ಎಲ್ ಐ ಸಿ ಜೀವನ್ ಉತ್ಕರ್ಷ್ ಪ್ಲಾನ್
 • ಅತ್ಯುತ್ತಮ ಯೋಜನೆಗಳು
 • ಸುಲಭ ಹೋಲಿಕೆ
 • ತಕ್ಷಣದ ಖರೀದಿ
PX step

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಹುಟ್ಟಿದ ದಿನಾಂಕ
ಆದಾಯ
| ಲಿಂಗ

1

2

ಫೋನ್ ಸಂಖ್ಯೆ
ಹೆಸರು
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಎಲ್ ಐ ಸಿ ಜೀವನ್ ಉತ್ಕರ್ಷ್ ಯೋಜನೆಯು ರಕ್ಷಣೆ ಹಾಗೂ ಆರ್ಥಿಕ ಭದ್ರತೆಯನ್ನು ಒಟ್ಟಿಗೆ ನೀಡುವ ಯೋಜನೆ ಆಗಿದ್ದು, ಈ ಯೋಜನೆಯ ಅಡಿಯಲ್ಲಿ, ಪಾಲಿಸಿದಾರನು ಕೇವಲ ಒಂದು ಪ್ರೀಮಿಯಂ ಮಾತ್ರ ನೀಡಿ ಜೀವ ವಿಮಾ ಕವರೆಜ್ ಪಡೆಯುವ ಅವಕಾಶ ಇರುತ್ತದೆ.  ಇದರಲ್ಲಿ ವಿಮಾ ಕವರೆಜ್, ಪಾಲಿಸಿದಾರನು ನೀಡುವ ಪ್ರೀಮಿಯಂ ಮೊತ್ತದ 10 ಪಟ್ಟು ಇರುತ್ತದೆ. ಪಾಲಿಸಿದಾರನು ತನಗೆ ಬೇಕಾಗುವ ಸಮ್ ಅಶ್ಶುರ್ಡ್ ಮೊತ್ತವನ್ನು ಆರಿಸಿಕೊಳ್ಳಬಹುದು. ಅವನು ನೀಡಬೇಕಾಗಿರುವ ಪ್ರೀಮಿಯಂ ಮೊತ್ತವು ಸಮ್ ಅಶ್ಶುರ್ಡ್ ಮೊತ್ತ, ಮತ್ತು ಪಾಲಿಸಿಯನ್ನು ಪಡೆಯುವ ಸಮಯದಲ್ಲಿ ಅವನ ವಯಸ್ಸು ಇವೆರಡರ ಮೇಲೆ ಅವಲಂಬಿತ ಆಗಿರುತ್ತದೆ.

ಎಲ್ ಐ ಸಿ ಯ ಜೀವನ್ ಉತ್ಕರ್ಷ್ ಯೋಜನೆಯ ಒಂದು ವಿಶೇಷವೆಂದರೆ, ಪಾಲಿಸಿದಾರನು ಕೇವಲ ಒಂದು ಪ್ರೀಮಿಯಂ ಮೊತ್ತವನ್ನು ನೀಡಿ ತನಗೆ ಬೇಕಾದ ಸಮ್ ಅಶ್ಶುರ್ಡ್ ಮೊತ್ತಕ್ಕೆ ವಿಮೆ ಮಾಡಿಸಿಕೊಂಡು ನಿಶ್ಚಿಂತೆಯಿಂದ ಇರಬಹುದು. ಜೊತೆಗೆ, ಬೇರೆ ಯೋಜನೆಯ ಅಡಿಗಳಲ್ಲಿ ನಿಗದಿತ ಅವದಿಯ ಕಂತುಗಳನ್ನು ನೀದುವ ರೀತಿಯಲ್ಲಿ ಈ ಯೋಜನೆಯಲ್ಲಿ ನೀಡಬೇಕಾಗಿರುವುದಿಲ್ಲ. ಅಂದರೆ ಆ ಕಂತುಗಳಿಗೆ ಹಣ ಹೊಂದಿಸುವಿಕೆಗಾಗಿ ವಿಚಾರ ಮಾಡಬೇಕಾಗಿಲ್ಲ. ಇದು ಒಂದು ಸಿಂಗಲ್ ಪ್ರೀಮಿಯಂ ಎಂಡೋಮೆಂಟ್ ಪಾಲಿಸಿ ಆಗಿದ್ದು, ಪಾಲಿಸಿಯ ಅವದಿ ಮುಗಿದ ನಂತರ ಪಾಲಿಸಿದಾರನಿಗೆ ಅವನು ಕಟ್ಟಿರುವ ಪ್ರೀಮಿಯಂ ಹಣದ  10 ಪಟ್ಟು ಮೊತ್ತಕ್ಕೆ ಲಾಯಲ್ಟಿ ಅಡಿಷನ್ ಮೊತ್ತವನ್ನು ಸೇರಿಸಿ ನೀಡುವ ಯೋಜನೆ ಅಗಿರುತ್ತದೆ. ಎಲ್ ಐ ಸಿ ಜೀವನ್ ಉತ್ಕರ್ಷ್ ಪ್ಲಾನ್, ಒಂದು ನಾನ್-ಲಿಂಕ್ದ್, ಲಾಭವನ್ನು ಹಾಗೂ ರಕ್ಷಣೆ ಮತ್ತು ಉಳಿತಾಯವನ್ನು ನೀಡುವ ಯೋಜನೆ ಆಗಿರುತ್ತದೆ.

ಸಿಂಗಲ್ ಪ್ರೀಮಿಯಂ ವಿಮಾ ಯೋಜನೆಯ ಅಡಿಯಲ್ಲಿ ಪಾಲಿಸಿದಾರನು ಅವನ ಸಮ್ ಅಶ್ಶುರ್ಡ್ ಮೇಲೆ ಕಟ್ಟಬೇಕಾಗಿರುವ ಪ್ರೀಮಿಯಂ ಕೇವಲ ಒಂದು ಬಾರಿ ಮಾತ್ರ. ಈ ಯೋಜನೆಯ ಅವದಿ ಮುಗಿದ ಕೂಡಲೇ ಪಾಲಿಸಿದಾರನಿಗೆ ನಿಗದಿತ ಮೊತ್ತವು ಕೈ ಸೇರುತ್ತದೆ. ಇದರಲ್ಲಿ ಹೂಡಿರುವ ಹಣವು ಅತ್ಯಂತ ವೇಗವಾಗಿ ಲಾಭವನ್ನು  ಗಳಿಸುತ್ತದೆ. ಆದ್ದರಿಂದ, ಈ ಯೋಜನೆಯ ಮೂಲಕ ಪಾಲಿಸಿದಾರನು ಒಂದು ಹೆಚ್ಚಿನ ಮೊತ್ತವನ್ನು ಪಾಲಿಸಿಯ ಅವದಿ ಮುಗಿದ ನಂತರ ನಿರೀಕ್ಷಿಸಬಹುದು. ಪಾಲಿಸಿದಾರನ ಆಕಸ್ಮಿಕ ಮರಣವಾದರೂ ಕೂಡ, ಅವನ ನಾಮಿನಿಗೆ ಪಾಲಿಸಿಯ ಪ್ರಕಾರ ಬರಬೇಕಾದ ಮೊತ್ತವು ಕೈ ಸೇರುತ್ತದೆ.

ಎಲ್ ಐ ಸಿ ಜೀವನ್ ಉತ್ಕರ್ಷ್ – ಮಹತ್ವದ ವಿಷಯಗಳು

 • 12 ವರ್ಷದ ಟರ್ಮ್ ಇರುವಂತಹ  ಸಿಂಗಲ್ ಪ್ರೀಮಿಯಂ ಎಂಡೋಮೆಂಟ್ ಪ್ಲಾನ್

 • ಪಾಲಿಸಿಯ ಅವದಿಯ ಕೊನೆಗೆ ಲಾಯಲ್ಟಿ ಅಡಿಷನ್ ಬೆನಿಫಿಟ್ ಇರುತ್ತದೆ

 • ಆಕಸ್ಮಿಕ ಮರಣ ಹಾಗೂ ಅಂಗ ವೈಕಲ್ಯತೆಯ ರೈಡರ್ ಇಚ್ಚೆ ಪಟ್ಟಲ್ಲಿ ಸೇರಿಸಿಕೊಳ್ಳುವ ಅವಕಾಶ ಇರುತ್ತದೆ

 • ಇದು ಒಂದು ಕ್ಲೋಸ್ ಎಂಡೆಡ್ ಪ್ಲಾನ್

 • ಪಾಲಿಸಿ ಯೋಜನೆಯ ನಿಬಂದನೆಗಳಿಗೆ ಅನುಸಾರವಾಗಿ ಪಾಲಿಸಿಯನ್ನು ಅವದಿಯ ಒಳಗೆ ಯಾವಾಗ ಬೇಕಾದರೂ ಸರಂಡರ್ ಮಾಡುವ ಸೌಲಭ್ಯ ಇರುತ್ತದೆ

 • ಪಾಲಿಸಿಯನ್ನು ಪಡೆದ 3 ತಿಂಗಳಿನ ನಂತರ ಪಾಲಿಸಿದಾರನಿಗೆ ಪಾಲಿಸಿಯ ಮೇಲೆ 90% ಸಾಲ ಸಿಗುವ ಸೌಲಭ್ಯ ಇರುತ್ತದೆ

 • ಅತಿ ಹೆಚ್ಚುವರಿ ವಿಮಾ ಕವರೆಜ್ ಮಾಡಬಹುದು

 • ಮೆಚೂರಿಟೀ ಮೊತ್ತವು ಆದಾಯ ತೆರಿಗೆ ನೀಡಿಕೆಯಲ್ಲಿ ವಿನಾಯತಿ ಹೊಂದಿರುತ್ತದೆ

ಎಲ್ ಐ ಸಿ ಜೀವನ್ ಉತ್ಕರ್ಷ್ – ಬೆನೆಫಿಟ್ಸ್

 • ಮೆಚೂರಿಟೀ ಬೆನಿಫಿಟ್ - ಪಾಲಿಸಿಯು ಆವದಿಯನ್ನು ಮುಗಿಸಿದಲ್ಲಿ, ಮೆಚೂರಿಟೀ ಬೆನಿಫಿಟ್ ಎಂದು  ಸಮ್ ಅಶ್ಶುರ್ಡ್ ಹಾಗೂ ಲಾಯಲ್ಟಿ ಅಡಿಷನ್ ಮೊತ್ತವನ್ನು ಸೇರಿಸಿ ಪಾಲಿಸಿದಾರನಿಗೆ ನೀಡಲಾಗುವುದು. ಇದರಲ್ಲಿ ಸಮ್ ಅಶ್ಶುರ್ಡ್ ಮೊತ್ತವೆಂದರೆ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ.
 • ಡೆತ್  ಬೆನಿಫಿಟ್ - ಪಾಲಿಸಿದಾರನು ಪಾಲಿಸಿ ಪಡೆದ 5 ವರ್ಷದಲ್ಲಿ ಮರಣ ಹೊಂದಿದಲ್ಲಿ, ಅವನು ನೀಡಿರುವ ಸಿಂಗಲ್ ಪ್ರೀಮಿಯಂ ಮೊತ್ತವನ್ನು ಯಾವುದೇ ಕಡಿತವಿಲ್ಲದೆ ನೀಡಲಾಗುವುದು. ಆದರೆ ಪಾಲಿಸಿದಾರನು ಪಾಲಿಸಿಯನ್ನು ಪಡೆದ 5 ವರ್ಷದ ನಂತರೆ ಮರಣ ಹೊಂದಿದಲ್ಲಿ, ಸಮ್ ಅಶ್ಶುರ್ಡ್ (ಸಿಂಗಲ್ ಪ್ರೀಮಿಯಂ ಮೊತ್ತಕ್ಕೆ 10 ಪಟ್ಟು) ಮತ್ತು ಲಾಯಲ್ಟಿ ಅಡಿಷನ್ ಎರಡನ್ನೂ ಸೇರಿಸಿ  ನೀಡಲಾಗುವುದು.
 • ಲಾಯಲ್ಟಿ ಅಡಿಷನ್ - ಈ ಯೋಜನೆಯ ಪ್ರಕಾರ, ಪಾಲಿಸಿದಾರನಿಗೆ ಲಾಯಲ್ಟಿ ಅಡಿಷನ್ ಗೆ ಅರ್ಹತೆ ಇರುತ್ತದೆ. ಆದರೆ ಪಾಲಿಸಿಯು  ಲಾಯಲ್ಟಿ ಅಡಿಷನ್ ಮೊತ್ತಕ್ಕೆ ಅರ್ಹತೆ ಪಡೆಯುವುದು ಈ ಕೆಳ ಕಂಡ ನಿಯಮಕ್ಕೆ ಅನುಸರಿಸಿ ಮಾತ್ರ
 • ಪಾಲಿಸಿಯು 5 ವರ್ಷ ಮುಗಿಸಿರಬೇಕು
 • ಪಾಲಿಸಿದಾರನು 5 ವರ್ಷದ ನಂತರ ಹಾಗೂ ಪಾಲಿಸಿಯ ಮೆಚೂರಿಟೀ ಟರ್ಮ್ ಒಳಗೆ ಮರಣ ಹೊಂದಿದಲ್ಲಿ
 • ಪಾಲಿಸಿಯು ತನ್ನ ಪೂರ್ಣ ಟರ್ಮ್ ಅನ್ನು ಮುಗಿಸಿದಲ್ಲಿ
 • ಲಾಯಲ್ಟಿ ಅಡಿಷನ್ ಮೊತ್ತವನ್ನು, ಸ್ಪೆಷಲ್ ಸರಂಡರ್ ಮೌಲ್ಯವನ್ನು ಲೆಕ್ಕ ಹಾಕುವಾಗ ಸೇರಿಸಿಕೊಳ್ಳಲಾಗುವುದು. ಅಂದರೆ ಪಾಲಿಸಿಯನ್ನು ಪಾಲಿಸಿ ಟರ್ಮ್ ನ ಅವದಿಯೊಳಗೆ ಸರಂಡರ್ ಮಾಡಿದ ಪಕ್ಷದಲ್ಲಿ (ಪಾಲಿಸಿಯು 5 ವರ್ಷವನ್ನು ಮುಗಿಸಿದ ನಂತರ) ಈ ಹೆಚ್ಚುವರಿ ಮೊತ್ತವನ್ನು ನೀಡಲಾಗುವುದು.
 • ಆಪ್ಷನಲ್ ಬೆನೆಫಿಟ್ಸ್ - ಎಲ್ ಐ ಸಿ ಯವರು ನೀಡುವ ಆಪ್ಷನಲ್ (ಅಂದರೆ ಸ್ವಇಚ್ಚೆಯಿಂದ) ಸೇರಿಸಿದ ರೈಡರ್ಸ್ ಗಳ ಬೆನೆಫಿಟ್ಸ್ ಗಳಾದ ಆಕಸ್ಮಿಕ ಮರಣ ಹಾಗೂ ಅಂಗ ವೈಕಲ್ಯ (ಡಿಸ್ಎಬಿಲಿಟಿ) ರೈಡರ್ಗಳು ಈ ಪ್ಲಾನ್ ನಲ್ಲಿ ಲಭ್ಯವಿರುತ್ತದೆ. ಅವುಗಳನ್ನು ಹೆಚ್ಚುವರಿ ಹಣವನ್ನು ನೀಡಿ ಪಡೆದುಕೊಳ್ಳಬೇಕಾಗಿರುತ್ತದೆ. ಆದರೆ ಈ ರೈಡರ್ ಗಳು ಪಾಲಿಸಿಯನ್ನು ತೆಗೆದುಕೊಳ್ಳುವಾಗಲೆ ಅದರಲ್ಲಿ ಸೇರಿಸಬೇಕಾಗುತ್ತದೆ. ಈ ರೈಡರ್ ಪ್ರಕಾರ, ಯಾವುದೇ ಪಾಲಿಸಿಯು ಪಾಲಿಸಿದಾರನ ಮರಣ ಆಗುವ ಸಮಯದಲ್ಲಿ ಅಸ್ತಿತ್ವದಲ್ಲಿದ್ದಲ್ಲಿ, ಮರಣದ ಬೆನಿಫಿಟ್ ಆಗಿ ದೊರೆಯುತ್ತದೆ. ಅದರ ಪ್ರಕಾರ, ಮರಣದ ನಂತರ ನೀಡುವ ಸಮ್ ಅಶ್ಶುರ್ಡ್ ಮೊತ್ತಕ್ಕೆ ಸರಿ ಸಮನಾಗಿ ಮೊತ್ತವನ್ನು ಸೇರಿಸಿ ನೀಡಲಾಗುತ್ತದೆ, ಅದೇ ಅಪಘಾತದಿಂದ, ಪಾಲಿಸಿದಾರನು ಶಾಶ್ವತವಾಗಿ ಅಂಗ ವೈಕಲ್ಯವನ್ನು ಹೊಂದಿದಲ್ಲಿ, ಆಕಸ್ಮಿಕ ಅಂಗ ವೈಕಲ್ಯ ರೈಡರ್ ಪ್ರಕಾರ ನೀಡಬೇಕಾಗಿರುವ ಮೊತ್ತವನ್ನು 10 ವರ್ಷಗಳ ಕಂತುಗಳಲ್ಲಿ ನೀಡಲಾಗುವುದು. ಒಂದು ವೇಳೆ ಪಾಲಿಸಿದಾರನು ಈ 10 ವರ್ಷದ ಒಳಗೆ ಮರಣ ಹೊಂದಿದಲ್ಲಿ, ಪಾಲಿಸಿಯು ಒಂದು ಕ್ಲೈಮ್ ಪಾಲಿಸಿಯಾಗುತ್ತದೆ. ಆಗ ಈ ಅಂಗ ವೈಕಲ್ಯ ಬೆನಿಫಿಟ್ ಮೊತ್ತವನ್ನು (ಅದುವರೆವಿಗೂ ನೀಡಿರುವ ಕಂತುಗಳ ಹಣವ್ನ್ನು ಹೊರತು ಪಡಿಸಿ) ಕ್ಲೈಮ್ ಮೊತ್ತದ ಜೊತೆಗೆ ಸೇರಿಸಿ  ನೀಡಲಾಗುವುದು.

ಎಲ್ ಐ ಸಿ ಜೀವನ್ ಉತ್ಕರ್ಷ್ – ಪಾಲಿಸಿಗೆ ನೀಡಲಾಗುವ ಕೆಲವು ರಿಯಾಯತಿಗಳು

ಎಲ್ ಐ ಸಿ ಜೀವನ್ ಉತ್ಕರ್ಶ್ ಪಾಲಿಸಿಯ ಅಡಿಯಲ್ಲಿ. ಸಮ್ ಅಶ್ಶುರ್ಡ್ ಮೊತ್ತದ ಮೇಲೆ ಈ ಕೆಳ ಕಂಡ ರೀತಿಯಲ್ಲಿ ರಿಯಾಯತಿ ದೊರೆಯುತ್ತದೆ.

ಹೈ ಬೇಸಿಕ್ ಸಮ್ ಅಶ್ಶುರ್ಡ್ ರಿಬೆಟ್

ಪಾಲಿಸಿಯ ಅಡಿಯಲ್ಲಿ ತೆಗೆದುಕೊಂಡ ಸಮ್ ಅಶ್ಶುರ್ಡ್ ಮೊತ್ತ

ಪ್ರೀಮಿಯಂ ಗಳಲ್ಲಿ ದೊರಕುವ ರಿಯಾಯತಿ (ಪ್ರತಿ ರೂ 1000 ಕ್ಕೆ)

ರೂ 75,000 ದಿಂದ ರೂ 1,45,000 ದ ವರೆಗೆ

ರಿಯಾಯತಿ ಇಲ್ಲ

ರೂ 1,50,000 ದಿಂದ ರೂ 2,95,000 ದ ವರೆಗೆ

ರೂ 15.00

ರೂ 3,00,000 ದಿಂದ ರೂ 4,95,000 ದ ವರೆಗೆ

ರೂ 20.00

ರೂ 5,00,000 ದಿಂದ ಮೇಲ್ಪಟ್ಟು

ರೂ 25.00

ಎಲ್ ಐ ಸಿ ಜೀವನ್ ಉತ್ಕರ್ಷ್ – ಅರ್ಹತೆ

ಪಾಲಿಸಿ ಪಡೆಯಲು ಬೇಕಾದ ಕನಿಷ್ಠ ವಯಸ್ಸು

6 ವರ್ಷಗಳು ಮುಗಿದಿರಬೇಕು

ಪಾಲಿಸಿ ಪಡೆಯಲು ಬೇಕಾದ ಗರಿಷ್ಠ ವಯಸ್ಸು

47 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ)

ಕನಿಷ್ಠ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ

ರೂ 75,000

ಗರಿಷ್ಠ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ

ಯಾವುದೇ ಮಿತಿಯಿಲ್ಲ

ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತವು ಈ ಕೆಳಕಂಡ ಮಲ್ಟಿಪಲ್ಸ್ ಗಳಲ್ಲಿ ಇರಬೇಕು

 • ಬೇಸಿಕ್ ಅಶ್ಶುರ್ಡ್ ಮೊತ್ತವು ರೂ 3,00,000 ಕ್ಕಿಂತ ಕಡಿಮೆ ಇದ್ದಲ್ಲಿ ರೂ 5000 ದ ಮಲ್ಟಿಪಲ್ಸ್ ಗಳಲ್ಲಿ
 • ಬೇಸಿಕ್ ಅಶ್ಶುರ್ಡ್ ಮೊತ್ತವು ರೂ 3,00,000 ಕ್ಕಿಂತ ಹೆಚ್ಚಿಗೆ ಇದ್ದಲ್ಲಿ ರೂ 20000 ದ ಮಲ್ಟಿಪಲ್ಸ್ ಗಳಲ್ಲಿ

ಪಾಲಿಸಿಯ ಅವದಿ

12 ವರ್ಷಗಳು

ಪ್ರೀಮಿಯಂ  ಪಾವತಿ ಮಾಡುವ ರೀತಿ

ಒಂದು ಪ್ರೀಮಿಯಂ ಮಾತ್ರ

ಎಲ್ ಐ ಸಿ ಜೀವನ್ ಉತ್ಕರ್ಷ್ – ಹೆಚ್ಚುವರಿ ವಿಶೇಷಗಳು

ಸಾಲದ ಸೌಲಭ್ಯ

ಈ ಪಾಲಿಸಿಯ ಮೇಲೆ ಕಂಪನಿಯ ನಿಯಾಮಕ್ಕೆ ಅನುಗುಣವಾಗಿಯೇ ಸಾಲದ ಸೌಲಭ್ಯ ಇರುತ್ತದೆ

ಫ್ರೀ ಲುಕ್ ಪೀರಿಯಡ್

ಈ ಪ್ಲಾನ್ ಪ್ರಕಾರ, ಪಾಲಿಸಿದಾರನಿಗೆ 15 ದಿವಸದ ಫ್ರೀ ಲುಕ್ ಪೀರಿಯಡ್ ದೊರೆಯುತ್ತದೆ. ಪಾಲಿಸಿದಾರನಿಗೆ ಪಾಲಿಸಿಯಲ್ಲಿನ ನಿಯಮಗಳು ಹಾಗೂ ನಿಬಂದನೆಗಳು ಸರಿ ಹೊಂದದಿದ್ದಲ್ಲಿ, ಅವನು ಪಾಲಿಸಿಯನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರ ಎಲ್ ಐ ಸಿ ಗೆ ಹಿಂದಿರುಗಿಸಬಹುದು. ಆದರೆ, ಪಾಲಿಸಿದಾರನು ಪಾಲಿಸಿಯನ್ನು ಹಿಂದಿರುಗಿಸುವಿಕೆಯ ಬಗ್ಗೆ ಕಾರಣವನ್ನು ನೀಡಬೇಕು.

ಪಾಲಿಸಿಯು ವೆಸ್ಟಿಂಗ್ ಆಗುವ ದಿನಾಂಕ

ವೆಸ್ಟಿಂಗ್ ದಿನಾಂಕವು ಪಾಲಿಸಿದಾರನು 18 ವರ್ಷದ ಒಳಗಿದ್ದಲ್ಲಿ ಮಾತ್ರ ಪಾಲಿಸಿಯನ್ನು ಪಡೆದ ದಿನಾಂಕದಿಂದ ಅನ್ವಯಿಸುತ್ತದೆ

ಆತ್ಮಹತ್ಯೆಯ ಕ್ಲಾಸ್

ಈ ಪಾಲಿಸಿಯನ್ನು ತೆಗೆದುಕೊಂಡ ಎರಡು ತಿಂಗಳುಗಳ ಒಳಗೆ ಪಾಲಿಸಿದಾರನು ಆತ್ಮಹತ್ಯೆ ಮಾಡಿಕೊಂಡಲ್ಲಿ. ನಾಮಿನಿಗೆ ಪಾಲಿಸಿದಾರನು ಅದುವರೆಗೆ ನೀಡಿರುವ ಪ್ರೀಮಿಯಂ ಮೊತ್ತದ 90 % ಮೊತ್ತವನ್ನು ನೀಡಲಾಗುವುದು. ಇದರೊಳಗೆ ಯಾವುದೇ ತರಹದ ಕಡಿತಗಳನ್ನು ಮಾಡುವುದಿಲ್ಲ.

ಅನ್ವಯವಾಗುವ ತೆರಿಗೆ

ಕಾನೂನಿನ ಪ್ರಕಾರ ಅನ್ವಯವಾಗುವ ತೆರಿಗೆ ವಿದಿಸಲಾಗುವುದು

ಬ್ಯಾಕ್ ಡೇಟಿಂಗ್

ಬ್ಯಾಕ್ ಡೇಟಿಂಗ್ ಅದೇ ವರ್ಷಕ್ಕೆ ಅನ್ವಯವಾಗುವುದು.

ಎಲ್ ಐ ಸಿ ಜೀವನ್ ಉತ್ಕರ್ಷ್ – ಸರಂಡರ್ ಮೌಲ್ಯ

ಪಾಲಿಸಿಯ ಆವದಿಯ ಒಳಗೆ ಪಾಲಿಸಿಯನ್ನು ಯಾವಾಗ ಬೇಕಾದರೂ ಸರಂಡರ್ ಮಾಡುವ ಅವಕಾಶ ಇರುತ್ತದೆ. ಗ್ಯಾರಂಟಿಡ್ ಸರಂಡರ್ ಮೌಲ್ಯವು ಈ ಕೆಳಕಂಡ ರೀತಿಯಲ್ಲಿ ಇರುತ್ತದೆ

 • ಮೊದಲನೇ ವರ್ಷದಲ್ಲಿ ಸರಂಡರ್ ಮಾಡಿದಲ್ಲಿ – ನೀಡಿರುವ ಸಿಂಗಲ್ ಪ್ರೀಮಿಯಂ ಮೊತ್ತದೆ 70 % ರಷ್ಟು
 • ಮೊದಲನೆಯ ವರ್ಷವನ್ನು ಕಳೆದ ಮೇಲೆ ಮುಂದಿನ ವರ್ಷಗಳಲ್ಲಿ - ನೀಡಿರುವ ಸಿಂಗಲ್ ಪ್ರೀಮಿಯಂ ಮೊತ್ತದೆ 90 % ರಷ್ಟು

ಮೇಲ್ಕಾಣಿಸಿದ ಸಿಂಗಲ್ ಪ್ರೀಮಿಯಂ ಮೊತ್ತದಲ್ಲಿ, ಅನ್ವಯವಾಗುವ ತೆರಿಗೆ ಮತ್ತು ಅಂಡರ್ ರೈಟಿಂಗ್ ಮೊತ್ತ (ಇದ್ದಲ್ಲಿ) ಹಾಗೂ ರೈಡರ್ ಮೊತ್ತ ಇವುಗಳನ್ನು ಕಳೆದ ನಂತರ ಉಳಿಯುವ ಮೊತ್ತವು ಅನ್ವಯವಾಗುತ್ತದೆ.

ಪಾಲಿಸಿಯನ್ನು ಸರಂಡರ್ ಮಾಡಿದ ದಿನದಂದು ಸೇರಿರಬಹುದಾದ ಸ್ಪೆಷಲ್ ಸರಂಡರ್ ಮೌಲ್ಯವನ್ನು ಕಂಪನಿಯು ನೀಡುತ್ತದೆ. ಸಾಮಾನ್ಯವಾಗಿ, ಈ ಮೊತ್ತವು . ಗ್ಯಾರಂಟಿಡ್ ಸರಂಡರ್ ಮೊತ್ತಕ್ಕಿಂತ ಜಾಸ್ತಿ ಇರುತ್ತದೆ. ಈ ಸ್ಪೆಷಲ್ ಸರಂಡರ್ ಮೌಲ್ಯವು ಕಾಲ ಕಾಲಕ್ಕೆ ಬದಲಾವಣೆ ಆಗುತ್ತಿದ್ದು, ಅದು IRDAI ರವರು ಅನುಮೋದಿಸಿರುವ  ಮೌಲ್ಯ ಆಗಿರುತ್ತದೆ ಅದ್ದರಿಂದ ಪಾಲಿಸಿದಾರನು ಈ ಬಗ್ಗೆ ಸ್ವಲ್ಪ ಸಂಶೋದನೆ ಮಾಡಿ ನಂತರ ಪಾಲಿಸಿಯನ್ನು ಸರಂಡರ್ ಮಾಡುವುದು ಒಳ್ಳೆಯದು.

ಪಾಲಿಸಿಯ ಮೇಲೆ ಸಾಲ ಸೌಲಭ್ಯ

ಈ ಪಾಲಿಸಿಯ ಮೇಲೆ ಸಾಲ ಸೌಲಭ್ಯ ಇರುತ್ತದೆ. ಆದರೆ ಪಾಲಿಸಿಯು 3 ತಿಂಗಳಿನಿಂದ ಆಸ್ತಿತ್ವದಲ್ಲಿ ಇರಬೇಕು. ಅಥವಾ ಫ್ರೀ ಲುಕ್ ಪೀರಿಯಡ್ ಮುಗಿದ ನಂತರ ಪಾಲಿಸಿಗೆ 3 ತಿಂಗಳುಗಳು ಆಗಿರಬೇಕು. ಈ ಎರಡರಲ್ಲಿ ಯಾವುದು ನಂತರವೋ ಆ ದಿನವನ್ನು ಪರಿಗಣಿಸಲಾಗುವುದು. ಇದು ಕೂಡ ಕಂಪನಿಯ ನಿಯಮಕ್ಕೆ ಒಳ ಪಟ್ಟಿರುತ್ತದೆ.

ಪಾಲಿಸಿಯ ಮೇಲಿನ ಸಾಲಕ್ಕೆ  ಹೇರುವ ಬಡ್ಡಿ ದರವು ನಿಯತಕಾಲಿಕವಾಗಿ ಬದಲಾವಣೆ ಆಗುತ್ತಿರುತ್ತದೆ. 2017-18 ರಲ್ಲಿ ಬಡ್ಡಿ ದರವು 10 % ವಾರ್ಷಿಕ ಆಗಿದ್ದು ಅರ್ದ ವರ್ಷಕ್ಕೊಮ್ಮೆ  ಕಾಂಪೌಂಡಿಂಗ್ ಆಗುತ್ತದೆ. ಸಾಲವನ್ನು ನೀಡುವ ಮೊತ್ತವು ಸರಂಡರ್ ಮೌಲ್ಯದ 90 % ಇರುತ್ತದೆ.

ಪಾಲಿಸಿಯ ಅವದಿ  ಮುಗಿಯುವ ಸಮಯದಲ್ಲಿ ಅಥವಾ ಪಾಲಿಸಿಯನ್ನು ಸರಂಡರ್ ಮಾಡುವ ಸಮಯದಲ್ಲಿ, ಯಾವುದೇ ಸಾಲದ ಬಾಬ್ತು ಹಣವು ಬಾಕಿ ಉಳಿದಿದ್ದಲ್ಲಿ (ಅನ್ವಯವಾಗುವ ಬಡ್ಡಿಯನ್ನು ಸೇರಿ) , ಅದನ್ನು ಕ್ಲೈಮ್ ಮೊತ್ತದಿಂದ ಅಥವಾ ಸರಂಡರ್ ಮೊತ್ತದಿಂದ ಕಡಿತಗೊಳಿಸಿ  ಉಳಿದ ಕ್ಲೈಮ್ ಮೊತ್ತವನ್ನು ಅಥವಾ ಸರಂಡರ್ ಮೊತ್ತವನ್ನು ನೀಡಲಾಗುವುದು.

ಎಲ್ ಐ ಸಿ ಜೀವನ್ ಉತ್ಕರ್ಷ್ – ಅನ್ವಯವಾಗುವ ತೆರಿಗೆ

ಈ ತರಹದ ವಿಮಾ  ಯೋಜನೆಗಳಿಗೆ ಶಾಸನ ಬದ್ದವಾಗಿ ಅನ್ವಯ ಆಗುವಂತೆ ಭಾರತ ಸರ್ಕಾರವು ಅಥವಾ ಇನ್ನು ಯಾವುದೇ ಸಂವಿದಾನ  ಬದ್ದವಾದ ಪ್ರಾದಿಕಾರವು ಕಾಲ ಕಾಲಕ್ಕೆ ವಿದಿಸುವ ತೆರಿಗೆಯು ಅನ್ವಯವಾಗುತ್ತದೆ.

ಪಾಲಿಸಿದಾರರು ತಾನು ನೀಡುತ್ತಿರುವ ಪ್ರೀಮಿಯಂ ಗಳಿಗೆ ಕಾಲ ಕಾಲಕ್ಕೆ ಅನ್ವಯವಾಗುವ ತೆರಿಗೆಗಳು ಹೆಚ್ಚಿದಲ್ಲಿ ಅದನ್ನು ನೀಡಬೇಕಾಗುತ್ತದೆ. ಈ ತೆರಿಗೆಯು ಆ ದಿವಸಕ್ಕೆ ಅನ್ವಯವಾಗುವ ತೆರಿಗೆ ಆಗಿದ್ದು, ಅದನ್ನು ಪಾವತಿಸಬೇಕಾಗುತ್ತದೆ.

ಎಲ್ ಐ ಸಿ ಜೀವನ್ ಉತ್ಕರ್ಷ್ – ಫ್ರೀ ಲುಕ್ ಪೀರಿಯಡ್

ಈ ಪಾಲಿಸಿಯನ್ನು ಪಡೆದವರಿಗೆ 15 ದಿವಸದ ಫ್ರೀ ಲುಕ್ ಪೀರಿಯಡ್ ಲಭ್ಯತೆ ಇರುತ್ತದೆ. ಈ ಫ್ರೀ ಲುಕ್ ಪೀರಿಯಡ್ ನಲ್ಲಿ ಪಾಲಿಸಿದಾರನಿಗೆ ಪಾಲಿಸಿಯ  ನಿಯಮಗಳು ಹಾಗೂ ನಿಬಂದನೆಗಳು ಒಪ್ಪಿಗೆ ಆಗದಿದ್ದಲ್ಲಿ, ಪಾಲಿಸಿಯನ್ನು 15 ದಿವಸದ ಒಳಗೆ ಹಿಂದಿರುಗಿಸಬಹುದು. ಪಾಲಿಸಿಯನ್ನು ಹಿಂದಿರುಗಿಸುವಾಗ, ಅದಕ್ಕೆ ತಕ್ಕ ಕಾರಣವನ್ನು ಪಾಲಿಸಿದಾರನು ನೀಡಬೇಕಾಗುತ್ತದೆ. ಪಾಲಿಸಿಯು ಹಿಂದಿರುಗಿದ ನಂತರ ಎಲ್ ಐ ಸಿ ಯು ಅದನ್ನು ರದ್ದು ಮಾಡಿ ಪಾಲಿಸಿದಾರನು ನೀಡಿರುವ ಪ್ರೀಮಿಯಂ ಮೊತ್ತದಲ್ಲಿ, ರಿಸ್ಕ್ ಪ್ರೀಮಿಯಂ ಮೊತ್ತ (ಬೇಸ್ ಪ್ಲಾನ್ ಹಾಗೂ ರೈಡರ್) ಮತ್ತು ಅದಕ್ಕೆ ತಗಲುವ ಸ್ಟಾಂಪ್ ಡ್ಯೂಟಿ ಬೆಲೆ, ವೈದ್ಯಕೀಯ ಪರೀಕ್ಷೆಯನ್ನು ಮಾಡಿಸಿದ್ದಲ್ಲಿ, ಅದಕ್ಕೆ ಹಾಗೂ ರಿಪೋರ್ಟ್ ಗೆ ತಗಲಿರುವ ವೆಚ್ಚ  ಇವುಗಳನ್ನು ಕಡಿತ ಮಾಡಿ ಉಳಿದ ಮೊತ್ತವನ್ನು ನೀಡುತ್ತದೆ,

ಎಲ್ ಐ ಸಿ ಜೀವನ್ ಉತ್ಕರ್ಷ್ – ಸೆಟಲ್ಮೆಂಟ್ ಆಪ್ಶನ್

ಮೂಲಭೂತವಾಗಿ ಪಾಲಿಸಿದಾರನು ಕ್ಲೈಮ್ ಮೊತ್ತವನ್ನು ಒಟ್ಟಾರೆ ಮೊತ್ತವಾಗಿ ಅವದಿ ಮುಗಿದ ನಂತರ ತೆಗೆದುಕೊಳ್ಳದೆ 5 ವರ್ಷದಲ್ಲಿ ಅಥವಾ 10 ವರ್ಷದಲ್ಲಿ ಅಥವಾ 15 ವರ್ಷದಲ್ಲಿ  ಸಮಾನ ಕಂತುಗಳಾಗಿ ಪಡೆಯುವ ಮಾದರಿ ಆಗಿದ್ದು ಅದನ್ನು ಸೆಟಲ್ಮೆಂಟ್ ಆಪ್ಶನ್ ಎಂದು ಕರೆಯಬಹುದು. ಈ ಆಪ್ಶನ್ ನಲ್ಲಿ, ಡೆತ್ / ಮೆಚೂರಿಟೀ ಮೊತ್ತವನ್ನು ಪೂರ್ತಿಯಾಗಿ ಅಥವಾ ಅದರ ಒಂದು ಬಾಗವನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದು. ಪಾಲಿಸಿದಾರನು ಆಯ್ಕೆ ಮಾಡಿರುವ ಕ್ಲೈಮ್ ಮೊತ್ತವನ್ನು ಪೂರ್ತಿಯಾಗಿ ಅಥವಾ ಪರ್ಸೆಂಟೆಜ್ ಆಗಿಯೂ ಕೂಡ ಪಡೆದುಕೊಳ್ಳಬಹುದು. ಅದೇ ರೀತಿ ಕಂತುಗಳನ್ನು ನೀಡಲು ಮುಂಚೆಯೇ ಹಣವನ್ನು ಪಾವತಿಸಿದ್ದು ಅದು ವರ್ಷಕ್ಕೊಮ್ಮೆ, ಅಥವಾ ಅರ್ದ ಅವ್ರ್ಶಕ್ಕೊಮ್ಮೆ, ಅಥವಾ 3 ತಿಂಗಳಿಗೊಮ್ಮೆ, ಅಥವಾ ತಿಂಗಳಿಗೊಮ್ಮೆ ಪಾಲಿಸಿದಾರನು ಆಯ್ಕೆ ಮಾಡಿ ಕೊಂಡಿರುವೆ ರೀತಿಯಲ್ಲಿ ನೀಡಲಾಗುವುದು.

ಇದು  ಪಾಲಿಸಿದಾರನು 18 ವರ್ಷ ಅಥವಾ ಅದಕ್ಕೆ ಮೇಲ್ಪಟ್ಟು ಆಗಿದ್ದಲ್ಲಿ ಮಾತ್ರ ಲಭ್ಯ. ಪಾಲೀಸಿದಾರನು ಒಂದು ಬಾರಿ ಕಂತುಗಳಿಗೆ ಆಯ್ಕೆ ಸೂಚಿಸಿದ ಮೇಲೆ, ತನಗೆ ಬೇಕೆನಿಸಿದಾಗ ಬದಲಿಸುವ ಅವಕಾಶ ಇರುತ್ತದೆ. ಅಂದರೆ, ಬದಲಾವಣೆ ಮಾಡಿದ ಸಮಯದಲ್ಲಿ ಉಳಿದಿರುವ ಕಂತುಗಳನ್ನು ಒಟ್ಟಿಗೆ ಒಂದು ಮೊತ್ತವಾಗಿ ತೆಗೆದುಕೊಳ್ಳಬಹುದು.

ಪಾಲಿಸಿದಾರನು ಕಂತುಗಳ ಆಯ್ಕೆ ಮಾಡಿದ್ದು, ಆ ಆವದಿಯ ಮದ್ಯದಲ್ಲಿ ಮರಣ ಹೊಂದಿದಲ್ಲಿ, ಕ್ಲೈಮ್ ಮೊತ್ತವನ್ನು ಪಾಲಿಸಿದಾರನು ಸೂಚಿಸಿರುವ ಆಪ್ಶನ್ ರೀತಿಯಲ್ಲಿ ನೀಡಲಾಗುವುದು.

ಎಲ್ ಐ ಸಿ ಜೀವನ್ ಉತ್ಕರ್ಷ್ – ಸೇರಿಲ್ಲದೆ ಇರುವ ವಿಷಯ

ಈ ಯೋಜನೆಗೆ ಅನ್ವಯವಾಗುವ ನಿಯಮದ ರೀತ್ಯ, ಪಾಲಿಸಿದಾರನು ಪಾಲಿಸಿ ಪಡೆದ ದಿವಸದಿಂದ 1 ವರ್ಷದ ಒಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ, ಪಾಲಿಸಿಗೆ ಲಭ್ಯವಿರುವ ಯಾವುದೇ  ಬೆನಿಫಿಟ್ ಗಳು ಲಭ್ಯವಿರುವುದಿಲ್ಲ. ಅವನು ನಮೂದಿಸಿರುವ ನಾಮಿನಿಗೆ ಈ ಕೆಳ ಕಂಡ ಎರಡರಲ್ಲಿ ಹೆಚ್ಚು ಮೊತ್ತವನ್ನು ನೀಡಲಾಗುವುದು.

 • ಪಾಲಿಸಿದಾರನು ನೀಡಿರುವ ಸಿಂಗಲ್ ಪ್ರೀಮಿಯಂ ಮೊತ್ತದ  90 % ಮೌಲ್ಯ
 • ಸರಂಡರ್ ಮೌಲ್ಯ

ಇದು ಬಿಟ್ಟು ಈ ಪಾಲಿಸಿಯ ಅಡಿಯಲ್ಲಿ ಬೇರೆ ಯಾವುದೇ ಕ್ಲೈಮ್ ಸ್ವೀಕರಿಸುವುದಿಲ್ಲ.

ಈ ಕ್ಲಾಸ್ ಪಾಲಿಸಿದಾರನು ಪಾಲಿಸಿ ಮಾಡುವ ಸಮಯದಲ್ಲಿ 8 ವರ್ಷಕ್ಕಿಂತ ಕೆಳಗಿದ್ದಲ್ಲಿ ಅನ್ವಯ ಆಗುವುದಿಲ್ಲ. ಆದರೆ ಆತ್ಮಹತ್ಯೆ ಮಾಡಿಕೊಂಡಲ್ಲಿ, ಅವನು ನೀಡಿರುವ ಸಿಂಗಲ್ ಪ್ರೀಮಿಯಂ ಮೊತ್ತವನ್ನು ಯಾವುದೇ ಬಡ್ಡಿ ಸೇರಿಸದೆ ನೀಡಲಾಗುವುದು.

- / 5 ( Total Rating)