ಎಲ್ ಐ ಸಿ ಜೀವನ್ ಶಿಖರ್ ಪ್ಲಾನ್
  • ಅತ್ಯುತ್ತಮ ಯೋಜನೆಗಳು
  • ಸುಲಭ ಹೋಲಿಕೆ
  • ತಕ್ಷಣದ ಖರೀದಿ
PX step

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಹುಟ್ಟಿದ ದಿನಾಂಕ (ದೊಡ್ಡ ಸದಸ್ಯ)
ಆದಾಯ
| ಲಿಂಗ

1

2

ಫೋನ್ ಸಂಖ್ಯೆ
ಹೆಸರು
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಎಲ್ ಐ ಸಿ ಜೀವನ್ ಶಿಖರ್ ಪ್ಲಾನ್ ಒಂದು ನಾನ್-ಲಿಂಕ್ಡ್ ಹಾಗೂ ಲಾಭದಲ್ಲಿ ಭಾಗಿಯಾಗುವ ಕೇವಲ ಒಂದು ಪ್ರೀಮಿಯಂ ಕಟ್ಟುವ ಯೋಜನೆ ಆಗಿರುತ್ತದೆ. ಇದು ರಕ್ಷಣೆ ಹಾಗೂ ಉಳಿತಾಯ ಒಟ್ಟಿಗೆ ನೀಡುವ ಯೋಜನೆ ಆಗಿರುತ್ತದೆ. ಈ ಯೋಜನೆಯ ಅಡಿಯಲ್ಲಿ, ರಿಸ್ಕ್ ಕವರ್ tabular ಸಿಂಗಲ್ ಪ್ರೀಮಿಯಂ ನ 10 ರಷ್ಟು ಇರುತ್ತದೆ.

ಪಾಲಿಸಿದಾರನಿಗೆ ಅವನಿಗೆ ಬೇಕಾದ ಮೆಚೂರಿಟೀ ಸಮ್ ಅಶ್ಶುರ್ಡ್ ಅನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಅವನು ಆಯ್ಕೆ ಮಾಡುವ ಮೆಚೂರಿಟೀ ಸಮ್ ಅಶ್ಶುರ್ಡ್ ಹಾಗೂ ಪಾಲಿಸಿದಾರನ ವಯಸ್ಸನ್ನು ಅವಲಂಬಿಸಿ ಆತನ ಪ್ರೀಮಿಯಂ ಮೊತ್ತವನ್ನು ನಿರ್ದರಿಸಲಾಗುತ್ತದೆ .

ಈ ಪ್ಲಾನ್ ನಲ್ಲಿ ಸಾಲ ಸೌಲಭ್ಯವು ಇದ್ದು, ಪಾಲಿಸಿದಾರನಿಗೆ ಹಣದ ಅವಶ್ಯಲತೆ ಇದ್ದಲ್ಲಿ, ಅದನ್ನು ಪೂರೈಸುವಲ್ಲಿ ಸಹಾಯ ಮಾಡುತ್ತದೆ. ಇದು ಒಂದು ಕ್ಲೋಜ್ ಎಂಡೆಡ್ ಪ್ಲಾನ್ ಆಗಿದ್ದು, ಅದು ಬಿಡುಗಫೆಯಾದ ದಿನದಿಂದ 120 ದಿವಸ ಮಾತ್ರ ಲಭ್ಯವಿರುತ್ತದೆ. ಆದರೆ ಈಗ ಅದರ ನಿಯಮಗಳನ್ನು ಸಡಿಲಿಸಲಾಗಿದೆ.

ಎಲ್ ಐ ಸಿ ಜೀವನ್ ಶಿಖರ್ ಪ್ಲಾನ್ – ಬೆನೆಫಿಟ್ಸ್

ಎಲ್ ಐ ಸಿ ಯು ಪಾಲಿಸಿದಾರರಿಗೆ ಬೇರೆ ಬೇರೆ ರೀತಿಯ ಬೆನೆಫಿಟ್ಸ್ ಗಳನ್ನು ನೀಡುವುದರಲ್ಲಿ  ಮುಂಚೂಣಿಯಲ್ಲಿದೆ. ಅದೇ ರೀತಿ ಈ ಯೋಜನೆಯಲ್ಲಿಯೂ, ಪಾಲಿಸಿದಾರನಿಗೆ ಈ ಕೆಳ ಕಂಡ ಬೆನಿಫಿಟ್ ಗಳನ್ನು ನೀಡುತ್ತದೆ.

ಡೆತ್ ಬೆನಿಫಿಟ್

ಈ ಪಾಲಿಸಿಯಲ್ಲಿ, ಡೆತ್ ಬೆನಿಫಿಟ್ ಮೊತ್ತವನ್ನು ನೀಡಲು ಎರಡು ರೀತಿ ಪರಿಸ್ತಿತಿಯನ್ನು ಗಮನಕ್ಕೆ ತೆಗೆದುಕೊಳ್ಳಲಾಗುತ್ತದೆ. ಅದರ ಪ್ರಕಾರ ಲೆಕ್ಕವನ್ನೂ ಮಾಡಿ ಪಾಲಿಸಿಗೆ ಈ ಬೆನಿಫಿಟ್ ಅನ್ನು ನೀಡಲಾಗುತ್ತದೆ. ಅದು ಈ ಕೆಳ ಕಂಡಂತಿದೆ.

ಅ) ಪಾಲಿಸಿಯ ಮೊದಲ 5 ವರ್ಷದ ಒಳಗೆ ಪಾಲಿಸಿದಾರನು ಮರಣ ಹೊಂದಿದಲ್ಲಿ

ಇದರಲ್ಲಿಯೂ ಕೂಡ ಎರಡು ರೀತಿಯ ಪರಿಸ್ಥಿತಿಯನ್ನು ಪರಿಗಣಿಸಲಾಗುವುದು

  • ಮೊದಲನೆಯದಾಗಿ, ಪಾಲಿಸಿದಾರನು ರಿಸ್ಕ್ ಕವರೆಜ್ ಪ್ರಾರಂಬವಾಗುವ ಮುಂಚೆ ಮರಣ ಹೊಂದಿದಲ್ಲಿ ಅಂತಹ ಪಾಲಿಸಿಗೆ ಆ ಪಾಲಿಸಿಯ ಬಾಬ್ತು ನೀಡಿರುವ ಸಿಂಗಲ್ ಪ್ರೀಮಿಯಂ ಮೊತ್ತವನ್ನು ಯಾವುದೇ ಬಡ್ಡಿ ಇಲ್ಲದೆ ನೀಡಲಾಗುವುದು. ಇಲ್ಲಿ ತಿಳಿಸಿರುವ ಪ್ರೀಮಿಯಂ ಮೊತ್ತದಲ್ಲಿ, ಅದಕ್ಕೆ ತಗುಲಬಹುದಾದ ಎಕ್ಸ್ಟ್ರಾ ಪ್ರೀಮಿಯಂ ಗಳಿದ್ದಲ್ಲಿ ಹಾಗೂ ಯಾವುದೇ ಅಂಡರ್ ರೈಟಿಂಗ್ ಮೊತ್ತ ಅಥವಾ ತೆರಿಗೆ ಗಳನ್ನು ಇದರಿಂದ ಕಡಿತಗೊಳಿಸಿ ಉಳಿದ ಮೊತ್ತವನ್ನು ನೀಡಲಾಗುವುದು.
  • ಎರಡನೆಯದಾಗಿ, ಪಾಲಿಸಿದಾರನು ರಿಸ್ಕ್ ಕವರೆಜ್ ಪ್ರಾರಂಭ ಆದ ಮೇಲೆ ಮರಣ ಹೊಂದಿದಲ್ಲಿ, ಪಾಲಿಸಿಯ “ಸಮ್ ಅಶ್ಶುರ್ಡ್ ಆನ್ ಡೆತ್” ಮೊತ್ತ ದ ಬಾಬ್ತು  ಪಾಲಿಸಿದಾರನು ನೀಡಿರುವ ಟೇಬ್ಯುಲಾರ್ ಸಿಂಗಲ್ ಪ್ರೀಮಿಯಂ ಮೊತ್ತದ 10 ಪಟ್ಟು ಮೊತ್ತವನ್ನು ನೀಡಲಾಗುವುದು.

ಆ) ಪಾಲಿಸಿಯನ್ನು ಪಡೆದು 5 ವರ್ಷದ ನಂತರ ಪಾಲಿಸಿದಾರನ ಮರಣ ಆದಲ್ಲಿ

ಪಾಲಿಸಿಯ “ಸಮ್ ಅಶ್ಶುರ್ಡ್ ಆನ್ ಡೆತ್” ಮೊತ್ತದ ಬಾಬ್ತು ಪಾಲಿಸಿದಾರನು ನೀಡಿರುವ ಟೇಬ್ಯುಲಾರ್ ಸಿಂಗಲ್ ಪ್ರೀಮಿಯಂ ಮೊತ್ತದ 10 ಪಟ್ಟು ಮೊತ್ತದ ಜೊತೆಗೆ ಲಾಯಲ್ಟಿ ಅಡಿಷನ್ ಮೊತ್ತವೇನಾದರೂ ಇದ್ದಲ್ಲಿ, ಅದನ್ನು ಸೇರಿಸಿ ಒಟ್ಟು ಮೊತ್ತವನ್ನು ನೀಡಲಾಗುವುದು.

ಮೆಚೂರಿಟೀ ಬೆನಿಫಿಟ್

ಪಾಲಿಸಿಯು ಮೆಚೂರಿಟೀ ಆದ ನಂತರ ಅಂದರೆ ಪಾಲಿಸಿಯ ಅವದಿಯು ಮುಗಿದಲ್ಲಿ, ನಿಗದಿಪಡಿಸಿರುವ ಮೆಚೂರಿಟೀ ಸಮ್ ಅಶ್ಶುರ್ಡ್ ಮೊತ್ತದ ಜೊತೆಗೆ ಲಾಯಲ್ಟಿ ಅಡಿಷನ್ ಇದ್ದಲ್ಲಿ, ಅದನ್ನು ಸೇರಿಸಿ ಒಟ್ಟು ಮೊತ್ತವನ್ನು ನೀಡಲಾಗುವುದು.

ಲಾಯಲ್ಟಿ ಅಡಿಷನ್

ಕಾರ್ಪೊರೇಷನ್ ನ ಹಿಂದಿನ ಅನುಭವದ ಹಾಗೂ ನಿಯಮದ ಮೇರೆಗೆ ಪಾಲಿಸಿಯು ಅದರ ಬಂಡವಾಳ ಹೂಡಿಕೆ ಮತ್ತು ಲಾಭ ಪಡುವಿಕೆಯ ಕಾರ್ಯದಲ್ಲಿ ಬಾಗಿ ಆಗುತ್ತದೆ. ಇದರಿಂದ, ಪಾಲಿಸಿಯು ಲಾಯಲ್ಟಿ ಅಡಿಷನ್ ಮೊತ್ತಕ್ಕೆ ಅರ್ಹವಾಗುತ್ತದೆ, ಲಾಯಲ್ಟಿ ಅಡಿಷನ್ ಮೊತ್ತವನ್ನು ಪಾಲಿಸಿದಾರನು ಮರಣ ಹೊಂದಿದಲ್ಲಿ ಅಥವಾ ಪಾಲಿಸಿಯು ಆವದಿ ಮುಗಿಸಿದಾಗ ಅಥವಾ ಸರಂಡರ್ ಮಾಡಿದಾಗ  ನೀಡಲಾಗುವುದು. ಈ ಬೆನಿಫಿಟ್ ಪಾಲಿಸಿಗೆ ನೀಡುವುದು ಅದು 5 ವರ್ಷ ಮುಗಿಸಿದ್ದಲ್ಲಿ ಮಾತ್ರ. ಈ ಲಾಯಲ್ಟಿ ಅಡಿಷನ್ ಮೊತ್ತವು ಕಾರ್ಪೊರೇಷನ್ ನಿಯಮಾವಳಿ ಹಾಗೂ ಅದು ಕಾಲ ಕಾಲಕ್ಕೆ ತೆಗೆದು ಕೊಳ್ಳುವ ನಿರ್ಣಯಗಳ ಮೇಲೆ ಅವಲಂಬಿತವಾಗಿರುತ್ತದೆ.

ಎಲ್ ಐ ಸಿ ಜೀವನ್ ಶಿಖರ್ ಪ್ಲಾನ್ – ಅರ್ಹತೆ ಹಾಗೂ ನಿಬಂದನೆಗಳು

ಎಲ್ ಐ ಸಿ ಜೀವನ್ ಶಿಖರ್ ಪ್ಲಾನ್ ಪಡೆಯಲು, ಈ ಕೆಳ ಕಂಡ ಅರ್ಹತೆಗಳು ಹಾಗೂ ನಿಬಂದನೆಗಳು ಅನ್ವಯವಾಗುತ್ತದೆ.

ಪಾಲಿಸಿ ಪಡೆಯುವಾಗ ಇರಬೇಕಾದ ಕನಿಷ್ಠ ವಯಸ್ಸು

6 ವರ್ಷಗಳು ಮುಗಿದಿರಬೇಕು

ಪಾಲಿಸಿ ಪಡೆಯಲು ಗರಿಷ್ಠ ವಯಸ್ಸು

45 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ)

ಮರಣ ಹೊಂದಿದಾಗ ಸಿಗಬಹುದಾದ ಸಮ್ ಅಶ್ಶುರ್ಡ್ ಮೊತ್ತ

Tabular ಸಿಂಗಲ್ ಪ್ರೀಮಿಯಂ ನ 10 ಪಟ್ಟು ಮೊತ್ತ

ಕನಿಷ್ಠ ಮೆಚೂರಿಟೀ ಸಮ್ ಅಶ್ಶುರ್ಡ್ ಮೊತ್ತ

ರೂ 1,00,000

ಗರಿಷ್ಠ ಮೆಚೂರಿಟೀ ಸಮ್ ಅಶ್ಶುರ್ಡ್ ಮೊತ್ತ

ಮಿತಿ ಇರುವುದಿಲ್ಲ

ಪಾಲಿಸಿಯ ಅವದಿ (ಟರ್ಮ್)

15 ವರ್ಷಗಳು

ಪ್ರೀಮಿಯಂ ಗಳನ್ನು ನೀಡಬಹುದಾದ ರೀತಿ

ಸಿಂಗಲ್ ಪ್ರೀಮಿಯಂ ಮಾತ್ರ

ಸೂಚನೆ: ಮೆಚೂರಿಟೀ ಸಮ್ ಅಶ್ಶುರ್ಡ್ ಮೊತ್ತವು ರೂ 20,000 ದ ಮಲ್ಟಿಪಲ್ಸ್ ನಲ್ಲಿ ಇರಬೇಕು

ವಿಮಾ ರಿಸ್ಕ್ ಕವರೆಜ್ ಆರಂಭವಾಗುವ ದಿನಾಂಕ

ಈ ಪಾಲಿಸಿಯ ನಿಯಮದ ಪ್ರಕಾರ, ಪಾಲಿಸಿದಾರನಿಗೆ 8 ವರ್ಷ ಆಗಿಲ್ಲದಿದ್ದಲ್ಲಿ, ಆತನ ಪಾಲಿಸಿಯ ವಿಮಾ ರಿಸ್ಕ್ ಕವರೆಜ್ ಅವನ  8 ವರ್ಷ ತುಂಬುವ ದಿನಕ್ಕೆ ಹತ್ತಿರದ ಪಾಲಿಸಿ ಆನಿವರ್ಸರಿ ಯ ಹಿಂದಿನ ದಿನದಿಂದ ಅಥವಾ 8 ವರ್ಷಗಳು ತುಂಬಿದ ದಿನದಿಂದ ಆರಂಭವಾಗುತ್ತದೆ.

ಪಾಲಿಸಿದಾರನಿಗೆ  8 ವರ್ಷಗಳು ತುಂಬಿದ್ದಲ್ಲಿ, ವಿಮಾ ರಿಸ್ಕ್ ಕವರೆಜ್ ಪಾಲಿಸಿಯು ಪ್ರಾರಂಭವಾದ ದಿನದಿಂದಲೇ ಶುರು ಆಗುತ್ತದೆ.

ಪ್ರೀಮಿಯಂ ರೇಟ್ಸ್(ಮೊತ್ತಗಳು)

ಪಾಲಿಸಿದಾರನ ಕೆಲವು ವಯಸ್ಸುಗಳಿಗೆ ಅನ್ವಯವಾಗುವ ಸಿಂಗಲ್ ಪ್ರೀಮಿಯಂ ಮೊತ್ತವನ್ನು ಈ ಕೆಳಗೆ ನೀಡಲಾಗಿದೆ. ನಮೂದಿಸಿರುವ ಪ್ರೀಮಿಯಂ ಮೊತ್ತವು, ಪ್ರತಿ ರೂ 1000 ಮೆಚೂರಿಟೀ ಸಮ್ ಅಶ್ಶುರ್ಡ್ ಗೆ ಅನ್ವಯಿಸುತ್ತದೆ.

ಪಾಲಿಸಿಯನ್ನು ಪಡೆಯುವಾಗ ಆತನ ವಯಸ್ಸು (ಸಮೀಪದ ಹುಟ್ಟು ಹಬ್ಬಕ್ಕೆ)

ಸಿಂಗಲ್ ಪ್ರೀಮಿಯಂ ರೇಟ್ಸ್ (ರೂ ಗಳಲ್ಲಿ) ಪ್ರತಿ ರೂ 1000 ಸಮ್ ಅಸ್ಸುರ್ಡ್ ಮೊತ್ತಕ್ಕೆ

10 ವರ್ಷಗಳು

398.55

20 ವರ್ಷಗಳು

410.25

30 ವರ್ಷಗಳು

425.80

40 ವರ್ಷಗಳು

514.80

ಸೂಚನೆ: ಈ ಮೇಲೆ ತಿಳಿಸಿರುವ ಸಿಂಗಲ್ ಪ್ರೀಮಿಯಂ ಮೊತ್ತವು, ಯಾವುದೇ ತರಹದ ಅನ್ವಯವಾಗುವ ತೆರಿಗೆಗಳಾಗಲಿ ಅಥವಾ ಪಾಲಿಸಿಯ ಮೇಲೆ ವಿಧಿಸಬಹುದಾದ / ತಗುಲಬಹುದಾದ ಅಂಡರ್ ರೈಟಿಂಗ್ ಚಾರ್ಜಸ್ (ಇದ್ದಲ್ಲಿ) ಗಳನ್ನು ಹೊರತು ಪಡಿಸಿ. ಹಾಗೂ, ಈ ಮೊತ್ತದಲ್ಲಿ ಹೆಚ್ಚಿನ ಮೆಚೂರಿಟೀ ಸಮ್ ಅಶ್ಶುರ್ಡ್ ಗೆ ಅನ್ವಯವಾಗುವ ರಿಯಾಯತಿ ಮೊತ್ತವು ಸೇರಿರುವುದಿಲ್ಲ.

ಹೆಚ್ಚಿನ ಮೆಚೂರಿಟೀ ಸಮ್ ಅಶ್ಶುರ್ಡ್ ಮೊತ್ತಕ್ಕೆ ದೊರಕುವ ರಿಯಾಯತಿ

ಎಲ್ ಐ ಸಿ ಜೇವಣ್ ಶಿಖರ್ ಪ್ಲಾನ್ ನಲ್ಲಿ ಪಾಲಿಸಿದಾರನು ಹೆಚ್ಚಿಗೆ ಮೆಚೂರಿಟೀ ಸಮ್ ಅಶ್ಶುರ್ಡ್ ಮೊತ್ತವನ್ನು ಆರಿಸಿಕೊಂಡಲ್ಲಿ ಆ ಮೊತ್ತದ ಮೇಲೆ ಕೆಳ ಕಂಡಂತೆ ರಿಯಾಯತಿ ದೊರೆಯುತ್ತದೆ.

ಮೆಚೂರಿಟೀ ಸಮ್ ಅಶ್ಶುರ್ಡ್ (M.S.A)

ಸಿಂಗಲ್ ಪ್ರೀಮಿಯಂ ರೇಟ್ಸ್ ನಲ್ಲಿ ಪ್ರತಿ ರೂ 1000 ಸಮ್ ಅಸ್ಸುರ್ಡ್ ಮೊತ್ತಕ್ಕೆ ದೊರಕುವ ರಿಯಾಯತಿ

ರೂ 2,00,000 ಕ್ಕಿಂತ ಕಮ್ಮಿ

ಯಾವುದೇ ರಿಯಾಯತಿ ಇಲ್ಲ

ರೂ 2,00,000 ದಿಂದ ರೂ 4,80,000 ದವರೆಗೆ

ರೂ 15.00

ರೂ 5,00,000 ದಿಂದ ರೂ 9,80,000 ದವರೆಗೆ

ರೂ 20.00

ರೂ 10,00,000 ದ ಮೇಲ್ಪಟ್ಟು

ರೂ 25.00

ಪಾಲಿಸಿಯ ಮೇಲೆ ಸಾಲ ಸೌಲಭ್ಯ

ಇತರೆ ಎಲ್ ಐ ಸಿ ಪಾಲಿಸಿಗಳಲ್ಲಿ ಇರುವಂತೆ, ಎಲ್ ಐ ಸಿ ಜೀವನ್ ಶಿಖರ್ ಪ್ಲಾನ್ ಮೇಲೂ ಕೂಡ ಸಾಲ ಸೌಲಭ್ಯ ಇದ್ದು ಅದು ಕೆಳಗೆ ನಮೂದಿಸಿರುವ ನಿಯಮಕ್ಕೆ ಬದ್ದವಾಗಿರುತ್ತದೆ.

ಈ ಪಾಲಿಸಿಯ ಮೇಲೆ ಸಾಲವನ್ನು ಪಾಲಿಸಿಯನ್ನು ಪಾಲಿಸಿ ಇಷ್ಯೂ ಮಾಡಿದ ದಿನದ ಅಥವಾ ಪಾಲಿಸಿಯ  ಫ್ರೀ ಲುಕ್ ಪೀರಿಯಡ್ ಮುಗಿದ 3 ತಿಂಗಳ ನಂತರ ಪಡೆಯಬಹುದು (ಇದರಲ್ಲಿ ಯಾವುದು ನಂತರವೋ ಆ ದಿವಸದ). ಪಾಲಿಸಿದಾರನ ವಯಸ್ಸನ್ನು  (ಪಾಲಿಸಿ ತೆಗೆದುಕೊಳ್ಳುವ ದಿವಸ) ಪರಿಗಣನೆಗೆ ತೆಗೆದುಕೊಂಡು ಪಾಲಿಸಿಗೆ ಸಿಗಬಹುದಾದ ಮೊತ್ತವನ್ನು ಪರ್ಸೆಂಟೇಜ್ ರೂಪದಲ್ಲಿ ನೀಡಲಾಗಿದೆ. ಈ ಸಾಲದ ಮೊತ್ತವು, ಪಾಲಿಸಿಯು ಹೊಂದಿರಬಹುದಾದ ಸರಂಡರ್  ಮೊತ್ತದ ಮೌಲ್ಯದ ಮೇಲೆ ನಿಗದಿ ಆಗುತ್ತದೆ.


ಪಾಲಿಸಿಯ ವರ್ಷ

ಪಾಲಿಸಿದಾರನ ವಯಸ್ಸು (ಪಾಲಿಸಿ ಪಡೆಯುವಾಗ) 35 ವರ್ಷಗಳು ಅಥವಾ ಅದಕ್ಕಿಂತ ಕಡಿಮೆ ಆಗಿದ್ದಲ್ಲಿ ದೊರೆಯುವ ಗರಿಷ್ಠ ಪರ್ಸೆಂಟೇಜ್ – ಸರಂಡರ್ ಮೌಲ್ಯದ ಮೊತ್ತದ ಮೇಲೆ

ಪಾಲಿಸಿದಾರನ ವಯಸ್ಸು (ಪಾಲಿಸಿ ಪಡೆಯುವಾಗ) 35 ವರ್ಷಗಳಿಗಿಂತ ಹೆಚ್ಚಿಗೆ  ಆಗಿದ್ದಲ್ಲಿ ದೊರೆಯುವ ಗರಿಷ್ಠ ಪರ್ಸೆಂಟೇಜ್ – ಸರಂಡರ್ ಮೌಲ್ಯದ ಮೊತ್ತದ ಮೇಲೆ

3 ನೇ ತಿಂಗಳಿನಿಂದ 3 ನೇ ವರ್ಷದವರೆಗೆ

55 %

35 %

4 ನೇ ವರ್ಷದಿಂದ 6 ನೇ ವರ್ಷದವರೆಗೆ

65 %

50 %

7 ನೇ ವರ್ಷದಿಂದ 9 ನೇ ವರ್ಷದವರೆಗೆ

75 %

70 %

10 ನೇ ವರ್ಷದಿಂದ 12 ನೇ ವರ್ಷದವರೆಗೆ

80 %

80 %

13 ನೇ ವರ್ಷದಿಂದ 15 ನೇ ವರ್ಷದವರೆಗೆ

85 %

80 %

ಸರಂಡರ್ ಮೌಲ್ಯ

ಈ ಪಾಲಿಸಿಯು ಸರಂಡರ್ ಮೌಲ್ಯಕ್ಕೆ ಅರ್ಹವಾಗಿರುತ್ತದೆ. ಅದರ ಪ್ರಕಾರ, ಪಾಲಿಸಿಯನ್ನು ಯಾವುದೇ ವರ್ಷ ಕಾರ್ಪೊರೇಷನ್ ಗೆ ಸರಂಡರ್ ಮಾಡಬಹುದು. ಅಂದರೆ ಮೊದಲನೇ ವರ್ಷವಾಗಲಿ ಅಥವಾ ಮುಂದಿನ ವರ್ಷಗಳಲ್ಲಿ ಅವದಿ ಮುಗಿಯುವ ವರ್ಷದವರೆಗೂ ಕೂಡ ಪಾಲಿಸಿಯನ್ನು ಸರಂಡರ್ ಮಾಡುವ ಅವಕಾಶ ಇರುತ್ತದೆ. ಪಾಲಿಸಿಯನ್ನು ಸರಂಡರ್ ಮಾಡಿದಲ್ಲಿ ಪಾಲಿಸಿದಾರನಿಗೆ ಒಂದು ಗ್ಯಾರಂಟಿಡ್ ಸರಂಡರ್ ಮೊತ್ತವನ್ನು ನೀಡಲಾಗುವುದು. ಅಫು ಈ ಕೆಳ ಕಂಡಂತಿರುತ್ತದೆ

  • ಮೊದಲನೇ ವರ್ಷದಲ್ಲಿ ಸರಂಡರ್ ಮಾಡಿದಲ್ಲಿ – ಪಾಲಿಸಿದಾರನು ನೀಡಿರುವ ಸಿಂಗಲ್ ಪ್ರೀಮಿಯಂ ಮೊತ್ತದ ಮೇಲೆ 70 % ನೀಡಲಾಗುವುದು.
  • ಎರಡನೆಯ ವರ್ಷದ ನಂತರ - ಪಾಲಿಸಿದಾರನು ನೀಡಿರುವ ಸಿಂಗಲ್ ಪ್ರೀಮಿಯಂ ಮೊತ್ತದ ಮೇಲೆ 90 % ನೀಡಲಾಗುವುದು.

ಮೇಲೆ ತಿಳಿಸಿರುವ ಸಿಂಗಲ್ ಪ್ರೀಮಿಯಂ ನಲ್ಲಿ ಅಂಡರ್ ರೈಟಿಂಗ್ ಮೂಲಕ ಏನಾದರೂ ಹೆಚ್ಚುವರಿ ಮೊತ್ತವಿದ್ದಲ್ಲಿ, ಅದು ಸೇರಿರುವುದಿಲ್ಲ. ಹಾಗೂ ಅನ್ವಯವಾಗುವ ತೆರಿಗೆಗಳು ಸೇರಿರುವುದಿಲ್ಲ.

ಕಾರ್ಪೊರೇಷನ್ ಪಾಲಿಸಿದಾರನಿಗೆ ಅನುಕೂಲವಾಗುವುದಿದ್ದಲ್ಲಿ ಹಾಗೂ ಸ್ಪೆಷಲ್ ಸರಂಡರ್ ಮೌಲ್ಯವು ಗ್ಯಾರಂಟಿಡ್ ಸರಂಡರ್ ಮೌಲ್ಯ ಕ್ಕಿಂತ ಜಾಸ್ತಿ ಇದ್ದಲ್ಲಿ ಅದನ್ನು ನೀಡುತ್ತದೆ. ಪಾಲಿಸಿಯನ್ನು 5 ವರ್ಷದ ಮೇಲೆ ಸರಂಡರ್ ಮಾಡಿದಲ್ಲಿ, ಪಾಲಿಸಿದಾರನಿಗೆ ಅನ್ವಯವಾಗುವ ಲಾಯಲ್ಟಿ ಅಡಿಷನ್ ಮೊತ್ತವನ್ನು ಕೂಡ ನೀಡಲಾಗುವುದು.

ತೆರಿಗೆಗಳು

ಭಾರತ ಸರ್ಕಾರ ಅಥವಾ ಇನ್ನೂ ಯಾವುದೇ ಸರ್ಕಾರದ ಸ್ವಾಮ್ಯತೆಗೆ ಒಳಪಟ್ಟ ಪ್ರಾದಿಕಾರಗಳು ಶಾಸನಬದ್ದವಾದ ತೆರಿಗೆಗಳನ್ನು ಜೀವ ವಿಮಾ ಪಾಲಿಸಿಗಳಿಗೆ ಅನ್ವಯವಾಗುವಂತೆ ಮಾಡಿದಲ್ಲಿ, ಅಂತಹ ತೆರಿಗೆಗಳು ಈ ಪಾಲಿಸಿಗೂ ಅನ್ವಯಿಸುತ್ತದೆ. ಹಾಗಾಗಿ ಪ್ರೀಮಿಯಂ ನೀಡುವಾಗ ಅವತ್ತಿನ ದಿನ ಯಾವ ತೆರಿಗೆಯು ಆ ಪಾಲಿಸಿಗೆ ಅನ್ವಯವಾಗುವುದೊ, ಅದನ್ನು ಸೇರಿಸಿ ನೀಡಬೇಕಾಗುತ್ತದ.

ಪ್ರೀಮಿಯಂ ಮೊತ್ತದ ಜೊತೆಗೆ, ಸರ್ವಿಸ್ ಟಾಕ್ಸ್ ಅನ್ನು ಕೂಡ ಕಟ್ಟಬೇಕಾಗುತ್ತದೆ. ಇದು, ಪ್ರೀಮಿಯಂ ಮೊತ್ತದ ಜೊತೆಗೆ ಸೇರದೆ ಸೆಪರೇಟ್ ಆಗಿ ನಮೂಡದಿಸಲಾಗುತ್ತದೆ. ಪ್ರೀಮಿಯಂ ಜೊತೆಯಲ್ಲಿ ನೀಡುವ ಯಾವ ತೆರಿಗೆಗಳನ್ನೂ, ಬೆನಿಫಿಟ್ ಲೆಕ್ಕಕ್ಕೆ ಸೇರಿಸುವುದಿಲ್ಲ.

ಫ್ರೀ ಲುಕ್ ಪೀರಿಯಡ್

ಪಾಲಿಸಿದಾರನಿಗೆ ಪಾಲಿಸಿಯ ನಿಯಮಗಳನ್ನು ಹಾಗೂ ನಿಬಂದನೆಗಳನ್ನು ಓದಿ ಅದರ ಪ್ರಯೋಜನವನ್ನು ಅರಿತುಕೊಳ್ಳಲು ಕಾರ್ಪೊರೇಷನ್ 15 ದಿನಗಳ ಕಾಲಾವಕಾಶವನ್ನು ನೀಡುತ್ತದೆ. ಈ 15 ದಿನಗಳಲ್ಲಿ, ಪಾಲಿಸಿದಾರನು ಯಾವುದೇ ನಿಯಮಗಳು ಅಥವಾ ನಿಬಂದನೆಗಳಿಗೆ ಒಪ್ಪಿಗೆ ಇಲ್ಲದ್ದಿದ್ದ ಪಕ್ಷದಲ್ಲಿ, ಪಾಲಿಸಿಯನ್ನು ಕಾರ್ಪೊರೇಷನ್ ಗೆ ವಾಪಸ್ಸು ಮಾಡಬಹುದು. ಆದರೆ, ಅದಕ್ಕೆ ಸೂಕ್ತ ಕಾರಣವನ್ನು ನೀಡಬೇಕಾಗುತ್ತದೆ. ಈ ರೀತಿ ಹಿಂದಿರುಗಿಸಿದ ಪಾಲಿಸಿಯನ್ನು, ಕಾರ್ಪೊರೇಷನ್ ತಕ್ಷಣವೇ ರದ್ದು ಪಡಿಸಲು ಕ್ರಮ ಕೈ ಗೊಳ್ಳುತ್ತದೆ. ಹಾಗೆ ರದ್ದು ಆದ ಪಾಲಿಸಿಗೆ ಪಾಲಿಸಿದಾರನು ನೀಡಿರುವ ಸಿಂಗಲ್ ಪ್ರೀಮಿಯಂ ಮೊತ್ತದಿಂದ, ಅದಕ್ಕೆ ತಗುಲಿರಬಹುದಾದ ರಿಸ್ಕ್ ಕವರೆಜ್ ಚಾರ್ಜಸ್, ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಲ್ಲಿ ಅದರ ಮತ್ತು ರಿಪೋರ್ಟ್ಸ್ ಗಳ ಬಾಬ್ತು ತಗುಲಿರಬಹುದಾದ ವೆಚ್ಚ ಹಾಗೂ ಅಂಡರ್ ರೈಟಿಂಗ್ ಮೂಲಕ ಸೇರಿಸಿರಬಹುದಾದ ಎಕ್ಸ್ಟ್ರಾ ಮೊತ್ತ ಇವೆಲ್ಲವುಗಳನ್ನು ಕಳೆದು ಉಳಿದ ಮೊತ್ತವನ್ನು ನೀಡಲಾಗುತ್ತದೆ.

ಪಾಲಿಸಿಯಲ್ಲಿ ಸೇರಿಲ್ಲದೆ ಇರುವುದು

ಈ ಪಾಲಿಸಿಯ ಅಡಿಯಲ್ಲಿ, ಪಾಲಿಸಿದಾರನ ಆತ್ಮಹತ್ಯೆಯು ಸೇರಿರುವುದಿಲ್ಲ. ಹಾಗೆ ಏನಾದರೂ ಆದಲ್ಲಿ, ಈ ಕೆಳ ಕಂಡ ಅಂಶವು ಅನ್ವಯವಾಗುತ್ತದೆ.

ಪಾಲಿಸಿದಾರನು ಪಾಲಿಸಿಯನ್ನು ತೆಗೆದುಕೊಂಡ ಮತ್ತು ರಿಸ್ಕ್ ಕವರೆಜ್ ಶುರು ಆದ 12 ತಿಂಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ, ಪಾಲಿಸಿಯು ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಹಾಗೂ ಆ ಪಾಲಿಸಿಯ  ಬಾಬ್ತು ಸರಂಡರ್ ಮೌಲ್ಯ ಅಥವಾ ಆತನು ನೀಡಿರುವ ಪ್ರೀಮಿಯಂ ಮೊತ್ತದ 90 % ಯಾವುದು ಹೆಚ್ಚೋ ಅದನ್ನು ನೀಡಲಾಗುವುದು. ಮುಂದುವರೆದು, ಅಂತಹ ಪಾಲಿಸಿಗೆ ಬೇರೆ ತರಹದ ಬೆನಿಫಿಟ್ ಗಳಾಗಲಿ ಅಥವಾ ಯಾವುದೇ ಇತರ ಕ್ಲಾಸ್ ಗಳು ಅನ್ವಯ ಆಗುವುದಿಲ್ಲ. ಕಾರ್ಪೊರೇಷನ್ ಬೇರೆ ಯಾವುದೇ ತರಹದ ಕ್ಲೈಮ್ ಗಳನ್ನು ನೀಡುವುದಿಲ್ಲ.

ಈ ಕ್ಲಾಸ್ ವಿಮಾದಾರನು 8 ವರ್ಷಕ್ಕಿಂತ ಕಡಿಮೆ ಇದ್ದಲ್ಲಿ ಅನ್ವಯ ಆಗುವುದಿಲ್ಲ. ಅಂದರೆ ವಿಮಾದಾರನು 8 ವರ್ಷಕ್ಕಿಂತ ಕಡಿಮೆ ಇದ್ದಲ್ಲಿ, ಅಂತಹ ಪಾಲಿಸಿಗೆ, ಆತನು ಕಟ್ಟಿರುವ ಸಿಂಗಲ್ ಪ್ರೀಮಿಯಂ ಮೊತ್ತಕ್ಕೆ ಯಾವುದೇ ಬಡ್ಡಿಯನ್ನು ಸೇರಿಸದೆ ನೀಡಲಾಗುವುದು.

ಎಲ್ ಐ ಸಿ ಜೀವನ್ ಶಿಖರ್ ಪ್ಲಾನ್ – ಪಾಲಿಸಿಗೆ ನೀಡುವ ಬೆನಿಫಿಟ್ ನ ಉದಾಹರಣೆ

ಎಲ್ ಐ ಸಿ ಜೀವನ್ ಶಿಖರ್ ಪ್ಲಾನ್ ನೀಡುವ ಬೆನಿಫಿಟ್ ನ ಉದಾಹರಣೆಯನ್ನು ಕೆಳಗೆ ವಿವರಿಸಲಾಗಿದೆ.

ಕೆಲವು ಬೇನೆಫಿಟ್ಸ್ ಗಳು ಗ್ಯಾರಂಟಿಡ್ ಆಗಿದ್ದು ಇನ್ನೂ ಕೆಲವು ಬದಲಾವಣೆಗೆ ಒಳಪಡುತ್ತವೆ. ಈ ಬದಲಾವಣೆಗೆ ಒಳಪಡುವ ಬೆನಿಫಿಟ್ ಗಳು ಕಾರ್ಪೊರೇಷನ್ ನ ಮುಂದಿನ ದಿನಗಳ ಪರ್ಫಾರ್ಮೆನ್ಸ್ ಮೇಲೆ ಅವಲಂಬಿತವಾಗಿರುತ್ತದೆ ಗ್ಯಾರಂಟಿಡ್ ಆಗಿರುವ ಬೆನಿಫಿಟ್ ಗಳನ್ನು ಗ್ಯಾರಂಟಿಡ್ ಎಂದು ನಮೂದಿಸಿದ್ದು. ಉಳಿದಂತೆ ಬದಲಾವಣೆಗೆ ಒಳ ಪಡುವುದನ್ನು ಎರಡು ಬೇರೆ ರೀತಿಯಲ್ಲಿ ನಿರೂಪಿಸಲಾಗಿದೆ.

ನಿರೂಪಣೆ 1:

ಪಾಲಿಸಿ ಪಡೆಯುವಾಗಿನ ವಯಸ್ಸು – 30

ಪಾಲಿಸಿಯ ಅವದಿ (ಟರ್ಮ್) – 15 ವರ್ಷಗಳು

ಪ್ರೀಮಿಯಂ ನೀಡುವ ರೀತಿ – ಸಿಂಗಲ್ ಪ್ರೀಮಿಯಂ

ಸಿಂಗಲ್ ಪ್ರೀಮಿಯಂ ಮೊತ್ತ – ರೂ 42580.00

ಮೆಚೂರಿಟೀ ಸಮ್ ಅಶ್ಶುರ್ಡ್ – ರೂ 1,00,000

ಮರಣ ಹೊಂದಿದಲ್ಲಿ ದೊರೆಯುವ ಸಮ್ ಅಶ್ಶುರ್ಡ್ ಮೊತ್ತ – ರೂ 425800.00

ಬದಲಾಗುವ ಸಿನ್ಯಾರಿಯೋ 1 – ಒಟ್ಟು ಬಂಡವಾಳ ಹೂಡಿರುವ ಮೊತ್ತಕ್ಕೆ  ಬರಬಹುದಾದ ಲಾಭ 4 % ಎಂದು ಪರಿಗಣಿಸಿ

ಬದಲಾಗುವ ಸಿನ್ಯಾರಿಯೋ 2 – ಒಟ್ಟು ಬಂಡವಾಳ ಹೂಡಿರುವ ಮೊತ್ತಕ್ಕೆ ಬರಬಹುದಾದ ಲಾಭ 8 % ಎಂದು ಪರಿಗಣಿಸಿ

ವರ್ಷದ ಕೊನೆಯಲ್ಲಿ

ವರ್ಷದ ಕೊನೆಯಲ್ಲಿ ನೀಡಿರುವ ಪ್ರೀಮಿಯಂ ಮೊತ್ತ(ರೂ ಗಳಲ್ಲಿ)

ಪಾಲಿಸಿಯ ಬಾಬ್ತು ಪಾಲಿಸಿದಾರನ ಮರಣ ಆದ ಪಕ್ಷದಲ್ಲಿ ನೀಡುವ ಬೆನಿಫಿಟ್ ಮೊತ್ತ (ಆ ವರ್ಷದ  ಕೊನೆಗೆ)

   

ಗ್ಯಾರಂಟಿಡ್

ಬದಲಾಗಬಹುದಾದ ಮೊತ್ತ

ಒಟ್ಟು ಮೊತ್ತ

     

ಸಿನಾರಿಯೊ 1

4 %

ಸಿನಾರಿಯೊ 2

8%

ಸಿನಾರಿಯೊ 1

4 %

ಸಿನಾರಿಯೊ 2

8%

1

42580.00

425800.00

0

0

425800

425800

2

42580.00

425800.00

0

0

425800

425800

3

42580.00

425800.00

0

0

425800

425800

4

42580.00

425800.00

0

0

425800

425800

5

42580.00

425800.00

0

0

425800

425800

6

42580.00

425800.00

0

500

425800

426300

7

42580.00

425800.00

0

700

425800

426500

8

42580.00

425800.00

0

900

425800

426700

9

42580.00

425800.00

0

1100

425800

426900

10

42580.00

425800.00

0

1400

425800

427200

11

42580.00

425800.00

0

1700

425800

427500

12

42580.00

425800.00

0

2000

425800

427800

13

42580.00

425800.00

0

2400

425800

428200

14

42580.00

425800.00

0

2800

425800

428600

15

42580.00

425800.00

0

3200

425800

429000

ವರ್ಷದ ಕೊನೆಯಲ್ಲಿ

ವರ್ಷದ ಕೊನೆಯಲ್ಲಿ ನೀಡಿರುವ ಪ್ರೀಮಿಯಂ ಮೊತ್ತ(ರೂ ಗಳಲ್ಲಿ)

ಪಾಲಿಸಿಯ ಬಾಬ್ತು ಪಾಲಿಸಿದಾರನು ಸರ್ವೈವಲ್ (ಜೀವದಿಂದ ಇದ್ದ) ಆದ ಪಕ್ಷದಲ್ಲಿ ನೀಡುವ ಬೆನಿಫಿಟ್ ಮೊತ್ತ (ಆ ವರ್ಷದ ಕೊನೆಗೆ)

   

ಗ್ಯಾರಂಟಿಡ್

ಬದಲಾಗಬಹುದಾದ ಮೊತ್ತ

ಒಟ್ಟು ಮೊತ್ತ

     

ಸಿನಾರಿಯೊ 1

4 %

ಸಿನಾರಿಯೊ 2

8%

ಸಿನಾರಿಯೊ 1

4 %

ಸಿನಾರಿಯೊ 2

8%

1

42580.00

0

0

0

0

0

2

42580.00

0

0

0

0

0

3

42580.00

0

0

0

0

0

4

42580.00

0

0

0

0

0

5

42580.00

0

0

0

0

0

6

42580.00

0

0

0

0

0

7

42580.00

0

0

0

0

0

8

42580.00

0

0

0

0

0

9

42580.00

0

0

0

0

10

42580.00

0

0

0

0

11

42580.00

0

0

0

0

12

42580.00

0

0

0

0

13

42580.00

0

0

0

0

14

42580.00

0

0

0

0

15

42580.00

100000.00

0

3200.00

100000.00

103200.00

ಮೇಲೆ ಕಾಣಿಸಿದ ಸಿನಾರಿಯೊ 1 ರ 4 % ಹಾಗೂ ಸಿನಾರಿಯೊ 2 ರ 8 % ಕೇವಲ ಲೆಕ್ಕ ಮಾಡಲು ತೆಗೆದುಕೊಂಡಿರುವ ಸಂಖ್ಯೆಗಳು. ಕಾರ್ಪೊರೇಷನ್ ನ ಬೇರೆ ಬೇರೆ ರೀತಿಯಲ್ಲಿ ಹಣ ಹೂಡಿಕೆ ಮಾಡಿ ಅದರಿಂದ ಬಂದಿರುವ ಲಾಭದ ಮೇಲೆ ಅವಲಂಬಿತವಾಗಿರುತ್ತದೆ. ಈ ಪರ್ಸೆಂಟೆಜ್ ಬದಲಾವಣೆ ಆಗುತ್ತಿದ್ದು, ಆ ದಿವಸ ಎಲ್ ಐ ಸಿ ಯು ನಿಯಮಾನುಸಾರ ನೀಡುವ ಮೊತ್ತವಾಗಿರುತ್ತದೆ.