Sehwag PX
ಎಲ್ ಐ ಸಿ ನವಜೀವನ್ ಪ್ಲಾನ್
  • ಅತ್ಯುತ್ತಮ ಯೋಜನೆಗಳು
  • ಸುಲಭ ಹೋಲಿಕೆ
  • ತಕ್ಷಣದ ಖರೀದಿ

#Virukipolicy | T&C*

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಹುಟ್ಟಿದ ದಿನಾಂಕ
ಆದಾಯ
| ಲಿಂಗ

1

2

ಫೋನ್ ಸಂಖ್ಯೆ
ಹೆಸರು
ಇಮೇಲ್
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಎಲ್ ಐ ಸಿ ನವಜೀವನ್ ಪ್ಲಾನ್ ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯ ಬಿಡುಗಡೆ ಮಾಡಿರುವ ಒಂದು ಹೊಸ ಯೋಜನೆ. ಇದು ಒಂದು ನಾನ್-ಲಿಂಕ್ಡ್ ಲಾಭದಾಯಕ ಎಂಡೋಮೆಂಟ್ ಅಶ್ಯುರೆನ್ಸ್ ಪ್ಲಾನ್ ಆಗಿರುತ್ತದೆ. ಇದು ಒಂದು ಸಂಯೋಜಿತ ಯೋಜನೆ ಆಗಿದ್ದು, ಪಾಲಿಸಿದಾರನ ಆಕಸ್ಮಿಕ ಮರಣವು ಪಾಲಿಸಿಯ ಅವದಿ ಒಳಗೆ ಆದಲ್ಲಿ, ಅವನ ಕುಟುಂಬವು ಆರ್ಥಿಕ ಸಂಕಷ್ಟಕ್ಕೆ ಸಿಲುಕದೆ ಇರುವ ರೀತಿಯಲ್ಲಿ ಸಹಾಯ ಮಾಡುತ್ತದೆ. ಹಾಗೆಯೇ, ಪಾಲಿಸಿದಾರನಿಗೆ, ಮೆಚೂರಿಟೀ ಮೊತ್ತವೆಂದು ಒಂದು ಖಚಿತವಾದ ಮೊತ್ತವನ್ನು ನೀಡುತ್ತದೆ.

ಇದು ಒಂದು ಆನ್ಲೈನ್ ನಲ್ಲಿ ಕೂಡ ಪಡೆಯುವ ಪ್ಲಾನ್ ಆಗಿರುತ್ತದೆ. ಈ ಪಾಲಿಸಿಯನ್ನು ಹೊಂದುವ ಇಚ್ಚೆ ಉಳ್ಳವರು, ಆನ್ಲೈನ್ ಮೂಲಕವಾಗಲಿ ಅಥವಾ ಹತ್ತಿರದ ಎಲ್ ಐ ಸಿ ಶಾಖೆಯಲ್ಲಾಗಲಿ ಪಡೆದುಕೊಳ್ಳಬಹುದು. ಈ ಪಾಲಿಸಿಯ ಬಾಬ್ತು ನೀಡಬೇಕಾಗಿರುವ ಪ್ರೀಮಿಯಂ ಅನ್ನು ಸಿಂಗಲ್ ಪ್ರೀಮಿಯಂ ಆಗಿ ಅಥವಾ 5 ವರ್ಷಗಳಲ್ಲಿ ನೀಡಬಹುದಾದ ಸಮನಾದ (5 ವರ್ಷಗಳ ಪ್ರೀಮಿಯಂ ನೀಡುವ ಟರ್ಮ್) ಕಂತುಗಳಲ್ಲಾಗಲಿ ನೀಡುವ ಅವಕಾಶ ಇರುತ್ತದೆ.

ಇದರ ವಿಶೇಷವೇನೆಂದರೆ, ಈ ಪಾಲಿಸಿಯನ್ನು 90 ದಿವಸ ಆಗಿರುವ ಮಗುವಿನ ಹೆಸರಿನಲ್ಲಿಯೂ ಕೂಡ ಪಡೆದುಕೊಳ್ಳಬಹುದು. ಈ ಪಾಲಿಸಿಯನ್ನು ಪಾಲಿಸಿದಾರನಿಗೆ 90 ದಿವಸ ವಯಸ್ಸು ಆದಾಗಲಿಂದ 65 ವರ್ಷದವರೆಗೂ ಪಡೆಯುವ ಅವಕಾಶ ಇರುತ್ತದೆ. ಆದರೆ ರಿಸ್ಕ್ ಕವರೆಜ್ 45 ನೇ ವರ್ಷಕ್ಕೆ ಮೇಲ್ಪಟ್ಟು  ಲಭ್ಯವಿರುತ್ತದೆ.

ಎಲ್ ಐ ಸಿ ಯು ಜನರಿಗೆ ಅನುಕೂಲವಾಗುವಂತೆ, ಪ್ರತಿ ವರ್ಷವೂ ಜನವರಿ ಇಂದ ಮಾರ್ಚ್ ಒಳಗೆ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಾ ಬಂದಿದೆ, ಆ ಪಾಲಿಸಿಗಳು, ಸಿಂಗಲ್ ಪ್ರೀಮಿಯಂ ಇರಬಹುದು ಅಥವಾ ಬೇರೆ ಬೇರೆ ರೀತಿಯ ಪ್ಲಾನ್ ಗಳು ಆಗಿರಬಹುದು. ಪಾಲಿಸಿದಾರರು ತಮ್ಮ ಆದಾಯ ತೆರಿಗೆ ಯ ಬಗ್ಗೆ ಸರಿಯಾದ ರೀತಿಯಲ್ಲಿ ಪ್ಲಾನ್ ಮಾಡಿಕೊಳ್ಳಲು  ಇದರಿಂದ ಅವಕಾಶ ಇರುತ್ತದೆ.

ಎಲ್ ಐ ಸಿ ನವ ಜೀವನ್ ಪ್ಲಾನ್ – ವೈಶಿಷ್ಟ್ಯಗಳು

ಎಲ್ ಐ ಸಿ ನವಜೀವನ್ ಪ್ಲಾನ್ ನ ವೈಶಿಷ್ಟ್ಯಗಳು ಈ ಕೆಳ ಕಂಡಂತಿವೆ

  • ಆನ್ಲೈನ್ ಹಾಗೂ ಎಲ್ ಐ ಸಿ ಯ ಶಾಖೆಗಳಲ್ಲಿ ಲಭ್ಯತೆ ಇದೆ
  • ಸಿಂಗಲ್ ಪ್ರೀಮಿಯಂ ಹಾಗೂ 5 ವರ್ಷಗಳ ಅವದಿಯಲ್ಲಿ ಸಮನಾದ ಪ್ರೀಮಿಯಂ ನೀಡಬಹುದಾದ ಎಂಡೋಮೆಂಟ್ ಪ್ಲಾನ್
  • ಪಾಲಿಸಿಯ ಅವದಿಯು (ಟರ್ಮ್) 10 ರಿಂದ 18 ವರ್ಷಗಳು
  • ಪಾಲಿಸಿಯ ಕನಿಷ್ಠ ಸಮ್ ಅಶ್ಶುರ್ಡ್ ಮೊತ್ತವು ರೂ 100000 ಇದ್ದು ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿ ಇಲ್ಲ.
  • ಪಾಲಿಸಿಯು ಪಾಲಿಸಿದಾರನ ವಯಸ್ಸು 90 ದಿವಸದಿಂದ 65 ವರ್ಷಗಳವರೆಗೆ ಲಭ್ಯವಿರುತ್ತದೆ.
  • ಆದಾಯ ತೆರಿಗೆ ಸೆಕ್ಷನ್ 80 ಸಿ ಅಡಿಯಲ್ಲಿ ಪಾವತಿಸಿರುವ ವಾರ್ಷಿಕ ಪ್ರೀಮಿಯಂ ಮೊತ್ತಕ್ಕೆ ವಿನಾಯತಿ ದೊರೆಯುತ್ತದೆ.
  • ಈ ಪಾಲಿಸಿಯ ಮೇಲೆ ಸಾಲ ಸೌಲಭ್ಯ ಇರುತ್ತದೆ.
  • ಡೆತ್ ಬೆನಿಫಿಟ್ ಅನ್ನು ಸಮನಾದ ಕಂತಿನಲ್ಲಿ ತೆಗೆದುಕೊಳ್ಳುವ ಅವಕಾಶ ಇರುತ್ತದೆ.

ಎಲ್ ಐ ಸಿ ನವ ಜೀವನ್ ಪ್ಲಾನ್ – ಖಚಿತ ಸಮ್ ಅಶ್ಶುರ್ಡ್ ಮೊತ್ತ

ಎಲ್ ಐ ಸಿ ನವಜೀವನ್ ಪ್ಲಾನ್ ಅಡಿಯಲ್ಲಿ, ಪಾಲಿಸಿದಾರನು ಖಚಿತ ಸಮ್ ಅಶ್ಶುರ್ಡ್ ಮೊತ್ತವನ್ನು ಆಯ್ಕೆ ಮಾಡಲು ಎರಡು ರೀತಿ ಇರುತ್ತದೆ.

  1. ಪಾಲಿಸಿದಾರನು ನೀಡುವ ಪ್ರೀಮಿಯಂ ಸಿಂಗಲ್ ಪ್ರೀಮಿಯಂ ಆಗಿ ನೀಡುವ ರೀತಿ  
  2. ಪಾಲಿಸಿದಾರನು ಪ್ರೀಮಿಯಂ ಗಳನ್ನು ಲಿಮಿಟೆಡ್ ಪ್ರೀಮಿಯಂ ಆಗಿ ನೀಡಿದಲ್ಲಿ

ಪಾಲಿಸಿದಾರನು ನೀಡುವ ಪ್ರೀಮಿಯಂ ಸಿಂಗಲ್ ಪ್ರೀಮಿಯಂ ಆಗಿದ್ದಲ್ಲಿ

ಪಾಲಿಸಿದಾರನು ಸಿಂಗಲ್ ಪ್ರೀಮಿಯಂ ನೀಡಿದ್ದಲ್ಲಿ, ಪಾಲಿಸಿಯ ಮೇಲಿನ ಡೆತ್ ಸಮ್ ಅಶ್ಶುರ್ಡ್ ಮೊತ್ತವು ಆತನು ನೀಡಿರುವ ಸಿಂಗಲ್ ಪ್ರೀಮಿಯಂ ಮೊತ್ತದೆ 10 ಪಟ್ಟು ಆಗಿರುತ್ತದೆ.

ಪಾಲಿಸಿದಾರನು ಪ್ರೀಮಿಯಂ ಗಳನ್ನು ಲಿಮಿಟೆಡ್ ಪ್ರೀಮಿಯಂ ಆಗಿ ನೀಡಿದಲ್ಲಿ

ಈ ಸಂಧರ್ಭದಲ್ಲಿ, ಪಾಲಿಸಿದಾರನಿಗೆ ಎರಡು ಅಪ್ಶನ್ ಗಳಿದ್ದು ಅದರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು  ಅಂದರೆ, ಪಾಲಿಸಿದಾರನು ಪ್ರೀಮಿಯಂ ಗಳನ್ನು ಮೇಲೆ ತಿಳಿಸಿರುವ ಹಾಗೆ 5 ವರ್ಷಗಳ ಸಮನಾದ ಕಂತುಗಳಲ್ಲಿ ನೀಡಬಹುದು. ಅಂತಹ ಪಾಲಿಸಿಗೆ ಈ ಕೆಳಗಿನ ಎರಡು ಅಪ್ಶನ್ ಲಭ್ಯ ಇರುತ್ತದೆ. ಇದರಲ್ಲಿಯೂ ಕೂಡ ಆತನ ವಯಸ್ಸಿನ ಆದಾರದ ಮೇಲೆ 3 ಆಪ್ಶನ್ ಗಳನ್ನು ನೀಡಲಾಗುತ್ತದೆ. ಅವು ಕೆಳ ಕಂಡಂತಿದೆ.

  • ಪಾಲಿಸಿದಾರನ ವಯಸ್ಸು 45 ವರ್ಷಗಳಿಗಿಂತ ಕಡಿಮೆ ಇದ್ದಲ್ಲಿ – ಡೆತ್ ಸಮ್ ಅಶ್ಶುರ್ಡ್ ಮೊತ್ತವು ವಾರ್ಷಿಕ ಪ್ರೀಮಿಯಂ ನ 10 ಪಟ್ಟು ಇರುತ್ತದೆ.
  • ಪಾಲಿಸಿದಾರನ ವಯಸ್ಸು 45 ವರ್ಷಗಳಿಗಿಂತ ಜಾಸ್ತಿ ಇದ್ದಲ್ಲಿ – ಅವನು ಈ ಕೆಳಗಿನ ಆಪ್ಶನ್ ಗಳಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಳ್ಳಬಹುದು.
  • ಡೆತ್ ಸಮ್ ಅಶ್ಶುರ್ಡ್ ಮೊತ್ತವು ವಾರ್ಷಿಕ ಪ್ರೀಮಿಯಂ ನ 10 ಪಟ್ಟು
  • ಡೆತ್ ಸಮ್ ಅಶ್ಶುರ್ಡ್ ಮೊತ್ತವು ವಾರ್ಷಿಕ ಪ್ರೀಮಿಯಂ ಗಿಂತ 7 ಪಟ್ಟು

ಎಲ್ ಐ ಸಿ ನವ ಜೀವನ್ ಪ್ಲಾನ್ – ಬೆನಿಫಿಟ್ ಗಳು

ಎಲ್ ಐ ಸಿ ಯು ತನ್ನ ಇಷ್ಟು ವರ್ಷದ ಇರುವಿಕೆಯಲ್ಲಿ, ಜನರಿಗೆ ಯಾವಾಗಲೂ ಅತ್ಯುತ್ತಮವಾದ ಹಾಗೂ ಅವರಿಗೆ ಉಪಯೋಗವಾಗುವಂತಹ ಪಾಲಿಸಿಗಳನ್ನು ನೀಡುವುದರಲ್ಲಿ ಮುಂದಿದೆ. ಅದರಲ್ಲಿಯೂ ಪಾಲಿಸಿಗಳಿಗೆ ಅನೇಕ ಬೆನಿಫಿಟ್ ಗಳನ್ನು ಪಾಲಿಸಿಯ ಮೂಲಕ ನೀಡುತ್ತ ಬಂದಿದೆ. ಪಾಲಿಸಿದಾರನು  ಪಾಲಿಸಿಯ ಆವದಿ ಮುಗಿಯುವವರೆಗೂ ಜೀವಂತ ಇದ್ದಲ್ಲಿ, ಅವನಿಗೆ ಒಂದು ಖಚಿತ ಮೆಚೂರಿಟೀ ಮೊತ್ತವನ್ನು ಹಾಗೂ ಆವದಿಯ ಮದ್ಯದಲ್ಲಿ ಆಕಸ್ಮಿಕ ಮರಣ ಹೊಂದಿದಲ್ಲಿ ಖಚಿತವಾದ ಸಮ್ ಅಶ್ಶುರ್ಡ್ ಆನ್ ಡೆತ್ ಮೊತ್ತವನ್ನು ನೀಡಿ ಅವನ ಅಥವಾ ಅವನ ಕುಟುಂಬದವರ ಮುಂದಿನ ಜೀವನಕ್ಕೆ ಆದಷ್ಟು ಸಹಾಯವನ್ನು ಮಾಡುತ್ತಲಿದೆ. ಈ ಪಾಲಿಸಿಯಲ್ಲಿಯೂ ಕೆಲವು ಬೆನಿಫಿಟ್ ಗಳಿದ್ದು, ಅದನ್ನು ಕೆಳಗೆ ವಿವರಿಸಲಾಗಿದೆ.

ಡೆತ್ ಬೆನಿಫಿಟ್

ಎಲ್ಲಾ ಜೀವ ವಿಮಾ ಪಾಲಿಸಿಗಳಲ್ಲಿ ಇರುವಂತೆ, ಎಲ್ ಐ ಸಿ ನವ ಜೀವನ್ ಪ್ಲಾನ್ ನಲ್ಲಿಯೂ ಕೂಡ ಡೆತ್ ಬೆನಿಫಿಟ್ ಇರುತ್ತದೆ, ಅದರ ಪ್ರಕಾರ ಪಾಲಿಸಿದಾರನು ಪಾಲಿಸಿಯ ಅವದಿಯ ಒಳಗೆ ಮರಣ ಹೊಂದಿದಲ್ಲಿ, ಡೆತ್ ಬೆನಿಫಿಟ್ ಅನ್ನು ನೀಡಲಾಗುವುದು.

ಡೆತ್ ಬೆನಿಫಿಟ್ ನೀಡಲು ಈ ಕೆಳ ಕಂಡ ಸಂಧರ್ಭಗಳನ್ನು ಗಮನಕ್ಕೆ ತೆಗೆದುಕೊಳ್ಳಲಾಗುವುದು.

  • ಪಾಲಿಸಿಯು 5 ವರ್ಷಗಳನ್ನು ಮುಗಿಸದೆ ಇದ್ದ ಪಕ್ಷದಲ್ಲಿ:
  • ಪಾಲಿಸಿದಾರನ ಮರಣವು ರಿಸ್ಕ್ ಕವರೆಜ್ ಶುರು ಆಗುವ ಮುಂಚೆ ಆದಲ್ಲಿ – ಅವನು ನೀಡಿರುವ ಪ್ರೀಮಿಯಂ ಗಳ ಒಟ್ಟು ಮೊತ್ತವನ್ನು ಯಾವುದೇ ರೀತಿಯ ಬಡ್ಡಿಯನ್ನು ಸೇರಿಸದೆ ನೀಡಲಾಗುವುದು
  • ಪಾಲಿಸಿದಾರನ ಮರಣವು ರಿಸ್ಕ್ ಕವರೆಜ್ ಶುರು ಆದ ಮೇಲೆ ಆದಲ್ಲಿ – ನಿಯಮದ ಪ್ರಕಾರ ನೀಡಬೇಕಾಗಿರುವ ಸಮ್ ಅಶ್ಶುರ್ಡ್ ಆನ್ ಡೆತ್ ಮೊತ್ತವನ್ನು ನೀಡಲಾಗುವುದು.
  • ಪಾಲಿಸಿಯು 5 ವರ್ಷಗಳನ್ನು ಮುಗಿಸಿ ತದ ನಂತರ ಪಾಲಿಸಿದಾರನು ಪಾಲಿಸಿಯು ಮೆಚೂರಿಟೀ ಆಗುವುದರ ಒಳಗೆ ಮರಣ ಹೊಂದಿದಲ್ಲಿ – ನಿಯಮದ ಪ್ರಕಾರ ಸಮ್ ಅಶ್ಶುರ್ಡ್ ಆನ್ ಡೆತ್ ಮೊತ್ತದ ಜೊತೆಗೆ ಲಾಯಲ್ಟಿ ಅಡಿಷನ್ ಮೊತ್ತವನ್ನು ಸೇರಿಸಿ ನೀಡಲಾಗುವುದು.

ಮೆಚೂರಿಟೀ ಬೆನಿಫಿಟ್

ಪಾಲಿಸಿದಾರನು ಪಾಲಿಸಿಯ ಆವದಿಯು ಮುಗಿಯುವವರೆಗೂ ಜೀವಂತವಾಗಿ ಇದ್ದಲ್ಲಿ, ಹಾಗೂ ಅದುವರೆಗಿನ ಎಲ್ಲಾ ಪ್ರೀಮಿಯಂ ಗಳನ್ನು ಪಾವತಿಸಿದ್ದಲ್ಲಿ, ಆತನಿಗೆ ಸಮ್ ಅಶ್ಶುರ್ಡ್ ಆನ್ ಮೆಚೂರಿಟೀ ಮೊತ್ತ ಮತ್ತು ಅದರ ಜೊತೆಗೆ ಲಾಯಲ್ಟಿ ಅಡಿಷನ್ ಮೊತ್ತವನ್ನೂ ಸೇರಿಸಿ ಕೊಡಲಾಗುವುದು.

ಪಾಲಿಸಿಯು ಬಂಡವಾಳ ಹೂಡಿಕೆ ಹಾಗೂ ಆದರಿಂದ ಉತ್ಪನ್ನವಾಗುವ ಲಾಭದಲ್ಲಿ ಪಾಲುಗೊಳ್ಳುವಿಕೆ

ಎಲ್ ಐ ಸಿ ಯ ಇತರೆ ವಿಮಾ ಯೋಜನೆಗಳಲ್ಲಿ ಇರುವಂತೆ, ಈ ಪಾಲಿಸಿಯು ಕೂಡ, ಕಾರ್ಪೊರೇಷನ್ ನ ನಿಯಮದ ಪ್ರಕಾರ ಬಂಡವಾಳ ಹೂಡಿಕೆ ಹಾಗೂ ಅದರಿಂದ ಉತ್ಪನ್ನವಾಗುವ ಲಾಭದಲ್ಲಿ ಬಾಗಿ ಆಗುತ್ತದೆ. ಆದ್ದರಿಂದ, ಪಾಲಿಸಿಯ ಮೇಲಿನ ಲಾಭದ ಬಾಬ್ತು, ಪಾಲಿಸಿಯು ಲಾಯಲ್ಟಿ ಅಡಿಷನ್ ಮೊತ್ತಕ್ಕೆ ಅರ್ಹವಾಗುತ್ತದೆ. ಅಂದರೆ, ಪಾಲಿಸಿಯು 5 ವರ್ಷಗಳನ್ನು ಮುಗಿಸಿದ್ದಲ್ಲಿ ಹಾಗೂ ಅಲ್ಲಿಯವರೆಗಿನ ಎಲ್ಲಾ ಪ್ರೀಮಿಯಂ ಗಳು ಪಾವತಿ ಆಗಿದ್ದಲ್ಲಿ, ಪಾಲಿಸಿಯ ಡೆತ್ ಕ್ಲೆಯಿಮ್ ಅಥವಾ ಮೆಚೂರಿಟೀ ಸಮಯದಲ್ಲಿ ಸಮ್ ಅಶ್ಶುರ್ಡ್ ಆನ್ ಡೆತ್ ಅಥವಾ  ಸಮ್ ಅಶ್ಶುರ್ಡ್ ಆನ್ ಮೆಚೂರಿಟೀ ಮೊತ್ತಕ್ಕೆ ಲಾಯಲ್ಟಿ ಅಡಿಷನ್ ಮೊತ್ತವನ್ನು ಸೇರಿಸಿ ಒಟ್ಟು ಮೊತ್ತವನ್ನು ನೀಡಲಾಗುವುದು.

ಅಪ್ಶನಲ್ ರೈಡರ್ಸ್ ಬೆನಿಫಿಟ್ (ಸ್ವ ಇಚ್ಚೆಯಿಂದ ತೆಗೆದುಕೊಳ್ಳುವ ಬೆನಿಫಿಟ್ ಗಳು)

ಎಲ್ ಐ ಸಿ ಯು ಈ ಕೆಳ ಕಂಡ ರೈಡರ್ ಅನ್ನು ಪಾಲಿಸಿದಾರನ ಉಪಯೋಗಕ್ಕೋಸ್ಕರ ಸ್ವ ಇಚ್ಚೆಯಿಂದ ತೆಗೆದುಕೊಳ್ಳುವ ಅವಕಾಶ ನೀಡುತ್ತದೆ. ಆದರೆ ಈ ರೈಡರ್ ನ ಸಲುವಾಗಿ ಹೆಚ್ಚುವರಿ ಪ್ರೀಮಿಯಂ ಮೊತ್ತವನ್ನು ನೀಡಬೇಕಾಗುತ್ತದೆ.

ಎಲ್ ಐ ಸಿ ಅಕ್ಸಿಡೆಂಟಲ್ (ಆಕಸ್ಮಿಕ) ಮರಣ ಮತ್ತು ಡಿಸ್ಎಬಿಲಿಟಿ (ಅಂಗ ವೈಕಲ್ಯ) ಬೆನಿಫಿಟ್ ರೈಡರ್

ಪಾಲಿಸಿದಾರನ ಆಕಸ್ಮಿಕ ಮರಣವು ಅವದಿಯ ಒಳಗೆ ಆದಲ್ಲಿ, ಅಂತಹ ಪಾಲಿಸಿಗೆ ನಿಯಮದ ಪ್ರಕಾರ, ಆಕ್ಸಿಡೆಂಟಲ್ ಬೆನಿಫಿಟ್ ರೈಡರ್ ಸಮ್ ಅಶ್ಶುರ್ಡ್ ಮೊತ್ತವನ್ನು ಬೇಸಿಕ್ ಪ್ಲಾನ್ ಸಮ್ ಅಶ್ಶುರ್ಡ್ ಮೊತ್ತದ ಜೊತೆಗೆ ಸೇರಿಸಿ ನೀಡಲಾಗುವುದು.

ಆಕ್ಸಿಡೆಂಟಲ್ ಬೆನಿಫಿಟ್ ರೈಡರ್ ನ ಸಮ್ ಅಶ್ಶುರ್ಡ್ ಮೊತ್ತವು ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತಕ್ಕೆ ಸಮನಾಗಿ ಇದ್ದು, ಪಾಲಿಸಿದಾರನು ಆವರೆವಿಗೂ ಪಡೆದಿರುವ ಎಲ್ಲಾ ವಿಮಾ ಯೋಜನೆಗಳ ಸಮ್ ಅಶ್ಶುರ್ಡ್ ಮೊತ್ತ ಹಾಗೂ ಈಗ ಪಡೆಯ ಬಯಸಿರುವ ಯೋಜನೆಯ  ಆಕ್ಸಿಡೆಂಟಲ್ ಬೆನಿಫಿಟ್ ರೈಡರ್ ನ ಸಮ್ ಅಶ್ಶುರ್ಡ್ ಮೊತ್ತವನ್ನೂ ಸೇರಿಸಿ ರೂ 100 ಲಕ್ಷಕ್ಕಿಂತ ಹೆಚ್ಚು ಆಗಬಾರದು.

ಎಲ್ ಐ ಸಿ ನವ ಜೀವನ್ ಪ್ಲಾನ್ – ಇತರೆ ಬೆನಿಫಿಟ್ ಗಳು

ಸಾಲ ಸೌಲಭ್ಯ

ಎಲ್ ಐ ಸಿ ಯ ಇತರೆ  ವಿಮಾ ಯೋಜನೆಗಳಲ್ಲಿ ಇರುವಂತೆ, ಈ ಪ್ಲಾನ್ ಅಡಿಯಲ್ಲೂ ಕೂಡ ಸಾಲ ಸೌಲಭ್ಯ ಇರುತ್ತದೆ. ಅಂದರೆ, ಪಾಲಿಸಿದಾರನು, ತನಗೆ ಅತ್ಯಂತ ಅವಶ್ಯಕತೆ ಇದ್ದಲ್ಲಿ, ಈ ಪಾಲಿಸಿಯ ಮೇಲೆ ಸಾಲ ಪಡೆಯಲು ಅರ್ಹನಾಗಿರುತ್ತಾನೆ

ಆದಾಯ ತೆರಿಗೆ ಯ ಮೇಲೆ ಸಿಗುವ ವಿನಾಯತಿ

ಪಾಲಿಸಿದಾರನು ಈ ಪಾಲಿಸಿಯ ಬಾಬ್ತು ನೀಡುವ ವಾರ್ಷಿಕ ಪ್ರೀಮಿಯಂ ಮೊತ್ತವು ಆದಾಯ ತೆರಿಗೆ ಯ ಅನ್ವಯವಾಗುವ ಸೆಕ್ಷನ್ 80 ಸಿ  ಪ್ರಕಾರ ವಿನಾಯತಿ ಹೊಂದಿರುತ್ತದೆ.

ಎಲ್ ಐ ಸಿ ನವ ಜೀವನ್ ಪ್ಲಾನ್ – ಅರ್ಹತೆಗಳು

ಕನಿಷ್ಠ ಸಮ್ ಅಶ್ಶುರ್ಡ್ ಮೊತ್ತ

ರೂ 100000

ಗರಿಷ್ಠ ಸಮ್ ಅಶ್ಶುರ್ಡ್ ಮೊತ್ತ

ಯಾವುದೇ ಮಿತಿ ಇರುವುದಿಲ್ಲ

ಪಾಲಿಸಿ ಪಡೆಯುವಾಗ ಪಾಲಿಸಿದಾರನ ಕನಿಷ್ಠ ವಯಸ್ಸು

ಸಿಂಗಲ್ ಪ್ರೀಮಿಯಂ – 90 ದಿವಸಗಳು  (ಮುಗಿದಿರಬೇಕು)

ಲಿಮಿಟೆಡ್ ಪ್ರೀಮಿಯಂ – 90 ದಿವಸಗಳು (ಮುಗಿದಿರಬೇಕು) ಡೆತ್ ಸಮ್ ಅಶ್ಶುರ್ಡ್ ಮೊತ್ತವು ವಾರ್ಷಿಕ ಪ್ರೀಮಿಯಂ ನ 10 ಪಟ್ಟು ಆಗಿದ್ದಲ್ಲಿ  

ಲಿಮಿಟೆಡ್ ಪ್ರೀಮಿಯಂ – 45 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ) ಡೆತ್ ಸಮ್ ಅಶ್ಶುರ್ಡ್ ಮೊತ್ತವು ವಾರ್ಷಿಕ ಪ್ರೀಮಿಯಂ ನ 10 ಪಟ್ಟು ಅಥವಾ  7 ಪಟ್ಟು ಆಗಿದ್ದಲ್ಲಿ

ಪಾಲಿಸಿ ಪಡೆಯುವಾಗ ಪಾಲಿಸಿದಾರನ ಗರಿಷ್ಠ ವಯಸ್ಸು

ಸಿಂಗಲ್ ಪ್ರೀಮಿಯಂ – 44 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ)

ಲಿಮಿಟೆಡ್ ಪ್ರೀಮಿಯಂ – 60 ವರ್ಷಗಳು (ಮುಗಿದಿರಬೇಕು) ಡೆತ್ ಸಮ್ ಅಶ್ಶುರ್ಡ್ ಮೊತ್ತವು ವಾರ್ಷಿಕ ಪ್ರೀಮಿಯಂ ನ 10 ಪಟ್ಟು ಆಗಿದ್ದಲ್ಲಿ  

ಲಿಮಿಟೆಡ್ ಪ್ರೀಮಿಯಂ – 65 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ) ಡೆತ್ ಸಮ್ ಅಶ್ಶುರ್ಡ್ ಮೊತ್ತವು ವಾರ್ಷಿಕ ಪ್ರೀಮಿಯಂ ನ 10 ಪಟ್ಟು ಅಥವಾ  7 ಪಟ್ಟು ಆಗಿದ್ದಲ್ಲಿ

ಪಾಲಿಸಿಯು ಮೆಚೂರಿಟೀ ಆಗುವಾಗ ಪಾಲಿಸಿದಾರನ ಗರಿಷ್ಠ ವಯಸ್ಸು

ಸಿಂಗಲ್ ಪ್ರೀಮಿಯಂ – 62 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ)

ಲಿಮಿಟೆಡ್ ಪ್ರೀಮಿಯಂ –75 ವರ್ಷಗಳು (ಮುಗಿದಿರಬೇಕು) ಡೆತ್ ಸಮ್ ಅಶ್ಶುರ್ಡ್ ಮೊತ್ತವು ವಾರ್ಷಿಕ ಪ್ರೀಮಿಯಂ ನ 10 ಪಟ್ಟು ಆಗಿದ್ದಲ್ಲಿ  

ಲಿಮಿಟೆಡ್ ಪ್ರೀಮಿಯಂ –80 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ) ಡೆತ್ ಸಮ್ ಅಶ್ಶುರ್ಡ್ ಮೊತ್ತವು ವಾರ್ಷಿಕ ಪ್ರೀಮಿಯಂ ನ 10 ಪಟ್ಟು ಅಥವಾ  7 ಪಟ್ಟು ಆಗಿದ್ದಲ್ಲಿ

ಪಾಲಿಸಿಯ ಅವದಿ (ಟರ್ಮ್)

10 ರಿಂದ 18 ವರ್ಷಗಳು

ಪಾಲಿಸಿಯ ಪ್ರೀಮಿಯಂ ಅನ್ನು ಪಾವಟಿಸುವ ರೀತಿ

ಸಿಂಗಲ್ ಪ್ರೀಮಿಯಂ

ವರ್ಷಕ್ಕೊಮ್ಮೆ, ಆರ್ದ ವರ್ಷಕ್ಕೊಮ್ಮೆ, 3 ತಿಂಗಳಿಗೊಮ್ಮೆ, ತಿಂಗಳಿಗೊಮ್ಮೆ (ಎನ್‌ಏ‌ಸಿ‌ಎಚ್ ಮುಖಾಂತರ ಮಾತ್ರ)

 

ಎಲ್ ಐ ಸಿ ನವ ಜೀವನ್ ಪ್ಲಾನ್ – ಪ್ರೀಮಿಯಂ ಲೆಕ್ಕದ ಉದಾಹರಣೆ

ಎಲ್ ಐ ಸಿ ನವ ಜೀವನ್ ಪ್ಲಾನ್ ಅಡಿಯಲ್ಲಿ ಎರಡು ರೀತಿಯ ಪ್ರೀಮಿಯಂ ಗಳನ್ನು ಪಾವತಿಸುವ  ಅವಕಾಶ ಇರುತ್ತದೆ. ಅದರ ಪ್ರಕಾರ ಪಾಲಿಸಿದಾರನು ಪ್ರೀಮಿಯಂ ಅನ್ನು ಸಿಂಗಲ್ ಪ್ರೀಮಿಯಂ ಆಗಿ ಅಥವಾ ಲಿಮಿಟೆಡ್ ಪ್ರೀಮಿಯಂ ಗಳಾಗಿ ಪಾವತಿಸಬಹುದು. ಲಿಮಿಟೆಡ್ ಪ್ರೀಮಿಯಂ ಗಳನ್ನು 5 ವರ್ಷಗಳ ಸಮನಾದ  ಕಂತುಗಳಲ್ಲಿ ಕಟ್ಟಬಹುದು.

ಮೇಲ್ಕಂಡ ಪ್ರೀಮಿಯಂ ಗಳ ಪಾವತಿ ಹಾಗೂ ಅದರ ಲೆಕ್ಕಾಚಾರವನ್ನು ಕೆಳಗೆ ಉದಾಹರಣೆಗಳೊಂದಿಗೆ ವಿವರಿಸಲಾಗಿದೆ.

ಸಿಂಗಲ್ ಪ್ರೀಮಿಯಂ ನ ಉದಾಹರಣೆ

ಸಿಂಗಲ್ ಪ್ರೀಮಿಯಂ ನೀಡುವ ಪಾಲಿಸಿಗೆ ಡೆತ್ ಬೆನಿಫಿಟ್ ಮೊತ್ತವು ಸಿಂಗಲ್ ಪ್ರೀಮಿಯಂ ಮೊತ್ತಕ್ಕೆ 10 ಪಟ್ಟು ದೊರಕುತ್ತದೆ.

ಪಾಲಿಸಿಯನ್ನು ಕೊಳ್ಳುವಾಗ ಪಾಲಿಸಿದಾರನ ವಯಸ್ಸು  - 39 ವರ್ಷಗಳು

ಪಾಲಿಸಿಯ ಅವದಿ – 12 ವರ್ಷಗಳು

ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ – ರೂ 6,00,000

ನೀಡಬೇಕಾದ ಸಿಂಗಲ್ ಪ್ರೀಮಿಯಂ ಮೊತ್ತ  - ರೂ 4,39,750

ಸಮ್ ಅಶ್ಶುರ್ಡ್ ಆನ್ ಡೆತ್ ಮೊತ್ತ  = ರೂ 6,00,000 ಗಳು ಅಥವಾ 10 x 4,39,750  = ರೂ 43,97,500

ಲಿಮಿಟೆಡ್ ಪ್ರೀಮಿಯಂ

ಮೇಲೆ ತಿಳಿಸಿರುವಂತೆ ಲಿಮಿಟೆಡ್ ಪ್ರೀಮಿಯಂ ನೀಡುವಿಕೆಯಲ್ಲಿ 3 ರೀತಿಯ ಉದಾಹರಣೆ ಇರುತ್ತದೆ.

  1. ಪಾಲಿಸಿದಾರನ ವಯಸ್ಸು ಪಾಲಿಸಿ ಪಡೆಯುವಾಗ 45 ವರ್ಷಗಳಿಗಿಂತ ಕಮ್ಮಿ ಇದ್ದಲ್ಲಿ – ಡೆತ್ ಸಮ್ ಅಶ್ಶುರ್ಡ್ ಮೊತ್ತವು ವಾರ್ಷಿಕ ಪ್ರೀಮಿಯಂ ಮೊತ್ತಕ್ಕಿಂತ 10 ಪಟ್ಟು ಇರುತ್ತದೆ
  2. ಪಾಲಿಸಿದಾರನ ವಯಸ್ಸು ಪಾಲಿಸಿ ಪಡೆಯುವಾಗ 45 ವರ್ಷಗಳಿಗಿಂತ ಜಾಸ್ತಿ  ಇದ್ದಲ್ಲಿ
  1. a) ಡೆತ್ ಸಮ್ ಅಶ್ಶುರ್ಡ್ ಮೊತ್ತವು ವಾರ್ಷಿಕ ಪ್ರೀಮಿಯಂ ಮೊತ್ತಕ್ಕಿಂತ 10 ಪಟ್ಟು ಇರಬಹುದು
  2. b) ಡೆತ್ ಸಮ್ ಅಶ್ಶುರ್ಡ್ ಮೊತ್ತವು ವಾರ್ಷಿಕ ಪ್ರೀಮಿಯಂ ಮೊತ್ತಕ್ಕಿಂತ 7 ಪಟ್ಟು ಇರಬಹುದು  

ಈ ಮೇಲಿನವುಗಳಿಗೆ ಉದಾಹರಣೆಯನ್ನು ನೀಡಲಾಗಿದೆ

  1. ಪಾಲಿಸಿದಾರನ ವಯಸ್ಸು 45 ವರ್ಷಗಳಿಗಿಂತ ಕಡಿಮೆ ಇದ್ದು ಡೆತ್ ಸಮ್ ಅಶ್ಶುರ್ಡ್ ಮೊತ್ತವನ್ನು ತಾನು ಕಟ್ಟುವ ಒಟ್ಟು ವಾರ್ಷಿಕ ಪ್ರೀಮಿಯಂ ಗಳ 10 ಪಟ್ಟು ಎಂದು ಆಯ್ಕೆ ಮಾಡಿದ್ದಲ್ಲಿ

ಪಾಲಿಸಿಯನ್ನು ಕೊಳ್ಳುವಾಗ ಪಾಲಿಸಿದಾರನ ವಯಸ್ಸು  - 40 ವರ್ಷಗಳು

ಪಾಲಿಸಿಯ ಅವದಿ – 12 ವರ್ಷಗಳು

ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ – ರೂ 4,00,000

ಪ್ರೀಮಿಯಂ ಅನ್ನು ನೀಡುವ ರೀತಿ – ಅರ್ದ ವರ್ಷಕ್ಕೊಮ್ಮೆ

ನೀಡಬೇಕಾದ ವಾರ್ಷಿಕ  ಪ್ರೀಮಿಯಂ ಮೊತ್ತ - ರೂ 60,635

ಸಮ್ ಅಶ್ಶುರ್ಡ್ ಆನ್ ಡೆತ್ ಮೊತ್ತ  = ರೂ 400000 ಗಳು ಅಥವಾ 10 x 60635  = ರೂ 6,06,350

  1. ಪಾಲಿಸಿದಾರನ ವಯಸ್ಸು ಪಾಲಿಸಿ ಪಡೆಯುವಾಗ 45 ವರ್ಷಗಳಿಗಿಂತ ಜಾಸ್ತಿ  ಇದ್ದಲ್ಲಿ

ಇದರ ಒಳಗೆ ಎರಡು ಉದಾಹರಣೆಗಳು ಇವೆ

  1. ಪಾಲಿಸಿದಾರನು ಡೆತ್ ಸಮ್ ಅಶ್ಶುರ್ಡ್ ಮೊತ್ತವನ್ನು ವಾರ್ಷಿಕ ಪ್ರೀಮಿಯಂ ನ 10 ಪಟ್ಟು ಎಂದು ಆಯ್ಕೆ ಮಾಡಿದ್ದಲ್ಲಿ

ಈ ಸಂಧರ್ಭದಲ್ಲಿ, ಮೇಲೆ 1 ರಲ್ಲಿ ಕಾಣಿಸಿರುವ ರೀತಿಯಲ್ಲಿಯೇ ಲೆಕ್ಕಾಚಾರವನ್ನು ಮಾಡಲಾಗುವುದು

  1. ಪಾಲಿಸಿದಾರನು ಡೆತ್ ಸಮ್ ಅಶ್ಶುರ್ಡ್ ಮೊತ್ತವನ್ನು ವಾರ್ಷಿಕ ಪ್ರೀಮಿಯಂ ನ 7 ಪಟ್ಟು ಎಂದು ಆಯ್ಕೆ ಮಾಡಿದ್ದಲ್ಲಿ

ಪಾಲಿಸಿಯನ್ನು ಕೊಳ್ಳುವಾಗ ಪಾಲಿಸಿದಾರನ ವಯಸ್ಸು  - 50 ವರ್ಷಗಳು

ಪಾಲಿಸಿಯ ಅವದಿ – 12 ವರ್ಷಗಳು

ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ – ರೂ 5,00,000

ಪ್ರೀಮಿಯಂ ಅನ್ನು ನೀಡುವ ರೀತಿ – ಅರ್ದ ವರ್ಷಕ್ಕೊಮ್ಮೆ

ನೀಡಬೇಕಾದ ವಾರ್ಷಿಕ  ಪ್ರೀಮಿಯಂ ಮೊತ್ತ - ರೂ 81,211

ಸಮ್ ಅಶ್ಶುರ್ಡ್ ಆನ್ ಡೆತ್ ಮೊತ್ತ  = ರೂ 5,00,000 ಗಳು ಅಥವಾ 7 x 81,211  = ರೂ 5,68,477

- / 5 ( Total Rating)