ಎಲ್ ಐ ಸಿ  ಲಿಮಿಟೆಡ್ ಪ್ರೀಮಿಯಂ ಎಂಡೋಮೆಂಟ್ ಪ್ಲಾನ್
  • ಅತ್ಯುತ್ತಮ ಯೋಜನೆಗಳು
  • ಸುಲಭ ಹೋಲಿಕೆ
  • ತಕ್ಷಣದ ಖರೀದಿ
PX step

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಹುಟ್ಟಿದ ದಿನಾಂಕ
ಆದಾಯ
| ಲಿಂಗ

1

2

ಫೋನ್ ಸಂಖ್ಯೆ
ಹೆಸರು
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಎಲ್ ಐ ಸಿ ಲಿಮಿಟೆಡ್ ಪ್ರೀಮಿಯಂ ಎಂಡೋಮೆಂಟ್ ಪ್ಲಾನ್ ಪಾಲಿಸಿದಾರನಿಗೆ ಸುರಕ್ಷತೆ ಹಾಗೂ ಆರ್ಥಿಕ ಭದ್ರತೆ ಎರಡನ್ನೂ ಸೇರಿಸಿ ನೀಡುವಂತಹ ಒಂದು ಯೋಜನೆ. ನಮ್ಮ ದೇಶದ ಸಾಕಷ್ಟು ನಾಗರೀಕರಿಗೆ ಎಲ್ ಐ ಸಿ ಯ ಬಗ್ಗೆ ವಿವರಗಳು ತಿಳಿದಿದ್ದು, ಆದರ ಸಾದನೆಗಳು ಹಾಗೂ ಅವರು ನೀಡುವ ಯೋಜನೆಗಳ ಬಗೆಗೂ ತಿಳುವಳಿಕೆ ಇರುತ್ತದೆ. ಈಗಲೂ ಕೂಡ, ವಿಮಾ ಯೋಜನೆ ಎಂದಲ್ಲಿ ಬಹುತೇಕ ಜನರು, ಎಲ್ ಐ ಸಿ ಯ ಹೆಸರನ್ನು ಮೊದಲು ಉಚ್ಚರಿಸುತ್ತಾರೆ. ಅಂದರೆ, ಎಲ್ ಐ ಸಿ ಯು ತನ್ನ 63 ವರ್ಷಗಳ ದೀರ್ಘ ಇತಿಹಾಸದಲ್ಲಿ, ದೇಶದ ಜನರ ಮನದಲ್ಲಿ ತನ್ನ ಹೆಸರನ್ನು ಅಚ್ಚು ಒತ್ತುವುದರಲ್ಲಿ ಯಶಸ್ವಿ ಆಗಿದೆ.

ಎಲ್ ಐ ಸಿ ಯ ಲಿಮಿಟೆಡ್ ಪ್ರೀಮಿಯಂ ಎಂಡೋಮೆಂಟ್ ಪ್ಲಾನ್ ಆ ನೀರೀಕ್ಷೆಗೆ ತಕ್ಕಂತೆ ಪಾಲಿಸಿದಾರನ ಅನುಕೂಲತೆಗಳಿಗೆ ಹೊಂದಿಕೊಳ್ಳುವ ರೀತಿಯಲ್ಲಿ ರೂಪಿಸಿರುವ ಒಂದು ಯೋಜನೆ. ಮೇಲೆ ತಿಳಿಸಿರುವಂತೆ, ಈ ಯೋಜನೆಯು ಒಂದು ಬಂಡವಾಳ ಹೂಡಿಕೆಯಲ್ಲಿ ಬಾಗಿ ಆಗುವ ನಾನ್ ಲಿಂಕ್ಡ್ ಯೋಜನೆ ಆಗಿರುತ್ತದೆ. ಇದು ಪಾಲಿಸಿದಾರನ ಆಕಸ್ಮಿಕ ಮರಣವು ಪಾಲಿಸಿಯ ಆವದಿಯ ಒಳಗೆ ಆದಲ್ಲಿ, ಆತನ ಕುಟುಂಬವು ಆರ್ಥಿಕ ಪರಿಸ್ತಿತಿಯಲ್ಲಿ ಕಷ್ಟವನ್ನು ಎದುರಿಸದೆ ಇರುವ ರೀತಿಯಲ್ಲಿ ಸಹಾಯ ಮಾಡುವ ಒಂದು ಯೋಜನೆ ಆಗಿರುತ್ತದೆ. ಹಾಗೂ, ಪಾಲಿಸಿದಾರನು ಪಾಲಿಸಿಯ ಆವದಿಯನ್ನು ಮುಗಿಸಿದಲ್ಲಿ, ಆತನಿಗೆ, ಮೆಚೂರಿಟೀ ಬೆನಿಫಿಟ್ ಆಗಿ, ಒಂದು ಖಚಿತ ಮೊತ್ತವನ್ನು ನೀಡುತ್ತದೆ. ಹಾಗೆಯೇ, ಈ ಪಾಲಿಸಿಯ ಮೇಲೆ ಸಾಲದ ಸೌಲಭ್ಯ ಇರುವುದರಿಂದ, ಅವನಿಗೆ ಹಣದ ಅವಶ್ಯಕತೆ ಇದ್ದಲ್ಲಿ, ಅದನ್ನು ಪಡೆಯುವ ಅವಕಾಶವು ಕೂಡ ಇರುತ್ತದೆ. 

ಮೆಚೂರಿಟೀ ಬೆನಿಫಿಟ್

ಪಾಲಿಸಿಯು ಆವದಿಯನ್ನು ಮುಗಿಸಿದಲ್ಲಿ, ಪಾಲಿಸಿದಾರನಿಗೆ ಸಮ್ ಅಶ್ಶುರ್ಡ್ ಆನ್ ಮೆಚೂರಿಟೀ ಎಂದು, ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತಕ್ಕೆ ವೆಸ್ಟೆಡ್ ಸಿಂಪಲ್ ರಿವರ್ಷನರಿ ಬೋನಸ್ ಮೊತ್ತ ಹಾಗೂ ಅಂತಿಮ ಅಡಿಷನಲ್ ಬೋನಸ್ ಮೊತ್ತ (ಇದ್ದಲ್ಲಿ) ಇವುಗಳನ್ನು ಸೇರಿಸಿ, ಒಟ್ಟು ಮೊತ್ತವನ್ನು ನೀಡಲಾಗುವುದು. ಆದರೆ, ಅಲ್ಲಿಯವರೆಗಿನ ಎಲ್ಲ ಪ್ರೀಮಿಯಂ ಗಳು ಪಾವತಿ ಆಗಿರಬೇಕು.

ಲಾಭದಲ್ಲಿ ಬಾಗಿ ಆಗುವಿಕೆ

ಈ ಯೋಜನೆಯ ನಿಯಮದ ಪ್ರಕಾರ, ಎಲ್ ಐ ಸಿ ಜೀವನ್ ಶಗುನ್  ಪಾಲಿಸಿಯು ಕಾರ್ಪೊರೇಷನ್ ನ ಬಂಡವಾಳ ಹೂಡಿಕೆಯಲ್ಲಿ ಬಾಗಿ ಆಗುತ್ತದೆ. ಆದ್ದರಿಂದ, ಈ ಪಾಲಿಸಿಗೆ ಬಂಡವಾಳ ಹೂಡಿಕೆಯಿಂದ ಉತ್ಪನ್ನ ಆಗುವ ಲಾಭಕ್ಕೆ ಅರ್ಗತೆ ಇರುತ್ತದೆ. ಸದರಿ ಪಾಲಿಸಿಗೆ ಲಾಭದ ರೂಪವಾಗಿ, ಸಿಂಪಲ್ ರಿವರ್ಷನರಿ ಬೋನಸ್ ಅನ್ನು ನೀಡಲಾಗುವುದು. ಈ ಸಿಂಪಲ್ ರಿವರ್ಷನರಿ ಬೋನಸ್ ಮೊತ್ತವು ಕಾರ್ಪೊರೇಷನ್ ತಾನು ತನ್ನ ಅನುಭವದ ಪ್ರಕಾರ ಹಾಗೂ ಸಮಯಾನುಸಾರ ನೀಡುವ ಮೊತ್ತ ಆಗಿರುತ್ತದೆ.

ಅಂತಿಮ ಅಡಿಷನಲ್ ಬೋನಸ್ ಪಾಲಿಸಿಯು ಮೆಚೂರಿಟೀ ಆಗಿ ಅಥವಾ ಪಾಲಿಸಿದಾರ ಮರಣವಾಗಿ ಕ್ಲೈಮ್ ಮಾಡುವ ವರ್ಷದಲ್ಲಿ ಘೋಷಿಸಲಾದ ಮೊತ್ತ ಆಗಿರುತ್ತದೆ.

ಅಪ್ಶನಲ್ (ಸ್ವ ಇಚ್ಚೆಯಿಂದ ತೆಗೆದುಕೊಳ್ಳಬಹುದಾದ) ಬೆನಿಫಿಟ್

ಪಾಲಿಸಿದಾರನಿಗೆ ಎಲ್ ಐ ಸಿ ಯವರು ನೀಡುವ ಈ ಕೆಳ ಕಂಡ ರೈಡರ್ಗಳನ್ನು ಪಾಲಿಸಿಯ ಜೊತೆ ಸೇರಿಸಿಕೊಳ್ಳುವ ಅವಕಾಶ ಇರುತ್ತದೆ. ಆದರೆ, ಈ ರೈಡರ್ ಗಳನ್ನು ಸೇರಿಸಬೇಕಾಗಿದ್ದಲ್ಲಿ, ಅದಕ್ಕೆ ತಗುಲಬಹುದಾದ ಹೆಚ್ಚುವರಿ ಮೊತ್ತವನ್ನು ಪ್ರೀಮಿಯಂ ಜೊತೆಗೆ ನೀಡಬೇಕಾಗುತ್ತದೆ.

  1. ಎಲ್ ಐ ಸಿ ಯ ಆಕಸ್ಮಿಕ ಮರಣ (ಅಕ್ಸಿಡೆಂಟಲ್ ಡೆತ್)  ಹಾಗೂ ಅಂಗ ವೈಕಲ್ಯ (ಡಿಸ್ಎಬಿಲಿಟಿ) ಬೆನಿಫಿಟ್ ರೈಡರ್
  2. ಎಲ್ ಐ ಸಿ ಯ ನ್ಯೂ ಟರ್ಮ್ ಅಶ್ಯುರೆನ್ಸ್ ರೈಡರ್

ರೈಡರ್ ಸಮ್ ಅಶ್ಶುರ್ಡ್ ಮೊತ್ತವು ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತಕ್ಕಿಂತ ಹೆಚ್ಚಿಗೆ ಇರುವ ಹಾಗಿಲ್ಲ.  

ಎಲ್ ಐ ಸಿ  ಲಿಮಿಟೆಡ್ ಪ್ರೀಮಿಯಂ ಎಂಡೋಮೆಂಟ್ ಪ್ಲಾನ್ – ಬೆನಿಫಿಟ್ ನ ಉದಾಹರಣೆ

ಶಾಸನಬದ್ದ ಎಚ್ಚರಿಕೆ

ಎಲ್ ಐ ಸಿ ಯು ನೀಡುವ ಬೆನೆಫಿಟ್ಸ್ ಗಳಲ್ಲಿ ಕೆಲವು ಗ್ಯಾರಂಟಿಡ್ ಆಗಿದ್ದು ಇನ್ನೂ ಕೆಲವು ಬದಲಾವಣೆಗೆ ಒಳ ಪಡುವ ಬೆನಿಫಿಟ್ ಗಳು ಆಗಿರುತ್ತವೆ, ಏಕೆಂದರೆ, ಅಂತಹ ಬೆನಿಫಿಟ್ ಗಳು ಕಾರ್ಪೊರೇಷನ್ ನ ಮುಂದಿನ ಕಾರ್ಯ ನಿರ್ವಹಣೆ ಹಾಗೂ ಅದರಿಂದ ಬರುವ ಆದಾಯದ ಮೇಲೆ ಅವಲಂಬಿತವಾಗಿರುತ್ತದೆ ನಿಮ್ಮ ಪಾಲಿಸಿಯು ಗ್ಯಾರಂಟಿಡ್ ಆದಾಯ ಎಂದು ನಮೂದಿಸಿರುವ ಬೆನಿಫಿಟ್ ಗಳಿಗೆ ಕೆಳ ಕಂಡ ಟೇಬಲ್ ನಲ್ಲಿ “ಗ್ಯಾರಂಟಿಡ್”  ಎಂದು ತೋರಿಸಲಾಗಿದೆ. ಹಾಗೆಯೇ, ಪಾಲಿಸಿಯಲ್ಲಿ ನಮೂದಿಸಿರುವ ಗ್ಯಾರಂಟಿಡ್ ಅಲ್ಲದ ಬೆನಿಫಿಟ್ ಗಳನ್ನು ಕೆಳ ಕಂಡ ಟೇಬಲ್ ನಲ್ಲಿ ಎರಡು ರೀತಿಯ ರಿಟರ್ನ್ಸ್ ಗಳನ್ನು ಗಣನೆಗೆ ತೆಗೆದುಕೊಂಡು ಅದರ ರೀತ್ಯಾ ತೋರಿಸಲಾಗಿದೆ. ಇದು ಭವಿಷ್ಯದಲ್ಲಿ ಕಾರ್ಪೊರೇಷನ್ ನ ಬಂಡವಾಳ ಹೂಡಿಕೆಯಿಂದ ಬರಬಹುದಾದ ಎರಡು ಊಹಿಸಲಾದ ಆದಾಯ ಗಳನ್ನು ಅಳವಡಿಸಿ ತಯಾರಿಸಲಾಗಿದೆ. ಈ ಎರಡು ಊಹಿಸಲಾದ ಆದಾಯಗಳು ಪಾಲಿಸಿಯ ಬಾಬ್ತು ನೀಡುವ ಗ್ಯಾರಂಟಿಡ್ ಮೊತ್ತವಲ್ಲ. ಹಾಗೂ ಅವುಗಳು ಗರಿಷ್ಠ ಅಥವಾ ಕನಿಷ್ಠ ಮಿತಿಗಳು ಕೂಡ ಅಲ್ಲ. ಏಕೆಂದರೆ, ನಿಮ್ಮ ಪಾಲಿಸಿಯು ಬೇರೆ ಬೇರೆ ಅಂಶಗಳ ಮೇಲೆ ಹಾಗೂ ಮುಂದಿನ ಕಾರ್ಪೊರೇಷನ್ ನ ಕಾರ್ಯ ನಿರ್ವಹಣೆ ಮೇಲೂ ಅವಲಂಬಿತವಾಗಿರುತ್ತದೆ.

ಈ ಪಾಲಿಸಿಯ ಬೆನಿಫಿಟ್ ಗಳ ಬಗ್ಗೆ ಕೆಳಗಿನ ಉದಾಹರಣೆಯನ್ನು ಗಮನಿಸಿ.

ವಿವರಗಳು

ಪಾಲಿಸಿಯನ್ನು ಪಡೆಯುವಾಗ ಪಾಲಿಸಿದಾರನ ವಯಸ್ಸು

35 ವರ್ಷಗಳು

ಪಾಲಿಸಿಯ ಅವದಿ (ಟರ್ಮ್)

21 ವರ್ಷಗಳು

ಪ್ರೀಮಿಯಂ ನೀಡಬೇಕಾದ ಅವದಿ (ಪ್ರೀಮಿಯಂ ಪೇಯಿಂಗ್ ಟರ್ಮ್)


8 ವರ್ಷಗಳು

ಪ್ರೀಮಿಯಂ ಪಾವತಿಸುವ ರೀತಿ

ವರ್ಷಕ್ಕೊಮ್ಮೆ

ಸಮ್ ಅಶ್ಶುರ್ಡ್ ಮೊತ್ತ (ರೂ ಗಳಲ್ಲಿ)

300000

ವಾರ್ಷಿಕ ಪ್ರೀಮಿಯಂ ಮೊತ್ತ (ರೂ ಗಳಲ್ಲಿ)

23785

ಬದಲಾಗಬಹುದಾದ ಸಿನ್ಯಾರಿಯೋ 1 – ಒಟ್ಟು ಹಣ ಹೂಡಿಕೆಯ ಮೇಲೆ ಬರಬಹುದಾದ ರಿಟರ್ನ್ @ 4 % ಒಂದು ವರ್ಷಕ್ಕೆ

ಬದಲಾಗಬಹುದಾದ ಸಿನ್ಯಾರಿಯೋ 2 – ಒಟ್ಟು ಹಣ ಹೂಡಿಕೆಯ ಮೇಲೆ ಬರಬಹುದಾದ ರಿಟರ್ನ್ @ 8 % ಒಂದು ವರ್ಷಕ್ಕೆ

ಆ) ಪಾಲಿಸಿದಾರನ ಮರಣ ಅಥವಾ ಪಾಲಿಸಿ ಮೆಚೂರಿಟೀ ಆದಲ್ಲಿ ಸಿಗಬಹುದಾದ ಮೊತ್ತ

ವರ್ಷದ ಕೊನೆಯಲ್ಲಿ

ವರ್ಷದ ಕೊನೆಯಲ್ಲಿ ನೀಡಿರುವ ಪ್ರೀಮಿಯಂ ಮೊತ್ತ(ರೂ ಗಳಲ್ಲಿ)

ಪಾಲಿಸಿಯ ಬಾಬ್ತು ಪಾಲಿಸಿದಾರನ ಮರಣ ಆದ ಪಕ್ಷದಲ್ಲಿ ಅಥವಾ ಪಾಲಿಸಿ ಮೆಚೂರಿಟೀ ಆದ ಪಕ್ಷದಲ್ಲಿ ನೀಡುವ ಬೆನಿಫಿಟ್ ಮೊತ್ತ (ಆ ವರ್ಷದ ಕೊನೆಗೆ)

   

ಗ್ಯಾರಂಟಿಡ್

ಬದಲಾಗಬಹುದಾದ ಮೊತ್ತ

ಒಟ್ಟು ಮೊತ್ತ

     

ಸಿನಾರಿಯೊ 1

4 %

ಸಿನಾರಿಯೊ 2

8%

ಸಿನಾರಿಯೊ 1

4 %

ಸಿನಾರಿಯೊ 2

8%

1

23785

300000

300

10200

300300

310200

2

47570

300000

600

20400

300600

320400

3

71355

300000

900

30600

300900

330600

4

95140

300000

1200

40800

301200

340800

5

118925

300000

1500

51000

301500

351000

6

142710

300000

1800

61200

301800

361200

7

166495

300000

2100

71400

302100

371400

8

190280

300000

2400

81600

302400

381600

9

190280

300000

2700

91800

302700

391800

10

190280

300000

3000

102000

303000

402000

11

190280

300000

3300

112200

303300

412200

12

190280

300000

3600

122400

303600

422400

13

190280

300000

3900

132600

303900

432600

14

190280

300000

4200

142800

304200

442800

15

190280

300000

4500

156000

304500

456000

16

190280

300000

4800

168200

304800

468200

17

190280

300000

5100

179400

305100

479400

18

190280

300000

5400

192600

305400

492600

19

190280

300000

5700

205800

305700

505800

20

190280

300000

6000

219000

306000

519000

21

190280

300000

6300

232200

306300

532200

 

ಆ) ಪಾಲಿಸಿಯನ್ನು ಸರಂಡರ್ ಮಾಡಿದಲ್ಲಿ  ಸಿಗಬಹುದಾದ ಮೊತ್ತ

ವರ್ಷದ ಕೊನೆಯಲ್ಲಿ

ವರ್ಷದ ಕೊನೆಯಲ್ಲಿ ನೀಡಿರುವ ಪ್ರೀಮಿಯಂ ಮೊತ್ತ (ರೂ ಗಳಲ್ಲಿ)

ಪಾಲಿಸಿಯನ್ನು ಸರಂಡರ್ ಮಾಡಿದಲ್ಲಿ ನೀಡುವ ಬೆನಿಫಿಟ್ ಮೊತ್ತ

   

ಗ್ಯಾರಂಟಿಡ್  ಸರಂಡರ್ ಮೊತ್ತ

   

-

ಸಿನಾರಿಯೊ 1  @ 4 %

ಸಿನಾರಿಯೊ 2 @ 8%

1

23785

-

0

0

2

47570

-

14271

14271

3

71355

-

21550

26283

4

95140

-

47765

54186

5

118925

-

59711

67916

6

142710

-

71662

81779

7

166495

-

83617

95799

8

190280

-

99953

113876

9

190280

-

104399

120136

10

190280

-

108849

126524

11

190280

-

113304

133083

12

190280

-

117765

139864

13

190280

-

122235

146923

14

190280

-

126714

154333

15

190280

-

131207

162175

16

190280

-

135715

170552

17

190280

-

140243

179586

18

190280

-

144794

189430

19

190280

-

149375

200268

20

190280

-

154024

213424

21

190280

-

154429

227194

  • ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ ನಲ್ಲಿ ಸರ್ವಿಸ್ ಟಾಕ್ಸ್, ಎಕ್ಸ್ಟ್ರಾ ಪ್ರೀಮಿಯಂ ಗಳು ಹಾಗೂ ರೈಡರ್ಸ್ ಗಳ ಬಾಬ್ತು ನೀಡಬೇಕಾದ ಹೆಚ್ಚುವರಿ ಮೊತ್ತ ಸೇರಿರುವುದಿಲ್ಲ
  • ಈ ಪ್ಲಾನ್ ಅಡಿಯಲ್ಲಿ, ಒಟ್ಟಾರೆ ಡೆತ್ ಬೆನಿಫಿಟ್ ಮೊತ್ತವು ಒಟ್ಟು ಪ್ರೀಮಿಯಂ ಗಳ ಮೊತ್ತದ 105 % ಗಿಂತ ಕಮ್ಮಿ ಇರುವುದಿಲ್ಲ.
  • ಕಾರ್ಪೊರೇಷನ್ ನವರು ಪಾಲಿಸಿದಾರನಿಗೆ ಅನುಕೂಲವಾದಲ್ಲಿ, ಸ್ಪೆಷಲ್ ಸರಂಡರ್ ವ್ಯಾಲ್ಯು ಮೊತ್ತವನ್ನು ನೀಡಬಹುದು

ಎಲ್ ಐ ಸಿ  ಲಿಮಿಟೆಡ್ ಪ್ರೀಮಿಯಂ ಎಂಡೋಮೆಂಟ್ ಪ್ಲಾನ್ – ಅರ್ಹತೆಗಳು ಹಾಗೂ ನಿಬಂದನೆಗಳು

ಎಲ್ ಐ ಸಿ  ಲಿಮಿಟೆಡ್ ಪ್ರೀಮಿಯಂ ಎಂಡೋಮೆಂಟ್ ಪ್ಲಾನ್ ಗೆ ಅನ್ವಯವಾಗುವ ಅರ್ಹತೆಗಳು ಹಾಗೂ ಅದರಲ್ಲಿ ಇರುವ ನಿಬಂದನೆಗಳನ್ನು ಈ ಕೆಳಗಿನ ಪ್ಯಾರಾಗಳಲ್ಲಿ ವಿವರಿಸಲಾಗಿದೆ.

ಕನಿಷ್ಠ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ

ರೂ 300000

ಗರಿಷ್ಠ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ (ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತವು ರೂ 10000 ದ ಮಲ್ಟಿಪಲ್ಸ್ ನಲ್ಲಿ ಇರಬೇಕು)


ಯಾವುದೇ ಮಿತಿ ಇಲ್ಲ

ಪಾಲಿಸಿಯ ಅವದಿ (ಟರ್ಮ್)

12 ವರ್ಷಗಳು, 16 ವರ್ಷಗಳು ಹಾಗೂ 21 ವರ್ಷಗಳು

ಪ್ರೀಮಿಯಂ ಪಾವತಿಸುವ ಅವದಿ (ಟರ್ಮ್) (PPT)

8 ವರ್ಷಗಳು ಮತ್ತು 9 ವರ್ಷಗಳು

ಪಾಲಿಸಿ ಪಡೆಯಲು ಕನಿಷ್ಠ ವಯಸ್ಸು

18 ವರ್ಷಗಳು ಮುಗಿದಿರಬೇಕು

ಪಾಲಿಸಿ ಪಡೆಯಲು ಗರಿಷ್ಠ ವಯಸ್ಸು

ಈ ಕೆಳಗೆ ನಮೂದಿಸಲಾಗಿದೆ

ಪಾಲಿಸಿ ಮೆಚೂರಿಟೀ ಸಮಯದಲ್ಲಿ ಪಾಲಿಸಿದಾರನ ಗರಿಷ್ಠ ವಯಸ್ಸು

12 ವರ್ಷದ ಟರ್ಮ್ ಮತ್ತು 8 ವರ್ಷಗಳ PPT - 69 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ)

12 ವರ್ಷದ ಟರ್ಮ್ ಮತ್ತು 9 ವರ್ಷಗಳ PPT – 74 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ)

ಬೇರೆ ಎಲ್ಲಾ ಸಂಧರ್ಭಗಳಲ್ಲೂ – 75 ವರ್ಷಗಳು

ಪಾಲಿಸಿ ಪಡೆಯಲು ಗರಿಷ್ಠ ವಯಸ್ಸು

ಪಾಲಿಸಿಯ ಅವದಿ (ಟರ್ಮ್) – ವರ್ಷಗಳಲ್ಲಿ

ಪ್ರೀಮಿಯಂ ನೀಡುವ ಅವದಿ = 8 ವರ್ಷಗಳು

ಪ್ರೀಮಿಯಂ ನೀಡುವ ಅವದಿ = 9 ವರ್ಷಗಳು

12

57

62

16

59

59

21

54

54

ಒಟ್ಟು ನೀಡಿರುವ ಪ್ರೀಮಿಯಂಗಳಿಗೆ ಅನ್ವಯವಾಗುವ ಗ್ಯಾರಂಟಿಡ್ ಸರಂಡರ್ ವ್ಯಾಲ್ಯು ಫ್ಯಾಕ್ಟರ್

ಪಾಲಿಸಿಯ ವರ್ಷಗಳು

   

1

2

3

4

5

6

7

8

9

10

11

12

13

14

15

16

17

18

19

20

21

ಪಾಲಿಸಿ

ಟರ್ಮ್

12

0.00 %

30.00 %

30.00 %

50.00 %

50.00 %

50.00 %

50.00 %

57.50 %

65.00 %

72.50 %

80.00 %

80.00 %

-

-

-

-

-

-

-

-

-

16

0.00 %

30.00 %

30.00 %

50.00 %

50.00 %

50.00 %

50.00 %

53.75 %

57.50 %

61.25 %

65.00 %

68.75 %

72.50 %

76.25 %

80.00 %

80.00 %

-

-

-

-

-

21

0.00 %

30.00 %

30.00 %

50.00 %

50.00 %

50.00 %

50.00 %

52.31 %

54.62 %

56.92 %

59.23 %

61.54 %

63.85 %

66.15 %

68.46 %

70.77 %

73.08 %

75.38 %

77.69 %

80.00 %

80.00 %

ಪ್ರೀಮಿಯಂ ಗಳನ್ನು ನೀಡುವ ರೀತಿ (ಪ್ರೀಮಿಯಂ ಪೇಯಿಂಗ್ ಟರ್ಮ್- PPT)

ಪಾಲಿಸಿದಾರನು ಪಾಲಿಸಿಯ ಬಾಬ್ತು ನೀಡಬೇಕಾಗಿರುವ ಪ್ರೀಮಿಯಂ ಗಳನ್ನು ವರ್ಷಕ್ಕೊಮ್ಮೆ ಅಥವಾ ಅರ್ದ ವರ್ಷಕ್ಕೊಮ್ಮೆ ಅಥವಾ 3 ತಿಂಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆ ನೀಡಬಹುದು. ಆದರೆ ತಿಂಗಳಿಗೊಮ್ಮೆ ನೀಡುವ ಪ್ರೀಮಿಯಂ ಅನ್ನು ECS ಮೂಲಕವಾಗಲಿ ಅಥವಾ ಸಂಬಳದ ಕಡಿತದ ಮೂಲಕವಾಗಲಿ ನೀಡಬೇಕಾಗುತ್ತದೆ. ಇದು ಪಾಲಿಸಿಯ ಟರ್ಮ್ ಮುಗಿಯುವವರೆಗೂ ಮುಂದುವರೆಯಬೇಕು.

ಗ್ರೇಸ್ ಪೀರಿಯಡ್

ಈ ಪಾಲಿಸಿಯ ನಿಯಮದ ಪ್ರಕಾರ, ಪಾಲಿಸಿದಾರನಿಗೆ ಗ್ರೇಸ್ ಪೀರಿಯಡ್ ಅನ್ವಯ ಆಗುತ್ತದೆ. ಅದರಂತೆ ವರ್ಷಕ್ಕೊಮ್ಮೆ ಅಥವಾ ಅರ್ದ ವರ್ಷಕ್ಕೊಮ್ಮೆ ಅಥವಾ 3 ತಿಂಗಳಿಗೊಮ್ಮೆ ಕಟ್ಟುವ ಪ್ರೀಮಿಯಂ ಗಳಿಗೆ, 30 ದಿವಸಗಳ ಗ್ರೇಸ್ ಪೀರಿಯಡ್ ದೊರೆಯುತ್ತದೆ. ಹಾಗೆಯೇ, ತಿಂಗಳಿಗೊಮ್ಮೆ ಕಟ್ಟುವ ಪ್ರೀಮಿಯಂ ಗಳಿಗೆ 15 ದಿವಸಗಳ ಕಾಲಾವಕಾಶ ದೊರೆಯುತ್ತದೆ. ಪಾಲಿಸಿದಾರನು, ಈ ಗ್ರೇಸ್ ಪೀರಿಯಡ್ ಒಳಗೆ ಪ್ರೀಮಿಯಂ ಗಳನ್ನು ಪಾವತಿಸಬೇಕು.

ಸ್ಯಾಂಪಲ್ ಪ್ರೀಮಿಯಂ ರೇಟ್ಸ್

ಕೆಳಗಿನ ಟೇಬಲ್ ನಲ್ಲಿ, ಸ್ಯಾಂಪಲ್ ವಾರ್ಷಿಕ ಪ್ರೀಮಿಯಂ ರೇಟ್ಸ್ ಗಳನ್ನು ನೀಡಲಾಗಿದೆ. ಈ ಸ್ಯಾಂಪಲ್ ಪ್ರೀಮಿಯಂ ರೇಟ್ಸ್ ಗಳು ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತದ ಪ್ರತಿ ರೂ 1000 ಕ್ಕೆ ಅನ್ವಯ ಆಗುತ್ತದೆ. (ಸರ್ವಿಸ್ ಟಾಕ್ಸ್ ಅನ್ನು ಬಿಟ್ಟು).

ಪಾಲಿಸಿಯ ಅವದಿ

(ಟರ್ಮ್)

12 ವರ್ಷಗಳು

16 ವರ್ಷಗಳು

21 ವರ್ಷಗಳು

ವಯಸ್ಸು / PPT (ವರ್ಷಗಳಲ್ಲಿ)

8

9

8

9

8

9

20

111.20

101.55

95.35

87.10

78.60

71.75

30

111.55

101.85

95.90

87.60

79.55

72.65

40

113.15

103.35

98.30

89.35

83.25

76.10

50

118.20

108.25

104.95

96.15

92.35

84.60

ಪ್ರೀಮಿಯಂ ಹಾಗೂ ಹೆಚ್ಚಿನ ಸಮ್ ಅಶ್ಶುರ್ಡ್ ಮೇಲೆ ನೀಡುವ ರಿಯಾಯತಿ

ಎಲ್ ಐ ಸಿ ಲಿಮಿಟೆಡ್ ಪ್ರೀಮಿಯಂ ಎಂಡೋಮೆಂಟ್ ಪಾಲಿಸಿಯನ್ನು ಪಡೆಯುವಾಗ ಪಾಲಿಸಿದಾರನಿಗೆ ಕೆಲವು ರಿಯಾಯತಿ ದೊರಕುತ್ತದೆ. ಅವುಗಳು ಅವನು ನೀಡುವ ಪ್ರೀಮಿಯಂ ಹಾಗೂ ಹೆಚ್ಚಿನ ಸಮ್ ಅಶ್ಶುರ್ಡ್ ಮೊತ್ತಗಳಿಗೆ ಅನ್ವಯವಾಗುತ್ತದೆ. ವಿವರಗಳು ಈ ಕೆಳ ಕಂಡಂತಿದೆ.

ಪ್ರೀಮಿಯಂ ಮೇಲೆ ಸಿಗುವ ರಿಯಾಯತಿ

ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ – ಮೇಲೆ  ಕಾಣಿಸಿರುವ ಪ್ರೀಮಿಯಂ ಮೊತ್ತದ ಮೇಲೆ 2 % ರಿಯಾಯತಿ ದೊರೆಯುತ್ತದೆ

ಅರ್ದ ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ – ಮೇಲೆ  ಕಾಣಿಸಿರುವ ಪ್ರೀಮಿಯಂ ಮೊತ್ತದ ಮೇಲೆ 1 % ರಿಯಾಯತಿ ದೊರೆಯುತ್ತದೆ

3 ತಿಂಗಳಿಗೊಮ್ಮೆ ಹಾಗೂ ತಿಂಗಳಿಗೊಮ್ಮೆ ನೀಡುವ ಪ್ರೀಮಿಯಂ –ಯಾವುದೇ ರಿಯಾಯತಿ ದೊರೆಯುವುದಿಲ್ಲ

ಹೆಚ್ಚು ಸಮ್ ಅಶ್ಶುರ್ಡ್(B.S.A) ಮೊತ್ತದ  ಮೇಲೆ ಸಿಗುವ ರಿಯಾಯತಿ

ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ (ರೂ ಗಳಲ್ಲಿ)

ದೊರೆಯುವ ರಿಯಾಯತಿ

300000 ದಿಂದ 490000 ರವರೆಗೆ

ಯಾವುದೇ ರಿಯಾಯತಿ ಇಲ್ಲ

500000 ದಿಂದ 990000 ರವರೆಗೆ

B.S.A ಮೇಲೆ 0.50 % ರಿಯಾಯತಿ ದೊರೆಯುತ್ತದೆ

100000 ಕ್ಕೆ ಮೇಲ್ಪಟ್ಟು

B.S.A ಮೇಲೆ 0.75 % ರಿಯಾಯತಿ ದೊರೆಯುತ್ತದೆ

ಎಲ್ ಐ ಸಿ  ಲಿಮಿಟೆಡ್ ಪ್ರೀಮಿಯಂ ಎಂಡೋಮೆಂಟ್ ಪ್ಲಾನ್ – ಇತರೆ ಬೆನಿಫಿಟ್ ಗಳು

ಎಲ್ ಐ ಸಿ ಲಿಮಿಟೆಡ್ ಪ್ರೀಮಿಯಂ ಎಂಡೋಮೆಂಟ್ ಪ್ಲಾನ್ ಪಾಲಿಸಿದಾರನಿಗೆ ಕೆಳಗೆ ವಿವರಿಸಿರುವ ಇನ್ನೂ ಕೆಲವು ಬೆನಿಫಿಟ್ ಗಳನ್ನು ನೀಡುತ್ತದೆ.

ಪೈಡ್-ಅಪ್ ಮೌಲ್ಯ

ಪಾಲಿಸಿದಾರನು ಎರಡು ವರ್ಷಗಳು ಪ್ರೀಮಿಯಂ ಅನ್ನು ಕಟ್ಟಿದ್ದಲ್ಲಿ, ಹಾಗೂ ಮುಂದೆ ಕಾರಣಾಂತರದಿಂದ ಪ್ರೀಮಿಯಂ ಕಟ್ಟಲು ಆಗದಿದ್ದಲ್ಲಿ ಅಂತಹ ಪಾಲಿಸಿಯು ಪೈಡ್-ಅಪ್ ಪಾಲಿಸಿಯೆಂದು ಕರೆಯಲ್ಪಡುತ್ತದೆ. ಅಂತಹ ಸಂಧರ್ಭದಲ್ಲಿ ಪಾಲಿಸಿಯು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವುದಿಲ್ಲ. ಬದಲಿಗೆ ಅದು ಪೈಡ್-ಅಪ್ ಪಾಲಿಸಿಯ ರೂಪದಲ್ಲಿ ಅವದಿ ಇರುವವರೆಗೂ ಮುಂದುವರೆಯುತ್ತದೆ.  

ಈ ಪೈಡ್-ಅಪ್ ಪಾಲಿಸಿಯಲ್ಲಿ, ಪಾಲಿಸಿದಾರನ ಮರಣವು ಪಾಲಿಸಿಯ ಅವದಿಗೆ ಮುಂಚೆ ಆದಲ್ಲಿ, ಸಮ್ ಅಶ್ಶುರ್ಡ್ ಮೊತ್ತವನ್ನು ಕಡಿತಗೊಳಿಸಿ “ಡೆತ್ ಪೈಡ್-ಅಪ್ ಸಮ್ ಅಶ್ಶುರ್ಡ್” ಎಂದು ಕರೆಯಲಾಗುತ್ತದೆ. ಅಂದರೆ, [(ಪಾಲಿಸಿದಾರನು ನೀಡಿರುವ ಪ್ರೀಮಿಯಂಗಳು / ಪಾಲಿಸಿದಾರನು ಪ್ರೀಮಿಯಂ ಪೆಯಿಂಗ್ ಟರ್ಮ್ ನಲ್ಲಿ ನೀಡಬೇಕಾಗಿರುವ ಪ್ರೀಮಿಯಂಗಳು)] x ಸಮ್ ಅಶ್ಶುರ್ಡ್ ಆನ್ ಡೆತ್  = ಡೆತ್ ಪೈಡ್-ಅಪ್ ಸಮ್ ಅಶ್ಶುರ್ಡ್ ಆಗಿರುತ್ತದೆ.

ಈ ಪೈಡ್-ಅಪ್ ಪಾಲಿಸಿಯಲ್ಲಿ, ಮೆಚೂರಿಟೀ ಆದಾಗ ನೀಡುವ ಸಮ್ ಅಶ್ಶುರ್ಡ್ ಮೊತ್ತವನ್ನು ಕಡಿತಗೊಳಿಸಿ “ಮೆಚೂರಿಟೀ ಪೈಡ್-ಅಪ್ ಸಮ್ ಅಶ್ಶುರ್ಡ್” ಎಂದು ಕರೆಯಲಾಗುತ್ತದೆ. ಅಂದರೆ, [(ಪಾಲಿಸಿದಾರನು ನೀಡಿರುವ ಪ್ರೀಮಿಯಂಗಳು / ಪಾಲಿಸಿದಾರನು ನೀಡಬೇಕಾಗಿರುವ  ಪ್ರೀಮಿಯಂಗಳು)] x ಸಮ್ ಅಶ್ಶುರ್ಡ್ ಆನ್ ಮೆಚೂರಿಟೀ = ಮೆಚೂರಿಟೀ ಪೈಡ್-ಅಪ್ ಸಮ್ ಅಶ್ಶುರ್ಡ್ ಆಗಿರುತ್ತದೆ.

ಯಾವುದೇ ಪಾಲಿಸಿಯು, ಪೈಡ್-ಅಪ್ ಪಾಲಿಸಿಯಾಗಿ ಮುಂದುವರೆದಲ್ಲಿ, ಅಂತಹ ಪಾಲಿಸಿಯು ಮುಂದಿನ ಬಂಡವಾಳ ಹೂಡಿಕೆ ಹಾಗೂ ಅದರಿಂದ ಉತ್ಪನ್ನವಾಗಬಹುದಾದ ಲಾಭಗಳಿಗೆ ಅರ್ಹ ಆಗುವುದಿಲ್ಲ. ಆದರೆ, ಪಾಲಿಸಿಯ ನಿಯಮದ ಪ್ರಕಾರ, ವೆಸ್ಟೆಡ್ ಸಿಂಪಲ್ ರಿವರ್ಶನರಿ ಬೋನಸ್ ಗೆ ಅರ್ಹತೆ ಹೊಂದಿರುತ್ತದೆ. ಈ ಪಾಲಿಸಿಯ ಜೊತೆ ಸೇರಿಸಿರುವ ರೈಡರ್ ಗಳಿಗೆ ಯಾವುದೇ ಪೈಡ್-ಅಪ್ ಮೌಲ್ಯವು ಸೇರುವುದಿಲ್ಲ ಹಾಗೂ ರೈಡರ್ ಸಲುವಾಗಿ ಬರಬಹುದಾದ ಎಲ್ಲ ಬೆನಿಫಿಟ್ ಗಳು ರದ್ದಾಗುತ್ತವೆ.

ಪಾಲಿಸಿಯ ಸರಂಡರ್ ಮೌಲ್ಯ

ಪಾಲಿಸಿದಾರನು, ಪಾಲಿಸಿಯ ಮೇಲೆ ನೀಡಬೇಕಾಗಿರುವ ಪ್ರೀಮಿಯಂ ಗಳನ್ನು 2 ವರ್ಷಗಳು ಸತತವಾಗಿ ಕಟ್ಟಿದ್ದಲ್ಲಿ. ಸರಂಡರ್ ಕ್ಲಾಸ್ ಅನ್ವಯ ಆಗುತ್ತದೆ. ಅದರ ಪ್ರಕಾರ, ಪಾಲಿಸಿಯನ್ನು ಅವನು ಸರಂಡರ್ ಮಾಡಲು ಅರ್ಹತೆ ಇರುತ್ತದೆ. ಪಾಲಿಸಿಯನ್ನು ಸರಂಡರ್ ಮಾಡಿದಾಗ ನೀಡುವ ಗ್ಯಾರಂಟಿಡ್ ಸರಂಡರ್ ಮೌಲ್ಯವು ಪಾಲಿಸಿದಾರನು ಅದುವರೆವಿಗೂ ನೀಡಿರುವ ಪ್ರೀಮಿಯಂ ಮೊತ್ತದ ಪರ್ಸೆಂಟೆಜ್ ಆಗಿರುತ್ತದೆ. ಈ ಪರ್ಸೆಂಟೆಜ್ ಪಾಲಿಸಿಯ ಟರ್ಮ್ ಹಾಗೂ ಪಾಲಿಸಿಯನ್ನು ಎಷ್ಟು ವರ್ಷದ ಮೇಲೆ ಸರಂಡರ್ ಮಾಡಿದ್ದು ಎನ್ನುವುದರ ಮೇಲೆ  ನಿಗದಿಗೊಳಿಸಲಾಗುತ್ತದೆ. ಕೆಳೆಗೆ ಕಾಣಿಸಿರುವ ಟೇಬಲ್ ನಲ್ಲಿ ಅನ್ವಯವಾಗುವ ಗ್ಯಾರಂಟಿಡ್ ಸರಂಡರ್ ಫ್ಯಾಕ್ಟರ್ ವಿವರಗಳನ್ನು ನೀಡಲಾಗಿದೆ.

ಸರಂಡರ್ ಮೌಲ್ಯದ ಒಟ್ಟಿಗೆ ವೆಸ್ಟೆಡ್ ಸಿಂಪಲ್ ರಿವರ್ಶನರಿ ಬೋನಸ್ ಮೌಲ್ಯವನ್ನು ಸೇರಿಸಿ ನೀಡಲಾಗುತ್ತದೆ. ವೆಸ್ಟೆಡ್ ಸಿಂಪಲ್ ರಿವರ್ಶನರಿ ಬೋನಸ್ ಅಂದರೆ, ವೆಸ್ಟೆಡ್ ಬೋನಸ್ ಅನ್ನು ಗ್ಯಾರಂಟಿಡ್ ಸರಂಡರ್ ವ್ಯಾಲ್ಯು ಫ್ಯಾಕ್ಟರ್ ನಿಂದ ಗುಣಿಸಿದಾಗ ಬರುವ ಮೊತ್ತ. ಈ ಗ್ಯಾರಂಟಿಡ್ ಸರಂಡರ್ ವ್ಯಾಲ್ಯು ಫ್ಯಾಕ್ಟರ್ ಪರ್ಸೆಂಟೆಜ್ ರೂಪದಲ್ಲಿದ್ದು, ಅದು ಪಾಲಿಸಿಯ ಟರ್ಮ್ ಹಾಗೂ ಪಾಲಿಸಿಯನ್ನು ಎಷ್ಟು ವರ್ಷದ ಮೇಲೆ ಸರಂಡರ್ ಮಾಡಿದ್ದು ಎನ್ನುವುದರ ಮೇಲೆ  ನಿಗದಿಗೊಳಿಸಲಾಗುತ್ತದೆ. ಕೆಳೆಗೆ ಕಾಣಿಸಿರುವ ಟೇಬಲ್ ನಲ್ಲಿ ವೆಸ್ಟೆಡ್ ಬೋನಸ್ ಗೆ ಅನ್ವಯವಾಗುವ ಗ್ಯಾರಂಟಿಡ್ ಸರಂಡರ್ ಫ್ಯಾಕ್ಟರ್ ವಿವರಗಳನ್ನು ನೀಡಲಾಗಿದೆ.

ವೆಸ್ಟೆಡ್ ಬೋನಸ್ ಗೆ ಅನ್ವಯವಾಗುವ ಗ್ಯಾರಂಟಿಡ್ ಸರಂಡರ್ ಫ್ಯಾಕ್ಟರ್ ಗಳ ವಿವ

ಪಾಲಿಸಿಯ ವರ್ಷಗಳು

   

1

2

3

4

5

6

7

8

9

10

11

12

13

14

15

16

17

18

19

20

21

ಪಾಲಿಸಿ

ಟರ್ಮ್

12

0.00 %

0.00 %

18.60 %

19.18 %

19.33 %

20.85 %

21.99 %

23.38 %

25.05 %

27.06 %

30.00 %

35.00 %

-

-

-

-

-

-

-

-

-

16

0.00 %

0.00 %

17.58  %

17,66 %

17,85 %

18.16 %

18.60 %

19.18 %

19.33 %

20.85 %

21.99 %

23.38 %

25.05 %

27.06 %

30.00 %

35.00 %

-

-

-

-

-

21

0.00 %

0.00 %

15.93 %

16.22 %

16.58 %

17.03 %

17.58 %

17.58  %

17,66 %

17,85 %

18.16 %

18.60 %

19.18 %

19.33 %

20.85 %

21.99 %

23.38 %

25.05 %

27.06 %

30.00 %

35.00 %

ಈ ಪಾಲಿಸಿಗಳಿಗೆ ಕಾರ್ಪೊರೇಷನ್ ನವರು ಪಾಲಿಸಿದಾರನಿಗೆ ಸಹಾಯವಾಗಲಿ ಎನ್ನುವ ದೃಷ್ಟಿಯಿಂದ, ಸ್ಪೆಷಲ್ ಸರಂಡರ್ ಮೊತ್ತವನ್ನು ಅದು ಹೆಚ್ಚಾಗಿದ್ದಲ್ಲಿ ಅದನ್ನು ನೀಡಬಹುದು

ಪಾಲಿಸಿಯ ರಿವೈವಲ್

ಪಾಲಿಸಿಯ ಮೇಲಿನ ಕಂತನ್ನು (ಪ್ರೀಮಿಯಂ ಅನ್ನು) ಗ್ರೇಸ್ ಪೀರಿಯಡ್ ಅವದಿಯಲ್ಲಿಯೂ ಕೂಡ ಕಟ್ಟದಿದ್ದಲ್ಲಿ, ಪಾಲಿಸಿಯು  ಲ್ಯಾಪ್ಸ್ ಆಗುತ್ತದೆ ಅಂದರೆ ಅದು ಸ್ತಗಿತಗೊಳ್ಳುತ್ತದೆ ಅಥವಾ ಮಾನ್ಯತೆ ಕಳೆದುಕೊಳ್ಳುತ್ತದೆ. ಈ ಪಾಲಿಸಿಯ ಅಡಿಯಲ್ಲಿ, ಆ ರೀತಿ ಲ್ಯಾಪ್ಸ್ ಆಗಿರುವ ಪಾಲಿಸಿಯನ್ನು ರಿವೈವಲ್ ಮಾಡುವ ಅವಕಾಶ ಇರುತ್ತದೆ. ಆದರೆ ಪಾಲಿಸಿದಾರನು ನೀಡದಿರುವ ಪ್ರೀಮಿಯಂ ದಿವಸದಿಂದ ಎರಡು ವರ್ಷಗಳ ಒಳಗೆ ಹಾಗೂ ಪಾಲಿಸಿಯು ಚಾಲ್ತಿಯಲ್ಲಿ ಇದ್ದಲ್ಲಿ, ರಿವೈವಲ್ ಮಾಡಿಕೊಳ್ಳಬಹುದು. ಅದುವರೆವಿಗೂ ಕಟ್ಟದೆ ಇರುವ ಪ್ರೀಮಿಯಂಗಳನ್ನು ಅದಕ್ಕೆ ಅನ್ವಯವಾಗುವ ಲೇಟ್ ಫೀ ಹಾಗೂ ಕಾರ್ಪೊರೇಷನ್ ನವರು ವಿಧಿಸುವ ಯಾವುದೇ ಬಡ್ಡಿ ಇದ್ದಲ್ಲಿ ಅದನ್ನೂ ಸಹಾ ಸೇರಿಸಿ ಒಟ್ಟು ಮೊತ್ತವನ್ನು ಕಾರ್ಪೊರೇಷನ್ ಗೆ ನೀಡಬೇಕಾಗುತ್ತದೆ. ಹಾಗೂ ಪಾಲಿಸಿ ಲ್ಯಾಪ್ಸ್ ಏಕೆ ಆಯಿತು ಎನ್ನುವುದರ ಬಗ್ಗೆ ಸೂಕ್ತ ಕಾರಣಗಳನ್ನು ನೀಡಬೇಕಾಗುತ್ತದೆ. ಮತ್ತು ಪಾಲಿಸಿಯ ಮುಂದುವರಿಕೆಯ ಬಗ್ಗೆ ಪುರಾವೆಯನ್ನು ಸಹಾ ನೀಡಬೇಕು.

ಸದರಿ ಪಾಲಿಸಿಯನ್ನು ರಿವೈವ್ ಮಾಡುವುದು ಅಥವಾ ಬಿಟ್ಟಿದ್ದು ಕಾರ್ಪೊರೇಷನ್ ಗೆ ಸೇರಿದ್ದು. ಹಾಗೂ ಪಾಲಿಸಿಯನ್ನು ಮೊದಲು ಪಾಲಿಸಿಗೆ ಅನ್ವಯವಾಗುತ್ತಿದ್ದ ನಿಯಮಗಳು ಮತ್ತು ನಿಬಂದನೆಗಳಿಗೆ ಅನುಸಾರವಾಗಿಯೇ ರಿವೈವ್ ಮಾಡುವುದೋ ಅಥವಾ ಹೊಸ ನಿಯಮಗಳು ಹಾಗೂ ನಿಬಂದನೆಗಳನ್ನು ವಿಧಿಸಿ ರಿವೈವ್ ಮಾಡುವುದೋ ಎನ್ನುವ ನಿರ್ದಾರವನ್ನು ಕಾರ್ಪೊರೇಷನ್ ತೆಗೆದುಕೊಳ್ಳುತ್ತದೆ. ಪಾಲಿಸಿಯು ಕಾರ್ಪೊರೇಷನ್ ನವರು ಒಪ್ಪಿಕೊಂಡು ಅದರ ಬಗ್ಗೆ ಪಾಲಿಸಿದಾರನಿಗೆ ಲಿಖಿತ ಮುಖೇನ ತಿಳಿಸಿದ ದಿವಸದಿಂದ ರಿವೈವಲ್ ಆಗಿದೆ ಎಂದು ಪರಿಗಣಿಸಬೇಕಾಗುತ್ತದೆ. ರೈಡರ್ ಗಳ ರಿವೈವಲ್ ಕೂಡ ಈ ರಿವೈವಲ್ ಜೊತೆಗೆ ಆಗುತ್ತದೆಯೇ ಹೊರತು, ಅದು ಸೆಪರೇಟ್ ಆಗಿ ಆಗುವುದಿಲ್ಲ.

ಪಾಲಿಸಿಯ  ಮೇಲೆ ನೀಡಲಾಗುವ ಸಾಲ ಸೌಲಭ್ಯ

ಈ ಪಾಲಿಸಿಯ ಮೇಲೆ ಸಾಲ ಸೌಲಭ್ಯ ಇರುತ್ತದೆ. ಆದರೆ, ಪಾಲಿಸಿಯು ಸರಂಡರ್ ಮೌಲ್ಯವನ್ನು ಹೊಂದಿರಬೇಕು. ಈ ಸಾಲವು ಕೂಡ ಕಾರ್ಪೊರೇಷನ್ ನವರು ಕಾಲ ಕಾಲಕ್ಕೆ ನಮೂದಿಸುವ ನಿಯಮ ಹಾಗೂ ನಿಬಂದನೆಗೆ ಒಳ ಪಟ್ಟಿರುತ್ತದೆ.

ಪಾಲಿಸಿಯ ಮೇಲೆ ತೆರಿಗೆಗಳು

ಭಾರತ ಸರ್ಕಾರ ಅಥವಾ ಇನ್ನೂ ಯಾವುದೇ ಸರ್ಕಾರದ ಸ್ವಾಮ್ಯತೆಗೆ ಒಳಪಟ್ಟ ಪ್ರಾದಿಕಾರಗಳು ಶಾಸನಬದ್ದವಾದ ತೆರಿಗೆಗಳನ್ನು ಜೀವ ವಿಮಾ ಪಾಲಿಸಿಗಳಿಗೆ ಅನ್ವಯವಾಗುವಂತೆ ಮಾಡಿದಲ್ಲಿ, ಅಂತಹ ತೆರಿಗೆಗಳು ಈ ಪಾಲಿಸಿಗೂ ಅನ್ವಯಿಸುತ್ತದೆ. ಹಾಗಾಗಿ ಪ್ರೀಮಿಯಂ ನೀಡುವಾಗ ಅವತ್ತಿನ ದಿನ ಯಾವ ತೆರಿಗೆಯು ಆ ಪಾಲಿಸಿಗೆ ಅನ್ವಯವಾಗುವುದೊ, ಅದನ್ನು ಸೇರಿಸಿ ನೀಡಬೇಕಾಗುತ್ತದ.

ಪ್ರೀಮಿಯಂ ಮೊತ್ತದ ಜೊತೆಗೆ, ಸರ್ವಿಸ್ ಟಾಕ್ಸ್ ಅನ್ನು ಕೂಡ ಕಟ್ಟಬೇಕಾಗುತ್ತದೆ. ಇದು, ಪ್ರೀಮಿಯಂ ಮೊತ್ತದ ಜೊತೆಗೆ ಸೇರದೆ ಸೆಪರೇಟ್ ಆಗಿ ನಮೂದಿಸಲಾಗುತ್ತದೆ. ಪ್ರೀಮಿಯಂ ಜೊತೆಯಲ್ಲಿ ನೀಡುವ ಯಾವ ತೆರಿಗೆಗಳನ್ನೂ, ಬೆನಿಫಿಟ್ ಲೆಕ್ಕಕ್ಕೆ ಸೇರಿಸುವುದಿಲ್ಲ.

ಪಾಲಿಸಿಗೆ ಫ್ರೀ ಲುಕ್ ಪೀರಿಯಡ್

ಇತರೆ ಜೀವ ವಿಮಾ ಪಾಲಿಸಿ ಗಳಲ್ಲಿ ನೀಡುತ್ತಿರುವ ಒಂದು ಸವಲತ್ತು ಈ ಪಾಲಿಸಿಯಲ್ಲೂ ಪಾಲಿಸಿದಾರನಿಗೆ ಲಭ್ಯವಿದೆ. ಅದೆಂದರೆ, ಫ್ರೀ ಲುಕ್ ಪೀರಿಯಡ್. ಈ ಫ್ರೀ ಲುಕ್ ಪೀರಿಯಡ್ ನಲ್ಲಿ, ಪಾಲಿಸಿದಾರನು, ಪಾಲಿಸಿಯ ದಾಖಲೆಗಳು ಅವನ ಕೈ ಸೇರಿದ 15 ದಿವಸಗಳಲ್ಲಿ ಅದರಲ್ಲಿ ನಮೂದಿಸಿರುವ ಎಲ್ಲ ನಿಯಮಗಳು ಹಾಗೂ ನಿಬಂದನೆಗಳನ್ನು ಓದಿ ಅದನ್ನು ಅರ್ಥ ಮಾಡಿಕೊಳ್ಳಲು ನೀಡುವ ಕಾಲಾವಕಾಶ ಆಗಿರುತ್ತದೆ. ಅಕಸ್ಮಾತ್ ಪಾಲಿಸಿದಾರನಿಗೆ ಇದರಲ್ಲಿರುವ ಯಾವುದೇ ನಿಯಮಗಳ  ಅಥವಾ ನಿಬಂದನೆಗಳ ಬಗ್ಗೆ ಒಪ್ಪಿಗೆ ಆಗದಿದ್ದಲ್ಲಿ, ಆ ಪಾಲಿಸಿಯನ್ನು ಆತನು 15 ದಿನಗಳ ಒಳಗೆ ಎಲ್ ಐ ಸಿ ಗೆ ಹಿಂದಿರುಗಿಸಬಹುದು. ಆದರೆ, ಆ ರೀತಿ ಹಿಂದಿರುಗಿಸಲು ಕಾರಣ ನೀಡಬೇಕಾಗುತ್ತದೆ. ಪಾಲಿಸಿಯು ಕಾರ್ಪೊರೇಷನ್ ಗೆ ತಲುಪಿದ ಕೂಡಲೇ ಆ ಪಾಲಿಸಿಯನ್ನು ರದ್ದು ಮಾಡಲಾಗುವುದು. ಆದರೆ, ಹಿಂದಿರುಗಿಸುವ ಮೊತ್ತದಲ್ಲಿ, ಪ್ರೊಪೋರ್ಷನೆಟ್ ರಿಸ್ಕ್ ಪ್ರೀಮಿಯಂ (ಬೇಸ್ ಪ್ಲಾನ್ ಮತ್ತು ರೈಡರ್ ಗೆ), ವೈದ್ಯಕೀಯ ಪರೀಕ್ಷೆಗೆ ಹಾಗೂ ಅದರ ರಿಪೋರ್ಟ್ ಗಳಿಗೆ ತಗುಲಿರಬಹುದಾದ  ವೆಚ್ಚ ವನ್ನು ಅದರಿಂದ ಕಳೆದು, ಉಳಿದ ಹಣವನ್ನು ಹಿಂದಿರುಗಿಸಲಾಗುವುದು

ಪಾಲಿಸಿಯಲ್ಲಿ ಸೇರಿಲ್ಲದೆ ಇರುವುದು

ಈ ಪಾಲಿಸಿಯಲ್ಲಿ ಪಾಲಿಸಿದಾರನ ಆತ್ಮಹತ್ಯೆ ಸೇರಿರುವುದಿಲ್ಲ. ಪಾಲಿಸಿದಾರನು ಆತ್ಮಹತ್ಯೆ ಮಾಡಿಕೊಂಡಲ್ಲಿ, ಪಾಲಿಸಿಯು ತನ್ನ  ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. .

  • ಪಾಲಿಸಿದಾರನು ಪಾಲಿಸಿ ತೆಗೆದು ಕೊಂಡ ದಿವಸದಿಂದ  12 ತಿಂಗಳುಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ, ಅಂತಹ ಪಾಲಿಸಿಯು ಕಾರ್ಪೊರೇಷನ್ ಆ ಪಾಲಿಸಿಗೆ ನೀಡಬೇಕಾಗಿರುವ ಬೆನಿಫಿಟ್ ಗಳಿಗೆ ಅರ್ಹತೆ ಪಡುವುದಿಲ್ಲ. ಆದರೆ, ಅದುವರೆವಿಗೂ ನೀಡಿರುವ ಪ್ರೀಮಿಯಂ ಗಳ 80 % ಮೊತ್ತವನ್ನು ಕಾರ್ಪೊರೇಷನ್ ನಾಮಿನಿಗೆ ನೀಡುತ್ತದೆ. ಇದರಲ್ಲಿ, ಅನ್ವಯವಾಗುವ ತೆರಿಗೆ, ಎಕ್ಸ್ಟ್ರಾ ಪ್ರೀಮಿಯಂ ಗಳು ಹಾಗೂ ರೈಡರ್ ಪ್ರೀಮಿಯಂ ಗಳು ಇದ್ದಲ್ಲಿ, ಅದನ್ನು ಕಡಿತಗೊಳಿಸಿ ಉಳಿಕೆ ಹಣವನ್ನು ನೀಡಲಾಗುವುದು.
  • ಅದೇ ರೀತಿ, ಪಾಲಿಸಿದಾರನು ಪಾಲಿಸಿಯನ್ನು ರಿವೈವಲ್ ಮಾಡಿದ 12 ತಿಂಗಳುಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ, ಅಲ್ಲಿಯವರೆಗೂ ನೀಡಿರುವ ಪ್ರೀಮಿಯಂ ಮೊತ್ತದ 80 % ಮೊತ್ತ  ಅಥವಾ ಸರಂಡರ್ ಮೊತ್ತ ಇವುಗಳಲ್ಲಿ ಯಾವುದು ಹೆಚ್ಚೋ ಅದನ್ನು ನೀಡಲಾಗುವುದು. ಆದರೆ ಪಾಲಿಸಿಯು ಅಸ್ಥಿತ್ವದಲ್ಲಿ ಇರಬೇಕು.

ಈ ಮೇಲಿನ ಮೊತ್ತವನ್ನು ಬಿಟ್ಟು ಬೇರೆ ಯಾವುದೇ ಕ್ಲೈಮ್ ಗಳನ್ನು ಕಾರ್ಪೊರೇಷನ್ ನೀಡುವುದಿಲ್ಲ.

- / 5 ( Total Rating)