ಎಲ್ ಐ ಸಿ ನ್ಯೂ ಮನೀ ಬ್ಯಾಕ್ ಪ್ಲಾನ್ 20 ಇಯರ್ಸ್
 • ಅತ್ಯುತ್ತಮ ಯೋಜನೆಗಳು
 • ಸುಲಭ ಹೋಲಿಕೆ
 • ತಕ್ಷಣದ ಖರೀದಿ
PX step

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಹುಟ್ಟಿದ ದಿನಾಂಕ (ದೊಡ್ಡ ಸದಸ್ಯ)
ಆದಾಯ
| ಲಿಂಗ

1

2

ಫೋನ್ ಸಂಖ್ಯೆ
ಹೆಸರು
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಈಗಿನ ಪರಿಸ್ತಿತಿಯನ್ನು ಗಮನಕ್ಕೆ ತೆಗೆದುಕೊಂಡಲ್ಲಿ, ವಿಮಾ ಯೋಜನೆಗಳನ್ನು ನೀಡುವ ಕಂಪನಿಗಳು ದೇಶದಲ್ಲಿ ಸಾಕಷ್ಟಿವೆ . ಇದರಲ್ಲಿ ಅನೇಕ ಪ್ರೈವೇಟ್ ಸೆಕ್ಟರ್ ಕಂಪನಿಗಳು ಇದ್ದು ಒಬ್ಬೊಬ್ಬರು ಒಂದೊಂದು ರೀತಿಯ ಹೊಸ ಯೋಜನೆಗಳನ್ನು ಜನರಿಗೆ ಪರಿಚಯಿಸುತ್ತಾರೆ. ಆದರೆ ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯ ಒಂದು ಸಂಪೂರ್ಣ ಭಾರತ ಸರ್ಕಾರದ ಸ್ವಾಮ್ಯತೆಗೆ ಒಳಪಟ್ಟ ಕಂಪನಿ ಆಗಿದ್ದು ಸುಮಾರು 62 ವರ್ಷಗಳಿಂದ ಅಸ್ಥಿತ್ವದಲ್ಲಿ ಇರುತ್ತದೆ ಇದು ಅತ್ಯಂತ ಹಳೆಯ ಹಾಗೂ ವಿಮಾ ಯೋಜನೆಯನ್ನು ಮೊದಲ ಬಾರಿಗೆ ಪರಿಚಯಿಸಿದ ಕಂಪನಿ. ಇದನ್ನು ಗಮನಕ್ಕೆ ತೆಗೆದುಕೊಂಡಲ್ಲಿ, ಭಾರತದ ನಾಗರೀಕರಿಗೆ ಮೊದಲಿನಿಂದಲೂ ಪರಿಚಯ ಇರುವಂತಹದ್ದಾಗಿದ್ದು, ಜನರು ಅವರ ಮೊದಲ ಆಯ್ಕೆಯಾಗಿ ಎಲ್ ಐ ಸಿ ಯನ್ನು ಆರಿಸುವುದರಲ್ಲಿ ಯಾವುದೇ ತರಹದ ಸಂದೇಹ ಇರುವುದಿಲ್ಲ. ಅದರ ಸ್ಥಾಪನೆ ಆದ ದಿವಸದಿಂದ, ಎಲ್ ಐ ಸಿ ಯು ಅನೇಕ ಹೊಸ ಹೊಸ ಹಾಗೂ ಜನರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ನೀಡುತ್ತಲೇ ಬಂದಿದೆ. ಇದು ಒಂದು ಸರ್ಕಾರದ ಅಧೀನದಲ್ಲಿರುವ ಸಂಸ್ಥೆ ಆದ್ದರಿಂದ, ಇಲ್ಲಿ ಲಾಭಕ್ಕಿಂತ, ಜನರಿಗೆ ವಿಮೆ ದೊರಕಿಸಿಕೊಟ್ಟು ಅವರ ಮುಂದಿನ ಜೀವನಕ್ಕೆ ಬೇಕಾಗುವ ರಕ್ಷಣೆ ಹಾಗೂ ಉಳಿತಾಯದಲ್ಲಿ ಬಾಗಿಯಾಗುವುದು ಅದರ ಮೊದಲ ಗುರಿ ಆಗಿರುತ್ತದೆ. ಇದರಿಂದ, ಎಲ್ ಐ ಸಿ ಯು ದೇಶದ ಎಲ್ಲ ಬಾಗದ ಹಾಗೂ ವರ್ಗದ ಜನರಿಗೂ ವಿಮೆಯನ್ನು ದೊರಕಿಸುವುದರಲ್ಲಿ ಅತ್ಯಂತ ಮುಂದಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎಲ್ ಐ ಸಿ ಯು ಜನರ ಅತ್ಯಂತ ನಂಬಿಕೆ ಉಳ್ಳ  ಕಂಪನಿ ಆಗಿರುತ್ತದೆ.

ಎಲ್ ಐ ಸಿ ಯ ನ್ಯೂ ಮನೀ ಬ್ಯಾಕ್ ಪ್ಲಾನ್ – 20 ಇಯರ್ಸ್ ಒಂದು ಲಾಭದಲ್ಲಿ ಬಾಗಿ ಆಗುವ ನಾನ್- ಲಿಂಕ್ಡ್ ಪ್ಲಾನ್ ಆಗಿದ್ದು ಅನೇಕ ವಿಶಿಷ್ಟತೆಗಳನ್ನು ಹೊಂದಿರುತ್ತದೆ, ಇದು ರಕ್ಷಣೆ ಹಾಗೂ ಉಳಿತಾಯ ಇವೆರಡನ್ನು ಒಟ್ಟಿಗೆ ನೀಡುವ ಯೋಜನೆ ಆಗಿದ್ದು, ಪಾಲಿಸಿದಾರನ ಕುಟುಂಬಕ್ಕೆ ಅವನ ಮರಣದ ನಂತರದ ಬೆನಿಫಿಟ್ (ಆಕಸ್ಮಿಕವಾಗಿ ಪಾಲಿಸಿದಾರನ ಮರಣ ಆದಲ್ಲಿ) ಮತ್ತು ಅವನಿಗೆ ಕಾಲ ಕಾಲಕ್ಕೆ ಸರ್ವೈವಲ್ ಬೆನಿಫಿಟ್ ಅನ್ನು ಪಾಲಿಸಿಯ ಮದ್ಯದಲ್ಲಿ ನೀಡುವ ಒಂದು ಯೋಜನೆ ಆಗಿರುತ್ತದೆ. ಈ ಒಂದು ರಕ್ಷಣೆ ಹಾಗೂ ಉಳಿತಾಯ ಇವೆರಡನ್ನು ಒಟ್ಟಿಗೆ ನೀಡುವುದರಿಂದ, ಪಾಲಿಸಿದಾರನ ಕುಟುಂಬವು ಮುಂದಿನ ದಿನಗಳಲ್ಲಿ ಅನಿರೀಕ್ಷಿತ ಘಟನೆಗಳಿಂದ ಉಂಟಾಗುವ ಆರ್ಥಿಕ ಸಮಸ್ಯೆಗಳನ್ನು ಸಾಕಷ್ಟು ಮಟ್ಟಿಗೆ ನಿಬಾಯಿಸುವಲ್ಲಿ ಸಹಾಯ ಮಾಡುತ್ತದೆ. ಅಂದರೆ, ಪಾಲಿಸಿದಾರನು ಆಕಸ್ಮಿಕವಾಗಿ ಪಾಲಿಸಿಯ ಅವದಿಯ ಒಳಗೆ ಮರಣ ಹೊಂದಿದಲ್ಲಿ, ಅವನ ಕುಟುಂಬಕ್ಕೆ ಆರ್ಥಿಕವಾಗಿ ಪಾಲಿಸಿಯ ನಿಯಮಾನುಸಾರ ನೀಡಬೇಕಾದ  ಹಣವನ್ನು ಕೊಟ್ಟು ಅವರ ಆರ್ಥಿಕ ಪರಿಸ್ತಿತಿಯಲ್ಲಿ ಸಾಕಷ್ಟು ಸುದಾರಣೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಅದೇ ಪಾಲಿಸಿದಾರನು ಆವದಿಯನ್ನು ಮುಗಿಸಿದಲ್ಲಿ, ಅವನಿಗೆ ಒಂದು ಖಚಿತವಾದ ಮೊತ್ತವನ್ನು ಮೆಚೂರಿಟೀ ಹಾಗೂ ಇತರೆ ಬೇನೆಫಿಟ್ ಗಳ ಮೂಲಕ ನೀಡುತ್ತದೆ.

ಎಲ್ ಐ ಸಿ ನ್ಯೂ ಮನೀ ಬ್ಯಾಕ್ ಪ್ಲಾನ್ 20 ಇಯರ್ಸ್ – ಅರ್ಹತೆಗಳು

ಎಲ್ ಐ ಸಿಯ ನ್ಯೂ ಮನೀ ಬ್ಯಾಕ್ ಪ್ಲಾನ್ 2೦ ಇಯರ್ಸ್ ಅನ್ನು ಪಡೆಯಲು ಈ ಕೆಳ ಕಂಡ ಅರ್ಹತೆ ಇರಬೇಕು.

ಬೇಸಿಕ್ ಪ್ಲಾನ್ ತೆಗೆದುಕೊಳ್ಳಲು

ಬೇಸಿಕ್ ಸಮ್ ಅಶ್ಶುರ್ಡ್ (ಕನಿಷ್ಠ ಮೊತ್ತ)

ರೂ 1,00,000

ಬೇಸಿಕ್ ಸಮ್ ಅಶ್ಶುರ್ಡ್ (ಗರಿಷ್ಠ ಮೊತ್ತ)

(ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತವು ರೂ 5000 ದ ಮಲ್ಯಿಪಲ್ಸ್ ನಲ್ಲಿ ಇರಬೇಕು)


ಯಾವುದೇ ಮಿತಿ ಇಲ್ಲ

ಪಾಲಿಸಿದಾರನಿಗೆ ಆಗಿರಬೇಕಾದ ಕನಿಷ್ಠ ವಯಸ್ಸು

13 ವರ್ಷಗಳು

ಪಾಲಿಸಿದಾರನಿಗೆ ಆಗಿರಬೇಕಾದ ಗರಿಷ್ಠ ವಯಸ್ಸು

50 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ)

ಪಾಲಿಸಿದಾರನಿಗೆ ಮೆಚೂರಿಟೀ ಮೊತ್ತವು ಪಡೆಯಬೇಕಾದಾಗ ಆಗಿರಬೇಕಾದ ಗರಿಷ್ಠ ವಯಸ್ಸು


70 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ)

ಪಾಲಿಸಿಯ ಅವದಿ (ಟರ್ಮ್)

20 ವರ್ಷಗಳು

ಪ್ರೀಮಿಯಂ ನೀಡಬೇಕಾದ ಅವದಿ (ಟರ್ಮ್)

15 ವರ್ಷಗಳು

ಎಲ್ ಐ ಸಿಯ ಆಕಸ್ಮಿಕ ಮರಣ ಹಾಗೂ ಅಂಗ ವೈಕಲ್ಯ ಬೆನಿಫಿಟ್ ರೈಡರ್

ಕನಿಷ್ಠ ಸಮ್ ಅಶ್ಶುರ್ಡ್ - ಆಕಸ್ಮಿಕ ಮರಣದ ಬೆನಿಫಿಟ್ ಗಾಗಿ

ರೂ 1,00,000

ಗರಿಷ್ಠ  ಸಮ್ ಅಶ್ಶುರ್ಡ್ - ಆಕಸ್ಮಿಕ ಮರಣದ ಬೆನಿಫಿಟ್ ಗಾಗಿ

(ಆಕಸ್ಮಿಕ ಬೆನಿಫಿಟ್ ಸಮ್ ಅಶ್ಶುರ್ಡ್ ಮೊತ್ತವು ರೂ 5000 ದ ಮಲ್ಟಿಪಲ್ಸ್ ನಲ್ಲಿ ಇರಬೇಕಾಗುತ್ತದೆ)

ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತಕ್ಕೆ ಸಮನಾಗಿ,

ಆದರೆ ಈ ಸಮ್ ಅಶ್ಶುರ್ಡ್ ಮೊತ್ತವು ಗರಿಷ್ಠ ರೂ 100 ಲಕ್ಷಗಳನ್ನು ಮೀರುವ ಹಾಗಿಲ್ಲ. ಈ ಗರಿಷ್ಠ ಮೊತ್ತದಲ್ಲಿ, ಪಾಲಿಸಿದಾರನು ಆ ವರೆವಿಗೂ ತೆಗೆದು ಕೊಂಡಿರುವ ಎಲ್ಲ ವಿಮಾ ಯೋಜನೆಗಳು ಮತ್ತು ಯಾವುದೇ ಗ್ರೂಪ್ ವಿಮಾ ಯೋಜನೆಗಳು ಕೂಡ ಸೇರಿದ್ದು (ಅದರಲ್ಲಿ ಆಕಸ್ಮಿಕ ಮರಣದ ಬೆನಿಫಿಟ್ ಇದ್ದಲ್ಲಿ) ಈಗ ತೆಗೆದುಕೊಳ್ಳಲು ಇಚ್ಚಿಸಿರುವ ಯೋಜನೆಯು ಕೂಡ ಸೇರುತ್ತದೆ. (ಆಕಸ್ಮಿಕ ಬೆನಿಫಿಟ್ ಸಮ್ ಅಶ್ಶುರ್ಡ್ ಮೊತ್ತವು ರೂ 5000 ದ ಮಲ್ಟಿಪಲ್ಸ್ ನಲ್ಲಿ ಇರಬೇಕಾಗುತ್ತದೆ)

ಪಾಲಿಸಿದಾರನ ವಯಸ್ಸು (ಕನಿಷ್ಠ)

18 ವರ್ಷದ ಮೇಲ್ಪಟ್ಟು ಇರಬೇಕು.

ಪಾಲಿಸಿದಾರನ ವಯಸ್ಸು (ಗರಿಷ್ಟ)

ಪ್ರೀಮಿಯಂ ನೀಡುತ್ತಿರುವ ಸಮಯದಲ್ಲಿ, ಕವರೆಜ್ ಅನ್ನು ಪಾಲಿಸಿ ಅನ್ನಿವೇರ್ಸರಿ ಯ ಹೊತ್ತಿಗೆ ಸೇರಿಸಬಹುದು.

ಕವರೆಜ್ ಮುಕ್ತಾಯ  ಆಗುವ ವಯಸ್ಸು

70 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ)

ಪ್ರೀಮಿಯಂ ಗಳನ್ನು ನೀಡುವಿಕೆ

ಪ್ರೀಮಿಯಂ ಗಳನ್ನು ವರ್ಷಕ್ಕೊಮ್ಮೆ ಅಥವಾ ಅರ್ದ ವರ್ಷಕ್ಕೊಮ್ಮೆ ಅಥವಾ 3 ತಿಂಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆ ನೀಡಬಹುದು. ತಿಂಗಳಿಗೊಮ್ಮೆ ನೀಡುವ ಪ್ರೀಮಿಯಂ ಅನ್ನು ECS ಮೂಲಕವೇ ನೀಡಬೇಕು.

ಗ್ರೇಸ್ ಪೀರಿಯಡ್

ಈ ಪಾಲಿಸಿಯ ಅಡಿಯಲ್ಲಿ, ವಾರ್ಷಿಕ ಕಟ್ಟುವ ಕಂತಿಗೆ, ಅರ್ದ ವರ್ಷಕ್ಕೊಮ್ಮೆ ಕಟ್ಟುವ ಕಂತಿಗೆ ಹಾಗೂ 3 ತಿಂಗಳಿಗೊಮ್ಮೆ ಕಟ್ಟುವ ಕಂತಿಗೆ 30 ದಿವಸಗಳ ಅಥವಾ 1 ತಿಂಗಳಿನ ಗ್ರೇಸ್ ಪೀರಿಯಡ್ ಲಭ್ಯವಿರುತ್ತದೆ. ಅಂದರೆ, ಪಾಲಿಸಿದಾರನಿಗೆ ಯಾವುದೇ ಕಂತುಗಳನ್ನು ನೀಡಲು 30 ದಿನಗಳ ಕಾಲಾವಕಾಶ ಇರುತ್ತದೆ.

ಆದರೆ, ತಿಂಗಳಿಗೊಮ್ಮೆ ಕಟ್ಟುವ ಕಂತಿಗೆ, 15 ದಿನಗಳ ಕಾಲಾವಕಾಶವನ್ನು ನೀಡಲಾಗುವುದು.

ಪ್ರೀಮಿಯಂ ಮೊತ್ತದ ಟೇಬಲ್

ಕೆಳ ಕಂಡ ಟೇಬಲ್ ನಲ್ಲಿ, ಕೆಲವು ಪ್ರೀಮಿಯಂ ಮೊತ್ತಗಳನ್ನು ನೀಡಲಾಗಿದೆ. ಇದು ಪ್ರತಿ ರೂ 1000 ಸಮ್ ಅಶ್ಶುರ್ಡ್ ಮೊತ್ತಕ್ಕೆ ನೀಡಬೇಕಾದ ಹಣ. ಇದರಲ್ಲಿ ಅನ್ವಯವಾಗುವೆ ತೆರಿಗೆಗಳು ಸೇರಿರುವುದಿಲ್ಲ

ಪಾಲಿಸಿದಾರನ ವಯಸ್ಸು (ವರ್ಷಗಳಲ್ಲಿ)

ಪ್ರೀಮಿಯಂ ಮೊತ್ತ

20 ವರ್ಷಗಳು

78.00

30 ವರ್ಷಗಳು

79.10

40 ವರ್ಷಗಳು

82.95

45 ವರ್ಷಗಳು

92.05

ಮೇಲೆ ಕಾಣಿಸಿರುವ ಪ್ರೀಮಿಯಂ  ಮೊತ್ತದ ಪ್ರಕಾರ ಸಮ್ ಅಶ್ಶುರ್ಡ್ ಗೆ ವಾರ್ಷಿಕ ಪ್ರೀಮಿಯಂ – ಉದಾಹರಣೆ

ಪಾಲಿಸಿದಾರನ ವಯಸ್ಸು (ವರ್ಷಗಳಲ್ಲಿ)

ವಾರ್ಷಿಕ ಪ್ರೀಮಿಯಂ ಮೊತ್ತ – ರೂ 5 ಲಕ್ಷ ಸಮ್ ಅಶ್ಶುರ್ಡ್ ಗೆ

ವಾರ್ಷಿಕ ಪ್ರೀಮಿಯಂ ಮೊತ್ತ – ರೂ 10 ಲಕ್ಷ ಸಮ್ ಅಶ್ಶುರ್ಡ್ ಗೆ

20 ವರ್ಷಗಳು

ರೂ 39000

ರೂ 78000

30 ವರ್ಷಗಳು

ರೂ 39550

ರೂ 79100

40 ವರ್ಷಗಳು

ರೂ 41475

ರೂ 82950

ಪ್ರೀಮಿಯಂ ಗಳಿಗೆ ನೀಡುವ ರಿಯಾಯತಿ

ಪಾಲಿಸಿದಾರನಿಗೆ ಅವನು ನೀಡುವ ಪ್ರೀಮಿಯಂ ಗಳಿಗೆ ಈ ರೀತಿ ರಿಯಾಯತಿ ದೊರೆಯುತ್ತದೆ

ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ ಮೊತ್ತದಲ್ಲಿ (ಮೇಲೆ ಕಾಣಿಸಿರುವ) 2 % ರಿಯಾಯತಿ ದೊರೆಯುತ್ತದೆ

ಅರ್ದ ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ ಮೊತ್ತದಲ್ಲಿ (ಮೇಲೆ ಕಾಣಿಸಿರುವ) 1 % ರಿಯಾಯತಿ ದೊರೆಯುತ್ತದೆ

3 ತಿಂಗಳಿಗೊಮ್ಮೆ ಹಾಗೂ ಸಂಬಳದಿಂದ ಕಡಿತವಾಗುವ ಪ್ರೀಮಿಯಂ ಗಳಿಗೆ ಯಾವುದೇ ರಿಯಾಯತಿ ಇರುವುದಿಲ್ಲ

ಹೆಚ್ಚಿನ ಸಮ್ ಅಶ್ಶುರ್ಡ್ ಮೊತ್ತಕ್ಕೆ ದೊರೆಯುವ ರಿಯಾಯತಿ

ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ

ರಿಯಾಯತಿ

ರೂ 1,00,000 ದಿಂದ 1,95,000 ದವರೆಗೆ

ರಿಯಾಯತಿ ಇಲ್ಲ

ರೂ 2,00,000 ದಿಂದ 4,95,000 ದವರೆಗೆ

ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತದ  ಮೇಲೆ 2 % ರಿಯಾಯತಿ

ರೂ 5,00,000 ದ ಮೇಲ್ಪಟ್ಟು

ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತದ  ಮೇಲೆ 3 % ರಿಯಾಯತಿ

ಫ್ರೀ ಲುಕ್ ಪೀರಿಯಡ್

ಎಲ್ ಐ ಸಿ ಯ ಹಲವು ಇತರೆ ವಿಮಾ ಯೋಜನೆಗಳಿಗೆ ಅನ್ವಯವಾಗುವಂತೆ, ಈ ಪಾಲಿಸಿಗೂ ಫ್ರೀ ಲುಕ್ ಪೀರಿಯಡ್ ಲಭ್ಯವಿದೆ. ಇದರ ಪ್ರಕಾರ, 15 ದಿನದ ಫ್ರೀ ಲುಕ್ ಪೀರಿಯಡ್ ಇದ್ದು, ಈ ಸಮಯದಲ್ಲಿ, ಪಾಲಿಸಿದಾರನು ತನಗೆ  ನೀಡಿರುವ ಪಾಲಿಸಿ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಅದಕ್ಕೆ ಅನ್ವಯವಾಗುವ ಎಲ್ಲ ನಿಯಮಗಳು ಹಾಗೂ ನಿಬಂದನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಪಾಲಿಸಿಯ ದಾಖಲೆಯ ಪ್ರಕಾರ ಇರುವ ಯಾವುದೇ ನಿಯಮ ಅಥವಾ ನಿಬಂದನೆಯ ಬಗ್ಗೆ ಪಾಲಿಸಿದಾರನಿಗೆ ಒಪ್ಪಿಗೆ ಇಲ್ಲದಿದ್ದ ಪಕ್ಷದಲ್ಲಿ, ಈ ಫ್ರೀ ಲುಕ್ ಪೀರಿಯಡ್ ಆದ 15 ದಿವಸದ ಒಳಗೆ ಪಾಲಿಸಿಯನ್ನು ಹಿಂದಿರುಗಿಸುವ ಅವಕಾಶ ಇರುತ್ತದೆ. ಅವನು ಪಾಲಿಸಿಯನ್ನು ರದ್ದು ಮಾಡಲು ಎಲ್ ಐ ಸಿ ಯನ್ನು ಕೋರಬಹುದು. ಅಂತಹ ಸಂಧರ್ಭದಲ್ಲಿ, ಎಲ್ ಐ ಸಿ ಯು ಅವನು ನೀಡಿರುವ ಪ್ರೀಮಿಯಂ ಮೊತ್ತದಿಂದ ಅನ್ವಯವಾಗುವ ಕಡಿತಗಳನ್ನು ಮಾಡಿ ಉಳಿದ ಮೊತ್ತವನ್ನು ನೀಡುತ್ತದೆ.

ಎಲ್ ಐ ಸಿ ನ್ಯೂ ಮನೀ ಬ್ಯಾಕ್ ಪ್ಲಾನ್ – 20 ಇಯರ್ಸ್ ಯೋಜನೆಯ ಬೆನಿಫಿಟ್ ಗಳು

ಈ ಯೋಜನೆಯು ಪಾಲಿಸಿದಾರನಿಗೆ ಅನೇಕ ಬೆನಿಫಿಟ್ ಗಳನ್ನು ನೀಡುತ್ತದೆ. ಅದರ ವಿವರಗಳು ಈ ಕೆಳ ಕಂಡಂತಿವೆ

ಡೆತ್ ಬೆನಿಫಿಟ್

ಪಾಲಿಸಿದಾರನ ಮರಣವು ಯೋಜನೆಯ ಅವದಿಯ ಒಳಗೆ ಆದಲ್ಲಿ ಮತ್ತು ಪಾಲಿಸಿಯು ಆಸ್ತಿತ್ವದಲ್ಲಿ ಇದ್ದಲ್ಲಿ, ಡೆತ್ ಬೆನಿಫಿಟ್ ಎಂದು “ಸಮ್ ಅಶ್ಶುರ್ಡ್ ಆನ್ ಡೆತ್ “ ಹಾಗೂ ಸಿಂಪಲ್ ರಿವರ್ಷನರಿ ಬೋನಸ್ ಮತ್ತು ಅಂತಿಮ ಅಡಿಷನಲ್ ಬೋನಸ್ (ಅನ್ವಯವಾದಲ್ಲಿ) ಇವೆಲ್ಲವುಗಳನ್ನು ಸೇರಿಸಿ ನೀಡಲಾಗುವುದು. ಇದರಲ್ಲಿ ಸಮ್ ಅಶ್ಶುರ್ಡ್ ಮೊತ್ತವೆಂದರೆ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತದ 125% ಅಥವಾ ವಾರ್ಷಿಕ ಪ್ರೀಮಿಯಂ ಮೊತ್ತದ 10 ಪಟ್ಟು ಇವೆರಡರಲ್ಲಿ ಹೆಚ್ಚಿನದು. ಹಾಗೂ ಈ ಡೆತ್ ಬೆನಿಫಿಟ್ ಮೊತ್ತವು ಪಾಲಿಸಿದಾರನು ನೀಡಿರುವ ಮರಣದ ವರೆಗಿನ ಒಟ್ಟಾರೆ ಪ್ರೀಮಿಯಂ ಗಳ ಮೊತ್ತಕ್ಕಿಂತ 105% ಗಿಂತ ಕಮ್ಮಿ ಇರುವುದಿಲ್ಲ.

ಮೇಲೆ ತಿಳಿಸಿರುವ ಬೆನಿಫಿಟ್ ಗಳಲ್ಲಿನ ಪ್ರೀಮಿಯಂ ಗಳಲ್ಲಿ ಅನ್ವಯವಾಗುವ ತೆರಿಗೆಗಳು, ಎಕ್ಸ್ಟ್ರಾ ಪ್ರೀಮಿಯಂ (ಇದ್ದಲ್ಲಿ) ಹಾಗೂ ರೈಡರ್ ಪ್ರೀಮಿಯಂ ಗಳ ಮೊತ್ತವು ಸೇರಿರುವುದಿಲ್ಲ.

ಸರ್ವೈವಲ್ ಬೇನೆಫಿಟ್

ಪಾಲಿಸಿದಾರನು ಪಾಲಿಸಿಯ ಆವದಿಯಲ್ಲಿ ಜೀವಂತ ಇದ್ದಲ್ಲಿ, ಸರ್ವೈವಲ್ ಬೆನಿಫಿಟ್ ಎಂದು ಸಮ್ ಅಶ್ಶುರ್ಡ್ ಮೊತ್ತದ 20 % ಮೊತ್ತವನ್ನು, ಪಾಲಿಸಿಯ  5ನೇ, 10ನೇ, ಹಾಗೂ 15ನೇ ವರ್ಷದಲ್ಲಿ ನೀದಲಾಗುವುದು.

ಮೆಚೂರಿಟೀ ಬೆನಿಫಿಟ್

ಪಾಲಿಸಿದಾರನು ಪಾಲಿಸಿಯ ಪೂರ್ತಿ 2೦ ವರ್ಷದ ಅವದಿಯನ್ನು ಮುಗಿಸಿದಲ್ಲಿ, ಅವನಿಗೆ ಮೆಚೂರಿಟೀ ಬೆನಿಫಿಟ್ ಎಂದು ಸಮ್ ಅಶ್ಶುರ್ಡ್ ಮೊತ್ತದ ಉಳಿದ 40 % ಮೊತ್ತಕ್ಕೆ  ಸಿಂಪಲ್ ರಿವರ್ಷನರಿ ಬೋನಸ್ ಮೊತ್ತ ಹಾಗೂ ಅಂತಿಮ ಅಡಿಷನಲ್ ಬೋನಸ್ ಮೊತ್ತ (ಅನ್ವಯವಾದಲ್ಲಿ) ಸೇರಿಸಿ ನೀಡಲಾಗುವುದು. ಈ ಸಿಂಪಲ್ ರಿವರ್ಷನರಿ ಬೋನಸ್ ಮೊತ್ತವು, ಕಾರ್ಪೊರೇಷನ್ ತನ್ನ ಹಿಂದಿನ ಅನುಭವದ ಪ್ರಕಾರ ಕಾಲ ಕಾಲಕ್ಕೆ ಘೋಷಿಸುವ ಮೊತ್ತವಾಗಿರುತ್ತದೆ.

ಲಾಭದಲ್ಲಿ ಭಾಗಿ ಆಗುವಿಕೆ

ಈ ಪಾಲಿಸಿಯು ಕಾರ್ಪೊರೇಷನ್ ನ ಬಂಡವಾಳ ಹೂಡಿಕೆ ಯಲ್ಲಿ ಬಾಗಿಯಾಗಿದ್ದು, ಅದರಿಂದ ಬರುವ ಲಾಭಕ್ಕೂ ಅರ್ಹತೆ ಹೊಂದಿರುತ್ತದೆ. ಈ ಅರ್ಹತೆಯ ಕಾರಣ, ಈ ಪಾಲಿಸಿಯು ಕಾರ್ಪೊರೇಷನ್ ನವರು ಸಮಯಕ್ಕೆ ನಿಯಮಾನುಸಾರ ನೀಡುವ  ಸಿಂಪಲ್ ರಿವರ್ಷನರಿ ಬೋನಸ್ ಪಡೆಯಲು ಅರ್ಹತೆ ಹೊಂದಿರುತ್ತದೆ. ಆದರೆ, ಪಾಲಿಸಿಯು ಅಸ್ಥಿತ್ವದಲ್ಲಿ ಇರಬೇಕು.

ಅಂತಿಮ ಅಡಿಷನಲ್ ಬೋನಸ್ ಕೂಡ ಈ  ಪಾಲಿಸಿಯ ಅಡಿಯಲ್ಲಿ ಪಡೆಯಬಹುದು. ಆದರೆ, ಪಾಲಿಸಿಯು, ಅಸ್ತಿತ್ವದಲ್ಲಿದ್ದು, ಪಾಲಿಸಿಯು ಅವದಿ ಮುಗಿಸಿರಬೇಕು ಅಥವಾ ಪಾಲಿಸಿದಾರನ ಮರಣದ ನಂತರದ ಕ್ಲೆಯಿಮ್ ಆಗಿರಬೇಕು. ಮತ್ತು, ಪಾಲಿಸಿಯು ಕಾರ್ಪೊರೇಷನ್ ನಿಗದಿ ಪಡಿಸಿರುವ ಕನಿಷ್ಠ ಅವದಿಯನ್ನು ಪೂರೈಸಿರಬೇಕು

ಇಚ್ಚೆ ಪಟ್ಟಲ್ಲಿ ಬಳಸಿಕೊಳ್ಳುವ ಬೆನಿಫಿಟ್ (ಅಪ್ಶನಲ್ ಬೆನಿಫಿಟ್)

ಎಲ್ ಐ ಸಿ ಯ ಆಕಸ್ಮಿಕ ಮರಣ ಹಾಗೂ ಅಂಗ ವೈಕಲ್ಯ ಬೆನಿಫಿಟ್ ರೈಡರ್

ಈ ರೈಡರ್ ಕೆಳ ಕಂಡ ರೀತಿಯಲ್ಲಿ ಅನ್ವಯವಾಗುತ್ತದೆ

 • ಈ ರೈಡರ್ ಅನ್ನು ಪಾಲಿಸಿದಾರನು ಯಾವಾಗ ಬೇಕಾದರೂ ಅಸ್ಥಿತ್ವದಲ್ಲಿ ಇರುವ ಪಾಲಿಸಿಗೆ ಸೇರಿಸಿಕೊಳ್ಳಬಹುದು.
 • ಈ ರೈಡರ್ ಸೇರಿಸಲು, ಹೆಚ್ಚುವರಿ ಪ್ರೀಮಿಯಂ ಅನ್ನು ನೀಡಬೇಕಾಗುತ್ತದೆ.
 • ವಿಮಾ ಕವರೆಜ್ ಪಾಲಿಸಿಯ ಆವದಿಯವರೆಗೂ ದೊರೆಯುತ್ತದೆ. ಆದರೆ ಪಾಲಿಸಿಯ ಸಮ್ ಅಶ್ಶುರ್ಡ್ ಮೊತ್ತವು ಅಪಘಾತ ಆಗುವ ದಿವಸದಂದು ಆಸ್ತಿತ್ವದಲ್ಲಿ ಇರಬೇಕು.
 • ಅಪಘಾತ ಆಗಿ ಪಾಲಿಸಿದಾರನು ಮರಣ ಹೊಂದಿದಲ್ಲಿ, ಆ ಪಾಲಿಸಿಗೆ ಆಕಸ್ಮಿಕ  ಮರಣದ ಬೆನಿಫಿಟ್ ಹಾಗೂ ಅದರ ಜೊತೆಗೆ ಡೆತ್ ಬೆನಿಫಿಟ್ ಕೂಡ ಸಿಗುತ್ತದೆ.
 • ಪಾಲಿಸಿದಾರನು ಅಪಘಾತದಿಂದ ಶಾಶ್ವತವಾಗಿ ಅಂಗ ವೈಕಲ್ಯ (disability) ಹೊಂದಿದಲ್ಲಿ, ಆತನಿಗೆ ಅಪಘಾತ ದ ಸಮ್ ಅಶ್ಶುರ್ಡ್ ಮೊತ್ತವನ್ನು 10 ವರ್ಷಗಳ ಸಮನಾದ ಕಂತುಗಳ ರೂಪದಲ್ಲಿ ನೀಡಲಾಗುವುದು.
 • ಇದನ್ನು ಪಡೆಯಲು, ಪಾಲಿಸಿದಾರನು ಕಾರ್ಪೊರೇಷನ್ ಗೆ ಅಪಘಾತ ಆದ 180 ದಿನಗಳ ಒಳಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿರಬೇಕು.
 • ಅಪಘಾತದಿಂದ ಪಾಲಿಸಿದಾರನು ಅಂಗ ವೈಕಲ್ಯತೆ ಹೊಂದಿದಲ್ಲಿ, ಅವನು ಸಮ್ ಅಶ್ಶುರ್ಡ್ ಬಾಬ್ತು  ಮುಂದೆನೀಡಬೇಕಾಗಿರುವ ಎಲ್ಲ ತರಹದ ಪ್ರೀಮಿಯಂಗಳನ್ನು ಕಟ್ಟುವ ಹಾಗಿಲ್ಲ.
 • ಆದರೆ, ಪಾಲಿಸಿಯನ್ನು ಸರಂಡರ್ ಮಾಡಿದಲ್ಲಿ, ಆ ಪಾಲಿಸಿಯು ಸರಂಡರ್ ಮೌಲ್ಯವನ್ನು ಗಳಿಸಿದ್ದಲ್ಲಿ, ಹಾಗೂ ಈ ರೈಡರ್ ಅನ್ನು ಅದಕ್ಕೆ ಸೇರಿಸಿದ್ದಲ್ಲಿ, ನೀಡಿರುವ ಹೆಚ್ಚುವರಿ ಪ್ರೀಮಿಯಂ ಮೊತ್ತದ ಒಂದು ಅಂಶವನ್ನು ನೀಡಲಾಗುವುದು.

ಪಾಲಿಸಿ ರಿವೈವಲ್

ಪ್ರೀಮಿಯಂ ಅನ್ನು ಗ್ರೇಸ್ ಪೀರಿಯಡ್ ನಲ್ಲೂ ಕಟ್ಟದಿದ್ದಲ್ಲಿ ಪಾಲಿಸೀಯು  ಲ್ಯಾಪ್ಸ್ ಆಗುತ್ತದೆ. ಆದರೆ ಇದನ್ನು, ಪ್ರೀಮಿಯಂ ಕಟ್ಟಬೇಕಾದ ದಿನದ ಎರಡು ವರ್ಷದ ಒಳಗೆ ರಿವೈವಲ್ ಮಾಡಿಕೊಳ್ಳಬಹುದು. ಅದಕ್ಕೆ, ಪಾಲಿಸಿದಾರನು ರಿವೈವಲ್ ಮಾಡುವವರೆಗಿನ ಸಮಯದ ವರೆಗೂ ನೀಡಬೇಕಾದ ಎಲ್ಲ ಪ್ರೀಮಿಯಂ ಗಳನ್ನು ಅನ್ವಯವಾಗುವ ಬಡ್ಡಿ ಸೇರಿಸಿ ಪಾವತಿ ಮಾಡಬೇಕು.

ಈ ದರವು ಕಾರ್ಪೊರೇಷನ್ ನವರು ಕಾಲ ಕಾಲಕ್ಕೆ ನಿಗದಿ ಪಡಿಸುವ ಬಡ್ಡಿ ದರ ಅಥವಾ ಬೇರೆ ರೀತಿಯ ಮೊತ್ತಗಳನ್ನು ಸಹ ಒಳಗೊಂಡಿರುತ್ತದೆ. ಪಾಲಿಸಿಯನ್ನು ರಿವೈವ್ ಮಾಡುವಾಗ ಸೂಕ್ತವಾದ ಕಾರಣಗಳನ್ನು ನೀಡಬೇಕಾಗುತ್ತದೆ. ಹಾಗೂ ಮುಂದೆ ಪಾಲಿಸಿಯ insurability ಬಗ್ಗೆ ಪುರಾವೆಯನ್ನು ಕೂಡ ನೀಡಬೇಕಾಗುತ್ತದೆ.

ಕಾರ್ಪೊರೇಷನ್, ಪಾಲಿಸಿದಾರನು ಸಲ್ಲಿಸಿರುವ ಕಾರಣಗಳು ಮತ್ತು ಇತರೆ ವಿಷಯಗಳನ್ನು ಗಣನೆಗೆ ತಂದುಕೊಂಡು ಪಾಲಿಸಿಯ ಮೂಲ ಟರ್ಮ್ಸ್ ಪ್ರಕಾರವಾಗಿ ರಿವೈವ್ ಮಾಡುವುದೋ ಅಥವಾ ಟರ್ಮ್ಸ್ ಗಳನ್ನು ಬದಲಿಸಿ ರಿವೈವ್ ಮಾಡುವುದೋ ಅಥವಾ ಪಾಲಿಸಿಯ ರಿವೈವಲ್ ಒಪ್ಪದೆ ಇರುವುದೋ ಎನ್ನುವುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು. ಪಾಲಿಸಿಯ ರಿವೈವಲ್ ಚಾಲನೆಗೆ ಬರುವುದು, ಕಾರ್ಪೊರೇಷನ್ ಅದನ್ನು ಒಪ್ಪಿದ ದಿವಸದಿಂದ ಹಾಗೂ ಆ ಬಗ್ಗೆ ಅವನಿಗೆ ಸೂಕ್ತ ಆದೇಶ ನೀಡಿದ ದಿನದಿಂದ.

ಅದೇ ರೀತಿ ರೈಡರ್ ಗಳ ರಿವೈವಲ್ (ಬೇಕು ಎಂದು ಕೋರಿದ್ದಲ್ಲಿ) ಅದನ್ನು ಕೂಡ ಪಾಲಿಸಿಯ ರಿವೈವಲ್ ಜೊತೆಗೆ ಪರಿಗಣಿಸಲಾಗುವುದು

ಪೈಡ್-ಅಪ್ ಮೌಲ್ಯ

ಕೆಳ ಕಂಡ ಸಂಧರ್ಭದಲ್ಲಿ, ಈ ಪಾಲಿಸಿಯು ಪೈಡ್-ಅಪ್ ಪಾಲಿಸಿ ಎಂದು ಕರೆಸಿಕೊಳ್ಳುತ್ತದೆ.

ಪಾಲಿಸಿದಾರನು ಪಾಲಿಸಿಯ ಮೇಲೆ ನೀಡಬೇಕಾಗಿರುವ ಕಂತುಗಳನ್ನು 3 ವರ್ಷಗಳು ಕಟ್ಟಿದ ನಂತರ ಯಾವುದೇ ಪ್ರೀಮಿಯಂ ಅನ್ನು ಗ್ರೇಸ್ ಪೀರಿಯಡ್ ಮುಗಿದ ನಂತರವೂ ಕಟ್ಟದಿದ್ದಲ್ಲಿ, ಅಂತಹ ಪಾಲಿಸಿಯನ್ನು ಪೈಡ್-ಅಪ್ ಪಾಲಿಸಿ ಎಂದು ಪರಿಗಣಿಸಲಾಗುತ್ತದೆ. ಪೈಡ್-ಅಪ್ ಪಾಲಿಸಿಯು ಚಾಲ್ತಿಯಲ್ಲಿ ಅವದಿ ಮುಗಿಯುವವರೆಗೂ ಇರುತ್ತದೆ. ಅವದಿ ಮುಗಿದ ನಂತರ, ಅಂತಹ ಪೈಡ್-ಅಪ್ ಪಾಲಿಸಿಗೆ ನೀಡುವ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತದಲ್ಲಿ ಈ ಕೆಳ ಕಂಡಂತೆ ಮೊತ್ತವನ್ನು ಕಡಿತಗೊಳಿಸಿ ನೀಡಲಾಗುವುದು.

ಪೈಡ್-ಅಪ್  ಸಮ್ ಅಶ್ಶುರ್ಡ್ = [ (ಪಾವತಿಸಲಾದ ಪ್ರೀಮಿಯಂ ಗಳು / ಒಟ್ಟು ನೀಡಬೇಕಾದ ಪ್ರೀಮಿಯಂ ಗಳು) x ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ ].

ಈ ಮೊತ್ತದಲ್ಲಿ, ಈಗಾಗಲೇ ಸರ್ವೈವಲ್ ಬೆನಿಫಿಟ್ ಮೂಲಕ ಹಣವನ್ನು ನೀಡಿದ್ದಲ್ಲಿ ಅದನ್ನು ಕಡಿತಗೊಳಿಸಿ ಉಳಿದ ಮೊತ್ತವನ್ನು ನೀಡಲಾಗುವುದು.

ಈ ರೀತಿ ಕಡಿತಗೊಳಿಸಿರುವ ಪಾಲಿಸಿಯ ಬಾಬ್ತು ಮುಂದಿನ ಪ್ರೀಮಿಯಂ ಗಳನ್ನು ನೀಡುವ ಅವಶ್ಯಕತೆ ಇರುವುದಿಲ್ಲ. ಹಾಗೆಯೇ, ಪಾಲಿಸಿಯು ಮುಂದಿನ ಯಾವುದೇ ಲಾಭಗಳಿಗೆ ಅರ್ಹತೆ ಹೊಂದುವುದಿಲ್ಲ. ಆದರೆ ವೆಸ್ಟೆಡ್ ಸಿಂಪಲ್ ರಿವರ್ಶನರಿ ಬೋನಸ್ ಗೆ ಅರ್ಹತೆ ಇರುತ್ತದೆ.

ಇಂತಹ ಪೈಡ್-ಅಪ್ ಪಾಲಿಸಿಗಳಿಗೆ ಸಾಮಾನ್ಯವಾಗಿ ಯಾವುದೇ ಅಡಚಣೆ ಇಲ್ಲದೆ ಆವದಿಯನ್ನು ಪೂರೈಸಿರುವ (ಅಂದರೆ ಪಾಲಿಸಿದಾರನು ನೀಡಬೇಕಾದ ಎಲ್ಲ ಕಂತುಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿದ್ದಲ್ಲಿ) ಪಾಲಿಸಿಗೆ ನೀಡುವ ಸರ್ವೈವಲ್ ಬೆನಿಫಿಟ್ ಅನ್ನು ನೀಡುವುದಿಲ್ಲ.

ಈ ಪೈಡ್-ಅಪ್ ಪಾಲಿಸಿಗೆ, ಪೈಡ್-ಅಪ್ ಮೊತ್ತ ಹಾಗೂ ವೆಸ್ಟೆಡ್ ಸಿಂಪಲ್ ರಿವರ್ಶನರಿ ಬೋನಸ್ ಇವುಗಳನ್ನು ಸೇರಿಸಿ, ಪಾಲಿಸಿಯ ಆವದಿಯು ಮುಗಿದ ನಂತರ ಪಾಲಿಸಿದಾರನಿಗೆ ಅಥವಾ ಅವನ ಆಕಸ್ಮಿಕ ಮರಣ ಆದಲ್ಲಿ, ಆತನ ನಾಮಿನಿಗೆ ಒಟ್ಟು ಮೊತ್ತವನ್ನು ನೀಡಲಾಗುವುದು.

ಈ ಪಾಲಿಸಿಯ ಜೊತೆಗೆ ಸೇರಿಸಿರುವ ರೈಡರ್ ಗಳು ಯ್ಯವುದೇ ಪೈಡ್-ಅಪ್ ಮೌಲ್ಯವನ್ನು ಗಳಿಸುವುದಿಲ್ಲ. ಹಾಗೂ ಪೈಡ್-ಅಪ್ ಅವದಿಯಲ್ಲಿ, ರೈಡರ್ ಗಳಿಗೆ ನೀಡುವ ಬೆನಿಫಿಟ್ ಗಳು ಸಿಕ್ಕುವುದಿಲ್ಲ.

ಸರಂಡರ್ ಬೆನೆಫಿಟ್ ಅಥವಾ ಪಾಲಿಸಿ ಟರ್ಮಿನೇಶನ್

ಸರಂಡರ್ ಬೆನಿಫಿಟ್ ಪಾಲಿಸಿಗೆ ಅದರ 3 ವರ್ಷಗಳು ಕಳೆದ ನಂತರ ಸಿಗುತ್ತದೆ. ಗ್ಯಾರಂಟಿಡ್ ಸರಂಡರ್ ಮೌಲ್ಯವು ಒಂದು ಪರ್ಸೆಂಟೆಜ್ ಆಗಿದ್ದು ಅದು ಪಾಲಿಸಿದಾರನು ನೀಡಿರುವ ಒಟ್ಟು ಪ್ರೀಮಿಯಂ ಮೊತ್ತದಿಂದ ಈ ಕೆಳ ಕಂಡ ಮೊತ್ತಗಳನ್ನು ಕಳೆದು ಉಳಿಕೆ ಹಣವನ್ನು ನೀಡಲಾಗುತ್ತದೆ.

 • ಸರ್ವಿಸ್ ತೆರಿಗೆ
 • extra ಪ್ರೀಮಿಯಂಗಳು ಇದ್ದಲ್ಲಿ
 • ರೈಡರ್ಸ್ ಪ್ರೀಮಿಯಂ ಗಳು ಇದ್ದಲ್ಲಿ
 • ಈಗಾಗಲೆ ನೀಡಿರುವ ಸರ್ವೈವಲ್ ಬೆನಿಫಿಟ್ ಮೊತ್ತ
 • ಸರಂಡರ್ ಮೌಲ್ಯವು ಈ ಕೆಳ ಕಂಡಂತಿರುತ್ತದೆ

ಪಾಲಿಸಿಯ ಅವದಿ

1

2

3

4

5

6

7

8

9

10

ಒಟ್ಟು ಪ್ರೀಮಿಯಂ ಮೊತ್ತಕ್ಕೆ % ಲೆಕ್ಕ  

0.00

0.00

30.00

50.00

50.00

50.00

50.00

52.50

55.00

57.50

ಪಾಲಿಸಿಯ ಅವದಿ

11

12

13

114

15

16

17

18

19

20

ಒಟ್ಟು ಪ್ರೀಮಿಯಂ ಮೊತ್ತಕ್ಕೆ % ಲೆಕ್ಕ  

60.00

62.50

65.00

67.50

70.00

72.50

75.00

77.50

80.00

80.00

ಇದಕ್ಕೆ ಸೇರಿಕೆಯಾಗಿ, ಪಾಲಿಸಿದಾರನು ಪಾಲಿಸಿಯನ್ನು ಸರಂಡರ್ ಮಾದಿಡ ದಿನದಂದು, ಅನ್ವಯವಾಗುವ ಸಿಂಪಲ್ ರಿವರ್ಶನರಿ ಬೋನಸ್ ಅನ್ನು ಕೂಡ ನೀಡಲಾಗುವುದು. ವೆಸ್ಟೆಡ್ ಬೋನಸ್ ಅನ್ನು ಸರಂಡರ್ ಮೌಲ್ಯದ ಫ್ಯಾಕ್ಟರ್ ನಿಂದ ಗುಣಿಸಿದಲ್ಲಿ, ಸಿಂಪಲ್ ರಿವರ್ಶನರಿ ಬೋನಸ್ ಮೊತ್ತವು ಬರುತ್ತದೆ. ಈ ಫ್ಯಾಕ್ಟರ್ ಗಳು ಪಾಲಿಸಿಯನ್ನು ಸರಂಡರ್ ಮಾಡಿದ ವರ್ಷದ ಮೇಲೆ ಅವಲಂಬಿತವಾಗಿರುತ್ತದೆ. ಈ ಫ್ಯಾಕ್ಟರ್ ಪರ್ಸೆಂಟೆಜ್ ನಲ್ಲಿ ಇರುತ್ತದೆ.  ಕೆಳಗಿನ ಟೇಬಲ್ ನಲ್ಲಿ ಈ ಫ್ಯಾಕ್ಟರ್ ಗಳ ವಿವರವನ್ನು ನೀಡಲಾಗಿದೆ.

ಪಾಲಿಸಿಯ ಅವದಿ

1

2

3

4

5

6

7

8

9

10

ವೆಸ್ಟೆಡ್ ಬೋನಸ್ ಮೊತ್ತಕ್ಕೆ % ಲೆಕ್ಕ  

0.00

0.00

16.22

16,58

17.03

17.58

17.58

17.66

17.85

18.16

ಪಾಲಿಸಿಯ ಅವದಿ

11

12

13

114

15

16

17

18

19

20

ವೆಸ್ಟೆಡ್ ಬೋನಸ್ ಮೊತ್ತಕ್ಕೆ % ಲೆಕ್ಕ  

18.60

19.18

19.93

20.85

21.99

23.38

25.05

27.06

30.00

35.00

ಕಾರ್ಪೊರೇಷನ್ ಪಾಲಿಸಿದಾರನಿಗೆ ಸ್ಪೆಷಲ್ ಸರಂಡರ್ ಮೊತ್ತವನ್ನು (ಅದು ಹೆಚ್ಚಿದ್ದಲ್ಲಿ) ನೀಡಬಹುದು.

ಸಾಲ ಸೌಲಭ್ಯ

ಈ ಪಾಲಿಸಿಯ ಮೇಲೆ ಸಾಲ ಸೌಲಭ್ಯ ಇರುತ್ತದೆ. ಆದರೆ ಪಾಲಿಸಿಯು ಸರಂಡರ್ ಮೌಲ್ಯವನ್ನು ಹೊಂದಿರಬೇಕು. ಹಾಗೂ ಸಾಲ ಸೌಲಭ್ಯವು, ಕಾರ್ಪೊರೇಷನ್ ನಿಯಮದ ಪ್ರಕಾರ ನೀಡಲಾಗುತ್ತದೆ.

ತೆರಿಗೆಗಳು

ನಿಯಮಾನುಸಾರ ನೀಡಬೇಕಾಗಿರುವ ತೆರಿಗೆಗಳನ್ನು ಪಾಲಿಸಿದಾರನು ಪ್ರೀಮಿಯಂ ಜೊತೆಯಲ್ಲಿ ನೀಡಬೇಕು. ತೆರಿಗೆಯು ಆಗ ಇರುವ ಟಾಕ್ಸ್ ಸ್ಲ್ಯಾಬ್ ಪ್ರಕಾರ ಇರುತ್ತದೆ. ಪ್ರೀಮಿಯಂ ಗಳನ್ನು ನೀಡುವಾಗ ಅನ್ವಯ ಆಗುವ ತೆರಿಗೆಯನ್ನು ಸೇರಿಸಿ ನೀಡಬೇಕಾಗುತ್ತದೆ. ಪ್ರೀಮಿಯಂ ಗಳ ಜೊತೆಯಲ್ಲಿ, ಎಕ್ಸ್ಟ್ರಾ ಪ್ರೀಮಿಯಂ ಇದ್ದಲ್ಲಿ ಅದಕ್ಕೂ ಕೂಡ ತೆರಿಗೆ ಪಾವತಿ ಮಾಡಬೇಕಾಗುತ್ತದೆ.  ಪಾಲಿಸಿಯ ಬಗ್ಗೆ ಎಲ್ ಐ ಸಿ ಯು ನೀಡುವ ಬೆನಿಫಿಟ್ ಗಳಲ್ಲಿ ಈ ತೆರಿಗೆಯ ಮೊತ್ತವು ಸೇರಿರುವುದಿಲ್ಲ.

ಈ ಪಾಲಿಸಿಯಲ್ಲಿ ಸೇರಿರದೆ ಇರುವುದು

ಈ ಪಾಲಿಸಿಯಲ್ಲಿ ಪಾಲಿಸಿದಾರನ ಆತ್ಮಹತ್ಯೆ ಸೇರಿರುವುದಿಲ್ಲ. ಪಾಲಿಸಿದಾರನು ಆತ್ಮಹತ್ಯೆ ಮಾಡಿಕೊಂಡಲ್ಲಿ, ಅದು ಅಸ್ಥಿತ್ವದಲ್ಲಿ ಇರುವುದಿಲ್ಲ.

 • ಪಾಲಿಸಿದಾರನು ಪಾಲಿಸಿ ತೆಗೆದು ಕೊಂಡ ದಿವಸದಿಂದ  12 ತಿಂಗಳುಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ, ಕಾರ್ಪೊರೇಷನ್ ಆ ಪಾಲಿಸಿಗೆ ನೀಡಬೇಕಾಗಿರುವ ಬೆನಿಫಿಟ್ ಗಳಿಗೆ ಅರ್ಹತೆ ಪಡುವುದಿಲ್ಲ. ಆದರೆ, ಅದುವರೆವಿಗೂ ನೀಡಿರುವ ಪ್ರೀಮಿಯಂ ಗಳ 80 % ಮೊತ್ತವನ್ನು ಕಾರ್ಪೊರೇಷನ್ ನಾಮಿನಿಗೆ ನೀಡುತ್ತದೆ. ಇದರಲ್ಲಿ, ಅನ್ವಯವಾಗುವೆ ತೆರಿಗೆ, ಎಕ್ಸ್ಟ್ರಾ ಪ್ರೀಮಿಯಂ ಗಳು ಹಾಗೂ ರೈಡರ್ ಪ್ರೀಮಿಯಂ ಗಳು ಇದ್ದಲ್ಲಿ, ಅದನ್ನು ಕಡಿತಗೊಳಿಸಿ ಉಳಿಕೆ ಹಣವನ್ನು ನೀಡಲಾಗುವುದು.
 • ಅದೇ ರೀತಿ, ಪಾಲಿಸಿಯನ್ನು ರಿವೈವಲ್ ಮಾಡಿದ 12 ತಿಂಗಳುಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ, ಅಲ್ಲಿಯವರೆಗೂ ನೀಡಿರುವ ಪ್ರೀಮಿಯಂ ಮೊತ್ತದ 80 % ಮೊತ್ತ  ಅಥವಾ ಸರಂಡರ್ ಮೊತ್ತ ಇವುಗಳಲ್ಲಿ ಯಾವುದು ಹೆಚ್ಚೋ ಅದನ್ನು ನೀಡಲಾಗುವುದು. ಆದರೆ ಪಾಲಿಸಿಯು ಅಸ್ಥಿತ್ವದಲ್ಲಿ ಇರಬೇಕು.

ಈ ಮೇಲಿನ ಮೊತ್ತವನ್ನು ಬಿಟ್ಟು ಬೇರೆ ಯಾವುದೇ ಕ್ಲೈಮ್ ಗಳನ್ನು ಕಾರ್ಪೊರೇಷನ್ ನೀಡುವುದಿಲ್ಲ.

ಬೆನಿಫಿಟ್ ಲೆಕ್ಕದ ವಿವರ

ಎಲ್ ಐ ಸಿ ನ್ಯೂ ಮನೀ ಬ್ಯಾಕ್ ಪ್ಲಾನ್ - 20 ಇಯರ್ಸ್

ಪಾಲಿಸಿದಾರನ ವಯಸ್ಸು ಯೋಜನೆ ಪಡೆಯುವಾಗ

30 ವರ್ಷಗಳು

ಪಾಲಿಸಿ ಅವದಿ (ಟರ್ಮ್)

20 ವರ್ಷಗಳು

ಪ್ರೀಮಿಯಂ ನೀಡುವ ಅವದಿ

15 ವರ್ಷಗಳು

ಪ್ರೀಮಿಯಂ ನೀಡುವ ರೀತಿ

ವಾರ್ಷಿಕ

ಸಮ್ ಅಶ್ಶುರ್ಡ್

ರೂ 1,00,000

ವಾರ್ಷಿಕ ಪ್ರೀಮಿಯಂ

7762

ಬದಲಾಗಬಹುದಾದ ಸಿನ್ಯರಿಯೋ 1 – ಬಂಡವಾಳ ಹೂಡಿಕೆಯಿಂದ ಬರಬಹುದಾದ ರಿಟರ್ನ್ ವಾರ್ಷಿಕ 4 % ಎಂದು ಪರಿಗಣಿಸಿ

ಬದಲಾಗಬಹುದಾದ ಸಿನ್ಯರಿಯೋ 2 – ಬಂಡವಾಳ ಹೂಡಿಕೆಯಿಂದ ಬರಬಹುದಾದ ರಿಟರ್ನ್ ವಾರ್ಷಿಕ 8 % ಎಂದು ಪರಿಗಣಿಸಿ

ವರ್ಷದ  ಕಡೆಯಲ್ಲಿ

ವರ್ಷದ ಕಡೆಯಲ್ಲಿ ಒಟ್ಟು ಪ್ರೀಮಿಯಂ (ರೂ ಗಳಲ್ಲಿ)ಮರಣದ ವರ್ಷದಲ್ಲಿ ನೀಡುವ ವಾರ್ಷಿಕ ಮೊತ್ತಪಾಲಿಸಿ ಸರಂಡರ್ ಮಾಡಿದ ವರ್ಷದಲ್ಲಿ ನೀಡುವ ವಾರ್ಷಿಕ ಮೊತ್ತ

   

ಗ್ಯಾರಂಟಿಡ್

ಮೊತ್ತ

ಬದಲಾಗಬಹುದಾದ ಮೊತ್ತ

ಒಟ್ಟು ಮೊತ್ತ

ಗ್ಯಾರಂಟಿಡ್ ಸರಂಡರ್ ಮೊತ್ತ

ಸರಂಡರ್ ಮೌಲ್ಯದ ಬೋನಸ್ ಮೊತ್ತ

ಒಟ್ಟಾರೆ ಗ್ಯಾರಂಟಿಡ್ ಮೊತ್ತ

     

ಸಿನ್ಯರಿಯೋ 1

ಸಿನ್ಯರಿಯೋ 2

ಸಿನ್ಯರಿಯೋ 1

ಸಿನ್ಯರಿಯೋ 2

 

ಸಿನ್ಯರಿಯೋ 1

ಸಿನ್ಯರಿಯೋ 2

ಸಿನ್ಯರಿಯೋ 1

ಸಿನ್ಯರಿಯೋ 2

1

7752

1,25,000

700

2800

125700

127800

0

0

0

0

0

2

15504

1,25,000

1400

5600

126400

130600

0

0

0

0

0

3

23256

1,25,000

2100

8400

127100

133400

6977

341

1362

7317

8339

4

31008

1,25,000

2800

11200

127800

136200

15504

464

1857

15968

17361

5

38760

1,25,000

3500

14000

128500

139000

19380

596

2384

19976

21764

6

46512

1,25,000

4200

16800

129200

141800

3256

738

2953

3994

6209

7

54264

1,25,000

4900

19600

129900

144600

7132

861

3446

7993

10578

8

62016

1,25,000

5600

22400

130600

147400

12558

989

3956

13547

16514

9

69768

1,25,000

6300

25200

131300

150200

18372

1125

4499

19497

22872

10

77520

1,25,000

7000

28000

132000

153000

24574

1271

5085

25845

29659

11

85272

1,25,000

7700

30800

132700

155800

11163

1432

5729

12595

16892

12

93024

1,25,000

8400

33600

133400

158600

18140

1611

6444

19751

24584

13

100776

1,25,000

9100

36400

134100

161400

25504

1814

7255

27318

32759

14

108526

1,25,000

9800

39200

134800

164200

33256

2043

8173

35300

41430

15

116280

1,25,000

10500

42500

135500

167500

41396

2309

9236

43705

50632

16

116280

1,25,000

11200

45300

136200

170300

24303

2619

10474

26922

34777

17

116280

1,25,000

11900

48600

136900

173600

27210

3410

11924

30191

39134

18

116280

1,25,000

12600

51900

137600

176900

30117

3990

13638

33527

43755

19

116280

1,25,000

13700

55200

138300

180200

33024

4900

15900

37014

48984

20

116280

1,25,000

14000

58500

139000

183500

33024

3079

19600

37924

52624

ವರ್ಷದ  ಕಡೆಯಲ್ಲಿ

ವರ್ಷದ ಕಡೆಯಲ್ಲಿ ಒಟ್ಟು ಪ್ರೀಮಿಯಂ (ರೂ ಗಳಲ್ಲಿ)

ವರ್ಷದ ಕೊನೆಯಲ್ಲಿ ನೀಡಬೇಕಾದ ಸರ್ವೈವಲ್ ಮೊತ್ತ

   

ಗ್ಯಾರಂಟಿಡ್

ಮೊತ್ತ

ಬದಲಾಗಬಹುದಾದ ಮೊತ್ತ

ಒಟ್ಟು ಮೊತ್ತ

     

ಸಿನ್ಯರಿಯೋ 1

ಸಿನ್ಯರಿಯೋ 2

ಸಿನ್ಯರಿಯೋ 1

ಸಿನ್ಯರಿಯೋ 2

1

7752

0

0

0

0

0

2

15504

0

0

0

0

0

3

23256

0

0

0

0

0

4

31008

0

0

0

0

0

5

38760

20000

0

0

20000

20000

6

46512

0

0

0

0

0

7

54264

0

0

0

0

0

8

62016

0

0

0

0

0

9

69768

0

0

0

0

0

10

77520

20000

0

0

20000

20000

11

85272

0

0

0

0

0

12

93024

0

0

0

0

0

13

100776

0

0

0

0

0

14

108526

0

0

0

0

0

15

116280

20000

0

0

20000

20000

16

116280

0

0

0

0

0

17

116280

0

0

0

0

0

18

116280

0

0

0

0

0

19

116280

0

0

0

0

0

20

116280

40000

14000

58500

54000

98500

ಸೂಚನೆ:

ಮೇಲೆ ಸೂಚಿಸಿರುವ ವಾರ್ಷಿಕ ಪ್ರೀಮಿಯಂ ಮೊತ್ತದಲ್ಲಿ ಸರ್ವಿಸ್ ಟಾಕ್ಸ್, ಎಕ್ಸ್ಟ್ರಾ ಪ್ರೀಮಿಯಂ ಹಾಗೂ ರೈಡರ್ ಗಳ ಮೊತ್ತ ಸೇರಿರುವುದಿಲ್ಲ