ಎಲ್ ಐ ಸಿ ಜೀವನ್ ಶಾಂತಿ ಪ್ಲಾನ್
 • ಅತ್ಯುತ್ತಮ ಯೋಜನೆಗಳು
 • ಸುಲಭ ಹೋಲಿಕೆ
 • ತಕ್ಷಣದ ಖರೀದಿ
PX step

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಫೋನ್ ಸಂಖ್ಯೆ
ಹೆಸರು
ಹುಟ್ಟಿದ ದಿನಾಂಕ

1

2

ಆದಾಯ
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಎಲ್ ಐ ಸಿ ಯ ಒಂದು ನೂತನ ಪ್ಲಾನ್ ಇದಾಗಿದ್ದು, ಪಾಲಿಸಿದಾರನು ಸಿಂಗಲ್ ಪ್ರೀಮಿಯಂ ಅನ್ನು ನೀಡಿ ಪಾಲಿಸಿಯನ್ನು ಪಡೆದು ಅದರಲ್ಲಿರುವ ಎರಡು ಬಗೆಯ ರಿಟರ್ನ್ ಆಪ್ಶನ್ ನಲ್ಲಿ ಒಂದನ್ನು ಆರಸಿಕೊಳ್ಳಬೇಕಾಗುತ್ತದೆ. ಅದೆಂದರೆ, ತಕ್ಷಣ ತೆಗೆದುಕೊಳ್ಳಬಹುದಾದ ಅನುಯಿಟಿ ಅಥವಾ ಡೆಫೆರ್ಡ್ ಅನುಯಿಟಿ.

ಇದು ಒಂದು ಪೆನ್ಷನ್ ರೀತಿಯ ಪ್ಲಾನ್ ಆಗಿದ್ದು, ಪಾಲಿಸಿದಾರನಿಗೆ ಅನೇಕ ರೀತಿಯ ಬೆನಿಫಿಟ್ ಗಳನ್ನು ನೀಡುತ್ತದೆ. ಈ ಪಾಲಿಸಿಯು ಸಂಪೂರ್ಣವಾಗಿ  ನಾನ್-ಲಿಂಕ್ಡ್, ನಾನ್-ಪಾರ್ಟಿಸಿಪೇಟಿಂಗ್ (ಲಾಭದಲ್ಲಿ ಬಾಗಿ ಆಗದ) ಪ್ಲಾನ್ ಆಗಿರುತ್ತದೆ. ಪಾಲಿಸಿಗೆ ನೀಡುವ ತಕ್ಷಣ ಪಡೆಯುವ ಅನುಯಿಟಿ ಹಾಗೂ ಡೆಫೆರ್ಡ್ ಅನುಯಿಟಿ ಗಳಲ್ಲಿ ಪಾಲಿಸಿದಾರನಿಗೆ ಅನೇಕ ಆಪ್ಶನ್ ಗಳು ಇರುತ್ತವೆ.

 • ತಕ್ಷಣ ಪಡೆಯುವ ಅನುಯಿಟಿ ಯಲ್ಲಿ 9 ಆಪ್ಶನ್ ಗಳು ಲಭ್ಯ ಇರುತ್ತವೆ
 • ಡೆಫೆರ್ಡ್ ಅನುಯಿಟಿ ಯಲ್ಲಿ 2 ಆಪ್ಶನ್ ಗಳು ಲಭ್ಯ ಇರುತ್ತವೆ.

ಈ ಎರಡರಲ್ಲೂ ಲೈಫ್ ರಿಸ್ಕ್ ಕವರ್ ಅನ್ನು ನೀಡಲಾಗುತ್ತದೆ.

ತಕ್ಷಣ ಪಡೆಯುವ ಅನುಯಿಟಿ ಪ್ಲಾನ್ ನಲ್ಲಿ, ರಿಟರ್ನ್ ಅನ್ನು ಹೆಸರೇ ತಿಳಿಸುವ ಹಾಗೆ ತಕ್ಷಣವೇ ಪಡೆಯಬಹುದು. ಹಾಗೇ, ಡೆಫೆರ್ಡ್ ಅನುಯಿಟಿ ಪ್ಲಾನ್ ನಲ್ಲಿ ಪಾಲಿಸಿದಾರನು ತನಗೆ ಅನುಕೂಲ ಆಗುವ ರೀತಿಯಲ್ಲಿ ಹಾಗೂ ಬೇಕಾಗಬಹುದಾದ ಸಮಯಕ್ಕೆ ರಿಟರ್ನ್ ಅನ್ನು ಪಡೆಯಬಹುದು. ಈ ಎಲ್ಲಾ ಆಪ್ಶನ್ ಗಳನ್ನು, ಪಾಲಿಸಿಯನ್ನು ತೆಗೆದುಕೊಳ್ಳುವವರ ಅನುಕೂಲತೆಯನ್ನು ಗಮನದಲ್ಲಿ ಇಟ್ಟುಕೊಂಡು ತಯಾರಿಸಲಾಗಿದೆ. ಪಾಲಿಸಿದಾರನಿಗೆ ಪೆನ್ಷನ್ ರೀತಿಯಲ್ಲಿ ಒಂದು  ಖಚಿತ ಮೊತ್ತವು ನಿಗದಿತ ಸಮಯಕ್ಕೆ ಬರುತ್ತದೆ. ಈ ಎರಡೂ ರೀತಿಯ ಅನುಯಿಟಿ ಯಲ್ಲಿ ಅವುಗಳದೇ ಆದ ವೈಶಿಷ್ಟ್ಯತೆ ಹಾಗೂ ಬೆನಿಫಿಟ್ ಗಳು ಇದೆ. ಪಾಲಿಸಿದಾರನು ತನಗೆ ಸೂಕ್ತ ಎನಿಸುವ ಆಪ್ಶನ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಎಲ್ ಐ ಸಿ ಜೀವನ್ ಶಾಂತಿ ಪ್ಲಾನ್ ಅನ್ನು ಆನ್ಲೈನ್ ಮುಖಾಂತರವಾಗಲಿ ಅಥವಾ ನೇರವಾಗಿ ಕೊಳ್ಳಬಹುದು.

ಎಲ್ ಐ ಸಿ ಜೀವನ್ ಶಾಂತಿ ಪ್ಲಾನ್ – ವಿವರಗಳು

ಪಾಲಿಸಿಯನ್ನು ಪಡೆದ ಪಾಲಿಸಿದಾರನು ಅನ್ವಯವಾಗುವ ಸಿಂಗಲ್ ಪ್ರೀಮಿಯಂ ಅನ್ನು ನೀಡಿ, ತನಗೆ ಬೇಕಾದಲ್ಲಿ ತಕ್ಷಣವೇ ಬರುವ ಅನುಯಿಟಿ ಯನ್ನು ಆಯ್ಕೆ ಮಾಡಿಕೊಂಡು, ಪೆನ್ಷನ್ ರೀತಿಯಲ್ಲಿ ಒಂದು ಖಚಿತ ಮೊತ್ತವು ಅವನಿಗೆ ಅವನ ಜೀವಮಾನವಿಡೀ ಬರುವ ಹಾಗೇ ಮಾಡಿಕೊಳ್ಳಬಹುದು. ಇಲ್ಲದಿದ್ದಲ್ಲಿ, ಡೆಫೆರ್ಡ್ ಅನುಯಿಟಿ ಆಯ್ಕೆ ಮಾಡಿದಲ್ಲಿ, ಆತನಿಗೆ ಆಯ್ಕೆ ಮಾಡಿರುವ ಆವದಿಗಳಲ್ಲಿ ರಿಟರ್ನ್ ನೀಡಲಾಗುತ್ತದೆ. ಈ ಸಂಧರ್ಭದಲ್ಲಿ, ಪಾಲಿಸಿಯ ಆವದಿಯನ್ನು ಪಾಲಿಸಿದಾರನು ಆಯ್ಕೆ ಮಾಡಬೇಕಾಗುತ್ತದೆ. ಈ ಆವದಿಯು ಕನಿಷ್ಠ 1 ವರ್ಷ ಅಥವಾ ಗರಿಷ್ಠ 20 ವರ್ಷಗಳು ಇರಬೇಕು.

ಎಲ್ ಐ ಸಿ ಜೀವನ್ ಶಾಂತಿ ಪ್ಲಾನ್ – ಅನುಯಿಟಿ ಮಾದರಿಗಳು ಹಾಗೂ ಲಭ್ಯವಿರುವ ಆಪ್ಶನ್ ಗಳು

ಮೇಲೆ ತಿಳಿಸಿರುವ ಹಾಗೇ, ಈ ಪಾಲಿಸಿಯ ಅಡಿಯಲ್ಲಿ, ಅನುಯಿಟಿಯನ್ನು ಆಯ್ಕೆ ಮಾಡಲು ಪಾಲಿಸಿದಾರನಿಗೆ ಎರಡು ಮಾದರಿ ಲಭ್ಯವಿರುತ್ತದೆ. ಅದೆಂದರೆ,

 • ತಕ್ಷಣ ಪಡೆಯುವ ಅನುಯಿಟಿ
 • ಡೆಫೆರ್ಡ್ ಅನುಯಿಟಿ

ಈ ಎರಡೂ ಮಾದರಿಗಳಲ್ಲಿ ಲಭ್ಯವಿರುವ ಆಪ್ಶನ್ ಗಳನ್ನು ಕೆಳಗೆ ವಿವರಿಸಲಾಗಿದೆ.

ತಕ್ಷಣ ಪಡೆಯುವ ಅನುಯಿಟಿ

ತಕ್ಷಣ ಪಡೆಯುವ ಅನುಯಿಟಿ ಯಲ್ಲಿ 9 ಆಪ್ಶನ್ ಗಳು ಇರುತ್ತವೆ 

 • ಆಪ್ಶನ್ A : 

ಈ ಆಪ್ಶನ್ ನಲ್ಲಿ, ಪಾಲಿಸಿದಾರನು (ಅನುಯಿಟೆಂಟ್) ಪ್ರೀಮಿಯಂ ನೀಡಿ ಪಾಲಿಸಿಯನ್ನು ಪಡೆದ ತಕ್ಷಣವೇ ಅನುಯಿಟಿ ಪಡೆಯಲು ಅರ್ಹನಾಗುತ್ತಾನೆ. ಅದರ ಪ್ರಕಾರ ಆತನಿಗೆ ಒಂದು ಖಚಿತ ಮೊತ್ತವನ್ನು ಆತನ ಜೀವಿತದ ಸಂಪೂರ್ಣ ಆವದಿಯವರೆಗೂ ನೀಡಲಾಗುತ್ತದೆ. ಆ ಖಚಿತ ಮೊತ್ತವು ಆತನು ಆಯ್ಕೆ ಮಾಡಿರುವ ಹಾಗೂ ರಿಟರ್ನ್ ಪಡೆಯಬೇಕೆಂದು ಸೂಚಿಸಿರುವ ರೀತಿಯ ಮೇಲೆ ಅನ್ವಯ ಆಗುತ್ತದೆ. ಅಂದರೆ, ಪಾಲಿಸಿದಾರನು, ತನಗೆ ಆ ಖಚಿತ ಮೊತ್ತವನ್ನು ವರ್ಷಕ್ಕೊಮ್ಮೆ, ಅಥವಾ ಅರ್ದ ವರ್ಷಕ್ಕೊಮ್ಮೆ ಅಥವಾ 3 ತಿಂಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆ ನೀಡಬೇಕು ಎಂದು ಆಯ್ಕೆ ಮಾಡಿಕೊಳ್ಳಬಹುದು. ಆದರೆ, ಪಾಲಿಸಿದಾರನ ಮರಣವಾದಲ್ಲಿ, ಈ ಅನುಯಿಟಿ ನಿಲ್ಲುತ್ತದೆ.

 • ಆಪ್ಶನ್ B: 

ಈ ಆಪ್ಶನ್ ನಲ್ಲಿ, ಪಾಲಿಸಿದಾರನಿಗೆ (ಅನುಯಿಟೆಂಟ್) ಒಂದು ಖಚಿತ ಮೊತ್ತವನ್ನು 5 ವರ್ಷಗಳವರೆಗೆ ನೀಡಲಾಗುತ್ತದೆ. ಸದರಿ ಪೆಮೆಂಟ್ ಅನ್ನು ಪಾಲಿಸಿದಾರನಿಗೆ ಪಾಲಿಸಿಯನ್ನು ಪಡೆದ ತಕ್ಷಣದಿಂದಲೇ ನೀಡಲಾಗುತ್ತದೆ. ಈ 5 ವರ್ಷದ ಆವದಿಯ ಒಳಗಡೆ, ಪಾಲಿಸಿದಾರನ ಮರಣ ಆದಲ್ಲಿ, ಆತನು  ಸೂಚಿಸಿರುವ ಬೇನೆಫಿಶಿಯರಿಗೆ ಅಶ್ಶುರ್ಡ್ ಮೊತ್ತವು ಸಿಗುತ್ತದೆ. ಆ ಆವದಿಯನ್ನು ಪಾಲಿಸಿದಾರನು ಪೂರೈಸಿದಲ್ಲಿ, ಅವನ ಜೀವನ ಪರ್ಯಂತ ಆ ಖಚಿತ ಮೊತ್ತವನ್ನು ನೀಡಲಾಗುತ್ತದೆ.

 • ಆಪ್ಶನ್ C: 

ಈ ಆಪ್ಶನ್ ನಲ್ಲಿ, ಪಾಲಿಸಿದಾರನಿಗೆ (ಅನುಯಿಟೆಂಟ್) ಒಂದು ಖಚಿತ ಮೊತ್ತವನ್ನು 10 ವರ್ಷಗಳವರೆಗೆ ನೀಡಲಾಗುತ್ತದೆ. ಸದರಿ ಪೆಮೆಂಟ್ ಅನ್ನು ಪಾಲಿಸಿದಾರನಿಗೆ ಪಾಲಿಸಿಯನ್ನು ಪಡೆದ ತಕ್ಷಣದಿಂದಲೇ ನೀಡಲಾಗುತ್ತದೆ. ಈ 10 ವರ್ಷದ ಆವದಿಯ ಒಳಗಡೆ, ಪಾಲಿಸಿದಾರನ ಮರಣ ಆದಲ್ಲಿ, ಆತನು ಸೂಚಿಸಿರುವ ಬೇನೆಫಿಶಿಯರಿಗೆ ಅಶ್ಶುರ್ಡ್ ಮೊತ್ತವು ಸಿಗುತ್ತದೆ. ಆ ಆವದಿಯನ್ನು ಪಾಲಿಸಿದಾರನು ಪೂರೈಸಿದಲ್ಲಿ, ಅವನ ಜೀವನ ಪರ್ಯಂತ ಆ ಖಚಿತ ಮೊತ್ತವನ್ನು ನೀಡಲಾಗುತ್ತದೆ

 1. ಆಪ್ಶನ್ D:

ಈ ಆಪ್ಶನ್ ನಲ್ಲಿ, ಪಾಲಿಸಿದಾರನಿಗೆ (ಅನುಯಿಟೆಂಟ್) ಒಂದು ಖಚಿತ ಮೊತ್ತವನ್ನು 15 ವರ್ಷಗಳವರೆಗೆ ನೀಡಲಾಗುತ್ತದೆ. ಸದರಿ ಪೆಮೆಂಟ್ ಅನ್ನು ಪಾಲಿಸಿದಾರನಿಗೆ ಪಾಲಿಸಿಯನ್ನು ಪಡೆದ ತಕ್ಷಣದಿಂದಲೇ ನೀಡಲಾಗುತ್ತದೆ. ಈ 15 ವರ್ಷದ ಆವದಿಯ ಒಳಗಡೆ, ಪಾಲಿಸಿದಾರನ ಮರಣ ಆದಲ್ಲಿ, ಆತನು ಸೂಚಿಸಿರುವ ಬೇನೆಫಿಶಿಯರಿಗೆ ಅಶ್ಶುರ್ಡ್ ಮೊತ್ತವು ಸಿಗುತ್ತದೆ. ಆ ಆವದಿಯನ್ನು ಪಾಲಿಸಿದಾರನು ಪೂರೈಸಿದಲ್ಲಿ, ಅವನ ಜೀವನ ಪರ್ಯಂತ ಆ ಖಚಿತ ಮೊತ್ತವನ್ನು ನೀಡಲಾಗುತ್ತದೆ 

 • ಆಪ್ಶನ್ E 

ಈ ಆಪ್ಶನ್ ನಲ್ಲಿ, ಪಾಲಿಸಿದಾರನಿಗೆ (ಅನುಯಿಟೆಂಟ್) ಒಂದು ಖಚಿತ ಮೊತ್ತವನ್ನು 20 ವರ್ಷಗಳವರೆಗೆ ನೀಡಲಾಗುತ್ತದೆ. ಸದರಿ ಪೆಮೆಂಟ್ ಅನ್ನು ಪಾಲಿಸಿದಾರನಿಗೆ ಪಾಲಿಸಿಯನ್ನು ಪಡೆದ ತಕ್ಷಣದಿಂದಲೇ ನೀಡಲಾಗುತ್ತದೆ. ಈ 20 ವರ್ಷದ ಆವದಿಯ ಒಳಗಡೆ, ಪಾಲಿಸಿದಾರನ ಮರಣ ಆದಲ್ಲಿ, ಆತನು ಸೂಚಿಸಿರುವ ಬೇನೆಫಿಶಿಯರಿಗೆ ಅಶ್ಶುರ್ಡ್ ಮೊತ್ತವು ಸಿಗುತ್ತದೆ. ಆ ಆವದಿಯನ್ನು ಪಾಲಿಸಿದಾರನು ಪೂರೈಸಿದಲ್ಲಿ, ಅವನ ಜೀವನ ಪರ್ಯಂತ ಆ ಖಚಿತ ಮೊತ್ತವನ್ನು ನೀಡಲಾಗುತ್ತದೆ 

 • ಆಪ್ಶನ್ F: 

ಈ ಅಪ್ಶನ್ ನಲ್ಲಿ, ಪಾಲಿಸಿದಾರನಿಗೆ ಡೆತ್ ಬೆನಿಫಿಟ್ ಅನ್ನು ಆಯ್ಕೆ ಮಾಡಿಕೊಳ್ಳುವ ಅನುಕೂಲ ಇರುತ್ತದೆ. ಅಕಸ್ಮಾತ್ ಪಾಲಿಸಿದಾರನ ಮರಣವು ಪಾಲಿಸಿಯ ಅವದಿಯ ಒಳಗೆ ಆದಲ್ಲಿ, ಆತನು ಸೂಚಿಸಿರುವ ನಾಮಿನಿಗೆ ಒಟ್ಟು ಸಮ್ ಅಶ್ಶುರ್ಡ್ ಮೊತ್ತ ಹಾಗೂ ಉಳಿದ ರಿಟರ್ನ್ ಗಳನ್ನು ನೀಡಲಾಗುತ್ತದೆ. 

 • ಆಪ್ಶನ್ G: 

ಈ ಆಪ್ಶನ್ ಅಡಿಯಲ್ಲಿ, ಪಾಲಿಸಿದಾರನಿಗೆ ನೀಡುವ ಅನುಯಿಟಿ ಮೊತ್ತವು ಪ್ರತಿ ವರ್ಷವೂ 3 % ಹೆಚ್ಚಾಗುತ್ತಾ ಹೋಗುತ್ತದೆ. 

 • ಆಪ್ಶನ್ H 

ಈ ಆಪ್ಶನ್ ಅಡಿಯಲ್ಲಿ, ಜಂಟಿಯಾಗಿ ಅನುಯಿಟಿ ಪಡೆಯುವ ಅವಕಾಶ ಪಾಲಿಸಿದಾರನಿಗೆ ಇರುತ್ತದೆ. ಅದರ ಪ್ರಕಾರ, ಒಬ್ಬ ಪಾಲಿಸಿದಾರನ ಮರಣ ಆದಲ್ಲಿ, ಮತ್ತೊಬ್ಬ ಪಾಲಿಸಿದಾರನಿಗೆ 50 % ಪೆನ್ಷನ್ ಮೊತ್ತವನ್ನು ಆತನ ಜೀವನ ಪರ್ಯಂತ ನೀಡಲಾಗುತ್ತದೆ. 

 • ಆಪ್ಶನ್ I: 

ಈ ಆಪ್ಶನ್ ಅಡಿಯಲ್ಲಿ, ಜಂಟಿಯಾಗಿ ಅನುಯಿಟಿ ಪಡೆಯುವ ಅವಕಾಶ ಪಾಲಿಸಿದಾರನಿಗೆ ಇರುತ್ತದೆ. ಅದರ ಪ್ರಕಾರ, ಒಬ್ಬ ಪಾಲಿಸಿದಾರನ ಮರಣ ಆದಲ್ಲಿ, ಮತ್ತೊಬ್ಬ ಪಾಲಿಸಿದಾರನಿಗೆ 100 % ಪೆನ್ಷನ್ ಮೊತ್ತವನ್ನು ಆತನ ಜೀವನ ಪರ್ಯಂತ ನೀಡಲಾಗುತ್ತದೆ 

 • ಆಪ್ಶನ್ J: 

ಈ ಅಪ್ಶನ್ ನಲ್ಲಿ, ಜಂಟಿಯಾಗಿ ಅನುಯಿಟಿ ಪಡೆಯುವ ಅವಕಾಶ ಪಾಲಿಸಿದಾರನಿಗೆ ಇರುತ್ತದೆ. ಅದರ ಪ್ರಕಾರ, ಒಬ್ಬ ಪಾಲಿಸಿದಾರನ ಮರಣ ಆದಲ್ಲಿ, ಮತ್ತೊಬ್ಬ ಪಾಲಿಸಿದಾರನಿಗೆ 100 % ಅನುಯಿಟಿ ಮೊತ್ತವನ್ನು ನೀಡಲಾಗುವುದು. ಹಾಗೂ ಅವರಿಗೆ ಲೈಫ್ ರಿಸ್ಕ್ ಕವರ್ ಅನ್ನು ನೀಡಲಾಗುತ್ತದೆ. ಅವರಿಗೆ ಸಿಗುವ ಮೊತ್ತವು, ಸಮ್ ಅಶ್ಶುರ್ಡ್ ಮೊತ್ತ ಹಾಗೂ ರಿಟರ್ನ್ ಗಳು ಇದ್ದಲ್ಲಿ ಅವುಗಳ ಮೊತ್ತ.

ಡೆಫೆರ್ಡ್ ಅನುಯಿಟಿ

ಡೆಫೆರ್ಡ್ ಅನುಯಿಟಿ ಪ್ಲಾನ್ ನಿಯಮದ ಪ್ರಕಾರ, ಪಾಲಿಸಿದಾರನು ಬೇನೆಫಿಟ್ ಗಳನ್ನು ಸೂಚಿಸಿರುವ ಡೆಫೆರ್ಡ್ ಪೀರಿಯಡ್ (ಮುಂದುವರೆಸಿದ ಸಮಯಕ್ಕೆ) ಅನುಗುಣವಾಗಿ ಪಡೆಯುತ್ತಾನೆ. ಈ ಡೆಫೆರ್ಡ್ ಅನುಯಿಟಿ ಪ್ಲಾನ್ ಪ್ರಕಾರ 2 ಆಪ್ಶನ್ ಗಳು ಲಭ್ಯವಿದ್ದು, ಆತನು ಯಾವುದಾದರೂ ಒಂದನ್ನು ಆರಿಸಿಕೊಳ್ಳಬೇಕು. ಎರಡೂ ಆಪ್ಶನ್ ಗಳನ್ನು ಈ ಕೆಳಗೆ ವಿವರಿಸಲಾಗಿದೆ. 

 • ಆಪ್ಶನ್ 1: 

ಡೆಫೆರ್ಡ್ ಆವದಿಗೆ ಮುಂಚೆ

ಈ ಆಪ್ಶನ್ ನಲ್ಲಿ, ಸಿಂಗಲ್ ಲೈಫ್ ಮಾತ್ರ ಕವರ್ ಆಗುತ್ತದೆ. ಈ ಅವದಿಯಲ್ಲಿ, ಪಾಲಿಸಿದಾರನ ಮರಣ ಆದಲ್ಲಿ, ಬೇನೆಫಿಶಿಯರಿಗೆ ಡೆತ್ ಬೆನಿಫಿಟ್ ಸಿಗುತ್ತದೆ.

ಡೆಫೆರ್ಡ್ ಆವದಿ ಮುಗಿದ ನಂತರ

ಈ ಆಪ್ಶನ್ ನಲ್ಲಿ, ಡೆಫೆರ್ಡ್ ಅವದಿ ಮುಗಿದ ನಂತರ ಪಾಲಿಸಿದಾರನ ಮರಣ ಆದಲ್ಲಿ, ಬೇನೆಫಿಶಿಯರಿಗೆ ಡೆತ್ ಬೆನಿಫಿಟ್ ನೀಡಲಾಗುತ್ತದೆ. ಅನುಯಿಟಿಯು ತಕ್ಷಣ ಸ್ತಗಿತಗೊಳ್ಳುತ್ತದೆ 

 • ಆಪ್ಶನ್ 2 (ಇದು ಜಂಟಿ ಲೈಫ್ ಡೆಫೆರ್ಡ್ ಪ್ಲಾನ್) 

ಡೆಫೆರ್ಡ್ ಆವದಿಗೆ ಮುಂಚೆ

ಈ ಆಪ್ಶನ್ ನಲ್ಲಿ,. ಡೆಫೆರ್ಡ್ ಅವದಿಯಲ್ಲಿ ಒಬ್ಬ ಪಾಲಿಸಿದಾರನ ಮರಣ ಆದಲ್ಲಿ, ಇನ್ನೊಬ್ಬ ಪಾಲಿಸಿದಾರನಿಗೆ ಡೆತ್ ಬೆನಿಫಿಟ್ ಮೊತ್ತವನ್ನು ನೀಡಲಾಗುವುದು.

ಡೆಫೆರ್ಡ್ ಆವದಿ ಮುಗಿದ ನಂತರ

ಈ ಆಪ್ಶನ್ ನಲ್ಲಿ, ಡೆಫೆರ್ಡ್ ಅವದಿ ಮುಗಿದ ನಂತರ ಒಬ್ಬ ಪಾಲಿಸಿದಾರನ ಮರಣ ಆದಲ್ಲಿ, ಇನ್ನೊಬ್ಬ ಪಾಲಿಸಿದಾರನಿಗೆ ಡೆತ್ ಬೆನಿಫಿಟ್ ಮೊತ್ತವನ್ನು ನೀಡಲಾಗುವುದು.

ಎಲ್ ಐ ಸಿ ಜೀವನ್ ಶಾಂತಿ ಪ್ಲಾನ್ – ವೈಶಿಷ್ಟ್ಯಗಳು

ಎಲ್ ಐ ಸಿ ಜೀವನ್ ಶಾಂತಿ ಪ್ಲಾನ್ ಅನೇಕ ವಿಶಿಷ್ಟತೆಗಳನ್ನು ಒಳಗೊಂಡಂತಹ ಯೋಜನೆ ಆಗಿರುತ್ತದೆ. ಒಂದು ಖಚಿತ ಆದಾಯವು ತಮಗೆ ಬರಬೇಕೆಂದು ಬಯಸುವ ಜನರಿಗೆ, ಇದು ಅತ್ಯಂತ ಸೂಕ್ತವಾದ ಪ್ಲಾನ್ ಎಂದು ಹೇಳಬಹುದು. ಈ ಯೋಜನೆಯ ಕೆಲವು ಆಪ್ಶನ್ ಗಳಲ್ಲಿ, ಪಾಲಿಸಿದಾರನಿಗೆ ಲೈಫ್ ರಿಸ್ಕ್ ಕವರೇಜ್ ಕೂಡ ದೊರೆಯುತ್ತದೆ.

ಪಾಲಿಸಿದಾರನು ಹೂಡಬಹುದಾದ ಕನಿಷ್ಟ ಮೊತ್ತ (ಪಾಲಿಸಿಗೆ)

ಎಲ್ ಐ ಸಿ ಜೀವನ್ ಶಾಂತಿ ಪ್ಲಾನ್ ನಲ್ಲಿ ಪಾಲಿಸಿದಾರನು ಕನಿಷ್ಠ ರೂ 1,50,000 ಗಳನ್ನು ಹೂಡಬೇಕಾಗುತ್ತದೆ. ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿ ಇರುವುದಿಲ್ಲ.

ಪಾಲಿಸಿ ಪಡೆಯಲು ಇರುವ ವಯಸ್ಸಿನ ಮಾನದಂಡ

ಈ ಪಾಲಿಸಿಯನ್ನು ಪಡೆಯಲು, ವಯಸ್ಸಿನ ಮಾನದಂಡವು ಕೆಳ ಕಂಡಂತಿದೆ.

ವಯಸ್ಸಿನ ಮಾನದಂಡ

ತಕ್ಷಣ ಪಡೆಯುವ ಅನುಯಿಟಿ

ಡೆಫೆರ್ಡ್ ಅನುಯಿಟಿ

ಕನಿಷ್ಠ ವಯಸ್ಸು

30 ವರ್ಷಗಳು

30 ವರ್ಷಗಳು

ಗರಿಷ್ಠ ವಯಸ್ಸು

85 ವರ್ಷಗಳು

79 ವರ್ಷಗಳು

ಆಪ್ಶನ್ F ಗೆ 100 ವರ್ಷಗಳು

ಪ್ರೀಮಿಯಂ ನೀಡುವಿಕೆ

ಈ ಪಾಲಿಸಿಯ ನಿಯಮದ ಪ್ರಕಾರ, ಒಂದು ಸಿಂಗಲ್ ಪ್ರೀಮಿಯಂ ಅನ್ನು ಲಂಪ್ ಸಮ್ ಮಾದರಿಯಲ್ಲಿ ಮಾತ್ರ ನೀಡಬೇಕಾಗುತ್ತದೆ. ಈ ಮೊತ್ತವು, ರೂ 1,50,000 ಕನಿಷ್ಠ ಮೊತ್ತದಿಂದ ಶುರು ಆಗುತ್ತದೆ. ಪಾಲಿಸಿಯಲ್ಲಿ ಹೂಡಿಕೆ ಮಾಡುವ ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿ ಇರುವುದಿಲ್ಲ.

ಮೆಚೂರಿಟೀ ಟರ್ಮ್ಸ್

ಈ ಯೋಜನೆಯಲ್ಲಿ, ಮೆಚೂರಿಟೀ ಮೊತ್ತವನ್ನು ತಕ್ಷಣ ಪಡೆಯುವ ಅನುಯಿಟಿ ಮುಖಾಂತರವಾಗಲೀ ಅಥವಾ ಡೆಫೆರ್ಡ್ (ಮುಂದುವರೆಸಿದ) ಅನುಯಿಟಿ ಮುಖಾಂತರವಾಗಲೀ ಪಡೆಯಬಹುದು.

ತಕ್ಷಣ ಪಡೆಯುವ ಅನುಯಿಟಿ

ಇಂತಹ ಪ್ಲಾನ್ ಅನ್ನು ಪಾಲಿಸಿದಾರನು ಆಯ್ಕೆ ಮಾಡಿದಲ್ಲಿ, ಆತನಿಗೆ ರಿಟರ್ನ್ ಅಂದರೆ ಒಂದು ಖಚಿತ ಮೊತ್ತವು ತಕ್ಷಣದಿಂದಲೇ ಬರುವುದಕ್ಕೆ ಶುರು ಆಗುತ್ತದೆ. ಹಾಗೂ ಈ ಪ್ಲಾನ್ ಅಡಿಯಲ್ಲಿ, ಪಾಲಿಸಿದಾರನಿಗೆ  ಅನೇಕ ಆಪ್ಶನ್ ಗಳು ಇದ್ದು, ಆತನು ತನಗೆ ಸೂಕ್ತವೆನಿಸಿದ ಆಪ್ಶನ್ ಆನ್ನು ಆಯ್ಕೆ ಮಾಡಿಕೊಳ್ಳಬಹುದು. ಆಪ್ಶನ್ ಗಳ ವಿವರವನ್ನು ಮೇಲೆ ನೀಡಲಾಗಿದೆ.

ಡೆಫೆರ್ಡ್ ಅನುಯಿಟಿ

ಡೆಫೆರ್ಡ್ ಅನುಯಿಟಿ ಪ್ಲಾನ್ ಪ್ರಕಾರ ಪಾಲಿಸಿದಾರನು ಆಯ್ಕೆ ಮಾಡಿರುವ ಸಮಯದಿಂದ ಆತನಿಗೆ ಒಂದು ಖಚಿತ ಮೊತ್ತವು ಬರುವುದಕ್ಕೆ ಶುರು ಆಗುತ್ತದೆ. ಡೆಫೆರ್ಡ್ ಅನುಯಿತಿ ಪ್ಲಾನ್ ನಿಯಮದ ಪ್ರಕಾರ, ಆ ಅವದಿಯು ಕನಿಷ್ಠ 1 ವರ್ಷದಿಂದ ಗರಿಷ್ಠ 20 ವರ್ಷಗಳು ಇರುತ್ತದೆ.

ಎಲ್ ಐ ಸಿ ಜೀವನ್ ಶಾಂತಿ ಪ್ಲಾನ್ – ಬೆನಿಫಿಟ್ ಗಳು

ಡೆತ್ ಬೆನಿಫಿಟ್

ತಕ್ಷಣ ಪಡೆಯುವ ಅನುಯಿಟಿ

ತಕ್ಷಣ ಪಡೆಯುವ ಅನುಯಿಟಿ ಪ್ಲಾನ್ ಅನ್ನು ಪಾಲಿಸಿದಾರನು ಆಯ್ಕೆ ಮಾಡಿದ್ದಲ್ಲಿ, ಆತನ ಮರಣವು ಆವದಿಯ ಮಧ್ಯದಲ್ಲಿ ಆದರೆ, ಆತನು ಸೂಚಿಸಿರುವ ನಾಮಿನಿಗೆ ಡೆತ್ ಬೆನಿಫಿಟ್ ಮೊತ್ತವ್ಬನ್ನು ನೀಡಲಾಗುವುದು. ಆದರೆ, ಈ ಸೌಲಭ್ಯವು ಮೇಲೆ ಕಾಣಿಸಿರುವ ಆಪ್ಶನ್ F ಮತ್ತು J ಗಳಲ್ಲಿ ಮಾತ್ರ ಲಭ್ಯವಿದೆ.

ಡೆಫೆರ್ಡ್ ಅನುಯಿಟಿ

ಡೆಫೆರ್ಡ್ ಅನುಯಿಟಿ ಪ್ಲಾನ್ ನಲ್ಲಿ ಡೆತ್ ಬೆನಿಫಿಟ್ ಎರಡೂ ಆಪ್ಶನ್ ಗಳಲ್ಲಿ ಲಭ್ಯವಿದೆ.

ಸಾಲ ಸೌಲಭ್ಯ

ಪಾಲಿಸಿಯ ನಿಯಮದ ಪ್ರಕಾರ, ಈ ಪಾಲಿಸಿಯ ಮೇಲೆ ಸಾಲವನ್ನು ತೆಗೆದುಕೊಳ್ಳುವ ಅವಕಾಶ ಇರುತ್ತದೆ. ಆದರೆ, ಪಾಲಿಸಿಯು 1 ವರ್ಷವನ್ನು ಮುಗಿಸಿರಬೇಕು. ತಕ್ಷಣ ಪಡೆಯುವ ಅನುಯಿಟಿ ಪ್ಲಾನ್ ನಲ್ಲಿ, ಆಪ್ಶನ್ F ಮತ್ತು ಆಪ್ಶನ್ J ಗಳಿಗೆ ಮಾತ್ರ ಈ ಸೌಲಭ್ಯವು ಇರುತ್ತದೆ. ಅದೇ ಡೆಫೆರ್ಡ್ ಅನುಯಿಟಿ ಪ್ಲಾನ್ ನ ಎರಡೂ ಆಪ್ಶನ್ ಗಳಲ್ಲಿ ಈ ಸೌಲಭ್ಯವು ಲಭ್ಯವಿದೆ.  

ಸರಂಡರ್ ಮೌಲ್ಯ

ಪಾಲಿಸಿಯ ನಿಯಮದ ಪ್ರಕಾರ, ಈ ಪಾಲಿಸಿಯನ್ನು ಸರಂಡರ್ ಮಾಡುವ ಅವಕಾಶವು ಪಾಲಿಸಿಯನ್ನು ಪಡೆದ 3 ತಿಂಗಳಿನ ನಂತರ ಲಭ್ಯವಿರುತ್ತದೆ. ತಕ್ಷಣ ಪಡೆಯುವ ಅನುಯಿಟಿ ಪ್ಲಾನ್ ನಲ್ಲಿ, ಆಪ್ಶನ್ F ಮತ್ತು ಆಪ್ಶನ್ J ಗಳಿಗೆ ಮಾತ್ರ ಈ ಸೌಲಭ್ಯವು ಇರುತ್ತದೆ. ಅದೇ ಡೆಫೆರ್ಡ್ ಅನುಯಿಟಿ ಪ್ಲಾನ್ ನ ಎರಡೂ ಆಪ್ಶನ್ ಗಳಲ್ಲಿ ಈ ಸೌಲಭ್ಯವು ಲಭ್ಯವಿದೆ.

ಫ್ರೀ ಲುಕ್ ಅಪ್  ಪೀರಿಯಡ್

ಪಾಲಿಸಿದಾರನಿಗೆ, ಪಾಲಿಸಿಯ ನಿಯಮಗಳು ಹಾಗೂ ನಿಬದನೆಗಳನ್ನು ಓದಿ ಅರ್ಥ ಮಾಡಿಕೊಂಡು ನಿರ್ದಾರ ತೆಗೆದುಕೊಳ್ಳಲು 15 ದಿವಸಗಳ ಕಾಲಾವಕಾಶವನ್ನು ನೀಡಲಾಗುತ್ತದೆ. ಆ ಆವದಿಯಲ್ಲಿ, ಆತನು ಪಾಲಿಸಿಯನ್ನು ಕೂಲಂಕುಷವಾಗಿ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಬಹುದು. ಅಕಸ್ಮಾತ್ ಆತನಿಗೆ ಪಾಲಿಸಿಯ ನಿಯಮದಲ್ಲಿ ಅಥವಾ ನಿಬಂದನೆಯಲ್ಲಿ ಯಾವುದಾದರೂ ಒಪ್ಪಿಗೆ ಆಗದಿದ್ದಲ್ಲಿ, ಆಗ ಆತನು ಪಾಲಿಸಿಯನ್ನು 15 ದಿವಸದ ಒಳಗೆ ಹಿಂತಿರುಗಿಸಬೇಕಾಗುತ್ತದೆ. ಅಂತಹ ಸಂಧರ್ಭದಲ್ಲಿ, ಆ ಪಾಲಿಸಿಯನ್ನು ರದ್ದು ಮಾಡಲಾಗುವುದು.

ಸ್ಪೆಷಲ್ ಕವರೆಜ್

ಪಾಲಿಸಿದಾರನ ಮೇಲೆ ಯಾವುದಾದರೂ ಅಂಗ ವಿಕಲನು ಅವಲಂಬಿತವಾಗಿದ್ದಲ್ಲಿ ಅಂತಹ ಪಾಲಿಸಿದಾರನಿಗೆ ಹೂಡಿಕೆ ಮಾಡುವ ಕನಿಷ್ಠ ಮೊತ್ತದಲ್ಲಿ ವಿನಾಯತಿ ನೀಡಲಾಗುವುದು.

ಅನುಯಿಟಿ ಹಣ ನೀಡುವಿಕೆ

ಪಾಲಿಸಿದಾರನ ಅನುಕೂಲತೆಗೆ ತಕ್ಕಂತೆ, ಅನುಯಿಟಿ ಮೊತ್ತವನ್ನು ಆತನು ಸೂಚಿಸಿರುವ ಸಮಯಾನುಸಾರ ನೀಡಲಾಗುತ್ತದೆ. ಹಾಗಾಗಿ, ಪಾಲಿಸಿದಾರನು ತನಗೆ ಸೂಕ್ತವಾದ ರೀತಿಯಲ್ಲಿ ಅನುಯಿಟಿ ಮೊತ್ತವನ್ನು ಪಡೆಯಬಹುದು. ಅಂದರೆ, ವರ್ಷಕ್ಕೊಮ್ಮೆ ಅಥವಾ ಆರ್ದ ವರ್ಷಕ್ಕೊಮ್ಮೆ ಅಥವಾ 3 ತಿಂಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆ ಪಡೆಯಬಹುದು. ಆತನು ಸೂಚಿಸಿರುವ ರೀತಿಯೇ, ಅನುಯಿಟಿ ಮೊತ್ತವನ್ನು ಆತನಿಗೆ ನೀಡಲಾಗುತ್ತದೆ.

ಎಲ್ ಐ ಸಿ ಜೀವನ್ ಶಾಂತಿ ಪ್ಲಾನ್ – ಸಾರಾಂಶ

ವಿಶಿಷ್ಟತೆಗಳು

ವಿವರಗಳು

ಕನಿಷ್ಠ ಬಂಡವಾಳ ಹೂಡಿಕೆ ಮೊತ್ತ

ರೂ 1,50,000

ಅನುಯಿಟಿ ಅವದಿ

ಜೀವನ ಪರ್ಯಂತ

ಅನುಯಿಟಿ ಪಡೆಯುವ ವಯಸ್ಸು

ಕನಿಷ್ಠ ವಯಸ್ಸು- 30 ವರ್ಷಗಳು

ಗರಿಷ್ಠ ವಯಸ್ಸು – 100 ವರ್ಷಗಳು

ಅನುಯಿಟಿಗಳ ಆಪ್ಶನ್ ಗಳು

ತಕ್ಷಣ ಪಡೆಯುವ ಅನುಯಿಟಿ ಪ್ಲಾನ್ ನಲ್ಲಿ 9 ಆಪ್ಶನ್ ಗಳು  ಇರುತ್ತವೆ

ಡೆಫೆರ್ಡ್ ಅನುಯಿಟಿ ಯಲ್ಲಿ 2 ಆಪ್ಶನ್ ಗಳು ಇರುತ್ತವೆ.

ಬಂಡವಾಳ ಹೂಡಿಕೆ

ಒಂದು ಬಾರಿ

ಆದಾಯ (ರಿಟರ್ನ್)

ತಕ್ಷಣ ಅಥವಾ ಡೆಫೆರ್ಡ್(ಕಾಲ ಕಾಲಕ್ಕೆ)

ಲೈಫ್ ಕವರ್

ವೈಯಕ್ತಿಕ ಅಥವಾ ಜಂಟಿ

ಸರಂಡರ್

ಪಾಲಿಸಿಯನ್ನು ಪಡೆದ 3 ತಿಂಗಳಿನ ನಂತರ ಮಾಡಬಹುದು

ಫ್ರೀ ಲುಕ್ ಅಪ್

15 ದಿವಸಗಳು

ಅನುಯಿಟಿ ಪೆಮೆಂಟ್

ತಿಂಗಳಿಗೊಮ್ಮೆ, 3 ತಿಂಗಳಿಗೊಮ್ಮೆ, ಅರ್ದ ವರ್ಷಕ್ಕೊಮ್ಮೆ, ವರ್ಷಕ್ಕೊಮ್ಮೆ

ಡೆಫೆರ್ಡ್ ಅವದಿ (ಟರ್ಮ್)

1 ವರ್ಷದಿಂದ 20 ವರ್ಷಗಳು

ಆಡಿಶನಲ್ ಕವರ್

ದಿವ್ಯಾಂಜನ್ (ಅಂಗ ವಿಕಲ ವ್ಯಕ್ತಿಯನ್ನು ಕವರ್ ಮಾಡಬಹುದು) – ಕಡಿಮೆ ಮೊತ್ತದಲ್ಲಿ

ಎಲ್ ಐ ಸಿ ಜೀವನ್ ಶಾಂತಿ ಪ್ಲಾನ್ – ಉದಾಹರಣೆ 

 • ತಕ್ಷಣ ಪಡೆಯುವ ಅನುಯಿಟಿ 

ಯಾವುದೇ ಪಾಲಿಸಿದಾರನು ಕನಿಷ್ಠ ರೂ 1,50,000 ಮೊತ್ತವನ್ನು ಬಂಡವಾಳವಾಗಿ ಹೂಡಿದಲ್ಲಿ, ಆತನಿಗೆ ಬರಬಹುದಾದ ರಿಟರ್ನ್ ಗಳು ಈ ಕೆಳ ಕಂಡಂತಿದೆ.

ಅನುಯಿಟಿ ಮೊತ್ತವನ್ನು ನೀಡುವ ಅವದಿ (ಪಾಲಿಸಿದಾರನು ಆಯ್ಕೆ ಮಾಡಿರುವ ರೀತಿಯ ಪ್ರಕಾರ)

ಅನುಯಿಟಿ ಮೊತ್ತ

ತಿಂಗಳಿಗೊಮ್ಮೆ

ರೂ 1000

3 ತಿಂಗಳಿಗೊಮ್ಮೆ

ರೂ 3000

ಅರ್ದ ವರ್ಷಕ್ಕೊಮ್ಮೆ

ರೂ 6000

ವರ್ಷಕ್ಕೊಮ್ಮೆ

ರೂ 12000

 ತಕ್ಷಣ ಪಡೆಯುವ ಅನುಯಿಟಿ – ಒಂದು ನಿರ್ದಿಷ್ಟ ಉದಾಹರಣೆ 

ಅನುಯಿಟಿ ಪಡೆಯುವಾಗ ಪಾಲಿಸಿದಾರನ ವಯಸ್ಸು – 42 ವರ್ಷಗಳು

ಅನುಯಿಟಿ ಮೊತ್ತ – ರೂ 10,00,000

ಇದರ ಪ್ರಕಾರ ಅವನು ಆಯ್ಕೆ ಮಾಡಿರುವ ಆಪ್ಶನ್ ಗಳ ಮೇಲೆ ರಿಟರ್ನ್ ಗಳು  ಅವಲಂಬಿತವಾಗಿರುತ್ತದೆ. ಹಾಗೆಯೇ ಅವನು ಆಯ್ಕೆ ಮಾಡಿರುವ ಆಪ್ಶನ್ ಗಳ ಮೇಲೆ ಆ ಮೊತ್ತವು ವ್ಯತ್ಯಾಸ ಹೊಂದುತ್ತದೆ. ವಿವರಗಳು ಈ ಕೆಳ ಕಂಡಂತಿದೆ.

ಆಪ್ಶನ್ ಗಳು

ಅನುಯಿಟಿ ಮೊತ್ತ (ರೂ ಗಳಲ್ಲಿ)

ಆಪ್ಶನ್ A

74,300

ಆಪ್ಶನ್ B

74,200

ಆಪ್ಶನ್ C

73,900

ಆಪ್ಶನ್ D

73,500

ಆಪ್ಶನ್ E

72,900

ಆಪ್ಶನ್ F

65,400

ಆಪ್ಶನ್ G

56,200

ಆಪ್ಶನ್ H

71,100

ಆಪ್ಶನ್ I

68,300

ಆಪ್ಶನ್ J

64,900

ಡೆಫೆರ್ಡ್ ಅನುಯಿಟಿ – ಒಂದು ನಿರ್ದಿಷ್ಟ ಉದಾಹರಣೆ 

ಅನುಯಿಟಿ ಪಡೆಯುವಾಗ ಪಾಲಿಸಿದಾರನ ವಯಸ್ಸು – 42 ವರ್ಷಗಳು

ಅನುಯಿಟಿ ಮೊತ್ತ – ರೂ 10,00,000

ಇದರ ಪ್ರಕಾರ ಅವನು ಆಯ್ಕೆ ಮಾಡಿರುವ ಆಪ್ಶನ್ ಗಳ ಮೇಲೆ ರಿಟರ್ನ್ ಗಳು  ಅವಲಂಬಿತವಾಗಿರುತ್ತದೆ. ಹಾಗೆಯೇ ಅವನು ಆಯ್ಕೆ ಮಾಡಿರುವ ಆಪ್ಶನ್ ಗಳ ಮೇಲೆ ಆ ಮೊತ್ತವು ವ್ಯತ್ಯಾಸ ಹೊಂದುತ್ತದೆ. ವಿವರಗಳು ಈ ಕೆಳ ಕಂಡಂತಿದೆ.

ಆಪ್ಶನ್ ಗಳು

ಅನುಯಿಟಿ ಮೊತ್ತ (ರೂ ಗಳಲ್ಲಿ)

ಆಪ್ಶನ್ 1

2,06,600 (20 ವರ್ಷದ ಅವದಿ)

ಆಪ್ಶನ್ 2

2,27,200 (20 ವರ್ಷದ ಅವದಿ)

ಎಲ್ ಐ ಸಿ ಜೀವನ್ ಶಾಂತಿ ಪ್ಲಾನ್ – ಹೇಗೆ ಕೊಳ್ಳಬಹುದು

ಈ ಯೋಜನೆಯನ್ನು ಆನ್ಲೈನ್ ಮುಖಾಂತರವಾಗಲಿ ಅಥವಾ ಎಲ್ ಐ ಸಿ ಶಾಖೆಗಳಲ್ಲಾಗಲೀ ನೇರವಾಗಿ ಪಡೆಯಬಹುದು. ಆನ್ಲೈನ್ ಮೂಲಕ ಪಡೆಯುವುದು ಅತ್ಯಂತ ಸರಳವಾದ  ವಿದಾನ. ಏಕೆಂದರೆ, ಯಾವುದೇ ಅಡಚಣೆ ಇಲ್ಲದೆ, ನಿಮ್ಮ ಪಾಲಿಸಿಯನ್ನು ನೀವು ಪಡೆಯಬಹುದು. ಪಾಲಿಸಿಯ ನಿಯಮದ ಪ್ರಕಾರ ನೀಡಬೇಕಾಗಿರುವ ದಾಖಲೆಗಳನ್ನು ಹಾಗೂ ಸೂಕ್ತವಾದ ಮೊತ್ತವನ್ನು ಆನ್ಲೈನ್ ಮುಖಾಂತರ ಸಲ್ಲಿಸಿದಲ್ಲಿ, ನಿಮಗೆ ಪಾಲಿಸಿಯು ಕೆಲವೇ ಸಮಯದಲ್ಲಿ ಸಿಗುವುದು. ಹಾಗೆಯೇ, ಈ ಪ್ಲಾನ್ ಅನ್ನು ಆಯ್ಕೆ ಮಾಡುವ ಮುಂಚೆ ಅದರ ಬಗ್ಗೆ ವಿವರಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ತದ ನಂತರ ಪಡೆಯಬಹುದು.

ಎಲ್ ಐ ಸಿ ಜೀವನ್ ಶಾಂತಿ ಪ್ಲಾನ್ – ಏತಕ್ಕಾಗಿ ತೆಗೆದುಕೊಳ್ಳಬೇಕು

ಎಲ್ ಐ ಸಿ ಜೀವನ್ ಶಾಂತಿ ಪ್ಲಾನ್ ನಲ್ಲಿ ಸಾಕಷ್ಟು ವಿಶೇಷತೆ ಇದ್ದು ಅದನ್ನು ಕೊಳ್ಳುವುದರಿಂದ, ಪಾಲಿಸಿದಾರನಿಗೆ ಅನೇಕ ಅನುಕೂಲಗಳು ದೊರಕುತ್ತವೆ. ಅದರಲ್ಲಿ ಕೆಲವು ಮುಖ್ಯ ಅನುಕೂಲತೆಗಳನ್ನು ಕೆಳಗೆ ವಿವರಿಸಲಾಗಿದೆ. 

ಎರಡು ತರಹದ ಅನುಯಿಟಿ 

ಈ ಪಾಲಿಸಿಯನ್ನು ಪಡೆದುಕೊಳ್ಳುವವರಿಗೆ ಎರಡು ತರಹದ ಅನುಯಿಟಿ ಆಯ್ಕೆಯನ್ನು ನೀಡಲಾಗುತ್ತದೆ. ಮೊದಲನೆಯದಾಗಿ,  ತಕ್ಷಣವೇ ಪಡೆಯಬಹುದಾದ ಅನುಯಿಟಿ ಹಾಗೂ ಎರಡನೆಯದು ಡೆಫೆರ್ಡ್ ಅನುಯಿಟಿ. ಎರಡನೆಯ ಡೆಫೆರ್ಡ್ ಅನುಯಿಟಿ ಯಲ್ಲಿ, ಪಾಲಿಸಿದಾರನು ತನ್ನ ಪಾಲಿಸಿಯನ್ನು ಮುಂದುವರೆಸಿ, ತನಗೆ ಬೇಕಾಗಬಹುದು ಎಂದು ಅನಿಸಿದ ಸಮಯಕ್ಕೆ ಅನುಯಿಟಿ ಯನ್ನು ಪಡೆಯಬಹುದು

ಅನೇಕ ಬಗೆಯ ಆಪ್ಶನ್ ಗಳು

ತಕ್ಷಣ ಹಾಗೂ ಡೆಫೆರ್ಡ್ ಅನುಯಿಟಿ ಪ್ಲಾನ್ ಗಳಲ್ಲಿ, ಪಾಲಿಸಿದಾರನಿಗೆ ಅನೇಕ ಆಪ್ಶನ್ ಗಳನ್ನು ನೀಡಲಾಗುವುದು. ಅದರಲ್ಲಿ, ತಕ್ಷಣ  ನೀಡುವ ಅನುಯಿಟಿ ಅಥವಾ ಡೆಫೆರ್ಡ್ ಅನುಯಿಟಿ ಪ್ಲಾನ್ ಅನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ಆತನು ತನಗೆ ಅನುಕೂಲ ಆಗುವಂತಹ ಆಪ್ಶನ್ ಅನ್ನು ಆರಿಸಿಕೊಳ್ಳಬಹುದು. ತಕ್ಷಣ ಪಡೆಯುವ ಅನುಯಿಟಿ ಪ್ಲಾನ್ ನಲ್ಲಿ 9 ಆಪ್ಶನ್ ಗಳಿರುತ್ತದೆ. ಡೆಫೆರ್ಡ್ ಅನುಯಿಟಿ ಪ್ಲಾನ್ ನಲ್ಲಿ 2 ಆಪ್ಶನ್ ಗಳು ಇರುತ್ತದೆ.

ತೆರಿಗೆ ವಿನಾಯತಿ

ಆದಾಯ ತೆರಿಗೆ ಆಕ್ಟ್ ಸೆಕ್ಷನ್ 80 c ಮತ್ತು 80 d ಅಡಿಯಲ್ಲಿ ಈ ಪ್ಲಾನ್ ನಲ್ಲಿ ಹೂಡಿರುವ ಮೊತ್ತಕ್ಕೆ ವಿನಾಯತಿ ದೊರಕುತ್ತದೆ. ಅದರ ಪ್ರಕಾರ, ಪಾಲಿಸಿದಾರನು ನೀಡುವ ಸಿಂಗಲ್ ಪ್ರೀಮಿಯಂ  ಮೊತ್ತಕ್ಕೆ ತೆರಿಗೆ ವಿನಾಯತಿ ಅನ್ವಯವಾಗುತ್ತದೆ.

ಪಾಲಿಸಿಯನ್ನು ಸುಲಭವಾಗಿ ಪಡೆಯುವಿಕೆ

ಈ ಪಾಲಿಸಿಯನ್ನು, ಆನ್ಲೈನ್ ಮುಖಾಂತರವಾಗಲೀ ಅಥವಾ ನೇರವಾಗಿ ಯಾವುದೇ ಅಡಚಣೆ ಇಲ್ಲದೆ ಸುಲಭವಾಗಿ ಪಡೆದುಕೊಳ್ಳಬಹುದು.

ಖಾತರಿಯಾದ (ಗ್ಯಾರಂಟಿಡ್) ಆದಾಯ

ಈ ಪಾಲಿಸಿಯನ್ನು ಪಡೆದ ಪಾಲಿಸಿದಾರನಿಗೆ, ಒಂದು ಖಚಿತವಾದ ಮೊತ್ತವು ತಿಂಗಳಿಗೊಮ್ಮೆ ಬರುತ್ತದೆ (ತಿಂಗಳಿಗೊಮ್ಮೆ ಅನುಯಿಟಿ ಮೊತ್ತವು ಪಡೆಯಲು ಆಯ್ಕೆ ಮಾಡಿದ್ದಲ್ಲಿ). ಆ ರೀತಿ ಬರುವ ಮೊತ್ತವು ಪಾಲಿಸಿದಾರನ ಜೀವನ ಪರ್ಯಂತ ಬರುತ್ತದೆ. ಕೆಲವು ಆಪ್ಶನ್ ಗಳಲ್ಲಿ, ಆತನು ಮರಣ ಹೊಂದಿದರೂ ಕೂಡ, ಆತನ ನಾಮಿನಿ ಅಥವಾ ಜಂಟಿ ಪಾಲಿಸಿದಾರನಿಗೆ ಆ ಮೊತ್ತವನ್ನು ನೀಡುವ ಭರವಸೆ ಇರುತ್ತದೆ. ಇದು ಪಾಲಿಸಿದಾರನು ಯಾವ ಆಪ್ಶನ್ ಅನ್ನು ಆಯ್ಕೆ ಮಾಡಿದ್ದಾನೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ.

ಖಚಿತವಾದ ರಿಟರ್ನ್

ಡೆಫೆರ್ಡ್ ಪ್ಲಾನ್ ಅಡಿಯಲ್ಲಿ ರಿಟರ್ನ್ ಬರುವುದು ಖಚಿತವಾಗಿರುತ್ತದೆ.  ಈ ರಿಟರ್ನ್ ಗಳನ್ನು ಪ್ರತಿ ತಿಂಗಳೂ ಪಾಲಿಸಿಗೆ ಸೇರಿಸಲಾಗುತ್ತಾ ಹೋಗುತ್ತದೆ. ಡೆಫೆರ್ಡ್ ಅವದಿ ಮುಗಿದ ಮೇಲೆ ಬೆನಿಫಿಟ್ ಗಳನ್ನು ಪಡೆದುಕೊಳ್ಳಬಹುದು.