ಎಲ್ ಐ ಸಿ ಸಿಂಗಲ್ ಪ್ರೀಮಿಯಂ ಎಂಡೋಮೆಂಟ್ ಪ್ಲಾನ್
  • ಅತ್ಯುತ್ತಮ ಯೋಜನೆಗಳು
  • ಸುಲಭ ಹೋಲಿಕೆ
  • ತಕ್ಷಣದ ಖರೀದಿ
PX step

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಹುಟ್ಟಿದ ದಿನಾಂಕ (ದೊಡ್ಡ ಸದಸ್ಯ)
ಆದಾಯ
| ಲಿಂಗ

1

2

ಫೋನ್ ಸಂಖ್ಯೆ
ಹೆಸರು
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯ ಜನರ ಅವಶ್ಯಕತೆಗೆ ತಕ್ಕಂತೆ ವಿಮಾ ಪಾಲಿಸಿಗಳನ್ನು ರೂಪಿಸಿ ಅದನ್ನು ಜನತೆಗೆ ತಲುಪುವ ಹಾಗೆ ಮಾಡುತ್ತಿದೆ. ಅದರಿಂದ ಜನರಿಗೆ ಸಾಕಷ್ಟು ಉಪಯೋಗವಾಗಿದ್ದು, ವಿಮಾ ಯೋಜನೆ ಅಂದ ತಕ್ಷಣ ಎಲ್ ಐ ಸಿ ಎನ್ನುವ ರೀತಿಯಲ್ಲಿ ಜನರ ಮನಸ್ಸಿನಲ್ಲಿ ಬೇರೂರಿದೆ.

ಎಲ್ ಐ ಸಿ ಸಿಂಗಲ್ ಪ್ರೀಮಿಯಂ ಎಂಡೋಮೆಂಟ್ ಪ್ಲಾನ್ ಆದರ ಇನ್ನೊಂದು ಕೊಡುಗೆ ಆಗಿದ್ದು, ಈ ಯೋಜನೆಯು ನಾನ್ ಲಿಂಕ್ಡ್ ಹಾಗೂ ಲಾಭವನ್ನು ಗಳಿಸಿಕೊಡುವ ಮತ್ತು ಅದೇ ಸಮಯದಲ್ಲಿ ಪಾಲಿಸಿದಾರನಿಗೆ ಜೀವ ವಿಮಾ ರಕ್ಷಣೆಯನ್ನು ಕೂಡ ನೀಡುವ ಪಾಲಿಸಿ ಆಗಿರುತ್ತದೆ. ಈ ಯೋಜನೆಯಲ್ಲಿ, ಪಾಲಿಸಿದಾರನು ಪಾಲಿಸಿಯನ್ನು ಪಡೆಯುವ ಸಮಯದಲ್ಲಿ ಕೇವಲ ಒಂದು (ಸಿಂಗಲ್) ಪ್ರೀಮಿಯಂ ಮಾತ್ರ ನೀಡಬೇಕಾಗುತ್ತದೆ.

ಪಾಲಿಸಿದಾರನು ಅವನಿಗೆ ಅನುಕೂಲ ಆಗುವಂತಹ ಹಾಗೂ ಅವನ ಅವಶ್ಯಕತೆಗೆ ತಕ್ಕಂತೆ ಮೆಚೂರಿಟೀ ಸಮ್ ಅಶ್ಶುರ್ಡ್ ಮೊತ್ತವನ್ನು ಆಯ್ಕೆ ಮಾಡಿಕೊಳ್ಳಬಹುದು. ಅವನು ನೀಡಬೇಕಾಗಿರುವ ಸಿಂಗಲ್ ಪ್ರೀಮಿಯಂ ಮೊತ್ತವು ಸಮ್ ಅಶ್ಶುರ್ಡ್ ಮೊತ್ತ ಹಾಗೂ ಅವನ ಪಾಲಿಸಿ ತೆಗೆದುಕೊಳ್ಳುವಾಗ ಇರುವ ವಯಸ್ಸಿನ  ಮೇಲೆ ಅವಲಂಬಿಸಿರುತ್ತದೆ. ಈ ಸಿಂಗಲ್ ಪ್ರೀಮಿಯಂ ಮೊತ್ತದ ಜೊತೆಗೆ ಆಗ ಅನ್ವಯವಾಗುವ ಸರ್ವಿಸ್ ಟಾಕ್ಸ್ ಅನ್ನು ಕೂಡ ಸೇರಿಸಿ ನೀಡಬೇಕಾಗುತ್ತದೆ. ಇದರ ಇನ್ನೊಂದು ವೈಶಿಷ್ಟ್ಯ ಏನೆಂದರೆ, ಈ ಪಾಲಿಸಿಯನ್ನು ಕೇವಲ 90 ದಿವಸ ಆಗಿರುವ ಮಗುವಿನ ಹೆಸರಿನಲ್ಲೂ ಕೂಡ ತೆಗೆದುಕೊಳ್ಳಬಹುದು.

ಪಾಲಿಸಿಯು, ಪಾಲಿಸಿದಾರನ ಮರಣದ  ನಂತರ  ಆತನ ಕುಟುಂಬಕ್ಕೆ ಆರ್ಥಿಕ ರಕ್ಷಣೆಯನ್ನು ನೀಡುವಲ್ಲಿ ಸಹಾಯ ಮಾಡುತ್ತದೆ. ಅದೇ ಪಾಲಿಸಿದಾರನು ಪಾಲಿಸಿಯ ಅವದಿಯನ್ನು ಮುಗಿಸಿದಲ್ಲಿ (ಆ ಅವದಿಯಲ್ಲಿ ಜೀವಂತವಾಗಿ ಇದ್ದಲ್ಲಿ) ಆ ಪಾಲಿಸಿಗೆ ಆವದಿ ಮುಗಿದ ನಂತರ ಒಂದು ಖಚಿತ ಲಂಪ್ ಸಮ್ ಮೊತ್ತವನ್ನು ನೀಡಲಾಗುತ್ತದೆ. ಇದು, ಪಾಲಿಸಿದಾರನಿಗೆ ಪಾಲಿಸಿಯ ಅವದಿಯ ಮದ್ಯದಲ್ಲಿ ಹಣದ  ಅವಶ್ಯಕತೆ ಇದ್ದಲ್ಲಿ, ಪಾಲಿಸಿಯ ಮೇಲೆ ಸಾಲ ಸೌಲಬ್ಯವನ್ನು ಕೂಡ ನೀಡುತ್ತದೆ.

ಎಲ್ ಐ ಸಿ ಸಿಂಗಲ್ ಪ್ರೀಮಿಯಂ ಎಂಡೋಮೆಂಟ್ ಪ್ಲಾನ್ – ಅರ್ಹತೆಗಳು ಹಾಗೂ ನಿಬಂದನೆಗಳು

ಎಲ್ ಐ ಸಿ ಸಿಂಗಲ್ ಪ್ರೀಮಿಯಂ ಎಂಡೋಮೆಂಟ್ ಪ್ಲಾನ್ ಪಡೆಯಲು ಬೇಕಾದ ಅರ್ಹತೆಗಳು ಹಾಗೂ ಆದರ ನಿಬಂದನೆಗಳನ್ನು ಕೆಳಗೆ ವಿವರಿಸಲಾಗಿದೆ.

ಪಾಲಿಸಿ ಪಡೆಯುವಾಗ ಪಾಲಿಸಿದಾರನ ಕನಿಷ್ಠ ವಯಸ್ಸು

90 ದಿವಸಗಳು(ಮುಗಿದಿರಬೇಕು)

ಪಾಲಿಸಿ ಪಡೆಯುವಾಗ ಪಾಲಿಸಿದಾರನ ಗರಿಷ್ಠ ವಯಸ್ಸು

65 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ)

ಪಾಲಿಸಿ ಮೆಚೂರಿಟೀ ಆಗುವಾಗ ಪಾಲಿಸಿದಾರನಿಗೆ ಗರಿಷ್ಠ ವಯಸ್ಸು

75 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ)

ಪಾಲಿಸಿ ಮೆಚೂರಿಟೀ ಆಗುವಾಗ ಪಾಲಿಸಿದಾರನಿಗೆ ಕನಿಷ್ಠ ವಯಸ್ಸು

18 ವರ್ಷಗಳು (ಮುಗಿದಿರಬೇಕು)

ಪಾಲಿಸಿಯ ಕನಿಷ್ಠ ಅವದಿ (ಟರ್ಮ್)

10 ವರ್ಷಗಳು

ಪಾಲಿಸಿಯ ಗರಿಷ್ಠ ಅವದಿ (ಟರ್ಮ್)

25 ವರ್ಷಗಳು  

ಕನಿಷ್ಠ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ

ರೂ 50000

ಗರಿಷ್ಠ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ

ಯಾವುದೇ ಮಿತಿ ಇಲ್ಲ

ಸಮ್ ಅಶ್ಶುರ್ಡ್ ಮೊತ್ತವು ರೂ 5000 ದ ಮಲ್ಟಿಪಲ್ಸ್ ಗಳಲ್ಲಿ ಇರಬೇಕು

ಪಾಲಿಸಿಯನ್ನು ನೀಡುವ ರೀತಿ (ಪಾಲಿಸಿ ಪೇಮೆಂಟ್ ಮೋಡ್)

ಸಿಂಗಲ್ ಪ್ರೀಮಿಯಂ ಮಾತ್ರ

 

ಪಾಲಿಸಿಯ ಮೇಲೆ ರಿಸ್ಕ್ ಕವರೆಜ್ ಶುರು ಆಗುವ ದಿವಸ

ಪಾಲಿಸಿದಾರನ ವಯಸ್ಸು 8 ವರ್ಷಕ್ಕಿಂತ ಕಡಿಮೆ ಇದ್ದಲ್ಲಿ, ರಿಸ್ಕ್ ಕವರೆಜ್ ಪಾಲಿಸಿಯನ್ನು ಪಡೆದ 2 ವರ್ಷಗಳ ನಂತರ ಅಥವಾ 8 ನೇ ವರ್ಷದ ಹುಟ್ಟು ಹಬ್ಬಕ್ಕೆ ಹತ್ತಿರ  ಇರುವ ಪಾಲಿಸಿ ಅನಿವರ್ಸರಿ ದಿವಸ ಅಥವಾ 8 ನೆಯ ವರ್ಷ ಆದ ತಕ್ಷಣವೇ ಶುರು ಆಗುತ್ತದೆ.

ಪಾಲಿಸಿ ಪ್ರೀಮಿಯಂ ಮೊತ್ತದ ಉದಾಹರಣೆ

ಕೆಳಗೆ ನೀಡಿರುವ ಟೇಬಲ್ ನಲ್ಲಿ ಕೆಲವು ಪ್ರೀಮಿಯಂ ರೇಟ್ ಗಳನ್ನು (ರೂ ಗಳಲ್ಲಿ) (ಸರ್ವಿಸ್ ಟಾಕ್ಸ್ ಮೊತ್ತವನ್ನು ಹೊರತು ಪಡಿಸಿ) ನೀಡಲಾಗಿದೆ.

ಟೇಬಲ್ ನಲ್ಲಿ ನಮೂದಿಸಿರುವ ರೇಟ್ ಪ್ರತಿ ರೂ 1000 ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತಕ್ಕೆ ಅನ್ವಯವಾಗುತ್ತದೆ.

ವಯಸ್ಸು (ವರ್ಷಗಳಲ್ಲಿ)

10 ವರ್ಷಗಳ ಪಾಲಿಸಿ

15 ವರ್ಷಗಳ ಪಾಲಿಸಿ

25 ವರ್ಷಗಳ ಪಾಲಿಸಿ

10

756.90

640.30

463.10

20

757.60

641.55

465.85

30

757.95

642.60

470.90

40

759.75

647.65

488.35

50

766.05

662.25

527.35

60

777.50

688.60

-

ಸೂಚನೆ: ಮೇಲೆ ನಮೂದಿಸಿರುವ ಟ್ಯಾಬುಲರ್ ಸಿಂಗಲ್ ಪ್ರೀಮಿಯಂ ರೇಟ್ಸ್ ನಲ್ಲಿ ಎಕ್ಸ್ಟ್ರಾ ಪ್ರೀಮಿಯಂ ರೇಟ್ಸ್ ಆಗಲಿ ಅಥವಾ ಇತರೆ ತೆರಿಗೆಗಳಾಗಲಿ ಸೇರಿರುವು ದಿಲ್ಲ ಮತ್ತು ಇದು ಹೆಚ್ಚಿನ ಮೆಚೂರಿಟೀ ಸಮ್ ಮೊತ್ತಕ್ಕೆ ನೀಡುವ ರಿಯಾಯತಿ ನೀಡುವ ಮುಂಚಿನ ಮೊತ್ತ.

ಎಲ್ ಐ ಸಿ ಸಿಂಗಲ್ ಪ್ರೀಮಿಯಂ ಎಂಡೋಮೆಂಟ್ ಪ್ಲಾನ್ – ಬೆನಿಫಿಟ್ ಗಳು

ಡೆತ್ ಬೆನಿಫಿಟ್

ಈ ಯೋಜನೆಯ ಅಡಿಯಲ್ಲಿ, ಡೆತ್ ಬೆನಿಫಿಟ್ ನೀಡಲು ಎರಡು ಪರಿಸ್ತಿತಿಯನ್ನು ಗಮನಕ್ಕೆ ತೆಗೆದುಕೊಳ್ಳಲಾಗುವುದು. ಅದರ ವಿವರವು ಈ ಕೆಳ ಕಂಡಂತಿದೆ. 

  • ಪಾಲಿಸಿದಾರನ ಮರಣವು ರಿಸ್ಕ್ ಕವರೆಜ್ ಶುರು ಆಗುವ ಮುಂಚೆ ಸಂಭವಿಸಿದಲ್ಲಿ  (ಆವದಿಯ ಒಳಗೆ) - ಪಾಲಿಸಿದಾರನು ಆವದಿಯ ಒಳಗೆ ಹಾಗೂ ಪಾಲಿಸಿಯ ಮೇಲಿನ ರಿಸ್ಕ್ ಕವರೆಜ್ ಶುರು ಆಗುವ ಮುಂಚೆ ಮರಣ ಹೊಂದಿದಲ್ಲಿ, ಅಂತಹ ಪಾಲಿಸಿಗೆ ಅವನು ನೀಡಿರುವ ಸಿಂಗಲ್ ಪ್ರೀಮಿಯಂ ಮೊತ್ತದಲ್ಲಿ ಸರ್ವಿಸ್ ಟಾಕ್ಸ್ ಮೊತ್ತ, ಎಕ್ಸ್ಟ್ರಾ ಪ್ರೀಮಿಯಂ ಗಳು ಇದ್ದಲ್ಲಿ ಅದರ ಮೊತ್ತ ಇವುಗಳನ್ನು ಕಳೆದು ಯಾವುದೇ ಬಡ್ಡಿ ಇಲ್ಲದೆ ಉಳಿದ ಹಣವನ್ನು ನೀಡಲಾಗುತ್ತದೆ.
  • ಪಾಲಿಸಿದಾರನ ಮರಣವು ರಿಸ್ಕ್ ಕವರೆಜ್ ಶುರು ಆದ ಮೇಲೆ ಸಂಭವಿಸಿದಲ್ಲಿ  (ಆವದಿಯ ಒಳಗೆ) - ಪಾಲಿಸಿದಾರನು ಆವದಿಯ ಒಳಗೆ ಹಾಗೂ ಪಾಲಿಸಿಯ ಮೇಲಿನ ರಿಸ್ಕ್ ಕವರೆಜ್ ಶುರು ಆದ ಮೇಲೆ ಮರಣ ಹೊಂದಿದಲ್ಲಿ, ಅಂತಹ ಪಾಲಿಸಿಗೆ, ಸಮ್ ಅಶ್ಶುರ್ಡ್ ಮೊತ್ತ ಹಾಗೂ ಅದರ  ಜೊತೆಗೆ ವೆಸ್ಟೆಡ್ ಸಿಂಪಲ್ ರಿವರ್ಸನರಿ ಬೋನಸ್ ಮೊತ್ತ ಮತ್ತು ಅಂತಿಮ ಅಡಿಷನಲ್ ಬೋನಸ್ ಮೊತ್ತ (ಇದ್ದಲ್ಲಿ) ಇವುಗಳನ್ನು ಸೇರಿಸಿ ನೀಡಲಾಗುವುದು.

ಮೆಚೂರಿಟೀ ಬೆನಿಫಿಟ್

ಪಾಲಿಸಿಯು ತನ್ನ ಪೂರ್ಣ ಅವದಿಯನ್ನು ಮುಗಿಸಿದಲ್ಲಿ. ಅಂತಹ ಪಾಲಿಸಿಗೆ ಮೆಚೂರಿಟೀ ಬೆನಿಫಿಟ್ ಅನ್ವಯ ಆಗುತ್ತದೆ. ಅದರ ಪ್ರಕಾರ, ಪಾಲಿಸಿಗೆ ಸಮ್ ಅಶ್ಶುರ್ಡ್ ಮೊತ್ತದ ಜೊತೆಗೆ ವೆಸ್ಟೆಡ್ ಸಿಂಪಲ್ ರಿವರ್ಸನರಿ ಬೋನಸ್ ಮೊತ್ತ ಮತ್ತು ಅಂತಿಮ ಅಡಿಷನಲ್ ಬೋನಸ್ ಮೊತ್ತ (ಇದ್ದಲ್ಲಿ) ಇವುಗಳನ್ನು ಸೇರಿಸಿ ನೀಡಲಾಗುವುದು.

ಪಾಲಿಸಿಯು ಬಂಡವಾಳ ಹೂಡಿಕೆ ಹಾಗೂ ಲಾಭದಲ್ಲಿ ಬಾಗಿ ಆಗುವಿಕೆ

ಪಾಲಿಸಿಯ ಹಾಗೂ ಕಾರ್ಪೊರೇಷನ್ ನಿಯಮಾವಳಿಗಳ ಪ್ರಕಾರ, ಎಲ್ ಐ ಸಿ ಸಿಂಗಲ್ ಪ್ರೀಮಿಯಂ ಎಂಡೋಮೆಂಟ್ ಪಾಲಿಸಿಯು ಕಾರ್ಪೊರೇಷನ್ ನ ಬಂಡವಾಳ ಹೂಡಿಕೆಯಲ್ಲಿ ಬಾಗಿ ಆಗುತ್ತದೆ. ಆದ್ದರಿಂದ, ಅದರ ಬಾಬ್ತು ಬರಬಹುದಾದ ಲಾಭಗಳಿಗೂ ಅರ್ಹತೆ ಹೊಂದುತ್ತದೆ. ಆದರ ರೀತ್ಯ ಕಾರ್ಪೊರೇಷನ್ ನೀಡುವ ಸಿಂಪಲ್ ರಿವರ್ಶನರಿ ಬೋನಸ್ ಹಾಗೂ ಅಂತಿಮ ಅಡಿಷನಲ್ ಬೋನಸ್ ಕೂಡ ಪಡೆಯುತ್ತದೆ.

ಮೇಲ್ಕಂದ ಸಿಂಪಲ್ ರಿವರ್ಶನರಿ ಬೋನಸ್ ಹಾಗೂ ಅಂತಿಮ ಅಡಿಷನಲ್ ಬೋನಸ್ ಗಳು ಕಾರ್ಪೊರೇಷನ್ ನವರು ಪಾಲಿಸಿಯು ಕ್ಲೆಯಿಮ್ ಗೆ ಬಂದ ವರ್ಷದಲ್ಲಿ ನಿಯಮಗಳ ಪ್ರಕಾರ ಘೋಷಿಸಿರುವ ಮೊತ್ತಗಳನ್ನು ಪಡೆಯುತ್ತವೆ.

ಎಲ್ ಐ ಸಿ ಸಿಂಗಲ್ ಪ್ರೀಮಿಯಂ ಎಂಡೋಮೆಂಟ್ ಪ್ಲಾನ್ – ಬೆನಿಫಿಟ್ ಉದಾಹರಣೆ

ಈ ಪಾಲಿಸಿಗೆ ಬರಬಹುದಾದ ಬೆನಿಫಿಟ್ ಗಳ ಉದಾಹರಣೆಯನ್ನು ಈ ಕೆಳಗೆ ನೀಡಲಾಗಿದೆ

ಪಾಲಿಸಿದಾರನ ವಯಸ್ಸು ಯೋಜನೆ ಪಡೆಯುವಾಗ

30 ವರ್ಷಗಳು

ಪಾಲಿಸಿ ಅವದಿ (ಟರ್ಮ್)

25 ವರ್ಷಗಳು

ಪ್ರೀಮಿಯಂ ನೀಡುವ ರೀತಿ

ವಾರ್ಷಿಕ

ಸಮ್ ಅಶ್ಶುರ್ಡ್

ರೂ 50000

ವಾರ್ಷಿಕ ಪ್ರೀಮಿಯಂ

23545

ಬದಲಾಗಬಹುದಾದ ಸಿನ್ಯರಿಯೋ 1 – ಬಂಡವಾಳ ಹೂಡಿಕೆಯಿಂದ ಬರಬಹುದಾದ ರಿಟರ್ನ್ ವಾರ್ಷಿಕ 4 % ಎಂದು ಪರಿಗಣಿಸಿ

ಬದಲಾಗಬಹುದಾದ ಸಿನ್ಯರಿಯೋ 2 – ಬಂಡವಾಳ ಹೂಡಿಕೆಯಿಂದ ಬರಬಹುದಾದ ರಿಟರ್ನ್ ವಾರ್ಷಿಕ 8 % ಎಂದು ಪರಿಗಣಿಸಿ

ವರ್ಷದ  ಕಡೆಯಲ್ಲಿ

ವರ್ಷದ ಕಡೆಯಲ್ಲಿ ಒಟ್ಟು ಪ್ರೀಮಿಯಂ (ರೂ ಗಳಲ್ಲಿ)

ಮರಣದ ವರ್ಷದಲ್ಲಿ ನೀಡುವ ವಾರ್ಷಿಕ ಮೊತ್ತ

ಪಾಲಿಸಿ ಸರಂಡರ್ ಮಾಡಿದ ವರ್ಷದಲ್ಲಿ ನೀಡುವ ವಾರ್ಷಿಕ ಮೊತ್ತ

   

ಗ್ಯಾರಂಟಿಡ್

ಮೊತ್ತ

ಬದಲಾಗಬಹುದಾದ ಮೊತ್ತ

ಒಟ್ಟು ಮೊತ್ತ

ಗ್ಯಾರಂಟಿಡ್ ಸರಂಡರ್ ಮೊತ್ತ

ಸರಂಡರ್ ಮೌಲ್ಯದ ಬೋನಸ್ ಮೊತ್ತ

ಒಟ್ಟಾರೆ ಗ್ಯಾರಂಟಿಡ್ ಮೊತ್ತ

     

ಸಿನ್ಯರಿಯೋ   1

ಸಿನ್ಯರಿಯೋ 2

ಸಿನ್ಯರಿಯೋ 1

ಸಿನ್ಯರಿಯೋ 2

 

ಸಿನ್ಯರಿಯೋ 1

ಸಿನ್ಯರಿಯೋ 2

ಸಿನ್ಯರಿಯೋ 1

ಸಿನ್ಯರಿಯೋ 2

1

23545

50000

0

1900

50000

51900

16482

0

284

16482

16766

2

23545

50000

0

3800

50000

53800

21191

0

575

21191

21765

3

23545

50000

0

5700

50000

55700

21191

0

871

21191

22061

4

23545

50000

0

7600

50000

57600

21191

0

1172

21191

22362

5

23545

50000

0

9500

50000

59500

21191

0

1477

21191

22668

6

23545

50000

0

11400

50000

61400

21191

0

1792

21191

22983

7

23545

50000

0

13300

50000

63300

21191

0

2119

21191

23309

8

23545

50000

0

15200

50000

65200

21191

0

2465

21191

23656

9

23545

50000

0

17100

50000

67100

21191

0

2835

21191

24026

10

23545

50000

0

19000

50000

69000

21191

0

3236

21191

24426

11

23545

50000

0

20900

50000

70900

21191

0

3674

21191

24865

12

23545

50000

0

22800

50000

72800

21191

0

4008

21191

25199

13

23545

50000

0

24700

50000

74700

21191

0

4362

21191

25553

14

23545

50000

0

26600

50000

76600

21191

0

4748

21191

25939

15

23545

50000

0

28750

50000

78750

21191

0

5176

21191

26366

16

23545

50000

0

30650

50000

80650

21191

0

5654

21191

26845

17

23545

50000

0

32800

50000

82800

21191

0

6195

21191

27396

18

23545

50000

0

34950

50000

84950

21191

0

6816

21191

28007

19

23545

50000

0

37100

50000

87100

21191

0

7527

21191

28717

20

23545

50000

0

39250

50000

89250

21191

0

8356

21191

29547

21

23545

50000

0

41400

50000

91400

21191

0

9329

21191

30519

22

23545

50000

0

44050

50000

94050

21191

0

10471

21191

31661

23

23545

50000

0

46700

50000

96700

21191

0

11825

21191

33016

24

23545

50000

0

49350

50000

99350

21191

0

13680

21191

34871

25

23545

50000

0

52500

50000

102500

21191

0

16625

21191

37816

 

ಸೂಚನೆ :

  • ಮೇಲೆ ತೋರಿಸಿರುವ ಸಿಂಗಲ್ ಪ್ರೀಮಿಯಂ ಮೊತ್ತದಲ್ಲಿ ತೆರಿಗೆಗಳು ಹಾಗೂ ಎಕ್ಷ್ತ್ರಾ  ಪ್ರೀಮಿಯಂ ಮೊತ್ತಗಳನ್ನು ಹೊರತು ಪಡಿಸಿ
  • ಸ್ಪೆಷಲ್ ಸರಂಡರ್ ಮೊತ್ತವು ಗ್ಯಾರಂಟಿಡ್ ಸಮ್ ಅಶ್ಶುರ್ಡ್ ಮೊತ್ತಕ್ಕಿಂತ ಹೆಚ್ಚಿದ್ದಲ್ಲಿ ಅದನ್ನು ನೀಡಲಾಗುವುದು

ಎಲ್ ಐ ಸಿ ಸಿಂಗಲ್ ಪ್ರೀಮಿಯಂ ಎಂಡೋಮೆಂಟ್ ಪ್ಲಾನ್ – ಇತರೆ ಬೆನಿಫಿಟ್ ಗಳು

ಹೆಚ್ಚಿನ ಸಮ್ ಅಶ್ಶುರ್ಡ್ ಮೊತ್ತಕ್ಕೆ ಸಿಗುವ ರಿಯಾಯತಿ

ಈ ಯೋಜನೆಯ ಅಡಿಯಲ್ಲಿ, ಪಾಲಿಸಿದಾರನಿಗೆ ಅವನು ಸಮ್ ಅಶ್ಶುರ್ಡ್ ಮೊತ್ತವನ್ನು ಹೆಚ್ಚಿಗೆ ಆಯ್ಕೆ ಮಾಡಿದಲ್ಲಿ, ಕೆಲವು ರಿಯಾಯತಿ ನೀಡಲಾಗುವುದು. ವಿವರ ಈ ಕೆಳ ಕಂಡಂತಿದೆ.

ಸಮ್ ಅಶ್ಶುರ್ಡ್ ಮೊತ್ತ (ರೂ ಗಳಲ್ಲಿ)

ಅನ್ವಯಿಸುವ ರಿಯಾಯತಿ (ಪರ್ಸೆಂಟೆಜ್ ನಲ್ಲಿ)

50000 ಇಂದ 95000

ಯಾವುದೇ ರಿಯಾಯತಿ ಇರುವುದಿಲ್ಲ

100000 ಇಂದ 195000 ದ ವರೆಗೆ

ಸಮ್ ಅಶ್ಶುರ್ಡ್ ಮೊತ್ತದ  ಮೇಲೆ 18 %

200000 ಇಂದ 295000 ದ ವರೆಗೆ

ಸಮ್ ಅಶ್ಶುರ್ಡ್ ಮೊತ್ತದ  ಮೇಲೆ 25 %

300000 ದ ಮೇಲ್ಪಟ್ಟು

ಸಮ್ ಅಶ್ಶುರ್ಡ್ ಮೊತ್ತದ  ಮೇಲೆ 30 %

ಪಾಲಿಸಿಯ ಮೇಲೆ ಸಾಲ ಸೌಲಭ್ಯ

ಎಲ್ ಐ ಸಿ ಸಿಂಗಲ್ ಎಂಡೋಮೆಂಟ್ ಪ್ರೀಮಿಯಂ ಪ್ಲಾನ್ ಪಾಲಿಸಿಯು ಕಾರ್ಪೊರೇಷನ್ ನಿಯಮದ ಪ್ರಕಾರ, ಸಾಲ ಸೌಲಭ್ಯಕ್ಕೆ ಅರ್ಹತೆ ಹೊಂದಿರುತ್ತದೆ. ಪಾಲಿಸಿಯು ಮೊದಲ ವರ್ಷವನ್ನು ಮುಗಿಸಿದ್ದಲ್ಲಿ, ಪಾಲಿಸಿದಾರನು ಆ ಪಾಲಿಸಿಯ ಮೇಲೆ ಸಾಲವನ್ನು ತೆಗೆದುಕೊಳ್ಳಬಹುದು ಹಾಗೂ ಸಾಲವನ್ನು ಕಾರ್ಪೊರೇಷನ್ ನ ನಿಯಮಗಳಿಗೆ ಬದ್ದವಾಗಿ ತೆಗೆದುಕೊಳ್ಳಬೇಕಾಗುತ್ತದೆ.

ಪಾಲಿಸಿಯ ಸರಂಡರ್ ಮೌಲ್ಯ

ಎಲ್ಲರಿಗೂ ತಿಳಿದಿರುವಂತೆ ವಿಮಾ ಯೋಜನೆಗಳು ಕಾರ್ಪೊರೇಷನ್ ನ ಜೊತೆಯಲ್ಲಿ ಪಾಲಿಸಿದಾರನು ಮಾಡಿಕೊಂಡಿರುವ ಒಂದು ದೀರ್ಘ ಕಾಲದ ಒಪ್ಪಂದ ಆಗಿರುತ್ತದೆ. ಆದ್ದರಿಂದ ಈ ಒಪ್ಪಂದದ ಮಧ್ಯದಲ್ಲಿ ಅನಿವಾರ್ಯತೆ ಇದ್ದಲ್ಲಿ, ಪಾಲಿಸಿದಾರನಿಗೆ ಸಹಾಯ ಆಗಲೆಂದು, ಎಲ್ ಐ ಸಿ ಯು ಕೆಲವು ಪಾಲಿಸಿಗಳ ಮೇಲೆ ಪಾಲಿಸಿಯನ್ನು ಸರಂಡರ್ ಮಾಡುವ ಅವಕಾಶ ನೀಡುತ್ತದೆ. ಈ ಪಾಲಿಸಿಯು ಕೂಡ ಆ ಸೌಲಭ್ಯವನ್ನು ಹೊಂದಿರುತ್ತದೆ. ಅಂದರೆ, ಪಾಲಿಸಿದಾರನು ಪಾಲಿಸಿಯ ಅವದಿ ಮುಗಿಯುವ ಮೊದಲೇ ಅದನ್ನು ಸರಂಡರ್ ಮಾಡಿ ಅದರ ಬಾಬ್ತು ಬರುವ ಹಣವನ್ನು ಪಡೆಯಬಹುದು.

ಹಾಗೆ ಮಾಡಿದಲ್ಲಿ, ಪಾಲಿಸಿದಾರನಿಗೆ ಸಿಗಬಹುದಾದ ಗ್ಯಾರಂಟಿಡ್ ಸರಂಡರ್ ಮೌಲ್ಯವು ಈ ಕೆಳ ಕಂಡಂತಿರುತ್ತದೆ

  1. ಪಾಲಿಸಿದಾರನು ಪಾಲಿಸಿಯನ್ನು ಮೊದಲ ವರ್ಷದಲ್ಲಿ ಸರಂಡರ್ ಮಾಡಿದಲ್ಲಿ – ಸಿಂಗಲ್ ಪ್ರೀಮಿಯಂ ನ 70 % ಮೊತ್ತವನ್ನು  ನೀಡಲಾಗುವುದು. ಅದರಲ್ಲಿ, ಸರ್ವಿಸ್ ಟಾಕ್ಸ್ ಮೊತ್ತ ಹಾಗೂ ಎಕ್ಷ್ತ್ರಾ ಪ್ರೀಮಿಯಂ ಮೊತ್ತ (ಇದ್ದಲ್ಲಿ) ಇವುಗಳನ್ನು ಕಳೆದು ಉಳಿದ ಮೊತ್ತವನ್ನು ನೀಡಲಾಗುವುದು.
  2. ಎರಡನೇ ಹಾಗೂ ಮುಂದಿನ ವರ್ಷಗಳಲ್ಲಿ ಪಾಲಿಸಿಯನ್ನು ಸರಂಡರ್ ಮಾಡಿದಲ್ಲಿ - ಸಿಂಗಲ್ ಪ್ರೀಮಿಯಂ ನ 90 % ಮೊತ್ತವನ್ನು ನೀಡಲಾಗುವುದು. ಅದರಲ್ಲಿ, ಸರ್ವಿಸ್ ಟಾಕ್ಸ್ ಮೊತ್ತ ಹಾಗೂ ಎಕ್ಷ್ತ್ರಾ ಪ್ರೀಮಿಯಂ ಮೊತ್ತ (ಇದ್ದಲ್ಲಿ) ಇವುಗಳನ್ನು ಕಳೆದು ಉಳಿದ ಮೊತ್ತವನ್ನು ನೀಡಲಾಗುವುದು

ಇದರ ಜೊತೆಗೆ, ಅನ್ವಯವಾಗುವ ವೆಸ್ಟೆಡ್ ಸಿಂಪಲ್ ರಿವರ್ಷನರಿ ಬೋನಸ್ ಇದ್ದಲ್ಲಿ ಅದನ್ನು ಕೂಡ ನೀಡಲಾಗುವುದು. ವೆಸ್ಟೆಡ್ ಸಿಂಪಲ್ ರಿವರ್ಷನರಿ ಬೋನಸ್ ಮೊತ್ತವು ವೆಸ್ಟೆಡ್ ಬೋನಸ್ ಮೊತ್ತವನ್ನು ಅದಕ್ಕೆ ಅನ್ವಯವಾಗುವ ಸರಂಡರ್ ವ್ಯಾಲ್ಯು ಫ್ಯಾಕ್ಟರ್ ನಿಂದ ಗುಣಿಸಿದಾಗ ಬರುವ ಮೊತ್ತ. ಈ ಫ್ಯಾಕ್ಟರ್ ಗಳು, ಪಾಲಿಸಿದಾರನು ಆಯ್ಕೆ ಮಾಡಿರುವ ಅವದಿ ಹಾಗೂ ಯಾವ ವರ್ಷದಲ್ಲಿ ಪಾಲಿಸಿಯನ್ನು ಸರಂಡರ್ ಮಾಡಲಾಗುತ್ತಿದೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ.

ಈ ಕೆಳಗೆ ಅನ್ವಯವಾಗುವ ಸರಂಡರ್ ವ್ಯಾಲ್ಯು ಫ್ಯಾಕ್ಟರ್ ಗಳನ್ನು ಟೇಬಲ್ ಮಾದರಿಯಲ್ಲಿ  ಸೂಚಿಸಲಾಗಿದೆ.

ಸೂಚಿಸಿರುವ ಸಂಖ್ಯೆ ಗಳು ಪರ್ಸೆಂಟೆಜ್ ನಲ್ಲಿ ಇರುತ್ತವೆ. ಅಂದರೆ 18.60 ಎಂದಿದ್ದಲ್ಲಿ. ಅದನ್ನು 18.60 % ಎಂದು ಓದಿಕೊಳ್ಳಬೇಕು

ಪಾಲಿಸಿಯ ವರ್ಷ

ಪಾಲಿಸಿಯ ಟರ್ಮ್

 

10

11

12

13

14

15

16

17

18

19

20

21

22

23

24

25

1

18.60

18.16

17.85

17.66

17.58

17.58

17.03

16.58

16.22

15.93

15.72

15.55

15.42

15.28

15.13

14.94

2

19.18

18.60

18.16

17.85

17.66

17.58

17.58

17.03

16.58

16.22

15.93

15.72

15.55

15.42

15.28

15.13

3

19.93

19.18

18.60

18.16

17.85

17.66

17.58

17.58

17.03

16.58

16.22

15.93

15.72

15.55

15.42

15.28

4

20.85

19.93

19.18

18.60

18.16

17.85

17.66

17.58

17.58

17.03

16.58

16.22

15.93

15.72

15.55

15.42

5

21.99

20.85

19.93

19.18

18.60

18.16

17.85

17.66

17.58

17.58

17.03

16.58

16.22

15.93

15.72

15.55

6

23.38

21.99

20.85

19.93

19.18

18.60

18.16

17.85

17.66

17.58

17.58

17.03

16.58

16.22

15.93

15.72

7

25.05

23.38

21.99

20.85

19.93

19.18

18.60

18.16

17.85

17.66

17.58

17.58

17.03

16.58

16.22

15.93

8

27.06

25.05

23.38

21.99

20.85

19.93

19.18

18.60

18.16

17.85

17.66

17.58

17.58

17.03

16.58

16.22

9

30.00

27.06

25.05

23.38

21.99

20.85

19.93

19.18

18.60

18.16

17.85

17.66

17.58

17.58

17.03

16.58

10

35.00

30.00

27.06

25.05

23.38

21.99

20.85

19.93

19.18

18.60

18.16

17.85

17.66

17.58

17.58

17.03

11

 

35.00

30.00

27.06

25.05

23.38

21.99

20.85

19.93

19.18

18.60

18.16

17.85

17.66

17.58

17.58

12

   

35.00

30.00

27.06

25.05

23.38

21.99

20.85

19.93

19.18

18.60

18.16

17.85

17.66

17.58

13

     

35.00

30.00

27.06

25.05

23.38

21.99

20.85

19.93

19.18

18.60

18.16

17.85

17.66

14

       

35.00

30.00

27.06

25.05

23.38

21.99

20.85

19.93

19.18

18.60

18.16

17.85

15

         

35.00

30.00

27.06

25.05

23.38

21.99

20.85

19.93

19.18

18.60

18.16

16

           

35.00

30.00

27.06

25.05

23.38

21.99

20.85

19.93

19.18

18.60

17

             

35.00

30.00

27.06

25.05

23.38

21.99

20.85

19.93

19.18

18

               

35.00

30.00

27.06

25.05

23.38

21.99

20.85

19.93

19

                 

35.00

30.00

27.06

25.05

23.38

21.99

20.85

20

                   

35.00

30.00

27.06

25.05

23.38

21.99

21

                     

35.00

30.00

27.06

25.05

23.38

22

                       

35.00

30.00

27.06

25.05

23

                         

35.00

30.00

27.06

24

                           

35.00

30.00

25

                             

35.00

ಕಾರ್ಪೊರೇಷನ್ ನವರು, ಸ್ಪೆಷಲ್ ಸರಂಡರ್ ಮೌಲ್ಯವು ಗ್ಯಾರಂಟಿಡ್ ಸರಂಡರ್ ಮೌಲ್ಯಕ್ಕಿಂತ ಹೆಚ್ಚಿದ್ದಲ್ಲಿ, ಅದನ್ನು ಪಾಲಿಸಿದಾರನಿಗೆ ನೀಡುವುದು.

ಪಾಲಿಸಿಯ ಮೇಲೆ ತೆರಿಗೆಗಳು

ಭಾರತ ಸರ್ಕಾರ ಅಥವಾ ಇನ್ನೂ ಯಾವುದೇ ಸರ್ಕಾರದ ಸ್ವಾಮ್ಯತೆಗೆ ಒಳಪಟ್ಟ ಪ್ರಾದಿಕಾರಗಳು ಶಾಸನಬದ್ದವಾದ ತೆರಿಗೆಗಳನ್ನು ಜೀವ ವಿಮಾ ಪಾಲಿಸಿಗಳಿಗೆ ಅನ್ವಯವಾಗುವಂತೆ ಮಾಡಿದಲ್ಲಿ, ಅಂತಹ ತೆರಿಗೆಗಳು ಈ ಪಾಲಿಸಿಗೂ ಅನ್ವಯಿಸುತ್ತದೆ. ಹಾಗಾಗಿ ಪ್ರೀಮಿಯಂ ನೀಡುವಾಗ ಅವತ್ತಿನ ದಿನ ಯಾವ ತೆರಿಗೆಯು ಆ ಪಾಲಿಸಿಗೆ ಅನ್ವಯವಾಗುವುದೊ, ಅದನ್ನು ಸೇರಿಸಿ ನೀಡಬೇಕಾಗುತ್ತದ.

ಪ್ರೀಮಿಯಂ ಮೊತ್ತದ ಜೊತೆಗೆ, ಸರ್ವಿಸ್ ಟಾಕ್ಸ್ ಅನ್ನು ಕೂಡ ಕಟ್ಟಬೇಕಾಗುತ್ತದೆ. ಇದು, ಪ್ರೀಮಿಯಂ ಮೊತ್ತದ ಜೊತೆಗೆ ಸೇರದೆ ಸೆಪರೇಟ್ ಆಗಿ ನಮೂದಿಸಲಾಗುತ್ತದೆ. ಪ್ರೀಮಿಯಂ ಜೊತೆಯಲ್ಲಿ ನೀಡುವ ಯಾವ ತೆರಿಗೆಗಳನ್ನೂ, ಬೆನಿಫಿಟ್ ಲೆಕ್ಕಕ್ಕೆ ಸೇರಿಸುವುದಿಲ್ಲ.

ಪಾಲಿಸಿಗೆ ಕೂಲಿಂಗ್-ಆಫ್ ಪೀರಿಯಡ್

ಇತರೆ ಜೀವ ವಿಮಾ ಪಾಲಿಸಿ ಗಳಲ್ಲಿ ನೀಡುತ್ತಿರುವ ಒಂದು ಸವಲತ್ತು ಈ ಪಾಲಿಸಿಯಲ್ಲೂ ಪಾಲಿಸಿದಾರನಿಗೆ ಲಭ್ಯವಿದೆ. ಅದೆಂದರೆ, ಕೂಲಿಂಗ್-ಆಫ್ ಪೀರಿಯಡ್. ಈ ಪೀರಿಯಡ್ ನಲ್ಲಿ, ಪಾಲಿಸಿದಾರನು, ಪಾಲಿಸಿಯ ದಾಖಲೆಗಳು ಅವನ ಕೈ ಸೇರಿದ 15 ದಿವಸಗಳಲ್ಲಿ ಅದರಲ್ಲಿ ನಮೂದಿಸಿರುವ ಎಲ್ಲ ನಿಯಮಗಳು ಹಾಗೂ ನಿಬಂದನೆಗಳನ್ನು ಓದಿ ಅದನ್ನು ಅರ್ಥ ಮಾಡಿಕೊಳ್ಳಲು ನೀಡುವ ಕಾಲಾವಕಾಶ ಆಗಿರುತ್ತದೆ. ಅಕಸ್ಮಾತ್ ಪಾಲಿಸಿದಾರನಿಗೆ ಇದರಲ್ಲಿರುವ ಯಾವುದೇ ನಿಯಮಗಳ  ಅಥವಾ ನಿಬಂದನೆಗಳ ಬಗ್ಗೆ ಒಪ್ಪಿಗೆ ಆಗದಿದ್ದಲ್ಲಿ, ಆ ಪಾಲಿಸಿಯನ್ನು ಆತನು 15 ದಿನಗಳ ಒಳಗೆ ಎಲ್ ಐ ಸಿ ಗೆ ಹಿಂದಿರುಗಿಸಬಹುದು. ಆದರೆ, ಆ ರೀತಿ ಹಿಂದಿರುಗಿಸಲು ಕಾರಣ ನೀಡಬೇಕಾಗುತ್ತದೆ. ಪಾಲಿಸಿಯು ಕಾರ್ಪೊರೇಷನ್ ಗೆ ತಲುಪಿದ ಕೂಡಲೇ ಆ ಪಾಲಿಸಿಯನ್ನು ರದ್ದು ಮಾಡಲಾಗುವುದು. ಆದರೆ, ಹಿಂದಿರುಗಿಸುವ ಮೊತ್ತದಲ್ಲಿ, ಪ್ರೊಪೋರ್ಷನೆಟ್ ರಿಸ್ಕ್ ಪ್ರೀಮಿಯಂ (ಬೇಸ್ ಪ್ಲಾನ್ ಮತ್ತು ರೈಡರ್ ಗೆ), ವೈದ್ಯಕೀಯ ಪರೀಕ್ಷೆಗೆ ಹಾಗೂ ಅದರ ರಿಪೋರ್ಟ್ ಗಳಿಗೆ ತಗುಲಿರಬಹುದಾದ  ವೆಚ್ಚ ವನ್ನು ಅದರಿಂದ ಕಳೆದು, ಉಳಿದ ಹಣವನ್ನು ಹಿಂದಿರುಗಿಸಲಾಗುವುದು.

ಪಾಲಿಸಿಯಲ್ಲಿ ಸೇರಿಲ್ಲದೆ ಇರುವುದು

ಈ ಪಾಲಿಸಿಯಲ್ಲಿ ಪಾಲಿಸಿದಾರನ ಆತ್ಮಹತ್ಯೆ ಸೇರಿರುವುದಿಲ್ಲ. ಪಾಲಿಸಿದಾರನು ಆತ್ಮಹತ್ಯೆ ಮಾಡಿಕೊಂಡಲ್ಲಿ, ಪಾಲಿಸಿಯು ತನ್ನ  ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. .

  • ಪಾಲಿಸಿದಾರನು ಪಾಲಿಸಿ ತೆಗೆದು ಕೊಂಡ ದಿವಸದಿಂದ  12 ತಿಂಗಳುಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ, ಅಂತಹ ಪಾಲಿಸಿಯು ಕಾರ್ಪೊರೇಷನ್ ಆ ಪಾಲಿಸಿಗೆ ನೀಡಬೇಕಾಗಿರುವ ಬೆನಿಫಿಟ್ ಗಳಿಗೆ ಅರ್ಹತೆ ಪಡುವುದಿಲ್ಲ. ಆದರೆ, ಅದುವರೆವಿಗೂ ನೀಡಿರುವ ಪ್ರೀಮಿಯಂ ಗಳ 90 % ಮೊತ್ತವನ್ನು ಕಾರ್ಪೊರೇಷನ್ ನಾಮಿನಿಗೆ ನೀಡುತ್ತದೆ. ಇದರಲ್ಲಿ, ಅನ್ವಯವಾಗುವ ತೆರಿಗೆ, ಎಕ್ಸ್ಟ್ರಾ ಪ್ರೀಮಿಯಂ ಗಳು ಹಾಗೂ ರೈಡರ್ ಪ್ರೀಮಿಯಂ ಗಳು ಇದ್ದಲ್ಲಿ, ಅದನ್ನು ಕಡಿತಗೊಳಿಸಿ ಉಳಿಕೆ ಹಣವನ್ನು ನೀಡಲಾಗುವುದು.

ಈ ಮೇಲಿನ ಮೊತ್ತವನ್ನು ಬಿಟ್ಟು ಬೇರೆ ಯಾವುದೇ ಕ್ಲೈಮ್ ಗಳನ್ನು ಕಾರ್ಪೊರೇಷನ್ ನೀಡುವುದಿಲ್ಲ.