ಎಲ್ಐಸಿ ನ್ಯೂ ಜೀವನ್ ಆನಂದ್ ಪ್ಲಾನ್
 • ಅತ್ಯುತ್ತಮ ಯೋಜನೆಗಳು
 • ಸುಲಭ ಹೋಲಿಕೆ
 • ತಕ್ಷಣದ ಖರೀದಿ
PX step

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಫೋನ್ ಸಂಖ್ಯೆ
ಹೆಸರು
ಹುಟ್ಟಿದ ದಿನಾಂಕ

1

2

ಆದಾಯ
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯ ಒಂದು ಭಾರತ ಸರ್ಕಾರದ ಸ್ವಾಮ್ಯತೆಗೆ ಒಳ ಪಟ್ಟ ಸಂಸ್ಥೆ ಆಗಿದ್ದು, ಸುಮಾರು 63 ವರ್ಷಗಳಿಂದ ಅಸ್ಥಿತ್ವದಲ್ಲಿ ಇರುತ್ತದೆ. ಹಾಗೂ ಈ ಸಂಸ್ಥೆಯು ಅನೇಕ ತರಹದ ವಿಮಾ ಯೋಜನೆಗಳನ್ನು ದೇಶದ ವಿವಿದ ಬಾಗಗಳ ಜನರ ಅನುಕೂಲಕ್ಕೆ ಹಾಗೂ ಅವರ ಅವಶ್ಯಕತೆಗೆ ತಕ್ಕಂತೆ ರೂಪಿಸುತ್ತಾ ಬಂದಿರುತ್ತದೆ. ಎಲ್ ಐ ಸಿ ಯ ಪಾರದರ್ಶಕತೆ ಮತ್ತು ಪಾಲಿಸಿಗಳ ಕ್ಲೈಂಸ್ ಅನ್ನು ಪ್ರಾಮಾಣಿಕವಾಗಿ ಪಾವತಿಸುವ ವ್ಯವಹಾರದಿಂದ ಅದು ಈಗ ದೇಶದ ವಿಮಾ ಯೋಜನೆಗಳನ್ನು ನೀಡುವ ಕಂಪನಿಗಳಲ್ಲಿ  ಮುಂಚೂಣಿಯಲ್ಲಿ ಇದೆ.

ಎಲ್ ಐ ಸಿ ಯು ತನ್ನ ಮತ್ತೊಂದು ಜನ ಹಿತ ಯೋಜನೆ ಆಗಿ, ಎಲ್ ಐ ಸಿ ನ್ಯೂ ಜೀವನ್ ಆನಂದ್ ಪ್ಲಾನ್ ಅನ್ನು ಜನರಿಗೆ ನೀಡುತ್ತಿದೆ. ಇದು ಜನರಿಗೆ ಅವರಿಗೆ ಅವಶ್ಯವಿರುವ ರಕ್ಷಣೆ ಹಾಗೂ ಉಳಿತಾಯ ಎರಡನ್ನೂ ಸಂಯೋಜಿಸಿ ಅವರಿಗೆ ಅನುಕೂಲ ಆಗುವಂತೆ ರೂಪಿಸಿರುವ ಪ್ಲಾನ್ ಆಗಿರುತ್ತದೆ. ಈ ಪ್ಲಾನ್ ಎಂಡೋಮೆಂಟ್ ಮತ್ತು ಪೂರ್ಣ ವಯಸ್ಸಿಗೆ  ವಿಮಾ ನೀಡುವಂತಹ ಸಂಯೋಜಿತ ಯೋಜನೆ ಆಗಿರುತ್ತದೆ.

ಇದರ ವಿವರಗಳು ಇಲ್ಲಿದೆ.

 • ಈ ಪ್ಲಾನ್ ಪಾಲಿಸಿದಾರನಿಗೆ ಅವನ ಜೀವನದ ಪೂರ್ಣ ಆವದಿಯವರೆಗೂ ವಿಮಾ ಕವರೆಜ್ ನೀಡುತ್ತದೆ
 • ಇದು ಪಾಲಿಸಿದಾರನ ಮರಣವಾದಲ್ಲಿ ಅವನ ಕುಟುಂಬವು ಆರ್ಥಿಕ ಸಮಸ್ಯೆಯನ್ನು ಆದಷ್ಟು ಕಮ್ಮಿ ಮಾಡಿಕೊಳ್ಳುವಲ್ಲಿ ನೆರವನ್ನು ನೀಡುತ್ತದೆ.
 • ಈ ಪಾಲಿಸಿಯು ಆಯ್ಕೆ ಮಾಡಿರುವ ಪಾಲಿಸಿ ಟರ್ಮ್ ಮುಗಿದ ಕೂಡಲೇ, ಪಾಲಿಸಿದಾರನು ಬದುಕಿದ್ದಲ್ಲಿ, ಆತನಿಗೆ ಒಂದು ಖಚಿತ ಮೊತ್ತವನ್ನು ನೀಡುತ್ತದೆ
 • ಈ ಪಾಲಿಸಿಯ ಮೇಲೆ ಸಾಲ ಸೌಲಭ್ಯ ಇರುವುದರಿಂದ, ಪಾಲಿಸಿದಾರನಿಗೆ ಹಣದ ಅವಶ್ಯಕತೆ ಇದ್ದಲ್ಲಿ ಯಾವಾಗ ಬೇಕಾದರೂ ಸಾಲವನ್ನು ಪಡೆಯುವ ಅವಕಾಶ ಇರುತ್ತದೆ.
 • ಪಾಲಿಸಿಯ ಅವದಿ ಮುಗಿಯುವುದರಲ್ಲಿ, ಪಾಲಿಸಿದಾರನ ಆಕಸ್ಮಿಕ ಮರಣ ಆದಲ್ಲಿ  ಆರ್ಥಿಕ ನೆರವು ನೀಡುವಂತಹ ಯೋಜನೆ ಆಗಿರುತ್ತದೆ
 • ಇದು ಅತ್ಯಂತ ಜನಪ್ರಿಯ ಯೋಜನೆ ಆಗಿದ್ದು, ಸಾಕಷ್ಟು ಜನರು ಈ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಎಲ್ ಐ ಸಿ ನ್ಯೂ ಜೀವನ್ ಆನಂದ್ ಪ್ಲಾನ್ – ಅರ್ಹತೆಗಳು ಹಾಗೂ ನಿಬಂದನೆಗಳು

ಎಲ್ ಐ ಸಿ ನ್ಯೂ ಜೀವನ್ ಆನಂದ್ ಪ್ಲಾನ್ ಪಡೆಯಲು ಕೆಲವು ಅರ್ಹತೆಗಳು ಇರಬೇಕು ಹಾಗೂ ನಿಬಂದನೆಗಳು ಕೂಡ ಇರುತ್ತದೆ. ಅದರ ಪ್ರಕಾರ, ಬೇಸಿಕ್ ಪ್ಲಾನ್ ಹಾಗೂ ರೈಡರ್ಸ್ ಗಳನ್ನು ಪಡೆಯಲು ಈ ಕೆಳ ಕಂಡ ಅರ್ಹತೆಗಳು ಹಾಗೂ ನಿಬಂದನೆಗಳು ಅನ್ವಯ ಆಗುತ್ತದೆ

ಬೇಸಿಕ್ ಪ್ಲಾನ್ ಪಡೆಯಲು

ಪಾಲಿಸಿ ಪಡೆಯುವಾಗ ಪಾಲಿಸಿದಾರನ ಕನಿಷ್ಠ ವಯಸ್ಸು

18 ವರ್ಷಗಳು ಮುಗಿದಿರಬೇಕು

ಪಾಲಿಸಿ ಪಡೆಯುವಾಗ ಪಾಲಿಸಿದಾರನ ಗರಿಷ್ಠ ವಯಸ್ಸು

50 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ)

ಪಾಲಿಸಿಯು ಮೆಚೂರಿಟೀ ಆಗುವಾಗ ಪಾಲಿಸಿದಾರನ  ಗರಿಷ್ಠ ವಯಸ್ಸು

75 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ)

ಕನಿಷ್ಠ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ (ರೂ ಗಳಲ್ಲಿ)

100000

ಗರಿಷ್ಠ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ (ರೂ ಗಳಲ್ಲಿ)

(ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತವು ರೂ 5000 ದ ಮಲ್ಟಿಪಲ್ಸ್ ಗಳಲ್ಲಿ ಇರಬೇಕು)

ಯಾವುದೇ ಮಿತಿ ಇಲ್ಲ

ಪಾಲಿಸಿಯ ಕನಿಷ್ಠ ಅವದಿ (ಟರ್ಮ್)

15 ವರ್ಷಗಳು

ಪಾಲಿಸಿಯ ಗರಿಷ್ಠ ಅವದಿ (ಟರ್ಮ್)

35 ವರ್ಷಗಳು

ರೈಡರ್ಸ್ ಗಳನ್ನು ಪಡೆಯಲು

ಕನಿಷ್ಠ ಸಮ್ ಅಶ್ಶುರ್ಡ್ - ಆಕಸ್ಮಿಕ ಮರಣದ ಬೆನಿಫಿಟ್ ಗಾಗಿ

ರೂ 1,00,000

ಗರಿಷ್ಠ  ಸಮ್ ಅಶ್ಶುರ್ಡ್ - ಆಕಸ್ಮಿಕ ಮರಣದ ಬೆನಿಫಿಟ್ ಗಾಗಿ

(ಆಕಸ್ಮಿಕ ಬೆನಿಫಿಟ್ ಸಮ್ ಅಶ್ಶುರ್ಡ್ ಮೊತ್ತವು ರೂ 5000 ದ ಮಲ್ಟಿಪಲ್ಸ್ ನಲ್ಲಿ ಇರಬೇಕಾಗುತ್ತದೆ)

ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತಕ್ಕೆ ಸಮನಾಗಿ,

ಆದರೆ ಈ ಸಮ್ ಅಶ್ಶುರ್ಡ್ ಮೊತ್ತವು ಗರಿಷ್ಠ ರೂ 100 ಲಕ್ಷಗಳನ್ನು ಮೀರುವ ಹಾಗಿಲ್ಲ. ಈ ಗರಿಷ್ಠ ಮೊತ್ತದಲ್ಲಿ, ಪಾಲಿಸಿದಾರನು ಆ ವರೆವಿಗೂ ತೆಗೆದು ಕೊಂಡಿರುವ ಎಲ್ಲ ವಿಮಾ ಯೋಜನೆಗಳು ಮತ್ತು ಯಾವುದೇ ಗ್ರೂಪ್ ವಿಮಾ ಯೋಜನೆಗಳು ಕೂಡ ಸೇರಿದ್ದು (ಅದರಲ್ಲಿ ಆಕಸ್ಮಿಕ ಮರಣದ ಬೆನಿಫಿಟ್ ಇದ್ದಲ್ಲಿ) ಈಗ ತೆಗೆದುಕೊಳ್ಳಲು ಇಚ್ಚಿಸಿರುವ ಯೋಜನೆಯು ಕೂಡ ಸೇರುತ್ತದೆ. (ಆಕಸ್ಮಿಕ ಬೆನಿಫಿಟ್ ಸಮ್ ಅಶ್ಶುರ್ಡ್ ಮೊತ್ತವು ರೂ 5000 ದ ಮಲ್ಟಿಪಲ್ಸ್ ನಲ್ಲಿ ಇರಬೇಕಾಗುತ್ತದೆ)

ಪಾಲಿಸಿದಾರನ ವಯಸ್ಸು (ಕನಿಷ್ಠ)

18 ವರ್ಷದ ಮೇಲ್ಪಟ್ಟು ಇರಬೇಕು.

ಪಾಲಿಸಿದಾರನ ವಯಸ್ಸು (ಗರಿಷ್ಟ)

ಪ್ರೀಮಿಯಂ ನೀಡುತ್ತಿರುವ ಸಮಯದಲ್ಲಿ, ಕವರೆಜ್ ಅನ್ನು ಪಾಲಿಸಿ ಅನಿವರ್ಸರಿ ಯ ಹೊತ್ತಿಗೆ ಸೇರಿಸಬಹುದು.

ಕವರೆಜ್ ಮುಕ್ತಾಯ  ಆಗುವ ವಯಸ್ಸು

75 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ)

ಪ್ರೀಮಿಯಂ ಗಳನ್ನು ನೀಡುವಿಕೆ

ಪಾಲಿಸಿದಾರನು ಪಾಲಿಸಿಯ ಮೇಲಿನ ಪ್ರೀಮಿಯಂ ಗಳನ್ನು ಕೆಳಗೆ ವಿವರಿಸಿರುವ ರೀತಿಯಲ್ಲಿ ನೀಡಬಹುದು.

 • ವರ್ಷಕ್ಕೊಮ್ಮೆ
 • ಅರ್ದ ವರ್ಷಕ್ಕೊಮ್ಮೆ
 • 3 ತಿಂಗಳಿಗೆ  ಒಮ್ಮೆ
 • ತಿಂಗಳಿಗೊಮ್ಮೆ.

ಈ ಮೇಲ್ಕಂಡ ರೀತಿಯಲ್ಲಿ ಯಾವುದಾದರೂ ಒಂದನ್ನು ಪಾಲಿಸಿಯನ್ನು ಪಡೆಯುವ ಸಮಯದಲ್ಲಿ ಆಯ್ಕೆ ಮಾಡಿಕೊಳ್ಳಬಹುದು.

ಗ್ರೇಸ್ ಪೀರಿಯಡ್

ಈ ಪ್ಲಾನ್ ಅಡಿಯಲ್ಲಿ, ಪ್ರೀಮಿಯಂ ಅನ್ನು ಪಾವತಿಸಲು ಗ್ರೇಸ್ ಪೀರಿಯಡ್ ನೀಡಲಾಗುವುದು.

ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ

ಕನಿಷ್ಠ 30 ದಿನಗಳು ಅಥವಾ  1 ತಿಂಗಳು

ಅರ್ದ ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ

ಕನಿಷ್ಠ 30 ದಿನಗಳು ಅಥವಾ  1 ತಿಂಗಳು

3 ತಿಂಗಳಿಗೊಮ್ಮೆ ನೀಡುವ ಪ್ರೀಮಿಯಂ

ಕನಿಷ್ಠ 30 ದಿನಗಳು ಅಥವಾ  1 ತಿಂಗಳು

ತಿಂಗಳಿಗೊಮ್ಮೆ ನೀಡುವ ಪ್ರೀಮಿಯಂ

15 ದಿನಗಳು

ಸ್ಯಾಂಪಲ್ ಪ್ರೀಮಿಯಂ ಮೊತ್ತ (ರೇಟ್ಸ್)

ಪಾಲಿಸಿಗೆ ಸಂಭಂದ ಪಟ್ಟ ಹಾಗೆ ಪಾಲಿಸಿದಾರನು ನೀಡಬೇಕಾದ ಸ್ಯಾಂಪಲ್ ಪ್ರೀಮಿಯಂ ರೇಟ್ಸ್ ಗಳನ್ನು  ಕೆಳಗೆ ವಿವರಿಸಲಾಗಿದೆ. ಈ ಪ್ರೀಮಿಯಂ ರೇಟ್ಸ್ ಗಳಲ್ಲಿ ಸರ್ವಿಸ್ ಟಾಕ್ಸ್ ಮೊತ್ತವು ಸೇರಿರುವುದಿಲ್ಲ. ಹಾಗೂ ಇಲ್ಲಿ ನೀಡಿರುವ ಪ್ರೀಮಿಯಂ ಮೊತ್ತವು ಬೇಸಿಕ್  ಸಮ್ ಅಶ್ಶುರ್ಡ್ ನ ಪ್ರತಿ ರೂ 1000 ಕ್ಕೆ ಅನ್ವಯವಾಗುತ್ತದೆ.

 

ಪಾಲಿಸಿಯ ಅವದಿ (ಟರ್ಮ್)

ವಯಸ್ಸು (ವರ್ಷಗಳಲ್ಲಿ)

15

25

35

20

79.05

44.30

29.95

30

82.45

46.75

32,30

40

88.20

51,40

37.10

50

97.70

59.65

ಅನ್ವಯವಾಗುವುದಿಲ್ಲ

ಎಲ್ ಐ ಸಿ ನ್ಯೂ ಜೀವನ್ ಆನಂದ್ ಪ್ಲಾನ್ – ಬೆನೆಫಿಟ್ಸ್

ಡೆತ್ ಬೆನಿಫಿಟ್

ಪಾಲಿಸಿದಾರನು ಪಾವತಿಸಬೇಕಾದ ಎಲ್ಲ ಪ್ರೀಮಿಯಂ ಗಳನ್ನು ನೀಡಿದ್ದಲ್ಲಿ, ಅಂತಹ ಪಾಲಿಸಿಗೆ ಈ ಕೆಳ ಕಂಡ ಬೆನಿಫಿಟ್ ನೀಡಲಾಗುವುದು.

 

 • ಪಾಲಿಸಿದಾರನು ಪಾಲಿಸಿಯ ಅವದಿಯಲ್ಲಿ ಮರಣ ಹೊಂದಿದಲ್ಲಿ

 

ಈ ಸಂಧರ್ಭದಲ್ಲಿ, ಡೆತ್ ಬೆನಿಫಿಟ್ ಈ ರೀತಿ ಇರುತ್ತದೆ:

 • ಡೆತ್ ಬೆನಿಫಿಟ್ = (ಸಮ್ ಅಶ್ಶುರ್ಡ್ ಆನ್ ಡೆತ್ + ಸಿಂಪಲ್ ರಿವರ್ಷನರಿ ಬೋನಸ್ + ಅಂತಿಮ ಅಡಿಷನಲ್ ಬೋನಸ್)

ಇದರಲ್ಲಿ

 • ಸಮ್ ಅಸ್ಸೂರ್ಡ್ ಆನ್ ಡೆತ್ = ಈ ಎರಡರಲ್ಲಿ ಹೆಚ್ಚಿನ ಮೊತ್ತ (ಬೇಸಿಕ್ ಸಮ್ ಅಶ್ಶುರ್ಡ್ ನ 125 % ಅಥವಾ ಬೇಸಿಕ್ ಸಮ್ ಅಶ್ಶುರ್ಡ್ ನ 10 ಪಟ್ಟು ಮೊತ್ತ)  
 • ಹಾಗೂ ಡೆತ್ ಬೆನಿಫಿಟ್ ಮೊತ್ತವು ಪಾಲಿಸಿದಾರನು ನೀಡಿರುವ ಎಲ್ಲಾ ಪ್ರೀಮಿಯಂ ಗಳ  ಒಟ್ಟಾರೆ ಮೊತ್ತದ 105 % ಗಿಂತ ಕಮ್ಮಿ ಇರಕೂಡದು
 • ಮೇಲೆ ತಿಳಿಸಿರುವ ಪ್ರೀಮಿಯಂ ಗಳಲ್ಲಿ ಸರ್ವಿಸ್ ಟಾಕ್ಸ್ ಹಾಗೂ ಎಕ್ಸ್ಟ್ರಾ ಪ್ರೀಮಿಯಂ ಮತ್ತು ರೈಡರ್ಸ್ ಪ್ರೀಮಿಯಂ ಗಳು ಸೇರಿರುವುದಿಲ್ಲ.

 

 • ಪಾಲಿಸಿದಾರನು ಪಾಲಿಸಿಯ ಆವದಿ  ಮುಗಿದ ನಂತರ ಮರಣ ಹೊಂದಿದಲ್ಲಿ

 

ಈ ಸಂಧರ್ಭದಲ್ಲಿ , ಪಾಲಿಸಿದಾರನು ಸೂಚಿಸಿರುವ ನಾಮಿನಿಗೆ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತವನ್ನು  ನೀಡಲಾಗುವುದು.

ಪಾಲಿಸಿಯ ಅವದಿ ಮುಗಿದ ನಂತರ ನೀಡುವ ಬೆನಿಫಿಟ್

ಪಾಲಿಸಿದಾರನು ಪಾಲಿಸಿಯ ಅವದಿಯ ನಂತರವೂ ಬದುಕಿದ್ದಲ್ಲಿ, ಅವನಿಗೆ ಈ ಕೆಳ ಕಂಡ ಬೆನಿಫಿಟ್ ನೀಡಲಾಗುತ್ತದೆ.

ಒಟ್ಟು ಖಚಿತ ಮೊತ್ತ = ಬೇಸಿಕ್ ಸಮ್ ಅಶ್ಶುರ್ಡ್ + ಸಿಂಪಲ್ ರಿವರ್ಷನರಿ ಬೋನಸ್ + ಅಂತಿಮ ಅಡಿಷನಲ್ ಬೋನಸ್ (ಇದ್ದಲ್ಲಿ)

ಆದರೆ ಪಾಲಿಸಿದಾರನು ಪಾಲಿಸಿಯ ಅವದಿ ಮುಗಿಯುವವರೆಗಿನ ಎಲ್ಲಾ ಪ್ರೀಮಿಯಂ ಗಳನ್ನು ಪಾವತಿ ಮಾಡಿರಬೇಕಾಗುತ್ತದೆ

ಪಾಲಿಸಿಯು ಕಾರ್ಪೊರೇಷನ್ ನ ಲಾಭದಲ್ಲಿ ಬಾಗಿ ಆಗುವಿಕೆ

ಎಲ್ ಐ ಸಿ ನ್ಯೂ ಜೀವನ್ ಆನಂದ್ ಪಾಲಿಸಿಯು ಕಾರ್ಪೊರೇಷನ್ ನ ಬಂಡವಾಳ ಹೂಡಿಕೆ ಹಾಗೂ ಅದರಿಂದ ಬರಬಹುದಾದ ಲಾಭಗಳಿಗೆ ಅರ್ಹತೆ ಹೊಂದಿರುತ್ತದೆ. ಹಾಗಾಗಿ, ಈ ಪಾಲಿಸಿಯು ಕಾರ್ಪೊರೇಷನ್ ನೀಡುವ ಸಿಂಪಲ್ ರಿವರ್ಷನರಿ ಬೋನಸ್ ಮೊತ್ತಕ್ಕೆ ಅರ್ಹವಾಗಿದ್ದು ಅದನ್ನು ಪಾಲಿಸಿಗೆ ನೀಡಲಾಗುವುದು.

ಉಳಿದಂತೆ, ಪಾಲಿಸಿಗೆ ಅಂತಿಮ ಅಡಿಷನಲ್ ಬೋನಸ್ ಕೂಡ ನೀಡಲಾಗುವುದು. ಇದು ಪಾಲಿಸಿಯು ಡೆತ್ ಕ್ಲೆಯಿಮ್ ಗೆ ಬಂದಲ್ಲಿ ಅಥವಾ ಸರ್ವೈವಲ್ ಬೆನಿಫಿಟ್ ಮೊತ್ತವನ್ನು ಸ್ವೀಕರಿಸಲು ಅರ್ಹವಾಗಿದ್ದಲ್ಲಿ ಮಾತ್ರ ಅನ್ವಯವಾಗುತ್ತದೆ. ಆದರೆ ಪಾಲಿಸಿಯು ಪೂರ್ಣ ಆಸ್ತಿತ್ವದಲ್ಲಿ ಇರಬೇಕಾಗುತ್ತದೆ ಮತ್ತು ಕಾರ್ಪೊರೇಷನ್ ನಿಯಮದ ಪ್ರಕಾರ ಅನ್ವಯಿಸುವ ಆವದಿಯನ್ನು ಮುಗಿಸಿರಬೇಕಾಗುತ್ತದೆ.

ಆಪ್ಶನಲ್ ಬೆನಿಫಿಟ್ ಗಳು (ಸ್ವ ಇಚ್ಚೆಯಿಂದ ಪಡೆಯುವ ಬೆನಿಫಿಟ್ ಗಳು)

ಎಲ್ ಐ ಸಿ ಯು ನೀಡುವ ಆಕಸ್ಮಿಕ ಮರಣ (ಅಕ್ಕಿಡೆಂಟಲ್ ಡೆತ್) ಹಾಗೂ ಅಂಗ ವೈಕಲ್ಯ (ಡಿಸ್ಎಬಿಲಿಟಿ) ರೈಡರ್ ಅನ್ನು ಈ ಪಾಲಿಸಿಯ ಜೊತೆ ಸೇರಿಸಿಕೊಳ್ಳಬಹುದು. ಆದರೆ ಈ ಬಾಬ್ತು ಹೆಚ್ಚುವರಿ ಪ್ರೀಮಿಯಂ ಮೊತ್ತವನ್ನು ನೀಡಬೇಕಾಗುತ್ತದೆ. ಇದರ ಪ್ರಕಾರ ಪಾಲಿಸಿದಾರನಿಗೆ ಬೆನಿಫಿಟ್ ಈ ಕೆಳ ಕಂಡ ರೀತಿಯಲ್ಲಿ ದೊರೆಯುತ್ತದೆ.

 • ಪಾಲಿಸಿದಾರನ ಮರಣವು ಪಾಲಿಸಿಯ ಅವದಿಯ ಒಳಗಡೆ ಆದಲ್ಲಿ, ಅಕ್ಸಿಡೆಂಟಲ್ ಬೆನಿಫಿಟ್ ಸಮ್ ಅಶ್ಶುರ್ಡ್ ಮೊತ್ತವನ್ನು ಡೆತ್ ಬೆನಿಫಿಟ್ ಮೊತ್ತದ ಜೊತೆಗೆ ಸೇರಿಸಿ ಒಟ್ಟು ಮೊತ್ತವನ್ನು ನೀಡಲಾಗುವುದು.
 • ಆದರೆ, ಪಾಲಿಸಿದಾರನಿಗೆ ಅಪಘಾತದಿಂದ  ಶಾಶ್ವತ ಅಂಗ ವೈಕಲ್ಯ ಆದಲ್ಲಿ, ಆತನಿಗೆ ಅಕ್ಸಿಡೆಂಟಲ್ ಬೆನಿಫಿಟ್ ಸಮ್ ಅಶ್ಶುರ್ಡ್ ಮೊತ್ತವನ್ನು ಸಮವಾದ ಕಂತುಗಳಲ್ಲಿ 10 ವರ್ಷಗಳ ಕಾಲ ನೀಡಲಾಗುವುದು. ಮತ್ತು ಪಾಲಿಸಿದಾರನು, ಬೇಸಿಕ್ ಸಮ್ ಅಶ್ಶುರ್ಡ್ ಬಾಬ್ತು ಹಾಗೂ ಅಕ್ಕಿಡೆಂಟಲ್ ಬೆನಿಫಿಟ್ ಸಮ್ ಅಶ್ಶುರ್ಡ್ ಬಾಬ್ತು ನೀಡಬೇಕಾಗಿರುವ ಮುಂದಿನ ಎಲ್ಲಾ ಪ್ರೀಮಿಯಂ ಗಳು ವೈವ್ ಆಫ್ ಆಗುವುದರಿಂದ  ಕಟ್ಟುವ ಪ್ರಮೇಯ ಇರುವುದಿಲ್ಲ.

ಎಲ್ ಐ ಸಿ ನ್ಯೂ ಜೀವನ್ ಆನಂದ್ ಪ್ಲಾನ್ – ಬೆನೆಫಿಟ್ಸ್ ಉದಾಹರಣೆ

ಶಾಸನಬದ್ದ ಎಚ್ಚರಿಕೆ

ಎಲ್ ಐ ಸಿ ಯು ನೀಡುವ ಬೆನೆಫಿಟ್ಸ್ ಗಳಲ್ಲಿ ಕೆಲವು ಗ್ಯಾರಂಟಿಡ್ ಆಗಿದ್ದು ಇನ್ನೂ ಕೆಲವು ಬದಲಾವಣೆಗೆ ಒಳ ಪಡುವ ಬೆನಿಫಿಟ್ ಗಳು ಆಗಿರುತ್ತವೆ, ಏಕೆಂದರೆ, ಅಂತಹ ಬೆನಿಫಿಟ್ ಗಳು ಕಾರ್ಪೊರೇಷನ್ ನ ಮುಂದಿನ ಕಾರ್ಯ ನಿರ್ವಹಣೆ ಹಾಗೂ ಅದರಿಂದ ಬರುವ ಆದಾಯದ ಮೇಲೆ ಅವಲಂಬಿತವಾಗಿರುತ್ತದೆ ನಿಮ್ಮ ಪಾಲಿಸಿಯಲ್ಲಿ ಗ್ಯಾರಂಟಿಡ್ ಆದಾಯ ಎಂದು ನಮೂದಿಸಿರುವ ಬೆನಿಫಿಟ್ ಗಳಿಗೆ ಕೆಳ ಕಂಡ ಟೇಬಲ್ ನಲ್ಲಿ “ಗ್ಯಾರಂಟಿಡ್”  ಎಂದು ತೋರಿಸಲಾಗಿದೆ. ಹಾಗೆಯೇ, ಪಾಲಿಸಿಯಲ್ಲಿ ನಮೂದಿಸಿರುವ ಗ್ಯಾರಂಟಿಡ್ ಅಲ್ಲದ ಬೆನಿಫಿಟ್ ಗಳನ್ನು ಕೆಳ ಕಂಡ ಟೇಬಲ್ ನಲ್ಲಿ ಎರಡು ರೀತಿಯ ರಿಟರ್ನ್ಸ್ ಗಳನ್ನು ಗಣನೆಗೆ ತೆಗೆದುಕೊಂಡು ಅದರ ರೀತ್ಯಾ ತೋರಿಸಲಾಗಿದೆ. ಇದು ಭವಿಷ್ಯದಲ್ಲಿ ಕಾರ್ಪೊರೇಷನ್ ನ ಬಂಡವಾಳ ಹೂಡಿಕೆಯಿಂದ ಬರಬಹುದಾದ ಎರಡು ಊಹಿಸಲಾದ ಆದಾಯ ಗಳನ್ನು ಅಳವಡಿಸಿ ತಯಾರಿಸಲಾಗಿದೆ. ಈ ಎರಡು ಊಹಿಸಲಾದ ಆದಾಯಗಳು ಪಾಲಿಸಿಯ ಬಾಬ್ತು ನೀಡುವ ಗ್ಯಾರಂಟಿಡ್ ಮೊತ್ತವಲ್ಲ. ಹಾಗೂ ಅವುಗಳು ಗರಿಷ್ಠ ಅಥವಾ ಕನಿಷ್ಠ ಮಿತಿಗಳು ಕೂಡ ಅಲ್ಲ. ಏಕೆಂದರೆ, ನಿಮ್ಮ ಪಾಲಿಸಿಯು ಬೇರೆ ಬೇರೆ ಅಂಶಗಳ ಮೇಲೆ ಹಾಗೂ ಮುಂದಿನ ಕಾರ್ಪೊರೇಷನ್ ನ ಕಾರ್ಯ ನಿರ್ವಹಣೆ ಮೇಲೂ ಅವಲಂಬಿತವಾಗಿರುತ್ತದೆ

ಈ ಪಾಲಿಸಿಯ ಬೆನಿಫಿಟ್ ಗಳ ಬಗ್ಗೆ ಕೆಳಗಿನ ಉದಾಹರಣೆಯನ್ನು ಗಮನಿಸಿ.

ವಿವರಗಳು

ಪಾಲಿಸಿಯನ್ನು ಪಡೆಯುವಾಗ ಪಾಲಿಸಿದಾರನ ವಯಸ್ಸು

30 ವರ್ಷಗಳು

ಪಾಲಿಸಿಯ ಅವದಿ (ಟರ್ಮ್)

35 ವರ್ಷಗಳು

ಪ್ರೀಮಿಯಂ ಪಾವತಿಸುವ ರೀತಿ

ವರ್ಷಕ್ಕೊಮ್ಮೆ

ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ (ರೂ ಗಳಲ್ಲಿ)

100000

ವಾರ್ಷಿಕ ಪ್ರೀಮಿಯಂ ಮೊತ್ತ (ರೂ ಗಳಲ್ಲಿ)

3165

ಬದಲಾಗಬಹುದಾದ ಸಿನ್ಯಾರಿಯೋ 1 – ಒಟ್ಟು ಹಣ ಹೂಡಿಕೆಯ ಮೇಲೆ ಬರಬಹುದಾದ ರಿಟರ್ನ್ @ 4 % ಒಂದು ವರ್ಷಕ್ಕೆ

ಬದಲಾಗಬಹುದಾದ ಸಿನ್ಯಾರಿಯೋ 2 – ಒಟ್ಟು ಹಣ ಹೂಡಿಕೆಯ ಮೇಲೆ ಬರಬಹುದಾದ ರಿಟರ್ನ್ @ 8 % ಒಂದು ವರ್ಷಕ್ಕೆ

ಆ) ಪಾಲಿಸಿಯ  ಅವದಿಯಲ್ಲಿ ಪಾಲಿಸಿದಾರನ ಮರಣ ಆದಲ್ಲಿ ಸಿಗಬಹುದಾದ ಮೊತ್ತ

ವರ್ಷದ ಕೊನೆಯಲ್ಲಿ

ವರ್ಷದ ಕೊನೆಯಲ್ಲಿ ನೀಡಿರುವ ಪ್ರೀಮಿಯಂ ಮೊತ್ತ(ರೂ ಗಳಲ್ಲಿ)

ಪಾಲಿಸಿಯ ಬಾಬ್ತು ಪಾಲಿಸಿದಾರನ ಮರಣ ಆದ ಪಕ್ಷದಲ್ಲಿ  ನೀಡುವ ಬೆನಿಫಿಟ್ ಮೊತ್ತ (ಆ ವರ್ಷದ ಕೊನೆಗೆ)

   

ಗ್ಯಾರಂಟಿಡ್

ಬದಲಾಗಬಹುದಾದ ಮೊತ್ತ

ಒಟ್ಟು ಮೊತ್ತ

     

ಸಿನಾರಿಯೊ 1

4 %

ಸಿನಾರಿಯೊ 2

8%

ಸಿನಾರಿಯೊ 1

4 %

ಸಿನಾರಿಯೊ 2

8%

1

3165

125000

400

3200

125400

128200

2

6330

125000

800

6400

125800

131400

3

9495

125000

1200

9600

126200

134600

4

12660

125000

1600

12800

126600

137800

5

15825

125000

2000

16000

127000

141000

6

18990

125000

2400

19200

127400

144200

7

22155

125000

2800

22400

127800

147400

8

25320

125000

3200

25600

128200

150600

9

28485

125000

3600

28800

128600

153800

10

31650

125000

4000

32000

129000

157000

11

34815

125000

4400

35200

129400

160200

12

37980

125000

4800

38400

129800

163400

13

41145

125000

5200

41600

130200

166600

14

44310

125000

5600

44800

130600

169800

15

47475

125000

6000

48500

131000

173500

16

50640

125000

6400

51700

131400

176700

17

53805

125000

6800

55400

131800

180400

18

56970

125000

7200

59100

132200

184100

19

60135

125000

7600

62800

132600

187800

20

63300

125000

8000

66500

133000

191500

21

66465

125000

8400

70200

133400

195200

22

69630

125000

8800

74900

133800

199900

23

72795

125000

9200

79600

134200

204600

24

75960

125000

9600

84300

134600

209300

25

79125

125000

10000

90000

135000

215000

26

82290

125000

10400

95700

135400

220700

27

85455

125000

10800

101400

135800

226400

28

88620

125000

11200

107100

136200

232100

29

91785

125000

11600

112800

136600

237800

30

94950

125000

12000

120000

137000

245000

31

98115

125000

12400

127200

137400

252200

32

101280

125000

12800

134400

137800

259400

33

104445

125000

13200

141600

138200

266600

34

107610

125000

13600

148800

138600

273800

35

110775

125000

14000

156000

139000

281000

ಆ) ಪಾಲಿಸಿಯನ್ನು ಸರಂಡರ್ ಮಾಡಿದಲ್ಲಿ  ಸಿಗಬಹುದಾದ ಮೊತ್ತ

ವರ್ಷದ ಕೊನೆಯಲ್ಲಿ

ವರ್ಷದ ಕೊನೆಯಲ್ಲಿ ನೀಡಿರುವ ಪ್ರೀಮಿಯಂ ಮೊತ್ತ(ರೂ ಗಳಲ್ಲಿ)

ಪಾಲಿಸಿಯ ಬಾಬ್ತು ಪಾಲಿಸಿದಾರನು ಸರಂಡರ್ ಮಾಡಿದ ಪಕ್ಷದಲ್ಲಿ  ನೀಡುವ ಬೆನಿಫಿಟ್ ಮೊತ್ತ (ಆ ವರ್ಷದ ಕೊನೆಗೆ)

   

ಗ್ಯಾರಂಟಿಡ್ ಸರಂಡರ್ ಮೊತ್ತ (ರೂ ಗಳಲ್ಲಿ


ಬೋನಸ್ ನ ಸರಂಡರ್ ಮೌಲ್ಯ (ರೂ ಗಳಲ್ಲಿ)


ಒಟ್ಟು ಗ್ಯಾರಂಟಿಡ್ ಮೊತ್ತ (ರೂ ಗಳಲ್ಲಿ)

     

ಸಿನಾರಿಯೊ 1

4 %

ಸಿನಾರಿಯೊ 2

8%

ಸಿನಾರಿಯೊ 1

4 %

ಸಿನಾರಿಯೊ 2

8%

1

3165

0

0

0

0

0

2

6330

0

0

0

0

0

3

9495

2849

24

192

2873

3041

4

12660

6330

49

392

6379

6722

5

15825

7913

120

962

8033

8874

6

18990

9495

144

1154

9639

10649

7

22155

11078

297

2377

11375

13454

8

25320

12941

386

3087

13327

16028

9

28485

14875

475

3802

15350

18676

10

31650

16879

565

4522

17444

21401

11

34815

18953

657

5259

19611

24212

12

37980

21102

726

5810

21828

26912

13

41145

23317

795

6356

24111

29673

14

44310

25602

864

6908

26466

32510

15

47475

27958

933

7464

28891

35422

16

50640

30384

1006

8049

31390

38433

17

53805

32880

1083

8666

33963

41546

18

56970

35447

1168

9343

36615

44789

19

60135

38083

1260

10081

39344

48164

20

63300

40791

1362

10899

42153

51690

21

66465

43574

1477

11814

45051

55388

22

69630

46422

1547

12376

47969

58799

23

72795

49340

1625

12998

50965

62338

24

75960

52329

1714

13709

54042

66038

25

79125

55388

1816

14528

57204

69916

26

82290

58516

1934

15475

60451

73992

27

85455

61716

2071

16572

63787

78287

28

88620

64985

2232

17857

67217

82842

29

91785

68325

2419

19349

70743

87674

30

94950

71744

2639

21110

74383

92855

31

98115

75225

2899

23193

78124

98418

32

101280

78776

3206

25651

81982

104427

33

104445

82397

3572

28575

85969

110972

34

107610

86088

4080

32640

90168

118728

35

110775

88620

4900

39200

93520

127820

ಇ) ಪಾಲಿಸಿದಾರನು ಪೂರ್ಣ ಆವದಿಯನ್ನು  ಮುಗಿಸಿದಲ್ಲಿ ಅಥವಾ ನಂತರ ಮರಣ ಹೊಂದಿದಲ್ಲಿ ಸಿಗಬಹುದಾದ ಮೊತ್ತ

ವರ್ಷದ ಕೊನೆಯಲ್ಲಿ

ವರ್ಷದ ಕೊನೆಯಲ್ಲಿ ನೀಡಿರುವ ಪ್ರೀಮಿಯಂ ಮೊತ್ತ(ರೂ ಗಳಲ್ಲಿ)

ಪಾಲಿಸಿದಾರನು ಪೂರ್ಣ ಆವದಿಯನ್ನು  ಮುಗಿಸಿದಲ್ಲಿ ಅಥವಾ ನಂತರ ಮರಣ ಹೊಂದಿದಲ್ಲಿ ಸಿಗಬಹುದಾದ ಮೊತ್ತ

   

ಗ್ಯಾರಂಟಿಡ್ ಮೊತ್ತ (ರೂ ಗಳಲ್ಲಿ


ಬದಲಾಗಬಹುದಾದ ಮೌಲ್ಯ (ರೂ ಗಳಲ್ಲಿ)


ಒಟ್ಟು ಮೊತ್ತ (ರೂ ಗಳಲ್ಲಿ)

     

ಸಿನಾರಿಯೊ 1

4 %

ಸಿನಾರಿಯೊ 2

8%

ಸಿನಾರಿಯೊ 1

4 %

ಸಿನಾರಿಯೊ 2

8%

35 ನೇ ವರ್ಷಕ್ಕೆ

11075

100000

14000

156000

114000

256000

36 ಮತ್ತು ಮುಂದಿನ ವರ್ಷಗಳಲ್ಲಿ

11075

100000

0

0

100000

100000

 • ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ ನಲ್ಲಿ ಸರ್ವಿಸ್ ಟಾಕ್ಸ್, ಎಕ್ಸ್ಟ್ರಾ ಪ್ರೀಮಿಯಂ ಗಳು ಹಾಗೂ ರೈಡರ್ಸ್ ಗಳ ಬಾಬ್ತು ನೀಡಬೇಕಾದ ಹೆಚ್ಚುವರಿ ಮೊತ್ತ ಸೇರಿರುವುದಿಲ್ಲ
 • ಈ ಪ್ಲಾನ್ ಅಡಿಯಲ್ಲಿ, ಒಟ್ಟಾರೆ ಡೆತ್ ಬೆನಿಫಿಟ್ ಮೊತ್ತವು ಒಟ್ಟು ಪ್ರೀಮಿಯಂ ಗಳ ಮೊತ್ತದ 105 % ಗಿಂತ ಕಮ್ಮಿ ಇರುವುದಿಲ್ಲ (ಸರ್ವಿಸ್ ಟಾಕ್ಸ್, ಎಕ್ಸ್ಟ್ರಾ ಪ್ರೀಮಿಯಂ ಹಾಗೂ ರೈಡರ್ಸ್ ಮೊತ್ತಗಳನ್ನು ಹೊರತು ಪಡಿಸಿ)

ಕಾರ್ಪೊರೇಷನ್ ನವರು ಪಾಲಿಸಿದಾರನಿಗೆ ಅನುಕೂಲವಾದಲ್ಲಿ, ಸ್ಪೆಷಲ್ ಸರಂಡರ್ ವ್ಯಾಲ್ಯು ಮೊತ್ತವನ್ನು ನೀಡಬಹುದು

ಎಲ್ ಐ ಸಿ ನ್ಯೂ ಜೀವನ್ ಆನಂದ್ ಪ್ಲಾನ್ – ಇತರೆ ಬೆನೆಫಿಟ್ಸ್

ಈ ಪ್ಲಾನ್ ಅಡಿಯಲ್ಲಿ ಪಾಲಿಸಿದಾರನು ಕೆಳ ಕಂಡ ಇತರೆ ಬೆನಿಫಿಟ್ ಗಳಿಗೂ ಅರ್ಹನಾಗುತ್ತಾನೆ

ಪ್ರೀಮಿಯಂ ಹಾಗೂ ಹೆಚ್ಚಿನ ಸಮ್ ಅಶ್ಶುರ್ಡ್ ಮೇಲೆ ನೀಡುವ ರಿಯಾಯತಿ

ಎಲ್ ಐ ಸಿ ಜೀವನ್ ಆನಂದ್ ಪಾಲಿಸಿಯನ್ನು ಪಡೆಯುವಾಗ ಪಾಲಿಸಿದಾರನಿಗೆ ಕೆಲವು ರಿಯಾಯತಿ ದೊರಕುತ್ತದೆ. ಅವುಗಳು ಅವನು ನೀಡುವ ಪ್ರೀಮಿಯಂ ಹಾಗೂ ಹೆಚ್ಚಿನ ಸಮ್ ಅಶ್ಶುರ್ಡ್ ಮೊತ್ತಗಳಿಗೆ ಅನ್ವಯವಾಗುತ್ತದೆ. ವಿವರಗಳು ಈ ಕೆಳ ಕಂಡಂತಿದೆ.

ಪ್ರೀಮಿಯಂ ಮೇಲೆ ಸಿಗುವ ರಿಯಾಯತಿ

ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ – ಸ್ಯಾಂಪಲ್ ಪ್ರೀಮಿಯಂ ಮೊತ್ತದ ಮೇಲೆ 2 % ರಿಯಾಯತಿ ದೊರೆಯುತ್ತದೆ

ಅರ್ದ ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ – ಸ್ಯಾಂಪಲ್ ಪ್ರೀಮಿಯಂ ಮೊತ್ತದ ಮೇಲೆ 1 % ರಿಯಾಯತಿ ದೊರೆಯುತ್ತದೆ

3 ತಿಂಗಳಿಗೊಮ್ಮೆ ಹಾಗೂ ತಿಂಗಳಿಗೊಮ್ಮೆ ನೀಡುವ ಪ್ರೀಮಿಯಂ –ಯಾವುದೇ ರಿಯಾಯತಿ ದೊರೆಯುವುದಿಲ್ಲ

ಹೆಚ್ಚು ಸಮ್ ಅಶ್ಶುರ್ಡ್(B.S.A)  ಮೇಲೆ ಸಿಗುವ ರಿಯಾಯತಿ

ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ (ರೂ ಗಳಲ್ಲಿ)  B. S. A

ದೊರೆಯುವ ರಿಯಾಯತಿ

100000 ದಿಂದ 195000 ರವರೆಗೆ

ಯಾವುದೇ ರಿಯಾಯತಿ ಇಲ್ಲ

200000 ದಿಂದ 495000 ರವರೆಗೆ

B.S.A ಮೇಲೆ 1.50 % ರಿಯಾಯತಿ ದೊರೆಯುತ್ತದೆ

500000 ದಿಂದ 995000 ರವರೆಗೆ

B.S.A ಮೇಲೆ 2.50 % ರಿಯಾಯತಿ ದೊರೆಯುತ್ತದೆ

1000000 ಕ್ಕೆ ಮೇಲ್ಪಟ್ಟು

B.S.A ಮೇಲೆ 3.00 % ರಿಯಾಯತಿ ದೊರೆಯುತ್ತದೆ

ಪಾಲಿಸಿಯ ರಿವೈವಲ್

ಪಾಲಿಸಿಯ ಮೇಲಿನ ಕಂತನ್ನು (ಪ್ರೀಮಿಯಂ ಅನ್ನು) ಗ್ರೇಸ್ ಪೀರಿಯಡ್ ಅವದಿಯಲ್ಲಿಯೂ ಕೂಡ ಕಟ್ಟದಿದ್ದಲ್ಲಿ, ಪಾಲಿಸಿಯು  ಲ್ಯಾಪ್ಸ್ ಆಗುತ್ತದೆ ಅಂದರೆ ಅದು ಸ್ತಗಿತಗೊಳ್ಳುತ್ತದೆ ಅಥವಾ ಮಾನ್ಯತೆ ಕಳೆದುಕೊಳ್ಳುತ್ತದೆ. ಈ ಪಾಲಿಸಿಯ ಅಡಿಯಲ್ಲಿ, ಆ ರೀತಿ ಲ್ಯಾಪ್ಸ್ ಆಗಿರುವ ಪಾಲಿಸಿಯನ್ನು ರಿವೈವಲ್ ಮಾಡುವ ಅವಕಾಶ ಇರುತ್ತದೆ. ಆದರೆ ಪಾಲಿಸಿದಾರನು ನೀಡದಿರುವ ಪ್ರೀಮಿಯಂ ದಿವಸದಿಂದ ಎರಡು ವರ್ಷಗಳ ಒಳಗೆ ಹಾಗೂ ಪಾಲಿಸಿಯು ಚಾಲ್ತಿಯಲ್ಲಿ ಇದ್ದಲ್ಲಿ, ರಿವೈವಲ್ ಮಾಡಿಕೊಳ್ಳಬಹುದು. ಅದುವರೆವಿಗೂ ಕಟ್ಟದೆ ಇರುವ ಪ್ರೀಮಿಯಂಗಳನ್ನು ಅದಕ್ಕೆ ಅನ್ವಯವಾಗುವ ಲೇಟ್ ಫೀ ಹಾಗೂ ಕಾರ್ಪೊರೇಷನ್ ನವರು ವಿಧಿಸುವ ಯಾವುದೇ ಬಡ್ಡಿ ಇದ್ದಲ್ಲಿ ಅದನ್ನೂ ಸಹಾ ಸೇರಿಸಿ ಒಟ್ಟು ಮೊತ್ತವನ್ನು ಕಾರ್ಪೊರೇಷನ್ ಗೆ ನೀಡಬೇಕಾಗುತ್ತದೆ. ಹಾಗೂ ಪಾಲಿಸಿ ಲ್ಯಾಪ್ಸ್ ಏಕೆ ಆಯಿತು ಎನ್ನುವುದರ ಬಗ್ಗೆ ಸೂಕ್ತ ಕಾರಣಗಳನ್ನು ನೀಡಬೇಕಾಗುತ್ತದೆ. ಮತ್ತು ಪಾಲಿಸಿಯ ಮುಂದುವರಿಕೆಯ ಬಗ್ಗೆ ಪುರಾವೆಯನ್ನು ಸಹಾ ನೀಡಬೇಕು.

ಸದರಿ ಪಾಲಿಸಿಯನ್ನು ರಿವೈವ್ ಮಾಡುವುದು ಅಥವಾ ಬಿಟ್ಟಿದ್ದು ಕಾರ್ಪೊರೇಷನ್ ಗೆ ಸೇರಿದ್ದು. ಹಾಗೂ ಪಾಲಿಸಿಯನ್ನು ಮೊದಲು ಪಾಲಿಸಿಗೆ ಅನ್ವಯವಾಗುತ್ತಿದ್ದ ನಿಯಮಗಳು ಮತ್ತು ನಿಬಂದನೆಗಳಿಗೆ ಅನುಸಾರವಾಗಿಯೇ ರಿವೈವ್ ಮಾಡುವುದೋ ಅಥವಾ ಹೊಸ ನಿಯಮಗಳು ಹಾಗೂ ನಿಬಂದನೆಗಳನ್ನು ವಿಧಿಸಿ ರಿವೈವ್ ಮಾಡುವುದೋ ಎನ್ನುವ ನಿರ್ದಾರವನ್ನು ಕಾರ್ಪೊರೇಷನ್ ತೆಗೆದುಕೊಳ್ಳುತ್ತದೆ. ಪಾಲಿಸಿಯು ಕಾರ್ಪೊರೇಷನ್ ನವರು ಒಪ್ಪಿಕೊಂಡು ಅದರ ಬಗ್ಗೆ ಪಾಲಿಸಿದಾರನಿಗೆ ಲಿಖಿತ ಮುಖೇನ ತಿಳಿಸಿದ ದಿವಸದಿಂದ ರಿವೈವಲ್ ಆಗಿದೆ ಎಂದು ಪರಿಗಣಿಸಬೇಕಾಗುತ್ತದೆ. ರೈಡರ್ ಗಳ ರಿವೈವಲ್ ಕೂಡ ಈ ರಿವೈವಲ್ ಜೊತೆಗೆ ಆಗುತ್ತದೆಯೇ ಹೊರತು, ಅದು ಸೆಪರೇಟ್ ಆಗಿ ಆಗುವುದಿಲ್ಲ.

ಪೈಡ್ - ಅಪ್ ಮೌಲ್ಯ

ಪಾಲಿಸಿದಾರನು ಈ ಪಾಲಿಸಿಯ ಬಾಬ್ತು ಪಾವತಿಸಬೇಕಾಗಿರುವ ಪ್ರೀಮಿಯಂ ಗಳನ್ನು 3 ವರ್ಷಗಳು ನೀಡಿದ್ದಲ್ಲಿ, ಹಾಗೂ ಮುಂದೆ ಕಾರಣಾಂತರಗಳಿಂದ ನೀಡಲು ಆಗದೆ ಇದ್ದ ಪಕ್ಷದಲ್ಲಿ, ಅಂತಹ ಪಾಲಿಸಿಯು ತನ್ನ ಅಸ್ತಿತ್ವವನ್ನು ಕಳೆದು ಕೊಳ್ಳುವುದಿಲ್ಲ. ಬದಲಿಗೆ, ಆ ಪಾಲಿಸಿಯು ಪೈಡ್-ಅಪ್ ಪಾಲಿಸಿಯ ರೂಪವನ್ನು ಪಡೆದು ಮುಂದುವರೆಯುತ್ತದೆ. ಅಂತಹ ಸಂಧರ್ಭದಲ್ಲಿ, ಪಾಲಿಸಿಯ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತವನ್ನು ಕಡಿತಗೊಳಿಸಿ, ಅದನ್ನು ಪೈಡ್-ಅಪ್ ಸಮ್ ಅಶ್ಶುರ್ಡ್ ಮೊತ್ತವೆಂದು ಕರೆಯಲಾಗುವುದು. ಇದು ಪಾಲಿಸಿದಾರನು ನೀಡಬೇಕಾದ ಹಾಗೂ ನೀಡಿರುವ ಪ್ರೀಮಿಯಂ ಗಳ ಮೇಲೆ ಅವಲಂಬಿತವಾಗಿರುತ್ತದೆ.

ಪೈಡ್-ಅಪ್ ಸಮ್ ಅಶ್ಶುರ್ಡ್ ಮೊತ್ತ = ಬೇಸಿಕ್ ಸಮ್ ಅಶ್ಶುರ್ಡ್ x (ಒಟ್ಟು ನೀಡಿರುವಪ್ರೀಮಿಯಂಗಳು / ಒಟ್ಟು ನೀಡಬೇಕಾಗಿರುವ ಪ್ರೀಮಿಯಂಗಳು)

ಈ ಬೆನಿಫಿಟ್ ಅನ್ನು ಪಾಲಿಸಿಯ ಆವದಿ ಮುಗಿದ ನಂತರ ಅಥವಾ ಪಾಲಿಸಿದಾರನ ಮರಣವಾದಲ್ಲಿ ನೀಡಲಾಗುವುದು. ಆ ಮೊತ್ತದಲ್ಲಿ  ಪೈಡ್-ಅಪ್ ಸಮ್ ಅಶ್ಶುರ್ಡ್ ಮೊತ್ತ ಮತ್ತು ವೆಸ್ಟೆಡ್ ಸಿಂಪಲ್ ರಿವರ್ಷನರಿ ಬೋನಸ್ (ಇದ್ದಲ್ಲಿ) ಮೊತ್ತ ಎರಡೂ ಸೇರಿರುತ್ತದೆ. ಪೈಡ್-ಅಪ್ ಪಾಲಿಸಿಯು ಮುಂದಿನ ಬೋನಸ್ ಗಳಿಗೆ ಅರ್ಹತೆ ಪಡೆಯುವುದಿಲ್ಲ. ಪಾಲಿಸಿಯ ಆವದಿ ಮುಗಿದ ನಂತರ ಪಾಲಿಸಿದಾರನ ಮರಣವಾದಲ್ಲಿ, ಪೈಡ್-ಅಪ್ ಸಮ್ ಅಶ್ಶುರ್ಡ್ ಮೊತ್ತವನ್ನು ನೀಡಲಾಗುವುದು. ರೈಡರ್ಸ್ ಗಳು ಯಾವುದೇ ಪೈಡ್-ಅಪ್ ಮೌಲ್ಯವನ್ನು ಗಳಿಸುವುದಿಲ್ಲ ಹಾಗೂ ರೈಡರ್ಸ್ ಗೆ  ಬೆನಿಫಿಟ್ ಗಳು ಕೂಡ ರದ್ದಾಗುತ್ತವೆ.

ಸರಂಡರ್ ಮೌಲ್ಯ

ಪಾಲಿಸಿದಾರನು, ಪಾಲಿಸಿಯ ಮೇಲೆ ನೀಡಬೇಕಾಗಿರುವ ಪ್ರೀಮಿಯಂ ಗಳನ್ನು 3 ವರ್ಷಗಳು ಸತತವಾಗಿ ಕಟ್ಟಿದ್ದಲ್ಲಿ. ಸರಂಡರ್ ಕ್ಲಾಸ್ ಅನ್ವಯ ಆಗುತ್ತದೆ. ಅದರ ಪ್ರಕಾರ, ಪಾಲಿಸಿಯನ್ನು ಅವನು ಸರಂಡರ್ ಮಾಡಲು ಅರ್ಹತೆ ಇರುತ್ತದೆ. ಪಾಲಿಸಿಯನ್ನು ಸರಂಡರ್ ಮಾಡಿದಾಗ ನೀಡುವ ಗ್ಯಾರಂಟಿಡ್ ಸರಂಡರ್ ಮೌಲ್ಯವು ಪಾಲಿಸಿದಾರನು ಅದುವರೆವಿಗೂ ನೀಡಿರುವ ಪ್ರೀಮಿಯಂ ಮೊತ್ತದ ಪರ್ಸೆಂಟೆಜ್ ಆಗಿರುತ್ತದೆ. ಈ ಪರ್ಸೆಂಟೆಜ್ ಪಾಲಿಸಿಯ ಟರ್ಮ್ ಹಾಗೂ ಪಾಲಿಸಿಯನ್ನು ಎಷ್ಟು ವರ್ಷದ ಮೇಲೆ ಸರಂಡರ್ ಮಾಡಿದ್ದು ಎನ್ನುವುದರ ಮೇಲೆ  ನಿಗದಿಗೊಳಿಸಲಾಗುತ್ತದೆ. ಕೆಳೆಗೆ ಕಾಣಿಸಿರುವ ಟೇಬಲ್ ನಲ್ಲಿ ಅನ್ವಯವಾಗುವ ಗ್ಯಾರಂಟಿಡ್ ಸರಂಡರ್ ಫ್ಯಾಕ್ಟರ್ ವಿವರಗಳನ್ನು ನೀಡಲಾಗಿದೆ.

ಪ್ರೀಮಿಯಂ ಗಳಿಗೆ ಅನ್ವಯ ಆಗುವ ಗ್ಯಾರಂಟಿಡ್ ಸರಂಡರ್ ಫ್ಯಾಕ್ಟರ್ ವಿವರ

ಪಾಲಿಸಿಯ ವರ್ಷ

ಪಾಲಿಸಿಯ ಟರ್ಮ್ (ಪರ್ಸೆಂಟೆಜ್ ನಲ್ಲಿ)

                       
 

15

16

17

18

19

20

21

22

23

24

25

26

27

28

29

30

31

32

33

34

35

1

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

2

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

3

30.00

30.00

30.00

30.00

30.00

30.00

30.00

30.00

30.00

30.00

30.00

30.00

30.00

30.00

30.00

30.00

30.00

30.00

30.00

30.00

30.00

4

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

5

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

6

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

7

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

8

54.29

53.75

53.33

53.00

52.73

52.50

52.31

52.14

52.0

51.88

51.76

51.67

51.58

51.50

51.43

51.36

51.30

51.25

51.20

51.15

51.11

9

58.57

57.50

56.67

56.00

55.45

55.00

54.62

54.29

54.00

53.75

53.53

53.33

53.16

53.00

52.86

52.73

52.61

52.50

52.40

52.31

52.22

10

62.86

61.25

60.00

59.00

58.18

57.50

56.92

56.43

56.00

55.63

55.29

55.00

54.74

54.50

54.29

54.09

53.91

53.75

53.60

53.46

53.33

11

67.14

65.00

63.33

62.00

60.91

60.00

59.23

58.57

58.00

57.50

57.06

56.67

56.32

56.00

55,71

55.45

55.22

55.00

54.80

54.62

54.44

12

71.43

68.75

66.67

65.00

63.64

62.50

61.54

60.71

60.00

59.38

58.82

58.33

57.89

57.50

57.14

56.82

56.52

56.25

56.00

55.77

55.56

13

75.71

72.50

70.00

68.00

66.36

65.00

63.85

62.86

62.00

61.25

60.59

60.00

59.47

59.00

58.57

58.18

57.83

57.50

57.20

56.92

56.67

14

80.00

76.25

73.33

71.00

69.09

67.50

66.15

65.00

64.00

63.13

62.35

61.67

61.05

60.50

60.00

59.56

59.13

58.75

5840

58.08

57.78

15

80.00

80.00

76.67

74.00

71.82

70.00

68.46

67.14

66.00

65.00

64.12

63.33

62.63

62.00

61.43

60.91

60.43

60.00

59.60

59.23

58.89

16

 

80.00

80.00

77.00

74,55

72,50

70.77

69.29

68.00

66.88

65.88

65.00

64.21

63.50

62.86

62.27

61.74

61.25

60.80

60.38

60.00

17

   

80.00

80.00

77.27

75.00

73.08

71.43

70.00

68.75

67.65

66.67

65.79

65.00

64.29

63.64

63.04

62.50

62.00

61.54

61.11

18

     

80.00

80.00

77.50

75.38

73.57

72.00

70.63

69.41

68.33

67.37

66.50

65.71

65.00

64.35

63.75

63.20

62.69

62.22

19

       

80.00

80.00

77.69

75.71

74.00

72.50

71.18

70.00

68.95

68.00

67.14

66.36

65.65

65.00

64.40

63.85

63.33

20

         

80.00

80.00

77.86

76.00

74.38

72.94

71.67

70.53

69.50

68.57

67.73

66.96

66.25

65.60

65.00

64.44

21

           

80.00

80.00

78.00

76.25

74.71

73.33

72.11

71.00

70.00

69.09

68.26

67.50

66.80

66.15

65.56

22

             

80.00

80.00

78.13

76.47

75.00

73.68

72.50

71.43

70.45

69.57

68.75

68.00

67.31

66.67

23

               

80.00

80.00

78.24

76.67

75.26

74.00

72.86

71.82

70.87

70.00

69.20

68.46

67.78

24

                 

80.00

80.00

78.33

76.84

75.50

74.29

73.18

72.17

71.25

70.40

69.62

68.89

25

                   

80.00

80.00

78.42

77.00

75.71

74.55

73.48

72.50

71.60

70.77

70.00

26

                     

80.00

80.00

78.50

77.14

75.91

74.78

73.75

72.80

71.92

71.11

27

                       

80.00

80.00

78.57

77.27

76.09

75.00

74.00

73.08

72.22

28

                         

80.00

80.00

78.64

77.39

76.25

75.20

74.23

73.33

29

                           

80.00

80.00

78.70

77.50

76.40

75.38

74.44

30

                             

80.00

80.00

78.75

77.60

76.54

75.56

31

                               

80.00

80.00

78.80

77.69

76.67

32

                                 

80.00

80.00

78.85

77.78

33

                                   

80.00

80.00

78.89

34

                                     

80.00

80.00

35

                                       

80.00

 

ಮೇಲೆ ಕಾಣಿಸಿರುವ ಪ್ರೀಮಿಯಂ ಗಳಲ್ಲಿ ಯಾವುದೇ ತೆರಿಗೆಗಳನ್ನು ಸೇರಿಸಿರುವುದಿಲ್ಲ. ಅನ್ವಯವಾಗುವ ತೆರಿಗೆಗಳನ್ನು ಪ್ರೀಮಿಯಂ ಮೊತ್ತದ ಜೊತೆ ಸೇರಿಸಿ  ನೀಡಬೇಕಾಗುತ್ತದೆ. ಇದರ ಜೊತೆಗೆ, ಇನ್ಯಾವುದೇ ಅಂಡರ್ ರೈಟಿಂಗ್ ಪ್ರಕಾರ ಪಾಲಿಸಿಯ ಮೇಲೆ ಹೆಚ್ಚುವರಿ ಮೊತ್ತವನ್ನು ಸೇರಿಸಿದಲ್ಲಿ , ಅದನ್ನು ಕೂಡ ಪ್ರೀಮಿಯಂ ಮೊತ್ತದ ಜೊತೆಗೆ ಸೇರಿಸಿ ನೀಡಬೇಕಾಗುತ್ತದೆ.

ಸರಂಡರ್ ಮೌಲ್ಯದ ಒಟ್ಟಿಗೆ ವೆಸ್ಟೆಡ್ ಸಿಂಪಲ್ ರಿವರ್ಶನರಿ ಬೋನಸ್ ಮೌಲ್ಯವನ್ನು ಸೇರಿಸಿ ನೀಡಲಾಗುತ್ತದೆ. ವೆಸ್ಟೆಡ್ ಸಿಂಪಲ್ ರಿವರ್ಶನರಿ ಬೋನಸ್ ಅಂದರೆ, ವೆಸ್ಟೆಡ್ ಬೋನಸ್ ಅನ್ನು ಗ್ಯಾರಂಟಿಡ್ ಸರಂಡರ್ ವ್ಯಾಲ್ಯು ಫ್ಯಾಕ್ಟರ್ ನಿಂದ ಗುಣಿಸಿದಾಗ ಬರುವ ಮೊತ್ತ. ಈ ಗ್ಯಾರಂಟಿಡ್ ಸರಂಡರ್ ವ್ಯಾಲ್ಯು ಫ್ಯಾಕ್ಟರ್ ಪರ್ಸೆಂಟೆಜ್ ರೂಪದಲ್ಲಿದ್ದು, ಅದು ಪಾಲಿಸಿಯ ಟರ್ಮ್ ಹಾಗೂ ಪಾಲಿಸಿಯನ್ನು ಎಷ್ಟು ವರ್ಷದ ಮೇಲೆ ಸರಂಡರ್ ಮಾಡಿದ್ದು ಎನ್ನುವುದರ ಮೇಲೆ  ನಿಗದಿಗೊಳಿಸಲಾಗುತ್ತದೆ. ಕೆಳೆಗೆ ಕಾಣಿಸಿರುವ ಟೇಬಲ್ ನಲ್ಲಿ ವೆಸ್ಟೆಡ್ ಬೋನಸ್ ಗೆ ಅನ್ವಯವಾಗುವ ಗ್ಯಾರಂಟಿಡ್ ಸರಂಡರ್ ಫ್ಯಾಕ್ಟರ್ ವಿವರಗಳನ್ನು ನೀಡಲಾಗಿದೆ.

ವೆಸ್ಟೆಡ್ ಬೋನಸ್ ಗೆ ಅನ್ವಯವಾಗುವ ಗ್ಯಾರಂಟಿಡ್ ಸರಂಡರ್ ವ್ಯಾಲ್ಯು ಫ್ಯಾಕ್ಟರ್ ಗಳ ವಿವರ

ಪಾಲಿಸಿಯ ವರ್ಷ

ಪಾಲಿಸಿಯ ಟರ್ಮ್ (ಪರ್ಸೆಂಟೆಜ್ ನಲ್ಲಿ)

                       
 

15

16

17

18

19

20

21

22

23

24

25

26

27

28

29

30

31

32

33

34

35

1

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

2

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

3

17.66

17.58

17.58

17.03

16.58

16.22

15.93

15.72

15.55

15.42

15.28

15.13

14.94

14.13

13.20

12.06

10.61

6.01

6.01

3.06

2.00

4

17.85

17.66

17.58

17.58

17.03

16.58

16.22

15.93

15.72

15.55

15.42

15.28

15.13

14.94

14.13

13.20

12.06

10.61

6.01

6.01

3.06

5

18.16

17.85

17.66

17.58

17.58

17.03

16.58

16.22

15.93

15.72

15.55

15.42

15.28

15.13

14.94

14.13

13.20

12.06

10.61

6.01

6.01

6

18.60

18.16

17.85

17.66

17.58

17.58

17.03

16.58

16.22

15.93

15.72

15.55

15.42

15.28

15.13

14.94

14.13

13.20

12.06

10.61

6.01

7

19.18

18.60

18.16

17.85

17.66

17.58

17.58

17.03

16.58

16.22

15.93

15.72

15.55

15.42

15.28

15.13

14.94

14.13

13.20

12.06

10.61

8

19.93

19.18

18.60

18.16

17.85

17.66

17.58

17.58

17.03

16.58

16.22

15.93

15.72

15.55

15.42

15.28

15.13

14.94

14.13

13.20

12.06

9

20.85

19.93

19.18

18.60

18.16

17.85

17.66

17.58

17.58

17.03

16.58

16.22

15.93

15.72

15.55

15.42

15.28

15.13

14.94

14.13

13.20

10

21.99

20.85

19.93

19.18

18.60

18.16

17.85

17.66

17.58

17.58

17.03

16.58

16.22

15.93

15.72

15.55

15.42

15.28

15.13

14.94

14.13

11

23.38

21.99

20.85

19.93

19.18

18.60

18.16

17.85

17.66

17.58

17.58

17.03

16.58

16.22

15.93

15.72

15.55

15.42

15.28

15.13

14.94

12

25.05

23.38

21.99

20.85

19.93

19.18

18.60

18.16

17.85

17.66

17.58

17.58

17.03

16.58

16.22

15.93

15.72

15.55

15.42

15.28

15.13

13

27.06

25.05

23.38

21.99

20.85

19.93

19.18

18.60

18.16

17.85

17.66

17.58

17.58

17.03

16.58

16.22

15.93

15.72

15.55

15.42

15.28

14

30.00

27.06

25.05

23.38

21.99

20.85

19.93

19.18

18.60

18.16

17.85

17.66

17.58

17.58

17.03

16.58

16.22

15.93

15.72

15.55

15.42

15

35.00

30.00

27.06

25.05

23.38

21.99

20.85

19.93

19.18

18.60

18.16

17.85

17.66

17.58

17.58

17.03

16.58

16.22

15.93

15.72

15.55

16

 

35.00

30.00

27.06

25.05

23.38

21.99

20.85

19.93

19.18

18.60

18.16

17.85

17.66

17.58

17.58

17.03

16.58

16.22

15.93

15.72

17

   

35.00

30.00

27.06

25.05

23.38

21.99

20.85

19.93

19.18

18.60

18.16

17.85

17.66

17.58

17.58

17.03

16.58

16.22

15.93

18

     

35.00

30.00

27.06

25.05

23.38

21.99

20.85

19.93

19.18

18.60

18.16

17.85

17.66

17.58

17.58

17.03

16.58

16.22

19

       

35.00

30.00

27.06

25.05

23.38

21.99

20.85

19.93

19.18

18.60

18.16

17.85

17.66

17.58

17.58

17.03

16.58

20

         

35.00

30.00

27.06

25.05

23.38

21.99

20.85

19.93

19.18

18.60

18.16

17.85

17.66

17.58

17.58

17.03

21

           

35.00

30.00

27.06

25.05

23.38

21.99

20.85

19.93

19.18

18.60

18.16

17.85

17.66

17.58

17.58

22

             

35.00

30.00

27.06

25.05

23.38

21.99

20.85

19.93

19.18

18.60

18.16

17.85

17.66

17.58

23

               

35.00

30.00

27.06

25.05

23.38

21.99

20.85

19.93

19.18

18.60

18.16

17.85

17.66

24

                 

35.00

30.00

27.06

25.05

23.38

21.99

20.85

19.93

19.18

18.60

18.16

17.85

25

                   

35.00

30.00

27.06

25.05

23.38

21.99

20.85

19.93

19.18

18.60

18.16

26

                     

35.00

30.00

27.06

25.05

23.38

21.99

20.85

19.93

19.18

18.60

27

                       

35.00

30.00

27.06

25.05

23.38

21.99

20.85

19.93

19.18

28

                         

35.00

30.00

27.06

25.05

23.38

21.99

20.85

19.93

29

                           

35.00

30.00

27.06

25.05

23.38

21.99

20.85

30

                             

35.00

30.00

27.06

25.05

23.38

21.99

31

                               

35.00

30.00

27.06

25.05

23.38

32

                                 

35.00

30.00

27.06

25.05

33

                                   

35.00

30.00

27.06

34

                                     

35.00

30.00

35

                                       

35.00

ಈ ಪಾಲಿಸಿಗಳಿಗೆ ಕಾರ್ಪೊರೇಷನ್ ನವರು ಪಾಲಿಸಿದಾರನಿಗೆ ಸಹಾಯವಾಗಲಿ ಎನ್ನುವ ದೃಷ್ಟಿಯಿಂದ, ಸ್ಪೆಷಲ್ ಸರಂಡರ್ ಮೊತ್ತವನ್ನು ಅದು ಹೆಚ್ಚಾಗಿದ್ದಲ್ಲಿ ಅದನ್ನು ನೀಡಬಹುದು.

ಪಾಲಿಸಿಯ  ಮೇಲೆ ನೀಡಲಾಗುವ ಸಾಲ ಸೌಲಭ್ಯ

ಈ ಪಾಲಿಸಿಯ ಮೇಲೆ ಸಾಲ ಸೌಲಭ್ಯ ಇರುತ್ತದೆ. ಆದರೆ, ಪಾಲಿಸಿಯು ಸರಂಡರ್ ಮೌಲ್ಯವನ್ನು ಹೊಂದಿರಬೇಕು. ಈ ಸಾಲವು ಕೂಡ ಕಾರ್ಪೊರೇಷನ್ ನವರು ಕಾಲ ಕಾಲಕ್ಕೆ ನಮೂದಿಸುವ ನಿಯಮ ಹಾಗೂ ನಿಬಂದನೆಗೆ ಒಳ ಪಟ್ಟಿರುತ್ತದೆ.

ಪಾಲಿಸಿಯ ಮೇಲೆ ತೆರಿಗೆಗಳು

ಭಾರತ ಸರ್ಕಾರ ಅಥವಾ ಇನ್ನೂ ಯಾವುದೇ ಸರ್ಕಾರದ ಸ್ವಾಮ್ಯತೆಗೆ ಒಳಪಟ್ಟ ಪ್ರಾದಿಕಾರಗಳು ಶಾಸನಬದ್ದವಾದ ತೆರಿಗೆಗಳನ್ನು ಜೀವ ವಿಮಾ ಪಾಲಿಸಿಗಳಿಗೆ ಅನ್ವಯವಾಗುವಂತೆ ಮಾಡಿದಲ್ಲಿ, ಅಂತಹ ತೆರಿಗೆಗಳು ಈ ಪಾಲಿಸಿಗೂ ಅನ್ವಯಿಸುತ್ತದೆ. ಹಾಗಾಗಿ ಪ್ರೀಮಿಯಂ ನೀಡುವಾಗ ಅವತ್ತಿನ ದಿನ ಯಾವ ತೆರಿಗೆಯು ಆ ಪಾಲಿಸಿಗೆ ಅನ್ವಯವಾಗುವುದೊ, ಅದನ್ನು ಸೇರಿಸಿ ನೀಡಬೇಕಾಗುತ್ತದ.

ಪ್ರೀಮಿಯಂ ಮೊತ್ತದ ಜೊತೆಗೆ, ಸರ್ವಿಸ್ ಟಾಕ್ಸ್ ಅನ್ನು ಕೂಡ ಕಟ್ಟಬೇಕಾಗುತ್ತದೆ. ಇದು, ಪ್ರೀಮಿಯಂ ಮೊತ್ತದ ಜೊತೆಗೆ ಸೇರದೆ ಸೆಪರೇಟ್ ಆಗಿ ನಮೂದಿಸಲಾಗುತ್ತದೆ. ಪ್ರೀಮಿಯಂ ಜೊತೆಯಲ್ಲಿ ನೀಡುವ ಯಾವ ತೆರಿಗೆಗಳನ್ನೂ, ಬೆನಿಫಿಟ್ ಲೆಕ್ಕಕ್ಕೆ ಸೇರಿಸುವುದಿಲ್ಲ.

ಪಾಲಿಸಿಗೆ ಫ್ರೀ ಲುಕ್ ಪೀರಿಯಡ್

ಇತರೆ ಜೀವ ವಿಮಾ ಪಾಲಿಸಿ ಗಳಲ್ಲಿ ನೀಡುತ್ತಿರುವ ಒಂದು ಸವಲತ್ತು ಈ ಪಾಲಿಸಿಯಲ್ಲೂ ಪಾಲಿಸಿದಾರನಿಗೆ ಲಭ್ಯವಿದೆ. ಅದೆಂದರೆ, ಫ್ರೀ ಲುಕ್ ಪೀರಿಯಡ್. ಈ ಫ್ರೀ ಲುಕ್ ಪೀರಿಯಡ್ ನಲ್ಲಿ, ಪಾಲಿಸಿದಾರನು, ಪಾಲಿಸಿಯ ದಾಖಲೆಗಳು ಅವನ ಕೈ ಸೇರಿದ 15 ದಿವಸಗಳಲ್ಲಿ ಅದರಲ್ಲಿ ನಮೂದಿಸಿರುವ ಎಲ್ಲ ನಿಯಮಗಳು ಹಾಗೂ ನಿಬಂದನೆಗಳನ್ನು ಓದಿ ಅದನ್ನು ಅರ್ಥ ಮಾಡಿಕೊಳ್ಳಲು ನೀಡುವ ಕಾಲಾವಕಾಶ ಆಗಿರುತ್ತದೆ. ಅಕಸ್ಮಾತ್ ಪಾಲಿಸಿದಾರನಿಗೆ ಇದರಲ್ಲಿರುವ ಯಾವುದೇ ನಿಯಮಗಳ  ಅಥವಾ ನಿಬಂದನೆಗಳ ಬಗ್ಗೆ ಒಪ್ಪಿಗೆ ಆಗದಿದ್ದಲ್ಲಿ, ಆ ಪಾಲಿಸಿಯನ್ನು ಆತನು 15 ದಿನಗಳ ಒಳಗೆ ಎಲ್ ಐ ಸಿ ಗೆ ಹಿಂದಿರುಗಿಸಬಹುದು. ಆದರೆ, ಆ ರೀತಿ ಹಿಂದಿರುಗಿಸಲು ಕಾರಣ ನೀಡಬೇಕಾಗುತ್ತದೆ. ಪಾಲಿಸಿಯು ಕಾರ್ಪೊರೇಷನ್ ಗೆ ತಲುಪಿದ ಕೂಡಲೇ ಆ ಪಾಲಿಸಿಯನ್ನು ರದ್ದು ಮಾಡಲಾಗುವುದು. ಆದರೆ, ಹಿಂದಿರುಗಿಸುವ ಮೊತ್ತದಲ್ಲಿ, ಪ್ರೊಪೋರ್ಷನೆಟ್ ರಿಸ್ಕ್ ಪ್ರೀಮಿಯಂ (ಬೇಸ್ ಪ್ಲಾನ್ ಮತ್ತು ರೈಡರ್ ಗೆ), ವೈದ್ಯಕೀಯ ಪರೀಕ್ಷೆಗೆ ಹಾಗೂ ಅದರ ರಿಪೋರ್ಟ್ ಗಳಿಗೆ ತಗುಲಿರಬಹುದಾದ  ವೆಚ್ಚ ವನ್ನು ಅದರಿಂದ ಕಳೆದು, ಉಳಿದ ಹಣವನ್ನು ಹಿಂದಿರುಗಿಸಲಾಗುವುದು

ಪಾಲಿಸಿಯಲ್ಲಿ ಸೇರಿಲ್ಲದೆ ಇರುವುದು

ಈ ಪಾಲಿಸಿಯಲ್ಲಿ ಪಾಲಿಸಿದಾರನ ಆತ್ಮಹತ್ಯೆ ಸೇರಿರುವುದಿಲ್ಲ. ಪಾಲಿಸಿದಾರನು ಆತ್ಮಹತ್ಯೆ ಮಾಡಿಕೊಂಡಲ್ಲಿ, ಪಾಲಿಸಿಯು ತನ್ನ  ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. .

 • ಪಾಲಿಸಿದಾರನು ಪಾಲಿಸಿಯ ರಿಸ್ಕ್ ಕವರೆಜ್ ಶುರು ಆದ ದಿವಸದಿಂದ  12 ತಿಂಗಳುಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ, ಅಂತಹ ಪಾಲಿಸಿಯು ಕಾರ್ಪೊರೇಷನ್ ಆ ಪಾಲಿಸಿಗೆ ನೀಡಬೇಕಾಗಿರುವ ಬೆನಿಫಿಟ್ ಗಳಿಗೆ ಅರ್ಹತೆ ಪಡುವುದಿಲ್ಲ. ಆದರೆ, ಅದುವರೆವಿಗೂ ನೀಡಿರುವ ಪ್ರೀಮಿಯಂ ಗಳ 80 % ಮೊತ್ತವನ್ನು ಕಾರ್ಪೊರೇಷನ್ ನಾಮಿನಿಗೆ ನೀಡುತ್ತದೆ. ಇದರಲ್ಲಿ, ಅನ್ವಯವಾಗುವ ತೆರಿಗೆ, ಎಕ್ಸ್ಟ್ರಾ ಪ್ರೀಮಿಯಂ ಗಳು ಹಾಗೂ ರೈಡರ್ ಪ್ರೀಮಿಯಂ ಗಳು ಇದ್ದಲ್ಲಿ, ಅದನ್ನು ಕಡಿತಗೊಳಿಸಿ ಉಳಿಕೆ ಹಣವನ್ನು ನೀಡಲಾಗುವುದು.
 • ಅದೇ ರೀತಿ, ಪಾಲಿಸಿದಾರನು ಪಾಲಿಸಿಯನ್ನು ರಿವೈವಲ್ ಮಾಡಿದ 12 ತಿಂಗಳುಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ, ಅಲ್ಲಿಯವರೆಗೂ ನೀಡಿರುವ ಪ್ರೀಮಿಯಂ ಮೊತ್ತದ 80 % ಮೊತ್ತ  ಅಥವಾ ಸರಂಡರ್ ಮೊತ್ತ ಇವುಗಳಲ್ಲಿ ಯಾವುದು ಹೆಚ್ಚೋ ಅದನ್ನು ನೀಡಲಾಗುವುದು. ಆದರೆ ಪಾಲಿಸಿಯು ಅಸ್ಥಿತ್ವದಲ್ಲಿ ಇರಬೇಕು.

ಈ ಮೇಲಿನ ಮೊತ್ತವನ್ನು ಬಿಟ್ಟು ಬೇರೆ ಯಾವುದೇ ಕ್ಲೈಮ್ ಗಳನ್ನು ಕಾರ್ಪೊರೇಷನ್ ನೀಡುವುದಿಲ್ಲ.