ಎಲ್ಐಸಿ ಕೋಮಲ್ ಜೀವನ್ ಪ್ಲಾನ್
  • ಅತ್ಯುತ್ತಮ ಯೋಜನೆಗಳು
  • ಸುಲಭ ಹೋಲಿಕೆ
  • ತಕ್ಷಣದ ಖರೀದಿ
PX step

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಫೋನ್ ಸಂಖ್ಯೆ
ಹೆಸರು
ಹುಟ್ಟಿದ ದಿನಾಂಕ

1

2

ಆದಾಯ
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಒಂದು ನವಜಾತ ಶಿಶುವು ಯಾವುದೇ ಕುಟುಂಬದಲ್ಲಿ ಜನಿಸಿದಲ್ಲಿ ಅವರಿಗೆ ಅದರಿಂದ ಅತ್ಯಂತ ಸಂತೋಷವು  ಹಾಗೂ ಆದ್ರ ಜೊತೆಯಲ್ಲಿಯೇ, ಆ ಮಗುವಿನ ತಂದೆ ತಾಯಿಗಳಿಗೆ (ಪೋಷಕರಿಗೆ) ಅದರ ಮುಂದಿನ ಭವಿಷ್ಯದ ಬಗ್ಗೆ ಒಂದು ರೀತಿಯ ಆತಂಕವೂ ಇರುತ್ತದೆ. ಆಗ ತಾನೇ ಅವರ ಕುಟುಂಬಕ್ಕೆ ಕಾಲಿಟ್ಟಿರುವ ಹೊಸ ಜೀವದ ಮುಂದಿನ ವಿದ್ಯಾಭ್ಯಾಸ, ಮದುವೆ ಮತ್ತು ಅದರ ಆರೋಗ್ಯದ ಬಗ್ಗೆ ಅನೇಕ ಜವಾಬ್ದಾರಿ ಇರುತ್ತದೆ. ನೀವು ನಿಮ್ಮ ಮಗುವಿನ ವಿದ್ಯಾಭ್ಯಾಸ ಮತ್ತು ಮದುವೆ ಬಗ್ಗೆ  ಉಳಿತಾಯ ಮಾಡುವುದಕ್ಕೆ ಶುರು ಮಾಡಿದರೂ ಸಹಾ ಆ ಮಗುವಿನ ಮುಂದಿನ ಜೀವನದಲ್ಲಿನ ಅನಿಶ್ಚಿತತೆಗಳನ್ನು ರಕ್ಷಿಸಲು ಪ್ಲಾನ್ ಮಾಡಬೇಕಾಗುತ್ತದೆ.ಎಲ್ ಐ ಸಿ ಯು ಸಂಪೂರ್ಣವಾಗಿ ಹೊಸ ಹೊಸ ಯೋಜನೆಗಳನ್ನು ಸಾರ್ವಜನಿಕರ ಅನುಕೂಲಕ್ಕೆ ಹಾಗೂ ಅವಶ್ಯಕತೆಗೆ ತಕ್ಕಂತೆ ನೀಡುತ್ತಾ ಬಂದಿದೆ. ಆ ರೀತಿಯ ಸಾರ್ವಜನಿಕರಿಗೆ ಅಂಕೂಲವಾಗುವಂತಹ ಇನ್ನೊಂದು ಯೋಜನೆಯೆಂದರೆ ಎಲ್ ಐ ಸಿ ಕೋಮಲ್ ಜೀವನ್ ಪ್ಲಾನ್. ಇದು ಒಂದು ಮಕ್ಕಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ರೂಪಿಸಿರುವಂತಹ ಒಂದು ಯೋಜನೆ ಆಗಿರುತ್ತದೆ. ಅದು ಅವರ 0 ವರ್ಷದಿಂದ 10 ನೇ ವಯಸ್ಸಿನವರೆಗೂ ಪಡೆಯಬಹುದು.

ಎಲ್ ಐ ಸಿ ಕೋಮಲ್ ಜೀವನ್ ಪ್ಲಾನ್ ನಿಮಗೆ ಪಾಲಿಸಿಯು ಮೆಚೂರಿಟೀ ಆಗುವ ಸಮಯಕ್ಕೆ ಅಥವಾ ನಿಮ್ಮ ಮಗುವು 18 ವರ್ಷಗಳನ್ನು ಮುಗಿಸಿದಲ್ಲಿ (ಇವೆರಡರಲ್ಲಿ ಯಾವುದು ಮೊದಲೋ ಅದು) ಅದರ ಜೊತೆಗೆ ಪಾಲಿಸಿಯ ಬಾಬ್ತು ಶೇಖರವಾಗಿರುವ ಲಾಭ ಗಳನ್ನು ಒಟ್ಟಿಗೆ ನೀಡುತ್ತದೆ.

ಎಲ್ ಐ ಸಿ ಕೋಮಲ್ ಜೀವನ್   ಪ್ಲಾನ್ – ವೈಶಿಷ್ಟ್ಯಗಳು

ಪಾಲಿಸಿಯನ್ನು ಪಡೆಯುವಾಗ ಮಗುವಿನ ಕನಿಷ್ಠ ವಯಸ್ಸು

0 ವರ್ಷಗಳು

ಪಾಲಿಸಿಯನ್ನು ಪಡೆಯುವಾಗ ಮಗುವಿನ ಗರಿಷ್ಠ ವಯಸ್ಸು

10 ವರ್ಷಗಳು  

ಸಮ್ ಇನ್ಶ್ಯುರ್ಡ್ ಮೊತ್ತ

1 ಲಕ್ಷದಿಂದ 25 ಲಕ್ಷಗಳು (ರೂ 1000 ದ ಮಲ್ಟಿಪಲ್ಸ್ ಗಳಲ್ಲಿ)

ಪ್ರೀಮಿಯಂ ಗಳನ್ನು ನೀಡುವ ರೀತಿ

ವರ್ಷಕ್ಕೊಮ್ಮೆ / 6 ತಿಂಗಳಿಗೊಮ್ಮೆ / 3 ತಿಂಗಳಿಗೊಮ್ಮೆ / ತಿಂಗಳಿಗೊಮ್ಮೆ (ಸಂಬಳದ ಕಡಿತದಿಂದ)

ರಿಸ್ಕ್ ಶುರು ಆಗುವ ಪೀರಿಯಡ್

ಪಾಲಿಸಿಯನ್ನು ಪಡೆದ ದಿವಸದಿಂದ 2 ವರ್ಷ ಆದ ತಕ್ಷಣ ಅಥವಾ ಮಗುವಿಗೆ 7 ವರ್ಷ ಆದ ದಿವಸದಿಂದ

ಪಾಲಿಸಿಯ ಅವದಿ (ಟರ್ಮ್)

26 ವರ್ಷಗಳು (ಗರಿಷ್ಠ)

ಪ್ರೀಮಿಯಂ ಪೇಮೆಂಟ್ ಅವದಿ

ಪ್ರೀಮಿಯಂ ಅನ್ನು ಮಗುವು (ಅಶ್ಶುರ್ಡ್) 18 ವರ್ಷವಾಗುವವರೆಗೂ ಅಥವಾ ಅದರ ಆಕಸ್ಮಿಕ ಮರಣ ಆದಲ್ಲಿ (ಯಾವುದು ಮೊದಲೋ ಅದು)

ವೈದ್ಯಕೀಯ ಪರೀಕ್ಷೆ

ಬೇಕಾಗುವುದಿಲ್ಲ 

ಎಲ್ ಐ ಸಿ ಕೋಮಲ್ ಜೀವನ್   ಪ್ಲಾನ್ –ಸಮ್ ಇನ್ಸ್ಯುರ್ಡ್ ಗೆ ಅಡಿಶನ್ ಗಳು

ಗ್ಯಾರಂಟಿಡ್ ಅಡಿಶನ್ ಗಳು: 

 ಪ್ರತಿ ವರ್ಷವೂ ಮುಗಿದ ತಕ್ಷಣ ಪಾಲಿಸಿಗೆ ಸಮ್ ಇನ್ಸ್ಯುರ್ಡ್ ಮೇಲೆ ಒಂದು ಖಚಿತ ಮೊತ್ತವನ್ನು ಸೇರಿಸಲಾಗುತ್ತದೆ. ಇದು ಪ್ರತಿ ರೂ 1000 ದ ಮೇಲೆ ರೂ 75 ಆಗಿರುತ್ತದೆ. ಹೀಗೆ ಸೇರಿರುವ ಒಟ್ಟಾರೆ ಮೊತ್ತ (ಸಮ್ ಇನ್ಶ್ಯುರ್ಡ್ ಮೊತ್ತವೂ ಸೇರಿ) ಪಾಲಿಸಿಯು ಮೆಚೂರಿಟೀ ಆದ ಕೂಡಲೇ ಅಥವಾ ಮಗುವಿನ ಆಕಸ್ಮಿಕ ಮರಣ ಆದಲ್ಲಿ ನೀಡಲಾಗುವುದು.

ಲಾಯಲ್ಟಿ ಅಡಿಶನ್ ಗಳು:

ಎಲ್ ಐ ಸಿ ಕೋಮಲ್ ಜೀವನ್ ಪಾಲಿಸಿಯು ಒಂದು ಲಾಭದಲ್ಲಿ ಬಾಗಿ ಆಗುವ  ಯೋಜನೆ ಆಗಿರುವುದರಿಂದ. ಕಾರ್ಪೊರೇಷನ್ ನ ಬಂಡವಾಳ ಹೂಡಿಕೆಯಿಂದ ಬರುವ ಲಾಭಕ್ಕೆ ಅರ್ಹತೆ ಹೊಂದಿರುತ್ತದೆ. ಹಾಗಾಗಿ, ಈ ಪಾಲಿಸಿಯ ಮುಖೇನ ಸಾಕಷ್ಟು ರಿಟರ್ನ್ ಅನ್ನು ನಿರೀಕ್ಷಿಸಬಹುದು. ಈಗೆ ಸೇರಿರುವಂತಹ ಲಾಭವನ್ನು ಬೋನಸ್ ರೂಪದಲ್ಲಿ ಪಾಲಿಸಿಯ ಅವದಿ ಮುಗಿದ ಕೂಡಲೇ ಅಥವಾ ಮಗುವಿನ (ಅಶ್ಶುರ್ಡ್) ಆಕಸ್ಮಿಕ ಮರಣ ಆದಲ್ಲಿ ನೀಡಲಾಗುವುದು.

ಎಲ್ ಐ ಸಿ ಕೋಮಲ್ ಜೀವನ್   ಪ್ಲಾನ್ – ಯಾವ ಬೆನಿಫಿಟ್ ಗಳು ಸಿಗುತ್ತವೆ

ಸರ್ವೈವಲ್ ಬೆನಿಫಿಟ್ಎಲ್ ಐ ಸಿ ಕೋಮಲ್ ಜೀವನ್ ಪಾಲಿಸಿಯು ಈ ಕೆಳ ಕಂಡ ಬೆನಿಫಿಟ್ ಗಳನ್ನು ಪಾಲಿಸಿಯ ಬಾಬ್ತು ನೀಡುತ್ತದೆ.

ಎಲ್ ಐ ಸಿ ಯ ಈ ಪ್ಲಾನ್ ನ ನಿಯಮದ ಪ್ರಕಾರ, ಸರ್ವೈವಲ್ ಮೊತ್ತವೆಂದು ನಿಗದಿತ ಆವದಿಗೆ ಒಂದು ಖಚಿತ ಸಮ್ ಅಶ್ಶ್ಯುರ್ಡ್ ಮೊತ್ತವನ್ನು ನೀಡುತ್ತದೆ. ಅದು ಸಮ್ ಅಶ್ಸ್ಯುರ್ಡ್ ಮೊತ್ತದ ಪೆರ್ಸೆಂಟೇಜ್ ನಲ್ಲಿ ಲಭ್ಯವಾಗುತ್ತದೆ. ವಿವರಗಳನ್ನು ಈ ಕೆಳ ಕಂಡ ಟೇಬಲ್ ನಲ್ಲಿ ನೀಡಲಾಗಿದೆ.

ಪಾಲಿಸಿಯ ಅನಿವರ್ಸರಿಯಂದು ಮಗುವಿನ (ಅಶ್ಶುರ್ಡ್) ವಯಸ್ಸು

ಸಮ್ ಅಶ್ಶುರ್ಡ್ ನ ಪರ್ಸೆಂಟೆಜ್

18 ವರ್ಷಗಳು

20 %

20 ವರ್ಷಗಳು

20%

22 ವರ್ಷಗಳು

30 %

24 ವರ್ಷಗಳು

30 %

ಡೆತ್ ಬೆನಿಫಿಟ್

ಪಾಲಿಸಿಯ ರಿಸ್ಕ್ ಪೀರಿಯಡ್ ಶುರು ಆಗುವ ಮುಂಚೆಯೇ ಅಶ್ಶುರ್ಡ್ ನ ಮರಣವು ಆಕಸ್ಮಿಕವಾಗಿ ಆದಲ್ಲಿ, ಅದುವರೆವಿಗೂ ನೀಡಿರುವ ಪ್ರೀಮಿಯಂ ಮೊತ್ತವನ್ನು ಹಿಂದಿರುಗಿಸಿ ಪಾಲಿಸಿಯನ್ನು ರದ್ದು ಪಡಿಸಲಾಗುತ್ತದೆ. ಅಶ್ಶುರ್ಡ್ ನ ಮರಣವು ನಂತರ ಆದಲ್ಲಿ, ಸಂಪೂರ್ಣ ಸಮ್ ಇನ್ಸ್ಯುರ್ಡ್ ಮೊತ್ತ, ಗ್ಯಾರಂಟಿಡ್ ಮೊತ್ತ ಹಾಗೂ ಲಾಯಲ್ಟಿ ಆಡಿಶನ್ ಎಲ್ಲವನ್ನೂ ಸೇರಿಸಿ ನೀಡಲಾಗುವುದು.

ಮೆಚೂರಿಟೀ ಬೆನಿಫಿಟ್

ಪಾಲಿಸಿಯು ಮೆಚೂರಿಟೀ ಆದಾಗ, ಗ್ಯಾರಂಟಿಡ್ ಮತ್ತು ಲಾಯಲ್ಟಿ ಅಡಿಶನ್ ಸೇರಿಸಿ ನೀಡಲಾಗುವುದು.

ಸರಂಡರ್ ಮೌಲ್ಯದ ಬೆನಿಫಿಟ್

ಸರಂಡರ್ ಮೌಲ್ಯದ ಬೆನಿಫಿಟ್ ನಲ್ಲಿ ಎರಡು ಅಂಶಗಳಿವೆ. 

ಗ್ಯಾರಂಟಿಡ್ ಸರಂಡರ್ ಮೌಲ್ಯ: 

ಇದರಲ್ಲಿ, ಪಾಲಿಸಿಯು 3 ವರ್ಷಗಳು ಚಾಲ್ತಿ ಇದ್ದಲ್ಲಿ, ಪಾಲಿಸಿಯನ್ನು ಸರಂಡರ್ ಮಾಡುವ ಅವಕಾಶ ಇರುತ್ತದೆ.

ರಿಸ್ಕ್ ಕವರೇಜ್ ಶುರು ಆಗುವ ಮುಂಚೆ ಸರಂಡರ್ ಮಾಡಿದಲ್ಲಿ, ಅಶ್ಶುರ್ಡ್ ಗೆ ಅದುವರೆವಿಗೂ ನೀಡಿರುವ ಪ್ರೀಮಿಯಂ ಗಳ ಒಟ್ಟು ಮೊತ್ತದ 90 % ಮೊತ್ತವನ್ನು ನೀಡಲಾಗುವುದು (ಮೊದಲ ವರ್ಷದ ಪ್ರೀಮಿಯಂ ಹಾಗೂ ಅಡಿಶನಲ್ ಪ್ರೀಮಿಯಂ ಇದ್ದಲ್ಲಿ ಅವುಗಳನ್ನು ಹೊರತು ಪಡಿಸಿ).

ರಿಸ್ಕ್  ಕವರೇಜ್ ಶುರು ಆದ ಮೇಲೆ ಪಾಲಿಸಿಯನ್ನು ಸರಂಡರ್ ಮಾಡಿದಲ್ಲಿ, ಗ್ಯಾರಂಟಿಡ್ ಸರಂಡರ್ ಮೌಲ್ಯವು ಅದುವರೆವಿಗೂ ನೀಡಿರುವ ಪ್ರೀಮಿಯಂ ಗಳ ಒಟ್ಟು ಮೊತ್ತದ 90 % ಮೊತ್ತ (ಮೊದಲ ವರ್ಷದ ಪ್ರೀಮಿಯಂ ಹಾಗೂ ಅಡಿಶನಲ್ ಪ್ರೀಮಿಯಂ ಇದ್ದಲ್ಲಿ ಅವುಗಳನ್ನು ಹೊರತು ಪಡಿಸಿ) ಹಾಗೂ ಅದರ ಜೊತೆಗೆ ರಿಸ್ಕ್ ಕವರೇಜ್ ಶುರು ಆದ ಮೇಲೆ ನೀಡಿರುವ ಪ್ರೀಮಿಯಂ ಗಳ ಮೊತ್ತದ 30 % ಮೊತ್ತ ಎರಡನ್ನೂ ಸೇರಿಸಿ ನೀಡಲಾಗುವುದು.

 ಸರಂಡರ್ ಬಗ್ಗೆ ಕಾರ್ಪೊರೇಷನ್ ನ ಪಾಲಿಸಿ:

ಕಾರ್ಪೊರೇಷನ್ ನಿಯಮದ ಪ್ರಕಾರ ಈ ಪಾಲಿಸಿಯಲ್ಲಿ ಅಶ್ಶುರ್ಡ್ ಗೆ ಒಂದು ಸ್ಪೆಷಲ್ ಸರಂಡರ್ ಮೊತ್ತವನ್ನು ನೀಡಲಾಗುವುದು. ಅದು ಮೆಚೂರಿಟೀ ಮೊತ್ತ ಅಥವಾ ಅಶ್ಶುರ್ಡ್ ನ ಮರಣವು ಆಗಿದ್ದಲ್ಲಿ ನೀಡಿದ್ದ ಮೊತ್ತದ ಒಂದು ಡಿಸ್ಕೌಂಟೆಡ್ ಮೊತ್ತ ಆಗಿರುತ್ತದೆ. ಈ ಸರಂಡರ್ ಮೊತ್ತವು ಪ್ರೀಮಿಯಂ ಅನ್ನು ನೀಡಿರುವ ಅವದಿ ಹಾಗೂ ಪಾಲಿಸಿಯ ಅವದಿಯ ಮೇಲೆ ಅವಲಂಬಿತವಾಗಿರುತ್ತದೆ. ಪಾಲಿಸಿಯನ್ನು ಬೇಗನೆ ಸರಂಡರ್ ಮಾಡಿದಲ್ಲಿ, ಸರಂಡರ್ ಮೌಲ್ಯವು  ಕಮ್ಮಿ ಸಿಗುತ್ತದೆ.

ಆಡ್-ಆನ್ ಬೆನಿಫಿಟ್

ಪ್ರೀಮಿಯಂ ವೈವರ್ ಬೆನಿಫಿಟ್

ಇದು ಒಂದು ಆಪ್ಶನಲ್ ಬೆನಿಫಿಟ್ ಆಗಿದ್ದು, ಅದನ್ನು ಮೂಲ ಪ್ಲಾನ್ ಜೊತೆಗೆ ಸೇರಿಸಿಕೊಳ್ಳಬಹುದು. ಇದನ್ನು ಪಡೆಯಲು, ಪ್ರೀಮಿಯಂ ಜೊತೆಗೆ ಅನ್ವಯವಾಗುವ  ಹೆಚ್ಚುವರಿ ಮೊತ್ತವನ್ನು ನೀಡಬೇಕಾಗುತ್ತದೆ. ಈ ಬೆನಿಫಿಟ್ ಅನ್ನು ಆಯ್ಕೆ ಮಾಡಿದ್ದಲ್ಲಿ, ಪ್ರೊಪೋಸರ್ ಗೆ ಅವನ / ಅವಳ ಮರಣದಿಂದ ಡೆಫೆರ್ಮೆಂಟ್ ಪೀರಿಯಡ್ ವರೆಗೆ ಪ್ರೀಮಿಯಂ ನೀಡುವುದನ್ನು ವೈವ್ ಆಫ್ ಮಾಡಲಾಗುತ್ತದೆ. ಇದಕ್ಕಾಗಿ ಡೆಫೆರ್ಮೆಂಟ್ ಪೀರಿಯಡ್ ಅನ್ನು 18 ರಿಂದ ಪಾಲಿಸಿಯನ್ನು ಪಡೆದಾಗ ಮಗುವಿನ ವಯಸ್ಸನ್ನು ಕಳೆದಾಗ ಬರುವ ಅವದಿ ಎಂದು ಪರಿಗಣಿಸಲಾಗುತ್ತದೆ.

ಎಲ್ ಐ ಸಿ ಕೋಮಲ್ ಜೀವನ್   ಪ್ಲಾನ್ – ಬೆನಿಫಿಟ್ ಬಗ್ಗೆ ಉದಾಹರಣೆ

ಎಲ್ ಐ ಸಿ ಯು ನೀಡುವ ಬೆನೆಫಿಟ್ಸ್ ಗಳಲ್ಲಿ ಕೆಲವು ಗ್ಯಾರಂಟಿಡ್ ಆಗಿದ್ದು ಇನ್ನೂ ಕೆಲವು ಬದಲಾವಣೆಗೆ ಒಳ ಪಡುವ ಬೆನಿಫಿಟ್ ಗಳು ಆಗಿರುತ್ತವೆ, ಏಕೆಂದರೆ, ಅಂತಹ ಬೆನಿಫಿಟ್ ಗಳು ಕಾರ್ಪೊರೇಷನ್ ನ ಮುಂದಿನ ಕಾರ್ಯ ನಿರ್ವಹಣೆ ಹಾಗೂ ಅದರಿಂದ ಬರುವ ಆದಾಯದ ಮೇಲೆ ಅವಲಂಬಿತವಾಗಿರುತ್ತದೆ ನಿಮ್ಮ ಪಾಲಿಸಿಯಲ್ಲಿ ಗ್ಯಾರಂಟಿಡ್ ಆದಾಯ ಎಂದು ನಮೂದಿಸಿರುವ ಬೆನಿಫಿಟ್ ಗಳಿಗೆ ಕೆಳ ಕಂಡ ಟೇಬಲ್ ನಲ್ಲಿ “ಗ್ಯಾರಂಟಿಡ್”  ಎಂದು ತೋರಿಸಲಾಗಿದೆ. ಹಾಗೆಯೇ, ಪಾಲಿಸಿಯಲ್ಲಿ ನಮೂದಿಸಿರುವ ಗ್ಯಾರಂಟಿಡ್ ಅಲ್ಲದ ಬೆನಿಫಿಟ್ ಗಳನ್ನು ಕೆಳ ಕಂಡ ಟೇಬಲ್ ನಲ್ಲಿ ಎರಡು ರೀತಿಯ ರಿಟರ್ನ್ಸ್ ಗಳನ್ನು ಗಣನೆಗೆ ತೆಗೆದುಕೊಂಡು ಅದರ ರೀತ್ಯಾ ತೋರಿಸಲಾಗಿದೆ. ಇದು ಭವಿಷ್ಯದಲ್ಲಿ ಕಾರ್ಪೊರೇಷನ್ ನ ಬಂಡವಾಳ ಹೂಡಿಕೆಯಿಂದ ಬರಬಹುದಾದ ಎರಡು ಊಹಿಸಲಾದ ಆದಾಯ ಗಳನ್ನು ಅಳವಡಿಸಿ ತಯಾರಿಸಲಾಗಿದೆ. ಈ ಎರಡು ಊಹಿಸಲಾದ ಆದಾಯಗಳು ಪಾಲಿಸಿಯ ಬಾಬ್ತು ನೀಡುವ ಗ್ಯಾರಂಟಿಡ್ ಮೊತ್ತವಲ್ಲ. ಹಾಗೂ ಅವುಗಳು ಗರಿಷ್ಠ ಅಥವಾ ಕನಿಷ್ಠ ಮಿತಿಗಳು ಕೂಡ ಅಲ್ಲ. ಏಕೆಂದರೆ, ನಿಮ್ಮ ಪಾಲಿಸಿಯು ಬೇರೆ ಬೇರೆ ಅಂಶಗಳ ಮೇಲೆ ಹಾಗೂ ಮುಂದಿನ ಕಾರ್ಪೊರೇಷನ್ ನ ಕಾರ್ಯ ನಿರ್ವಹಣೆ ಮೇಲೂ ಅವಲಂಬಿತವಾಗಿರುತ್ತದೆ.

ಶಾಸನಬದ್ದ ಎಚ್ಚರಿಕೆ

ಉದಾಹರಣೆ 1:

ಪಾಲಿಸಿಯನ್ನು ಪಡೆಯುವಾಗ ಮಗುವಿನ ವಯಸ್ಸು – 0 ವರ್ಷಗಳು

ಪ್ರೀಮಿಯಂ ನೀಡುವ ಅವದಿ – 1 ವರ್ಷ

ಸಿಂಗಲ್ ಪ್ರೀಮಿಯಂ – ರೂ 73,980

ಪಾಲಿಸಿಯ ಅವದಿ – 26 ವರ್ಷಗಳು

ಸಮ್ ಅಶ್ಶುರ್ಡ್ – ರೂ 1,00,000

ಬದಲಾಗಬಹುದಾದ ಸಿನ್ಯಾರಿಯೋ 1 – ಒಟ್ಟು ಹಣ ಹೂಡಿಕೆಯ ಮೇಲೆ ಬರಬಹುದಾದ ರಿಟರ್ನ್ @ 6 % ಒಂದು ವರ್ಷಕ್ಕೆ

ಬದಲಾಗಬಹುದಾದ ಸಿನ್ಯಾರಿಯೋ 2 – ಒಟ್ಟು ಹಣ ಹೂಡಿಕೆಯ ಮೇಲೆ ಬರಬಹುದಾದ ರಿಟರ್ನ್ @ 10 % ಒಂದು ವರ್ಷಕ್ಕೆ

ಆ) ಪಾಲಿಸಿದಾರನ ಮರಣ ಆದಲ್ಲಿ ಸಿಗಬಹುದಾದ ಮೊತ್ತ

ವರ್ಷದ ಕೊನೆಯಲ್ಲಿ

ವರ್ಷದ ಕೊನೆಯಲ್ಲಿ ನೀಡಿರುವ ಪ್ರೀಮಿಯಂ ಮೊತ್ತ(ರೂ ಗಳಲ್ಲಿ)

ಪಾಲಿಸಿಯ ಬಾಬ್ತು ಪಾಲಿಸಿದಾರನ ಮರಣ ಆದ ಪಕ್ಷದಲ್ಲಿ ನೀಡುವ ಬೆನಿಫಿಟ್ ಮೊತ್ತ (ಆ ವರ್ಷದ ಕೊನೆಗೆ)

   

ಗ್ಯಾರಂಟಿಡ್

ಬದಲಾಗಬಹುದಾದ ಮೊತ್ತ

ಒಟ್ಟು ಮೊತ್ತ

     

ಸಿನಾರಿಯೊ 1

6 %

ಸಿನಾರಿಯೊ 2

10%

ಸಿನಾರಿಯೊ 1

6 %

ಸಿನಾರಿಯೊ 2

10%

1

73980

73980

0

0

73980

73980

2

73980

73980

0

0

73980

73980

3

73980

73980

0

0

73980

73980

4

73980

73980

0

0

73980

73980

5

73980

73980

0

0

73980

73980

6

73980

73980

0

0

73980

73980

7

73980

145000

0

12000

145000

157000

8

73980

152500

0

16000

152500

168500

9

73980

160000

0

21000

160000

181000

10

73980

167500

0

26000

167500

193500

15

73980

205000

0

67000

205000

272000

20

73980

242500

0

128000

242500

370500

26

73980

287500

0

277000

287500

564500

 

ವರ್ಷದ ಕೊನೆಗೆ

ಸರ್ವೈವಲ್ / ಮೆಚೂರಿಟೀ  ಬೆನಿಫಿಟ್ ಮೊತ್ತ – ವರ್ಷದ ಕೊನೆಗೆ


ಗ್ಯಾರಂಟಿಡ್ ಮೊತ್ತ

ಬದಲಾಗಬಹುದಾದ ಮೊತ್ತ

ಒಟ್ಟು ಮೊತ್ತ

ಸಿನಾರಿಯೊ 1

6 %

ಸಿನಾರಿಯೊ 2

10%

ಸಿನಾರಿಯೊ 1

6 %

ಸಿನಾರಿಯೊ 2

10 %

18

20000

0

0

20000

20000

20

20000

0

0

20000

20000

22

30000

0

0

30000

30000

24

30000

0

0

30000

30000

26

195000

0

277000

195000

472000

ಸೂಚನೆ:

ಈ ಉದಾಹರಣೆಯಲ್ಲಿ, ಮುಂದೆ  ಎಲ್ ಐ ಸಿ ಯು ಬಂಡವಾಳ ಹೂಡಿಕೆ ಮಾಡಿ ಪಾಲಿಸಿಯ ಪೂರ್ಣ ಆವದಿಯವರೆಗೂ ಬರಬಹುದಾದ ಲಾಭವನ್ನು ಪರ್ಸೆಂಟೆಜ್ ಲೆಕ್ಕದಲ್ಲಿ 6 % ಅಥವಾ 10 % ಎಂದು ಪರಿಗಣಿಸಿ ಲೆಕ್ಕಾಚಾರ ಮಾಡಲಾಗಿದೆ.