ಎಲ್ ಐ ಸಿ ಮೈಕ್ರೋ ಬಚತ್ ಪ್ಲಾನ್
 • ಅತ್ಯುತ್ತಮ ಯೋಜನೆಗಳು
 • ಸುಲಭ ಹೋಲಿಕೆ
 • ತಕ್ಷಣದ ಖರೀದಿ
PX step

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಹುಟ್ಟಿದ ದಿನಾಂಕ (ದೊಡ್ಡ ಸದಸ್ಯ)
ಆದಾಯ
| ಲಿಂಗ

1

2

ಫೋನ್ ಸಂಖ್ಯೆ
ಹೆಸರು
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಎಲ್ ಐ ಸಿ ಯ ಮೈಕ್ರೋ ಬಚತ್ ಪ್ಲಾನ್ ಒಂದು  ನಾನ್-ಲಿಂಕ್ದ್ ಲಾಭದಲ್ಲಿ ಪಾಲುಗೊಳ್ಳುವ ಮೈಕ್ರೋ ವಿಮಾ ಯೋಜನೆ ಆಗಿರುತ್ತದೆ.  ಈ ಯೋಜನೆಯ ಅಡಿಯಲ್ಲಿ, ಸೀಮಿತವಾಗಿ ಕಂತುಗಳನ್ನು ಕಟ್ಟಬೇಕಾಗುತ್ತದೆ. ಇದು ಒಂದು ರಕ್ಷಣೆ ಹಾಗೂ ಉಳಿತಾಯ ಏಕ ಕಾಲದಲ್ಲಿ ನೀಡುವ ಯೋಜನೆ. ಈ ಯೋಜನೆಯನ್ನು,ಪಾಲಿಸಿದಾರರ ಆರ್ಥಿಕ ಅವಶ್ಯಕತೆ ಯನು ಗಮನದಲ್ಲಿ ಇಟ್ಟುಕೊಂಡು ಮಾಡಲಾಗಿದೆ. ಇದರ ಪ್ರಕಾರ, ಪಾಲಿಸಿದಾರನು ಪಾಲಿಸಿಯ ಪೂರ್ಣ ಆವದಿಯನ್ನು ಮುಗಿಸಿದಲ್ಲಿ ಅವನಿಗೆ ಒಂದು ನಿಗದಿತ ಮೊತ್ತವನ್ನು ನೀಡಲಾಗುತ್ತದೆ. ಹಾಗೆಯೇ, ಪಾಲಿಸಿದಾರನು ಆವದಿಯ ಒಳಗೆ ಅಕಸ್ಮಿಕ ಮರಣ ಹೊಂದಿದಲ್ಲಿ, ಅವನ ಕುಟುಂಬವು ಮುಂದೆ ಆರ್ಥಿಕ ಸಂಕಷ್ಟವನ್ನು ಎದುರಿಸದೆ ಇರುವ ರೀತಿಯಲ್ಲಿ ಸಾಕಷ್ಟು ಸಹಾಯ ಮಾಡುತ್ತದೆ, ಪಾಲಿಸಿದಾರನಿಗೆ ಸಮಯಕ್ಕೆ ಬೇಕಾಗುವ ಹಣದ ಅವಶ್ಯಕತೆಯನ್ನು ಸಾಲ ಸೌಲಭ್ಯವನ್ನು ನೀಡುವುದರ ಮೂಲಕ ನೆರವಾಗುತ್ತದೆ.

ಇದು ಎಲ್ ಐ ಸಿ ನವರ ಒಂದು ಹೊಸ ಯೋಜನೆ ಆಗಿದ್ದು, ಪಾಲಿಸಿಯು ಪಾಲಿಸಿದಾರರಿಗೆ ಕೈಗೆಟಕುವ ಮೊತ್ತದಲ್ಲಿ ದೊರೆಯುತ್ತದೆ. ಈ ಯೋಜನೆಯನ್ನು ಪಡೆಯಲು ನೀಡಬೇಕಾದ ಮೊತ್ತವನ್ನು  ಗಮನಿಸಿದಲ್ಲಿ, ಇದರಿಂದ ಸಿಗುವ ಬೆನಿಫಿಟ್ ಗಳು ಸಾಕಷ್ಟು ಎನಿಸುವುದು ನಿಜ. ಈ ಬೆನಿಫಿಟ್ ಗಳು ಮೆಚೂರಿಟೀ ಸಮಯದಲ್ಲಿ ಅಥವಾ ಪಾಲಿಸಿದಾರನ ಮರಣವಾದಲ್ಲಿ ಅಥವಾ ಪಾಲಿಸಿಯನ್ನು ಸರಂಡರ್ ಮಾಡಿದಲ್ಲಿ (ಕಂಪನಿಯ ನಿಯಮಗಳಿಗೆ ಅನುಸ್ಸಾರವಾಗಿ) ಸಿಗುತ್ತದೆ. ಆದರೆ ಪಾಲಿಸಿಯು 5 ವರ್ಷ ಮುಗಿಸಿರಬೇಕು ಹಾಗೂ 5 ವರ್ಷದವರೆಗಿನ ಎಲ್ಲ ಕಂತುಗಳನ್ನು ಪಾಲಿಸಿದಾರನು ಪಾವತಿ ಮಾಡಿರಬೇಕು.

ಮೇಲೆ ತಿಳಿಸಿರುವಂತೆ ಈ ಯೋಜನೆಯು ಪಾಲಿಸಿದಾರನಿಗೆ ಯೋಜನೆಯ ಅವದಿಯನ್ನು ಮುಗಿಸಿದ್ದಲ್ಲಿ, ಒಂದು ನಿಗದಿತ ಮೊತ್ತವನ್ನು ನೀಡುತ್ತದೆ, ಅದೇ ರೀತಿ, ಪಾಲಿಸಿದಾರನು ಆವದಿಯ ಒಳಗೆ ಮರಣ ಹೊಂದಿದಲ್ಲಿ, ಆತನ ಕುಟುಂಬಕ್ಕೆ ತೊಂದರೆ ಆಗದ ರೀತಿಯಲ್ಲಿ. ಆತನ ನಾಮಿನಿಗೆ ನಿಯಮಾನುಸಾರ ಹಣವನ್ನು ನೀಡಿ ಸಹಾಯ ಮಾಡುತ್ತದೆ.  

ಈ ಯೋಜನೆಯ ಅಡಿಯಲ್ಲಿ ಪಾಲಿಸಿದಾರನು ತನಗೆ ಅವಶ್ಯಕವಿದ್ದಾಗ ಪಾಲಿಸಿಯ ಮೇಲೆ ಸಾಲವನ್ನು ತೆಗೆದುಕೊಳ್ಳುವ ಸೌಲಭ್ಯವಿರುತ್ತದೆ. ಆದರೆ, ಪಾಲಿಸಿಯ ಬಾಬ್ತು ನೀಡಬೇಕಾಗಿರುವ ಕಂತುಗಳನ್ನು 3 ವರ್ಷಗಳು ಕಟ್ಟಿರಬೇಕಾಗುತ್ತದೆ. ಒಂದು ಚಾಲ್ತಿಯಲ್ಲಿ  ಇರುವ ಪಾಲಿಸಿಯ ಮೇಲೆ ಅದುವರೆಗೂ ಕಟ್ಟಿರುವ ಪ್ರೀಮಿಯಂ ಗಳ ಒಟ್ಟಾರೆ ಮೊತ್ತದ ಸುಮಾರು ಶೇಕಡಾ 70 ರಷ್ಟು ಮೊತ್ತವನ್ನು ಪಡೆಯಲು ಅರ್ಹತೆ ಇರುತ್ತದೆ. ಅದೇ ಪೈಡ್-ಅಪ್ ಪಾಲಿಸಿಯಲ್ಲಿ, ಶೇಕಡಾ 60 ರಷ್ಟು ಮೊತ್ತಕ್ಕೆ ಅರ್ಹತೆ ಇರುತ್ತದೆ.

ಈ ಸಾಲದ ಮೊತ್ತಕ್ಕೆ ಶೇಕಡಾ 10.42 ರಷ್ಟು ವಾರ್ಷಿಕ ಬಡ್ಡಿ ಬೀಳುತ್ತದೆ. ಒಂದು ತಿಂಗಳಿನ ಕಂತಿಗೆ ರಿಯಾಯಯತಿ ದೊರೆಯುತ್ತದೆ. ಇದು ಒಂದು ಜೀವ ವಿಮಾ ಯೋಜನೆ ಆಗಿರುವುದರಿಂದ, ಆದಾಯ ತೆರಿಬೆ ಸೆಕ್ಷನ್ 80 ಸಿ ಅಡಿ ವಾರ್ಷಿಕ ನೀಡಿರುವ ಒಟ್ಟಾರೆ ಮೊತ್ತಕ್ಕೆ ವಿನಾಯತಿ ಇರುತ್ತದೆ.

ಎಲ್ ಐ ಸಿ ಮೈಕ್ರೋ ಬಚತ್ ಪ್ಲಾನ್  - ಬೇನೆಫಿಟ್ಸ್

ಮೆಚೂರಿಟೀ ಬೆನಿಫಿಟ್

ಪಾಲಿಸಿದಾರನು ಆವದಿ ಮುಗಿಯುವವರೆಗೂ ಜೀವಂತವಿದ್ದಲ್ಲಿ ಹಾಗೂ  ಅದುವರೆಗಿನ ಎಲ್ಲ ಕಂತುಗಳನ್ನು ಪಾವತಿಸಿದ್ದಲ್ಲಿ, ಅವನಿಗೆ ಮೆಚೂರಿಟೀ ಬೆನಿಫಿಟ್ ರೂಪದಲ್ಲಿ, ಸಮ್ ಅಶ್ಶುರ್ಡ್ ಮತ್ತು ಅದರ ಜೊತೆಗೆ ಲಾಯಲ್ಟಿ ಅಡಿಷನ್ ಮೊತ್ತವನ್ನು ಸೇರಿಸಿ ನೀಡಲಾಗುವುದು. ಇದರಲ್ಲಿ ಸಮ್ ಅಶ್ಶುರ್ಡ್ ಮೊತ್ತ ಎಂದರೆ ಪಾಲಿಸಿದಾರನು ಪಾಲಿಸಿ ಕೊಳ್ಳುವ ಸಮಯದಲ್ಲಿ ನಮೂದಿಸಿರುವ ಸಮ್ ಅಶ್ಶುರ್ಡ್ ಮೊತ್ತ.

ಡೆತ್ ಬೆನಿಫಿಟ್  

ಪಾಲಿಸಿಯ ಆವದಿಯ ಮದ್ಯದಲ್ಲಿಯೇ ಪಾಲಿಸಿದಾರನು ಆಕಸ್ಮಿಕ ಮರಣ ಹೊಂದಿದಲ್ಲಿ ಹಾಗೂ ಅದುವರೆಗಿನ ಎಲ್ಲ ಕಂತುಗಳನ್ನು ಕಟ್ಟಿದ್ದಲ್ಲಿ ಈ ಕೆಳ ಕಂಡ ರೀತಿಯಲ್ಲಿ ಹಣ ನೀಡಲಾಗುವುದು.

 • ಪಾಲಿಸಿಯನ್ನು ಪಡೆದ 5 ವರ್ಷದ ಒಳಗೆ ಮರಣವಾದಲ್ಲಿ,  ಮರಣದ ನಿಮಿತ್ತ ನೀಡುವ ಸಮ್ ಅಶ್ಶುರ್ಡ್ ಮೊತ್ತವನ್ನು ನೀಡಲಾಗುವುದು.
 • ಪಾಲಿಸಿಯನ್ನು ಪಡೆದು 5 ವರ್ಷ ಆದ ಮೇಲೆ ಮರಣ ಹೊಂದಿದಲ್ಲಿ, ಮರಣದ ನಿಮಿತ್ತ ನೀಡುವ ಸಮ್ ಅಶ್ಶುರ್ಡ್ ಮೊತ್ತ ಹಾಗೂ ಲಾಯಲ್ಟಿ ಬೆನಿಫಿಟ್ ಮೊತ್ತ ಇವೆರಡನ್ನು ಸೇರಿಸಿ ನೀಡಲಾಗುವುದು.

ಡೆತ್ ಬೆನಿಫಿಟ್ ಮೊತ್ತವು ಅದುವರೆಗಿನ ಕಂತುಗಳ ಒಟ್ಟಾರೆ ಮೊತ್ತದ ಶೇಖಡ 105 ಕ್ಕಿಂತ ಕಡಿಮೆ ಇರುವುದಿಲ್ಲ.

ಸರಂಡರ್ ಬೆನಿಫಿಟ್

ಈ ಯೋಜನೆಯ ಅಡಿಯಲ್ಲಿ ಪಡೆದಿರುವ ಪಾಲಿಸಿಯನ್ನು 1 ವರ್ಷದ ನಂತರ ಸರಂಡರ್ ಮಾಡುವ ಅವಕಾಶ ಇರುತ್ತದೆ. ಆದರೆ, ಪಾಲಿಸಿದಾರನು, ಅಲ್ಲಿಯವರೆಗಿನ ಎಲ್ಲ ಕಂತುಗಳನ್ನು ಕಟ್ಟಿರಬೇಕಾಗುತ್ತದೆ. ಸರಂಡರ್ ಮೊತ್ತವು ಸಿಗಬೇಕಾದಲ್ಲಿ, 1 ವರ್ಷದ ಎಲ್ಲ ಕಂತುಗಳು ಪಾವತಿ ಆಗಿರಬೇಕು. ಚಾಲ್ತಿಯಲ್ಲಿ  ಇರುವ ಪಾಲಿಸಿಯಾಗಲಿ ಅಥವಾ ಪೈಡ್-ಅಪ್ ಪಾಲಿಸಿಯಾಗಲಿ, ಅದನ್ನು ಸರಂಡರ್ ಮಾಡಿದಲ್ಲಿ ಎಲ್ ಐ ಸಿ ಯು ಗ್ಯಾರಂಟಿಡ್ ಸರಂಡರ್ ಮೌಲ್ಯ ಅಥವಾ ಸ್ಪೆಷಲ್ ಸರಂಡರ್ ಮೌಲ್ಯ, ಇವೆರಡರ ಒಳಗೆ ಯಾವುದು ಹೆಚ್ಚಿರುತ್ತದೆಯೋ ಅದನ್ನು ಪಾಲಿಸಿದಾರನಿಗೆ ನೀಡುವುದು.

ಲಾಯಲ್ಟಿ ಅಡಿಷನ್

ಎಲ್ ಐ ಸಿಯ ಪ್ರಕಾರ, ಈ ಯೋಜನೆಯು ಲಾಯಲ್ಟಿ ಅಡಿಷನ್ ಮೊತ್ತಕ್ಕೆ ಅರ್ಹತೆ ಹೊಂದಿರುತ್ತದೆ. ಅದರ ಪ್ರಕಾರ, ಪಾಲಿಸಿದಾರನು ಅವದಿಯನ್ನು ಮುಗಿಸಿದ್ದಲ್ಲಿ ಅಥವಾ ಅವದಿಯ ಮದ್ಯದಲ್ಲಿ ಮರಣ ಹೊಂದಿದಲ್ಲಿ, ಮೆಚೂರಿಟೀ ಬೆನಿಫಿಟ್ ಜೊತೆಗೆ ಲಾಯಲ್ಟಿ ಅಡಿಷನ್ ಮೊತ್ತವನ್ನು ಸೇರಿಸಿ ನೀಡಲಾಗುವುದು. ಲಾಯಲ್ಟಿ ಅಡಿಷನ್ ಮೊತ್ತವು ಪಾಲಿಸಿಯು 5 ವರ್ಷ ಮುಗಿಸಿದ್ದಲ್ಲಿ ಮಾತ್ರ ಅನ್ವಯಿಸುತ್ತದೆ.

ಸಾಲ ಸೌಲಭ್ಯ

ಪಾಲಿಸಿದಾರನು ಈ ಪಾಲಿಸಿಯ ಮೇಲೆ ಸಾಲವನ್ನು ಪಡೆಯಲು ಅರ್ಹನಾಗಿರುತ್ತಾನೆ. ಆದರೆ, ಪಾಲಿಸಿಯು 3 ವರ್ಷವನ್ನು ಮುಗಿಸಿರಬೇಕು. ಹಾಗೂ ಅಲ್ಲಿಯವರೆಗಿನ ಕಂತುಗಳನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸಿರಬೇಕು. ಈ ಸಾಲವು ಕಂಪನಿಯ ನಿಯಮಾನುಸಾರವಾಗಿ ದೊರೆಯುತ್ತದೆ.

ಸಾಲದ ಬಾಬ್ತು ದೊರೆಯುವ ಗರಿಷ್ಠ ಮೊತ್ತವು ಈ ಕೆಳಕಂಡಂತಿದೆ

 • ಚಾಲ್ತಿಯಲ್ಲಿರುವ ಪಾಲಿಸಿಗಳಿಗೆ – 70 % ವರೆಗೆ
 • ಪೈಡ್-ಅಪ್ ಪಾಲಿಸಿಗೆ – 60 % ವರೆಗೆ

ಆಟೋ ಕವರ್ ಪೀರಿಯಡ್

ಪೈಡ್-ಅಪ್ ಪಾಲಿಸಿಯಲ್ಲಿ ಆಟೋ ಕವರ್ ಈ ಕೆಳಕಂಡಂತಿರುತ್ತದೆ. ಆಟೋ ಕವರ್ ಮೊದಲು ಪಾವತಿಸದ ಪ್ರೀಮಿಯಂ ನಿಂದ ಶುರು ಆಗುತ್ತದೆ ಇದರಲ್ಲಿ ಗ್ರೇಸ್ ಪೀರಿಯಡ್ ಕೂಡಾ ಸೇರಿರುತ್ತದೆ.

ಈ ಪಾಲಿಸಿಗೆ ಅನ್ವಯವಾಗುವ ಆಟೋ ಕವರ್ ಪೀರಿಯಡ್:

 • ಯಾವುದೇ ಪಾಲಿಸಿಗೆ ಸಂಭಂದಪಟ್ಟಂತೆ, ಪ್ರೀಮಿಯಂಗಳನ್ನು 3 ವರ್ಷದವರೆಗೂ ಕಟ್ಟಿದ್ದು  5 ವರ್ಷದವರೆಗೆ ಪೂರ್ತಿ ಪ್ರೀಮಿಯಂ ಕಟ್ಟದಿದ್ದಲ್ಲಿ, 6 ತಿಂಗಳ ಆಟೋ ಕವರ್ ಪೀರಿಯಡ್ ಇರುತ್ತದೆ.
 • 5 ವರ್ಶದ ವರೆಗೂ ಪೂರ್ತಿ ಪ್ರೀಮಿಯಂ ಗಳನ್ನು ಪಾವಟತಿಸಿದ್ದು ತದ ನಂತರ ಪ್ರೀಮಿಯಂ ಕಟ್ಟದಿದ್ದಲ್ಲಿ, 2 ವರ್ಷ ಆಟೋ ಕವರ್ ಪೀರಿಯಡ್ ಇರುತ್ತದೆ.

ರಿವೈವಲ್ ಬೆನಿಫಿಟ್

ಮಾನ್ಯತೆ ಕಳೆದುಕೊಂಡ ಅಂದರೆ ಲ್ಯಾಪ್ಸ್ದ್ ಪಾಲಿಸಿಯನ್ನು ಮತ್ತೆ ರಿವೈವಲ್ ಅಂದರೆ ಪುನರುಜ್ಜೀವನ ಗೊಳಿಸಬಹುದು. ಆದರೆ ಇದನ್ನು ಪಾವತಿ ಮಾಡದ ಪ್ರೀಮಿಯಂ ದಿನದಿಂದ 2 ವರ್ಷದೊಳಗೆ ಕಂಪನಿಯ ನಿಯಮಕ್ಕೆ ಅನುಸಾರವಾಗಿ ಮಾಡಿಕೊಳ್ಳಬಹುದು.

ಗ್ರೇಸ್ ಪೀರಿಯಡ್

ಈ ಯೋಜನೆಯ ಅಡಿಯಲ್ಲಿ ಪಾಲಿಸಿದಾರನಿಗೆ ಪ್ರೀಮಿಯಂ ಪಾವತಿ ಮಾಡಲು, ಒಂದು ತಿಂಗಳು ಗ್ರೇಸ್ ಪೀರಿಯಡ್ ಲಭ್ಯ ಇರುತ್ತದೆ. ಆದರೆ 30 ದಿವಸಕ್ಕಿಂತ ಕಮ್ಮಿ ಇರುವುದಿಲ್ಲ. ಇದು ಎಲ್ಲ ವಿದವಾದ ಪ್ರೀಮಿಯಂ ಗಳಿಗೂ ಲಭ್ಯ ಆಗುತ್ತದೆ.

ಫ್ರೀ  ಲುಕ್ ಪೀರಿಯಡ್

ಪಾಲಿಸಿಯ ದಾಖಲೆಗಳು ಪಾಲಿಸಿದಾರನಿಗೆ  ಸಿಕ್ಕಿದ ದಿನದಿಂದ 15 ದಿನಗಳವರೆಗೆ ಫ್ರೀ ಲುಕ್ ಪೀರಿಯಡ್ ಉಪಯೋಗಿಸಿಕೊಳ್ಳಬಹುದು. ಆ 15 ದಿನಗಳ ಒಳಗೆ, ಅವನು ಅದರಲ್ಲಿರುವ ನಿಯಮಗಳು ಹಾಗೂ ಶರತ್ತುಗಳನ್ನು ಕೂಲಕುಶವಾಗಿ ಓದಿ ಅವುಗಳಲ್ಲಿ ಯಾವುದಾದರೂ ಅಂಶಗಳ ಬಗ್ಗೆ ಒಪ್ಪಿಗೆ ಇಲ್ಲದಿದ್ದಲ್ಲಿ, ಪಾಲಿಸಿಯನ್ನು 15 ದಿವಸದ ಒಳಗೆ ಹಿಂದಿರುಗಿಸುವ ಅವಕಾಶ ಇರುತ್ತದೆ. ಹಾಗೂ ಹಿಂದಿರುಗಿಸಲು ಸೂಕ್ತ ಕಾರಣವನ್ನು ನೀಡಬೇಕಾಗುತ್ತದೆ.  

ಪಾಲಿಸಿ ಪಡೆಯಲು ಅರ್ಹತೆಗಳು

ಪಾಲಿಸಿ ಪಡೆಯಲು ಕನಿಷ್ಠ ವಯಸ್ಸು

18 ವರ್ಷ ಮುಗಿದಿರಬೇಕು

ಪಾಲಿಸಿ ಪಡೆಯಲು ಗರಿಷ್ಠ ವಯಸ್ಸು

33 ವರ್ಷ (ಸಮೀಪದ ಹುಟ್ಟು ಹಬ್ಬಕ್ಕೆ)

ಸಮ್ ಅಶ್ಶುರ್ಡ್ (ಕನಿಷ್ಟ ಮೊತ್ತ)

ರೂ 50,000

ಸಮ್ ಅಶ್ಶುರ್ಡ್ (ಗರಿಷ್ಠ ಮೊತ್ತ)

ರೂ2,00,000

ಪ್ರೀಮಿಯಂ ನೀಡಬೇಕಾದ ಟರ್ಮ್

ಪಾಲಿಸಿಯ ಟರ್ಮ್ ಗೆ ಸರಿ ಸಮನಾಗಿರುತ್ತದೆ

ಮೆಚೂರಿಟೀ ಆಗುವಾಗ ವಯಸ್ಸು

70 ವರ್ಷಗಳು (ಸಮೀಪದ ಹುಟ್ಟು ಹಬ್ಬಕ್ಕೆ)

ರಿಸ್ಕ್ ಶುರು ಆಗುವ ದಿನಾಂಕ

ಪಾಲಿಸಿಯನ್ನು ಒಪ್ಪಿಕೊಂಡ ದಿವಸದಿಂದ ರಿಸ್ಕ್ ಶುರು ಆಗುತ್ತದೆ

ಪ್ರೀಮಿಯಂ ಪಾವತಿಸುವ ಮಾದರಿ

ವರ್ಷಕ್ಕೊಮ್ಮೆ, ಅರ್ದ ವರ್ಷಕ್ಕೊಮ್ಮೆ, 3 ತಿಂಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆ

ಸೂಚನೆ :

 • ಬೇಸಿಕ್ ಸಮ್ ಅಶ್ಶುರ್ಡ್ಶ್, ರೂ 5000 ದ ಮಲ್ಟಿಪಲ್ಗಳಲ್ಲಿ ಲಭ್ಯ.
 • ಸಮ್ ಅಶ್ಶುರ್ಡ್ ನ ಒಟ್ಟಾರೆ ಮೊತ್ತವು ಈ ಯೋಜನೆಯ ಅಡಿಯಲ್ಲಿ ಪಾಲಿಸಿದಾರನು ತೆಗೆದುಕೊಂಡಿರಬಹುದಾದ ಎಲ್ಲ ಪಾಲಿಸಿ ಗಳನ್ನು ಸೇರಿಸಿ ರೂ 2 ಲಕ್ಷವನ್ನು ಮೀರಬಾರದು

ಆಪ್ಷನಲ್ ಬೇನೆಫಿಟ್ಸ್ / ರೈಡರ್ಸ್

ಈ ಯೋಜನೆಯಲ್ಲಿ ಆಪ್ಷನಲ್ ಬೆನಿಫಿಟ್ ರೈಡರ್ಸ್ ಗಳನ್ನು ಸೇರಿಸಲು ಅವಕಾಶ ಇರುತ್ತದೆ. ಆದರೆ, ಕಂತಿನ ಮೊತ್ತದ ಜೊತೆಗೆ ಹೆಚ್ಚುವರಿ ಹಣವನ್ನು ರೈಡರ್ಸ್ ಗಳಿಗಾಗಿ ನೀಡಬೇಕಾಗುತ್ತದೆ.

ಎಲ್ ಐ ಸಿ ಯ ಅಪಘಾತದಿಂದಾಗುವ ಮರಣ ಹಾಗೂ ಅಂಗ ವೈಕಲ್ಯ (ಡಿಸ್ಎಬಿಲಿಟಿ) ಬೆನಿಫಿಟ್ ರೈಡರ್

ಪಾಲಿಸಿದಾರನು, ಈ ರೈಡರ್ ಅನ್ನು ಪಾಲಿಸಿಯ ಜೊತೆಗೆ ಯೋಜನೆಯ ಅವದಿಯ ಒಳಗೆ, ಯಾವಾಗ ಬೇಕಾದರೂ ಸೇರಿಸಬಹುದು. ಆದರೆ, ಇನ್ನೂ ನೀಡಬೇಕಾಗಿರುವ ಪ್ರೀಮಿಯಂ ಟರ್ಮ್ ಕನಿಷ್ಠ 5 ವರ್ಷಗಳಾದರೂ ಇರಬೇಕು. ಈ ರೈಡರ್ ಅಡಿಯಲ್ಲಿ, ಪಾಲಿಸಿದಾರನು ಅಪಘಾತದಿಂದ ಮರಣ ಹೊಂದಿದಲ್ಲಿ, ಅಪಘಾತ ಬೇನೆಫೀಟ್ ಮೊತ್ತ ವನ್ನು ಒಟ್ಟಾರೆ ಮೊತ್ತವಾಗಿ ಡೆತ್ ಬೇನೆಫೀಟ್ ಜೊತೆಗೆ ಸೇರಿಸಿ ನೀಡಲಾಗುವುದು.

ಎಲ್ ಐ ಸಿ ಯ ಅಪಘಾತದಿಂದಾಗುವ ಮರಣದ ಬೆನಿಫಿಟ್ ರೈಡರ್

ಮೇಲೆ ತಿಳಿಸಿದಂತೆ, ಪಾಲಿಸಿದಾರನು ಈ ರೈಡರ್ ಅನ್ನು ಕೂಡ, ಯಾವಾಗ ಬೇಕಾದರೂ ಪಾಲಿಸಿಯ ಜೊತೆ ಸೇರಿಸಿಕೊಳ್ಳಬಹುದು. ಮೇಲೆ ತಿಳಿಸಿರುವ ನಿಬಂದನೆ ಇದಕ್ಕೂ ಒಳ ಪಡುತ್ತದೆ. ಅಂದರೆ, ಪಾಲಿಸಿದಾರನು ಇನ್ನೂ ನೀಡಬೇಕಾಗಿರುವ ಪ್ರೀಮಿಯಂ ಟರ್ಮ್ ಕನಿಷ್ಠ 5 ವರ್ಷಗಳಾದರೂ ಇರಬೇಕು. ಪಾಲಿಸಿದಾರನು ಅಪಘಾತದಿಂದ ಮರಣ ಹೊಂದಿದಲ್ಲಿ, ಅಪಘಾತ ಬೇನೆಫೀಟ್ ಮೊತ್ತ ವನ್ನು ಒಟ್ಟಾರೆ ಮೊತ್ತವಾಗಿ ಡೆತ್ ಬೇನೆಫೀಟ್ ಜೊತೆಗೆ ಸೇರಿಸಿ ನೀಡಲಾಗುವುದು.

ಪ್ರೀಮಿಯಂಗಳ ಲೆಕ್ಕಾಚಾರದ ಟೇಬಲ್

ಈ ಕೆಳ ಕಂಡ ಟೇಬಲ್ ನಲ್ಲಿ ಪ್ರೀಮಿಯಂ ಬಾಬ್ತು ನೀಡಬೇಕಾದ ಹಣ, ಪಾಲಿಸಿಯ ಅವದಿ ಹಾಗೂ ವಯಸ್ಸಿನ ವಿವರಗಳಿವೆ. ಪ್ರೀಮಿಯಂ ಮೊತ್ತವನ್ನು ಪ್ರತಿ ರೂ 1000 ಕ್ಕೆ ಎಂದು ಲೆಕ್ಕ ಹಾಕಬೇಕು. ಇದರಲ್ಲಿ ಅನ್ವಯವಾಗುವ  ತೆರಿಗೆ ಸೇರಿರುವುದಿಲ್ಲ.

ವಯಸ್ಸು

10 ವರ್ಷದ ಪಾಲಿಸಿ ಅವದಿ (ಟರ್ಮ್)

12 ವರ್ಷದ ಪಾಲಿಸಿ ಅವದಿ (ಟರ್ಮ್)

15 ವರ್ಷದ ಪಾಲಿಸಿ ಅವದಿ (ಟರ್ಮ್)

18

85.45

68.25

51.50

25

85.55

68.35

51.60

35

85.90

68.80

52.20

45

87.60

70.75

54.50

55

91.90

75.40

59.80

ಸೂಚನೆ: ಪಾಲಿಸಿದಾರ ವಯಸ್ಸು, ಪಾಲಿಸಿ ಟರ್ಮ್, ಸಮ್ ಅಶ್ಶುರ್ಡ್ಇವುಗಳ ಮೇಲೆ ಲೆಕ್ಕ ಹಾಕಿದಾಗ ವಾರ್ಷಿಕ ಪ್ರೀಮಿಯಂ ಮೊತ್ತವು ರೂ 2524 ರಿಂದ ರೂ 17612 ರವರೆಗೂ ಆಗಬಹುದು.

ಪ್ರೀಮಿಯಂಗಳ ಮೇಲೆ ರಿಯಾಯತಿ

ಒಂದು ವರ್ಷಕ್ಕೊಮ್ಮೆ ನೀಡುವ  ಪ್ರೀಮಿಯಂ ಮೇಲೆ ಮೇಲ್ಕಾಣಿಸಿದ ಮೊತ್ತದಲ್ಲಿ 2 % ರಿಯಾಯತಿ ದೊರಕುವುದು

ಅರ್ದ ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ ಮೇಲೆ ಮೇಲ್ಕಾಣಿಸಿದ ಮೊತ್ತದಲ್ಲಿ 1 % ರಿಯಾಯತಿ ದೊರೆಯುವುದು

3 ತಿಂಗಳಿಗೊಮ್ಮೆ ನೀಡುವ ಪ್ರೀಮಿಯಂ ಮೇಲೆ ಯಾವುದೆ ರಿಯಾಯತಿ ಇರುವುದಿಲ್ಲ.

ತಿಂಗಳಿಗೊಮ್ಮೆ ಪ್ರೀಮಿಯಂ ನ್ನು ನೀಡಿದಲ್ಲಿ, ಮೇಲ್ಕಾಣಿಸಿದ ಮೊತ್ತಕ್ಕೆ  3% ಮೊತ್ತವನ್ನು ಹೆಚ್ಚುವರಿ ಸೇರಿಸಿ ನೀಡಬೇಕಾಗುತ್ತದೆ.

ಹೆಚ್ಚಿನ ಬೇಸಿಕ್ ಸಮ್ ಅಶ್ಶುರ್ಡ್ ಗೆ ದೊರೆಯುವ ರಿಯಾಯತಿ

ಬೇಸಿಕ್ ಸಮ್ ಅಶ್ಶುರ್ಡ್

ರಿಯಾಯತಿ

ರೂ 50,000 ದಿಂದ 1,45,000 ದವರೆಗೆ

ಇರುವುದಿಲ್ಲ

ರೂ 1,50,000 ದಿಂದ ರೂ 1,95,000 ದವರೆಗೆ

ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತದ ಶೇಕಡಾ 1.50 ರಷ್ಟು

ರೂ 2,00,000 ಕ್ಕೆ

ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತದ ಶೇಕಡಾ 2.00 ರಷ್ಟು

ಯೋಜನೆಯಲ್ಲಿ ಸೇರಿರದೆ ಇರುವುದು

ಈ ಯೋಜನೆಯಲ್ಲಿ ಆತ್ಮಹತ್ಯೆಯಿಂದ ಆಗುವ ಮರಣವು ಸೇರಿರುವುದಿಲ್ಲ.

ಪಾಲಿಸಿದಾರನು ಪಾಲಿಸಿಯನ್ನು ಪಡೆದ 12 ತಿಂಗಳ ಒಳಗೆ ಆತ್ಮಹತ್ಯೆಯನ್ನು ಮಾಡಿಕೊಂಡಲ್ಲಿ, ಕಂಪನಿಯು ಆ ಪಾಲಿಸಿಯಲ್ಲಿ ನಮೂದಿಸಿರುವ ನಾಮಿನಿಗೆ ಯಾವುದೇ ಹಣವನ್ನು ನೀಡುವುದಿಲ್ಲ. ಆದರೆ ಪಾಲಿಸಿಯು ಚಾಲ್ತಿಯಲ್ಲಿದ್ದಲ್ಲಿ ಅದುವರೆವಿಗೂ ನೀಡಿರುವ ಕಂತುಗಳ ಹಣದ 80 % ಮೊತ್ತವನ್ನು ನಾಮಿನಿಗೆ ನೀಡಲಾಗುವುದು. ಇನ್ನಿತರೆ ಕ್ಲೈಂಗಳಿಗೆ ಇಂತಹ ಪಾಲಿಸಿಯು ಅರ್ಹತೆ ಹೊಂದುವುದಿಲ್ಲ.

ಅದೇ ರೀತಿ ಪಾಲಿಸಿಯ ರಿನ್ಯುವಲ್ ಮಾಡಿದ 12 ತಿಂಗಳುಗಳ ಒಳಗೆ, ಪಾಲಿಸಿದಾರನು ಆತ್ಮಹತ್ಯೆ ಮಾಡಿಕೊಂಡಲ್ಲಿ, ನಾಮಿನಿಗೆ, ಅದುವರೆವಿಗೂ ನೀಡಿರುವ ಪ್ರೀಮಿಯಂ ಗಳ ಮಿತ್ತದ 80 % ಅಥವಾ ಸರಂಡರ್ ಮೌಲ್ಯ ಇವೆರಡರಲ್ಲಿ ಯಾವುದು ಹೆಚ್ಚೋ ಅದನ್ನು ನೀಡಲಾಗುವುದು.  ಬೇರೆರೀತಿಯ ಯಾವುದೇ ಕ್ಲೈಮ್ ಗಳನ್ನು ಕಂಪನಿಯು ಗಣನೆಗೆ ತೆಗೆದುಕೊಳ್ಳುವುದಿಲ್ಲ.

ಮೇಲ್ಕಾಣಿಸಿದ ಎರಡೂ ಸನ್ನಿವೇಶಗಳು ಕಂಪನಿಯ ನಿಯಮಗಳಿಗೆ ಬದ್ದ ಆಗಿರುವುದಿಲ್ಲ, ಆದ್ದರಿಂದಲೇ, ಕಂಪನಿಯು ಈ ಸಂದರ್ಭಗಳಲ್ಲಿ ಕ್ಲೈಮ್ ಗಳಿಗೆ ಮಾನ್ಯತೆ ನೀಡಲು ಒಪ್ಪುವುದಿಲ್ಲ.

ಪಾಲಿಸಿಯನ್ನು ರದ್ದುಗೊಳಿಸುವುದು

ನೀವು ಪಡೆದಿರುವ ಪಾಲಿಸಿಯು ಈ ಕೆಳಕಂಡ ಘಟನೆಗಳಲ್ಲಿ ಯಾವುದು ಮೊದಲು ಆಗುತ್ತದೆಯೋ ಆ ದಿವಸದಿಂದ ರದ್ದುಗೊಳ್ಳುತ್ತದೆ.  

 • ಡೆತ್ ಬೆನಿಫಿಟ್ ಮೊತ್ತವನ್ನು ನೀಡಿದ ದಿವಸದಿಂದ
 • ಸರಂಡರ್ ಬೆನಿಫಿಟ್ ಅನ್ನು ಪಾಲಿಸಿದಾರನಿಗೆ ನೀಡಿದ ದಿವಸದಿಂದ
 • ಪಾಲಿಸಿಯು ಮೆಚೂರಿಟೀ ಆದ ದಿವಸದಿಂದ
 • ಸಾಲದ ಬಾಬ್ತು ಹಿಂದಿರುಗಿಸಬೇಕಾದ  ಹಣವನ್ನು ಪಾವತಿಸದೆ ಇದ್ದ ದಿವಸದಿಂದ
 • ಪಾಲಿಸಿದಾರನು ಪಾಲಿಸೀಯು ಲ್ಯಾಪ್ಸ್ ಆದ ಎರಡು ವರ್ಷದ ಒಳಗೆ ರಿವೈವ್ ಮಾಡದೆ ಇದ್ದ ಪಕ್ಷದಲ್ಲಿ ಆ ದಿವಸದಿಂದ
 • ಫ್ರೀ ಲುಕ್ ಪೀರಿಯಡ್ ನಲ್ಲಿ  ಪಾಲಿಸಿದಾರನು ಪಾಲಿಸಿಯನ್ನು ಹಿಂದಿರುಗಿಸಿ, ಅದರ ಬಾಬ್ತು ಕಟ್ಟಿದ್ದ ಹಣವನ್ನು ಕಂಪನಿಯು ಹಿಂದಿರುಗಿಸಿದ ದಿವಸದಿಂದ

ಕ್ಲೈಮ್ ಗಾಗಿ ಬೇಕಾಗುವ ದಾಖಲೆಗಳು

ಡೆತ್ ಕ್ಲೈಮ್

ಪಾಲಿಸಿದಾರನು ಮರಣ ಹೊಂದಿದಲ್ಲಿ ಕ್ಲೈಮಂಟ್ ಆದವನು ನೀಡಬೇಕಾಗಿರುವ ದಾಖಲೆಗಳು ಈ ಕೆಲ ಕಂಡಂತಿವೆ

 • ಕ್ಲೈಮ್ ಫಾರ್ಮ್ಸ್
 • ಪಾಲಿಸಿಯ ಮೂಲ  ದಾಖಲೆಗಳು
 • ಎನ್‌ಈ‌ಎಫ್‌ಟಿ ಮ್ಯಾನ್ಡೇಟ್
 • ಟೈಟಲ್ ಬಗ್ಗೆ ಪುರಾವೆ(ಪ್ರೂಫ್)
 • ಪಾಲಿಸಿದಾರನ ಸಾವಿನ ಬಗ್ಗೆ ಪುರಾವೆ
 • ಮರಣಕ್ಕೆ ಮುಂಚೆ ಪಾಲಿಸಿದಾರನಿಗೆ ನೀಡಲಾದ ವೈದ್ಯಕೀಯ ಚಿಕಿತ್ಸೆಗಳ ವಿವರ
 • ಶಾಲೆ / ಕಾಲೇಜ್ / ಎಂಪ್ಲಾಯರ್ ಪ್ರಮಾಣ ಪತ್ರ
 • ಪಾಲಿಸಿದಾರನ ವಯಸ್ಸಿನ ಬಗ್ಗೆ ಪುರಾವೆ

ಪಾಲಿಸಿದಾರನ ಮರಣವಾದ 90 ದಿವಸದ ಒಳಗೆ, ಕಂಪನಿಗೆ ಮೇಲ್ಕಾಣಿಸಿದ ಎಲ್ಲ ದಾಖಲೆಗಳ ಸಮೇತ ಪತ್ರದ ಮುಖೇನ ತಿಳಿಸುವುದು

ಮೆಚೂರಿಟೀ / ಸರಂಡರ್ ಕ್ಲೈಮ್

ಮೆಚೂರಿಟೀ ಕ್ಲೈಮ್ ಮಾಡುವಾಗ, ಪಾಲಿಸಿದಾರನು ಈ ಕೆಳ ಕಂಡ ದಾಖಲೆಗಳನ್ನು  ನೀಡಬೇಕು

 • ಒಂದು ಡಿಸ್ಚಾರ್ಜ್ ಫಾರ್ಮ್
 • ಮೂಲ ಪಾಲಿಸಿಯ ದಾಖಲೆಗಳು
 • ಕ್ಲೈಮಂಟ್ ನೀಡಬೇಕಾದ ಎನ್‌ಈ‌ಎಫ್‌ಟಿ ಮ್ಯಾನ್ಡೇಟ್
 • ವಯಸ್ಸಿನ ಬಗ್ಗೆ ಪುರಾವೆ (ಮೊದಲು ನೀಡಿಲ್ಲದಿದ್ದ ಪಕ್ಷದಲ್ಲಿ)

ಇದರ ಜೊತೆಗೆ ಬೇರೆ ಯಾವುದೇ ಶಾಸನಬದ್ದವಾದ  ದಾಖಲೆಗಳನ್ನು ಕಂಪನಿಯು ಕೇಳಿದ ಪಕ್ಷದಲ್ಲಿ ಅದನ್ನು ನೀಡಬೇಕಾಗುತ್ತದೆ.