ಎಲ್ ಐ ಸಿ ಜೀವನ್ ಉಮಂಗ್ ಪ್ಲಾನ್
 • ಅತ್ಯುತ್ತಮ ಯೋಜನೆಗಳು
 • ಸುಲಭ ಹೋಲಿಕೆ
 • ತಕ್ಷಣದ ಖರೀದಿ
PX step

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಹುಟ್ಟಿದ ದಿನಾಂಕ (ದೊಡ್ಡ ಸದಸ್ಯ)
ಆದಾಯ
| ಲಿಂಗ

1

2

ಫೋನ್ ಸಂಖ್ಯೆ
ಹೆಸರು
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಎಲ್ ಐ ಸಿ ಯು ಭಾರತ ದೇಶದಲ್ಲಿಯ ಒಂದು ಅತ್ಯಂತ ಪ್ರತಿಷ್ಠಿತ ಜೀವ ವಿಮೆಯನ್ನು ನೀಡುವ ಸಂಸ್ಥೆ ಆಗಿದ್ದು, ಅನೇಕ ವಿದವಾದ ಪಾಲಿಸಿಗಳನ್ನು, ಜನರ ಹಿತ ದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಯೋಜಿಸಿರುತ್ತದೆ. ಎಲ್ ಐ ಸಿ ಯ ಜೀವ ವಿಮಾ ಯೋಜನೆಗಳಿಂದ, ಜನರಿಗೆ ಸಾಕಷ್ಟು ಪ್ರಯೋಜನ ಆಗುತ್ತಲಿದ್ದು, ಅವರುಗಳು ರಕ್ಷಣೆ ಹಾಗೂ ಉಳಿತಾಯ ಮಾಡುವ ನಿಟ್ಟಿನಲ್ಲಿ ಅತ್ಯಂತ ಸಹಕಾರಿ ಆಗಿದೆ. ಎಲ್ ಐ ಸಿ ಜೀವನ್ ಉಮಂಗ್ ಪ್ಲಾನ್ ಒಂದು ಎಂಡೋಮೆಂಟ್ ಮತ್ತು ಸಂಪೂರ್ಣ ಜೀವ ವಿಮೆ ನೀಡುವ ಯೋಜನೆ ಆಗಿದ್ದು ಅದರಿಂದ ಪಾಲಿಸಿದಾರನಿಗೆ ಅವನಿಗೆ ಬೇಕಾದ ವಿಮಾ ಕವರೆಜ್ ನೀಡುತ್ತದೆ. ಈ ಯೋಜನೆಯ ಅಡಿಯಲ್ಲಿ ಪಾಲಿಸಿದಾರನಿಗೆ, ಪಾಲಿಸಿ ಅವದಿ ಮುಗಿದ ನಂತರ ನಿಗದಿತ ಕಾಲಕ್ಕೆ ಪೇ ಔಟ್ ಅಂದರೆ ಒಂದು ಮೊತ್ತವನ್ನು ಅವನ ಜೀವಿತ ಕಾಲದವರೆಗೂ ನೀಡುತ್ತದೆ. ಇದು ಒಂದು ಲಾಭದಲ್ಲಿ ಭಾಗಿ ಆಗುವಂತಹ ಯೋಜನೆ ಆಗಿದ್ದು, ಅನ್ವಯವಾಗುವ, ಸಿಂಪಲ್ ರಿವರ್ಶನರಿ ಬೋನಸ್ ಹಾಗೂ ಅಂತಿಮ ಹೆಚ್ಚುವರಿ ಬೋನಸ್ ಗೆ ಅರ್ಹತೆ ಹೊಂದಿರುತ್ತದೆ.

ಪ್ರಾರಂಬದ ದಿನಾಂಕ

ಟೇಬಲ್ ಸಂಖ್ಯೆ

ಯೋಜನೆಯ ಟೈಪ್

ಬೋನಸ್

UIN

ಏಪ್ರಿಲ್ 20ನೆಯ ತಾರೀಕು, 2017

845

ಎಂಡೋಮೆಂಟ್ + ಹೋಲ್ ಲೈಫ್

ಹೌದು

512N312V01

ಎಲ್ ಐ ಸಿ ಜೀವನ್ ಉಮಂಗ್ ಯೋಜನೆಯ ವೈಶಿಷ್ಟ್ಯಗಳು

 • ಇದು ಒಂದು ಹೋಲ್ ಲೈಫ್(ಪೂರ್ತಿ ಜೀವನ)  ಜೀವ ವಿಮಾ ಯೋಜನೆ ಆಗಿದ್ದು ಇದರ ಆವದಿಯು 100 ವರ್ಷಗಳು
 • ಯೋಜನೆಯ ಟರ್ಮ್ ಮುಗಿದ ಕೂಡಲೇ ಸಮ್ ಅಶ್ಶುರ್ಡ್ ಮೊತ್ತದ 8 % ಮೊತ್ತವನ್ನು ನೀಡಲಾಗುವುದು.
 • ದೊಡ್ಡ  ಸಮ್ ಅಶ್ಶುರ್ಡ್ ಮೊತ್ತವನ್ನು ಕೊಳ್ಳುವ ಅವಕಾಶ ಇರುತ್ತದೆ
 • ಎಲ್ ಐ ಸಿ ಯ ಆಕಸ್ಮಿಕ ಮರಣ ಹಾಗೂ ಅಂಗ ವೈಕಲ್ಯ (ಡಿಸ್ಎಬಿಲಿಟಿ) ಮತ್ತು ಟರ್ಮ್ ರೈಡರ್ಸ್ ಗಳನ್ನು ಸೇರಿಸಿಕೊಳ್ಳುವ ಅವಕಾಶ ಇರುತ್ತದೆ, ಇದರಿಂದ ಪಾಲಿಸಿದಾರರಿಗೆ ಹೆಚ್ಚು ಬೆನಿಫಿಟ್ ದೊರೆಯುತ್ತದೆ.
 • ಸಿಂಪಲ್ ರಿವರ್ಶನರಿ ಬೋನಸ್ ಹಾಗೂ ಅಂತಿಮ ಹೆಚ್ಚುವರಿ ಬೋನಸ್ ಮೊತ್ತಗಳು ಪಾಲಿಸಿಯ ಅವದಿ ಮುಗಿದ ತಕ್ಷಣ ಅಥವಾ ಆವದಿಯ ಮುನ್ನ ಮರಣ ಹೊಂದಿದಲ್ಲಿ ದೊರಕುತ್ತದೆ.
 • ಈ ಯೋಜನೆಯು ಒಂದು ರೀತಿ ಪೆನ್ಷನ್ ಪ್ಲಾನ್ ಎಂದು ಪರಿಗಣಿಸಬಹುದು, ಏಕೆಂದರೆ, ಪಾಲಿಸಿಯ ಅವದಿ ಮುಗಿದ ನಂತರ ಹಣವು ನಿಗದಿತ ಆವದಿಯಲ್ಲಿ ಜೀವನ ಪರ್ಯಂತ ನಿಮ್ಮ ಕೈ ಸೇರುತ್ತದೆ.
 • ಈ ಯೋಜನೆಯ ಅಡಿ ನೀಡುವ ವಾರ್ಷಿಕ ಪ್ರೀಮಿಯಂ ಮೊತ್ತಕ್ಕೆ  ಆದಾಯ ತೆರಿಗೆ ಸೆಕ್ಷನ್ 80 C ಯಲ್ಲಿ ವಿನಾಯತಿ ದೊರೆಯುತ್ತದೆ.
 • ಹಾಗೆಯೇ ಮೆಚೂರಿಟೀ ಮೊತ್ತವು ಸೆಕ್ಷನ್ 10 (10D) ಅಡಿಯಲ್ಲಿ ವಿನಾಯತಿ ಹೊಂದಿರುತ್ತದೆ.

ಎಲ್ ಐ ಸಿ ಜೀವನ್ ಉಮಂಗ್ – ಬೇನೆಫಿಟ್ಸ್

ಪಾಲಿಸಿದಾರನ ರಿಸ್ಕ್ ಶುರು ಆಗುವ ದಿನಾಂಕ

ಪಾಲಿಸಿದಾರನು ಪಾಲಿಸಿಯನ್ನು ಪಡೆದ ದಿನಾಂಕದಿಂದ ರಿಸ್ಕ್ ಕವರೆಜ್ ಶುರು ಆಗುತ್ತದೆ

ಸಾಲ ಸೌಲಭ್ಯ

ಈ ಪಾಲಿಸಿಗೆ ಸಾಲವು ಪಾಲಿಸಿಯ ಟರ್ಮ್ ಮುಗಿದ ನಂತರ ದೊರೆಯುತ್ತದೆ

ಆದಾಯ ತೆರಿಗೆ ವಿನಾಯತಿ

ಈ ಪಾಲಿಸಿಯ ಬಾಬ್ತು ಕಟ್ಟುವ ವಾರ್ಷಿಕ ಪ್ರೀಮಿಯಂ ಗೆ ಆದಾಯ ತೆರಿಗೆ ವಿನಾಯತಿ ದೊರೆಯುತ್ತದೆ.

ರೈಡರ್ಸ್ ಗಳ ಲಭ್ಯತೆ

ಎಲ್ ಐ ಸಿ ಯ ಆಕಸ್ಮಿಕ ಮರಣ ಹಾಗೂ ಅಂಗ ವೈಕಲ್ಯ (ಡಿಸ್ಎಬಿಲಿಟಿ) ಮತ್ತು ಟರ್ಮ್ ರೈಡರ್ಸ್ ಗಳು ಲಭ್ಯವಿರುತ್ತದೆ

ಪಾಲಿಸಿ ರಿವೈವಲ್

ಪ್ರೀಮಿಯಂ ಮೊತ್ತವನ್ನು ಪಾವತಿಸದ ದಿನದಿಂದ ಎರಡು ವರ್ಷದ ಒಳಗೆ ಪಾಲಿಸಿಯನ್ನು ರಿವೈವಲ್ ಮಾಡುವ ಅವಕಾಶ ಇರುತ್ತದೆ.

ಕೂಲಿಂಗ್ ಪೀರಿಯಡ್

ಪಾಲಿಸಿದಾರನಿಗೆ ಪಾಲಿಸಿಯಲ್ಲಿ ನಮೂದಿಸಿರುವ ನಿಯಮ ಅಥವಾ ನಿಬಂದನೆಗಳು ಒಪ್ಪಿಗೆ ಆಗದಿದ್ದಲ್ಲಿ ಪಾಲಿಸಿಯನ್ನು ಪಡೆದ 15 ದಿವಸಗಳ ಒಳಗೆ ಹಿಂದಿರುಗಿಸುವ ಅವಕಾಶ ಇರುತ್ತದೆ.

ಆತ್ಮಹತ್ಯೆ ಕ್ಲಾಸ್

ಪಾಲಿಸಿದಾರನು ಪಾಲಿಸಿಯನ್ನು ಪಡೆದ 1 ವರ್ಷದ ಒಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ ಅವನು ನೀಡಿರುವ ಮೊತ್ತದ 80% ಹಣವನ್ನು ನೀಡಲಾಗುತ್ತದೆ.

ಅಸೈನ್ಮೆಂಟ್ ಹಾಗೂ ನೋಮಿನೇಷನ್ಸ್

ಎಲ್ ಐ ಸಿ ಜೀವನ್ ಉಮಂಗ್ ಪ್ಲಾನ್ ಅಡಿಯಲ್ಲಿ ಅಸೈನ್ಮೆಂಟ್ ಹಾಗೂ ನೋಮಿನೇಷನ್ಸ್ ಲಭ್ಯವಿದೆ

ಎಲ್ ಐ ಸಿ ಜೀವನ್ ಉಮಂಗ್ – ಎಲಿಜಿಬಿಲಿಟಿ (ಅರ್ಹತೆ)

 1. ಪಾಲಿಸಿ ಪಡೆಯಲು ಕನಿಷ್ಠ ವಯಸ್ಸು – 90 ದಿವಸಗಳು ಮುಗಿದಿರಬೇಕು
 2. ಪ್ರೀಮಿಯಂ ನೀಡುವ ಅವದಿ - 15, 20, 25 ಹಾಗೂ 30 ವರ್ಷಗಳು
 3. ಪಾಲಿಸಿ ಪಡೆಯಲು ಗರಿಷ್ಠ ವಯಸ್ಸು – 15 ವರ್ಷ ಪ್ರೀಮಿಯಂ ನೀಡುವ ಅವದಿ ಇದ್ದಲ್ಲಿ 55 ವರ್ಷಗಳು, 20 ವರ್ಷ ಪ್ರೀಮಿಯಂ ನೀಡುವ ಅವದಿ ಇದ್ದಲ್ಲಿ 50 ವರ್ಷಗಳು, 25 ವರ್ಷ ಪ್ರೀಮಿಯಂ ನೀಡುವ ಅವದಿ ಇದ್ದಲ್ಲಿ 45 ವರ್ಷಗಳು, 30 ವರ್ಷ ಪ್ರೀಮಿಯಂ ನೀಡುವ ಅವದಿ ಇದ್ದಲ್ಲಿ 40 ವರ್ಷಗಳು
 4. ಪಾಲಿಸಿಯ ಮೆಚೂರಿಟೀ ಆಗುವಾಗ 100 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ)
 5. ಪಾಲಿಸಿಯ ಟರ್ಮ್ – 100 ವರ್ಷಗಳು
 6. ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತವು ರೂ 2,00,000 ಕ್ಕಿಂತ ಮೇಲ್ಪಟ್ಟು, ರೂ 25,000 ದ ಮಲ್ಟಿಪಲ್ಸ್ ಗಳಲ್ಲಿ
 7. ಪ್ರೀಮಿಯಂ ನೀಡಬೇಕಾದ ರೀತಿ ವರ್ಷಕ್ಕೊಮ್ಮೆ ಅಥವಾ  ಆರ್ದ ವರ್ಷಕ್ಕೊಮ್ಮೆ ಅಥವಾ 3 ತಿಂಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆ
 8. ವರ್ಷಕ್ಕೊಮ್ಮೆ ನೀಡುವ ಕಂತಿಗೆ 2 % ರಿಯಾಯತಿ ದೊರೆಯುತ್ತದೆ. ಆರ್ದ ವರ್ಷಕ್ಕೊಮ್ಮೆ ನೀಡುವ ಕಂತಿಗೆ 1 % ರಿಯಾಯತಿ ದೊರೆಯುತ್ತದೆ. 2 ತಿಂಗಳಿಗೊಮ್ಮೆ ಹಾಗೂ ತಿಂಗಳಿಗೊಮ್ಮೆ ನೀಡುವ ಕಂತುಗಳಿಗೆ ಯಾವುದೇ ರಿಯಾಯತಿ ದೊರಕುವುದಿಲ್ಲ.

ಪಾಲಿಸಿದಾರನು ಹೆಚ್ಚಿನ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತವನ್ನು ತೆಗೆದುಕೊಂಡಾಗ ಲಭ್ಯವಿರುವ ರಿಯಾಯತಿ

ಬೇಸಿಕ್ ಸಮ್ ಅಶ್ಶುರ್ಡ್

ಮಿನಿಮಮ್ (ಕನಿಷ್ಠ)

ಮ್ಯಾಕ್ಸಿಮಮ್ (ಗರಿಷ್ಠ)

ಸಮ್ ಅಶ್ಶುರ್ಡ್

ರೂ 10,000

ಯಾವುದೇ ಮಿತಿ ಇಲ್ಲ

ಪ್ರೀಮಿಯಂ ನೀಡಬೇಕಾದ ಟರ್ಮ್

15 ವರ್ಷಗಳು, 20 ವರ್ಷಗಳು, 25 ವರ್ಷಗಳು, 30 ವರ್ಷಗಳು

ಪಾಲಿಸಿಯ ಟರ್ಮ್

100 ವರ್ಷಗಳು

ಪಾಲಿಸಿ ತೆಗೆದುಕೊಳ್ಳಬೇಕಿದ್ದಲ್ಲಿ ಆಗಿರಬೇಕಾದ ವಯಸ್ಸು

90 ದಿವಸಗಳು

55 ವರ್ಷಗಳು

ಕೊನೆಯ ಪ್ರೀಮಿಯಂ ನೀಡುವಾಗ ಆಗಿರಬೇಕಾದ ವಯಸ್ಸು  

30 ವರ್ಷಗಳು

70 ವರ್ಷಗಳು

ಪ್ರೀಮಿಯಂ ನೀಡುವ ರೀತಿ

ವರ್ಷಕ್ಕೊಮ್ಮೆ ಅಥವಾ  ಆರ್ದ ವರ್ಷಕ್ಕೊಮ್ಮೆ ಅಥವಾ 3 ತಿಂಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆ

ಎಲ್ ಐ ಸಿ ಜೀವನ್ ಉಮಂಗ್ – ರೈಡರ್ಸ್

 • ಆಕಸ್ಮಿಕ  ಮರಣ ಹಾಗೂ ಅಂಗ ವೈಕಲ್ಯ (ಡಿಸ್ಎಬಿಲಿಟಿ) ಬೆನಿಫಿಟ್
 • ಅಪಘಾತ ಬೆನೆಫಿಟ್ ರೈಡರ್
 • ನ್ಯೂ ಟರ್ಮ್ ಅಶ್ಶುರೆನ್ಸ್ ರೈಡರ್
 • ನ್ಯೂ ಕ್ರಿಟಿಕಲ್ ಇಲ್ ನೆಸ್ ರೈಡರ್

ಎಲ್ ಐ ಸಿ ಜೀವನ್ ಉಮಂಗ್  - ಹೆಚ್ಚುವರಿ ಬೆನಿಫಿಟ್ ಗಳು

ಡೆತ್ ಬೆನಿಫಿಟ್

ಪಾಲಿಸಿದಾರನು ರಿಸ್ಕ್ ಶುರು ಆಗುವ  ಮುಂಚೆಯೇ ಮರಣ ಹೊಂದಿದಲ್ಲಿ, ಅಲ್ಲಿಯವರೆಗೂ ನೀಡಿರುವ ಒಟ್ಟು ಕಂತುಗಳ ಮೊತ್ತಕ್ಕೆ ಸರಿ ಸಮನಾಗಿ ಹಣವನ್ನು (ಬಡ್ಡಿ ರಹಿತ) ನೀಡಲಾಗುವುದು. ಅದೇ ಪಾಲಿಸಿದಾರನು ರಿಸ್ಕ್ ಕವರೆಜ್ ಶುರು ಆದ ಮೇಲೆ ಮರಣ ಹೊಂದಿದಲ್ಲಿ, . ಆನ್ ಡೆತ್ ಸಮ್ ಅಶ್ಶುರ್ಡ್ ಜೊತೆಗೆ ಅದುವರೆವಿಗೂ ಸೇರಿರಬಹುದಾದ ಸಿಂಪಲ್ ರಿವರ್ಶನರಿ ಬೋನಸ್ ಮತ್ತು ಅಂತಿಮ ಹೆಚ್ಚುವರಿ ಬೋನಸ್ ಸೇರಿಸಿ ಕೊಡಲಾಗುವುದು. ಮರಣದಿಂದ ನೀಡುವ ಸಮ್ ಅಶ್ಶುರ್ಡ್ ಮೊತ್ತವು ಜಾಸ್ತಿ ಇದ್ದು, ಅದು ವಾರ್ಷಿಕ ಪ್ರೀಮಿಯಂ ಮೊತ್ತದ 10 ಪಟ್ಟು ಅಥವಾ ಮೆಚೂರಿಟೀ ಆದಾಗ ನೀಡುವ ಸಮ್ ಅಶ್ಶುರ್ಡ್ ಅಥವಾ ಬೇಸಿಕ್ ಸಮ್ ಅಶ್ಶುರ್ಡ್ ಇವುಗಳಲ್ಲಿ ಯ್ಯವುದು ಹೆಚ್ಚು ಇರುವುದೋ ಅದು ಆಗಿರುತ್ತದೆ. ಪಾಲಿಸಿದಾರನು ನೀಡುವ ಪ್ರೀಮಿಯಂ ಮೊತ್ತವು ಆದಾಯ ತೆರಿಗೆ ವಿನಾಯತಿ ಹೊಂದಿರುತ್ತದೆ.

ಸರ್ವೈವಲ್ ಅಡಿಷನ್

ಪ್ರೀಮಿಯಂ ನೀಡುವ ಟರ್ಮ್ ಅನ್ನು ಮುಗಿಸಿ ಹಾಗೂ ಆ ಅವದಿಯಲ್ಲಿ ಎಲ್ಲ ಪ್ರೀಮಿಯಂ ಗಳನ್ನು ಪಾವತಿ ಮಾಡಿದ್ದಲ್ಲಿ, ಪಾಲಿಸಿದಾರನಿಗೆ ಸಮ್ ಅಶ್ಶುರ್ಡ್ ಮೊತ್ತದ 8 % ಮೊತ್ತವನ್ನು ಪ್ರತಿ ವರ್ಷವೂ ಪಾಲಿಸಿ ಮೆಚೂರಿಟೀ ಆಗುವವರೆಗೂ ನೀಡಲಾಗುವುದು. ಸರ್ವೈವಲ್ ಬೆನಿಫಿಟ್ ಮೊತ್ತವನ್ನು ಪಾಲಿಸಿಯ  ಪ್ರೀಮಿಯಂ ನೀಡುವ ಟರ್ಮ್ ಕೊನೆಯಿಂದ ಮುಂದೆ ಪ್ರತಿ ವರ್ಷವೂ ಪಾಲಿಸಿದಾರನಿಗೆ ಮೆಚೂರಿಟೀ ಆಗುವವರೆಗೆ ನೀಡಲಾಗುತ್ತದೆ.

ಮೆಚೂರಿಟೀ ಬೆನಿಫಿಟ್

ಪಾಲಿಸಿಯು ತನ್ನ ಟರ್ಮ್ ಅನ್ನು ಯಶಸ್ವಿಯಾಗಿ ಮುಗಿಸಿದಲ್ಲಿ ಹಾಗೂ ಅವರೆಗಿನ ಎಲ್ಲ ಪ್ರೀಮಿಯಂ ಗಳನ್ನು ಪಾವತಿಸಿದ್ದಲ್ಲಿ, ಪಾಲಿಸಿದಾರನಿಗೆ, ಸಮ್ ಅಶ್ಶುರ್ಡ್ ಮೊತ್ತದ ಜೊತೆಗೆ ಅನ್ವಯವಾಗುವ ರಿವರ್ಷನರಿ ಬೋನಸ್ ಹಾಗೂ ಅಂತಿಮ ಹೆಚ್ಚುವರಿ ಬೋನಸ್ ಮೊತ್ತವನ್ನು ಕೂಡಿಸಿ ನೀಡಲಾಗುವುದು. ಇಲ್ಲಿ ಸಮ್ ಅಶ್ಶುರ್ಡ್ ಆನ್ ಮೆಚೂರಿಟೀ ಮೊತ್ತವು ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತಕ್ಕೆ ಸರಿ ಸಮನಾಗಿರುತ್ತದೆ.

ಆಕಸ್ಮಿಕ ಮತ್ತು ಅಂಗ ವೈಕಲ್ಯ (ಡಿಸ್ಎಬಿಲಿಟಿ) ರೈಡರ್

ಎಲ್ ಐ ಸಿ ಯ ಆಕಸ್ಮಿಕ ಮತ್ತು ಅಂಗ ವೈಕಲ್ಯ (ಡಿಸ್ಎಬಿಲಿಟಿ) ಬೆನಿಫಿಟ್ ರೈಡರ್ ಒಂದು ಆಪ್ಷನಲ್ ಅಂದರೆ ಐಚ್ಚಿಕ (ಇಚ್ಚೆ ಪಟ್ಟಲ್ಲಿ) ಪಾಲಿಸಿಯ ಜೊತೆ ಸೇರಿಸಿ ತೆಗೆದುಕೊಳ್ಳಬಹುದಾದ ರೈಡರ್. ಆದರೆ ಇದನ್ನು ಸೇರಿಸಬೇಕಾದಲ್ಲಿ, ಪ್ರೀಮಿಯಂ ಮೊತ್ತದ ಜೊತೆಗೆ ಹೆಚ್ಚುವರಿ ಮೊತ್ತವನ್ನು ನೀಡಬೇಕಾಗುತ್ತದೆ. ಈ ಬೆನಿಫಿಟ್ ರೈಡರ್ ಅನ್ನು ಯಾವಾಗ ಬೇಕಾದರೂ ಪಾಲಿಸಿಯ ಜೊತೆ ಸೇರಿಸಬಹುದು. ಆದರೆ, ಇನ್ನೂ ಪ್ರೀಮಿಯಂ ನೀಡಬೇಕಾಗಿರುವ ಅವದಿಯು ಕನಿಷ್ಠ 5 ವರ್ಷಗಳು ಇರಬೇಕಾಗುತ್ತದೆ. ಪಾಲಿಸಿದಾರನ ವಯಸ್ಸು ಪಾಲಿಸಿ ಮೆಚೂರಿಟೀ ಹೊಂದುವಾಗ 70 ವರ್ಷವಿದ್ದು, ಪಾಲಿಸಿ ಆನಿವರ್ಸರಿಯ ಹೊತ್ತಿಗೆ ನೀಡಲಾಗುವುದು.  

ಈ ರೈಡರ್ ಅನ್ನು ಆಯ್ಕೆ ಮಾಡಿದ್ದಲ್ಲಿ, ಹೆಚ್ಚುವರಿಯಾಗಿ, ಆಕಸ್ಮಿಕ ಮರಣದ ಬಾಬ್ತು ಬರುವ ಬೆನಿಫಿಟ್ ವಿಮೆಯ ಮೊತ್ತವನ್ನು (ಅಪಘಾತದಿಂದ ಮರಣ ಪಟ್ಟಿದ್ದಲ್ಲಿ) ನೀಡಲಾಗುವುದು. ಆದರೆ, ಈ ರೈಡರ್ ಆಗಿನ ಸಮಯಕ್ಕೆ ಅಸ್ತಿತ್ವ ಹೊಂದಿರಬೇಕು. ಪಾಲಿಸಿದಾರನು ಒಂದೊಮ್ಮೆ ಶಾಶ್ವತ ಅಂಗವೈಕಲ್ಯವನ್ನು ಹೊಂದಿದಲ್ಲಿ, ಅಪಘಾತ ವಿಮೆಗೆ ಸರಿ ಸಮನಾಗಿ  ಬೆನಿಫಿಟ್ ಮೊತ್ತವನ್ನು 10 ವರ್ಷದವರೆಗೆ ಸಮಾನ ಕಂತಿನಲ್ಲಿ, ಪ್ರತಿ ತಿಂಗಳೂ ನೀಡಲಾಗುವುದು. ಹಾಗೆಯೇ, ಅಪಘಾತ ವಿಮೆಯ ಮೊತ್ತ ಮತ್ತು ಸಮ್ ಅಶ್ಶುರ್ಡ್ ಮೊತ್ತದ ಒಂದು ಅಂಶವನ್ನು ಕೂಡ ನೀಡಲಾಗುವುದು. ಪಾಲಿಸಿದಾರನು ಈ 10 ವರ್ಷದ ಒಳಗೆ  ಮರಣ ಹೊಂದಿದಲ್ಲಿ, ಡಿಸ್ಎಬಿಲಿಟಿ ಬೆನಿಫಿಟ್ ಕಂತುಗಳಲ್ಲಿ ನೀಡದೆ ಇರುವ ಕಂತುಗಳ ಮೊತ್ತವನ್ನು ಕ್ಲೆಯಿಮ್ ಮೊತ್ತದ ಜೊತೆ ಸೇರಿಸಿ ನೀಡಲಾಗುವುದು.

ಪಾಲಿಸಿಯ ಮೇಲಿನ ರಿಸ್ಕ್ ಶುರುವಾಗುವ ದಿವಸ

ಪಾಲಿಸಿದಾರನು ಪಾಲಿಸಿಯನ್ನು ಪಡೆದ ವಯಸ್ಸು  8 ವರ್ಷಕ್ಕಿಂತ ಕಡಿಮೆ ಇದ್ದಲ್ಲಿ, ಪಾಲಿಸಿಯ ಮೇಲಿನ ರಿಸ್ಕ್ ಕವರೆಜ್, ಪಾಲಿಸಿಯು ಎರಡು ವರ್ಷವನ್ನು ಮುಗಿಸಿದ ದಿವಸಕ್ಕೆ ಅಥವಾ ಪಾಲಿಸಿದಾರನ ವಯಸ್ಸು 8 ವರ್ಷ ಆಗುವ 1 ದಿನಕ್ಕೆ ಮುಂಚೆ ಶುರು ಆಗುತ್ತದೆ. ಯಾವ ಪಾಲಿಸಿದಾರನು 8 ವರ್ಷ ವಯಸ್ಸು ದಾಟಿರುತ್ತಾನೋ, ಅಂತಹ ಪಾಲಿಸಿಗೆ ಆ ದಿನದಿಂದಲೇ ರಿಸ್ಕ್ ಕವರೆಜ್ ದೊರೆಯುತ್ತದೆ.

ಎಲ್ ಐ ಸಿ ಜೀವನ್ ಉಮಂಗ್ – ಇತರೆ ನಿಬಂದನೆಗಳು

ಲ್ಯಾಪ್ಸ್ದ್ ಪಾಲಿಸಿಯ ರಿವೈವಲ್

ಪಾಲಿಸಿಯು ಮಾನ್ಯತೆ ಕಳೆದುಕೊಂಡಿದ್ದಲ್ಲಿ, ಅಂತಹ ಲ್ಯಾಪ್ಸ್ದ್ ಪಾಲಿಸಿಯನ್ನು ರಿವೈವಲ್ ಮಾಡುವ ಅವಕಾಶ ಇರುತ್ತದೆ. ಆದರೆ ಇದನ್ನು ಪಾವತಿ ಮಾಡದ ಪ್ರೀಮಿಯಂ ದಿನದಿಂದ 2 ವರ್ಷದೊಳಗೆ ಕಂಪನಿಯ ನಿಯಮಕ್ಕೆ ಅನುಸಾರವಾಗಿ ರಿವೈವ್ ಮಾಡಿಕೊಳ್ಳಬಹುದು. ಈ ರಿವೈವಲ್ ಅನ್ನು ಪಾಲಿಸಿ ಮೆಚೂರಿಟೀ ಆಗುವುದರ ಒಳಗೆ ಮಾಡಿಕೊಳ್ಳಬೇಕು. ಉಳಿದಂತೆ, ರಿವೈವಲ್ ಮಾಡಲು ಬಯಸುವ  ಪಾಲಿಸಿದಾರನು, ಅಲ್ಲಿಯವರೆಗೆ ಬಾಕಿ ಇರುವ ಎಲ್ಲ ಕಂತುಗಳನ್ನು ಒಟ್ಟಿಗೆ ಎಲ್ ಐ ಸಿ ಯ ನಿಯಮದ ಪ್ರಕಾರ ಪಾವತಿ ಮಾಡಬೇಕು.

ಪೈಡ್-ಅಪ್ ಮೌಲ್ಯ

ಪಾಲಿಸಿದಾರನು 3 ವರ್ಷಕ್ಕಿಂತ ಕಡಿಮೆ ಪ್ರೀಮಿಯಂ ಹಣವನ್ನು ಕಟ್ಟಿದ್ದಲ್ಲಿ ಹಾಗೂ ಪಾಲಿಸಿಯನ್ನು ರಿವೈವ್ ಮಾಡಿಲ್ಲದೆ ಇದ್ದ ಪಕ್ಷದಲ್ಲಿ ಪಾಲಿಸಿಗೆ ನೀಡಬೇಕಾದ ಯಾವುದೇ ಬೆನಿಫಿಟ್ ಗಳನ್ನು ನೀಡಲಾಗುವುದಿಲ್ಲ. ಆದರೆ, ಪಾಲಿಸಿದಾರನು, 3 ವರ್ಷಕ್ಕೆ ಮೇಲ್ಪಟ್ಟು ಕಂತುಗಳನ್ನು ಕಟ್ಟಿದ್ದಲ್ಲಿ ಹಾಗೂ ಕಂತುಗಳ ನೀಡುವಿಕೆಯನ್ನು ತದ ನಂತರ ನಿಲ್ಲಿಸಿದ್ದಲ್ಲಿ, ಅಂತಹ ಪಾಲಿಸಿಯನ್ನು ಪೈಡ್-ಅಪ್ ಪಾಲಿಸಿಯೆಂದು ಪರಿಗಣಿಸಲಾಗುತ್ತದೆ. ಅಂದರೆ ಪಾಲಿಸಿಯು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವುದಿಲ್ಲ. ಆದರೆ ಪೈಡ್ -ಅಪ್ ಪಾಲಿಸಿಯಾಗಿ ಪಾಲಿಸಿಯ ಅವದಿ ಇರುವವರೆಗೂ ಮುಂದುವರೆಯುತ್ತದೆ.

ಈ ಪೈಡ್-ಅಪ್ ಪಾಲಿಸಿಯಲ್ಲಿ, ಸಮ್ ಅಶ್ಶುರ್ಡ್ ಮೊತ್ತವನ್ನು ಕಡಿತಗೊಳಿಸಿ “ಡೆತ್ ಪೈಡ್-ಅಪ್ ಸಮ್ ಅಶ್ಶುರ್ಡ್” ಎಂದು ಕರೆಯಲಾಗುತ್ತದೆ. ಅಂದರೆ, [(ಪಾಲಿಸಿದಾರನು ನೀಡಿರುವ ಪ್ರೀಮಿಯಂಗಳು / ಪಾಲಿಸಿದಾರನು ನೀಡಿಲ್ಲದೆ ಇರುವ ಪ್ರೀಮಿಯಂಗಳು)] x ಸಮ್ ಅಶ್ಶುರ್ಡ್ ಆನ್ ಡೆತ್  = ಡೆತ್ ಪೈಡ್-ಅಪ್ ಸಮ್ ಅಶ್ಶುರ್ಡ್ ಆಗಿರುತ್ತದೆ.

ಈ ಪೈಡ್-ಅಪ್ ಪಾಲಿಸಿಯಲ್ಲಿ, ಮೆಚೂರಿಟೀ ಆದಾಗ ನೀಡುವ ಸಮ್ ಅಶ್ಶುರ್ಡ್ ಮೊತ್ತವನ್ನು ಕಡಿತಗೊಳಿಸಿ “ಮೆಚೂರಿಟೀ ಪೈಡ್-ಅಪ್ ಸಮ್ ಅಶ್ಶುರ್ಡ್” ಎಂದು ಕರೆಯಲಾಗುತ್ತದೆ. ಅಂದರೆ, [(ಪಾಲಿಸಿದಾರನು ನೀಡಿರುವ ಪ್ರೀಮಿಯಂಗಳು / ಪಾಲಿಸಿದಾರನು ನೀಡಿಲ್ಲದೆ ಇರುವ ಪ್ರೀಮಿಯಂಗಳು)] x ಸಮ್ ಅಶ್ಶುರ್ಡ್ ಆನ್ ಮೆಚೂರಿಟೀ   = ಮೆಚೂರಿಟೀ ಪೈಡ್-ಅಪ್ ಸಮ್ ಅಶ್ಶುರ್ಡ್ ಆಗಿರುತ್ತದೆ.

ಪಾಲಿಸಿಯನ್ನು  ಸರಂಡರ್ ಮಾಡುವಿಕೆ

ನೀವು ನಿಮ್ಮ ಪ್ರೀಮಿಯಂ ಗಳನ್ನು 3 ವರ್ಷಗಳು ಸತತವಾಗಿ ಪಾವತಿ ಮಾಡಿದ್ದಲ್ಲಿ ನಿಮ್ಮ ಪಾಲಿಸಿಯನ್ನು ಸರಂಡರ್ ಮಾಡಲು ಅರ್ಹರಾಗುತ್ತೀರಿ. ಪಾಲಿಸಿಯನ್ನು ಸರಂಡರ್ ಮಾಡಿದಲ್ಲಿ ಎಲ್ ಐ ಸಿ ಯು ಪಾಲಿಸಿದಾರನಿಗೆ ಸರಂಡರ್ ಮೌಲ್ಯವಾಗಿ ಗ್ಯಾರಂಟಿಡ್ ಸರಂಡರ್ ಮೌಲ್ಯ ಅಥವಾ  ಸ್ಪೆಷಲ್ ಸರಂಡರ್ ಮೌಲ್ಯ ಇವೆರಡರಲ್ಲಿ ಯಾವುದು ಹೆಚ್ಚೋ ಅದನ್ನು ನೀಡುತ್ತದೆ

ಸ್ಪೆಷಲ್ ಸರಂಡರ್ ಮೊತ್ತವು ಎಲ್ ಐ ಸಿ ಯವರು ಕಾಲ ಕಾಲಕ್ಕೆ ತೆಗೆದುಕೊಳ್ಳುವ  ನಿರ್ದಾರದ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಇದನ್ನು IRDAI ಒಪ್ಪಿರಬೇಕು.

ಪಾಲಿಸಿಯು ಚಾಲ್ತಿಯಲ್ಲಿರುವಾಗ ಗ್ಯಾರಂಟಿಡ್ ಸರಂಡರ್ ಮೌಲ್ಯವು ಪಾಲಿಸಿದಾರನು ಒಟ್ಟಾರೆ ನೀಡಿರುವ ಪ್ರೀಮಿಯಂ ಮೊತ್ತಕ್ಕೆ  ಅನ್ವಯಿಸುವ ಗ್ಯಾರಂಟಿಡ್ ಸರಂಡರ್ ಫಾಕ್ಟರ್ ನಿಂದ ಗುಣಿಸಿದಾಗ ದೊರಕುವ ಮೊತ್ತ. ಆಗಿರುತ್ತದೆ. ಗ್ಯಾರಂಟಿಡ್ ಸರಂಡರ್ ಫಾಕ್ಟರ್ ಪರ್ಸೆಂಟೆಜ್ ನಲ್ಲಿದ್ದು ಅದು ಪಾಲಿಸಿ ಟರ್ಮ್ ಮತ್ತು ಪಾಲಿಸಿಯನ್ನು ಸರಂಡರ್ ಮಾಡಿರುವ ವರ್ಷದ ಮೇಲೆ ಅವಲಂಬಿಸಿರುತ್ತದೆ.

ಫ್ರೀ ಲುಕ್ ಪೀರಿಯಡ್

ಈ ಪಾಲಿಸಿಯನ್ನು ಪಡೆದವರಿಗೆ 15 ದಿವಸದ ಫ್ರೀ ಲುಕ್ ಪೀರಿಯಡ್ ಲಭ್ಯತೆ ಇರುತ್ತದೆ. ಈ ಫ್ರೀ ಲುಕ್ ಪೀರಿಯಡ್ ನಲ್ಲಿ ಪಾಲಿಸಿದಾರನಿಗೆ ಪಾಲಿಸಿಯ  ನಿಯಮಗಳು ಹಾಗೂ ನಿಬಂದನೆಗಳು ಒಪ್ಪಿಗೆ ಆಗದಿದ್ದಲ್ಲಿ, ಪಾಲಿಸಿಯನ್ನು 15 ದಿವಸದ ಒಳಗೆ ಹಿಂದಿರುಗಿಸಬಹುದು. ಪಾಲಿಸಿಯನ್ನು ಹಿಂದಿರುಗಿಸುವಾಗ, ಅದಕ್ಕೆ ತಕ್ಕ ಕಾರಣವನ್ನು ಪಾಲಿಸಿದಾರನು ನೀಡಬೇಕಾಗುತ್ತದೆ. ಪಾಲಿಸಿಯು ಹಿಂದಿರುಗಿದ ನಂತರ ಎಲ್ ಐ ಸಿ ಯು ಅದನ್ನು ರದ್ದು ಮಾಡಿ ಪಾಲಿಸಿದಾರನು ನೀಡಿರುವ ಪ್ರೀಮಿಯಂ ಮೊತ್ತದಲ್ಲಿ, ರಿಸ್ಕ್ ಪ್ರೀಮಿಯಂ ಮೊತ್ತ (ಬೇಸ್ ಪ್ಲಾನ್ ಹಾಗೂ ರೈಡರ್) ಮತ್ತು ಅದಕ್ಕೆ ತಗಲುವ ಸ್ಟಾಂಪ್ ಡ್ಯೂಟಿ ಬೆಲೆ ಇವುಗಳನ್ನು ಕಡಿತ ಮಾಡಿ ಉಳಿದ ಮೊತ್ತವನ್ನು ನೀಡುತ್ತದೆ.

ಪಾಲಿಸಿಯಲ್ಲಿ ಸೇರದೆ ಇರುವ ವಿಷಯ

ಪಾಲಿಸಿದಾರನು ಆತ್ಮಹತ್ಯೆ ಮಾಡಿಕೊಂಡಲ್ಲಿ ಪಾಲಿಸಿಯು ಮಾನ್ಯತೆ ಕಳೆದುಕೊಳ್ಳುತ್ತದೆ.

 • ಪಾಲಿಸಿದಾರನು ಪಾಲಿಸಿಯನ್ನು ಪಡೆದುಕೊಂಡ 1 ವರ್ಷದ ಒಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ, ಕಾರ್ಪೊರೇಷನ್ ಆ ಪಾಲಿಸಿಯ ಯಾವುದೇ ಕ್ಲೈಮ್ ಗಳಿಗೆ ಮಾನ್ಯತೆಯನ್ನು ನೀಡುವುದಿಲ್ಲ. ಆದರೆ ಪಾಲಿಸಿಯು ಅಸ್ತಿತ್ವದಲ್ಲಿದ್ದಲ್ಲಿ, ಪಾಲಿಸಿದಾರನು ಅದುವರೆವಿಗೂ ನೀಡಿರುವ ಪ್ರೀಮಿಯಂ ಗಳ ಒಟ್ಟಾರೆ ಮೊತ್ತದಲ್ಲಿ 80% ಹಣವನ್ನು ನೀಡಲಾಗುವುದು
 • ಪಾಲಿಸಿದಾರನು ಪಾಲಿಸಿಯನ್ನು ರಿವೈವಲ್ ಮಾಡಿದ  1 ವರ್ಷದ ಒಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ, ಕಾರ್ಪೊರೇಷನ್ ಆ ಪಾಲಿಸಿಯ ಯಾವುದೇ ಕ್ಲೈಮ್ ಗಳಿಗೆ ಮಾನ್ಯತೆಯನ್ನು ನೀಡುವುದಿಲ್ಲ. ಆದರೆ ಪಾಲಿಸಿದಾರನು ಅದುವರೆವಿಗೂ ನೀಡಿರುವ ಪ್ರೀಮಿಯಂ ಗಳ ಒಟ್ಟಾರೆ ಮೊತ್ತದಲ್ಲಿ 80% ಹಣವಾಗಲಿ, ಸರಂಡರ್ ಮೌಲ್ಯವಾಗಲಿ ಇವೆರಡರಲ್ಲಿ  ಯಾವುದು ಹೆಚ್ಚಿರುವುದೋ, ಆ ಮೊತ್ತವನ್ನು ನೀಡಲಾಗುತ್ತದೆ.