ಎಲ್ ಐ ಸಿ ನ್ಯೂ ಟರ್ಮ್ ಅಶ್ಸ್ಯುರೆನ್ಸ್ ರೈಡರ್ ಪ್ಲಾನ್
 • ಅತ್ಯುತ್ತಮ ಯೋಜನೆಗಳು
 • ಸುಲಭ ಹೋಲಿಕೆ
 • ತಕ್ಷಣದ ಖರೀದಿ
PX step

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಫೋನ್ ಸಂಖ್ಯೆ
ಹೆಸರು
ಹುಟ್ಟಿದ ದಿನಾಂಕ

1

2

ಆದಾಯ
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಎಲ್ ಐ ಸಿ ಯ ನ್ಯೂ ಟರ್ಮ್ ಅಶ್ಯುರೆನ್ಸ್ ರೈಡರ್ ಪ್ಲಾನ್ ಒಂದು ಪಾಲಿಸಿದಾರನಿಗೆ ಹೆಚ್ಚುವರಿ ಬೆನಿಫಿಟ್ ಅನ್ನು ನೀಡುವ ಪ್ಲಾನ್ ಆಗಿರುತ್ತದೆ. ಇದರ ನ್ಯೂ ಟರ್ಮ್ ಅಶ್ಯುರೆನ್ಸ್ ರೈಡರ್ ಅನ್ನು ಬೇರೆ ಯಾವುದೇ ರೀತಿಯ ಸಾಮಾನ್ಯವಾದ ಎಲ್ ಐ ಸಿ ಯ ಇತರೆ ಯೋಜನೆಗಳ ಜೊತೆಗೆ ಸೇರಿಸಿಕೊಳ್ಳಬಹುದು. ಇದಕ್ಕೆ ನೀವು ಕೇವಲ ಸ್ವಲ್ಪ ಹೆಚ್ಚುವರಿ ಹಣವನ್ನು ನೀಡಿದರೆ ಸಾಕು. ಎಲ್ ಐ ಸಿ ಯ ನ್ಯೂ ಟರ್ಮ್ ಅಶ್ಯುರೆನ್ಸ್ ರೈಡರ್ ಪ್ಲಾನ್ ಒಂದು ರಕ್ಷಣೆ ನೀಡುವ ಪ್ಲಾನ್ ಆಗಿದ್ದು, ಅದು ಪಾಲಿಸಿದಾರನ ಮರಣವು ಅಕಸ್ಮಾತ್ ಪಾಲಿಸಿಯ ಅವದಿಯ ಮಧ್ಯದಲ್ಲಿ ಆದಲ್ಲಿ, ಆತನು ಸೂಚಿಸಿರುವ ನಾಮಿನಿಗೆ ಆರ್ಥಿಕ ರಕ್ಷಣೆ ನೀಡುವಲ್ಲಿ ಸಹಾಯ ಆಗುತ್ತದೆ. ಈ ಪ್ಲಾನ್ ಅನ್ನು ಯಾವುದೇ ನಾನ್-ಲಿಂಕ್ಡ್ ಎಲ್ ಐ ಸಿ ಯ ಇತರ ಯೋಜನೆಗಳ ಜೊತೆಗೆ ಆ ಬೇಸ್ ಪಾಲಿಸಿಯನ್ನು ಪಡೆಯುವ ಸಮಯದಲ್ಲಿಯೇ ತೆಗೆದುಕೊಳ್ಳಬೇಕು. ಉಳಿದಂತೆ, ಬೇರೆ ಸೇವಿಂಗ್ಸ್ ಪ್ಲಾನ್ ಜೊತೆಯಲ್ಲಿ ಸೇರಿಸಿ ತೆಗೆದುಕೊಂಡಲ್ಲಿ, ಪಾಲಿಸಿದಾರನಿಗೆ ಉಳಿತಾಯವನ್ನು ಕೂಡ ನೀಡುವ ಒಂದು ಯೋಜನೆ ಆಗಿರುತ್ತದೆ. ಪಾಲಿಸಿದಾರನು ಪಾಲಿಸಿಯ ಮಧ್ಯದಲ್ಲಿ ಮರಣ ಹೊಂದಿದಲ್ಲಿ, ಟರ್ಮ್ ಅಶ್ಸ್ಯುರೆನ್ಸ್ ರೈಡರ್ ಮೊತ್ತವನ್ನು ನಾಮಿನಿಗೆ ನೀಡಲಾಗುವುದು. ಪಾಲಿಸಿಯು ಮೆಚೂರಿಟೀ ಆಗಿ, ಕ್ಲೆಯಿಮ್ ಆಗದೆ ಇದ್ದ ಪಕ್ಷದಲ್ಲಿ ಅಂದರೆ ಪಾಲಿಸಿದಾರನು ಪಾಲಿಸಿಯ ಅವದಿ ಮುಗಿಸಿದ ಪಕ್ಷದಲ್ಲಿ ನಾಮಿನಿಗಾಗಲಿ ಅಥವಾ ಅಸೈನೀಗಳಿಗೆ ಯಾವುದೇ ಬೆನಿಫಿಟ್ ಸಿಗುವುದಿಲ್ಲ.

ಎಲ್ ಐ ಸಿ ನ್ಯೂ ಟರ್ಮ್ ಅಶ್ಯುರೆನ್ಸ್ ರೈಡರ್ ಪ್ಲಾನ್ – ಬೆನಿಫಿಟ್ ಗಳು

ಮೆಚೂರಿಟೀ ಬೆನಿಫಿಟ್

ಎಲ್ ಐ ಸಿ ನ್ಯೂ ಟರ್ಮ್ ಅಶ್ಯುರೆನ್ಸ್ ರೈಡರ್ ಯೋಜನೆಯ ಅಡಿಯಲ್ಲಿ, ಮೆಚೂರಿಟೀ ಬೆನಿಫಿಟ್ ಗಳು ಲಭ್ಯ ಇರುವುದಿಲ್ಲ.

ಡೆತ್ ಬೆನಿಫಿಟ್

ಪಾಲಿಸಿದಾರನ ಮರಣವು ಅಕಸ್ಮಾತ್ ಅವದಿಯ ಮಧ್ಯದಲ್ಲಿ ಆದಲ್ಲಿ, ಟರ್ಮ್ ಅಶ್ಯುರೆನ್ಸ್ ರೈಡರ್ ನ ಸಮ್ ಅಶ್ಶುರ್ಡ್ ಮೊತ್ತಕ್ಕೆ ಸಮನಾಗಿ ಹಣವನ್ನು ಆತನ ಕುಟುಂಬಕ್ಕೆ ನೀಡಲಾಗುವುದು.

ಎಲ್ ಐ ಸಿ ನ್ಯೂ ಟರ್ಮ್ ಅಶ್ಯುರೆನ್ಸ್ ರೈಡರ್ ಪ್ಲಾನ್ – ಅರ್ಹತೆಗಳು ಹಾಗೂ ನಿಬಂದನೆಗಳು

ಎಲ್ ಐ ಸಿ ನ್ಯೂ ಟರ್ಮ್ ಅಶ್ಯುರೆನ್ಸ್ ರೈಡರ್ ಪ್ಲಾನ್ ಅನ್ನು ಪಡೆಯಲು ಈ ಕೆಳ ಕಂಡ ಅರ್ಹತೆ ಹಾಗೂ ನಿಬಂದನೆಗಳು ಅನ್ವಯ ಆಗುತ್ತವೆ.

 • ಈ ಪಾಲಿಸಿಯನ್ನು ಪಡೆಯಲು ಪಾಲಿಸಿದಾರನಿಗೆ ಕನಿಷ್ಠ 16 ವರ್ಷಗಳು ಮುಗಿದಿರಬೇಕು.
 • ಪಾಲಿಸಿದಾರನು ಗರಿಷ್ಠ 60 ವರ್ಷಗಳವರೆಗೂ (ಹತ್ತಿರದ ಹುಟ್ಟು ಹಬ್ಬಕ್ಕೆ) ಪಾಲಿಸಿಯನ್ನು ಪಡೆಯಬಹುದು.
 • ಪಾಲಿಸಿಯ ಮೆಚೂರಿಟೀ ಆಗುವ ಸಮಯದಲ್ಲಿ ಪಾಲಿಸಿದಾರನ ವಯಸ್ಸು 75 ವರ್ಷಗಳನ್ನು(ಹತ್ತಿರದ ಹುಟ್ಟು ಹಬ್ಬಕ್ಕೆ)  ದಾಟಿರಬಾರದು.
 • ಟರ್ಮ್ ಅಶ್ಯುರೆನ್ಸ್ ರೈಡರ್ ನ ಅವದಿಯು 5 ವರ್ಷದಿಂದ 35 ವರ್ಷಗಳವರೆಗೂ ಇರುತ್ತದೆ.
 • ಈ ಟರ್ಮ್ ಅಶ್ಯುರೆನ್ಸ್ ರೈಡರ್ ನ ಸಮ್ ಅಶ್ಶುರ್ಡ್ ಮೊತ್ತವು ಕನಿಷ್ಠ ರೂ 1,00,000 ಇರಬೇಕು.
 • ಈ ಟರ್ಮ್ ಅಶ್ಯುರೆನ್ಸ್ ರೈಡರ್ ನ ಸಮ್ ಅಶ್ಶುರ್ಡ್ ಮೊತ್ತವು ಗರಿಷ್ಠ ರೂ 25,00,000 ಮೀರುವ ಹಾಗಿಲ್ಲ.
 • ಈ ಪಾಲಿಸಿಯ ಅಡಿಯಲ್ಲಿ, ಟರ್ಮ್ ಅಶ್ಯುರೆನ್ಸ್ ರೈಡರ್ ನ ಗರಿಷ್ಠ ಮೊತ್ತವು ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತದ ಸಮನಾಗಿ ಅಥವಾ ಅದಕ್ಕಿಂತ ಕಡಿಮೆ ಇರಬೇಕಾಗುತ್ತದೆ. ಹಾಗೂ ಮೇಲೆ ತಿಳಿಸಿರುವಂತೆ, ಈ ಮೊತ್ತವು ಗರಿಷ್ಠ ರೂ 25,00,000 ವನ್ನು ಮೀರುವ ಹಾಗಿಲ್ಲ.
 • ಬೇಸಿಕ್ ಪಾಲಿಸಿಗೆ  ನೀಡುವ ಪ್ರೀಮಿಯಂ ರೀತಿಯಲ್ಲಿಯೇ ಟರ್ಮ್ ಅಶ್ಯುರೆನ್ಸ್ ರೈಡರ್ ಪ್ರೀಮಿಯಂ ಅನ್ನು ಕೂಡ ನೀಡಬೇಕಾಗುತ್ತದೆ.

ಪ್ರೀಮಿಯಂ ಮೊತ್ತದಲ್ಲಿ ಹಾಗೂ ಹೆಚ್ಚು ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತಕ್ಕೆ ದೊರಕುವ ರಿಯಾಯತಿ

ಪ್ರೀಮಿಯಂ ಮೊತ್ತದಲ್ಲಿ ನೀಡುವ ರಿಯಾಯತಿ – ಬೇಸಿಕ್ ಪ್ಲಾನ್ ಅಡಿಯಲ್ಲಿ ನೀಡುವ ರಿಯಾಯತಿ ಇದಕ್ಕೂ ಲಭ್ಯವಾಗುತ್ತದೆ.

ಹೆಚ್ಚು ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತಕ್ಕೆ ನೀಡುವ ರಿಯಾಯತಿ – ಯಾವುದೇ ರಿಯಾಯತಿ ಇರುವುದಿಲ್ಲ.

ಗ್ರೇಸ್ ಪೀರಿಯಡ್

ಇತರೆ ಎಲ್ ಐ ಸಿ ಪ್ಲಾನ್ ಗಳಲ್ಲಿ ದೊರೆಯುವಂತೆ, ಈ ಪ್ಲಾನ್ ನಲ್ಲಿಯೂ ಕೆಳ ಕಂಡ ಗ್ರೇಸ್ ಪೀರಿಯಡ್ ಲಭ್ಯವಿದೆ.

ಪ್ರೀಮಿಯಂ ನೀಡುವ ರೀತಿ

ಗ್ರೇಸ್ ಪೀರಿಯಡ್

ವರ್ಷಕ್ಕೊಮ್ಮೆ

1 ತಿಂಗಳು ಅಥವಾ ಕನಿಷ್ಠ 30 ದಿವಸಗಳು

ಅರ್ದ ವರ್ಷಕ್ಕೊಮ್ಮೆ

1 ತಿಂಗಳು ಅಥವಾ ಕನಿಷ್ಠ 30 ದಿವಸಗಳು

3 ತಿಂಗಳಿಗೊಮ್ಮೆ

1 ತಿಂಗಳು ಅಥವಾ ಕನಿಷ್ಠ 30 ದಿವಸಗಳು

ತಿಂಗಳಿಗೊಮ್ಮೆ

15 ದಿವಸಗಳು

ಪೈಡ್-ಅಪ್ ಮೌಲ್ಯ

ಎಲ್ ಐ ಸಿ ಯ ಟರ್ಮ್ ಅಶ್ಯುರೆನ್ಸ್ ರೈಡರ್ ಪ್ಲಾನ್ ನಲ್ಲಿ ಯಾವುದೇ ಪೈಡ್-ಅಪ್ ಮೌಲ್ಯಕ್ಕೆ ಅರ್ಹತೆ ಇರುವುದಿಲ್ಲ.

ಸರಂಡರ್ ಮೌಲ್ಯ

ಈ ಪಾಲಿಸಿಯ ಅಡಿಯಲ್ಲಿ, ಪಾಲಿಸಿಯನ್ನು ಸರಂಡರ್ ಮಾಡುವ ಅವಕಾಶ ಇರುವುದಿಲ್ಲ. ಆದರೆ, ಈ ರೈಡರ್ ಅನ್ನು ಸೇರಿಸಿರುವ ಬೇಸಿಕ್ ಪಾಲಿಸಿಯನ್ನು ಸರಂಡರ್ ಮಾಡಿದಲ್ಲಿ ಹಾಗೂ ಎಲ್ಲಾ ಪ್ರೀಮಿಯಂ ಗಳನ್ನು ಕಟ್ಟಿದ್ದಲ್ಲಿ, ಈ ರೈಡರ್ ಗೋಸ್ಕರ ನೀಡಿರುವ ಪ್ರೀಮಿಯಂ ಮೊತ್ತವನ್ನು ಈ ಕೆಳ ಕಂಡ ನಿಬಂದನೆಗೆ ಒಳಪಟ್ಟಂತೆ ಪಾಲಿಸಿದಾರನಿಗೆ ನೀಡಲಾಗುವುದು.

ರೆಗ್ಯುಲರ್ ಪ್ರೀಮಿಯಂ ಪಾಲಿಸಿಗಳಿಗೆ  -  ಯಾವುದೇ ಮೊತ್ತವನ್ನು ರೀಫಂಡ್ ಮಾಡಲಾಗುವುದಿಲ್ಲ.

ಲಿಮಿಟೆಡ್ ಪ್ರೀಮಿಯಂ ನೀಡುವ ಪಾಲಿಸಿಗಳು  - ಈ ಕೆಳಗೆ ತಿಳಿಸಿರುವ ರೀತಿಯಲ್ಲಿ ನೀಡಲಾಗುವುದು.

ಪಾಲಿಸಿಯ ಪ್ರೇಮಿಯಮ್ ಪೇಯಿಂಗ್ ಟರ್ಮ್ 10 ವರ್ಷಕ್ಕಿಂತ ಕಡಿಮೆ ಇದ್ದಲ್ಲಿ

ಎರಡು ವರ್ಷಗಳು ಸಂಪೂರ್ಣವಾಗಿ ಎಲ್ಲ ಪ್ರೀಮಿಯಂ ಗಳನ್ನು ನೀಡಿದ್ದಲ್ಲಿ

ಸರಂಡರ್ ಮಾಡಿದಾಗ ಪಾಲಿಸಿಯು ಮುಗಿಸಿದ ಅವದಿ, ಸಮ್ ಅಶ್ಶುರ್ಡ್ ಮೊತ್ತ ಮತ್ತು ರೈಡರ್ ನ ಟರ್ಮ್ ಇವುಗಳನ್ನು ಗಣನೆಗೆ ತೆಗೆದುಕೊಂಡು ಲೆಕ್ಕಾಚಾರ ಮಾಡಿರುವ ಮೊತ್ತದ 75 % ಮೊತ್ತವನ್ನು ನೀಡಲಾಗುವುದು

ಪಾಲಿಸಿಯ ಪ್ರೇಮಿಯಮ್ ಪೇಯಿಂಗ್ ಟರ್ಮ್ 10 ವರ್ಷಕ್ಕಿಂತ ಅಥವಾ ಅದಕ್ಕಿಂತ ಜಾಸ್ತಿ ಇದ್ದಲ್ಲಿ  

ಮೂರು ವರ್ಷಗಳು ಸಂಪೂರ್ಣವಾಗಿ ಎಲ್ಲ ಪ್ರೀಮಿಯಂ ಗಳನ್ನು ನೀಡಿದ್ದಲ್ಲಿ

ಸಿಂಗಲ್ ಪ್ರೀಮಿಯಂ ಪಾಲಿಸಿಗಳು

ಈ ಪಾಲಿಸಿಗಳಲ್ಲಿ ನೀಡುವ ಸರಂಡರ್ ಮೊತ್ತವು ಈ ಕೆಳ ಕಂಡಂತೆ ಇರುತ್ತದೆ.

ಸಿಂಗಲ್ ಪ್ರೀಮಿಯಂ ಪಾಲಿಸಿಯ ರೈಡರ್ ನ ಸರಂಡರ್ ಮೊತ್ತ = ರೈಡರ್ ಬಾಬ್ತು ನೀಡಿರುವ ಸಿಂಗಲ್ ಪ್ರೀಮಿಯಂ ಮೊತ್ತದ 90 % x ಉಳಿದಿರುವ ಪ್ರೀಮಿಯಂ ಅವದಿ / ಮೂಲ ರೈಡರ್ ಅವದಿ

ರಿವೈವಲ್

ಪಾಲಿಸಿಯು ಲ್ಯಾಪ್ಸ್ ಆಗಿದ್ದಲ್ಲಿ, ಪಾಲಿಸಿಯನ್ನು ರಿವೈವ್ ಮಾಡುವ ಅವಕಾಶ ಇರುತ್ತದೆ. ಅದರ ಪ್ರಕಾರ, ಪಾಲಿಸಿದಾರನು ಪ್ರೀಮಿಯಂ ನೀಡದೆ ಇದ್ದ ದಿವಸದಿಂದ ಎರಡು ವರ್ಷಗಳ ಒಳಗೆ ರಿವೈವ್ ಮಾಡಿಕೊಳ್ಳುವ ಅವಕಾಶ ಇರುವುದು. ಹಾಗೂ, ರಿವೈವಲ್ ಅನ್ನು ಕವರೆಜ್ ಮುಗಿಯುವುದಕ್ಕೆ ಮುನ್ನ ಮಾಡಬೇಕಾಗುತ್ತದೆ. ಹಾಗೆ ಮಾಡಲು, ಅದುವರೆಗೂ ನೀಡದೆ ಇದ್ದ ಉಳಿದ ಎಲ್ಲಾ ಪ್ರೀಮಿಯಂ ಗಳು ಹಾಗೂ ಅದಕ್ಕೆ ತಗುಲಬಹುದಾದ ಬಡ್ಡಿ ಎಲ್ಲವನ್ನೂ ಸೇರಿಸಿ ಒಟ್ಟು ಮೊತ್ತವನ್ನು ಎಲ್ ಐ ಸಿ ಗೆ ನೀಡಬೇಕಾಗುತ್ತದೆ. ಈ ರೈಡರ್ ಅನ್ನು ಬೇಸಿಕ್ ಪಾಲಿಸಿಯ ಜೊತೆಯಲ್ಲಿಯೇ ರಿವೈವ್ ಮಾಡಿಸಿಕೊಳ್ಳಬೇಕೇ ಹೊರತು, ಸೆಪರೇಟ್ ಆಗಿ ಮಾಡುವುದಕ್ಕೆ ಆಗುವುದಿಲ್ಲ.

ತೆರಿಗೆಗಳು

ಭಾರತ ಸರ್ಕಾರ ಅಥವಾ ಇನ್ನೂ ಯಾವುದೇ ಸರ್ಕಾರದ ಸ್ವಾಮ್ಯತೆಗೆ ಒಳಪಟ್ಟ ಪ್ರಾದಿಕಾರಗಳು ಶಾಸನಬದ್ದವಾದ ತೆರಿಗೆಗಳನ್ನು ಜೀವ ವಿಮಾ ಪಾಲಿಸಿಗಳಿಗೆ ಅನ್ವಯವಾಗುವಂತೆ ಮಾಡಿದಲ್ಲಿ, ಅಂತಹ ತೆರಿಗೆಗಳು ಈ ಪಾಲಿಸಿಗೂ ಅನ್ವಯಿಸುತ್ತದೆ. ಹಾಗಾಗಿ ಪ್ರೀಮಿಯಂ ನೀಡುವಾಗ ಅವತ್ತಿನ ದಿನ ಯಾವ ತೆರಿಗೆಯು ಆ ಪಾಲಿಸಿಗೆ ಅನ್ವಯವಾಗುವುದೊ, ಅದನ್ನು ಸೇರಿಸಿ ನೀಡಬೇಕಾಗುತ್ತದ.

ಪ್ರೀಮಿಯಂ ಮೊತ್ತದ ಜೊತೆಗೆ, ಸರ್ವಿಸ್ ಟಾಕ್ಸ್ ಅನ್ನು ಕೂಡ ಕಟ್ಟಬೇಕಾಗುತ್ತದೆ. ಇದು, ಪ್ರೀಮಿಯಂ ಮೊತ್ತದ ಜೊತೆಗೆ ಸೇರದೆ ಸೆಪರೇಟ್ ಆಗಿ ನಮೂದಿಸಲಾಗುತ್ತದೆ. ಪ್ರೀಮಿಯಂ ಜೊತೆಯಲ್ಲಿ ನೀಡುವ ಯಾವ ತೆರಿಗೆಗಳನ್ನೂ, ಬೆನಿಫಿಟ್ ಲೆಕ್ಕಕ್ಕೆ ಸೇರಿಸುವುದಿಲ್ಲ

ಕೂಲಿಂಗ್ – ಆಫ್ ಪೀರಿಯಡ್

ಕೂಲಿಂಗ್ – ಆಫ್ ಪೀರಿಯಡ್ ನಲ್ಲಿ, ಪಾಲಿಸಿದಾರನು, ಪಾಲಿಸಿಯ ದಾಖಲೆಗಳು ಅವನ ಕೈ ಸೇರಿದ 15 ದಿವಸಗಳಲ್ಲಿ ಅದರಲ್ಲಿ ನಮೂದಿಸಿರುವ ಎಲ್ಲ ನಿಯಮಗಳು ಹಾಗೂ ನಿಬಂದನೆಗಳನ್ನು ಓದಿ ಅದನ್ನು ಅರ್ಥ ಮಾಡಿಕೊಳ್ಳಲು ನೀಡುವ ಕಾಲಾವಕಾಶ ಆಗಿರುತ್ತದೆ. ಅಕಸ್ಮಾತ್ ಪಾಲಿಸಿದಾರನಿಗೆ ಇದರಲ್ಲಿರುವ ಯಾವುದೇ ನಿಯಮಗಳ  ಅಥವಾ ನಿಬಂದನೆಗಳ ಬಗ್ಗೆ ಒಪ್ಪಿಗೆ ಆಗದಿದ್ದಲ್ಲಿ, ಆ ಪಾಲಿಸಿಯನ್ನು ಆತನು 15 ದಿನಗಳ ಒಳಗೆ ಎಲ್ ಐ ಸಿ ಗೆ ಹಿಂದಿರುಗಿಸಬಹುದು. ಆದರೆ, ಆ ರೀತಿ ಹಿಂದಿರುಗಿಸಲು ಕಾರಣ ನೀಡಬೇಕಾಗುತ್ತದೆ. ಪಾಲಿಸಿಯು ಕಾರ್ಪೊರೇಷನ್ ಗೆ ತಲುಪಿದ ಕೂಡಲೇ ಆ ಪಾಲಿಸಿಯನ್ನು ರದ್ದು ಮಾಡಲಾಗುವುದು. ಹಾಗೂ ಆತನು ನೀಡಿರುವ ಪ್ರೀಮಿಯಂ ಮೊತ್ತದಲ್ಲಿ,ಅದುವರೆಗೂ  ತಗಲುವ ಪ್ರೋಪೋರ್ಶನೆಟ್ ರಿಸ್ಕ್ ಮೊತ್ತ ಮತ್ತು ವೈದ್ಯಕೀಯ ಪರೀಕ್ಷೆಗೆ, ರಿಪೋರ್ಟ್ ಗಳ ಬಾಬ್ತು ಹಾಗೂ ಸ್ಟಾಂಪ್ ಡ್ಯೂಟಿಗೆ ತಗುಲಿರುವ ವೆಚ್ಚ ಇವೆಲ್ಲವನ್ನೂ ಸೇರಿಸಿ ಆ ಮೊತ್ತವನ್ನು ಕಳೆದು, ಉಳಿದ ಮೊತ್ತವನ್ನು ಪಾಲಿಸಿದಾರನಿಗೆ ಹಿಂದಿರುಗಿಸಲಾಗುತ್ತದೆ.

ಪಾಲಿಸಿಯಲ್ಲಿ ಸೇರಿಲ್ಲದೆ ಇರುವುದು

ಈ ಪಾಲಿಸಿಯಲ್ಲಿ ಪಾಲಿಸಿದಾರನ ಆತ್ಮಹತ್ಯೆ ಸೇರಿರುವುದಿಲ್ಲ. ಇದನ್ನು ಬೇರೆ ಪಾಲಿಸಿಗಳ ಜೊತೆಗೆ ಸೇರಿಸಿ ತೆಗೆದುಕೊಳ್ಳುವುದರಿಂದ, ಆ ಬೇಸಿಕ್ ಪಾಲಿಸಿಗೆ ಅನ್ವಯವಾಗುವ ನಿಬಂದನೆಯು ಈ ರೈಡರ್ ಗೂ ಅನ್ವಯ ಆಗುತ್ತದೆ.

ಇನ್ಸುರೆನ್ಸ್ ಆಕ್ಟ್ 1938 ರ ಸೆಕ್ಷನ್ 45:

ಈ ಸೆಕ್ಷನ್ ಪ್ರಕಾರ ವಿಮೆಗಾರ (ಇನ್ಶ್ಯೂರರ್) ಪಾಲಿಸಿದಾರನ ಮರಣವು ಆತ್ಮಹತ್ಯೆ ಇಂದ ಆಗಿದ್ದು ಎರಡು ವರ್ಷ ಆಗಿದ್ದಲ್ಲಿ, ಅಂತಹ ಪಾಲಿಸಿಯ ಬಗ್ಗೆ ಪುನಹ ಸಂದೇಹವನ್ನಾಗಲಿ ಅಥವಾ ಪ್ರಶ್ನೆಯನ್ನು ಈ ಕೆಳ ಕಂಡ ಸಂಧರ್ಭಗಳಲ್ಲಿ ಎತ್ತುವ ಹಾಗಿಲ್ಲ.

 • ಪಾಲಿಸಿದಾರನು ಪ್ರೋಪೊಸಲ್ ನಲ್ಲಿ ನೀಡಿರುವ ಸ್ಟೇಟ್ಮೆಂಟ್
 • ವೈದ್ಯಕೀಯ ಆದಿಕಾರಿ ಅಥವಾ ರೆಫರಿ ನೀಡಿರುವ ರಿಪೋರ್ಟ್
 • ಆತನ / ಅವಳ ಸ್ನೇಹಿತ ನೀಡಿರುವ ರಿಪೋರ್ಟ್
 • ಇತರೆ ಯಾವುದೇ ಧಾಖಲೆಗಳು

ಈ ಮೇಲ್ಕಂಡ ದಾಖಲೆಗಳ ಪ್ರಕಾರ ಪಾಲಿಸಿದಾರನು ನೀಡಿರುವ ಮಾಹಿತಿಯು ಸುಳ್ಳು ಎಂದು ಅನ್ನಿಸಿದಲ್ಲಿ

ಆದರೆ ವಿಮೆಗಾರ (ಇನ್ಶ್ಯೂರರ್) ಪಾಲಿಸಿದಾರನು ಆತನು ನಿಯಮಾನುಸಾರ ನೀಡಬೇಕಾಗಿದ್ದ ಮಾಹಿತಿಯನ್ನು ಒಳಗೊಂಡಿಲ್ಲದೆ ಅದನ್ನು ಬೇಕೆಂತಲೇ ಸ್ಟೇಟ್ಮೆಂಟ್ ನಲ್ಲಿನ ಮಾಹಿತಿಯಲ್ಲಿ  ಮುಚ್ಚಿಡಲಾಗಿದ್ದು, ಈ ಮಾಹಿತಿಯು ಪಾಲಿಸಿದಾರನಿಗೆ ಪಾಲಿಸಿಯನ್ನು ಪಡೆಯುವಾಗಲೇ ತಿಳಿದಿತ್ತು ಎನ್ನುವುದನ್ನು ಸಾಬೀತು ಪಡಿಸಬೇಕಾಗುತ್ತದೆ.

ಹಾಗೆಯೇ, ವಿಮೆಗಾರ (ಇನ್ಶ್ಯೂರರ್) ಪಾಲಿಸಿದಾರನ ವಯಸ್ಸಿನ  ಬಗ್ಗೆ ಪುರಾವೆಯನ್ನು ಯಾವಾಗ ಬೇಕಾದರೂ ಕೇಳಬಹುದು.  ಪಾಲಿಸಿಯ ಟರ್ಮ್ಸ್ ಪ್ರಕಾರ ತರುವಾಯ ವಯಸ್ಸಿನ ಬಗ್ಗೆ ಬದಲಾವಣೆ ಆಗಿದ್ದ  ಪಾಲಿಸಿಯನ್ನು ಪುನಹ ಕಾಲ್ಡ್ ಇನ್ ಕ್ವೆಶ್ಚನ್ ಎಂದು ಬಾವಿಸುವ ಹಾಗಿಲ್ಲ.

ಇನ್ಸುರೆನ್ಸ್ ಆಕ್ಟ್ 1938 ರ ಸೆಕ್ಷನ್ 41:

 • ಯಾವುದೇ ಒಬ್ಬ ವ್ಯಕ್ತಿಯು ನೇರವಾಗಿ ಅಥವಾ ಪರೋಕ್ಷವಾಗಿ ಇನ್ನೊಬ್ಬ ವ್ಯಕ್ತಿಯನ್ನು ಇನ್ಸೂರೆನ್ಸ್ ತೆಗೆದುಕೊಳ್ಳಲು ಅಥವಾ ರಿನ್ಯೂವಲ್ ಮಾಡಲು ಅಥವಾ ಜೀವ ವಿಮೆ ಅಥವಾ ಪ್ರಾಪರ್ಟೀ ಮೇಲಿನ ಇನ್ಸೂರೆನ್ಸ್ ಪಾಲಿಸಿಯನ್ನು ಮುಂದುವರೆಸಲು ಯಾವುದೇ ರೀತಿಯಲ್ಲಿ ಪ್ರೇರೇಪಣೆ ಮಾಡುವ ಸಲುವಾಗಿ
 • ಆತನಿಗೆ ಬರಬಹುದಾದ ಕಮಿಷನ್ ಮೊತ್ತವನ್ನು ಪೂರ್ತಿಯಾಗಿ  ಅಥವಾ ಆ ಮೊತ್ತದ ಅಂಶವನ್ನು ರಿಬೆಟ್ ಎಂದು ನೀಡುವ ಹಾಗಿಲ್ಲ
 • ಹಾಗೆಯೇ ಪಾಲಿಸಿಯಲ್ಲಿ ಪ್ರೀಮಿಯಂ ಬಾಬ್ತು ನೀಡುವ ರಿಬೆಟ್ ಅನ್ನು ಉಪಯೋಗಿಸಿಕೊಂಡು ಪಾಲಿಸಿ ಪಡೆಯುವವರನ್ನು ಪ್ರೇರೇಪಿಸುವ ಹಾಗಿಲ್ಲ
 • ಆದರೆ, ವಿಮೆಗಾರ (ಇನ್ಶ್ಯೂರರ್) ಪಾಲಿಸಿಯ ಬಾಬ್ತು ಅದರ ನಿಯಮಾನುಸಾರ ಹಾಗೂ ಪ್ರಚರಿಸಿರುವ ರೀತ್ಯ ನೀಡಬಹುದಾದ ರಿಬೆಟ್ ಅನ್ನು ಮಾತ್ರ ಪಾಲಿಸಿದಾರರಿಗೆ ತಿಳಿಸಬಹುದು.
 • ಈ ಸೆಕ್ಷನ್ ಒಬ್ಬ ಇನ್ಸೂರೆನ್ಸ್ ಏಜೆಂಟ್ ತನಗಾಗಿ ಪಡೆದ ಪಾಲಿಸಿಗೆ ಅನ್ವಯ ಆಗುವುದಿಲ್ಲ. ಅಂದರೆ, ಆತನು ಆ ಸಂಧರ್ಭದಲ್ಲಿ ಎಲ್ ಐ ಸಿ ಯ ಒಬ್ಬ ಆದಿಕೃತ ಏಜೆಂಟ್ ಎಂದು ಸಾಬೀತು ಪಡಿಸಿದಲ್ಲಿ ಆತನು ಪಡೆಯಬಹುದಾದ ಪ್ರೀಮಿಯಂ ರಿಬೆಟ್ ಈ ಸೆಕ್ಷನ್  ನಿಂದ ಹೊರತಾಗುತ್ತದೆ.

ಯಾರೇ ಆಗಲೀ ಈ ಸೆಕ್ಷನ್ ಅನ್ನು ಉಲ್ಲಂಘಿಸಿದಲ್ಲಿ, ರೂ 500 ಜುಲ್ಮಾನೆಯನ್ನು ವಿದಿಸಲಾಗುವುದು.