ಮೋಟಾರ್ ವಿಮೆ
  • ಅತ್ಯುತ್ತಮ ಯೋಜನೆಗಳು
  • ಸುಲಭ ಹೋಲಿಕೆ
  • ತಕ್ಷಣದ ಖರೀದಿ
PX step

ಕಾರು ವಿಮೆಯನ್ನು ಆನ್‌ಲೈನ್‌ನಲ್ಲಿ ಹೋಲಿಕೆ ಮಾಡಿ

ಅಥವಾ

ಮೋಟರ್ ವಿಮೆಗೆ ವಾಹನಗಳ ವಿಮೆ ಎಂದೂ ಹೇಳುತ್ತಾರೆ. ಕಾರುಗಳು, ಟ್ರಕ್ಕುಗಳು ಹಾಗೂ ದ್ವಿಚಕ್ರ ವಾಹನ(ಬೈಕ್ಸ್) ಗಳಿಗೆ ಇದನ್ನು ಖರೀದಿಸುತ್ತಾರೆ. ಇದು ಜನರು ಮಾಡುವ ಕಳ್ಳತನ ಹಾಗೂ ನೈಸರ್ಗಿಕ ವಿಕೋಪಗಳಿಂದ ವಾಹನಕ್ಕೆ ಆಗುವ ಹಾನಿಗಳಿಗೆ ಇದು ಕವರೇಜ್ ಒದಗಿಸುತ್ತದೆ.

ಜನರು ತಮ್ಮ ವ್ಯವಹಾರಕ್ಕೆ ಹಾಗೂ ಸ್ವಂತ ಅವಶ್ಯಕತೆಗಳಿಗಾಗಿ ವಾಹನದ ಸವಾರಿಯ ಆನಂದ ಅನುಭವಿಸಲು ವಾಹನ ಖರೀದಿಗಾಗಿ ಸಾಕಷ್ಟು ಕಷ್ಟಪಟ್ಟು ದುಡಿಯುತ್ತಾರೆ. ಆದರೂ ಯಾವುದೇ ಸಮಯದಲ್ಲಿ ದುರಾದೃಷ್ಟವಷಾತ್ ಅಪಘಾತ ಸಂಭವಿಸಿ ವಾಹನಕ್ಕೆ ಸಾಕಷ್ಟು ಹಾನಿ ಆಗುವ ಸಾಧ್ಯತೆ ಇರುತ್ತದೆ. ಈ ವಾಹನವನ್ನು ದುರಸ್ತಿ ಮಾಡಲು ಅಥವಾ ಬೇರೆ ವಾಹನ ಬದಲಾಯಿಸಲು ಬಹಳಷ್ಟು ಹಣ ಖರ್ಚಾಗುತ್ತದೆ. ಆದ್ದರಿಂದ ನಿಮ್ಮ ವಾಹನಕ್ಕೆ ಸಂಪೂರ್ಣ ಕಾಳಜಿ ವಹಿಸಲು ವಾಹನ ವಿಮೆ ಹೊಂದುವುದು ಬಹಳ ಮಹತ್ವದ್ದಾಗಿದೆ.

ಮೋಟಾರು ವಾಹನ ಕಾಯಿದೆ ಅನ್ವಯ ವಾಹನ ವಿಮೆ ಹೊಂ ದುವುದು ಕಡ್ಡಾಯವಾಗಿರುವುದರಿಂದ ಮೋಟರ್ ವಾಹನ ವಿಮೆ ಯೋಜನೆಯ ದಾಖಲಾತಿ ನಿಮ್ಮ ವಾಹನಕ್ಕೆ ಮಹತ್ವದ್ದಾಗಿದೆ. ಭಾರತದಲ್ಲಿ ನೀವು ಯಾವುದೆ ವಾಹನ ಹೊಂದಿದ್ದಲ್ಲಿ, ನೀವು ಮೋಟರ ವಿಮೆಯ ಯಾವುದೇ ಒಂದು ಯೋಜನೆಯನ್ನು ತೆಗೆದುಕೊಂಡು ಹೋಗಲೇಬೇಕು. ಅದರಲ್ಲಿ ಮೂರನೇ ವ್ಯಕ್ತಿಯ ವಿಮೆ ಕವರೇಜ ಕಡ್ಡಾಯ.

ಮೋಟರ್ ವಿಮಾ ಯೋಜನೆಯ ಪ್ರಕಾರಗಳು

ಮೂರನೇ ವ್ಯಕ್ತಿಯ ಕವರೇಜ ಹಾಗೂ ಸಂಪೂರ್ಣ  ವಿಮೆ ಹೀಗೆ ಭಾರತದಲ್ಲಿ ಎರಡು ಪ್ರಕಾರಗಳ ವಿಮೆ ಉತ್ಪನ್ನಗಳಿವೆ.  ಯಾವ ವಿಮೆ ಯೋಜನೆ ನಿಮ್ಮ ವಾಹನಕ್ಕೆ ಹೆಚ್ಚು ಒಳ್ಳೆಯದು ಎಂಬುದರ ಬಗ್ಗೆ ನಿಮಗೆ ಗೊಂದಲ ಉಂಟಾಗಬಹುದು. ಆದರೆ ನಿಮಗೆ ವಿಮೆ ಯೋಜನೆಗಳ  ವೈಶಿಷ್ಟ್ಯಗಳು ಹಾಗೂ ಲಾಭಗಳ ಬಗ್ಗೆ ಮಾಹಿತಿ ಇದ್ದರೆ ನೀವು ನಿಮಗೆ ಪಾಲಿಸಿಯನ್ನು ಸುಲಭವಾಗಿ ಆಯ್ಕೆ ಮಾಡಲು ಸಾಧ್ಯವಿದೆ.

ಮೂರನೇ ಪಕ್ಷದ ವಿಮೆ : ಇದು ಮೂರನೆ ವ್ಯಕ್ತಿಗೆ ನಿಮ್ಮಿಂದ ಆದ ಹಾನಿಯನ್ನು ಕವರೇಜ ಮಾಡುವ ವಿಮೆ ಪಾಲಿಸಿ ಆಗಿದೆ. ಅಂದರೆ, ಒಂದು ವೇಳೆ ಅಪಘಾತವಾದರೆ, ಅಫಘಾತದಿಂದಾದ ಹಾನಿಯನ್ನು ಮೂರನೇ ಪಕ್ಷದ ವಿಮೆ ಪಾಲಿಸಿಯು ಅವನ/ಅವಳ ಕಾರಿಗೆ ಹಾಗೂ ಅದರ ಸಂಭಂಧಿತ ಭಾಗಗಳಿಗಾಗುವ ಹಾನಿಯನ್ನು ಕವರೇಜ ಮಾಡುತ್ತದೆ. ಮತ್ತು ಇದು ಅಪಘಾತದಲ್ಲಿ ಮೂರನೇ ವ್ಯಕ್ತಿಗಾಗಿರುವ ಘಾಯಗಳನ್ನೂ ಒಳಗೊಂಡು ಕವರೇಜ  ಮಾಡುತ್ತದೆ. ಇದು ಮೂರನೇ ಪಕ್ಷದ ಹೊಣೆಗಾರಿಕೆಯನ್ನು ನಿಭಾಯಿಸುತ್ತದೆ. ಆದರೆ ನಿಮ್ಮ ಸ್ವಂತದನ್ನು ಅಲ್ಲ

ಸಮಗ್ರ ವಿಮಾ ಯೋಜನೆ : ಸಮಗ್ರ ವಿಮಾ ಯೋಜನೆಯಲ್ಲಿ ನಿಮ್ಮ ವಾಹನದ ಎಲ್ಲ ತರದ ಹಾನಿಗಳಿಗೂ ಹಾಗೂ ಮೂರನೇ ಪಕ್ಷದ ಹಾನಿಯನ್ನೂ ಕೂಡ ಇದು ಒಳಗೊಂಡಿರುತ್ತದೆ.

ಆನ್ ಲೈನನಲ್ಲಿ ವಾಹನ ವಿಮೆಯನ್ನು ಹೋಲಿಸುವುದು ಹೇಗೆ

ಉತ್ತಮ ಮೋಟರ ವಿಮೆ ಖರೀದಿಸುವುದು ಒಂದು ಕಠಿಣ ಪ್ರಕ್ರಿಯೆ ಎಂದು ಕಾಣಿಸಬಹುದು. ಆದರೆ PolicyX.com   ನಲ್ಲಿ ನಾವು ಅದನ್ನು ಅತ್ಯಂತ ಸರಳವಾಗುವಂತೆ ಮಾಡುತ್ತೇವೆ. ಪ್ರಮುಖ ಮೋಟರ್ ವಿಮೆ ಕಂಪನಿಗಳಿಂದ ಕೊಟೇಶನ್ ಒದಗಿಸಿ ಸರಳವಾಗಿ ಹೋಲಿಕೆ ಮಾಡುವಂತೆ ಸರಳದಾರಿಯನ್ನು ತೋರುತ್ತೇವೆ. ಎಲ್ಲ ಕೋಟೇಶನ್ನಗಳನ್ನು ಉಚಿತವಾಗಿ ಒದಗಿಸಿ, ನಿಮಗೆ ಬೇಕಾದಂತೆ ನೀವು ಉತ್ತಮವಾದ ಯೋಜನೆಗಳನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತೇವೆ.

PolicyX.comನಲ್ಲಿ ನೀವು ಇಚ್ಛಿಸಿದ ಉತ್ಪನ್ನಗಳ ಬಗ್ಗೆ ನಿಮಗೆ ಬೇಕಾದ ಮಾಹಿತಿಯನ್ನು ಉಚಿತವಾಗೆ ಕೆಲವೇ ನಿಮಿಷಗಳಲ್ಲಿ ಪಡೆಯಲು ಸಾಧ್ಯವಿದೆ. ಉತ್ತಮವಾದ ಮೋಟರ್ ವಿಮೆ ಯೋಜನೆ ಪಡೆಯಲು ನೀವು ಮಾಡಬೇಕಾದ್ದು ಇಷ್ಟೇ ಮೂಲ ಮಾಹಿತಿ ತುಂಬಿರಿ, ಉಚಿತ ಕೊಟೇಷನ್ ಹೋಲಿಸಿರಿ ಹಣ ಸಂದಾಯ ಮಾಡಿ ಹಾಗು ಪಾಲಿಸಿ ದಾಖಲಾತಿಯನ್ನು ಈಮೇಲ್ ಮೂಲಕ ಪಡೆಯಿರಿ. ಇದು ಕೇವಲ ಹತ್ತು ನಿಮಿಷಗಳನ್ನಷ್ಟೇ ತೆಗೆದುಕೊಳ್ಳುತ್ತದೆ. ಕೊಟೇಷನ್ನಗಳನ್ನು ಹೊಲಿಸಿ, ಇಚ್ಛಿಸಿದ ಪಾಲಿಸಿಯನ್ನು ಹೆಚ್ಚಿನ ದಾಖಲಾತಿಗಳಿಲ್ಲದೆ ಕೆಲವೇ ನಿಮಿಷಗಳಲ್ಲಿ ಪಡೆಯಿರಿ.

ಹೊಸ ಪಾಲಿಸಿ ಖರೀದಿಸಲು:

  • ತುಂಬಿದ ಪ್ರಸ್ತಾವನೆ ಫಾರ್ಮ್.
  • ನೋಂದಣಿ ಪ್ರಮಾಣ ಪತ್ರದ ನಕಲು

ಮೋಟರು ವಿಮೆ ನವೀಕರಿಸಲು:

  • ತುಂಬಿದ ಪ್ರಸ್ತಾವನೆ ಫಾರ್ಮ್
  • ಹಿಂದಿನ ಪಾಲಿಸಿಯ ನಕಲು
  • ನೋಂದಣಿ ಪ್ರಮಾಣ ಪತ್ರದ ನಕಲು

ಮೋಟರ್ ವಿಮೆಯ ಮಹತ್ವ

ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ತಮ್ಮ ಕಾರ್ಯಗಳಲ್ಲಿ ನಿರತರಾಗಿರುತ್ತಾರೆ.  ಜನರು ಒಂದೇ ದಿನದಲ್ಲಿ ಹಲವು ಕೆಲಸಗಳನ್ನು ಮುಗಿಸಬೇಕಾಗಿರುತ್ತದೆ. ಕೆಲಸ, ಕುಟುಂಬದ ಹಾಗೂ ಸಮುದಾಯಕ್ಕೆ ಸಂಭಂಧಿಸಿದ ಹೆಚ್ಚುತ್ತಿರುವ ಜವಾಬ್ದಾರಿ ಗಳಿಂದಾಗಿ ಅವರಿಗೆ ಸಮಯವೇ ಉಳಿಯುತ್ತಿಲ್ಲ. ಸಮಯದ ಉಳಿತಾಯ ಮಾಡಲು ಜನರು ಕಾರುಗಳನ್ನು ಖರೀದಿಸುತ್ತಾರೆ. ಕಾರುಗಳು ಅವರ ಸಮಯವನ್ನು ಉಳಿಸುವುದಲ್ಲದೇ ರಸ್ತೆಗಳಲ್ಲಿ ಸವಾರಿಯ ಉತ್ತಮ  ಆರಾಮದಾಯಕ ಅನುಭವವನ್ನೂ ಸಹ ಪಡೆಯುತ್ತಾರೆ. ಕಾರನ್ನು ಖರೀದಿಸುವುದು ಹೇಗೆ ಅನಿವಾರ್ಯವಾಗಿದೆಯೋ ಅದರಂತೆ ವಿಮೆ ಯೋಜನೆಯು ಕೂಡ ಅತ್ಯಂತ ಅವಶ್ಯವುಳ್ಳದ್ದಾಗಿದೆ.

ವಾಹನಗಳ ಕಳ್ಳತನ ಹಾಗೂ ರಸ್ತೆ ಅಫಘಾತಗಳ ಅತಿ ಬೆಳವಣಿಗೆಯೊಂದಿಗೆ, ವಾಹನ ವಿಮಾ ಯೋಜನೆಯನ್ನು ಖರೀದಿಸುವುದು ಕೂಡ ವಾಹನದ ಮಾಲೀಕರ ಹೊಣೆಯಾಗಿದೆ.

ದ್ವಿ ಚಕ್ರ ವಾಹನವಾಗಿರಲಿ, ಅಥವಾ ನಾಲ್ಕು ಚಕ್ರಗಳ ವಾಹನವಾಗಿರಲಿ ಅದನ್ನು ಸ್ವಂತಕ್ಕಾಗಿಯೋ ಅಥವಾ ವಾಣಿಜ್ಯಕ್ಕಾಗಿಯೇ ಹೊಂದಿರಲಿ, ಮೋಟರ ವಾಹನ ಕಾಯಿದೆಯಡಿ ಹೊಸ ವಾಹನ ಖರೀದಿಸದಾಗ ವಾಹನದ ವಿಮೆ ಮಾಡಿಸುವುದು ಕಡ್ಡಾಯವಾಗಿದೆ. ಒಬ್ಬ ವ್ಯಕ್ತಿಯು ಚಾಲ್ತಿಯಲ್ಲಿರುವ ಕವರೇಜ ಹೊಂದಿಲ್ಲದಿದ್ದರೆ ದಂಡವನ್ನು ಕಟ್ಟುವುದು ಅವನ ಜವಾಬ್ದಾರಿಯಾಗಿದೆ. ಅಪಘಾತವು ಯಾವುದೇ ಸಮಯದಲ್ಲಿ ಘಟಿಸಬಹುದು. ಇದು ಕಾರುಗಳಿಗೆ ಅಥವಾ ದ್ವಿಚಕ್ರವಾಹನಕ್ಕೆ ಅತಿಯಾದ ಹಾನಿ ಉಂಟುಮಾಡಬಹುದು ಅಲ್ಲದೆ ಜನರಿಗೂ ಹಾನಿ ಮಾಡಬಹುದು.

ಇಂಥ ಸಮಯದಲ್ಲಿ, ಮೋಟರ ವಿಮೆ ಲಾಭದಾಯಕವಾದ ಕೆಲಸ ಮಾಡುತ್ತದೆ. ಒಂದುವೇಳೆ ವಾಹನ ಚಾಲಕನು ಮೂರನೇ ಪಕ್ಷಕ್ಕೆ ಅಪಘಾತದಲ್ಲಿ ಅತಿಯಾದ ಹಾನಿ ಮಾಡುವ ಜವಾಬ್ದಾರನಾದರೆ, ವಾಹನದ ಮಾಲೀಕನು ಇದಕ್ಕೆ ಸಂಭಂಧಿಸಿದ ಎಲ್ಲ ವೆಚ್ಚಗಳನ್ನು ಭರಿಸಬೇಕಾಗುತ್ತದೆ. ಇಂಥ ವಿಷಯದಲ್ಲಿ ಮೂರನೇ ಪಕ್ಷದ ಹೊಣೆಗಾರಿಕೆ ಹೊಂದಿರುತ್ತದೆ ಮತ್ತು ಮಾಲೀಕನನ್ನು ಆರ್ಥಿಕ ನಷ್ಟದಿಂದ ಸಂರಕ್ಷಿಸುತ್ತದೆ.

ನಿಮ್ಮ ವಾಹನವು ದುಬಾರಿಯಾದ ಬಂಡವಾಳ ಹೂಡಿಕೆಯಾಗಿದೆ. ಮತ್ತು ಅಪಘಾತವು ನಿಮಗೆ ಅತಿಯಾದ ನಷ್ಟವಾಗಿ ಪರಿಣಮಿಸುತ್ತದೆ. ಆದ್ದರಿಂದ ಮೋಟರ್ ವಿಮೆಯನ್ನು ಹೊಂದುವುದು ಅತ್ಯಂತ ಪ್ರಮುಖವಾಗಿದೆ. ಅದು ಕಳ್ಳತನ ಬೆಂಕಿ ಮುಂತಾದ ಅಪಘಾತಗಳಿಗೆ ಕವರೇಜ ಒದಗಿಸುತ್ತದೆ.

ಮೋಟರ್ ವಿಮೆಯ ಉತ್ಪನ್ನಗಳ ಪ್ರಕಾರಗಳು

ಭಾರತದಲ್ಲಿ ಮೋಟಾರ ವಿಮೆಯನ್ನು ಮುಖ್ಯವಾಗಿ ಎರಡು ಪ್ರಕಾರಗಳಲ್ಲಿ ವಿಂಗಡಿಸಬಹುದು : ಕಾರ ವಿಮೆ ಹಾಗೂ ದ್ವಿಚಕ್ರ ವಾಹನ ವಿಮೆ.

ಕಾರ ವಿಮೆ - ಕಾರು ವಿಮೆಗಳು ವಿಮಾ ಕಂಪನಿ ಹಾಗು ವಿಮೆದಾರರ ನಡುವಿನ ಒಂದು ವ್ಯವಸ್ಥೆಯಾಗಿದೆ. ನಿಮ್ಮ ಕಷ್ಟ ಪಟ್ಟು ದುಡಿದ ಹಣದಿಂದ ಕಾರು ಖರಿದಿಸಿದ ನಂತರ ಻ಅದರ ಹಾನಿಗಳಿಗೆ ಹಾಗೂ ದುರಸ್ತಿಗಳಿಗೆ ಅದೇ ಹಣವನ್ನು ವ್ಯಯಿಸಬೇಕಾಗುತ್ತದೆ. ಇದು ನಿಮಗೆ ಆರ್ಥಿಕವಾಗಿ ನೋವುಂಟು ಮಾಡುವುದಲ್ಲದೆ ನಿಮ್ಮ ಉಳಿತಾಯಕ್ಕೂ ಕೂಡ ತೊಂದರೆ ಮಾಡುತ್ತದೆ.

ಸಾಕಷ್ಟು ಆನ್ ಲೈನ್ ಕಾರ್ ವಿಮಾ ಕಂಪನಿಗಳಿದ್ದು ನೀವು ವಿಮೆಯನ್ನು ಖರೀದಿಸಲು ಸಾಧ್ಯವಿದೆ.

ಭಾರತದಲ್ಲಿ ನೀವು ನಿಮ್ಮ ವಾಹನಕ್ಕೆ ವಿಮೆ ಪಾಲಿಸಿಯನ್ನು ಮಾಡಿಸುವುದು ಕಡ್ಡಾಯವಾಗಿದೆ. ಕಳ್ಳತನವಾದಾಗ ಹಾಗೂ ಅಪಘಾತದ ಸಂದರ್ಭದಲ್ಲಿ ನಿಮಗೆ ಮತ್ತು ಮೂರನೇ ಪಕ್ಷದ ವ್ಯಕ್ತಿಯು ಒಳಗೊಳ್ಳುವ ಹಾನಿಗಳಿಗೆ ಆರ್ಥಿಕ ಹೊಣೆಯನ್ನು ಹೊತ್ತಿರುವುದರಿಂದ ಮಾನಸಿಕ ಶಾಂತಿ ಕೊಡುತ್ತದೆ.

ಭಾರತದಲ್ಲಿ, ನಿಮ್ಮ ವಾಹನದ ವಿಮೆ ಪಾಲಿಸಿಯನ್ನು ಹೊಂದುವುದು ಕಡ್ಡಾಯವಾಗಿದ್ದು, ಅದು ವಾಹನದ ಯಾವುದೇ ಹಾನಿ ಅಥವಾ ಕಳ್ಳತನಕ್ಕೆ ಹಣಕಾಸಿನ ವ್ಯಾಪ್ತಿಯನ್ನು ಒದಗಿಸುತ್ತದೆ ಮತ್ತು ನೀವು ಅಥವಾ ಮೂರನೇ ವ್ಯಕ್ತಿಯನ್ನು ಒಳಗೊಂಡಿರುವ ಅಪಘಾತದ ಸಂದರ್ಭದಲ್ಲಿ ನಿಮಗೆ ಮನಸ್ಸಿನ ಶಾಂತಿ ನೀಡುತ್ತದೆ.

ಅದು ಏನನ್ನು ಕವರೇಜ ಮಾಡುತ್ತದೆ?

ಕಾನೂನಿನ ಪ್ರಕಾರ ಕಾರ ವಿಮೆಯನ್ನು ಹೊಂದುವುದು ಕಡ್ಡಾಯವಾಗಿದೆ. ಭಾರತದಲ್ಲಿ ಕಾರನ್ನು ಚಲಾಯಿಸುವುದಕ್ಕೂ ಮುನ್ನ ಕಡಿಮೆಯದಾದರೈ ಮೋಟರ್ ವಿಮೆ ಹೊಂದುವುದು ಕಾನೂನಿಪ್ರಕಾರ ಅವಶ್ಯಕವಾಗಿದೆ. ಕವರೇಜ ಯೋಜನೆ ಹಾಗೂ ವಿಮೆದಾರರನ್ನು ಅವಲಂಬಿಸಿದೆ. ಆದಾಗ್ಯೂ ನೀವು ಕಾರ್ ವಿಮೆ ಪಾಲಿಸಿ ಪಡೆದಾಗ ಈ ಕೆಳಗಿವನ್ನು ಮೂಲಭೂತ ಕವರೇಜ ಇರುತ್ತವೆ.

ಮೂಲಭೂತ ವಿಮೆ ಕವರೇಜ - ಇದು ಸಮಗ್ರ ಕಾರ್ ಕವರೇಜ ವಿಮೆ ಒಳಗೊಂಡಿರುತ್ತದೆ. (ನಿಮ್ಮ ಕಾರು ಕಳ್ಳತನವಾದರೆ, ಅಪಘಾತದಿಂದ ಅಥವಾ ಬೆಂಕಿಯಿಂದ) ಪಾಲಿಸಿಯಾಗಿದೆ. ಹಾಗೂ ನಿಮ್ಮ ವೈಯಕ್ತಿಕ ಅಪಘಾತ ಕವರೇಜ ಕೂಡ ಒಳಗೊಂಡಿರುತ್ತದೆ.

ಮೂರನೇ ಪಕ್ಷದ ಹೊಣೆಗಾರಿಗೆ - ಮೂರನೇ ಪಕ್ಷದ ವ್ಯಕ್ತಿಗೆ ನಿಮ್ಮ ಕಾರಿನ ಕಾರಣದಿಂದಾಗಿ ಯಾವುದೇ ಗಾಯಗಳುಂಟಾದಾಗ ನಿಮ್ಮ ವಿರುದ್ದ ಯಾವುದೇ ಆರ್ಥಿಕ ಹಾನಿಯ ಹಕ್ಕು ಸಾಧಿಸುವ ಸಂದರ್ಭಗಳಲ್ಲಿ ಇದು ಸಹಕಾರಿಯಾಗುತ್ತದೆ.

ರಸ್ತೆಯಬದಿಯ ಸಹಾಯ - ಬಹಳಷ್ಟು ವಿಮೆಗಾರರು ರಸ್ತೆಬದಿಯ ಸಹಾಯವನ್ನು ಕೂಡ ಒದಗಿಸುತ್ತಾರೆ. ಅದರಲ್ಲಿ ಅವರು, ಎಳೆಯುವಿಕೆ (ಟೋವಿಂಗ), ಚಿಕ್ಕ ಪುಟ್ಟ ಸಮಸ್ಯೆಗಳ ರಿಪೇರಿ ಹಾಗೂ ಕಳೆದುಹೋದ ಕಾರಿನ ಕೀ ಮುಂತಾದ ಪ್ರಯೋಜನಕಾರಿ ಸಹಾಯವನ್ನು ಕೂಡ ಮಾಡುತ್ತಾರೆ

ದ್ವಿಚಕ್ರ (Two Wheeler)  ವಾಹನಗಳ ವಿಮೆ

ದ್ವಿಚಕ್ರ ವಾಹನಗಳ ವಿಮೆ ಸ್ಕೂಟರ್, ಮೋಟರ ಸೈಕಲ್ ಮುಂತಾದವುಗಳಿ ಹಾನಿ, ಕಳ್ಳತನ ಹಾಗೂ ಹೊಣೆಗಾರಿಕೆಗಳಿಗೆ ಆರ್ಥಿಕ ಕವರೇಜ ಕೂಡ ಕೊಡುತ್ತದೆ. ಭಾರತದಲ್ಲಿ ಕೆಟ್ಟಹೋಗಿರುವ ಹಾಗೂ ಹಾಳಾಗುತ್ತಿರುವ ರಸ್ತೆ ಸಂಚಾರಗಳಿಂದಾಗಿ ನಿಮ್ಮ ನಿಯಂತ್ರಣಕ್ಕೆ ಮೀರುವ ಅಪಘಾತಗಳಿಗೆ ಕಾರಣವಾಗಬಹುದು. ಆದ್ದರಿಂದ  ದ್ವಿಚಕ್ರ ವಾಹನಗಳ ವಿಮೆ ಅತ್ಯವಶ್ಯವಾಗಿದೆ.

ದ್ವಿಚಕ್ರ ವಾಹನ ವಿಮೆಯು ಕಳಪೆ ರಸ್ತೆ ಪರಿಸ್ಥಿತಿಗಳ ಕಾರಣದಿಂದಾಗಿ ಮತ್ತು ಭಾರತದಲ್ಲಿ ಹಾನಿಗೊಳಗಾದ ಸಂಚಾರ ಪರಿಸ್ಥಿತಿಯ ಕಾರಣದಿಂದಾಗಿ, ನಿಮ್ಮ ನಿಯಂತ್ರಣಕ್ಕೆ ಮೀರಿರುವ ಅಪಘಾತಗಳು ಮತ್ತು ಅಪಘಾತಗಳಿಗೆ ಕಾರಣವಾಗಬಹುದು. ಪ್ರಮುಖವಾದ ಬೈಕ ವಿಮೆ ಕಂಪನಿಗಳ ಸಹಾಯದೊಂದಿಗೆ ಅವಧಿ ಮೀರಿದ ನಿಮ್ಮ ದ್ವಿಚಕ್ರ ವಾಹನಗಳ ವಿಮೆಯನ್ನು  ನವೀಕರಿಸಬಹುದು.

ಅದು ಏನನ್ನು ಕವರೇಜ ಮಾಡುತ್ತದೆ?

ಸಮಗ್ರ ವಿಮೆ - ಸಮಗ್ರ ವಿಮೆ ಪಾಲಿಸಿಯು ನಿಮ್ಮ ದ್ವಿಚಕ್ರ ವಾಹನಕ್ಕೆ ಆಗುವ ಎಲ್ಲ ತರದ ಹಾನಿಗಳಿಗೂ ಕವರೇಜ ಕೊಡುತ್ತದೆ ಅದರಲ್ಲಿ ಮೂರನೇ ಪಕ್ಷದ ಕವರೇಜ ಕೂಡ ಹೊಂದಿದೆ.

ಮೂರನೇ ಪಕ್ಷದ ಹೊಣೆಗಾರಿಕೆ - ಮೂರನೇ ಪಕ್ಷದ ವಿಮೆಯು ನಿಮ್ಮಿಂದ ಮೂರನೆ ಪಕ್ಷಕ್ಕಾಗಿರುವ ಹಾನಿಯನ್ನು ಕವರೇಜ ಮಾಡುವಂಥ ಒಂದು ವಮಾ ಪಾಲಿಸಿ ಆಗಿದೆ. ಸ್ವಂತ ಅಪಘಾತದ ಕವರೇಜ ಕೂಡ ದೊರೆಯುತ್ತದೆ.

ಮೋಟರ ವಿಮೆ ಯೋಜನೆ ಖರೀದಿಸುವ ಮುನ್ನ ಪರಿಗಣಿಸಬೇಕಾದ ವಿಷಯಗಳು

ಇಂಟರ್ನೆಟ್ ಮಾಧ್ಯಮವು ಮೋಟರ್ ವಿಮೆ ಯೋಜನೆ ಖರೀದಿಸಲು ಸುಲಭವಾದ ದಾರಿ ಮಾಡಿಕೊಟ್ಟಿದೆ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ. ಈಗ ಮೋಟರ ವಿಮೆ ಖರೀದಿಸುವಾಗ ನೀವು – ವಿಮೆ ಕಂಪನಿ, ಎರಡು ಪ್ರಮುಖ ಅಂಶಗಳಿಗೆ ಗಮನ ಕೊಡಬೇಕಾಗುತ್ತದೆ. ವಿಮೆ ಕಂಪನಿಯು ಯಾವ ಯೋಜನೆಗಳನ್ನು ನಿಮಗೆ ನೀಡಬೇಕೆಂದು ನಿರ್ಧರಿಸುವಾಗ, ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಯಾವ ವಿಮೆ ಯೋಜನೆ ಖರೀದಿಸಬೇಕೆಂಬುದನ್ನು ಗ್ರಾಹಕನು ನಿರ್ಧರಿಸಬೇಕಾಗುತ್ತದೆ. ಪ್ರಸ್ತುತ ಮೋಟಾರು ವಿಮೆ-ವಿಮಾದಾರ ಮತ್ತು ನೀವು ಖರೀದಿಸುವಾಗ ನೀವು ಗಮನ ಕೊಡಬೇಕಾದ ಎರಡು ಅಂಶಗಳಿವೆ. ಅವನು / ಅವಳ ಅವಶ್ಯಕತೆಗಳನ್ನು ಪೂರೈಸಲು ಯಾವ ವಿಮೆ ಯೋಜನೆಯನ್ನು ಖರೀದಿಸಬೇಕು ಎಂಬುದನ್ನು ನಿರ್ಧರಿಸುವುದು ಗ್ರಾಹಕರಿಗೆ.

ಪಾಲಿಸಿಯನ್ನು ಖರಿದಿಸುವಾಗ, ಮೋಟರ ವಿಮೆ ಯೋಜನೆಯು ದೈಹಿಕ ಗಾಯಗಳನ್ನೂ ಕವರೇಜ ಮಾಡುತ್ತದೆಯೂ ಹೇಗೆ ಎಂಬುದನ್ನು ಗ್ರಾಹಕನು ಪರೀಕ್ಷಿಸಬೇಕು. ಹೌದು ಎಂದಾದರೆ ಎಷ್ಟರ ಮಟ್ಟಿಗೆ ಕವರೇಜ ಮಾಡುತ್ತದೆ ಎಂದು ಪರೀಕ್ಷಿಸಿ. ಅಲ್ಲದೆ ದುರ್ಘಟನೆಯಿಂದಾಗಿ ವಾಹನಕ್ಕೆ ಹಾನಿಯುಂಟಾದರೆ ಪಾಲಿಸಿಯು ಆ ಹೊಣೆಗಾರಿಕೆಯನ್ನು ಹೊಂದಿದೆಯೋ ಹೇಗೆ ಎಂದು ಖಚಿತಪಡಿಸಿಕೊಳ್ಳಿ.

ಸರಿಯಾದ ಮೋಟರ ವಿಮೆ ಖರೀದಿಸುವುದು ಒಂದು ಕಷ್ಟದ ಕೆಲಸ. ಆದ್ದರಿಂದು ನೀವು ಸ್ವಲ್ಪ ಮಟ್ಟಿಗೆ ಶೋಧನೆ ಮಾಡಿ ಅವುಗಳಲ್ಲಿ ಅತ್ಯುತ್ತಮವಾದದ್ದನ್ನು ಪಡೆಯಿರಿ. ಆದಾಗ್ಯೂ ನೀವು ಶೋಧಿಸಲು ಅವಶ್ಯಕವಾದ ವಿಷಯಗಳ ಬಗ್ಗೆ ನೀವು ಮಾಹಿತಿ ಪಡೆದಿರಬೇಕು. ಮೋಟರ ವಿಮೆ ಯೋಜನೆ ಖರೀದಿಸುವ ಮೊದಲು ನೀವು ನೋಡಬೇಕಾದ ಅಂಶಗಳೆಂದರೆ – ಕಂಪನಿಯ ಖ್ಯಾತಿ, ಕ್ಲೇಮಗಳ ಅನುಪಾತ, ನೆಟ್ವರ್ಕ  ಗ್ಯಾರೆಜುಗಳು, ಬಜೆಟ್ ಹೀಗೆ ಇನ್ನು ಅನೇಕ ವಿಷಯಗಳು

ಇಷ್ಟೇ ಅಲ್ಲದೇ ನೀವು ಪಾಲಿಸಿಯ ನೀತಿ,ನಿಯಮಗಳನ್ನು ಹಾಗೂ ಷರತ್ತುಗಳನ್ನು ಸಂಪೂರ್ಣವಾಗಿ ಓದಬೇಕು. ಇದರಿಂದಾಗಿ ಕ್ಲೇಮಗಳ ವಿಷಯದಲ್ಲಿ ಉತ್ತಮವಾದ ಯಾವುದೆ ತೊಂದರೆಯಿಲ್ಲದೇ ಮುಕ್ತ ಮಾರ್ಗಗಳನ್ನು ಅನುಸರಿಸಬಹುದು. ನಮ್ಮ ಪೋರ್ಟಲ್ನಲ್ಲಿ ದೊರೆಯುವ ಉಚಿತ ಮೋಟರ ವಿಮೆ ಪಾಲಿಸಿ ಕೊಟೇಷನ್ ಗಳನ್ನು ನೀವು ಹೋಲಿಸಲು ಸಾಧ್ಯವಿದೆ ಇದರಿಂದ ನೀವು ಒಂದು ಅತ್ಯುತ್ತಮವಾದ ಯೋಜನೆಯನ್ನು ಪಡೆಯುವಿರಿ.

ಮೋಟರು ವಿಮೆ ಖರೀದಿಸಲು ಬೇಕಾಗುವ ದಾಖಲೆಗಳು

ನೀವು ಆನ್ಲೈನ್ ಮೋಟರ ಪಾಲಿಸಿ ಖರಿದಿಸುವಿರಾದರೆ ನಿಮಗೆ ಅತಿ ಕಡಿಮೆ ದಾಖಲಾತಿಗಳು ಬೇಕಾಗುತ್ತವೆ. ನೀವು ಮೊದಲಬಾರಿಗೆ ವಾಹನ ವಿಮೆ ಆಗಿದ್ದರೆ, ಪ್ರಸ್ತಾವನೆಯ ಜೊತೆಗೆ ನೋಂದಣಿ ಪ್ರಮಾಣಪತ್ರದ ನಕಲನ್ನು ಹೊಂದಿರಬೇಕು. ಪ್ರತಿ ವಾಹನ ಮಾಲೀಕರು (ಖಾಸಗೀ ಅಥವಾ ವ್ಯಾಣಿಜ್ಯೇತರ ವಾಹನ) ತನ್ನ ವಾಹನವನ್ನು  ಹತ್ತಿರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ RTO (Regional Transport Office).ನೋಂದಾಯಿಸುವುದು ಬಹಳ ಮಹತ್ವದ್ದು.

ನಿಮಗೆ ಈಗಿರುವ ಪಾಲಿಸಿಯನ್ನು ನವಿಕರಿಸಬೇಕಾದಲ್ಲಿ, ಕೇವಲ ಹಿಂದಿನ ವಿಮಾ ಪಾಲಿಸಿಯೊಂದಿಗೆ ನೋಂದಣಿ ಪತ್ರ ಮಾತ್ರ ಸಾಕಾಗುತ್ತದೆ.