ಎಲ್ ಐ ಸಿ ಜೀವನ್ ಸರಳ್ ಪ್ಲಾನ್
 • ಅತ್ಯುತ್ತಮ ಯೋಜನೆಗಳು
 • ಸುಲಭ ಹೋಲಿಕೆ
 • ತಕ್ಷಣದ ಖರೀದಿ
PX step

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಹುಟ್ಟಿದ ದಿನಾಂಕ (ದೊಡ್ಡ ಸದಸ್ಯ)
ಆದಾಯ
| ಲಿಂಗ

1

2

ಫೋನ್ ಸಂಖ್ಯೆ
ಹೆಸರು
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಎಲ್ಲರಿಗೂ ತಿಳಿದಿರುವ ಹಾಗೆ, ಎಲ್ ಐ ಸಿ ಯು ಜನರಿಗೆ ಅನುಕೂಲ ಆಗುವಂತಹ ಹಾಗೂ ಅವರ ಅವಶ್ಯಕತೆಗೆ  ತಕ್ಕಂತೆ ವಿಮಾ ಯೋಜನೆಗಳನ್ನು ನೀಡುತ್ತಾ ಬಂದಿದೆ. ಆ ರೀತಿ ಜನರಿಗೆ ಉಪಯೋಗ ಆಗುವ ಮತ್ತೊಂದು ಯೋಜನೆ ಎಲ್ ಐ ಸಿ ಜೀವನ್ ಸರಳ್ ಪ್ಲಾನ್. ಎಲ್ ಐ ಸಿ ಯು ಇಲ್ಲಿಯವರೆಗಿನ ತನ್ನ ವಹಿವಾಟಿನಲ್ಲಿ, ಲಕ್ಷಾಂತರ ಜನರಿಗೆ ವಿಮಾ ಯೋಜನೆಗಳನ್ನು ನೀಡಿ, ಅವರ ರಕ್ಷಣೆ ಹಾಗೂ ಉಳಿತಾಯಗಳನ್ನು ಅತ್ಯಂತ ಮುತುವರ್ಜಿಯಿಂದ ವಹಿಸಿಕೊಂಡು ಕೆಲಸ ಮಾಡುತ್ತಾ ಬಂದಿದೆ. ಹಾಗಾಗಿ, ಎಲ್ ಐ ಸಿ ಅಂದರೆ ವಿಮೆ, ವಿಮೆ ಅಂದರೆ ಎಲ್ ಐ ಸಿ ಎನ್ನುವಂತಾಗಿದೆ. ಎಲ್ ಐ ಸಿ ಯು ತನ್ನ ಪಾರದರ್ಶಕ ವಹಿವಾಟಿನಿಂದ, ಲಕ್ಷಾಂತರ ಜನರ ನಂಬಿಕೆಗೆ ಪಾತ್ರವಾಗಿದೆ.

ಎಲ್ ಐ ಸಿ ಜೀವನ್ ಸರಳ್ ಪ್ಲಾನ್ ಮೂಲಭೂತವಾಗಿ ಒಂದು ಎಂಡೋಮೆಂಟ್ ಅಶ್ಸ್ಯುರೆನ್ಸ್ ಪ್ಲಾನ್ ಆಗಿದ್ದು, ಪಾಲಿಸಿದಾರನಿಗೆ ಅನೇಕ ಅನುಕೂಲ ಆಗುವಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪಾಲಿಸಿದಾರನು ತಾನು ನೀಡುವುದಕ್ಕೆ ಸಾಧ್ಯ ಆಗುವ ಪ್ರೀಮಿಯಂ ಮೊತ್ತ ಹಾಗೂ ರೀತಿ ಇವೆರಡನ್ನು ಆಯ್ಕೆ ಮಾಡಬೇಕಾಗುತ್ತದೆ. ಈ ಪಾಲಿಸಿಯ ನಿಯಮದ ಪ್ರಕಾರ, ಪಾಲಿಸಿಯ ಪೂರ್ಣ ಅವದಿಯಲ್ಲಿ, ಆರ್ಥಿಕ ರಕ್ಷಣೆಯು ಒದಗುತ್ತದೆ. ಈ ರಕ್ಷಣೆಯು, ಪಾಲಿಸಿದಾರನ ಮರಣವು ಪಾಲಿಸಿಯ ಆವದಿಯ ಒಳಗೆಯೇ ಆದಲ್ಲಿ, ಆತನ ನಾಮಿನಿಗೆ ದೊರಕುತ್ತದೆ. ಅಂದರೆ, ಪಾಲಿಸಿದಾರನ ಅನುಪಸ್ಥಿತಿಯಲ್ಲಿ, ಆತನ ಕುಟುಂಬವು ಸಾದ್ಯವಾದಷ್ಟು ಆರ್ಥಿಕ ಹೊರೆಯನ್ನು ಅನುಭವಿಸದೇ ಇರುವ ಹಾಗೆ ನೋಡಿಕೊಳ್ಳುತ್ತದೆ. ಪಾಲಿಸಿದಾರನ ಮರಣ ಆದಲ್ಲಿ, ಆತನ ನಾಮಿನಿಗೆ, ಡೆತ್ ಬೆನಿಫಿಟ್ ಮೊತ್ತವು ಪಾಲಿಸಿಯ ಅವದಿ ಇರುವವರೆಗೂ ದೊರೆಯುತ್ತದೆ. ಪಾಲಿಸಿದಾರನಿಗೆ ಆತನಿಗೆ ಸೂಕ್ತವಾದಂತಹ ಅವದಿ(ಟರ್ಮ್) ಅನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಹಾಗೆಯೇ, ಆತನಿಗೆ ಹಣದ ಅವಶ್ಯಕತೆ ಇದ್ದಲ್ಲಿ, ಸಮಯಕ್ಕೆ ಸರಿಯಾಗಿ ಆರ್ಥಿಕವಾಗಿ ಸಹಾಯವನ್ನು ಮಾಡುವಲ್ಲಿ ಪಾಲಿಸಿಯು ನೆರವಾಗುತ್ತದೆ.

ಪಾಲಿಸಿದಾರನಿಗೆ ಅವನಿಗೆ ಬೇಕಾದ ಪ್ರೀಮಿಯಂ ಮೊತ್ತವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದ್ದು, ಹಾಗೆ ಆಯ್ಕೆ ಮಾಡಿರುವ ತಿಂಗಳಿನ ಪ್ರೀಮಿಯಂ ಮೊತ್ತಕ್ಕೆ 250 ಪಟ್ಟು ಮೊತ್ತವನ್ನು ಸಮ್ ಅಶ್ಶುರ್ಡ್ ಆಗಿ ಪರಿಗಣಿಸಲಾಗುತ್ತದೆ. ಪಾಲಿಸಿದಾರನು, ಪಾಲಿಸಿಯ ಆವದಿಯನ್ನು ಪೂರೈಸಿದಲ್ಲಿ, ಆತನಿಗೆ ಮೆಚೂರಿಟೀ ಸಮ್ ಅಶ್ಶುರ್ಡ್ ಮೊತ್ತ ಹಾಗೂ ಅದರ ಜೊತೆಗೆ, ಲಾಯಲ್ಟಿ ಅಡಿಶನ್ ಮೊತ್ತವನ್ನು ಸೇರಿಸಿ ನೀಡಲಾಗುವುದು. ಈ ಮೆಚೂರಿಟೀ ಸಮ್ ಅಶ್ಶುರ್ಡ್ ಮೊತ್ತವು ಪಾಲಿಸಿದಾರನು ಪಾಲಿಸಿ ಕೊಳ್ಳುವ ವಿವಿದ ವಯಸ್ಸುಗಳ ಹಾಗೂ ಪಾಲಿಸಿಯ ಅವದಿ ಗಳ ಮೇಲೆ ಅವಲಂಬಿತ ಆಗಿರುತ್ತದೆ. ಈ ವಿವರಗಳು ಪಾಲಿಸಿ ಪಡೆಯುವಾಗಲೇ ನಮೂದಿಸಲಾಗಿರುತ್ತದೆ.

ಪಾಲಿಸಿದಾರನ ಆಕಸ್ಮಿಕ ಮರಣವು, ಪಾಲಿಸಿಯ ಅವದಿಯ ಒಳಗಡೆಯೇ ಆದಲ್ಲಿ, ಆತನು ನಮೂದಿಸಿರುವ ನಾಮಿನಿಗೆ ಈ ಕೆಳ ಕಂಡ ಮೊತ್ತವು ದೊರೆಯುತ್ತದೆ.

 • ಸಮ್ ಅಶ್ಶುರ್ಡ್ ಮೊತ್ತ + ಪ್ರೀಮಿಯಂ ಗಳ ಬಾಬ್ತು ನೀಡಿರುವ ಒಟ್ಟು ಮೊತ್ತ (ಎಕ್ಷ್ತ್ರಾ ಪ್ರೀಮಿಯಂ / ರೈಡರ್ ಮೊತ್ತ ಹಾಗೂ ಮೊದಲ ವರ್ಷದ ಪ್ರೀಮಿಯಂ ಗಳ ಮೊತ್ತ ಗಳನ್ನು ಹೊರತು ಪಡಿಸಿ) + ಲಾಯಲ್ಟಿ ಅಡಿಶನ್ ಮೊತ್ತ (ಇದ್ದಲ್ಲಿ).

ಹಾಗಾಗಿ, ಡೆತ್ ಬೆನಿಫಿಟ್ ಮೊತ್ತವು ಕೇವಲ ಪ್ರೀಮಿಯಂ  ಮೊತ್ತದ ಮೇಲೆ ಅವಲಂಬಿತವಾಗಿದ್ದು, ಪಾಲಿಸಿದಾರನು ಪಾಲಿಸಿ ಪಡೆಯುವಾಗಿನ ವಯಸ್ಸು ಅಥವಾ ಪಾಲಿಸಿಯ ಅವದಿಯ ಮೇಲೆ ಅವಲಂಬಿತ ಆಗಿರುವುದಿಲ್ಲ.

ಆದರೆ, ಮೆಚೂರಿಟೀ ಬೆನಿಫಿಟ್ ಪಾಲಿಸಿದಾರನು ಪಾಲಿಸಿ ಪಡೆಯುವಾಗಿನ ವಯಸ್ಸು ಮತ್ತು ಪಾಲಿಸಿಯ ಅವದಿಯ ಮೇಲೆ ಅವಲಂಬಿತ ಆಗಿರುತ್ತದೆ.

ಎಲ್ ಐ ಸಿ ಜೀವನ್ ಸರಳ್ – ವಿಶಿಷ್ಟತೆಗಳು

ಈ ಪಾಲಿಸಿಯು ಪಾಲಿಸಿದಾರನಿಗೆ ಅನೇಕ ವಿಶೇಷ ಸೌಲಭ್ಯತೆಗಳನ್ನು ನೀಡುತ್ತದೆ.

 • ಈ ಪಾಲಿಸಿಯ ನಿಯಮದ ಪ್ರಕಾರ, ಪಾಲಿಸಿದಾರನು ಸಮ್ ಅಶ್ಶುರ್ಡ್ ಮೊತ್ತದ ಬದಲು ಅವನ ಅನುಕೂಲತೆಗೆ ತಕ್ಕಂತೆ ಹಾಗೂ ಅವನಿಗೆ ಸಾದ್ಯವಾಗುವ ಪ್ರೀಮಿಯಂ ಮೊತ್ತವನ್ನು ಆರಿಸಿಕೊಳ್ಳಬೇಕಾಗುತ್ತದೆ. ಪಾಲಿಸಿಯ ಮೇಲಿನ ಸಮ್ ಅಶ್ಶುರ್ಡ್ ತದ ನಂತರ ನಿರ್ಧಾರವಾಗುತ್ತದೆ.
 • ಕೆಲವು ಷರತ್ತು ಮತ್ತು ನಿಬಂದನೆಗೆ ಒಳ ಪಟ್ಟು, ಪಾಲಿಸಿದಾರನಿಗೆ ಪಾಲಿಸಿಯನ್ನು ಬಾಗಶಃ ಸರಂಡರ್ ಮಾಡುವ ಅವಕಾಶ ಇರುತ್ತದೆ. ಆದರೆ, ಪಾಲಿಸಿಯು 3 ವರ್ಷಗಳ ಆವದಿಯನ್ನು ಮುಗಿಸಿರಬೇಕು.
 • ಇದೇ ರೀತಿ, ಪಾಲಿಸಿದಾರನು ಪ್ರೀಮಿಯಂ ಮೊತ್ತವನ್ನು ಪಾವತಿಸಲು ಫ್ಲೆಕ್ಸಿಬಲ್ ಟರ್ಮ್ ಆರಿಸಿಕೊಳ್ಳುವ ಅವಕಾಶ ಇರುತ್ತದೆ.
 • ಪಾಲಿಸಿದಾರನು ಪ್ರೀಮಿಯಂ ಮೊತ್ತವನ್ನು ಆಯ್ಕೆ ಮಾಡಿದಾಗ, ಸಮ್ ಅಶ್ಶುರ್ಡ್ ಮೊತ್ತವು ಆದರ 250 ಪಟ್ಟು ಆಗುತ್ತದೆ.
 • ಪಾಲಿಸಿದಾರನ ಆಕಸ್ಮಿಕ ಮರಣವು, ಪಾಲಿಸಿಯ ಅವದಿಯ ಒಳಗಡೆಯೇ ಆದಲ್ಲಿ, ಆತನು ನಮೂದಿಸಿರುವ ನಾಮಿನಿಗೆ ಸಮ್ ಅಶ್ಶುರ್ಡ್ ಮೊತ್ತ + ಪ್ರೀಮಿಯಂ ಗಳ ಬಾಬ್ತು ನೀಡಿರುವ ಒಟ್ಟು ಮೊತ್ತ (ಎಕ್ಷ್ತ್ರಾ ಪ್ರೀಮಿಯಂ / ರೈಡರ್ ಮೊತ್ತ ಹಾಗೂ ಮೊದಲ ವರ್ಶ್ದ ಪ್ರೀಮಿಯಂ ಗಳ ಮೊತ್ತ ಗಳನ್ನು ಹೊರತು ಪಡಿಸಿ) + ಲಾಯಲ್ಟಿ ಅಡಿಶನ್ ಮೊತ್ತ (ಇದ್ದಲ್ಲಿ) ಸೇರಿಸಿ ಒಟ್ಟು ಮೊತ್ತವನ್ನು ನೀಡಲಾಗುತ್ತದೆ.
 • ಪಾಲಿಸಿದಾರನು ಪಾಲಿಸಿಯ ಆವದಿಯನ್ನು ಪೂರೈಸಿದಲ್ಲಿ ಮೆಚೂರಿಟೀ ಮೊತ್ತವಾಗಿ ಮೆಚೂರಿಟೀ ಸಮ್ ಅಶ್ಶುರ್ಡ್ ಮತ್ತು ಲಾಯಲ್ಟಿ ಆದಿಶನ್ ಮೊತ್ತವನ್ನು ಸೇರಿಸಿ ನೀಡಲಾಗುವುದು.
 • ಪಾಲಿಸಿಗೆ 3 ವರ್ಷಗಳು ಕಳೆದ ಬಳಿಕ ಪಾಲಿಸಿದಾರನಿಗೆ 1 ವರ್ಷದ ಎಕ್ಸ್ಟೆನ್ಡೆಡ್ ರಿಸ್ಕ್ ಕವರ್ ಅನ್ನು ನೀಡಲಾಗುತ್ತದೆ.
 • ಪಾಲಿಸಿಗೆ ಆಪ್ಶನಲ್ ಹೆಚ್ಚುವರಿ ರಿಸ್ಕ್ ಕವರ್  ಎಂದು ಟರ್ಮ್ ರೈಡರ್ ಹಾಗೂ ಆಕಸ್ಮಿಕ (ಆಕ್ಸಿಡೆಂಟಲ್) ಡೆತ್ ಮತ್ತು ಅಂಗ ವೈಕಲ್ಯ (ಡಿಸ್ಎಬಿಲಿಟಿ) ಬೆನಿಫಿಟ್ ಅನ್ನು ನೀಡಲಾಗುತ್ತದೆ.
 • ಪಾಲಿಸಿದಾರನು ಹೆಚ್ಚಿಗಿನ ಟರ್ಮ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಹಾಗೆಯೇ, 5 ವರ್ಷಗಳ ನಂತರ ಪಾಲಿಸಿಯನ್ನು ಯಾವುದೇ ದಂಡ ಇಲ್ಲದೇ ಅಥವಾ ನಷ್ಟ ಇಲ್ಲದೇ ಸರಂಡರ್ ಮಾಡುವ ಅವಕಾಶ ಇರುತ್ತದೆ.
 • ಈ ಪಾಲಿಸಿಯು ಅದರ 10 ವರ್ಷಗಳ ನಂತರ, ಲಾಯಲ್ಟಿ ಅಡಿಶನ್  ಮೊತ್ತಕ್ಕೆ ಅರ್ಹವಾಗುತ್ತದೆ.

ಎಲ್ ಐ ಸಿ ಜೀವನ್ ಸರಳ್ – ಬೆನಿಫಿಟ್ ಗಳು

ಎಲ್ ಐ ಸಿ ಜೀವನ್ ಸರಳ್ ಪಾಲಿಸಿಯಲ್ಲಿ ಈ ಕೆಳ ಕಂಡ ಬೇನೆಫಿಟ್ ಗಳು  ಪಾಲಿಸಿದಾರನಿಗೆ ಲಭ್ಯವಾಗುತ್ತದೆ. ಈ ಪಾಲಿಸಿಯ ಒಂದು ವೈಶಿಷ್ಟ್ಯವೆಂದರೆ, ರೆಗ್ಯುಲರ್ ವಿಮಾ ಪಾಲಿಸಿಗಳಲ್ಲಿ ಲಭ್ಯವಿಲ್ಲದೆ ಇರುವ ಬೆನಿಫಿಟ್ ಗಳು ಇದರಲ್ಲಿ ಇದೆ. ಈ ಬೆನಿಫಿಟ್ ಗಳು ಸಾದಾರಣವಾಗಿ, ಯೂನಿಟ್ ಲಿಂಕ್ಡ್ ವಿಮೆ ಯೋಜನೆಗಳಲ್ಲಿ ಲಭ್ಯವಿರುತ್ತದೆ.

ಡೆತ್ ಬೆನಿಫಿಟ್

ಪಾಲಿಸಿದಾರನು ಪಾಲಿಸಿಯ ಅವದಿಯಲ್ಲಿ ಮರಣ ಹೊಂದಿದಲ್ಲಿ, ಆತನ ಕುಟುಂಬಕ್ಕೆ ತೊಂದರೆ ಆಗದೆ ಇರುವಂತೆ, ಆತನ ನಾಮಿನಿಗೆ ಡೆತ್ ಬೆನಿಫಿಟ್ ಮೊತ್ತವನ್ನು ನೀಡಲಾಗುತ್ತದೆ.

ಈ ಡೆತ್ ಬೆನಿಫಿಟ್ ಮೊತ್ತ =  ಸಮ್ ಅಶ್ಶುರ್ಡ್ ಮೊತ್ತ + ಪ್ರೀಮಿಯಂ ಗಳ ಬಾಬ್ತು ನೀಡಿರುವ ಒಟ್ಟು ಮೊತ್ತ (ಎಕ್ಷ್ತ್ರಾ ಪ್ರೀಮಿಯಂ / ರೈಡರ್ ಮೊತ್ತ ಹಾಗೂ ಮೊದಲ ವರ್ಶ್ದ ಪ್ರೀಮಿಯಂ ಗಳ ಮೊತ್ತ ಗಳನ್ನು ಹೊರತು ಪಡಿಸಿ) + ಲಾಯಲ್ಟಿ ಅಡಿಶನ್ ಮೊತ್ತ (ಇದ್ದಲ್ಲಿ).

ಮೆಚೂರಿಟೀ ಬೆನಿಫಿಟ್

ಮೆಚೂರಿಟೀ ಬೆನಿಫಿಟ್ ಮೊತ್ತ = ಮೆಚೂರಿಟೀ ಸಮ್ ಅಶ್ಶುರ್ಡ್ ಮೊತ್ತ + ಲಾಯಲ್ಟಿ ಆದಿಶನ್ ಮೊತ್ತ (ಇದ್ದಲ್ಲಿ)

ಆಪ್ಶನಲ್ / ಸಪ್ಲಿಮೆಂಟರಿ / ಎಕ್ಷ್ತ್ರಾ ಬೇನೆಫಿಟ್

ಈ ಪಾಲಿಸಿಯ ಜೊತೆಗೆ ಎಲ್ ಐ ಸಿ ನೀಡುವ ಕೆಲವು ಆಪ್ಶನಲ್ ಬೆನಿಫಿಟ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಹಾಗೆ ಆಯ್ಕೆ ಮಾಡಿಕೊಂಡ ಆಪ್ಶನಲ್ ಬೆನಿಫಿಟ್ ಗಳಿಗೆ, ಪಾಲಿಸಿದಾರನು ಹೆಚ್ಚುವರಿ ಹಣವನ್ನು ಪ್ರೀಮಿಯಂ ಗಳ ಜೊತೆಗೆ ನೀಡಬೇಕಾಗುತ್ತದೆ.
ಸರಂಡರ್ ಮೌಲ್ಯ

ಯಾವುದೇ ಜೀವ ವಿಮಾ ಯೋಜನೆಯನ್ನು ಕೊಂಡಲ್ಲಿ, ಅದು ಪಾಲಿಸಿದಾರನ ಹಾಗೂ ಕಾರ್ಪೊರೇಷನ್ ಮಧ್ಯದಲ್ಲಿನ ಒಂದು ದೀರ್ಘ ಕಾಲದ ಒಡಂಬಡಿಕೆ ಆಗಿರುತ್ತದೆ. ಈ ಪಾಲಿಸಿಯ ಅಡಿಯಲ್ಲಿ, ಪಾಲಿಸಿದಾರನಿಗೆ ಅವದಿಯ ಮಧ್ಯದಲ್ಲಿ ಹಣದ ಅವಶ್ಯಕತೆ ಇದ್ದಲ್ಲಿ, ಆತನಿಗೆ ಉಪಯೋಗ ಆಗಲಿ ಎಂಬ ದೃಷ್ಟಿಯಿಂದ ಎಲ್ ಐ ಸಿ ಯು ಈ ಪಾಲಿಸಿಯನ್ನು ಸರಂಡರ್ ಮಾಡುವ ಅವಕಾಶ ನೀಡುತ್ತದೆ. ಹಾಗೆ ಪಾಲಿಸಿದಾರನು ಪಾಲಿಸಿಯನ್ನು ಸರಂಡರ್ ಮಾಡಿದಲ್ಲಿ, ಆತನಿಗೆ ಗ್ಯಾರಂಟಿಡ್ ಸರಂಡರ್ ಮೊತ್ತ ಅಥವಾ ಸ್ಪೆಷಲ್ ಸರಂಡರ್ ಮೊತ್ತ, ಇವೆರಡರಲ್ಲಿ ಯಾವುದು ಹೆಚ್ಚಿರುವುದೋ ಅದನ್ನು ನೀಡುವುದು. ಹಾಗೆಯೇ, ಪಾಲಿಸಿಯನ್ನು ಬಾಗಶಃ ಸರಂಡರ್ ಮಾಡುವ ಅವಕಾಶವನ್ನು ಕೂಡ ನೀಡಲಾಗಿದೆ.

ಗ್ಯಾರಂಟಿಡ್ ಸರಂಡರ್ ಮೌಲ್ಯ

ಪಾಲಿಸಿಯು 3 ವರ್ಷಗಳು ಅಸ್ಥಿತ್ವದಲ್ಲಿ ಇದ್ದಲ್ಲಿ, ಅಂತಹ ಪಾಲಿಸಿಯನ್ನು ಸರಂಡರ್ ಮಾಡಬಹುದು. ಹಾಗೆ ಮಾಡಿದಲ್ಲಿ, ಪಾಲಿಸಿದಾರನಿಗೆ, ಗ್ಯಾರಂಟಿಡ್ ಸರಂಡರ್ ಮೊತ್ತವನ್ನು ನೀಡಲಾಗುವುದು.

ಗ್ಯಾರಂಟಿಡ್ ಸರಂಡರ್ ಮೊತ್ತ = ಅದುವರೆವಿಗೂ ನೀಡಿರುವ ಪ್ರೀಮಿಯಂ ಗಳ ಒಟ್ಟಾರೆ ಮೊತ್ತದ 30 % ನಷ್ಟು.

ಇದರಲ್ಲಿ ಮೊದಲನೇ ವರ್ಷದ ಪ್ರೀಮಿಯಂ ಮೊತ್ತ ಹಾಗೂ ಎಕ್ಷ್ತ್ರಾ ಪ್ರೀಮಿಯಂ ಗಳು ಮತ್ತು ಆಕ್ಸಿಡೆಂಟ್ ಬೆನಿಫಿಟ್ / ಟರ್ಮ್ ರೈಡರ್ ಗೆ ನೀಡಿರುವ ಪ್ರೇಮಿಯಂ ಇವುಗಳು ಸೇರಿರುವುದಿಲ್ಲ.

ಸ್ಪೆಷಲ್ ಸರಂಡರ್ ಮೌಲ್ಯ

ಸ್ಪೆಷಲ್ ಸರಂಡರ್ ಮೌಲ್ಯವನ್ನು ಈ ಕೆಳ ಕಂಡ ರೀತಿಯಲ್ಲಿ ಲೆಕ್ಕ ಹಾಕಲಾಗುವುದು.

ಪ್ರೀಮಿಯಂ ಗಳನ್ನು ನೀಡಿರುವ ಅವದಿ

ಸ್ಪೆಷಲ್ ಸರಂಡರ್ ಮೌಲ್ಯ

3 ವರ್ಷಕ್ಕಿಂತ ಹೆಚ್ಚು ಹಾಗೂ 4 ವರ್ಷಗಳಿಗಿಂತ ಕಮ್ಮಿ ಅವದಿಯ ಪ್ರೀಮಿಯಂ ನೀಡಿದ್ದಲ್ಲಿ

ಮೆಚೂರಿಟೀ ಸಮ್ ಅಶ್ಶುರ್ಡ್ ಮೊತ್ತದ 80 % ಮೊತ್ತ.

4 ವರ್ಷಕ್ಕಿಂತ ಹೆಚ್ಚು ಹಾಗೂ 5 ವರ್ಷಗಳಿಗಿಂತ ಕಮ್ಮಿ ಅವದಿಯ ಪ್ರೀಮಿಯಂ ನೀಡಿದ್ದಲ್ಲಿ

ಮೆಚೂರಿಟೀ ಸಮ್ ಅಶ್ಶುರ್ಡ್ ಮೊತ್ತದ 90 % ಮೊತ್ತ

5 ವರ್ಷಕ್ಕಿಂತ ಹೆಚ್ಚು ಅವದಿಯ ಪ್ರೀಮಿಯಂ ನೀಡಿದ್ದಲ್ಲಿ

ಮೆಚೂರಿಟೀ ಸಮ್ ಅಶ್ಶುರ್ಡ್ ಮೊತ್ತದ 100 %

ಮೇಲ್ಕಂಡ ಮೆಚೂರಿಟೀ ಸಮ್ ಅಶ್ಶುರ್ಡ್ ಮೊತ್ತ ಎಂದರೆ ಪಾಲಿಸಿದಾರನು ಎಲ್ಲಿಯವರೆಗೂ ಪ್ರೀಮಿಯಂ ನೀಡಿರುತ್ತಾನೋ ಆ ಆವದಿಗೆ ಲೆಕ್ಕಾಚಾರ ಹಾಕಿರುವ ಮೊತ್ತ.

ಪಾಲಿಸಿಯ ಸರಂಡರ್ ಬಗ್ಗೆ ಕಾರ್ಪೊರೇಷನ್ ನ ನಿಯಮ

ಸಾಮಾನ್ಯವಾಗಿ, ಎಲ್ ಐ ಸಿ ಯು ಪಾಲಿಸಿಯನ್ನು ಪಾಲಿಸಿದಾರನು ಸರಂಡರ್ ಮಾಡಿದಾಗ, ಸ್ಪೆಷಲ್ ಸರಂಡರ್ ಮೊತ್ತವನ್ನು ಅವನಿಗೆ ನೀಡುತ್ತದೆ. ಈ ಸ್ಪೆಷಲ್ ಸರಂಡರ್ ಮೌಲ್ಯವು ಗ್ಯಾರಂಟಿಡ್ ಸರಂಡರ್ ಮೌಲ್ಯಕ್ಕಿಂತ ಹೆಚ್ಚಿಗೆ ಇರುತ್ತದೆ. ಈ ಮೊತ್ತವು ಪಾಲಿಸಿಯ ಅವದಿ ಹಾಗೂ ಎಲ್ಲಿಯವರೆಗೂ ಪ್ರೀಮಿಯಂ ಗಳನ್ನು ನೀಡಲಾಗಿದೆ ಎನ್ನುವುದರ ಮೇಲೆ ಅವಲಂಬಿತ ಆಗಿರುತ್ತದೆ. ಕೆಲವು ಸಂಧರ್ಭದಲ್ಲಿ, ಅಂದರೆ, ಪಾಲಿಸಿದಾರನು ಪಾಲಿಸಿಯನ್ನು  ಬೇಗನೇ ಮಾಡಿದಲ್ಲಿ, ಸರಂಡರ್ ಮೌಲ್ಯವು ಆತನು ಕಟ್ಟಿರುವ ಪ್ರೀಮಿಯಂ ಗಳ ಮೊತ್ತಕ್ಕಿಂತ ಕಮ್ಮಿ ಇರುವ ಸಾಧ್ಯತೆ ಇರುತ್ತದೆ.

ಕಾರ್ಪೊರೇಷನ್ ನವರು ಈ ರೀತಿ ನೀಡಬೇಕಾದ ಸರಂಡರ್ ಮೌಲ್ಯವನ್ನು ಆಗಿಂದಾಗ್ಗೆ ರಿವ್ಯೂ ಮಾಡುತ್ತಲಿದ್ದು, ಅದು ಅನೇಕ ಫ್ಯಾಕ್ಟರ್ ಗಳ ಮೇಲೆ ಅವಲಂಬಿತವಾಗಿರುತ್ತದೆ.

ಎಲ್ ಐ ಸಿ ಜೀವನ್ ಸರಳ್ – ಬೆನಿಫಿಟ್ ನ ಉದಾಹರಣೆ

ಶಾಸನಬದ್ದ ಎಚ್ಚರಿಕೆ

ಎಲ್ ಐ ಸಿ ಯು ನೀಡುವ ಬೆನೆಫಿಟ್ಸ್ ಗಳಲ್ಲಿ ಕೆಲವು ಗ್ಯಾರಂಟಿಡ್ ಆಗಿದ್ದು ಇನ್ನೂ ಕೆಲವು ಬದಲಾವಣೆಗೆ ಒಳ ಪಡುವ ಬೆನಿಫಿಟ್ ಗಳು ಆಗಿರುತ್ತವೆ, ಏಕೆಂದರೆ, ಅಂತಹ ಬೆನಿಫಿಟ್ ಗಳು ಕಾರ್ಪೊರೇಷನ್ ನ ಮುಂದಿನ ಕಾರ್ಯ ನಿರ್ವಹಣೆ ಹಾಗೂ ಅದರಿಂದ ಬರುವ ಆದಾಯದ ಮೇಲೆ ಅವಲಂಬಿತವಾಗಿರುತ್ತದೆ ನಿಮ್ಮ ಪಾಲಿಸಿಯಲ್ಲಿ  ಗ್ಯಾರಂಟಿಡ್ ಆದಾಯ ಎಂದು ನಮೂದಿಸಿರುವ ಬೆನಿಫಿಟ್ ಗಳಿಗೆ ಕೆಳ ಕಂಡ ಟೇಬಲ್ ನಲ್ಲಿ “ಗ್ಯಾರಂಟಿಡ್”  ಎಂದು ತೋರಿಸಲಾಗಿದೆ. ಹಾಗೆಯೇ, ಪಾಲಿಸಿಯಲ್ಲಿ ನಮೂದಿಸಿರುವ ಗ್ಯಾರಂಟಿಡ್ ಅಲ್ಲದ ಬೆನಿಫಿಟ್ ಗಳನ್ನು ಕೆಳ ಕಂಡ ಟೇಬಲ್ ನಲ್ಲಿ ಎರಡು ರೀತಿಯ ರಿಟರ್ನ್ಸ್ ಗಳನ್ನು ಗಣನೆಗೆ ತೆಗೆದುಕೊಂಡು ಅದರ ರೀತ್ಯಾ ತೋರಿಸಲಾಗಿದೆ. ಇದು ಭವಿಷ್ಯದಲ್ಲಿ ಕಾರ್ಪೊರೇಷನ್ ನ ಬಂಡವಾಳ ಹೂಡಿಕೆಯಿಂದ ಬರಬಹುದಾದ ಎರಡು ಊಹಿಸಲಾದ ಆದಾಯ ಗಳನ್ನು ಅಳವಡಿಸಿ ತಯಾರಿಸಲಾಗಿದೆ. ಈ ಎರಡು ಊಹಿಸಲಾದ ಆದಾಯಗಳು ಪಾಲಿಸಿಯ ಬಾಬ್ತು ನೀಡುವ ಗ್ಯಾರಂಟಿಡ್ ಮೊತ್ತವಲ್ಲ. ಹಾಗೂ ಅವುಗಳು ಗರಿಷ್ಠ ಅಥವಾ ಕನಿಷ್ಠ ಮಿತಿಗಳು ಕೂಡ ಅಲ್ಲ. ಏಕೆಂದರೆ, ನಿಮ್ಮ ಪಾಲಿಸಿಯು ಬೇರೆ ಬೇರೆ ಅಂಶಗಳ ಮೇಲೆ ಹಾಗೂ ಕಾರ್ಪೊರೇಷನ್ ನ ಮುಂದಿನ ಕಾರ್ಯ ನಿರ್ವಹಣೆಯ ಮೇಲೂ ಅವಲಂಬಿತವಾಗಿರುತ್ತದೆ

ಈ ಪಾಲಿಸಿಯ ಬೆನಿಫಿಟ್ ಗಳ ಬಗ್ಗೆ ಕೆಳಗಿನ ಉದಾಹರಣೆಯನ್ನು ಗಮನಿಸಿ.

ವಿವರಗಳು

ಪಾಲಿಸಿಯನ್ನು ಪಡೆಯುವಾಗ ಪಾಲಿಸಿದಾರನ ವಯಸ್ಸು

35 ವರ್ಷಗಳು

ಪಾಲಿಸಿಯ ಅವದಿ (ಟರ್ಮ್)

25 ವರ್ಷಗಳು

ಪ್ರೀಮಿಯಂ ನೀಡುವ ರೀತಿ

ವರ್ಷಕ್ಕೊಮ್ಮೆ

ವಾರ್ಷಿಕ  ಪ್ರೀಮಿಯಂ ಮೊತ್ತ (ರೂ ಗಳಲ್ಲಿ)

4704

ಪಾಲಿಸಿದಾರನ ಮರಣ ಆದಲ್ಲಿ ಸಿಗಬಹುದಾದ ಡೆತ್ ಬೆನಿಫಿಟ್

ಪಾಲಿಸಿದಾರನ ಮರಣವು ಪಾಲಿಸಿಯ ಅವದಿಯ ಒಳಗೆ ಆದಲ್ಲಿ, ಆತನು ನಮೂದಿಸಿರುವ ನಾಮಿನಿಗೆ ಕೆಳ ಕಂಡ ಡೆತ್ ಬೇನೆಫಿಟ್ ಅನ್ನು ನೀಡಲಾಗುವುದು.

ಪಾಲಿಸಿಯ ಅವದಿ (ವರ್ಷ  ಗಳಲ್ಲಿ)

ಒಟ್ಟು ನೀಡಿರುವ ಪ್ರೀಮಿಯಂ ಮೊತ್ತ (ರೂ ಗಳಲ್ಲಿ)

ಪಾಲಿಸಿದಾರನ ಮರಣ ಆದಲ್ಲಿ ಪಡೆಯಬಹುದಾದ ಸಮ್ ಅಶ್ಶುರ್ಡ್ ಆನ್ ಡೆತ್ (ರೂ ಗಳಲ್ಲಿ)   

ಗ್ಯಾರಂಟಿಡ್ ಮೊತ್ತ (ರೂ ಗಳಲ್ಲಿ)

ಬದಲಾಗಬಹುದಾದ ಮೊತ್ತ

ಒಟ್ಟಾರೆ ಮೊತ್ತ

ಸಿನ್ಯರಿಯೋ 1

6 %

ಸಿನ್ಯರಿಯೋ 1

10 %

ಸಿನ್ಯರಿಯೋ 1

6 %

ಸಿನ್ಯರಿಯೋ 1

10 %

1

4704

100000

0

0

100000

100000

2

9408

104800

0

0

104800

104800

3

14112

109600

0

0

109600

109600

4

18816

114400

0

0

114400

114400

5

23520

119200

0

0

119200

119200

6

28224

124000

0

0

124000

124000

7

32928

128800

0

0

128800

128800

8

37632

133600

0

0

133600

133600

9

42336

138400

0

0

138400

138400

10

47040

143200

7000

18000

150200

161200

15

70560

167200

13000

41000

180200

208200

20

94080

191200

30000

100000

221200

291200

25

117600

215200

65000

211000

280200

426200

ಪಾಲಿಸಿದಾರನು ಪಾಲಿಸಿಯನ್ನು ಸರಂಡರ್ ಮಾಡಿದಲ್ಲಿ ಸಿಗಬಹುದಾದ ಬೆನಿಫಿಟ್

ಪಾಲಿಸಿದಾರನು ಪಾಲಿಸಿಯನ್ನು ಸರಂಡರ್ ಮಾಡಿದಲ್ಲಿ ಸಿಗಬಹುದಾದ ಮೊತ್ತದ ಲೆಕ್ಕಾಚಾರವನ್ನು ಕೆಳಗೆ ನೀಡಲಾಗಿದೆ.  

ಪಾಲಿಸಿಯ ಅವದಿ (ವರ್ಷ  ಗಳಲ್ಲಿ)

ಒಟ್ಟು ನೀಡಿರುವ ಪ್ರೀಮಿಯಂ ಮೊತ್ತ (ರೂ ಗಳಲ್ಲಿ)

ಪಾಲಿಸಿದಾರನ ಮರಣ ಆದಲ್ಲಿ ಪಡೆಯಬಹುದಾದ ಸಮ್ ಅಶ್ಶುರ್ಡ್ ಆನ್ ಡೆತ್ (ರೂ ಗಳಲ್ಲಿ)   

ಗ್ಯಾರಂಟಿಡ್ ಮೊತ್ತ (ರೂ ಗಳಲ್ಲಿ)

ಬದಲಾಗಬಹುದಾದ ಮೊತ್ತ

ಒಟ್ಟಾರೆ ಮೊತ್ತ

ಸಿನ್ಯರಿಯೋ 1

6 %

ಸಿನ್ಯರಿಯೋ 1

10 %

ಸಿನ್ಯರಿಯೋ 1

6 %

ಸಿನ್ಯರಿಯೋ 1

10 %

1

4704

0

0

0

0

0

2

9408

0

0

0

0

0

3

14112

8099

0

0

8099

8099

4

18816

12942

0

0

12942

12942

5

23520

18660

0

0

18660

18660

6

28224

23180

0

0

23180

23180

7

32928

27856

0

0

27856

27856

8

37632

32744

0

0

32744

32744

9

42336

37892

0

0

37892

37892

10

47040

43360

7000

18000

50360

61360

15

70560

75200

13000

41000

88200

116200

20

94080

106124

30000

100000

136124

206124

25

117600

135296

65000

211000

200296

346296

ಸೂಚನೆ:

 • ಮೇಲೆ ಕಾಣಿಸಿರುವ ಲೆಕ್ಕಾಚಾರವು ಪಾಲಿಸಿದಾರನು ನಾನ್-ಸ್ಮೋಕರ್ ಪುರುಷ / ಮಹಿಳೆ ಸ್ಟಾಂಡರ್ಡ್ ಲೈಫ್ (ಮೆಡಿಕಲ್, ಲೈಫ್ ಸ್ಟಯಿಲ್ ಹಾಗೂ ಆತನ/ ಅವಳ ಉದ್ಯೋಗವನ್ನು ಗಣನೆಗೆ ತೆಗೆದುಕೊಂಡು)
 • ಮೇಲೆ ಕಾಣಿಸಿರುವ ನಾನ್ ಗ್ಯಾರಂಟಿಡ್ ಬೆನಿಫಿಟ್ ಮೊತ್ತಗಳನ್ನು ಲೆಕ್ಕಾಚಾರ ಮಾಡುವಾಗ ಮುಂದೆ ಬರಬಹುದಾದ ಆದಾಯವನ್ನು ವಾರ್ಷಿಕ 6 % (ಸಿನ್ಯರಿಯೋ 1) ಹಾಗೂ ವಾರ್ಷಿಕ 10 % (ಸಿನ್ಯರಿಯೋ 2) ಎಂದು ಪರಿಗಣಿಸಲಾಗಿದೆ. ಅಂದರೆ, ಎಲ್ ಐ ಸಿ ಯು ಪಾಲಿಸಿಯ ಅವದಿ ಮುಗಿಯುವವರೆಗೂ ಈ ಮೊತ್ತದ ಬಂಡವಾಳ ಹೂಡಿಕೆಯಿಂದ ಬರಬಹುದಾದ ಆದಾಯವನ್ನು ವಾರ್ಷಿಕ 6 % ಹಾಗೂ ವಾರ್ಷಿಕ 10 % ಎಂದು ಊಹಿಸಿರುವ ಲೆಕ್ಕಾಚಾರ. ಈ ಊಹಿಸಿರುವ ಲೆಕ್ಕಾಚಾರವು ಗ್ಯಾರಂಟಿಡ್ ಮೊತ್ತವಾಗಿರುವುದಿಲ್ಲ. ಬದಲಿಗೆ, ಅದು ಆಗಿಂದಾಗ್ಗೆ ಬದಲಾವಣೆ ಆಗಬಹುದಾದ ಮೊತ್ತ.