ಎಲ್ ಐ ಸಿ ನ್ಯೂ ಚಿಲ್ಡ್ರನ್ ಮನೀ ಬ್ಯಾಕ್ ಪ್ಲಾನ್
 • ಅತ್ಯುತ್ತಮ ಯೋಜನೆಗಳು
 • ಸುಲಭ ಹೋಲಿಕೆ
 • ತಕ್ಷಣದ ಖರೀದಿ
PX step

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಹುಟ್ಟಿದ ದಿನಾಂಕ (ದೊಡ್ಡ ಸದಸ್ಯ)
ಆದಾಯ
| ಲಿಂಗ

1

2

ಫೋನ್ ಸಂಖ್ಯೆ
ಹೆಸರು
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯ ವಿಮಾ ಯೋಜನೆಗಳನ್ನು ನೀಡುವ ಒಂದು ಸಂಸ್ಥೆ ಆಗಿದ್ದು, ಜನರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಮೊದಲಿನಿಂದಲೂ ನೀಡುತ್ತಾ ಬಂದಿದೆ. ಈ ದಿಕ್ಕಿನಲ್ಲಿ, ಮಕ್ಕಳಿಗೆ ಉಪಯೋಗ ಆಗುವಂತಹ ಹಾಗೂ ಅವರ ವಿಧ್ಯಾಭ್ಯಾಸಕ್ಕೆ ಅನುಕೂಲ ಆಗುವ ರೀತಿ ಒಂದು ಯೋಜನೆಯನ್ನು ಬಿಡುಗಡೆ ಮಾಡಿದೆ. ಅದು ಎಲ್ ಐ ಸಿ ನ್ಯೂ ಚಿಲ್ಡ್ರನ್ ಮನೀ ಬ್ಯಾಕ್ ಪ್ಲಾನ್ ಆಗಿರುತ್ತದೆ. ಈ ಪ್ಲಾನ್ ಕೂಡ ಒಂದು ನಾನ್-ಲಿಂಕ್ಡ್ ಯೋಜನೆ ಆಗಿದ್ದು, ರಕ್ಷಣೆ ಮತ್ತು ಮಕ್ಕಳ ಮುಂದಿನ ವಿದ್ಯಾಬ್ಯಾಸಕ್ಕಾಗಿ ಉಳಿತಾಯವನ್ನು ಮಾಡುವಂತಹ ಪ್ಲಾನ್ ಆಗಿರುತ್ತದೆ. ಇದು ವಿಶೇಷವಾಗಿ, ಮಕ್ಕಳ ವಿದ್ಯಾಬ್ಯಾಸ, ಮದುವೆ  ಹಾಗೂ ಇತರೆ ಉಪಯೋಗಗಳಿಗಾಗಿ ಸರ್ವೈವಲ್ ಬೆನಿಫಿಟ್ ಮುಖಾಂತರ ನಿಗದಿತ ಆವದಿಯಲ್ಲಿ ಹಣದ ಸಹಾಯವನ್ನು ಮಾಡಲು ಸಂಯೋಜಿಸಿರುವ ಯೋಜನೆ. ಇದರ ಜೊತೆಗೆ, ಇದು ಮಕ್ಕಳ ಜೀವದ ರಿಸ್ಕ್ ಕವರೆಜ್ ಅನ್ನು ಪಾಲಿಸಿಯ ಆವದಿಯಲ್ಲಿ ಹಾಗೂ ಸರ್ವೈವಲ್ ಬೇನೆಫಿಟ್ಸ್ ಗಳನ್ನು ಆವದಿಯ ಪೂರ್ಣ ಆವದಿಯವರೆಗೂ ನಿಗದಿತ ವರ್ಷಗಳಲ್ಲಿ ನೀಡುತ್ತದೆ. ಇದು ಮಕ್ಕಳ ವಿದ್ಯಾಬ್ಯಾಸಕ್ಕೆ ಅನುಕೂಲವಾಗುವಂತೆ, ಸರ್ವೈವಲ್ ಬೆನಿಫಿಟ್ ಅನ್ನು 18 ನೇ ವಯಸ್ಸಿನಲ್ಲಿ, 20 ನೇ ವಯಸ್ಸಿನಲ್ಲಿ ಹಾಗೂ 22 ನೇ ವಯಸ್ಸಿನಲ್ಲಿ ನೀಡುವುದು. ಈ ಸರ್ವೈವಲ್ ಬೆನಿಫಿಟ್ ಗಳು ಪ್ರತಿ ಬಾರಿಯೂ ಬೇಸಿಕ್ ಸಮ್ ಅಶ್ಶುರ್ಡ್ ನ 20 % ಮೊತ್ತ ಆಗಿರುತ್ತದೆ. ಆದರೆ ಪಾಲಿಸಿಯು ಅಸ್ಥಿತ್ವದಲ್ಲಿ ಇರಬೇಕು. ಅವರ 18 ನೇ ವಯಸ್ಸಿನಲ್ಲಿ, 20 ನೇ ವಯಸ್ಸಿನಲ್ಲಿ ಹಾಗೂ 22 ನೇ ವಯಸ್ಸಿನಲ್ಲಿ ಸರ್ವೈವಲ್ ಬೆನಿಫಿಟ್ ಮುಖಾಂತರ ಒಂದು ಖಚಿತ ಮೊತ್ತವನ್ನು ಹಾಗೂ ಪಾಲಿಸಿಯ ಮೆಚೂರಿಟೀ ಆದಾಗ, ಮೆಚೂರಿಟೀ ಮೊತ್ತವನ್ನು ನೀಡುವಂತಹ ಪ್ಲಾನ್.

ಇದು ಒಂದು ಪಾಲಿಸಿಯ ಬಾಬ್ತು ಹೊಂದಿಕೊಳ್ಳುವ ಯೋಜನೆ ಆಗಿದ್ದು, ಪಾಲಿಸಿದಾರನು ಸರ್ವೈವಲ್ ಬೆನಿಫಿಟ್ ಮೊತ್ತವನ್ನು ಹಾಗೂ ಆದರ ನಿಗದಿತ ಅಂಶಗಳನ್ನು (ಅಂದರೆ ಮಕ್ಕಳ 18ನೇ, 20 ನೇ ಹಾಗೂ 22 ನೇ ವಯಸ್ಸಿನವರೆಗೂ ಬರಬಹುದಾದ ಹಣದ ಮೊತ್ತ) ಮೊದಲೇ ನಿಗದಿತ ಪಡಿಸಿ ಕೊಳ್ಳಬಹುದು. ಅದಕ್ಕೆ ಸಂಬಂದಪಟ್ಟಂತೆ, ಈ ಕೆಳಗೆ ಟೇಬಲ್ ನಲ್ಲಿ ವಿವರವನ್ನು ನೀಡಲಾಗಿದೆ.

ಮಗನ / ಮಗಳ ವಯಸ್ಸು

ಸರ್ವೈವಲ್ ಬೆನಿಫಿಟ್ (ಪರ್ಸೆಂಟೆಜ್ ನಲ್ಲಿ)

18 ನೇ ವರ್ಷದಲ್ಲಿ

ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತದ 20 %

20 ನೇ ವರ್ಷದಲ್ಲಿ

ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತದ 20 %

22 ನೇ ವರ್ಷದಲ್ಲಿ

ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತದ 20 %

ಈ ಪಾಲಿಸಿಯ ನಿಯಮದ ಪ್ರಕಾರ, ಸರ್ವೈವಲ್ ಬೆನಿಫಿಟ್ ಮೊತ್ತವು ಸಮ್ ಅಶ್ಶುರ್ಡ್ ಮೊತ್ತದ ಪರ್ಸೆಂಟೆಜ್ ಗಳಲ್ಲಿ ಲಭ್ಯವಿರುತ್ತದೆ. ಆದರ ಪ್ರಕಾರ, ಪಾಲಿಸಿದಾರನ ಮಗ/ಮಗಳಿಗೆ   18 ನೆಯ ವಯಸ್ಸು, 20 ನೇ ವಯಸ್ಸು ಹಾಗೂ 22 ನೇ ವಯಸ್ಸಿಗೆ ಸಮ್ ಅಶ್ಶುರ್ಡ್ ಮೊತ್ತದ ಒಂದು ಖಚಿತ ಪರ್ಸೆಂಟೆಜ್ ಮೊತ್ತವನ್ನು ನೀಡಲಾಗುತ್ತದೆ. ಕೊನೆಯಲ್ಲಿ ಸಮ್ ಅಶ್ಶುರ್ಡ್ ಆನ್ ಮೆಚೂರಿಟೀ ಮೊತ್ತವನ್ನು ( ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತದ ಉಳಿದ 40 %) ಹಾಗೂ ಅದಕ್ಕೆ ಸೇರಿರಬಹುದಾದ ವೆಸ್ಟೆಡ್ ಸಿಂಪಲ್ ರಿವರ್ಷನರಿ ಬೋನಸ್ ಮತ್ತು ಅಂತಿಮ ಅಡಿಷನಲ್ ಬೋನಸ್ ಗಳನ್ನು ಸೇರಿಸಿ ಒಟ್ಟು  ಮೊತ್ತವನ್ನು ನೀಡಲಾಗುತ್ತದೆ. ಜೊತೆಗೆ, ಕಾರ್ಪೊರೇಷನ್ ನಿಯಮದ ಪ್ರಕಾರ, ಈ ಪಾಲಿಸಿಯು ಸಾಲ ಸೌಲಭ್ಯಕ್ಕೆ ಅರ್ಹತೆ ಹೊಂದಿರುತ್ತದೆ.

ಈ ಪ್ಲಾನ್ ಅನ್ನು ತಂದೆಯಾಗಲಿ ಅಥವಾ ತಾಯಿಯಾಗಲಿ ಅಥವಾ ಮಗುವಿನ ತಾತ/ಅಜ್ಜಿ ಆಗಲಿ ಕೊಳ್ಳಬಹುದು. ಆದರೆ ಮಗುವಿನ ವಯಸ್ಸು 0 ಇಂದ 12 ವರ್ಷಗಳ ಒಳಗೆ ಇರಬೇಕು.

ಎಲ್ ಐ ಸಿ ನ್ಯೂ ಚಿಲ್ಡ್ರನ್ ಮನೀ ಬ್ಯಾಕ್ ಪ್ಲಾನ್ – ಬೆನಿಫಿಟ್ ಗಳು

ಡೆತ್ ಬೆನಿಫಿಟ್

ಎಲ್ ಐ ಸಿ ನ್ಯೂ ಚಿಲ್ಡ್ರನ್ ಮನೀ ಬ್ಯಾಕ್ ಪ್ಲಾನ್ ನಲ್ಲಿ ಡೆತ್ ಬೆನಿಫಿಟ್ ಅನ್ನು ಈ ಕೆಳಗೆ ತಿಳಿಸಿರುವ ಎರಡು ಸಂದರ್ಭಗಳನ್ನು ಪರಿಗಣಿಸಿ ನೀಡಲಾಗುತ್ತದೆ.

 1. ಮರಣವು ಪಾಲಿಸಿಯ ಮೇಲಿನ ರಿಸ್ಕ್ ಕವರೆಜ್ ಶುರು ಆಗುವ ಮುಂಚೆ ಆದಲ್ಲಿ – ಪಾಲಿಸಿದಾರನು ನೀಡಿರುವ ಒಟ್ಟು ಪ್ರೀಮಿಯಂ ಮೊತ್ತದಲ್ಲಿ ಸರ್ವಿಸ್ ಟಾಕ್ಸ್ ಹಾಗೂ ಎಕ್ಷ್ತ್ರಾ ಪ್ರೀಮಿಯಂ ಇದ್ದಲ್ಲಿ ಅದನ್ನು ಕಡಿತ ಮಾಡಿ (ಪ್ರೀಮಿಯಂ ಗೆ ಬಡ್ಡಿ ಸೇರಿಸದೆ) ಉಳಿದ ಮೊತ್ತವನ್ನು ನೀಡಲಾಗುವುದು.
 2. ಮರಣವು ಪಾಲಿಸಿಯ ಮೇಲಿನ ರಿಸ್ಕ್ ಕವರೆಜ್ ಶುರು ಆದ ಮೇಲೆ ಆದಲ್ಲಿ –ಸಮ್ ಅಶ್ಶುರ್ಡ್ ಆನ್ ಡೆತ್ ಮೊತ್ತಕ್ಕೆ  ವೆಸ್ಟೆಡ್ ಸಿಂಪಲ್ ರಿವರ್ಷನರಿ ಬೋನಸ್ ಮತ್ತು ಅಂತಿಮ ಅಡಿಷನಲ್ ಬೋನಸ್ ಗಳನ್ನು ಸೇರಿಸಿ ಒಟ್ಟು ಮೊತ್ತವನ್ನು ನೀಡಲಾಗುತ್ತದೆ.

ಇದರಲ್ಲಿ ಸಮ್ ಅಶ್ಶುರ್ಡ್ ಆನ್ ಡೆತ್ ಮೊತ್ತವು ಈ ಕೆಳಗೆ ನಮೂದಿಸಿರುವ ಮೊತ್ತಗಳಲ್ಲಿ ಯಾವುದು ಹೆಚ್ಚಿರುತ್ತದೆಯೋ ಅದು ಆಗಿರುತ್ತದೆ  

 • ವಾರ್ಷಿಕ ಪ್ರೀಮಿಯಂ ಮೊತ್ತದ 10 ಪಟ್ಟು ಮೊತ್ತ
 • ಪಾಲಿಸಿದಾರನ ಮರಣ ಆದಲ್ಲಿ ನೀಡುವ ಖಚಿತವಾದ ಸಮ್ ಅಶ್ಶುರ್ಡ್ ಮೊತ್ತ. ಇದು ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತಕ್ಕೆ 125 % ಇರುತ್ತದೆ.
 1. ಕಾರ್ಪೊರೇಷನ್ ನೀಡುವ ಈ ಡೆತ್ ಬೆನಿಫಿಟ್ ಮೊತ್ತವು, ಪಾಲಿಸಿದಾರನು ಆವರೆವಿಗೂ ನೀಡಿರುವ ಪ್ರೀಮಿಯಂ ಗಳ ಒಟ್ಟು ಮೊತ್ತಕ್ಕಿಂತ 105 % ಗಿಂತ ಕಮ್ಮಿ ಇರಬಾರದು

ಮೇಲೆ ಕಾಣಿಸಿರುವ ಪ್ರೀಮಿಯಂ ಮೊತ್ತದಲ್ಲಿ, ಎಕ್ಸ್ಟ್ರಾ ಪ್ರೀಮಿಯಂ ಮೊತ್ತ ಇದ್ದಲ್ಲಿ ಹಾಗೂ ತೆರಿಗೆಯ ಬಾಬ್ತು ನೀಡಿರುವ ಮೊತ್ತ ಮತ್ತು ರೈಡರ್  ಪ್ರೀಮಿಯಂ ಮೊತ್ತ ಇವುಗಳು ಸೇರುವುದಿಲ್ಲ.

ಸರ್ವೈವಲ್ ಬೆನಿಫಿಟ್

ಮೇಲೆ ತಿಳಿಸಿರುವಂತೆ, ಈ ಪಾಲಿಸಿಯ ನಿಯಮದ ಪ್ರಕಾರ, ಆತನ ಮಗ/ಮಗಳು  18 ನೇ ವರ್ಷವನ್ನು ಮುಗಿಸಿದ ಕೂಡಲೇ, 20 ನೇ ವರ್ಷವನ್ನು ಮುಗಿಸಿದ ಕೂಡಲೇ  ಹಾಗೂ 22 ನೇ ವರ್ಷವನ್ನು ಮುಗಿಸಿದ ಕೂಡಲೇ ಸರ್ವೈವಲ್ ಬೆನಿಫಿಟ್  ಎಂದು ಸಮ್ ಅಶ್ಶುರ್ಡ್ ಮೊತ್ತದ ಪರ್ಸೆಂಟೆಜ್ ಮೊತ್ತವನ್ನು ನೀಡಲಾಗುವುದು. ಈ ಸಮ್ ಅಶ್ಶುರ್ಡ್ ಮೊತ್ತದ ಪರ್ಸೆಂಟೆಜ್ ಗಳು ಪಾಲಿಸಿಯ ನಿಯಮಕ್ಕೆ ಒಳ ಪಟ್ಟಿರುತ್ತದೆ.

ಮೆಚೂರಿಟೀ ಬೆನಿಫಿಟ್

ಪಾಲಿಸಿದಾರನು ಪಾಲಿಸಿಯ ಅವದಿ ಮುಗಿಸಿದಲ್ಲಿ, ಆ ಪಾಲಿಸಿಯ ಮೇಲೆ ಮೆಚೂರಿಟೀ ಬೆನಿಫಿಟ್ ನೀಡಲಾಗುತ್ತದೆ. ಅದರಂತೆ, ಮೆಚೂರಿಟೀ ಮೊತ್ತವು ಸಮ್ ಅಶ್ಶುರ್ಡ್ ನ ಒಂದು ಪರ್ಸೆಂಟೆಜ್ ಆಗಿರುತ್ತದೆ. ಅದರ ವಿವರವನ್ನು ಈ ಕೆಳಗೆ ನೀಡಲಾಗಿದೆ.

ಪಾಲಿಸಿಯ ಮೆಚೂರಿಟೀ ವಯಸ್ಸು

ಮೆಚೂರಿಟೀ ಮೊತ್ತ (ಪರ್ಸೆಂಟೆಜ್ ನಲ್ಲಿ)

25 ವರ್ಷಗಳು

ಸರ್ವೈವಲ್ ಬೆನಿಫಿಟ್ ಗಳನ್ನು ನಿಗದಿತ ಆವದಿಯಲ್ಲಿ ನೀಡಿ ಉಳಿದ ಬೇಸಿಕ್ ಸಮ್ ಅಶ್ಶುರ್ಡ್ ನ 40 % ಮೊತ್ತ

ಇದರ ಜೊತೆಗ್, ವೆಸ್ಟೆಡ್ ಸಿಂಪಲ್ ರಿವರ್ಷನರಿ ಬೋನಸ್ ಹಾಗೂ ಅಂತಿಮ ಅಡಿಷನಲ್ ಬೋನಸ್ ಇದ್ದಲ್ಲಿ ಅದನ್ನು ಕೂಡ ಸೇರಿಸಿ ಒಟ್ಟು ಮೊತ್ತವನ್ನು ನೀಡಲಾಗುವುದು.

ಲಾಭದಲ್ಲಿ ಬಾಗಿ ಆಗುವಿಕೆ

ಈ ಪಾಲಿಸಿಯ ನಿಯಮದ ಪ್ರಕಾರ ಪಾಲಿಸಿಯು ಕಾರ್ಪೊರೇಷನ್ ನ ಬಂಡವಾಳ ಹೂಡಿಕೆ ಹಾಗೂ ಅದರಿಂದ ಉತ್ಪನ್ನ ಆಗುವ ಲಾಭದಲ್ಲಿ ಬಾಗಿ ಆಗಲು ಅರ್ಹತೆ ಹೊಂದಿರುತ್ತದೆ.

ಆದ್ದರಿಂದ, ಈ ಪಾಲಿಸಿಯು ಕಾರ್ಪೊರೇಷನ್ ನೀಡುವ ಸಿಂಪಲ್ ರಿವರ್ಶನರಿ ಬೋನಸ್ ಗಳಿಗೂ ಅರ್ಹತೆ ಪಡೆಯುತ್ತದೆ. ಸಿಂಪಲ್ ರಿವರ್ಶನರಿ ಬೋನಸ್  ಮೊತ್ತವನ್ನು ಕಾರ್ಪೊರೇಷನ್ ತನ್ನ ಹಿಂದಿನ ವರ್ಷಗಳ ಪರ್ಫಾರ್ಮನ್ಸ್ ಆದಾರದ ಮೇಲೆ ನಿಗದಿ ಪಡಿಸುತ್ತದೆ. ಆದರೆ, ಪಾಲಿಸಿಯು ಮೆಚೂರಿಟೀ ಆಗುವಾಗ ಅಸ್ಥಿತ್ವದಲ್ಲಿ ಇರಬೇಕು.

ಆಪ್ಷನಲ್ ರೈಡರ್

 1. ಸರ್ವೈವಲ್ ಬೆನಿಫಿಟ್ ಅನ್ನು ಮುಂದೂಡುವ ಆಪ್ಶನ್
 2. ಎಲ್ ಐ ಸಿ ಯ ಪ್ರೀಮಿಯಂ ವೈವರ್ ಬೆನಿಫಿಟ್ ರೈಡರ್

ಈ ರೈಡರ್ ಗಳನ್ನು ಪಾಲಿಸಿದಾರನು ಹೆಚ್ಚುವರಿ ಪ್ರೀಮಿಯಂ ಮೊತ್ತವನ್ನು ನೀಡಿ ಪಾಲಿಸಿಯ ಜೊತೆಗೆ ಸೇರಿಸಿ ಕೊಳ್ಳಬಹುದು

ಎಲ್ ಐ ಸಿ ನ್ಯೂ ಚಿಲ್ಡ್ರನ್ ಮನೀ ಬ್ಯಾಕ್ ಪ್ಲಾನ್ – ಬೆನಿಫಿಟ್ ಉದಾಹರಣೆ

ಶಾಸನಬದ್ದ ಎಚ್ಚರಿಕೆ

ಎಲ್ ಐ ಸಿ ಯು ನೀಡುವ ಬೆನೆಫಿಟ್ಸ್ ಗಳಲ್ಲಿ ಕೆಲವು ಗ್ಯಾರಂಟಿಡ್ ಆಗಿದ್ದು ಇನ್ನೂ ಕೆಲವು ಬದಲಾವಣೆಗೆ ಒಳ ಪಡುವ ಬೆನಿಫಿಟ್ ಗಳು ಆಗಿರುತ್ತವೆ, ಏಕೆಂದರೆ, ಅಂತಹ ಬೆನಿಫಿಟ್ ಗಳು ಕಾರ್ಪೊರೇಷನ್ ನ ಮುಂದಿನ ಕಾರ್ಯ ನಿರ್ವಹಣೆ ಹಾಗೂ ಅದರಿಂದ ಬರುವ ಆದಾಯದ ಮೇಲೆ ಅವಲಂಬಿತವಾಗಿರುತ್ತದೆ ನಿಮ್ಮ ಪಾಲಿಸಿಯು ಗ್ಯಾರಂಟಿಡ್ ಆದಾಯ ಎಂದು ನಮೂದಿಸಿರುವ ಬೆನಿಫಿಟ್ ಗಳಿಗೆ ಕೆಳ ಕಂಡ ಟೇಬಲ್ ನಲ್ಲಿ “ಗ್ಯಾರಂಟಿಡ್”  ಎಂದು ತೋರಿಸಲಾಗಿದೆ. ಹಾಗೆಯೇ, ಪಾಲಿಸಿಯಲ್ಲಿ ನಮೂದಿಸಿರುವ ಗ್ಯಾರಂಟಿಡ್ ಅಲ್ಲದ ಬೆನಿಫಿಟ್ ಗಳನ್ನು ಕೆಳ ಕಂಡ ಟೇಬಲ್ ನಲ್ಲಿ ಎರಡು ರೀತಿಯ ರಿಟರ್ನ್ಸ್ ಗಳನ್ನು ಗಣನೆಗೆ ತೆಗೆದುಕೊಂಡು ಅದರ ರೀತ್ಯಾ ತೋರಿಸಲಾಗಿದೆ. ಇದು ಭವಿಷ್ಯದಲ್ಲಿ ಕಾರ್ಪೊರೇಷನ್ ನ ಬಂಡವಾಳ ಹೂಡಿಕೆಯಿಂದ ಬರಬಹುದಾದ ಎರಡು ಊಹಿಸಲಾದ ಆದಾಯ ಗಳನ್ನು ಅಳವಡಿಸಿ ತಯಾರಿಸಲಾಗಿದೆ. ಈ ಎರಡು ಊಹಿಸಲಾದ ಆದಾಯಗಳು ಪಾಲಿಸಿಯ ಬಾಬ್ತು ನೀಡುವ ಗ್ಯಾರಂಟಿಡ್ ಮೊತ್ತವಲ್ಲ. ಹಾಗೂ ಅವುಗಳು ಗರಿಷ್ಠ ಅಥವಾ ಕನಿಷ್ಠ ಮಿತಿಗಳು ಕೂಡ ಅಲ್ಲ. ಏಕೆಂದರೆ, ನಿಮ್ಮ ಪಾಲಿಸಿಯು ಬೇರೆ ಬೇರೆ ಅಂಶಗಳ ಮೇಲೆ ಹಾಗೂ ಮುಂದಿನ ಕಾರ್ಪೊರೇಷನ್ ನ ಕಾರ್ಯ ನಿರ್ವಹಣೆ ಮೇಲೂ ಅವಲಂಬಿತವಾಗಿರುತ್ತದೆ.

ಈ ಪಾಲಿಸಿಯ ಬೆನಿಫಿಟ್ ಗಳ ಬಗ್ಗೆ ಕೆಳಗಿನ ಉದಾಹರಣೆಯನ್ನು ಗಮನಿಸಿ.

ವಿವರಗಳು

ಪಾಲಿಸಿಯನ್ನು ಪಡೆಯುವಾಗ ಪಾಲಿಸಿದಾರನ ವಯಸ್ಸು

5 ವರ್ಷಗಳು

ಪಾಲಿಸಿಯ ಅವದಿ (ಟರ್ಮ್)

20 ವರ್ಷಗಳು

ಪ್ರೀಮಿಯಂ ನೀಡಬೇಕಾದ ಅವದಿ (ಪ್ರೀಮಿಯಂ ಪೇಯಿಂಗ್ ಟರ್ಮ್)


20 ವರ್ಷಗಳು

ಪ್ರೀಮಿಯಂ ಪಾವತಿಸುವ ರೀತಿ

ವರ್ಷಕ್ಕೊಮ್ಮೆ

ಸಮ್ ಅಶ್ಶುರ್ಡ್ ಮೊತ್ತ (ರೂ ಗಳಲ್ಲಿ)

100000

ವಾರ್ಷಿಕ ಪ್ರೀಮಿಯಂ ಮೊತ್ತ (ರೂ ಗಳಲ್ಲಿ)

5586.00

ಬದಲಾಗಬಹುದಾದ ಸಿನ್ಯಾರಿಯೋ 1 – ಒಟ್ಟು ಹಣ ಹೂಡಿಕೆಯ ಮೇಲೆ ಬರಬಹುದಾದ ರಿಟರ್ನ್ @ 4 % ಒಂದು ವರ್ಷಕ್ಕೆ

ಬದಲಾಗಬಹುದಾದ ಸಿನ್ಯಾರಿಯೋ 2 – ಒಟ್ಟು ಹಣ ಹೂಡಿಕೆಯ ಮೇಲೆ ಬರಬಹುದಾದ ರಿಟರ್ನ್ @ 8 % ಒಂದು ವರ್ಷಕ್ಕೆ

ಆ) ಪಾಲಿಸಿದಾರನ ಮರಣ ಆದಲ್ಲಿ ಸಿಗಬಹುದಾದ ಮೊತ್ತ

ವರ್ಷದ ಕೊನೆಯಲ್ಲಿ

ವರ್ಷದ ಕೊನೆಯಲ್ಲಿ ನೀಡಿರುವ ಪ್ರೀಮಿಯಂ ಮೊತ್ತ(ರೂ ಗಳಲ್ಲಿ)

ಪಾಲಿಸಿಯ ಬಾಬ್ತು ಪಾಲಿಸಿದಾರನ ಮರಣ ಆದ ಪಕ್ಷದಲ್ಲಿ ನೀಡುವ ಬೆನಿಫಿಟ್ ಮೊತ್ತ (ಆ ವರ್ಷದ ಕೊನೆಗೆ)

   

ಗ್ಯಾರಂಟಿಡ್

ಬದಲಾಗಬಹುದಾದ ಮೊತ್ತ

ಒಟ್ಟು ಮೊತ್ತ

     

ಸಿನಾರಿಯೊ 1

4 %

ಸಿನಾರಿಯೊ 2

8%

ಸಿನಾರಿಯೊ 1

4 %

ಸಿನಾರಿಯೊ 2

8%

1

5586

100000

700

2800

100700

102800

2

11172

100000

1400

5600

101400

105600

3

16758

100000

2100

8400

102100

108400

4

22344

100000

2800

11200

102800

111200

5

27930

100000

3500

14000

103500

114000

6

33516

100000

4200

16800

104200

116800

7

39102

100000

4900

19600

104900

119600

8

44688

100000

5600

22400

105600

122400

9

50274

100000

6300

25200

106300

125200

10

55860

100000

7000

28000

107000

128000

11

61446

100000

7700

30800

107700

130800

12

67032

100000

8400

33600

108400

133600

13

72618

100000

9100

36400

109100

136400

14

78204

100000

9800

39200

109800

139200

15

83790

100000

10500

42500

110500

142500

16

89376

100000

11200

45300

111200

145300

17

94962

100000

11900

48600

111900

148600

18

100548

100000

12600

51900

112600

151900

19

106134

100000

13300

55200

113300

155200

20

111720

100000

14000

58500

114000

158500

ಆ) ಪಾಲಿಸಿದಾರನು ಪಾಲಿಸಿಯನ್ನು ಸರಂಡರ್ ಮಾಡಿದಲ್ಲಿ ಸಿಗಬಹುದಾದ ಮೊತ್ತ

ವರ್ಷದ ಕೊನೆಯಲ್ಲಿ

ವರ್ಷದ ಕೊನೆಯಲ್ಲಿ ನೀಡಿರುವ ಪ್ರೀಮಿಯಂ ಮೊತ್ತ(ರೂ ಗಳಲ್ಲಿ)

ಪಾಲಿಸಿಯ ಬಾಬ್ತು ಪಾಲಿಸಿದಾರನು ಪಾಲಿಸಿಯನ್ನು ಸರಂಡರ್ ಮಾಡಿದಲ್ಲಿ ನೀಡುವ ಬೆನಿಫಿಟ್ ಮೊತ್ತ (ಆ ವರ್ಷದ ಕೊನೆಗೆ)

   

ಗ್ಯಾರಂಟಿಡ್ ಸರಂಡರ್ ಮೊತ್ತ


ಬೋನಸ್ ಗಳ ಸರಂಡರ್ ಮೌಲ್ಯ


ಒಟ್ಟು ಸಿಗುವ ಗ್ಯಾರಂಟಿಡ್ ಸರಂಡರ್ ಮೊತ್ತ

     

ಸಿನಾರಿಯೊ 1

4 %

ಸಿನಾರಿಯೊ 2

8%

ಸಿನಾರಿಯೊ 1

4 %

ಸಿನಾರಿಯೊ 2

8%

1

5586

0

0

0

0

0

2

11172

0

0

0

0

0

3

16758

5027

341

1362

5369

6390

4

22344

11172

464

1857

11636

13029

5

27930

13965

596

2384

14561

16349

6

33516

16758

738

2953

17496

19711

7

39102

19551

861

3446

20412

22997

8

44688

23461

989

3956

24450

27417

9

50274

27651

1125

4498

28775

32149

10

55860

32120

1271

5085

33391

37204

11

61446

36868

1432

5729

38300

42596

12

67032

41895

1611

6444

43506

48339

13

72618

47202

1814

7255

49015

54456

14

78204

32788

2043

8173

34831

40961

15

83790

38653

2309

9236

40962

47889

16

89376

24798

2619

10474

27416

35272

17

94962

31222

2981

11924

34202

43145

18

100548

17925

3410

13638

21334

31563

19

106134

24907

3990

15960

28897

40867

20

111720

29376

4900

19600

34276

48976

ವರ್ಷದ ಕೊನೆಗೆ

ವರ್ಷದ ಕೊನೆಯಲ್ಲಿ ನೀಡಿರುವ ಪ್ರೀಮಿಯಂ ಮೊತ್ತ(ರೂ ಗಳಲ್ಲಿ)

ಸರ್ವೈವಲ್ ಬೆನಿಫಿಟ್ ಮೊತ್ತ – ವರ್ಷದ ಕೊನೆಗೆ


ಗ್ಯಾರಂಟಿಡ್ ಮೊತ್ತ

ಬದಲಾಗಬಹುದಾದ ಮೊತ್ತ

ಒಟ್ಟು ಮೊತ್ತ

ಸಿನಾರಿಯೊ 1

4 %

ಸಿನಾರಿಯೊ 2

8%

ಸಿನಾರಿಯೊ 1

4 %

ಸಿನಾರಿಯೊ 2

8%

1

5586

0

0

0

0

0

2

11172

0

0

0

0

0

3

16758

0

0

0

0

0

4

22344

0

0

0

0

0

5

27930

0

0

0

0

0

6

33516

0

0

0

0

0

7

39102

0

0

0

0

0

8

44688

0

0

0

0

0

9

50274

0

0

0

0

0

10

55860

0

0

0

0

0

11

61446

0

0

0

0

0

12

67032

0

0

0

0

0

13

72618

20000

0

0

20000

20000

14

78204

0

0

0

0

0

15

83790

20000

0

0

20000

20000

16

89376

0

0

0

0

0

17

94962

20000

0

0

20000

20000

18

100548

0

0

0

0

0

19

106134

0

0

0

0

0

20

111720

40000

14000

58500

54000

98500

ಸೂಚನೆ:

 • ಮೇಲೆ ಕಾಣಿಸಿರುವ ಪ್ರೀಮಿಯಂ ಮೊತ್ತದಲ್ಲಿ, ಸರ್ವಿಸ್ ಟಾಕ್ಸ್, ಎಕ್ಸ್ಟ್ರಾ ಪ್ರೀಮಿಯಂ ಇದ್ದಲ್ಲಿ ಹಾಗೂ ರೈಡರ್ಸ್ ಪ್ರೀಮಿಯಂ ಇದ್ದಲ್ಲಿ ಅವು ಸೇರಿರುವುದಿಲ್ಲ.
 • ಪಾಲಿಸಿದಾರನಿಗೆ ಅನುಕೂಲವಾಗುವುದಿದ್ದಲ್ಲಿ, ಸ್ಪೆಷಲ್ ಸರಂಡರ್ ಮೌಲ್ಯವನ್ನು ಎಲ್‌ಐ‌ಸಿ ಯು ನೀಡುವುದು.
 • ಏನೇ ಆದರೂ, ಒಟ್ಟು ಡೆತ್ ಬೆನಿಫಿಟ್ (ಒಟ್ಟು ಇನ್ಕಮ್ ಬೆನಿಫಿಟ್ ಹಾಗೂ ಪಾಲಿಸಿ ಮೆಚೂರಿಟೀ ಆದಾಗೆ ನೀಡುವ ಒಂದು ಖಚಿತ ಮೊತ್ತ) ಮೊತ್ತವು ಎಲ್ಲ ಪ್ರೀಮಿಯಂ ಗಳ ಒಟ್ಟಾರೆ ಮೊತ್ತಕ್ಕೆ (ಸರ್ವಿಸ್ ಟಾಕ್ಸ್, ಎಕ್ಸ್ಟ್ರಾ ಪ್ರೀಮಿಯಂ ಇದ್ದಲ್ಲಿ ಹಾಗೂ ರೈಡರ್ಸ್ ಪ್ರೀಮಿಯಂ ಗಳು ಇದ್ದಲ್ಲಿ ಇವುಗಳನ್ನು ಹೊರತು ಪಡಿಸಿ) 105 % ಗಿಂತ ಕಮ್ಮಿ ಇರುವುದಿಲ್ಲ
 • ಈ ಉದಾಹರಣೆಯಲ್ಲಿ, ಮುಂದೆ  ಎಲ್ ಐ ಸಿ ಯು ಬಂಡವಾಳ ಹೂಡಿಕೆ ಮಾಡಿ ಪಾಲಿಸಿಯ ಪೂರ್ಣ ಆವದಿಯವರೆಗೂ ಬರಬಹುದಾದ ಲಾಭವನ್ನು ಪರ್ಸೆಂಟೆಜ್ ಲೆಕ್ಕದಲ್ಲಿ 4 % ಅಥವಾ 8 % ಎಂದು ಪರಿಗಣಿಸಿ ಲೆಕ್ಕಾಚಾರ ಮಾಡಲಾಗಿದೆ.

ಎಲ್ ಐ ಸಿ ನ್ಯೂ ಚಿಲ್ಡ್ರನ್ ಮನೀ ಬ್ಯಾಕ್ ಪ್ಲಾನ್ – ಅರ್ಹತೆಗಳು ಹಾಗೂ ನಿಬಂದನೆಗಳು

ಎಲ್ ಐ ಸಿ  ನ್ಯೂ ಚಿಲ್ದ್ರನ್ ಮನೀ ಬ್ಯಾಕ್ ಪ್ಲಾನ್ ಗೆ  ಅನ್ವಯವಾಗುವ ಅರ್ಹತೆಗಳು ಹಾಗೂ ಅದರಲ್ಲಿ ಇರುವ ನಿಬಂದನೆಗಳನ್ನು ಈ ಕೆಳಗಿನ ಪ್ಯಾರಾಗಳಲ್ಲಿ ವಿವರಿಸಲಾಗಿದೆ.

ಕನಿಷ್ಠ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ

ರೂ 100000

ಗರಿಷ್ಠ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ

(ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತವು ರೂ 10000 ದ ಮಲ್ಟಿಪಲ್ಸ್ ನಲ್ಲಿ ಇರಬೇಕು)


ಯಾವುದೇ ಮಿತಿ ಇಲ್ಲ

ಪಾಲಿಸಿ ಪಡೆಯುವಾಗ ಮಗುವಿನ ಕನಿಷ್ಠ ವಯಸ್ಸು (ಪಾಲಿಸಿದಾರನು ತಂದೆ ಅಥವಾ  ತಾಯಿ ಅಥವಾ ತಾತ ಅಥವಾ ಅಜ್ಜಿ ಆಗಿರಬಹುದು)

0 (ಹಿಂದಿನ ಹುಟ್ಟು ಹಬ್ಬಕ್ಕೆ)

ಪಾಲಿಸಿ ಪಡೆಯುವಾಗ ಮಗುವಿನ ಗರಿಷ್ಠ ವಯಸ್ಸು (ಪಾಲಿಸಿದಾರನು ತಂದೆ ಅಥವಾ  ತಾಯಿ ಅಥವಾ ತಾತ ಅಥವಾ ಅಜ್ಜಿ ಆಗಿರಬಹುದು)

12 ವರ್ಷಗಳು (ಹಿಂದಿನ ಹುಟ್ಟು ಹಬ್ಬಕ್ಕೆ)

ಪಾಲಿಸಿಯ ಅವದಿ (ಟರ್ಮ್)

ಪಾಲಿಸಿ ಪಡೆಯುವಾಗಿನ ವಯಸ್ಸನ್ನು 25 ವರ್ಷದಿಂದ ಕಳೆದಲ್ಲಿ ಬರುವ ಆವದಿ

ಪಾಲಿಸಿ ಮೆಚೂರಿಟೀ ಸಮಯದಲ್ಲಿ ಪಾಲಿಸಿದಾರನ ಮಗುವಿನ  ಗರಿಷ್ಠ ವಯಸ್ಸು

25 ವರ್ಷಗಳು (ಹಿಂದಿನ ಹುಟ್ಟು ಹಬ್ಬಕ್ಕೆ)  

ರಿಸ್ಕ್ ಕವರೆಜ್ ಶುರು ಆಗುವ ದಿವಸ

ಈ ಪಾಲಿಸಿಯ ನಿಯಮದ ಪ್ರಕಾರ, ಪಾಲಿಸಿದಾರನಿಗೆ 8 ವರ್ಷ ಆಗಿಲ್ಲದಿದ್ದಲ್ಲಿ, ಆತನ ಪಾಲಿಸಿಯ ವಿಮಾ ರಿಸ್ಕ್ ಕವರೆಜ್ ಅವನ  8 ವರ್ಷ ತುಂಬುವ ದಿನಕ್ಕೆ ಹತ್ತಿರದ ಪಾಲಿಸಿ ಆನಿವರ್ಸರಿ ಯ ಹಿಂದಿನ ದಿನದಿಂದ ಅಥವಾ 8 ವರ್ಷಗಳು ತುಂಬಿದ ದಿನದಿಂದ ಆರಂಭವಾಗುತ್ತದೆ.

ಪಾಲಿಸಿದಾರನಿಗೆ  8 ವರ್ಷಗಳು ತುಂಬಿದ್ದಲ್ಲಿ, ವಿಮಾ ರಿಸ್ಕ್ ಕವರೆಜ್ ಪಾಲಿಸಿಯು ಪ್ರಾರಂಭವಾದ ದಿನದಿಂದಲೇ ಶುರು ಆಗುತ್ತದೆ.

ಪಾಲಿಸಿಯು ಪಾಲಿಸಿದಾರನಿಂದ ಅವನ ಮಗುವಿಗೆ ಬದಲಾಗುವ ದಿವಸ  

ಪಾಲಿಸಿದಾರನ ಮಗ / ಮಗಳಿಗೆ 18 ವರ್ಷಗಳು ತುಂಬಿದ ದಿವಸದಿಂದ ಅಥವಾ ಆ ವರ್ಷದಲ್ಲಿ ಪಾಲಿಸಿಯ ಅನಿವರ್ಸರಿ ದಿವಸ (ಹುಟ್ಟು ಹಬ್ಬದ ದಿವಸವೆ ಆದಲ್ಲಿ) ದಿಂದ ಪಾಲಿಸಿಯು ಮಗ / ಮಗಳ ಹೆಸರಿಗೆ ಬದಲಾಗುತ್ತದೆ. ಆ ದಿವಸದಿಂದ, ವಿಮಾ ಯೋಜನೆಯ ಒಪ್ಪಂದವು ಕಾರ್ಪೊರೇಷನ್ ಮತ್ತು ಬದಲಾದ ವ್ಯಕ್ತಿಯ  ಜೊತೆ ಇರುತ್ತದೆ.

ಪಾಲಿಸಿಯ ಪ್ರೀಮಿಯಂ ನೀಡುವ ರೀತಿ

ಪಾಲಿಸಿಯ ಬಾಬ್ತು ನೀಡಬೇಕಾಗಿರುವ ಪ್ರೀಮಿಯಂ ಗಳನ್ನು ಈ ಕೆಳ ಕಂಡ ರೀತಿಯಲ್ಲಿ ಪಾವತಿಸಬಹುದು. ಪ್ರೀಮಿಯಂ ಗಳನ್ನು ಪಾಲಿಸಿಯ ಅವದಿ ಇರುವವರೆಗೂ ನೀಡಬೇಕು.

 • ವರ್ಷಕ್ಕೊಮ್ಮೆ
 • ಅರ್ದ ವರ್ಷಕ್ಕೊಮ್ಮೆ
 • 3 ತಿಂಗಳಿಗೊಮ್ಮೆ
 • ತಿಂಗಳಿಗೊಮ್ಮೆ (ECS ಮುಖಾಂತರ ಮಾತ್ರ ಅಥವಾ ಸಂಬಳದಿಂದ ಕಡಿತವಾಗುವ ರೀತಿ)

ಪಾಲಿಸಿ ಪ್ರೀಮಿಯಂ ಮೊತ್ತದ ಉದಾಹರಣೆ

ಕೆಳಗೆ ನೀಡಿರುವ ಟೇಬಲ್ ನಲ್ಲಿ ಕೆಲವು ಪ್ರೀಮಿಯಂ ರೇಟ್ ಗಳನ್ನು (ರೂ ಗಳಲ್ಲಿ) (ಸರ್ವಿಸ್ ಟಾಕ್ಸ್ ಮೊತ್ತವನ್ನು ಹೊರತು ಪಡಿಸಿ) ನೀಡಲಾಗಿದೆ.

ಟೇಬಲ್ ನಲ್ಲಿ ನಮೂದಿಸಿರುವ ರೇಟ್ ಪ್ರತಿ ರೂ 1000 ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತಕ್ಕೆ ಅನ್ವಯವಾಗುತ್ತದೆ.


ವಯಸ್ಸು (ವರ್ಷಗಳಲ್ಲಿ)


ಪ್ರೀಮಿಯಂ (ರೂ ಗಳಲ್ಲಿ)

0

44.15

5

57.00

10

80.60

12

93.90

ಎಲ್ ಐ ಸಿ ನ್ಯೂ ಚಿಲ್ಡ್ರನ್ ಮನೀ ಬ್ಯಾಕ್ ಪ್ಲಾನ್ – ಇತರೆ ಬೆನಿಫಿಟ್ ಗಳು

ಎಲ್ ಐ ಸಿ ನ್ಯೂ ಚಿಲ್ಫ್ರೆನ್ ಮನೀ ಬ್ಯಾಕ್ಪ್ಲಾನ್ ಸಹಾ ಪಾಲಿಸಿದಾರನಿಗೆ ಇನ್ನಿತರ ಬೆನಿಫಿಟ್ ಗಳನ್ನು ನೀಡುತ್ತದೆ. ಅದರ ವಿವರಗಳನ್ನು ಕೆಳಗೆ ನೀಡಲಾಗಿದೆ.

ಪ್ರೀಮಿಯಂ ಹಾಗೂ ಹೆಚ್ಚಿನ ಸಮ್ ಅಶ್ಶುರ್ಡ್ ಮೇಲೆ ನೀಡುವ ರಿಯಾಯತಿ

ಎಲ್ ಐ ಸಿ ನ್ಯೂ ಚಿಲ್ದ್ರನ್  ಪಾಲಿಸಿಯನ್ನು ಪಡೆಯುವಾಗ ಪಾಲಿಸಿದಾರನಿಗೆ ಕೆಲವು ರಿಯಾಯತಿ ದೊರಕುತ್ತದೆ. ಅವುಗಳು ಅವನು ನೀಡುವ ಪ್ರೀಮಿಯಂ ಹಾಗೂ ಹೆಚ್ಚಿನ ಸಮ್ ಅಶ್ಶುರ್ಡ್ ಮೊತ್ತಗಳಿಗೆ ಅನ್ವಯವಾಗುತ್ತದೆ. ವಿವರಗಳು ಈ ಕೆಳ ಕಂಡಂತಿದೆ.

ಪ್ರೀಮಿಯಂ ಮೇಲೆ ಸಿಗುವ ರಿಯಾಯತಿ

ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ – ಸ್ಯಾಂಪಲ್ ಪ್ರೀಮಿಯಂ ಮೊತ್ತದ ಮೇಲೆ 2 % ರಿಯಾಯತಿ ದೊರೆಯುತ್ತದೆ

ಅರ್ದ ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ – ಸ್ಯಾಂಪಲ್ ಪ್ರೀಮಿಯಂ ಮೊತ್ತದ ಮೇಲೆ 1 % ರಿಯಾಯತಿ ದೊರೆಯುತ್ತದೆ

3 ತಿಂಗಳಿಗೊಮ್ಮೆ ಹಾಗೂ ತಿಂಗಳಿಗೊಮ್ಮೆ ನೀಡುವ ಪ್ರೀಮಿಯಂ –ಯಾವುದೇ ರಿಯಾಯತಿ ದೊರೆಯುವುದಿಲ್ಲ

ಹೆಚ್ಚು ಸಮ್ ಅಶ್ಶುರ್ಡ್(B.S.A)  ಮೇಲೆ ಸಿಗುವ ರಿಯಾಯತಿ

ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ (ರೂ ಗಳಲ್ಲಿ)  B. S. A

ದೊರೆಯುವ ರಿಯಾಯತಿ

100000 ದಿಂದ 190000 ರವರೆಗೆ

ಯಾವುದೇ ರಿಯಾಯತಿ ಇಲ್ಲ

200000 ದಿಂದ 490000 ರವರೆಗೆ

B.S.A ಮೇಲೆ 2.00% ರಿಯಾಯತಿ ದೊರೆಯುತ್ತದೆ

500000 ಕ್ಕೆ ಮೇಲ್ಪಟ್ಟು

B.S.A ಮೇಲೆ 3.00 % ರಿಯಾಯತಿ ದೊರೆಯುತ್ತದೆ

ಪೈಡ್ - ಅಪ್ ಮೌಲ್ಯ

ಪಾಲಿಸಿದಾರನು ಪಾಲಿಸಿಯ ಬಾಬ್ತು ನೀಡಬೇಕಾಗಿರುವ ಪ್ರೀಮಿಯಂ ಗಳನ್ನು 3 ವರ್ಷಗಳು ಪಾವತಿಸಿದ್ದಲ್ಲಿ, ಹಾಗೂ ಮುಂದೆ ಕಾರಣಾಂತರದಿಂದ ಪ್ರೀಮಿಯಂ ಅನ್ನು ಕಟ್ಟಲು ಆಗದೇ ಇದ್ದ ಪಕ್ಷದಲ್ಲಿ ಅಂತಹ ಪಾಲಿಸಿಯು ಅಸ್ತಿತ್ವವನ್ನು ಕಳೆದುಕೊಳ್ಳುವುದಿಲ್ಲ. ಬದಲಿಗೆ ಆ ಪಾಲಿಸಿಯು ಪೈಡ್-ಅಪ್ ಪಾಲಿಸಿ ಎಂದು ಕರೆಸಿಕೊಂಡು ಅವದಿಯು ಮುಗಿಯುವವರೆಗೂ ಮುಂದುವರೆಯುತ್ತದೆ.

 • ಈ ಪಾಲಿಸಿಯ ನಿಯಮದ ಪ್ರಕಾರ, ಇಂತಹ ಪೈಡ್-ಅಪ್ ಪಾಲಿಸಿಗೆ ಸಮ್ ಅಶ್ಶುರ್ಡ್ ಆನ್ ಡೆತ್ ಮೊತ್ತವನ್ನು ಕಡಿತಗೊಳಿಸಿ ಡೆತ್ ಪೈಡ್-ಅಪ್ ಸಮ್ ಅಶ್ಶುರ್ಡ್ ಮೊತ್ತವೆಂದು  ಪರಿಗಣಿಸಲಾಗುತ್ತದೆ. ಇದು ಪಾಲಿಸಿದಾರನು ನೀಡಬೇಕಾದ ಹಾಗೂ ನೀಡಿರುವ ಪ್ರೀಮಿಯಂ ಗಳ ಮೇಲೆ ಅವಲಂಬಿತವಾಗಿರುತ್ತದೆ.

ಡೆತ್ ಪೈಡ್-ಅಪ್ ಸಮ್ ಅಶ್ಶುರ್ಡ್ ಮೊತ್ತ = ಸಮ್ ಅಶ್ಶುರ್ಡ್ ಆನ್ ಡೆತ್ x (ಒಟ್ಟು ನೀಡಿರುವ ಪ್ರೀಮಿಯಂಗಳು / ಒಟ್ಟು ನೀಡಬೇಕಾಗಿರುವ ಪ್ರೀಮಿಯಂಗಳು)

 • ಈ ಪಾಲಿಸಿಯ ನಿಯಮದ ಪ್ರಕಾರ, ಇಂತಹ ಪೈಡ್-ಅಪ್ ಪಾಲಿಸಿಗೆ ಮೆಚೂರಿಟೀ ಪೈಡ್-ಅಪ್ ಸಮ್ ಅಶ್ಶುರ್ಡ್ ಮೊತ್ತವನ್ನು ಪಾಲಿಸಿಯ ಅವದಿ ಮುಗಿದ ನಂತರ ನೀಡಲಾಗುವುದು. ಇದು ಪಾಲಿಸಿದಾರನು ನೀಡಬೇಕಾದ ಹಾಗೂ ನೀಡಿರುವ ಪ್ರೀಮಿಯಂ ಗಳ ಮೇಲೆ ಅವಲಂಬಿತವಾಗಿರುತ್ತದೆ.

ಮೆಚೂರಿಟೀ  ಪೈಡ್-ಅಪ್ ಸಮ್ ಅಶ್ಶುರ್ಡ್ ಮೊತ್ತ = [(ಸಮ್ ಅಶ್ಶುರ್ಡ್ ಆನ್ ಮೆಚೂರಿಟೀ + ನೀಡಬೇಕಾಗಿರುವ ಒಟ್ಟು ಸರ್ವೈವಲ್ ಮೊತ್ತ x (ಒಟ್ಟು ನೀಡಿರುವಪ್ರೀಮಿಯಂಗಳು / ಒಟ್ಟು ನೀಡಬೇಕಾಗಿರುವ ಪ್ರೀಮಿಯಂಗಳು)] – ಅದುವರೆವಿಗೂ ನೀಡಿರುವ ಸರ್ವೈವಲ್ ಬೆನಿಫಿಟ್ ಮೊತ್ತ.

ಈ ಬೆನಿಫಿಟ್ ಅನ್ನು ಪಾಲಿಸಿಯ ಆವದಿ ಮುಗಿದ ನಂತರ ಅಥವಾ ಪಾಲಿಸಿದಾರನ ಮರಣ ಆದಲ್ಲಿ ನೀಡಲಾಗುವುದು. ಆ ಮೊತ್ತದಲ್ಲಿ  ಪೈಡ್-ಅಪ್ ಸಮ್ ಅಶ್ಶುರ್ಡ್ ಮೊತ್ತ ಮತ್ತು ವೆಸ್ಟೆಡ್ ಸಿಂಪಲ್ ರಿವರ್ಷನರಿ ಬೋನಸ್ (ಇದ್ದಲ್ಲಿ) ಮೊತ್ತ ಎರಡೂ ಸೇರಿರುತ್ತದೆ. ಪೈಡ್-ಅಪ್ ಪಾಲಿಸಿಯು ಮುಂದಿನ ಬೋನಸ್ ಗಳಿಗೆ ಅರ್ಹತೆ ಪಡೆಯುವುದಿಲ್ಲ. ಪಾಲಿಸಿಯ ಆವದಿ ಮುಗಿದ ನಂತರ ಅಥವಾ ಪಾಲಿಸಿದಾರನ ಮರಣ ಆದಲ್ಲಿ, ಪೈಡ್-ಅಪ್ ಸಮ್ ಅಶ್ಶುರ್ಡ್ ಮೊತ್ತವನ್ನು ನೀಡಲಾಗುವುದು. ರೈಡರ್ಸ್ ಗಳು ಯಾವುದೇ ಪೈಡ್-ಅಪ್ ಮೌಲ್ಯವನ್ನು ಗಳಿಸುವುದಿಲ್ಲ ಹಾಗೂ ರೈಡರ್ಸ್ ಗೆ  ಬೆನಿಫಿಟ್ ಗಳು ಕೂಡ ರದ್ದಾಗುತ್ತವೆ.

ಪಾಲಿಸಿಯ ರಿವೈವಲ್

ಪಾಲಿಸಿಯ ಮೇಲಿನ ಕಂತನ್ನು (ಪ್ರೀಮಿಯಂ ಅನ್ನು) ಗ್ರೇಸ್ ಪೀರಿಯಡ್ ಅವದಿಯಲ್ಲಿಯೂ ಕೂಡ ಕಟ್ಟದಿದ್ದಲ್ಲಿ, ಪಾಲಿಸಿಯು  ಲ್ಯಾಪ್ಸ್ ಆಗುತ್ತದೆ ಅಂದರೆ ಅದು ಸ್ತಗಿತಗೊಳ್ಳುತ್ತದೆ ಅಥವಾ ಮಾನ್ಯತೆ ಕಳೆದುಕೊಳ್ಳುತ್ತದೆ. ಈ ಪಾಲಿಸಿಯ ಅಡಿಯಲ್ಲಿ, ಆ ರೀತಿ ಲ್ಯಾಪ್ಸ್ ಆಗಿರುವ ಪಾಲಿಸಿಯನ್ನು ರಿವೈವಲ್ ಮಾಡುವ ಅವಕಾಶ ಇರುತ್ತದೆ. ಆದರೆ ಪಾಲಿಸಿದಾರನು ನೀಡದಿರುವ ಪ್ರೀಮಿಯಂ ದಿವಸದಿಂದ ಎರಡು ವರ್ಷಗಳ ಒಳಗೆ ಹಾಗೂ ಪಾಲಿಸಿಯು ಚಾಲ್ತಿಯಲ್ಲಿ ಇದ್ದಲ್ಲಿ, ರಿವೈವಲ್ ಮಾಡಿಕೊಳ್ಳಬಹುದು. ಅದುವರೆವಿಗೂ ಕಟ್ಟದೆ ಇರುವ ಪ್ರೀಮಿಯಂಗಳನ್ನು ಅದಕ್ಕೆ ಅನ್ವಯವಾಗುವ ಲೇಟ್ ಫೀ ಹಾಗೂ ಕಾರ್ಪೊರೇಷನ್ ನವರು ವಿಧಿಸುವ ಯಾವುದೇ ಬಡ್ಡಿ ಇದ್ದಲ್ಲಿ ಅದನ್ನೂ ಸಹಾ ಸೇರಿಸಿ ಒಟ್ಟು ಮೊತ್ತವನ್ನು ಕಾರ್ಪೊರೇಷನ್ ಗೆ ನೀಡಬೇಕಾಗುತ್ತದೆ. ಹಾಗೂ ಪಾಲಿಸಿ ಲ್ಯಾಪ್ಸ್ ಏಕೆ ಆಯಿತು ಎನ್ನುವುದರ ಬಗ್ಗೆ ಸೂಕ್ತ ಕಾರಣಗಳನ್ನು ನೀಡಬೇಕಾಗುತ್ತದೆ. ಮತ್ತು ಪಾಲಿಸಿಯ ಮುಂದುವರಿಕೆಯ ಬಗ್ಗೆ ಪುರಾವೆಯನ್ನು ಸಹಾ ನೀಡಬೇಕು.

ಸದರಿ ಪಾಲಿಸಿಯನ್ನು ರಿವೈವ್ ಮಾಡುವುದು ಅಥವಾ ಬಿಟ್ಟಿದ್ದು ಕಾರ್ಪೊರೇಷನ್ ಗೆ ಸೇರಿದ್ದು. ಹಾಗೂ ಪಾಲಿಸಿಯನ್ನು ಮೊದಲು ಪಾಲಿಸಿಗೆ ಅನ್ವಯವಾಗುತ್ತಿದ್ದ ನಿಯಮಗಳು ಮತ್ತು ನಿಬಂದನೆಗಳಿಗೆ ಅನುಸಾರವಾಗಿಯೇ ರಿವೈವ್ ಮಾಡುವುದೋ ಅಥವಾ ಹೊಸ ನಿಯಮಗಳು ಹಾಗೂ ನಿಬಂದನೆಗಳನ್ನು ವಿಧಿಸಿ ರಿವೈವ್ ಮಾಡುವುದೋ ಎನ್ನುವ ನಿರ್ದಾರವನ್ನು ಕಾರ್ಪೊರೇಷನ್ ತೆಗೆದುಕೊಳ್ಳುತ್ತದೆ. ಪಾಲಿಸಿಯು ಕಾರ್ಪೊರೇಷನ್ ನವರು ಒಪ್ಪಿಕೊಂಡು ಅದರ ಬಗ್ಗೆ ಪಾಲಿಸಿದಾರನಿಗೆ ಲಿಖಿತ ಮುಖೇನ ತಿಳಿಸಿದ ದಿವಸದಿಂದ ರಿವೈವಲ್ ಆಗಿದೆ ಎಂದು ಪರಿಗಣಿಸಬೇಕಾಗುತ್ತದೆ. ರೈಡರ್ ಗಳ ರಿವೈವಲ್ ಕೂಡ ಈ ರಿವೈವಲ್ ಜೊತೆಗೆ ಆಗುತ್ತದೆಯೇ ಹೊರತು, ಅದು ಸೆಪರೇಟ್ ಆಗಿ ಆಗುವುದಿಲ್ಲ.

ಸರಂಡರ್ ಮೌಲ್ಯ

ಎಲ್ ಐ ಸಿ ನ್ಯೂ ಚಿಲ್ದ್ರನ್ ಮನೀ ಬ್ಯಾಕ್ ಪಾಲಿಸಿಯ ಸರಂಡರ್ ಮೌಲ್ಯವು  ಅದರ ಪಾಲಿಸಿಯ ಅವದಿಯ ಮೇಲೆ ಅವಲಂಬಿತವಾಗಿದೆ. ಪಾಲಿಸಿದಾರನು ಪ್ರೀಮಿಯಂ ಅನ್ನು 3 ವರ್ಷಗಳು ಸತತವಾಗಿ ಪಾವತಿಸಿದ್ದಲ್ಲಿ, ಪಾಲಿಸಿಯನ್ನು ಸರಂಡರ್ ಮಾಡಲು ಅರ್ಹತೆ ಇರುತ್ತದೆ. ಪಾಲಿಸಿಯನ್ನು ಸರಂಡರ್ ಮಾಡಿದಾಗ ನೀಡುವ ಗ್ಯಾರಂಟಿಡ್ ಸರಂಡರ್ ಮೌಲ್ಯವು ಪಾಲಿಸಿದಾರನು ಅದುವರೆವಿಗೂ ನೀಡಿರುವ ಪ್ರೀಮಿಯಂ ಮೊತ್ತದ ಪರ್ಸೆಂಟೆಜ್ ಆಗಿರುತ್ತದೆ. ಈ ಪರ್ಸೆಂಟೆಜ್ ಪಾಲಿಸಿಯ ಟರ್ಮ್ ಹಾಗೂ ಪಾಲಿಸಿಯನ್ನು ಎಷ್ಟು ವರ್ಷದ ಮೇಲೆ ಸರಂಡರ್ ಮಾಡಿದ್ದು ಎನ್ನುವುದರ ಮೇಲೆ  ನಿಗದಿಗೊಳಿಸಲಾಗುತ್ತದೆ.

ಗ್ಯಾರಂಟಿಡ್ ಸರಂಡರ್ ಮೊತ್ತ = [ಪಾಲಿಸಿದಾರನು ಅದುವರೆವಿಗೂ ನೀಡಿರುವ ಪ್ರೀಮಿಯಂ ಗಳ ಒಟ್ಟು ಮೊತ್ತ (ತೆರಿಗೆಗಳು, ಎಕ್ಷ್ತ್ರಾ ಪ್ರೀಮಿಯಂ ಇದ್ದಲ್ಲಿ ಹಾಗೂ ರೈಡರ್ ಪ್ರೀಮಿಯಂ ಇದ್ದಲ್ಲಿ, ಇವೆಲ್ಲವನ್ನೂ ಹೊರತು ಪಡಿಸಿ) x ಗ್ಯಾರಂಟಿಡ್ ಸರಂಡರ್ ವ್ಯಾಲ್ಯು ಫ್ಯಾಕ್ಟರ] – ಪಾಲಿಸಿಯ ನಿಯಮದ ಪ್ರಕಾರ ಅದುವರೆವಿಗೂ ನೀಡಿರುವ ಸರಂಡರ್ ಬೆನಿಫಿಟ್ ಮೊತ್ತಗಳು.

ಸರಂಡರ್ ಮೌಲ್ಯದ ಒಟ್ಟಿಗೆ ವೆಸ್ಟೆಡ್ ಸಿಂಪಲ್ ರಿವರ್ಶನರಿ ಬೋನಸ್ ಮೌಲ್ಯವನ್ನು ಸೇರಿಸಿ ನೀಡಲಾಗುತ್ತದೆ. ವೆಸ್ಟೆಡ್ ಸಿಂಪಲ್ ರಿವರ್ಶನರಿ ಬೋನಸ್ ಅಂದರೆ, ವೆಸ್ಟೆಡ್ ಬೋನಸ್ ಅನ್ನು ಗ್ಯಾರಂಟಿಡ್ ಸರಂಡರ್ ವ್ಯಾಲ್ಯು ಫ್ಯಾಕ್ಟರ್ ನಿಂದ ಗುಣಿಸಿದಾಗ ಬರುವ ಮೊತ್ತ. ಈ ಗ್ಯಾರಂಟಿಡ್ ಸರಂಡರ್ ವ್ಯಾಲ್ಯು ಫ್ಯಾಕ್ಟರ್ ಪರ್ಸೆಂಟೆಜ್ ರೂಪದಲ್ಲಿದ್ದು, ಅದು ಪಾಲಿಸಿಯ ಟರ್ಮ್ ಹಾಗೂ ಪಾಲಿಸಿಯನ್ನು ಎಷ್ಟು ವರ್ಷದ ಮೇಲೆ ಸರಂಡರ್ ಮಾಡಿದ್ದು ಎನ್ನುವುದರ ಮೇಲೆ  ನಿಗದಿಗೊಳಿಸಲಾಗುತ್ತದೆ. ಕೆಳೆಗೆ ಕಾಣಿಸಿರುವ ಟೇಬಲ್ ನಲ್ಲಿ ವೆಸ್ಟೆಡ್ ಬೋನಸ್ ಗೆ ಅನ್ವಯವಾಗುವ ಗ್ಯಾರಂಟಿಡ್ ಸರಂಡರ್ ಫ್ಯಾಕ್ಟರ್ ವಿವರಗಳನ್ನು ನೀಡಲಾಗಿದೆ.

ವೆಸ್ಟೆಡ್ ಬೋನಸ್ ಗೆ ಅನ್ವಯವಾಗುವ ಗ್ಯಾರಂಟಿಡ್ ಸರಂಡರ್ ವ್ಯಾಲ್ಯು ಫ್ಯಾಕ್ಟರ್ ಗಳ ವಿವರ

ಪಾಲಿಸಿಯ ವರ್ಷ

ಪಾಲಿಸಿಯ ಟರ್ಮ್

 

13

14

15

16

17

18

19

20

21

22

23

24

25

1

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

2

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

0.00 %

3

18.16 %

17.85 %

17.66 %

17.58 %

17.58 %

17.03 %

16.58 %

16.22 %

15.93 %

15.72 %

15.55 %

15.42 %

15.28 %

4

18.60 %

18.16 %

17.85 %

17.66 %

17.58 %

17.58 %

17.03 %

16.58 %

16.22 %

15.93 %

15.72 %

15.55 %

15.42 %

5

19.18 %

18.60 %

18.16 %

17.85 %

17.66 %

17.58 %

17.58 %

17.03 %

16.58 %

16.22 %

15.93 %

15.72 %

15.55 %

6

19.93 %

19.18 %

18.60 %

18.16 %

17.85 %

17.66 %

17.58 %

17.58 %

17.03 %

16.58 %

16.22 %

15.93 %

15.72 %

7

20.85 %

19.93 %

19.18 %

18.60 %

18.16 %

17.85 %

17.66 %

17.58 %

17.58 %

17.03 %

16.58 %

16.22 %

15.93 %

8

21.99 %

20.85 %

19.93 %

19.18 %

18.60 %

18.16 %

17.85 %

17.66 %

17.58 %

17.58 %

17.03 %

16.58 %

16.22 %

9

23.38 %

21.99 %

20.85 %

19.93 %

19.18 %

18.60 %

18.16 %

17.85 %

17.66 %

17.58 %

17.58 %

17.03 %

16.58 %

10

25.05 %

23.38 %

21.99 %

20.85 %

19.93 %

19.18 %

18.60 %

18.16 %

17.85 %

17.66 %

17.58 %

17.58 %

17.03 %

11

27.06 %

25.05 %

23.38 %

21.99 %

20.85 %

19.93 %

19.18 %

18.60 %

18.16 %

17.85 %

17.66 %

17.58 %

17.58 %

12

30.00 %

27.06 %

25.05 %

23.38 %

21.99 %

20.85 %

19.93 %

19.18 %

18.60 %

18.16 %

17.85 %

17.66 %

17.58 %

13

35.00 %

30.00 %

27.06 %

25.05 %

23.38 %

21.99 %

20.85 %

19.93 %

19.18 %

18.60 %

18.16 %

17.85 %

17.66 %

14

 

35.00 %

30.00 %

27.06 %

25.05 %

23.38 %

21.99 %

20.85 %

19.93 %

19.18 %

18.60 %

18.16 %

17.85 %

15

   

35.00 %

30.00 %

27.06 %

25.05 %

23.38 %

21.99 %

20.85 %

19.93 %

19.18 %

18.60 %

18.16 %

16

     

35.00 %

30.00 %

27.06 %

25.05 %

23.38 %

21.99 %

20.85 %

19.93 %

19.18 %

18.60 %

17

       

35.00 %

30.00 %

27.06 %

25.05 %

23.38 %

21.99 %

20.85 %

19.93 %

19.18 %

18

         

35.00 %

30.00 %

27.06 %

25.05 %

23.38 %

21.99 %

20.85 %

19.93 %

19

           

35.00 %

30.00 %

27.06 %

25.05 %

23.38 %

21.99 %

20.85 %

20

             

35.00 %

30.00 %

27.06 %

25.05 %

23.38 %

21.99 %

21

               

35.00 %

30.00 %

27.06 %

25.05 %

23.38 %

22

                 

35.00 %

30.00 %

27.06 %

25.05 %

23

                   

35.00 %

30.00 %

27.06 %

24

                     

35.00 %

30.00 %

25

                       

35.00 %

ಈ ಪಾಲಿಸಿಗೆ ಕಾರ್ಪೊರೇಷನ್ ನವರು ಪಾಲಿಸಿದಾರನಿಗೆ ಸಹಾಯವಾಗಲಿ ಎನ್ನುವ ದೃಷ್ಟಿಯಿಂದ, ಸ್ಪೆಷಲ್ ಸರಂಡರ್ ಮೊತ್ತವನ್ನು ಅದು ಹೆಚ್ಚಾಗಿದ್ದಲ್ಲಿ ಅದನ್ನು ನೀಡಬಹುದು.

ಪಾಲಿಸಿಗೆ ಫ್ರೀ ಲುಕ್ ಪೀರಿಯಡ್

ಇತರೆ ಜೀವ ವಿಮಾ ಪಾಲಿಸಿ ಗಳಲ್ಲಿ ನೀಡುತ್ತಿರುವ ಒಂದು ಸವಲತ್ತು ಈ ಪಾಲಿಸಿಯಲ್ಲೂ ಪಾಲಿಸಿದಾರನಿಗೆ ಲಭ್ಯವಿದೆ. ಅದೆಂದರೆ, ಫ್ರೀ ಲುಕ್ ಪೀರಿಯಡ್. ಈ ಫ್ರೀ ಲುಕ್ ಪೀರಿಯಡ್ ನಲ್ಲಿ, ಪಾಲಿಸಿದಾರನು, ಪಾಲಿಸಿಯ ದಾಖಲೆಗಳು ಅವನ ಕೈ ಸೇರಿದ 15 ದಿವಸಗಳಲ್ಲಿ ಅದರಲ್ಲಿ ನಮೂದಿಸಿರುವ ಎಲ್ಲ ನಿಯಮಗಳು ಹಾಗೂ ನಿಬಂದನೆಗಳನ್ನು ಓದಿ ಅದನ್ನು ಅರ್ಥ ಮಾಡಿಕೊಳ್ಳಲು ನೀಡುವ ಕಾಲಾವಕಾಶ ಆಗಿರುತ್ತದೆ. ಅಕಸ್ಮಾತ್ ಪಾಲಿಸಿದಾರನಿಗೆ ಇದರಲ್ಲಿರುವ ಯಾವುದೇ ನಿಯಮಗಳ  ಅಥವಾ ನಿಬಂದನೆಗಳ ಬಗ್ಗೆ ಒಪ್ಪಿಗೆ ಆಗದಿದ್ದಲ್ಲಿ, ಆ ಪಾಲಿಸಿಯನ್ನು ಆತನು 15 ದಿನಗಳ ಒಳಗೆ ಎಲ್ ಐ ಸಿ ಗೆ ಹಿಂದಿರುಗಿಸಬಹುದು. ಆದರೆ, ಆ ರೀತಿ ಹಿಂದಿರುಗಿಸಲು ಕಾರಣ ನೀಡಬೇಕಾಗುತ್ತದೆ. ಪಾಲಿಸಿಯು ಕಾರ್ಪೊರೇಷನ್ ಗೆ ತಲುಪಿದ ಕೂಡಲೇ ಆ ಪಾಲಿಸಿಯನ್ನು ರದ್ದು ಮಾಡಲಾಗುವುದು. ಆದರೆ, ಹಿಂದಿರುಗಿಸುವ ಮೊತ್ತದಲ್ಲಿ, ಪ್ರೊಪೋರ್ಷನೆಟ್ ರಿಸ್ಕ್ ಪ್ರೀಮಿಯಂ (ಬೇಸ್ ಪ್ಲಾನ್ ಮತ್ತು ರೈಡರ್ ಗೆ), ವೈದ್ಯಕೀಯ ಪರೀಕ್ಷೆಗೆ ಹಾಗೂ ಅದರ ರಿಪೋರ್ಟ್ ಗಳಿಗೆ ತಗುಲಿರಬಹುದಾದ  ವೆಚ್ಚ ವನ್ನು ಅದರಿಂದ ಕಳೆದು, ಉಳಿದ ಹಣವನ್ನು ಹಿಂದಿರುಗಿಸಲಾಗುವುದು

ಪಾಲಿಸಿಯ  ಮೇಲೆ ನೀಡಲಾಗುವ ಸಾಲ ಸೌಲಭ್ಯ

ಈ ಪಾಲಿಸಿಯ ಮೇಲೆ ಸಾಲ ಸೌಲಭ್ಯ ಇರುತ್ತದೆ. ಆದರೆ, ಪಾಲಿಸಿಯು ಸರಂಡರ್ ಮೌಲ್ಯವನ್ನು ಹೊಂದಿರಬೇಕು. ಈ ಸಾಲವು ಕೂಡ ಕಾರ್ಪೊರೇಷನ್ ನವರು ಕಾಲ ಕಾಲಕ್ಕೆ ನಮೂದಿಸುವ ನಿಯಮ ಹಾಗೂ ನಿಬಂದನೆಗೆ ಒಳ ಪಟ್ಟಿರುತ್ತದೆ.

ಪಾಲಿಸಿಯ ಮೇಲೆ ತೆರಿಗೆಗಳು

ಭಾರತ ಸರ್ಕಾರ ಅಥವಾ ಇನ್ನೂ ಯಾವುದೇ ಸರ್ಕಾರದ ಸ್ವಾಮ್ಯತೆಗೆ ಒಳಪಟ್ಟ ಪ್ರಾದಿಕಾರಗಳು ಶಾಸನಬದ್ದವಾದ ತೆರಿಗೆಗಳನ್ನು ಜೀವ ವಿಮಾ ಪಾಲಿಸಿಗಳಿಗೆ ಅನ್ವಯವಾಗುವಂತೆ ಮಾಡಿದಲ್ಲಿ, ಅಂತಹ ತೆರಿಗೆಗಳು ಈ ಪಾಲಿಸಿಗೂ ಅನ್ವಯಿಸುತ್ತದೆ. ಹಾಗಾಗಿ ಪ್ರೀಮಿಯಂ ನೀಡುವಾಗ ಅವತ್ತಿನ ದಿನ ಯಾವ ತೆರಿಗೆಯು ಆ ಪಾಲಿಸಿಗೆ ಅನ್ವಯವಾಗುವುದೊ, ಅದನ್ನು ಸೇರಿಸಿ ನೀಡಬೇಕಾಗುತ್ತದ.

ಪ್ರೀಮಿಯಂ ಮೊತ್ತದ ಜೊತೆಗೆ, ಸರ್ವಿಸ್ ಟಾಕ್ಸ್ ಅನ್ನು ಕೂಡ ಕಟ್ಟಬೇಕಾಗುತ್ತದೆ. ಇದು, ಪ್ರೀಮಿಯಂ ಮೊತ್ತದ ಜೊತೆಗೆ ಸೇರದೆ ಸೆಪರೇಟ್ ಆಗಿ ನಮೂದಿಸಲಾಗುತ್ತದೆ. ಪ್ರೀಮಿಯಂ ಜೊತೆಯಲ್ಲಿ ನೀಡುವ ಯಾವ ತೆರಿಗೆಗಳನ್ನೂ, ಬೆನಿಫಿಟ್ ಲೆಕ್ಕಕ್ಕೆ ಸೇರಿಸುವುದಿಲ್ಲ.

ಪಾಲಿಸಿಯಲ್ಲಿ ಸೇರಿಲ್ಲದೆ ಇರುವುದು

ಈ ಪಾಲಿಸಿಯಲ್ಲಿ ಪಾಲಿಸಿದಾರನ ಆತ್ಮಹತ್ಯೆ ಸೇರಿರುವುದಿಲ್ಲ. ಪಾಲಿಸಿದಾರನು ಆತ್ಮಹತ್ಯೆ ಮಾಡಿಕೊಂಡಲ್ಲಿ, ಪಾಲಿಸಿಯು ತನ್ನ  ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ.

 • ಪಾಲಿಸಿದಾರನು ಪಾಲಿಸಿಯ ರಿಸ್ಕ್ ಕವರೆಜ್ ಶುರು ಆದ ದಿವಸದಿಂದ  12 ತಿಂಗಳುಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ, ಅಂತಹ ಪಾಲಿಸಿಯು ಕಾರ್ಪೊರೇಷನ್ ಆ ಪಾಲಿಸಿಗೆ ನೀಡಬೇಕಾಗಿರುವ ಬೆನಿಫಿಟ್ ಗಳಿಗೆ ಅರ್ಹತೆ ಪಡುವುದಿಲ್ಲ. ಆದರೆ, ಅದುವರೆವಿಗೂ ನೀಡಿರುವ ಪ್ರೀಮಿಯಂ ಗಳ 80 % ಮೊತ್ತವನ್ನು ಕಾರ್ಪೊರೇಷನ್ ನಾಮಿನಿಗೆ ನೀಡುತ್ತದೆ. ಇದರಲ್ಲಿ, ಅನ್ವಯವಾಗುವ ತೆರಿಗೆ, ಎಕ್ಸ್ಟ್ರಾ ಪ್ರೀಮಿಯಂ ಗಳು ಹಾಗೂ ರೈಡರ್ ಪ್ರೀಮಿಯಂ ಗಳು ಇದ್ದಲ್ಲಿ, ಅದನ್ನು ಕಡಿತಗೊಳಿಸಿ ಉಳಿಕೆ ಹಣವನ್ನು ನೀಡಲಾಗುವುದು.
 • ಅದೇ ರೀತಿ, ಪಾಲಿಸಿಯನ್ನು ರಿವೈವಲ್ ಮಾಡಿದ 12 ತಿಂಗಳುಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ, ಅಲ್ಲಿಯವರೆಗೂ ನೀಡಿರುವ ಪ್ರೀಮಿಯಂ ಮೊತ್ತದ 80 % ಮೊತ್ತ  ಅಥವಾ ಸರಂಡರ್ ಮೊತ್ತ ಇವುಗಳಲ್ಲಿ ಯಾವುದು ಹೆಚ್ಚೋ ಅದನ್ನು ನೀಡಲಾಗುವುದು. ಆದರೆ ಪಾಲಿಸಿಯು ಅಸ್ಥಿತ್ವದಲ್ಲಿ ಇರಬೇಕು.

ಈ ಕ್ಲಾಸ್ ಕೆಳ ಕಂಡ ಸಂದರ್ಭದಲ್ಲಿ ಅನ್ವಯ ಆಗುವುದಿಲ್ಲ.

 • ಪಾಲಿಸಿಯನ್ನು ರಿವೈವಲ್ ಮಾಡುವಾಗ ಪಾಲಿಸಿಯಲ್ಲಿ ವಿಮಾ ಕವರೆಜ್ ನೀಡುತ್ತಿರುವ ವ್ಯಕ್ತಿಯ ವಯಸ್ಸು 8 ವರ್ಷಗಳಿಗಿಂತ ಕಡಿಮೆ ಇದ್ದಲ್ಲಿ
 • ಪಾಲಿಸಿಯು ಲ್ಯಾಪ್ಸ್ ಆಗಿ ಪೈಡ್-ಅಪ್ ಮೌಲ್ಯವನ್ನು ಕೂಡ ಗಳಿಸದೆ ಇದ್ದ ಪಕ್ಷದಲ್ಲಿ

ಈ ಮೇಲೆ ಕಾಣಿಸಿರುವ ಮೊತ್ತವನ್ನು ಬಿಟ್ಟು ಬೇರೆ ಯಾವುದೇ ಕ್ಲೈಮ್ ಗಳನ್ನು ಕಾರ್ಪೊರೇಷನ್ ನೀಡುವುದಿಲ್ಲ.