ಎಲ್ ಐ ಸಿ ಜೀವನ್ ತರುಣ್ ಪ್ಲಾನ್
 • ಅತ್ಯುತ್ತಮ ಯೋಜನೆಗಳು
 • ಸುಲಭ ಹೋಲಿಕೆ
 • ತಕ್ಷಣದ ಖರೀದಿ
PX step

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಹುಟ್ಟಿದ ದಿನಾಂಕ (ದೊಡ್ಡ ಸದಸ್ಯ)
ಆದಾಯ
| ಲಿಂಗ

1

2

ಫೋನ್ ಸಂಖ್ಯೆ
ಹೆಸರು
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯ ವಿಮಾ ಯೋಜನೆಗಳನ್ನು ನೀಡುವ ಒಂದು ಸಂಸ್ಥೆ ಆಗಿದ್ದು, ಜನರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಮೊದಲಿನಿಂದಲೂ ನೀಡುತ್ತಾ ಬಂದಿದೆ. ಈ ದಿಕ್ಕಿನಲ್ಲಿ, ಯುವ ಜನರಿಗೆ ಉಪಯೋಗ ಆಗುವಂತಹ ಹಾಗೂ ಅವರ ವಿಧ್ಯಾಭ್ಯಾಸಕ್ಕೆ ಅನುಕೂಲ ಆಗುವ ರೀತಿ ಒಂದು ಯೋಜನೆಯನ್ನು ಬಿಡುಗಡೆ ಮಾಡಿದೆ. ಅದು ಎಲ್ ಐ ಸಿ ಜೀವನ್ ತರುಣ್ ಪ್ಲಾನ್ ಆಗಿರುತ್ತದೆ. ಈ ಪ್ಲಾನ್ ಕೂಡ ಒಂದು ನಾನ್-ಲಿಂಕ್ಡ್ ಯೋಜನೆ ಆಗಿದ್ದು, ರಕ್ಷಣೆ ಮತ್ತು ಮಕ್ಕಳ ಮುಂದಿನ ವಿದ್ಯಾಬ್ಯಾಸಕ್ಕಾಗಿ ಉಳಿತಾಯವನ್ನು ಮಾಡುವಂತಹ ಪ್ಲಾನ್ ಆಗಿರುತ್ತದೆ. ಇದು ವಿಶೇಷವಾಗಿ, ಮಕ್ಕಳ ವಿದ್ಯಾಬ್ಯಾಸ ಹಾಗೂ ಇತರೆ ಉಪಯೋಗಗಳಿಗಾಗಿ ಸಂಯೋಜಿಸಿರುವ ಯೋಜನೆ. ಇದು ಮಕ್ಕಳ ವಿದ್ಯಾಬ್ಯಾಸಕ್ಕೆ ಅನುಕೂಲವಾಗುವಂತೆ, ಅವರ 20 ರಿಂದ 24 ನೇ ವಯಸ್ಸಿನಲ್ಲಿ, ಸರ್ವೈವಲ್ ಬೆನಿಫಿಟ್ ಮುಖಾಂತರ ಒಂದು ಖಚಿತ ಮೊತ್ತವನ್ನು ಹಾಗೂ ಪಾಲಿಸಿಯ ಮೆಚೂರಿಟೀ 25 ನೇ ವಯಸ್ಸಿಗೆ ಆದಾಗ, ಮೆಚೂರಿಟೀ ಮೊತ್ತವನ್ನು ನೀಡುವಂತಹ ಪ್ಲಾನ್.

ಇದು ಒಂದು ಪಾಲಿಸಿಯ ಬಾಬ್ತು ಹೊಂದಿಕೊಳ್ಳುವ ಯೋಜನೆ ಆಗಿದ್ದು, ಪಾಲಿಸಿದಾರನು ಸರ್ವೈವಲ್ ಬೆನಿಫಿಟ್ ಮೊತ್ತವನ್ನು ಹಾಗೂ ಆದರ ನಿಗದಿತ ಅಂಶಗಳನ್ನು (ಅಂದರೆ ಮಕ್ಕಳ 20 ನೇ ವಯಸ್ಸಿನಿಂದ 24 ನೇ ವಯಸ್ಸಿನವರೆಗೂ ಬರಬಹುದಾದ ಹಣದ ಮೊತ್ತ) ಮೊದಲೇ ನಿಗದಿತ ಪಡಿಸಿ ಕೊಳ್ಳಬಹುದು. ಅದಕ್ಕೆ ಸಂಬಂದಪಟ್ಟಂತೆ, ಈ ಕೆಳಗೆ ತಿಳಿಸಿರುವ 4 ಅಪ್ಶನ್ ಗಳಲ್ಲಿ ಒಂದನ್ನು ಆರಿಸಿಕೊಳ್ಳಬಹುದು.

ಆಪ್ಶನ್ ಗಳು

ಸರ್ವೈವಲ್ ಬೆನಿಫಿಟ್ (ಪರ್ಸೆಂಟೆಜ್ ನಲ್ಲಿ)

ಮೆಚೂರಿಟೀ ಬೆನಿಫಿಟ್ (ಪರ್ಸೆಂಟೆಜ್ ನಲ್ಲಿ)

ಆಪ್ಶನ್ 1

ಸರ್ವೈವಲ್ ಬೆನಿಫಿಟ್ ಇಲ್ಲದೆ

100 % ಸಮ್ ಅಶ್ಶುರ್ಡ್ ಮೊತ್ತ

ಆಪ್ಶನ್ 2

20, 21, 22, 23 ಹಾಗೂ 24 ನೇ ವಯಸ್ಸಿಗೆ – ಸಮ್ ಅಶ್ಶುರ್ಡ್ ಮೊತ್ತದ 5 % ನಷ್ಟು  

ಸಮ್ ಅಶ್ಶುರ್ಡ್ ಮೊತ್ತದ ಉಳಿದ 75 % ಮೊತ್ತ

ಆಪ್ಶನ್ 3

20, 21, 22, 23 ಹಾಗೂ 24 ನೇ ವಯಸ್ಸಿಗೆ – ಸಮ್ ಅಶ್ಶುರ್ಡ್ ಮೊತ್ತದ 10 % ನಷ್ಟು  

ಸಮ್ ಅಶ್ಶುರ್ಡ್ ಮೊತ್ತದ ಉಳಿದ 50 % ಮೊತ್ತ

ಆಪ್ಶನ್ 4

20, 21, 22, 23 ಹಾಗೂ 24 ನೇ ವಯಸ್ಸಿಗೆ – ಸಮ್ ಅಶ್ಶುರ್ಡ್ ಮೊತ್ತದ 15 % ನಷ್ಟು  

ಸಮ್ ಅಶ್ಶುರ್ಡ್ ಮೊತ್ತದ ಉಳಿದ 25 % ಮೊತ್ತ

ಈ ಪಾಲಿಸಿಯ ನಿಯಮದ ಪ್ರಕಾರ, ಸರ್ವೈವಲ್ ಬೆನಿಫಿಟ್ ಮೊತ್ತವು ಸಮ್ ಅಶ್ಶುರ್ಡ್ ಮೊತ್ತದ ಪರ್ಸೆಂಟೆಜ್ ಗಳಲ್ಲಿ ಲಭ್ಯವಿರುತ್ತದೆ. ಆದರ ಪ್ರಕಾರ, ಪಾಲಿಸಿದಾರನ ಮಗುವಿಗೆ  20 ನೆಯ ವಯಸ್ಸು ಹಾಗೂ ನಂತರ 4 ವರ್ಷಗಳು ಅಂದರೆ  21, 22, 23 ಮತ್ತ್ಯು 24 ನೇ ವಯಸ್ಸಿಗೆ ಸಮ್ ಅಶ್ಶುರ್ಡ್ ಮೊತ್ತದ ಒಂದು ಖಚಿತ ಪರ್ಸೆಂಟೆಜ್ ಮೊತ್ತವನ್ನು ನೀಡಲಾಗುತ್ತದೆ. ಕೊನೆಯಲ್ಲಿ ಅಂದರೆ 25 ನೇ ವಯಸ್ಸಿನಲ್ಲಿ, ಮೆಚೂರಿಟೀ ಮೊತ್ತವನ್ನು ಹಾಗೂ ಅದಕ್ಕೆ ಸೇರಿರಬಹುದಾದ ವೆಸ್ಟೆಡ್ ಸಿಂಪಲ್ ರಿವರ್ಷನರಿ ಬೋನಸ್ ಮತ್ತು ಅಂತಿಮ ಅಡಿಷನಲ್ ಬೋನಸ್ ಗಳನ್ನು ಸೇರಿಸಿ ಒಟ್ಟು  ಮೊತ್ತವನ್ನು ನೀಡಲಾಗುತ್ತದೆ.

ಪಾಲಿಸಿದಾರನು ಆಯ್ಕೆಮಾಡಿರುವ ಆಪ್ಶನ್, ಪಾಲಿಸಿಯ ಕಾಂಟ್ರ್ಯಾಕ್ಟ್ ಗೆ ಸೇರ್ಪಡೆ ಆಗುವುದರಿಂದ,ಮುಂದೆ ಅದನ್ನು ಬದಲಾಯಿಸಲು ಅವಕಾಶ ಇರುವುದಿಲ್ಲ. ಜೊತೆಗೆ, ಕಾರ್ಪೊರೇಷನ್ ನಿಯಮದ ಪ್ರಕಾರ, ಈ ಪಾಲಿಸಿಯು ಸಾಲ ಸೌಲಭ್ಯಕ್ಕೆ ಅರ್ಹತೆ ಹೊಂದಿರುತ್ತದೆ.

ಈ ಪ್ಲಾನ್ ಅನ್ನು ತಂದೆಯಾಗಲಿ ಅಥವಾ ತಾಯಿಯಾಗಲಿ ಅಥವಾ ಮಗುವಿನ ತಾತ/ಅಜ್ಜಿ ಆಗಲಿ ಕೊಳ್ಳಬಹುದು. ಆದರೆ ಮಗುವಿನ ವಯಸ್ಸು 0 ಇಂದ 12 ವರ್ಷಗಳ ಒಳಗೆ ಇರಬೇಕು.

ಎಲ್ ಐ ಸಿ ಜೀವನ್ ತರುಣ್ ಪ್ಲಾನ್ – ಬೆನಿಫಿಟ್ ಗಳು

ಡೆತ್ ಬೆನಿಫಿಟ್

ಎಲ್ ಐ ಸಿ ಜೀವನ್ ತರುಣ್ ಪ್ಲಾನ್ ನಲ್ಲಿ ಡೆತ್ ಬೆನಿಫಿಟ್ ಅನ್ನು ಈ ಕೆಳಗೆ ತಿಳಿಸಿರುವ ಎರಡು ಸಂದರ್ಭಗಳನ್ನು ಪರಿಗಣಿಸಿ ನೀಡಲಾಗುತ್ತದೆ.

 1. ಮರಣವು ಪಾಲಿಸಿಯ ಮೇಲಿನ ರಿಸ್ಕ್ ಕವರೆಜ್ ಶುರು ಆಗುವ ಮುಂಚೆ ಆದಲ್ಲಿ – ಪಾಲಿಸಿದಾರನು ನೀಡಿರುವ ಒಟ್ಟು ಪ್ರೀಮಿಯಂ ಮೊತ್ತದಲ್ಲಿ ಸರ್ವಿಸ್ ಟಾಕ್ಸ್ ಹಾಗೂ ಎಕ್ಷ್ತ್ರಾ ಪ್ರೀಮಿಯಂ ಇದ್ದಲ್ಲಿ ಅದನ್ನು ಕಡಿತ ಮಾಡಿ (ಪ್ರೀಮಿಯಂ ಗೆ ಬಡ್ಡಿ ಸೇರಿಸದೆ) ಉಳಿದ ಮೊತ್ತವನ್ನು ನೀಡಲಾಗುವುದು.
 2. ಮರಣವು ಪಾಲಿಸಿಯ ಮೇಲಿನ ರಿಸ್ಕ್ ಕವರೆಜ್ ಶುರು ಆದ ಮೇಲೆ ಆದಲ್ಲಿ –ಸಮ್ ಅಶ್ಶುರ್ಡ್ ಆನ್ ಡೆತ್ ಮೊತ್ತಕ್ಕೆ  ವೆಸ್ಟೆಡ್ ಸಿಂಪಲ್ ರಿವರ್ಷನರಿ ಬೋನಸ್ ಮತ್ತು ಅಂತಿಮ ಅಡಿಷನಲ್ ಬೋನಸ್ ಗಳನ್ನು ಸೇರಿಸಿ ಒಟ್ಟು ಮೊತ್ತವನ್ನು ನೀಡಲಾಗುತ್ತದೆ.

ಇದರಲ್ಲಿ ಸಮ್ ಅಶ್ಶುರ್ಡ್ ಆನ್ ಡೆತ್ ಮೊತ್ತವು ಈ ಕೆಳಗೆ ನಮೂದಿಸಿರುವ ಮೊತ್ತಗಳಲ್ಲಿ ಯಾವುದು ಹೆಚ್ಚಿರುತ್ತದೆಯೋ ಅದು ಆಗಿರುತ್ತದೆ  

 • ವಾರ್ಷಿಕ ಪ್ರೀಮಿಯಂ ಮೊತ್ತದ 10 ಪಟ್ಟು ಮೊತ್ತ
 • ಪಾಲಿಸಿದಾರನ ಮರಣ ಆದಲ್ಲಿ ನೀಡುವ ಖಚಿತವಾದ ಸಮ್ ಅಶ್ಶುರ್ಡ್ ಮೊತ್ತ. ಇದು ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತಕ್ಕೆ 125 % ಇರುತ್ತದೆ.
 1. ಕಾರ್ಪೊರೇಷನ್ ನೀಡುವ ಈ ಡೆತ್ ಬೆನಿಫಿಟ್ ಮೊತ್ತವು, ಪಾಲಿಸಿದಾರನು ಆವರೆವಿಗೂ ನೀಡಿರುವ ಪ್ರೀಮಿಯಂ ಗಳ ಒಟ್ಟು ಮೊತ್ತಕ್ಕಿಂತ 105 % ಗಿಂತ ಕಮ್ಮಿ ಇರಬಾರದು

ಮೇಲೆ ಕಾಣಿಸಿರುವ ಪ್ರೀಮಿಯಂ ಮೊತ್ತದಲ್ಲಿ, ಎಕ್ಸ್ಟ್ರಾ ಪ್ರೀಮಿಯಂ ಮೊತ್ತ ಇದ್ದಲ್ಲಿ ಹಾಗೂ ತೆರಿಗೆಯ ಬಾಬ್ತು ನೀಡಿರುವ ಮೊತ್ತ ಮತ್ತು ರೈಡರ್  ಪ್ರೀಮಿಯಂ ಮೊತ್ತ ಇವುಗಳು ಸೇರುವುದಿಲ್ಲ.

ಸರ್ವೈವಲ್ ಬೆನಿಫಿಟ್

ಮೇಲೆ ತಿಳಿಸಿರುವಂತೆ, ಈ ಪಾಲಿಸಿಯ ನಿಯಮದ ಪ್ರಕಾರ, ಪಾಲಿಸಿದಾರನು ಆಯ್ಕೆ  ಮಾಡಿಕೊಂಡಿರುವ ಆಪ್ಶನ್ ಗೆ ಪೂರಕವಾಗಿ, ಆತನ ಮಗುವು 20ನೇ ವಯಸ್ಸನ್ನು ಮುಗಿಸಿದ ಕೂಡಲೇ ಹಾಗೂ ಅದರ ಮುಂದಿನ 4 ವರ್ಷಗಳು ಅಂದರೆ 21, 22,23 ಮತ್ತು 24 ನೇ ವಯಸ್ಸಿನಲ್ಲಿ ಸರ್ವೈವಲ್ ಬೆನಿಫಿಟ್ ಎಂದು ಸಮ್ ಅಶ್ಶುರ್ಡ್ ಮೊತ್ತದ ಪರ್ಸೆಂಟೆಜ್ ಮೊತ್ತವನ್ನು ನೀಡಲಾಗುವುದು. ಈ ಸಮ್ ಅಶ್ಶುರ್ಡ್ ಮೊತ್ತದ ಪರ್ಸೆಂಟೆಜ್ ಗಳನ್ನು ಪಾಲಿಸಿದಾರನು ಪಾಲಿಸಿಯನ್ನು ಪಡೆಯುವಾಗಲೇ ನಿರ್ದರಿಸಿ ಅದನ್ನು ಪಾಲಿಸಿಯಲ್ಲಿ ಸೂಚಿಸಿರಬೇಕಾಗುತ್ತದೆ. ಹಾಗೆ ನಿರ್ದರಿಸಬಹುದಾದ ಆಪ್ಶನ್ ಗಳ ವಿವರಗಳನ್ನು  ಈ ಕೆಳಗೆ ನೀಡಲಾಗಿದೆ.

ಪಾಲಿಸಿಯ ಅನಿವರ್ಸರಿಯು ಮಗುವಿನ ಹುಟ್ಟು ಹಬ್ಬದ ದಿನಕ್ಕೆ ಹೊಂದಿಕೆ ಆದಲ್ಲಿ / ಮಗುವಿನ ವಯಸ್ಸು (ಮುಗಿದಿದ್ದಲ್ಲಿ)

ಸರ್ವೈವಲ್ ಬೆನಿಫಿಟ್ ಎಂದು ನೀಡಬೇಕಾದ ಸಮ್ ಅಶ್ಶುರ್ಡ್ ಮೊತ್ತದ ಪರ್ಸೆಂಟೆಜ್ ಗಳುಆಪ್ಶನ್ 1ಆಪ್ಶನ್ 2ಆಪ್ಶನ್ 3ಆಪ್ಶನ್ 4

20ನೇ ವರ್ಷದಿಂದ 24 ನೇ ವರ್ಷದವರೆಗೂ

ಯಾವುದೇ ಮೊತ್ತ ಇಲ್ಲ

ಪ್ರತಿ ವರ್ಷವೂ 5 %

ಪ್ರತಿ ವರ್ಷವೂ 10 %

ಪ್ರತಿ ವರ್ಷವೂ 15 %

ಪಾಲಿಸಿದಾರನು ಮೇಲೆ ಕಾಣಿಸಿರುವ ಆಪ್ಶನ್ ಗಳಲ್ಲಿ ಯಾವುದಾದರೂ ಒಂದನ್ನು ಪಾಲಿಸಿಯನ್ನು ಪಡೆಯುವಾಗಲೇ ಆಯ್ಕೆ ಮಾಡಿರಬೇಕು.

ಮೆಚೂರಿಟೀ ಬೆನಿಫಿಟ್

ಪಾಲಿಸಿದಾರನು ಪಾಲಿಸಿಯ ಅವದಿ ಮುಗಿಸಿದಲ್ಲಿ, 25 ನೇ ವರ್ಷಕ್ಕೆ ಆ ಪಾಲಿಸಿಯ ಮೇಲೆ ಮೆಚೂರಿಟೀ ಬೆನಿಫಿಟ್ ನೀಡಲಾಗುತ್ತದೆ. ಅದರಂತೆ, ಮೆಚೂರಿಟೀ ಮೊತ್ತವು ಸಮ್ ಅಶ್ಶುರ್ಡ್ ನ ಒಂದು ಪರ್ಸೆಂಟೆಜ್ ಆಗಿರುತ್ತದೆ. ಅದು ಮೇಲೆ ಕಾಣಿಸಿದ ಆಪ್ಶನ್ ಗಳ ಮೇಲೆ ಅವಲಂಬಿತವಾಗಿರುತ್ತದೆ. ಅದರ ವಿವರವನ್ನು ಈ ಕೆಳಗೆ ನೀಡಲಾಗಿದೆ.

ಪಾಲಿಸಿಯ ಮೆಚೂರಿಟೀ ವಯಸ್ಸು

ಆಪ್ಶನ್ 1

ಆಪ್ಶನ್ 2

ಆಪ್ಶನ್ 3

ಆಪ್ಶನ್ 4

25 ವರ್ಷಗಳು

100 %

75%

50%

25%

ಇದರ ಜೊತೆಗ್, ವೆಸ್ಟೆಡ್ ಸಿಂಪಲ್ ರಿವರ್ಷನರಿ ಬೋನಸ್ ಹಾಗೂ ಅಂತಿಮ ಅಡಿಷನಲ್ ಬೋನಸ್ ಇದ್ದಲ್ಲಿ ಅದನ್ನು ಕೂಡ ಸೇರಿಸಿ ಒಟ್ಟು ಮೊತ್ತವನ್ನು ನೀಡಲಾಗುವುದು.

ಲಾಭದಲ್ಲಿ ಬಾಗಿ ಆಗುವಿಕೆ

ಈ ಪಾಲಿಸಿಯ ನಿಯಮದ ಪ್ರಕಾರ ಪಾಲಿಸಿಯು ಕಾರ್ಪೊರೇಷನ್ ನ ಬಂಡವಾಳ ಹೂಡಿಕೆ ಹಾಗೂ ಅದರಿಂದ ಉತ್ಪನ್ನ ಆಗುವ ಲಾಭದಲ್ಲಿ ಬಾಗಿ ಆಗಲು ಅರ್ಹತೆ ಹೊಂದಿರುತ್ತದೆ.

ಆದ್ದರಿಂದ, ಈ ಪಾಲಿಸಿಯು ಕಾರ್ಪೊರೇಷನ್ ನೀಡುವ ಸಿಂಪಲ್ ರಿವರ್ಶನರಿ ಬೋನಸ್ ಗಳಿಗೂ ಅರ್ಹತೆ ಪಡೆಯುತ್ತದೆ. ಸಿಂಪಲ್ ರಿವರ್ಶನರಿ ಬೋನಸ್  ಮೊತ್ತವನ್ನು ಕಾರ್ಪೊರೇಷನ್ ತನ್ನ ಹಿಂದಿನ ವರ್ಷಗಳ ಪರ್ಫಾರ್ಮನ್ಸ್ ಆದಾರದ ಮೇಲೆ ನಿಗದಿ ಪಡಿಸುತ್ತದೆ. ಆದರೆ, ಪಾಲಿಸಿಯು ಮೆಚೂರಿಟೀ ಆಗುವಾಗ ಅಸ್ಥಿತ್ವದಲ್ಲಿ ಇರಬೇಕು.

ಆಪ್ಷನಲ್ ರೈಡರ್

ಈ ಪಾಲಿಸಿಗೆ ಸ್ವ ಇಚ್ಚೆಯಿಂದ ತೆಗೆದುಕೊಳ್ಳಬಹುದಾದ ಎಲ್ ಐ ಸಿ ಪ್ರೀಮಿಯಂ ವೈವರ್ ಬೆನಿಫಿಟ್ ರೈಡರ್ ಲಭ್ಯವಿರುತ್ತದೆ. ಅದನ್ನು ಪಾಲಿಸಿದಾರನು ಹೆಚ್ಚುವರಿ ಪ್ರೀಮಿಯಂ ಮೊತ್ತವನ್ನು ನೀಡಿ ಆಯ್ಕೆ ಮಾಡಿಕೊಳ್ಳಬಹುದು.

ಎಲ್ ಐ ಸಿ ಜೀವನ್ ತರುಣ್ ಪ್ಲಾನ್ – ಬೆನಿಫಿಟ್ ಉದಾಹರಣೆ

ಶಾಸನಬದ್ದ ಎಚ್ಚರಿಕೆ

ಎಲ್ ಐ ಸಿ ಯು ನೀಡುವ ಬೆನೆಫಿಟ್ಸ್ ಗಳಲ್ಲಿ ಕೆಲವು ಗ್ಯಾರಂಟಿಡ್ ಆಗಿದ್ದು ಇನ್ನೂ ಕೆಲವು ಬದಲಾವಣೆಗೆ ಒಳ ಪಡುವ ಬೆನಿಫಿಟ್ ಗಳು ಆಗಿರುತ್ತವೆ, ಏಕೆಂದರೆ, ಅಂತಹ ಬೆನಿಫಿಟ್ ಗಳು ಕಾರ್ಪೊರೇಷನ್ ನ ಮುಂದಿನ ಕಾರ್ಯ ನಿರ್ವಹಣೆ ಹಾಗೂ ಅದರಿಂದ ಬರುವ ಆದಾಯದ ಮೇಲೆ ಅವಲಂಬಿತವಾಗಿರುತ್ತದೆ ನಿಮ್ಮ ಪಾಲಿಸಿಯಲ್ಲಿ ಗ್ಯಾರಂಟಿಡ್ ಆದಾಯ ಎಂದು ನಮೂದಿಸಿರುವ ಬೆನಿಫಿಟ್ ಗಳಿಗೆ ಕೆಳ ಕಂಡ ಟೇಬಲ್ ನಲ್ಲಿ “ಗ್ಯಾರಂಟಿಡ್”  ಎಂದು ತೋರಿಸಲಾಗಿದೆ. ಹಾಗೆಯೇ, ಪಾಲಿಸಿಯಲ್ಲಿ ನಮೂದಿಸಿರುವ ಗ್ಯಾರಂಟಿಡ್ ಅಲ್ಲದ ಬೆನಿಫಿಟ್ ಗಳನ್ನು ಕೆಳ ಕಂಡ ಟೇಬಲ್ ನಲ್ಲಿ ಎರಡು ರೀತಿಯ ರಿಟರ್ನ್ಸ್ ಗಳನ್ನು ಗಣನೆಗೆ ತೆಗೆದುಕೊಂಡು ಅದರ ರೀತ್ಯಾ ತೋರಿಸಲಾಗಿದೆ. ಇದು ಭವಿಷ್ಯದಲ್ಲಿ ಕಾರ್ಪೊರೇಷನ್ ನ ಬಂಡವಾಳ ಹೂಡಿಕೆಯಿಂದ ಬರಬಹುದಾದ ಎರಡು ಊಹಿಸಲಾದ ಆದಾಯ ಗಳನ್ನು ಅಳವಡಿಸಿ ತಯಾರಿಸಲಾಗಿದೆ. ಈ ಎರಡು ಊಹಿಸಲಾದ ಆದಾಯಗಳು ಪಾಲಿಸಿಯ ಬಾಬ್ತು ನೀಡುವ ಗ್ಯಾರಂಟಿಡ್ ಮೊತ್ತವಲ್ಲ. ಹಾಗೂ ಅವುಗಳು ಗರಿಷ್ಠ ಅಥವಾ ಕನಿಷ್ಠ ಮಿತಿಗಳು ಕೂಡ ಅಲ್ಲ. ಏಕೆಂದರೆ, ನಿಮ್ಮ ಪಾಲಿಸಿಯು ಬೇರೆ ಬೇರೆ ಅಂಶಗಳ ಮೇಲೆ ಹಾಗೂ ಮುಂದಿನ ಕಾರ್ಪೊರೇಷನ್ ನ ಕಾರ್ಯ ನಿರ್ವಹಣೆ ಮೇಲೂ ಅವಲಂಬಿತವಾಗಿರುತ್ತದೆ.

ಈ ಪಾಲಿಸಿಯ ಬೆನಿಫಿಟ್ ಗಳ ಬಗ್ಗೆ ಕೆಳಗಿನ ಉದಾಹರಣೆಯನ್ನು ಗಮನಿಸಿ.

ವಿವರಗಳು

ಪಾಲಿಸಿಯನ್ನು ಪಡೆಯುವಾಗ ಪಾಲಿಸಿದಾರನ ವಯಸ್ಸು

5 ವರ್ಷಗಳು

ಆಪ್ಶನ್

4 ರೀತಿ

ಪಾಲಿಸಿಯ ಅವದಿ (ಟರ್ಮ್)

20 ವರ್ಷಗಳು

ಪ್ರೀಮಿಯಂ ನೀಡಬೇಕಾದ ಅವದಿ (ಪ್ರೀಮಿಯಂ ಪೇಯಿಂಗ್ ಟರ್ಮ್)


15 ವರ್ಷಗಳು

ಪ್ರೀಮಿಯಂ ಪಾವತಿಸುವ ರೀತಿ

ವರ್ಷಕ್ಕೊಮ್ಮೆ

ಸಮ್ ಅಶ್ಶುರ್ಡ್ ಮೊತ್ತ (ರೂ ಗಳಲ್ಲಿ)

100000

ವಾರ್ಷಿಕ ಪ್ರೀಮಿಯಂ ಮೊತ್ತ (ರೂ ಗಳಲ್ಲಿ)

6375.00

ಬದಲಾಗಬಹುದಾದ ಸಿನ್ಯಾರಿಯೋ 1 – ಒಟ್ಟು ಹಣ ಹೂಡಿಕೆಯ ಮೇಲೆ ಬರಬಹುದಾದ ರಿಟರ್ನ್ @ 4 % ಒಂದು ವರ್ಷಕ್ಕೆ

ಬದಲಾಗಬಹುದಾದ ಸಿನ್ಯಾರಿಯೋ 2 – ಒಟ್ಟು ಹಣ ಹೂಡಿಕೆಯ ಮೇಲೆ ಬರಬಹುದಾದ ರಿಟರ್ನ್ @ 8 % ಒಂದು ವರ್ಷಕ್ಕೆ

ಆ) ಪಾಲಿಸಿದಾರನ ಮರಣ ಅಥವಾ ಪಾಲಿಸಿ ಮೆಚೂರಿಟೀ ಆದಲ್ಲಿ ಸಿಗಬಹುದಾದ ಮೊತ್ತ

ವರ್ಷದ ಕೊನೆಯಲ್ಲಿ

ವರ್ಷದ ಕೊನೆಯಲ್ಲಿ ನೀಡಿರುವ ಪ್ರೀಮಿಯಂ ಮೊತ್ತ(ರೂ ಗಳಲ್ಲಿ)

ಪಾಲಿಸಿಯ ಬಾಬ್ತು ಪಾಲಿಸಿದಾರನ ಮರಣ ಆದ ಪಕ್ಷದಲ್ಲಿ ನೀಡುವ ಬೆನಿಫಿಟ್ ಮೊತ್ತ (ಆ ವರ್ಷದ ಕೊನೆಗೆ)

   

ಗ್ಯಾರಂಟಿಡ್

ಬದಲಾಗಬಹುದಾದ ಮೊತ್ತ

ಒಟ್ಟು ಮೊತ್ತ

     

ಸಿನಾರಿಯೊ 1

4 %

ಸಿನಾರಿಯೊ 2

8%

ಸಿನಾರಿಯೊ 1

4 %

ಸಿನಾರಿಯೊ 2

8%

1

6375

6375

0

0

6375

6375

2

12750

12750

0

0

12750

12750

3

19125

125000

1500

9600

126500

134600

4

25500

125000

2000

12800

127000

137800

5

31875

125000

2500

16000

127500

141000

6

38250

125000

3000

19200

128000

144200

7

44625

125000

3500

22400

128500

147400

8

51000

125000

4000

25600

129000

150600

9

57375

125000

4500

28800

129500

153800

10

63750

125000

5000

32000

130000

157000

11

70125

125000

5500

35200

130500

160200

12

76500

125000

6000

38400

131000

163400

13

82875

125000

6500

41600

131500

166600

14

89250

125000

7000

44800

132000

169800

15

95625

125000

7500

48500

132500

173500

16

95625

125000

8000

51700

133000

176700

17

95625

125000

8500

55400

133500

180400

18

95625

125000

9000

59100

134000

184100

19

95625

125000

9500

62800

134500

187800

20

95625

125000

10000

66500

135000

191500

ಆ) ಪಾಲಿಸಿದಾರನು ಪಾಲಿಸಿಯನ್ನು ಸರಂಡರ್ ಮಾಡಿದಲ್ಲಿ ಸಿಗಬಹುದಾದ ಮೊತ್ತ

ವರ್ಷದ ಕೊನೆಯಲ್ಲಿ

ವರ್ಷದ ಕೊನೆಯಲ್ಲಿ ನೀಡಿರುವ ಪ್ರೀಮಿಯಂ ಮೊತ್ತ(ರೂ ಗಳಲ್ಲಿ)

ಪಾಲಿಸಿಯ ಬಾಬ್ತು ಪಾಲಿಸಿದಾರನು ಪಾಲಿಸಿಯನ್ನು ಸರಂಡರ್ ಮಾಡಿದಲ್ಲಿ ನೀಡುವ ಬೆನಿಫಿಟ್ ಮೊತ್ತ (ಆ ವರ್ಷದ ಕೊನೆಗೆ)

   

ಗ್ಯಾರಂಟಿಡ್ ಸರಂಡರ್ ಮೊತ್ತ


ಬೋನಸ್ ಗಳ ಸರಂಡರ್ ಮೌಲ್ಯ


ಒಟ್ಟು ಸಿಗುವ ಗ್ಯಾರಂಟಿಡ್ ಸರಂಡರ್ ಮೊತ್ತ

     

ಸಿನಾರಿಯೊ 1

4 %

ಸಿನಾರಿಯೊ 2

8%

ಸಿನಾರಿಯೊ 1

4 %

ಸಿನಾರಿಯೊ 2

8%

1

6375

0

0

0

0

0

2

12750

0

0

0

0

0

3

19125

5738

243

1557

5981

7295

4

25500

12750

332

2122

13082

14872

5

31875

15938

426

2725

16363

188662

6

38250

19125

527

3375

19652

22500

7

44625

22313

615

3938

22928

26250

8

51000

26775

706

4521

27481

31296

9

57375

31556

803

5141

32360

36697

10

63750

36656

908

5811

37564

41467

11

70125

42075

1023

6547

43098

48622

12

76500

47813

1151

7365

48963

55178

13

82875

53869

1295

8291

55184

62160

14

89250

60244

1460

9341

61703

69585

15

95625

66938

1649

10555

68587

77493

16

95625

54328

1870

11971

56199

66299

17

95625

41719

2129

13627

43848

55346

18

95625

29109

2435

15587

31545

44896

19

95625

16500

2850

18240

19350

34740

20

95625

1500

3500

22400

5000

23900

 

ಪಾಲಿಸಿಯ ಅನಿವರ್ಸರಿ

ಮಗುವಿನ ವಯಸ್ಸು

ವರ್ಷದ ಕೊನೆಯಲ್ಲಿ ನೀಡಿರುವ ಪ್ರೀಮಿಯಂ ಮೊತ್ತ(ರೂ ಗಳಲ್ಲಿ)

ಪಾಲಿಸಿ ಅನಿವರ್ಸರಿ / ಮೆಚೂರಿಟೀ ಬೆನಿಫಿಟ್ ಬಾಬ್ತು ನೀಡಬೇಕಾಗಿರುವ ಸರ್ವೈವಲ್ ಬೆನಿಫಿಟ್ ಮೊತ್ತ


ಗ್ಯಾರಂಟಿಡ್ ಮೊತ್ತ

ಬದಲಾಗಬಹುದಾದ ಮೊತ್ತ

ಒಟ್ಟು ಮೊತ್ತ

ಸಿನಾರಿಯೊ 1

4 %

ಸಿನಾರಿಯೊ 2

8%

ಸಿನಾರಿಯೊ 1

4 %

ಸಿನಾರಿಯೊ 2

8%

15

20

95625

15000

0

0

15000

15000

16

21

95625

15000

0

0

15000

15000

               

17

22

95625

15000

0

0

15000

15000

18

23

95625

15000

0

0

15000

15000

19

24

95625

15000

0

0

15000

15000

20

25

95625

25000

10000

66500

35000

91500

ಸೂಚನೆ:

 • ಮೇಲೆ ಕಾಣಿಸಿರುವ ಪ್ರೀಮಿಯಂ ಮೊತ್ತದಲ್ಲಿ, ಸರ್ವಿಸ್ ಟಾಕ್ಸ್, ಎಕ್ಸ್ಟ್ರಾ ಪ್ರೀಮಿಯಂ ಇದ್ದಲ್ಲಿ ಹಾಗೂ ರೈಡರ್ಸ್ ಪ್ರೀಮಿಯಂ ಇದ್ದಲ್ಲಿ ಅವು ಸೇರಿರುವುದಿಲ್ಲ.
 • ಪಾಲಿಸಿದಾರನಿಗೆ ಅನುಕೂಲವಾಗುವುದಿದ್ದಲ್ಲಿ, ಸ್ಪೆಷಲ್ ಸರಂಡರ್ ಮೌಲ್ಯವನ್ನು ಎಲ್‌ಐ‌ಸಿ ಯು ನೀಡುವುದು.
 • ಏನೇ ಆದರೂ, ಒಟ್ಟು ಡೆತ್ ಬೆನಿಫಿಟ್ (ಒಟ್ಟು ಇನ್ಕಮ್ ಬೆನಿಫಿಟ್ ಹಾಗೂ ಪಾಲಿಸಿ ಮೆಚೂರಿಟೀ ಆದಾಗೆ ನೀಡುವ ಒಂದು ಖಚಿತ ಮೊತ್ತ) ಮೊತ್ತವು ಎಲ್ಲ ಪ್ರೀಮಿಯಂ ಗಳ ಒಟ್ಟಾರೆ ಮೊತ್ತಕ್ಕೆ (ಸರ್ವಿಸ್ ಟಾಕ್ಸ್, ಎಕ್ಸ್ಟ್ರಾ ಪ್ರೀಮಿಯಂ ಇದ್ದಲ್ಲಿ ಹಾಗೂ ರೈಡರ್ಸ್ ಪ್ರೀಮಿಯಂ ಗಳು ಇದ್ದಲ್ಲಿ ಇವುಗಳನ್ನು ಹೊರತು ಪಡಿಸಿ) 105 % ಗಿಂತ ಕಮ್ಮಿ ಇರುವುದಿಲ್ಲ
 • ಈ ಉದಾಹರಣೆಯಲ್ಲಿ, ಮುಂದೆ  ಎಲ್ ಐ ಸಿ ಯು ಬಂಡವಾಳ ಹೂಡಿಕೆ ಮಾಡಿ ಪಾಲಿಸಿಯ ಪೂರ್ಣ ಆವದಿಯವರೆಗೂ ಬರಬಹುದಾದ ಲಾಭವನ್ನು ಪರ್ಸೆಂಟೆಜ್ ಲೆಕ್ಕದಲ್ಲಿ 4 % ಅಥವಾ 8 % ಎಂದು ಪರಿಗಣಿಸಿ ಲೆಕ್ಕಾಚಾರ ಮಾಡಲಾಗಿದೆ.

ಇ) ಗ್ಯಾರಂಟಿಡ್ ಸರಂಡರ್ ವ್ಯಾಲ್ಯು ಫ್ಯಾಕ್ಟರ್ಸ್ – ಪ್ರೀಮಿಯಂ ಮೊತ್ತಕ್ಕೆ ಅನ್ವಯಿಸುವಂತೆ

ಪಾಲಿಸಿಯ ವರ್ಷ

ಪಾಲಿಸಿಯ ಟರ್ಮ್

 

13

14

15

16

17

18

19

20

21

22

23

24

25

1

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

2

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

3

30.00 %

30.00 %

30.00 %

30.00 %

30.00 %

30.00 %

30.00 %

30.00 %

30.00 %

30.00 %

30.00 %

30.00 %

30.00 %

4

50.00 %

50.00 %

50.00 %

50.00 %

50.00 %

50.00 %

50.00 %

50.00 %

50.00 %

50.00 %

50.00 %

50.00 %

50.00 %

5

50.00 %

50.00 %

50.00 %

50.00 %

50.00 %

50.00 %

50.00 %

50.00 %

50.00 %

50.00 %

50.00 %

50.00 %

50.00 %

6

50.00 %

50.00 %

50.00 %

50.00 %

50.00 %

50.00 %

50.00 %

50.00 %

50.00 %

50.00 %

50.00 %

50.00 %

50.00 %

7

50.00 %

50.00 %

50.00 %

50.00 %

50.00 %

50.00 %

50.00 %

50.00 %

50.00 %

50.00 %

50.00 %

50.00 %

50.00 %

8

56.00 %

55.00 %

54.29 %

53.75 %

53.33 %

53.00 %

.52.73 %

52.50 %

52.31 %

52.14 %

52.00 %

51.88 %

51.76 %

9

62.00 %

60.00 %

58.57 %

57.50 %

56.67 %

56.00 %

55.45 %

55.00 %

54.62 %

54.29 %

54.00 %

53.75 %

53.63 %

10

68.00%

65.00 %

62.86 %

61.25 %

60.00 %

59.00 %

58.18 %

57.50 %

56.92 %

56.43 %

56.00 %

55.63 %

55.29 %

11

74.00 %

70.00 %

67.14 %

65.00 %

63.33 %

62.00 %

60.91 %

60.00 %

59.23 %

58.57 %

58.00 %

57.50 %

57.06 %

12

80.00 %

75.00 %

71.43 %

68.75 %

66.67 %

65.00 %

63.64 %

62.50 %

61.54 %

60.71 %

60.00 %

59.38 %

58.82 %

13

80.00 %

80.00 %

75.71 %

72.50 %

70.00 %

68.00 %

66.36 %

65.00 %

63.85 %

62.86 %

62.00 %

61.25 %

60.59 %

14

 

80.00 %

80.00 %

76.25 %

73.33 %

71.00 %

69.09 %

67.50 %

66.15 %

65.00 %

64.00 %

63.13 %

62.35 %

15

   

80.00 %

80.00 %

76.67 %

74.00 %

71.82 %

70.00 %

68.46 %

67.14 %

66.00 %

65.00 %

64.12 %

16

     

80.00 %

80.00 %

77.00 %

74.56 %

72.50 %

70.77 %

69.29 %

68.00 %

66.88 %

65.88 %

17

       

80.00 %

80.00 %

77.27 %

75.00 %

73.08 %

71.43 %

70.00 %

68.75 %

67.65 %

18

         

80.00 %

80.00 %

77.50 %

76.38 %

73.57 %

72.00 %

70.63 %

69.41 %

19

           

80.00 %

80.00 %

77.69 %

75.71 %

74.00 %

72.50 %

71.18 %

20

             

80.00 %

80.00 %

77.86 %

76.00 %

74.38 %

72.94 %

21

               

80.00 %

80.00 %

78.00 %

76.25 %

74.71 %

22

                 

80.00 %

80.00 %

78.13 %

76.47 %

23

                   

80.00 %

80.00 %

78.24 %

24

                     

80.00 %

80.00 %

25

                       

80.00 %

ಎಲ್ ಐ ಸಿ ಜೀವನ್ ತರುಣ್ ಪ್ಲಾನ್ – ಅರ್ಹತೆಗಳು ಹಾಗೂ ನಿಬಂದನೆಗಳು

ಎಲ್ ಐ ಸಿ  ಜೀವನ್ ತರುಣ್ ಪ್ಲಾನ್ ಗೆ ಅನ್ವಯವಾಗುವ ಅರ್ಹತೆಗಳು ಹಾಗೂ ಅದರಲ್ಲಿ ಇರುವ ನಿಬಂದನೆಗಳನ್ನು ಈ ಕೆಳಗಿನ ಪ್ಯಾರಾಗಳಲ್ಲಿ ವಿವರಿಸಲಾಗಿದೆ.

ಕನಿಷ್ಠ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ

ರೂ 75000

ಗರಿಷ್ಠ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ

 • ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತವು ರೂ 75000 ದಿಂದ ರೂ 100000 ಇದ್ದಲ್ಲಿ ಆಗ ರೂ 5000 ದ ಮಲ್ಟಿಪಲ್ಸ್ ನಲ್ಲಿ ಇರಬೇಕು
 • ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತವು ರೂ 100000 ಕ್ಕಿಂತ ಮೆಲ್ಪಟ್ಟಲ್ಲಿ ಆಗ ರೂ 10000 ದ ಮಲ್ಟಿಪಲ್ಸ್ ನಲ್ಲಿ ಇರಬೇಕು

ಯಾವುದೇ ಮಿತಿ ಇಲ್ಲ

ಪಾಲಿಸಿ ಪಡೆಯುವಾಗ ಮಗುವಿನ ಕನಿಷ್ಠ ವಯಸ್ಸು (ಪಾಲಿಸಿದಾರನು ತಂದೆ ಅಥವಾ  ತಾಯಿ ಅಥವಾ ತಾತ ಅಥವಾ ಅಜ್ಜಿ ಆಗಿರಬಹುದು)

90 ದಿವಸಗಳು

ಪಾಲಿಸಿ ಪಡೆಯುವಾಗ ಮಗುವಿನ ಗರಿಷ್ಠ ವಯಸ್ಸು (ಪಾಲಿಸಿದಾರನು ತಂದೆ ಅಥವಾ  ತಾಯಿ ಅಥವಾ ತಾತ ಅಥವಾ ಅಜ್ಜಿ ಆಗಿರಬಹುದು)

12 ವರ್ಷಗಳು (ಹಿಂದಿನ ಹುಟ್ಟು ಹಬ್ಬಕ್ಕೆ)

ಪಾಲಿಸಿಯ ಅವದಿ (ಟರ್ಮ್)

ಪಾಲಿಸಿ ಪಡೆಯುವಾಗಿನ ವಯಸ್ಸನ್ನು 25 ವರ್ಷದಿಂದ ಕಳೆದಲ್ಲಿ ಬರುವ ಆವದಿ

ಪ್ರೀಮಿಯಂ ಪಾವತಿಸುವ ಅವದಿ (ಟರ್ಮ್) (PPT)

ಪಾಲಿಸಿ ಪಡೆಯುವಾಗಿನ ವಯಸ್ಸನ್ನು 20 ವರ್ಷದಿಂದ ಕಳೆದಲ್ಲಿ ಬರುವ ಆವದಿ

ಪಾಲಿಸಿ ಮೆಚೂರಿಟೀ ಸಮಯದಲ್ಲಿ ಪಾಲಿಸಿದಾರನ ಮಗುವಿನ  ಗರಿಷ್ಠ ವಯಸ್ಸು

25 ವರ್ಷಗಳು (ಹಿಂದಿನ ಹುಟ್ಟು ಹಬ್ಬಕ್ಕೆ)  

ರಿಸ್ಕ್ ಕವರೆಜ್ ಶುರು ಆಗುವ ದಿವಸ

ಈ ಪಾಲಿಸಿಯ ನಿಯಮದ ಪ್ರಕಾರ, ಪಾಲಿಸಿದಾರನಿಗೆ 8 ವರ್ಷ ಆಗಿಲ್ಲದಿದ್ದಲ್ಲಿ, ಆತನ ಪಾಲಿಸಿಯ ವಿಮಾ ರಿಸ್ಕ್ ಕವರೆಜ್ ಅವನ  8 ವರ್ಷ ತುಂಬುವ ದಿನಕ್ಕೆ ಹತ್ತಿರದ ಪಾಲಿಸಿ ಆನಿವರ್ಸರಿ ಯ ಹಿಂದಿನ ದಿನದಿಂದ ಅಥವಾ 8 ವರ್ಷಗಳು ತುಂಬಿದ ದಿನದಿಂದ ಆರಂಭವಾಗುತ್ತದೆ.

ಪಾಲಿಸಿದಾರನಿಗೆ  8 ವರ್ಷಗಳು ತುಂಬಿದ್ದಲ್ಲಿ, ವಿಮಾ ರಿಸ್ಕ್ ಕವರೆಜ್ ಪಾಲಿಸಿಯು ಪ್ರಾರಂಭವಾದ ದಿನದಿಂದಲೇ ಶುರು ಆಗುತ್ತದೆ.

ಪಾಲಿಸಿಯು ಪಾಲಿಸಿದಾರನಿಂದ ಅವನ ಮಗುವಿಗೆ ಬದಲಾಗುವ ದಿವಸ  

ಪಾಲಿಸಿದಾರನ ಮಗ / ಮಗಳಿಗೆ 18 ವರ್ಷಗಳು ತುಂಬಿದ ದಿವಸದಿಂದ ಅಥವಾ ಆ ವರ್ಷದಲ್ಲಿ ಪಾಲಿಸಿಯ ಅನಿವರ್ಸರಿ ದಿವಸ (ಹುಟ್ಟು ಹಬ್ಬದ ದಿವಸವೆ ಆದಲ್ಲಿ) ದಿಂದ ಪಾಲಿಸಿಯು ಮಗ / ಮಗಳ ಹೆಸರಿಗೆ ಬದಲಾಗುತ್ತದೆ. ಆ ದಿವಸದಿಂದ, ವಿಮಾ ಯೋಜನೆಯ ಒಪ್ಪಂದವು ಕಾರ್ಪೊರೇಷನ್ ಮತ್ತು ಬದಲಾದ ವ್ಯಕ್ತಿಯ  ಜೊತೆ ಇರುತ್ತದೆ.

ಪಾಲಿಸಿಯ ಪ್ರೀಮಿಯಂ ನೀಡುವ ರೀತಿ

ಪಾಲಿಸಿಯ ಬಾಬ್ತು ನೀಡಬೇಕಾಗಿರುವ ಪ್ರೀಮಿಯಂ ಗಳನ್ನು ಈ ಕೆಳ ಕಂಡ ರೀತಿಯಲ್ಲಿ ಪಾವತಿಸಬಹುದು. ಪ್ರೀಮಿಯಂ ಗಳನ್ನು ಪಾಲಿಸಿಯ ಅವದಿ ಇರುವವರೆಗೂ ನೀಡಬೇಕು.

 • ವರ್ಷಕ್ಕೊಮ್ಮೆ
 • ಅರ್ದ ವರ್ಷಕ್ಕೊಮ್ಮೆ
 • 3 ತಿಂಗಳಿಗೊಮ್ಮೆ
 • ತಿಂಗಳಿಗೊಮ್ಮೆ (ECS ಮುಖಾಂತರ ಮಾತ್ರ ಅಥವಾ ಸಂಬಳದಿಂದ ಕಡಿತವಾಗುವ ರೀತಿ)

ಗ್ರೇಸ್ ಪೀರಿಯಡ್

ಪ್ರೀಮಿಯಂ ಅನ್ನು ನೀಡಲು ಈ ಕೆಳ ಕಂಡ ಗ್ರೇಸ್ ಪೀರಿಯಡ್ ದೊಎಯುತ್ತದೆ.  

ಪ್ರೀಮಿಯಂ  ನೀಡುವ ರೀತಿ

ಗ್ರೇಸ್ ಪೀರಿಯಡ್

ವರ್ಷಕ್ಕೊಮ್ಮೆ

1 ತಿಂಗಳು ಅಥವಾ ಕನಿಷ್ಠ 30 ದಿವಸಗಳು

ಅರ್ದ ವರ್ಷಕ್ಕೊಮ್ಮೆ

1 ತಿಂಗಳು ಅಥವಾ ಕನಿಷ್ಠ 30 ದಿವಸಗಳು

3 ತಿಂಗಳಿಗೊಮ್ಮೆ

1 ತಿಂಗಳು ಅಥವಾ ಕನಿಷ್ಠ 30 ದಿವಸಗಳು

ತಿಂಗಳಿಗೊಮ್ಮೆ

15 ದಿವಸಗಳು

ಪಾಲಿಸಿ ಪ್ರೀಮಿಯಂ ಮೊತ್ತದ ಉದಾಹರಣೆ

ಕೆಳಗೆ ನೀಡಿರುವ ಟೇಬಲ್ ನಲ್ಲಿ ಕೆಲವು ಪ್ರೀಮಿಯಂ ರೇಟ್ ಗಳನ್ನು (ರೂ ಗಳಲ್ಲಿ) (ಸರ್ವಿಸ್ ಟಾಕ್ಸ್ ಮೊತ್ತವನ್ನು ಹೊರತು ಪಡಿಸಿ) ನೀಡಲಾಗಿದೆ.

ಟೇಬಲ್ ನಲ್ಲಿ ನಮೂದಿಸಿರುವ ರೇಟ್ ಪ್ರತಿ ರೂ 1000 ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತಕ್ಕೆ ಅನ್ವಯವಾಗುತ್ತದೆ.


ವಯಸ್ಸು (ವರ್ಷಗಳಲ್ಲಿ) /

ಟ್ಯಾಬುಲಾರ್ ಸಿಂಗಲ್ ಪ್ರೀಮಿಯಂ ರೇಟ್ಸ್ -  ಪಾಲಿಸಿದಾರನು ಆಯ್ಕೆ ಮಾಡಿಕೊಂಡಿರುವ ಆಪ್ಶನ್

1

2

3

4

0

44.80

45.80

46.80

47.80

4

55.95

57.50

59.00

60.55

8

75.65

78.00

80.40

82.75

12

112.70

116.65

120.60

124.60

ಸೂಚನೆ: ಮೇಲೆ ನಮೂದಿಸಿರುವ ಟ್ಯಾಬುಲಾರ್ ಸಿಂಗಲ್ ಪ್ರೀಮಿಯಂ ರೇಟ್ಸ್ ನಲ್ಲಿ ಎಕ್ಸ್ಟ್ರಾ ಪ್ರೀಮಿಯಂ ರೇಟ್ಸ್ ಆಗಲಿ ಅಥವಾ ಇತರೆ ತೆರಿಗೆಗಳಾಗಲಿ ಸೇರಿರುವುದಿಲ್ಲ ಮತ್ತು ಇದು ಹೆಚ್ಚಿನ ಮೆಚೂರಿಟೀ ಸಮ್ ಮೊತ್ತಕ್ಕೆ ನೀಡುವ ರಿಯಾಯತಿ ನೀಡುವ ಮುಂಚಿನ ಮೊತ್ತ.  

ಎಲ್ ಐ ಸಿ ಜೀವನ್ ತರುಣ್ ಪ್ಲಾನ್ – ಇತರೆ ಬೆನಿಫಿಟ್ ಗಳು

ಎಲ್ ಐ ಸಿ ಜೀವನ್ ತರುಣ್ ಪ್ಲಾನ್ ಸಹಾ ಪಾಲಿಸಿದಾರನಿಗೆ ಇನ್ನಿತರ ಬೆನಿಫಿಟ್ ಗಳನ್ನು ನೀಡುತ್ತದೆ. ಅದರ ವಿವರಗಳನ್ನು ಕೆಳಗೆ ನೀಡಲಾಗಿದೆ.

ಪ್ರೀಮಿಯಂ ಹಾಗೂ ಹೆಚ್ಚಿನ ಸಮ್ ಅಶ್ಶುರ್ಡ್ ಮೇಲೆ ನೀಡುವ ರಿಯಾಯತಿ

ಎಲ್ ಐ ಸಿ ಜೀವನ್ ತರುಣ್ ಪಾಲಿಸಿಯನ್ನು ಪಡೆಯುವಾಗ ಪಾಲಿಸಿದಾರನಿಗೆ ಕೆಲವು ರಿಯಾಯತಿ ದೊರಕುತ್ತದೆ. ಅವುಗಳು ಅವನು ನೀಡುವ ಪ್ರೀಮಿಯಂ ಹಾಗೂ ಹೆಚ್ಚಿನ ಸಮ್ ಅಶ್ಶುರ್ಡ್ ಮೊತ್ತಗಳಿಗೆ ಅನ್ವಯವಾಗುತ್ತದೆ. ವಿವರಗಳು ಈ ಕೆಳ ಕಂಡಂತಿದೆ.

ಪ್ರೀಮಿಯಂ ಮೇಲೆ ಸಿಗುವ ರಿಯಾಯತಿ

ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ – ಸ್ಯಾಂಪಲ್ ಪ್ರೀಮಿಯಂ ಮೊತ್ತದ ಮೇಲೆ 2 % ರಿಯಾಯತಿ ದೊರೆಯುತ್ತದೆ

ಅರ್ದ ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ – ಸ್ಯಾಂಪಲ್ ಪ್ರೀಮಿಯಂ ಮೊತ್ತದ ಮೇಲೆ 1 % ರಿಯಾಯತಿ ದೊರೆಯುತ್ತದೆ

3 ತಿಂಗಳಿಗೊಮ್ಮೆ ಹಾಗೂ ತಿಂಗಳಿಗೊಮ್ಮೆ ನೀಡುವ ಪ್ರೀಮಿಯಂ –ಯಾವುದೇ ರಿಯಾಯತಿ ದೊರೆಯುವುದಿಲ್ಲ

ಹೆಚ್ಚು ಸಮ್ ಅಶ್ಶುರ್ಡ್(B.S.A)  ಮೇಲೆ ಸಿಗುವ ರಿಯಾಯತಿ

ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ (ರೂ ಗಳಲ್ಲಿ)  B. S. A

ದೊರೆಯುವ ರಿಯಾಯತಿ

75000 ದಿಂದ 190000 ರವರೆಗೆ

ಯಾವುದೇ ರಿಯಾಯತಿ ಇಲ್ಲ

200000 ದಿಂದ 490000 ರವರೆಗೆ

B.S.A ಮೇಲೆ 2.00% ರಿಯಾಯತಿ ದೊರೆಯುತ್ತದೆ

500000 ಕ್ಕೆ ಮೇಲ್ಪಟ್ಟು

B.S.A ಮೇಲೆ 3.00 % ರಿಯಾಯತಿ ದೊರೆಯುತ್ತದೆ

ಪೈಡ್ - ಅಪ್ ಮೌಲ್ಯ

ಈ ಪಾಲಿಸಿಯ ಆವದಿಯು 10 ವರ್ಷಕ್ಕಿಂತ ಕಡಿಮೆ ಇದ್ದಲ್ಲಿ, ಅಂತಹ ಪಾಲಿಸಿಯ ಬಾಬ್ತು ಪಾವತಿಸಬೇಕಾಗಿರುವ ಪ್ರೀಮಿಯಂ ಗಳನ್ನು ಪಾಲಿಸಿದಾರನು 2 ವರ್ಷಗಳು ನೀಡಿದ್ದಲ್ಲಿ, ಹಾಗೂ ಮುಂದೆ ಕಾರಣಾಂತರಗಳಿಂದ ನೀಡಲು ಆಗದೆ ಇದ್ದ ಪಕ್ಷದಲ್ಲಿ, ಅಂತಹ ಪಾಲಿಸಿಯು ತನ್ನ ಅಸ್ತಿತ್ವವನ್ನು ಕಳೆದು ಕೊಳ್ಳುವುದಿಲ್ಲ. ಬದಲಿಗೆ, ಆ ಪಾಲಿಸಿಯು ಪೈಡ್-ಅಪ್ ಪಾಲಿಸಿಯ ರೂಪವನ್ನು ಪಡೆದು ಮುಂದುವರೆಯುತ್ತದೆ.

ಹಾಗೆಯೇ,  ಈ ಪಾಲಿಸಿಯ ಆವದಿಯು 10 ವರ್ಷಕ್ಕಿಂತ ಜಾಸ್ತಿ  ಇದ್ದಲ್ಲಿ, ಅಂತಹ ಪಾಲಿಸಿಯ ಬಾಬ್ತು ಪಾವತಿಸಬೇಕಾಗಿರುವ ಪ್ರೀಮಿಯಂ ಗಳನ್ನು ಪಾಲಿಸಿದಾರನು3 ವರ್ಷಗಳು ನೀಡಿದ್ದಲ್ಲಿ, ಹಾಗೂ ಮುಂದೆ ಕಾರಣಾಂತರಗಳಿಂದ ನೀಡಲು ಆಗದೆ ಇದ್ದ ಪಕ್ಷದಲ್ಲಿ, ಅಂತಹ ಪಾಲಿಸಿಯು ತನ್ನ ಅಸ್ತಿತ್ವವನ್ನು ಕಳೆದು ಕೊಳ್ಳುವುದಿಲ್ಲ. ಬದಲಿಗೆ, ಆ ಪಾಲಿಸಿಯು ಪೈಡ್-ಅಪ್ ಪಾಲಿಸಿಯ ರೂಪವನ್ನು ಪಡೆದು ಮುಂದುವರೆಯುತ್ತದೆ.

 • ಈ ಪಾಲಿಸಿಯ ನಿಯಮದ ಪ್ರಕಾರ, ಇಂತಹ ಪೈಡ್-ಅಪ್ ಪಾಲಿಸಿಗೆ ಸಮ್ ಅಶ್ಶುರ್ಡ್ ಆನ್ ಡೆತ್ ಮೊತ್ತವನ್ನು ಕಡಿತಗೊಳಿಸಿ ಡೆತ್ ಪೈಡ್-ಅಪ್ ಸಮ್ ಅಶ್ಶುರ್ಡ್ ಮೊತ್ತವೆಂದು  ಪರಿಗಣಿಸಲಾಗುತ್ತದೆ. ಇದು ಪಾಲಿಸಿದಾರನು ನೀಡಬೇಕಾದ ಹಾಗೂ ನೀಡಿರುವ ಪ್ರೀಮಿಯಂ ಗಳ ಮೇಲೆ ಅವಲಂಬಿತವಾಗಿರುತ್ತದೆ.

ಡೆತ್ ಪೈಡ್-ಅಪ್ ಸಮ್ ಅಶ್ಶುರ್ಡ್ ಮೊತ್ತ = ಸಮ್ ಅಶ್ಶುರ್ಡ್ ಆನ್ ಡೆತ್ x (ಒಟ್ಟು ನೀಡಿರುವಪ್ರೀಮಿಯಂಗಳು / ಒಟ್ಟು ನೀಡಬೇಕಾಗಿರುವ ಪ್ರೀಮಿಯಂಗಳು)

 • ಈ ಪಾಲಿಸಿಯ ನಿಯಮದ ಪ್ರಕಾರ, ಇಂತಹ ಪೈಡ್-ಅಪ್ ಪಾಲಿಸಿಗೆ ಮೆಚೂರಿಟೀ ಪೈಡ್-ಅಪ್ ಸಮ್ ಅಶ್ಶುರ್ಡ್ ಮೊತ್ತವನ್ನು ಪಾಲಿಸಿಯ ಅವದಿ ಮುಗಿದ ನಂತರ ನೀಡಲಾಗುವುದು. ಇದು ಪಾಲಿಸಿದಾರನು ನೀಡಬೇಕಾದ ಹಾಗೂ ನೀಡಿರುವ ಪ್ರೀಮಿಯಂ ಗಳ ಮೇಲೆ ಅವಲಂಬಿತವಾಗಿರುತ್ತದೆ.

ಮೆಚೂರಿಟೀ  ಪೈಡ್-ಅಪ್ ಸಮ್ ಅಶ್ಶುರ್ಡ್ ಮೊತ್ತ = [(ಸಮ್ ಅಶ್ಶುರ್ಡ್ ಆನ್ ಮೆಚೂರಿಟೀ + ನೀಡಬೇಕಾಗಿರುವ ಒಟ್ಟು ಸರ್ವೈವಲ್ ಮೊತ್ತ x (ಒಟ್ಟು ನೀಡಿರುವಪ್ರೀಮಿಯಂಗಳು / ಒಟ್ಟು ನೀಡಬೇಕಾಗಿರುವ ಪ್ರೀಮಿಯಂಗಳು)] – ಅದುವರೆವಿಗೂ ನೀಡಿರುವ ಸರ್ವೈವಲ್ ಬೆನಿಫಿಟ್ ಮೊತ್ತ.

ಈ ಬೆನಿಫಿಟ್ ಅನ್ನು ಪಾಲಿಸಿಯ ಆವದಿ ಮುಗಿದ ನಂತರ ಅಥವಾ ಪಾಲಿಸಿದಾರನ ಮರಣ ಆದಲ್ಲಿ ನೀಡಲಾಗುವುದು. ಆ ಮೊತ್ತದಲ್ಲಿ  ಪೈಡ್-ಅಪ್ ಸಮ್ ಅಶ್ಶುರ್ಡ್ ಮೊತ್ತ ಮತ್ತು ವೆಸ್ಟೆಡ್ ಸಿಂಪಲ್ ರಿವರ್ಷನರಿ ಬೋನಸ್ (ಇದ್ದಲ್ಲಿ) ಮೊತ್ತ  ಎರಡೂ ಸೇರಿರುತ್ತದೆ. ಪೈಡ್-ಅಪ್ ಪಾಲಿಸಿಯು ಮುಂದಿನ ಬೋನಸ್ ಗಳಿಗೆ ಅರ್ಹತೆ ಪಡೆಯುವುದಿಲ್ಲ. ಪಾಲಿಸಿಯ ಆವದಿ ಮುಗಿದ ನಂತರ ಅಥವಾ ಪಾಲಿಸಿದಾರನ ಮರಣ ಆದಲ್ಲಿ, ಪೈಡ್-ಅಪ್ ಸಮ್ ಅಶ್ಶುರ್ಡ್ ಮೊತ್ತವನ್ನು ನೀಡಲಾಗುವುದು. ರೈಡರ್ಸ್ ಗಳು ಯಾವುದೇ ಪೈಡ್-ಅಪ್ ಮೌಲ್ಯವನ್ನು ಗಳಿಸುವುದಿಲ್ಲ ಹಾಗೂ ರೈಡರ್ಸ್ ಗೆ  ಬೆನಿಫಿಟ್ ಗಳು ಕೂಡ ರದ್ದಾಗುತ್ತವೆ.

ಪಾಲಿಸಿಯ ರಿವೈವಲ್

ಪಾಲಿಸಿಯ ಮೇಲಿನ ಕಂತನ್ನು (ಪ್ರೀಮಿಯಂ ಅನ್ನು) ಗ್ರೇಸ್ ಪೀರಿಯಡ್ ಅವದಿಯಲ್ಲಿಯೂ ಕೂಡ ಕಟ್ಟದಿದ್ದಲ್ಲಿ, ಪಾಲಿಸಿಯು  ಲ್ಯಾಪ್ಸ್ ಆಗುತ್ತದೆ ಅಂದರೆ ಅದು ಸ್ತಗಿತಗೊಳ್ಳುತ್ತದೆ ಅಥವಾ ಮಾನ್ಯತೆ ಕಳೆದುಕೊಳ್ಳುತ್ತದೆ. ಈ ಪಾಲಿಸಿಯ ಅಡಿಯಲ್ಲಿ, ಆ ರೀತಿ ಲ್ಯಾಪ್ಸ್ ಆಗಿರುವ ಪಾಲಿಸಿಯನ್ನು ರಿವೈವಲ್ ಮಾಡುವ ಅವಕಾಶ ಇರುತ್ತದೆ. ಆದರೆ ಪಾಲಿಸಿದಾರನು ನೀಡದಿರುವ ಪ್ರೀಮಿಯಂ ದಿವಸದಿಂದ ಎರಡು ವರ್ಷಗಳ ಒಳಗೆ ಹಾಗೂ ಪಾಲಿಸಿಯು ಚಾಲ್ತಿಯಲ್ಲಿ ಇದ್ದಲ್ಲಿ, ರಿವೈವಲ್ ಮಾಡಿಕೊಳ್ಳಬಹುದು. ಅದುವರೆವಿಗೂ ಕಟ್ಟದೆ ಇರುವ ಪ್ರೀಮಿಯಂಗಳನ್ನು ಅದಕ್ಕೆ ಅನ್ವಯವಾಗುವ ಲೇಟ್ ಫೀ ಹಾಗೂ ಕಾರ್ಪೊರೇಷನ್ ನವರು ವಿಧಿಸುವ ಯಾವುದೇ ಬಡ್ಡಿ ಇದ್ದಲ್ಲಿ ಅದನ್ನೂ ಸಹಾ ಸೇರಿಸಿ ಒಟ್ಟು ಮೊತ್ತವನ್ನು ಕಾರ್ಪೊರೇಷನ್ ಗೆ ನೀಡಬೇಕಾಗುತ್ತದೆ. ಹಾಗೂ ಪಾಲಿಸಿ ಲ್ಯಾಪ್ಸ್ ಏಕೆ ಆಯಿತು ಎನ್ನುವುದರ ಬಗ್ಗೆ ಸೂಕ್ತ ಕಾರಣಗಳನ್ನು ನೀಡಬೇಕಾಗುತ್ತದೆ. ಮತ್ತು ಪಾಲಿಸಿಯ ಮುಂದುವರಿಕೆಯ ಬಗ್ಗೆ ಪುರಾವೆಯನ್ನು ಸಹಾ ನೀಡಬೇಕು.

ಸದರಿ ಪಾಲಿಸಿಯನ್ನು ರಿವೈವ್ ಮಾಡುವುದು ಅಥವಾ ಬಿಟ್ಟಿದ್ದು ಕಾರ್ಪೊರೇಷನ್ ಗೆ ಸೇರಿದ್ದು. ಹಾಗೂ ಪಾಲಿಸಿಯನ್ನು ಮೊದಲು ಪಾಲಿಸಿಗೆ ಅನ್ವಯವಾಗುತ್ತಿದ್ದ ನಿಯಮಗಳು ಮತ್ತು ನಿಬಂದನೆಗಳಿಗೆ ಅನುಸಾರವಾಗಿಯೇ ರಿವೈವ್ ಮಾಡುವುದೋ ಅಥವಾ ಹೊಸ ನಿಯಮಗಳು ಹಾಗೂ ನಿಬಂದನೆಗಳನ್ನು ವಿಧಿಸಿ ರಿವೈವ್ ಮಾಡುವುದೋ ಎನ್ನುವ ನಿರ್ದಾರವನ್ನು ಕಾರ್ಪೊರೇಷನ್ ತೆಗೆದುಕೊಳ್ಳುತ್ತದೆ. ಪಾಲಿಸಿಯು ಕಾರ್ಪೊರೇಷನ್ ನವರು ಒಪ್ಪಿಕೊಂಡು ಅದರ ಬಗ್ಗೆ ಪಾಲಿಸಿದಾರನಿಗೆ ಲಿಖಿತ ಮುಖೇನ ತಿಳಿಸಿದ ದಿವಸದಿಂದ ರಿವೈವಲ್ ಆಗಿದೆ ಎಂದು ಪರಿಗಣಿಸಬೇಕಾಗುತ್ತದೆ. ರೈಡರ್ ಗಳ ರಿವೈವಲ್ ಕೂಡ ಈ ರಿವೈವಲ್ ಜೊತೆಗೆ ಆಗುತ್ತದೆಯೇ ಹೊರತು, ಅದು ಸೆಪರೇಟ್ ಆಗಿ ಆಗುವುದಿಲ್ಲ.

ಸರಂಡರ್ ಮೌಲ್ಯ

ಎಲ್ ಐ ಸಿ ಜೀವನ್ ತರುಣ್ ಪಾಲಿಸಿಯು ಸರಂಡರ್ ಮೌಲ್ಯವು  ಅದರ ಪಾಲಿಸಿಯ ಅವದಿಯ ಮೇಲೆ ಅವಲಂಬಿತವಾಗಿದೆ. ಪಾಲಿಸಿಯ ಆವದಿಯು 10 ವರ್ಷಕ್ಕಿಂತ ಕಮ್ಮಿ ಇದ್ದಲ್ಲಿ, ಅಂತಹ ಪಾಲಿಸಿಗೆ ಸರಂಡರ್ ಮೌಲ್ಯವು ಪಾಲಿಸಿದಾರನು ಪ್ರೀಮಿಯಂ ಗಳನ್ನು 2 ವರ್ಷಗಳು  ಸತತವಾಗಿ ಕಟ್ಟಿದ್ದಲ್ಲಿ ಅನ್ವಯವಾಗುತ್ತದೆ. ಹಾಗೆಯೇ, ಪಾಲಿಸಿಯ ಅವದಿಯು 10 ವರ್ಷಕ್ಕಿಂತ ಹೆಚ್ಚಿಗೆ ಇದ್ದಲ್ಲಿ, ಅಂತಹ ಪಾಲಿಸಿಗೆ ಸರಂಡರ್ ಮೌಲ್ಯವು ಪಾಲಿಸಿದಾರನು ಪ್ರೀಮಿಯಂ ಗಳನ್ನು 3 ವರ್ಷಗಳು  ಸತತವಾಗಿ ಕಟ್ಟಿದ್ದಲ್ಲಿ ಅನ್ವಯವಾಗುತ್ತದೆ. ಅದರ ಪ್ರಕಾರ, ಪಾಲಿಸಿಯನ್ನು ಅವನು ಸರಂಡರ್ ಮಾಡಲು ಅರ್ಹತೆ ಇರುತ್ತದೆ. ಪಾಲಿಸಿಯನ್ನು ಸರಂಡರ್ ಮಾಡಿದಾಗ ನೀಡುವ ಗ್ಯಾರಂಟಿಡ್ ಸರಂಡರ್ ಮೌಲ್ಯವು ಪಾಲಿಸಿದಾರನು ಅದುವರೆವಿಗೂ ನೀಡಿರುವ ಪ್ರೀಮಿಯಂ ಮೊತ್ತದ ಪರ್ಸೆಂಟೆಜ್ ಆಗಿರುತ್ತದೆ. ಈ ಪರ್ಸೆಂಟೆಜ್ ಪಾಲಿಸಿಯ ಟರ್ಮ್ ಹಾಗೂ ಪಾಲಿಸಿಯನ್ನು ಎಷ್ಟು ವರ್ಷದ ಮೇಲೆ ಸರಂಡರ್ ಮಾಡಿದ್ದು ಎನ್ನುವುದರ ಮೇಲೆ  ನಿಗದಿಗೊಳಿಸಲಾಗುತ್ತದೆ.

ಗ್ಯಾರಂಟಿಡ್ ಸರಂಡರ್ ಮೊತ್ತ = [ಪಾಲಿಸಿದಾರನು ಅದುವರೆವಿಗೂ ನೀಡಿರುವ ಪ್ರೀಮಿಯಂ ಗಳ ಒಟ್ಟು ಮೊತ್ತ (ತೆರಿಗೆಗಳು, ಎಕ್ಷ್ತ್ರಾ ಪ್ರೀಮಿಯಂ ಇದ್ದಲ್ಲಿ ಹಾಗೂ ರೈಡರ್ ಪ್ರೀಮಿಯಂ ಇದ್ದಲ್ಲಿ, ಇವೆಲ್ಲವನ್ನೂ ಹೊರತು ಪಡಿಸಿ) x ಗ್ಯಾರಂಟಿಡ್ ಸರಂಡರ್ ವ್ಯಾಲ್ಯು ಫ್ಯಾಕ್ಟರ್ (ಮೇಲಿನ ಬೆನಿಫಿಟ್ ಗಳ ಉದಾಹರಣೆ (ಇ) ನಲ್ಲಿ ನಮೂದಿಸಿರುವ ಟೇಬಲ್ ಅನ್ನು ಗಮನಿಸಿ )] – ಪಾಲಿಸಿಯ ನಿಯಮದ ಪ್ರಕಾರ ಅದುವರೆವಿಗೂ ನೀಡಿರುವ ಸರಂಡರ್ ಬೆನಿಫಿಟ್ ಮೊತ್ತಗಳು.

ಸರಂಡರ್ ಮೌಲ್ಯದ ಒಟ್ಟಿಗೆ ವೆಸ್ಟೆಡ್ ಸಿಂಪಲ್ ರಿವರ್ಶನರಿ ಬೋನಸ್ ಮೌಲ್ಯವನ್ನು ಸೇರಿಸಿ ನೀಡಲಾಗುತ್ತದೆ. ವೆಸ್ಟೆಡ್ ಸಿಂಪಲ್ ರಿವರ್ಶನರಿ ಬೋನಸ್ ಅಂದರೆ, ವೆಸ್ಟೆಡ್ ಬೋನಸ್ ಅನ್ನು ಗ್ಯಾರಂಟಿಡ್ ಸರಂಡರ್ ವ್ಯಾಲ್ಯು ಫ್ಯಾಕ್ಟರ್ ನಿಂದ ಗುಣಿಸಿದಾಗ ಬರುವ ಮೊತ್ತ. ಈ ಗ್ಯಾರಂಟಿಡ್ ಸರಂಡರ್ ವ್ಯಾಲ್ಯು ಫ್ಯಾಕ್ಟರ್ ಪರ್ಸೆಂಟೆಜ್ ರೂಪದಲ್ಲಿದ್ದು, ಅದು ಪಾಲಿಸಿಯ ಟರ್ಮ್ ಹಾಗೂ ಪಾಲಿಸಿಯನ್ನು ಎಷ್ಟು ವರ್ಷದ ಮೇಲೆ ಸರಂಡರ್ ಮಾಡಿದ್ದು ಎನ್ನುವುದರ ಮೇಲೆ  ನಿಗದಿಗೊಳಿಸಲಾಗುತ್ತದೆ. ಕೆಳೆಗೆ ಕಾಣಿಸಿರುವ ಟೇಬಲ್ ನಲ್ಲಿ ವೆಸ್ಟೆಡ್ ಬೋನಸ್ ಗೆ ಅನ್ವಯವಾಗುವ ಗ್ಯಾರಂಟಿಡ್ ಸರಂಡರ್ ಫ್ಯಾಕ್ಟರ್ ವಿವರಗಳನ್ನು ನೀಡಲಾಗಿದೆ.

ವೆಸ್ಟೆಡ್ ಬೋನಸ್ ಗೆ ಅನ್ವಯವಾಗುವ ಗ್ಯಾರಂಟಿಡ್ ಸರಂಡರ್ ವ್ಯಾಲ್ಯು ಫ್ಯಾಕ್ಟರ್ ಗಳ ವಿವರ

ಪಾಲಿಸಿಯ ವರ್ಷ

ಪಾಲಿಸಿಯ ಟರ್ಮ್

 

13

14

15

16

17

18

19

20

21

22

23

24

25

1

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

2

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

3

18.16 %

17.85 %

17.66 %

17.58 %

17.58 %

17.03 %

16.58 %

16.22 %

15.93 %

15.72 %

15.55 %

15.42 %

15.28 %

4

18.60 %

18.16 %

17.85 %

17.66 %

17.58 %

17.58 %

17.03 %

16.58 %

16.22 %

15.93 %

15.72 %

15.55 %

15.42 %

5

19.18 %

18.60 %

18.16 %

17.85 %

17.66 %

17.58 %

17.58 %

17.03 %

16.58 %

16.22 %

15.93 %

15.72 %

15.55 %

6

19.93 %

19.18 %

18.60 %

18.16 %

17.85 %

17.66 %

17.58 %

17.58 %

17.03 %

16.58 %

16.22 %

15.93 %

15.72 %

7

20.85 %

19.93 %

19.18 %

18.60 %

18.16 %

17.85 %

17.66 %

17.58 %

17.58 %

17.03 %

16.58 %

16.22 %

15.93 %

8

21.99 %

20.85 %

19.93 %

19.18 %

18.60 %

18.16 %

17.85 %

17.66 %

17.58 %

17.58 %

17.03 %

16.58 %

16.22 %

9

23.38 %

21.99 %

20.85 %

19.93 %

19.18 %

18.60 %

18.16 %

17.85 %

17.66 %

17.58 %

17.58 %

17.03 %

16.58 %

10

25.05 %

23.38 %

21.99 %

20.85 %

19.93 %

19.18 %

18.60 %

18.16 %

17.85 %

17.66 %

17.58 %

17.58 %

17.03 %

11

27.06 %

25.05 %

23.38 %

21.99 %

20.85 %

19.93 %

19.18 %

18.60 %

18.16 %

17.85 %

17.66 %

17.58 %

17.58 %

12

30.00 %

27.06 %

25.05 %

23.38 %

21.99 %

20.85 %

19.93 %

19.18 %

18.60 %

18.16 %

17.85 %

17.66 %

17.58 %

13

35.00 %

30.00 %

27.06 %

25.05 %

23.38 %

21.99 %

20.85 %

19.93 %

19.18 %

18.60 %

18.16 %

17.85 %

17.66 %

14

 

35.00 %

30.00 %

27.06 %

25.05 %

23.38 %

21.99 %

20.85 %

19.93 %

19.18 %

18.60 %

18.16 %

17.85 %

15

   

35.00 %

30.00 %

27.06 %

25.05 %

23.38 %

21.99 %

20.85 %

19.93 %

19.18 %

18.60 %

18.16 %

16

     

35.00 %

30.00 %

27.06 %

25.05 %

23.38 %

21.99 %

20.85 %

19.93 %

19.18 %

18.60 %

17

       

35.00 %

30.00 %

27.06 %

25.05 %

23.38 %

21.99 %

20.85 %

19.93 %

19.18 %

18

         

35.00 %

30.00 %

27.06 %

25.05 %

23.38 %

21.99 %

20.85 %

19.93 %

19

           

35.00 %

30.00 %

27.06 %

25.05 %

23.38 %

21.99 %

20.85 %

20

             

35.00 %

30.00 %

27.06 %

25.05 %

23.38 %

21.99 %

21

               

35.00 %

30.00 %

27.06 %

25.05 %

23.38 %

22

                 

35.00 %

30.00 %

27.06 %

25.05 %

23

                   

35.00 %

30.00 %

27.06 %

24

                     

35.00 %

30.00 %

25

                       

35.00 %

ಈ ಪಾಲಿಸಿಗೆ ಕಾರ್ಪೊರೇಷನ್ ನವರು ಪಾಲಿಸಿದಾರನಿಗೆ ಸಹಾಯವಾಗಲಿ ಎನ್ನುವ ದೃಷ್ಟಿಯಿಂದ, ಸ್ಪೆಷಲ್ ಸರಂಡರ್ ಮೊತ್ತವನ್ನು ಅದು ಹೆಚ್ಚಾಗಿದ್ದಲ್ಲಿ ಅದನ್ನು ನೀಡಬಹುದು.

ಪಾಲಿಸಿಗೆ ಫ್ರೀ ಲುಕ್ ಪೀರಿಯಡ್

ಇತರೆ ಜೀವ ವಿಮಾ ಪಾಲಿಸಿ ಗಳಲ್ಲಿ ನೀಡುತ್ತಿರುವ ಒಂದು ಸವಲತ್ತು ಈ ಪಾಲಿಸಿಯಲ್ಲೂ ಪಾಲಿಸಿದಾರನಿಗೆ ಲಭ್ಯವಿದೆ. ಅದೆಂದರೆ, ಫ್ರೀ ಲುಕ್ ಪೀರಿಯಡ್. ಈ ಫ್ರೀ ಲುಕ್ ಪೀರಿಯಡ್ ನಲ್ಲಿ, ಪಾಲಿಸಿದಾರನು, ಪಾಲಿಸಿಯ ದಾಖಲೆಗಳು ಅವನ ಕೈ ಸೇರಿದ 15 ದಿವಸಗಳಲ್ಲಿ ಅದರಲ್ಲಿ ನಮೂದಿಸಿರುವ ಎಲ್ಲ ನಿಯಮಗಳು ಹಾಗೂ ನಿಬಂದನೆಗಳನ್ನು ಓದಿ ಅದನ್ನು ಅರ್ಥ ಮಾಡಿಕೊಳ್ಳಲು ನೀಡುವ ಕಾಲಾವಕಾಶ ಆಗಿರುತ್ತದೆ. ಅಕಸ್ಮಾತ್ ಪಾಲಿಸಿದಾರನಿಗೆ ಇದರಲ್ಲಿರುವ ಯಾವುದೇ ನಿಯಮಗಳ  ಅಥವಾ ನಿಬಂದನೆಗಳ ಬಗ್ಗೆ ಒಪ್ಪಿಗೆ ಆಗದಿದ್ದಲ್ಲಿ, ಆ ಪಾಲಿಸಿಯನ್ನು ಆತನು 15 ದಿನಗಳ ಒಳಗೆ ಎಲ್ ಐ ಸಿ ಗೆ ಹಿಂದಿರುಗಿಸಬಹುದು. ಆದರೆ, ಆ ರೀತಿ ಹಿಂದಿರುಗಿಸಲು ಕಾರಣ ನೀಡಬೇಕಾಗುತ್ತದೆ. ಪಾಲಿಸಿಯು ಕಾರ್ಪೊರೇಷನ್ ಗೆ ತಲುಪಿದ ಕೂಡಲೇ ಆ ಪಾಲಿಸಿಯನ್ನು ರದ್ದು ಮಾಡಲಾಗುವುದು. ಆದರೆ, ಹಿಂದಿರುಗಿಸುವ ಮೊತ್ತದಲ್ಲಿ, ಪ್ರೊಪೋರ್ಷನೆಟ್ ರಿಸ್ಕ್ ಪ್ರೀಮಿಯಂ (ಬೇಸ್ ಪ್ಲಾನ್ ಮತ್ತು ರೈಡರ್ ಗೆ), ವೈದ್ಯಕೀಯ ಪರೀಕ್ಷೆಗೆ ಹಾಗೂ ಅದರ ರಿಪೋರ್ಟ್ ಗಳಿಗೆ ತಗುಲಿರಬಹುದಾದ  ವೆಚ್ಚ ವನ್ನು ಅದರಿಂದ ಕಳೆದು, ಉಳಿದ ಹಣವನ್ನು ಹಿಂದಿರುಗಿಸಲಾಗುವುದು

ಪಾಲಿಸಿಯ  ಮೇಲೆ ನೀಡಲಾಗುವ ಸಾಲ ಸೌಲಭ್ಯ

ಈ ಪಾಲಿಸಿಯ ಮೇಲೆ ಸಾಲ ಸೌಲಭ್ಯ ಇರುತ್ತದೆ. ಆದರೆ, ಪಾಲಿಸಿಯು ಸರಂಡರ್ ಮೌಲ್ಯವನ್ನು ಹೊಂದಿರಬೇಕು. ಈ ಸಾಲವು ಕೂಡ ಕಾರ್ಪೊರೇಷನ್ ನವರು ಕಾಲ ಕಾಲಕ್ಕೆ ನಮೂದಿಸುವ ನಿಯಮ ಹಾಗೂ ನಿಬಂದನೆಗೆ ಒಳ ಪಟ್ಟಿರುತ್ತದೆ.

ಪಾಲಿಸಿಯ ಮೇಲೆ ತೆರಿಗೆಗಳು

ಭಾರತ ಸರ್ಕಾರ ಅಥವಾ ಇನ್ನೂ ಯಾವುದೇ ಸರ್ಕಾರದ ಸ್ವಾಮ್ಯತೆಗೆ ಒಳಪಟ್ಟ ಪ್ರಾದಿಕಾರಗಳು ಶಾಸನಬದ್ದವಾದ ತೆರಿಗೆಗಳನ್ನು ಜೀವ ವಿಮಾ ಪಾಲಿಸಿಗಳಿಗೆ ಅನ್ವಯವಾಗುವಂತೆ ಮಾಡಿದಲ್ಲಿ, ಅಂತಹ ತೆರಿಗೆಗಳು ಈ ಪಾಲಿಸಿಗೂ ಅನ್ವಯಿಸುತ್ತದೆ. ಹಾಗಾಗಿ ಪ್ರೀಮಿಯಂ ನೀಡುವಾಗ ಅವತ್ತಿನ ದಿನ ಯಾವ ತೆರಿಗೆಯು ಆ ಪಾಲಿಸಿಗೆ ಅನ್ವಯವಾಗುವುದೊ, ಅದನ್ನು ಸೇರಿಸಿ ನೀಡಬೇಕಾಗುತ್ತದ.

ಪ್ರೀಮಿಯಂ ಮೊತ್ತದ ಜೊತೆಗೆ, ಸರ್ವಿಸ್ ಟಾಕ್ಸ್ ಅನ್ನು ಕೂಡ ಕಟ್ಟಬೇಕಾಗುತ್ತದೆ. ಇದು, ಪ್ರೀಮಿಯಂ ಮೊತ್ತದ ಜೊತೆಗೆ ಸೇರದೆ ಸೆಪರೇಟ್ ಆಗಿ ನಮೂದಿಸಲಾಗುತ್ತದೆ. ಪ್ರೀಮಿಯಂ ಜೊತೆಯಲ್ಲಿ ನೀಡುವ ಯಾವ ತೆರಿಗೆಗಳನ್ನೂ, ಬೆನಿಫಿಟ್ ಲೆಕ್ಕಕ್ಕೆ ಸೇರಿಸುವುದಿಲ್ಲ.

ಪಾಲಿಸಿಯಲ್ಲಿ ಸೇರಿಲ್ಲದೆ ಇರುವುದು

ಈ ಪಾಲಿಸಿಯಲ್ಲಿ ಪಾಲಿಸಿದಾರನ ಆತ್ಮಹತ್ಯೆ ಸೇರಿರುವುದಿಲ್ಲ. ಪಾಲಿಸಿದಾರನು ಆತ್ಮಹತ್ಯೆ ಮಾಡಿಕೊಂಡಲ್ಲಿ, ಪಾಲಿಸಿಯು ತನ್ನ  ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. .

 • ಪಾಲಿಸಿದಾರನು ಪಾಲಿಸಿಯ ರಿಸ್ಕ್ ಕವರೆಜ್ ಶುರು ಆದ ದಿವಸದಿಂದ  12 ತಿಂಗಳುಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ, ಅಂತಹ ಪಾಲಿಸಿಯು ಕಾರ್ಪೊರೇಷನ್ ಆ ಪಾಲಿಸಿಗೆ ನೀಡಬೇಕಾಗಿರುವ ಬೆನಿಫಿಟ್ ಗಳಿಗೆ ಅರ್ಹತೆ ಪಡುವುದಿಲ್ಲ. ಆದರೆ, ಅದುವರೆವಿಗೂ ನೀಡಿರುವ ಪ್ರೀಮಿಯಂ ಗಳ 80 % ಮೊತ್ತವನ್ನು ಕಾರ್ಪೊರೇಷನ್ ನಾಮಿನಿಗೆ ನೀಡುತ್ತದೆ. ಇದರಲ್ಲಿ, ಅನ್ವಯವಾಗುವ ತೆರಿಗೆ, ಎಕ್ಸ್ಟ್ರಾ ಪ್ರೀಮಿಯಂ ಗಳು ಹಾಗೂ ರೈಡರ್ ಪ್ರೀಮಿಯಂ ಗಳು ಇದ್ದಲ್ಲಿ, ಅದನ್ನು ಕಡಿತಗೊಳಿಸಿ ಉಳಿಕೆ ಹಣವನ್ನು ನೀಡಲಾಗುವುದು.
 • ಅದೇ ರೀತಿ, ಪಾಲಿಸಿಯನ್ನು ರಿವೈವಲ್ ಮಾಡಿದ 12 ತಿಂಗಳುಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ, ಅಲ್ಲಿಯವರೆಗೂ ನೀಡಿರುವ ಪ್ರೀಮಿಯಂ ಮೊತ್ತದ 80 % ಮೊತ್ತ  ಅಥವಾ ಸರಂಡರ್ ಮೊತ್ತ ಇವುಗಳಲ್ಲಿ ಯಾವುದು ಹೆಚ್ಚೋ ಅದನ್ನು ನೀಡಲಾಗುವುದು. ಆದರೆ ಪಾಲಿಸಿಯು ಅಸ್ಥಿತ್ವದಲ್ಲಿ ಇರಬೇಕು.

ಈ ಕ್ಲಾಸ್ ಕೆಳ ಕಂಡ ಸಂದರ್ಭದಲ್ಲಿ ಅನ್ವಯ ಆಗುವುದಿಲ್ಲ.

 • ಪಾಲಿಸಿಯನ್ನು ರಿವೈವಲ್ ಮಾಡುವಾಗ ಪಾಲಿಸಿಯಲ್ಲಿ ವಿಮಾ ಕವರೆಜ್ ನೀಡುತ್ತಿರುವ ವ್ಯಕ್ತಿಯ ವಯಸ್ಸು 8 ವರ್ಷಗಳಿಗಿಂತ ಕಡಿಮೆ ಇದ್ದಲ್ಲಿ
 • ಪಾಲಿಸಿಯು ಲ್ಯಾಪ್ಸ್ ಆಗಿ ಪೈಡ್-ಅಪ್ ಮೌಲ್ಯವನ್ನು ಕೂಡ ಗಳಿಸದೆ ಇದ್ದ ಪಕ್ಷದಲ್ಲಿ

ಈ ಮೇಲೆ ಕಾಣಿಸಿರುವ ಮೊತ್ತವನ್ನು ಬಿಟ್ಟು ಬೇರೆ ಯಾವುದೇ ಕ್ಲೈಮ್ ಗಳನ್ನು ಕಾರ್ಪೊರೇಷನ್ ನೀಡುವುದಿಲ್ಲ.