ಎಲ್ ಐ ಸಿ ನ್ಯೂ ಜೀವನ್ ನಿಧಿ ಪ್ಲಾನ್
 • ಅತ್ಯುತ್ತಮ ಯೋಜನೆಗಳು
 • ಸುಲಭ ಹೋಲಿಕೆ
 • ತಕ್ಷಣದ ಖರೀದಿ
PX step

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಹುಟ್ಟಿದ ದಿನಾಂಕ
ಆದಾಯ
| ಲಿಂಗ

1

2

ಫೋನ್ ಸಂಖ್ಯೆ
ಹೆಸರು
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಎಲ್ ಐ ಸಿ ನ್ಯೂ ಜೀವನ್ ನಿಧಿ ಪ್ಲಾನ್ ಒಂದು ಅತ್ಯಂತ ಸಮರ್ಥ ವಾರ್ಷಿಕ ವೇತನವನ್ನು (annuity) ಮುಂದುವರೆಸಿ (deferred) ಪಡೆದುಕೊಳ್ಳಬಹುದಾದ ಯೋಜನೆ ಆಗಿರುತ್ತದೆ ಹಾಗೂ ಬೋನಸ್ ಕೂಡ ಲಭ್ಯವಿದೆ. ಇದು ಒಂದು ರಕ್ಷಣೆಯ ಜೊತೆಗೆ ಉಳಿತಾಯವನ್ನು ಕೂಡ ಸೇರಿಸಿ ಸಂಯೋಜಿಸಿದ ಪ್ಲಾನ್ ಆಗಿರುತ್ತದೆ. ಈ ಪ್ಲಾನ್ ನಾನ್-ಲಿಂಕ್ಡ್ ಪ್ಲಾನ್ ಆಗಿದ್ದು, ಪಾಲಿಸಿದಾರನಿಗೆ ಲೈಫ್ ರಿಸ್ಕ್ ಕವರೆಜ್ ನೀಡುತ್ತದೆ. ಈ ಪ್ಲಾನ್ ಅಡಿಯಲ್ಲಿ, ಪಾಲಿಸಿದಾರನು  ತನ್ನ ನಿವೃತ್ತಿ ಆದ ನಂತರದ ಜೀವನದಲ್ಲಿ ಒಂದು ಖಚಿತ ಮೊತ್ತವನ್ನು ಪಡೆಯಲು ಸಹಾಯ ಮಾಡುತ್ತದೆ.  

ಎಲ್ ಐ ಸಿ ನ್ಯೂ ಜೀವನ್ ನಿಧಿ ಪ್ಲಾನ್ – ವಿವರ

 • ಎಲ್ ಐ ಸಿ ನ್ಯೂ ಜೀವನ್ ನಿಧಿ ಪ್ಲಾನ್ ಒಂದು ಸಾಂಪ್ರದಾಯಿಕ ಹಾಗೂ ನಿಗದಿತ ಸಮಯಕ್ಕೆ ಒಂದು ಖಚಿತ ಮೊತ್ತವನ್ನು ನೀಡುವ ಪ್ಲಾನ್ ಆಗಿರುತ್ತದೆ.
 • ಇದು ಪಾಲಿಸಿದಾರನಿಗೆ ರಕ್ಷಣೆ  ಮತ್ತು ಉಳಿತಾಯ ಎರಡನ್ನೂ ಒಟ್ಟಿಗೆ ನೀಡುತ್ತದೆ.
 • ಪಾಲಿಸಿಯ ಮುಂದುವರಿಕೆ ಸಮಯದಲ್ಲಿ (deferred ಪೀರಿಯಡ್) ಪಾಲಿಸಿದಾರನಿಗೆ ಡೆತ್ ಕವರ್ ಹಾಗೂ ಜೀವಂತವಾಗಿದ್ದಲ್ಲಿ, ಅಲ್ಲಿಂದ ಮುಂದೆ ವಾರ್ಷಿಕ ಆದಾಯ ಅಥವಾ ವೇತನ ವನ್ನು ಪೆನ್ಷನ್ ಸಿಸ್ಟಮ್ ಶುರು ಆಗುವವರೆಗೂ (date of vesting) ನೀಡುತ್ತದೆ
 • ಈ ಪಾಲಿಸಿಯು ಬೋನಸ್ ಅನ್ನು ಕೂಡ ನೀಡುತ್ತದೆ
 • ಮೊದಲ 5 ವರ್ಷಗಳು, ಪಾಲಿಸಿಯು ಗ್ಯಾರಂಟಿಡ್ ಅಡಿಷನ್ಸ್ ಮೊತ್ತವನ್ನು ನೀಡುತ್ತದೆ. 6 ನೇ ವರ್ಷದ  ನಂತರ ಕೊನೆಯವರೆಗೂ ಪಾಲಿಸಿಯು ಸಿಂಪಲ್ ರಿವರ್ಷನರಿ ಬೋನಸ್ ಹಾಗೂ ಅಂತಿಮ ಅಡಿಷನಲ್ ಬೋನಸ್ ಅನ್ನು ನೀಡುತ್ತದೆ.
 • ಹೆಚ್ಚಿನ ಸಮ್ ಅಶ್ಶುರ್ಡ್ ಮೊತ್ತಕ್ಕೆ ಅನ್ವಯವಾಗುವ ರಿಯಾಯತಿ ದೊರೆಯುತ್ತದೆ.
 • ಈ ಪಾಲಿಸಿಯ ಜೊತೆಗೆ, ಎಲ್ ಈ ಸಿ ಯ ಸ್ವ ಇಚ್ಚೆಯಿಂದ ತೆಗೆದುಕೊಳ್ಳುವ ಆಕ್ಸಿಡೆಂಟಲ್ ಡೆತ್ ಮತ್ತು ಡಿಸ್ಎಬಿಲಿಟಿ ರೈಡರ್ ಅನ್ನು ಸೇರಿಸಿಕೊಳ್ಳಬಹುದು.

ಎಲ್ ಐ ಸಿ ನ್ಯೂ ಜೀವನ್ ನಿಧಿ ಪ್ಲಾನ್ – ಬೆನಿಫಿಟ್ ಗಳು

ಎಲ್ ಐ ಸಿ ನ್ಯೂ ಜೀವನ್ ನಿಧಿ ಪ್ಲಾನ್ ನಲ್ಲಿ ಕೂಡ ಇನ್ನುಳಿದ ಎಲ್ ಐ ಸಿ ಪಾಲಿಸಿಗಳಲ್ಲಿ ಇರುವಂತೆ ಬೆನಿಫಿಟ್ ಗಳು ಇದೆ. ಅವುಗಳ ವಿವರ ಈ ಕೆಳ ಕಂಡಂತಿದೆ.

ಪೆನ್ಷನ್ ಸಿಸ್ಟಮ್ ಶುರು ಆಗುವವರೆಗಿನ (vesting) ಬೆನಿಫಿಟ್

ಪಾಲಿಸಿಯು ಚಾಲ್ತಿಯಲ್ಲಿದ್ದು, vesting ಮಾಡಿದಲ್ಲಿ, ಪಾಲಿಸಿದಾರನಿಗೆ ಈ ಕೆಳಗಿನ ಮೊತ್ತ ಲಭ್ಯವಾಗುತ್ತದೆ

ಪಾಲಿಸಿದಾರನಿಗೆ ಸಿಗುವ ಒಟ್ಟು ಮೊತ್ತ = [ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ + ಅದುವರೆಗೂ ಸೇರಿರಬಹುದಾದ  ಗ್ಯಾರಂಟಿಡ್ ಅಡಿಷನ್ಸ್ + ವೆಸ್ಟೆಡ್ ಸಿಂಪಲ್ ರಿವರ್ಷನರಿ ಬೋನಸ್ + ಅಂತಿಮ ಅಡಿಷನಲ್ ಬೋನಸ್]

ಈ ಬೆನಿಫಿಟ್ ಅನ್ನು ಉಪಯೋಗಿಸಿಕೊಳ್ಳಲು, ಈ ಕೆಳಗಿನ ಎರಡು ಆಪ್ಶನ್ ಗಳು ಪಾಲಿಸಿದಾರನಿಗೆ ದೊರಕುತ್ತದೆ. ಅದರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು.

 1. ಪಾಲಿಸಿದಾರನು ತಕ್ಷಣವೇ ಈ ಬೆನಿಫಿಟ್ ನಿಂದ ದೊರಕುವ ಮೊತ್ತವನ್ನು ಅನುಯಿಟಿ ಮೊತ್ತವವೆಂದು ಪರಿಗಣಿಸಿ ಅದನ್ನು ಕೊಳ್ಳುವುದು - ಪಾಲಿಸಿದಾರನಿಗೆ, vesting ನಿಂದ ಬರುವ ಮೊತ್ತವನ್ನು ಆದಾಯ ತೆರಿಗೆಯ ಆಕ್ಟ್ ಪ್ರಕಾರ ಅನ್ವಯವಾಗುವ ಹಾಗೂ ಅನುಮತಿಸಿರುವ ಮೊತ್ತವನ್ನು ಕಮ್ಯೂಟ್ ಮಾಡುವ ಅವಕಾಶವು ಇರುತ್ತದೆ. ಆ ರೀತಿ ಕಮ್ಯೂಟ್ ಮಾಡಿದ ನಂತರ ಉಳಿದಿರುವ ಪೂರ್ತಿ ಮೊತ್ತವನ್ನು ಅಥವಾ vesting ಮಾಡಿದಾಗ ಬಂದಿರುವ ಪೂರ್ತಿ ಮೊತ್ತವನ್ನು ಪಾಲಿಸಿದಾರನು ಆ ದಿವಸದಲ್ಲಿ ಅನ್ವಯ ಆಗುವ ಅನುಯಿಟಿ ರೇಟ್ಸ್ ಪ್ರಕಾರ ಅನುಯಿಟಿ ರೀತಿಯಲ್ಲಿ  ಕೊಂಡುಕೊಳ್ಳಬಹುದು. ಆದಾಯ ತೆರಿಗೆ ಆಕ್ಟ್ 1938 ರ ಪ್ರಕಾರ ಅನುಯಿಟಿ ಮೊತ್ತವನ್ನು ನಿಗದಿ ಪಡಿಸಲಾಗಿದ್ದು, ಅದರ ಪ್ರಕಾರ ಅನುಯಿಟಿ ಯನ್ನು ಕೊಂಡು ಕೊಂಡ ಮೇಲೆ ಇನ್ನೂ ಹಣವು ಉಳಿದಿದ್ದಲ್ಲಿ ಮಾತ್ರ ಪಾಲಿಸಿದಾರನಿಗೆ ಕಮ್ಯೂಟ್ ಮಾಡುವ ಅವಕಾಶ ಇರುತ್ತದೆ. ಪಾಲಿಸಿದಾರನಿಗೆ ಬಂದಿರುವ ಒಟ್ಟು ಮೊತ್ತವು, ಅನುಯಿಟಿಯನ್ನು ಕೊಂಡು ಕೊಳ್ಳಲು ಬೇಕಾಗಿರುವ ಕನಿಷ್ಠ ಮೊತ್ತಕ್ಕಿಂತ ಕಡಿಮೆ ಇದ್ದಲ್ಲಿ, ಅಂತಹ ಪಾಲಿಸಿಗೆ ಅಲ್ಲಿಯವರೆಗೂ ಸೇರಿರುವ ಒಟ್ಟು ಮೊತ್ತವನ್ನು ಲಂಪ್ ಸಮ್ ಮೊತ್ತವಾಗಿ ನೀಡಲಾಗುವುದು. ಅನುಯಿಟಿ ಯನ್ನು, ಕೇವಲ ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯ ದಿಂದಲೇ ಪಡೆಯಬೇಕು. 

ಅಥವಾ 

 1. ಎಲ್ ಐ ಸಿಯ ಬೇರೆ ಯಾವುದಾದರೂ ಸಿಂಗಲ್ ಪ್ರೀಮಿಯಂ deferred ಪೆನ್ಷನ್ ಪ್ಲಾನ್ ಅನ್ನು ಕೊಂಡು ಕೊಳ್ಳುವುದು - ಈ ಅಪ್ಶನ್ ನಲ್ಲಿ ಪಾಲಿಸಿದಾರನು ತನಗೆ vesting ಮಾಡಿ ಬಂದಿರುವ ಪೂರ್ತಿ ಮೊತ್ತವನ್ನು  ಒಂದು ಸಿಂಗಲ್ ಪ್ರೀಮಿಯಂ deferred ಪೆನ್ಷನ್ ಪ್ಲಾನ್ ನಲ್ಲಿ ಹೂಡಬಹುದು. ಆದರೆ, ಆ ಪ್ಲಾನ್ ನ ಪ್ರಕಾರ ಇರುವ ಅರ್ಹತೆಗಳನ್ನು ಹೊಂದಿರಬೇಕು.

ಪಾಲಿಸಿದಾರನು ತಾನು ಪಡೆಯಲು ಬಯಸುವ ಮೇಲಿನ ಅಪ್ಶನ್ ಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು, ಎಲ್ ಐ ಸಿ ಗೆ ತನ್ನ ಅಂತಿಮ ಆಯ್ಕೆಯನ್ನು ಪಾಲಿಸಿಯು vesting ಆಗುವುದಕ್ಕೆ 6 ತಿಂಗಳಿನ ಮುಂಚೆಯೇ ತಿಳಿಸಿರಬೇಕು.

ಡೆತ್ ಬೆನಿಫಿಟ್

ಈ ಪಾಲಿಸಿಗೆ ಡೆತ್ ಬೆನಿಫಿಟ್ ಎರಡು ರೀತಿಯಲ್ಲಿ ದೊರೆಯುತ್ತದೆ. ಅವುಗಳನ್ನು ಕೆಳಗೆ ವಿವರಿಸಲಾಗಿದೆ.

ಪಾಲಿಸಿದಾರನ ಮರಣವು ಪಾಲಿಸಿಯ ಮೊದಲ 5 ವರ್ಷಗಳ ಒಳಗೆ ಆದಲ್ಲಿ

ಪಾಲಿಸಿಯು ಚಾಲ್ತಿಯಲ್ಲಿ ಇದ್ದಲ್ಲಿ, ಪಾಲಿಸಿದಾರ ಮರಣವು ಪಾಲಿಸಿಯನ್ನು ಕೊಂಡ ಮೊದಲ 5 ವರ್ಷಗಳ ಒಳಗೆ ಆದಲ್ಲಿ, ಅವನು ನಮೂದಿಸಿರುವ ನಾಮಿನಿಗೆ ಕೆಳ ಕಂಡ ರೀತಿಯಲ್ಲಿ ಬೆನಿಫಿಟ್ ಅನ್ನು ನೀಡಲಾಗುವುದು.

 • ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತದ ಜೊತೆಗೆ ಪಾಲಿಸಿಗೆ ಸೇರಿರಬಹುದಾದ ಗ್ಯಾರಂಟಿಡ್ ಆದಿಶನ್ ಮೊತ್ತವನ್ನು ಸೇರಿಸಿ ಒಂದು ಲಂಪ್ ಸಮ್ ಮೊತ್ತವಾಗಿ ನೀಡುವುದು ಅಥವಾ
 • ನಾಮಿನಿಯು ಒಪ್ಪಿದಲ್ಲಿ ಪೂರ್ಣ ಮೊತ್ತವನ್ನು ಅನುಯಿಟಿಯ ರೂಪದಲ್ಲಿ ನೀಡುವುದು ಅಥವಾ
 • ಸ್ವಲ್ಪ ಮೊತ್ತವನ್ನು ಲಂಪ್ ಸಮ್ ಮೊತ್ತವಾಗಿ ಹಾಗೂ ಉಳಿದ ಮೊತ್ತವನ್ನು ಅನುಯಿಟಿ ರೂಪದಲ್ಲಿ ನೀಡುವುದು

ಪಾಲಿಸಿದಾರನ ಮರಣವು ಪಾಲಿಸಿಯ 5 ವರ್ಷಗಳ ನಂತರ  ಆದಲ್ಲಿ

ಪಾಲಿಸಿಯು ಚಾಲ್ತಿಯಲ್ಲಿ ಇದ್ದಲ್ಲಿ, ಪಾಲಿಸಿದಾರ ಮರಣವು ಪಾಲಿಸಿಯನ್ನು ಕೊಂಡ 5 ವರ್ಷಗಳ ನಂತರ  ಆದಲ್ಲಿ, ಅವನು ನಮೂದಿಸಿರುವ ನಾಮಿನಿಗೆ ಕೆಳ ಕಂಡ ರೀತಿಯಲ್ಲಿ ಬೆನಿಫಿಟ್ ಅನ್ನು ನೀಡಲಾಗುವುದು.

 • ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತದ ಜೊತೆಗೆ ಪಾಲಿಸಿಗೆ ಸೇರಿರಬಹುದಾದ ಗ್ಯಾರಂಟಿಡ್ ಆದಿಶನ್ ಮೊತ್ತವನ್ನು ಹಾಗೂ ಸಿಂಪಲ್ ರಿವರ್ಷನರಿ ಬೋನಸ್ ಮತ್ತು ಅಂತಿಮ ಅಡಿಷನಲ್ ಬೋನಸ್ ಮೊತ್ತ ಇವೆಲ್ಲವನ್ನೂ ಸೇರಿಸಿ ಒಂದು ಲಂಪ್ ಸಮ್ ಮೊತ್ತವಾಗಿ ನೀಡುವುದು ಅಥವಾ
 • ನಾಮಿನಿಯು ಒಪ್ಪಿದಲ್ಲಿ ಪೂರ್ಣ ಮೊತ್ತವನ್ನು ಅನುಯಿಟಿಯ ರೂಪದಲ್ಲಿ ನೀಡುವುದು ಅಥವಾ
 • ಸ್ವಲ್ಪ ಮೊತ್ತವನ್ನು ಲಂಪ್ ಸಮ್ ಮೊತ್ತವಾಗಿ ಹಾಗೂ ಉಳಿದ ಮೊತ್ತವನ್ನು ಅನುಯಿಟಿ ರೂಪದಲ್ಲಿ ನೀಡುವುದು

ಪಾಲಿಸಿಯ ನಿಯಮದ ಪ್ರಕಾರ, ಪಾಲಿಸಿದಾರನಿಗೆ ನೀಡುವ ಡೆತ್ ಬೆನಿಫಿಟ್ ಮೊತ್ತವು ಆತನು ನೀಡಿರುವ ಪ್ರೀಮಿಯಂ ನ ಒಟ್ಟು ಮೊತ್ತಡ 105 % ಮೊತ್ತಕ್ಕಿಂತ ಕಡಿಮೆ ಇರುವುದಿಲ್ಲ. (ತೆರಿಗೆಗಳು, ಎಕ್ಷ್ತ್ರಾ ಪ್ರೀಮಿಯಂ ಹಾಗೂ ರೈಡರ್ ಪ್ರೇಮಿಜ್ಮನ್ನು ಹೊರತು ಪಡಿಸಿ)

ಅನುಯಿಟಿ ಮೊತ್ತವು ಅನುಯಿಟಿ ಪಡೆಯುವಾಗಿನ ದಿವಸದ ಅನುಯಿಟಿ ರೇಟ್ಸ್ ಹಾಗಿ ಅನುಯಿಟಿ ಲಂಪ್ ಸಮ್ ಮೊತ್ತದ ಮೇಲೆ ಅವಲಂಬಿತವಾಗುತ್ತದೆ.

ಗ್ಯಾರಂಟಿಡ್  ಅಡಿಷನ್ಸ್

ಪಾಲಿಸಿಯ ನಿಯಮದ ಪ್ರಕಾರ, ಪಾಲಿಸಿಯ ಮೊದಲ 5 ವರ್ಷಗಳವರೆಗೂ ಪ್ರತಿ ರೂ 1000 ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತಕ್ಕೆ, ರೂ 50 ರಷ್ಟು ಗ್ಯಾರಂಟಿಡ್ ಅಡಿಶನ್ ಮೊತ್ತವು ಸೇರ್ಪಡೆ ಆಗುತ್ತಾ ಹೋಗುತ್ತದೆ.

ಪಾಲಿಸಿಯು ಕಾರ್ಪೊರೇಷನ್ ನ ಲಾಭ ಗಳಿಸುವಿಕೆಯಲ್ಲಿ ಬಾಗಿ ಆಗುವಿಕೆ  

ಪಾಲಿಸಿಯು ಚಾಲ್ತಿಯಲ್ಲಿ ಇದ್ದಲ್ಲಿ, ಕಾರ್ಪೊರೇಷನ್ ನ ಹಿಂದಿನ ಅನುಭವಕ್ಕೆ ಅನುಗುಣವಾಗಿ, ಎಲ್ ಐ ಸಿ ನ್ಯೂ ಜೀವನ್ ನಿಧಿ ಪಾಲಿಸಿಯು ಬಂಡವಾಳ ಹೂಡಿಕೆ ಹಾಗೂ ಲಾಭದಲ್ಲಿ ಬಾಗಿ ಆಗುತ್ತ. ಆದರೆ, ಈ ಲಾಭದಲ್ಲಿ ಬಾಗಿ ಆಗುವಿಕೆಯು ಪಾಲಿಸಿಯು 5 ವರ್ಷವನ್ನು ಮುಗಿಸಿ 6 ನೆಯ ವರ್ಷದ ನಂತರ ಮಾತ್ರವೇ. ಈ ಬಾಬ್ತು ಬಂದಿರುವ ಲಾಭವನ್ನು ಸಿಂಪಲ್ ರಿವರ್ಷನರಿ ಮೊತ್ತವೆಂದು ಕರೆದು ಆ ಮೊತ್ತವನ್ನು  ಪಾಲಿಸಿದಾರನಿಗೆ ನೀಡಲಾಗುವುದು. ಈ ಸಿಂಪಲ್ ರಿವರ್ಷನರಿ ಬೋನಸ್ ಮೊತ್ತವು ಕಾರ್ಪೊರೇಷನ್ ನ ನಿಯಮಾವಳಿಯ ಪ್ರಕಾರ ಹಾಗೂ ನಿಬಂದನೆಗಳಿಗೆ ಒಳ ಪಟ್ಟು ಘೋಷಿಸಲಾಗುತ್ತದೆ.

ಅದೇ ರೀತಿ ಪಾಲಿಸಿಗೆ ಬರಬಹುದಾದ ಅಂತಿಮ ಆಡಿಶನಲ್ ಬೋನಸ್ ಪಾಲಿಸಿಯು ಪಾಲಿಸಿದಾರನ ಮರಣವಾದಲ್ಲಿ ಅಥವಾ vesting ಆದ ವರ್ಷದಲ್ಲಿ ಕಾರ್ಪೊರೇಷನ್ ಘೋಷಿಸಿರುವ ಬೋನಸ್ ಆಗಿರುತ್ತದೆ. ಆದರೆ, ಪಾಲಿಸಿಯ ನಿಯಮದ ಪ್ರಕಾರ, ಪಾಲಿಸಿಯು ಕನಿಷ್ಠ ಟರ್ಮ್ ಅನ್ನು ಪೂರೈಸಿರಬೇಕು.

ಆಪ್ಶನಲ್ ಬೆನಿಫಿಟ್

ಆಪ್ಶನಲ್ ಬೆನಿಫಿಟ್ ರೂಪದಲ್ಲಿ, ಈ ಪಾಲಿಸಿಗೆ ಎಲ್ ಐ ಸಿ ಆಕ್ಸಿಡೆಂಟಲ್ ಡೆತ್ (ಆಕಸ್ಮಿಕ ಮರಣ) ಮತ್ತು ಡಿಸ್ಎಬಿಲಿಟಿ ಬೆನಿಫಿಟ್ (ಅಂಗ ವೈಕಲ್ಯ) ರೈಡರ್ ಅನ್ವಯವಾಗುತ್ತದೆ. ಇದನ್ನು ಕೊಂಡು ಕೊಳ್ಳಲು ಪ್ರೀಮಿಯಂ ಮೊತ್ತದ ಜೊತೆಗೆ ಹೆಚ್ಚುವರಿ ಮೊತ್ತವನ್ನು ಪಾಲಿಸಿದಾರನು ನೀಡಬೇಕಾಗುತ್ತದೆ.

ಪಾಲಿಸಿದಾರನು, ಪಾಲಿಸಿಯ ಆವದಿಯಲ್ಲಿ ಆಕಸ್ಮಿಕ ಮರಣ ಹೊಂದಿದಲ್ಲಿ ಅಂತಹ ಪಾಲಿಸಿಗೆ ಆಕ್ಸಿಡೆಂಟ್ ಡೆತ್ ಬೆನಿಫಿಟ್ ಸಮ್  ಅಶ್ಶುರ್ಡ್ ಮೊತ್ತವನ್ನು ಲಂಪ್ ಸಮ್ ರೂಪದಲ್ಲಿ ಬೇಸಿಕ್ ಪ್ಲಾನ್ ನ ಪ್ರಕಾರ ನೀಡಬೇಕಾಗಿರುವ ಡೆತ್ ಬೆನಿಫಿಟ್ ಜೊತೆಗೆ ಸೇರಿಸಿ ಒಟ್ಟು ಮೊತ್ತವನ್ನು ನೀಡಲಾಗುವುದು.

ಅದೇ ರೀತಿ, ಪಾಲಿಸಿದಾರನು ಅಪಘಾತದಿಂದ ಅಂಗ ವೈಕಲ್ಯವನ್ನು (ಡಿಸ್ಎಬಿಲಿಟಿ) ಹೊಂದಿದಲ್ಲಿ (ಅಪಘಾತವಾಗಿ 180 ದಿವಸಗಳ ಒಳಗೆ) ಅಂತಹ ಪಾಲಿಸಿದಾರನಿಗೆ, ಆಕ್ಸಿಡೆಂಟ್ ಬೆನಿಫಿಟ್ ಸಮ್ ಅಶ್ಶುರ್ಡ್ ಮೊತ್ತವನ್ನು ಸಮನಾದ ಕಂತುಗಳಲ್ಲಿ 10 ವರ್ಷಗಳು ನೀಡಲಾಗುವುದು.

ಮುಂದೆ ಪಾಲಿಸಿದಾರನು ಯಾವುದೇ ತರಹದ ಪ್ರೀಮಿಯಂ ಗಳನ್ನು  ನೀಡಬೇಕಾಗಿರುವುದಿಲ್ಲ.ಅಂದರೆ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತಕ್ಕೆ ಉಳಿದ ಸಮಯಕ್ಕೆ ನೀಡಬೇಕಾಗಿರುವ ಪ್ರೀಮಿಯಂಗಳು ಹಾಗೂ ರೈಡರ್ ನ ಸಲುವಾಗಿ ನೀಡಬೇಕಾಗಿರುವ ಪ್ರೀಮಿಯಂ ಗಳು ಎಲ್ಲವನ್ನೂ ವೈವ್ ಆಫ್ ಮಾಡಲಾಗುತ್ತದೆ. ಪಾಲಿಸಿಯು ಈ 10 ವರ್ಷಗಳಲ್ಲಿ ಪಾಲಿಸಿದಾರನ ಮರಣದಿಂದಾಗಲಿ ಅಥವಾ vesting ಆಗುವುದರಿಂದಾಗಲಿ ಕ್ಲೆಯಿಮ್ ಗೆ ಬಂದಲ್ಲಿ, ಮುಂದೆ ನೀಡಬೇಕಾಗಿರುವ ಡಿಸ್ಎಬಿಲಿಟಿ ಬೆನಿಫಿಟ್ ಕಂತುಗಳನ್ನು ಒಟ್ಟು ಮೊತ್ತವಾಗಿ ನೀಡಲಾಗುವುದು.

ಆಕ್ಸಿಡೆಂಟ್ ಬೆನಿಫಿಟ್ ಸಮ್ ಅಶ್ಶುರ್ಡ್ ಮೊತ್ತವು ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತಕ್ಕೆ ಸಮನಾಗಿ, ಕನಿಷ್ಠ ರೂ 1 ಲಕ್ಷ  ಅಥವಾ ಗರಿಷ್ಠ ರೂ 50 ಲಕ್ಷಗಳು ಮೀರದಂತೆ (ಪಾಲಿಸಿದಾರನ ಬಳಿ ಇರುವ ಎಲ್ಲ ಪಾಲಿಸಿಗಳ ಸಮ್ ಅಶ್ಶುರ್ಡ್ ಮೊತ್ತವನ್ನು ಸೇರಿಸಿ) ಆಪ್ಟ್ ಮಾಡಿಕೊಳ್ಳಬಹುದು. ಈ  ಬೆನಿಫಿಟ್ ಕೇವಲ ವೆಸ್ಟಿಂಗ್ ವಯಸ್ಸಿನ ವರೆಗೆ ಮಾತ್ರ ದೊರೆಯುತ್ತದೆ.

ಎಲ್ ಐ ಸಿ ನ್ಯೂ ಜೀವನ್ ನಿಧಿ ಪ್ಲಾನ್ – ಅರ್ಹತೆ ಹಾಗೂ ನಿಬಂದನೆಗಳು

ಎಲ್ ಐ ಸಿ ನ್ಯೂ ಜೀವನ್ ನಿಧಿ ಪ್ಲಾನ್ ಅನ್ನು ಪಡೆಯಲು ಈ ಕೆಳ ಕಂಡ ಅರ್ಹತೆಗಳು ಅನ್ವಯವಾಗುತ್ತವೆ,

ಕನಿಷ್ಠ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ

ನಿಯಮಿತ (ರೆಗ್ಯುಲರ್) ಪಾಲಿಸಿಗೆ – ರೂ 100000

ಸಿಂಗಲ್ ಪ್ರೀಮಿಯಂ ಪಾಲಿಸಿಗೆ – ರೂ 150000

ಗರಿಷ್ಠ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ

ಯಾವುದೇ ಮಿತಿ ಇಲ್ಲ. (ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತವು ರೂ 5000 ದ ಮಲ್ಟಿಪಲ್ಸ್ ಗಳಲ್ಲಿ ಇರಬೇಕು)

ಪಾಲಿಸಿಯನ್ನು ಪಡೆಯುವಾಗ ಪಾಲಿಸಿದಾರನ ಕನಿಷ್ಠ ವಯಸ್ಸು

20 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ)

ಪಾಲಿಸಿಯನ್ನು ಪಡೆಯುವಾಗ ಪಾಲಿಸಿದಾರನ ಗರಿಷ್ಠ ವಯಸ್ಸು

ಸಿಂಗಲ್ ಪ್ರೀಮಿಯಂ ಪಾಲಿಸಿಗೆ - 60 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ)

ನಿಯಮಿತ (ರೆಗ್ಯುಲರ್) ಪಾಲಿಸಿಗೆ – 58 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ)

ಡೆಫೆರ್ಮೆಂಟ್ ಪೀರಿಯಡ್

ಸಿಂಗಲ್ ಪ್ರೀಮಿಯಂ ಪಾಲಿಸಿಗೆ – 5 ವರ್ಷಗಳಿಂದ 35 ವರ್ಷಗಳು

ನಿಯಮಿತ (ರೆಗ್ಯುಲರ್) ಪಾಲಿಸಿಗೆ – 7 ವರ್ಷಗಳಿಂದ 35 ವರ್ಷಗಳು

ಪಾಲಿಸಿ ವೆಸ್ಟಿಂಗ್ ಆಗುವಾಗ ಪಾಲಿಸಿದಾರನ ಕನಿಷ್ಠ ವಯಸ್ಸು

55 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ)

ಪಾಲಿಸಿ ವೆಸ್ಟಿಂಗ್ ಆಗುವಾಗ ಪಾಲಿಸಿದಾರನ ಗರಿಷ್ಠ ವಯಸ್ಸು

65 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ)

   

ಪಾಲಿಸಿ ಪ್ರೀಮಿಯಂ ನೀಡುವಿಕೆ

ಈ ಪಾಲಿಸಿಗೆ ಪಾವತಿಸಬೇಕಾಗಿರುವ ಪ್ರೀಮಿಯಂ ಅನ್ನು ಈ ಕೆಳ ಕಂಡ ರೀತಿಯಲ್ಲಿ ನೀಡಬಹುದು.

 • ವರ್ಷಕ್ಕೊಮ್ಮೆ
 • ಅರ್ದ ವರ್ಷಕ್ಕೊಮ್ಮೆ
 • 3 ತಿಂಗಳಿಗೊಮ್ಮೆ
 • 1 ತಿಂಗಳಿಗೊಮ್ಮೆ (ECS ಅಥವಾ ಸ್ಮಬಲದ ಕಡಿತದ  ಮೂಲಕ)

ಗ್ರೇಸ್ ಪೀರಿಯಡ್

ಇತರೆ ಎಲ್ ಐ ಸಿ ಪಾಲಿಸಿಗಳಿಗೆ ದೊರೆಯುವ ರೀತಿಯಲ್ಲಿಯೇ, ಈ ಪಾಲಿಸಿಗೂ ಪ್ರೀಮಿಯಂ ನೀಡಲು ಗ್ರೇಸ್ ಪೀರಿಯಡ್ ಅನ್ವಯ ಆಗುತ್ತದೆ. ವಿವರ ಕೆಳಗಿನಂತಿದೆ.

ಪ್ರೀಮಿಯಂ ನೀಡುವಿಕೆ

ಗ್ರೇಸ್ ಪೀರಿಯಡ್

ವರ್ಷಕ್ಕೊಮ್ಮೆ

1 ತಿಂಗಳು ಅಥವಾ ಕನಿಷ್ಠ 30 ದಿವಸಗಳು

ಅರ್ದ ವರ್ಷಕ್ಕೊಮ್ಮೆ

1 ತಿಂಗಳು ಅಥವಾ ಕನಿಷ್ಠ 30 ದಿವಸಗಳು

3 ತಿಂಗಳಿಗೊಮ್ಮೆ

1 ತಿಂಗಳು ಅಥವಾ ಕನಿಷ್ಠ 30 ದಿವಸಗಳು

1 ತಿಂಗಳಿಗೊಮ್ಮೆ

15 ದಿವಸಗಳು

ಮೇಲ್ಕಂದ, ಗ್ರೇಸ್ ಪೀರಿಯಡ್ ಆವದಿಯಲ್ಲೂ ಕೂಡ ಪಾಲಿಸಿದಾರನು ಪ್ರೀಮಿಯಂ ಮೊತ್ತವನ್ನು ಕಟ್ಟದಿದ್ದಲ್ಲಿ, ಪಾಲಿಸಿಯು ಲ್ಯಾಪ್ಸ್ ಆಗುತ್ತದೆ.

ಪ್ರೀಮಿಯಂ ರೇಟ್ಸ್ ನ ಉದಾಹರಣೆ

ಪ್ರೀಮಿಯಂ ರೇಟ್ಸ್ ನ ಕೆಲವು ಉದಾಹರಣೆಯನ್ನು ಈ ಕೆಳಗೆ ನೀಡಲಾಗಿದೆ. ಈ ಕೆಳಗೆ ನೀಡಿರುವ ಪ್ರೀಮಿಯಂ  ರೇಟ್ಸ್ ಗಳು (ಸರ್ವಿಸ್ ಟಾಕ್ಸ್ ಬಿಟ್ಟು) ಪ್ರತಿ ರೂ 1000 ಸಮ್ ಅಶ್ಶುರ್ಡ್ ಮೊತ್ತಕ್ಕೆ ಅನವ್ಯ ಆಗುತ್ತದೆ. ಅದು ಪಾಲಿಸಿದಾರನು ಪಾಲಿಸಿ ಪಡೆಯುವಾಗಿನ ವಯಸ್ಸು ಹಾಗೂ ಡೆಫೆರ್ಮೆಂಟ್ ಅವದಿಯ ಮೇಲೆ ಅವಲಂಬಿತವಾಗಿದ್ದು  ವಿವರಗಳನ್ನು ಕೆಳಗಿನ ಟೇಬಲ್ ನಲ್ಲಿ ನೀಡಲಾಗಿದೆ.

ಸಿಂಗಲ್ ಪ್ರೀಮಿಯಂ ಆಗಿದ್ದಲ್ಲಿ

ಪಾಲಿಸಿದಾರನ ವಯಸ್ಸು – ಪಾಲಿಸಿ ಕೊಳ್ಳುವಾಗ

ಡೆಫೆರ್ಮೆಂಟ್ ಅವದಿ

10 ವರ್ಷಗಳು

20 ವರ್ಷಗಳು

30 ವರ್ಷಗಳು

25 ವರ್ಷಗಳು

-

-

435.80

35 ವರ್ಷಗಳು

-

612.00

456.15

45 ವರ್ಷಗಳು

852.55

632.80

-

ವಾರ್ಷಿಕ ಪ್ರೀಮಿಯಂ ಆಗಿದ್ದಲ್ಲಿ

ಪಾಲಿಸಿದಾರನ ವಯಸ್ಸು – ಪಾಲಿಸಿ ಕೊಳ್ಳುವಾಗ

ಡೆಫೆರ್ಮೆಂಟ್ ಅವದಿ

10 ವರ್ಷಗಳು

20 ವರ್ಷಗಳು

30 ವರ್ಷಗಳು

25 ವರ್ಷಗಳು

-

-

32.75

35 ವರ್ಷಗಳು

-

53.60

34.80

45 ವರ್ಷಗಳು

115.25

57.15

-

ಎಲ್ ಐ ಸಿ ನ್ಯೂ ಜೀವನ್ ನಿಧಿ ಪ್ಲಾನ್ – ಇತರೆ ಬೆನಿಫಿಟ್ ಗಳು

ಪಾಲಿಸಿ ಪ್ರೀಮಿಯಂ ನೀಡಿಕೆ ಮೇಲೆ ದೊರೆಯುವ ರಿಯಾಯತಿ

ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ – ಮೇಲೆ ನಮೂದಿಸಿರುವ ಮೊತ್ತದ ಮೇಲೆ 2 % ರಿಯಾಯತಿ

ಅರ್ದ ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ – ಮೇಲೆ ನಮೂದಿಸಿರುವ ಮೊತ್ತದ ಮೇಲೆ 1 % ರಿಯಾಯತಿ

3 ತಿಂಗಳಿಗೊಮ್ಮೆ ಹಾಗೂ ತಿಂಗಳಿಗೊಮ್ಮೆ ನೀಡುವ ಪ್ರೀಮಿಯಂ ಮೊತ್ತದ ಮೇಲೆ ಯಾವುದೇ ರಿಯಾಯತಿ ಇರುವುದಿಲ್ಲ.

ಪಾಲಿಸಿ ಸಮ್ ಅಶ್ಶುರ್ಡ್ ಮೊತ್ತದ ಮೇಲೆ ಸಿಗುವ ರಿಯಾಯತಿ

ರೆಗ್ಯುಲರ್ ಪ್ರೀಮಿಯಂ ನೀಡುವ ಪಾಲಿಸಿಗಳಿಗೆ

ಬೇಸಿಕ್ ಸಮ್ ಅಶ್ಶುರ್ಡ್ (BSA)

ರಿಯಾಯತಿ

ರೂ 1,00,000 ದಿಂದ 2,95,000 ದವರೆಗೆ

ಯಾವುದೇ ರಿಯಾಯತಿ ಇಲ್ಲ

ರೂ 3,00,000 ದಿಂದ ಮೇಲ್ಪಟ್ಟು  

BSA ಮೇಲೆ 2 %

ಸಿಂಗಲ್  ಪ್ರೀಮಿಯಂ ನೀಡುವ ಪಾಲಿಸಿಗಳಿಗೆ

ಬೇಸಿಕ್ ಸಮ್ ಅಶ್ಶುರ್ಡ್ (BSA)

ರಿಯಾಯತಿ

ರೂ 1,50,000 ದಿಂದ 2,95,000 ದವರೆಗೆ

ಯಾವುದೇ ರಿಯಾಯತಿ ಇಲ್ಲ

ರೂ 3,00,000 ದಿಂದ ಮೇಲ್ಪಟ್ಟು  

BSA ಮೇಲೆ 5 %

ಪಾಲಿಸಿ ರಿವೈವಲ್

ಪಾಲಿಸಿಯ ಮೇಲಿನ ಕಂತನ್ನು (ಪ್ರೀಮಿಯಂ ಅನ್ನು) ಗ್ರೇಸ್ ಪೀರಿಯಡ್ ಅವದಿಯಲ್ಲಿಯೂ ಕೂಡ ಕಟ್ಟದಿದ್ದಲ್ಲಿ, ಪಾಲಿಸಿಯು  ಲ್ಯಾಪ್ಸ್ ಆಗುತ್ತದೆ ಅಂದರೆ ಅದು ಸ್ತಗಿತಗೊಳ್ಳುತ್ತದೆ ಅಥವಾ ಮಾನ್ಯತೆ ಕಳೆದುಕೊಳ್ಳುತ್ತದೆ. ಈ ಪಾಲಿಸಿಯ ಅಡಿಯಲ್ಲಿ, ಆ ರೀತಿ ಲ್ಯಾಪ್ಸ್ ಆಗಿರುವ ಪಾಲಿಸಿಯನ್ನು ರಿವೈವಲ್ ಮಾಡುವ ಅವಕಾಶ ಇರುತ್ತದೆ. ಆದರೆ ಪಾಲಿಸಿದಾರನು ನೀಡದಿರುವ ಪ್ರೀಮಿಯಂ ದಿವಸದಿಂದ ಎರಡು ವರ್ಷಗಳ ಒಳಗೆ ಹಾಗೂ ಪಾಲಿಸಿಯು ಚಾಲ್ತಿಯಲ್ಲಿ ಇದ್ದಲ್ಲಿ, ರಿವೈವಲ್ ಮಾಡಿಕೊಳ್ಳಬಹುದು. ಅದುವರೆವಿಗೂ ಕಟ್ಟದೆ ಇರುವ ಪ್ರೀಮಿಯಂಗಳನ್ನು ಅದಕ್ಕೆ ಅನ್ವಯವಾಗುವ ಲೇಟ್ ಫೀ ಹಾಗೂ ಕಾರ್ಪೊರೇಷನ್ ನವರು ವಿಧಿಸುವ ಯಾವುದೇ ಬಡ್ಡಿ ಇದ್ದಲ್ಲಿ ಅದನ್ನೂ ಸಹಾ ಸೇರಿಸಿ ಒಟ್ಟು ಮೊತ್ತವನ್ನು ಕಾರ್ಪೊರೇಷನ್ ಗೆ ನೀಡಬೇಕಾಗುತ್ತದೆ. ಹಾಗೂ ಪಾಲಿಸಿ ಲ್ಯಾಪ್ಸ್ ಏಕೆ ಆಯಿತು ಎನ್ನುವುದರ ಬಗ್ಗೆ ಸೂಕ್ತ ಕಾರಣಗಳನ್ನು ನೀಡಬೇಕಾಗುತ್ತದೆ. ಮತ್ತು ಪಾಲಿಸಿಯ ಮುಂದುವರಿಕೆಯ ಬಗ್ಗೆ ಪುರಾವೆಯನ್ನು ಸಹಾ ನೀಡಬೇಕು.

ಸದರಿ ಪಾಲಿಸಿಯನ್ನು ರಿವೈವ್ ಮಾಡುವುದು ಅಥವಾ ಬಿಟ್ಟಿದ್ದು ಕಾರ್ಪೊರೇಷನ್ ಗೆ ಸೇರಿದ್ದು. ಹಾಗೂ ಪಾಲಿಸಿಯನ್ನು ಮೊದಲು ಪಾಲಿಸಿಗೆ ಅನ್ವಯವಾಗುತ್ತಿದ್ದ ನಿಯಮಗಳು ಮತ್ತು ನಿಬಂದನೆಗಳಿಗೆ ಅನುಸಾರವಾಗಿಯೇ ರಿವೈವ್ ಮಾಡುವುದೋ ಅಥವಾ ಹೊಸ ನಿಯಮಗಳು ಹಾಗೂ ನಿಬಂದನೆಗಳನ್ನು ವಿಧಿಸಿ ರಿವೈವ್ ಮಾಡುವುದೋ ಎನ್ನುವ ನಿರ್ದಾರವನ್ನು ಕಾರ್ಪೊರೇಷನ್ ತೆಗೆದುಕೊಳ್ಳುತ್ತದೆ. ಪಾಲಿಸಿಯು ಕಾರ್ಪೊರೇಷನ್ ನವರು ಒಪ್ಪಿಕೊಂಡು ಅದರ ಬಗ್ಗೆ ಪಾಲಿಸಿದಾರನಿಗೆ ಲಿಖಿತ ಮುಖೇನ ತಿಳಿಸಿದ ದಿವಸದಿಂದ ರಿವೈವಲ್ ಆಗಿದೆ ಎಂದು ಪರಿಗಣಿಸಬೇಕಾಗುತ್ತದೆ. ರೈಡರ್ ಗಳ ರಿವೈವಲ್ ಕೂಡ ಈ ರಿವೈವಲ್ ಜೊತೆಗೆ ಆಗುತ್ತದೆಯೇ ಹೊರತು, ಅದು ಸೆಪರೇಟ್ ಆಗಿ ಆಗುವುದಿಲ್ಲ.

ಪಾಲಿಸಿಯ ಪೈಡ್-ಅಪ್ ಮೌಲ್ಯ

ಈ ಪಾಲಿಸಿಯ ಪೈಡ್-ಅಪ್ ಮೌಲ್ಯವು ಡೆಫೆರ್ಮೆಂಟ್ ಆವದಿಯ ಮೇಲೆ ಅವಲಂಬಿತ ಆಗುತ್ತದೆ.

 • ಪಾಲಿಸಿಯಲ್ಲಿನ ಡೆಫೆರ್ಮೆಂಟ್ ಪೀರಿಯಡ್ 10 ವರ್ಷಕ್ಕಿಂತ ಕಮ್ಮಿ ಇದ್ದಲ್ಲಿ
 • ಪಾಲಿಸಿಯಲ್ಲಿನ ಡೆಫೆರ್ಮೆಂಟ್ ಪೀರಿಯಡ್ 10 ವರ್ಷಕ್ಕಿಂತ ಜಾಸ್ತಿ ಇದ್ದಲ್ಲಿ

ಪಾಲಿಸಿಯಲ್ಲಿನ ಡೆಫೆರ್ಮೆಂಟ್ ಪೀರಿಯಡ್ 10 ವರ್ಷಕ್ಕಿಂತ ಕಮ್ಮಿ ಇದ್ದಲ್ಲಿ

ಪಾಲಿಸಿಯಲ್ಲಿನ ಡೆಫೆರ್ಮೆಂಟ್ ಪೀರಿಯಡ್ 10 ವರ್ಷಕ್ಕಿಂತ ಕಮ್ಮಿ ಇದ್ದಲ್ಲಿ ಹಾಗೂ  ಪಾಲಿಸಿಯ ಮೇಲಿನ ಪ್ರೀಮಿಯಂ ಗಳನ್ನು 2 ವರ್ಷಗಳು ಸತತವಾಗಿ ಕಟ್ಟಿದ್ದಲ್ಲಿ, ಮತ್ತು ಮುಂದಿನ ಪ್ರೀಮಿಯಂ ಗಳನ್ನು ಕಾರಣಾಂತರದಿಂದ ಕಟ್ಟದೆ ಇದ್ದ ಪಕ್ಷದಲ್ಲಿ, ಪಾಲಿಸಿಯು ತನ್ನ ಮಾನ್ಯತೆಯನ್ನು ಕಳೆದುಕೊಳ್ಳುವುದಿಲ್ಲ. ಬದಲಿಗೆ ಆ ಪಾಲಿಸಿಯು ಪೈಡ್- ಅಪ್ ಪಾಲಿಸಿಯ ರೂಪದಲ್ಲಿ ಅವದಿಯ  ಕೊನೆಯವರೆಗೂ ಮುಂದುವರೆಯುತ್ತದೆ.

ಪಾಲಿಸಿಯಲ್ಲಿನ ಡೆಫೆರ್ಮೆಂಟ್ ಪೀರಿಯಡ್ 10 ವರ್ಷಕ್ಕಿಂತ ಜಾಸ್ತಿ ಇದ್ದಲ್ಲಿ

ಪಾಲಿಸಿಯಲ್ಲಿನ ಡೆಫೆರ್ಮೆಂಟ್ ಪೀರಿಯಡ್ 10 ವರ್ಷಕ್ಕಿಂತ ಜಾಸ್ತಿ ಇದ್ದಲ್ಲಿ ಹಾಗೂ ಪಾಲಿಸಿಯ ಮೇಲಿನ ಪ್ರೀಮಿಯಂ ಗಳನ್ನು 3 ವರ್ಷಗಳು ಸತತವಾಗಿ ಕಟ್ಟಿದ್ದಲ್ಲಿ, ಮತ್ತು  ಮುಂದಿನ ಪ್ರೀಮಿಯಂ ಗಳನ್ನು ಕಾರಣಾಂತರದಿಂದ ಕಟ್ಟದೆ ಇದ್ದ ಪಕ್ಷದಲ್ಲಿ, ಅಂತಹ ಪಾಲಿಸಿಯು ತನ್ನ ಮಾನ್ಯತೆಯನ್ನು ಕಳೆದುಕೊಳ್ಳುವುದಿಲ್ಲ. ಬದಲಿಗೆ ಆ ಪಾಲಿಸಿಯು ಪೈಡ್- ಅಪ್ ಪಾಲಿಸಿಯ ರೂಪದಲ್ಲಿ ಅವದಿಯ  ಕೊನೆಯವರೆಗೂ ಮುಂದುವರೆಯುತ್ತದೆ

ಹೀಗೆ ಪೈಡ್-ಅಪ್ ಮಾಡಿದ ಪಾಲಿಸಿಯ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ. ಇದನ್ನು ಪೈಡ್-ಅಪ್ ಸಮ್ ಅಶ್ಶುರ್ಡ್ ಎಂದು ಕರೆಯುತ್ತಾರೆ. ಈ ಪೈಡ್-ಅಪ್ ಸಮ್ ಅಶ್ಶುರ್ಡ್ ಮೊತ್ತವನ್ನು ಈ ರೀತಿ ಲೆಕ್ಕಿಸಲಾಗುತ್ತದೆ.

ಪೈಡ್-ಅಪ್ ಸಮ್ ಅಶ್ಶುರ್ಡ್ ಮೊತ್ತ = [ಬೇಸಿಕ್ ಸಮ್ ಅಶ್ಶುರ್ಡ್ x (ಅದುವರೆವಿಗೂ ನೀಡಿರುವ ಪ್ರೀಮಿಯಂ ಗಳು / ಒಟ್ಟು ನೀಡಬೇಕಾಗಿದ್ದ ಪ್ರೀಮಿಯಂ ಗಳು) ]

ಯಾವುದೇ ಪಾಲಿಸಿಯು, ಪೈಡ್-ಅಪ್ ಪಾಲಿಸಿಯಾಗಿ ಮುಂದುವರೆದಲ್ಲಿ, ಅಂತಹ ಪಾಲಿಸಿಯು ಮುಂದಿನ ಬಂಡವಾಳ ಹೂಡಿಕೆ ಹಾಗೂ ಅದರಿಂದ ಉತ್ಪನ್ನವಾಗಬಹುದಾದ ಲಾಭಗಳಿಗೆ ಅರ್ಹ ಆಗುವುದಿಲ್ಲ. ಆದರೆ, ಪಾಲಿಸಿಯ ನಿಯಮದ ಪ್ರಕಾರ, ವೆಸ್ಟೆಡ್ ಸಿಂಪಲ್ ರಿವರ್ಶನರಿ ಬೋನಸ್ ಗೆ ಅರ್ಹತೆ ಹೊಂದಿರುತ್ತದೆ. ಈ ಪಾಲಿಸಿಯ ಜೊತೆ ಸೇರಿಸಿರುವ ರೈಡರ್ ಗಳಿಗೆ ಯಾವುದೇ ಪೈಡ್-ಅಪ್ ಮೌಲ್ಯವು ಸೇರುವುದಿಲ್ಲ ಹಾಗೂ ರೈಡರ್ ಸಲುವಾಗಿ ಬರಬಹುದಾದ ಎಲ್ಲ ಬೆನಿಫಿಟ್ ಗಳು ರದ್ದಾಗುತ್ತವೆ.

ಈ ರೀತಿ ಬರುವ ಪೈಡ್-ಅಪ್ ಸಮ್ ಅಶ್ಶುರ್ಡ್ ಮೊತ್ತಕ್ಕೆ ಅಲ್ಲಿಯವರೆಗೂ ಸೇರಿರಬಹುದಾದ ಗ್ಯಾರಂಟಿಡ್ ಆದಿಶನ್ ಮೊತ್ತ ಹಾಗೂ ವೆಸ್ಟೆಡ್ ಸಿಂಪಲ್ ರಿವರ್ಷನರಿ ಬೋನಸ್ ಮೊತ್ತ (ಇದ್ದಲ್ಲಿ) ವನ್ನು ಸೇರಿಸಿ, ಒಟ್ಟು ಮೊತ್ತವನ್ನು ಪಾಲಿಸಿದಾರನಿಗೆ ಪಾಲಿಸಿಯನ್ನು ವೆಸ್ಟಿಂಗ್ ಮಾಡಿದಾಗ ಅಥವಾ ಅವನ ನಾಮಿನಿಗೆ ಅವನ ಮರಣವಾದಲ್ಲಿ (ಪಾಲಿಸಿಯ ಅವದಿಗೆ ಮುಂಚೆ) ನೀಡಲಾಗುತ್ತದೆ.

ಪಾಲಿಸಿದಾರನು ಅವದಿ ಮುಗಿಯುವ ಮೊದಲು ಮರಣವಾದಲ್ಲಿ, ಆತನ ನಾಮಿನಿಗೆ ಆ ಮೊತ್ತವನ್ನು ತೆಗೆದುಕೊಳ್ಳಲು ಈ ಕೆಳಗಿನ  ಆಪ್ಶನ್ ನೀಡಲಾಗುತ್ತದೆ.

 • ಆ ರೀತಿ ಎಲ್ ಐ ಸಿ ನೀಡುತ್ತಿರುವ ಒಟ್ಟಾರೆ ಹಣವನ್ನು ಲಂಪ್ ಸಮ್ ಮೊತ್ತವಾಗಿ ಸ್ವೀಕರಿಸುವುದು ಅಥವಾ
 • ಹಾಗೆ ಬಂದಿರುವ  ಪೂರ್ಣ ಮೊತ್ತವನ್ನು ಅನುಯಿಟಿ ರೀತಿಯಲ್ಲಿ ಪುನಹ ಇನ್ವೆಸ್ಟ್ ಮಾಡುವುದು ಅಥವಾ
 • ಆ ಮೊತ್ತದಲ್ಲಿ ಸ್ವಲ್ಪ ಅಂಶವನ್ನು ಅನುಯಿಟಿ ಯಲ್ಲಿ ಇನ್ವೆಸ್ಟ್ ಮಾಡಿ ಹಾಗೂ ಉಳಿದ ಮೊತ್ತವನ್ನು ಲಂಪ್ ಸಮ್ ಮೊತ್ತವಾಗಿ ತೆಗೆದುಕೊಳ್ಳುವುದು.

ಪಾಲಿಸಿಯ ಸರಂಡರ್ ಮೌಲ್ಯ

ಈ ಪಾಲಿಸಿಯ ನಿಯಮದ ಪ್ರಕಾರ, ಪಾಲಿಸಿಯನ್ನು ಸರಂಡರ್ ಮಾಡಲು ಅರ್ಹತೆ ಇರುತ್ತದೆ. ಪಾಲಿಸಿಯ ಸರಂಡರ್ ಮೌಲ್ಯವು ಪಾಲಿಸಿದಾರನು ಪ್ರೀಮಿಯಂ ನೀಡುವ ರೀತಿಯ ಮೇಲೆ ಅವಲಂಬಿಯವಾಗಿರುತ್ತದೆ. ಅಂದರೆ, ಈ ಪಾಲಿಸಿಯನ್ನು ಪಡೆಯುವಾಗ ಪಾಲಿಸಿದಾರನು ಎರಡು ರೀತಿಯಲ್ಲಿ ಪ್ರೀಮಿಯಂ ಅನ್ನು ನೀಡಿ ಪಡೆಯಬಹುದು. ಅದೆಂದರೆ,

 • ಸಿಂಗಲ್ ಪ್ರೀಮಿಯಂ  ಹಾಗೂ
 • ರೆಗ್ಯುಲರ್ ಪ್ರೀಮಿಯಂ ಗಳನ್ನು ನೀಡಿ

ಹಾಗಾಗಿ, ಸರಂಡರ್ ಮೌಲ್ಯವನ್ನು ನೀಡುವಾಗ, ಈ ಎರಡು ರೀತಿಯ ಪ್ರೀಮಿಯಂ ಗಳಿಗೆ ದೊರೆಯುವ ಅನುಕೂಲವನ್ನು ಕೆಳಗೆ ವಿವರಿಸಲಾಗಿದೆ.

ಸಿಂಗಲ್ ಪ್ರೀಮಿಯಂ ಪಾಲಿಸಿಗಳು

ಈ ಪಾಲಿಸಿಯನ್ನು ಯಾವಾಗ ಬೇಕಾದರೂ ಸರಂಡರ್ ಮಾಡಬಹುದು, ಹಾಗೆ ಮಾಡಿದಲ್ಲಿ, ಗ್ಯಾರಂಟಿಡ್ ಸರಂಡರ್ ಮೌಲ್ಯವು ಕೆಳ ಕಂಡಂತೆ ಇರುತ್ತದೆ.

 • ಪಾಲಿಸಿಯನ್ನು ಪಾಲಿಸಿದಾರನು ಪಾಲಿಸಿಯನ್ನು  ಪಡೆದ ದಿನದಿಂದ 3 ವರ್ಷದ ಒಳಗೆ ಸರಂಡರ್ ಮಾಡಿದಲ್ಲಿ – ಸಿಂಗಲ್ ಪ್ರೀಮಿಯಂ ನ 70 % ಮೊತ್ತವನ್ನು ಅನ್ವಯಿಸುವ ಟಾಕ್ಸ್ ಹಾಗೂ ಎಕ್ಷ್ತ್ರಾ ಪ್ರೀಮಿಯಂ ಇದ್ದಲ್ಲಿ ಅದನ್ನು ಕೂಡಾ ಕಳೆದು, ಉಳಿದ ಮೊತ್ತವನ್ನು ಪಾಲಿಸಿದಾರನಿಗೆ ನೀಡಲಾಗುತ್ತದೆ.
 • 3 ವರ್ಷಗಳ ನಂತರ ಆವದಿಯ ಒಳಗೆ ಯಾವಾಗ ಬೇಕಾದರೂ ಸರಂಡರ್ ಮಾಡಿದಲ್ಲಿ - ಸಿಂಗಲ್ ಪ್ರೀಮಿಯಂ ನ 90 % ಮೊತ್ತವನ್ನು ಅನ್ವಯಿಸುವ ಟಾಕ್ಸ್ ಹಾಗೂ ಎಕ್ಷ್ತ್ರಾ ಪ್ರೀಮಿಯಂ ಇದ್ದಲ್ಲಿ ಅದನ್ನು ಕೂಡಾ ಕಳೆದು, ಉಳಿದ ಮೊತ್ತವನ್ನು ಪಾಲಿಸಿದಾರನಿಗೆ ನೀಡಲಾಗುತ್ತದೆ.

ರೆಗ್ಯುಲರ್ ಪ್ರೀಮಿಯಂ ಪಾಲಿಸಿಗಳು

ರೆಗ್ಯುಲರ್ ಪ್ರೀಮಿಯಂ ಪಾಲಿಸಿಗಳನ್ನು ಸರಂಡರ್ ಮಾಡಿದಾಗ ಸಿಗುವ ಸರಂಡರ್ ಮೌಲ್ಯವು ಪಾಲಿಸಿಯ ಡೆಫೆರ್ಮೆಂಟ್ ಅವದಿಯ ಮೇಲೆ ಅವಲಂಬಿತವಾಗಿರುತ್ತದೆ. ಅದರ ಪ್ರಕಾರ,

 • ಡೆಫೆರ್ಮೆಂಟ್ ಅವದಿಯು 10 ವರ್ಷಕ್ಕಿಂತ ಕಮ್ಮಿ ಇರುವ ಪಾಲಿಸಿಗಳಿಗೆ – ಪಾಲಿಸಿಯ ಮೇಲಿನ ಎಲ್ಲಾ ಪ್ರೀಮಿಯಂ ಗಳನ್ನು 2 ವರ್ಷಗಳು ಸತತವಾಗಿ ಕಟ್ಟಿದ್ದಲ್ಲಿ ಅಂತಹ ಪಾಲಿಸಿಯನ್ನು ಸರಂದಾರ್ ಮಾಡಬಹುದು.
 • ಡೆಫೆರ್ಮೆಂಟ್ ಅವದಿಯು 10 ವರ್ಷಕ್ಕಿಂತ ಕಮ್ಮಿ ಇರುವ ಪಾಲಿಸಿಗಳಿಗೆ – ಪಾಲಿಸಿಯ ಮೇಲಿನ ಎಲ್ಲಾ ಪ್ರೀಮಿಯಂ ಗಳನ್ನು 3 ವರ್ಷಗಳು ಸತತವಾಗಿ ಕಟ್ಟಿದ್ದಲ್ಲಿ ಅಂತಹ ಪಾಲಿಸಿಯನ್ನು ಸರಂಡರ್  ಮಾಡಬಹುದು

ಗ್ಯಾರಂಟಿಡ್ ಸರಂಡರ್ ಮೊತ್ತವು, ಒಟ್ಟು ನೀಡಿರುವ ಪ್ರೀಮಿಯಂ ಗಳ ಮೊತ್ತದ ಒಂದು ಪರ್ಸೆಂಟೆಜ್ ಆಗಿರುತ್ತದೆ. ಈ ಪರ್ಸೆಂಟೆಜ್,  ಡೆಫೆರ್ಮೆಂಟ್ ಪೀರಿಯಡ್ ಹಾಗೂ ಪಾಲಿಸಿಯನ್ನು ಸರಂಡರ್ ಮಾಡಿದ ವರ್ಷದ ಮೇಲೆ ಆವಲಂಬಿತವಾಗಿರುತ್ತದೆ. ಈ ಗ್ಯಾರಂಟಿಡ್ ಸರಂಡರ್ ಮೌಲ್ಯದಲ್ಲಿ, ಅನ್ವಯವಾಗುವ ತೆರಿಗೆಗಳು, ಎಕ್ಷ್ತ್ರಾ ಪ್ರೀಮಿಯಂ ಗಳು  ಇದ್ದಲ್ಲಿ ಮತ್ತು ರೈಡರ್ ಪ್ರೀಮಿಯಂ ಗಳು ಇದ್ದಲ್ಲಿ, ಇವೆಲ್ಲವನ್ನೂ ಕಳೆದು ಉಳಿದ ಮೊತ್ತವನ್ನು ನೀಡಲಾಗುತ್ತದೆ.

ಇದರ ಜೊತೆಗೆ, ಬೇರೆ ಗ್ಯಾರಂಟಿಡ್ ಅಡಿಶನ್ ಗಳು ಇದ್ದಲ್ಲಿ ಮತ್ತು ವೆಸ್ಟೆಡ್ ರಿವರ್ಷನರಿ ಬೋನಸ್ ಇದ್ದಲ್ಲಿ, ಇವುಗಳನ್ನು ಸೇರಿಸಿ ಆ ಮೊತ್ತವನ್ನು ಸರಂಡರ್ ವ್ಯಾಲ್ಯು ಫ್ಯಾಕ್ಟರ್ ನಿಂದ ಗುಣಿಸಿದಾಗ ಬರುವ ಮೊತ್ತವನ್ನು ನೀಡಲಾಗುವುದು.

ಆದರೆ, ಸ್ಪೆಷಲ್ ಸರಂಡರ್ ವ್ಯಾಲ್ಯು ಮೊತ್ತವು ಸರಂಡರ್ ವ್ಯಾಲ್ಯು ಮೊತ್ತಕ್ಕಿಂತ ಜಾಸ್ತಿ ಇದ್ದಲ್ಲಿ, ಕಾರ್ಪೊರೇಷನ್ ಆ ಮೊತ್ತವನ್ನು ಪಾಲಿಸಿದಾರನಿಗೆ ನೀಡುತ್ತದೆ.

ಈ ರೀತಿ ಬಂದಿರುವ  ಸರಂಡರ್ ಮೌಲ್ಯದ ಮೊತ್ತವನ್ನು ಪಾಲಿಸಿಯ ನಿಯಮದ ಪ್ರಕಾರ ಪಾಲಿಸಿದಾರನು ಎರಡು ರೀತಿಯಲ್ಲಿ ಉಪಯೋಗಿಸಿಕೊಳ್ಳಬಹುದಾಗಿದೆ.

 • ಬಂದಿರುವ ಒಟ್ಟು ಸರಂಡರ್ ಮೌಲ್ಯದ ಮೊತ್ತದಲ್ಲಿ ಪಾಲಿಸಿದಾರನು ಆದಾಯ ತೆರಿಗೆ ಆಕ್ಟ್ ಪ್ರಕಾರ, ಅನ್ವಯವಾಗುವಷ್ಟು ಮೊತ್ತವನ್ನು ಕಮ್ಯೂಟ್ ಮಾಡಿಕೊಳ್ಳಬಹುದು. ಹಾಗೂ ಉಳಿದ ಹಣವನ್ನು ಅನುಯಿಟಿ ಕೊಳ್ಳಲು ಉಪಯೋಗಿಸಬಹುದು. ಆದರೆ, ಆ ಅನುಯಿಟಿ ಯು ಆ ದಿವಸ ಅನ್ವಯವಾಗುವ ಅನುಯಿಟಿ ರೇಟ್ಸ್ ಪ್ರಕಾರ ಇರುತ್ತದೆ. ಪಾಲಿಸಿದಾರನು ಅನುಯಿಟಿ ಯನ್ನು ಕೊಳ್ಳಲು ಬೇಕಾದ ಕನಿಷ್ಠ ಮೊತ್ತವು (ಸೆಕ್ಷನ್ 4, ಇನ್ಸೂರೆನ್ಸ್ ಆಕ್ಟ್ 1938 ರ ಪ್ರಕಾರ) ಇಲ್ಲದಿದ್ದಲ್ಲಿ, ಕಮ್ಯೂಟ್ ಮಾಡುವುದಕ್ಕೆ ಅವಕಾಶ ಇರುವುದಿಲ್ಲ. ಅದೇ ರೀತಿ, ಪಾಲಿಸಿದಾರನಿಗೆಬಂದಿರಬಹುದಾದ ಒಟ್ಟು ಸರಂಡರ್ ಮೌಲ್ಯದ ಮೊತ್ತವು, ಅನುಯಿಟಿ ಯನ್ನು ಕೊಳ್ಳಲು ಬೇಕಾಗುವ ಕನಿಷ್ಠ ಮೊತ್ತಕ್ಕೆ ಸರಿ ಸಮನಾಗಿ  ಇಲ್ಲದಿದ್ದಲ್ಲಿ, ಆ ಸರಂಡರ್ ಮೊತ್ತವನ್ನು ಒಂದು ಲಂಪ್ ಸಮ್ ಮೊತ್ತವಾಗಿ ಪಾಲಿಸಿದಾರನಿಗೆ ನೀಡಲಾಗುವುದು. ಅನುಯಿಟಿ ಯನ್ನು ಎಲ್ ಐ ಸಿ ಮುಖಾಂತರವೇ ಕೊಳ್ಳಬೇಕು.

ಅಥವಾ

 • ಪಾಲಿಸಿದಾರನು ಬೇರೆ ಯಾವುದೇ ಹೊಸ ಸಿಂಗಲ್ ಪ್ರೀಮಿಯಂ ಡೆಫೆರ್ಡ್ ಪೆನ್ಷನ್ ಯೋಜನೆಯನ್ನು ಈ ಮೊತ್ತಕ್ಕೆ ಸರಿ ಸಮನಾಗಿ ಕೊಳ್ಳಬಹುದು. ಹೀಗೆ ಸಿಂಗಲ್ ಪ್ರೀಮಿಯಂ ಪೆನ್ಷನ್ ಯೋಜನೆಯನ್ನು ಕೊಳ್ಳುವಾಗ. ಬಂದಿರುವಂತಹ ಪೂರ್ತಿ ಮೊತ್ತವನ್ನು ಆ ಪಾಲಿಸಿಗೆ ಸಂಬಂಧಪಟ್ಟ ಅರ್ಹತೆಗಳು ಇದ್ದಲ್ಲಿ ಕೊಳ್ಳಬಹುದು.

ಪಾಲಿಸಿಯ ಮೇಲೆ ಸಾಲ ಸೌಲಭ್ಯ

ಈ ಪಾಲಿಸಿಯ ಮೇಲೆ ಯಾವುದೇ ರೀತಿಯ ಸಾಲ ಸೌಲಭ್ಯವು ಇರುವುದಿಲ್ಲ.

ಅನ್ವಯವಾಗುವ ತೆರಿಗೆಗಳು

ಭಾರತ ಸರ್ಕಾರ ಅಥವಾ ಇನ್ನೂ ಯಾವುದೇ ಸರ್ಕಾರದ ಸ್ವಾಮ್ಯತೆಗೆ ಒಳಪಟ್ಟ ಪ್ರಾದಿಕಾರಗಳು ಶಾಸನಬದ್ದವಾದ ತೆರಿಗೆಗಳನ್ನು ಜೀವ ವಿಮಾ ಪಾಲಿಸಿಗಳಿಗೆ ಅನ್ವಯವಾಗುವಂತೆ ಮಾಡಿದಲ್ಲಿ, ಅಂತಹ ತೆರಿಗೆಗಳು ಈ ಪಾಲಿಸಿಗೂ ಅನ್ವಯಿಸುತ್ತದೆ. ಹಾಗಾಗಿ ಪ್ರೀಮಿಯಂ ನೀಡುವಾಗ ಅವತ್ತಿನ ದಿನ ಯಾವ ತೆರಿಗೆಯು ಆ ಪಾಲಿಸಿಗೆ ಅನ್ವಯವಾಗುವುದೊ, ಅದನ್ನು ಸೇರಿಸಿ ನೀಡಬೇಕಾಗುತ್ತದ.

ಪ್ರೀಮಿಯಂ ಮೊತ್ತದ ಜೊತೆಗೆ, ಸರ್ವಿಸ್ ಟಾಕ್ಸ್ ಅನ್ನು ಕೂಡ ಕಟ್ಟಬೇಕಾಗುತ್ತದೆ. ಇದು, ಪ್ರೀಮಿಯಂ ಮೊತ್ತದ ಜೊತೆಗೆ ಸೇರದೆ ಸೆಪರೇಟ್ ಆಗಿ ನಮೂದಿಸಲಾಗುತ್ತದೆ. ಪ್ರೀಮಿಯಂ ಜೊತೆಯಲ್ಲಿ ನೀಡುವ ಯಾವ ತೆರಿಗೆಗಳನ್ನೂ, ಬೆನಿಫಿಟ್ ಲೆಕ್ಕಕ್ಕೆ ಸೇರಿಸುವುದಿಲ್ಲ.

ಫ್ರೀ ಲುಕ್ ಪೀರಿಯಡ್

ಫ್ರೀ  ಲುಕ್ ಪೀರಿಯಡ್ ಬೆನಿಫಿಟ್ ಅನ್ನು ಈ ಪಾಲಿಸಿಗೂ ಕೂಡ ನೀಡಲಾಗಿದೆ. ಆದರ ಪ್ರಕಾರ, ಈ ಫ್ರೀ ಲುಕ್ ಪೀರಿಯಡ್ ನಲ್ಲಿ, ಪಾಲಿಸಿದಾರನು, ಪಾಲಿಸಿಯ ದಾಖಲೆಗಳು ಅವನ ಕೈ ಸೇರಿದ 15 ದಿವಸಗಳಲ್ಲಿ ಅದರಲ್ಲಿ ನಮೂದಿಸಿರುವ ಎಲ್ಲ ನಿಯಮಗಳು ಹಾಗೂ ನಿಬಂದನೆಗಳನ್ನು ಓದಿ ಅದನ್ನು ಅರ್ಥ ಮಾಡಿಕೊಳ್ಳಲು ನೀಡುವ ಕಾಲಾವಕಾಶ ಆಗಿರುತ್ತದೆ. ಅಕಸ್ಮಾತ್ ಪಾಲಿಸಿದಾರನಿಗೆ ಇದರಲ್ಲಿರುವ ಯಾವುದೇ ನಿಯಮಗಳ  ಅಥವಾ ನಿಬಂದನೆಗಳ ಬಗ್ಗೆ ಒಪ್ಪಿಗೆ ಆಗದಿದ್ದಲ್ಲಿ, ಆ ಪಾಲಿಸಿಯನ್ನು ಆತನು 15 ದಿನಗಳ ಒಳಗೆ ಎಲ್ ಐ ಸಿ ಗೆ ಹಿಂದಿರುಗಿಸಬಹುದು.

ಪಾಲಿಸಿಯಲ್ಲಿ ಸೇರಿಲ್ಲದೆ ಇರುವುದು

ಈ ಪಾಲಿಸಿಯಲ್ಲಿ ಪಾಲಿಸಿದಾರನ ಆತ್ಮಹತ್ಯೆ ಸೇರಿರುವುದಿಲ್ಲ. ಪಾಲಿಸಿದಾರನು ಆತ್ಮಹತ್ಯೆ ಮಾಡಿಕೊಂಡಲ್ಲಿ, ಪಾಲಿಸಿಯು ತನ್ನ  ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ.

ಸಿಂಗಲ್ ಪ್ರೀಮಿಯಂ ಪಾಲಿಸಿಗಳು

 • ಪಾಲಿಸಿದಾರನು ಪಾಲಿಸಿ ತೆಗೆದು ಕೊಂಡ ದಿವಸದಿಂದ  12 ತಿಂಗಳುಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ, ಅಂತಹ ಪಾಲಿಸಿಯು ಕಾರ್ಪೊರೇಷನ್ ಆ ಪಾಲಿಸಿಗೆ ನೀಡಬೇಕಾಗಿರುವ ಬೆನಿಫಿಟ್ ಗಳಿಗೆ ಅರ್ಹತೆ ಪಡುವುದಿಲ್ಲ. ಆದರೆ, ಅದುವರೆವಿಗೂ ನೀಡಿರುವ ಪ್ರೀಮಿಯಂ ಗಳ 90 % ಮೊತ್ತವನ್ನು ಕಾರ್ಪೊರೇಷನ್ ನಾಮಿನಿಗೆ ನೀಡುತ್ತದೆ. ಇದರಲ್ಲಿ, ಅನ್ವಯವಾಗುವ ತೆರಿಗೆ, ಎಕ್ಸ್ಟ್ರಾ ಪ್ರೀಮಿಯಂ ಗಳು ಹಾಗೂ ರೈಡರ್ ಪ್ರೀಮಿಯಂ ಗಳು ಇದ್ದಲ್ಲಿ, ಅದನ್ನು ಕಡಿತಗೊಳಿಸಿ ಉಳಿಕೆ ಹಣವನ್ನು ನೀಡಲಾಗುವುದು.

ರೆಗ್ಯುಲರ್ ಪ್ರೀಮಿಯಂ ಪಾಲಿಸಿಗಳು

 • ಪಾಲಿಸಿದಾರನು ಪಾಲಿಸಿ ತೆಗೆದು ಕೊಂಡ ದಿವಸದಿಂದ  12 ತಿಂಗಳುಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ, ಅಂತಹ ಪಾಲಿಸಿಯು ಕಾರ್ಪೊರೇಷನ್ ಆ ಪಾಲಿಸಿಗೆ ನೀಡಬೇಕಾಗಿರುವ ಬೆನಿಫಿಟ್ ಗಳಿಗೆ ಅರ್ಹತೆ ಪಡುವುದಿಲ್ಲ. ಆದರೆ, ಅದುವರೆವಿಗೂ ನೀಡಿರುವ ಪ್ರೀಮಿಯಂ ಗಳ 80 % ಮೊತ್ತವನ್ನು ಕಾರ್ಪೊರೇಷನ್ ನಾಮಿನಿಗೆ ನೀಡುತ್ತದೆ. ಇದರಲ್ಲಿ, ಅನ್ವಯವಾಗುವ ತೆರಿಗೆ, ಎಕ್ಸ್ಟ್ರಾ ಪ್ರೀಮಿಯಂ ಗಳು ಹಾಗೂ ರೈಡರ್ ಪ್ರೀಮಿಯಂ ಗಳು ಇದ್ದಲ್ಲಿ, ಅದನ್ನು ಕಡಿತಗೊಳಿಸಿ ಉಳಿಕೆ ಹಣವನ್ನು ನೀಡಲಾಗುವುದು
 • ಅದೇ ರೀತಿ, ಪಾಲಿಸಿಯನ್ನು ರಿವೈವಲ್ ಮಾಡಿದ 12 ತಿಂಗಳುಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ, ಅಲ್ಲಿಯವರೆಗೂ ನೀಡಿರುವ ಪ್ರೀಮಿಯಂ ಮೊತ್ತದ 80 % ಮೊತ್ತ  ಅಥವಾ ಸರಂಡರ್ ಮೊತ್ತ ಇವುಗಳಲ್ಲಿ ಯಾವುದು ಹೆಚ್ಚೋ ಅದನ್ನು ನೀಡಲಾಗುವುದು. ಆದರೆ ಪಾಲಿಸಿಯು ಅಸ್ಥಿತ್ವದಲ್ಲಿ ಇರಬೇಕು.

ಈ ಮೇಲಿನ ಮೊತ್ತವನ್ನು ಬಿಟ್ಟು ಬೇರೆ ಯಾವುದೇ ಕ್ಲೈಮ್ ಗಳನ್ನು ಕಾರ್ಪೊರೇಷನ್ ನೀಡುವುದಿಲ್ಲ.

- / 5 ( Total Rating)