Sehwag PX
ಎಲ್ ಐ ಸಿ ವರಿಷ್ಠ ಪೆನ್ಷನ್ ಬೀಮ ಯೋಜನೆ
 • ಅತ್ಯುತ್ತಮ ಯೋಜನೆಗಳು
 • ಸುಲಭ ಹೋಲಿಕೆ
 • ತಕ್ಷಣದ ಖರೀದಿ

#Virukipolicy | T&C*

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಹುಟ್ಟಿದ ದಿನಾಂಕ
ಆದಾಯ
| ಲಿಂಗ

1

2

ಫೋನ್ ಸಂಖ್ಯೆ
ಹೆಸರು
ಇಮೇಲ್
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಎಲ್ ಐ ಸಿ ಯು ಭಾರತ ಸರ್ಕಾರದ ಒಂದು ಅಂಗ ಸಂಸ್ಥೆ ಆಗಿದ್ದು, ಜೀವ ವಿಮಾ ಯೋಜನೆಗಳನ್ನು ನೀಡುವಲ್ಲಿ ಇತರ ಎಲ್ಲಾ ಇನ್ಸೂರೆನ್ಸ್ ಕಂಪನಿಗಳಿಗಿಂತ ಮೊದಲನೆಯ ಸ್ತಾನದಲ್ಲಿರುತ್ತದೆ. ಈ ಸಂಸ್ತೆಯನ್ನು ಅಂದಿನ ಭಾರತ ಸರ್ಕಾರವು 1956 ನೇ ಇಸವಿಯಲ್ಲಿ ಆಗ ಇದ್ದ 245 ಖಾಸಗಿ ಕಂಪನಿಗಳನ್ನು ವಿಲೀನ ಗೊಳಿಸಿ, ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯ ಎಂದು ನಾಮಕರಣ ಮಾಡಿ, ಸ್ಥಾಪನೆ ಮಾಡಿತು. ಆ ದಿನದಿಂದ ಈ ವರೆವಿಗೂ, ಎಲ್ ಐ ಸಿ ಯು ತನ್ನ ದೂರ ದೃಷ್ಟಿಯಿಂದ, ಸಮಾಜದ  ಎಲ್ಲಾ ಬಾಗದ ಹಾಗೂ ವಿವಿದ ಪ್ರಾಂತ್ಯಗಳ ಜನರಿಗೆ ಅವರ ಅನುಕೂಲಕ್ಕೆ ತಕ್ಕಂತೆ ಮತ್ತು ಅವರ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಜೀವ ವಿಮಾ ಯೋಜನೆಗಳನ್ನು ನೀಡುತ್ತಾ ಬಂದಿದೆ. ಆ ಯೋಜನೆಗಳನ್ನು ರೂಪಿಸುವಾಗ, ಪ್ರತಿಯೊಬ್ಬರ ಅಗತ್ಯತೆಗಳನ್ನು ಗಮನಕ್ಕೆ ತೆಗೆದುಕೊಂಡು, ಪಾಲಿಸಿಗಳನ್ನು ಸಮಯಕ್ಕೆ ತಕ್ಕಂತೆ ಬೇರೆ ಬೇರೆ ಯೋಜನೆಗಳ ಮೂಲಕ ನೀಡುತ್ತಾ ಬಂದಿರುತ್ತದೆ.

ಎಲ್ ಐ ಸಿ ವರಿಷ್ಠ ಪೆನ್ಷನ್ ಬೀಮ ಯೋಜನೆಯು ಅಂತಹ ಒಂದು ಅಗತ್ಯತೆಯನ್ನು ಮನದಲ್ಲಿ ಇಟ್ಟುಕೊಂಡು ರೂಪಿಸಿರುವ ಯೋಜನೆ ಆಗಿರುತ್ತದೆ. ಇದು ಪಾಲಿಸಿದಾರನ ಭವಿಷ್ಯವನ್ನು ಗಣನೆಗೆ ತೆಗೆದುಕೊಂಡು, ಒಂದು ಶುದ್ಧ ಪೆನ್ಷನ್ ನೀಡುವ ಪ್ಲಾನ್ ಆಗಿರುತ್ತದೆ. ಇದನ್ನು ಪಾಲಿಸಿದಾರನು ಹಿರಿಯ ನಾಗರಿಕನಾಗಿದ್ದು,  ಅವನಿಗೆ ನಿಯಮಿತವಾಗಿ ಪ್ರತಿ ತಿಂಗಳೂ ಒಂದು ಖಚಿತ ಮೊತ್ತ ಬರುವ ಹಾಗೆ ಸಹಾಯ ಮಾಡುವ ಯೋಜನೆ ಆಗಿರುತ್ತದೆ. ಇದು ಒಂದು ವಾರ್ಷಿಕ ಆದಾಯ ಮಾದರಿ ಪ್ಲಾನ್. ವಾರ್ಷಿಕ ಆದಾಯದ ಅಡಿಯಲ್ಲಿ, ಪಾಲಿಸಿದಾರರು ಪೆನ್ಷನ್ ಮೊತ್ತವನ್ನು ನಿಗದಿತ ಸಮಯದಲ್ಲಿ ಪಡೆಯುತ್ತಾರೆ. ನಿಮಗೆ ಅನುಕೂಲವಾಗುವ ರೀತಿಯಲ್ಲಿ ನೀವು ಪೇಮೆಂಟ್ ರೀತಿಯನ್ನು ಆಯ್ಕೆ ಮಾಡಿಕೊಳ್ಳಬಹುದು.  ಈ ಯೋಜನೆಯು, ಪಾಲಿಸಿದಾರನಿಗೆ ಅವನ ನಿವೃತ್ತಿ ಸಮಯದಲ್ಲಿ ಆರ್ಥಿಕವಾಗಿ ಯಾವುದೇ ತೊಂದರೆಯನ್ನು ಅನುಭವಿಸದೆ ಇರುವ ರೀತಿಯಲ್ಲಿ ಸಹಾಯ ಮಾಡುತ್ತದೆ.

ಎಲ್ ಐ ಸಿ ವರಿಷ್ಠ ಪೆನ್ಷನ್ ಬೀಮ ಯೋಜನೆ – ವಿವರಗಳು

ಎಲ್ ಐ ಸಿ ವರಿಷ್ಠ ಪೆನ್ಷನ್ ಬೀಮ ಯೋಜನೆಯ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

 • ಇದು ಪಾಲಿಸಿದಾರನಿಗೆ ಅವನ ನಿವೃತ್ತಿ ಸಮಯದಲ್ಲಿ / ವಯಸ್ಸಿನಲ್ಲಿ  ಒಂದು ಶುದ್ಧ ಪೆನ್ಷನ್ ನೀಡುವ ಯೋಜನೆ ಆಗಿರುತ್ತದೆ
 • ಈ ಪ್ಲಾನ್ ಅಡಿಯಲ್ಲಿ, ಪಾಲಿಸಿದಾರನು ಕೇವಲ ಸಿಂಗಲ್ ಪ್ರೀಮಿಯಂ ಮಾತ್ರ ನೀಡಬೇಕಾಗುತ್ತದೆ
 • ಈ ಸಿಂಗಲ್ ಪ್ರೀಮಿಯಂ ಅನ್ನು ಪಾಲಿಸಿದಾರನು ಪಾಲಿಸಿಯನ್ನು ಪಡೆಯುವ ಸಮಯದಲ್ಲಿಯೇ ನೀಡನೆಕಾಗುತ್ತದೆ
 • ಈ ಸಿಂಗಲ್ ಪ್ರೀಮಿಯಂ ಮೊತ್ತವು ಪಾಲಿಸಿದಾರನು ಪಡೆಯಲು ಬಯಸುವ ಪೆನ್ಷನ್ ಮೊತ್ತದ ಮೇಲೆ ಅವಲಂಬಿತವಾಗಿರುತ್ತದೆ.
 • ನಿಮಗೆ ಹೆಚ್ಚು ಪೆನ್ಷನ್ ಬೇಕಾದಲ್ಲಿ, ಕಟ್ಟಬೇಕಾಗುವ ಸಿಂಗಲ್ ಪ್ರೀಮಿಯಂ ಮೊತ್ತವು ಕೂಡ ಹೆಚ್ಚಿರುತ್ತದೆ
 • ಈ ಪ್ಲಾನ್ ಅಡಿಯಲ್ಲಿ, ಪಾಲಿಸಿದಾರನಿಗೆ ಜೀವ ವಿಮೆ ಇರುವುದಿಲ್ಲ, ಏಕೆಂದರೆ, ಈ ಪ್ಲಾನ್ ಕೇವಲ ಪೆನ್ಷನ್ ನೀಡುವ ಯೋಜನೆ ಆಗಿರುತ್ತದೆ
 • ನೀವು ನೀಡಿರುವ ಪ್ರೀಮಿಯಂ ಮೊತ್ತವು ಕೇವಲ ನಿಮಗೆ ಮುಂದಿನ ಪೆನ್ಷನ್ ಹಣವನ್ನು ನೀಡುವ ದಿಕ್ಕಿನಲ್ಲಿ ತೆಗೆದುಕೊಂಡಿರುವ ಮೊತ್ತವಾಗಿರುತ್ತದೆ.
 • 2017 ರಲ್ಲಿ, ಈ ಯೋಜನೆಯನ್ನು ಭಾರತ ಸರ್ಕಾರವು ಜನರ ಉಪಯೋಗಕ್ಕೋಸ್ಕರ ನೀಡಿತು
 • ಇದರಿಂದಾಗಿ, ಅನೇಕ ಹಿರಿಯ ನಾಗರೀಕರಿಗೆ ಉಪಯೋಗ ಆಗುತ್ತಲಿದೆ
 • ಇದರ ವೈಶಿಷ್ಟ್ಯವೆಂದರೆ ಇದು ಪ್ರೀಮಿಯಂ  ಮೊತ್ತವನ್ನು ಪಾಲಿಸಿ ಮಾಡಿದ ತಕ್ಷಣದಿಂದಲೇ ಪೆನ್ಷನ್ ಮೊತ್ತವನ್ನು ನೀಡಲು ಆರಂಭ ಮಾಡುತ್ತದೆ. ಅಂದರೆ, ಪಾಲಿಸಿದಾರನು ಆಯ್ಕೆ ಮಾಡಿರುವ ಆಪ್ಶನ್ ಗೆ ಅನುಗುಣವಾಗಿ ಮಾಡಿದ್ದಲ್ಲಿ ಹಾಗೂ ಪೆನ್ಷನ್ ಹಣವು ತಿಂಗಳಿಗೊಮ್ಮೆ  ನೀಡಬೇಕೆಂದು ನಮೂದಿಸಿದ್ದಲ್ಲಿ, ಆತನಿಗೆ ಪೆನ್ಷನ್ ಪಾಲಿಸಿ ಮಾಡಿದ ಮುಂದಿನ ತಿಂಗಳಿಗೆ ಪೆನ್ಷನ್ ಬರಲು ಶುರು ಆಗುತ್ತದೆ.
 • ಈ ಪಾಲಿಸಿಯನ್ನು ಪಡೆಯಲು ಪಾಲಿಸಿದಾರನು ಯಾವುದೇ ರೀತಿಯ ವೈದ್ಯಕೀಯ ತಪಾಸಣೆಗೆ ಒಳಗಾಗುವ ಪ್ರಮೇಯ ಇರುವುದಿಲ್ಲ. ಏಕೆಂದರೆ ಈ ಪಾಲಿಸಿಯು ಪಾಲಿಸಿದಾರನ ಲೈಫ್ ರಿಸ್ಕ್ ಕವರೆಜ್ ಮಾಡುವುದಿಲ್ಲ

ಎಲ್ ಐ ಸಿ ವರಿಷ್ಠ ಪೆನ್ಷನ್ ಬೀಮ ಯೋಜನೆ – ಅರ್ಹತೆಗಳು ಹಾಗೂ ನಿಬಂದನೆಗಳು

ಎಲ್ ಐ ಸಿ ವರಿಷ್ಠ ಪೆನ್ಷನ್ ಬೀಮ ಯೋಜನೆಯ  ಅರ್ಹತೆಗಳು ಹಾಗೂ ನಿಬಂದನೆಗಳು ಈ ಕೆಳ ಕಂಡಂತಿವೆ.

ಪಾಲಿಸಿಯನ್ನು ಪಡೆಯುವಾಗ ಪಾಲಿಸಿದಾರನ ಕನಿಷ್ಠ ವಯಸ್ಸು

60 ವರ್ಷಗಳು (ಮುಗಿದಿರಬೇಕು)

ಪಾಲಿಸಿಯನ್ನು ಪಡೆಯುವಾಗ ಪಾಲಿಸಿದಾರನ ಗರಿಷ್ಠ ವಯಸ್ಸು

ಯಾವುದೇ ಮಿತಿ ಇಲ್ಲ

ಕನಿಷ್ಠ ಪೆನ್ಷನ್

ತಿಂಗಳಿಗೆ ರೂ 500

 

3 ತಿಂಗಳಿಗೆ ರೂ 1500

 

6 ತಿಂಗಳಿಗೆ ರೂ 3000

 

1 ವರ್ಷಕ್ಕೆ ರೂ 6000

ಗರಿಷ್ಠ ಪೆನ್ಷನ್

ತಿಂಗಳಿಗೆ ರೂ 5000

 

3 ತಿಂಗಳಿಗೆ ರೂ 15000

 

6 ತಿಂಗಳಿಗೆ ರೂ 30000

 

1 ವರ್ಷಕ್ಕೆ ರೂ 60000

ಮೇಲೆ ಕಾಣಿಸಿರುವ ಗರಿಷ್ಟ ಪೆನ್ಷನ್ ಮೊತ್ತವು ಸಂಪೂರ್ಣ ಕುಟುಂಬವನ್ನು ಸೇರಿಸಿ. ಅಂದರೆ ಕುಟುಂಬದ ಎಲ್ಲ ಸದಸ್ಯರೂ ಪಡೆದಿರುವ ಯೋಜನೆಗಳನ್ನು ಸೇರಿಸಿ ಬರುವ ಪೆನ್ಷನ್ ನ ಒಟ್ಟಾರೆ ಗರಿಷ್ಠ ಮೊತ್ತವು  ಮೇಲೆ ಕಾಣಿಸಿರುವ ಗರಿಷ್ಠ ಮೊತ್ತವನ್ನು ಮೀರಬಾರದು. ಇಲ್ಲಿ ಕುಟುಂಬ ಎಂದರೆ ಪೆನ್ಶನರ್, ಅವನ / ಅವಳ ಸಂಗಾತಿ ಹಾಗೂ ಇತರೆ ಡಿಪೆಂಡೆಂಟ್ಸ್.

ಪರ್ಚೆಸ್ ಮೊತ್ತವನ್ನು ನೀಡುವಿಕೆ

ಈ ಯೋಜನೆಯ ಪಾಲಿಸಿಯನ್ನು ಒಂದು ಲಂಪ್ ಸಮ್ ಪರ್ಚೆಸ್ ಪ್ರೈಸ್ ಮೊತ್ತವನ್ನು ನೀಡಿ ಖರೀದಿಸಬಹುದು. ಪಾಲಿಸಿದಾರನು ಪರ್ಚೆಸ್ ಪ್ರೈಸ್ ಅಥವಾ ಪೆನ್ಷನ್ ಮೊತ್ತ ಇವೆರಡರಲ್ಲಿ ಯಾವುದನ್ನೂ ಬೇಕಾದರೂ ಆಯ್ಕೆ ಮಾಡಬಹುದು.

ಕನಿಷ್ಠ ಹಾಗೂ ಗರಿಷ್ಠ ಪರ್ಚೆಸ್ ಪ್ರೈಸ್ ಹಾಗೂ ವಿವಿದ ಪೆನ್ಷನ್ ಪಡೆಯುವ ರೀತಿಗಳನ್ನು ಈ ಕೆಳಗಿನ ಟೇಬಲ್ ನಲ್ಲಿ ನಮೂದಿಸಲಾಗಿದೆ.

ಪೆನ್ಷನ್ ಪಡೆಯುವ ರೀತಿ

ಕನಿಷ್ಠ ಪರ್ಚೆಸ್ ಪ್ರೈಸ್

ಗರಿಷ್ಠ ಪರ್ಚೆಸ್ ಪ್ರೈಸ್

ವರ್ಷಕ್ಕೊಮ್ಮೆ

ರೂ 63,960/-

ರೂ 6,39,610/-

ಅರ್ದ ವರ್ಷಕ್ಕೊಮ್ಮೆ

ರೂ 65,430/-

ರೂ 6,54,275/-

3 ತಿಂಗಳಿಗೊಮ್ಮೆ

ರೂ 66,710/-

ರೂ 6,61,690/-

1 ತಿಂಗಳಿಗೊಮ್ಮೆ

ರೂ 66,665/-

ರೂ 6,66,665/-

ಪೆನ್ಷನ್ ಮೊತ್ತವನ್ನು ನೀಡುವ ರೀತಿ

ಪಾಲಿಸಿದಾರನಿಗೆ ಅವನ ಆಯ್ಕೆಗೆ ತಕ್ಕಂತೆ ಪೆನ್ಷನ್ ಮೊತ್ತವನ್ನು ಕೆಳ ಕಂಡ ರೀತಿಯಲ್ಲಿ ನೀಡಲಾಗುವುದು.

 • ವರ್ಷಕ್ಕೊಮ್ಮೆ
 • ಅರ್ದ ವರ್ಷಕ್ಕೊಮ್ಮೆ
 • 3 ತಿಂಗಳಿಗೊಮ್ಮೆ
 • 1 ತಿಂಗಳಿಗೊಮ್ಮೆ

ಈ ಪೆನ್ಷನ್ ಪೆಮೆಂಟ್ ಗಳನ್ನು ಕೇವಲ್ ECS ಅಥವಾ NEFT ಮೂಲಕವೇ ಮಾಡಲಾಗುತ್ತದೆ. ಪಾಲಿಸಿದಾರನಿಗೆ ಅವನು ಆಯ್ಕೆ ಮಾಡಿರುವ ರೀತಿಯ ಮೇಲೆ ಅವನು ಸಿಂಗಲ್ ಪ್ರೀಮಿಯಂ ಮೊತ್ತವನ್ನು ಕಟ್ಟಿದ ದಿನದಿಂದ, ಮೊದಲ ಪೆನ್ಷನ್ ಮೊತ್ತವನ್ನು 1 ತಿಂಗಳಿಗೊಮ್ಮೆ ಅಥವಾ 3 ತಿಂಗಳಿಗೊಮ್ಮೆ ಅಥವಾ ಅರ್ದ ವರ್ಷಕ್ಕೊಮ್ಮೆ ಅಥವಾ ವರ್ಷಕ್ಕೊಮ್ಮೆ ನೀಡಲಾಗುತ್ತದೆ.

ಸ್ಯಾಂಪಲ್ ಪೆನ್ಷನ್ ರೇಟ್

ಪಾಲಿಸಿದಾರನು ನೀಡುವ ಪರ್ಚೆಸ್ ಪ್ರೈಸ್ ಮೊತ್ತಕ್ಕೆ ನೀಡುವ ಪೆನ್ಷನ್ ರೇಟ್ಸ್ ಗಳನ್ನು ಕೆಳಗೆ ವಿವರಿಸಲಾಗಿದೆ. ಈ ರೇಟ್ಸ್ ಗಳು ಪ್ರತಿ ರೂ 1000 ಕ್ಕೆ ಅನ್ವಯ ಆಗುತ್ತದೆ.

ವರ್ಷಕ್ಕೊಮ್ಮೆ ನೀಡುವ ಪೆನ್ಷನ್

ರೂ 93.8069 ಪ್ರತಿ ವರ್ಷಕ್ಕೆ

ಅರ್ದ ವರ್ಷಕ್ಕೊಮ್ಮೆ ನೀಡುವ ಪೆನ್ಷನ್

ರೂ 91.7045 ಪ್ರತಿ ವರ್ಷಕ್ಕೆ

3 ತಿಂಗಳಿಗೊಮ್ಮೆ ನೀಡುವ ಪೆನ್ಷನ್

ರೂ 90.6767 ಪ್ರತಿ ವರ್ಷಕ್ಕೆ

1 ತಿಂಗಳಿಗೊಮ್ಮೆ ನೀಡುವ ಪೆನ್ಷನ್

ರೂ 90.0000 ಪ್ರತಿ ವರ್ಷಕ್ಕೆ

ಪೆನ್ಷನ್ ಮೊತ್ತವನ್ನು ಹತ್ತಿರದ ರೂ ಗೆ ರೌಂಡ್ ಆಫ್ ಮಾಡಲಾಗುತ್ತದೆ ಈ ರೇಟ್ ಗಳು ಪಾಲಿಸಿದಾರ ವಯಸ್ಸಿಗೆ  ಸಂಭಂಧ ಹೊಂದಿರುವುದಿಲ್ಲ

ಎಲ್ ಐ ಸಿ ವರಿಷ್ಠ ಪೆನ್ಷನ್ ಬೀಮ ಯೋಜನೆ – ಬೆನಿಫಿಟ್ ಗಳು

ಡೆತ್ ಬೆನಿಫಿಟ್

ಎಲ್ ಐ ಸಿ ಯ ಇತರೆ ವಿಮಾ ಯೋಜನೆಗಳಲ್ಲಿ ಸಿಕ್ಕುವ ಡೆತ್ ಬೆನಿಫಿಟ್ ಈ ಪಾಲಿಸಿಯಲ್ಲಿ  ಸಿಗುವುದಿಲ್ಲ. ಏಕೆಂದರೆ ಇದು ಒಂದು ಶುದ್ಧ ಪೆನ್ಷನ್ ನೀಡುವ ಯೋಜನೆ ಆಗಿದ್ದು, ಪಾಲಿಸಿದಾರನಿಗೆ, ಆತನು ಸಿಂಗಲ್ ಪ್ರೀಮಿಯಂ ನೀಡಿದ ತಕ್ಷಣವೇ ಪಾಲಿಸಿಯ ಪ್ರಕಾರ ಆಯ್ಕೆ ಮಾಡಿರುವ ರೀತಿಯಲ್ಲಿ ಪೆನ್ಷನ್ ಮೊತ್ತವನ್ನು ನೀಡಲಾಗುತ್ತದೆ. ನೀವು ಆಯ್ಕೆ ಮಾಡಿರುವ ವಿದಾನದ ಮೇಲೆ ನಿಮ್ಮ ನಂತರ ನಿಮ್ಮ ಸಂಗಾತಿ ಗೂ ಸದರಿ ಪೆನ್ಷನ್ ಸೌಲಭ್ಯವನ್ನು ಮುಂದುವರೆಸಲಾಗುತ್ತದೆ.

ಪೆನ್ಷನ್ ನ ಮೊತ್ತ

ಪೆನ್ಷನ್ ನ ಮೊತ್ತವು ಪಾಲಿಸಿದಾರನು ಆಯ್ಕೆ ಮಾಡಿಕೊಂಡಿರುವ ಆಪ್ಶನ್ ನ ಮೇಲೆ ಅವಲಂಬಿತವಾಗಿರುತ್ತದೆ. ಈ ಪ್ಲಾನ್ ಅಡಿಯಲ್ಲಿ, ಪಾಲಿಸಿದಾರನಿಗೆ ಅವನು ಆಯ್ಕೆ ಮಾಡಿಕೊಂಡಿರುವ ಪೆನ್ಷನ್ ಮೊತ್ತ ಅವನಿಗೆ ಯಾವ ರೀತಿ ಬರಬೇಕು ಎನ್ನುವುದರ ಮೇಲೆ ನಿಗದಿ ಪಡಿಸಿ ಅದೇ ರೀತಿಯಲ್ಲಿ ಪೆನ್ಷನ್ ಅನ್ನು ನೀಡಲಾಗುವುದು.  ಆದರೆ, ಒಂದು ಬಾರಿ ಆಪ್ಶನ್ ಅನ್ನು ಆಯ್ಕೆ ಮಾಡಿಕೊಂಡಲ್ಲಿ, ಅದನ್ನು ಬದಲಾವಣೆ ಮಾಡಲು ಅವಕಾಶ ಇರುವುದಿಲ್ಲ. ಏಕೆಂದರೆ, ಈ ಪಾಲಿಸಿಗೆ ಸಿಂಗಲ್ ಪ್ರೀಮಿಯಂ ಮೊತ್ತವನ್ನು ಪಾಲಿಸಿ ಪಡೆಯುವಾಗಲೇ ನೀಡಿರಬೇಕಾಗುತ್ತದೆ.

ಪಾಲಿಸಿಯ ಲಾಭ ಗಳಿಕೆ

ಈ ಪಾಲಿಸಿಯು ಕಾರ್ಪೊರೇಷನ್ ನ ಯಾವುದೇ ಬಂಡವಾಳ ಹೂಡಿಕೆ ಹಾಗೂ ಅದರಿಂದ ಬರಬಹುದಾದ ಲಾಭಕ್ಕೆ ಅರ್ಹತೆ ಪಡೆದಿರುವುದಿಲ್ಲ. ಇದು ಒಂದು ಕೇವಲ ಪೆನ್ಷನ್ ನೀಡುವ ಯೋಜನೆ ಆಗಿರುತ್ತದೆ.

ರೈಡರ್ ಬೆನಿಫಿಟ್

ಈ ಪಾಲಿಸಿಗೆ ಯಾವುದೇ ತರಹದ ರೈಡರ್ ಬ್ಬೆನೆಫಿಟ್ ಗಳು ಲಭ್ಯವಿರುವುದಿಲ್ಲ. ಇದು ಒಂದು ಕೇವಲ ಪೆನ್ಷನ್ ನೀಡುವ ಯೋಜನೆ ಆಗಿರುತ್ತದೆ

ಸರಂಡರ್ ಮೌಲ್ಯ

ಈ ಪಾಲಿಸಿಗೆ ಅನ್ವಯವಾಗುವ ನಿಯಮದ ಪ್ರಕಾರ, ಪಾಲಿಸಿದಾರನಿಗೆ ಪಾಲಿಸಿಯನ್ನು  ಸರಂಡರ್ ಮಾಡುವ ಅವಕಾಶ ಇರುತ್ತದೆ. ಆದರೆ, ಪಾಲಿಸಿಯು ಕನಿಷ್ಠ 15 ವರ್ಷಗಳ ಅವದಿಯನ್ನು ಪೂರೈಸಿರಬೇಕು. 15 ಬರ್ಷಗಳಾದ ಮೇಲೆ ಪಾಲಿಸಿದಾರನು ಪಾಲಿಸಿಯನ್ನು ಸರಂಡರ್ ಮಾಡಿದಲ್ಲಿ, ಆತನಿಗೆ ಪರ್ಚೆಸ್ ಪ್ರೈಸ್ ಮೊತ್ತವನ್ನು ನೀಡಲಾಗುವುದು. ಆದರೆ, ಕೆಲವು ಅನಿವಾರ್ಯ ಸಂಧರ್ಭಗಳಲ್ಲಿ ಅಂದರೆ ಪಾಲಿಸಿದಾರನಿಗೆ ಹಣದ ಜರೂರತೆ ಇದ್ದು ಅವನು ಯಾವುದಾದರೂ ಕ್ರಿಟಿಕಲ್/ಟರ್ಮಿನಲ್ ಕಾಯಿಲೆಯಿಂದ ಬಳಲುತ್ತಿದ್ದಲ್ಲಿ, ಅಂತಹ ಸಂಧರ್ಭಗಳಲ್ಲಿ, ಪಾಲಿಸಿಯನ್ನು 15 ವರ್ಷಗಳ ಮುಂಚೆಯೇ ಸರಂಡರ್ ಮಾಡುವ ಅವಕಾಶ ಇರುತ್ತದೆ. ಆಗ ಅವನಿಗೆ ಸರಂಡರ್ ವ್ಯಾಲ್ಯು ಮೊತ್ತವೆಂದು ಪರ್ಚೆಸ್ ಪ್ರೈಸ್ ಮೊತ್ತದ 98 % ಮೊತ್ತವನ್ನು ನೀಡಲಾಗುವುದು.

ಸಾಲ ಸೌಲಭ್ಯ

ಈ ಪಾಲಿಸಿಯ ಮೇಲೆ ಸಾಲವನ್ನು ತೆಗೆದುಕೊಳ್ಳುವ ಆವಕಾಶ ಇರುತ್ತದೆ. ಆದರೆ, ಪಾಲಿಸಿಯು 3 ವರ್ಷಗಳ ಆವದಿಯನ್ನು ಮುಗಿಸಿರಬೇಕು. ಈ ಪಾಲಿಸಿಯ ಮೇಲೆ ಗರಿಷ್ಠ ಸಾಲದ ಮೊತ್ತವು ಪರ್ಚೆಸ್ ಪ್ರೈಸ್ ನ 75 % ಆಗಿರುತ್ತದೆ. ಹಾಗೂ ಸಾಲದ ಬಾಬ್ತು ನೀಡಬೇಕಾಗಿರುವ ಬಡ್ಡಿಯು  ಕಾರ್ಪೊರೇಷನ್ ಆಗಿಂದಾಗ್ಗೆ ನಿಗದಿಪಡಿಸುವ ಬಡ್ಡಿಯ ಮೊತ್ತದ ಮೇಲೆ ಅವಲಂಬಿತವಾಗಿರುತ್ತದೆ.

ಸಾಲದ ಬಾಬ್ತು ಕಾರ್ಪೊರೇಷನ್ ಗೆ ಸಂದಾಯ ಆಗಬೇಕಿರುವ ಬಡ್ಡಿ ಮೊತ್ತವನ್ನು ಪೆನ್ಷನ್ ಮೊತ್ತದಿಂದ ಕಡಿತ ಮಾಡಿಕೊಳ್ಳಲಾಗುತ್ತದೆ. ಸಾಲದ ಮೇಲಿನ ಬಡ್ಡಿಯು ಪಾಲಿಸಿದಾರನು ಆಯ್ಕೆ ಮಾಡಿರುವ ಪೆನ್ಷನ್ ಪಡೆಯುವ ರೀತಿಯ ಜೊತೆಗೆ ಹೊಂದಾಣಿಕೆ ಆಗುತ್ತದೆ. ಅಂದರೆ, ಪಾಲಿಸಿದಾರನು, ತಿಂಗಳಿಗೊಮ್ಮೆ ಪೆನ್ಷನ್ ಪಡೆಯಬೇಕೆಂದು ಆಯ್ಕೆ ಮಾಡಿದ್ದಲ್ಲಿ, ಸಾಲದ ಬಡ್ಡಿ ಮೊತ್ತವು ಕೂಡ ಅದೇ ರೀತಿ ತಿಂಗಳಿಗೆ ನೀಡುವ ಪೆನ್ಷನ್ ಹಣದಲ್ಲಿ ಕಡಿತ ಆಗುತ್ತದೆ. ಹಾಗೆಯೇ, ಸಾಲದ ಬಾಬ್ತು ನೀಡಿರುವ ಪ್ರಿನ್ಸಿಪಲ್ ಮೊತ್ತವನ್ನು ಪಾಲಿಸಿಯು ಕೊನೆ ಆದಾಗ ಪಾಲಿಸಿದಾರನಿಗೆ ಸಲ್ಲಬೇಕಾದ ಮೊತ್ತದಿಂದ ಕಡಿತ ಮಾಡಿ ಉಳಿದ ಹಣವನ್ನು ಆತನಿಗೆ ನೀಡಲಾಗುತ್ತದೆ.

ತೆರಿಗೆಗಳು

ಅನ್ವಯವಾಗುವ ತೆರಿಗೆಗಳು (ಸರ್ವಿಸ್ ಟಾಕ್ಸ್ ಅನ್ನು ಸೇರಿಸಿ) ಆಗಿಂದಾಗ್ಗೆ ಸರ್ಕಾರವು ನಿಗದಿ ಪಡಿಸುವ ತೆರಿಗೆಯ ಮೇಲೆ ಅವಲಂಬಿತವಾಗಿರುತ್ತದೆ. ಪಾಲಿಸಿದಾರನು ಪಾಲಿಸಿಯನ್ನು ಪಡೆಯುವಾಗ ಚಾಲ್ತಿಯಲ್ಲಿ ಇರುವ ತೆರಿಗೆಯ ಪ್ರಕಾರ ಪರ್ಚೆಸ್ ಪ್ರೈಸ್ ಮೊತ್ತದ ಮೇಲೆ ತೆರಿಗೆಯ ಮೊತ್ತವನ್ನು ಸೇರಿಸಿ ಪಾವತಿಸಬೇಕಾಗುತ್ತದೆ. ಆ ರೀತಿ ನೀಡಿರುವ ತೆರಿಗೆಗಳು ಪಾಲಿಸಿದಾರನಿಗೆ ನೀಡುವ ಬೆನಿಫಿಟ್ ಗಳಲ್ಲಿ ಸೇರಿರುವುದಿಲ್ಲ.

ಫ್ರೀ ಲುಕ್ ಪೀರಿಯಡ್

ಇತರೆ ಜೀವ ವಿಮಾ ಪಾಲಿಸಿ ಗಳಲ್ಲಿ ನೀಡುತ್ತಿರುವ ಒಂದು ಸವಲತ್ತು ಈ ಪಾಲಿಸಿಯಲ್ಲೂ ಪಾಲಿಸಿದಾರನಿಗೆ ಲಭ್ಯವಿದೆ. ಅದೆಂದರೆ, ಫ್ರೀ ಲುಕ್ ಪೀರಿಯಡ್. ಈ ಫ್ರೀ ಲುಕ್ ಪೀರಿಯಡ್ ನಲ್ಲಿ, ಪಾಲಿಸಿದಾರನು, ಪಾಲಿಸಿಯ ದಾಖಲೆಗಳು ಅವನ ಕೈ ಸೇರಿದ 15 ದಿವಸಗಳಲ್ಲಿ ಅದರಲ್ಲಿ ನಮೂದಿಸಿರುವ ಎಲ್ಲ ನಿಯಮಗಳು ಹಾಗೂ ನಿಬಂದನೆಗಳನ್ನು ಓದಿ ಅದನ್ನು ಅರ್ಥ ಮಾಡಿಕೊಳ್ಳಲು ನೀಡುವ ಕಾಲಾವಕಾಶ ಆಗಿರುತ್ತದೆ. ಅಕಸ್ಮಾತ್ ಪಾಲಿಸಿದಾರನಿಗೆ ಇದರಲ್ಲಿರುವ ಯಾವುದೇ ನಿಯಮಗಳ  ಅಥವಾ ನಿಬಂದನೆಗಳ ಬಗ್ಗೆ ಒಪ್ಪಿಗೆ ಆಗದಿದ್ದಲ್ಲಿ, ಆ ಪಾಲಿಸಿಯನ್ನು ಆತನು 15 ದಿನಗಳ ಒಳಗೆ ಎಲ್ ಐ ಸಿ ಗೆ ಹಿಂದಿರುಗಿಸಬಹುದು. ಆದರೆ, ಆ ರೀತಿ ಹಿಂದಿರುಗಿಸಲು ಕಾರಣ ನೀಡಬೇಕಾಗುತ್ತದೆ. ಪಾಲಿಸಿಯು ಕಾರ್ಪೊರೇಷನ್ ಗೆ ತಲುಪಿದ ಕೂಡಲೇ ಆ ಪಾಲಿಸಿಯನ್ನು ರದ್ದು ಮಾಡಲಾಗುವುದು. ಆ ಸಂಧರ್ಭದಲ್ಲಿ, ಕಾರ್ಪೊರೇಷನ್ ಪಾಲಿಸಿದಾರನು ನೀಡಿರುವ ಪರ್ಚೆಸ್ ಪ್ರೈಸ್ ಮೊತ್ತ ವನ್ನು ಹಿಂದಿರುಗಿಸುತ್ತದೆ.  ಆದರೆ, ಹಿಂದಿರುಗಿಸುವ ಮೊತ್ತದಲ್ಲಿ, ಸ್ಟಾಂಪ್ ಡ್ಯೂಟಿ ವೆಚ್ಚವನ್ನು ಅದರಿಂದ ಕಳೆದು, ಉಳಿದ ಹಣವನ್ನು ಹಿಂದಿರುಗಿಸಲಾಗುವುದು.

- / 5 ( Total Rating)