ಎಲ್ ಐ ಸಿ ಪ್ರದಾನ ಮಂತ್ರಿ ವಯ ವಂದನ ಯೋಜನ ಪ್ಲಾನ್
 • ಅತ್ಯುತ್ತಮ ಯೋಜನೆಗಳು
 • ಸುಲಭ ಹೋಲಿಕೆ
 • ತಕ್ಷಣದ ಖರೀದಿ
PX step

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಹುಟ್ಟಿದ ದಿನಾಂಕ
ಆದಾಯ
| ಲಿಂಗ

1

2

ಫೋನ್ ಸಂಖ್ಯೆ
ಹೆಸರು
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಪ್ರಸ್ತುತ ಪರಿಸ್ತಿತಿಯನ್ನು ಗಮನಿಸಿದಲ್ಲಿ, ವೈದ್ಯಕೀಯ ನೆರವು ಪಡೆಯಲು ಸಾಕಷ್ಟು ವೆಚ್ಚ ಆಗುವುದಿದ್ದು, ಅದಕ್ಕೋಸ್ಕರ ನಿಮ್ಮ ಹತ್ತಿರ ಹಣವು ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ, ಅರ್ಥಿಕವಾಗಿ ಆದಷ್ಟು ಸಹಾಯ ನೀಡುವಂತಹ ಹಾಗೂ ಹಿರಿಯ ನಾಗರೀಕರಿಗೆ ಅನ್ವಯವಾಗುವಂತೆ  ಒಂದು ಯೋಜನೆಯನ್ನು ಎಲ್ ಐ ಸಿ ಯು ಪರಿಚಯಿಸಿದೆ. ಅದೆಂದರೆ, ಎಲ್ ಐ ಸಿ ಪ್ರದಾನ ಮಂತ್ರಿ ವಯ ವಂದನ ಯೋಜನೆ.ಯಾವುದೇ ಮನುಷ್ಯನ ಜೀವನದಲ್ಲಿ, ವೃದ್ದಾಪ್ಯವು ಅತ್ಯಂತ ಕಠಿಣ ಎಂದು ಹೇಳಬಹುದು. ಈ ಸಮಯದಲ್ಲಿ ನೀವುಗಳು ಕೇವಲ ದೈಹಿಕವಾಗಿ ದುರ್ಭಲ ಆಗುವುದಲ್ಲದೆ ನಿಮ್ಮ ದೈನಂದಿನ ಖರ್ಚುಗಳಿಗಾಗಿ ಆರ್ಥಿಕ ವಾಗಿ ಬೇರೊಬ್ಬರ ಮೇಲೆ ಅವಲಂಬಿತ ಆಗಿರಬೇಕಾಗುತ್ತದೆ. ಸಾಮಾನ್ಯವಾಗಿ, ಒಬ್ಬ ಮನುಷ್ಯನು ನಿವೃತ್ತಿ ಹೊಂದುತ್ತಿದ್ದಾನೆ ಎಂದರೆ ಎಲ್ಲರೂ ಅಂದುಕೊಳ್ಳುವುದು, ಆತನು ಅಲ್ಲಿಂದ ಮುಂದೆ ಒಂದು ಆರಾಮ ಜೀವನವನ್ನು ತನಗೆ ಬರುತ್ತಿರುವ ಪೆನ್ಷನ್ ಸಹಾಯದಿಂದ ನಡೆಸಬಹುದು ಎಂದು. ಆದರೆ, ವಾಸ್ತವಿಕವಾಗಿ ಅದು ಬೇರೆಯೇ ಆಗಿರುತ್ತದೆ. ನೀವುಗಳು ವಯಸ್ಸು ಹೆಚ್ಚುತ್ತಾ ಹೋದಂತೆ, ನಿಮ್ಮ ಶರೀರವು ಶಕ್ತಿಯನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಅದರಿಂದ, ಶಾರೀರಿಕ ದುರ್ಭಲತೆ ಹಾಗೂ ಅದರಿಂದ ಬರಬಹುದಾದ ಜೈವಿಕ ಸಮಸ್ಯೆಗಳಿಗೆ ತುತ್ತಾಗುವ ಸಂಭವ ಹೆಚ್ಚುತ್ತಾ ಹೋಗುತ್ತದೆ. ಈ ತರಹದ ಸಮಸ್ಯೆಗಳು ಹಾಗೂ ಅದರಿಂದ ಉತ್ಪನ್ನವಾಗುವ ಕಾಯಿಲೆಗಳಿಗೆ ವೈದ್ಯಕೀಯ ನೆರವು ಬೇಕಾಗುತ್ತದೆ.

ಎಲ್ ಐ ಸಿ ಪ್ರದಾನ ಮಂತ್ರಿ ವಯ ವಂದನ ಯೋಜನೆಯು ಒಂದು ಸಿಂಗಲ್ ಪ್ರೀಮಿಯಂ ಪೇಮೆಂಟ್ ಪೆನ್ಷನ್ ಪ್ಲಾನ್ ಆಗಿರುತ್ತದೆ. ಈ ಪೆನ್ಷನ್ ಪ್ಲಾನ್ ಪಾಲಿಸಿದಾರನಿಗೆ ಪೆನ್ಷನ್ ಮೊತ್ತ ಅಥವಾ ಪರ್ಚೇಸ್ ಮೊತ್ತ ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡುತ್ತದೆ. ಈ ಪ್ಲಾನ್ ಒಂದು ಸರ್ಕಾರದ ಅನುದಾನಿತ ಪೆನ್ಷನ್ ಸ್ಕೀಮ್ ಆಗಿದ್ದು ಪಾಲಿಸಿದಾರನಿಗೆ ಖಚಿತ 8 % ರಿಟರ್ನ್ ಅನ್ನು ಪ್ರತಿ ವರ್ಷ ನೀಡುತ್ತದೆ. ಹೀಗೆ ಶೇಕರಣೆ ಆಗುವ  ರಿಟರ್ನ್ ನ ಒಟ್ಟು ಮೊತ್ತವನ್ನು ಪ್ರತಿ ತಿಂಗಳಿನ ಕಂತುಗಳಾಗಿ ಪಾಲಿಸಿದಾರನಿಗೆ ಪಾಲಿಸಿಯ ಅವದಿಯಾದ 10 ವರ್ಷಗಳು ನೀಡಲಾಗುತ್ತದೆ. ಈ ಯೋಜನೆಯು GST ವಿನಾಯತಿಯನ್ನು ಪಡೆದಿರುತ್ತದೆ. ಇದನ್ನು ಆನ್ಲೈನ್ ನಲ್ಲಿಯೂ ಪಡೆಯಬಹುದು.

ಎಲ್ ಐ ಸಿ ಪ್ರದಾನ ಮಂತ್ರಿ ವಯ ವಂದನ ಯೋಜನ ಪ್ಲಾನ್ – ಅರ್ಹತೆ ಮತ್ತು ನಿಬಂದನೆಗಳು

ಪಾಲಿಸಿಯನ್ನು ಪಡೆಯುವಾಗ ಪಾಲಿಸಿದಾರನ ವಯಸ್ಸು ಕನಿಷ್ಠ 60 ವರ್ಷ ಮುಗಿದಿರಬೇಕು.ಎಲ್ ಐ ಸಿ ಪ್ರದಾನ ಮಂತ್ರಿ ವಯ ವಂದನ ಯೋಜನೆಯ ಅರ್ಹತೆಗಳು ಮತ್ತು ನಿಬಂದನೆಗಳು ಈ ಕೆಳ ಕಂಡಂತಿವೆ.

 • ಈ ಯೋಜನೆಯ ಅಡಿಯಲ್ಲಿ ಗರಿಷ್ಠ ವಯಸ್ಸಿನ ಮಿತಿ ಇಲ್ಲ.
 • ಪ್ರದಾನ ಮಂತ್ರಿ ವಯ  ವಂದನ ಯೋಜನೆಯ ಪಾಲಿಸಿ ಅವದಿಯು 10 ವರ್ಷಗಳು.
 • ಪೆನ್ಷನ್ ತೆಗೆದುಕೊಳ್ಳಬಹುದಾದ ರೀತಿ – ವರ್ಷಕ್ಕೊಮ್ಮೆ, ಅರ್ದ ವರ್ಷಕ್ಕೊಮ್ಮೆ, 3 ತಿಂಗಳಿಗೊಮ್ಮೆ  ಅಥವಾ ತಿಂಗಳಿಗೊಮ್ಮೆ.
 • ಪಾಲಿಸಿಯ ಪರ್ಚೇಸ್ ಮೊತ್ತ

ಪೆನ್ಷನ್ ಪಡೆಯುವ ರೀತಿ

ಕನಿಷ್ಠ ಪರ್ಚೇಸ್ ಮೊತ್ತ (ರೂ ಗಳಲ್ಲಿ)

ಗರಿಷ್ಠ ಪರ್ಚೇಸ್ ಮೊತ್ತ (ರೂ ಗಳಲ್ಲಿ)

ವರ್ಷಕ್ಕೊಮ್ಮೆ

1,44,578

14,45,783

ಅರ್ದ ವರ್ಷಕ್ಕೊಮ್ಮೆ

1,47,601

14,76,015

3 ತಿಂಗಳಿಗೊಮ್ಮೆ

1,49,068

14,90,683

ತಿಂಗಳಿಗೊಮ್ಮೆ

1,50,000

15,00,000

 • ಪೆನ್ಷನ್ ನೀಡುವ ರೀತಿ – ಪೆನ್ಷನ್ ಮೊತ್ತವನ್ನು ಮೇಲೆ ಕಾಣಿಸಿದ ರೀತಿಯಲ್ಲಿ NEFT ಮೂಲಕವಾಗಲಿ ಅಥವಾ ಆಧಾರ್ ಎನೆಬಲ್ಡ್ ಪೇಮೆಂಟ್ ಸಿಸ್ಟಮ್ ಮೂಲಕ ನೀಡಲಾಗುವುದು.
 • ಸ್ಯಾಂಪಲ್ ಪೆನ್ಷನ್ ರೇಟುಗಳು- ಇದು ಪ್ರತಿ ರೂ 1000 ಪರ್ಚೇಸ್ ಮೊತ್ತಕ್ಕೆ ಅನ್ವಯ ಆಗುತ್ತದೆ. ಬೇರೆ ಬೇರೆ ರೀತಿಯ ಪೆನ್ಷನ್ ಪಡೆಯುವಿಕೆಗೆ ಅನ್ವಯ ಆಗುವ ರೇಟ್ಸ್ ಗಳನ್ನು ಕೆಳಗೆ ನೀಡಲಾಗಿದೆ.

ವರ್ಷಕ್ಕೊಮ್ಮೆ ಪಡೆಯುವ ಪೆನ್ಷನ್  - ರೂ 83.00 ಪ್ರತಿ ವರ್ಷಕ್ಕೆ

ಅರ್ದ ವರ್ಷಕ್ಕೊಮ್ಮೆ ಪಡೆಯುವ ಪೆನ್ಷನ್ – ರೂ 81.30 ಪ್ರತಿ ವರ್ಷಕ್ಕೆ

3 ತಿಂಗಳಿಗೊಮ್ಮೆ ಪಡೆಯುವ ಪೆನ್ಷನ್ – ರೂ 80.50 ಪ್ರತಿ ವರ್ಷಕ್ಕೆ

ತಿಂಗಳಿಗೊಮ್ಮೆ ಪಡೆಯುವ ಪೆನ್ಷನ್ – ರೂ 80.00 ಪ್ರತಿ ವರ್ಷಕ್ಕೆ

ಪೆನ್ಷನ್ ಕಂತುಗಳನ್ನು  ಹತ್ತಿರದ ರೂ ಪ್ರಕಾರ ನೀಡಲಾಗುತ್ತದೆ. ಈ ರೇಟ್ಸ್ ಗಳು ವಯಸ್ಸಿನ ಮೇಲೆ ಅವಲಂಬಿತವಾಗಿರುವುದಿಲ್ಲ.  

 • ಸರಂಡರ್ ಮೌಲ್ಯ: ಈ ಪಾಲಿಸಿಯ ಅಡಿಯಲ್ಲಿ ಕೇವಲ ಆತನ / ಅವಳ ಸಂಗಾತಿ ಕ್ರಿಟಿಕಲ್ / ಟರ್ಮಿನಲ್ ಇಲ್ಲ್ನೆಸ್ಸ್ ಗೆ ಗುರಿ ಆದಲ್ಲಿ, ಸರಂಡರ್ ಮಾಡುವ ಅವಕಾಶ  ನೀಡಲಾಗುವುದು.ಹಾಗೆ ನೀಡುವ ಸರಂಡರ್ ಮೊತ್ತವು ಪರ್ಚೇಸ್ ಮೊತ್ತದ 98 % ಇರುತ್ತದೆ.
 • ಕನಿಷ್ಠ ಪೆನ್ಷನ್ ಮೊತ್ತ:

ತಿಂಗಳಿಗೆ – ರೂ 1000, 3 ತಿಂಗಳಿಗೊಮ್ಮೆ- ರೂ 3000, ಅರ್ದ ವರ್ಷಕ್ಕೊಮ್ಮೆ – ರೂ 6000, ವರ್ಷಕ್ಕೊಮ್ಮೆ – ರೂ 12,000

 • ಗರಿಷ್ಠ ಪೆನ್ಷನ್ ಮೊತ್ತ :

ತಿಂಗಳಿಗೆ – ರೂ 5000, 3 ತಿಂಗಳಿಗೊಮ್ಮೆ- ರೂ 15000, ಅರ್ದ ವರ್ಷಕ್ಕೊಮ್ಮೆ – ರೂ 30000, ವರ್ಷಕ್ಕೊಮ್ಮೆ – ರೂ 60,000

ಎಲ್ ಐ ಸಿ ಪ್ರದಾನ ಮಂತ್ರಿ ವಯ ವಂದನ ಯೋಜನ ಪ್ಲಾನ್ – ಬೇನೆಫಿಟ್ಸ್ ಗಳು

ಪಾಲಿಸಿಯು ತನ್ನ ಪೂರ್ಣ ಅವದಿಯನ್ನು ಮುಗಿಸಿದಲ್ಲಿ, ಮೆಚೂರಿಟೀ ಬೆನಿಫಿಟ್ ಎಂದು ಪರ್ಚೇಸ್ ಮೊತ್ತ ಮತ್ತು ಕೊನೆಯ ಪೆನ್ಷನ್ ಕಂತನ್ನು ಪಾಲಿಸಿದಾರನಿಗೆ ನೀಡಲಾಗುವುದು.ಮೆಚೂರಿಟೀ ಬೆನಿಫಿಟ್

ಡೆತ್ ಬೆನಿಫಿಟ್

ಅಕಸ್ಮಾತ್ ಪಾಲಿಸಿದಾರ ಮರಣವು ಪಾಲಿಸಿಯ ಆವದಿಯ ಒಳಗೆ ಆದಲ್ಲಿ, ಆತನು ಸೂಚಿಸಿರುವ ನಾಮಿನಿಗೆ, ಪರ್ಚೇಸ್ ಮೊತ್ತವನ್ನು ನೀಡಲಾಗುವುದು.

ಸಾಲ ಸೌಲಭ್ಯ  

ಈ ಪಾಲಿಸಿಯ ಮೇಲೆ ಸಾಲ ಸೌಲಭ್ಯ ಇರುತ್ತದೆ. ಪಾಲಿಸಿಯು 3 ವರ್ಷಗಳನ್ನು ಮುಗಿಸಿದ್ದಲ್ಲಿ, ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಲು ಅರ್ಹತೆ ಬರುತ್ತದೆ. ಸಾಲದ ಗರಿಷ್ಠ ಮೊತ್ತವು ಪರ್ಚೇಸ್ ಮೊತ್ತದೆ 75 % ಇರುತ್ತದೆ. ಅದರ ಬಾಬ್ತು ನೀಡಬೇಕಾಗಿರುವ ಬಡ್ಡಿ ದರವು ಎಲ್ ಐ ಸಿ ಯು ಕಾಲ ಕಾಲಕ್ಕೆ ವಿಡಿಸುವ ಬಡ್ಡಿ ದರಕ್ಕೆ ಅನ್ವಯ  ಆಗುತ್ತದೆ. ಸಾಲದ ಮೇಲಿನ ಬಡ್ಡಿ ಮೊತ್ತವನ್ನು ಪೆನ್ಷನ್ ಮೊತ್ತದಿಂದ ಕಡಿತಗೊಳಿಸಿ ಉಳಿದ ಮೊತ್ತವನ್ನು ನೀಡಲಾಗುತ್ತದೆ.

ಫ್ರೀ ಲುಕ್ ಪೀರಿಯಡ್

ಪಾಲಿಸಿದಾರನಿಗೆ ಆತನು ಸದರಿ ಯೋಜನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಪಾಲಿಸಿ ಅವನ ಕೈಗೆ ಸೇರಿದ ದಿವಸದಿಂದ 15 ದಿವಸಗಳ (ಆನ್ಲೈನ್ ನಲ್ಲಿ ಪಡೆದಿರುವ ಪಾಲಿಸಿಗೆ 30 ದಿವಸಗಳು) ಕಾಲಾವಕಾಶ ನೀಡಲಾಗುವುದು. ಅದು ಮುಗಿಯುವುದರ ಒಳಗೆ, ಪಾಲಿಸಿದಾರನು ಪಾಲಿಸಿಯಲ್ಲಿ ಇರುವ ಯಾವುದೇ ನಿಬಂದನೆಗಳು ಸಮಾದಾನವಾಗದಿದ್ದಲ್ಲಿ, ಪಾಲಿಸಿಯನ್ನು ಎಲ್ ಐ ಸಿ ಗೆ ಹಿಂದಿರುಗಿಸಬಹುದು. ಹಾಗೆ ಹಿಂದಿರುಗಿಸಿದ ಪಾಲಿಸಿಯನ್ನು ಎಲ್ ಐ ಸಿ ಯು ರದ್ದು ಮಾಡುತ್ತದೆ. ಪಾಲಿಸಿದಾರನು ತಾನು ಪಾಲಿಸಿಯನ್ನು ಹಿಂದಿರುಗಿಸುವ ಬಗ್ಗೆ ಕಾರಣವನ್ನು ನೀಡಬೇಕಾಗುತ್ತದೆ. ಈ ಸಂಧರ್ಭದಲ್ಲಿ, ಪಾಲಿಸಿದಾರನಿಗೆ ಆತನು ನೀಡಿರುವ ಒಟ್ಟು ಮೊತ್ತದಲ್ಲಿ ಸ್ಟಾಂಪ್ ಡ್ಯೂಟಿ ಮತ್ತು ಪೆನ್ಷನ್ ಅನ್ನು ನೀಡಿದ್ದಲ್ಲಿ ಆ ಮೊತ್ತ ಎರಡನ್ನೂ ಕಳೆದು ಉಳಿದ ಮೊತ್ತವನ್ನು ನೀಡಲಾಗುತ್ತದೆ.

ಪಾಲಿಸಿಯಲ್ಲಿ ಸೇರಿಲ್ಲದೆ ಇರುವುದು

ಈ ಪಾಲಿಸಿಯಲ್ಲಿ, ಯಾವುದೇ ರೀತಿಯ ಎಕ್ಸ್ಕ್ಲುಷನ್ ಇರುವುದಿಲ್ಲ. ಹಾಗಾಗಿ, ಪಾಲಿಸಿದಾರನು ಆತ್ಮಹತ್ಯೆ ಮಾಡಿಕೊಂಡಲ್ಲಿ, ಆತನು ಸೂಚಿಸಿರುವ ನಾಮಿನಿಗೆ, ಸಂಪೂರ್ಣ ಪರ್ಚೆಸ್ ಮೊತ್ತವನ್ನು ನೀಡಲಾಗುವುದು.

ತೆರಿಗೆ ವಿನಾಯತಿ

ಈ ಪಾಲಿಸಿಯಲ್ಲಿ, ಯಾವುದೇ ರೀತಿಯ ತೆರಿಗೆ ವಿನಾಯತಿ ಸಿಗುವುದಿಲ್ಲ. ಹಾಗಾಗಿ, ಪರ್ಚೆಸ್ ಮೊತ್ತದ ಮೇಲಾಗಲಿ ಅಥವಾ ಪೆನ್ಷನ್ ಹಣದ ಮೇಲಾಗಲಿ, ತೆರಿಗೆ ವಿನಾಯತಿ ದೊರಕುವುದಿಲ್ಲ. ಫಿಕ್ಸೆಡ್ ಡೆಪಾಸಿಟ್ ರೀತಿಯಲ್ಲಿಯೇ, ಪೆನ್ಸಿಒನ್ ಮೊತ್ತವನ್ನು ಆದಾಯ ಎಂದು ಪರಿಗಣಿಸಿ, ನಿಮ್ಮ ಟಾಕ್ಸ್ ಸ್ಲ್ಯಾಬ್ ಗೆ ಅನ್ವಯವಾಗುವ ತೆರಿಗೆಯನ್ನು ನೀಡಬೇಕಾಗುತ್ತದೆ.

ಅಂತಿಮವಾಗಿ, ಎಲ್ ಐ ಸಿ ಯ ಪ್ರದಾನ್ ಮಂತ್ರಿ ವಯ ವಂದನ ಯೋಜನೆಯು ಒಂದು ಒಳ್ಳೆಯ ಹಾಗೂ ಸರಳವಾದ ಮತ್ತು ಹಿರಿಯ ನಾಗರೀಕರಿಗೆ ಉಪಯುಕ್ತ ಆಗುವಂತಹ ಪೆನ್ಷನ್ ಯೋಜನೆ ಆಗಿರುತ್ತದೆ.