ ಕಾರ್ಯ ನಿರ್ವಹಣೆ ಮೇಲೂ ಅವಲಂಬಿತವಾಗಿರುತ್ತದೆ.

ಈ ಪಾಲಿಸಿಯ ಬೆನಿಫಿಟ್ ಗಳ ಬಗ್ಗೆ ಕೆಳಗಿನ ಉದಾಹರಣೆಯನ್ನು ಗಮನಿಸಿ.

ವಿವರಗಳು

ಪಾಲಿಸಿಯನ್ನು ಪಡೆಯುವಾಗ ಪಾಲಿಸಿದಾರನ ವಯಸ್ಸು

30 ವರ್ಷಗಳು

ಪಾಲಿಸಿಯ ಅವದಿ (ಟರ್ಮ್)

12 ವರ್ಷಗಳು

ಪ್ರೀಮಿಯಂ ನೀಡಬೇಕಾದ ಅವದಿ (ಪ್ರೀಮಿಯಂ ಪೇಯಿಂಗ್ ಟರ್ಮ್)


ಸಿಂಗಲ್ ಪ್ರೀಮಿಯಂ

ಟ್ಯಾಬುಲಾರ್ ಸಿಂಗಲ್ ಪ್ರೀಮಿಯಂ (ರೂ ಗಳಲ್ಲಿ)

37316

ನೀಡಿರುವ ಸಿಂಗಲ್ ಪ್ರೀಮಿಯಂ (ರೂ ಗಳಲ್ಲಿ)

37316

ಮೆಚೂರಿಟೀ ಸಮ್ ಅಶ್ಶುರ್ಡ್ ಮೊತ್ತ (ರೂ ಗಳಲ್ಲಿ)

75000

ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ (ರೂ ಗಳಲ್ಲಿ)

373160

ಬದಲಾಗಬಹುದಾದ ಸಿನ್ಯಾರಿಯೋ 1 – ಒಟ್ಟು ಹಣ ಹೂಡಿಕೆಯ ಮೇಲೆ ಬರಬಹುದಾದ ರಿಟರ್ನ್ @ 4 % ಒಂದು ವರ್ಷಕ್ಕೆ

ಬದಲಾಗಬಹುದಾದ ಸಿನ್ಯಾರಿಯೋ 2 – ಒಟ್ಟು ಹಣ ಹೂಡಿಕೆಯ ಮೇಲೆ ಬರಬಹುದಾದ ರಿಟರ್ನ್ @ 8 % ಒಂದು ವರ್ಷಕ್ಕೆ

ಆ) ಪಾಲಿಸಿದಾರನ ಮರಣ ಆದಲ್ಲಿ ಸಿಗಬಹುದಾದ ಮೊತ್ತ

ವರ್ಷದ ಕೊನೆಯಲ್ಲಿ

ವರ್ಷದ ಕೊನೆಯಲ್ಲಿ ನೀಡಿರುವ ಪ್ರೀಮಿಯಂ ಮೊತ್ತ(ರೂ ಗಳಲ್ಲಿ)

ಪಾಲಿಸಿಯ ಬಾಬ್ತು ಪಾಲಿಸಿದಾರನ ಮರಣ ಆದ ಪಕ್ಷದಲ್ಲಿ  ನೀಡುವ ಬೆನಿಫಿಟ್ ಮೊತ್ತ (ಆ ವರ್ಷದ ಕೊನೆಗೆ)

   

ಗ್ಯಾರಂಟಿಡ್

ಬದಲಾಗಬಹುದಾದ ಮೊತ್ತ

ಒಟ್ಟು ಮೊತ್ತ

     

ಸಿನಾರಿಯೊ 1

4 %

ಸಿನಾರಿಯೊ 2

8%

ಸಿನಾರಿಯೊ 1

4 %

ಸಿನಾರಿಯೊ 2

8%

1

37316

373160

0

0

373160

373160

2

37316

373160

0

0

373160

373160

3

37316

373160

0

0

373160

373160

4

37316

373160

0

0

373160

373160

5

37316

373160

0

0

373160

373160

6

37316

373160

0

0

373160

373160

7

37316

373160

0

0

373160

373160

8

37316

373160

0

0

373160

373160

9

37316

373160

0

0

373160

373160

10

37316

373160

0

0

373160

373160

11

37316

373160

0

0

373160

373160

12

37316

373160

0

0

373160

373160

ಆ) ಪಾಲಿಸಿಯ ಅವದಿಯು ಮುಗಿದಾಗ  ಸಿಗಬಹುದಾದ ಮೆಚೂರಿಟೀ ಮೊತ್ತ

ವರ್ಷದ ಕೊನೆಯಲ್ಲಿ

ವರ್ಷದ ಕೊನೆಯಲ್ಲಿ ನೀಡಿರುವ ಪ್ರೀಮಿಯಂ ಮೊತ್ತ(ರೂ ಗಳಲ್ಲಿ)

ಪಾಲಿಸಿಯ ಅವದಿಯು ಮುಗಿದಾಗ ಸಿಗುವ ಮೆಚೂರಿಟೀ  ಬೆನಿಫಿಟ್ ಮೊತ್ತ

 

ಗ್ಯಾರಂಟಿಡ್

ಬದಲಾಗಬಹುದಾದ ಮೊತ್ತ

ಒಟ್ಟು ಮೊತ್ತ

     

ಸಿನಾರಿಯೊ 1

4 %

ಸಿನಾರಿಯೊ 2

8%

ಸಿನಾರಿಯೊ 1

4 %

ಸಿನಾರಿಯೊ 2

8%

1

37316

0

0

0

0

0

2

37316

0

0

0

0

0

3

37316

0

0

0

0

0

4

37316

0

0

0

0

0

5

37316

0

0

0

0

0

6

37316

0

0

0

0

0

7

37316

0

0

0

0

0

8

37316

0

0

0

0

0

9

37316

0

0

0

0

0

10

37316

0

0

0

0

0

11

37316

0

0

0

0

0

12

37316

75000

0

0

75000

75000

 • ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ ನಲ್ಲಿ ಸರ್ವಿಸ್ ಟಾಕ್ಸ್, ಎಕ್ಸ್ಟ್ರಾ ಪ್ರೀಮಿಯಂ ಗಳು ಹಾಗೂ ರೈಡರ್ಸ್ ಗಳ ಬಾಬ್ತು ನೀಡಬೇಕಾದ ಹೆಚ್ಚುವರಿ ಮೊತ್ತ ಸೇರಿರುವುದಿಲ್ಲ
 • ಈ ಪ್ಲಾನ್ ಅಡಿಯಲ್ಲಿ, ಒಟ್ಟಾರೆ ಡೆತ್ ಬೆನಿಫಿಟ್ ಮೊತ್ತವು ಒಟ್ಟು ಪ್ರೀಮಿಯಂ ಗಳ ಮೊತ್ತದ 105 % ಗಿಂತ ಕಮ್ಮಿ ಇರುವುದಿಲ್ಲ.
 • ಕಾರ್ಪೊರೇಷನ್ ನವರು ಪಾಲಿಸಿದಾರನಿಗೆ ಅನುಕೂಲವಾದಲ್ಲಿ, ಸ್ಪೆಷಲ್ ಸರಂಡರ್ ವ್ಯಾಲ್ಯು ಮೊತ್ತವನ್ನು ನೀಡಬಹುದು

ಎಲ್ ಐ ಸಿ ಜೀವನ್ ಸಂಗಮ್ ಪ್ಲಾನ್ – ಅರ್ಹತೆಗಳು ಹಾಗೂ ನಿಬಂದನೆಗಳು

ಎಲ್ ಐ ಸಿ ಜೀವನ್ ಸಂಗಮ್ ಪ್ಲಾನ್ ಅನ್ನು ಪಡೆಯಬೇಕಾದಲ್ಲಿ, ಈ ಕೆಳ ಕಂಡ ಅರ್ಹತೆಗೆ ಒಳ ಪಟ್ಟಿರಬೇಕಾಗುತ್ತದೆ.

ಪಾಲಿಸಿ ಪಡೆಯುವಾಗ ಪಾಲಿಸಿದಾರನ ಕನಿಷ್ಠ ವಯಸ್ಸು

8 ವರ್ಷಗಳು (ಮುಗಿದಿರಬೇಕು)

ಪಾಲಿಸಿ ಪಡೆಯುವಾಗ ಪಾಲಿಸಿದಾರನ ಗರಿಷ್ಠ ವಯಸ್ಸು

50 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ)

ಕನಿಷ್ಠ /ಗರಿಷ್ಠ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ (ಸಮ್ ಅಶ್ಶುರ್ಡ್ ಮೊತ್ತವು ರೂ 10000 ದ ಮಲ್ಟಿಪಲ್ಸ್ ನಲ್ಲಿ ಇರಬೇಕು)

ಟ್ಯಾಬುಲರ್ ಸಿಂಗಲ್ ಪ್ರೀಮಿಯಂ ನ 10 ಪಟ್ಟು 

ಪಾಲಿಸಿಯ ಅವದಿ (ಟರ್ಮ್)

12 ವರ್ಷಗಳು

ಕನಿಷ್ಠ ಮೆಚೂರಿಟೀ ಮೊತ್ತ (ರೂ ಗಳಲ್ಲಿ)

75000

ಗರಿಷ್ಠ ಮೆಚೂರಿಟೀ ಮೊತ್ತ (

ಯಾವುದೇ ಮಿತಿ ಇಲ್ಲ

ಪಾಲಿಸಿಯ ಅವದಿ (ಟರ್ಮ್)

12 ವರ್ಷಗಳು

ಪಾಲಿಸಿಯನ್ನು ನೀಡುವ ರೀತಿ (ಪಾಲಿಸಿ ಪೇಮೆಂಟ್ ಮೋಡ್)

ಸಿಂಗಲ್ ಪ್ರೀಮಿಯಂ ಮಾತ್ರ 

ರಿಸ್ಕ್ ಕವರೆಜ್ ಶುರು ಆಗುವ ದಿನಾಂಕ

ಈ ಪಾಲಿಸಿಯ ನಿಯಮದ ಪ್ರಕಾರ, ಪಾಲಿಸಿದಾರನಿಗೆ 8 ವರ್ಷ ಆಗಿಲ್ಲದಿದ್ದಲ್ಲಿ, ಆತನ ಪಾಲಿಸಿಯ ವಿಮಾ ರಿಸ್ಕ್ ಕವರೆಜ್ ಅವನ  8 ವರ್ಷ ತುಂಬುವ ದಿನಕ್ಕೆ ಹತ್ತಿರದ ಪಾಲಿಸಿ ಆನಿವರ್ಸರಿ ಯ ಹಿಂದಿನ ದಿನದಿಂದ ಅಥವಾ 8 ವರ್ಷಗಳು ತುಂಬಿದ ದಿನದಿಂದ ಆರಂಭವಾಗುತ್ತದೆ.

ಪಾಲಿಸಿದಾರನಿಗೆ  8 ವರ್ಷಗಳು ತುಂಬಿದ್ದಲ್ಲಿ, ವಿಮಾ ರಿಸ್ಕ್ ಕವರೆಜ್ ಪಾಲಿಸಿಯು ಪ್ರಾರಂಭವಾದ ದಿನದಿಂದಲೇ ಶುರು ಆಗುತ್ತದೆ.

ಪಾಲಿಸಿ ಪ್ರೀಮಿಯಂ ಮೊತ್ತದ ಉದಾಹರಣೆ

ಕೆಳಗೆ ನೀಡಿರುವ ಟೇಬಲ್ ನಲ್ಲಿ ಕೆಲವು ಪ್ರೀಮಿಯಂ ರೇಟ್ ಗಳನ್ನು (ರೂ ಗಳಲ್ಲಿ) (ಸರ್ವಿಸ್ ಟಾಕ್ಸ್ ಮೊತ್ತವನ್ನು ಹೊರತು ಪಡಿಸಿ) ನೀಡಲಾಗಿದೆ.

ಟೇಬಲ್ ನಲ್ಲಿ ನಮೂದಿಸಿರುವ ರೇಟ್ ಪ್ರತಿ ರೂ 1000 ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತಕ್ಕೆ ಅನ್ವಯವಾಗುತ್ತದೆ.

ವಯಸ್ಸು (ವರ್ಷಗಳಲ್ಲಿ)

ಟ್ಯಾಬುಲರ್ ಸಿಂಗಲ್ ಪ್ರೀಮಿಯಂ ರೇಟ್ಸ್

10

472.70

20

485.30

30

497.55

40

567.35

ಸೂಚನೆ: ಮೇಲೆ ನಮೂದಿಸಿರುವ ಟ್ಯಾಬುಲರ್ ಸಿಂಗಲ್ ಪ್ರೀಮಿಯಂ ರೇಟ್ಸ್ ನಲ್ಲಿ ಎಕ್ಸ್ಟ್ರಾ ಪ್ರೀಮಿಯಂ ರೇಟ್ಸ್ ಆಗಲಿ ಅಥವಾ ಇತರೆ ತೆರಿಗೆಗಳಾಗಲಿ ಸೇರಿರುವುದಿಲ್ಲ ಮತ್ತು ಇದು ಹೆಚ್ಚಿನ ಮೆಚೂರಿಟೀ ಸಮ್ ಮೊತ್ತಕ್ಕೆ ನೀಡುವ ರಿಯಾಯತಿ ನೀಡುವ ಮುಂಚಿನ ಮೊತ್ತ.

ಹೆಚ್ಚಿನ ಮೆಚೂರಿಟೀ ಸಮ್ ಅಶ್ಶುರ್ಡ್ ಮೊತ್ತಕ್ಕೆ ಸಿಗುವ ರಿಯಾಯತಿ

ಎಲ್ ಐ ಸಿ ಜೀವನ್ ಸಂಗಮ್  ಪ್ಲಾನ್ ನಲ್ಲಿಯೂ ಕೂಡ ಬೇರೆ ಕೆಲವು ಜೀವ ವಿಮಾ ಯೋಜನೆಗಳಲ್ಲಿ ನೀಡುವ ಸಮ್ ಅಶ್ಶುರ್ಡ್ ಮೊತ್ತಕ್ಕೆ ದೊರಕುವ ರಿಯಾಯತಿ ದೊರೆಯುತ್ತದೆ. ಇದರ ಪ್ರಕಾರ, ಮೆಚೂರಿಟೀ ಸಮ್ ಅಶ್ಶುರ್ಡ್ ಮೊತ್ತವು ಹೆಚ್ಚಾದಷ್ಟೂ ಆ ಪಾಲಿಸಿಯ ಮೇಲೆ ಪಾಲಿಸಿದಾರನು ನೀಡುವ ಪ್ರೀಮಿಯಂ ಮೊತ್ತದಲ್ಲಿ ಈ ಕೆಳ ಕಂಡ ರಿಯಾಯತಿ ದೊರೆಯುತ್ತದೆ.

ಮೆಚೂರಿಟೀ ಸಮ್ ಅಶ್ಶುರ್ಡ್ ಮೊತ್ತ (ರೂ ಗಳಲ್ಲಿ)

ಟ್ಯಾಬುಲರ್ ಸಿಂಗಲ್ ಪ್ರೀಮಿಯಂ ರೇಟ್ಸ್ ಮೇಲೆ ದೊರೆಯುವ ರಿಯಾಯತಿ 

200000 ದಿಂದ ಕೆಳಗೆ

ಯಾವುದೇ ರಿಯಾಯತಿ ಇಲ್ಲ

200000 ದಿಂದ 39೦000 ರವರೆಗೆ

ರೂ 15 ರಿಯಾಯತಿ ದೊರೆಯುತ್ತದೆ

400000 ಕ್ಕೆ ಮೇಲ್ಪಟ್ಟು

ರೂ 20 ರಿಯಾಯತಿ ದೊರೆಯುತ್ತದೆ

ಸೂಚನೆ: ಈ ರಿಯಾಯತಿಯು ಪ್ರತಿ ರೂ 1000 ಕ್ಕೆ ಅನ್ವಯ ಆಗುತ್ತದೆ.

ಎಲ್ ಐ ಸಿ ಜೀವನ್ ಸಂಗಮ್ ಪ್ಲಾನ್ – ಉಳಿದ ಬೆನಿಫಿಟ್ ಗಳು

ಎಲ್ ಐ ಸಿ ಜೀವನ್ ಸಂಗಮ್ ಪ್ಲಾನ್ ಇನ್ನಿತರ ಉಳಿದ ಬೆನಿಫಿಟ್ ಗಳನ್ನು ನೀಡುತ್ತದೆ. ಅದರ ವಿವರಗಳು ಈ ಕೆಳ ಕಂಡಂತಿದೆ.

ಸಾಲ ಸೌಲಭ್ಯ

ಈ ಪಾಲಿಸಿಯ ಮೇಲೆ ಸಾಲ ಸೌಲಭ್ಯದ ಅರ್ಹತೆ ಇರುತ್ತದೆ. ಪಾಲಿಸಿದಾರನಿಗೆ ಪಾಲಿಸಿಯನ್ನು ಪಡೆದ 3 ತಿಂಗಳಿನ ನಂತರ ಸಾಲ ಪಡೆಯಲು ಅವಕಾಶ ಇರುತ್ತದೆ. ಆದರೆ ಸಾಲವು ಕಾರ್ಪೊರೇಷನ್ ನ ನಿಯಮಕ್ಕೆ ಅನುಸಾರವಾಗಿ ದೊರೆಯುತ್ತದೆ. ಆ ನಿಯಮಗಳು ಕಾರ್ಪೊರೇಷನ್ ಕಾಲ ಕಾಲಕ್ಕೆ ಘೋಷಿಸುವ ಪ್ರಕಾರ ಅನ್ವಯವಾಗುತ್ತದೆ.

ಸರಂಡರ್ ಮೌಲ್ಯ

ನಿಯಮದ ಪ್ರಕಾರ ನೀಡುವ ಸರಂಡರ್ ಮೌಲ್ಯಕ್ಕೆ ಈ ಪಾಲಿಸಿಯು ಕೂಡ ಅರ್ಹತೆ ಹೊಂದಿದೆ. ಪಾಲಿಸಿದಾರನು ಪಾಲಿಸಿಯನ್ನು ವರ್ಷದಲ್ಲಿ  ಯಾವಾಗ ಬೇಕಾದರೂ ಸರಂಡರ್ ಮಾಡಬಹುದು. ಪಾಲಿಸಿದಾರನು ಪಾಲಿಸಿಯನ್ನು ಸರಂಡರ್ ಮಾಡಿದಲ್ಲಿ ಅದರ ಬಾಬ್ತು ಎಲ್ ಐ ಸಿ ನೀಡುವ ಗ್ಯಾರಂಟಿಡ್ ಸರಂಡರ್ ಮೌಲ್ಯವನ್ನು ಪಡೆಯುತ್ತಾನೆ. ಹಾಗೆಯೇ, ಪಾಲಿಸಿದಾರನಿಗೆ ಕಾರ್ಪೊರೇಷನ್ ಸ್ಪೆಷಲ್ ಸರಂಡರ್ ಮೌಲ್ಯವು ಗ್ಯಾರಂಟಿಡ್ ಸರಂಡರ್ ವ್ಯಾಲ್ಯು ಗಿಂತ ಹೆಚ್ಚು ಇದ್ದಲ್ಲಿ, ಅದನ್ನು ನೀಡುತ್ತದೆ. ಪಾಲಿಸಿಯು 5 ವರ್ಷದ ಮೇಲೆ ಸರಂಡರ್ ಮಾಡಿದಲ್ಲಿ, ಸರಂಡರ್ ಮೌಲ್ಯದ ಜೊತೆಗೆ ಲಾಯಲ್ಟಿ ಅಡಿಷನ್ ಸೇರಿಸಿ ನೀಡಲಾಗುತ್ತದೆ.

ಪಾಲಿಸಿಗೆ ಅನ್ವಯವಾಗುವ ತೆರಿಗೆಗಳು

ಭಾರತ ಸರ್ಕಾರ ಅಥವಾ ಇನ್ನೂ ಯಾವುದೇ ಸರ್ಕಾರದ ಸ್ವಾಮ್ಯತೆಗೆ ಒಳಪಟ್ಟ ಪ್ರಾದಿಕಾರಗಳು ಶಾಸನಬದ್ದವಾದ ತೆರಿಗೆಗಳನ್ನು ಜೀವ ವಿಮಾ ಪಾಲಿಸಿಗಳಿಗೆ ಅನ್ವಯವಾಗುವಂತೆ ಮಾಡಿದಲ್ಲಿ, ಅಂತಹ ತೆರಿಗೆಗಳು ಈ ಪಾಲಿಸಿಗೂ ಅನ್ವಯಿಸುತ್ತದೆ. ಹಾಗಾಗಿ ಪ್ರೀಮಿಯಂ ನೀಡುವಾಗ ಅವತ್ತಿನ ದಿನ ಯಾವ ತೆರಿಗೆಯು ಆ ಪಾಲಿಸಿಗೆ ಅನ್ವಯವಾಗುವುದೊ, ಅದನ್ನು ಸೇರಿಸಿ ನೀಡಬೇಕಾಗುತ್ತದ.

ಪ್ರೀಮಿಯಂ ಮೊತ್ತದ ಜೊತೆಗೆ, ಸರ್ವಿಸ್ ಟಾಕ್ಸ್ ಅನ್ನು ಕೂಡ ಕಟ್ಟಬೇಕಾಗುತ್ತದೆ. ಇದು, ಪ್ರೀಮಿಯಂ ಮೊತ್ತದ ಜೊತೆಗೆ ಸೇರದೆ ಸೆಪರೇಟ್ ಆಗಿ ನಮೂದಿಸಲಾಗುತ್ತದೆ. ಪ್ರೀಮಿಯಂ ಜೊತೆಯಲ್ಲಿ ನೀಡುವ ಯಾವ ತೆರಿಗೆಗಳನ್ನೂ, ಬೆನಿಫಿಟ್ ಲೆಕ್ಕಕ್ಕೆ ಸೇರಿಸುವುದಿಲ್ಲ.

ಪಾಲಿಸಿಗೆ ಅನ್ವಯವಾಗುವ ಕೂಲಿಂಗ್ ಪೀರಿಯಡ್

ಕೂಲಿಂಗ್ ಪೀರಿಯಡ್ ನಲ್ಲಿ, ಪಾಲಿಸಿದಾರನು, ಪಾಲಿಸಿಯ ದಾಖಲೆಗಳು ಅವನ ಕೈ ಸೇರಿದ 15 ದಿವಸಗಳಲ್ಲಿ ಅದರಲ್ಲಿ ನಮೂದಿಸಿರುವ ಎಲ್ಲ ನಿಯಮಗಳು ಹಾಗೂ ನಿಬಂದನೆಗಳನ್ನು ಓದಿ ಅದನ್ನು ಅರ್ಥ ಮಾಡಿಕೊಳ್ಳಲು ನೀಡುವ ಕಾಲಾವಕಾಶ ಆಗಿರುತ್ತದೆ. ಅಕಸ್ಮಾತ್ ಪಾಲಿಸಿದಾರನಿಗೆ ಇದರಲ್ಲಿರುವ ಯಾವುದೇ ನಿಯಮಗಳ  ಅಥವಾ ನಿಬಂದನೆಗಳ ಬಗ್ಗೆ ಒಪ್ಪಿಗೆ ಆಗದಿದ್ದಲ್ಲಿ, ಆ ಪಾಲಿಸಿಯನ್ನು ಆತನು 15 ದಿನಗಳ ಒಳಗೆ ಎಲ್ ಐ ಸಿ ಗೆ ಹಿಂದಿರುಗಿಸಬಹುದು. ಆದರೆ, ಆ ರೀತಿ ಹಿಂದಿರುಗಿಸಲು ಕಾರಣ ನೀಡಬೇಕಾಗುತ್ತದೆ. ಪಾಲಿಸಿಯು ಕಾರ್ಪೊರೇಷನ್ ಗೆ ತಲುಪಿದ ಕೂಡಲೇ ಆ ಪಾಲಿಸಿಯನ್ನು ರದ್ದು ಮಾಡಲಾಗುವುದು. ಆದರೆ, ಹಿಂದಿರುಗಿಸುವ ಮೊತ್ತದಲ್ಲಿ, ಪ್ರೊಪೋರ್ಷನೆಟ್ ರಿಸ್ಕ್ ಪ್ರೀಮಿಯಂ (ಬೇಸ್ ಪ್ಲಾನ್ ಮತ್ತು ರೈಡರ್ ಗೆ), ವೈದ್ಯಕೀಯ ಪರೀಕ್ಷೆಗೆ ಹಾಗೂ ಅದರ ರಿಪೋರ್ಟ್ ಗಳಿಗೆ ತಗುಲಿರಬಹುದಾದ  ವೆಚ್ಚವನ್ನು ಅದರಿಂದ ಕಳೆದು, ಉಳಿದ ಹಣವನ್ನು ಹಿಂದಿರುಗಿಸಲಾಗುವುದು

ಪಾಲಿಸಿಯಲ್ಲಿ ಸೇರಿಲ್ಲದೆ ಇರುವುದು

ಈ ಪಾಲಿಸಿಯಲ್ಲಿ ಪಾಲಿಸಿದಾರನ ಆತ್ಮಹತ್ಯೆ ಸೇರಿರುವುದಿಲ್ಲ. ಪಾಲಿಸಿದಾರನು ಆತ್ಮಹತ್ಯೆ ಮಾಡಿಕೊಂಡಲ್ಲಿ, ಪಾಲಿಸಿಯು ತನ್ನ  ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. .

 • ಪಾಲಿಸಿದಾರನು ಪಾಲಿಸಿ ತೆಗೆದು ಕೊಂಡ ದಿವಸದಿಂದ  12 ತಿಂಗಳುಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ, ಅಂತಹ ಪಾಲಿಸಿಯು ಕಾರ್ಪೊರೇಷನ್ ಆ ಪಾಲಿಸಿಗೆ ನೀಡಬೇಕಾಗಿರುವ ಬೆನಿಫಿಟ್ ಗಳಿಗೆ ಅರ್ಹತೆ ಪಡುವುದಿಲ್ಲ. ಆದರೆ, ಅವನು ನೀಡಿರುವ ಸಿಂಗಲ್ ಪ್ರೀಮಿಯಂ ನ  90 % ಮೊತ್ತವನ್ನು ಕಾರ್ಪೊರೇಷನ್ ನಾಮಿನಿಗೆ ನೀಡುತ್ತದೆ. ಇದರಲ್ಲಿ, ಅನ್ವಯವಾಗುವ ತೆರಿಗೆ, ಎಕ್ಸ್ಟ್ರಾ ಪ್ರೀಮಿಯಂ ಗಳು ಹಾಗೂ ರೈಡರ್ ಪ್ರೀಮಿಯಂ ಗಳು ಇದ್ದಲ್ಲಿ, ಅದನ್ನು ಕಡಿತಗೊಳಿಸಿ ಉಳಿಕೆ ಹಣವನ್ನು ನೀಡಲಾಗುವುದು.

ಈ ಮೇಲಿನ ಮೊತ್ತವನ್ನು ಬಿಟ್ಟು ಬೇರೆ ಯಾವುದೇ ಕ್ಲೈಮ್ ಗಳನ್ನು ಕಾರ್ಪೊರೇಷನ್ ನೀಡುವುದಿಲ್ಲ.

- / 5 ( Total Rating)