ಎಲ್ ಐ ಸಿ ನ್ಯೂ ಎಂಡೋಮೆಂಟ್ ಪ್ಲಸ್ ಪ್ಲಾನ್
  • ಅತ್ಯುತ್ತಮ ಯೋಜನೆಗಳು
  • ಸುಲಭ ಹೋಲಿಕೆ
  • ತಕ್ಷಣದ ಖರೀದಿ
PX step

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಹುಟ್ಟಿದ ದಿನಾಂಕ
ಆದಾಯ
| ಲಿಂಗ

1

2

ಫೋನ್ ಸಂಖ್ಯೆ
ಹೆಸರು
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಕೆಲವು ಬಾರಿ ವಿಮಾ ಯೋಜನೆಯನ್ನು ಕೊಳ್ಳುವಾಗ ಅಥವಾ ಪಡೆಯುವಾಗ ಸಾಕಷ್ಟು ಆದ್ಯಯನ ಮಾಡಬೇಕಾಗುತ್ತದೆ. ಯಾವುದೇ ಪಾಲಿಸಿಯನ್ನು ತೆಗೆದುಕೊಂಡಲ್ಲಿ ಅದರಿಂದ ನಿಮಗೆ ಸಿಗಬಹುದಾದ ಪ್ರಯೋಜನ, ಕಟ್ಟಬೇಕಾಗಿರುವ ಹಣ, ಅದನ್ನು ಕಟ್ಟಲು ನಿಮ್ಮಲ್ಲಿ ಸಾಕಷ್ಟು ಸೌಲಭ್ಯಗಳು ಇದೆಯೇ, ಇಲ್ಲವಾದಲ್ಲಿ ಹೇಗೆ ಕಟ್ಟಬಹುದು, ಅದನ್ನು ಕಟ್ಟಲು ಸಾಕಷ್ಟು ವರಮಾನ ಇದೆಯೇ ಇಲ್ಲವಾದಲ್ಲಿ ಹೇಗೆ ಹೊಂದಿಸುವುದು ಇವೆಲ್ಲವನ್ನೂ ಗಮನಕ್ಕೆ ತೆಗೆದುಕೊಂಡು ವಿಮಾ ಯೋಜನೆಯ ಆಯ್ಕೆ ಮಾಡಬೇಕಾಗುತ್ತದೆ. ಎಲ್ ಐ ಸಿ ಯು ಮೊದಲಿನಿಂದಲೂ ಜನರಿಗೆ ಪ್ರಯೋಜನ ಆಗುವಂತಹ ಹಾಗೂ ಅವರ ಅನುಕೂಲಕ್ಕೆ ತಕ್ಕಂತೆ ಪಡೆಯಬಹುದಾದ ಯೋಜನೆಗಳನ್ನು ನೀಡುತ್ತಲೇ ಬಂದಿದೆ. ಅದರಲ್ಲಿ ಒಂದು ಎಲೆ ಐ ಸಿ ನ್ಯೂ ಎಂಡೋಮೆಂಟ್ ಪ್ಲಸ್ ಪ್ಲಾನ್.

ಎಲ್ ಐ ಸಿ ನ್ಯೂ ಎಂಡೋಮೆಂಟ್ ಪ್ಲಸ್ ಪ್ಲಾನ್ ಒಂದು ಎಂಡೋಮೆಂಟ್ ಪ್ಲಾನ್ ಆಗಿದ್ದು, ಪಾಲಿಸಿದಾರನು ಪಡೆಯಬಹುದಾದ ವಿಮೆಯನ್ನು ಆದರಿಸಿ ವಿಮಾ ಯೋಜನೆಗೂ ಒಳಪಟ್ಟು ಬಂಡವಾಳ ಹೂಡಿಕೆ ಮಾಡಬೇಕು ಎನ್ನುವವರಿಗೆ ಸರಿ ಹೊಂದುವಂತಹ ಪಾಲಿಸಿ. ಅಥವಾ ಪ್ಲಾನ್ ಆಗಿರುತ್ತದೆ. ಈ ಯೋಜನೆಯ ಅಡಿಯಲ್ಲಿ ಎಲ್ ಐ ಸಿ ಯು ಪಾಲಿಸಿದಾರನು ನೀಡಿರುವ ಹಣದಲ್ಲಿ ಸ್ವಲ್ಪ ಪಾಲನ್ನು ಕವರೆಜ್ ಗೆ ಮೀಸಲಿರಿಸಿ, ಉಳಿದ ಹಣವನ್ನು ಲಾಭದಾಯಕ ರೀತಿಯಲ್ಲಿ ಬಂಡವಾಳ ಹೂಡಿಕೆ ಮಾಡಿ ಅದರಲ್ಲಿ ಬರುವ ಲಾಭದಲ್ಲಿ ಪಾಲಿಸಿದಾರನಿಗೂ ಪಾಲನ್ನು ನೀಡುತ್ತದೆ.

ಈ ಪಾಲಿಸಿಯು ಜೀವ ವಿಮಾ ಮೊತ್ತದ ಮೂಲಕ ರಕ್ಷಣೆಯನ್ನು ಹಾಗೂ ಪಾಲಿಸಿದಾರನ ಪ್ರೀಮಿಯಂನ ಮೂಲಕ ಸಲ್ಲಿಕೆ ಆಗಿರುವ ಹಣದ ಒಂದು ಅಂಶವನ್ನು ಯೂನಿಟ್ ಗಳಲ್ಲಿ ಬಂಡವಾಳ ಹೂಡಿ ಅದರಿಂದ ಬರುವ ಲಾಭವನ್ನು ನೀಡುವ ಮೂಲಕ ಆರ್ಥಿಕವಾಗಿಯೂ ಅವನಿಗೆ ಸಹಾಯ ಮಾಡುವಲ್ಲಿ ಸಹಕಾರಿ ಆಗುತ್ತದೆ. ಜೊತೆಗೆ, ಈ ಪ್ಲಾನ್ ಪಾಲಿಸಿದಾರನಿಗೆ ಅವನ ಮುಂದಿನ ದಿನಗಳಲ್ಲಿ ಒಂದು ಉತ್ತಮ ಜೀವನವನ್ನು ನಡೆಸುವ ನಿಟ್ಟಿನಲ್ಲಿ ಸಹಾಯ ಮಾಡುತ್ತದೆ.

ನೀವು ನಿಮ್ಮ ಪ್ರೀಮಿಯಂ ಗಳನ್ನು ಪ್ಲಾನ್ ನಿಯಮಕ್ಕೆ ಅನುಗುಣವಾಗಿಯೇ ರೂಪಿಸಿರುವ 4 ಬಂಡವಾಳ ಹೂಡಿಕೆ ನಿಧಿಗಳಲ್ಲಿ ಒಂದನ್ನು ಆರಿಸಿಕೊಂಡು ಅದರಂತೆ ನೀಡಬಹುದು. ಈ ರೀತಿ ನೀಡಿದ ಪ್ರೀಮಿಯಂ ನಲ್ಲಿ ಕಾರ್ಪೊರೇಷನ್ ಪ್ರೀಮಿಯಂ ಆಲೋಕೇಶನ್ ಚಾರ್ಜ್ ಅನ್ನು ಮುರಿದುಕೊಂಡು ಉಳಿದ ಮೊತ್ತದಲ್ಲಿ ನೀವು ಆಯ್ಕೆ ಮಾಡಿರುವ ನಿದಿಯ (funds) ಪ್ರಕಾರ ಯೂನಿಟ್ ಗಳನ್ನು ಖರೀದಿ ಮಾಡುತ್ತದೆ. ಈ ರೀತಿ ಖರೀದಿ ಮಾಡಿರುವ ಯೂನಿಟ್ ಗಳ ಮೌಲ್ಯವು ಹೆಚ್ಚು ಅಥವಾ ಕಮ್ಮಿ ಆಗಬಹುದು. ಈ ಏರು ಪೇರು ಗಳು ಫಂಡ್ ನ ನೆಟ್ ಆಸೆಟ್ ವ್ಯಾಲ್ಯು ಮೇಲೆ ಅವಲಂಬಿತವಾಗಿರುತ್ತದೆ.

ಎಲ್ ಐ ಸಿ ನ್ಯೂ ಎಂಡೋಮೆಂಟ್ ಪ್ಲಸ್ ಪ್ಲಾನ್ – ಪ್ರೀಮಿಯಂ ಗಳು

ನೀವು ಪ್ರೀಮಿಯಂ ಗಳನ್ನು ವರ್ಷಕ್ಕೊಮ್ಮೆ ಅಥವಾ ಅರ್ದ ವರ್ಷಕ್ಕೊಮ್ಮೆ ಅಥವಾ 3 ತಿಂಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆ ನೀಡಬಹುದು. ಇದರಲ್ಲಿ ತಿಂಗಳಿಗೊಮ್ಮೆ ನೀಡುವ ಪ್ರೀಮಿಯಂ ಅನ್ನು E C S ಮೂಲಕವೇ ನೀಡಬೇಕು. ಈ ಪ್ರೀಮಿಯಂ ಗಳನ್ನು  ಪಾಲಿಸಿಯ ಅವದಿ ಮುಗಿಯುವವರೆಗೂ ನೀಡಬೇಕಾಗಿರುತ್ತದೆ.

ಗ್ರೇಸ್ ಪೀರಿಯಡ್

ಪಾಲಿಸಿದಾರನಿಗೆ ವರ್ಷಕ್ಕೊಮ್ಮೆ ನೀಡುವ, ಅರ್ದ ವರ್ಷಕ್ಕೊಮ್ಮೆ ನೀಡುವ ಹಾಗೂ 3 ತಿಂಗಳಿಗೊಮ್ಮೆ ನೀಡುವ ಪ್ರೀಮಿಯಂ ಗಳಿಗೆ 30 ದಿವಸದ ಗ್ರೇಸ್ ಪೀರಿಯಡ್ ಲಭ್ಯ ಇರುತ್ತದೆ. ಹಾಗೆಯೇ, ತಿಂಗಳಿಗೊಮ್ಮೆ ನೀಡುವ ಪ್ರೀಮಿಯಂ ಗೆ 15 ದಿವಸಗಲ್ ಗ್ರೇಸ್ ಪೀರಿಯಡ್ ಲಭ್ಯ ಇರುತ್ತದೆ.

ಎಲ್ ಐ ಸಿ ನ್ಯೂ ಎಂಡೋಮೆಂಟ್ ಪ್ಲಸ್ ಪ್ಲಾನ್ – ಬೆನಿಫಿಟ್ ಗಳು

ಡೆತ್ ಬೆನಿಫಿಟ್

ಪಾಲಿಸಿದಾರನು ಆವದಿಯ ಒಳಗೆ ಮರಣ ಹೊಂದಿದಲ್ಲಿ, ಈ ಕೆಳ ಕಂಡ ನಿಯಮದ ಪ್ರಕಾರ ಡೆತ್ ಬೆನಿಫಿಟ್ ಮೊತ್ತವನ್ನು ಬಿಡುಗಡೆ ಮಾಡಲಾಗುತ್ತದೆ.

  • ಪಾಲಿಸಿದಾರನ ಮರಣವು ಆ ಪಾಲಿಸಿಯ ಮೇಲೀನ ರಿಸ್ಕ್ ಕವರೆಜ್ ಶುರು ಆಗುವ ಮುಂಚೆ ಆದಲ್ಲಿ ಪಾಲಿಸಿದಾರನ ಫಂಡ್ ಮೌಲ್ಯದ ಸರಿ ಸಮನಾದ ಮೊತ್ತವು ಸಿಗುತ್ತದೆ.
  • ಪಾಲಿಸಿದಾರನ ಮರಣವು ಪಾಲಿಸಿಯ ಮೇಲಿನ ರಿಸ್ಕ್ ಕವರೆಜ್ ಶುರು ಆದ ನಂತರ ಆದಲ್ಲಿ, ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ ಅಥವಾ ಫಂಡ್ ಮೌಲ್ಯದ ಮೊತ್ತ ಇವೆರಡರಲ್ಲಿ ಯಾವ ಮೊತ್ತ ಹೆಚ್ಚು ಇರುತ್ತದೋ ಅದನ್ನು ನೀಡಲಾಗುವುದು. ಬೇಸಿಕ್ ಸಮ್ ಅಶ್ಶುರ್ಡ್ ಅಂದರೆ ವಾರ್ಷಿಕ ಪ್ರೀಮಿಯಂ ಗಳ 10 ಪಟ್ಟು ಅಥವಾ ಅಲ್ಲಿಯವರೆಗೂ ನೀಡಿರುವ ಪ್ರೀಮಿಯಂ ಗಳ ಒಟ್ಟು ಮೊತ್ತದೆ 105% (ಇವೆರಡರಲ್ಲಿ ಯಾವ ಮೊತ್ತ ಜಾಸ್ತಿ ಇರುತ್ತದೆಯೋ ಅದು)

ಮೆಚೂರಿಟೀ ಬೆನಿಫಿಟ್

ಪಾಲಿಸಿದಾರನು ಪಾಲಿಸಿಯ ಆವದಿಯನ್ನು ಪೂರೈಸಿದಲ್ಲಿ, ಅವನಿಗೆ ಮೆಚೂರಿಟೀ ಮೊತ್ತವಾಗಿ ಅವನು ಆಯ್ಕೆ ಮಾಡಿರುವ ಹಾಗೂ ಅವನಲ್ಲಿ ಇರುವ ಯೂನಿಟ್ ಗಳ ಫಂಡ್ ಮೌಲ್ಯದ ಪ್ರಕಾರ ಮೊತ್ತವನ್ನು ನೀಡಲಾಗುವುದು.

ಇಚ್ಚೆ ಇದ್ದಲ್ಲಿ ಪಡೆಯುವ ಬೆನಿಫಿಟ್ ಗಳು (ಆಪ್ಶನಲ್ ಬೆನಿಫಿಟ್)

ಪಾಲಿಸಿದಾರನು ಅವನಿಗೆ ಇಚ್ಚೆ ಇದ್ದಲ್ಲಿ, ಈ ಯೋಜನೆಯ ಜೊತೆಗೆ ಎಲ್ ಐ ಸಿ ಯ ಆಕಸ್ಮಿಕ ಮರಣ ಹಾಗೂ ಅಂಗ ವೈಕಲ್ಯ (ಡಿಸ್ಎಬಿಲಿಟಿ) ರೈಡರ್ ಅನ್ನು ಸೇರಿಸಿಕೊಳ್ಳಬಹುದು. ಆದರೆ ಈ ರೈಡರ್ ಬೆನಿಫಿಟ್ ಪಡೆಯಬೇಕಿದ್ದಲ್ಲಿ, ಪ್ರೀಮಿಯಂ ಜೊತೆಗೆ ಹೆಚ್ಚುವರಿ ಮೊತ್ತವನ್ನು (ಅನ್ವಯವಾಗುವ) ನೀಡಬೇಕಾಗುತ್ತದೆ.

ಫ್ರೀ ಲುಕ್ ಪೀರಿಯಡ್

ಪಾಲಿಸಿದಾರನು, ಪಾಲಿಸಿಯ ದಾಖಲೆಗಳು ಅವನ ಕೈ ಸೇರಿದ 15 ದಿನಗಳ ಒಳಗೆ (ಫ್ರೀ ಲುಕ್ ಪೀರಿಯಡ್) ಅದನ್ನು ಕಾರ್ಪೊರೇಷನ್ ಗೆ ಹಿಂದಿರುಗಿಸುವ ಅವಕಾಶ ಇರುತ್ತದೆ. ಈ ಫ್ರೀ ಲುಕ್ ಪೀರಿಯಡ್ ಅನ್ನು ಕಾರ್ಪೊರೇಷನ್ ಪಾಲಿಸಿದಾರರಿಗೆ ಪಾಲಿಸಿಗೆ ಒಳಪಡುವ ಎಲ್ಲ ನಿಯಮ ಹಾಗೂ ನಿಬಂದನೆಗಳನ್ನು ತಿಳಿದುಕೊಳ್ಳಲು ಒಂದು ಅವಕಾಶ ನೀಡುವ ನಿಮಿತ್ತ ನೀಡಿರುತ್ತದೆ. ಇದರ ಪ್ರಕಾರ, ಪಾಲಿಸಿದಾರನು, ಪಾಲಿಸಿಯ ದಾಖಲೆಗಳನ್ನು ಸಂಪೂರ್ಣವಾಗಿ ಓದಿ ಮನದಟ್ಟು ಮಾಡಿಕೊಂಡು, ಬಳಿಕ ಪಾಲಿಸಿಯನ್ನು ಸ್ವೀಕರಿಸಬಹುದು. ಒಂದು ವೇಳೆ ಅವನಿಗೆ ಅದರಲ್ಲಿ ಇರುವ ನಿಯಮಗಳಾಗಲಿ, ನಿಬಂದನೆಗಲಾಗಲಿ ಒಪ್ಪಿಗೆ ಆಗದಿದ್ದಲ್ಲಿ ಅವನಿಗೆ ನೀಡಿರುವ 15 ದಿನಗಳ ಫ್ರೀ ಲುಕ್ ಪೀರಿಯಡ್ ಒಳಗೆ ಪಾಲಿಸಿಯನ್ನು ಹಿಂದಿರುಗಿಸಬಹುದು. ಹಿಂದಿರುಗಿಸುವಾಗ ಅದಕ್ಕೆ ಸೂಕ್ತ ಕಾರಣಗಳನ್ನು ಕೂಡ ನೀಡಬೇಕಾಗುತ್ತದೆ. ಹೀಗೆ ಹಿಂದಿರುಗಿಸಿದಲ್ಲಿ, ಪಾಲಿಸಿದಾರನಿಗೆ ಅವನು ನೀಡಿರುವ ಪ್ರೀಮಿಯಂ ಮೊತ್ತದಿಂದ ಈ ಕೆಳ ಕಂಡ ಕಡಿತಗಳನ್ನು ಮಾಡಿ ಉಳಿದ ಹಣವನ್ನು ಹಿಂದಿರುಗಿಸಲಾಗುವುದು.  

[ಪಾಲಿಸಿದಾರನ ಫಂಡ್ ಮೌಲ್ಯ (ಅವತ್ತಿನ ದಿನಕ್ಕೆ) + ನಿಯೋಜಿಸಿಲ್ಲದ (ಬಂಡವಾಳ ಹೂಡಿಲ್ಲದ ಮೊತ್ತ) ಪ್ರೀಮಿಯಂ ಮೊತ್ತ (ಇದ್ದಲ್ಲಿ)] – [(ಪಾಲಿಸಿ ಕಾರ್ಯ ನಿರ್ವಹಣಾ ಮೊತ್ತ + ಸರ್ವಿಸ್ ಟಾಕ್ಸ್ ಮೊತ್ತ + ಅವತ್ತಿನ ದಿನದಿಂದ ಆ ತಿಂಗಳ ಕೊನೆಯವರೆಗೂ ತಗುಲಬಹುದಾದ ಮಾರ್ಟಾಲಿಟಿ ಮತ್ತು ಆಕಸ್ಮಿಕ ಮರಣದ ಬೆನಿಫಿಟ್ ಮೊತ್ತಕ್ಕೆ ಅನುಗುಣವಾಗಿ ಲೆಕ್ಕ ಹಾಕಿದ ಮೊತ್ತ + ರೂ 0.20 ಪ್ರತಿ 1000 ಕ್ಕೆ (ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ ಹಾಗೂ ಆಕಸ್ಮಿಕ ಮರಣದ ಬೆನಿಫಿಟ್ ಮೊತ್ತ ಎರಡನ್ನೂ ಸೇರಿಸಿ) + ವೈದ್ಯಕೀಯ ತಪಾಸಣೆಗೆ ಹಾಗೂ ಅದರ ರಿಪೋರ್ಟ್ ಗಳಿಗೆ ತಗುಲಿರುವ ವೆಚ್ಚ (ಇದ್ದಲ್ಲಿ) ]

ಸಾಲ ಸೌಲಭ್ಯ

ಈ ಪಾಲಿಸಿಯ ನಿಯಮದ ಪ್ರಕಾರ ಪಾಲಿಸಿಯ ಮೇಲೆ ಸಾಲ ಸೌಲಭ್ಯ ಇರುವುದಿಲ್ಲ.

ಅಸೈನಮೆಂಟ್

ಈ ಪ್ಲಾನ್ ಅಡಿಯಲ್ಲಿ ಅಸೈನಮೆಂಟ್ ಗೆ ಅವಕಾಶ ಇರುತ್ತದೆ

ಈ ಪ್ಲಾನ್ ನಲ್ಲಿ ಸೇರಿಲ್ಲದೆ ಇರುವ ವಿಷಯ

ಅತ್ಮಹತ್ಯೆಯ ಕ್ಲಾಸ್ : ಪಾಲಿಸಿಯನ್ನು ಪಡೆದ ಅಥವಾ ರಿವೈವಲ್ ಮಾಡಿದ 12 ತಿಂಗಳ ಒಳಗೆ ಪಾಲಿಸಿದಾರನು ಆತ್ಮಹತ್ಯೆ ಮಾಡಿಕೊಂಡಲ್ಲಿ, ಅವನು ನಮೂದಿಸಿರುವ ನಾಮಿನಿಗೆ ಅಂದಿನ ದಿವಸ ಇರುವ ಪಾಲಿಸಿಯ ಯೂನಿಟ್ ಗಳ ಫಂಡ್ ಮೌಲ್ಯವನ್ನು ಲೆಕ್ಕಕ್ಕೆ ತೆಗೆದುಕೊಂಡು ಒಟ್ಟು ಮೊತ್ತವನ್ನು ನೀಡಲಾಗುವುದು.

ಈ ಕ್ಲಾಸ್ ಪಾಲಿಸಿದಾರನ ವಯಸ್ಸು ಪಾಲಿಸಿಯನ್ನು ಸೇರಿದಾಗ ಅಥವಾ ರಿವೈವಲ್ ಮಾಡಿದಾಗ 8 ವರ್ಷಕ್ಕಿಂತ ಕಡಿಮೆ ಇದ್ದಲ್ಲಿ ಅನ್ವಯವಾಗುವುದಿಲ್ಲ.

ಬೆನಿಫಿಟ್ ವಿವರಣೆ

ಪಾಲಿಸಿಯ ಅವದಿ – 20 ವರ್ಷಗಳು

ಪ್ರೀಮಿಯಂ ನೀಡುವ ರೀತಿ – ವಾರ್ಷಿಕ

ಜೀವ ವಿಮೆ ಮೊತ್ತ – ರೂ 2,00,000

ಆಯ್ಕೆ ಮಾಡಿರುವ ಫಂಡ್ (ನಿಧಿ) – ಸೆಕ್ಯುರ್ಡ್ ಫಂಡ್

ಎಲ್ ಐ ಸಿ ಯ ADB ರೈಡರ್ ಸೇರಿಸಿದೆಯೇ – ಇಲ್ಲ

FMC ರೇಟ್ – 0.70 %

ಸರ್ವಿಸ್ tax ರೇಟ್ – 14.00 %

yield ನಲ್ಲಿ ರಿಡಕ್ಷನ್ – 1.41 %

ಕೆಳ ಕಂಡ ಟೇಬಲ್ ನಲ್ಲಿ ಇರುವ ವಿವರಗಳು:

  • ಬೇರೆ ಬೇರೆ charges ಗಳು
  • ಫಂಡ್ ನಲ್ಲಿ ನಿರೀಕ್ಷಿಸಲಾಗಿರುವ ಬೆಳವಣಿಗೆ
  • ಊಹಿಸಲಾಗಿರುವ ರೇಟ್ ಆಫ್ ಇಂಟರೆಸ್ಟ್

ಪಾಲಿಸಿಯ ವರ್ಷ

ವಾರ್ಷಿಕ ಪ್ರೀಮಿಯಂ

ಪ್ರೀಮಿಯಂ ಹಂಚಿಕೆ ಮೊತ್ತ

ಲಭ್ಯವಿರುವ ಬಂಡವಾಳ (ಪ್ರೀಮಿಯಂ ಮೊತ್ತದಲ್ಲಿ)

ಪಾಲಿಸಿಯ ಮೇಲಿನ ನಿರ್ವಹಣಾ ಮೊತ್ತ

ರೇಟ್ ಆಫ್ ಇಂಟರೆಸ್ಟ್ @ 4 % ಪ್ರಕಾರ

ತಿಂಗಳ ಚಾರ್ಜಸ್

ಸರ್ವಿಸ್ ಟಾಕ್ಸ್

ಒಟ್ಟು ಚಾರ್ಜಸ್

ಫಂಡ್ ಗೆ ಅಡಿಷನ್(ಇದ್ದಲ್ಲಿ)

FMC ಗೆ ಮುಂಚೆ ಫಂಡ್ ಮೊತ್ತ

FMC ಮೊತ್ತ

ಆವದಿಯ ಕೊನೆಗೆ ಫಂಡ್ ಮೊತ್ತ

ಸರಂಡರ್ ಮೌಲ್ಯ

ಒಟ್ಟು ಡೆತ್ ಬೆನಿಫಿಟ್

1

20000

1500

18500

840

240

379

3084

702

17630

125

17618

0

200000

2

20000

1000

19000

600

221

291

2367

1434

36709

255

36685

0

200000

3

20000

1000

19000

618

202

309

2520

2194

56396

391

56358

0

200000

4

20000

1000

19000

637

180

329

2676

2978

76711

531

76660

0

200000

5

20000

1000

19000

656

157

348

2836

3787

97676

675

97611

97611

200000

6

20000

600

19400

626

131

306

2490

4641

119842

827

119763

119763

200000

7

20000

600

19400

645

101

326

2656

5524

142725

984

142631

142631

200000

8

20000

600

19400

664

65

347

2823

6436

166354

1147

166244

166244

200000

9

20000

600

19400

684

24

367

2990

7378

190758

1315

190632

190632

200000

10

20000

600

19400

705

0

391

3184

8350

215942

1488

215798

215798

215798

11

20000

600

19400

726

0

419

3411

9352

241900

1667

241740

241740

241740

12

20000

600

19400

748

0

448

3646

10386

268657

1851

268479

268479

268479

13

20000

600

19400

770

0

477

3888

11451

296238

2041

296042

296042

296042

14

20000

600

19400

793

0

508

4137

12549

324669

2236

324453

324453

324453

15

20000

600

19400

817

0

540

4394

13680

353974

2438

353740

353740

353740

16

20000

600

19400

841

0

572

4659

14847

384182

2646

383927

383927

383927

17

20000

600

19400

867

0

606

4932

16049

415320

2860

415044

415044

415044

18

20000

600

19400

893

0

640

5214

17289

447416

3081

447120

447120

447120

19

20000

600

19400

919

0

676

5504

18567

480501

3309

480182

480182

480182

20

20000

600

19400

947

0

713

5803

19894

514604

3543

514263

514263

514263

ಪಾಲಿಸಿಯ ವರ್ಷ

ವಾರ್ಷಿಕ ಪ್ರೀಮಿಯಂ

ಪ್ರೀಮಿಯಂ ಹಂಚಿಕೆ ಮೊತ್ತ

ಲಭ್ಯವಿರುವ ಬಂಡವಾಳ (ಪ್ರೀಮಿಯಂ ಮೊತ್ತದಲ್ಲಿ)

ಪಾಲಿಸಿಯ ಮೇಲಿನ ನಿರ್ವಹಣಾ ಮೊತ್ತ

ರೇಟ್ ಆಫ್ ಇಂಟರೆಸ್ಟ್ @ 8 % ಪ್ರಕಾರ

ತಿಂಗಳ ಚಾರ್ಜಸ್

ಸರ್ವಿಸ್ ಟಾಕ್ಸ್

ಒಟ್ಟು ಚಾರ್ಜಸ್

ಫಂಡ್ ಗೆ ಅಡಿಷನ್(ಇದ್ದಲ್ಲಿ)

FMC ಗೆ ಮುಂಚೆ ಫಂಡ್ ಮೊತ್ತ

FMC ಮೊತ್ತ

ಆವದಿಯ ಕೊನೆಗೆ ಫಂಡ್ ಮೊತ್ತ

ಸರಂಡರ್ ಮೌಲ್ಯ

ಒಟ್ಟು ಡೆತ್ ಬೆನಿಫಿಟ್

1

20000

1500

18500

840

240

379

3087

1405

18331

128

18318

0

200000

2

20000

1000

19000

600

219

292

2377

2923

38891

266

38865

0

200000

3

20000

1000

19000

618

197

312

2542

4561

60925

415

60884

0

200000

4

20000

1000

19000

637

171

334

2716

6317

84541

575

84485

0

200000

5

20000

1000

19000

656

143

356

2900

8198

109856

746

109783

109783

200000

6

20000

600

19400

626

107

317

2583

10254

137545

933

137454

137454

200000

7

20000

600

19400

645

66

342

2786

12461

167239

1133

167128

167128

200000

8

20000

600

19400

664

14

368

2995

14827

199093

1349

198961

198961

200000

9

20000

600

19400

684

0

401

3264

17364

233215

1579

233061

233061

233061

10

20000

600

19400

705

0

438

3569

20081

269751

1827

269572

269572

269572

11

20000

600

19400

726

0

478

3895

22990

398872

2091

308668

308668

308668

12

20000

600

19400

748

0

521

4243

26106

350763

2374

350530

350530

350530

13

20000

600

19400

770

0

567

4614

29441

395619

2678

395357

395357

395357

14

20000

600

19400

793

0

615

5011

33013

443653

3003

443359

443359

443359

15

20000

600

19400

817

0

667

5435

36838

495089

3351

494761

494761

494761

16

20000

600

19400

841

0

723

5888

40934

550172

3723

549807

549807

549807

17

20000

600

19400

867

0

782

6371

45320

609160

4122

608756

608756

608756

18

20000

600

19400

893

0

846

6888

50017

672331

4549

671885

671885

671885

19

20000

600

19400

919

0

914

7440

55047

739983

5007

739493

739493

739493

20

20000

600

19400

947

0

986

8030

60435

812436

5497

811897

811897

811897

 ಒಟ್ಟು ಉತ್ಪತ್ತಿ – 6.59%

ಈ ಪಾಲಿಸಿಯಲ್ಲಿ, ಬಂಡವಾಳ ಹೂಡಿಕೆಯ ರಿಸ್ಕ್ ಅನ್ನು ಪಾಲಿಸಿದಾರನೇ ವಹಿಸಿಕೊಳ್ಳಬೇಕು. ಮೇಲೆ ಕಾಣಿಸಿರುವ ಇಂಟರೆಸ್ಟ್ ರೇಟ್ ಗಳು ಉದಾಹರಣೆಗೆ ಮಾತ್ರ

ಮೇಲೆ ಕಾಣಿಸಿರುವ ಚಾರ್ಜಸ್ ಗಳ ವಿವರ

ಪ್ರೀಮಿಯಂ ಅಲ್ಲೋಕೇಶನ್ ಚಾರ್ಜಸ್

ಪಾಲಿಸಿದಾರನು ನೀಡಿರುವ ಪ್ರೀಮಿಯಂ ಮೊತ್ತದಿಂದ ಒಂದು ಅಂಶವನ್ನು ಪ್ರೀಮಿಯಂ ಅಲ್ಲೋಕೇಶನ್ ಚಾರ್ಜಸ್ ಎಂದು ತೆಗೆದುಕೊಳ್ಳಲಾಗುತ್ತದೆ. ಉಳಿದಂತೆ, ವಿಮಾ ಕವರೆಜ್ ಗೆ ಬೇಕಾದ ಮೊತ್ತವನ್ನು ಬಿಟ್ಟು, ಉಳಿದ ಹಣದಲ್ಲಿ ಪಾಲಿಸಿದಾರನಿಗೆ ಅವನು ಆಯ್ಕೆ ಮಾಡಿಕೊಂಡಿರುವ ಫಂಡ್ ಮೇಲೆ ಯೂನಿಟ್ ಗಳನ್ನು ನೀಡಲಾಗುವುದು.

ಅನ್ವಯವಾಗುವ ಪ್ರೀಮಿಯಂ ಅಲ್ಲೋಕೇಶನ್ ಚಾರ್ಜಸ್ ಈ ಕೆಳ ಕಂಡಂತಿದೆ.

ಪ್ರೀಮಿಯಂ

ಪ್ರೀಮಿಯಂ ಅಲ್ಲೋಕೇಶನ್ ಚಾರ್ಜಸ್

ಮೊದಲನೆಯ ವರ್ಷ

7,50 %

ಎರಡನೆಯ ವರ್ಷ

5.00 %

ಮೂರನೆಯ ವರ್ಷ

3.00 %

 ಮೋರ್ಟಾಲಿಟಿ ಚಾರ್ಜಸ್

ಇದು ಜೀವ ವಿಮಾ ನೀಡಿಕೆಗೆ, ಪಾಲಿಸಿದಾರನ ವಯಸ್ಸನ್ನು ಪರಿಗಣನೆಗೆ ತೆಗೆದುಕೊಂಡು ಪ್ರತಿ ತಿಂಗಳ ಮೊದಲಿನಲ್ಲಿ ಆ ದಿವಸದ ಯೂನಿಟ್ ನ ಮೊತ್ತಕ್ಕೆ ಅನುಗುಣವಾಗಿ ಎಷ್ಟು ಬೇಕೋ ಅಷ್ಟು ಯೂನಿಟ್ ಗಳನ್ನು ರದ್ದುಪಡಿಸಿ ತೆಗೆದುಕೊಳ್ಳುವ ಮೊತ್ತವಾಗಿರುತ್ತದೆ.

ಒಂದು ಆರೋಗ್ಯವಂತನ ಪಾಲಿಸಿಗೆ ತಗುಲಬಹುದಾದ ಮೋರ್ಟಾಲಿಟಿ ಚಾರ್ಜಸ್ (ಅವನ ವಯಸ್ಸಿಗೆ ತಕ್ಕಂತೆ) ಈ ಕೆಳ ಕಂಡಂತಿರುತ್ತದೆ. ಇಲ್ಲಿ ನಮೂದಿಸಿರುವ ಮೊತ್ತವು ಸಮ್ ಅಟ್ ರಿಸ್ಕ್ ಮೊತ್ತದ  ಪ್ರತಿ ರೂ 1000 ಕ್ಕೆ ಅನ್ವಯವಾಗುತ್ತದೆ.

ವಯಸ್ಸು

25

35

45

50

ರೂ

1.23

1.60

3.59

6.18

 ಎಲ್ ಐ ಸಿ ನ್ಯೂ ಎಂಡೋಮೆಂಟ್ ಪ್ಲಸ್ ಪ್ಲಾನ್ – ಅರ್ಹತೆ

ಪಾಲಿಸಿ ತೆಗೆದುಕೊಳ್ಳುವ ಸಮಯದಲ್ಲಿ  ಪಾಲಿಸಿದಾರನ ಕನಿಷ್ಠ ವಯಸ್ಸು

90 ದಿವಸ ಮುಗಿದಿರಬೇಕು

ಪಾಲಿಸಿ ಪಡೆದುಕೊಳ್ಳಲು ಗರಿಷ್ಠ ವಯಸ್ಸು

50 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ)

ಪಾಲಿಸಿಯು ಮೆಚೂರ್ ಆಗುವಾಗ ಪಾಲಿಸಿದಾರನ ಕನಿಷ್ಠ ವಯಸ್ಸು

18 ವರ್ಷಗಳು ಮುಗಿದಿರಬೇಕು

ಪಾಲಿಸಿಯು ಮೆಚೂರ್ ಆಗುವಾಗ ಪಾಲಿಸಿದಾರನ ಗರಿಷ್ಠ ವಯಸ್ಸು

60 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ)

ಪಾಲಿಸಿಯ ಅವದಿ (ಟರ್ಮ್)

10 ರಿಂದ 20 ವರ್ಷಗಳು

ಪ್ರೀಮಿಯಂ ಪಾವತಿಸಬೇಕಾದ ಟರ್ಮ್

ಮೇಲೆ ಕಾಣಿಸಿರುವಂತೆ

ಪ್ರೀಮಿಯಂ ಮೊತ್ತ 

ಪಾವತಿಸುವ ರೀತಿ

ಕನಿಷ್ಠ

ವರ್ಷಕ್ಕೊಮ್ಮೆ

20000

ಅರ್ದ ವರ್ಷಕ್ಕೊಮ್ಮೆ

13000

3 ತಿಂಗಳಿಗೊಮ್ಮೆ

8000

ತಿಂಗಳಿಗೊಮ್ಮೆ

3000

 ಎಲ್ ಐ ಸಿ ನ್ಯೂ ಎಂಡೋಮೆಂಟ್ ಪ್ಲಸ್ ಪ್ಲಾನ್ – ಫಂಡ್ ಗಳಲ್ಲಿ  ಇನ್ವೆಸ್ಟ್ ಮಾಡುವುದು

ಪಾಲಿಸಿದಾರನು ನೀಡುವ ಪ್ರೀಮಿಯಂ ಗಳನ್ನು ಉಪಯೋಗಿಸಿಕೊಂಡು ಎಲ್ ಐ ಸಿ ಯು ಯೂನಿಟ್ ಗಳಲ್ಲಿ ಪಾಲಿಸಿದಾರನು ಆಯ್ಕೆ ಮಾಡಿಕೊಂಡಿರುವ ಫಂಡ್ ಆದಾರದ ಮೇಲೆ ಇನ್ವೆಸ್ಟ್ ಮಾಡುತ್ತದೆ. ಫಂಡ್ ಗಳು 4 ತರಹ ಲಭ್ಯವಿದ್ದು, ಅದರಲ್ಲಿ ಒಂದನ್ನು ಪಾಲಿಸಿದಾರನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. 4 ಫಂಡ್ ಗಳ ವಿವರ ಈ ಕೆಳ ಕಂಡಂತಿದೆ. ಅದರ ಇನ್ವೆಸ್ಟ್ಮೆಂಟ್ ವಿವರಗಳು ಕೂಡ ಇಲ್ಲಿದೆ.

ಫಂಡ್ ಟೈಪ್

ಸರಕಾರದ ಯೋಜನೆಗಳಲ್ಲಿ / ಸರಕಾರವು ನೀಡಿರುವ ಸೆಕ್ಯುರಿಟಿ ಗಳಲ್ಲಿ / ಕಾರ್ಪೊರೇಟ್ ಡೆಟ್ ಗಳಲ್ಲಿ ಹೂಡಿಕೆ ಮಾಡುವುದು  

ಕಡಿಮೆ ಆವದಿಯ (ಟರ್ಮ್)  ಮನೀ ಮಾರ್ಕೆಟ್ ಇನ್ಸ್ಟ್ರುಮೆಂಟ್ಸ್ ಗಳಲ್ಲಿ ಹೂಡಿಕೆ ಮಾಡುವುದು

ಲಿಸ್ಟೆಡ್ ಈಕ್ವಿಟೀ ಷೇರುಗಳಲ್ಲಿ ಹೂಡಿಕೆ ಮಾಡುವುದು

ರಿಸ್ಕ್ / ರಿಟರ್ನ್ ಪ್ರಕಾರ ಫಂಡ್ ಗಳ ವಿಂಗಡಣೆ

ಬಾಂಡ್ ಫಂಡ್

60 % ಗಿಂತ ಕಮ್ಮಿ ಇರುವುದಿಲ್ಲ

40 % ಗಿಂತ ಜಾಸ್ತಿ ಇರುವುದಿಲ್ಲ

ಹೂಡಿಕೆ ಇಲ್ಲ

ಕಡಿಮೆ ರಿಸ್ಕ್

ಸೆಕ್ಯೂರ್ಡ್ ಫಂಡ್

45 % ಗಿಂತ ಕಮ್ಮಿ ಇರುವುದಿಲ್ಲ

40 % ಗಿಂತ ಜಾಸ್ತಿ ಇರುವುದಿಲ್ಲ

15 % ಗಿಂತ ಕಮ್ಮಿ ಅಥವಾ 55 % ಗಿಂತ ಜಾಸ್ತಿ ಇರುವುದಿಲ್ಲ

ಸ್ಥಿರವಾದ ಆದಾಯ – ಕಡಿಮೆಯಿಂದ ಮೀಡಿಯಂ ರಿಸ್ಕ್

ಬಾಲನ್ಸ್ಡ್ ಫಂಡ್

30 % ಗಿಂತ ಕಮ್ಮಿ ಇರುವುದಿಲ್ಲ

40 % ಗಿಂತ ಜಾಸ್ತಿ ಇರುವುದಿಲ್ಲ

30 % ಗಿಂತ ಕಮ್ಮಿ ಅಥವಾ 70 % ಗಿಂತ ಜಾಸ್ತಿ ಇರುವುದಿಲ್ಲ

ಬಾಲನ್ಸ್ಡ್ ಆದಾಯ – ಮೀಡಿಯಂ ರಿಸ್ಕ್

ಗ್ರೋತ್ ಫಂಡ್

20 % ಗಿಂತ ಕಮ್ಮಿ ಇರುವುದಿಲ್ಲ

40 % ಗಿಂತ ಜಾಸ್ತಿ ಇರುವುದಿಲ್ಲ

40 % ಗಿಂತ ಕಮ್ಮಿ ಅಥವಾ 80 % ಗಿಂತ ಜಾಸ್ತಿ ಇರುವುದಿಲ್ಲ

ಲಾಂಗ್ ಟರ್ಮ್ ಕಾಪಿಟಲ್ ಗ್ರೋತ್ – ಹೆಚ್ಚಿನ ರಿಸ್ಕ್   

 ಪಾಲಿಸಿದಾರನು ಮೇಲಿನ ಫಂಡ್ ಆಪ್ಶನ್ ಗಳಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಳ್ಳಬಹುದು.

ಪಾಲಿಸಿದಾರನಿಗೆ ನೀಡುವ ಯೂನಿಟ್ ಗಳ ಮೌಲ್ಯ

ಎಲ್ ಐ ಸಿ ನ್ಯೂ ಎಂಡೋಮೆಂಟ್ ಪ್ಲಸ್ ಪ್ಲಾನ್ ಅಡಿಯಲ್ಲಿ ಪಾಲಿಸಿದಾರನಿಗೆ ನೀಡುವ ಯೂನಿಟ್ ಗಳು ಯಾವುದೇ ಒಂದು ಮಾರುಕಟ್ಟೆಯ ಸಾದನಗಳಿಗೆ (ಇನ್ಸ್ಟ್ರುಮೆಂಟ್) ಸೀಮಿತ ಆಗಿರುವುದಿಲ್ಲ. ಆದರೆ ಅದು ಪೂರ್ಣ ಫಂಡ್ ಗೆ ಅನ್ವಯಿಸುತ್ತದೆ. ಅದೇ ರೀತಿ, ಯಾವುದೇ ಫಂಡ್ ನ ಯೂನಿಟ್ ಗಳ ಮೌಲ್ಯವು ಆ ಫಂಡ್ ನ ಒಟ್ಟಾರೆ ನೆಟ್ ಆಸೆಟ್ ವ್ಯಾಲ್ಯು ಆಗಿರುತ್ತದೆ.

ಪಾಲಿಸಿದಾರನಿಗೆ ಇರಬಹುದಾದ ರಿಸ್ಕ್

ಪಾಲಿಸಿದಾರನ ಪ್ರೀಮಿಯಂ ಮೊತ್ತದಲ್ಲಿ ಒಂದು ಅಂಶವನ್ನು ಯೂನಿಟ್ ಗಳಲ್ಲಿ ಹೂಡಿಕೆ ಮಾಡುವುದರಿಂದ, ಆ ಹೂಡಿಕೆಯಲ್ಲಿ ಇರಬಹುದಾದ ರಿಸ್ಕ್ ಗಳನ್ನು ಪಾಲಿಸಿದಾರನೇ ಹೊರಬೇಕಾಗುತ್ತದೆ. ಅದೇ ಪಾಲಿಸಿಯ ಕವರೆಜ್ ಗೆ ಬಳಸಿಕೊಂಡಿರುವ ಮೊತ್ತಕ್ಕೆ ಯಾವುದೇ ರಿಸ್ಕ್ ಇರುವುದಿಲ್ಲ.

- / 5 ( Total Rating)